Tag: Himanta Biswa Sarma

  • ಪ್ರಿಯಾಂಕ್‌ ಖರ್ಗೆ ಫಸ್ಟ್‌ ಕ್ಲಾಸ್‌ ಈಡಿಯಟ್‌: ಅಸ್ಸಾಂ ಸಿಎಂ

    ಪ್ರಿಯಾಂಕ್‌ ಖರ್ಗೆ ಫಸ್ಟ್‌ ಕ್ಲಾಸ್‌ ಈಡಿಯಟ್‌: ಅಸ್ಸಾಂ ಸಿಎಂ

    – ಹಿಮಾಂತ ಶರ್ಮಾ ಶರ್ಮಾ ತನ್ನ ಹೇಳಿಕೆ ತಿರುಚಿದ್ದಾರೆ: ಪ್ರಿಯಾಂಕ್‌ ತಿರುಗೇಟು

    ಬೆಂಗಳೂರು/ಗುವಾಹಟಿ: ಆರ್‌ಎಸ್‌ಎಸ್‌, ಗೂಗಲ್‌ ವಿಚಾರದಲ್ಲಿ ಸುದ್ದಿಯಾಗಿದ್ದ ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಈಗ ಅಸ್ಸಾಂ ವಿಚಾರದಲ್ಲೂ ದೊಡ್ಡ ಸುದ್ದಿಯಾಗಿದ್ದಾರೆ. ಅಸ್ಸಾಂ (Assam) ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಪ್ರಿಯಾಂಕ್‌ ಖರ್ಗೆಯಲ್ಲಿ ಈಡಿಯಟ್‌ ಎಂದು ಕರೆದರೆ ಪ್ರಿಯಾಂಕ್‌ ತನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ಏನಿದು ಇಬ್ಬರ ಮಧ್ಯೆ ಕಿತ್ತಾಟ?
    ಸೆಮಿಕಂಡಕ್ಟರ್ (Semiconductor) ಫ್ಯಾಕ್ಟರಿ ಕಂಪನಿಗಳು ತಮ್ಮ ಘಟಕವನ್ನು ತೆರೆಯಲು ಗುಜರಾತ್‌ ಮತ್ತು ಅಸ್ಸಾಂ ರಾಜ್ಯಗಳನ್ನು ಆಯ್ಕೆ ಮಾಡಿದ್ದವು. ಈ ವಿಚಾರವಾಗಿ ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯಿಸಿ, ಸೆಮಿಕಂಡಕ್ಟರ್ ಉದ್ದಿಮೆಗಳು ಸಹಜವಾಗಿಯೇ ಬೆಂಗಳೂರಿನತ್ತ ಆಕರ್ಷಿತವಾಗಿರುತ್ತದೆ. ಆದರೆ ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಸ್ಥಾಪನೆಯಾಗಬೇಕಿದ್ದ ಹೂಡಿಕೆಗಳನ್ನು ಬಿಜೆಪಿ ಆಡಳಿತ ಇರುವ ರಾಜ್ಯಗಳಿಗೆ ತಿರುಗಿಸುತ್ತದೆ. ನಿಜವಾಗಿಯೂ ಗುಜರಾತ್ ಮತ್ತು ಅಸ್ಸಾಂನಲ್ಲಿ ಆ ಕೈಗಾರಿಕೆಗೆ ಅಗತ್ಯವಿರುವ ನೈಪುಣ್ಯ ಮತ್ತು ಮೂಲಸೌಕರ್ಯಗಳು ಇದ್ಯಾ ಎಂದು ಪ್ರಶ್ನಿಸಿದ್ದರು.

    ಅಸ್ಸಾಂ ಉದ್ದೇಶಿಸಿ ಹೇಳಿಕೆ ನೀಡಿದ್ದು ಬಿಜೆಪಿಯನ್ನು ಕೆರಳಿಸಿದೆ. ಇದು ಅಸ್ಸಾಂ ಯುವಜನರಿಗೆ ಮಾಡಿರುವ ಅನ್ಯಾಯ? ಅಸ್ಸಾಂ ಕಾಂಗ್ರೆಸ್‌ ಈ ಹೇಳಿಕೆಯನ್ನು ಖಂಡಿಸಬೇಕು ಎಂದು ಆಗ್ರಹಿಸಿದೆ.  ಇದನ್ನೂ ಓದಿ:  5 ವರ್ಷವೂ ನಾನೇ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ ಮಾತು ಮೊದಲ ಬಾರಿಗೆ ಬದಲಾಯ್ತು!

    ಹಿಮಂತ ಶರ್ಮಾ ಹೇಳಿದ್ದೇನು?
    ಪ್ರಿಯಾಂಕ್ ಖರ್ಗೆ ಒಬ್ಬ ಫಸ್ಟ್‌ ಕ್ಲಾಸ್‌ ಈಡಿಯಟ್‌. ಅವರು ಅಸ್ಸಾಮಿ ಯುವಕರನ್ನು ಅವಮಾನಿಸಿದ್ದಾರೆ. ಪ್ರಿಯಾಂಕ್‌ ಹೇಳಿಕೆಯನ್ನು ಅಸ್ಸಾಂ ಕಾಂಗ್ರೆಸ್‌ ಖಂಡಿಸಿಲ್ಲ. ಬಹುಶಃ, ಅಸ್ಸಾಂನಲ್ಲಿ ವಿದ್ಯಾವಂತ ಯುವಕರಿಲ್ಲ ಎಂದು ಅವರು ಹೇಳಿರುವುದರಿಂದ ನಾವು ಅವರ ವಿರುದ್ಧ ಪ್ರಕರಣ ದಾಖಲಿಸಬಹುದು. ಇದು ಇಡೀ ಅಸ್ಸಾಮಿ ಯುವಕರಿಗೆ ಮಾಡಿದ ಅವಮಾನ ಎಂದಿದ್ದಾರೆ.

    ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?
    ಎಂದಿನಂತೆ ಬಿಜೆಪಿ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನನ್ನ ಮಾತುಗಳನ್ನು ತಿರುಚುತ್ತಿದ್ದಾರೆ. ನನ್ನ ಹೇಳಿಕೆ ಸ್ಪಷ್ಟ ಮತ್ತು ನಿರ್ದಿಷ್ಟವಾಗಿದೆ. ಗುಜರಾತ್ ಮತ್ತು ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಕಂಪನಿಗಳನ್ನು ಸ್ಥಾಪಿಸಲು ಹೇಗೆ ಒತ್ತಡ ಹೇರಲಾಗುತ್ತಿದೆ ಎಂಬುದರ ಬಗ್ಗೆ ನಾನು ಮಾತನಾಡಿದ್ದೆ.  ಇದನ್ನೂ ಓದಿ:  ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ

    ನೀತಿ ಆಯೋಗದ ಇತ್ತೀಚಿನ ವರದಿಯ ಪ್ರಕಾರ, ಸುಮಾರು ಒಂದು ದಶಕದ ಬಿಜೆಪಿ ಆಳ್ವಿಕೆಯ ನಂತರ, ಅಸ್ಸಾಂ ಇಂದು ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಬೆಳವಣಿಗೆಯಂತಹ ನಿರ್ಣಾಯಕ ಅಭಿವೃದ್ಧಿ ಸೂಚಕಗಳಲ್ಲಿ ಕೊನೆಯ ಐದು ರಾಜ್ಯಗಳಲ್ಲಿ ಒಂದಾಗಿದೆ.

    ನನ್ನ ಹೇಳಿಕೆಗಳನ್ನು ರಾಜಕೀಯವಾಗಿ ತಿರುಗಿಸುವ ಮೂಲಕ ತಮ್ಮ ವೈಫಲ್ಯಗಳನ್ನು ಬಿಳಿಚಿಕೊಳ್ಳಲು ಪ್ರಯತ್ನಿಸುವ ಬದಲು, ಮುಖ್ಯಮಂತ್ರಿ ತಮ್ಮ ರಾಜ್ಯದ ಯುವಜನರಿಗೆ ಏನು ಮಾಡಿದ್ದಾರೆ ಎಂದು ತಮ್ಮನ್ನು ತಾವು ಕೇಳಿಕೊಳ್ಳಬೇಕು. ಅವರು ಬೇರೆಡೆ ಕೆಲಸ ಹುಡುಕಲು ಅಸ್ಸಾಂ ಅನ್ನು ಏಕೆ ಬಿಡುತ್ತಿದ್ದಾರೆ?

  • ಗಾಯಕ ಜುಬೀನ್ ಗಾರ್ಗ್ ಸಾವಿನ ತನಿಖೆಗೆ ಸಿಂಗಾಪುರ ಸರ್ಕಾರದ ಸಹಕಾರ: ಅಸ್ಸಾಂ ಸಿಎಂ

    ಗಾಯಕ ಜುಬೀನ್ ಗಾರ್ಗ್ ಸಾವಿನ ತನಿಖೆಗೆ ಸಿಂಗಾಪುರ ಸರ್ಕಾರದ ಸಹಕಾರ: ಅಸ್ಸಾಂ ಸಿಎಂ

    ಗುವಾಹಟಿ: ಗಾಯಕ ಜುಬೀನ್ ಗಾರ್ಗ್ (Zubeen Garg) ಸಾವಿನ ತನಿಖೆಗೆ ಸಹಕಾರ ಕೋರಿ ಕೇಂದ್ರವು ಸಿಂಗಾಪುರದೊಂದಿಗೆ (Singapore) ಪರಸ್ಪರ ಕಾನೂನು ಸಹಾಯ ಒಪ್ಪಂದವನ್ನು ಔಪಚಾರಿಕವಾಗಿ ಜಾರಿಗೆ ತಂದಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ  ಪೋಸ್ಟ್ ಮಾಡಿರುವ ಅವರು, ನಮ್ಮ ಪ್ರೀತಿಯ ಜುಬೀನ್ ಅವರ ನಿಧನದ ಕುರಿತು ಅಸ್ಸಾಂ ಪೊಲೀಸರು ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಗೃಹ ಸಚಿವಾಲಯವು ಈಗ ಪರಸ್ಪರ ಕಾನೂನು ಸಹಾಯ ಒಪ್ಪಂದವನ್ನು ಔಪಚಾರಿಕವಾಗಿ ಅನ್ವಯಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರವಾಹ ಪೀಡಿತ ಕಲ್ಯಾಣ ಕರ್ನಾಟಕದಲ್ಲಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ

    ಪರಸ್ಪರ ಕಾನೂನು ಸಹಾಯ ಒಪ್ಪಂದ ಜಾರಿಗೆ ಬಂದ ನಂತರ, ಸಿಂಗಾಪುರದ ಅಧಿಕಾರಿಗಳಿಂದ ಪ್ರಕರಣದ ವಿವರಗಳನ್ನು ಪಡೆಯುವುದು, ಆರೋಪಿಗಳನ್ನು ಮರಳಿ ಕರೆತರುವಲ್ಲಿ ಸಹಾಯ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಸಂಪೂರ್ಣ ಸಹಕಾರವನ್ನು ಖಚಿತಪಡಿಸುತ್ತದೆ ಎಂದು ಶರ್ಮಾ ಸೋಮವಾರ ನುಡಿದಿದ್ದರು. ಇದನ್ನೂ ಓದಿ: ಯುದ್ಧೋಪಾದಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರವಾಹಕ್ಕೆ ಸರ್ಕಾರ ಸ್ಪಂದಿಸಬೇಕು: ಸಿ.ಟಿ ರವಿ

    ಸೆಪ್ಟೆಂಬರ್ 19ರಂದು ಸಿಂಗಾಪುರದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಗಾಯಕನ ಸಾವಿನ ತನಿಖೆಗಾಗಿ ಅಸ್ಸಾಂ ಸರ್ಕಾರ ವಿಶೇಷ ಡಿಜಿಪಿ ಎಂಪಿ ಗುಪ್ತಾ ನೇತೃತ್ವದಲ್ಲಿ 10 ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಮತ್ತು ಅವರ ಸಹಾಯ ಪಡೆಯಲು ಇಬ್ಬರು ಅಸ್ಸಾಂ ಪೊಲೀಸ್ ಅಧಿಕಾರಿಗಳನ್ನು ಈಗಾಗಲೇ ಸಿಂಗಾಪುರಕ್ಕೆ ಕಳುಹಿಸಲಾಗಿದೆ ಎಂದು ಶರ್ಮಾ ಹೇಳಿದರು. ಇದನ್ನೂ ಓದಿ: ಮಲ್ಟಿಪ್ಲೆಕ್ಸ್‌ಗಳು ಟಿಕೆಟ್ ಮಾರಾಟದ ಲೆಕ್ಕ ಇಡಬೇಕು: ಹೈಕೋರ್ಟ್ ಸೂಚನೆ

  • ಗಾಯಕ ಜುಬೀನ್ ಗಾರ್ಗ್ ಸಾವು | ಕಾರ್ಯಕ್ರಮ ಆಯೋಜಕರ ವಿರುದ್ಧ FIR – ತನಿಖೆಗೆ ಮುಂದಾದ ಅಸ್ಸಾಂ ಸರ್ಕಾರ

    ಗಾಯಕ ಜುಬೀನ್ ಗಾರ್ಗ್ ಸಾವು | ಕಾರ್ಯಕ್ರಮ ಆಯೋಜಕರ ವಿರುದ್ಧ FIR – ತನಿಖೆಗೆ ಮುಂದಾದ ಅಸ್ಸಾಂ ಸರ್ಕಾರ

    • ಸ್ಕೂಬಾ ಡೈವಿಂಗ್ ವೇಳೆ ಸಾವನ್ನಪ್ಪಿದ್ದ ಪ್ರಸಿದ್ಧ ಗಾಯಕ

    ದಿಸ್ಪುರ: ಸ್ಕೂಬಾ ಡೈವಿಂಗ್ ವೇಳೆ ಸಾವನ್ನಪ್ಪಿದ್ದ ಪ್ರಸಿದ್ಧ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ ಅವರ (Zubeen Garg) ಮರಣೋತ್ತರ ಪರೀಕ್ಷೆ ಸಿಂಗಾಪುರದಲ್ಲಿ ನಡೆಯುತ್ತಿದ್ದು, ಇದೀಗ ಅಸ್ಸಾಂ ಸರ್ಕಾರ (Assam Govt) ಸಾವಿನ ತನಿಖೆ ನಡೆಸಲು ಮುಂದಾಗಿದೆ.

    ಈ ಕುರಿತು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಜುಬೀನ್ ಗಾರ್ಗ್ ಸಾವನ್ನಪ್ಪುವ ಮುನ್ನ ಕಾರ್ಯಕ್ರಮ ಆಯೋಜಕರಾದ ಶ್ಯಾಮ್ ಕನು ಮಹಾಂತ ಹಾಗೂ ಸಿದ್ಧಾರ್ಥ ಶರ್ಮಾ ಅವರ ಜೊತೆಗಿದ್ದರು. ಹೀಗಾಗಿ ಈ ಕುರಿತು ಅಸ್ಸಾಂ ಸರ್ಕಾರ ತನಿಖೆ ನಡೆಸಲಿದ್ದು, ಕಾರ್ಯಕ್ರಮ ಆಯೋಜಕರ ವಿರುದ್ಧ ಮೋರಿಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಸ್ಕೂಬಾ ಡೈವಿಂಗ್‌ ವೇಳೆ ಬಾಲಿವುಡ್‌ನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಾವು

    ಆಯೋಜಕರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಸಿಐಡಿಗೆ ವರ್ಗಾಯಿಸಿ, ವಿಚಾರಣೆ ನಡೆಸಿ ಎಂದು ಅಸ್ಸಾಂ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ. ಸಿಂಗಾಪುರ ಕಮಿಷನರ್ ಅವರೊಂದಿಗೆ ಮಾತನಾಡಿ ವಿವರವಾಗಿ ತನಿಖೆ ಮಾಡುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದಿದ್ದಾರೆ.

    ಈಶಾನ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಜುಬೀನ್ ಗಾರ್ಗ್ ಅವರು ಸಿಂಗಾಪುರಕ್ಕೆ ತೆರಳಿದ್ದರು. ಈ ವೇಳೆ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಅವಘಡಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದ ಗರ್ಗ್ ಅವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

    ಜುಬೀನ್ ಗರ್ಗ್ ಅಸ್ಸಾಮಿ ಮತ್ತು ಹಿಂದಿ ಮಾತ್ರವಲ್ಲದೆ, ಬಂಗಾಳಿ, ಮರಾಠಿ, ತಮಿಳು, ತೆಲುಗು ಮತ್ತು ನೇಪಾಳಿ ಸೇರಿದಂತೆ ಹಲವು ಭಾಷೆಗಳಿಗೆ ಹಾಡಿದ್ದಾರೆ. ತಮ್ಮ ಮೂರನೇ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. ಅವರ ಮೊದಲ ಆಲ್ಬಂ ‘ಅನಾಮಿಕಾ’ 1992 ರಲ್ಲಿ ಬಿಡುಗಡೆಯಾಯಿತು. ‘ಮಾಯಾ’, ‘ಜುಬೀನೋರ್ ಗಾನ್’, ‘ಕ್ಸಾಬ್ಡಾ’, ‘ಪಾಖಿ’, ‘ಶಿಶು’, ‘ಜಂತ್ರ’ ಅವರ ಅತ್ಯಂತ ಪ್ರೀತಿಯ ಅಸ್ಸಾಮೀಸ್ ಆಲ್ಬಂಗಳಲ್ಲಿ ಕೆಲವು. ಅವರು ‘ದಿಲ್ ಸೆ’, ‘ವಾಸ್ತವ್’, ‘ಫಿಜಾ’, ‘ಅಶೋಕ’, ‘ಕಾಂಟೆ’, ‘ಗ್ಯಾಂಗ್‌ಸ್ಟರ್’, ‘ಕ್ರಿಶ್ 3’ ಮತ್ತು ಇನ್ನೂ ಹೆಚ್ಚಿನ ಹಿಂದಿ ಚಿತ್ರಗಳಿಗೂ ಹಾಡಿದ್ದಾರೆ. ಆದಾಗ್ಯೂ, ಗ್ಯಾಂಗ್‌ಸ್ಟರ್‌ಗಾಗಿ ಅವರು ಹಾಡಿದ್ದ ‘ಯಾ ಅಲಿ’ ಹಾಡು ಅವರಿಗೆ ಅಸ್ಸಾಂನ ಹೊರಗೂ ಜನಪ್ರಿಯತೆ ತಂದುಕೊಟ್ಟಿತು.ಇದನ್ನೂ ಓದಿ: ಮಾರಿಗಲ್ಲು ವೆಬ್ ಸರಣಿ : ಅಪ್ಪು ಕನಸು ನನಸು

  • ಅಸ್ಸಾಂ ನಾಗರಿಕ ಸೇವಾ ಅಧಿಕಾರಿ ಮನೆ ಮೇಲೆ ದಾಳಿ: 2 ಕೋಟಿ ನಗದು, ಆಭರಣ ಜಪ್ತಿ

    ಅಸ್ಸಾಂ ನಾಗರಿಕ ಸೇವಾ ಅಧಿಕಾರಿ ಮನೆ ಮೇಲೆ ದಾಳಿ: 2 ಕೋಟಿ ನಗದು, ಆಭರಣ ಜಪ್ತಿ

    ದಿಸ್ಪುರ್: ಆದಾಯಕ್ಕೂ ಮೀರಿದ ಆಸ್ತಿ ಸೇರಿದಂತೆ ಇನ್ನಿತರ ಆರೋಪಗಳ ಮೇಲೆ ಅಸ್ಸಾಂ ನಾಗರಿಕ ಸೇವಾ ಅಧಿಕಾರಿ (Assam Civil Service) ಮನೆ ಮೇಲೆ ವಿಜಿಲೆನ್ಸ್ ಸೆಲ್‌ನ ಅಧಿಕಾರಿಗಳು (CM’s Special Vigilance) ದಾಳಿ ನಡೆಸಿದ್ದು, 2 ಕೋಟಿ ರೂ. ನಗದು ಹಾಗೂ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.

    ಗೋಲಾಘಾಟ್ (Golaghat) ನಿವಾಸಿ ನೂಪುರ್ ಬೋರಾ 2019ರಲ್ಲಿ ಅಸ್ಸಾಂ ನಾಗರಿಕ ಸೇವೆಗೆ ಸೇರಿಕೊಂಡಿದ್ದರು. ಬಳಿಕ ಅವರನ್ನು ಕಾಮರೂಪ ಜಿಲ್ಲೆಯ ಗೊರೊಯಿಮರಿಯಲ್ಲಿ ಸರ್ಕಲ್ ಆಫೀಸರ್ ಆಗಿ ನೇಮಿಸಲಾಗಿತ್ತು. ಸದ್ಯ ಅವರನ್ನು ವಿಜಿಲೆನ್ಸ್ ಸೆಲ್‌ನ ಅಧಿಕಾರಿಗಳು ಬಂಧಿಸಿದ್ದಾರೆ.ಇದನ್ನೂ ಓದಿ: 15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    ಸೋಮವಾರ (ಸೆ.15) ವಿಜಿಲೆನ್ಸ್ ಸೆಲ್‌ನ ಅಧಿಕಾರಿಗಳು ನೂಪುರ್ ಬೋರಾ ಅವರ ಗುವಾಹಟಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 92 ಲಕ್ಷ ರೂ. ನಗದು ಹಾಗೂ 1 ಕೋಟಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಬಾರ್ಪೇಟಾದಲ್ಲಿರುವ (Barpeta) ಅವರ ಬಾಡಿಗೆ ಮನೆಯ ಮೇಲೆಯೂ ದಾಳಿ ನಡೆಸಿದ್ದು, 10 ಲಕ್ಷ ರೂ. ನಗದನ್ನು ಕೂಡ ಜಪ್ತಿ ಮಾಡಿಕೊಂಡಿದ್ದಾರೆ.

    ಈ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಮಾತನಾಡಿ, ವಿವಾದಾತ್ಮಕ ಭೂ-ಸಂಬಂಧಿತ ವಿಚಾರಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಕಳೆದ ಆರು ತಿಂಗಳಿನಿಂದ ನೂಪುರ್ ಬೋರಾ ಅವರನ್ನು ಕಣ್ಗಾವಲಿನಲ್ಲಿರಿಸಲಾಗಿತ್ತು. ಈ ಮೊದಲು ಇವರನ್ನು ಬಾರ್ಪೇಟಾ ಕಂದಾಯ ವಲಯ ಅಧಿಕಾರಿಯಾಗಿ ನೇಮಿಸಿದಾಗ ಹಣದಾಸೆಗಾಗಿ ಹಿಂದೂ ಭೂಮಿಯನ್ನು ಅನುಮಾನಾಸ್ಪದ ವ್ಯಕ್ತಿಗಳಿಗೆ ವರ್ಗಾಯಿಸಿದ್ದರು. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

    ಇನ್ನೂ ನೂಪುರ್ ಬೋರಾ ಜೊತೆ ಶಾಮೀಲಾಗಿ ಬಾರ್ಪೇಟಾದ ಹಲವು ಕಡೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಆರೋಪದ ಮೇಲೆ ಕಂದಾಯ ವಲಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಲತ್ ಮಂಡಲ್ ಸೂರಜಿತ್ ದೇಕಾ ಅವರ ನಿವಾಸದ ಮೇಲೆಯೂ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ; ಮನೆಗಳು, ಐಟಿ ಪಾರ್ಕ್‌ ಜಲಾವೃತ – ಇಬ್ಬರು ಕಣ್ಮರೆ

  • ಅಸ್ಸಾಂ | ಧುಬ್ರಿಯಲ್ಲಿ ಗೋವಿನ ತಲೆ ಪತ್ತೆ ಕೇಸ್ – 30ಕ್ಕೂ ಹೆಚ್ಚು ಜನ ಅರೆಸ್ಟ್‌

    ಅಸ್ಸಾಂ | ಧುಬ್ರಿಯಲ್ಲಿ ಗೋವಿನ ತಲೆ ಪತ್ತೆ ಕೇಸ್ – 30ಕ್ಕೂ ಹೆಚ್ಚು ಜನ ಅರೆಸ್ಟ್‌

    ದಿಸ್ಪುರ್:‌ ಅಸ್ಸಾಂನ (Assam) ಧುಬ್ರಿಯಲ್ಲಿ ಇತ್ತೀಚೆಗೆ ಹಸುವಿನ ತಲೆ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ತಿಳಿಸಿದ್ದಾರೆ. ಇನ್ನೂ ಲಖಿಂಪುರ ಜಿಲ್ಲೆಯಲ್ಲಿಯೂ ಇದೇ ರೀತಿಯ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ.

    ಗುವಾಹಟಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಧುಬ್ರಿಯಲ್ಲಿ ಹಸುವಿನ ತಲೆಪತ್ತೆಯಾದ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದೆ. ಲಖಿಂಪುರದಲ್ಲಿ, ನಾಮ್‌ಘರ್ (ವೈಷ್ಣವ ಪ್ರಾರ್ಥನಾ ಮಂದಿರ) ಮುಂದೆ ಮೂರು ಹಸುಗಳ ತಲೆಗಳನ್ನು ಇರಿಸಿದ್ದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ. ಇದು ಗಂಭೀರ ವಿಚಾರವಾಗಿದ್ದು, ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಯನಾಡಲ್ಲಿ ಮಳೆಯಬ್ಬರ – ಕಬಿನಿ ಜಲಾಶಯಕ್ಕೆ 22 ಸಾವಿರ ಕ್ಯುಸೆಕ್ ಒಳಹರಿವು

    ಒಂದು ನಿರ್ದಿಷ್ಟ ಸಮುದಾಯದ ಜನರು ಮಾತ್ರ ಈ ರೀತಿ ಗೋಮಾಂಸವನ್ನು ಇಟ್ಟುಕೊಳ್ಳುತ್ತಾರೆ. ಒಬ್ಬ ಹಿಂದೂ ಮಾಂಸವನ್ನು ಇಟ್ಟುಕೊಳ್ಳಲು ಬಯಸಿದರೆ, ಅವರು ಗೋಮಾಂಸವನ್ನಲ್ಲ, ಹಂದಿಮಾಂಸವನ್ನು ಇಟ್ಟುಕೊಳ್ಳುತ್ತಾರೆ. ಇನ್ನೂ ಈ ತರಹದ ವಿಚಾರಗಳು ರಾಹುಲ್ ಗಾಂಧಿಯವರ ವಿಷಕಾರಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಇದೇ ವೇಳೆ ಅವರು ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

    ಇದೇ ವೇಳೆ, ಬಾಂಗ್ಲಾದೇಶ ಬೆಂಬಲಿತ ಸಂಘಟನೆಯಾದ ನೋಬಿನ್ ಬಾಂಗ್ಲಾ, ಧುಬ್ರಿ ದೇಶದ ಭಾಗವಾಗಬೇಕೆಂದು ಒತ್ತಾಯಿಸಿ ಪ್ರಚೋದನಕಾರಿ ಪೋಸ್ಟರ್‌ಗಳನ್ನು ಹಾಕಿದ್ದರು. ಈ ಪೋಸ್ಟರ್‌ಗಳು ಧುಬ್ರಿಯಲ್ಲಿ ಬಾಂಗ್ಲಾದೇಶ ಬೆಂಬಲಿತ ಕೋಮುವಾದಿ ಗುಂಪು ಸಕ್ರಿಯವಾಗಿದೆ. ಧುಬ್ರಿಯಲ್ಲಿ ಈದ್ ಅಲ್-ಅಧಾ ಹಬ್ಬಕ್ಕೂ ಮುನ್ನ ಸಾವಿರಾರು ಪ್ರಾಣಿಗಳನ್ನು ಖರೀದಿಸಲಾಗಿದೆ. ಇದು ಹೊಸ ʻಗೋಮಾಂಸ ಮಾಫಿಯಾʼ ಹುಟ್ಟಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

    ಈ ಹೇಳಿಕೆಗಳನ್ನು ವಿರೋಧ ಪಕ್ಷಗಳ ನಾಯಕರು ಬಲವಾಗಿ ಟೀಕಿಸಿದ್ದಾರೆ. ಅಸ್ಸಾಂನಲ್ಲಿ ಈಗಾಗಲೇ ಕೋಮು ಉದ್ವಿಗ್ನತೆ ಹೆಚ್ಚಾಗಿದೆ. ಈ ಸಮಯದಲ್ಲಿ ಅವರ ಹೇಳಿಕೆಗಳು ಪ್ರಚೋದನಕಾರಿಯಾಗಿವೆ ಎಂದು ಕಿಡಿಕಾರಿದ್ದಾರೆ.

    ಕಳೆದ ವಾರ ಧುಬ್ರಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿತ್ತು. ಈ ವೇಳೆ ಕಂಡಲ್ಲಿ ಗುಂಡು ಹಾರಿಸುವ ಆದೇಶ ಹೊರಡಿಸಲಾಗಿತ್ತು. ಇದನ್ನೂ ಓದಿ: Air India Plane crash | ಡೇಟಾ ರಿಕವರಿಗಾಗಿ ಬ್ಲ್ಯಾಕ್‌ ಬಾಕ್ಸ್ ಅಮೆರಿಕಕ್ಕೆ ರವಾನೆ

  • Assam | 45 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ – ನಾಲ್ವರು ಅರೆಸ್ಟ್

    Assam | 45 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ – ನಾಲ್ವರು ಅರೆಸ್ಟ್

    ಗುವಾಹಟಿ: ಅಸ್ಸಾಂ ಪೊಲೀಸರು (Assam Police) ನಡೆಸಿದ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆಯಲ್ಲಿ 45 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ತಿಳಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಖಚಿತ ಮಾಹಿತಿಯ ಮೇರೆಗೆ ಕಚಾರ್ (Cachar) ಜಿಲ್ಲೆಯ ಎರಡು ಕಡೆ ದಾಳಿ ನಡೆಸಿ 45 ಕೋಟಿ ಮೌಲ್ಯದ 1.5 ಲಕ್ಷ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ದೆಹಲಿಯ ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ – ಪಾರಾಗಲು ಮಹಡಿಯಿಂದ ಹಾರಿದ ಜನ

    ಮಾದಕವಸ್ತು ವ್ಯಾಪಾರವು ಯುವಜನರು ಮತ್ತು ಸಮುದಾಯದ ಸುರಕ್ಷತೆಗೆ ಗಂಭೀರ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ನಮ್ಮ ಯುವಕರನ್ನು ರಕ್ಷಿಸುವಲ್ಲಿ ಅಸ್ಸಾಂ ಪೊಲೀಸರು ದೃಢವಾಗಿ ನಿಂತಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಇದನ್ನೂ ಓದಿ: ನಾಳೆ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ

  • ಅಸ್ಸಾಂನಲ್ಲಿ ಭೀಕರ ಪ್ರವಾಹ – ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾಗೆ ಮೋದಿ ಕರೆ

    ಅಸ್ಸಾಂನಲ್ಲಿ ಭೀಕರ ಪ್ರವಾಹ – ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾಗೆ ಮೋದಿ ಕರೆ

    – ಕೇಂದ್ರ ಸರ್ಕಾರದಿಂದ ಸಂಪೂರ್ಣ ನೆರವು ಭರವಸೆ ನೀಡಿದ ಪ್ರಧಾನಿ

    ಗುವಾಹಟಿ: ಅಸ್ಸಾಂನಲ್ಲಿ ಭೀಕರ ಮಳೆ ಹಾಗೂ ಪ್ರವಾಹ (Assam Flood) ಉಂಟಾದ ಪರಿಣಾಮ 38 ಮಂದಿ ಸಾವನ್ನಪ್ಪಿದ್ದು, ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ಅತ್ರಂತ್ರಗೊಂಡಿದ್ದಾರೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi), ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಕರೆ ಮಾಡಿ ಅಲ್ಲಿನ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದಿದ್ದಾರೆ.

    ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ದೂರವಾಣಿ ಕರೆ ಮೂಲಕ ಮೋದಿಗೆ ಅಸ್ಸಾಂನ ಪ್ರವಾಹ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಈ ವೇಳೆ ಮೋದಿ, ಕೇಂದ್ರ ಸರ್ಕಾರ ಸಂಪೂರ್ಣ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಕುರಿತು ಶರ್ಮಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ತಾಕತ್ತಿದ್ರೆ ಅರುಣ್ ಪುತ್ತಿಲರನ್ನು ಗಡಿಪಾರು ಮಾಡಿ ನೋಡಿ – ಸರ್ಕಾರ, ಪೊಲೀಸರಿಗೆ ಯುವಕನ ಸವಾಲು

    ಎಕ್ಸ್‌ನಲ್ಲಿ ಏನಿದೆ?
    ಸ್ವಲ್ಪ ಸಮಯದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿನ ಪ್ರವಾಹ ಪರಿಸ್ಥಿತಿಯನ್ನು ವಿಚಾರಿಸಲು ನನಗೆ ಕರೆ ಮಾಡಿದ್ದರು. ಅಸ್ಸಾಂ ಮತ್ತು ಪಕ್ಕದ ರಾಜ್ಯಗಳಲ್ಲಿ ನಿರಂತರ ಮಳೆಯಿಂದಾಗಿ ಪ್ರವಾಹ ಉಂಟಾಗಿ ಅನೇಕ ಜನರ ಜೀವನ ಹೇಗೆ ಪರಿಣಾಮ ಬೀರಿದೆ ಎಂಬುದರ ಕುರಿತು ನಾನು ಅವರಿಗೆ ವಿವರಿಸಿದೆ. ಅಲ್ಲದೇ ರಾಜ್ಯ ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯಾಚರಣೆಯ ಬಗ್ಗೆಯೂ ತಿಳಿಸಿದ್ದೇನೆ. ಇದನ್ನೂ ಓದಿ: RCB ಇಂಪ್ಯಾಕ್ಟ್ ಪ್ಲೇಯರ್ ಆಗಿ ಸಿಂಧನೂರಿನ ಮನೋಜ್ ಬಾಂಡಗೆ – ಕುಟುಂಬಸ್ಥರಿಂದ ಗೆಲುವಿನ ಶುಭಹಾರೈಕೆ

    ಪ್ರಧಾನ ಮಂತ್ರಿಗಳು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳಿಗೆ ಕೇಂದ್ರ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡುವ ಭರವಸೆ ಕೊಟ್ಟಿದ್ದಾರೆ. ಅಸ್ಸಾಂ ಜನರಿಗೆ ಅವರ ಮಾರ್ಗದರ್ಶನ ಮತ್ತು ಅಚಲ ಬೆಂಬಲಕ್ಕಾಗಿ ಕೃತಜ್ಞರಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಜಯಪುರ| ದರ ಕುಸಿತ – ರಾಷ್ಟ್ರೀಯ ಹೆದ್ದಾರಿಗೆ ಈರುಳ್ಳಿ ಸುರಿದು ಹೊರಳಾಡಿದ ರೈತ

  • ಅಸ್ಸಾಂನಲ್ಲಿ ಇನ್ಮುಂದೆ ಅಸ್ಸಾಮಿ ಭಾಷೆಯಲ್ಲೇ ಸರ್ಕಾರಿ ಆದೇಶ, ಸುತ್ತೋಲೆ: ಸಿಎಂ ಹಿಮಂತ ಬಿಸ್ವ ಶರ್ಮಾ

    ಅಸ್ಸಾಂನಲ್ಲಿ ಇನ್ಮುಂದೆ ಅಸ್ಸಾಮಿ ಭಾಷೆಯಲ್ಲೇ ಸರ್ಕಾರಿ ಆದೇಶ, ಸುತ್ತೋಲೆ: ಸಿಎಂ ಹಿಮಂತ ಬಿಸ್ವ ಶರ್ಮಾ

    ದಿಸ್ಪುರ್: ರಾಜ್ಯದ ಎಲ್ಲಾ ಸರ್ಕಾರಿ ಅಧಿಸೂಚನೆಗಳು, ಆದೇಶಗಳು ಮತ್ತು ಕಾಯ್ದೆಗಳಿಗೆ `ಅಸ್ಸಾಮಿ’ (Assamese) ಕಡ್ಡಾಯ ಅಧಿಕೃತ ಭಾಷೆಯಾಗಲಿದೆ. ಈ ಆದೇಶವು ಇಂದಿನಿಂದಲೇ ಜಾರಿಯಾಗಲಿದೆ ಎಂದು ಅಸ್ಸಾಂ (Assam) ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himanta Biswa Sarma) ಘೋಷಿಸಿದರು.

    ಬರಾಕ್ ಕಣಿವೆ ಮತ್ತು ಬಿಟಿಆರ್ ಜಿಲ್ಲೆಗಳಲ್ಲಿ ಬಂಗಾಳಿ ಮತ್ತು ಬೋಡೋ ಭಾಷೆಗಳನ್ನೂ ಕ್ರಮವಾಗಿ ಬಳಸಬೇಕು ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.  ಇದನ್ನೂ ಓದಿ: National Herald Case| ಫಸ್ಟ್‌ ಟೈಂ ರಾಹುಲ್‌, ಸೋನಿಯಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

    ಎಲ್ಲಾ ಸರ್ಕಾರಿ ಅಧಿಸೂಚನೆಗಳು, ಆದೇಶಗಳು ಅಸ್ಸಾಮಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿರುತ್ತದೆ. ಭಾರತ ಸರ್ಕಾರ, ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಇತರ ರಾಜ್ಯ ಸರ್ಕಾರಿ ಸಂಸ್ಥೆಗಳೊಂದಿಗೆ ಸಂವಹನ ನಡೆಸಲು ಇಂಗ್ಲಿಷ್ ಭಾಷೆ (English Language) ಬಳಕೆಯನ್ನು ಮುಂದುವರಿಸಲಾಗುವುದು. ಅಲ್ಲದೇ ನ್ಯಾಯಾಲಯಗಳೊಂದಿಗಿನ ಎಲ್ಲಾ ವರದಿಗಳು ಮತ್ತು ಪತ್ರ ವ್ಯವಹಾರಗಳು ಸಹ ಇಂಗ್ಲಿಷ್‌ನಲ್ಲಿರುತ್ತವೆ ಎಂದು ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: ಚಿಲ್ಲರೆ ಹಣದುಬ್ಬರ| 2019ರ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿಕೆ

    ಕಾಯಿದೆಗಳು, ನಿಯಮಗಳು, ನಿಬಂಧನೆಗಳು ಮತ್ತು ಅಧಿಸೂಚನೆಗಳನ್ನು ಒಳಗೊಂಡಿರುವ ಪರಂಪರೆ ದಾಖಲೆಗಳನ್ನು ಎರಡು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಅಸ್ಸಾಮಿ ಭಾಷೆಗೆ ಅನುವಾದಿಸಲಾಗುತ್ತದೆ. ಭಾಷಾಂತರ ಕಾರ್ಯವನ್ನು ವಿಶ್ವವಿದ್ಯಾಲಯಗಳ ಭಾಷಾ ವಿಭಾಗಗಳ ಸಹಾಯದಿಂದ ಕೈಗೊಳ್ಳಬೇಕು. ಇಂಗ್ಲಿಷ್‌ನಿಂದ ಅಸ್ಸಾಮಿ, ಬಂಗಾಳಿ ಮತ್ತು ಬೋಡೋ ಭಾಷೆಗೆ ಭಾಷಾಂತರಿಸಲು `ಅನುವಾದ್ ಭಾಷಿಣಿ’ ಅಪ್ಲಿಕೇಶನ್ ಅನ್ನು ಬಳಸುವಂತೆ ಸರ್ಕಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

  • ಅಸ್ಸಾಂನ ಕಲ್ಲಿದ್ದಲು ಗಣಿ ದುರಂತ – ನಾಲ್ವರು ಕಾರ್ಮಿಕರ ಶವ ಪತ್ತೆ

    ಅಸ್ಸಾಂನ ಕಲ್ಲಿದ್ದಲು ಗಣಿ ದುರಂತ – ನಾಲ್ವರು ಕಾರ್ಮಿಕರ ಶವ ಪತ್ತೆ

    ದಿಸ್ಪುರ್‌: ಅಸ್ಸಾಂನ (Assam) ದಿಮಾ ಹಸಾವೊ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ (Coal Mine) ಸಿಲುಕಿದ್ದ ಕನಿಷ್ಠ ಒಂಬತ್ತು ಗಣಿ ಕಾರ್ಮಿಕರಲ್ಲಿ ನಾಲ್ವರ ಶವಗಳನ್ನು ಹೊರತೆಗೆಯಲಾಗಿದೆ. ಕನಿಷ್ಠ ಐದು ಜನರು ಗಣಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಜೀವಂತವಾಗಿ ರಕ್ಷಿಸುವ ಭರವಸೆ ಇಲ್ಲ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

    ಸೇನೆ ಮತ್ತು ರಾಷ್ಟ್ರೀಯ ವಿಪತ್ತು ಪಡೆ ಶನಿವಾರ ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಒಬ್ಬರ ಶವವನ್ನು ಹೊರತೆಗೆದಿದೆ. ಮೃತನನ್ನು ಉಮ್ರಾಂಗ್ಸೊ ನಿವಾಸಿ 27 ವರ್ಷದ ಲಿಜೆನ್ ಮಗರ್ ಎಂದು ಗುರುತಿಸಲಾಗಿದೆ. ನಂತರ ಹೊರತೆಗೆಯಲಾದ ಎರಡನೇ ಶವವನ್ನು ಇನ್ನೂ ಗುರುತಿಸಲಾಗಿಲ್ಲ. ಇದಕ್ಕೂ ಮೊದಲು, ಗಂಗಾ ಬಹದ್ದೂರ್ ಶ್ರೆಷ್ಟೊ ಅವರ ಶವವನ್ನು ಮಂಗಳವಾರ ಬೆಳಗ್ಗೆ ಹೊರತೆಗೆಯಲಾಗಿತ್ತು. ಅದರ ನಂತರ, ನಿರಂತರ ನೀರು ತೆಗೆಯುವ ಪ್ರಯತ್ನಗಳು ನಡೆದಿತ್ತು.

    ಘಟನೆ ನಡೆದ ಸ್ಥಳ ಅಸ್ಸಾಂ ಮತ್ತು ಮೇಘಾಲಯದ ಗಡಿಗೆ ಹತ್ತಿರದಲ್ಲಿದೆ. 2018 ರಲ್ಲಿ ಮೇಘಾಲಯದ ಪೂರ್ವ ಜೈನ್ತಿಯಾ ಬೆಟ್ಟಗಳಲ್ಲಿ ಪ್ರವಾಹಕ್ಕೆ ಸಿಲುಕಿ 15 ಕಾರ್ಮಿಕರು ಸಾವನ್ನಪ್ಪಿದಾಗ ಈ ಪ್ರದೇಶದ ಗಣಿಗಾರಿಕೆಯಲ್ಲಿ ಅತ್ಯಂತ ಭೀಕರ ದುರಂತಗಳು ಸಂಭವಿಸಿದ್ದವು.

    ದಿಮಾ ಹಸಾವೊ ವ್ಯಾಪಕವಾದ ಕಲ್ಲಿದ್ದಲು, ಸುಣ್ಣದ ಕಲ್ಲು ಮತ್ತು ಗ್ರಾನೈಟ್ ಗಣಿಗಾರಿಕೆಗೆ ಹೆಸರುವಾಸಿಯಾಗಿದೆ.

    ಏನಿದು ಘಟನೆ?

    ಅಸ್ಸಾಂನ (Assam) ದಿಮಾ ಹಸಾವೊ ಜಿಲ್ಲೆಯಲ್ಲಿರುವ 300 ಅಡಿ ಆಳದ ರ‍್ಯಾಟ್ ಹೋಲ್ ಮೈನಿಂಗ್‌ (Rat Hole Mine) ಒಂದರಲ್ಲಿ ಜ.5 ರಂದು ನೀರು ತುಂಬಿದ್ದು, ಕಾರ್ಮಿಕರು ಸಿಲುಕಿದ್ದರು.

    ಕ್ವಾರಿಯಲ್ಲಿ ಸುಮಾರು 100 ಅಡಿ ನೀರು ತುಂಬಿದೆ ಎಂದು ಮೂಲಗಳು ತಿಳಿಸಿದ್ದವು. ಬಳಿಕ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದವು.

  • ಅಸ್ಸಾಂನ ರ‍್ಯಾಟ್ ಹೋಲ್ ಮೈನಿಂಗ್‌ನಲ್ಲಿ ಉಕ್ಕಿದ ನೀರು – 18 ಕಾರ್ಮಿಕರು ಸಿಲುಕಿರುವ ಶಂಕೆ

    ಅಸ್ಸಾಂನ ರ‍್ಯಾಟ್ ಹೋಲ್ ಮೈನಿಂಗ್‌ನಲ್ಲಿ ಉಕ್ಕಿದ ನೀರು – 18 ಕಾರ್ಮಿಕರು ಸಿಲುಕಿರುವ ಶಂಕೆ

    ದಿಸ್ಪುರ್‌: ಅಸ್ಸಾಂನ (Assam) ದಿಮಾ ಹಸಾವೊ ಜಿಲ್ಲೆಯಲ್ಲಿರುವ 300 ಅಡಿ ಆಳದ ರ‍್ಯಾಟ್ ಹೋಲ್ ಮೈನಿಂಗ್‌ (Rat Hole Mine) ಒಂದರಲ್ಲಿ ನೀರು ತುಂಬಿದ್ದು, ಸುಮಾರು 18 ಕಾರ್ಮಿಕರು ಸಿಲುಕಿದ್ದಾರೆ.

    ಕ್ವಾರಿಯಲ್ಲಿ ಸುಮಾರು 100 ಅಡಿ ನೀರು ತುಂಬಿದೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು. ಎರಡು ಪಂಪ್‌ಗಳನ್ನು ಬಳಸಿಕೊಂಡು ನೀರನ್ನು ಖಾಲಿ ಮಾಡುತ್ತಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ಸ್ಥಳಕ್ಕೆ ಧಾವಿಸಿವೆ.

    ಪ್ರಸ್ತುತ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆಯ ನೆರವನ್ನು ಕೋರಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ.

    ರ‍್ಯಾಟ್ ಹೋಲ್ ಗಣಿಗಾರಿಕೆಯು ಅಪಾಯಕಾರಿ ತಂತ್ರವಾಗಿದ್ದು, ಕಿರಿದಾದ ಸುರಂಗಗಳನ್ನು ಕಾರ್ಮಿಕರು ಕೈಯಾರೆ ಅಗೆಯುತ್ತಾರೆ. ಈ ಸುರಂಗಗಳು ಆಳವಾದ ಹೊಂಡಗಳಿಗೆ ಕಾರಣವಾಗುತ್ತವೆ. ಇದರಿಂದ ಕಲ್ಲಿದ್ದಲು ಗಣಿಗಾರಿಕೆ ಮಾಡಲಾಗುತ್ತದೆ. ಗಣಿಗಳಿಂದ ಹೊರಸೂಸುವ ಆಮ್ಲೀಯ ನೀರು ಮತ್ತು ಭಾರೀ ಲೋಹಗಳು ಕೃಷಿ ಮತ್ತು ಮಾನವ ಬಳಕೆಗೆ ಬಳಸುವ ನೀರಿನ ಮೂಲಗಳಿಗೆ ವಿಷಕಾರಿಯಾಗಿವೆ.

    2018 ರಲ್ಲಿ ಮೇಘಾಲಯದ ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಅಕ್ರಮ ಕಲ್ಲಿದ್ದಲು ಗಣಿಗೆ ಹತ್ತಿರದ ನದಿಯಿಂದ ನೀರು ನುಗ್ಗಿತ್ತು. ಸುಮಾರು 15 ಕಾರ್ಮಿಕರು ಸಿಕ್ಕಿಬಿದ್ದಿದ್ದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ 2 ಮೃತದೇಹಗಳನ್ನು ಮಾತ್ರ ತೆಗೆಯುವಲ್ಲಿ ಯಶಸ್ವಿಯಾಗಿತ್ತು.