Tag: Himalaya

  • ಹಿಮಾಲಯದ ಮೌಂಟ್ ಕುವಾರಿ ಶಿಖರ ಏರಿದ ಪೌರಕಾರ್ಮಿಕರ ಮಕ್ಕಳು

    ಹಿಮಾಲಯದ ಮೌಂಟ್ ಕುವಾರಿ ಶಿಖರ ಏರಿದ ಪೌರಕಾರ್ಮಿಕರ ಮಕ್ಕಳು

    ಮೈಸೂರು: ಪೌರಕಾರ್ಮಿಕರು, ಮಾವುತರ ಮಕ್ಕಳು ಹಿಮಾಲಯಕ್ಕೆ(Himalaya) ಚಾರಣ ಮಾಡಿ ಮೌಂಟ್ ಕುವಾರಿ ಪಾಸ್(Mount Quarry Pass) ಏರುವುದರ ಮೂಲಕ ಸಾಧನೆ ಮಾಡಿದ್ದಾರೆ.

    ಮೈಸೂರಿನ(Mysuru) 8 ಪೌರಕಾರ್ಮಿಕರ ಮಕ್ಕಳು, ಮಾವುತರು, ಅರಣ್ಯ ರಕ್ಷಕರು ಮತ್ತು ಇತರ ನಾಗರಿಕರ ತಂಡ ಈ ಸಾಧನೆ ಮಾಡಿದೆ. ಇವರು ಉತ್ತರಾಖಂಡದ 13,990 ಅಡಿ ಎತ್ತರದ ಮೌಂಟ್ ಕುವಾರಿ ಪಾಸ್ ಹತ್ತಿದ್ದಾರೆ. ನಗರದ ಟೈಗರ್ ಅಡ್ವೆಂಚರ್ ಫೌಂಡೇಶನ್, ದಿ ಮೌಂಟೇನ್ ಗೋಟ್ ಸಹಯೋಗದೊಂದಿಗೆ ಈ ಸಾಹಸ ಯಾತ್ರೆ ನಡೆದಿದೆ. ಇದನ್ನೂ ಓದಿ: ಶೋಪಿಯಾನ್‌ನಲ್ಲಿ ಉಗ್ರರ ಹತ್ಯೆ- ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದ ಭದ್ರತಾ ಪಡೆ

    ಮರಿಮಲ್ಲಪ್ಪ ಪಿಯು ಕಾಲೇಜಿನ ಉಪನ್ಯಾಸಕ ಅನಿಲ್ ಕುಮಾರ್ ನೇತೃತ್ವದ 24 ಜನರ ತಂಡದಲ್ಲಿ ಪೌರಕಾರ್ಮಿಕರ ಮಕ್ಕಳು, ಹುಣಸೂರು ಅರಣ್ಯ ವಿಭಾಗದ ಮಾವುತರು, ಅರಣ್ಯ ಬೀಟ್ ಗಾರ್ಡ್‌ಗಳು, ಗೃಹಿಣಿಯರು ಮತ್ತು ಶಾಶ್ವತ ಸೇವಾ ಸಮಾಜ ಶಾಲೆಯ ವಿದ್ಯಾರ್ಥಿಗಳು ಪರ್ವತಾರೋಹಣ ಮಾಡಿದ್ದಾರೆ. ಇದನ್ನೂ ಓದಿ: ಮದುವೆ ಬಳಿಕ 2ನೇ ಬಾಲಿವುಡ್ ಚಿತ್ರಕ್ಕೆ ಕೀರ್ತಿ ಸುರೇಶ್ ಗ್ರೀನ್ ಸಿಗ್ನಲ್

  • ಹಿಮಾಲಯದಲ್ಲಿ ಅಪ್ಪು: ನಟ ಸುಮುಖ ಕನಸು ನನಸು

    ಹಿಮಾಲಯದಲ್ಲಿ ಅಪ್ಪು: ನಟ ಸುಮುಖ ಕನಸು ನನಸು

    ನ್ನಡ ಚಿತ್ರರಂಗದ ಯುವ ನಾಯಕ ನಟ ಸುಮುಖ (Sumukh) ಹಿಮಾಲಯದ (Himalaya) ತಪ್ಪಲಿನಲ್ಲಿ ಸಂಚರಿಸುವಾಗ ಅಪ್ಪು ನಗುವಿನ ಸಾಕ್ಷಾತ್ಕಾರವಾಗಿದೆ.  ಎವರೆಸ್ಟ್ ಬೇಸ್ ಕ್ಯಾಂಪಿನಲ್ಲಿ, ಸಮುದ್ರ ಮಟ್ಟದಿಂದ 5364 ಮೀಟರ್ ಎತ್ತರದಲ್ಲಿ ಮಂಜು ಮುಸುಕಿದ ಎತ್ತರೆತ್ತರದ ಶಿಖರಗಳ ನಡುವೆ ಸಂಚರಿಸುವಾಗ ಪವಿತ್ರವಾದ ಹಳದಿ ವಸ್ತ್ರದಿಂದ ಸುತ್ತಲ್ಪಟ್ಟ, ಕೋಟ್ಯಂತರ ಹೃದಯ ಗೆದ್ದಿರುವ ಪವರ್ ಸ್ಟಾರ್ ಅಪ್ಪುವಿನ (Puneeth Rajkumar) ಸ್ನಿಗ್ದ ನಗುವಿರುವ ಫೋಟೊ ದೊರಕಿದೆ.

    ‘ಕಾಗದದ ದೋಣಿಯಲಿ ಚಿತ್ರದ ಎರಡನೇ ಶೆಡ್ಯುಲ್ ಆರಂಭವಾಗುವ ಮೊದಲು ನಾನು ಕೆಲವು ಕಾಲ ಪ್ರಕೃತಿಯ ನಡುವೆ ಕಳೆಯಲು ನಿರ್ಧರಿಸಿದ್ದೆ. ನೇಪಾಳದ ಲುಕ್ಲಾದಿಂದ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಹತ್ತು ದಿನದ ಚಾರಣದ ಕಾರ್ಯಕ್ರಮ ಅದಾಗಿತ್ತು. ಕರ್ನಾಟಕದಿಂದ ನಾನು ಒಬ್ಬನೇ ಹೋಗಿದ್ದು. ಅಲ್ಲಿ ಹಿಮದ ರಾಶಿಯ ನಡುವೆ ಅಪ್ಪುವಿನ ಫೋಟೋ ನೋಡಿದಾಗ ಮೊದಲು ನನಗೆ ಅಚ್ಚರಿ ಆಯ್ತು. ನಿಧಾನವಾಗಿ ಅವರ ಜನಪ್ರಿಯತೆ ಅವರ ಮೇಲಿನ ಗೌರವ ಹಾಗೂ ಆಧರದ ಪ್ರಮಾಣ ಎಷ್ಟಿರಬಹುದು ಎಂದು ಮನಸಿನ ಆಳಕ್ಕೆ ಇಳಿಯಿತು. ಕನ್ನಡದ ನೆಲೆಯಿಂದ ದೂರ ಇರುವಾಗ, ನನ್ನನ್ನು ನಾನು ಆ ಅಗಾಧ ಪ್ರಕೃತಿಯ ನಡುವೆ ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿರುವಾಗ ಎಲ್ಲರಿಗೂ ಪ್ರೇರಣೆಯಾಗಿರುವ ಅವರ ನಗು ನನ್ನ ಮನಸ್ಸನ್ನ ನಿರಾಳಗೊಳಿಸಿತು. ತುಂಬಾ ವರ್ಷಗಳಿಂದ ನಮಗೆ ಗೊತ್ತಿರೋರು ದೂರ ದೇಶದಲ್ಲಿ ಎದುರಾದಾಗ ಆಗುತ್ತಲ್ಲ ಆ ಖುಷಿ ಅದು’ ಎಂದು ತಮಗಾದ ಅನುಭವವನ್ನು ಹಂಚಿಕೊಂಡರು ದ್ವಿಭಾಷ ನಟ ಸುಮುಖ.

    ‘ಪ್ರಕೃತಿ ನಮಗೆ ಅನೇಕ ಬಗೆಯ ಸಂದೇಶಗಳನ್ನು ರವಾನಿಸುತ್ತಾ ಇರುತ್ತದೆ. ಅಂದು ನಮ್ಮ ಚಾರಣದ ಒಂಭತ್ತನೇ ದಿನ. ಅದಾಗಲೇ ನಾಲ್ಕು ಗಂಟೆಯ ನಡಿಗೆ ಪೂರೈಸಿದ್ದೆವು. ಸಹಜವಾಗಿಯೇ ದಣಿದಿದ್ದೆವು. ಆಗ ಎವರೆಸ್ಟ್ ಬೇಸ್ ಕ್ಯಾಂಪಿನಲ್ಲಿ  ಅಪ್ಪುವಿನ ಫೋಟೋ ದೊರಕಿದ್ದು ನನಗೆ ನಿಜಕ್ಕೂ ಒಂದು ಬಗೆಯಲ್ಲಿ ಪ್ರೇರಣೆಯಾಗಿದೆ’ ಎನ್ನುತ್ತಾರೆ, ಕನ್ನಡ ಹಾಗೂ ಮರಾಠಿಯಲ್ಲಿ ತಯಾರಾಗಿರುವ ಚಿತ್ರ ರಾಜಸ್ಥಾನ್ ಡೈರೀಸ್ ನಾಯಕ ನಟ ಸುಮುಖ.

     

    ‘ಈ ಫೋಟೋ ಇಲ್ಲಿಯವರೆಗೂ ಯಾರು  ತಂದಿರಬಹುದು ಎಂದು ಮಾಹಿತಿಗಾಗಿ ಹುಡುಕಿದೆ. ಫೋಟೋ ಮೇಲಾಗಲಿ ಹಿಂಬದಿಯಲ್ಲಾಗಲಿ ಯಾವ ಹೆಸರು ಅಥವಾ ಫೋನ್ ನಂಬರ್ ಇರಲಿಲ್ಲ. ಬಹುಶಃ ಎವರೆಸ್ಟ್ ಏರುವ ಅಪ್ಪುರನ್ನು  ಪರಮಾತ್ಮ ಚಿತ್ರದಲ್ಲಿ ನೋಡಿರುವ ಅಭಿಮಾನಿಯೊಬ್ಬರು ಕರ್ನಾಟಕದಿಂದ ಇಲ್ಲಿಯವರೆಗೂ ಈ ಫೋಟೋ ತಂದು ಹಿಮದಲ್ಲಿ ಹುದುಗಿಟ್ಟಿರಬಹುದು. ಕಾಲ ಹಾಗೂ ಗಾಳಿಯ ತೆಕ್ಕೆಗೆ ಬಂದ ಫೋಟೋ ನನ್ನ ಕಣ್ಣಿಗೆ ಕಂಡದ್ದು ಅದೃಷ್ಟವೇ ಸರಿ’ ಎಂದು ಭಾವುಕರಾದರು ಯುವ ನಾಯಕ ಸುಮುಖ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಮಾಲಯದಲ್ಲಿ ಸಾಮಾನ್ಯ ಭಕ್ತನಾದ ಸೂಪರ್ ಸ್ಟಾರ್

    ಹಿಮಾಲಯದಲ್ಲಿ ಸಾಮಾನ್ಯ ಭಕ್ತನಾದ ಸೂಪರ್ ಸ್ಟಾರ್

    ಹುಕೋಟಿ ವೆಚ್ಚದಲ್ಲಿ ತಯಾರಾದ ಜೈಲರ್ ಸಿನಿಮಾ ಬಿಡುಗಡೆಗೂ ಮುನ್ನ ಸೂಪರ್ ಸ್ಟಾರ್ ರಜನಿಕಾಂತ್ ಹಿಮಾಲಯಕ್ಕೆ ಹಾರಿದ್ದಾರೆ. ಆಗಸ್ಟ್ 09ರಂದು ಡೆಹ್ರಾಡೂನ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ರಜನಿ ಕಂಡು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದರು. ಸೆಲ್ಫಿಗಾಗಿ ಮುಗಿ ಬಿದ್ದಿದ್ದರು. ಎಲ್ಲರಿಗೂ ಸಮಾಧಾನದಿಂದಲೇ ಸೆಲ್ಫಿಕೊಟ್ಟು ಹಿಮಾಲಯದತ್ತ ತೆರೆಳಿದ್ದರು ರಜನಿಕಾಂತ್.

    ರಜನಿಕಾಂತ್ (Rajinikanth) ಆಗಾಗ್ಗೆ ಹಿಮಾಲಯಕ್ಕೆ (Himalaya) ಹೋಗುತ್ತಲೇ ಇರುತ್ತಾರೆ. ಅಲ್ಲದೇ, ಹಿಮಾಲಯದಲ್ಲಿ ಹಲವಾರು ಚಟುವಟಿಕೆಗಳನ್ನೂ ಅವರು ಹಮ್ಮಿಕೊಂಡಿದ್ದಾರೆ. ಹಿಮಾಲಯದಲ್ಲಿ ರಜನಿ ಎಲ್ಲಿರುತ್ತಾರೆ? ಏನು ಮಾಡುತ್ತಾರೆ? ಅವರು ಇರುವ ಸ್ಥಳ ಹೇಗಿರುತ್ತದೆ ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಲೇ ಇರುತ್ತದೆ. ಈ ಎಲ್ಲದಕ್ಕೂ ಉತ್ತರ ಎನ್ನುವಂತೆ ಕನ್ನಡದ ಬರಹಗಾರ ಸುಪ್ರೀತ್ ಕೆ.ಎನ್ ಬರೆದಿದ್ದಾರೆ. ಸ್ವತಃ ರಜನಿಯನ್ನೂ ಅವರು ಹಿಮಾಲಯದಲ್ಲಿ ಭೇಟಿ ಮಾಡಿದ್ದಾರೆ.

    ಸುಪ್ರೀತ್ ಕೆ.ಎನ್ ಫೇಸ್ ಬುಕ್ ನಲ್ಲಿ ಬರೆದಂತೆ…

    ಆಶ್ರಮಕ್ಕೆ ರಜನಿಕಾಂತ್ ಬಂದಿದ್ದಾರೆ ಎಂದು ನಿತ್ಯದ ಅಭ್ಯಾಸದಂತೆ ಗಂಗಾ ನದಿಯ ದಡಕ್ಕೆ ಹೋಗಿದ್ದಾಗ ಸನ್ಯಾಸಿಗಳೊಬ್ಬರು ಹೇಳಿದರು. ಆಶ್ಚರ್ಯವೇನೂ ಆಗಲಿಲ್ಲ. ರಜನಿಕಾಂತ್ ಆಗಾಗ ಹಿಮಾಲಯಕ್ಕೆ ಹೋಗೋದು, ಹಿಮಾಲಯಕ್ಕೆ ಹೋಗುವಾಗ ಹೃಷಿಕೇಶದ ಈ ಆಶ್ರಮಕ್ಕೆ ಬಂದು ಉಳಿದುಕೊಳ್ಳೋದು ಸಾಮಾನ್ಯ. ಪ್ರಧಾನಿ ಮೋದಿ, ರಜನಿಕಾಂತ್ ಹೀಗೆ ಅನೇಕರಿಗೆ ದಯಾನಂದ ಸರಸ್ವತೀ ಸ್ವಾಮಿಗಳು ಆಧ್ಯಾತ್ಮ ಗುರುಗಳು. ಹಾಗಾಗಿ ಆಶ್ಚರ್ಯವಾಗಲಿಲ್ಲ. ಆಶ್ರಮದೊಳಗೆ ನೋಡಿದರೆ ಗೆಸ್ಟ್ ಹೌಸಿನ ಮುಂದೆ ಒಳ್ಳೆಯ ಕಾರ್ ನಿಂತಿತ್ತು. ಆದರೆ ಪೊಲೀಸ್ ಜೀಪು, ಬೌನ್ಸರ್‌ಗಳು ಯಾರೂ ಇಲ್ಲ. ಆಮೇಲೆ ಪಾಠಕ್ಕೆಂದು ನಾನು ಸಭಾಂಗಣದೊಳಗೆ ಹೋದ ಐದು ನಿಮಿಷಗಳ ನಂತರ ರಜನಿಕಾಂತ್ ಬಂದ್ರು. ಅವರು ಮನೆಯಿಂದ ಹೊರಬಂದರೆ ಸಾಕು, ಅವರನ್ನು ನೋಡಲು ಸಾವಿರಾರು ಜನ ಕಾಯ್ತಿರ್ತಾರೆ. ಆದರೆ ಪುಟ್ಟ ಸಭಾಂಗಣದಲ್ಲಿ ಇದ್ದದ್ದು ಹೆಚ್ಚೆಂದರೆ 50 ಜನ. ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಇಲ್ಲಿ ಬಂದಿರುವುದು ನಮಗೆ ಖುಷಿ ತಂದಿದೆ, ಇವತ್ತು ಅವರ ಸಿನಿಮಾ ಬಿಡುಗಡೆ ಆಗ್ತಿದೆ, ಅವರಿಗೆ ಒಳ್ಳೆದಾಗ್ಲಿ ಎಂದಾಗ, ಆ ಸ್ಟಾರ್‌ಗಿರಿಗೂ ತಮಗೂ ಸಂಬಂಧವೇ ಇಲ್ಲವೆನ್ನುವಂತಹ ನಿರ್ಲಿಪ್ತ ಭಾವ ಅವರ ಮುಖದಲ್ಲಿ.

    ವೇದಾಂತದಲ್ಲಿ ಸಾಮಾನ್ಯವಾಗಿ ಒಂದು ಉದಾಹರಣೆ ಕೊಡುತ್ತಾರೆ. ಸಿನಿಮಾ ನಟನಂತೆ ನಮ್ಮ ಪಾತ್ರ ಮಾಡಬೇಕಷ್ಟೆ. ಅದಕ್ಕೆ ಅಂಟಿಕೊಳ್ಳಬಾರದು. ಕೋಟ್ಯಾಂತರ ರೂಪಾಯಿ ಇರುವ ಸಿನಿಮಾ ನಟ, ಶೂಟಿಂಗ್ ಸೆಟ್‌ಗೆ ಬಂದಾಗ, ಭಿಕ್ಷುಕನ ಪಾತ್ರ ಕೊಟ್ಟರು ಮಾಡ್ತಾನೆ. ಪ್ಯಾಕಪ್ ಅಂದ ಕೂಡಲೇ ತನ್ನ ಕಾರಲ್ಲಿ ಮನೆಗೆ ಹೋಗ್ತಾನೆ. ರಜನಿಕಾಂತ್ ಸಿನಿಮಾದಲ್ಲಿ super star, style king ಆದರೂ, ಪ್ಯಾಕಪ್ ಅಂದ ಕೂಡಲೇ makeup ತೆಗೆದು, ಬಿಳಿ ಶರ್ಟು ಪಂಚೆ ಹಾಕಿದಾಗ ಅವರೇ ಬೇರೆ.

    ರಜನಿಕಾಂತ್ ಅವರಿಗೆ ಆಶ್ರಮ, ಹಿಮಾಲಯ ಇವೆಲ್ಲಾ ಯಾಕೆ ಬೇಕು? ಕೋಟಿ ಕೋಟಿ ಹಣ, ಅಭಿಮಾನಿಗಳು ಎಲ್ಲ ಇದ್ದಾರಲ್ಲ, ಆರೋಗ್ಯ ಕೈ ಕೊಟ್ರೆ ಒಳ್ಳೆ ಆಸ್ಪತ್ರೆಗೆ ಸೇರೊದಿರಲಿ, ಆಸ್ಪತ್ರೆಯನ್ನೇ ಕೊಂಡುಕೊಳ್ಳಬಹುದು. ಇಷ್ಟೆಲ್ಲಾ ಇದ್ದು ಅವರಿಗೆ ಒಂದು ಸತ್ಯ ಅರಿವಾಗಿದೆ. ಸರ್ವಂ ವ್ಯರ್ಥಂ ಮರಣ ಸಮಯೇ ಸಾಂಬ ಏಕ ಸಹಾಯಕಃ (ಮರಣ ಸಮಯದಲ್ಲಿ ಶಿವನೊಬ್ಬನೇ ಸಹಾಯಕ್ಕೆ ಬರೋದು, ಉಳಿದದ್ದೆಲ್ಲಾ ವ್ಯರ್ಥ). ಈ ಸತ್ಯ ಅರಿವಾದರೆ, ಬಲವಾಗಿ ಆಂತರ್ಯದಲ್ಲಿ ಬೇರೂರಿದರೆ ಹಿಮಾಲಯ ಸೆಳೆಯುತ್ತೆ. ಗಂಗೆ ಕರೆಸಿಕೊಳ್ಳುತ್ತಾಳೆ ಎಂದು ಸುಪ್ರೀತ್ ಬರೆದುಕೊಂಡಿದ್ದಾರೆ.

     

    ಒಂದು ಕಡೆ ರಜನಿಕಾಂತ್ ಅವರ ಜೈಲರ್ (Jailer)  ಸಿನಿಮಾ ರಿಲೀಸ್ ಆಗಿದೆ. ಉತ್ತಮ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ. ಮತ್ತೊಂದು ಕಡೆ ರಜನಿಕಾಂತ್ ನೆಮ್ಮದಿಯನ್ನು ಅರಸಿಕೊಂಡು ಹಿಮಾಲಯಕ್ಕೆ ಹೋಗಿದ್ದಾರೆ. ಧ್ಯಾನಕ್ಕೆ ಕೂತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಮಾಲಯದಲ್ಲಿ ರಜನಿಕಾಂತ್: ಮತ್ತೆ ಧ್ಯಾನಕ್ಕೆ ಜಾರಿದ ಸೂಪರ್ ಸ್ಟಾರ್

    ಹಿಮಾಲಯದಲ್ಲಿ ರಜನಿಕಾಂತ್: ಮತ್ತೆ ಧ್ಯಾನಕ್ಕೆ ಜಾರಿದ ಸೂಪರ್ ಸ್ಟಾರ್

    ಮಿಳಿನ ಸೂಪರ್ ಸ್ಟಾರ್ (Superstar) ರಜನಿಕಾಂತ್ (Rajinikanth) ಆಗಾಗ್ಗೆ ಹಿಮಾಲಯಕ್ಕೆ (Himalaya) ಹೋಗುತ್ತಲೇ ಇರುತ್ತಾರೆ. ಅಲ್ಲದೇ, ಹಿಮಾಲಯದಲ್ಲಿ ಹಲವಾರು ಚಟುವಟಿಕೆಗಳನ್ನೂ ಅವರು ಹಮ್ಮಿಕೊಂಡಿದ್ದಾರೆ. ಹಿಮಾಲಯದಲ್ಲಿ ರಜನಿ ಎಲ್ಲಿರುತ್ತಾರೆ? ಏನು ಮಾಡುತ್ತಾರೆ? ಅವರು ಇರುವ ಸ್ಥಳ ಹೇಗಿರುತ್ತದೆ ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಲೇ ಇರುತ್ತದೆ. ಈ ಎಲ್ಲದಕ್ಕೂ ಉತ್ತರ ಎನ್ನುವಂತೆ ಕನ್ನಡದ ಬರಹಗಾರ ಸುಪ್ರೀತ್ ಕೆ.ಎನ್ ಬರೆದಿದ್ದಾರೆ. ಸ್ವತಃ ರಜನಿಯನ್ನೂ ಅವರು ಹಿಮಾಲಯದಲ್ಲಿ ಭೇಟಿ ಮಾಡಿದ್ದಾರೆ.

    ಸುಪ್ರೀತ್ ಕೆ.ಎನ್ ಫೇಸ್ ಬುಕ್ ನಲ್ಲಿ ಬರೆದಂತೆ…

    ಆಶ್ರಮಕ್ಕೆ ರಜನಿಕಾಂತ್ ಬಂದಿದ್ದಾರೆ ಎಂದು ನಿತ್ಯದ ಅಭ್ಯಾಸದಂತೆ ಗಂಗಾ ನದಿಯ ದಡಕ್ಕೆ ಹೋಗಿದ್ದಾಗ ಸನ್ಯಾಸಿಗಳೊಬ್ಬರು ಹೇಳಿದರು. ಆಶ್ಚರ್ಯವೇನೂ ಆಗಲಿಲ್ಲ. ರಜನಿಕಾಂತ್ ಆಗಾಗ ಹಿಮಾಲಯಕ್ಕೆ ಹೋಗೋದು, ಹಿಮಾಲಯಕ್ಕೆ ಹೋಗುವಾಗ ಹೃಷಿಕೇಶದ ಈ ಆಶ್ರಮಕ್ಕೆ ಬಂದು ಉಳಿದುಕೊಳ್ಳೋದು ಸಾಮಾನ್ಯ. ಪ್ರಧಾನಿ ಮೋದಿ, ರಜನಿಕಾಂತ್ ಹೀಗೆ ಅನೇಕರಿಗೆ ದಯಾನಂದ ಸರಸ್ವತೀ ಸ್ವಾಮಿಗಳು ಆಧ್ಯಾತ್ಮ ಗುರುಗಳು. ಹಾಗಾಗಿ ಆಶ್ಚರ್ಯವಾಗಲಿಲ್ಲ. ಆಶ್ರಮದೊಳಗೆ ನೋಡಿದರೆ ಗೆಸ್ಟ್ ಹೌಸಿನ ಮುಂದೆ ಒಳ್ಳೆಯ ಕಾರ್ ನಿಂತಿತ್ತು. ಆದರೆ ಪೊಲೀಸ್ ಜೀಪು, ಬೌನ್ಸರ್‌ಗಳು ಯಾರೂ ಇಲ್ಲ. ಆಮೇಲೆ ಪಾಠಕ್ಕೆಂದು ನಾನು ಸಭಾಂಗಣದೊಳಗೆ ಹೋದ ಐದು ನಿಮಿಷಗಳ ನಂತರ ರಜನಿಕಾಂತ್ ಬಂದ್ರು. ಅವರು ಮನೆಯಿಂದ ಹೊರಬಂದರೆ ಸಾಕು, ಅವರನ್ನು ನೋಡಲು ಸಾವಿರಾರು ಜನ ಕಾಯ್ತಿರ್ತಾರೆ. ಆದರೆ ಪುಟ್ಟ ಸಭಾಂಗಣದಲ್ಲಿ ಇದ್ದದ್ದು ಹೆಚ್ಚೆಂದರೆ 50 ಜನ. ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಇಲ್ಲಿ ಬಂದಿರುವುದು ನಮಗೆ ಖುಷಿ ತಂದಿದೆ, ಇವತ್ತು ಅವರ ಸಿನಿಮಾ ಬಿಡುಗಡೆ ಆಗ್ತಿದೆ, ಅವರಿಗೆ ಒಳ್ಳೆದಾಗ್ಲಿ ಎಂದಾಗ, ಆ ಸ್ಟಾರ್‌ಗಿರಿಗೂ ತಮಗೂ ಸಂಬಂಧವೇ ಇಲ್ಲವೆನ್ನುವಂತಹ ನಿರ್ಲಿಪ್ತ ಭಾವ ಅವರ ಮುಖದಲ್ಲಿ.

    ವೇದಾಂತದಲ್ಲಿ ಸಾಮಾನ್ಯವಾಗಿ ಒಂದು ಉದಾಹರಣೆ ಕೊಡುತ್ತಾರೆ. ಸಿನಿಮಾ ನಟನಂತೆ ನಮ್ಮ ಪಾತ್ರ ಮಾಡಬೇಕಷ್ಟೆ. ಅದಕ್ಕೆ ಅಂಟಿಕೊಳ್ಳಬಾರದು. ಕೋಟ್ಯಾಂತರ ರೂಪಾಯಿ ಇರುವ ಸಿನಿಮಾ ನಟ, ಶೂಟಿಂಗ್ ಸೆಟ್‌ಗೆ ಬಂದಾಗ, ಭಿಕ್ಷುಕನ ಪಾತ್ರ ಕೊಟ್ಟರು ಮಾಡ್ತಾನೆ. ಪ್ಯಾಕಪ್ ಅಂದ ಕೂಡಲೇ ತನ್ನ ಕಾರಲ್ಲಿ ಮನೆಗೆ ಹೋಗ್ತಾನೆ. ರಜನಿಕಾಂತ್ ಸಿನಿಮಾದಲ್ಲಿ super star, style king ಆದರೂ, ಪ್ಯಾಕಪ್ ಅಂದ ಕೂಡಲೇ makeup ತೆಗೆದು, ಬಿಳಿ ಶರ್ಟು ಪಂಚೆ ಹಾಕಿದಾಗ ಅವರೇ ಬೇರೆ. ಇದನ್ನೂ ಓದಿ:ವಿಕ್ಕಿ ಜೈನ್‌ ಜೊತೆ ಮತ್ತೆ ಮದುವೆಯಾದ ಅಂಕಿತಾ ಲೋಖಂಡೆ

    ರಜನಿಕಾಂತ್ ಅವರಿಗೆ ಆಶ್ರಮ, ಹಿಮಾಲಯ ಇವೆಲ್ಲಾ ಯಾಕೆ ಬೇಕು? ಕೋಟಿ ಕೋಟಿ ಹಣ, ಅಭಿಮಾನಿಗಳು ಎಲ್ಲ ಇದ್ದಾರಲ್ಲ, ಆರೋಗ್ಯ ಕೈ ಕೊಟ್ರೆ ಒಳ್ಳೆ ಆಸ್ಪತ್ರೆಗೆ ಸೇರೊದಿರಲಿ, ಆಸ್ಪತ್ರೆಯನ್ನೇ ಕೊಂಡುಕೊಳ್ಳಬಹುದು. ಇಷ್ಟೆಲ್ಲಾ ಇದ್ದು ಅವರಿಗೆ ಒಂದು ಸತ್ಯ ಅರಿವಾಗಿದೆ. ಸರ್ವಂ ವ್ಯರ್ಥಂ ಮರಣ ಸಮಯೇ ಸಾಂಬ ಏಕ ಸಹಾಯಕಃ (ಮರಣ ಸಮಯದಲ್ಲಿ ಶಿವನೊಬ್ಬನೇ ಸಹಾಯಕ್ಕೆ ಬರೋದು, ಉಳಿದದ್ದೆಲ್ಲಾ ವ್ಯರ್ಥ). ಈ ಸತ್ಯ ಅರಿವಾದರೆ, ಬಲವಾಗಿ ಆಂತರ್ಯದಲ್ಲಿ ಬೇರೂರಿದರೆ ಹಿಮಾಲಯ ಸೆಳೆಯುತ್ತೆ. ಗಂಗೆ ಕರೆಸಿಕೊಳ್ಳುತ್ತಾಳೆ ಎಂದು ಸುಪ್ರೀತ್ ಬರೆದುಕೊಂಡಿದ್ದಾರೆ.

     

    ಒಂದು ಕಡೆ ರಜನಿಕಾಂತ್ ಅವರ ಜೈಲರ್ (Jailer)  ಸಿನಿಮಾ ರಿಲೀಸ್ ಆಗಿದೆ. ಉತ್ತಮ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ. ಮತ್ತೊಂದು ಕಡೆ ರಜನಿಕಾಂತ್ ನೆಮ್ಮದಿಯನ್ನು ಅರಸಿಕೊಂಡು ಹಿಮಾಲಯಕ್ಕೆ ಹೋಗಿದ್ದಾರೆ. ಧ್ಯಾನಕ್ಕೆ ಕೂತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಮಾಲಯದಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್

    ಹಿಮಾಲಯದಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್

    ‘ಕಂಬ್ಳಿಹುಳ’ ಖ್ಯಾತಿಯ ಅಂಜನ್ ನಾಗೇಂದ್ರ (Anjan Nagendra) ನಾಯಕ ನಟನಾಗಿ ನಟಿಸುತ್ತಿರುವ, ಶುಭ ಮಂಗಳ, ನಾಗಿಣಿ, ಕಮಲಿ, ಅಗ್ನಿಸಾಕ್ಷಿ, ಮಧುಬಾಲ ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ದೇಶಿಸುವ ಹಯವದನ (Hayavadana) ಸಾರಥ್ಯದಲ್ಲಿ ಮೂಡಿಬರ್ತಿರುವ ಚೊಚ್ಚಲ ಸಿನಿಮಾ ‘ಎಲ್ಲೋ ಜೋಗಪ್ಪ ನಿನ್ನರಮನೆ’.

    ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿ, ಒಂದು ಹಾಡಿನ ಚಿತ್ರೀಕರಣವನ್ನು ಚಿತ್ರತಂಡ ಬಾಕಿ ಉಳಿಸಿಕೊಂಡಿದೆ. ನಿರ್ದೇಶಕ ಹಯವದನ ಯಾರು ಸಲೀಸಾಗಿ ಚಿತ್ರೀಕರಣ ಮಾಡಲಾಗದ ಜಾಗದಲ್ಲಿ ಸಿನಿಮಾವನ್ನು ಚಿತ್ರೀಕರಿಸಬೇಕೆಂಬ ಕನಸು ಇಟ್ಟುಕೊಂಡಿದ್ದರು. ಅದರಂತೆ ಮಹಾರಾಷ್ಟ್ರ, ಉತ್ತರಖಂಡ, ದೆಹಲಿ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಿಮಾಲಯದ (Himalaya) ಕೊರೆಯುವ ಚಳಿಯಲ್ಲಿಯೂ ಎಲ್ಲೋ ಜೋಗಪ್ಪ ನಿನ್ನರಮನೆ’ (Ello Jogappa Ninnaramane) ವನ್ನು ಶೂಟಿಂಗ್ ನಡೆಸಿದ್ದಾರೆ. ಇದನ್ನೂ ಓದಿ:ಸುದೀಪ್ ನಟನೆಯ 46ನೇ ಸಿನಿಮಾ: ಇನ್ನಷ್ಟು, ಮತ್ತಷ್ಟು ಸುದ್ದಿ

    ಸುಂದರ ಸ್ಥಳಗಳಲ್ಲಿ ಸಿನಿಮಾ ಶೂಟ್ ಮಾಡಿರುವ ಖುಷಿ ಚಿತ್ರತಂಡದಲ್ಲಿದೆ. ಶೂಟಿಂಗ್ ಮುಗಿಸಿ ಈಗ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಸಿನಿಬಳಗ ಮಾತಿನ ಜೋಡಣೆ ಕೆಲಸದಲ್ಲಿ ನಿರತರಾಗಿದ್ದಾರೆ. ಎಲ್ಲೋ ಜೋಗಪ್ಪ ನಿನ್ನರಮನೆ ಒಂದು ಜರ್ನಿಯ ಕಥೆ. ತಂದೆ-ಮಗನ ನಡುವಿನ ಭಾವನಾತ್ಮಕ ಸಂಬಂಧ ಈ ಸಿನಿಮಾ ಹೈಲೈಟ್ಸ್‌. ತಂದೆಯ ಮಾತಿಗೆ ಮುನಿಸಿಕೊಂಡು ಮನೆ ಬಿಟ್ಟು ಹೋಗುವ ಹುಡುಗನ ಕಥೆ ಸಿನಿಮಾದಲ್ಲಿದೆ.

    ಲವ್‌, ಸೆಂಟಿಮೆಂಟ್‌, ಕಾಮಿಡಿ ಎಲ್ಲವನ್ನೂ ಒಳಗೊಂಡಿರುವ ಈ ಚಿತ್ರದಲ್ಲಿ ಅಂಜನ್ ನಾಗೇಂದ್ರಗೆ ಜೋಡಿಯಾಗಿ ಯುವ ನಟಿ  ವೆನ್ಯ ರೈ ನಟಿಸ್ತಿದ್ದು, ‘ಕೆಟಿಎಂ’, ‘ಮೂನ್ ವಾಕ್’ ಹಾಗೂ ಮಲಯಾಳಂನಲ್ಲಿ ‘ಮನಸ್ಮಿತ’ ಸಿನಿಮಾದಲ್ಲಿ ನಟಿಸಿರುವ ಸಂಜನಾ ದಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ  ಶರತ್ ಲೋಹಿತಾಶ್ವ, ಸ್ವಾತಿ, ದಾನಪ್ಪ, ಲಕ್ಷ್ಮೀ ನಾಡಗೌಡ, ದಿನೇಶ್ ಮಂಗಳೂರು,ಬಿರಾದರ್ ತಾರಾಬಳಗದಲ್ಲಿದ್ದಾರೆ.

     

    ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್ ನಡಿ ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವ ಪ್ರಸಾದ್ ಸಂಗೀತ ಸಂಯೋಜನೆ, ನಟರಾಜ್ ಮದ್ದಾಲ ಕ್ಯಾಮೆರಾ ವರ್ಕ್, ರವಿಚಂದ್ರನ್ ಸಂಕಲನದಲ್ಲಿ ಸಿನಿಮಾ ಮೂಡಿ ಬರಲಿದೆ. ರವಿ ಮುದ್ದಿ, ವಿಕ್ರಮ ಹಾತ್ವಾರ್, ಪ್ರಮೋದ್ ಮರವಂತೆ ಸಾಹಿತ್ಯ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ನರಸಿಂಹ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಡಬ್ಬಿಂಗ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಆದಷ್ಟು ಬೇಗ ಎಲ್ಲಾ ಕೆಲಸವನ್ನು ಮುಗಿಸಿ ಸೆಪ್ಟಂಬರ್ ಗೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

  • ಬೇಸಿಗೆಯಲ್ಲಿ ಆಲಿಕಲ್ಲು ಮಳೆ – ಕಲಬುರಗಿಯಲ್ಲಿ ‘ಹಿಮಾಲಯದ ರಸ್ತೆ’!

    ಬೇಸಿಗೆಯಲ್ಲಿ ಆಲಿಕಲ್ಲು ಮಳೆ – ಕಲಬುರಗಿಯಲ್ಲಿ ‘ಹಿಮಾಲಯದ ರಸ್ತೆ’!

    ಕಲಬುರಗಿ: ರಾಜ್ಯದಲ್ಲಿ ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಕಲಬುರಗಿಯ (Kalaburagi) ಗಡಿ ಗ್ರಾಮಗಳಲ್ಲಿ ಗುರುವಾರ ಆಲಿಕಲ್ಲು ಮಳೆಯಾಗಿದೆ. ಅಕಾಲಿಕವಾಗಿ ಬಿದ್ದ ಆಲಿಕಲ್ಲು ಮಳೆಯಿಂದಾಗಿ (Hail rain) ಗ್ರಾಮಗಳ ರಸ್ತೆಗಳಲ್ಲಿ ಹಿಮಾಲಯದ (Himalaya) ವಾತಾವರಣ ನಿರ್ಮಾಣವಾಗಿತ್ತು.

    ಚಿಂಚೋಳಿ ತಾಲೂಕಿನ ಗಡಿಗ್ರಾಮಗಳಾದ ಶಿವರಾಂಪುರ, ತೆಲಂಗಾಣದ (Telangana) ಮರಪಲ್ಲಿ, ಕೋಹಿರ್, ಬಂಟಾರಂ, ಪಟ್ಟಲ್ಲುರ್ ಗ್ರಾಮಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಮಳೆ ಬಿದ್ದಿದೆ. ಬಿರು ಬೇಸಿಗೆಯಲ್ಲಿ ಆಲಿಕಲ್ಲು ಮಳೆ ಕಂಡು ಗ್ರಾಮಸ್ಥರು ದಂಗಾಗಿದ್ದಾರೆ. ಇದನ್ನೂ ಓದಿ: Special- ಪುನೀತ್ ಹುಟ್ಟುಹಬ್ಬ: ದಿನಪೂರ್ತಿ ಕಾರ್ಯಕ್ರಮ

    ಸಮುದ್ರದ ಮೇಲೆ ಸುಳಿಗಾಳಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು. ಇನ್ನೂ ಎರಡು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ (Meteorological Department) ತಿಳಿಸಿದೆ. ಇದನ್ನೂ ಓದಿ: ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮದರಸಾ ಸಂಪೂರ್ಣ ಬಂದ್: ಯತ್ನಾಳ್

  • ಹಿಮಾಲಯಕ್ಕೆ ಚಾರಣ ಹೋದ ಬೆಂಗ್ಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯ ನಾಪತ್ತೆ

    ಹಿಮಾಲಯಕ್ಕೆ ಚಾರಣ ಹೋದ ಬೆಂಗ್ಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯ ನಾಪತ್ತೆ

    ಬೆಂಗಳೂರು: ಹಿಮಾಲಯಕ್ಕೆ ಚಾರಣ ಹೋದ ಸರ್ಜಾಪುರ ರಸ್ತೆಯ ಮಣಿಪಾಲ್ ಆಸ್ಪತ್ರೆಯ ವೈದ್ಯರೊಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

    ಚಂದ್ರಮೋಹನ್ (31) ನಾಪತ್ತೆಯಾಗಿರುವ ವೈದ್ಯ. ವಸಂತನಗರ ನಿವಾಸಿಯಾಗಿರುವ ಇವರು ಒಂಟಿಯಾಗಿ ಹಿಮಾಲಯ ಪರ್ವತಕ್ಕೆ ಚಾರಣ ಹೊಗಿದ್ದಾರೆ. ಹೀಗೆ ಹೋಗಿ ಜೂನ್ 20 ರ ನಂತರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಸಂಪರ್ಕಕ್ಕೆ ಸಿಕ್ಕಿಲ್ಲ. ಇದನ್ನೂ ಓದಿ: ವಿಧಾನಸೌಧದ ಆವರಣದಲ್ಲೇ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಆಗಲಿದೆ: ಸಿಎಂ ಘೋಷಣೆ

    ಚಂದ್ರಮೋಹನ್ ಅವರು ಒಂಟಿಯಾಗಿ ಚಾರಣ ಹೋಗುವ ಹವ್ಯಾಸ ಹೊಂದಿದ್ದಾರೆ. ಈ ಬಾರೀ ನೇಪಾಳಕ್ಕೆ ಚಾರಣ ಹೋಗಿದ್ದಾರೆ. ನೇಪಾಳದ ಮೂಲಕ ಹಿಮಾಲಯ ಹತ್ತಲು ಹೋಗಿದ್ದಾರೆ. ಶಿವನ ಅಪಾರ ಭಕ್ತನಾಗಿದ್ದ ಚಂದ್ರಮೋಹನ್, ಸಾಧು ಸಂತರ ಜೊತೆ ಪೂಜೆ, ಧ್ಯಾನದಲ್ಲಿ ತೊಡಗಿದ್ದರು. ಈ ಮೂಲಕ ಆಧ್ಯಾತ್ಮಿಕದ ಕಡೆ ಅತಿಯಾದ ಒಲವು ಹೊಂದಿದ್ದರು.

    ಯಾವುದೇ ಪ್ರವಾಸಿ ಗೈಡೆನ್ಸ್ ತೆಗೆದುಕೊಳ್ಳದೇ ಹೋಗಿದ್ದಾರೆ. ಹೊಸ ಹೊಸ ಸ್ಥಳಗಳನ್ನ ಅನ್ವೇಷಣೆ ಮಾಡಲು ಒಂಟಿಯಾಗಿ ಹೋಗುವ ಹವ್ಯಾಸ ಹೊಂದಿದ್ದರು. ಇದೀಗ ನಾಪತ್ತೆಯಾಗಿರುವ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾಗಿರುವ ವೈದ್ಯನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    Live Tv

  • ಐಟಿಬಿಪಿ ಯೋಧರಿಂದ ಹಿಮಾಲಯದ 17 ಸಾವಿರ ಅಡಿ ಎತ್ತರದಲ್ಲಿ ಯೋಗ

    ಐಟಿಬಿಪಿ ಯೋಧರಿಂದ ಹಿಮಾಲಯದ 17 ಸಾವಿರ ಅಡಿ ಎತ್ತರದಲ್ಲಿ ಯೋಗ

    ನವದೆಹಲಿ: 8ನೇ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಉತ್ತರದ ಲಡಾಖ್‍ನಿಂದ ಸಿಕ್ಕಿಂವರೆಗೆ ಇರುವ ವಿವಿಧ ಎತ್ತರದ ಹಿಮಾಲಯ ಪರ್ವತದಲ್ಲಿ ಯೋಗಾಭ್ಯಾಸವನ್ನು ಮಾಡಿದರು.

    ಐಟಿಬಿಪಿ ಯೋಧರು ಹಲವಾರು ವರ್ಷಗಳಿಂದ ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಭಾರತ-ಚೀನಾ ಗಡಿಗಳ ವಿವಿಧ ಎತ್ತರದ ಹಿಮಾಲಯ ಶ್ರೇಣಿಗಳಲ್ಲಿ ಯೋಗವನ್ನು ಪ್ರಚಾರ ಮಾಡುತ್ತಿದ್ದಾರೆ.

    ಈ ಬಾರಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ಅಂತಾರಾಷ್ಟ್ರೀಯ ಯೋಗ ದಿನದಂದು ಹಾಡನ್ನು ಅರ್ಪಿಸಿದ್ದಾರೆ ಜೊತೆಗೆ ITBP ಯೋಧರು ಲಡಾಖ್‌ನಲ್ಲಿ 17,000 ಅಡಿ ಎತ್ತರದಲ್ಲಿ ಯೋಗವನ್ನು ಪ್ರದರ್ಶಿಸಿದ್ದಾರೆ.

    ಆಯುಷ್ ಸಚಿವಾಲಯವು ಈ ಬಾರಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳಾಗಿರುವುದರಿಂದ ಈ ವಿಷಯವನ್ನು ಇಟ್ಟುಕೊಂಡು 75 ವರ್ಷಗಳ ಪ್ರಮುಖ ವಿಷಯವನ್ನು ಇಟ್ಟುಕೊಂಡು ಯೋಗ ದಿನಾಚರಣೆ ಆಚರಿಸುತ್ತಿದೆ. ಇದರಿಂದಾಗಿ ಕೇಂದ್ರ ಮಂತ್ರಿಗಳಿಗೆ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ದೇಶದ ಪ್ರಮುಖ 75 ಸ್ಥಳಗಳನ್ನು ಗುರುತಿಸಿದೆ. ಇದರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ದಸರಾ ಮೈದಾನದಲ್ಲಿ ಯೋಗವನ್ನು ಮಾಡಿದ್ದಾರೆ. ಇದನ್ನೂ ಓದಿ: ದೆಹಲಿ ಸ್ಟೇಡಿಯಂನಲ್ಲಿ ಸಾರ್ವಜನಿಕರೊಂದಿಗೆ ಕೇಜ್ರಿವಾಲ್ ಯೋಗ

    ಪ್ರಪಂಚದಾದ್ಯಂತ 2022ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸುಮಾರು 25 ಕೋಟಿ ಜನರು ಭಾಗವಹಿಸಿದ್ದಾರೆ ಎಂದು ಆಯುಷ್ ಸಚಿವಾಲಯ ತಿಳಿಸಿದೆ. ಅಷ್ಟೇ ಅಲ್ಲದೇ ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ ಯೋಗ ಗುರು ರಾಮದೇವ್ ಯೋಗ ಪ್ರದರ್ಶನ ನೀಡಿದ್ದರು. ಅನೇಕ ಮಕ್ಕಳು ಮತ್ತು ಇತರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಅಂತರಾಷ್ಟ್ರೀಯ ಯೋಗ ದಿನ: ನಾಡಿನ ಜನತೆಗೆ ಯೋಗದ ಪ್ರಾಮುಖ್ಯತೆ ಸಾರಿದ ಗಣ್ಯರು

    Live Tv

  • ನೇಪಾಳದಲ್ಲಿ ಮೊದಲ ಬಾರಿಗೆ ಓಮಿಕ್ರಾನ್ ಪ್ರಕರಣ ಪತ್ತೆ – ಇಬ್ಬರಿಗೆ ಸೋಂಕು

    ನೇಪಾಳದಲ್ಲಿ ಮೊದಲ ಬಾರಿಗೆ ಓಮಿಕ್ರಾನ್ ಪ್ರಕರಣ ಪತ್ತೆ – ಇಬ್ಬರಿಗೆ ಸೋಂಕು

    ಕಾಠ್ಮಂಡು: ನೇಪಾಳದ ಹಿಮಾಲಯ ರಾಷ್ಟ್ರದಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರಿ ತಳಿ ಓಮಿಕ್ರಾನ್ ದೃಢಪಟ್ಟ ಮೊದಲ ಪ್ರಕರಣ ವರದಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ನವೆಂಬರ್ 19 ರಂದು ವಿಮಾನದಲ್ಲಿ ಬಂದ 66 ವರ್ಷದ ವಿದೇಶಿ ಪ್ರಜೆಯೊಬ್ಬರಿಗೆ ಓಮಿಕ್ರಾನ್ ದೃಢಪಟ್ಟಿದ್ದು, ಅವರೊಂದಿಗೆ ಸಂಪರ್ಕ ಹೊಂದಿದ್ದ 71 ವರ್ಷದ ಮತ್ತೊಬ್ಬ ವ್ಯಕ್ತಿಗೂ ಓಮಿಕ್ರಾನ್ ದೃಢಪಟ್ಟಿದೆ. ಇದೀಗ ಇಬ್ಬರು ಸೋಂಕಿತರನ್ನು ಕ್ವಾರಂಟೈನ್‍ಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಅಮೇರಿಕಾದಲ್ಲಿ ಓಮಿಕ್ರಾನ್ ಮೊದಲ ಪ್ರಕರಣ ಪತ್ತೆ – ದಕ್ಷಿಣ ಆಫಿಕ್ರಾದಿಂದ ಬಂದ ವ್ಯಕ್ತಿಗೆ ಸೋಂಕು

    ಸೋಂಕಿತರಿಬ್ಬರೊಂದಿಗೂ ಸಂಪರ್ಕ ಹೊಂದಿದ್ದ ಇತರ 66 ಮಂದಿಗೂ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಿಗೆಲ್ಲಾ ನೆಗೆಟಿವ್ ವರದಿ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಸೋಂಕಿತರಿಬ್ಬರು ಸಹ  ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಹೊಂದಿದ್ದರು ಮತ್ತು ಇಬ್ಬರು ಸಂಪೂರ್ಣ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಸದ್ಯ ಈ ಕುರಿತಂತೆ ಸರ್ಕಾರಿ ಪ್ರಯೋಗಾಲಯವು ಓಮಿಕ್ರಾನ್ ರೂಪಾಂತರಿ ತಳಿ ಧೃಡಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದು, ಬೇರೆ ಯಾವುದೇ ರೀತಿಯ ವಿವರಗಳನ್ನು ನೀಡಿಲ್ಲ. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಓಮಿಕ್ರಾನ್‌ ಮೊದಲ ಪ್ರಕರಣ ಪತ್ತೆ- ಉತ್ತರ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಸೋಂಕು!

    ಕಳೆದ ವರ್ಷ ಕೊರೊನಾ ಸಾಂಕ್ರಾಮಿಕ ರೋಗದ ಆರಂಭದಿಂದಲು ನೇಪಾಳದಲ್ಲಿ 918,084 ಕೊರೊನಾವೈರಸ್ ಪ್ರಕರಣಗಳು ಮತ್ತು 11,541 ಸಾವುಗಳನ್ನು ವರದಿ ಮಾಡಿದೆ. ಕೇವಲ 28.6% ಮಂದಿ ಮಾತ್ರ ಕೋವಿಡ್-19 ವಿರುದ್ಧ ಸಂಪೂರ್ಣವಾಗಿ ಲಸಿಕೆ ಪಡೆದುಕೊಂಡಿದ್ದಾರೆ.

  • ಹಿಮಾಚಲ ಪರ್ವತವೇರಿದ ಬುಡಕಟ್ಟು ವಿದ್ಯಾರ್ಥಿಗಳು – 14 ಸಾವಿರ ಅಡಿ ಎತ್ತರದಲ್ಲಿ ಚಾರಣ

    ಹಿಮಾಚಲ ಪರ್ವತವೇರಿದ ಬುಡಕಟ್ಟು ವಿದ್ಯಾರ್ಥಿಗಳು – 14 ಸಾವಿರ ಅಡಿ ಎತ್ತರದಲ್ಲಿ ಚಾರಣ

    ಮೈಸೂರು: ಪರ್ವತಾರೋಹಿಗಳಿಗೆ ಹಿಮಾಲಯ ಶಿಖರವನ್ನೇರಬೇಕೆಂಬ ಕನಸಿರುತ್ತದೆ. ಆದರೆ ಆ ಅವಕಾಶ ಎಲ್ಲರಿಗೂ ಸಿಗೋದು ಕಷ್ಟ. ಆದರೆ ಮೈಸೂರಿನ ಬುಡಕಟ್ಟು ಮಕ್ಕಳಿಗೆ ಈ ಗಗನ ಕುಸುಮ ಸುಲಭವಾಗಿ ಸಿಕ್ಕಿದ್ದು, ಆ ಅವಕಾಶವನ್ನು ಮಕ್ಕಳು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ.

    ನಾಗರಹೊಳೆ ಹಾಗೂ ಬಂಡೀಪುರದ ಆದಿವಾಸಿ ಮಕ್ಕಳು, ಇದೀಗ ಹಿಮಾಲಯದ ಶಿಖರವನ್ನೇರಿ ತ್ರಿವರ್ಣ ಧ್ವಜ ಹಾರಿಸಿ ಸಾಧನೆ ಮಾಡಿದ್ದಾರೆ. ಆ ಸಾಧನೆ ಹಿಂದೆ ಅವರ ಶ್ರಮ ಬಹಳ ದೊಡ್ಡದಿದೆ. ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ವಿವೇಕಾನಂದ ಬುಡಕಟ್ಟು ಕಲಿಕಾ ಕೇಂದ್ರದ ವಿದ್ಯಾರ್ಥಿಗಳು ಹಿಮಾಲಯದ ಹಿಮಾಚಲ ಪ್ರದೇಶದ ಧೌಲಾರ್ಧ ರೇಂಜ್‍ನಲ್ಲಿರುವ 14 ಸಾವಿರ ಅಡಿ ಎತ್ತರದ ಸೌರ್ಕುಂಡ ಪಾಸ್ ಶಿಖರವನ್ನೇರಿದ್ದಾರೆ.

    ಟೈಗರ್ ಅಡ್ವೆಂಚರ್ ಫೌಂಡೇಶನ್, ಲೇಡಿಸ್ ಸರ್ಕಲ್ ಇಂಡಿಯಾ ವತಿಯಿಂದ ಹಾಡಿ ವಿದ್ಯಾರ್ಥಿಗಳಿಗಾಗಿ ವಿಶೇಷ ಚಾರಣವನ್ನು ಆಯೋಜಿಸಲಾಗಿತ್ತು. ಈ ಚಾರಣದಲ್ಲಿ 12 ಜನ ಬುಡಕಟ್ಟು ಕಲಿಕಾ ಕೇಂದ್ರದ ವಿದ್ಯಾರ್ಥಿನಿಯರು, ಇಬ್ಬರು ಗ್ರಾಮೀಣ ವಿದ್ಯಾರ್ಥಿನಿಯರು ಸೇರಿದಂತೆ ವಿವಿಧ ಜಿಲ್ಲೆಯ ಒಟ್ಟು 41 ಮಂದಿ ಮೈಸೂರಿನಿಂದ ತೆರಳಿ ಹಿಮಾಲಯವನ್ನ ಏರಿದ್ದಾರೆ.

    ಮೇ 2ಕ್ಕೆ ಮೈಸೂರಿನಿಂದ ಈ ತಂಡ ಹೊರಟಿತ್ತು. ಮೈನಸ್ 5-ಡಿಗ್ರಿ ಸೆಲ್ಸಿಯಸ್ ನಲ್ಲಿದ್ದ ಸ್ಥಳದಲ್ಲಿ ಮೊದಲಿಗೆ ಮಕ್ಕಳಿಗೆ ಭಯ ಶುರುವಾಗಿದೆ. ನಾವು ನಿಜಕ್ಕೂ 14 ಸಾವಿರ ಅಡಿಯ ಈ ಶಿಖರ ಏರುತ್ತೀವಾ ಎಂಬ ಅನುಮಾನ ಇತ್ತು. ಯಾವಾಗ ಶಿಖರವೇರಲು ಶುರು ಮಾಡಿದ್ರೋ, ಸಹಪಾಠಿಗಳ ಉತ್ಸಾಹ ಎಲ್ಲವೂ ಮಕ್ಕಳನ್ನ ಗುರಿ ತಲುಪುವಂತೆ ಮಾಡಿತ್ತು. ಇದೇ ಖುಷಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ತಮ್ಮ ಗುರಿ ಆಸೆ ಎರಡು ಈಡೇರಿಸಿಕೊಂಡಿರುವುದಾಗಿ ಮಕ್ಕಳು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

    ಮೇ 2ರಂದು ಮೈಸೂರಿನಿಂದ ಹೊರಟ ತಂಡ ಮೇ 9ಕ್ಕೆ ಸರಿಯಾಗಿ ಬೆಳಗ್ಗೆ 9 ಗಂಟೆ 12 ನಿಮಿಷಕ್ಕೆ ಹಿಮಾಲಯ ಏರಿ ಗುರಿ ಮುಟ್ಟಿದರು. ಹಿಮಾಲಯ ಏರಲು ಈ ಎಲ್ಲಾ ವಿದ್ಯಾರ್ಥಿನಿಯರಿಗೆ ಕಳೆದ ನಾಲ್ಕು ತಿಂಗಳಿನಿಂದ ವಿಶೇಷ ತರಬೇತಿ ಪಡೆದಿದ್ದರು. ರನ್ನಿಂಗ್ ಜಂಪಿಂಗ್ ಕಂಬಿಯ ಕೆಳಗೆ ನುಸುಳುವುದು ಸೇರಿದಂತೆ ಸಾಕಷ್ಟು ದೈಹಿಕ ಕಸರತ್ತುಗಳ ತರಬೇತಿ ಮೂಲಕ ಎಲ್ಲಾ ವಿದ್ಯಾರ್ಥಿಗಳನ್ನು ಹಿಮಾಲಯದ ಕಠಿಣ ಪರಿಸ್ಥಿತಿಗೆ ಹೊಂದುಕೊಳ್ಳುವಂತೆ ಸಜ್ಜುಗೊಳಿಸಲಾಗಿತ್ತು. ಅಲ್ಲದೆ ಈ ಚಾರಣಕ್ಕೆ ಬರೋಬ್ಬರಿ 8.5 ಲಕ್ಷ ವೆಚ್ಷವನ್ನ ದಾನಿಗಳು ನೀಡಿದ್ದಾರೆ. ಕೇವಲ ನಮ್ಮ ದೇಶದವರು ಮಾತ್ರವಲ್ಲ ವಿದೇಶದಲ್ಲಿರುವವರು ಬುಡಕಟ್ಟು ವಿದ್ಯಾರ್ಥಿನಿಯರಿಗೆ ಸಹಾಯ ಮಾಡಿದ್ದಾರೆ. ಒಟ್ಟಾರೆ, ಮೈಸೂರಿನ ಹಾಡಿ ಮಕ್ಕಳ ಸಾಧನೆ ಇದೀಗ ಹಿಮಾಲಯ ಶಿಖರವನ್ನೇರಿ ತ್ರಿವರ್ಣ ಧ್ವಜ ಹಾರಿಸುವ ಹಂತಕ್ಕೆ ತಲುಪಿದೆ.