Tag: himachalpradesh

  • ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಿ: ಸತ್ಯದೇವಾನಂದ ಸರಸ್ವತಿ

    ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಿ: ಸತ್ಯದೇವಾನಂದ ಸರಸ್ವತಿ

    ಶಿಮ್ಲಾ: ಭಾರತವು ಇಸ್ಲಾಮಿಕ್ ರಾಷ್ಟ್ರವಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕೆಂದು ಅರ್ಚಕ ಯತಿ ಸತ್ಯದೇವಾನಂದ ಸರಸ್ವತಿ ತಿಳಿಸಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹೆಚ್ಚುತ್ತಿರುವ ಮುಸ್ಲಿಮರ ಜನಸಂಖ್ಯೆಯು ಹಿಂದೂಗಳ ಅವನತಿಯನ್ನು ಸೂಚಿಸುತ್ತದೆ. ಹಿಂದೂಗಳು ತಮ್ಮ ಕುಟುಂಬಗಳನ್ನು ಬಲಪಡಿಸಬೇಕು. ಅವರು ತಮ್ಮ ಕುಟುಂಬ, ಮಾನವೀಯತೆ ಮತ್ತು ಸನಾತನ ಧರ್ಮವನ್ನು ರಕ್ಷಿಸಲು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕು ಎಂದು ಒತ್ತಾಯಿಸಿದರು.

    ಮುಸ್ಲಿಮರು ಯೋಜಿತ ರೀತಿಯಲ್ಲಿ ಅನೇಕ ಮಕ್ಕಳನ್ನು ಹೇರುವುದರ ಮೂಲಕ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಮುಸ್ಲಿಮರು ಭಾರತದಲ್ಲಿ ಬಹುಸಂಖ್ಯಾತರಾಗುತ್ತಾರೆ. ಆಗ ಭಾರತವನ್ನು ನೆರೆಯ ಪಾಕಿಸ್ತಾನದಂತೆ ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುತ್ತಾರೆ. ಇದಕ್ಕಾಗಿಯೇ ಭಾರತವು ಇಸ್ಲಾಮಿಕ್ ರಾಷ್ಟ್ರವಾಗುವುದನ್ನು ತಪ್ಪಿಸಲು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕು ಎಂದರು. ಇದನ್ನೂ ಓದಿ: ಹೆಣ್ಣುಮಕ್ಕಳು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು: ಡಾ.ನಾರಾಯಣ ಗೌಡ

    ಎರಡು ಮಕ್ಕಳ ರಾಷ್ಟ್ರೀಯ ನೀತಿಗೆ ವಿರುದ್ಧವಾಗಿದೆಯೇ ಎಂದು ಕೇಳಿದಾಗ, ನಮ್ಮ ದೇಶದಲ್ಲಿ ನಾಗರಿಕರು ಕೇವಲ ಎರಡು ಮಕ್ಕಳಿಗೆ ಜನ್ಮ ನೀಡುವಂತೆ ಹೇಳುವ ಯಾವುದೇ ಕಾನೂನು ಇಲ್ಲ. ಹಿಂದೂಗಳು ತಮ್ಮ ಕುಟುಂಬ, ಮಾನವೀಯತೆ ಮತ್ತು ಸನಾತನ ಧರ್ಮವನ್ನು ರಕ್ಷಿಸಲು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಪೊಲೀಸರು ಸಂಯಮದಿಂದ ವರ್ತಿಸದಿದ್ದರೆ, ಹಳೇ ಹುಬ್ಬಳ್ಳಿ ಮತ್ತೊಂದು ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಆಗುತ್ತಿತ್ತು: ಆರಗ ಜ್ಞಾನೇಂದ್ರ

  • ಜೋರಾಗಿ ಮಾತಾಡಿದ್ರೆ ಕೊರೊನಾ ಹರಡ್ಬೋದು: ವಿಧಾನಸಭೆ ಸ್ಪೀಕರ್

    ಜೋರಾಗಿ ಮಾತಾಡಿದ್ರೆ ಕೊರೊನಾ ಹರಡ್ಬೋದು: ವಿಧಾನಸಭೆ ಸ್ಪೀಕರ್

    ಶಿಮ್ಲಾ: ಜೋರಾಗಿ ಮಾತನಾಡಿದರೆ ಕೊರೊನಾ ವೈರಸ್ ಹರಡಬಹುದು ಎಂದು ಹಿಮಾಚಲಪ್ರದೇಶದ ವಿಧಾನಸಭೆ ಸ್ಪೀಕರ್ ವಿಪಿನ್ ಸಿಂಗ್ ಪಾರ್ಮರ್ ಹೇಳಿದ್ದಾರೆ.

    ವಿಧಾನಸಭೆ ಅಧಿವೇಶನದಲ್ಲಿ ಕೋವಿಡ್ 19 ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಶಾಸಕರ ಬಳಿ ಸ್ಪೀಕರ್ ಮನವಿ ಮಾಡಿದರು. ಸೋಮವಾರ ಬಿಜೆಪಿ ಶಾಸಕಿ ರೀಟಾ ದೇವಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ದೃಢಪಟ್ಟಿತ್ತು.

    ರೀಟಾ ದೇವಿ ಅವರು ಸೋಮವಾರ ಸಂಜೆ ಕೋವಿಡ್ 19 ಟೆಸ್ಟ್ ಮಾಡಿದ್ದು, ಇದಕ್ಕೂ ಮೊದಲು ಅವರು ಅಧಿವೇಶನದಲ್ಲಿ ಹಾಜರಾಗಿದ್ದರು. ಆದರೆ ವಿಧಾನಸಭೆಯಲ್ಲಿ ಅವರು ಇತರ ಶಾಸಕರಿಂದ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.

    ಅಧಿವೇಶನದ ಎರಡನೇ ದಿನವಾದ ಇಂದು ಆರಂಭದಲ್ಲಿ ಸ್ಪೀಕರ್ ಅವರು. ಕೊರೊನಾ ಮಾರ್ಗದರ್ಶಿ ನಿಯಮಗಳ ಪ್ರಕಾರ, ಜೋರಾಗಿ ಮಾತನಾಡುವುದು ಸಹ ಕೋವಿಡ್ 19 ವೈರಸ್ ಹರಡಲು ಕಾರಣವಾಗಬಹುದು. ಹೀಗಾಗಿ ಕೊರೊನಾ ವೈರಸ್ ಹರಡದಂತೆ ತಡೆಯಲು ಸಾಮಾನ್ಯ ರೀತಿಯಲ್ಲಿ(ಸ್ವಲ್ಪ ಮೆತ್ತಗೆ) ಮಾತನಾಡಿ ಎಂದು ಸಲಹೆ ನೀಡಿದರು. ಸ್ಪೀಕರ್ ಈ ರೀತಿಯಾಗಿ ಹೇಳುತ್ತಿದ್ದಂತೆಯೇ ಇಡೀ ಅಧಿವೇಶನ ಒಂದು ಬಾರಿ ನಡೆಗಡಲಲ್ಲಿ ತೇಲಾಡಿತು. ಅಲ್ಲದೆ ಚರ್ಚೆಯ ವೇಳೆ ಹಲವರು ಜೋರಾಗಿಯೇ ಮಾತನಾಡಿದರು.

    ಈ ಮಧ್ಯೆ ಕೊರೊನಾ ವೈರಸ್ ನಿಂದ ಈಗತಾನೇ ಚೇತರಿಸಿಕೊಂಡ ಬಳಿಕ ಇಂದು ಅಧಿವೇಶನಕ್ಕೆ ಹಾಜರಾದ ಬಿಜೆಪಿ ಶಾಸಕ ಪರಮ್‍ಜಿತ್ ಸಿಂಗ್ ಪಮ್ಮಿಯನ್ನು ಸ್ಪೀಕರ್ ಸ್ವಾಗತಿಸಿದರು. ಪರಮ್‍ಜಿತ್ ಅವರಿಗೆ ಆಗಸ್ಟ್ 17ರಂದು ನಡೆಸಿದ ಟೆಸ್ಟ್ ವೇಳೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು.

    ಸಚಿವ ಸುಖ್ ರಾಮ್‍ಚೌಧರಿ ಅವರು ಸೋಮವಾರ ಮತ್ತು ಮಂಗಳವಾರದ ಅಧಿವೇಶನದಲ್ಲಿ ಭಾಗಿಯಾದರು. ಇವರು ಕೂಡ ಆಗಸ್ಟ್ 6ರಂದು ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಸದ್ಯ ಕೋವಿಡ್ 19ನಿಂದ ಚೇತರಿಸಿಕೊಂಡಿದ್ದಾರೆ.

    ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ಯಾವ ಶಾಸಕರು ಕೂಡ ಅಸೆಂಬ್ಲಿಗೆ ಹಾಜರಾಗಬೇಡಿ. ಅಲ್ಲದೆ ಒಳಪ್ರವೇಶಿಸುವಾಗ ಎಲ್ಲರೂ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಗಾಗುವಂತೆ ಸ್ಪೀಕರ್ ತಿಳಿಸಿದರು.

  • 10 ರೂ. ಕೊಟ್ಟು ತಿಂಡಿ ತಾ ಎಂದು ಹೇಳಿ ಅತ್ಯಾಚಾರವೆಸಗಿದ!

    10 ರೂ. ಕೊಟ್ಟು ತಿಂಡಿ ತಾ ಎಂದು ಹೇಳಿ ಅತ್ಯಾಚಾರವೆಸಗಿದ!

    ಶಿಮ್ಲಾ: ತಿಂಡಿ ತಗೊಂಡು ಬಾ ಎಂದು 9 ವರ್ಷದ ಬಾಲಕಿ ಕೈಯಲ್ಲಿ 10 ರೂ ಕೊಟ್ಟು, ಆಕೆ ಅಂಗಡಿಗೆ ಹೋಗುತ್ತಿದ್ದಂತೆಯೇ ಆಕೆಯನ್ನು ದೂಡಿ ಅತ್ಯಾಚಾರವೆಸಗಿದ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಕುಲು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಮತದಾನ ಕೇಂದ್ರದ ಬಳಿಯೇ ಭಾನುವಾರ ನಡೆದಿದೆ. ಘಟನೆ ಸಂಬಂಧ ಬಾಲಕಿಯ ತಾಯಿ ನೀಡಿದ ದೂರಿನಂತೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಆರೋಪಿಯನ್ನು ದೇವೇಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಭರೇಶ್ ಗ್ರಾಮದವನು ಎನ್ನಲಾಗಿದೆ. ಜಿಲ್ಲೆಯ ಅನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮತದಾನ ಕೇಂದ್ರದ ಬಳಿಯ ಶಾಲಾ ಮೈದಾನದಲ್ಲಿ ಬಾಲಕಿ ಆಟವಾಡುತ್ತಿದ್ದಳು. ಈ ವೇಳೆ ಆಕೆಯನ್ನು ಕರೆದ ಆರೋಪಿ ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ.

    ಆರೋಪಿ ಬಾಲಕಿಗೆ 10 ರೂ. ಕೊಟ್ಟು ತಿಂಡಿ ತರುವಂತೆ ಕಳುಹಿಸಿದ್ದಾನೆ. ಹೀಗಾಗಿ ಬಾಲಕಿ ಹಣ ಹಿಡಿದುಕೊಂಡು ಅಂಗಡಿಯತ್ತ ತೆರಳುತ್ತಿದ್ದಳು. ಈ ವೇಳೆ ಆರೋಪಿ ಆಕೆಯನ್ನು ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದೊಳಗೆ ಎಳೆದುಕೊಂಡು ಆಕೆಯನ್ನು ರೇಪ್ ಮಾಡುವ ಮೂಲಕ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ.

    ಸಂತ್ರಸ್ತೆಯ ತಾಯಿ ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಬಾಲಕಿ ಆರೋಪಿಯ ಮನೆಗೆ ಆಟವಾಡಲು ತೆರಳಿರಬಹುದೆಂದು ನಂಬಿದ್ದರು. ಆದರೆ ಆತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ತಾಯಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಸ್‍ಪಿ ತೇಜಿಂದ್ರ ವರ್ಮಾ ತಿಳಿಸಿದ್ದಾರೆ.

  • ಅತಿಯಾದ ಧೂಳು ಮಿಶ್ರಿತ ಗಾಳಿ, ಮಳೆಯಿಂದ ತತ್ತರಿಸಿದ ದೆಹಲಿ

    ಅತಿಯಾದ ಧೂಳು ಮಿಶ್ರಿತ ಗಾಳಿ, ಮಳೆಯಿಂದ ತತ್ತರಿಸಿದ ದೆಹಲಿ

    ನವದೆಹಲಿ: ಭಾನುವಾರ ಸಂಜೆ ಬೀಸಿದ ಧೂಳು ಮಿಶ್ರಿತ ಬಿರುಗಾಳಿ ಜೊತೆಗೆ ಮಳೆಯಿಂದ ದೆಹಲಿ ತತ್ತರಿಸಿದೆ.

    ಹಠಾತ್ ಹವಾಮಾನ ಬದಲಾವಣೆಯಿಂದಾಗಿ ಸಂಜೆ 4:30 ನಂತರ ಮೋಡ ಕವಿದು ಮಳೆ ಸುರಿದಿದೆ. ಇದರಿಂದ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಶ್ರೀನಗರದಿಂದ ದೆಹಲಿಗೆ ಬರುತ್ತಿದ್ದ ವಿಮಾನವನ್ನು ಮಾರ್ಗ ಮಧ್ಯೆ ಅಮೃತ್‍ಸರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ. ಇದೇ ರೀತಿ 10 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ ಎನ್ನಲಾಗಿದೆ.

    ಮೆಟ್ರೊ ಸೇವೆಯಲ್ಲಿ 30 ನಿಮಿಷಗಳ ಕಾಲ ವ್ಯತ್ಯಯವಾಗಿದೆ. ಭಾರತೀಯ ಹವಾಮಾನ ಇಲಾಖೆಯು ಉತ್ತರಾಖಂಡ್, ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನದ ಕೆಲವು ಭಾಗಗಳಲ್ಲಿ ಚಂಡಮಾರುತದ ಮುನ್ಸೂಚನೆ ನೀಡಿತ್ತು. ಬೆಟ್ಟ ರಾಜ್ಯಗಳ ಮೇಲಿನ ಚಂಡಮಾರತದಿಂದಾಗಿ ಉತ್ತರ ಭಾರತದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿತ್ತು.

  • ಮೂರೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ- 25ರ ಯುವಕನ ಬಂಧನ

    ಮೂರೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ- 25ರ ಯುವಕನ ಬಂಧನ

    ಶಿಮ್ಲಾ: ಮೂರೂವರೆ ವರ್ಷದ ಕಂದಮ್ಮನ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ ಘಟನೆ ಹಿಮಾಚಲಪ್ರದೇಶದಲ್ಲಿ ಸೋಮವಾರ ನಡೆದಿದೆ.

    ಪ್ರಕರಣ ಸಂಬಂಧ ಇದೀಗ ಸ್ಥಳೀಯ ಪೊಲೀಸರು 25 ವರ್ಷದ ಬಂಟಿ ಎಂಬಾತನನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಬಾಲಕಿಯ ಪೋಷಕರು ಹರಿಪುರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ ಬಳಿಕ ಬೆಳಕಿಗೆ ಬಂದಿದೆ.

    ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಾಲಕಿಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಹೆಚ್ಚಿನ ಪರೀಕ್ಷೆಗಾಗಿ ತಂಡಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇತ್ತ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಗುಜರಾತ್ ಚುನಾವಣೆ ಗೆಲುವಿನ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ಆಪರೇಷನ್!

    ಗುಜರಾತ್ ಚುನಾವಣೆ ಗೆಲುವಿನ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ಆಪರೇಷನ್!

    ಬೆಂಗಳೂರು: ಗುಜರಾತ್ ಚುನಾವಣೆ ಗೆದ್ದ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಮಿಷನ್ 150 ಸಾಧಿಸಲು ಹೊಸ ಕಾರ್ಯತಂತ್ರ ರೂಪಿಸಿದೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆಯಲು ಹೊಸ ಕಾರ್ಯತಂತ್ರ ರಚನೆ ಮಾಡಿದ್ದಾರೆ ಎನ್ನಲಾಗಿದ್ದು, ಹೊಸ ಕಾರ್ಯತಂತ್ರದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ವಹಿಸಿರುವ ಮುರಳೀಧರ್ ರಾವ್ ಬದಲಾವಣೆ ಮಾಡುವ ಸಾಧ್ಯತೆ ಇದೆ.

    ಮುರಳೀಧರ್ ರಾವ್ ಅವರನ್ನು ಬದಲಾವಣೆ ಮಾಡಿ ಗುಜರಾತ್ ರಾಜ್ಯದ ಬಿಜೆಪಿ ಉಸ್ತುವಾರಿ ಕಾರ್ಯ ನಿರ್ವಹಿಸುತ್ತಿದ್ದ ಭೂಪೇಂದ್ರ ಯಾದವ್ ಅವರನ್ನು ನೇಮಿಸಲು ಅಮಿತ್‍ಶಾ ಮುಂದಾಗಿದ್ದಾರೆ ಎನ್ನಲಾಗಿದೆ.

    ಈ ಹಿಂದೆ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದ ಇವರು ಚುನಾವಣೆ ಚಾಣಕ್ಯ ಎಂದೇ ಬಿಜೆಪಿ ವಲಯದಲ್ಲಿ ಹೆಸರು ಪಡೆದಿದ್ದಾರೆ. ಪ್ರಸ್ತುತ ರಾಜ್ಯ ಸಭಾ ಸದಸ್ಯರಾಗಿರುವ ಭೂಪೇಂದ್ರ ಯಾದವ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  • ಮೊದಲ ಪ್ರಯತ್ನದಲ್ಲಿ ಬಿಜೆಪಿಗೆ ಸೋಲುಣಿಸಿದ ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ

    ಮೊದಲ ಪ್ರಯತ್ನದಲ್ಲಿ ಬಿಜೆಪಿಗೆ ಸೋಲುಣಿಸಿದ ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ

    ಗಾಂಧಿನಗರ: ಗುಜರಾತ್ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಯುವ ನಾಯಕರಾದ ಅಲ್ಪೇಶ್ ಠಾಕೂರ್ ಮತ್ತು ಜಿಗ್ನೇಶ್ ಮೇವಾನಿ ಜಯಗಳಿಸಿದ್ದಾರೆ.

    ರಾಧನ್ ಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ಅಲ್ಪೇಶ್ ಠಾಕೂರ್ ಮತ್ತು ವಡಗಾಮ್ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಗ್ನೇಶ್ ಮೇವಾನಿ ಅವರು ನಿರೀಕ್ಷೆಗೂ ಮೀರಿ ಅಭೂತಪೂರ್ವ ಜಯವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಜಿಗ್ನೇಶ್ ಮೇವಾನಿ ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ 19,696 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಜಿಗ್ನೇಶ್ ಮೇವಾನಿ 95,497 ಮತಗಳನ್ನು ಪಡೆದರೆ, ಬಿಜೆಪಿಯ ಚಕ್ರವರ್ತಿ ವಿಜಯ್ ಕುಮಾರ್ ಹರ್ಖಾಭಾಯ್ ಅವರು 75,801 ಮತಗಳನ್ನು ಪಡೆದಿದ್ದಾರೆ.

    ಮೋದಿ ತೈವಾನ್ ಹಣಬೆ ತಿಂದು ಬೆಳ್ಳಗಾಗಿದ್ದಾರೆ ಅಂತ ಹೇಳಿಕೆ ಕೋಡೋ ಮೂಲಕ ಸುದ್ದಿಯಾಗಿದ್ದ ಅಲ್ಪೇಶ್ ಅವರು ರಾಧನ್ ಪುರ್ ಕ್ಷೇತ್ರದಲ್ಲಿ 14,857 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಅಲ್ಪೇಶ್ ಠಾಕೂರ್ 85,777 ಮತ ಹಾಗೂ ಬಿಜೆಪಿಯ ಸೋಲಂಕಿ ಲಾವಿಂಗ್ಜಿ ಮುಲ್ವಿಜಿ ಠಾಕೂರ್ ಅವರು ಅವರನ್ನು 70,920 ಮತಗಳನ್ನು ಪಡೆದಿದ್ದಾರೆ.

  • ಕಾಂಗ್ರೆಸ್ ಹಿನ್ನಡೆಗೆ ಈ ಮೂರು ಕಾರಣಗಳಿವೆ ಅಂದ್ರು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ!

    ಕಾಂಗ್ರೆಸ್ ಹಿನ್ನಡೆಗೆ ಈ ಮೂರು ಕಾರಣಗಳಿವೆ ಅಂದ್ರು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ!

    ಬಾಗಲಕೋಟೆ: ಬಿಜೆಪಿಯಿಂದ ಇವಿಎಂ ಮತ ಯಂತ್ರದ ದುರ್ಬಳಕೆ, ಉದ್ಯಮಿಗಳ ಹಣದ ಪ್ರಭಾವ ಮತ್ತು ಅತಿಯಾದ ಸುಳ್ಳುಗಳೇ ಗುಜರಾತ್ ನಲ್ಲಿ ಕಾಂಗ್ರೆಸ್ ಹಿನ್ನಡೆಗೆ ಮೂರು ಕಾರಣಗಳು ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದ್ದಾರೆ.

    ಚುನಾವಣಾ ಫಲಿತಾಂಶದ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳ ಜನರ ತೀರ್ಪಿಗೆ ತಲೆ ಬಾಗುತ್ತೇನೆ. ಹಿಮಾಚಲಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಯಿಂದ ಸೋಲಾಗಿರೋದು ನಿಜ. ಗುಜರಾತ್ ದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಮೂರು ಕಾರಣಗಳಿದ್ದು, ಬಿಜೆಪಿಯಿಂದ ಇವಿಎಮ್ ಮತ ಯಂತ್ರದ ದುರ್ಬಳಕೆ, ಉದ್ಯಮಿಗಳ ಹಣದ ಪ್ರಭಾವ ಹಾಗೂ ಬಿಜೆಪಿಯ ಅತಿಯಾದ ಸುಳ್ಳುಗಳೇ ಕಾಂಗ್ರೆಸ್ ಹಿನ್ನಡೆಗೆ ಕಾರಣ ಅಂತ ಅವರು ಗಂಭೀರ ಆರೋಪ ಮಾಡಿದ್ರು.

    ಆದ್ರೆ ಈ ಫಲಿತಾಂಶ ಕರ್ನಾಟಕ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 2018ರ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ಕಾಂಗ್ರೆಸ್ ಪಕ್ಷ. ಇವುಗಳ ಮಧ್ಯೆ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ಮಾಡಿದೆ. ರಾಜ್ಯದ ಯಾವ ಕಾಂಗ್ರೆಸ್ ನಾಯಕರು ಬಿಜೆಪಿ ಪಕ್ಷಕ್ಕೆ ಹೋಗಲ್ಲ. ಒಂದು ವೇಳೆ ಹೋದ್ರೆ ರಾತ್ರಿ ನೀರಿಲ್ಲದ ಬಾವಿ ಕಂಡು ಹಗಲು ಬಿದ್ದಂತೆ ಅಂತ ಅವರು ಹೇಳಿದ್ರು.

     

  • ಇಂದು ಗುಜರಾತ್ ನಾಳೆ ಕರ್ನಾಟಕ – ಮಲ್ಲೇಶ್ವರಂನ ಕಚೇರಿಯಲ್ಲಿ ಬಿಜೆಪಿ ಸಂಭ್ರಮ

    ಇಂದು ಗುಜರಾತ್ ನಾಳೆ ಕರ್ನಾಟಕ – ಮಲ್ಲೇಶ್ವರಂನ ಕಚೇರಿಯಲ್ಲಿ ಬಿಜೆಪಿ ಸಂಭ್ರಮ

    ಬೆಂಗಳೂರು: ಭಾರೀ ನಿರೀಕ್ಷೆ ಮೂಡಿಸಿದ್ದ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ಕ್ಷಣಕ್ಷಣದಲ್ಲಿಯೂ ಭಾರೀ ಏರಿಳಿತ ಕಂಡುಬರುತ್ತಿದೆ. ಈಗ ಹೊರಬರುತ್ತಿರುವ ಫಲಿತಾಂಶದ ಪ್ರಕಾರ ಬಹುತೇಕ ಬಿಜೆಪಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ.

    ಈ ಹಿನ್ನೆಲಯಲ್ಲಿ ನಗರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಪ್ರಧಾನ ಕಾರ್ಯದರ್ಶಿ ರವಿಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿ, ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.

    ಇಂದು ಗುಜರಾತ್ ನಾಳೆ ಕರ್ನಾಟಕ ಅಂತ ಘೋಷಣೆಯನ್ನು ಕೂಡ ಕೂಗುತ್ತಿದ್ದಾರೆ. ಈ ಸಂಭ್ರಮಾಚರಣೆಯಲ್ಲಿ ಮಹಿಳಾ ಕಾರ್ಯಕರ್ತರು ಕೂಡ ಭಾಗವಹಿಸಿದ್ದಾರೆ.