Tag: Himachala Pradesh

  • ಗುಜರಾತ್‍ನಲ್ಲಿ ಸರಳ ಬಹುಮತದತ್ತ ಬಿಜೆಪಿ!

    ಗುಜರಾತ್‍ನಲ್ಲಿ ಸರಳ ಬಹುಮತದತ್ತ ಬಿಜೆಪಿ!

    ಗಾಂಧಿನಗರ: ಗುಜರಾತ್ ನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಏರುವ ಎಲ್ಲ ಸಾಧ್ಯತೆಯಿದೆ. ಮತ ಎಣಿಕೆ ಆರಂಭದ 50 ನಿಮಿಷದಲ್ಲೇ 95 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

    ಬೆಳಗ್ಗೆ 8.50ರ ವೇಳೆಗೆ ಬಿಜೆಪಿ 95 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್ 54 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಹಾಗೆಂದ ಮಾತ್ರಕ್ಕೆ ಇದೆ ಅಂತಿಮವಲ್ಲ. 10 ಗಂಟೆಯ ವೇಳೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

    ಗುಜರಾತ್ ನಲ್ಲಿ ಬಹುಮತಕ್ಕೆ 92 ಸ್ಥಾನಗಳ ಅಗತ್ಯವಿದ್ದು, ಆರಂಭದ 10 ನಿಮಿಷದಲ್ಲೇ ಬಿಜೆಪಿ 22 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ 8 ಸ್ಥಾನದಲ್ಲಿ ಮುನ್ನಡೆಯಲ್ಲಿತ್ತು.

    2012ರ ಚುನಾವಣೆಯಲ್ಲಿ 47% ಮತ ಪಡೆಯುವ ಮೂಲಕ ಬಿಜೆಪಿ 115 ಸ್ಥಾನಗಳನ್ನು ಗಳಿಸಿದ್ದರೆ, 38.9% ಮತ ಪಡೆದ ಕಾಂಗ್ರೆಸ್ 61 ಸ್ಥಾನಗಳನ್ನು ಗೆದ್ದುಕೊಂಡಿತ್ತು.

  • ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ- ಬಿಜೆಪಿಗೆ ಆರಂಭಿಕ ಮುನ್ನಡೆ

    ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ- ಬಿಜೆಪಿಗೆ ಆರಂಭಿಕ ಮುನ್ನಡೆ

    ಶಿಮ್ಲಾ: ಇಂದು ದೇಶದ ಚಿತ್ತ ಗುಜರಾತ್ ಹಾಗೂ ಹಿಮಾಚಲ ಪ್ರದೇಶದತ್ತ ತಿರುಗಿದ್ದು, ಈಗಾಗಲೇ ಈ ಎರಡೂ ಕಡೆಗಳಲ್ಲೂ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಗುಜರಾತ್ ನಂತೆ ಹಿಮಾಚಲ ಪ್ರದೇಶದಲ್ಲಿಯೂ ಕೂಡ ಆರಂಭಿಕ ಮತ ಎಣಿಕೆಯ ವೇಲೆ ಬಿಜೆಪಿಗೆ ಮುನ್ನಡೆ ಸಿಕ್ಕಿದೆ.

    ಬೆಳಗ್ಗೆ 8.30ರ ವೇಳೇಗೆ ಒಟ್ಟು 68 ಕ್ಷೇತ್ರಗಳಲ್ಲಿ ಬಿಜೆಪಿ 16 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡರೆ 6 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಸ್ಥಾನಗಳಲ್ಲಿ ಮುನ್ನಡೆಯಲ್ಲಿತ್ತು.

    68 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಹಿಮಾಚಲ ಪ್ರದೇಶದಲ್ಲಿ ಸರ್ಕಾರ ರಚನೆಗೆ ಬೇಕಿರುವಂತಹ ಸರಳ ಬಹುಮತ 35. ಇಲ್ಲೂ ಕೂಡ ಬಿಜೆಪಿ ಜಯಭೇರಿ ಬಾರಿಸುತ್ತೆ ಅಂತ ಸಮೀಕ್ಷೆಗಳು ಸ್ಪಷ್ಟವಾಗಿ ಹೇಳಿದ್ದು ಹೀಗಾಗಿ ಕಮಲ ಪಾಳಯದಲ್ಲಿ ಈಗಾಗ್ಲೆ ಬಿರುಸಿನ ಚಟುವಟಿಕೆಗಳು ಶುರುವಾಗಿದೆ. ಆದ್ರೆ ಆಡಳಿತರೂಢ ಕಾಂಗ್ರೆಸ್ ಭರವಸೆಯನ್ನ ಇನ್ನು ಕಳೆದುಕೊಂಡಿಲ್ಲ.

    ತಾವು ಬಹುಮತವನ್ನ ಪಡೆದು ಮತ್ತೆ ಅಧಿಕಾರಿಕ್ಕೆ ಏರೋದಾಗಿ ಸಿಎಂ ವೀರಭದ್ರಸಿಂಗ್ ಹೇಳಿಕೊಂಡಿದ್ದರು. ಅತ್ತ ಬಿಜೆಪಿಯ ಪ್ರೇಮ್‍ಕುಮಾರ್ ದುಮಾಲ್ ಕೂಡ ಬಹುಮತ ಸಿಗೋದು ನಮಗೆ ಅಂತ ವಿಶ್ವಾಸದಲ್ಲಿದ್ದಾರೆ.

    2012ರ ಚುನಾವಣೆಯಲ್ಲಿ ಕಾಂಗ್ರೆಸ್ 36 ಸ್ಥಾನಗಳನ್ನು ಜಯಗಳಿಸಿದರೆ ಬಿಜೆಪಿ 26 ಸ್ಥಾನ, ಇತರೇ 6 ಸ್ಥಾನಗಳನ್ನು ಗೆದ್ದುಕೊಂಡಿತ್ತು.

  • ಗುಜರಾತ್ ಚುನಾವಣೆ – ಬಿಜೆಪಿಗೆ ಆರಂಭಿಕ ಮುನ್ನಡೆ

    ಗುಜರಾತ್ ಚುನಾವಣೆ – ಬಿಜೆಪಿಗೆ ಆರಂಭಿಕ ಮುನ್ನಡೆ

    ಅಹಮದಾಬಾದ್: ಬಹುನಿರೀಕ್ಷಿತ ಗುಜರಾತ್ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಆರಂಭವಾಗಿದ್ದು ಬಿಜೆಪಿಗೆ ಆರಂಭಿಕ ಮುನ್ನಡೆ ಸಿಕ್ಕಿದೆ.

    8 ಗಂಟೆ ವೇಳೆಗೆ ಒಟ್ಟು 182 ಕ್ಷೇತ್ರಗಳಲ್ಲಿ ಬಿಜೆಪಿ 22 ರಲ್ಲಿ ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿತ್ತು. ಇತ್ತೀಚಿನ ವರದಿಗಳ ಪ್ರಕಾರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. 10 ಗಂಟೆ ಹೊತ್ತಿಗೆ ನಿಖರವಾಗಿ ಫಲಿತಾಂಶ ಹೊರಬೀಳಲಿದ್ದು, ಗಾಂಧಿನಾಡು ಯಾರ ಪಾಲಾಗಲಿದೆ ಎಂಬುದು ಸ್ಪಷ್ಟವಾಗಲಿದೆ.

    2012ರ ಚುನಾವಣೆಯಲ್ಲಿ 47% ಮತ ಪಡೆಯುವ ಮೂಲಕ ಬಿಜೆಪಿ 115 ಸ್ಥಾನಗಳನ್ನು ಗಳಿಸಿದ್ದರೆ, 38.9% ಮತ ಪಡೆದ ಕಾಂಗ್ರೆಸ್ 61 ಸ್ಥಾನಗಳನ್ನು ಗೆದ್ದುಕೊಂಡಿತ್ತು.

    ಈಗಾಗಲೇ ಸಮೀಕ್ಷೆಗಳು ಗುಜರಾತ್‍ನಲ್ಲಿ ಕಮಲ ಅರಳಲಿದೆ ಅಂತ ಬಿಜೆಪಿ ಪಾಳಯಕ್ಕೆ ಖುಷಿ ಸುದ್ದಿ ಕೊಟ್ಟಿವೆ. ಈ ಸಮೀಕ್ಷೆಗಳಿಂದ ಬಿಜೆಪಿ ಶಕ್ತಿ ಇನ್ನಷ್ಟು ಜಾಸ್ತಿ ಆಗಿದೆ. ಹೀಗಾಗಿ ಫಲಿತಾಂಶ ಬಂದ ಬಳಿಕ ಮುಂದೆ ಚುನಾವಣೆ ಎದುರಿಸಲಿರೋ ಕರ್ನಾಟಕದತ್ತ ಬಿಜೆಪಿ ಗಮನ ಹರಿಸಲು ನಿಚ್ಚಳವಾಗಿದೆ.

    ಆದ್ರೆ ಕಾಂಗ್ರೆಸ್ ಮಾತ್ರ ಗುಜರಾತ್‍ನಲ್ಲಿ ಸೋತ್ರು, ಗೆದ್ರು ಸತತ ಎರಡನೇ ಬಾರಿಗೆ ಕರ್ನಾಟಕದಲ್ಲಿ ತಮ್ಮ ಸರ್ಕಾರವನ್ನ ರಚಿಸಬೇಕೆಂಬ ಹಠಕ್ಕೆ ಬಿದ್ದಿವೆ. ಇನ್ನು ರಾಜಸ್ತಾನ, ಈಶಾನ್ಯ ರಾಜ್ಯಗಳ ಚುನಾವಣೆ ಮೇಲೂ ಗುಜರಾತ್ ಫಲಿತಾಂಶ ನಿರ್ಣಾಯಕವಾಗಲಿದೆ. 2019ರ ಲೋಕಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಿದೆ.

  • ದೇಶದ ಚಿತ್ತ ಗುಜರಾತ್, ಹಿಮಾಚಲ ಪ್ರದೇಶದತ್ತ – ಕೆಲವೇ ಗಂಟೆಗಳಲ್ಲಿ ಮಹಾ ಫಲಿತಾಂಶ

    ದೇಶದ ಚಿತ್ತ ಗುಜರಾತ್, ಹಿಮಾಚಲ ಪ್ರದೇಶದತ್ತ – ಕೆಲವೇ ಗಂಟೆಗಳಲ್ಲಿ ಮಹಾ ಫಲಿತಾಂಶ

    ಅಹಮದಾಬಾದ್: ಇಡೀ ದೇಶದ ಚಿತ್ತ ಇಂದು ಗುಜರಾತ್‍ನತ್ತ ನೆಟ್ಟಿದೆ. ಮೋದಿ ಮೋಡಿ ಮಾಡ್ತಾರಾ ಅಥವಾ ರಾಹುಲ್ ಕೈ ಮೇಲಾಗುತ್ತಾ ಎಂಬ ಪ್ರಶ್ನೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

    ತವರಿನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಷ್ಠೆಯ ಪ್ರಶ್ನೆಯಾದರೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮೊನ್ನೆಯಷ್ಟೇ ಅಧಿಕಾರ ವಹಿಸಿಕೊಂಡ ರಾಹುಲ್ ಗಾಂಧಿಗೆ ಇದು ಅಗ್ನಿಪರೀಕ್ಷೆಯಾಗಿದೆ. ಸತತ ಆರನೇ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ ಇದ್ದರೆ, 22 ವರ್ಷಗಳಿಂದ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವ ಕನಸು ಕಾಣ್ತಿದೆ.

    ಇನ್ನು ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಫಲಿತಾಂಶ ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಗೊತ್ತಾಗುತ್ತೆ. ಇನ್ನೆರೆಡು ವರ್ಷ ದೇಶದಲ್ಲಿ ಸಾಲು ಸಾಲು ಚುನಾವಣೆಗಳಿವೆ. ಕರ್ನಾಟಕ ಸೇರಿ 2018ರಲ್ಲೇ 8 ರಾಜ್ಯಗಳಲ್ಲಿ ಅಸೆಂಬ್ಲಿ ಎಲೆಕ್ಷನ್‍ಗಳು ನಡೆಯಲಿವೆ. ಹೀಗಾಗಿ ಈ ಚುನಾವಣೆಗಳಿಗೆ ಗುಜರಾತ್ ಫಲಿತಾಂಶವೇ ದಿಕ್ಸೂಚಿಯಾಗಿದೆ.

    ಈಗಾಗಲೇ ಸಮೀಕ್ಷೆಗಳು ಗುಜರಾತ್‍ನಲ್ಲಿ ಕಮಲ ಅರಳಲಿದೆ ಅಂತ ಬಿಜೆಪಿ ಪಾಳಯಕ್ಕೆ ಖುಷಿ ಸುದ್ದಿ ಕೊಟ್ಟಿವೆ. ಈ ಸಮೀಕ್ಷೆಗಳಿಂದ ಬಿಜೆಪಿ ಶಕ್ತಿ ಇನ್ನಷ್ಟು ಜಾಸ್ತಿ ಆಗಿದೆ. ಹೀಗಾಗಿ ಫಲಿತಾಂಶ ಬಂದ ಬಳಿಕ ಮುಂದೆ ಚುನಾವಣೆ ಎದುರಿಸಲಿರೋ ಕರ್ನಾಟಕದತ್ತ ಬಿಜೆಪಿ ಗಮನ ಹರಿಸಲು ನಿಚ್ಚಳವಾಗಿದೆ.

    ಆದ್ರೆ ಕಾಂಗ್ರೆಸ್ ಮಾತ್ರ ಗುಜರಾತ್‍ನಲ್ಲಿ ಸೋತ್ರು, ಗೆದ್ರು ಸತತ ಎರಡನೇ ಬಾರಿಗೆ ಕರ್ನಾಟಕದಲ್ಲಿ ತಮ್ಮ ಸರ್ಕಾರವನ್ನ ರಚಿಸಬೇಕೆಂಬ ಹಠಕ್ಕೆ ಬಿದ್ದಿವೆ. ಇನ್ನು ರಾಜಸ್ತಾನ, ಈಶಾನ್ಯ ರಾಜ್ಯಗಳ ಚುನಾವಣೆ ಮೇಲೂ ಗುಜರಾತ್ ಫಲಿತಾಂಶ ನಿರ್ಣಾಯಕವಾಗಲಿದೆ. 2019ರ ಲೋಕಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಿದೆ.