Tag: Himachal Pradesh Government

  • ಡೀಸೆಲ್ ಮೇಲಿನ VAT ಹೆಚ್ಚಿಸಿದ ಹಿಮಾಚಲ ಪ್ರದೇಶ ಸರ್ಕಾರ – ಡೀಸೆಲ್ ಬೆಲೆ 3 ರೂ. ಏರಿಕೆ

    ಡೀಸೆಲ್ ಮೇಲಿನ VAT ಹೆಚ್ಚಿಸಿದ ಹಿಮಾಚಲ ಪ್ರದೇಶ ಸರ್ಕಾರ – ಡೀಸೆಲ್ ಬೆಲೆ 3 ರೂ. ಏರಿಕೆ

    ಶಿಮ್ಲಾ: ಹಿಮಾಚಲ ಪ್ರದೇಶ ಸರ್ಕಾರವು (Himachal Pradesh Government) ಭಾನುವಾರ ಡಿಸೇಲ್ ಮೇಲಿನ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) (VAT) ಅನ್ನು ಪ್ರತಿ ಲೀಟರ್‌ಗೆ ಶೇ.6.40 ರಿಂದ ಶೇ.9.96ಕ್ಕೆ ಹೆಚ್ಚಿಸಿದ್ದು, ಡೀಸೆಲ್ (Diesel) ಬೆಲೆ ಲೀಟರ್‌ಗೆ 3 ರೂ. ಹೆಚ್ಚಳವಾಗಿದೆ.

    ಡೀಸೆಲ್ (Diesel) ಮೇಲಿನ ವ್ಯಾಟ್ (VAT) ಪ್ರತಿ ಲೀಟರ್‌ಗೆ 4.40 ರೂ. ನಿಂದ 7.40 ರೂ.ಗೆ ಏರಿಕೆಯಾಗಿದೆ. ಹಾಗಾಗಿ 83 ರೂ. ಇದ್ದ ಡೀಸೆಲ್ ಬೆಲೆ 86 ರೂ.ಗಳಿಗೆ ತಲುಪಿದೆ. ಆದ್ರೆ ಪೆಟ್ರೋಲ್ (Petrol) ಮೇಲಿನ ವ್ಯಾಟ್ ಅನ್ನು 0.55 ಪೈಸೆಗಳಷ್ಟು ಕಡಿಮೆ ಮಾಡಿದೆ. ಈ ಕಡಿತವು ವಿವಿಧ ಇಂಧನ ಕೇಂದ್ರಗಳಿಗೆ ಅನುಗುಣವಾಗಿ ಬದಲಾಗುತ್ತದೆ.

    ಹಿಮಾಚಲ ಪ್ರದೇಶ ಸರ್ಕಾರವು ಸಚಿವ ಸಂಪುಟ ವಿಸ್ತರಿಸಿದ ಅದೇ ದಿನ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಸೇರಿ ಒಟ್ಟು 7 ಶಾಸಕರು ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು (Sukhvinder Singh Sukhu) ಅವರ ಸಮ್ಮುಖದಲ್ಲಿ ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • BJP ಸೇರಲು ಕಂಗನಾಗೆ ಗ್ರೀನ್ ಸಿಗ್ನಲ್ ಕೊಟ್ಟು ಆದರೆ.. ಎಂದ ನಡ್ಡಾ

    BJP ಸೇರಲು ಕಂಗನಾಗೆ ಗ್ರೀನ್ ಸಿಗ್ನಲ್ ಕೊಟ್ಟು ಆದರೆ.. ಎಂದ ನಡ್ಡಾ

    ನವದೆಹಲಿ: ಸದಾ ಸುದ್ದಿಯಲ್ಲಿರುವ ಬಾಲಿವುಡ್ (Bollywood) ತಾರೆ ಕಂಗನಾ ರಣಾವತ್ (Kangana Ranaut) ಇದೀಗ ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ. ಕಂಗನಾ ರಾಜಕೀಯಕ್ಕೆ ಎಂಟ್ರಿ ಕೊಡೋ ಸುಳಿವು ನೀಡುತ್ತಿದ್ದಂತೆ ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ಜೆ.ನಡ್ಡಾ (JP Nadda) ಬಿಜೆಪಿ ಪಕ್ಷ ಸೇರ್ಪಡೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಬಾಲಿವುಡ್ ನಟರು (Bollywood Actress) ಬಿಜೆಪಿ ಪಕ್ಷ ಸೇರಲು ಸ್ವಾಗತಾರ್ಹ, ಆದರೆ ಸಮಾಲೋಚನೆ ನಡೆಸಿದ ಬಳಿಕ ಚುನಾವಣೆಯಲ್ಲಿ (Elections) ಸ್ಪರ್ಧಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ಭಾಗವಹಿಸುವಿಕೆ ಬಯಸಿದ್ರೆ ರಾಜಕೀಯಕ್ಕೆ ಬರುವೆ – ಕಂಗನಾ ಬಿಗ್ ಸ್ಟೇಟ್‌ಮೆಂಟ್

    ನಿನ್ನೆಯಷ್ಟೇ ನಟಿ ಕಂಗನಾ ರಣಾವತ್ (Kangana Ranaut), ಪರಿಸ್ಥಿತಿ ಏನೇ ಇರಲಿ, ಸರ್ಕಾರ ನನ್ನ ಭಾಗವಹಿಸುವಿಕೆ ಬಯಸಿದ್ರೆ ನಾನು ರಾಜಕೀಯಕ್ಕೆ ಬರುತ್ತೇನೆ. ಹಿಮಾಚಲ ಪ್ರದೇಶದ (Himachal Pradesh) ಜನರು ತಮ್ಮ ಸೇವೆ ಮಾಡಲು ನನಗೆ ಅವಕಾಶ ನೀಡಿದರೆ, ಅದು ನನ್ನ ಸೌಭಾಗ್ಯ. ನನ್ನ ಅದೃಷ್ಟ ಅಂದುಕೊಳ್ಳುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ಆಲಿಯಾ ಭಟ್ ಡೆಲಿವರಿ ಡೇಟ್ ಫಿಕ್ಸ್: ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ರಾ ನಟಿ?

    ಇದಕ್ಕೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ಜೆ.ಪಿ ನಡ್ಡಾ (JP Nadda), ಕಂಗನಾ ರಣಾವತ್ ಪಕ್ಷಕ್ಕೆ ಸೇರಲು ಸ್ವಾಗತಾರ್ಹವಿದೆ. ಪಕ್ಷದೊಂದಿಗೆ ಕೆಲಸ ಮಾಡಲು ಬಯಸುವವರಿಗೆ ಸಾಕಷ್ಟು ಸ್ಥಳವಿದೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವುದು ನನ್ನ ನಿರ್ಧಾರವಲ್ಲ, ತಳಮಟ್ಟದಿಂದ ಸಮಾಲೋಚನೆ ಪ್ರಕ್ರಿಯೆ ಇದೆ. ಚುನಾವಣಾ ಸಮಿತಿಯಿಂದ ಸಂಸದೀಯ ಮಂಡಳಿ ವರೆಗೆ ಸಮಾಲೋಚನೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

    ಎಲ್ಲರಿಗೂ ಬಿಜೆಪಿ (BJP) ಸೇರಲು ಸ್ವಾಗತ. ಯಾರಿಗೂ ಷರತ್ತುಗಳ ಆಧಾರ ಮೇಲೆ ತೆಗೆದಕೊಳ್ಳುವುದಿಲ್ಲ. ಪಕ್ಷ ಸೇರಿದ ನಂತರ ಅವರ ಸಾಮರ್ಥ್ಯ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಭಾಗವಹಿಸುವಿಕೆ ಬಯಸಿದ್ರೆ ರಾಜಕೀಯಕ್ಕೆ ಬರುವೆ – ಕಂಗನಾ ಬಿಗ್ ಸ್ಟೇಟ್‌ಮೆಂಟ್

    ನನ್ನ ಭಾಗವಹಿಸುವಿಕೆ ಬಯಸಿದ್ರೆ ರಾಜಕೀಯಕ್ಕೆ ಬರುವೆ – ಕಂಗನಾ ಬಿಗ್ ಸ್ಟೇಟ್‌ಮೆಂಟ್

    ಸದಾ ಸುದ್ದಿಯಲ್ಲಿರುವ ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranaut) ಇದೀಗ ರಾಜಕೀಯಕ್ಕೆ (Politics) ಎಂಟ್ರಿ ಕೊಡೋಕೆ ಸಜ್ಜಾಗುತ್ತಿದ್ದಾರೆ. ಪರಿಸ್ಥಿತಿ ಏನೇ ಇರಲಿ, ಸರ್ಕಾರ ನನ್ನ ಭಾಗವಹಿಸುವಿಕೆ ಬಯಸಿದ್ರೆ ನಾನು ರಾಜಕೀಯಕ್ಕೆ ಬರಲು ಸಿದ್ಧವಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

    ಅವರಿಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಹಿಮಾಚಲ ಪ್ರದೇಶದ ಜನರು ತಮ್ಮ ಸೇವೆ ಮಾಡಲು ನನಗೆ ಅವಕಾಶ ನೀಡಿದರೆ, ಅದು ನನ್ನ ಸೌಭಾಗ್ಯ. ನನ್ನ ಅದೃಷ್ಟ ಅಂದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಲಿಯಾ ಭಟ್ ಡೆಲಿವರಿ ಡೇಟ್ ಫಿಕ್ಸ್: ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ರಾ ನಟಿ?

    ನವೆಂಬರ್ 12ರಂದು ಹಿಮಾಚಲ ಪ್ರದೇಶದ (Himachal Pradesh) ವಿಧಾನಸಭಾ ಚುನಾವಣೆ (Elections) ನಡೆಯಲಿದೆ. ಈ ಕುರಿತು ಇತ್ತೀಚೆಗೆ ಶಿಮ್ಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ನಾನು ಚಲನಚಿತ್ರ (Film) ವೃತ್ತಿಜೀವನದ ಮೇಲೆ ಹೆಚ್ಚು ಕೇಂದ್ರೀಕೃತವಾಗಿದ್ದೇನೆ. ರಾಜಕೀಯ ಪ್ರವೇಶಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದರು.

    ಕಳೆದ ವರ್ಷ ಮೇ ತಿಂಗಳಲ್ಲಿ ದ್ವೇಷಮಯ ಹಾಗೂ ನಿಂದನಾತ್ಮಕ ನಡವಳಿಕೆಗಳಿಂದಾಗಿ ಕಂಗನಾ ರಣಾವತ್ ಅವರ ಟ್ವಿಟ್ಟರ್‌ (Twitter) ಖಾತೆಯನ್ನು ಮೈಕ್ರೋಬ್ಲಾಗಿಂಗ್ ಸೈಟ್ ಅಮಾನತುಗೊಳಿಸಿತ್ತು. ಇದನ್ನೂ ಓದಿ: ಮಗಳು ವಮಿಕಾ ಜೊತೆ ಕೋಲ್ಕತ್ತಾದಲ್ಲಿ ಅನುಷ್ಕಾ ಜಾಲಿ ರೈಡ್

    ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ಟ್ವಿಟ್ಟರ್ ಒಂದು ವಾದಾತ್ಮಕ ಮಾಧ್ಯಮ. ಒಂದೇ ಸಮಸ್ಯೆಯನ್ನು ದಿನವಿಡಿ ಚರ್ಚಿಸಲಾಗುತ್ತದೆ. ನಾನು ಕೆಲವೊಮ್ಮೆ ಮೋಜಿಗಾಗಿ ಕೀಟಲೆ ಮಾಡುತ್ತಿದ್ದೆ. ಆದರೆ ಸೂಕ್ಷ್ಮ ವಿಷಯಗಳು ಬರುವುದರಿಂದ ಅವರು ಗಂಭೀರವಾಗುತ್ತವೆ. ಇವು ಸಾಂದರ್ಭಿಕವಾಗಿ ಸಂಭವಿಸಿದೆಯೇ ಹೊರತು, ನಾನು ಜನರನ್ನು ಅಸಮಾಧಾನಗೊಳಿಸಲು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]