Tag: Hiking

  • ಸಿದ್ದರಾಮೋತ್ಸವಕ್ಕೆ ಬರಿಗಾಲಲ್ಲಿ ಪಾದಯಾತ್ರೆ ಕೈಗೊಂಡಿರುವ ಸಿದ್ದು ಅಪ್ಪಟ್ಟ ಅಭಿಮಾನಿ

    ಸಿದ್ದರಾಮೋತ್ಸವಕ್ಕೆ ಬರಿಗಾಲಲ್ಲಿ ಪಾದಯಾತ್ರೆ ಕೈಗೊಂಡಿರುವ ಸಿದ್ದು ಅಪ್ಪಟ್ಟ ಅಭಿಮಾನಿ

    ಹುಬ್ಬಳ್ಳಿ: ಸದ್ಯ ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಜನ್ಮದಿನದೇ ಮಾತು, ಸಿದ್ದು ಅವರ ಅಭಿಮಾನಿಗಳು ಮತ್ತು ಆಪ್ತರು ದಾವಣಗೆರೆಯಲ್ಲಿ ಜನ್ಮದಿನದ ಸಂಭ್ರಮವನ್ನು ಉತ್ಸವರ ರೀತಿಯಲ್ಲಿ ಆಚರಣೆ ಮಾಡುತ್ತಿದ್ದಾರೆ.

    ಈ ಕಾರ್ಯಕ್ರಮಕ್ಕೆ ಧಾರವಾಡದ ಸಿದ್ದು ಅಭಿಮಾನಿ ಸಿದ್ದರಾಮೋತ್ಸವಕ್ಕೆ ಬರಿಗಾಲಲ್ಲಿ ದಾವಣಗೆರೆ ಕಾಲ್ನಡಿಗೆ ಹೊರಟಿದ್ದಾನೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಪಂ ಸದಸ್ಯ ಹನಮಂತಪ್ಪರಿಂದ ಏಕಾಂಗಿಯಾಗಿ, ಗ್ರಾಮದಿಂದ ದಾವಣಗೆರೆವರೆಗೆ 120 ಕಿ.ಮೀವರೆಗೆ ಪಾದಯಾತ್ರೆ ಹೊರಟ್ಟಿದ್ದಾನೆ.

    ಅಪ್ಪಟ ಕಾಂಗ್ರೆಸ್ ಕಾರ್ಯಕರ್ತನಾಗಿರುವ ಹನುಮಂತ ಈ ಹಿಂದೆ ದಿವಂಗತ ಸಿ.ಎಸ್. ಶಿವಳ್ಳಿವರು ಸಚಿವ ಸ್ಥಾನ ಸಿಗಲೆಂದು ಧೀರ್ಘ ದಂಡ ನಮಸ್ಕಾರ ಹಾಕಿದ್ದರು. ಇದಾದ ಬಳಿಕ ಅವರ ಮರಣದ ನಂತರ ಶಿವಳ್ಳಿ ಪತ್ನಿ ಕುಸುಮಾರವರು ಶಾಸಕಿಯಾಗಲೆಂದು ಮತ್ತೆ ದೀರ್ಘ ದಂಡ ನಮಸ್ಕಾರ ಹಾಗೂ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿದ್ದರು. ಇದನ್ನೂ ಓದಿ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿಲ್ಲ, ಅದು ಸ್ವಾಭಾವಿಕ: ನಿರ್ಮಲಾ ಸೀತಾರಾಮನ್

    Live Tv
    [brid partner=56869869 player=32851 video=960834 autoplay=true]

  • ಮೋಜು, ಮಸ್ತಿ ಮಾಡಲು ಕಾಂಗ್ರೆಸ್ ಪಾದಯಾತ್ರೆ: ಯತ್ನಾಳ್

    ಮೋಜು, ಮಸ್ತಿ ಮಾಡಲು ಕಾಂಗ್ರೆಸ್ ಪಾದಯಾತ್ರೆ: ಯತ್ನಾಳ್

    ಬೆಂಗಳೂರು: ಮೋಜು, ಮಸ್ತಿ ಮಾಡಲು ಕಾಂಗ್ರೆಸ್ ಈ ಪಾದಯಾತ್ರೆಯನ್ನು ಮಾಡುತ್ತಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ವ್ಯಂಗ್ಯವಾಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಹೆಸರಲ್ಲಿ ಕಾಂಗ್ರೆಸ್ ನಾಟಕವಾಡುತ್ತಿದೆ. ಪಾದಯಾತ್ರೆಗಾಗಿ ಹೋಟೆಲ್ ಬುಕ್ ಮಾಡಿರುವುದಾಗಿ ಕಾಂಗ್ರಸ್ಸಿಗರು ತಿಳಿಸಿದ್ದಾರೆ. ಆದರೆ ಹೋಟೆಲ್ ಬುಕ್ ಮಾಡಿರುವುದು ಪಾದಯಾತ್ರೆಗಲ್ಲ, ರಾತ್ರಿಯಲ್ಲಾ ಮಜಾ ಮಾಡಲು ಎಂದು ವ್ಯಂಗ್ಯವಾಡಿದರು.

    ತಾಕತ್ ಬಗ್ಗೆ ಮಾತನಾಡುವ ಡಿ.ಕೆ. ಶಿವಕುಮಾರ್ ಜಾಮೀನು ಮೇಲೆ ಹೊರಗಡೆ ಇದ್ದಾರೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನೀರಾವರಿ ಮಂತ್ರಿ ಇದ್ದಾಗ ಡಿಕೆಶಿ ಏನು ಮಾಡಿದ್ದರು. ಸೋನಿಯಾ ಗಾಂಧಿ ಗೋವಾದಲ್ಲಿ ಕರ್ನಾಟಕಕ್ಕೆ ನೀರು ಕೊಡಬೇಡಿ ಅಂದಿದ್ದರು. ಆಗ ಏನು ಮಾಡದೇ ಸುಮ್ಮನಿದ್ದ ಕಾಂಗ್ರೆಸ್ ಈಗ ನಾಟಕವಾಡುತ್ತಿದೆ ಎಂದರು. ದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯನ್ನು ಕಿತ್ತೆಸೆಯುತ್ತೇವೆ: ಸಿದ್ದರಾಮಯ್ಯ

    ಸಿಎಂ ಆಗಲು ಡಿ.ಕೆ. ಶಿವಕುಮಾರ್ ಪಾದಯಾತ್ರೆಯನ್ನು ಮಾಡುತ್ತಿದ್ದಾರೆ. ಇಂತಹವರು ಸಿಎಂ ಆದರೆ ಏನು ಆಗುತ್ತದೆ ಎನ್ನುವುದನ್ನು ಮೊನ್ನೆ ರಾಮನಗರದಲ್ಲಿ ನಡೆದ ಘಟನೆಯನ್ನು ಜನ ನೋಡಿದ್ದಾರೆ ಎಂದ ಅವರು ಕರ್ನಾಟಕದಲ್ಲಿ ಬೆಂಕಿ ಹಚ್ಚಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ

  • ಟ್ರ್ಯಾಕ್ಟರ್‌ನಿಂದ ಆಯತಪ್ಪಿ ಬಿದ್ದ ವೃದ್ಧನ ಮೇಲೆ ಹರಿದ ಬಸ್

    ಟ್ರ್ಯಾಕ್ಟರ್‌ನಿಂದ ಆಯತಪ್ಪಿ ಬಿದ್ದ ವೃದ್ಧನ ಮೇಲೆ ಹರಿದ ಬಸ್

    – ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ವೃದ್ಧ ಸಾವು

    ಬಳ್ಳಾರಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಭಾಗವಹಿಸಲು ಬರುತ್ತಿದ್ದ ವೃದ್ಧರೊಬ್ಬರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಬಳಿ ಘಟನೆ ನಡೆದಿದೆ, ಮೃತ ವೃದ್ಧ ಈಶಪ್ಪ ಮೋರಗೇರಿ (65) ಆಗಿದ್ದಾರೆ. ಇವರು ಮೂಲತಃ ಹೂವಿನ ಹಡಗಲಿಯ ತುಪ್ಪದವರಾಗಿದ್ದಾರೆ. ಪಾದಯಾತ್ರೆಗೆ ಬರುವ ಸಮಯದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

    ಪಂಚಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆಗೆ ಬರುತ್ತಿದ್ದರು. ಟ್ರ್ಯಾಕ್ಟರ್‌ನಲ್ಲಿ ಅವರು ಕುಳಿತುಕೊಂಡಿದ್ದಾಗ, ಆಯ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದಾರೆ. ಬಳಿಕ ಅವರ ಮೇಲೆ ಬಸ್ ಹರಿದು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇನ್ನು ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ತುಪ್ಪದ ಈಶಪ್ಪ ಮೋರಗೇರಿ ಅವರ ನಿಧನ ಹಿನ್ನೆಲೆ ಮೌನಾಚರಣೆ ಮಾಡಲಾಯಿತು. ಈ ಸಂಬಂಧ ಹಗರಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಯಾರಿಗೆ ಗಟ್ಟಿ ಧ್ವನಿ ಇರುತ್ತೋ ಅವನು ಒಂಟಿಯಾಗ್ತಾನೆ: ಹೆಚ್.ವಿಶ್ವನಾಥ್

    ಯಾರಿಗೆ ಗಟ್ಟಿ ಧ್ವನಿ ಇರುತ್ತೋ ಅವನು ಒಂಟಿಯಾಗ್ತಾನೆ: ಹೆಚ್.ವಿಶ್ವನಾಥ್

    – ನನ್ನ ಸ್ನೇಹಿತರು ನನ್ನನ್ನು ಒಂಟಿ ಮಾಡಿದ್ದಾರೆ.

    ಚಿತ್ರದುರ್ಗ: ಯಾರಿಗೆ ಗಟ್ಟಿ ಧ್ವನಿ ಇರುತ್ತೋ ಅವನು ಒಂಟಿ ಆಗುತ್ತಾನೆ. ನನ್ನ ಸ್ನೇಹಿತರು ನನ್ನನ್ನು ಒಂಟಿ ಮಾಡಿ ಹೋದರು. ಆದರೆ ನಾನು ಒಂಟಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದರು.

    ಕಾಗಿನೆಲೆಯಿಂದ ಆರಂಭವಾಗಿರುವ ಕುರುಬ ಸಮುದಾಯದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಪಾದಯಾತ್ರೆಗೆ ತೆರಳುವ ಮುನ್ನ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ಒಂಟಿ ಅಲ್ಲ ರಾಜ್ಯದ ಜನರು ನನ್ನ ಜೊತೆಯಾಗಿದ್ದಾರೆ. ನನ್ನ 17 ಜನ ಸ್ನೇಹಿತರು ಬಿಡಿ, ಮಂತ್ರಿ ಆಗುತ್ತಾರೆ. ಅವರು ಅಷ್ಟಕ್ಕೆ ಸಿಮೀತ. ಆದರೆ ನಾನು ವಾಸ್ತವದ ನೆಲೆಗಟ್ಟಿನಲ್ಲಿ ಮಾತನಾಡುತ್ತಾ ಬಂದವನು ಎಂದರು.

    ಅವರಿಗೆ ತಪ್ಪಿದ ಮಂತ್ರಿಗಿರಿ ಬಗ್ಗೆ ಪ್ರತಿಕ್ರಿಯಿಸಿ, ಮಂತ್ರಿಗಿರಿ ಸಿಗುತ್ತೋ ಬಿಡುತ್ತೋ ರಾಜ್ಯದ ಸಾಕ್ಷಿಪ್ರಜ್ಞೆಯಿಂದ ನಾನು ಸಹ 17 ಜನರ ಟೀಮ್‍ನಲ್ಲಿ ಇದ್ದೇನೆ. ನಾನೇ ಟೀಮ್ ಮುನ್ನಡೆಸಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ ತಮ್ಮನ್ನು ಬಿಟ್ಟು ಮಿತ್ರ ಮಂಡಳಿ ಚಿಕ್ಕಮಗಳೂರಿನಲ್ಲಿ ನಡೆಸಿರುವ ಗೌಪ್ಯ ಸಭೆ ವಿಚಾರವಾಗಿ ಮಾತನಾಡಿ ಬೇಸರ ವ್ಯಕ್ತಪಡಿಸಿದರು.

    ನನ್ನ ಜೊತೆ ಮಾತಾಡಿದರೆ ಸಿಎಂ ಬಿಎಸ್‍ವೈ ಏನಾದರು ತಿಳಿದುಕೊಂಡರೆ? ಅಂತ ಪ್ರಶ್ನಾರ್ಥಕವಾಗಿ ಮಾತನಾಡಿದ್ದೂ, ಗಟ್ಟಿ ಧ್ವನಿ ರಾಜ್ಯದಲ್ಲಿ ಪ್ರತಿಧ್ವನಿಸುತ್ತದೆ ನನ್ನದು ಹೇಡಿ ಧ್ವನಿ ಅಲ್ಲ ಎಂದು ಕಿಡಿ ಕಾರಿದ್ದಾರೆ.

  • ಎಸ್ ಟಿ ಮೀಸಲಾತಿಗೆ ಆಗ್ರಹ –  ನಾಳೆ ಕಾಗಿನೆಲೆಯ ಕನಕ ಗುರುಪೀಠದ ಪೀಠಾಧ್ಯಕ್ಷರ ನೇತೃತ್ವದಲ್ಲಿ ಪಾದಯಾತ್ರೆ

    ಎಸ್ ಟಿ ಮೀಸಲಾತಿಗೆ ಆಗ್ರಹ – ನಾಳೆ ಕಾಗಿನೆಲೆಯ ಕನಕ ಗುರುಪೀಠದ ಪೀಠಾಧ್ಯಕ್ಷರ ನೇತೃತ್ವದಲ್ಲಿ ಪಾದಯಾತ್ರೆ

    ಹಾವೇರಿ: ಎಸ್‍ಟಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲಸಂಗಮದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಪ್ರಾರಂಭಗೊಂಡಿದೆ. ಇನ್ನೊಂದು ಕಡೆ ನಾಳೆಯಿಂದ ಎಸ್ ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕು ಕಾಗಿನೆಲೆಯ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ.

    ಕನಕಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಾಳೆ ಕಾಗಿನೆಲೆ ಮೂಲಕ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಯಲಿದೆ. ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪಾದಯಾತ್ರೆ ನಡೆಯಲಿದೆ.

    ನಾಳೆಯಿಂದ ಆರಂಭವಾಗುತ್ತಿರುವ ಈ ಪಾದಯಾತ್ರೆ ಫೆಬ್ರುವರಿ 7ರವರೆಗೆ ನಡೆಯಲಿದೆ. ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ಕುರುಬರ ಜಾಗೃತಿ ಸಮಾವೇಶ ನಡೆಯಲಿದೆ. ಸ್ವಾಮೀಜಿ ನೇತೃತ್ವದಲ್ಲಿ ಪ್ರತಿದಿನ ಇಪ್ಪತ್ತು ಕಿ.ಮೀ ಪಾದಯಾತ್ರೆ ನಡೆಯಲಿದ್ದು, ಬೆಳಿಗ್ಗೆ ಹತ್ತು ಕಿ.ಮೀ ಮತ್ತು ಸಂಜೆ ವೇಳೆಯಲ್ಲಿ ಹತ್ತು ಕಿ.ಮೀ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆ ಉದ್ದಕ್ಕೂ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಜಾಗೃತಿ ಸಭೆ ನಡೆಯಲಿವೆ. ಈಗಾಗಲೇ ಪಾದಯಾತ್ರೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

    ಈ ಪಾದಯಾತ್ರೆಯಲ್ಲಿ ಪ್ರತಿದಿನ ಸುಮಾರು ಒಂದು ಸಾವಿರಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ. ಪಾದಯಾತ್ರೆಗೂ ಮುನ್ನ ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಕನಕಗುರುಪೀಠದ ಆವರಣದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕೂ ಅಧಿಕ ಕುರುಬ ಸಮುದಾಯದ ಜನರು ಭಾಗವಹಿಸಲಿದ್ದಾರೆ.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಸಚಿವ ಆರ್.ಶಂಕರ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಎಚ್.ವಿಶ್ವನಾಥ, ಬಂಡೆಪ್ಪ ಕಾಶೆಂಪೂರ ಸೇರಿದಂತೆ ಸಮುದಾಯದ ಸಚಿವರು ಮತ್ತು ಶಾಸಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಂತರ ಪ್ರಸಾದ ಸೇವನೆ ಮಾಡಿ ಸಂಜೆ ನಾಲ್ಕು ಗಂಟೆ ವೇಳೆಗೆ ಮತ್ತೆ ಪಾದಯಾತ್ರೆ ಆರಂಭವಾಗಲಿದೆ.

  • ಭಕ್ತೆಯನ್ನು 6 ಕಿ.ಮೀ ಹೆಗಲಲ್ಲಿ ಹೊತ್ತು ಸಾಗಿದ ಪೊಲೀಸ್ ಪೇದೆ

    ಭಕ್ತೆಯನ್ನು 6 ಕಿ.ಮೀ ಹೆಗಲಲ್ಲಿ ಹೊತ್ತು ಸಾಗಿದ ಪೊಲೀಸ್ ಪೇದೆ

    ಹೈದರಾಬಾದ್: ತಿರುಮಲ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರಲ್ಲಿ ಒಬ್ಬರು ಮೂರ್ಛೆ ಹೋಗಿದ್ದರ. ಇವರನ್ನು ಪೊಲೀಸ್ ಪೇದೆಯೊಬ್ಬರು ಸುಮಾರು 6 ಕಿಲೋಮೀಟರ್ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ.

    ಪೊಲೀಸ್ ಕಾನ್‍ಸ್ಟೇಬಲ್ ಅವರನ್ನು ಶೇಖ್ ಅರ್ಷದ್ ಎಂದು ಗುರುತಿಸಲಾಗಿದೆ. ಅರ್ಷದ್ ಅವರು ಪಾದಯಾತ್ರೆ ಹೊರಟಿರುವ ವೇಳೆ ದಣಿದು ಮೂರ್ಛೆ ಹೋಗಿದ್ದ ಮಹಿಳೆಯನ್ನು 6 ಕಿಲೋಮೀಟರ್‍ಗಳಷ್ಟು ದೂರ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.

    ತಿರುಮಲ ತಿಮ್ಮಪ್ಪನ ಬಾಲಾಜಿ ದೇವಸ್ಥಾನಕ್ಕೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಬರಿಗಾಲಿನಲ್ಲಿ ನಡೆದುಕೊಂಡು ದೇವರ ದರ್ಶನಕ್ಕೆ ಹೋಗುತ್ತಾರೆ. ಹೀಗಿರುವಾಗ ಬುಧವಾರದಂದು ಕೆಲವು ಭಕ್ತರು ಬರಿಗಾಲಿನಿಂದ ಬೆಟ್ಟವನ್ನು ಹತ್ತುತ್ತಿದ್ದರು. ಈ ವೇಳೆ ಇಬ್ಬರು ಭಕ್ತರು ಬರಿಗಾಲಿನಲ್ಲಿ ಬೆಟ್ಟ ಹತ್ತುವಾಗ ತುಂಬಾ ದಣಿದಿದ್ದರು. ಗುರುಪುರ ಪದಂ ಎಂಬ ಸ್ಥಳದಲ್ಲಿ ಬಂದು ನಾಗವೇರಮ್ಮ ಎಂಬವರು ಬಿಪಿಯಿಂದಾಗಿ ಮೂರ್ಛೆ ಹೋದಾಗ ಕರ್ತವ್ಯದಲ್ಲಿದ್ದ ಕಾನ್ ಸ್ಟೇಬಲ್ ಅರ್ಷದ್ ಮಹಿಳೆಯನ್ನ ರಕ್ಷಿಸಿದ್ದಾರೆ.

    ಪಕ್ಕಾ ರಸ್ತೆ ಇಲ್ಲದ ಕಾರಣ ಅರಣ್ಯ ಮಾರ್ಗದಲ್ಲೇ ಸುಮಾರು 6 ಕಿಲೋಮೀಟರ್ ದೂರ ಅರ್ಷದ್ ಮಹಿಳೆಯನ್ನು ಹೆಗಲ ಮೇಲೆ ಎತ್ತಿಕೊಂಡು ನಡೆದುಕೊಂಡು ಹೋಗಿದ್ದಾರೆ. ನಂತರ ಮಹಿಳೆಯನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಈ ಮೊದಲು ಅರ್ಷದ್ ಅವರು ನಾಗೇಶ್ವರ ರಾವ್ ಎಂಬ ಮತ್ತೊಬ್ಬರು ಹಿರಿಯರನ್ನು ಇದೇ ಅರಣ್ಯ ರಸ್ತೆಯ ಮೂಲಕ ಕರೆದುಕೊಂಡು ಹೋಗಿದ್ದರು. ಇಬ್ಬರೂ ಭಕ್ತರಿಗೂ ಅರ್ಷದ್ ಸಲ್ಲಿಸಿದ ಸೇವೆಗೆ ತಿಮ್ಮಪ್ಪನ ಭಕ್ತರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

  • ಸಿಎಂ ಭೇಟಿಗಾಗಿ 80 ಕಿ.ಮೀ. ಪಾದಯಾತ್ರೆಯ ಮಾಡಲು ರೈತರ ನಿರ್ಧಾರ

    ಸಿಎಂ ಭೇಟಿಗಾಗಿ 80 ಕಿ.ಮೀ. ಪಾದಯಾತ್ರೆಯ ಮಾಡಲು ರೈತರ ನಿರ್ಧಾರ

    ಚಾಮರಾಜನಗರ: ಜಿಲ್ಲೆಯ ನೂರಾರು ರೈತರು ನವೆಂಬರ್ 24ರಂದು ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆಯಾದ ಕೊಳ್ಳೇಗಾಲ ತಾಲೂಕು ಕುಂತೂರಿನಲ್ಲಿರುವ ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯುವುದು ಇದರ ಉದ್ದೇಶವಾಗಿದೆ.

    ನವೆಂಬರ್ 25 ಹಾಗೂ 26ರಂದು ಮುಖ್ಯಮಂತ್ರಿ ಯಡಿಯೂರಪ್ಪ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾದಯಾತ್ರೆ ಮೂಲಕ ತೆರಳಿ ಮುಖ್ಯಮಂತ್ರಿಗಳಿಗೆ ಕಬ್ಬುಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯ ಮಾಡಲು ರೈತರು ತೀರ್ಮಾನಿಸಿದ್ದಾರೆ.

    ನವೆಂಬರ್ 24ರಂದು ಬೆಳಿಗ್ಗೆ 10 ಗಂಟೆಗೆ ಕೊಳ್ಳೇಗಾಲದಿಂದ ಹೊರಟು 80 ಕಿಲೋ ಮೀಟರ್ ದೂರದಲ್ಲಿರುವ ಮಲೆಮಹದೇಶ್ವರ ಬೆಟ್ಟವನ್ನು ನವೆಂಬರ್ 25ರಂದು ಸಂಜೆ ವೇಳೆಗೆ ತಲುಪಿ, ಅಂದು ಅಥವಾ ಮಾರನೇ ದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ರೈತ ಮುಖಂಡ ಕುಂತೂರು ನಂಜುಂಡಸ್ವಾಮಿ ತಿಳಿಸಿದ್ದಾರೆ.

    ಕುಂತೂರು ಬಣ್ಣಾರಿ ಸಕ್ಕರೆ ಕಾರ್ಖಾನೆ ಒಪ್ಪಿಗೆಯಾಗಿರುವ ಕಬ್ಬನ್ನು 16-17 ತಿಂಗಳಾದರೂ ಕಟಾವು ಮಾಡುತ್ತಿಲ್ಲ. ಇದರಿಂದ ಕಬ್ಬು ಒಣಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಕಬ್ಬನ್ನು 12 ತಿಂಗಳ ಒಳಗೆ ಕಟಾವು ಮಾಡಬೇಕು. ಕಳೆದ ವರ್ಷದ ಇಳುವರಿ ಆಧಾರದ ಮೇಲಿನ ದರದಂತೆ ರೈತರಿಗೆ 12 ಕೋಟಿ 95 ಲಕ್ಷ ರೂಪಾಯಿ ಬಾಕಿಯನ್ನು ಇನ್ನೂ ಪಾವತಿಸಿಲ್ಲ ಎಂಬುದು ರೈತರ ಆರೋಪಿಸಿದ್ದಾರೆ.

    ರಂಗರಾಜನ್ ವರದಿ ಪ್ರಕಾರ ಸಕ್ಕರೆ ಕಾರ್ಖಾನೆಯ ಉಪಉತ್ಪನ್ನಗಳ ಲಾಭಾಂಶದಲ್ಲಿ ರೈತರಿಗೆ ಶೇಕಡಾ 70ರಷ್ಟು ಹಾಗೂ ಸಕ್ಕರೆ ಕಾರ್ಖಾನೆಗೆ ಶೇಕಡಾ 30ರಷ್ಟು ಲಾಭಾಂಶ ಹಂಚಿಕೆಯಾಗಬೇಕು. ಮೊಲಾಸೆಸ್, ಫ್ರೆಷ್ ಮಡ್, ಕೋ ಜನರೇಷನ್ ಮೂಲಕ ಉತ್ಪಾದಿಸುವ ವಿದ್ಯುತ್ ನಿಂದ ಬರುವ ಲಾಭಾಂಶವನ್ನು ರೈತರಿಗೆ ನೀಡದೆ ವಂಚಿಸಲಾಗುತ್ತಿದೆ ಎಂದು ರೈತ ಮುಖಂಡ ನಂಜುಂಡಸ್ವಾಮಿ ಆರೋಪಿಸಿದ್ದಾರೆ.

  • ಪ್ರಧಾನಿ, ಸಂಸದರಿಗಾಗಿ ಪಾದಯಾತ್ರೆ ಹೊರಟ ಅಯ್ಯಪ್ಪನ ಭಕ್ತರು

    ಪ್ರಧಾನಿ, ಸಂಸದರಿಗಾಗಿ ಪಾದಯಾತ್ರೆ ಹೊರಟ ಅಯ್ಯಪ್ಪನ ಭಕ್ತರು

    ಮಡಿಕೇರಿ: ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಿ, ಕೊಡಗು ಮೈಸೂರು ಲೋಕಸಭಾ ಕ್ಷೇತ್ರದಿಂದ ಪ್ರತಾಪ್ ಸಿಂಹ ಗೆಲ್ಲಬೇಕು ಎಂದು ಹರಕೆ ಹೊತ್ತಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಕೊಡಗಿನಿಂದ ಶಬರಿಮಲೆಗೆ ಕಾಲ್ನಡಿಗೆ ಜಾಥಾ ಹೋಗುತ್ತಿದ್ದಾರೆ.

    ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಗುಡ್ಡೆಹೊಸೂರು ಸಮೀಪದ ಬಳ್ಳೂರಿನ ಸಲೀ ಮತ್ತು ಪೃಥ್ವಿ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಕಾಲ್ನಡಿಗೆ ಜಾಥಾ ನಡೆಸುತ್ತಿದ್ದಾರೆ. ಬಳ್ಳೂರಿನಿಂದ ಶಬರಿ ಮಲೆಗೆ 600 ಕಿಲೋ ಮೀಟರ್ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದು, ಇಂದಿನಿಂದ 25 ದಿನಗಳ ಕಾಲ ಶಬರಿಮಲೆಗೆ ನಡೆಯಲಿದ್ದಾರೆ.

    ತಮ್ಮೂರಿನ ಯಾವುದೇ ಮನೆಗಳಿಗೆ ಹಕ್ಕುಪತ್ರವಿಲ್ಲ, ಅವುಗಳನ್ನು ನೀಡುವಂತೆ ಹಲವು ವರ್ಷಗಳಿಂದ ಕೇಳಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕೇಂದ್ರದಲ್ಲಿ ಮೋದಿಯವರು ಪ್ರಧಾನಿಯಾಗಿ ನಮ್ಮ ಸಮಸ್ಯೆ ಬಗೆಹರಿಸುವರೆಂಬ ನಂಬಿಕೆಯಿಂದ ಹರಕೆ ಹೊತ್ತಿದ್ದೇವು. ಆದರೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ ಆದರೆ ಸಿಗುತ್ತದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಕಾಲ್ನಡಿಗೆ ಮಾಡುತ್ತಿರುವ ಅಯ್ಯಪ್ಪ ಮಾಲಾಧಾರಿಗಳು.

  • ತಿರುಪತಿಯಿಂದ ಅಯ್ಯಪ್ಪ ಭಕ್ತರ ಜೊತೆ ಹೆಜ್ಜೆ ಹಾಕಿದ ಶ್ವಾನ ಕರ್ನಾಟಕಕ್ಕೆ ಬಂತು – ವಿಡಿಯೋ ನೋಡಿ

    ತಿರುಪತಿಯಿಂದ ಅಯ್ಯಪ್ಪ ಭಕ್ತರ ಜೊತೆ ಹೆಜ್ಜೆ ಹಾಕಿದ ಶ್ವಾನ ಕರ್ನಾಟಕಕ್ಕೆ ಬಂತು – ವಿಡಿಯೋ ನೋಡಿ

    ಚಿಕ್ಕಮಗಳೂರು: ಶಬರಿಮಲೆಗೆ ಪಾದಯಾತ್ರೆ ಮಾಡುತ್ತಿರುವ ಭಕ್ತರ ಜೊತೆ ಶ್ವಾನವೊಂದು 480 ಕಿ.ಮೀ ದೂರದಿಂದ ನಡೆದುಕೊಂಡು ಬರುತ್ತಿದೆ.

    ಆಕ್ಟೋಬರ್ 31 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ತೋಡಾರು ಗ್ರಾಮದ ನಿವಾಸಿ ರಾಜೇಶ್ ಗುರುಸ್ವಾಮಿ ಅವರ ನೇತೃತ್ವದಲ್ಲಿ ಆರು ಜನ ಅಯ್ಯಪ್ಪನ ಭಕ್ತರು ಮಾಲೆ ಧರಿಸಿ ತಿರುಪತಿಯ ತಿರುಮಲದಿಂದ ಬರಿಗಾಲಿನಲ್ಲಿ ಪಾದಯಾತ್ರೆ ಶುರು ಮಾಡಿದ್ದಾರೆ. ಈ ವೇಳೆ ಇವರ ಜೊತೆ ಸೇರಿಕೊಂಡಿರುವ ನಾಯಿಯೊಂದು 480 ಕಿ.ಮೀ ನಡೆದು ಭಾನುವಾರ ಚಿಕ್ಕಮಗಳೂರಿನ ಕೊಟ್ಟಿಗೆಹಾರ ತಲುಪಿದೆ.

    ನಾಯಿಯ ಅಯ್ಯಪ್ಪ ಮೇಲಿನ ಭಕ್ತಿ ಕಂಡು ಬೆರಗಾಗಿರುವ ಅಯ್ಯಪ್ಪನ ಭಕ್ತರು ಅವರ ಜೊತೆ ಈ ನಾಯಿಯನ್ನು ಅಯ್ಯಪ್ಪನ ಸನ್ನಿಧಿಗೆ ಕರೆದುಕೊಂಡು ಹೋಗಲು ತೀರ್ಮಾನ ಮಾಡಿದ್ದಾರೆ. ಅದರಂತೆ ಅವರ ಜೊತೆ 480 ಕಿ.ಮೀ ಬಂದಿರುವ ನಾಯಿಗೆ ರಸ್ತೆ ಮಧ್ಯೆ ಕಾಲಿಗೆ ಕೆಲ ಗಾಯಗಳಾಗಿವೆ. ಆಗ ಹತ್ತಿರದ ಪಶುವೈದ್ಯರ ಬಳಿ ಚಿಕಿತ್ಸೆ ನೀಡಲು ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಅಯ್ಯಪ್ಪನ ಭಕ್ತರು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಅಯ್ಯಪ್ಪನ ಭಕ್ತರು, ನಾವು ಪ್ರತಿ ವರ್ಷ ಪಾದಯಾತ್ರೆ ಮಾಡುತ್ತೇವೆ. ಆದರೆ ಈ ವರ್ಷ ಇದು ಹೊಸ ಅನುಭವದ ರೀತಿ ಇದೆ. ಮೊದಲು ನಾವು ಈ ಶ್ವಾನವನ್ನು ಗಮನಿಸಿರಲಿಲ್ಲ. ಬಹಳ ಮುಂದೆ ನಡೆದುಕೊಂಡು ಬಂದ ನಂತರ ಗಮನಿಸಿದ್ದೇವೆ. ನಾಯಿಗೆ ಅಯ್ಯಪ್ಪನ ಮೇಲಿರುವ ಭಕ್ತಿಯನ್ನು ನೋಡಿ ಸಂತೋಷವಾಗಿದೆ ಎಂದು ಹೇಳಿದ್ದಾರೆ.

  • ಮೋದಿ ಬಳಿ ಪರಿಹಾರ ಕೇಳಲು ನಿಮ್ಗೆ ಧೈರ್ಯವಿಲ್ಲ – ಸಂಸದರಿಗೆ ಸಂತ್ರಸ್ತರು ಘೇರಾವ್

    ಮೋದಿ ಬಳಿ ಪರಿಹಾರ ಕೇಳಲು ನಿಮ್ಗೆ ಧೈರ್ಯವಿಲ್ಲ – ಸಂಸದರಿಗೆ ಸಂತ್ರಸ್ತರು ಘೇರಾವ್

    ಬೆಳಗಾವಿ: ನಿಮಗೆ ಪ್ರಧಾನಿ ನರೇಂದ್ರ ಮೋದಿ ಬಳಿ ಪರಿಹಾರ ಕೇಳಲು ಧೈರ್ಯವಿಲ್ಲ ಎಂದು ಸಂಸದ ಅಣ್ಣಾಸಾಹೇಬ್ ಜೊಲ್ಲೆಗೆ ಸಂತ್ರಸ್ತರು ಗ್ರಾಮದಿಂದ ಘೇರಾವ್ ಹಾಕಿದ್ದಾರೆ.

    ಗಾಂಧೀಜಿ 150ನೇ ಜನ್ಮದಿನಾಚರಣೆ ಅಂಗವಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದ ಅಣ್ಣಾಸಾಬ್ ಜೊಲ್ಲೆ ಪಾದಯಾತ್ರೆ ಮಾಡುತ್ತಿದ್ದಾರೆ. ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಿಂದ ಪಾದಯಾತ್ರೆ ಆರಂಭ ಮಾಡಿದ ಸಂಸದರನ್ನು ತಡೆದ ಗಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಪ್ರವಾಹ ಬಂದು ಎರಡು ತಿಂಗಳಾದರೂ ಯಾರೂ ನಮ್ಮ ಕಷ್ಟ ಕೇಳಲು ಬಂದಿಲ್ಲ. ನಿಮ್ಮ ಸರ್ಕಾರದಿಂದ ಪರಿಹಾರ ಬಂದಿಲ್ಲ ಸ್ಥಳೀಯ ಶಾಸಕ ಸತೀಶ್ ಜಾರಕಿಹೊಳಿ ಎಲ್ಲ ಮಾಡಿದ್ದಾರೆ. ನೀವೇನು ಮಾಡಿದ್ದೀರಿ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ಕೋಪಗೊಂಡ ಸಂಸದರು, ಎಲ್ಲವನ್ನೂ ನಾವು ಮಾಡುತ್ತಿದ್ದೇವೆ ಎಂದು ಸಂತ್ರಸ್ತರನ್ನು ತಳ್ಳಿ ಮುಂದೆ ಹೋಗಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಬಳಿ ಪರಿಹಾರ ಕೊಡಿಸಲು ನಿಮಗೆ ಧೈರ್ಯವಿಲ್ಲ. ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸಂತ್ರಸ್ತರು ಘೇರಾವ್ ಹಾಕಿದ್ದಾರೆ.