Tag: hike

  • ಆರು ವರ್ಷದಲ್ಲಿ ದಾಖಲೆ ಬರೆದ ಬಂಗಾರ

    ಆರು ವರ್ಷದಲ್ಲಿ ದಾಖಲೆ ಬರೆದ ಬಂಗಾರ

    ಬೆಂಗಳೂರು: ಕಳೆದ ಆರು ವರ್ಷದಲ್ಲಿ ಬಂಗಾರ ದಾಖಲೆ ಬರೆದಿದ್ದು, ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

    ಇದು ಕಳೆದ 6 ವರ್ಷಗಳಲ್ಲೇ ಅತ್ಯಧಿಕ ಏರಿಕೆ ಕಂಡ ಬೆಲೆಯಾಗಿದೆ. ಕಳೆದ ತಿಂಗಳಿಗೂ, ಈ ತಿಂಗಳಿಗೂ ಚಿನ್ನದ ದರದ ವ್ಯತ್ಯಾಸ ನೋಡುವುದಾದರೆ, ಕಳೆದ ತಿಂಗಳು 22 ಕ್ಯಾರೆಟ್ ಚಿನ್ನದ ಬೆಲೆ-30,190 ರೂ. ಹಾಗೂ 24 ಕ್ಯಾರೆಟ್ ಚಿನ್ನದ ದರ – 33,290 ರೂ. ಇತ್ತು. ಇಂದು 22 ಕ್ಯಾರೆಟ್ ಚಿನ್ನದ ಬೆಲೆ – 31,980 ರೂ. ಹಾಗೂ 24 ಕ್ಯಾರೆಟ್ ಚಿನ್ನದ ದರ – 34,200 ರೂ.ಗೆ ಏರಿಕೆಯಾಗಿದೆ.

    ಒಂದು ತಿಂಗಳಲ್ಲಿ ಒಡವೆ ಚಿನ್ನ 10 ಗ್ರಾಂಗೆ 800 ರೂಪಾಯಿಯಷ್ಟು ಏರಿಕೆಯಾಗಿರೋದಕ್ಕೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ ಎಂದು ಚಿನ್ನದ ವ್ಯಾಪಾರಸ್ಥರು ಹೇಳುತ್ತಾರೆ. ಸದ್ಯ ಆಷಾಢ ಬಂದರೆ ಚಿನ್ನದ ಬೆಲೆ ಕಡಿಮೆಯಾಗುತ್ತೆ ಎನ್ನುವ ಮಾತು ಈ ಬಾರಿ ಸುಳ್ಳಾಗಿದೆ.

    ಬಂಗಾರದ ದರ ಬೆಲೆ ಹೆಚ್ಚಳಕ್ಕೆ ಕಾರಣವೆನೆಂದರೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯುಎಸ್ ಹಾಗೂ ಇರಾನ್ ನಡುವಿನ ವ್ಯಾಪಾರ ಪೈಪೋಟಿಯಾಗಿದೆ. ಇತ್ತ ಸೆಂಟ್ರಲ್ ಬ್ಯಾಂಕ್ ಚಿನ್ನವನ್ನು ಭಾರೀ ಪ್ರಮಾಣದಲ್ಲಿ ಖರೀದಿಸುತ್ತಿರುವ ಪರಿಣಾಮ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ.

  • ಮೇ 19ರ ನಂತ್ರ ಕಾದಿದೆ ಶಾಕ್ – ಪೆಟ್ರೋಲ್, ಡೀಸೆಲ್ ದರ ಭಾರೀ ಏರಿಕೆ

    ಮೇ 19ರ ನಂತ್ರ ಕಾದಿದೆ ಶಾಕ್ – ಪೆಟ್ರೋಲ್, ಡೀಸೆಲ್ ದರ ಭಾರೀ ಏರಿಕೆ

    ಬೆಂಗಳೂರು: ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಮುಗಿದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ.

    ಮಾರ್ಚ್ 11 ರಿಂದ ಈವರೆಗೆ ಕೇವಲ ಶೇ.1 ರಷ್ಟು ಮಾತ್ರ ಪೆಟ್ರೋಲ್ ದರ ಏರಿಕೆಯಾಗಿದೆ. ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದ ಮಾರ್ಚ್ 10ಕ್ಕೂ ಹಿಂದಿನ ಎರಡು ತಿಂಗಳ ಅವಧಿಯಲ್ಲಿ ಪೆಟ್ರೋಲ್ ದರವು ಶೇ. 3.5 ರಷ್ಟು ಏರಿಕೆಯಾಗಿತ್ತು.

    ಕಚ್ಚಾ ತೈಲದ ದರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿದ್ದರೂ ಅದರ ಹೊರೆಯನ್ನು ತೈಲ ಕಂಪನಿಗಳೇ ಭರಿಸುತ್ತಿವೆ. ಆದರೆ ಮೇ19 ರ ಬಳಿಕ ತೈಲ ಕಂಪನಿಗಳು ತಮ್ಮ ನಷ್ಟದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಿವೆ ಎಂದು ತಿಳಿದು ಬಂದಿದೆ.

    ಒಂದು ತಿಂಗಳ ಅವಧಿಯಲ್ಲಿ ಕಚ್ಚಾ ತೈಲದ ದರ ಶೇ.10 ರಷ್ಟು ಏರಿಕೆಯಾಗಿದ್ದು, ಅದರನ್ವಯ ಪೆಟ್ರೋಲ್, ಡೀಸೆಲ್ ದರಗಳು 6-7 ರೂಪಾಯಿ ಏರಿಸಬೇಕಾಗುತ್ತದೆ. ಸರ್ಕಾರ ಅಬಕಾರಿ ಸುಂಕವನ್ನು ಇಳಿಸಿದರೆ ಬೆಲೆ ಏರಿಕೆ ಪ್ರಮಾಣ ಸ್ವಲ್ಪ ತಗ್ಗಬಹುದು. ಹೀಗಾಗಿ ಮೇ 19 ರ ಬಳಿಕ ನಿರಂತರ ತೈಲದರದಲ್ಲಿ ಏರುವುದು ಖಚಿತವಾಗಿದೆ.

    ಜನವರಿಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲಕ್ಕೆ 52.40 ಡಾಲರ್ ಇದ್ದರೆ ಈಗ 70 ಡಾಲರ್‍ಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದು 80 ಡಾಲರ್‌ಗೆ ಏರಿಕೆಯಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.

    ಭಾರತಕ್ಕೆ ಇರಾನ್‍ನಿಂದ ತೈಲ ಆಮದನ್ನು ಅಮೆರಿಕ ಮೇ 2ರಿಂದಲೇ ನಿರ್ಬಂಧಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಇರಾನ್‍ನಿಂದ ಸರಬರಾಜಾಗುತ್ತಿದ್ದ ತೈಲವು ಇಳಿಕೆಯಾದರೆ, ಕಚ್ಚಾ ತೈಲದ ದರ ಏರುವುದು ಸಹಜ. ಭಾರತ ಇರಾನ್ ದೇಶದಿಂದ ಅಗ್ಗದ ದರದಲ್ಲಿ ತೈಲವನ್ನು ಪಡೆಯತಿತ್ತು. ಈಗ ಅಮೆರಿಕದ ನಿರ್ಧಾರದಿಂದ ಭಾರತ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ.

  • ಕ್ರಿಸ್‍ಮಸ್, ಹೊಸ ವರ್ಷಕ್ಕೆ ತೆರಳುವ ಪ್ರಯಾಣಿಕರಿಗೆ KSRTCಯಿಂದ ಗುಡ್‍ನ್ಯೂಸ್

    ಕ್ರಿಸ್‍ಮಸ್, ಹೊಸ ವರ್ಷಕ್ಕೆ ತೆರಳುವ ಪ್ರಯಾಣಿಕರಿಗೆ KSRTCಯಿಂದ ಗುಡ್‍ನ್ಯೂಸ್

    ಬೆಂಗಳೂರು: ಕ್ರಿಸ್‍ಮಸ್ ಹಾಗೂ ಹೊಸ ವರ್ಷಕ್ಕೆಂದು ಊರು ಹಾಗೂ ಹೊರ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕಡೆಯಿಂದ 550ಕ್ಕೂ ಹೆಚ್ಚು ಹೆಚ್ಚುವರಿ ಬಸ್‍ಗಳ ಸೌಲಭ್ಯ ನೀಡಿದೆ.

    ಕ್ರಿಸ್‍ಮಸ್ ಹಬ್ಬ ಹಾಗೂ ಹೊಸ ವರ್ಷಕ್ಕೆಂದು ರಾಜ್ಯ ಮತ್ತು ಹೊರರಾಜ್ಯಗಳ ವಿವಿಧೆಡೆಗೆ ಬೆಂಗಳೂರಿನಿಂದ ತೆರಳುತ್ತಿರುವ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ ಸೌಲಭ್ಯದ ವ್ಯವಸ್ಥೆಯನ್ನು ಮಾಡಿದೆ. ಸಾಲು ಸಾಲು ರಜೆಗಳನ್ನು ದುರುಪಯೋಗ ಪಡೆಸಿಕೊಂಡಿರುವ ಖಾಸಗಿ ಬಸ್ಸುಗಳ ಗ್ರಾಹಕರಿಂದ ಹಗಲು ದರೋಡೆ ಮಾಡಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳು ಹಗಲು ದರೋಡೆಯನ್ನು ತಡೆದು, ತನ್ನ ಆದಾಯ ಹಾಗೂ ಪ್ರಯಾಣಿಕರ ಜೇಬಿಗೆ ಬೀಳುವ ಕತ್ತರಿಯನ್ನು ತಪ್ಪಿಸಲು ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‍ಗಳ ವ್ಯವಸ್ಥೆ ಮಾಡಿದೆ.

    ಡಿಸೆಂಬರ್ 21 ಮತ್ತು 22ರಂದು ಬೆಂಗಳೂರು ನಗರದಿಂದ ಹೊರಡುವ ಬಸ್ಸುಗಳ ಸಂಖ್ಯೆಯನ್ನು ಕೆಎಸ್‌ಆರ್‌ಟಿಸಿ ಹೆಚ್ಚಿಸಿದೆ.

    ಯಾವೆಲ್ಲ ನಿಲ್ದಾಣದಿಂದ ಯಾವೆಲ್ಲ ನಗರಗಳ ಬಸ್ ಸಂಖ್ಯೆ ಹೆಚ್ಚಿಸಿದೆ?
    ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ ಸೇರಿದಂತೆ ಮೊದಲಾದ ಸ್ಥಳಗಳಿಗೆ ಬಸ್ ಸೇವೆ ಹೆಚ್ಚಿಸಿದೆ.

    ಮೈಸೂರು ರಸ್ತೆಯ ಸ್ಯಾಟ್‍ಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಹೆಚ್ಚುವರಿ ಬಸ್‍ಗಳು ಹೊರಡಲಿವೆ.

    ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಘಟಕ 2 ಮತ್ತು 4 ಮುಂಭಾಗದಿಂದ ಮಧುರೈ, ಕುಂಭಕೋಣಂ, ತಿರುಚಿ, ಚೆನ್ನೈ, ಕೊಯಮತ್ತೂರು, ತಿರುಪತಿ, ವಿಜಯವಾಡ, ಹೈದರಾಬಾದ್ ಮೊದಲಾದ ನಗರಗಳಿಗೆ ಹೆಚ್ಚುವರಿ ಬಸ್ ಗಳು ಕಾರ್ಯಾಚರಣೆ ಮಾಡುತ್ತವೆ.

    ಇದಲ್ಲದೇ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ, ಜಯನಗರ, ಜಯನಗರ 4ನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ್ (ರಾಜಾಜಿನಗರ), ಮಲ್ಲೇಶ್ವರಂ 18ನೇ ಅಡ್ಡ ರಸ್ತೆ, ಬನಶಂಕರಿ, ಜೀವನ್ ಭೀಮಾನಗರ, ಐಟಿಐ ಗೇಟ್, ಗಂಗಾನಗರ, ಕೆಂಗೇರಿ ಉಪನಗರ ಮೊದಲಾದ ಸ್ಥಳಗಳಿಂದ ಪ್ರಯಾಣಿಕರ ಒತ್ತಡಕ್ಕನುಗುಣವಾಗಿ ಶಿವಮೊಗ್ಗ, ದಾವಣಗೆರೆ, ತಿರುಪತಿ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಕುಕ್ಕೆಸುಬ್ರಹ್ಮಣ್ಯ, ಧರ್ಮಸ್ಥಳ ಮುಂತಾದ ಮಾರ್ಗಗಳಿಗೆ ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಲಾಗುವುದೆಂದು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದೆ.

    ಇದಲ್ಲದೇ ರಾಜ್ಯ ಹಾಗೂ ಹೊರರಾಜ್ಯಗಳ ವಿವಿಧೆಡೆಯಿಂದ ನಗರಕ್ಕೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಡಿ.25ರಂದು ಹೆಚ್ಚುವರಿ ಬಸ್ ಕಾರ್ಯಾಚರಣೆಗೊಳಿಸಲಾಗುವುದು. ಸಾರ್ವಜನಿಕರು ಈ ಹೆಚ್ಚುವರಿ ಬಸ್ ಸೌಲಭ್ಯ ಪಡೆದುಕೊಳ್ಳುವಂತೆ ಕೆಎಸ್‌ಆರ್‌ಟಿಸಿ ಮನವಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಲ್‍ಪಿಜಿ ದರ ಮತ್ತೆ ಏರಿಕೆ – ಗ್ರಾಹಕರಿಗೆ ಬರೆ ಎಳೆದ ಕೇಂದ್ರ ಸರ್ಕಾರ

    ಎಲ್‍ಪಿಜಿ ದರ ಮತ್ತೆ ಏರಿಕೆ – ಗ್ರಾಹಕರಿಗೆ ಬರೆ ಎಳೆದ ಕೇಂದ್ರ ಸರ್ಕಾರ

    ನವದೆಹಲಿ: ಕೇಂದ್ರ ಸರ್ಕಾರ ಎಲ್‍ಪಿಜಿ ಸಿಲಿಂಡರಿನ ಮೇಲೆ 2 ರೂಪಾಯಿ ಏರಿಸುವ ಮೂಲಕ ಜನಸಾಮಾನ್ಯರಿಗೆ ಮತ್ತೊಮ್ಮೆ ಬರೆ ಹಾಕಿದೆ.

    ಎಲ್‍ಪಿಜಿ ಗೃಹಬಳಕೆ ಸಿಲಿಂಡರ್ ದರ ಏರಿಕೆ ಕುರಿತು ಕೇಂದ್ರ ತೈಲ ಸಚಿವಾಲಯ ಅಧಿಕೃತ ಆದೇಶ ಪ್ರಕಟಿಸಿದೆ. 14.2 ಕೆಜಿ ಹಾಗೂ 5 ಕೆಜಿಗಳ ಮೇಲೆ 2 ರೂಪಾಯಿ ಹೆಚ್ಚಳ ಮಾಡಿದೆ. ಹೀಗಾಗಿ ಸಬ್ಸಿಡಿ ಸಹಿತ 14.2 ಕೆಜಿ ಸಿಲಿಂಡರಿನ ಬೆಲೆ ಈ ಮೊದಲು ದೆಹಲಿಯಲ್ಲಿ 505.34 ಆಗಿದ್ದರೆ, ಈಗ 507.42ಕ್ಕೆ ಏರಿಕೆಯಾಗಿದೆ. ನವೆಂಬರ್ 1ರಂದು ಪ್ರತಿ ಸಿಲಿಂಡರಿನ ಮೇಲೆ 2.94 ರೂಪಾಯಿಯನ್ನು ಏರಿಕೆ ಮಾಡಿತ್ತು.

    ಹೆಚ್ಚಳ ಏಕೆ?
    ಕೇಂದ್ರ ಸರ್ಕಾರ ಎಲ್ಲಾ ಗ್ಯಾಸ್ ಏಜೆನ್ಸಿಗಳಿಗೆ 2017 ರಿಂದಲೂ 14.2 ಕೆಜಿ ಸಿಲಿಂಡರಿಗೆ 48.89 ರೂಪಾಯಿ ಹಾಗೂ 5 ಕೆಜಿ ಸಿಲಿಂಡರಿಗೆ 24.20 ರೂಪಾಯಿ ಕಮಿಷನ್ ನೀಡುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಾರಿಗೆ ಮತ್ತು ಕಾರ್ಮಿಕ ಭತ್ಯೆ ಹೆಚ್ಚಳದಿಂದಾಗಿ ಗ್ಯಾಸ್ ಏಜೆನ್ಸಿಗಳು ಕಮಿಷನ್ ದರವನ್ನು ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದವು. ಹೀಗಾಗಿ ಕೇಂದ್ರ ಸರ್ಕಾರ 2 ರೂಪಾಯಿಯನ್ನು ಹೆಚ್ಚಳ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/

  • ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಇಲ್ಲ

    ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಇಲ್ಲ

    ಬೆಂಗಳೂರು: ಬಸ್ ದರ 18% ಹೆಚ್ಚಳ ಆಗಬೇಕೆಂದು ಸಿಎಂ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ಸಿಎಂ ಜೊತೆಗೆ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಸ್ ದರ ಹೆಚ್ಚಳದ ಬಗ್ಗೆ ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಡಿಸೇಲ್ ವಾಹನಗಳನ್ನು ಕಡಿಮೆ ಮಾಡಿ ಎಲೆಕ್ಟ್ರಿಕ್ ಬಿಎಂಟಿಸಿ ಬಸ್ ಓಡಿಸಲು ಚಿಂತನೆ ನಡೆದಿದೆ. ಕೇಂದ್ರ ಸರ್ಕಾರ 80 ಬಸ್ಸುಗಳನ್ನು ನೀಡುತ್ತಿದ್ದು, ಮತ್ತಷ್ಟು ಬಸ್ಸಿನ ವ್ಯವಸ್ಥೆಯನ್ನು ಕೇಳುತ್ತಿದ್ದೇವೆ ಎಂದು ತಿಳಿಸಿದರು.

    ಮಂಡ್ಯ ಲೋಕಸಭಾ ಉಪಚುನಾವಣೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಮಗನಿಗೆ ಮಂಡ್ಯದಲ್ಲಿ ಟಿಕೆಟ್ ಕೇಳಿಲ್ಲ. ಲೋಕಸಭೆ ಆಕಾಂಕ್ಷಿಯೂ ಅಲ್ಲ. ಸಚಿವ ಪುಟ್ಟರಾಜು ಹಾಗೂ ಮಾಜಿ ಸಚಿವ ಚೆಲುವರಾಯಸ್ವಾಮಿ ಕಿತ್ತಾಟ ಮೊದಲಿನಿಂದಲೂ ನಡೆಯುತ್ತಲೇ ಇದೆ. ಇಬ್ಬರ ನಡುವಿನ ಕಿತ್ತಾಟ ಈಗಲೂ ಇದೆ. ಇದೇನು ಹೊಸತಲ್ಲ ಎಂದರು.

    ಪ್ರತಿ ಲೀಟರ್ ಡೀಸೆಲ್ ಬೆಲೆ 2.50 ರೂಪಾಯಿ ಇಳಿಕೆಯಾಗಿದ್ದು, ಕುಮಾರಸ್ವಾಮಿ ಸರ್ಕಾರ ತೈಲ ಬೆಲೆ ಇಳಿಸದೇ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಈಗ ಪ್ರಯಾಣ ದರ ಹೆಚ್ಚಿಸಿದರೆ ಮತ್ತೆ ಜನರ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡದೇ ಇರಲು ಸರ್ಕಾರ ನಿರ್ಧಾರ ಮಾಡಿದೆ ಎನ್ನುವ ಸುದ್ದಿಯನ್ನು ಅಕ್ಟೋಬರ್ 5 ರಂದೇ ಪಬ್ಲಿಕ್ ಟಿವಿ ಪ್ರಕಟಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೆಪ್ಟೆಂಬರ್ 10ಕ್ಕೆ ಭಾರತ್ ಬಂದ್‍ಗೆ ಕಾಂಗ್ರೆಸ್ ಕರೆ

    ಸೆಪ್ಟೆಂಬರ್ 10ಕ್ಕೆ ಭಾರತ್ ಬಂದ್‍ಗೆ ಕಾಂಗ್ರೆಸ್ ಕರೆ

    ನವದೆಹಲಿ: ದಿನದಿಂದ ದಿನಕ್ಕೆ ತೈಲ ಬೆಲೆಗಳು ಗಗನಕ್ಕೇರುತ್ತಿದ್ದರೂ, ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ, ಹೀಗಾಗಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಇದೇ ಸೆಪ್ಟೆಂಬರ್ 10 ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಭಾರತ್ ಬಂದ್ ಗೆ ಕರೆ ನೀಡಿದೆ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ತಿಳಿಸಿದ್ದಾರೆ.

    ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲಗಳ ಬೆಲೆಗಳಿಂದಾಗಿ ಜನಸಾಮಾನ್ಯ ಸುಟ್ಟು ಹೋಗುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರಕ್ಕೆ ಇದರ ಬಿಸಿ ಮುಟ್ಟಿಸಲು ಇದೇ ಸೆಪ್ಟೆಂಬರ್ ದೇಶವ್ಯಾಪಿ ಪ್ರತಿಭಟನೆ ನಡೆಸಿ ಭಾರತ್ ಬಂದ್ ನಡೆಸಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ನೂರರ ಗಡಿಯತ್ತ ತೈಲ ಬೆಲೆ: ಪೆಟ್ರೋಲ್‍ನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಪಾಲು ಎಷ್ಟು? ಕೇಂದ್ರ ಹೇಳೋದು ಏನು?

    ಕೇಂದ್ರ ಸರ್ಕಾರ ತೈಲ ದರ ಏರಿಕೆ ಮಾಡುವ ಮೂಲಕ 11 ಲಕ್ಷ ಕೋಟಿ ರೂಪಾಯಿಯನ್ನು ಕೊಳ್ಳೆಹೊಡೆದಿದೆ. ಶೀಘ್ರವೇ ಕೇಂದ್ರ ತೆರಿಗೆ ಹಾಗೂ ಅಬಕಾರಿ ಸುಂಕವನ್ನು ರಾಜ್ಯಗಳಲ್ಲಿ ಕಡಿತಗೊಳಿಸಬೇಕು. ಹಾಗೆಯೇ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ಸಹ ಜಿಎಸ್‍ಟಿ ವ್ಯಾಪ್ತಿಗೆ ಒಳಪಡಿಸಬೇಕೆಂದು ಆಗ್ರಹಿಸುತ್ತೇವೆ. ಇದರಿಂದಾಗಿ ಜನಸಾಮಾನ್ಯರ ಮೇಲಿನ ಭಾರ ಸ್ವಲ್ಪವಾದರೂ ಕಡಿಮೆಯಾಗುತ್ತದೆ. ಹೀಗಾಗಿ ಭಾರತ್ ಬಂದ್‍ಗೆ ಎಲ್ಲಾ ವಿರೋಧ ಪಕ್ಷದ ನಾಯಕರು ಸಹ ಬೆಂಬಲ ನೀಡಬೇಕು. ಅಲ್ಲದೇ ಎಲ್ಲಾ ಎನ್‍ಜಿಓ ಹಾಗೂ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕೋರಿಕೊಂಡರು.

    ಈ ವೇಳೆ ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ಆಶೋಕ್ ಗೆಹ್ಲೋಟ್ ಮಾತನಾಡಿ, ನಾವು ಭಾರತ್ ಬಂದ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಎಚ್ಚರಿಸಬೇಕಾಗಿದೆ. ಇಂಧನ ಬೆಲೆಗಳು ಗಗನಕ್ಕೇರಿದ್ದರೂ ಅವರನ್ನು ಸುಮ್ಮನೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಭಾರತದಲ್ಲಿ ಪೆಟ್ರೋಲ್ ದರ 82 ರೂ. – ಪಾಕಿಸ್ತಾನ, ಅಮೆರಿಕ, ಶ್ರೀಲಂಕಾದಲ್ಲಿ ಎಷ್ಟು?

    ಭಾರತ್ ಬಂದ್ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿರು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಪೆಟ್ರೋಲ್ ಹಾಗೂ ಡಿಸೇಲ್ ದರಗಳು ಗಗನಕ್ಕೆ ಏರಿಕೆಯಾಗುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಹೃದಯ ಇಲ್ಲದಂತೆ, ಕರುಣೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಪೆಟ್ರೋಲ್, ಡೀಸೆಲ್ ಬೆರೆ ಏರಿಕೆ ಖಂಡಿಸಿ ಇದೇ ಸೆಪ್ಟೆಂಬರ್ 10ಕ್ಕೆ ಕಾಂಗ್ರೆಸ್ ವತಿಯಿಂದ ರಾಷ್ಟ್ರವ್ಯಾಪಿ ಭಾರತ್ ಬಂದ್ ನಡೆಸಲು ತೀರ್ಮಾಸಿದ್ದೇವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳು ಇನ್ನೂ ದುಬಾರಿ! ಯಾವುದಕ್ಕೆ ಎಷ್ಟು? ವ್ಯತ್ಯಾಸವೇನು?

    ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳು ಇನ್ನೂ ದುಬಾರಿ! ಯಾವುದಕ್ಕೆ ಎಷ್ಟು? ವ್ಯತ್ಯಾಸವೇನು?

    ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಏರಿಸುತ್ತಲೇ ಇರುವ ತೈಲ ಕಂಪನಿಗಳು, ಈಗ ಎಲ್‍ಪಿಜಿ ಗ್ಯಾಸ್ ದರವನ್ನು ಪರಿಷ್ಕರಣೆ ಮಾಡುವ ಮೂಲಕ ಸಬ್ಸಿಡಿ ರಹಿತ ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಮೇಲಿನ ಮೊತ್ತವನ್ನು ಮತ್ತೊಮ್ಮೆ ಏರಿಕೆ ಮಾಡಿವೆ.

    ಹೌದು, ಪ್ರತಿ ತಿಂಗಳು ದರ ಪರಿಷ್ಕರಣೆ ಮಾಡುವ ತೈಲ ಕಂಪನಿಗಳು ಇದೇ ಸೆಪ್ಟಂಬರ್ ತಿಂಗಳಿನಿಂದ ಎಲ್‍ಪಿಜಿ ಗ್ಯಾಸ್ ದರವನ್ನು ಪರಿಷ್ಕರಣೆ ಮಾಡಿದೆ. ಕಳೆದ ಐದು ತಿಂಗಳಿಂದಲೂ ಎಲ್‍ಪಿಜಿ ಗ್ಯಾಸ್ ದರವು ಏರುತ್ತಲೇ ಇದ್ದು, ಗೃಹ ಬಳಕೆಯ ಸಬ್ಸಿಡಿ ರಹಿತ ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಮೇಲಿನ ದರವನ್ನು ಏರಿಕೆ ಮಾಡಿವೆ.

    ಗೃಹಬಳಕೆಯ ಸಬ್ಸಿಡಿ ರಹಿತ ಸಿಲಿಂಡರ್‌ನ ದರವನ್ನು 24.50 ರೂಪಾಯಿ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ನ ದರವನ್ನು 47 ರೂಪಾಯಿಗೆ ಏರಿಕೆಮಾಡಿದೆ. ಈ ಹೆಚ್ಚಳದಿಂದಾಗಿ ಪ್ರತಿ ಸಬ್ಸಿಡಿ ರಹಿತ ಸಿಲಿಂಡರ್ 820.50 ರೂಪಾಯಿ ಆಗಿದ್ದರೆ, ವಾಣಿಜ್ಯ ಸಿಲೆಂಡರ್ ಬೆಲೆ 1,462 ರೂಪಾಯಿಗಳಾಗಿದೆ.

    ಸಬ್ಸಿಡಿ ಸಹಿತ ಸಿಲಿಂಡರ್‌ನ ಬೆಲೆಯನ್ನು ಏರಿಕೆ ಮಾಡದೇ ಆಗಸ್ಟ್ ತಿಂಗಳಲ್ಲಿದ್ದ 486.50 ರೂಪಾಯಿ ದರವನ್ನೇ ಮುಂದುವರಿಸಿದೆ. ಇತ್ತೀಚೆಗಷ್ಟೇ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಏರಿಕೆ ಮಾಡಿದ್ದ ತೈಲ ಕಂಪೆನಿಗಳು, ಎಲ್‍ಪಿಜಿ ಗ್ಯಾಸ್ ದರವನ್ನು ಸಹ ಏರಿಕೆಮಾಡುವ ಮೂಲಕ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೆಟ್ರೋಲ್ ಡೀಸೆಲ್, ಪೆಟ್ರೋಲ್ ಬೆಲೆಯಲ್ಲಿ ಭಾರೀ ಹೆಚ್ಚಳ!

    ಪೆಟ್ರೋಲ್ ಡೀಸೆಲ್, ಪೆಟ್ರೋಲ್ ಬೆಲೆಯಲ್ಲಿ ಭಾರೀ ಹೆಚ್ಚಳ!

    ನವದೆಹಲಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಗುರುವಾರ ಡಿಸೇಲ್ ಬೆಲೆ ಸಾರ್ವಕಾಲಿಕ ಗರಿಷ್ಟ ದರ ತಲುಪಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆಯೂ ಮೂರು ವರ್ಷಗಳಲ್ಲೇ ಗರಿಷ್ಟ ಮಟ್ಟ ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ 61.88ರೂ. ಮತ್ತು ಪೆಟ್ರೋಲ್ ಬೆಲೆ 71.27 ರೂ. ಏರಿಕೆಯಾಗಿದೆ.

    ಇದರೊಂದಿಗೆ ಒಂದು ದಿನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 7 ಪೈಸೆ ಹೆಚ್ಚಳವಾಗಿದ್ದರೆ, ಡೀಸೆಲ್ ಬೆಲೆ 14 ರಿಂದ 16 ಪೈಸೆ ಹೆಚ್ಚಳವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 72.39 ರೂ. ಇದ್ದರೆ ಡೀಸೆಲ್ 62.92 ರೂ. ಗೆ ಏರಿಕೆಯಾಗಿದೆ.

    ವಾಣಿಜ್ಯ ನಗರಿ ಮುಂಬೈ ನಲ್ಲಿ ದೇಶದಲ್ಲೇ ಅv ತೈಲ ಬೆಲೆ ಹೊಂದಿದ್ದು, ಪತ್ರಿ ಲೀಟರ್ ಪೆಟ್ರೋಲ್ ಬೆಲೆ ಗರಿಷ್ಟ 79.17 ರೂ ತಲುಪಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 65.90 ರೂ ತಲುಪಿದೆ. ಚೆನ್ನೈ ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 74 ರೂ. ತಲುಪಿದ್ದು, ಡೀಸೆಲ್ 65.23 ರೂ. ಗೆ ಹೆಚ್ಚಳವಾಗಿದೆ.

    ಸೋಮವಾರ ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ ಗೆ 70.37 ಡಾಲರ್(4,495 ರೂ.) ತಲುಪಿದೆ. 2014 ರ ನಂತರ ಅಂತರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ದರ ಇದಾಗಿದೆ. ಏಪ್ರಿಲ್ ನಲ್ಲಿ ಪ್ರತಿ ಬ್ಯಾರೆಲ್ ಗೆ 52.49 ಡಾಲರ್(3353 ರೂ.) ಇದ್ದರೆ ಡಿಸೆಂಬರ್ ನಲ್ಲಿ 62 ಡಾಲರ್(39600 ರೂ.) ಇತ್ತು. ಈ ಅವಧಿಯಲ್ಲಿ ತೈಲ ದರ 18% ಏರಿಕೆಯಾಗಿದೆ.

    ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್: ಮುಂದಿನ ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಸಭೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತರುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ವ್ಯಾಟ್ ಇಳಿಸಲ್ಲ: ಸಿಎಂ ಸಿದ್ದರಾಮಯ್ಯ

    ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿದರೆ ಜನ ಸಾಮಾನ್ಯರ ಮೇಲಿನ ಹೊರೆಯನ್ನು ತಕ್ಕಮಟ್ಟಿಗೆ ಇಳಿಸಬಹುದು. 2017ರ ಅಕ್ಟೋಬರ್ನಲ್ಲಿ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಪರಿಣಾಮ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 56.89 ರೂ. ಮತ್ತು 68.38 ರೂ.ಗೆ ಇಳಿದಿತ್ತು. ಹೀಗಿದ್ದರೂ, ನಂತರ ಅಂತರಾಷ್ಟ್ರೀಯ ದರ ಏರಿಕೆಯಿಂದ ತೈಲ ದರ ಹೆಚ್ಚಳವಾಗಿದೆ ಎಂಬುದಾಗಿ ವರದಿಯಾಗಿದೆ. ಇದನ್ನೂ ಓದಿ: ಜಿಎಸ್‍ಟಿ ಅಡಿ ಪೆಟ್ರೋಲ್ ಬಂದ್ರೆ ಬೆಂಗ್ಳೂರಿನಲ್ಲಿ ಪ್ರತಿ ಲೀಟರ್‍ಗೆ 40 ರೂ.ಅಷ್ಟೇ!

    2017ರ ಅಕ್ಟೋಬರ್ 3ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2 ರೂ. ಕಡಿತಗೊಳಿಸಿತ್ತು. ಬೆಲೆ ಏರಿಕೆಯಂದ ಜನಸಾಮಾನ್ಯರ ಮೇಲೆ ಆಗುತ್ತಿರುವ ಹೊರೆಯನ್ನು ತಪ್ಪಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಬಕಾರಿ ಮತ್ತು ಸೀಮಾ ಸುಂಕ ಮಡಳಿ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು.

    2014ರಿಂದ 2016ರ ಅವಧಿಯಲ್ಲಿ ಕೇಂದ್ರ ಸರ್ಕಾರ 9 ಬಾರಿ ಅಬಕಾರಿ ಸುಂಕವನ್ನು ಹೆಚ್ವಿಸಿತ್ತು. ಈ ಅವಧಿಯಲ್ಲಿ ಪೆಟ್ರೋಲ್ ಮೇಲೆ 11.77 ರೂ., ಡೀಸೆಲ್ ಮೇಲೆ 13.47 ರೂ. ನಂತೆ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಇದರಿಂದಾಗಿ 2014-15 ರಲ್ಲಿ ಬೊಕ್ಕಸಕ್ಕೆ 99 ಕೋಟಿ ರೂ.ಬಂದಿದ್ದರೆ, 2016-17 ನೇ ಅವಧಿಯಲ್ಲಿ 2.42 ಲಕ್ಷ ಕೋಟಿ ರೂ. ಆದಾಯ ಬಂದಿತ್ತು. ಇದನ್ನೂ ಓದಿ: 70 ರೂ. ಪೆಟ್ರೋಲ್ ನಲ್ಲಿ ಯಾರಿಗೆ ಎಷ್ಟು ಪಾಲು? ಬೇರೆ ರಾಷ್ಟ್ರಗಳಲ್ಲಿ ಎಷ್ಟು ದರವಿದೆ?

     

  • ಐಟಿ ಕಂಪೆನಿಗಳಲ್ಲಿ ಭಾರೀ ವೇತನ ಏರಿಕೆ ಬೇಡ: ನಾರಾಯಣ ಮೂರ್ತಿ

    ಐಟಿ ಕಂಪೆನಿಗಳಲ್ಲಿ ಭಾರೀ ವೇತನ ಏರಿಕೆ ಬೇಡ: ನಾರಾಯಣ ಮೂರ್ತಿ

    ಮುಂಬೈ: ಸಾಫ್ಟ್ ವೇರ್  ಕಂಪೆನಿಗಳಲ್ಲಿ ಹಿರಿಯ ಅಧಿಕಾರಿಗಳು ತಮಗೆ ತಾವೇ ಭಾರೀ ವೇತನವನ್ನು ಏರಿಕೆ ಮಾಡುವುದು ಸರಿಯಲ್ಲ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ.

    ಬಾಂಬೆ ಐಐಟಿಯಲ್ಲಿ ಮಾತನಾಡಿದ ಅವರು, ಐಟಿ ಕಂಪನಿಗಳಲ್ಲಿ ಕಿರಿಯರು ಮತ್ತು ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ವೇತನ ಏರಿಕೆ ನಿರಾಕರಿಸುತ್ತಿರುವ ಬೆಳವಣಿಗೆ ಕಳವಳಕಾರಿಯಾಗಿದೆ. ಹಿರಿಯ ಅಧಿಕಾರಿಗಳು ಕಿರಿಯರಿಗಾಗಿ ಸಂಬಳ  ಏರಿಕೆಯನ್ನು ತ್ಯಾಗ ಮಾಡಬೇಕು ಎಂದು ತಿಳಿಸಿದರು.

    ದೊಡ್ಡ ಹುದ್ದೆಯಲ್ಲಿ ಇರುವವರು ಭಾರೀ ವೇತನ ಏರಿಕೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಹೆಚ್ಚಿನ ಜನರು ಬಡತನ ಅನುಭವಿಸುತ್ತಿರುವಾಗ ಈ ರೀತಿ ವೇತನ ಏರಿಕೆಯನ್ನು ಬಂಡವಾಳ ಶಾಹಿ ಒಪ್ಪುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ನಾರಾಯಣ ಮೂರ್ತಿ ಅವರು ಹಿರಿಯ ಅಧಿಕಾರಿಗಳ ಸಂಬಳ ಕುರಿತಾಗಿ ಪ್ರತಿಕ್ರಿಯಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಹೊಸದಾಗಿ ಸೇರ್ಪಡೆಯಾಗಿರುವ ಯುವ ಉದ್ಯೋಗಿಗಳನ್ನು ಮನೆಗೆ ಕಳುಹಿಸುವುದು ಸರಿಯಾದ ನಿರ್ಧಾರ ಅಲ್ಲ. ಇದರ ಬದಲಾಗಿ ಹಿರಿಯ ಮ್ಯಾನೇಜ್‍ಮೆಂಟ್ ಹಂತದಲ್ಲಿರುವ ಉದ್ಯೋಗಿಗಳ ಸಂಬಳವನ್ನು ಕಡಿತಗೊಳಿಸುವುದು ಉತ್ತಮ ಎಂದು ಸಲಹೆ ನೀಡಿದ್ದರು. ಇದನ್ನೂ ಓದಿ: ಅಮೆರಿಕಕ್ಕೆ ಭಾರತೀಯ ಟೆಕ್ಕಿಗಳನ್ನು ಕಳುಹಿಸಬೇಕೇ:ಇನ್ಫಿ ನಾರಾಯಣ ಮೂರ್ತಿ ಹೇಳಿದ್ದು ಹೀಗೆ

    ನಮ್ಮ ಇನ್ಫೋಸಿಸ್ ಉದಾಹರಣೆ ತೆಗೆದುಕೊಳ್ಳಿ. 2011ರ ವೇಳೆ ಸಾಫ್ಟ್ ವೇರ್ ಉದ್ಯಮಕ್ಕೆ ಸಂಕಷ್ಟ ಎದುರಾಗಿತ್ತು. ಈ ವೇಳೆ ಹಿರಿಯ ಹಂತದ ಮ್ಯಾನೇಜ್‍ಮೆಂಟ್ ನಲ್ಲಿರುವ ವ್ಯಕ್ತಿಗಳೆಲ್ಲ ಸಭೆ ನಡೆಸಿದೆವು. ಸಭೆಯಲ್ಲಿ ಸಂಬಳವನ್ನು ಕಡಿತಗೊಳಿಸುವ ತೀರ್ಮಾನವನ್ನು ಮಾಡಿದೆವು. ಯುವ ಟೆಕ್ಕಿಗಳಿಗೆ ಜಾಬ್ ನೀಡಲು ಮತ್ತು ಅವರನ್ನು ರಕ್ಷಿಸಲು ಹಿರಿಯ ಸಿಬ್ಬಂದಿ ಈ ತ್ಯಾಗದ ನಿರ್ಧಾರವನ್ನು ಈಗ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.

    ಸುಮ್ಮನೆ ಉದ್ಯೋಗಿಯನ್ನು ಮನೆಗೆ ಕಳುಹಿಸುವುದು ಸರಿಯಾದ ನಿರ್ಧಾರ ಅಲ್ಲ. ಯಾಕೆಂದರೆ ಅವರನ್ನು ನಂಬಿಕೊಂಡ ಕುಟುಂಬವು ಇದೆ. 2008, 2011ರಲ್ಲಿ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಹೀಗಾಗಿ ಸಮಸ್ಯೆ ನಮಗೆ ಹೊಸದೆನಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಸೃಷ್ಟಿಯಾಗದೇ ಇರಲು ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ನಾರಾಯಣ ಮೂರ್ತಿ ತಿಳಿಸಿದ್ದರು. ಇದನ್ನೂ ಓದಿ: ಇನ್ಫಿ ಸಿಒಒಗೆ ಭಾರೀ ಪ್ರಮಾಣದ ಸಂಬಳ ಏರಿಸಿದ್ದಕ್ಕೆ ನಾರಾಯಣ ಮೂರ್ತಿ ಆಕ್ಷೇಪ

  • ಲಾರಿ ಮುಷ್ಕರ ನಿಂತಿತು, ಅಕ್ಕಿ, ಬೆಳೆ, ಸಕ್ಕರೆ ದರ ದಿಢೀರ್ ಏರಿಕೆ ಆಯ್ತು!

    ಲಾರಿ ಮುಷ್ಕರ ನಿಂತಿತು, ಅಕ್ಕಿ, ಬೆಳೆ, ಸಕ್ಕರೆ ದರ ದಿಢೀರ್ ಏರಿಕೆ ಆಯ್ತು!

    ಬೆಂಗಳೂರು: ಲಾರಿ ಮುಷ್ಕರ ನಿಂತಿದ್ರೂ ಅದರ ಬಿಸಿಮಾತ್ರ ಆರಿಲ್ಲ. ಲಾರಿ ಮುಷ್ಕರದಿಂದ ಸ್ಥಗಿತಗೊಂಡಿದ್ದ ಎಪಿಎಂಸಿಗಳು ಇನ್ನು ಚೇತರಿಕೆ ಕಂಡಿಲ್ಲ. ಇದ್ರ ಎಫೆಕ್ಟ್, ದರ ಏರಿಕೆಯ ಬಿಸಿ. ಮಾರ್ಕೆಟ್‍ನಲ್ಲಿ ಅಕ್ಕಿ ಮತ್ತು ಬೇಳೆ ದಾಸ್ತಾನು ಕೊರತೆಯಿಂದ ದರ ಏಕಾಏಕಿ ದರ ಗಗನಕ್ಕೇರಿದೆ.

    ಲಾರಿ ಮುಷ್ಕರ ಹತ್ತು ದಿನಗಳ ಕಾಲ ನಡೆದು ಮೊನ್ನೆ ಮುಷ್ಕರ ಅಂತ್ಯಗೊಂಡಿದೆ. ಆದ್ರೆ ಮುಷ್ಕರದ ಎಫೆಕ್ಟ್ ಗೆ ಎಪಿಎಂಸಿ ಮಕಾಡೆ ಮಲಗಿಕೊಂಡಿದೆ. ಅಕ್ಕಿ ಬೇಳೆ ಕಾಳುಗಳು ಬರೋಬ್ಬರಿ ಕೆಜಿಗೆ ಹತ್ತು ರೂಪಾಯಿ ಏರಿಕೆ ಕಂಡಿದೆ. ಇನ್ನು ಒಂದು ತಿಂಗಳ ಕಾಲ ಮಾರ್ಕೆಟ್‍ನಲ್ಲಿ ಈ ದರ ಏರಿಕೆಯ ಬಿಸಿ ಇರುತ್ತೆ ಅನ್ನೋದು ವ್ಯಾಪಾರಿಗಳ ಲೆಕ್ಕಾಚಾರ.

    ಅಕ್ಕಿ ದರ ಎಷ್ಟಾಯ್ತು? ರಾ ರೈಸ್ ಕೋಲಂ ಕೆಜಿಗೆ 60 ರೂಪಾಯಿ ಇದ್ದ ದರ 70 ರೂ.ಗೆ ಏರಿಕೆ ಕಂಡಿದೆ. ಇನ್ನು ಸೋನಾಮಸೂರಿ 52 ರೂಪಾಯಿಯಿಂದ 58 ರೂ.ಗೆ, ಸ್ಟೀಮ್ ಕೋಲಂ 45 ರಿಂದ 54 ರೂಪಾಯಿಗೆ, ಸ್ಟೀಮ್ ಸೊನಾಂ 32 ರೂಪಾಯಿಂದ 43 ರೂ.ಗೆ, ಇಡ್ಲಿ ಅಕ್ಕಿ 36 ರೂಪಾಯಿಯಿಂದ 40 ರೂಪಾಯಿಗೆ ಹಾಗೂ ದೋಸೆ ರೈಸ್ 35 ರೂಪಾಯಿಯಿಂದ 40 ರೂಪಾಯಿಗೆ ಏರಿಕೆ ಕಂಡಿದೆ.

    ಬೆಳೆ ದರ ಎಷ್ಟಾಯ್ತು? ತೊಗರಿ 70 ರೂಪಾಯಿಯಿಂದ 90 ರೂಗೆ, ಉದ್ದಿನಬೇಳೆ 110 ರೂಪಾಯಿಯಿಂದ 120 ರೂ.ಗೆ ಹೆಸರುಬೇಳೆ 80 ರೂಪಾಯಿಯಿಂದ 90 ರೂಪಾಯಿಗೆ ಜಂಪ್ ಆಗಿದೆ. ಹುರುಳಿಕಾಳು 60 ರೂಪಾಯಿಯಿಂದ 70, ಅಲಸಂದೆ 90 ರೂಪಾಯಿಯಿಂದ 100 ರೂ. ಹಾಗೂ ಗೋಧಿ 30 ರೂಪಾಯಿಯಿಂದ 35 ರೂ.ಗೆ ಏರಿಕೆಯಾಗಿದೆ. ಇನ್ನು ಸಕ್ಕರೆ ಕೂಡ ಗ್ರಾಹಕರ ಪಾಲಿಗೆ ಕಹಿಯಾಗಿದ್ದು ಮೂರು ರೂಪಾಯಿ ಏರಿಕೆಯಾಗಿದೆ.

    ಒಟ್ಟಾರೆ ಬೇಸಗೆಯ ಬಿಸಿ ಜನ್ರಿಗೆ ತಟ್ಟಿ ತಟ್ಟಿ ಜನ ಹೈರಾಣಗಿದ್ದರೆ, ಈಗ ಅಕ್ಕಿ ಬೇಳೆ ಕಾಳು ದರ ಏರಿಕೆ ಕಂಡಿದ್ದು ಮತ್ತೆ ಕಷ್ಟವಾಗಿದೆ.

    https://www.youtube.com/watch?v=qd1QRjmx5jI