Tag: hike

  • ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಮೇಲೆ ಮಸಿ ಎರಚಿದ ಕೈ ಕಾರ್ಯಕರ್ತರು

    ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಮೇಲೆ ಮಸಿ ಎರಚಿದ ಕೈ ಕಾರ್ಯಕರ್ತರು

    ಭುವನೇಶ್ವರ್: ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಸಿ ಎರಚಿದ ಘಟನೆ ಒಡಿಶಾದಲ್ಲಿ ನಡೆದಿದೆ.

    ಒಡಿಶಾದ ಪುರಿಯ ಮಾರ್ಕೆಟ್ ಸ್ಕ್ವೇರ್ ಮೂಲಕ ಹಾದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಕೇಂದ್ರ ಸಚಿವರು ನಗರದ ಶ್ರೀಮಂದಿರದಲ್ಲಿ ತ್ರಿಮೂರ್ತಿಗಳ ದರ್ಶನ ಪಡೆದು ಹಿಂದಿರುಗುತ್ತಿದ್ದರು. ಈ ವೇಳೆ ಪೆಟ್ರೋಲ್, ಡೀಸೆಲ್ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವುದನ್ನು ಖಂಡಿಸಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‍ಎಸ್‍ಯುಐ) ಕಾರ್ಯಕರ್ತರು ಅವರ ವಾಹನಕ್ಕೆ ಕಪ್ಪು ಮಸಿ ಎಸೆದಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ

    ಈ ಕುರಿತು ಎನ್‍ಎಸ್‍ಯುಐ ಒಡಿಶಾ ಅಧ್ಯಕ್ಷ ಯಾಶೀರ್ ನವಾಜ್ ಮಾತನಾಡಿ, ಪ್ರತಿಯೊಂದು ಕುಟುಂಬವು ಹಣದುಬ್ಬರ ಮತ್ತು ಎಲ್‍ಪಿಜಿ ಸಿಲಿಂಡರ್‌ಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೊಚ್ಚಿಗೆದ್ದಿವೆ. ಕುಟುಂಬ ನಿರ್ವಹಣೆಯ ವೆಚ್ಚಗಳು ನಿರಂತರವಾಗಿ ಹೆಚ್ಚುತ್ತಿರುವಾಗ ಆದಾಯವು ಕುಂಠಿತವಾಗಿದೆ. ಬಿಜೆಪಿ ಇತರ ಸಂಬಂಧವಿಲ್ಲದ ವಿಷಯಗಳ ಮೂಲಕ ಜನಸಾಮಾನ್ಯರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಪರಿಸರವಾದಿಗಳ ತೀವ್ರ ವಿರೋಧ

    ಎನ್‍ಎಸ್‍ಯುಐ ಕಾರ್ಯಕರ್ತರು ಒಡಿಶಾಗೆ ಭೇಟಿ ನೀಡುವ ಯಾವುದೇ ಕೇಂದ್ರ ಸಚಿವರನ್ನು ಗುರಿಯಾಗಿಸಿಕೊಂಡಿದ್ದಾರೆ. ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ವಿರುದ್ಧ ಪ್ರತಿಭಟಿಸುತ್ತಾರೆ ಎಂದು ಹೇಳಿದರು.

    ಇದಕ್ಕೂ ಮುನ್ನ, ಏರುತ್ತಿರುವ ಹಣದುಬ್ಬರದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರ ಮೇಲೆಯೂ ಸಹ ಕಾಂಗ್ರೆಸ್‍ನ ವಿದ್ಯಾರ್ಥಿ ಘಟಕದ ಕಾರ್ಯಕರ್ತರು ಕಪ್ಪು ಮಸಿ ಎಸೆದು, ಕಪ್ಪು ಬಾವುಟವನ್ನು ಎಸೆದಿದ್ದರು.

  • ಸತತ 2ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

    ಸತತ 2ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

    ನವದೆಹಲಿ: ಪೆಟ್ರೋಲ್, ಡೀಸೆಲ್ ಪ್ರತಿ ಲೀಟರ್‌ಗೆ 80 ಪೈಸೆ ಹೆಚ್ಚಳವಾಗಿದೆ. ಸತತ ಎರಡನೇ ದಿನವೂ 80 ಪೈಸೆ ಹೆಚ್ಚಳ ಆಗಿದ್ದು ವಾಹನ ಸವಾರರಿಗೆ ಬೆಲೆ  ಏರಿಕೆ ಬಿಸಿ ಮುಟ್ಟಿದೆ.

    ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 102.26 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 86.58 ರೂಪಾಯಿ ದಾಖಲಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 111.67 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.85 ರೂಪಾಯಿ ಇದೆ. ಅದೇ ರೀತಿ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 102.91 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 92.95 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 106.34 ಮತ್ತು ಡೀಸೆಲ್ 91.42, ಚೆನ್ನೈನಲ್ಲಿ ಪೆಟ್ರೋಲ್ ದರ 102.91, ಡೀಸೆಲ್ ದರ 92.95 ರೂಪಾಯಿಗೆ ಏರಿಕೆಯಾಗಿದೆ.

    ನವೆಂಬರ್ 2ರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರಲಿಲ್ಲ. ಪಂಚ ರಾಜ್ಯಗಳ ಚುನಾವಣೆ ಬಳಿಕ ದರ ಏರಿಕೆಯ ನಿರೀಕ್ಷೆ ಇತ್ತು. ಕಳೆದ ವರ್ಷ ನವೆಂಬರ್‍ನಿಂದ ಈವರೆಗೂ ಕಚ್ಚಾ ತೈಲ ದರದಲ್ಲಿ ಶೇ. 25ರಷ್ಟು ಏರಿಕೆಯಾಗಿದೆ. ರಷ್ಯಾ, ಉಕ್ರೇನ್ ನಡುವಿನ ಸಂಘರ್ಷದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಬಾರಿ ಏರಿಕೆ ಕಂಡಿದ್ದು ಈಗ ಭಾರತದ ಮೇಲೂ ಪರಿಣಾಮ ಬಿದ್ದಿದೆ.

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತದೆ.

  • 137 ದಿನಗಳ ನಂತರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ

    137 ದಿನಗಳ ನಂತರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ

    ನವದೆಹಲಿ: 137 ದಿನಗಳ ನಂತರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬಾರಿ ಏರಿಕೆ ಕಂಡಿದೆ. ಮಾರ್ಚ್‌ 22ರ ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ 80 ಪೈಸೆ ಹೆಚ್ಚಳವಾಗಿದೆ.

    ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್‍ಗೆ 101.42 ಮತ್ತು ಡೀಸೆಲ್‍ಗೆ 85.80 ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.21, ಪ್ರತಿ ಲೀಟರ್ ಡೀಸೆಲ್‍ಗೆ 87.47, ಮುಂಬೈನಲ್ಲಿ ಲೀಟರ್ ಪೆಟ್ರೋಲ್ 110.78, ಡೀಸೆಲ್ 94.94, ಕೋಲ್ಕತ್ತಾದಲ್ಲಿ ಪೆಟ್ರೋಲ್ 102.16 ಮತ್ತು ಡೀಸೆಲ್ 90.62, ಚೆನ್ನೈನಲ್ಲಿ ಪೆಟ್ರೋಲ್ ದರ 102.16, ಡೀಸೆಲ್ ದರ 92.19 ರೂಪಾಯಿಗೆ ಏರಿಕೆಯಾಗಿದೆ. ಇದನ್ನೂ ಓದಿ: ಇದೆ ಮೊದಲ ಬಾರಿ ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ

    ನವೆಂಬರ್ 2ರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರಲಿಲ್ಲ. ಪಂಚ ರಾಜ್ಯಗಳ ಚುನಾವಣೆ ಬಳಿಕ ದರ ಏರಿಕೆಯ ನಿರೀಕ್ಷೆ ಇತ್ತು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ಕಳೆದ ವರ್ಷ ನವೆಂಬರ್‌ನಿಂದ ಈವರೆಗೂ ಕಚ್ಚಾ ತೈಲ ದರದಲ್ಲಿ ಶೇ. 25ರಷ್ಟು ಏರಿಕೆಯಾಗಿದೆ. ರಷ್ಯಾ, ಉಕ್ರೇನ್ ನಡುವಿನ ಸಂಘರ್ಷದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಬಾರಿ ಏರಿಕೆ ಕಂಡಿದ್ದು ಈಗ ಭಾರತದ ಮೇಲೂ ಪರಿಣಾಮ ಬಿದ್ದಿದೆ.

  • 18 ವರ್ಷದಲ್ಲಿಯೇ ಮೊದಲು- ಫೇಸ್‍ಬುಕ್‍ಗೆ ಒಂದೇ ದಿನ 16 ಲಕ್ಷ ಕೋಟಿ ರೂ. ನಷ್ಟ

    18 ವರ್ಷದಲ್ಲಿಯೇ ಮೊದಲು- ಫೇಸ್‍ಬುಕ್‍ಗೆ ಒಂದೇ ದಿನ 16 ಲಕ್ಷ ಕೋಟಿ ರೂ. ನಷ್ಟ

    ನ್ಯೂಯಾರ್ಕ್: 18 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಫೇಸ್‍ಬುಕ್ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

    3 ತಿಂಗಳ ಅವಧಿಯಲ್ಲಿ ಬಳಕೆದಾರರ ಸಂಖ್ಯೆ 192.9 ಕೋಟಿಗೆ ಕುಸಿದಿದ್ದು, ಈ ಹಿಂದಿನ ತ್ರೈಮಾಸಿಕ ಅವಧಿಯಲ್ಲಿ 193 ಕೋಟಿಯಷ್ಟು ಬಳಕೆದಾರರಿದ್ದರು ಎಂದು ಫೇಸ್‍ಬುಕ್ ಸಂಸ್ಥೆಯ ಮಾತೃಸಂಸ್ಥೆ ಮೆಟಾ ಬಹಿರಂಗಪಡಿಸಿದೆ.

    ಮೇಟಾ ಹಣಕಾಸು ಅಧಿಕಾರಿ ಡೇವಿಡ್ ವೆಹ್ನಾರ್ ಹೇಳವ ಪ್ರಕಾರ, ಭಾರತದಲ್ಲಿ ಡೇಟಾ ಪ್ಯಾಕೇಜ್ ಬೆಲೆಯಲ್ಲಿನ ಹೆಚ್ಚಳವಾಗಿದೆ. ಹೀಗಾಗಿ ಒಟ್ಟಾರೆಯಾಗಿ ದೇಶದಾದ್ಯಂತ ಫೇಸ್‍ಬುಕ್ ಬಳಕೆದಾರರ ಸಂಖ್ಯೆಯು ಕೂಡಾ ಕಡಿಮೆಯಾಗುತ್ತಾ ಬರುತ್ತಿದೆ. ನಾವು ಈ ಅಂಶಗಳ ಜೊತೆಗ ಸ್ಪರ್ಧೆಯನ್ನು ಮಾಡಬೇಕಾಗಿದೆ. ಈ ಬೆಳವಣೆಗೆ ಹೊಸ ಬಳಕೆದಾರರ ಮೇಲೆ ನೆಗಿಟಿವ್ ಪ್ರಭಾವಬೀರುತ್ತದೆ ಎಂದು ಹೇಳಿದ್ದಾರೆ.

    ಏರ್ಟೆಲ್, ರಿಲಯನ್ಸ್ ಜಿಯೋ, ವೊಡಾಫೋನ್ ನೆಟ್‍ವರ್ಕ್‍ಗಳು ತಮ್ಮ ಡಾಟಾ ಪ್ಲ್ಯಾನ್ ಬೆಲೆಯಲ್ಲಿ ಹೆಚ್ಚಳ ಮಾಡಿವೆ. ಹೀಗಾಗಿ ಕೆಲವು ಬಳಕೆ ದಾರರ ಮೇಲೆ ಡಾಟಾ ಪ್ಲ್ಯಾನ್ ಬೆಲೆ ಹೆಚ್ಚಳದ ಹೊಡೆತ ಬೀಳುತ್ತಿದೆ ಎನ್ನಲಾಗಿದೆ.

    ಮೆಟಾ ಸಂಸ್ಥೆ ವರ್ಚುವಲ್ ರಿಯಾಲಿಟಿ ಮೇಲೆ ಹೆಚ್ಚಿನ ಹೂಡಿಕೆ ಮಾಡಿದೆ. ಟಿಕ್‍ಟಾಕ್ ಮತ್ತು ಯೂಟ್ಯೂಬ್‍ನಿಂದ ಹೆಚ್ಚಿದ ಸ್ಪರ್ಧೆ ನೀಡುತ್ತಿದೆ. ಇದರಿಂದ ಫೇಸ್‍ಬುಕ್ ಜಾಹೀರಾತುಗಳು ಕಡಿಮೆಯಾಗಬಹುದಾದ ಸಾಧ್ಯತೆಯಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಚೀನಾ ಒಲಿಂಪಿಕ್ಸ್‌ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ

    ಬಳಕೆದಾರರ ಸಂಖ್ಯೆ ಕಡಿಮೆಯಾಗಿದ ವಿಚಾರ ತಿಳಿಸುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಮೆಟಾ ಷೇರುಗಳು ಶೇ.23ರಷ್ಟು ಕುಸಿಸಿದ್ದು, ಕಂಪನಿಗೆ ಒಂದೇ ದಿನದಲ್ಲಿ 16 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಭಾರತದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಕೆಟ್ಟಹೆಸರು ತರುತ್ತಿವೆ. ಆದರೆ ಇವನ್ನು ನಕಲಿ ಸುದ್ದಿಗಳು ಎಂದು ಗುರುತಿಸಿ ತೆಗೆದುಹಾಕುವಂತೆ ಹೇಳಿದರೂ ಅದನ್ನು ಕಡೆಗಣಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಗೂಗಲ್, ಟ್ವೀಟರ್, ಫೇಸ್‍ಬುಕ್ ಹಾಗೂ ಇತರ ಕೆಲವು ಸಾಮಾಜಿಕ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಕಾರು ಗ್ಯಾರೇಜ್ ಧಗಧಗ – 3 ಬೈಕ್, 2 ಕಾರು ಸುಟ್ಟು ಕರಕಲು

    ಅಲ್ಲದೆ, ಸುಳ್ಳು ಸುದ್ದಿ ತಡೆಯದಿದ್ದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ. ಈ ಸಂಬಂಧ ಸೋಮವಾರ ಈ ಸಾಮಾಜಿಕ ಮಾಧ್ಯಮಗಳು ಹಾಗೂ ಜಾಲತಾಣಗಳ ಅಧಿಕಾರಿಗಳ ಜೊತೆ ವರ್ಚುವಲ್ ಸಭೆ ನಡೆಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು, ಕಂಪನಿಗಳ ನಿರ್ಲಕ್ಷ್ಯವನ್ನು ಬಲವಾಗಿ ಟೀಕಿಸಿ, ಸುಳ್ಳು ಸುದ್ದಿಗಳನ್ನು ನಿಯಂತ್ರಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

  • ರಾಯರ ಆರಾಧನೆ- ಪಾದಯಾತ್ರೆ ಮೂಲಕ ಹರಿದು ಬಂತು ಭಕ್ತರ ದಂಡು

    ರಾಯರ ಆರಾಧನೆ- ಪಾದಯಾತ್ರೆ ಮೂಲಕ ಹರಿದು ಬಂತು ಭಕ್ತರ ದಂಡು

    – ರಾಯರು ಸಶರೀರವಾಗಿ ವೃಂದಾವನಸ್ಥರಾಗಿ ಇಂದಿಗೆ 350 ವರ್ಷ

    ರಾಯಚೂರು: ರಾಯರ ಆರಾಧನೆಗೆ ಪಾದಯಾತ್ರೆ ಮೂಲಕ ಭಕ್ತರ ದಂಡು ಹರಿದು ಬರುತ್ತಿದೆ. ಮಂತ್ರಾಲಯದಲ್ಲಿ ನಡೆಯುತ್ತಿರುವ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಏಳುದಿನಗಳ ಆರಾಧನಾ ಮಹೋತ್ಸವದಲ್ಲಿ ಇಂದು ಮುಖ್ಯವಾದ ದಿನ. ರಾಯರು ಸಶರೀರವಾಗಿ ವೃಂದಾವನಸ್ಥರಾಗಿ ಇಂದಿಗೆ 350 ವರ್ಷ ಸಂದಿವೆ.

    ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಹಿನ್ನೆಲೆ ನಾನಾ ಕಡೆಗಳಿಂದ ಭಕ್ತರು ಬರಿಗಾಲಲ್ಲೆ ಪಾದಯಾತ್ರೆ ಮಾಡುತ್ತಿದ್ದಾರೆ. ಬಳ್ಳಾರಿ, ಕೊಪ್ಪಳ, ಯಾದಗಿರಿ, ರಾಯಚೂರು ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಮಂತ್ರಾಲಯಕ್ಕೆ ಪಾದಯಾತ್ರೆ ಬರುತ್ತಿದ್ದಾರೆ. ಇದನ್ನೂ ಓದಿ: ಬಹುಕಾಲದ ಗೆಳತಿ ಜೊತೆ ನಟ ಕಾರ್ತಿಕೇಯ ನಿಶ್ಚಿತಾರ್ಥ – ಫೋಟೋ ವೈರಲ್

    ಭಜನಾ ಮಂಡಳಿಗಳು, ಭಕ್ತರ ತಂಡಗಳು ಪ್ರತೀವರ್ಷ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ರಾಯರ ಮಠವನ್ನು ಪಾದಯಾತ್ರೆ ಮೂಲಕ ತಲುಪುತ್ತವೆ. ಕಳೆದ ವರ್ಷ ಕೊರೊನಾ ಲಾಕ್‍ಡೌನ್ ಹಿನ್ನೆಲೆ ಆರಾಧನಾ ಮಹೋತ್ಸವವನ್ನ ಮಠದ ಸಿಬ್ಬಂದಿ ಅಷ್ಟೆ ಸರಳವಾಗಿ ಆಚರಿಸಿದ್ದರು. ಈ ಬಾರಿ ಆಂಧ್ರಪ್ರದೇಶದಲ್ಲಿ ಲಾಕ್‍ಡೌನ್ ಸಡಿಲಿಕೆ ಇರುವುದರಿಂದ ವಿಜೃಂಭಣೆಯಿಂದ ರಾಯರ 350 ನೇ ಆರಾಧನಾ ಮಹೋತ್ಸವ ಆಚರಿಸಲಾಗುತ್ತಿದೆ. ಹೀಗಾಗಿ ವಿವಿಧೆಡೆಯಿಂದ ಭಕ್ತರು ಪಾದಯಾತ್ರೆ ಮೂಲಕ ಬರುತ್ತಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ, ದೇಹ ಇಲ್ಲೇ ಮಣ್ಣಾದರೂ ಸೈ: ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್

    ಪ್ರತೀವರ್ಷದಂತೆ ತಿರುಮಲ ತಿರುಪತಿ ದೇವಾಲಯದಿಂದ ಮಂತ್ರಾಲಯ ಮಠಕ್ಕೆ ವೆಂಕಟೇಶ್ವರ ಸ್ವಾಮಿ ಶೇಷವಸ್ತ್ರವನ್ನ ತರಲಾಗಿದೆ. ವಾದ್ಯಗೋಷ್ಠಿಯೊಂದಿಗೆ ತಿರುಮಲ ತಿರುಪತಿ ದೇವಾಲಯದ ಅಧಿಕಾರಿಗಳನ್ನ ಶ್ರೀ ಮಠದ ಶ್ರೀಗಳು ಹಾಗೂ ಆಡಳಿತ ಮಂಡಳಿ ಬರಮಾಡಿಕೊಂಡಿತು. ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಾಯರಿಗೆ ಶೇಷವಸ್ತ್ರ ಸಮರ್ಪಣೆ ಮಾಡಿದರು. ಇದನ್ನೂ ಓದಿ: ಯಾರ ಹಂಗಿನಲ್ಲೂ ಇರದ ಸರ್ಕಾರ ಕೊಡಿ: ಎಚ್.ಡಿ ಕುಮಾರಸ್ವಾಮಿ

    350 ನೇ ಆರಾಧನಾ ಮಹೋತ್ಸವ ಹಿನ್ನೆಲೆ ರಾಯರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ನಡೆಯಿತು. ಪಂಚಾಮೃತ ಅಭಿಷೇಕ, ಶೇಷವಸ್ತ್ರ ಸಮರ್ಪಣೆ ಬಳಿಕ ಚಿನ್ನದ ರಥೋತ್ಸವ ನಡೆಯಲಿದೆ. ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ನಡೆಯಲಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಲಿದ್ದಾರೆ.

  • ಕೊಬ್ಬರಿ ಬೆಲೆಯಲ್ಲಿ ಕೊಂಚ ಏರಿಕೆ- ರೈತರು ಫುಲ್ ಖುಷ್

    ಕೊಬ್ಬರಿ ಬೆಲೆಯಲ್ಲಿ ಕೊಂಚ ಏರಿಕೆ- ರೈತರು ಫುಲ್ ಖುಷ್

    ತುಮಕೂರು: ಹಲವು ತಿಂಗಳಿನಿಂದ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಸ್ಥಿರವಾಗಿದ್ದ ಕೊಬ್ಬರಿ ಬೆಲೆಯಲ್ಲಿ ಕೊಂಚ ಏರಿಕೆಯಾಗಿದ್ದು, ಕ್ವಿಂಟಲ್ ಕೊಬ್ಬರಿ ಬೆಲೆ 17 ಸಾವಿರ ರೂ. ಗಡಿ ದಾಟಿದೆ.

    ಕೆಲ ರವಾನೆದಾರರ ಪ್ರಕಾರ ಹೊರ ರಾಜ್ಯದಲ್ಲಿ ಕೊಬ್ಬರಿಗೆ ಬೇಡಿಕೆ ಬಂದಿರುವ ಕಾರಣ ಬೆಲೆಯಲ್ಲಿ ಕೊಂಚ ಬದಲಾವಣೆಯಾಗಿದೆ. ಅಗತ್ಯ ಪ್ರಮಾಣದಲ್ಲಿ ಪೂರೈಕೆ ಇಲ್ಲದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದಿದ್ದಾರೆ.

    ರೈತರು ಬಹು ದಿನಗಳಿಂದ ಬೆಲೆ ಏರಿಕೆಗೆ ಕಾಯುತ್ತಿದ್ದರು. ಆದರೆ ಕೆಲ ತಿಂಗಳಿಂದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಇದೀಗ 17 ಸಾವಿರ ರೂ.ಗೆ ತಲುಪಿರುವುದು ಕೋವಿಡ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ಕೊಂಚ ನೆಮ್ಮದಿ ನೀಡಿದೆ.

    ಹೊರ ರಾಜ್ಯಗಳಲ್ಲಿ ಕೊಬ್ಬರಿಗೆ ಬೇಡಿಕೆ ಹೆಚ್ಚಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ. ಕೋವಿಡ್ ಲಾಕ್‍ಡೌನ್ ಘೊಷಣೆಯಾಗುವ ಆತಂಕದಿಂದ ಅಗತ್ಯಕ್ಕಿಂತ ಹೆಚ್ಚಿನ ಕೊಬ್ಬರಿ ಅಮದು ಮಾಡಿಕೊಳ್ಳಲಾಗುತ್ತಿದೆ. ಎಣ್ಣೆ ಕಾಳುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿರುವುದರಿಂದ ಕೊಬ್ಬರಿ ಎಣ್ಣೆ ತಯಾರಿಕೆ, ಬಳಕೆ ಹೆಚ್ಚಿದೆ ಎನ್ನುತ್ತಾರೆ ರವಾನೆದಾರರು.

    ಕೆಲ ತಿಂಗಳಿನಿಂದ ಎಪಿಎಂಸಿಗೆ ಉಂಡೆ ಕೊಬ್ಬರಿ ಬರುತ್ತಿರುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಫಸಲು ಕಡಿಮೆ ಆಗಿರುವ ಬಗ್ಗೆ ರೈತರು ಮಾಹಿತಿ ನೀಡುತ್ತಿದ್ದು, ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಕಾರಣವಾಗಿದೆ ಎಂದಿದ್ದಾರೆ.

  • ಚಾಮರಾಜನಗರ To ದೆಹಲಿ ಪಾದಯಾತ್ರೆ ಆರಂಭಿಸಿದ ರೈತ

    ಚಾಮರಾಜನಗರ To ದೆಹಲಿ ಪಾದಯಾತ್ರೆ ಆರಂಭಿಸಿದ ರೈತ

    ಧಾರವಾಡ: ರೈತರೊಬ್ಬರು ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಗೆ ಪಾದಯಾತ್ರೆ ಆರಂಭಿಸಿದ್ದಾರೆ.

    ನಾಗರಾಜ್ ಎಂಬ ರೈತ ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ಚಾಮರಾಜನಗರದಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಸ್ಥಳಕ್ಕೆ ಹೋರಟಿದ್ದಾರೆ. ಕಳೆದ ಫೆಬ್ರವರಿಯಲ್ಲೇ ತಮ್ಮ ಪಾದಯಾತ್ರೆ ಆರಂಭಿಸಿದ್ದರು. ಆದರೆ ಕೊರೊನಾದಿಂದ ಲಾಕ್‍ಡೌನ್ ಆದ ಹಿನ್ನೆಲೆ ಪಾದಯಾತ್ರೆ ಮೊಟಕು ಗೊಳಿಸಿದ್ದರು. ಈಗ ಜುಲೈ 2 ರಿಂದ ನಮ್ಮ ಪಾದಯಾತ್ರೆ ಮತ್ತೆ ಆರಂಭಿಸಿದ ರೈತ ನಾಗರಾಜ್ ಅವರು 7 ಸಾವಿರ ಕಿಲೋ ಮೀಟರ್‍ವರೆಗೆ ಪಾದಯಾತ್ರೆ ಮಾಡಲಿದ್ದಾರೆ.

    ಇವತ್ತು ಧಾರವಾಡದ ಅಂಬೇಡ್ಕರ್ ವೃತ್ತಕ್ಕೆ ಭೇಟಿ ನೀಡಿದ ನಾಗರಾಜ್, ಕೇಂದ್ರ ಸರ್ಕಾರದ ಮೇಲೆ ಕಿಡಿಕಾರಿದರು. ಉತ್ತರ ಪ್ರದೇಶದಲ್ಲಿ ರೈತರು ಪ್ರತಿಭಟನೆ ಮಾಡಿದರೆ ಚರ್ಮ ಸುಲಿಯುತ್ತೆನೆ ಎಂದು ಯುಪಿ ಸರ್ಕಾರ ಹೇಳುತಿದ್ದು, ಇದಕ್ಕೆ ನಾವು ಜಗ್ಗಲ್ಲ ಎಂದು ನಾಗರಾಜ್ ಹೇಳಿದರು. ಪ್ರಧಾನಿ ಮೋದಿ ಹಾಗೂ ಅಮೀತ್ ಷಾಗೆ ಎಚ್ಚರಿಕೆ ನೀಡಿದ ಈ ರೈತ, ರೈತರ ಮೇಲೆ ಹಲ್ಲೆ ಮಾಡಿದ್ದೇ ಆದರೆ ಯುಪಿಗೆ ಇಡಿ ರೈತರು ನುಗ್ಗಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

  • ಬಿಎಂಟಿಸಿ ಪ್ರಯಾಣ ದರ ಏರಿಕೆ ಸದ್ಯಕ್ಕಿಲ್ಲ: ಸವದಿ

    ಬಿಎಂಟಿಸಿ ಪ್ರಯಾಣ ದರ ಏರಿಕೆ ಸದ್ಯಕ್ಕಿಲ್ಲ: ಸವದಿ

    ಬೆಂಗಳೂರು: ಸದ್ಯಕ್ಕೆ ಬಿಎಂಟಿಸಿ ಪ್ರಯಾಣ ದರ ಏರಿಕೆ ಮಾಡುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಸಾರಿಗೆ ಸಚಿವ ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎರಡು ತಿಂಗಳ ಹಿಂದೆ ನಾಲ್ಕೂ ನಿಗಮಗಳು ದರ ಹೆಚ್ಚಳದ ಪ್ರಸ್ತಾವನೆ ಸಲ್ಲಿಸಿತ್ತು. ಆವಾಗ ಬಿಎಂಟಿಸಿ ದರ ಹೆಚ್ಚಳ ಮಾಡಿಲ್ಲವೆಂದು ಶೇ.15 ರಷ್ಟು ದರ ಹೆಚ್ಚಿಸುವಂತೆ ಸಂಸ್ಥೆ ಕೋರಿದೆ. ಆದರೆ ಕೋವಿಡ್ ಪರಿಸ್ಥಿತಿ, ಲಾಕ್ ಡೌನ್ ನಿಂದ ನಾಗರಿಕರಿಗೆ ತುಂಬಾ ತೊಂದರೆಯಾಗಿದೆ. ಸರ್ಕಾರದ ಸಾರಿಗೆ ಬಳಸುವುದು ಬಡ ಮಧ್ಯಮವರ್ಗದ ಜನತೆಯಾದ್ದರಿಂದ, ಸಂಕಷ್ಟದಲ್ಲಿರುವ ಜನರಿಗೆ ಇನ್ನಷ್ಟು ತೊಂದರೆ ಕೊಡುವ ಕೆಲಸ ಸರ್ಕಾರ ಮಾಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಾಲಕ್ಕೆ ಶಾಂತಿನಗರ ಟಿಟಿಎಂಸಿ ಅಡಮಾನ – ಪ್ರತಿ ತಿಂಗಳು ಬಿಎಂಟಿಸಿ ಪಾವತಿಸುತ್ತಿದೆ 1.04 ಕೋಟಿ ಬಡ್ಡಿ

    ಲಾಕ್‍ಡೌನ್ ಮುಗಿದ ಬಳಿಕ ಹಂತ ಹಂತವಾಗಿ ಬಸ್ ಕಾರ್ಯಾಚರಣೆ ಆರಂಭಿಸಲಾಗುವುದು. ಸಂಸ್ಥೆಯ ಸಿಬ್ಬಂದಿಗೆ ಲಸಿಕೆ ಕೊಡುವ ಕಾರ್ಯ ಆರಂಭವಾಗಿದೆ. ಎರಡೂ ಡೋಸ್ ಪಡೆದವರನ್ನು ಮಾತ್ರ ಕರ್ತವ್ಯಕ್ಕೆ ಬಳಸಲಾಗುವುದು ಎಂದು ಹೇಳಿದರು.

    ಲಾಕ್‍ಡೌನ್‍ನಿಂದ ಸಂಸ್ಥೆ ಸಾಕಷ್ಟು ನಷ್ಟ ಅನುಭವಿಸಿದೆ, ಹಂತ ಹಂತವಾಗಿ ಸರ್ಕಾರದ ನೆರವು ಪಡೆದು ಸಾರಿಗೆ ಸಂಸ್ಥೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡಲಾಗುವುದು ಎಂದು ಲಕ್ಷ್ಮಣ ಸವದಿ ತಿಳಿಸಿದರು.

  • ಪಂಚಮಸಾಲಿ, ಕುರುಬ ಬೆನ್ನಲ್ಲೆ ಕಾಡುಗೊಲ್ಲ ಸಮುದಾಯ ಪಾದಯಾತ್ರೆ – ಸರ್ಕಾರಕ್ಕೆ ಎಚ್ಚರಿಕೆ

    ಪಂಚಮಸಾಲಿ, ಕುರುಬ ಬೆನ್ನಲ್ಲೆ ಕಾಡುಗೊಲ್ಲ ಸಮುದಾಯ ಪಾದಯಾತ್ರೆ – ಸರ್ಕಾರಕ್ಕೆ ಎಚ್ಚರಿಕೆ

    ಚಿತ್ರದುರ್ಗ: ಪಂಚಮಸಾಲಿ ಹಾಗೂ ಕುರುಬ ಸಮುದಾಯಗಳ ಪಾದಯಾತ್ರೆ ಬೆನ್ನಲ್ಲೆ ಸರ್ಕಾರದ ವಿರುದ್ಧ ಮತ್ತೊಂದು ಸಮುದಾಯದ ಪಾದಾಯಾತ್ರೆಗೆ ಸಿದ್ಧತೆ ನಡೆದಿದೆ. ಶಿರಾ ಉಪ ಚುನಾವಣೆ ವೇಳೆ ಘೋಷಿಸಿದ ಕಾಡುಗೊಲ್ಲ ಅಭಿವೃದ್ಧಿ ನಿಗಮ ಕೇವಲ ಚುನಾವಣಾ ಗಿಮಿಕ್ ಎನಿಸಿದೆ ಎಂದು ಆಕ್ರೋಶಗೊಂಡಿರುವ ಆ ಸಮುದಾಯದ ನಾಯಕರು ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ.

    ಶಿರಾ ಉಪ ಚುನಾವಣೆ ವೇಳೆ ಕಾಡುಗೊಲ್ಲ ಅಭಿವೃದ್ಧಿ ನಿಗಮ ಘೋಷಿಸಿ ನಾಲ್ಕು ತಿಂಗಳುಗಳೇ ಕಳೆದರೂ ಸಹ ಈ ನಿಗಮಕ್ಕೆ ಈವರೆಗೆ ಅಧ್ಯಕ್ಷರು ನೇಮಕವಾಗಿಲ್ಲ. ಇದಕ್ಕಿಂತ ತಡವಾಗಿ ಘೋಷಣೆಯಾದ ಎಲ್ಲಾ ನಿಗಮಗಳಿಗೆ ಅಧ್ಯಕ್ಷರ ಆಯ್ಕೆ ಸೇರಿದಂತೆ ಹಣವನ್ನು ಬಿಡುಗಡೆ ಮಾಡಿ, ನಿಗಮಗಳು ಸಮುದಾಯದ ಅಭಿವೃದ್ಧಿಗೆ ಚುರುಕಾಗಿ ಕೆಲಸ ಮಾಡುತ್ತಿವೆ. ಆದರೆ ಇತರೆ ನಿಗಮಗಳಿಗಿಂತ ಮುಂಚೆಯೇ ಘೋಷಣೆಯಾದ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಮಾತ್ರ ಈ ಬಿಜೆಪಿ ಸರ್ಕಾರ ನಯಾಪೈಸೆ ಹಣ ಬಿಡಗಡೆ ಮಾಡಿಲ್ಲ. ಬಿಜೆಪಿ ಸರ್ಕಾರ ಹಿಂದುಳಿದ ಸಮುದಾಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ಮುಖಂಡ ಶಿವುಯಾದವ್, ಸಮುದಾಯದ ಹೋರಾಟಗಾರರು ಹಾಗೂ ಮಠಾಧೀಶರೊಂದಿಗೆ ಸಭೆ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಕಾಡುಗೊಲ್ಲ ಸಮುದಾಯದಿಂದಲೂ ಪಾದಯಾತ್ರೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

    ಶಿರಾ ಚುನಾವಣೆ ವೇಳೆ ಭಾರೀ ಭರವಸೆ ನೀಡಿ ಘೋಷಿಸಲ್ಪಟ್ಟಿದ್ದ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಕಾರ್ಯಾರಂಭ ವಿಳಂಬವಾಗಿರುವ ಬಗ್ಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪ್ರತಿಕ್ರಿಯಿಸಿರುವ ಶಿರಾ ಕ್ಷೇತ್ರದ ರಾಜೇಶ್ ಗೌಡ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕಾಡುಗೊಲ್ಲ ಸಮುದಾಯದಲ್ಲಿ ಅಧ್ಯಕ್ಷ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಹೀಗಾಗಿ ನಿಗಮಕ್ಕೆ ಈವರೆಗೆ ಯಾವುದೇ ಅನುದಾನ ನೀಡಿಲ್ಲ ಎನ್ನುವ ಮೂಲಕ ಕಾಡುಗೊಲ್ಲ ಸಮುದಾಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜೊತೆಗೆ ಶೀಘ್ರದಲ್ಲೇ ಸಿಎಂ ಯಡಿಯೂರಪ್ಪ ಈ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡಿ, ಹಣ ನೀಡಲಿದ್ದಾರೆನ್ನುವ ಮೂಲಕ ಅಲ್ಲಿಂದ ಜಾರಿಕೊಳ್ಳಲು ಯತ್ನಿಸಿದ್ದಾರೆ.

  • ನಾನ್‍ವೆಜ್ ಪ್ರಿಯರಿಗೆ ಶಾಕ್ – 700ರ ಗಡಿದಾಟಿದ ಮಟನ್ ರೇಟ್

    ನಾನ್‍ವೆಜ್ ಪ್ರಿಯರಿಗೆ ಶಾಕ್ – 700ರ ಗಡಿದಾಟಿದ ಮಟನ್ ರೇಟ್

    ಬೆಂಗಳೂರು: ನಾನ್‍ವೆಜ್ ಖಾದ್ಯಪ್ರಿಯರಿಗೆ ಶಾಕ್, ಇನ್ಮುಂದೆ ಮಟನ್ ಐಟಮ್ಸ್ ತಿನ್ನೋ ಮುನ್ನ ಜೇಬು ಗಟ್ಟಿಯಿದಿಯಾ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ. ಯಾಕೆಂದರೆ ಮಟನ್ ರೇಟ್ ಏರಿಕೆಯಾಗಿದೆ.

    ಹೌದು.ಕಳೆದ ವಾರ ಕೆಜಿ ಮಟನ್‍ಗೆ 550 ರೂ. ಇತ್ತು. ಆದರೀಗ ಕೆಜಿ ಮಟನ್‍ಗೆ 700 ರೂಪಾಯಿಯಾಗಿದೆ. ಕಳೆದ ಬಾರಿ ಉಂಟಾದ ಪ್ರವಾಹದಿಂದ ಕುರಿಗಳು ಸತ್ತಿವೆ. ಜೊತೆಗೆ ಚಳಿಗಾಲದಲ್ಲಿ ಕುರಿಗಳು ಚಳಿ ತಡೆಯಲಾರದೇ ಸಾಯುತ್ತಿವೆ. ಅಲ್ಲದೇ ಕುರಿಗಳ ಸಾಕಾಣಿಕೆ ಕುಗ್ಗಿದೆ. ಈ ಎಲ್ಲಾ ಕಾರಣದಿಂದ ಮಟನ್ ಬೆಲೆ ಹೆಚ್ಚಳವಾಗಿದೆ.

    ಇತ್ತೀಚಿಗೆ ದಿನಗಳಲ್ಲಿ ಮೊದಲಿನ ಹಾಗೆ ಸಾಕಷ್ಟು ಪ್ರಮಾಣದಲ್ಲಿ ಕುರಿ ಸಾಕಾಣಿಕೆಯಾಗುತ್ತಿಲ್ಲ. ಇದಕ್ಕೆಲ್ಲಾ ಕಾರಣ ಅಂದರೆ ಕುರಿ ಸಾಕಾಣಿಕೆದಾರರಿಗೆ ಕುರಿ, ಮೇಕೆಗಳನ್ನ ಮೇಯಿಸಲು ಗೋಮಾಳಗಳು ಸಿಗುತ್ತಿಲ್ಲ. ಮೊದಲಿನ ಹಾಗೆ ರೈತರೂ ಕೂಡ ಭೂಮಿಯಲ್ಲಿ ಕುರಿಗಳನ್ನ ಬಿಡುತ್ತಿಲ್ಲ. ಹೀಗಾಗಿ ಕುರಿ ಸಾಕಾಣಿಕೆ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಮಟನ್ ರೇಟ್ ಏರಿಕೆ ಕಂಡಿದೆ. ಅಷ್ಟೇ ಅಲ್ಲದೇ ಮಾರುಕಟ್ಟೆಗೆ ಇತ್ತೀಚಿನ ದಿನಗಳಲ್ಲಿ ಬೌಯ್ಲರ್ ಕೋಳಿ ಲಗ್ಗೆ ಇಟ್ಟಿದ್ದು, ಇದರಿಂದಾಗಿಯೂ ಮಟನ್ ರೇಟ್ ಏರಿಕೆಗೆ ಕಾರಣವಾಗಿದೆ ಎಂದು ಮಟನ್ ವ್ಯಾಪಾರಸ್ಥರು ನಿಸಾರ್ ಅಹಮದ್ ತಿಳಿಸಿದ್ದಾರೆ.

    ಮಟನ್ ಖಾದ್ಯಗಳನ್ನ ತುಂಬಾ ಇಷ್ಟಪಡುವರಿಗೆ ಇದು ಕೊಂಚ ಬೇಸರ ಮೂಡಿಸಿದೆ. ಹೀಗಾಗಿ ಮಟನ್ ರೇಟ್ ಖಾದ್ಯ ಪ್ರಿಯರ ಬಾಯಿ ಸುಡುತ್ತಿದ್ದು, ಇದು ಹೀಗೆ ಮುಂದುವರಿದರೆ ಮುಂದಿನ ಯುಗಾದಿ ವೇಳೆಗೆ ಮಟನ್ ರೇಟ್ 800-1000 ರೂಪಾಯಿಗಳಿಗೆ ಏರಿಕೆಯಾದರೆ ಅಚ್ಚರಿ ಪಡಬೇಕಿಲ್ಲ ಎಂದು ಮಟನ್ ಪ್ರಿಯ ಮಹಮದ್ ಇದ್ರೀಸ್ ಹೇಳಿದ್ದಾರೆ.

    ಒಂದು ಕಡೆ ಗ್ಯಾಸ್ ರೇಟ್, ತರಕಾರಿ ರೇಟ್, ಈರುಳ್ಳಿ ರೇಟ್ ಜಾಸ್ತಿಯಾಗುತ್ತಿದೆ. ಮತ್ತೊಂದು ಕಡೆ ಮಟನ್ ದರ ಕೂಡ ಏರಿಕೆಯಾಗಿರುವುದು ಮಟನ್ ರೇಟ್ ಪ್ರಿಯರಿಗೆ ಬೇಸರ ಮೂಡಿಸಿದೆ.