Tag: hijab row

  • ವಿದ್ಯಾರ್ಥಿನಿಗೆ ಶರ್ಟ್ ಬಿಚ್ಚಿಕೊಡಲು ಮುಂದಾದ ಕಾಫಿನಾಡಿನ ಸರ್ಕಲ್ ಇನ್ಸ್‌ಪೆಕ್ಟರ್

    ವಿದ್ಯಾರ್ಥಿನಿಗೆ ಶರ್ಟ್ ಬಿಚ್ಚಿಕೊಡಲು ಮುಂದಾದ ಕಾಫಿನಾಡಿನ ಸರ್ಕಲ್ ಇನ್ಸ್‌ಪೆಕ್ಟರ್

    ಚಿಕ್ಕಮಗಳೂರು: ಹೇಳೋದು ಕೇಳಮ್ಮಾ….. ಹೇ…. ತಗೋ ಈ ಶರ್ಟ್ ಹಾಕ್ಕೊಂಡ್ ನೀನ್ ಈ ಕಡೆ ಬಾ, ನಾನು ಅಲ್ಲಿ ನಿಂತ್ಕೋಂತೀನಿ ಎಂದು ಹಿಜಬ್‍ಗಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿಗೆ ನಗರದ ಮಹಿಳಾ ಠಾಣೆ ಇನ್ಸ್ ಪೆಕ್ಟರ್ ಸಲೀಂ ಹಾಸ್ಯ ಚಟಾಕಿ ಹಾರಿಸಿದ್ದಾರೆ.

    ನಗರದಲ್ಲಿ ಇಂದೂ ಕೂಡ ಹಿಜಬ್ ಹೋರಾಟ ಮುಂದುವರಿದಿತ್ತು. ನಗರದ ಬಸವನಹಳ್ಳಿ ಪ್ರೌಢ ಶಾಲೆಯ ಮುಸ್ಲಿಂ ವಿದ್ಯಾರ್ಥಿನಿಯರು ಇಂದು ಕೂಡ ಹಿಜಬ್ ಇಲ್ಲದ ನಾವು ಶಾಲೆಗೆ ಬರೋದಿಲ್ಲ ಎಂದು ಶಾಲೆಯ ಮುಂಭಾಗ ನಿಂತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಇನ್ಸ್‍ಪೆಕ್ಟರ್ ಸಲೀಂ, ವಿದ್ಯಾರ್ಥಿನಿಯರಿಗೆ ಕೋರ್ಟ್ ತೀರ್ಪು ಬರುವವರೆಗೂ ಹಿಜಬ್ ತೆಗೆದು ಶಾಲೆಗೆ ಹೋಗುವಂತೆ ಮನವಿ ಮಾಡಿದರು. ಆದರೆ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಸುತಾರಂ ಒಪ್ಪಲಿಲ್ಲ.

    ಈ ವೇಳೇ ಪೊಲೀಸರು ಹಾಗೂ ಇನ್ಸ್‍ಪೆಕ್ಟರ್ ಸಲೀಂ ಸುಮಾರು ಅರ್ಧಗಂಟೆಗಳ ಕಾಲ ಅವರಿಗೆ ಮನವೊಲಿಸುವ ಪ್ರಯತ್ನ ಮಾಡಿದರೂ ವಿಫಲರಾದರು. ಈ ವೇಳೆ ವಿದ್ಯಾರ್ಥಿನಿಯರು ಇನ್ಸ್‍ಪೆಕ್ಟರ್ ಸಲೀಂ ಅವರಿಗೆ ಸಂವಿಧಾನ ಪಾಠ ಮಾಡಲು ಮುಂದಾದರು. ಇನ್ಸ್ ಪೆಕ್ಟರ್ ಒಳಗೆ ಹೋಗಿ. ಅಲ್ಲಿ ನಿಮಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿ ಹಿಜಬ್ ತೆಗೆದು ಸಂಜೆ ಶಾಲೆ ಮುಗಿದ ಮೇಲೆ ಮತ್ತೆ ಅಲ್ಲಿಯೇ ಹಿಜಬ್ ಧರಿಸಿಕೊಂಡು ವಾಪಸ್ ಬನ್ನಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಸಮವಸ್ತ್ರ ಜಾರಿ ಸಿ.ಡಿ.ಸಿ ನಿರ್ಧಾರ ಅಂದ್ರು ಎಜಿ- ಸೋಮವಾರ ಹೈಕೋರ್ಟ್‍ಗೆ ಮಧ್ಯಂತರ ಅರ್ಜಿ

    ಆಗ ವಿದ್ಯಾರ್ಥಿನಿಯೊಬ್ಬಳು ನಮಗೆ ಯಾರೂ ಏನು ಮಾಡಬಾರದು ಎಂದಾಗ ಇನ್ಸ್ ಪೆಕ್ಟರ್ ಸಲೀಂ, ನೋಡಮ್ಮಾ.. ನೀನು ಪ್ರತಿಯೊಂದಕ್ಕೂ ಹೀಗೆ ಮಾತನಾಡಿದರೆ ಸಂಜೆವರಗೂ ಇಲ್ಲಿಯೇ ಹೀಗೆ ನಿಲ್ಲಬೇಕು ಎಂದರು. ಈ ವೇಳೆ ವಿದ್ಯಾರ್ಥಿನಿ ಇನ್ಸ್ ಪೆಕ್ಟರ್ ಅವರಗೆ ಸಂವಿಧಾನದ ಪಾಠ ಮಾಡಲು ಮುಂದಾದಾದಳು. ಆಗ ಅವರು ತಗೋ ಈ ಶರ್ಟ್ ಹಾಕಿಕೊಂಡು ಈಕಡೆ ಬಾ ಎಂದು ನಗೆ ಚಟಾಕಿ ಹಾರಿಸಿದರು.

    ಆದರೂ ವಿದ್ಯಾರ್ಥಿನಿಯರು ಹಾಗೂ ಪೋಷಕರು ಹಿಜಬ್ ತೆಗೆದು ಶಾಲೆಗೆ ಹೋಗಲು ನಿರಾಕರಿಸಿ ಮನೆಗೆ ವಾಪಸ್ ಹೋಗಿದ್ದಾರೆ. ಇದನ್ನೂ ಓದಿ: ಇನ್‍ಸ್ಟಾಗ್ರಾಮ್‍ನಲ್ಲಿ ಹಿಜಬ್ ತೆಗೆದು ರೀಲ್ಸ್ ಹಾಕ್ತಾರೆ, ಈಗ ತೆಗೆಯೋಕಾಗಲ್ವಾ..?- ವಿದ್ಯಾರ್ಥಿಗಳು

  • ಸಮವಸ್ತ್ರ ಜಾರಿ ಸಿ.ಡಿ.ಸಿ ನಿರ್ಧಾರ ಅಂದ್ರು ಎಜಿ- ಸೋಮವಾರ ಹೈಕೋರ್ಟ್‍ಗೆ ಮಧ್ಯಂತರ ಅರ್ಜಿ

    ಸಮವಸ್ತ್ರ ಜಾರಿ ಸಿ.ಡಿ.ಸಿ ನಿರ್ಧಾರ ಅಂದ್ರು ಎಜಿ- ಸೋಮವಾರ ಹೈಕೋರ್ಟ್‍ಗೆ ಮಧ್ಯಂತರ ಅರ್ಜಿ

    ಬೆಂಗಳೂರು: ಹಿಜಬ್ ವಿವಾದ ಸಂಬಂಧ ಸತತ ಆರನೇ ದಿನ ಹೈಕೋರ್ಟ್‍ನ ಪೂರ್ಣಪೀಠದಲ್ಲಿ ವಿಚಾರಣೆ ನಡೆಯಿತು. ಇಂದು ಸರ್ಕಾರದ ಪರವಾಗಿ ವಾದ ಮಂಡನೆ ಮಾಡಿದ ಅಡ್ವೋಕೇಟ್ ಜನೆರಲ್ ಪ್ರಭುಲಿಂಗ ನಾವಡಗಿ, ಹಿಜಬ್‍ಧಾರಣೆ ಮುಸ್ಲಿಮ್ ಸಮುದಾಯದಲ್ಲಿ ಕಡ್ಡಾಯ ಆಚರಣೆ ಅಲ್ಲ ಅಂದ್ರು.

    ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್ ನಿರ್ಬಂಧಿಸುವ ಮೂಲಕ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಕರ್ನಾಟಕ ಸರ್ಕಾರ ಉಲ್ಲಂಘಿಸಿಲ್ಲ ಎಂದರು. ಈ ಮೂಲಕ ಫೆಬ್ರವರಿ 5ರಂದು ಸರ್ಕಾರ ಹೊರಡಿಸಿದ್ದ ಕಡ್ಡಾಯ ಸಮವಸ್ತ್ರ ಆದೇಶವನ್ನು ಸಮರ್ಥಿಸಿಕೊಂಡರು. ಸಮಾನತೆ, ಸಮಗ್ರತೆ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ವಸ್ತ್ರಗಳನ್ನು ಸರ್ಕಾರ ಬ್ಯಾನ್ ಮಾಡಿರುವುದು ಸರಿಯಾಗಿಯೇ ಇದೆ ಎಂದು ವಾದ ಮಂಡಿಸಿದ್ರು. ಇದನ್ನೂ ಓದಿ: ಕಾಂಗ್ರೆಸ್ ರಾಜ್ಯದ ಮಕ್ಕಳಿಗೆ ದ್ರೋಹ ಮಾಡ್ತಿದೆ, ಇದು ರಾಜದ್ರೋಹ: ಬೊಮ್ಮಾಯಿ ಕಿಡಿ

    ಕಾಲೇಜಿನ ಅಭಿವೃದ್ಧಿ ಸಮಿತಿ ವಿಚಾರವಾಗಿಯೂ ತೀವ್ರ ವಾದ ನಡೀತು. ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಅಧಿಕಾರ ಪ್ರಶ್ನಿಸಿದ್ದ ರವಿವರ್ಮ ಕುಮಾರ್ ಪ್ರಶ್ನೆಗೆ ಅಡ್ವೋಕೇಟ್ ಜನರಲ್ ನಾವಡಗಿ ಉತ್ತರ ನೀಡಿದ್ರು. ಕಾಲೇಜು ಅಭಿವೃದ್ಧಿ ಸಮಿತಿಯನ್ನು ಸರ್ಕಾರದ ಆದೇಶದಂತೆ ರಚಿಸಲಾಗಿದೆ. ಶಿಕ್ಷಣ ಇಲಾಖೆ ಕಾಯ್ದೆ ಪ್ರಕಾರ ಸಮವಸ್ತ್ರ ಕಡ್ಡಾಯ ಮಾಡಲು ಸಿಡಿಸಿಗೆ ಅಧಿಕಾರವಿದೆ. ಆದರೆ ಹಿಜಬ್‍ಗೆ ಅವಕಾಶ ನೀಡುವುದು ಬಿಡುವುದು ಕಾಲೇಜುಗಳ ಸಿಡಿಸಿಗಳಿಗೆ ಬಿಟ್ಟ ವಿಚಾರ. ಸಿಡಿಸಿ ಹೇಳಿದ ಯೂನಿಫಾರಂ ಕಡ್ಡಾಯವಾಗಿ ಧರಿಸಿ ಎಂಬ ಅಂಶವಷ್ಟೇ ಸರ್ಕಾರದ ಆದೇಶದಲ್ಲಿದೆ. ಸರ್ಕಾರ ಧಾರ್ಮಿಕ ವಿಚಾರಗಳಲ್ಲಿ ಮಧ್ಯಪ್ರವೇಶ ಕೂಡ ಮಾಡಲ್ಲ ಎಂದು ವಾದ ಮಂಡಿಸಿದ್ರು.

    ಕೊನೆಗೆ ಸಿಜೆ ಅವಸ್ಥಿ ನೇತೃತ್ವದ ಪೀಠ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು. ಸೋಮವಾರ ಕೆಲ ಮಧ್ಯಂತರ ಅರ್ಜಿಗಳನ್ನು ಕೂಡ ಕೋರ್ಟ್ ವಿಚಾರಣೆಗೆ ಪರಿಗಣಿಸುವ ಸಂಭವ ಇದೆ. ಇನ್ನು ಕೋರ್ಟ್ ವಿಚಾರಣೆಯ ನೇರ ಪ್ರಸಾರ ನಿಲ್ಲಿಸುವಂತೆ ಮಾಡಿದ್ದ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಲಿಲ್ಲ. ಇದನ್ನೂ ಓದಿ: ಇನ್‍ಸ್ಟಾಗ್ರಾಮ್‍ನಲ್ಲಿ ಹಿಜಬ್ ತೆಗೆದು ರೀಲ್ಸ್ ಹಾಕ್ತಾರೆ, ಈಗ ತೆಗೆಯೋಕಾಗಲ್ವಾ..?- ವಿದ್ಯಾರ್ಥಿಗಳು

  • ಕೋರ್ಟ್ ಮಧ್ಯಂತರ ಆದೇಶ ಡಿಪ್ಲೊಮಾ, ಡಿಗ್ರಿ ಕಾಲೇಜ್‍ಗೆ ಅನ್ವಯವಾಗಲ್ಲ – ಹಿಜಬ್ ಧರಿಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳ ಪಟ್ಟು

    ಕೋರ್ಟ್ ಮಧ್ಯಂತರ ಆದೇಶ ಡಿಪ್ಲೊಮಾ, ಡಿಗ್ರಿ ಕಾಲೇಜ್‍ಗೆ ಅನ್ವಯವಾಗಲ್ಲ – ಹಿಜಬ್ ಧರಿಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳ ಪಟ್ಟು

    ಬೆಳಗಾವಿ: ನಗರದ ವಿಜಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ 12 ಜನ ವಿದ್ಯಾರ್ಥಿಗಳು ಹಿಜಬ್, ಬುರ್ಖಾ ಧರಿಸಿ ಕಾಲೇಜಿಗೆ ಆಗಮಿಸಿ, ಹೈಕೋರ್ಟ್ ಮಧ್ಯಂತರ ಆದೇಶ ಡಿಪ್ಲೊಮಾ, ಡಿಗ್ರಿ ಕಾಲೇಜ್‍ಗೆ ಅನ್ವಯವಾಗುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.

    ಬೆಳಗಾವಿ ಸದಾಶಿವ ನಗರದಲ್ಲಿರುವ ವಿಜಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಹಿಜಬ್ ವಿವಾದ ಮುಂದುವರೆದಿದೆ. ನಿನ್ನೆ ಹಿಜಬ್‍ಗೆ ಪಟ್ಟು ಹಿಡಿದಿದ್ದ ವಿದ್ಯಾರ್ಥಿನಿಯರನ್ನು ಕಾಲೇಜ್ ಸಿಬ್ಬಂದಿ ಹೈಕೋರ್ಟ್ ಆದೇಶ ಪಾಲಿಸುವಂತೆ ಹೇಳಿದ್ದರು. ಆದ್ರೆ, ಇದಕ್ಕೆ ಕ್ಯಾರೆ ಎನ್ನದೆ ವಿದ್ಯಾರ್ಥಿಗಳು ಕೆಲ ಹೊತ್ತು ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ಮಾಡಿದ್ದರು. ಈ ವೇಳೆ ಹೈಕೋರ್ಟ್ ಆದೇಶ ಡಿಪ್ಲೊಮಾ, ಡಿಗ್ರಿ ಕಾಲೇಜ್‍ಗೆ ಮಧ್ಯಂತರ ಆದೇಶ ಪಾಲನೆ ಅನ್ವಯ ಆಗುವುದಿಲ್ಲ ಎಂದು ಪ್ರತಿಯನ್ನು ಹಿಡಿದುಕೊಂಡು ಬಂದಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಹಿಜಬ್ ಹೈಡ್ರಾಮಾ – ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಆರು ಯುವಕರು ವಶ

    ಸ್ಥಳಕ್ಕೆ ಆಗಮಿಸಿದ ಕಾಲೇಜಿನ ಪ್ರಾಂಶುಪಾಲರು ಪ್ರಕಾಶ್ ಪಾಟೀಲ್ ಕಾಲೇಜಿನ ಕೊಠಡಿಗೆ ಕರೆದುಕೊಂಡು ಹೋಗಿ ವಿದ್ಯಾರ್ಥಿನಿಯರ ಮನವೊಲಿಕೆಗೆ ಪ್ರಯತ್ನ ನಡೆಸಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೆ ಹಿಜಬ್ ತೆಗೆಯಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಯಾವುದೇ ರೀತಿಯಾ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ. ಸ್ಥಳದಲ್ಲಿ ಡಿಸಿಪಿ ರವೀಂದ್ರ ಗಡಾದಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಇದನ್ನೂ ಓದಿ: ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ: ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ

  • ಕೋರ್ಟ್‌ ಹೊರಗಡೆ ಹಿಜಬ್‌ ವಿವಾದ ಇತ್ಯರ್ಥಕ್ಕೆ ಅನುಮತಿ ಕೋರಿ ಅರ್ಜಿ

    ಕೋರ್ಟ್‌ ಹೊರಗಡೆ ಹಿಜಬ್‌ ವಿವಾದ ಇತ್ಯರ್ಥಕ್ಕೆ ಅನುಮತಿ ಕೋರಿ ಅರ್ಜಿ

    ಬೆಂಗಳೂರು: ಹಿಜಬ್‌ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿ ಇದ್ದು ವಿದ್ಯಾರ್ಥಿಗಳ ಪರವಾಗಿ ವಕೀಲರು ವಾದ ಮಂಡಿಸಿದ್ದಾರೆ. ಈ ಮಧ್ಯೆ ನ್ಯಾಯಾಲಯದ ಹೊರಗಡೆ ಈ ಪ್ರಕರಣವನ್ನು ಇತ್ಯರ್ಥ ಮಾಡಲು ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.

    ಗುರುವಾರ ಮಧ್ಯಾಹ್ನ ಮುಖ್ಯ ನ್ಯಾ. ರಿತು ರಾಜ್ ಅವಸ್ತಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾ. ಜೆಎಂ ಖಾಜಿ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಅರ್ಜಿ ಸರಿಯಾಗಿ ಸಲ್ಲಿಕೆಯಾಗಿಲ್ಲ. ಮಾಹಿತಿಗಳು ಅಸಮರ್ಪಕವಾಗಿರುವ ಹಿನ್ನೆಲೆಯಲ್ಲಿ ವಕೀಲ ಅಬ್ದುಲ್‌ ಮುಜೀದ್‌ ಮತ್ತು ಮೊಹಮ್ಮದ್‌ ಆರೀಫ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು.

    ವಿಚಾರಣೆಯ ಕೊನೆಯಲ್ಲಿ ವಕೀಲರಾದ ಸುಭಾಷ್ ಝಾ ಮಧ್ಯಪ್ರವೇಶ ಅರ್ಜಿ (ಇಂಟರ್‌ವಿನ್‌ ಅಪ್ಲಿಕೇಷನ್‌) ಸಲ್ಲಿಸಿ ಪ್ರಕರಣವನ್ನು ಹೊರಗಡೆ ಇತ್ಯರ್ಥ ಮಾಡಲು ಅನುಮತಿ ನೀಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ಪಾಕಿಸ್ತಾನಕ್ಕೆ ಹೋಗುವ ಬದಲು ಭಾರತವನ್ನು ಅಜ್ಜಂದಿರು ಆಯ್ಕೆ ಮಾಡಿದ್ದು ಯಾಕೆ: ಹಿಜಬ್‌ ವಿವಾದಕ್ಕೆ ಸ್ವಾಮಿ ಪ್ರಶ್ನೆ

    ಹಿಜಬ್ ಸಮವಸ್ತ್ರ ವಿವಾದ ಕೋರ್ಟ್ ಬಗೆಹರಿಸುವುದು ಬೇಡ. ಕೋರ್ಟ್ ಹೊರಗೆ ಇತ್ಯರ್ಥಕ್ಕೆ ಅನುಮತಿ ನೀಡಬೇಕು. ಸಾಮಾಜಿಕವಾದ ಸಮಸ್ಯೆಯಾಗಿರುವ ಕಾರಣ ಕೋರ್ಟ್ ಹೊರಗೆ ಇತ್ಯರ್ಥ ಮಾಡಬಹುದು ಎಂದು ಮನವಿ ಮಾಡಿಕೊಂಡರು.

    ಈ ವೇಳೆ ಎಲ್ಲ ಕಕ್ಷಿದಾರರು ಒಪ್ಪಿದರೆ ಈ ಅರ್ಜಿಯನ್ನು ಮಾನ್ಯ ಮಾಡುವುದಾಗಿ ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು. ಈ ಪ್ರಕರಣದಲ್ಲಿ ಸಾಂವಿಧಾನಿಕ ಪ್ರಶ್ನೆಗಳು ಎದ್ದಿರುವ ಕಾರಣ ಉತ್ತರ ಕಂಡುಕೊಳ್ಳಬೇಕಿದೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ರಾಜಿ ಸಂಧಾನ ಮಾಡಲಾಗದು ಎಂದು ಹೇಳಿದರು. ಇದನ್ನೂ ಓದಿ: ಹಿಜಬ್ ವಿವಾದ: ಬುರ್ಕಾನೇ ಮುಖ್ಯ, ಸಿಂಧೂರ ತೆಗೆಸಿ ಎಂದ ವಿದ್ಯಾರ್ಥಿನಿಯರು!

    ಮೊದಲು ನಿಮ್ಮ ಅರ್ಜಿಯನ್ನು ಎಲ್ಲಾ ಕಕ್ಷಿದಾರರಿಗೆ ತಲುಪಿಸಿ. ಅವರು ಸಂಧಾನಕ್ಕೆ ಒಪ್ಪಿದರೆ ಮಾತ್ರ ನ್ಯಾಯಾಲಯ ನಿಮ್ಮ ಅರ್ಜಿಯನ್ನು ಪರಿಗಣಿಸಲಿದೆ ಎಂದು ತಿಳಿಸಿತು.

    ಸೋಮವಾರದಿಂದ ಗುರುವಾರದವರೆಗೆ ಹಿಜಬ್‌ ಪರವಾಗಿ ವಾದ ಮಂಡನೆಯಾಗಿದ್ದರೆ ಶುಕ್ರವಾರ ಸರ್ಕಾರದ ಪರವಾಗಿ ಅಡ್ವೋಕೆಟ್‌ ಜನರಲ್‌ ಪ್ರಭುಲಿಂಗ ನಾವದಗಿ ವಾದ ಮಂಡಿಸಲಿದ್ದಾರೆ.

  • ಬೆಳಗಾವಿಯಲ್ಲಿ ಹಿಜಬ್ ಹೈಡ್ರಾಮಾ – ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಆರು ಯುವಕರು ವಶ

    ಬೆಳಗಾವಿಯಲ್ಲಿ ಹಿಜಬ್ ಹೈಡ್ರಾಮಾ – ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಆರು ಯುವಕರು ವಶ

    ಬೆಳಗಾವಿ: ನಗರದ ವಿಜಯ್ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಹಿಜಬ್‍ಗೆ ಅವಕಾಶ ನೀಡುವಂತೆ ವಿದ್ಯಾರ್ಥಿನಿಯರು ಪಟ್ಟುಹಿಡಿದು ಪ್ರತಿಭಟನೆಗೆ ಮುಂದಾದಾಗ ಅಲ್ಲಾಹು ಅಕ್ಬರ್ ಅಂತಾ ಘೋಷಣೆ ಕೂಗಿದ ಆರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಬೆಳಗಾವಿಯ ಸದಾಶಿವ ನಗರದ ವಿಜಯ್ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನಲ್ಲಿದ್ದು ಆ ಪೈಕಿ 50ರಷ್ಟು ವಿದ್ಯಾರ್ಥಿನಿಯರು ಮುಸ್ಲಿಂ ಸಮಾಜದವರಿದ್ದಾರೆ. ಅದರಲ್ಲಿ ಇಂದು 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಬ್‍ಗೆ ಅವಕಾಶ ನೀಡುವಂತೆ ಪಟ್ಟುಹಿಡಿದ್ದಾರೆ. ಆದ್ರೆ, ಕಾಲೇಜು ಆಡಳಿತ ಮಂಡಳಿ ಕೋರ್ಟ್ ಆದೇಶವನ್ನು ಪಾಲನೆ ಮಾಡುವಂತೆ ಖಡಕ್ ಸೂಚನೆ ಕೊಟ್ಟಿದೆ. ಹಾಗಾಗಿ ವಿದ್ಯಾರ್ಥಿನಿಯರು ಕ್ಲಾಸ್‍ಗೆ ಬಹಿಷ್ಕಾರ ಹಾಕಿ ಹೊರ ಹೋಗುತ್ತಿದ್ದರು. ಕಾಲೇಜು ಸಿಬ್ಬಂದಿ ಮತ್ತು ಪೊಲೀಸರು ವಿದ್ಯಾರ್ಥಿಗಳನ್ನು ತಡೆದು ಒಳಗಡೆ ಕೌನ್ಸಿಂಗ್‌ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ: ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ

    ಈ ವೇಳೆ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಹಿಜಬ್ ತೆಗೆಯುವುದಿಲ್ಲ ಕಾಲೇಜು ಒಳಗೆ ಹೋಗುವುದಿಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟುಹಿಡಿದ್ದಾರೆ. ಈ ವಿಷಯ ವಿದ್ಯಾರ್ಥಿನಿಯರ ಪೋಷಕರಿಗೆ ತಿಳಿಯುತ್ತಿದ್ದಂತೆ ಕಾಲೇಜಿನತ್ತ ಯುವಕರ ಗುಂಪು ಆಗಮಿಸಿದೆ. ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಲ್ಲದೇ ಪ್ರಾಂಶುಪಾಲರ ವಿರುದ್ಧ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಡಿಸಿಪಿ ರವೀಂದ್ರ ಗಡಾದಿ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರು. ಈ ವೇಳೆ ಕೆಲ ಯುವಕರು ಅಲ್ಲಾಹು ಅಕ್ಬರ್ ಅಂತಾ ಘೋಷಣೆ ಕೂಗಿದರು. ಘೋಷಣೆ ಕೂಗಿದ ಆರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಹಿಜಬ್, ಬುರ್ಕಾ ಪುರುಷ ದಬ್ಬಾಳಿಕೆಯ ಸಂಕೇತ: ತಸ್ಲೀಮಾ ನಸ್ರೀನ್

  • ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ: ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ

    ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ: ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ

    ಬೆಳಗಾವಿ: ಹಿಜಬ್, ಹಿಜಬ್ ಅಂತಾ ಏನ್ ಹೇಳ್ತಿದಿಯಾ ಆಜಾದಿ ಬೇಕಾ ನಿಮಗೆ?. ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ?, ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ ಎಂದು ಹಿಜಾಬ್ ಪರ ಹೋರಾಟ ಮಾಡಿದ್ದ ಸಾಮಾಜಿಕ ಹೋರಾಟಗಾರ್ತಿ ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ ಬಂದಿದ್ದು ಈ ಸಂಬಂಧ ದೂರು ದಾಖಲಾಗಿದೆ.

    ಬೆಳಗಾವಿಯ ಸಾಮಾಜಿಕ ಕಾರ್ಯಕರ್ತೆಯಾಗಿ ಹಿಜಬ್ ಪರ ಹೋರಾಟ ಮಾಡಿದ ಸೀಮಾ ಇನಾಂದಾರ್‌ಗೆ ಅಪರಿಚಿತ ನಂಬರ್‌ನಿಂದ ವಾಟ್ಸಪ್ ಕಾಲ್ ಮಾಡಿ ಜೀವ ಬೆದರಿಕೆ ಬಂದಿರುವುದಾಗಿ ಬೆಳಗಾವಿ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಮುಸ್ಲಿಂ ವೇಶ ಧರಿಸಿ ಅನುಮಾಸ್ಪದ ರೀತಿಯಲ್ಲಿ ಓಡಾಟ: ಐವರನ್ನು ವಶಕ್ಕೆ ಪಡೆದ ಪೊಲೀಸರು

    ಸೀಮಾ ಇನಾಂದಾರ್ ಮೊಬೈಲ್‍ಗೆ ವಾಟ್ಸಪ್ ಕರೆ ಮಾಡಿರುವ ಕಿಡಿಗೇಡಿ, ಹಿಜಬ್, ಹಿಜಬ್ ಅಂತಾ ಏನ್ ಹೇಳ್ತಿದಿಯಾ ಆಜಾದಿ ಬೇಕಾ ನಿಮಗೆ?, ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ ಎಂದು ಬೆದರಿಕೆ ಹಾಕಿದ್ದಾನೆ. ಅಷ್ಟೆ ಅಲ್ಲದೆ ಅವಾಚ್ಯ ಶಬ್ದಗಳಿಂದ ಹಿಂದಿ ಭಾಷೆಯಲ್ಲಿ ನಿಂದಿಸಿದ್ದಾನೆ. ಜೀವ ಬೆದರಿಕೆ ಹಾಕಿದ ಆಡೀಯೋ ಬೇರೆ ಮೊಬೈಲ್‍ನಿಂದ ರೆಕಾರ್ಡ್ ಮಾಡಿಕೊಂಡ ಸೀಮಾ ಇನಾಂದಾರ್ ಈ ಬಗ್ಗೆ ಇದೀಗ ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಘೋಷಣೆ ಕೂಗುತ್ತಾ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು

    ಕೆಲ ದಿನಗಳ ಹಿಂದೆ ಬೆಳಗಾವಿಯ ಸರ್ದಾರ್ ಸರ್ಕಾರಿ ಪ್ರೌಢಶಾಲೆ ಬಳಿ ಬಂದು ಹಿಜಬ್ ಹಾಕುವ ವಿಚಾರವಾಗಿ ಶಾಲಾ ಸಿಬ್ಬಂದಿ, ಮತ್ತು ಪೊಲೀಸರ ಜೊತೆ ಸೀಮಾ ಇನಾಂದಾರ್ ವಾಗ್ವಾದ ಸಹ ನಡೆಸಿದ್ದರು. ಅಲ್ಲದೇ ಹಿಜಬ್ ಪರ ಪ್ರತಿಭಟನೆಯಲ್ಲಿ ಕೂಡ ಭಾಗವಹಿಸಿದ್ದರು.

  • ಶಿಕ್ಷಣ ಕಾಯ್ದೆ ಪ್ರಕಾರ 5 ವರ್ಷಗಳ ಕಾಲ ಸಮವಸ್ತ್ರ ಬದಲಿಸಲು ಆಗಲ್ಲ: ರವಿವರ್ಮ ಕುಮಾರ್

    ಶಿಕ್ಷಣ ಕಾಯ್ದೆ ಪ್ರಕಾರ 5 ವರ್ಷಗಳ ಕಾಲ ಸಮವಸ್ತ್ರ ಬದಲಿಸಲು ಆಗಲ್ಲ: ರವಿವರ್ಮ ಕುಮಾರ್

    ಬೆಂಗಳೂರು: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೂರ್ಣ ಪೀಠದಲ್ಲಿ 4ನೇ ದಿನವೂ ಹಿಜಬ್ ಅರ್ಜಿ ವಿಚಾರವನ್ನ ಕಾವೇರಿದ ವಾದ ನಡೀತು.

    ಅರ್ಜಿದಾರರ ಪರ ವಕೀಲರಾದ ರವಿವರ್ಮ ಕುಮಾರ್ ವಾದ ಮಂಡನೆ ಮಾಡಿದ್ರು. ಶಿಕ್ಷಣ ಕಾಯ್ದೆ ಪ್ರಕಾರ 5 ವರ್ಷಗಳ ಕಾಲ ಸಮವಸ್ತ್ರ ಬದಲಿಸಲು ಆಗಲ್ಲ. ಬದಲು ಮಾಡಿದ್ರೂ 1 ವರ್ಷ ಮುಂಚಿತವಾಗಿ ಪೋಷಕರಿಗೆ ಮಾಹಿತಿ ನೀಡಬೇಕು. ಸರ್ಕಾರ ಯೂನಿಫಾರಂ ನಿರ್ಧರಿಸುವ ಅಧಿಕಾರವನ್ನು ಕಾಲೇಜು ಸಮಿತಿಗೆ ನೀಡಿದೆ. ಆ ಅಧಿಕಾರ ಕಾಲೇಜು ಸಮಿತಿಗೆ ಇಲ್ಲ.

    ಸಮಿತಿಯನ್ನು ಸರ್ಕಾರದ ಅಧೀನ ಎಂದು ಪರಿಗಣಿಸುವುದಾದರೆ, ಶಾಸಕ ಕೂಡ ಸರ್ಕಾರದ ಅಧೀನ ಆಗ್ತಾರೆ. ಶಾಸಕರು ರಾಜಕೀಯ ಪಕ್ಷವೊಂದನ್ನು ಪ್ರತಿನಿಧಿಸುತ್ತಾರೆ. ಶಾಸಕರ ಅಧ್ಯಕ್ಷತೆಯ ಸಮಿತಿಗೆ ಆಡಳಿತಾತ್ಮಕ ಅಧಿಕಾರ ನೀಡುವುದು ತಪ್ಪು. ಕಾಲೇಜು ಸಮಿತಿಗೆ ಅಧಿಕಾರ ನೀಡಿರುವ ಆದೇಶವನ್ನ ವಜಾ ಮಾಡಿ ಅಂತ ಕೇಳಿಕೊಂಡರು. ಇದನ್ನೂ ಓದಿ: ಈಶ್ವರಪ್ಪ vs ಡಿಕೆಶಿ ವಾಕ್ಸಮರ: ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಸದನದ ಕದನ

    ಶಾಲೆಗಳಲ್ಲಿ ದುಪ್ಪಟ್ಟ ನಿಷೇಧಿಸಲಾಗಿಲ್ಲ. ಬಳೆ, ಬಿಂದಿ, ಶಿಲುಬೆ, ಟರ್ಬನ್‍ಗಿಲ್ಲದ ನಿರ್ಬಂಧ ಹಿಜಬ್‍ಗೆ ಮಾತ್ರ ಯಾಕೆ..? ಧಾರ್ಮಿಕ ಕಾರಣಕ್ಕಾಗಿ ತಾರತಮ್ಯ ಮಾಡುವಂತಿಲ್ಲ. ಹಾಗಾಗಿ ಮಧ್ಯಂತರ ಆದೇಶ ತೆರವಿಗೆ ರವಿವರ್ಮಕುಮಾರ್ ಮನವಿ ಮಾಡಿದ್ರು. ಇದಕ್ಕೆ ಆಕ್ಷೇಪಣೆ ಸಲ್ಲಿಕೆಗೆ ಅಡ್ವೋಕೇಟ್ ಜನರಲ್‍ಗೆ ಸೂಚನೆ ನೀಡಿ, ವಿಚಾರಣೆಯನ್ನು ನಾಳೆ ಮಧ್ಯಾಹ್ನಕ್ಕೆ ತ್ರಿಸದಸ್ಯ ಪೀಠ ಮುಂದೂಡಿತು.  ಇದನ್ನೂ ಓದಿ: ಹಿಜಬ್ ಗಲಾಟೆ ಹುಬ್ಬಳ್ಳಿ ಕಾಲೇಜುಗಳಿಗೆ ರಜೆ ಘೋಷಣೆ- ಕಾಲೇಜು ಸುತ್ತಲೂ 144 ಸೆಕ್ಷನ್ ಜಾರಿ

  • ಹಿಜಬ್-ಕೇಸರಿ ವಿವಾದ – ಉಡುಪಿ, ಶಿವಮೊಗ್ಗದ ಕೆಲ ಕಾಲೇಜ್‍ಗಳಿಗೆ ರಜೆ ಘೋಷಣೆ

    ಹಿಜಬ್-ಕೇಸರಿ ವಿವಾದ – ಉಡುಪಿ, ಶಿವಮೊಗ್ಗದ ಕೆಲ ಕಾಲೇಜ್‍ಗಳಿಗೆ ರಜೆ ಘೋಷಣೆ

    ಉಡುಪಿ/ಶಿವಮೊಗ್ಗ: ಹಿಜಬ್-ಕೇಸರಿ ವಿವಾದದ ನಡುವೆ ಹೈಕೋರ್ಟ್ ಆದೇಶ ಮೇಲೆ ಪಿಯುಸಿ, ಪದವಿ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ತೀರ್ಮಾನಿಸಿತು. ಆದರೆ ಇತ್ತ ಉಡುಪಿ ಮತ್ತು ಶಿವಮೊಗ್ಗದ ಕೆಲ ಕಾಲೇಜ್‍ಗಳ ಆಡಳಿತ ಮಂಡಳಿ ನಿರ್ಧಾರದಂತೆ ಕಾಲೇಜ್‍ಗೆ ರಜೆ ಘೋಷಿಸಲಾಗಿದೆ.

    ಹಿಜಬ್-ಕೇಸರಿ ವಿವಾದ ಹೈಕೋರ್ಟ್‍ನಲ್ಲಿರುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಕಾಲೇಜುಗಳನ್ನು ತೆರೆಯಲು ಮುಂದಾಗಿತ್ತು. ಅಲ್ಲದೇ ಸರ್ಕಾರದ ಆದೇಶ ಪಾಲನೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಸ್ಪಷ್ಟ ಸಂದೇಶ ಕೂಡ ಶಾಲಾ-ಕಾಲೇಜುಗಳಿಗೆ ನೀಡಿತ್ತು. ಆದರೆ ರಾಜ್ಯದ ಕೆಲ ಶಾಲಾ-ಕಾಲೇಜ್‍ಗಳಲ್ಲಿ ವಿದ್ಯಾರ್ಥಿಗಳು ಹಿಜಬ್ ಧರಿಸಿಯೇ ಬಂದಿರುವುದು ಕಂಡುಬಂತು. ಇದನ್ನೂ ಓದಿ: ಹಿಜಬ್ ತೆಗೆಯಿರಿ ಅನ್ನೋದಕ್ಕೆ ಹೆತ್ತವರಿಗೆ ರೈಟ್ಸ್ ಇಲ್ಲ, ಅವನ್ಯಾವನು ಹೇಳೋಕೆ: ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿಯರು ರೆಬೆಲ್

    ಉಡುಪಿಯಲ್ಲಿ ಆರಂಭವಾದ ಹಿಜಬ್ ಗಲಾಟೆ ರಾಜ್ಯದ್ಯಾಂತ ಹಬ್ಬಿದೆ. ಈ ನಡುವೆ ಉಡುಪಿಯಲ್ಲಿ ಮತ್ತೆ ಗೊಂದಲ ಜಟಾಪಟಿಗೆ ಅವಕಾಶ ಕೊಡದಿರಲು ನಿರ್ಧರಿಸಿ ನಗರದ ಎಂಜಿಎಂ ಪಿಯು ಕಾಲೇಜ್‍ಗೆ ಇನ್ನೆರಡು ದಿನ ರಜೆ ನೀಡಲು ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದೆ. ಕಾಲೇಜ್‍ಗೆ ರಜೆ ಘೋಷಿಸಿ ಉಪನ್ಯಾಸಕರು ಆನ್‍ಲೈನ್ ಕ್ಲಾಸ್ ಮುಂದುವರಿಸಿದ್ದಾರೆ. ಈಗಾಗಲೇ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮಾತ್ರ ಕಾಲೇಜ್‍ನಲ್ಲಿ ಮಾಡಲು ಎಂಜಿಎಂ ಕಾಲೇಜು ಆಡಳಿತ ಮಂಡಳಿ ತೀರ್ಮಾನಿಸಿದೆ. ಇದನ್ನೂ ಓದಿ: ಹಿಜಬ್ ವಿವಾದ – ಇಂದು ಹೈಕೋರ್ಟ್‌ನಲ್ಲಿ ಏನಾಯ್ತು..?

    ಇತ್ತ ಶಿವಮೊಗ್ಗದಲ್ಲೂ ಕೂಡ ಮುಂಜಾಗ್ರತಾ ಕ್ರಮವಾಗಿ ಮೂರು ಕಾಲೇಜ್‍ಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಬಾಪೂಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಿ.ಹೆಚ್.ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್‍ಗೆ ರಜೆ ಘೋಷಿಸಿರುವ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳ 200 ಮೀ. ವ್ಯಾಪ್ತಿಯಲ್ಲಿ 4 ದಿನಗಳ ಕಾಲ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಿದೆ. ಜಿಲ್ಲೆಯ ಬಹುತೇಕ ಕಾಲೇಜ್‍ಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ.

  • ಬುರ್ಖಾ ಪದ್ಧತಿ ಇಲ್ಲದೆ ಇರೋದಕ್ಕೇ ದೇಶದಲ್ಲಿ ರೇಪ್ ಹೆಚ್ಚಾಗ್ತಿದೆ: ಜಮೀರ್ ವ್ಯಾಖ್ಯಾನ

    ಬುರ್ಖಾ ಪದ್ಧತಿ ಇಲ್ಲದೆ ಇರೋದಕ್ಕೇ ದೇಶದಲ್ಲಿ ರೇಪ್ ಹೆಚ್ಚಾಗ್ತಿದೆ: ಜಮೀರ್ ವ್ಯಾಖ್ಯಾನ

    ಹುಬ್ಬಳ್ಳಿ: ಹಿಜಬ್ ವಿವಾದದ ಹೊತ್ತಲ್ಲೇ ಮಾಜಿ ಸಚಿವ ಜಮೀರ್ ಅಹ್ಮದ್ ವ್ಯಾಖ್ಯಾನ ರಾಷ್ಟ್ರಮಟ್ಟದಲ್ಲಿ ವಿವಾದ ಆಗ್ತಿದೆ.

    ಹುಬ್ಬಳ್ಳಿಯಲ್ಲಿ ಮಾತನಾಡಿ, ಬುರ್ಖಾ ಪದ್ಧತಿ ಇಲ್ಲದ ಕಾರಣವೇ ಭಾರತದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ ಅಂತ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ. ಯುವತಿಯರ ಸೌಂದರ್ಯ ರಕ್ಷಣೆಗೆ ಬುರ್ಖಾ, ಹಿಜಬ್ ಪದ್ಧತಿ ಇದೆ ಎಂದು ಹೇಳಿದ್ದಾರೆ.

    ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲು ಅನುಸರಿಸಿಕೊಂಡು ಬರುತ್ತಿದ್ದಾರೆ. ಆದರೆ ಬುರ್ಖಾ ಹಾಗೂ ಹಿಜಬ್ ಹಾಕಲೇಬೇಕೆಂದು ಒತ್ತಾಯವಿಲ್ಲ. ಇಷ್ಟ ಇದ್ದವರು ಹಾಕಬಹುದು, ಇಷ್ಟ ಇಲ್ಲದವರು ಬಿಡಬಹುದು. ಇದು ಒಂದು ವಿವಾದವೇ ಅಲ್ಲ ಎಂದಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ಪೂರ್ವದಿಂದಲೂ ಹಿಜಬ್‌ ಧರಿಸುತ್ತಿದ್ದಾರೆ: ಜಮೀರ್ ಅಹ್ಮದ್

    ಬಿಜೆಪಿಯವರು ತಮ್ಮ ರಾಜಕೀಯ ಲಾಭಕ್ಕಾಗಿ ಮಾಡಿದ ಹುನ್ನಾರ. ವಿದ್ಯಾರ್ಥಿಗಳಲ್ಲಿ ಜಾತಿ ವಿಷ ಬೀಜ ಬಿತ್ತಿದ್ದಾರೆ ಅಂತ ಜಮೀರ್ ಟೀಕಿಸಿದ್ದಾರೆ. ಕೇರಳ ರಾಜ್ಯಪಾಲರು ಇಸ್ಲಾಂನಲ್ಲಿ ಹಿಜಬ್ ಕಡ್ಡಾಯ ಇಲ್ಲ ಎಂಬ ಹೇಳಿಕೆಗೆ ಜಮೀರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

  • ಕೇರಳ ಸಿಎಂ ಕಾರ್ಯಕ್ರಮದಲ್ಲಿ ಹಿಜಬ್‌ ಧರಿಸಿ ಪ್ರಾರ್ಥನಾ ಗೀತೆ ಹಾಡಿದ ವಿದ್ಯಾರ್ಥಿನಿಯರು

    ಕೇರಳ ಸಿಎಂ ಕಾರ್ಯಕ್ರಮದಲ್ಲಿ ಹಿಜಬ್‌ ಧರಿಸಿ ಪ್ರಾರ್ಥನಾ ಗೀತೆ ಹಾಡಿದ ವಿದ್ಯಾರ್ಥಿನಿಯರು

    ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಅವರಿದ್ದ ಕಾರ್ಯಕ್ರಮವೊಂದರಲ್ಲಿ ಹಿಜಬ್‌ಧಾರಿ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

    ಹಿಜಬ್‌ ಧರಿಸಿ ವೇದಿಕೆ ಮೇಲೆ ಪ್ರಾರ್ಥನಾ ಗೀತೆ ಹಾಡುತ್ತಿರುವ ವಿದ್ಯಾರ್ಥಿನಿಯ ಫೋಟೋವನ್ನು ಕೇರಳ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಶೇರ್‌ ಮಾಡಿದ್ದಾರೆ. ಫೋಟೋ ಜೊತೆಗೆ ʼಕೇರಳ, ನಮ್ಮ ಹೆಮ್ಮೆʼ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಂಸ್ಕೃತದಲ್ಲಿ 5 ಚಿನ್ನದ ಪದಕಗಳನ್ನ ಗೆದ್ದ ಮುಸ್ಲಿಂ ದಿನಗೂಲಿ ಕಾರ್ಮಿಕನ ಮಗಳು

    ತಿರುವನಂತಪುರಂನಲ್ಲಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುರುವಾರ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಅವರು ಪಾಲ್ಗೊಂಡಿದ್ದರು. ಅವರೊಟ್ಟಿಗೆ ಮೂವರು ಸಚಿವರು ಸಹ ಉಪಸ್ಥಿತರಿದ್ದರು.

    ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾರ್ಕ್ಸಿಸ್ಟ್‌) ಕೂಡ ಫೋಟೋವನ್ನು ಶೇರ್‌ ಮಾಡಿದ್ದು, ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಅವರು 53 ಹೊಸ ಹೈಟೆಕ್‌ ಶಾಲಾ ಕಟ್ಟಡಗಳನ್ನು ಉದ್ಘಾಟಿಸಿದರು. ಶಾಲಾ ವಿದ್ಯಾರ್ಥಿನಿಯರು ಜಾತ್ಯತೀತ ಆಶಯದ ಸ್ವಾಗತ ಗೀತೆಯನ್ನು ಹಾಡಿದ್ದಾರೆ. ಇದು ಪ್ರೀತಿಯ ಮನೆ. ವಿದ್ಯಾರ್ಥಿನಿಯರು ಶಾಲಾ ಸಮವಸ್ತ್ರದೊಂದಿಗೆ ಶಿರಸ್ತ್ರಾಣ (ಹಿಜಬ್‌) ಧರಿಸಿ ಹಾಡಿದ್ದಾರೆ. ಇದು ಸಾರ್ವಜನಿಕ ಸುವ್ಯವಸ್ಥೆಗೆ ಸಮಸ್ಯೆಯಲ್ಲ. ಶಿಕ್ಷಣ ಮೂಲಭೂತ ಹಕ್ಕು ಎಂದು ಬರೆದುಕೊಂಡಿದೆ. ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಬೇಕು, ಹಿಜಬ್ ಅಲ್ಲ : ಬಿಸ್ವಾ ಶರ್ಮಾ

    ಕರ್ನಾಟಕದಲ್ಲಿ ತಲೆದೋರಿರುವ ಹಿಜಬ್‌ ವಿವಾದವನ್ನು ಕೇರಳ ಸಿಎಂ ಪಿಣರಾಯ್‌ ವಿಜಯನ್‌ ಅವರು ಖಂಡಿಸಿದ್ದರು. ಇದು ನಮ್ಮ ದೇಶಕ್ಕೆ ಕೋಮುವಾದ ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುತ್ತದೆ. ಶಿಕ್ಷಣ ಸಂಸ್ಥೆಗಳು ಜಾತ್ಯತೀತತೆಯನ್ನು ಪೋಷಿಸುವ ತಾಣಗಳಾಗಬೇಕು. ಬದಲಾಗಿ ಚಿಕ್ಕ ಮಕ್ಕಳಲ್ಲಿ ಕೋಮು ವಿಷವನ್ನು ಬಿತ್ತುವ ಪ್ರಯತ್ನಗಳು ನಡೆಯುತ್ತಿವೆ ಎಂದು ಟೀಕಿಸಿದ್ದರು.