Tag: hijab controversy

  • ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮಾತ್ರ, ಹಿಜಬ್, ಕೇಸರಿ ತಿಕ್ಕಾಟ ನಡೆಯುತ್ತಿದೆ : ಹೆಚ್‍ಡಿಕೆ

    ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮಾತ್ರ, ಹಿಜಬ್, ಕೇಸರಿ ತಿಕ್ಕಾಟ ನಡೆಯುತ್ತಿದೆ : ಹೆಚ್‍ಡಿಕೆ

    ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಷ್ಟೇ ಹಿಜಬ್ ವಿವಾದ ನಡೆಯುತ್ತಿದ್ದು, ಇದು ಬಡ ಮಕ್ಕಳ ಭವಿಷ್ಯವನ್ನು ಬಲಿ ಪಡೆಯುವ ರಾಜಕೀಯ ದುರುದ್ದೇಶವಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹಿಜಬ್ ವಿವಾದದ ಕುರಿತು ಜಿಲ್ಲೆಯ ಚಿಂತಾಮಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಬಡ ಮಕ್ಕಳ ಭವಿಷ್ಯವನ್ನು ಬಲಿ ಪಡೆಯುವ ರಾಜಕೀಯ ದುರುದ್ದೇಶವಾಗಿದೆ. ಶ್ರೀಮಂತರ ಮಕ್ಕಳು ಓದುತ್ತಿರುವ ಖಾಸಗಿ ಶಾಲೆಗಳಲ್ಲಿ ಈ ವಿವಾದ ನಡೆಯುತ್ತಿಲ್ಲ. ಹಾಲಿ ಮಾಜಿ ಮಂತ್ರಿಗಳು ಶಾಸಕರ ಮಕ್ಕಳು ಓದುತ್ತಿರುವ ಶಾಲೆಗಳಲ್ಲಿ ವಿವಾದ ಇಲ್ಲ. ಅಮಾಯಕ ಮಕ್ಕಳಲ್ಲಿ ದ್ವೇಷದ ಭಾವನೆ ಹುಟ್ಟುಹಾಕುವುದು ಕೆಲವು ರಾಜಕೀಯ ಪಕ್ಷಗಳು ಬಲವರ್ಧನೆಗೆ ಷಡ್ಯಂತ್ರ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಣ್ಣ ಸುಳಿವು ಸಿಗದಂತೆ ಹತ್ಯೆ ಮಾಡಿದ್ದ ಹಂತಕ ಕೊನೆಗೂ ಖಾಕಿ ಬಲೆಗೆ!

    ಇವರು ಸಮಾಜದಲ್ಲಿ ಕೋಮುಗಲಭೆ ಉಂಟುಮಾಡಿ ಅಶಾಂತಿ ಉಂಟುಮಾಡಲು ಹೊರಟಿದ್ದಾರೆ. ಹಿಜಬ್ ವಿವಾದ ಉದ್ಬವವಾದ ದಿನವೇ ಸರ್ಕಾರ ಸರಿಯಾದ ಕ್ರಮ ತೆಗದುಕೊಂಡಿಲ್ಲ. ಸರ್ಕಾರ ಸರಿಯಾದ ತೀರ್ಮಾನ ತೆಗೆದುಕೊಂಡಿದ್ದರೆ ರಾಷ್ಟ್ರೀಯ ಮಟ್ಟದ ಚರ್ಚೆಗೆ ಅವಕಾಶ ಇರುತ್ತಿರಲಿಲ್ಲ. ರಾಜಕೀಯ ತೆವಲಿಗೆ ರಾಷ್ಟ್ರೀಯ ಪಕ್ಷಗಳು ಬಡ ಮಕ್ಕಳನ್ನು ಬೀದಿಗೆ ತಂದಿದ್ದಾರೆ. ಹಿಜಾಬ್, ಕೇಸರಿ ಉಡುಪು ಧರಿಸುವ ವಿಚಾರದಲ್ಲಿ ಬಡಮಕ್ಕಳನ್ನ ಬಲಿ ಕೊಡುವ ಕೆಲಸ ನಡೆಯುತ್ತಿದೆ. ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ, ಹಿಜಬ್, ಕೇಸರಿ ತಿಕ್ಕಾಟ ನಡೆಯುತ್ತಿದೆ ಎಂದು ಸಿಡಿದರು. ಇದನ್ನೂ ಓದಿ: ಸಂಸ್ಕೃತದಲ್ಲಿ 5 ಚಿನ್ನದ ಪದಕಗಳನ್ನ ಗೆದ್ದ ಮುಸ್ಲಿಂ ದಿನಗೂಲಿ ಕಾರ್ಮಿಕನ ಮಗಳು

    ಖಾಸಗಿ ಶಾಲಾ ಕಾಲೇಜುಗಳಲ್ಲಿ ಈ ವಿಚಾರವಾಗಿ ಯಾವುದೇ ಸಮಸ್ಯೆ ಇಲ್ಲ. ಶಾಸಕರು, ಮಂತ್ರಿಗಳು, ಮಾಜಿ ಶಾಸಕರು, ಮಂತ್ರಿಗಳ ಮಕ್ಕಳು ಖಾಸಗಿ ಶಾಲಾ ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಬಡಪಾಯಿಗಳ ಮಕ್ಕಳು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸೇರುತ್ತಾರೆ. ಬಡಪಾಯಿಗಳ ಮಕ್ಕಳನ್ನು ಬೀದಿಗೆ ಬಿಟ್ಟು ರಾಜಕೀಯ ಪಕ್ಷಗಳು ಲೆಕ್ಕಾಚಾರ ಹಾಕುತ್ತಿವೆ ಎಂದರು.

  • ಹಿಜಾಬ್ ವಿವಾದದ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿಲ್ಲ: ಬಿ.ಸಿ ಪಾಟೀಲ್

    ಹಿಜಾಬ್ ವಿವಾದದ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿಲ್ಲ: ಬಿ.ಸಿ ಪಾಟೀಲ್

    ಚಿತ್ರದುರ್ಗ: ಹಿಜಾಬ್ ವಿವಾದದ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರವು ವಿಫಲವಾಗಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.

    ಕಾಂಗ್ರೆಸ್, ಜೆಡಿಎಸ್ ಮುಖಂಡರು ಹಿಜಾಬ್ ವಿವಾದದ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರವು ವಿಫಲವಾಗಿದೆ ಎಂಬ ಆರೋಪದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿಲ್ಲ. ಈಗಾಗಲೇ ವಿದ್ಯಾರ್ಥಿಗಳಿಗೆ ಸಮವಸ್ತ್ರ ಧರಿಸಿ ಬರಲು ಸರ್ಕಾರ ಸೂಚಿಸಿದೆ. ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಕೋರ್ಟ್ ಸೂಚನೆಯನ್ನು ನಾವು ಪಾಲಿಸುತ್ತೇವೆ ಎಂದರು. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಬುರ್ಕಾ ಧರಿಸದೇ ಧೈರ್ಯ ಪ್ರದರ್ಶಿಸಿ: ಕಂಗನಾ ರಣಾವತ್

    ಹಿಜಾಬ್ ವಿವಾದವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ವಿವಾದವನ್ನು ಎತ್ತಿಕಟ್ಟಿ ಪ್ರಚೋದನೆ ಮಾಡುವ ಕೆಲಸ ಕೈ ಪಕ್ಷವು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ, ಮೂಗುತಿ ಸುಂದರಿ ಸುಷ್ಮಿತಾ ಗೌಡ

    ಮಾಜಿ ಸಿಎಂ ಜಗದೀಶ್ ಶೆಟ್ಟರ್ ದೆಹಲಿ ಪ್ರವಾಸದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರತಿದಿನ ಒಬ್ಬರು ನಾಯಕರು ದೆಹಲಿಗೆ ಹೋಗುತ್ತಾರೆ. ಸಿಎಂ ಬದಲಾವಣೆ ಎಂಬುದು ಸರಿಯಲ್ಲ. ಹೆಚ್.ಡಿ ರೇವಣ್ಣ ಹಾಗೂ ಕಾಂಗ್ರೆಸ್ಸಿಗರು ನಮ್ಮನ್ನು ಯಾವತ್ತು ಹೊಗಳಲ್ಲ. ಬಸವರಾಜ ಬೊಮ್ಮಾಯಿ ಅವರು ಸಿಎಂ ಸ್ಥಾನಕ್ಕೆ ಸಮರ್ಥವಾದ ನಾಯಕರಾಗಿದ್ದು, ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ.

  • ಇದನ್ನು ನಾವು ಇಷ್ಟು ಬೇಗ ನಿರೀಕ್ಷಿಸಿರಲಿಲ್ಲ: ಸಿಎಫ್‍ಐ

    ಇದನ್ನು ನಾವು ಇಷ್ಟು ಬೇಗ ನಿರೀಕ್ಷಿಸಿರಲಿಲ್ಲ: ಸಿಎಫ್‍ಐ

    ಉಡುಪಿ: ಹಿಜಬ್ ವರ್ಸಸ್ ಕೇಸರಿ ವಿವಾದಕ್ಕೆ ರಾಜ್ಯ ಹೈಕೋರ್ಟ್ ಮೌಖಿಕ ಆದೇಶ ನೀಡಿದೆ. ಈ ಆದೇಶ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾಗೆ(ಸಿಎಫ್‍ಐ) ತೃಪ್ತಿ ನೀಡಿಲ್ಲ. ಸೋಮವಾರದ ನಂತರದ ತ್ರಿಸದಸ್ಯ ಪೀಠದ ವಿಚಾರಣೆ ಮೇಲೆ ಸಿಎಫ್‍ಐ ಕಣ್ಣಿಟ್ಟಿದೆ.

    ನಾವು ಇದನ್ನು ಇಷ್ಟು ಬೇಗ ನಿರೀಕ್ಷಿಸಿರಲಿಲ್ಲ. ನಾವು ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಯಾವುದೇ ಒತ್ತಡ ಹಾಕಲ್ಲ. ಹಿಜಬ್ ಧರಿಸುವ ಬಗ್ಗೆ ಯಾವುದೇ ಸಲಹೆ ನೀಡಲ್ಲ. ಹಿಜಬ್ ತೆಗೆದು ಕಾಲೇಜಿಗೆ ಹೋಗುವ ವಿಚಾರ ಪೋಷಕರು ಹಾಗೂ ವಿದ್ಯಾರ್ಥಿನಿಯರ ಅಭಿಪ್ರಾಯಕ್ಕೆ ಬಿಟ್ಟಿದೆ ಎಂದು ಸಿಎಫ್‍ಐ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲ್ ಕಟ್ಟೆ ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೆ ನಡೆದ ಎಲ್ಲಾ ಘಟನೆಗಳನ್ನು ಮರೆಯೋಣ – ವಿದ್ಯಾರ್ಥಿಗಳಿಗೆ ರಘುಪತಿ ಭಟ್ ಕರೆ

    ಹಿಜಬ್ ವಿವಾದದ ಮಧ್ಯಂತರ ತೀರ್ಪಿಗೆ ಪಿಎಫ್‍ಐ ತಕ್ಷಣದ ಪ್ರತಿಕ್ರಿಯೆ ನೀಡಿದೆ. ಕೋರ್ಟ್‍ನ ಆದೇಶ ಸಂಘಟನೆ ಸ್ವೀಕರಿಸಿದೆ. ಸೋಮವಾರ ನಂತರದ ವಿಚಾರಣೆ ಸಂದರ್ಭ ನಮ್ಮ ಪರವಾಗಿ ತೀರ್ಪುಗಳು ಬರಬಹುದು ಎಂಬ ನಂಬಿಕೆ ವ್ಯಕ್ತಪಡಿಸಿದೆ. ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಇದನ್ನು ಹೊರತಾಗಿ ಶನಿವಾರ ಅಥವಾ ಸೋಮವಾರದಿಂದ ಕಾಲೇಜಿಗೆ ತೆರಳುವುದು ವಿದ್ಯಾರ್ಥಿನಿಯರ ಇಚ್ಚೆಗೆ ಬಿಟ್ಟಿದ್ದು ಎಂದಿದೆ. ಇದನ್ನೂ ಓದಿ: ಹಿಜಬ್‌- ಕೇಸರಿ ಫೈಟ್‌ಗೆ ತಾತ್ಕಾಲಿಕ ಬ್ರೇಕ್‌ – ಹೈಕೋರ್ಟ್‌ ಕಲಾಪದ ಪೂರ್ಣ ಪಾಠ ಇಲ್ಲಿದೆ

  • ದಾವಣಗೆರೆಗೆ ಹಿಜಬ್ ವಿವಾದ ಎಂಟ್ರಿ – ಕೇಸರಿ ಶಾಲಿನೊಂದಿಗೆ ವಿದ್ಯಾರ್ಥಿಗಳು ಹಾಜರ್

    ದಾವಣಗೆರೆಗೆ ಹಿಜಬ್ ವಿವಾದ ಎಂಟ್ರಿ – ಕೇಸರಿ ಶಾಲಿನೊಂದಿಗೆ ವಿದ್ಯಾರ್ಥಿಗಳು ಹಾಜರ್

    ದಾವಣಗೆರೆ: ಬೆಣ್ಣೆ ನಗರಿಗೂ ಹಿಜಾಬ್ ವಿವಾದವು ಕಾಲಿಟ್ಟಿದ್ದು, ವಿದ್ಯಾರ್ಥಿಗಳು ಹೊನ್ನಾಳಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‍ನಲ್ಲಿ ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ.

    ಮುಸ್ಲಿಂ ವಿದ್ಯಾರ್ಥಿಗಳು ಸರ್ಕಾರದ ಆದೇಶವಿದ್ದರೂ ಕೂಡ ಹಿಜಾಬ್ ಧರಿಸಿ ಬಂದಿದ್ದಾರೆ. ತರಗತಿಯಲ್ಲಿ ಬುರ್ಖಾ ಧರಿಸಿ ಬಂದ ಹಿನ್ನಲೆ ನಾವು ಕೂಡ ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗಿದ್ದೇವೆ ಎಂದು ಹಿಂದೂ ವಿದ್ಯಾರ್ಥಿಗಳು ಹೇಳಿದ್ದಾರೆ.

    ಎಲ್ಲಿವರೆಗೆ ತರಗತಿಯಲ್ಲಿ ಹಿಜಾಬ್ ಇರುತ್ತದೆಯೋ ಅಲ್ಲಿಯವರೆಗೆ ಕೇಸರಿ ಶಾಲು ಧರಿಸಿಯೇ ಹಾಜರಾಗುತ್ತೇವೆ ಎಂದು ಹಿಂದೂ ವಿದ್ಯಾರ್ಥಿಗಳು ಹೇಳಿದರೆ ಹಿಜಬ್ ಧರಿಸಿದ ವಿದ್ಯಾರ್ಥಿನಿಯರು ನಾವು ಹಿಜಬ್ ಬುರ್ಕಾ ಧರಿಸಿಯೇ ಕಾಲೇಜಿಗೆ ಬರುತ್ತೇವೆ. ನಾವು ಸರ್ಕಾರ ಎನೇ ಆದೇಶ ಹೊರಡಿಸಿದರು ಹಿಜಾಬ್ ತೆಗೆಯುವುದಿಲ್ಲ ಪಟ್ಟು ಹಿಡಿದಿದ್ದಾರೆ.

    ಎರಡು ಬಣದ ವಿದ್ಯಾರ್ಥಿಗಳು ಸಮವಸ್ತ್ರ ನೀತಿ ಸಂಹಿತೆಗೆ ಕ್ಯಾರೆ ಎನ್ನುತ್ತಿಲ್ಲ. ವಿದ್ಯಾರ್ಥಿಗಳು ಶಾಲಾ ತರಗತಿಯಲ್ಲಿ ಹಿಜಬ್ ಹಾಗೂ ಕೇಸರಿ ಶಾಲು ಹಾಕಿಕೊಂಡೇ ಕುಳಿತು ಪಾಠ ಕೇಳುತ್ತಿದ್ದು, ಪದವಿ ಕಾಲೇಜಿನಲ್ಲಿ ಯಾವುದೇ ಪ್ರತಿಭಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಕೊರೊನಾಗೆ ಗೆಳೆಯ ಮೃತ – ಸ್ನೇಹಿತನ ಮಡದಿಯನ್ನ ಮದುವೆಯಾದ ಯುವಕ 

    ಹಿಜಾಬ್- ಕೇಸರಿ ಶಾಲು ನಡುವಿನ ಗಲಾಟೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಕಾಲೇಜ್‍ಗೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿದ್ದಾರೆ. ನಾವು ಯಾವುದೇ ಕಾರಣಕ್ಕೂ ಹಿಜಬ್ ತೆಗೆಯಲ್ಲ ಎಂದು ಶಾಸಕರಿಗೆ ಏರುಧ್ವನಿಯಲ್ಲೇ ವಿದ್ಯಾರ್ಥಿನಿಯರ ಉತ್ತರ ನೀಡಿದ್ದಾರೆ.

    ನೀವು ಈ ರೀತಿ ಹಿಜಬ್ ಧರಿಸಿ ಬಂದರೆ ಅವರು ಕೇಸರಿ ಶಾಲು ಧರಿಸುತ್ತಾರೆ. ಇದು ಮತ್ತೆ ಸಂಘರ್ಷಕ್ಕೆ ಕಾರಣವಾಗುತ್ತೆ ಎಂದು ಸಮಾಧಾನ ಮಾಡಲು ಮುಂದಾದಾಗ ಮುಸ್ಲಿಂ ವಿದ್ಯಾರ್ಥಿನಿಯರು ಏನೇ ಆಗಲಿ ನಾವು ಯಾವುದೇ ಕಾರಣಕ್ಕೂ ಹಿಜಬ್ ತೆಗೆಯಲ್ಲ. ಹಿಜಬ್ ಹಾಕಿಕೊಂಡೇ ಕಾಲೇಜಿಗೆ ಬರುತ್ತೇವೆ ಎಂದು ಪಟ್ಟು ಹಿಡಿದು ಕುಳಿತ್ತಿದ್ದಾರೆ. ಇದನ್ನೂ ಓದಿ: ಸಿಎಂ ತವರು ಜಿಲ್ಲೆಗೂ ಕಾಲಿಟ್ಟ ಹಿಜಬ್, ಕೇಸರಿ ಶಾಲು ಫೈಟ್ – ವಿದ್ಯಾರ್ಥಿಗಳನ್ನ ಹೊರಹಾಕಿದ ಕಾಲೇಜು ಸಿಬ್ಬಂದಿ

    ದಾವಣಗೆರೆಯಲ್ಲಿ ತೀವ್ರ ಸ್ವರೂಪದ ಹೋರಾಟಕ್ಕೆ ಕಾರಣವಾದ ಹಿಜಬ್ ವಿವಾದವು ನಗರದ ಜಯದೇವ ಸರ್ಕಲ್‍ನಲ್ಲಿ ಮುಸ್ಲಿಂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆದಿದೆ. ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳಿಂದ ಈ ಪ್ರತಿಭಟನೆ ನಡೆದಿದ್ದು, ನಾವು ಹಿಜಬ್ ನಿಯಮವನ್ನು ಪಾಲಿಸಿಯೇ ಪಾಲಿಸುತ್ತೇವೆ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

    ಹಿಂದೂ ಜಾಗರಣಾ ವೇದಿಕೆಯು ತರಗತಿಗಳಲ್ಲಿ ಹಿಜಬ್ ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನಗರದ ಜಯದೇವ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಯುವ ವಾಹಿನಿ ಸಂಘಟನೆಗಳ ಪ್ರತಿಭಟನೆ ನಡೆಸಿದ್ದಾರೆ. ಹಿಜಬ್ ವಿರೋಧಿಸಿ ಸಮವಸ್ತ್ರ ಧರಿಸಿ, ಹಿಂದೂಸ್ತಾನದಲ್ಲಿ ಇರುವುದಾದರೆ ಹಿಂದೂ ಧರ್ಮದವರು ಹೇಳಿದ ಹಾಗೇ ಕೇಳಬೇಕು ಅಂತ ಘೋಷಣೆ ಕೂಗಿದ್ದಾರೆ. ಕಾರ್ಯಕರ್ತರು ಕೇಸರಿ ಶಾಲು ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಹಿನ್ನಲೆ ಜಯದೇವ ವೃತ್ತದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಡಿವೈಎಸ್ಪಿ ನರಸಿಂಹ ತಾಮ್ರಧ್ಬಜ, ಸಿಪಿಐ ಗುರುಬಸವರಾಜ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಎರ್ಪಡಿಸಿದ್ದಾರೆ.

  • ಹಿಜಬ್ ಸವಾಲಿಗೆ ಕೇಸರಿ ಶಾಲು ಪ್ರತಿಸವಾಲು – ಕುಂದಾಪುರದ ಬಹುತೇಕ ಕಾಲೇಜುಗಳಲ್ಲಿ ಟೆನ್ಶನ್

    ಹಿಜಬ್ ಸವಾಲಿಗೆ ಕೇಸರಿ ಶಾಲು ಪ್ರತಿಸವಾಲು – ಕುಂದಾಪುರದ ಬಹುತೇಕ ಕಾಲೇಜುಗಳಲ್ಲಿ ಟೆನ್ಶನ್

    ಬೆಂಗಳೂರು: ಹಿಜಬ್- ಕೇಸರಿ ವಿವಾದ ಉಡುಪಿ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹಬ್ಬಿದೆ. ಅದರಲ್ಲೂ ಕುಂದಾಪುರದ ಪ್ರತಿಯೊಂದು ಕಾಲೇಜಿನಲ್ಲೂ ಹಿಜಬ್-ಕೇಸರಿ ಫೈಟ್ ನಡೆದಿದೆ.

    ನಿನ್ನೆ ಮೊನ್ನೆಯೆಲ್ಲಾ ಬರೀ ಹುಡುಗರು ಕೇಸರಿ ಶಾಲಿನೊಂದಿಗೆ ಕಾಣಿಸಿಕೊಳ್ತಿದ್ರು. ಇದೀಗ ಭಂಡಾರ್ಕಾರ್ಸ್ ಕಾಲೇಜಿನ ಹೆಣ್ಮಕ್ಕಳು ಕೂಡ ಕೇಸರಿ ಶಾಲು ಹಾಕಿಕೊಂಡು ಕುಂದಾಪುರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅವರು ಹಿಜಬ್ ಕಳಚುವ ತನಕ ನಾವು ಕೇಸರಿ ಶಾಲು ತೆಗೆಯಲ್ಲ ಎಂದು ಆ ಹೆಣ್ಮಕ್ಕಳು ಶಪಥ ಮಾಡಿದ್ದಾರೆ.

    ಎನ್‍ಆರ್ ಶೆಟ್ಟಿ ಕಾಲೇಜಿನಲ್ಲಿಯೂ ಹಿಜಬ್-ಕೇಸರಿಧಾರಿಗಳ ಪ್ರತಿಭಟನೆ ನಡೆದಿದೆ. ಜೈಶ್ರೀರಾಮ್-ಹರಹರ ಮಹಾದೇವ್ ಘೋಷಣೆಗಳು ಮುಗಿಲುಮುಟ್ಟಿವೆ. ಇದರಿಂದ ಎಚ್ಚೆತ್ತ ಆಡಳಿತ ಮಂಡಳಿ ಹೈಕೋರ್ಟ್ ಆದೇಶ ಬರುವ ತನಕ ಕಾಲೇಜಿಗೆ ರಜೆ ಘೋಷಿಸಿದೆ. ಪೊಲೀಸರ ಸೂಚನೆ ಮೇರೆಗೆ ಮಕ್ಕಳು ಮನೆಗೆ ವಾಪಸ್ ಆಗಿವೆ. ಇದನ್ನೂ ಓದಿ: ಹಿಜಬ್‍ಗೆ ಬ್ರೇಕ್ – ಏಕರೂಪ ವಸ್ತ್ರಸಂಹಿತೆ ಜಾರಿಮಾಡಿದ ಸರ್ಕಾರ

    ಈ ಮಧ್ಯೆ ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ಇನ್ಮುಂದೆ ಹಿಜಬ್, ಕೇಸರಿ ಶಲ್ಯಕ್ಕೆ ಅವಕಾಶ ಇಲ್ಲ. ಸೋಮವಾರದಿಂದ ಮಕ್ಕಳು ಕೇವಲ ಸಮವಸ್ತ್ರದಲ್ಲಿ ಬರಬೇಕು ಎಂದು ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಸೂಚಿಸಿದೆ. ಯಾರೂ ಕೂಡ ಕಾಲೇಜಿನ ಹೊರಗೆ ಕುಳಿತುಕೊಳ್ಳಬಾರದು. ಹಿಜಬ್‍ಗಾಗಿ ಒತ್ತಾಯಿಸುವವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುವುದು ಎಂದು ಆದೇಶ ಹೊರಡಿಸಿದೆ.

    ಅತ್ತ ಭಂಡಾಕಾರ್ಸ್ ಕಾಲೇಜಿನಲ್ಲಿ ಪೋಷಕರ ಸಭೆ ನಡೀತು. ಹಿಜಬ್ ಧರಿಸಲು ಅವಕಾಶ ಕೊಡಿ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಪ್ರಾಂಶುಪಾಲರನ್ನು ಕೋರಿದ್ರು. ರಾಜಕೀಯ ಸಂಘಟನೆಗಳ ಎಂಟ್ರಿಗೆ ಅವಕಾಶ ಕೊಡಬೇಡಿ ಅಂತಲೂ ಮನವಿ ಮಾಡಿಕೊಂಡರು. ಇದನ್ನೂ ಓದಿ: ಕೇಂದ್ರದ ಬೇಟಿ ಬಚಾವೋ, ಬೇಟಿ ಪಡಾವೋ ಈಗ ಬೇಟಿ ಹಠಾವೋ ಆಗಿ ಬದಲಾಗುತ್ತಿದೆ: ಹೆಚ್‍ಡಿಕೆ

  • ಸಿದ್ದರಾಮಯ್ಯ ಮೂಲಭೂತ ಹಕ್ಕುಗಳನ್ನ ಓದಿಕೊಳ್ಳಲಿ: ಸುಧಾಕರ್

    ಸಿದ್ದರಾಮಯ್ಯ ಮೂಲಭೂತ ಹಕ್ಕುಗಳನ್ನ ಓದಿಕೊಳ್ಳಲಿ: ಸುಧಾಕರ್

    ಚಿಕ್ಕಬಳ್ಳಾಪುರ: ಹಿಜಬ್ ಮೂಲಭೂತ ಹಕ್ಕು ಎಂಬ ಮಾಜಿ ಸಿಎಂ ಹೇಳಿಕೆ ಖಂಡಸಿರುವ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಸಿದ್ದರಾಮಯ್ಯನವರು ಮೂಲಭೂತ ಹಕ್ಕುಗಳನ್ನ ಓದಿಕೊಳ್ಳಲಿ ಅಂತ ಟೀಕಿಸಿದ್ದಾರೆ.

    siddaramaiah

    ಸಂವಿಧಾನದ ಪೀಠಿಕೆಯಲ್ಲಿ ಮೂಲಭೂತ ಹಕ್ಕುಗಳಿವೆ, ಮೊದಲು ಅವನ್ನ ಓದಿಕೊಳ್ಳಲಿ. ಸಿದ್ದರಾಮಯ್ಯನವರು ಹಿರಿಯರು, ಮಾಜಿ ಸಿಎಂಗಳಾಗಿದ್ದವರು. ಸಂವಿಧಾನ ಬಲ್ಲವರು ಈ ರೀತಿ ಮಾತಾಡೋದು ಸರಿ ಅಲ್ಲ ಎಂದರು. ಇದನ್ನೂ ಓದಿ: ಹಿಜಬ್‍ಗೆ ಬ್ರೇಕ್ – ಏಕರೂಪ ವಸ್ತ್ರಸಂಹಿತೆ ಜಾರಿಮಾಡಿದ ಸರ್ಕಾರ

    ಈ ಹಿಜಬ್ ವಿಚಾರದಲ್ಲಿ ರಾಷ್ಟ್ರೀಯ ನಾಯಕರ ಹೇಳಿಕೆಗಳು ದೇಶದಲ್ಲಿ ಆಭದ್ರತೆ, ಆಶಾಂತಿಗೆ ಕಾರಣವಾಗಲಿವೆ. ಇದು ರಾಜಕೀಯದ ವಿಷಯ ಅಲ್ಲ. ದೇಶದ ಐಕ್ಯತೆಯ ವಿಷಯ. ದೇಶದಲ್ಲಿ ಶಾಂತಿ ಭಂಗ ತರುವ ವಿಚಾರಗಳು ಆಗಬಾರದು. ಸಹಬಾಳ್ವೆಯಿಂದ ನಡೆದುಕೊಂಡು ಹೋಗಬೇಕು. ಮೋದಿಯವರ ಆಶಯ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಯಾವುದೇ ಧರ್ಮದ ಜನರಿಗೆ ನಮ್ಮಿಂದ ಅಸಹಕಾರ ಇಲ್ಲ. ಎಲ್ಲರನ್ನೂ ಸಮನಾಗಿ ನೋಡುವುದೇ ನಮ್ಮ ಆಶಯ ಎಂದರು.