Tag: hijab controversy

  • ಹಿಜಬ್ ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಲಿ, ಆಗ ನಮ್ಮ ದೇಶದ ಮಹತ್ವ ಗೊತ್ತಾಗುತ್ತೆ: ಯು.ಟಿ.ಖಾದರ್

    ಹಿಜಬ್ ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಲಿ, ಆಗ ನಮ್ಮ ದೇಶದ ಮಹತ್ವ ಗೊತ್ತಾಗುತ್ತೆ: ಯು.ಟಿ.ಖಾದರ್

    ಮಂಗಳೂರು: ಹಿಜಬ್ ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಲಿ ಎಂದು ವಿಧಾನಸಭಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಹಿಜಬ್ ವಿದ್ಯಾರ್ಥಿನಿಯರಿಗೆ ತಿರುಗೇಟು ನೀಡಿದರು.

    ಮಂಗಳೂರಿನಲ್ಲಿ ಹಿಜಬ್ ವಿವಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಲಿ, ಪಾಕಿಸ್ತಾನ, ಸೌದಿಯಂತಹ ದೇಶಗಳಿಗೆ ಹೋಗಲಿ. ಆಗ ಅವರಿಗೆ ನಮ್ಮ ದೇಶದ ಮಹತ್ವ ಗೊತ್ತಾಗುತ್ತೆ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಖಾದರ್ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ, ಅಡ್ಯಾರ್‌ಗೆ ಹೋಗಿ ಕ್ರಿಕೆಟ್ ಆಡ್ತಿದ್ದಾರೆ- ಹಿಜಬ್ ವಿದ್ಯಾರ್ಥಿನಿ ಅಸಮಾಧಾನ

    ನಮ್ಮ ದೇಶದಲ್ಲಿ ಬೇಕಾದ ಹಾಗೆ ಮಾತನಾಡೋದು, ಡಿಸಿಯನ್ನು ಭೇಟಿಯಾಗೋದು, ಪ್ರೆಸ್ ಮೀಟ್ ಎಲ್ಲ ಮಾಡಬಹುದು. ಆದರೆ ಅದನ್ನೇ ವಿದೇಶಕ್ಕೆ ಹೋಗಿ ಮಾತನಾಡಲಿ. ಇಲ್ಲಿ ಹುಲಿಯ ಹಾಗೆ ಇದ್ದವರು ಅಲ್ಲಿ ಬೆಕ್ಕಿನ ತರಹ ಆಗುತ್ತಾರೆ. ನಮ್ಮ ದೇಶದ ಕಾನೂನು ನೀಡಿದ ಅವಕಾಶದ ಮಹತ್ವ ಗೊತ್ತಾಗುತ್ತದೆ. ಇಲ್ಲಿ ಸಿಗುವ ಸ್ವಾತಂತ್ರ್ಯದ ಅರಿವು ಆಗುತ್ತದೆ ಎಂದು ಕಿಡಿಕಾರಿದರು.

  • ಅಯೋಧ್ಯೆ ರೀತಿ ಮಳಲಿ ಮಸೀದಿಯನ್ನೂ ವಾಪಾಸ್ ಪಡೆಯುತ್ತೇವೆ: ಮುತಾಲಿಕ್ ಸವಾಲು

    ಅಯೋಧ್ಯೆ ರೀತಿ ಮಳಲಿ ಮಸೀದಿಯನ್ನೂ ವಾಪಾಸ್ ಪಡೆಯುತ್ತೇವೆ: ಮುತಾಲಿಕ್ ಸವಾಲು

    ಮೈಸೂರು: ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ತೆಗೆದು ರಾಮ ಮಂದಿರ ಮರಳಿ ಕಟ್ಟಿದ ರೀತಿಯಲ್ಲಿ ಮಳಲಿ ಮಸೀದಿಯ ಜಾಗದಲ್ಲೂ ಮೂಲ ದೇವಸ್ಥಾನ ನಿರ್ಮಿಸುತ್ತೇವೆ. ತಾಕತ್ ಇದ್ದರೆ ತಡೆಯಿರಿ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.

    ಮಳಲಿ ಮಸೀದಿ ಬಿಟ್ಟು ಕೊಡುವುದು ಕನಸಿನ ಮಾತು ಎಂಬ ಎಸ್‍ಡಿಪಿಐ ರಾಜ್ಯಾಧ್ಯಕ್ಷನ ಮಾತಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಜ್ಯದ 30 ಸಾವಿರ ಮಸೀದಿಗಳ ಮೂಲದಲ್ಲಿ ದೇವಸ್ಥಾನಗಳಿವೆ. ಅವುಗಳನ್ನು ವಾಪಸ್ ಪಡೆದೇ ತೀರುತ್ತೇವೆ. ಎಸ್‍ಡಿಪಿಐಗೆ ತಾಕತ್ ಇದ್ದರೆ ಅದನ್ನು ತಡೆಯಲಿ. ಇದು ನನ್ನ ಸವಾಲು ಎಂದರು. ಇದನ್ನೂ ಓದಿ: ಮಕ್ಕಳು ಓಡಿ ಹೋಗದಂತೆ ತಡೆಯಲು ಕಾಲಿಗೆ ಕಬ್ಬಿಣ ಸರಪಳಿ ಕಟ್ಟಿದ ಮೌಲಾನಾ

    ಮಳಲಿಯ ಮಸೀದಿಯಲ್ಲಿ ಹಿಂದೂ ದೇವಸ್ಥಾನದ ಕುರುಹು ಪತ್ತೆಯಾಗಿದೆ. ಅದನ್ನು ವಾಪಸ್ ಪಡೆದೇ ಪಡೆಯುತ್ತೇವೆ. ಎಲ್ಲಾ ಮಸೀದಿಗಳನ್ನು ದೇವಾಲಯ ಒಡೆದು ಕಟ್ಟಲಾಗಿದೆ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಒಡೆದು ರಾಮ ಮಂದಿರ ಕಟ್ಟಿದ ರೀತಿ ಮಳಲಿ ಮಸೀದಿಯನ್ನು ಪಡೆಯುತ್ತೇವೆ ಎಂದರು.

    ಅನುಭವ ಮಂಟಪದ ಪವಿತ್ರ ಸ್ಥಾನ ಈಗ ಅಪವಿತ್ರವಾಗಿದೆ. ಪೀರ್ ಪಾಷಾ ಬಂಗ್ಲೆಯನ್ನು ಅನುಭವ ಮಂಟಪವಾಗಿ ಮತ್ತೆ ಬದಲಾಯಿಸಬೇಕು. ಈ ನಿಟ್ಟಿನಲ್ಲಿನ ಜೂನ್ 12 ರ ಹೋರಾಟಕ್ಕೆ ಶ್ರೀರಾಮ ಸೇನೆ ಬೆಂಬಲವಿದೆ ಎಂದರು. ಇದನ್ನೂ ಓದಿ: ಸಿಲಿಂಡರ್ ಸ್ಫೋಟದಿಂದ ಕಟ್ಟಡ ಕುಸಿದು ಮಗು ಸೇರಿದಂತೆ 4 ಮಂದಿ ಸಾವು

    HIJAB 2

    ರಾಜ್ಯದಲ್ಲಿ ಮತ್ತೆ ಆರಂಭವಾದ ಹಿಜಾಬ್ ವಿವಾದ ಬಗ್ಗೆ ಪ್ರತಿಕ್ರಿಯೆ ನೀಡಿ, ಕುರಾನ್ ಶರಿಯಾ ಪ್ರಕಾರ ನಡೆಯಲು ಇದು ಪಾಕಿಸ್ತಾನ ಅಲ್ಲ. ಇದು ಭಾರತ. ಕಾನೂನು ವಿರುದ್ಧ ಹೋದವರನ್ನು ಒದ್ದು ಒಳಗೆ ಹಾಕಿ. ಈ ಮಕ್ಕಳ ಹಿಂದೆ ಮುಲ್ಲಾ ಮೌಲಿಗಳ ಷಡ್ಯಂತ್ರ ಅಡಗಿದೆ ಎಂದು ಕಿಡಿಕಾರಿದರು.

  • ತುಮಕೂರಲ್ಲಿ ಮುಸ್ಲಿಂ ಸಮುದಾಯದ ಅಂಗಡಿ ಮುಂಗಟ್ಟು ಬಂದ್

    ತುಮಕೂರಲ್ಲಿ ಮುಸ್ಲಿಂ ಸಮುದಾಯದ ಅಂಗಡಿ ಮುಂಗಟ್ಟು ಬಂದ್

    ತುಮಕೂರು: ಹಿಜಬ್ ವಿವಾದದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಇದರ ಹಿನ್ನೆಲೆಯಲ್ಲಿ ಮುಸ್ಲಿಂ ಸಂಘಟನೆಗಳು ಇಂದು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದಾರೆ.

    ಹೈಕೋರ್ಟ್ ತೀರ್ಪು ಸಂಬಂಧಿಸಿದಂತೆ ಮುಸ್ಲಿಂ ವ್ಯಾಪಾರಸ್ಥರು ನಗರದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಿದ್ದಾರೆ. ಕಾಲ್ ಟ್ಯಾಕ್ಸ್ ಸರ್ಕಲ್, ಬಿ.ಜಿ.ಪಾಳ್ಯ ಸರ್ಕಲ್, ಗುಬ್ಬಿ ಗೇಟ್, ಕುಣಿಗಲ್ ರಿಂಗ್ ರಸ್ತೆಗಳಲ್ಲಿನ ಪ್ರಮುಖ ಗ್ಯಾರೇಜ್, ಆಟೋ ಮೊಬೈಲ್ಸ್ ಅಂಗಡಿಗಳು ಬಂದ್ ಆಗಿದ್ದು, ಉಳಿದಂತೆ ಯಥಾಸ್ಥಿತಿಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

    ಹಿಜಬ್ ವಿವಾದದ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದ್ದು, ಸರ್ಕಾರದ ವಸ್ತ್ರ ಸಂಹಿತೆಯನ್ನು ಎತ್ತಿ ಹಿಡಿದಿದೆ. ಹೀಗಾಗಿ ನಮಗೆ ಕಾನೂನಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಮುಸಲ್ಮಾನ್ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಉಕ್ರೇನ್‍ ಮೇಯರ್ ಬಿಡುಗಡೆ

  • ಕುಂಕುಮ, ಬಳೆ ಬಗ್ಗೆ ಮಾತಾಡಿದ್ರೆ ನಾಲಿಗೆ ಸೀಳ್ತೀವಿ ಹುಷಾರ್: ಪ್ರಮೋದ್ ಮುತಾಲಿಕ್

    ಕುಂಕುಮ, ಬಳೆ ಬಗ್ಗೆ ಮಾತಾಡಿದ್ರೆ ನಾಲಿಗೆ ಸೀಳ್ತೀವಿ ಹುಷಾರ್: ಪ್ರಮೋದ್ ಮುತಾಲಿಕ್

    – ನಿಮ್ಮ ವೋಟ್ ಬ್ಯಾಂಕ್‍ಗಾಗಿ ಟೆರರಿಸ್ಟ್‍ಗಳನ್ನು ಬೆಳೆಸಬೇಡಿ

    ಬಾಗಲಕೋಟೆ: ಕುಂಕುಮ ಬಳೆ, ವಿಭೂತಿ ನಮ್ಮ ಸಂಸ್ಕೃತಿ ಪರಂಪರೆ. ಈ ಬಗ್ಗೆ ಮಾತನಾಡಿದ್ರೆ ನಾಲಿಗೆ ಸೀಳ್ತೀವಿ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಪ್ರಚೋದನಕಾರಿ ಹೇಳಿಕೆ ನಿಡಿರುವ ಮುತಾಲಿಕ್, ಹಿಜಾಬ್ ವಿವಾದ ಸಂಬಂಧ ಕುಂಕುಮ, ಬಳೆ ಬಗ್ಗೆ ಮುಸ್ಲಿಂ ವಿದ್ಯಾರ್ಥಿನಿಯರ ಪ್ರಶ್ನೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇಂದು ಕುಂಕುಮ, ಭಸ್ಮ, ಬಳೆ ಬಗ್ಗೆ ಮಾತಾಡುವ ದಾಷ್ಟ್ರ್ಯ ಬೆಳೆದಿದೆ. ಕುಂಕುಮ, ಬಳೆ, ವಿಭೂತಿ ವೈಜ್ಞಾನಿಕವಾಗಿವೆ. ಇದು ಶೋ ಅಲ್ಲ, ಪ್ಯಾಷನ್ ಅಲ್ಲ, ಅಲಂಕಾರವಲ್ಲ. ಇದರಲ್ಲಿ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಪರಂಪರೆ ಇದೆ. ಈ ಬಗ್ಗೆ ಮಾತಾಡಿದರೆ ನಾಲಿಗೆ ಸೀಳಿ ಬಿಡುತ್ತೇವೆ ಹುಷಾರಾಗಿರಿ. ಅವು ಸಮವಸ್ತ್ರದ ಭಾಗಗಳಲ್ಲ. ಸಮವಸ್ತ್ರ ಅಂದರೆ ಬರೀ ಬಟ್ಟೆ. ಬಟ್ಟೆ ಬಗ್ಗೆ ಮಾತ್ರ ಮಾತಾಡಿ. ಗಣಪತಿ ಪೂಜೆ, ಸರಸ್ವತಿ ಪೂಜೆ, ಕುಂಕುಮ, ಬಳೆ ಬಗ್ಗೆ ಮಾತಾಡಿದರೆ ನಾಲಿಗೆ ಸೀಳಿ ಹಾಕುತ್ತೇವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಉಕ್ರೇನ್‍ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!

    ಹಿಜಬ್ ಹಿಂದೆ ಇಸ್ಲಾಮೀಕರಣ ಇದೆ. ಬರೀ ಹಿಜಬ್ ಅಷ್ಟೇ ಅಲ್ಲ, ಈಗ ನೇರವಾಗಿ ಬುರ್ಕಾ ಹಾಕಿಕೊಂಡು ಬರುತ್ತಾರೆ. ಮುಂದೆ ನಮಾಜ್ ಮಾಡೋಕೆ ಅವಕಾಶ ಬೇಕು ಅಂತಾರೆ. ಒಂದೊಂದಾಗಿ ಮುನ್ನುಗ್ಗುವ ಪ್ರವೃತ್ತಿ ಇಸ್ಲಾಮ್ ಇತಿಹಾಸ ಹೇಳುತ್ತದೆ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದರು.

    ಇದೇ ವೇಳೆ ಮುಸ್ಲಿಂ ಸಂಘಟನೆಗಳ ನಿಷೇಧ ಮಾಡಲು ಮುಂದಾಗದ ಬಿಜೆಪಿ ವಿರುದ್ಧವೂ ಮುತಾಲಿಕ್ ಕಿಡಿಕಾರಿದರು. ಈ ಬಗ್ಗೆ ನಮಗೆ ಬಹಳ ದುಃಖ ಆಗುತ್ತೆ, ನೋವಾಗುತ್ತೆ, ಸಿಟ್ಟು ಬರುತ್ತದೆ. ಮುಸ್ಲಿಂ ವೋಟ್ ಒಡೆಯುತ್ತಾರೆ ಅಂತ ಪಿಎಫ್‍ಐ, ಸಿಎಫ್.ಎಮ್ ಐಎಮ್ ಅಂತ ರಾಕ್ಷಸರನ್ನು ಬಿಜೆಪಿಯವರು ಬೆಳೆಸುತ್ತಿದ್ದಾರೆ. ಬಿಜೆಪಿಯವರೇ ಈ ಎಲ್ಲ ಸಂಘಟನೆಗಳನ್ನು ಸಾಕುತ್ತಿದ್ದಾರೆ. ಕಾಂಗ್ರೆಸ್ ಈ ಸಂಘಟನೆಗಳನ್ನು ಬ್ಯಾನ್ ಮಾಡಿ ಅಂತ ಹೇಳುತ್ತಿದೆ. ಕಮ್ಯುನಿಸ್ಟ್ ಪಕ್ಷದವರು ಹೇಳುತ್ತಿದ್ದಾರೆ, ಬಿಜೆಪಿಯವರೇ ನಿಮ್ಮ ವೋಟ್ ಬ್ಯಾಂಕ್‍ಗಾಗಿ ಟೆರರಿಸ್ಟ್ ಗಳನ್ನು ಬೆಳೆಸಬೇಡಿ. ಮುಂದಿನ ದಿನಗಳಲ್ಲಿ ಈ ಎಲ್ಲ ಸಂಘಟನೆಗಳ ವಿರುದ್ಧ ವಿವಿಧ ಹಿಂದೂ ಪರ ಸಂಘಟನೆಗಳು ಸೇರಿ ಹೋರಾಟ ಮಾಡಲಿದ್ದೇವೆ ಎಂದರು. ಇದನ್ನೂ ಓದಿ:  ‘ಫಸಲ್ ಭೀಮಾ ಯೋಜನೆ’ ಲಾಭ ಹೆಚ್ಚಿನ ರೈತರಿಗೆ ದೊರೆಯಲು ಕ್ರಮ ಕೈಗೊಳ್ಳಿ: ಕೆ.ಸಿ.ನಾರಾಯಣಗೌಡ

    ಪಿಎಫ್ ಐ, ಸಿಎಫ್‍ಐ, ಈಗಾಗಲೇ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿವೆ. ಪಿಎಫ್‍ಐ ಬ್ಯಾನ್ ಮಾಡಿ ಅಂತ ಕೇರಳದ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದರು, ನಾನು ಹೇಳುತ್ತಿಲ್ಲ. ಹಿಂದೆ ಅವರೇ ಪತ್ರವನ್ನು ಬರೆದಿದ್ದರು. ಪಿಎಫ್‍ಐ ದೊಡ್ಡ ರಾಕ್ಷಸಿ ರೂಪವಾಗಿ ದೇಶಕ್ಕೆ ಕಂಟಕವಾಗುತ್ತದೆ. ಕಾಂಗ್ರೆಸ್ ನವರೇ ಇಂದು ಸಿಎಂ ಭೇಟಿಯಾಗಿ ಬ್ಯಾನ್ ಮಾಡಿ ಅಂತ ಹೇಳಿದ್ದಾರೆ. ನಿಮಗೇನಾಗಿದೆ(ಬಿಜೆಪಿ) ಬ್ಯಾನ್ ಮಾಡೋದಕ್ಕೆ, ಎಷ್ಟು ದಾಖಲೆಗಳು ಬೇಕು ಕೊಲೆ ಕೇಸಿನಲ್ಲಿ.. ಪಿಎಫ್‍ಐ ಹೆಸರಲ್ಲಿ 9 ಚಾರ್ಜ್ ಶೀಟ್ ಆಗಿದೆ. ಬ್ಯಾನ್ ಮಾಡುವಂತಹ ಕೆಲಸ ಬಿಜೆಪಿ ಸರ್ಕಾರ ಮಾಡದಿದ್ದರೆ, ಇವು ನಿಮ್ಮನ್ನು ನುಂಗಿ ಹಾಕುತ್ತವೆ ಎಂದು ಎಚ್ಚರಿಕೆ ಕೊಡುತ್ತೇನೆ ಎಂದರು.

  • ಹಿಜಬ್ ವಿವಾದ- ಪೋಷಕರು, ಶಿಕ್ಷಕರು ಮಧ್ಯೆ  ಗಂಗಾವತಿಯಲ್ಲಿ‌ ಗಲಾಟೆ

    ಹಿಜಬ್ ವಿವಾದ- ಪೋಷಕರು, ಶಿಕ್ಷಕರು ಮಧ್ಯೆ  ಗಂಗಾವತಿಯಲ್ಲಿ‌ ಗಲಾಟೆ

    ಕೊಪ್ಪಳ: ಹಿಜಬ್ ವಿಚಾರವಾಗಿ ಪೋಷಕರು, ಶಿಕ್ಷಕರು, ಮಧ್ಯೆ ದಾಂಧಲೆಯಾಗಿರುವ ಘಟನೆ ಕೊಪ್ಪಳದ ಗಂಗಾವತಿ ಸರ್ಕಾರಿ ಕಾಲೇಜಿನಲ್ಲಿ ನಡೆದಿದೆ.

    ಉಪನ್ಯಾಸಕರು, ಪೊಲೀಸರ ಜೊತೆಗೆ ಪೋಷಕರು ವಾಗ್ದಾಳಿ ನಡೆದಿದ್ದು, 100ಕ್ಕೂ ಹೆಚ್ಚು ಮಂದಿ ಹಲ್ಲೆಗೆ ಯತ್ನಿಸಲಾಗಿದೆ. ಪೊಲೀಸರು ದಾಂಧಲೆ ಮಾಡುತ್ತಿದ್ದ ಪೋಷಕರನ್ನು ಚದುರಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‍ನನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ: ಅರವಿಂದ್ ಕೇಜ್ರಿವಾಲ್

    ಹಿಜಬ್ ಧರಿಸಿಕೊಂಡು ತರಗತಿಯಲ್ಲಿ ಅವಕಾಶ ಕೊಡಿ ಎಂದು ಪಟ್ಟು ವಿದ್ಯಾರ್ಥಿಗಳು ಹಿಡದಿದ್ದರು. ಪೊಲೀಸರು, ಉಪನ್ಯಾಸಕರ ಸಮ್ಮುಖದಲ್ಲಿ ಗಲಾಟೆಯಾಗಿದೆ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನಯ ಹತೋಟಿಗೆ ತಂದಿದ್ದಾರೆ. ಇದನ್ನೂ ಓದಿ: ಇದು RSS ಕುತಂತ್ರ – ಈಶ್ವರಪ್ಪ ಪೆದ್ದ: ಸಿದ್ದರಾಮಯ್ಯ

  • ಹಿಜಬ್ ಧರಿಸಿದ್ದಕ್ಕೆ ಕೇಸರಿ ಶಾಲು ಧರಿಸಿ ಕಾಲೇಜಿಗೆ ಎಂಟ್ರಿ

    ಹಿಜಬ್ ಧರಿಸಿದ್ದಕ್ಕೆ ಕೇಸರಿ ಶಾಲು ಧರಿಸಿ ಕಾಲೇಜಿಗೆ ಎಂಟ್ರಿ

    ಬೆಳಗಾವಿ: ಖಾನಾಪುರ ತಾಲೂಕಿನ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲನ್ನು ಧರಿಸಿ ತರಗತಿಗೆ ಹಾಜರಾಗಿದ್ದಾರೆ.

    ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿರುವ ಮಹಾತ್ಮ ಗಾಂಧಿ ಪಿಯು ಕಾಲೇಜಿನಲ್ಲಿ ಸಮವಸ್ತ್ರ ನಿಯಮ ಇಲ್ಲ. ಹೀಗಾಗಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ತರಗತಿಗಳಿಗೆ ಹಾಜರಾಗಿರುವ ಹಿನ್ನೆಲೆಯಲ್ಲಿ ಕಾಲೇಜಿನ ಕೆಲ ಯುವಕರು ಕೇಸರಿ ಶಾಲನ್ನು ಧರಿಸಿ ಬಂದಿದ್ದಾರೆ. ಇದನ್ನೂ ಓದಿ: ಇವ್ರರನ್ನು ಅರೆಸ್ಟ್ ಮಾಡ್ರಿ – ವಿದ್ಯಾರ್ಥಿನಿಯರ ವಿರುದ್ಧ ಮಡಿಕೇರಿ ಪ್ರಿನ್ಸಿ ಕೆಂಡಾಮಂಡಲ

    ಸಮವಸ್ತ್ರ ನಿಗದಿ ಪಡಿಸಿದ ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಕಡ್ಡಾಯ ಪಾಲನೆ ಮಾಡಬೇಕಿದೆ. ಸಮವಸ್ತ್ರ ನಿಗದಿ ಮಾಡದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಡ್ರೆಸ್ ಕೋಡ್ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಕೇಸರಿ ಶಾಲು ಮತ್ತು ಹಿಜಬ್ ಧರಿಸಿ ಕಾಲೇಜಿಗೆ ಹಾಜರಾಗಿದ್ದಾರೆ. ಇದನ್ನೂ ಓದಿ: ಹಿಜಬ್ ಪ್ರತಿಭಟನೆ – ಕಾಲೇಜು ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್ ದಾಖಲು

    ಈ ಸಂದರ್ಭದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜನೆ ಮಾಡಲಾಗಿದೆ.

    ಕಾಲೇಜಿನಲ್ಲಿ ಹಿಜಬ್‌ ವರ್ಸಸ್‌ ಕೇಸರಿ ಶಾಲು ಹಿನ್ನೆಲೆ ಆಡಳಿತ ಮಂಡಳಿ ನೇತೃತ್ವದಲ್ಲಿ ಎರಡು ಸಮುದಾಯದ ಮುಖಂಡರನ್ನು ಕರೆಸಿ ಸಭೆ ಮಾಡಲಾಗುತ್ತಿದೆ. ಕೇಸರಿ ಶಾಲು ಹಾಕಿಕೊಂಡು ಬಂದಿದ್ದ ವಿದ್ಯಾರ್ಥಿಗಳನ್ನು ವಾಪಸ್‌ ಕಳುಹಿಸಲಾಗಿದೆ.

  • ಹಿಜಬ್ ವಿವಾದ: ಖಾಸಗಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕಿ ರಾಜೀನಾಮೆ!

    ಹಿಜಬ್ ವಿವಾದ: ಖಾಸಗಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕಿ ರಾಜೀನಾಮೆ!

    ತುಮಕೂರು: ಹಿಜಬ್ ತೆಗೆದು ತರಗತಿಯೊಳಗೆ ಬರಬೇಕು ಎಂಬ ನಿಯಮ ಜಾರಿಯಾಗಿದ್ದರಿಂದ ಖಾಸಗಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕಿ ರಾಜೀನಾಮೆ ಕೊಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ.

    ತುಮಕೂರು ನಗರದ ಪುಟ್ಟಸ್ವಾಮಯ್ಯನ ಪಾಳ್ಯದ ಜೈನ್ ಪಿಯು ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಚಾಂದಿನಿ ನಯಾಜ್ ರಾಜೀನಾಮೆ ಕೊಟ್ಟವರು. ಕಳೆದ ಮೂರು ವರ್ಷಗಳಿಂದ ಜೈನ್ ಕಾಲೇಜು, ವಿದ್ಯಾವಾಹಿನಿ ಕಾಲೇಜು ಸೇರಿದಂತೆ ಹಲವು ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಹಿಜಬ್ ವಿವಾದ: ಬುರ್ಕಾನೇ ಮುಖ್ಯ, ಸಿಂಧೂರ ತೆಗೆಸಿ ಎಂದ ವಿದ್ಯಾರ್ಥಿನಿಯರು!

    ಹಿಜಬ್ ವಿವಾದದಿಂದಾಗಿ ತಮ್ಮ ಧರ್ಮಕ್ಕೆ ಹೆಚ್ಚು ಅಧ್ಯತೆ ಕೊಟ್ಟು, ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇವರು ಮಾತ್ರವಲ್ಲ ಕಾಲೇಜಿನ ವಿದ್ಯಾರ್ಥಿನಿಯರು ಧರ್ಮವೇ ಮುಖ್ಯ ಎಂದು ಕಾಲೇಜನ್ನೆ ಬಿಟ್ಟು ಹೋಗುತ್ತಿದ್ದಾರೆ. ಆದರೆ ನ್ಯಾಯಾಲಯವು ಮಕ್ಕಳಲ್ಲಿ ಒಂದೇ ರೀತಿ ನಿಯಮವಿರಬೇಕು ಎಂದು ಈ ನಿರ್ಧಾರ ಮಾಡಿದ್ದು, ಇದಕ್ಕೆ ಪರ-ವಿರೋಧ ಕೇಳಿಬರುತ್ತಿದೆ.

  • ಉಡುಪಿಯಲ್ಲಿ ಹಿಜಬ್ ಹೋರಾಟಕ್ಕೆ ಪರೀಕ್ಷೆ ಬಲಿ

    ಉಡುಪಿಯಲ್ಲಿ ಹಿಜಬ್ ಹೋರಾಟಕ್ಕೆ ಪರೀಕ್ಷೆ ಬಲಿ

    ಉಡುಪಿ: ರಾಜ್ಯದಲ್ಲಿ ಹಿಜಬ್ ಹೋರಾಟ ಜೋರಾಗಿದೆ. ಹಿಜಬ್ ವಿವಾದದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮುಂದೂಡಲಾಗಿದೆ.

    ಹೌದು, ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆಯಬೇಕಾಗಿದ್ದ ದ್ವಿತೀಯ ಪಿಯುಸಿ ಸೈನ್ಸ್ ವಿದ್ಯಾರ್ಥಿಗಳ ಪ್ರಾಕ್ಟಿಕಲ್ ಪರೀಕ್ಷೆಯನ್ನು ಮುಂದೂಡಲಾಗಿದೆ. ಇಂದು ದ್ವಿತೀಯ ಪಿಯುಸಿ ಲ್ಯಾಬ್ ಪರೀಕ್ಷೆಗಳು ಆರಂಭವಾಗಬೇಕಿತ್ತು. ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ಇರುವ ತರಗತಿಯಲ್ಲಿ ಯಾವುದೇ ಗೊಂದಲದ ವಾತಾವರಣ ನಿರ್ಮಾಣ ಆಗಬಾರದೆಂಬ ಉದ್ದೇಶದಿಂದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇದನ್ನೂ ಓದಿ: ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ: ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ

    ಸದ್ಯ ಪರೀಕ್ಷೆಯ ಮುಂದಿನ ದಿನಾಂಕ ಪ್ರಕಟಿಸುವುದಾಗಿ ಹೇಳಿರುವ ಎಂಜಿಎಂ ಕಾಲೇಜು ತಿಳಿಸಿದೆ. ಫೆಬ್ರವರಿ 7ರಂದು ಎಂಜಿಎಂ ಕಾಲೇಜಿನಲ್ಲಿ ಕೇಸರಿ ಹಿಜಬ್ ಫೈಟ್ ನಡೆದಿತ್ತು. ಇದೀಗ ರಾಜ್ಯಾದ್ಯಂತ ಹಿಜಬ್ ಪ್ರತಿಭಟನೆ ನಡೆಯುತ್ತಿದ್ದು, ಹೈಕೋರ್ಟ್ ತನ್ನ ಮುಂದಿನ ಆದೇಶದವರೆಗೂ ಶಾಲಾ, ಕಾಲೇಜುಗಳಿಗೆ ಹಿಜಬ್ ಧರಿಸದೇ ವಿದ್ಯಾರ್ಥಿನಿಯರು ಹಾಜರಾಗಬೇಕೆಂದು ಸೂಚಿಸಿದೆ. ಆದರೂ ವಿದ್ಯಾರ್ಥಿನಿಯರು ಕೋರ್ಟ್ ಆದೇಶಕ್ಕೆ ಕೇರ್ ಮಾಡದೇ ಹಿಜಬ್ ಧರಿಸಿಯೇ ತರಗತಿಗೆ ಹಾಜರಾಗುತ್ತಿದ್ದಾರೆ. ಇದನ್ನೂ ಓದಿ: ಮುಸ್ಲಿಂ ವೇಶ ಧರಿಸಿ ಅನುಮಾಸ್ಪದ ರೀತಿಯಲ್ಲಿ ಓಡಾಟ: ಐವರನ್ನು ವಶಕ್ಕೆ ಪಡೆದ ಪೊಲೀಸರು

  • ಹಿಜಬ್ ವಿವಾದ – ಇಂದು ಹೈಕೋರ್ಟ್‌ನಲ್ಲಿ ಏನಾಯ್ತು..?

    ಹಿಜಬ್ ವಿವಾದ – ಇಂದು ಹೈಕೋರ್ಟ್‌ನಲ್ಲಿ ಏನಾಯ್ತು..?

    ಬೆಂಗಳೂರು: ಹಿಜಬ್ ವಿವಾದದ ಬಗ್ಗೆ ಹೈಕೋರ್ಟ್‍ನ ಪೂರ್ಣ ಪೀಠದಲ್ಲಿ ಮೂರನೇ ದಿನವೂ ವಿಚಾರಣೆ ನಡೀತು. ಹೈಕೋರ್ಟ್‍ನ ಮಧ್ಯಂತರ ಆದೇಶದಿಂದ ಮೂಲಭೂತ ಹಕ್ಕು ಅಮಾನತು ಆಗಿದೆ. ಹೀಗಾಗಿ ಮಧ್ಯಂತರ ಆದೇಶ ಬದಲಿಸಿ, ಸಮವಸ್ತ್ರದ ಜೊತೆಗೆ ಹಿಜಬ್‍ಗೂ ಅವಕಾಶ ಕೊಡಬೇಕು ಅಂತ ಅರ್ಜಿದಾರರ ಪರ ವಕೀಲ ದೇವದತ್ತ ಕಾಮತ್ ವಾದ ಮುಗಿಸಿದ್ರು. ಇದನ್ನೂ ಓದಿ: ಎಷ್ಟು ದಿನ ಇರ್ತೀನೋ ಗೊತ್ತಿಲ್ಲ, ಮಾತಾಡೋಕೆ ಅವಕಾಶ ಕೊಡಿ: ಪರಿಷತ್‍ನಲ್ಲಿ ಸಿ.ಎಂ. ಇಬ್ರಾಹಿಂ ಅಳಲು!

    ಇದಕ್ಕೂ ಮುನ್ನ ಸಾರ್ವಜನಿಕ ಸುವ್ಯವಸ್ಥೆ ಎಂಬ ಸರ್ಕಾರದ ಬಗ್ಗೆ ವಾದ ಮುಂದುವರಿಸಿದ ಅರ್ಜಿದಾರ ಪರ ವಕೀಲರು, ಸಾರ್ವಜನಿಕ ಸುವ್ಯವಸ್ಥೆ ಭಾಷಾಂತರ ಕುರಿತ ಸರ್ಕಾರದ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ರು. ‘ಸಾರ್ವಜನಿಕ ಸುವ್ಯವಸ್ಥೆ’ ಎಂಬ ಪದದ ಬಗ್ಗೆ ಸರ್ಕಾರದ ಭಾಷಾಂತರಕ್ಕೆ ಆಕ್ಷೇಪಿಸಿದರು. ಇದನ್ನೂ ಓದಿ: ಹಿಜಬ್ ತೆಗೆಯಿರಿ ಅನ್ನೋದಕ್ಕೆ ಹೆತ್ತವರಿಗೆ ರೈಟ್ಸ್ ಇಲ್ಲ, ಅವನ್ಯಾವನು ಹೇಳೋಕೆ: ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿಯರು ರೆಬೆಲ್

    ಸಂವಿಧಾನದಲ್ಲಿ ಹೇಳಿದ ಅರ್ಥ ಬಿಟ್ಟು ಬೇರೆ ಅರ್ಥ ಹೇಳಲಾಗದು. ಸಾರ್ವಜನಿಕ ಸುವ್ಯವಸ್ಥೆ ಕಾರಣ ಕೊಟ್ಟು, ಹಕ್ಕುಗಳನ್ನು ನಿರ್ಬಂಧಿಸುವಂತಿಲ್ಲ ಅಂತ ಸುಪ್ರೀಂಕೋರ್ಟ್ ತೀರ್ಪು ಹೇಳಿದೆ. ಮೂಗುತಿ ವಿಚಾರದಲ್ಲಿ ದಕ್ಷಿಣ ಆಫ್ರಿಕಾದ ಶಾಲೆ ಹಾಕಿದ್ದ ನಿರ್ಬಂಧವನ್ನು ಕೋರ್ಟ್ ವಜಾ ಮಾಡಿತ್ತು ಎಂದು ತಿಳಿಸಿದ್ರು. ಹಿಜಬ್ ಧರಿಸುವುದರಿಂದ ಗಲಾಟೆ ಆಗುತ್ತದೆ ಎಂದು ಸರ್ಕಾರ ಹೇಳುವುದಾದರೆ, ಅದು ಒಪ್ಪತಕ್ಕ ವಾದ ಅಲ್ಲ. ನಮ್ಮ ದೇಶದ್ದು ಸಕಾರಾತ್ಮಕ ಜಾತ್ಯಾತೀತತೆ. ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಧಾರ್ಮಿಕ ಹಕ್ಕು ನಿರ್ಬಂಧಕ್ಕೆ ಸರ್ಕಾರಕ್ಕೆ ಅಧಿಕಾರ ಇಲ್ಲ ಅಂತ ಕಾಮತ್ ವಾದಿಸಿದ್ರು.

    ಮತ್ತೊಂದು ಅರ್ಜಿಯಲ್ಲಿ ವಾದ ಮಂಡಿಸಿದ ರವಿವರ್ಮ ಕುಮಾರ್, ಸರ್ಕಾರ ಸಮಸವ್ತ್ರದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಉನ್ನತ ಮಟ್ಟದ ಸಮಿತಿ ರಚಿಸಿದೆ. ಸರ್ಕಾರ ಹಿಜಬ್ ಮೇಲೆ ನಿರ್ಬಂಧ ಹೇರಿಲ್ಲ. ಯೂನಿಫಾರಂ ಅನ್ನು ಕಾಲೇಜು ಸಮಿತಿ ನಿರ್ಧರಿಸಲಿದೆ ಅಂತಷ್ಟೇ ಹೇಳಲಾಗಿದೆ ಅಂದ್ರು. ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿಗಳ ಪೂರ್ಣ ಪೀಠ ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿತು.

  • ಹಿಜಬ್ ವಿವಾದದ ನಡುವೆಯೇ ಮಾದರಿಯಾದ ಮುಸ್ಲಿಂ ಶಿಕ್ಷಣ ಸಂಸ್ಥೆ

    ಹಿಜಬ್ ವಿವಾದದ ನಡುವೆಯೇ ಮಾದರಿಯಾದ ಮುಸ್ಲಿಂ ಶಿಕ್ಷಣ ಸಂಸ್ಥೆ

    ಚಿಕ್ಕೋಡಿ: ರಾಜ್ಯಾದ್ಯಂತ ಭುಗಿಲೆದ್ದಿರುವ ಹಿಜಬ್ ವಿವಾದದ ನಡುವೆಯೇ ಮುಸ್ಲಿಂ ಶಿಕ್ಷಣ ಸಂಸ್ಥೆಯೊಂದು ಮಾದರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

    Hijab

    ಹುಕ್ಕೇರಿ ಪಟ್ಟಣದಲ್ಲಿರುವ ಟಿಪ್ಪು ಪ್ರೌಢ ಶಾಲೆಯಲ್ಲಿ ಹಿಜಬ್ ಧರಿಸಿ ತರಗತಿಗಳಿಗೆ ತೆರಳದಂತೆ ಶಿಕ್ಷಕರು ಕ್ರಮ ವಹಿಸಿದ್ದಾರೆ. ಹಿಜಬ್ ಧರಿಸಿ ಬರುವ ವಿದ್ಯಾರ್ಥಿನಿಯರ ಹಿಜಬ್ ತೆಗಿಸಿ ತರಗತಿಗಳಿಗೆ ಶಿಕ್ಷಕರು ಕಳಿಸಿ ಕೊಡುವ ಕಾರ್ಯ ಮಾಡಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿಗಳಿಕೆ ಆರೋಪ – ವಿಚಾರಣೆ ನಡೆಸಲು ಹೈಕೋರ್ಟ್‍ಗೆ ಸುಪ್ರೀಂ ಸೂಚನೆ

    Hijab

    ನ್ಯಾಯಾಲಯದ ಆದೇಶವೇ ಅಂತಿಮ ಎಂದು ಆಡಳಿತ ಮಂಡಳಿ ಹಾಗೂ ಶಿಕ್ಷಕರು ಹೇಳಿದ್ದು, ನ್ಯಾಯಾಲಯದ ಆದೇಶ ಬರುವವರೆಗೂ ತರಗತಿಗಳಲ್ಲಿ ಹಿಜಬ್ ಧರಿಸದಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದಾರೆ. ಮುಸ್ಲಿಂ ಶಿಕ್ಷಣ ಸಂಸ್ಥೆಯಾಗಿದ್ದರೂ ಹಿಜಬ್ ವಿವಾದಕ್ಕೆ ಧ್ವನಿಗೂಡಿಸದೇ ಸರ್ಕಾರದ ಆದೇಶ ಪಾಲನೆಯನ್ನು ಈ ಶಾಲೆಯಲ್ಲಿ ಮಾಡಲಾಯಿತು.
    ಹಿಜಬ್ ವಿವಾದಕ್ಕೆ ತುಪ್ಪ ಸುರಿಯುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಟಿಪ್ಪು ಪ್ರೌಢ ಶಾಲೆ ಮಾದರಿಯಾಗಿದೆ. ಇದನ್ನೂ ಓದಿ: ಬಹುಕೋಟಿ ಮೇವು ಹಗರಣ, ಲಾಲೂ ಪ್ರಸಾದ್ ಯಾದವ್‌ ದೋಷಿ – CBI ಕೋರ್ಟ್‌