Tag: Highway Authority

  • ವಾಹನ‌ ಸವಾರರೇ ಎಚ್ಚರ – ಚಾರ್ಮಾಡಿ ಘಾಟಿಯಲ್ಲಿ ಬಾಯ್ತೆರೆದು ಕೂತಿವೆ ಬಂಡೆಕಲ್ಲು

    ವಾಹನ‌ ಸವಾರರೇ ಎಚ್ಚರ – ಚಾರ್ಮಾಡಿ ಘಾಟಿಯಲ್ಲಿ ಬಾಯ್ತೆರೆದು ಕೂತಿವೆ ಬಂಡೆಕಲ್ಲು

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ (Charmadi Ghat) ಸಂಚಾರ ಮಾಡುವ ಸವಾರರು ಅತ್ಯಂತ ಎಚ್ಚರ ಹಾಗೂ ಜಾಗರೂಕರಾಗಿ ವಾಹನ ಚಾಲನೆ ಮಾಡಬೇಕಿದೆ. ಏಕೆಂದರೆ, ಚಾರ್ಮಾಡಿ ಘಾಟಿಯ ಅಣ್ಣಪ್ಪಸ್ವಾಮಿ ದೇಗುಲದಿಂದ ತುಸು ದೂರದಲ್ಲೇ 2 ಬೃಹತ್ ಬಂಡೆಗಳು (Boulder) ಅನಾಹುತಕ್ಕೆ ಬಾಯ್ತೆರೆದು ಕೂತಿವೆ.

    ಬೃಹತ್ ಬಂಡೆಗಳ ಕೆಳಭಾಗದ ಮಣ್ಣು ಭಾರೀ ಮಳೆಗೆ ಕೊಚ್ಚಿ ಹೋಗಿದ್ದು ಎರಡು ಬಂಡೆಗಳು ಕೂದಲೆಳೆ ಅಂತರದಲ್ಲಿ ನಿಂತಂತಿದೆ. ಮತ್ತೆ ಮಳೆಯಾದರೇ ಅಥವಾ ಬಿರುಗಾಳಿಗೆ ಬಂಡೆಗಳು ಕುಸಿದು ಬೀಳುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಆ ಕಿರಿದಾದ ರಸ್ತೆಯಲ್ಲಿ (Charmadi Ghat Road) ಬಂಡೆಗಳು ಕುಸಿದು ಬಿದ್ದರೆ ಮತ್ತೊಂದು ಬದಿ ಪ್ರಪಾತವಿರುವುದರಿಂದ ರಸ್ತೆಯೇ ಕುಸಿಯುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕಪಟ್ಟಿದ್ದಾರೆ. ಇದನ್ನೂ ಓದಿ: ಟಿಬಿ ಡ್ಯಾಂಗೆ ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಪ್ಲಾನ್ – ಏನೇನು ತಯಾರಿ ನಡೆಯುತ್ತಿದೆ?

    ಒಂದು ವೇಳೆ ಟ್ರಾಫಿಕ್ ಜಾಮ್, ಸೆಲ್ಫಿ ಕ್ರೇಜ್, ಇನ್ಯಾವುದೋ ಕಾರಣಕ್ಕೆ ಟ್ರಾಫಿಕ್ ಜಾಮ್ ಆದ ಸಂದರ್ಭದಲ್ಲಿ ಕೆಳಗಡೆ ವಾಹನಗಳು ಇದ್ದರೇ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆಯೂ ಇದೆ. ಹಾಗಾಗಿ, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಅತ್ಯಂತ ಎಚ್ಚರದಿಂದಿರುವಂತೆ ಅಲ್ಲಿನ ಸ್ಥಳೀಯರೇ ಮನವಿ ಮಾಡುತ್ತಿದ್ದಾರೆ.

    ಅಲ್ಲದೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅನಾಹುತ ಸಂಭವಿಸುವ ಮೊದಲೇ ಕಲ್ಲುಗಳನ್ನ ಸ್ಥಳಾಂತರಿಸಿದರೇ ಅಥವಾ ಕೆಳಗೆ ಇಳಿಸಿದ್ರೆ ಮುಂದಾಗುವ ಅನಾಹುತ ತಪ್ಪಿಸಬಹುದು ಎಂದು ಹೆದ್ದಾರಿ ಪ್ರಾಧಿಕಾರದ (Highway Authority) ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ದುರಂತ – ಎರಡನೇ ಹಂತದ ಶೋಧಕಾರ್ಯ, ಗಂಗಾವಳಿ ನದಿಯಲ್ಲಿ ಲಾರಿಯ ಅವಶೇಷ ಪತ್ತೆ 

  • ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಟೋಲ್ ಶುಲ್ಕ ಹೆಚ್ಚಳ ನಿರ್ಧಾರ ಕೈಬಿಟ್ಟ ಹೆದ್ದಾರಿ ಪ್ರಾಧಿಕಾರ

    ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಟೋಲ್ ಶುಲ್ಕ ಹೆಚ್ಚಳ ನಿರ್ಧಾರ ಕೈಬಿಟ್ಟ ಹೆದ್ದಾರಿ ಪ್ರಾಧಿಕಾರ

    ರಾಮನಗರ: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ (Mysuru Bengaluru Expressway) ಟೋಲ್ ದರ ಹೆಚ್ಚಳಕ್ಕೆ ತೀವ್ರ ವಿರೋಧ ಎದುರಾದ ಬಳಿಕ ಹೆದ್ದಾರಿ ಪ್ರಾಧಿಕಾರ (Highway Authority) ತನ್ನ ಆದೇಶವನ್ನು ವಾಪಸ್ ಪಡೆದಿದೆ. ಟೋಲ್ ಪ್ರಾರಂಭವಾದ 17 ದಿನಗಳಲ್ಲಿ ದರ ಹೆಚ್ಚಳಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ದರ ಏರಿಕೆಯನ್ನು ಅಧಿಕಾರಿಗಳು ಮುಂದೂಡಿ ಮರು ಆದೇಶ ಹೊರಡಿಸಿದ್ದಾರೆ.

    ದಶಪಥ ಹೆದ್ದಾರಿಯ ಟೋಲ್ ಸಂಗ್ರಹ ಆರಂಭವಾಗಿ ಕೇವಲ 17ದಿನಗಳು ಕಳೆದಿವೆ. ಈ ನಡುವೆಯೇ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಅನ್ವಯ ಎಕ್ಸ್‌ಪ್ರೆಸ್‌ವೇ ಟೋಲ್ ದರವನ್ನೂ ಹೆದ್ದಾರಿ ಪ್ರಾಧಿಕಾರ ಹೆಚ್ಚಳಕ್ಕೆ ಆದೇಶ ಹೊರಡಿಸಿತ್ತು. ಶನಿವಾರ ಮುಂಜಾನೆಯಿಂದ ಹೆಚ್ಚುವರಿ ಶುಲ್ಕ ವಸೂಲಿ ಆರಂಭಿಸಿದ್ದ ಟೋಲ್ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ಸಹ ಹೊರ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಹಿಂದಿನ ದರ ಮುಂದುವರೆಸುವಂತೆ ಮರು ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಮಂಡ್ಯ ಜಿಲ್ಲೆಯ 6 ಕ್ಷೇತ್ರಗಳಲ್ಲಿ 3 ಪಕ್ಷಗಳಿಂದ ಒಕ್ಕಲಿಗರೇ ಅಭ್ಯರ್ಥಿಗಳು

    ನಿರ್ಧಾರ ಕೈಬಿಟ್ಟ ಮೇಲೂ ಆದೇಶ ತಲುಪಿಲ್ಲ ಎಂದು ಕೆಲಕಾಲ ಶೇಷಗಿರಿಹಳ್ಳಿ (Sheshagiri Halli toll) ಟೋಲ್ ಹಾಗೂ ಕಣಮಿಣಕಿ ಟೋಲ್ (Kaniminike toll) ಸಿಬ್ಬಂದಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಮೇಲೆ ಹಳೇ ದರ ವಸೂಲಿ ಮಾಡಲು ಸಿಬ್ಬಂದಿ ಮುಂದಾದರು. ಈ ವೇಳೆ ಕೆಲ ವಾಹನ ಸವಾರರು ಟೋಲ್ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ಇದನ್ನೂ ಓದಿ: ಸಂಜಯ್ ರಾವತ್‍ಗೆ ಕ್ರಿಮಿನಲ್ ಲಾರೆನ್ಸ್ ಬಿಷ್ಣೋಯ್‍ನಿಂದ ಕೊಲೆ ಬೆದರಿಕೆ

  • ಗುಂಡಿ ಮಧ್ಯೆ ರಸ್ತೆ ಎಲ್ಲಿದೆ – ಕಿತ್ತು ಹೋಗಿದೆ ಕೈಗಾ, ಇಳಕಲ್ ಹೆದ್ದಾರಿ

    ಗುಂಡಿ ಮಧ್ಯೆ ರಸ್ತೆ ಎಲ್ಲಿದೆ – ಕಿತ್ತು ಹೋಗಿದೆ ಕೈಗಾ, ಇಳಕಲ್ ಹೆದ್ದಾರಿ

    – ಅನಾಹುತ ಸಂಭವಿಸಿದರೂ ಎಚ್ಚೆತ್ತುಕೊಳ್ಳದ ಲೋಕೋಪಯೋಗಿ ಇಲಾಖೆ
    – ಹಾಳಾದ ಹೈವೇ, ಗರ್ಭಿಣಿಯರಿಗೆ ರಸ್ತೆಯಲ್ಲೇ ಡೆಲಿವರಿ

    ಗದಗ: ಗದಗ ಜಿಲ್ಲೆಯಲ್ಲಿ ಹಾದುಹೋಗುವ ಕಾರವಾರದ ಕೈಗಾ-ಇಳಕಲ್ ರಾಜ್ಯ ಹೆದ್ದಾರಿ 85 ಪರಿಸ್ಥಿತಿ ಅಯೋಮಯವಾಗಿದೆ.

    ಗದಗನಿಂದ ಗಜೇಂದ್ರಗಢವನ್ನು ಜೀವ ಕೈಯಲ್ಲಿ ಹಿಡಿದು ಪ್ರಯಾಣ ಮಾಡವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಾಜ್ಯ ಹೆದ್ದಾರಿ ಕಾರವಾರದ ಕೈಗಾ ದಿಂದ ಹಾನಗಲ್, ಪಾಲಾ, ಬಂಕಾಪೂರ, ಲಕ್ಷ್ಮೇಶ್ವರ, ಗದಗ, ಗಜೇಂದ್ರಗಢ ಮಾರ್ಗವಾಗಿ ಇಳಕಲ್ ಸೇರುತ್ತದೆ. ಕಳೆದ ಎರಡು ವರ್ಷದಿಂದ ಈ ಇದು ತುಂಬಾ ಅಪಾಯಕಾರಿ ರಸ್ತೆಯಾಗಿದ್ದು, ಗುಂಡಿ ಮಧ್ಯೆ ರಸ್ತೆ ಎಲ್ಲಿದೆ ಎಂದು ಹುಡುಕಾಡುವಂತಾಗಿದೆ.

    ರಸ್ತೆ ತುಂಬೆಲ್ಲ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ರಾಜ್ಯ ಹೆದ್ದಾರಿ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಅದರಲ್ಲೂ ಲಕ್ಷ್ಮೇಶ್ವರ ದಿಂದ ಗದಗ, ಗಜೇಂದ್ರಗಢ ತಲುಪಬೇಕಾದಲ್ಲಿ ಯುದ್ಧದಲ್ಲಿ ಗೆದ್ದು ಬಂದಂತಾಗುತ್ತದೆ. ಅನಾರೋಗ್ಯಕ್ಕಿಡಾದವರು, ಗರ್ಭಿಣಿಯರು ಈ ರಸ್ತೆನಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಹಗಲಿನಲ್ಲೆ ವಾಹನಗಳು ರಸ್ತೆ ತುಂಬೆಲ್ಲ ಇತ್ತಿಂದ ಅತ್ತ, ಅತ್ತಿಂದ ಇತ್ತ ಸರ್ಕಸ್ ಮಾಡುತ್ತಾ ಚಲಿಸುತ್ತಿವೆ.

    ಅಪರಿತರು ರಾತ್ರಿ ಈ ರಸ್ತೆಯಲ್ಲಿ ಸಂಚರಿಸಿ ಸೊಂಟ, ಕೈಕಾಲು ಮುರಿದುಕೊಂಡಿರುವ ಅದೆಷ್ಟೋ ಪ್ರಕರಣಗಳಿವೆ. ಇತ್ತೀಚಿಗಷ್ಟೆ ನರೇಗಲ್ ನಿಂದ ಗದಗ ಆಸ್ಪತ್ರೆಗೆ ಗರ್ಭಿಣಿ ಕರೆತರುವಾಗ ರಸ್ತೆ ಮಧ್ಯೆಯೇ ಹೆರಿಗೆಯಾಗಿರುವ ಉದಾಹರಣೆಯೂ ಇದೆ. ಒಂದು ಗುಂಡಿ ತಪ್ಪಿಸಬೇಕಾದಲ್ಲಿ ಮುಂದೆ ಮತ್ತೆರಡು ಗುಂಡಿಗಳು ಎದುರಾಗುತ್ತವೆ. ಹೀಗಾಗಿ ಈ ರಸ್ತೆನಲ್ಲಿ ಸಾಕಷ್ಟು ಅಪಘಾತಗಳು, ಜೊತೆಗೆ ರಾತ್ರಿ ವೇಳೆ ದರೋಡೆ ಕೂಡಾ ನಡೆಯುತ್ತದೆ. ತಗ್ಗುಗಳಿವೆ ಎಂದು ರಾತ್ರಿ ವೇಳೆ ವಾಹನ ನಿಧಾನ ಮಾಡಿದರೆ ಯಾರು ಇಲ್ಲದ್ದನ್ನು ಗಮನಿಸಿ ದಾಳಿ ಮಾಡಿ ದರೋಡೆ ಮಾಡುತ್ತಾರೆ ಎಂಬ ದೂರು ಸಹ ಕೇಳಿಬಂದಿದೆ.

    ಎರಡು ವರ್ಷಗಳಿಂದ ರಾಜ್ಯ ಹೆದ್ದಾರಿ ಹೀಗೆ ಹದಗೆಟ್ಟು ಹೋಗಿದ್ದು, ಇನ್ನೂ ಸಹ ರಸ್ತೆ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.