Tag: higher education department

  • ಸಿಇಟಿ ಮರು ಪರೀಕ್ಷೆ ಇಲ್ಲ – ಪಠ್ಯಕ್ಕೆ ಹೊರತಾದ ಪ್ರಶ್ನೆ ಕೈಬಿಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧಾರ

    ಸಿಇಟಿ ಮರು ಪರೀಕ್ಷೆ ಇಲ್ಲ – ಪಠ್ಯಕ್ಕೆ ಹೊರತಾದ ಪ್ರಶ್ನೆ ಕೈಬಿಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧಾರ

    ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದಿದ್ದ ಸಿಇಟಿಯಲ್ಲಿ (CET) ಪಠ್ಯಕ್ಕೆ ಹೊರತಾದ ಪ್ರಶ್ನೆಗಳು ಸೇರಿದ್ದರಿಂದ ಉಂಟಾಗಿದ್ದ ಬಿಕ್ಕಟ್ಟಿಗೆ ಕೊನೆಗೂ ಪರಿಹಾರ ಸಿಕ್ಕಿದೆ. ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಕೈಬಿಡಲು ಉನ್ನತ ಶಿಕ್ಷಣ ಇಲಾಖೆ (Higher Education Department) ನಿರ್ಧರಿಸಿದ್ದು, ಸಿಇಟಿ ಮರು ಪರೀಕ್ಷೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

    ಭೌತಶಾಸ್ತ್ರದ 9, ರಸಾಯನಶಾಸ್ತ್ರ 15, ಗಣಿತ 15, ಜೀವಶಾಸ್ತ್ರ 11 ಅಂಕಗಳ ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಕೈಬಿಡಲು ತಜ್ಞರ ಸಮಿತಿ ಶಿಫಾರಸು ಮಾಡಿತ್ತು. ತಜ್ಞರ ವರದಿ ಆಧರಿಸಿ ಪ್ರಶ್ನೆಗಳನ್ನು ಕೈ ಬಿಡಲು ಇಲಾಖೆ ನಿರ್ಧರಿಸಿದೆ. ಇದನ್ನೂ ಓದಿ: SC-ST ಸಮುದಾಯಗಳಿಗೆ ಸೇರಬೇಕಿದ್ದ 11,000 ಕೋಟಿ ಹಣವನ್ನ ಕಾಂಗ್ರೆಸ್ ನುಂಗಿ ನೀರು ಕುಡಿದಿದೆ: ಮೋದಿ ಕೆಂಡ

    ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಬಿಟ್ಟು ಉಳಿದ ಪ್ರಶ್ನೆಗಳನ್ನು ಅಂಕಕ್ಕೆ ಪರಿಗಣಿಸಲು ಇಲಾಖೆ ನಿರ್ಧರಿಸಿದೆ. ಅಲ್ಲದೇ ಸಮಿತಿ ಶಿಫಾರಸಿನಂತೆ 2 ಪ್ರಶ್ನೆಗೆ ಗ್ರೇಸ್ ಅಂಕ ನೀಡಲು ಕೆಇಎ ಪರಿಗಣಿಸಿದೆ. ಮೇ ತಿಂಗಳ ಕೊನೆ ವಾರದಲ್ಲಿ ಸಿಇಟಿ ಫಲಿತಾಂಶ ಪ್ರಕಟ ಮಾಡುವುದಾಗಿ ತಿಳಿಸಿದೆ.

    ಅಂಕಗಳ ಮಾನದಂಡ ಹೇಗೆ?
    * ಪ್ರತಿ ವಿಷಯಗಳ ಪರೀಕ್ಷೆ 60 ಅಂಕಕ್ಕೆ ಇರುತ್ತಿತ್ತು.
    * ಜೀವಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಭೌತಶಾಸ್ತ್ರ ತಲಾ 60 ಅಂಕದ ಪ್ರಶ್ನೆ ಇತ್ತು.
    * ಈಗ ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನ ಕೈಬಿಡಲಾಗುತ್ತದೆ.
    * ಔಟ್ ಆಫ್ ಸಿಲಬಸ್ ಆಗಿರೋ ಭೌತಶಾಸ್ತ್ರ 9, ರಸಾಯನಶಾಸ್ತ್ರ 15, ಗಣಿತ 15, ಜೀವಶಾಸ್ತ್ರ 11 ಪ್ರಶ್ನೆಗಳನ್ನ ಕೈಬಿಡಲಾಗುತ್ತದೆ.
    * ಔಟ್ ಆಫ್ ಸಿಲಬಸ್ ಪ್ರಶ್ನೆಗಳು ಕೈಬಿಟ್ಟ ಬಳಿಕ ಉಳಿದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳ ಅಂಕ ಲೆಕ್ಕ ಹಾಕಲಾಗುತ್ತದೆ. ಅಂದರೆ 60 ಅಂಕದ ಬದಲಾಗಿ ಔಟ್ ಆಫ್ ಸಿಲಬಸ್ ಪ್ರಶ್ನೆಗಳು ಬಿಟ್ಟು ಉಳಿದ ಪ್ರಶ್ನೆಗಳ ಅಂಕಗಳನ್ನೆ ಪರಿಗಣಿಸಲಾಗುತ್ತದೆ.
    * 4 ವಿಷಯಗಳು ಸೇರಿ 240 ಪ್ರಶ್ನೆಗಳು 240 ಅಂಕಗಳು ಇತ್ತು.
    * 240 ಪ್ರಶ್ನೆಗಳಲ್ಲಿ 50 ಅಂಕ ಔಟ್ ಆಫ್ ಸಿಲಬಸ್ ತೆಗೆದರೆ 190 ಪ್ರಶ್ನೆಗಳಿಗೆ ಅಂಕಗಳನ್ನು ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳಿಗೆ ರಾಂಕ್ ನೀಡಲಾಗುತ್ತದೆ.

    ಔಟ್ ಆಫ್ ಸಿಲಬಸ್ ಪ್ರಶ್ನೆ ಬಿಟ್ಟು ಉಳಿದ ಪ್ರಶ್ನೆಗಳ ವಿವರ, ಅಂಕಗಳ ವಿವರ
    ಭೌತಶಾಸ್ತ್ರ- 51 ಪ್ರಶ್ನೆಗಳು ಅಂತಿಮ
    ರಸಾಯನಶಾಸ್ತ್ರ- 45 ಪ್ರಶ್ನೆಗಳು ಅಂತಿಮ
    ಗಣಿತ- 45 ಪ್ರಶ್ನೆಗಳು ಅಂತಿಮ
    ಜೀವಶಾಸ್ತ್ರ- 49 ಪ್ರಶ್ನೆಗಳು ಅಂತಿಮವಾಗಿ ಲೆಕ್ಕ ಹಾಕಲಾಗುತ್ತದೆ.

    ಪ್ರಶ್ನೆ ಪತ್ರಿಕೆ ಸಿದ್ಧತೆಗೆ ಕಠಿಣ ಕ್ರಮ
    ಇನ್ಮುಂದೆ ಸಿಇಟಿ ಪ್ರಶ್ನೆ ಪತ್ರಿಕೆ ಸಿದ್ಧತೆಗೆ ಕಠಿಣ ಕ್ರಮಕ್ಕೆ ನಿರ್ಧಾರ ಕೈಗೊಳ್ಳಲು ಕೆಇಎಗೆ ಉನ್ನತ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ಪ್ರಶ್ನೆ ಪತ್ರಿಕೆ ತಯಾರಿಗೆ SOP ಅನುಷ್ಠಾನ ಮಾಡಲು KEAಗೆ ಸೂಚನೆ ನೀಡಿದೆ. ಪ್ರಶ್ನೆ ಪತ್ರಿಕೆಗಳಲ್ಲಿ ಗೊಂದಲಗಳು ಆಗದಂತೆ ಎಚ್ಚರವಹಿಸಲು SOP ಸಿದ್ಧ ಮಾಡಲು ತಿಳಿಸಿದೆ.

  • ಉನ್ನತ ಶಿಕ್ಷಣ ಖಾತೆ ಬೇಡ್ವೇ ಬೇಡ ಅಂತಿದ್ದ ಜಿಟಿಡಿ ದಿಢೀರ್ ಒಪ್ಪಿಕೊಂಡಿದ್ಯಾಕೆ?

    ಉನ್ನತ ಶಿಕ್ಷಣ ಖಾತೆ ಬೇಡ್ವೇ ಬೇಡ ಅಂತಿದ್ದ ಜಿಟಿಡಿ ದಿಢೀರ್ ಒಪ್ಪಿಕೊಂಡಿದ್ಯಾಕೆ?

    ಬೆಂಗಳೂರು: ಉನ್ನತ ಶಿಕ್ಷಣ ಖಾತೆ ಬೇಡ ಬೇಡ ಅಂತಿದ್ದ ಜಿಟಿ ದೇವೇಗೌಡ ದಿಢೀರ್ ಒಪ್ಪಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಯೊಂದು ಇದೀಗ ಮೂಡಿಬಂದಿದೆ.

    ಉನ್ನತ ಶಿಕ್ಷಣ ಸಚಿವರ ಸಲಹೆಗಾರರಾಗಿದ್ದ ಪ್ರೊ. ರಂಗಪ್ಪ ಅವರೇ ಜಿಟಿ ದೇವೇಗೌಡ ಅವರು ಉನ್ನತ ಶಿಕ್ಷಣ ಸಚಿವ ಸ್ಥಾನ ನಿರಾಕರಿಸಲು ಕಾರಣ ಎನ್ನಲಾಗಿದೆ. ಆದ್ರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊನೆ ಕ್ಷಣದಲ್ಲಿ ಸಲಹೆಗಾರರನ್ನಾಗಿ ನೇಮಿಸಲ್ಲ ಅಂತ ಭರವಸೆ ಕೊಟ್ಟ ಬಳಿಕ ತನಗೆ ಕೊಟ್ಟ ಖಾತೆಯನ್ನು ನಿಭಾಯಿಸುವುದಾಗಿ ಒಪ್ಪಿಕೊಂಡಿದ್ದಾರೆ ಅಂತ ಮೂಲಗಳಿಂದ ತಿಳಿದುಬಂದಿದೆ.

    ಇತ್ತ ಜಿಡಿಟಿ ಕಟ್ಟಿ ಹಾಕುವುದು ಕಷ್ಟ ಅಂತ ಭಾವಿಸಿದ ಗೌಡರ ಕುಟುಂಬ ಅಬಕಾರಿ, ಸಹಕಾರಿ ಖಾತೆ ಕೊಡಲು ಒಪ್ಪಲಿಲ್ಲ. ಹೀಗಾಗಿ ಖಾತೆ ಬದಲಾವಣೆ ಸಾಧ್ಯವೇ ಇಲ್ಲ ಅಂತ ಗೌಡರು ಸಂದೇಶ ರವಾನಿಸಿದ್ದು, ಬೇಕಿದ್ದರೆ ಒಪ್ಪಿಕೊಳ್ಳಿ, ಇಲ್ಲ ಬಿಡಿ ಅಂತ ಸ್ಪಷ್ಟವಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಧಿ ಇಲ್ಲದೆ ಕೊನೆ ಕ್ಷಣದಲ್ಲಿ ಜಿ.ಟಿ. ದೇವೇಗೌಡ ಖಾತೆ ಒಪ್ಪಿಕೊಂಡಿದ್ದಾರೆ ಅಂತ ಇನ್ನೊಂದು ಮೂಲದಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಪ್ಲೀಸ್ ನನ್ನ ಹತ್ರ ಬರ್ಬೇಡಿ ಫೈಲ್ ನೋಡಲ್ಲ, ನೀವು ಅವರ ಹತ್ರನೇ ಹೋಗಿ ಪ್ಲೀಸ್- ಜಿ.ಟಿ ದೇವೇಗೌಡ

    ಜಿಟಿಡಿ ಖಾತೆ ಒಪ್ಪಿಕೊಳ್ಳಲು ಕುಮಾರಸ್ವಾಮಿ ಕೂಡ ಪ್ರಮುಖ ಕಾರಣ ಎಂಬುದಾಗಿ ತಿಳಿದುಬಂದಿದ್ದು, ಮುಖ್ಯಮಂತ್ರಿಗಳು ಮುಂದೆ ಖಾತೆ ಬದಲಾಯಿಸುವುದಾಗಿ ಭರವಸೆ ನೀಡಿದ್ದಾರೆ. ಈಗ ಖಾತೆ ಬದಲಿಸಿದ್ದರೆ ಬೇರೆಯವರೂ ಒತ್ತಡ ಹೇರುತ್ತಾರೆ. ಉನ್ನತ ಶಿಕ್ಷಣ ಜೊತೆ ಮೈಸೂರು ಉಸ್ತುವಾರಿ ನೀಡುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಸಿಎಂ ಭರವಸೆ ಹಿನ್ನೆಲೆಯಲ್ಲಿ ಜಿಟಿಡಿ ಖಾತೆ ಒಪ್ಪಿಕೊಂಡಿರುವುದಾಗಿಯೂ ತಿಳಿದುಬಂದಿದೆ. ಇದನ್ನೂ ಓದಿ:  ಖಾತೆ ಹಂಚಿಕೆಯಾದ ಬೆನ್ನಲ್ಲೇ ಬದಲಾವಣೆ- ಜಿಟಿಡಿಗೆ ಅಬಕಾರಿ ಕೊಡಲು ಸಿಎಂ ಒಪ್ಪಿಗೆ

    ಒಟ್ಟಿನಲ್ಲಿ ಸಚಿವ ಸ್ಥಾನ ಸಿಕ್ಕಿದ ಬೆನ್ನಿಂದಲೇ ಜಿಟಿಡಿ ಅವರು ನನಗೆ ಈ ಖಾತೆ ಬೇಡ ಅಂತ ಹೇಳುತ್ತಲೇ ಬಂದಿದ್ದರು. ಅಲ್ಲದೇ ಸಚಿವರ ಬೆಂಬಲಿಗರು ಕೂಡ ತೀವ್ರ ವಿರೋಧ ವ್ತಕ್ತಪಡಿಸಿದ್ದರು. ಆದ್ರೆ ಇತ್ತೀಚೆಗೆ ಸಿಎಂ ಜೊತೆ ಮಾತುಕತೆ ನಡೆಸಿದ ಬಳಿಕ ಸಚಿವರು ದಿಢೀರ್ ಅಂತ ಕೊಟ್ಟ ಖಾತೆಯನ್ನು ನಿಭಾಯಿಸುವುದಾಗಿ ಒಪ್ಪಿಕೊಂಡಿದ್ದರು.