Tag: highcourt

  • ಮೆಟ್ರೋ ರೈಲು ಸಿಬ್ಬಂದಿ ಮುಷ್ಕರ ಇಲ್ಲ – ಹೈಕೋರ್ಟ್ ನಲ್ಲಿ ವಿಚಾರಣೆ ಬಳಿಕ ಮುಂದಿನ ನಿರ್ಧಾರ

    ಮೆಟ್ರೋ ರೈಲು ಸಿಬ್ಬಂದಿ ಮುಷ್ಕರ ಇಲ್ಲ – ಹೈಕೋರ್ಟ್ ನಲ್ಲಿ ವಿಚಾರಣೆ ಬಳಿಕ ಮುಂದಿನ ನಿರ್ಧಾರ

    ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮೆಟ್ರೋ ಸಿಬ್ಬಂದಿಗಳು ಇಂದು ಮಧ್ಯಾಹ್ನದ ಬಳಿಕ ಮುಷ್ಕರ ಕೈಗೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಮಧ್ಯಾಹ್ನದವರೆಗೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಲ್ಲ.

    ವೇತನ ಹೆಚ್ಚಳ, ಗೆಸ್ಟ್ ಹೌಸ್ ಸೌಲಭ್ಯ, ಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಭತ್ಯೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ ನಮ್ಮ ಮೆಟ್ರೋ ಸಿಬ್ಬಂದಿ ಇಂದು ಮುಷ್ಕರ ನಡೆಸ್ತಾರೆ. ಆದ್ರೆ ಮಧ್ಯಾಹ್ನದವರೆಗೆ ಮುಷ್ಕರ ಇರಲ್ಲ. ಪ್ರಯಾಣಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಮುಷ್ಕರ ನಡೆಸಲ್ಲ. ಇಂದು ಮಧ್ಯಾಹ್ನ ಹೈಕೋರ್ಟ್ ನಲ್ಲಿ ವಿಚಾರಣೆ ಬಳಿಕ ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ತೇವೆ ಅಂತ ಮೆಟ್ರೋ ನೌಕರರ ಸಂಘ ಹೇಳಿದೆ.

    ನಾವು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪ್ರಯಾಣಿಕರಿಗೆ ಏನೂ ತೊಂದರೆ ಆಗಲ್ಲ ಅಂತ ನಮ್ಮ ಮೆಟ್ರೋ ನಿಗಮ ಹೇಳಿಕೊಂಡಿದೆ. ದಿನಾಲೂ ಸರಾಸರಿ 3 ಲಕ್ಷದ 80 ಸಾವಿರದಷ್ಟು ಮಂದಿ ಮೆಟ್ರೋದಲ್ಲಿ ಓಡಾಡ್ತಾರೆ ಅಂತ ಬಿಎಂಆರ್‍ಸಿಎಲ್ ತಿಳಿಸಿದೆ.

  • ವೇದಿಕೆಗಳಲ್ಲಿ ಬಿಎಸ್‍ವೈ ವಿರುದ್ಧ ಅವಹೇಳನಕಾರಿ ಹೇಳಿಕೆ- ಸಿಎಂ ಸೇರಿದಂತೆ ಹಲವು ಮುಖಂಡರಿಗೆ ಹೈಕೋರ್ಟ್ ನೋಟಿಸ್

    ವೇದಿಕೆಗಳಲ್ಲಿ ಬಿಎಸ್‍ವೈ ವಿರುದ್ಧ ಅವಹೇಳನಕಾರಿ ಹೇಳಿಕೆ- ಸಿಎಂ ಸೇರಿದಂತೆ ಹಲವು ಮುಖಂಡರಿಗೆ ಹೈಕೋರ್ಟ್ ನೋಟಿಸ್

    ಬೆಂಗಳೂರು: ಸಿಎಂ ಸಿದ್ದರಾಮಯ್ಯನವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

    ವೇದಿಕೆಗಳಲ್ಲಿ ಸಿಎಂ ಸಿದ್ದರಾಮಯ್ಯ ನನ್ನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನರೇಂದ್ರ ಅವರು ತುರ್ತು ನೋಟಿಸ್ ಜಾರಿ ಮಾಡಿದ್ದಾರೆ.

    ಯಡಿಯೂರಪ್ಪ ವಿರುದ್ಧ ದಾಖಲಾಗಿರೋ ಪ್ರಕರಣಗಳ ಕುರಿತು ಮತ್ತು ವೈಯಕ್ತಿಕ ವಿಚಾರಗಳ ಬಗ್ಗೆ ಮಾಧ್ಯಮಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡದಂತೆ ನಿರ್ಬಂಧ ಹೇರಲಾಗಿದೆ. ಸಿಎಂ ಜೊತೆ ದಿನೇಶ್ ಗುಂಡೂರಾವ್, ಉಗ್ರಪ್ಪ ಸೇರಿದಂತೆ ಇತರೆ ಕಾಂಗ್ರೆಸ್ ಮುಖಂಡರಿಗೆ ನೋಟಿಸ್ ಜಾರಿ ಮಾಡಲಾಗಿದೆ.

  • ನಲಪಾಡ್ ಜಾಮೀನು ಅರ್ಜಿ ವಜಾಗೊಂಡಿದ್ದು ಯಾಕೆ? ನ್ಯಾಯಾಧೀಶರು ಕೊಟ್ಟ ಕಾರಣಗಳು ಇಲ್ಲಿದೆ

    ನಲಪಾಡ್ ಜಾಮೀನು ಅರ್ಜಿ ವಜಾಗೊಂಡಿದ್ದು ಯಾಕೆ? ನ್ಯಾಯಾಧೀಶರು ಕೊಟ್ಟ ಕಾರಣಗಳು ಇಲ್ಲಿದೆ

    ಬೆಂಗಳೂರು: ಯುವಕ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿ ಹೈಕೋರ್ಟ್ ನಲ್ಲಿ ವಜಾ ಆಗಿದೆ.

    ಯಾವೆಲ್ಲ ಅಂಶಗಳನ್ನು ಪರಿಗಣಿಸಿ ನ್ಯಾ. ಶ್ರೀನಿವಾಸ್ ಹರೀಶ್ ಅವರಿದ್ದ ಏಕಸದಸ್ಯ ಪೀಠ ಜಾಮೀನು ಅರ್ಜಿಯನ್ನು ವಜಾಗೊಳಿಸಿತು ಎನ್ನುವುದನ್ನು ವಿಶೇಷ ಅಭಿಯೋಜಕ ಶ್ಯಾಮ್ ಸುಂದರ್ ಅವರು ಸುದ್ದಿಗಾರರಿಗೆ ತಿಳಿಸಿದರು.

    ಕೋರ್ಟ್ ಹೇಳಿದ್ದು ಏನು?
    ವಿದ್ವತ್ ಮೇಲೆ ಹಲ್ಲೆಯಾದಾಗ ನಲಪಾಡ್ ಅಲ್ಲಿ ಇರಲೇ ಇಲ್ಲ. ಅವರು ಹೊಡೆದಿಲ್ಲ. 10-15 ಜನ ಹೊಡೆದಿದ್ದಾರೆ ಅಂತ ಎಫ್‍ಐಆರ್ ನಲ್ಲಿದೆ ಬಿಟ್ಟರೇ ಅವರೇ ಹೊಡೆದಿದ್ದಾರೆ ಎಂದು ನೇರವಾದ ಹೇಳಿಕೆಯಿಲ್ಲ ಅಂತ ಆರೋಪಿ ನಲಪಾಡ್ ಪರ ವಕೀಲ ವಾದ ಮಾಡಿದ್ದಾರೆ. ಆದ್ರೆ ಸಿಸಿಟಿವಿ ದೃಶ್ಯಾವಳಿ ನೋಡಿದಾಗ ವಿದ್ವತ್ ಮೇಲೆ ಘೋರ ಹಾಗೂ ಭಯಾನಕವಾಗಿ ಹಲ್ಲೆ ನಡೆದಿರುವುದು ನ್ಯಾಯಾಧೀಶರ ಗಮನಕ್ಕೆ ಬಂದಿದೆ. ಹಲ್ಲೆ ಮಾಡುತ್ತಿದ್ದ ಸಂದರ್ಭದಲ್ಲಿ ಎಲ್ಲರೂ ನೋಡುತ್ತಿದ್ದರೇ ವಿನಃ ಯಾರು ವಿದ್ವತ್ ಸಹಾಯಕ್ಕೆ ಬರಲಿಲ್ಲ. ನಲಪಾಡ್ ಅವರು ಅಲ್ಲಿ ತೋರಿದ ದರ್ಪದಿಂದಾಗಿ ಭಯಗೊಂಡು ಯಾರೊಬ್ಬರೂ ಸಹಾಯಕ್ಕೆ ಬರದಿರುವುದು ಕಾರಣವಾಗಿದೆ. ಹೀಗಾಗಿ ಇದೊಂದು ಘೋರವಾದ ಪ್ರಕರಣವಾಗಿದೆ.

     

    ಘಟನೆ ನಡೆದಂದೇ ರಾತ್ರಿ 11.45ರ ಸುಮಾರಿಗೆ ದೂರು ದಾಖಲಾದ್ರೂ ಕೂಡ ಬೆಳಗ್ಗಿನ ಜಾವ 3.30ರವರೆಗೂ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿಲ್ಲ. ಮಾರಣಾಂತಿಕ ಹಲ್ಲೆ ನಡೆದರೂ ಎಫ್‍ಐಆರ್ ದಾಖಲಿಸಲು ವಿಳಂಬ ಮಾಡಿದ್ದು ಯಾಕೆ ಎನ್ನುವುದಕ್ಕೆ ಪೊಲೀಸರು ಯಾವುದೇ ಕಾರಣವನ್ನೂ ಕೂಡ ಕೊಟ್ಟಿಲ್ಲ. ಹೀಗಾಗಿ ಇದು ಆರೋಪಿ ತನ್ನ ಪ್ರಭಾವ ಬಳಸಿ ಎಫ್‍ಐಆರ್ ದಾಖಲಿಸಿಕೊಳ್ಳಲು ತಡಮಾಡಿರಬಹುದೆಂದು ನ್ಯಾಯಾಲಯ ಗಮನಿಸಿದೆ.

    ಇಷ್ಟು ಮಾತ್ರವಲ್ಲದೇ ಅರುಣ್ ಬಾಬು ಎಂಬ ವ್ಯಕ್ತಿಯ ಕೈಯಿಂದ ಪ್ರತಿ ದೂರು ನೀಡಿ ಬೆಳಗ್ಗೆ 5.30 ಸುಮಾರಿಗೆ ಕೇಸ್ ದಾಖಲಿಸಿಕೊಂಡು, ನಂತರ 6 ಗಂಟೆ ಸುಮಾರಿಗೆ ಬೌರಿಂಗ್ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗಿ ಮೆಡಿಕಲ್ ಸಮ್ಮರಿ ಮಾಡಿಸಿದ್ದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿದೆ.

    ಈ ಪ್ರಕರಣವನ್ನು ಏನಾದ್ರೂ ಮಾಡಿ ಮುಚ್ಚಿಹಾಕಲು ಮಾಡಿದಂತಹ ಪ್ರಯತ್ನವಾಗಿದೆ. ಮಲ್ಯ ಆಸ್ಪತ್ರೆಯ ವೈದ್ಯ ಡಾ. ಆನಂದ್ ಅವರು ಕೂಡ ವಿದ್ವತ್ ಡಿಸ್ಚಾರ್ಜ್ ಸಮ್ಮರಿಯನ್ನು ಅಪಾದಿತರಿಗೆ ಅನುಕೂಲವಾಗುವಂತೆ ಅಸಾಮಾನ್ಯವಾಗಿ ಸೃಷ್ಟಿಸಿದ್ದಾರೆ ಎಂಬ ನಿಲುವನ್ನು ನ್ಯಾಯಾಲಯ ತೆಗೆದುಕೊಂಡಿದೆ. ಈ ಎಲ್ಲಾ ವಿಚಾರಗಳ ಆಧಾರದ ಮೇಲೆ ಹಾಗೂ ಸುಪ್ರೀಂ ಕೋರ್ಟ್ 2, 3 ತೀರ್ಪುಗಳನ್ನು ಉಲ್ಲೇಖಿಸಿ, ಒಂದು ವೇಳೆ ಜಾಮೀನು ಮಂಜೂರು ಮಾಡಿದ್ದಲ್ಲಿ ಆರೋಪಿ ಸಾಕ್ಷ್ಯವನ್ನು ನಾಶ ಮಾಡುವ ಸಾಧ್ಯತೆಯಿದೆ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಿ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ ಎಂದು ಶ್ಯಾಮ್‍ಸುಂದರ್ ತಿಳಿಸಿದರು.

    https://www.youtube.com/watch?v=1Lfn0Ovd27U

    https://www.youtube.com/watch?v=tGbMJgI45Dc

  • ಜಾಮೀನು ಅರ್ಜಿ ತಿರಸ್ಕೃತ- ಹ್ಯಾರಿಸ್ ಪುತ್ರನಿಗೆ ಜೈಲೇ ಗತಿ

    ಜಾಮೀನು ಅರ್ಜಿ ತಿರಸ್ಕೃತ- ಹ್ಯಾರಿಸ್ ಪುತ್ರನಿಗೆ ಜೈಲೇ ಗತಿ

    ಬೆಂಗಳೂರು: ನಗರದ ಯುಬಿ ಸಿಟಿಯ ಫರ್ಜಿಕೆಫೆ ಯಲ್ಲಿ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕೃತ ಗೊಳಿಸಿದೆ.

    ಸಿಸಿಟಿವಿನಲ್ಲಿ ಹಲ್ಲೆ ನಡೆಸಿರೋದು ಸ್ಪಷ್ಟವಾಗಿದೆ. ತನಿಖಾಧಿಕಾರಿಗಳಿಗೆ ಸಿಗದ ಡಿಸ್ಚಾರ್ಜ್ ಸಮ್ಮರಿ ಆರೋಪಿಯ ತಂದೆಗೆ ಸಿಕ್ಕಿರುವುದು ಸಿಕ್ಕಿರೋದು ಅನುಮಾನ ಮೂಡುತ್ತದೆ ಅಂತ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ನಲಪಾಡ್ ಜಾಮೀನು ಅರ್ಜಿ ವಜಾಗೊಳಿಸಿದೆ. ಇದನ್ನೂ ಓದಿ: ನಲಪಾಡ್‍ಗೆ ಜೈಲೇ ಗತಿ: ಆರೋಪಿಯ ಪರ ವಕೀಲರ ವಾದ ಏನಿತ್ತು? ಕೋರ್ಟ್ ಕಲಾಪದ ಡಿಟೇಲ್ ಇಲ್ಲಿದೆ

    ದೂರು ದಾಖಲಿಸಿದ್ದರೂ, ಎಫ್‍ಐಆರ್ ಹಾಕುವಲ್ಲಿ ವಿಳಂಬ, ಸಿಸಿಟಿವಿಯಲ್ಲಿ ಮೊದಲು ನಲಪಾಡ್ ಹಲ್ಲೆ ನಡೆಸಿರುವ ದೃಶ್ಯ ಸೆರೆ, ವಿದ್ವತ್ ವೈದ್ಯಕೀಯ ವರದಿ ಹ್ಯಾರಿಸ್ ಕೈ ಸೇರಿದ್ದು, ಈ ಹಿಂದೆ ಈ ರೀತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳನ್ನು ಉಲ್ಲೇಖಿಸಿ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

  • ವಿದ್ವತ್ ಡಿಸ್ಚಾರ್ಜ್‍ನಿಂದ ಶಾಸಕ ಹ್ಯಾರಿಸ್, ಮಗ ನಲಪಾಡ್ ಫುಲ್ ಖುಷ್

    ವಿದ್ವತ್ ಡಿಸ್ಚಾರ್ಜ್‍ನಿಂದ ಶಾಸಕ ಹ್ಯಾರಿಸ್, ಮಗ ನಲಪಾಡ್ ಫುಲ್ ಖುಷ್

    ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ನಿಂದ ಹಲ್ಲೆಗೊಳಗಾಗಿದ್ದ ವಿದ್ವತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬೆನ್ನಲ್ಲೇ ಶಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.

    ಹಲ್ಲೆಗೊಳಗಾದ ವಿದ್ವತ್ ನಗರದ ಮಲ್ಯ ಆಸ್ಪತ್ರೆಯಿಂದ ಭಾನುವಾರ ರಾತ್ರಿ ಡಿಸ್ಚಾರ್ಜ್ ಆಗಿದ್ದಾರೆ. ಈ ಕುರಿತು ಸಂತಸ ವ್ಯಕ್ತಪಡಿಸಿದ ಹ್ಯಾರಿಸ್, ದೇವರ ದಯೆಯಿಂದ ವಿದ್ವತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಬಳಿಕ ಆತ ಈಗಾಗಲೇ ಡಿಸ್ಚಾರ್ಜ್ ಆಗಿದ್ದು ಖುಷಿತಂದಿದೆ. ವೈದ್ಯರ ಡಿಸ್ಚಾರ್ಜ್ ಶೀಟ್ ನಲ್ಲಿ ವಿದ್ವತ್ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ ಅಂತ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಆತ ಚೇತರಿಸಿಕೊಳ್ಳುವಂತೆ ಶ್ರಮಿಸಿದ ಮಲ್ಯ ಆಸ್ಪತ್ರೆ ವೈದ್ಯರಿಗೂ ಮತ್ತು ಸಿಬ್ಬಂದಿಗೂ ಧನ್ಯವಾದ ಎಂದು ಹ್ಯಾರಿಸ್ ಹೇಳಿದ್ದಾರೆ. ವಿದ್ವತ್ ಮತ್ತು ಆತನ ಕುಟುಂಬಸ್ಥರಲ್ಲಿ ಸಂತೋಷ ನೆಲೆಸಲಿ ಅಂತ ಹ್ಯಾರಿಸ್ ಹಾರೈಸಿದ್ದಾರೆ. ಇದನ್ನೂ ಓದಿ: ನಲಪಾಡ್ ಹಲ್ಲೆ ಪ್ರಕರಣ- ಹಲ್ಲೆಗೊಳಗಾಗಿದ್ದ ವಿದ್ವತ್ ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್

    ವಿದ್ವತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿಯಾಗಿರೋ ನಲಪಾಡ್ ಕೂಡ ಸಂತಸದಿಂದಿದ್ದಾನೆ. ಯಾಕಂದ್ರೆ ಪ್ರಕರಣ ಸಂಬಂಧ ನಾಳೆ ಹೈಕೋರ್ಟ್‍ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಜಾಮೀನು ಸಿಕ್ಕೇ ಸಿಗುತ್ತೆ ಅನ್ನೋ ಖುಷಿಯಲ್ಲಿದ್ದಾನೆ. ನಿನ್ನೆ ರಾತ್ರಿ ತಂದೆ ಹ್ಯಾರಿಸ್‍ಗೆ ಫೋನ್ ಮಾಡಿ ಖುಷಿಯಿಂದ ಮಾತನಾಡಿದ್ದಾನೆ. ಅಲ್ಲದೇ ನಾಳೆ ಯಾವುದೇ ಕಾರಣಕ್ಕೂ ಬೇಲ್ ಮಿಸ್ ಆಗದಂತೆ ಎಚ್ಚರಿಕೆ ನೀಡಿದ್ದಾನೆ ಅಂತ ಜೈಲಿನ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಜಾಮೀನಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅಪ್ಪನಿಗೆ ರೌಡಿ ನಲಪಾಡ್ ಸೂಚನೆ!

  • ಮಗು ನಾಪತ್ತೆ ಪ್ರಕರಣದ ತನಿಖೆಗೆ ಸಿಬಿಐ ಹೆಗಲಿಗೆ: ಧಾರವಾಡ ಹೈಕೋರ್ಟ್ ಮಹತ್ವದ ಅದೇಶ

    ಮಗು ನಾಪತ್ತೆ ಪ್ರಕರಣದ ತನಿಖೆಗೆ ಸಿಬಿಐ ಹೆಗಲಿಗೆ: ಧಾರವಾಡ ಹೈಕೋರ್ಟ್ ಮಹತ್ವದ ಅದೇಶ

    ಧಾರವಾಡ: ಮಗು ನಾಪತ್ತೆ ಪ್ರಕರಣವೊಂದನ್ನು ಧಾರವಾಡ ಹೈಕೋರ್ಟ್ ಸಿಬಿಐಗೆ ವಹಿಸಲು ಮಹತ್ವದ ಅದೇಶ ಕೊಟ್ಟಿದೆ.

    2016 ರಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಠಾರೆ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಮಗು ನಾಪತ್ತೆ ಪ್ರಕರಣ ನಡೆದಿತ್ತು. ಈ ಹಿನ್ನೆಲೆಯಲ್ಲಿ ರಕ್ಕಸಗಿ ಗ್ರಾಮದ ಮಗುವಿನ ತಾಯಿ ಶಂಕ್ರಮ್ಮ ಪೂಜಾರ, ಬಾಗಲಕೋಟೆ ಜಿಲ್ಲೆಯ ಹುನಗುಂದ ಪೊಲೀಸ್ ಠಾಣೆಯಲ್ಲಿ ತನಗೆ ಜನಿಸಿದ ಹೆಣ್ಣು ಮಗು ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು. ಆದರೆ ಪೊಲೀಸರು ದೂರನ್ನು ದಾಖಲಿಸದ ಹಿನ್ನೆಲೆಯಲ್ಲಿ ಶಂಕ್ರಮ್ಮ ಹೈಕೊರ್ಟ್ ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿಯನ್ನ ಸಲ್ಲಿಸಿದ್ದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಬಾಗಲಕೋಟೆ ಎಸ್‍ಪಿಗೆ ದೂರನ್ನ ದಾಖಲಿಸಲು ಸೂಚನೆ ನೀಡಿತ್ತು.

    ಈ ಹಿನ್ನೆಲೆಯಲ್ಲಿ 2017ರ ಜನವರಿಯಲ್ಲಿ ಮಗು ನಾಪತ್ತೆ ಪ್ರಕರಣ ದಾಖಲಾಗಿತ್ತು. ಬಾಗಲಕೋಟೆ ಎಸ್‍ಪಿಗೆ ತನಿಖೆ ನಡೆಸಿ ವರದಿ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಬಾಗಲಕೋಟೆ ಎಎಸ್‍ಪಿ ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿಯನ್ನ ಸಲ್ಲಿಸಿದ್ದರು. ಆದ್ರೆ ಈ ವರದಿ ಅಸಮಂಜಸವಾಗಿದೆ ಎಂದು ಹೇಳಿದ ನ್ಯಾಯಾಲಯ, ಪ್ರಕರಣವನ್ನ ಸಿಬಿಐಗೆ ವಹಿಸಲು ಹೇಳಿದೆ.

    ಹೈಕೋರ್ಟ್ ನ್ಯಾಯಮೂರ್ತಿ ಎಸ್ ಸುಜಾತಾ ಮತ್ತು ಬೆಂಗಳೂರಿನ ಹೈಕೋರ್ಟ್‍ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ ಎಚ್‍ಬಿ ಪ್ರಭಾಕರಶಾಸ್ತ್ರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ಮಾಡಿ ಈ ಆದೇಶ ಪ್ರಕಟಿಸಿದ್ದಾರೆ.

    ಸಾಧಾರಣವಾಗಿ ಬಹಳ ಚರ್ಚೆಯಾಗಿರುವ ಪ್ರಕರಣ ತನಿಖೆ ನಡೆಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಿಬಿಐ ತನಿಖೆಗೆ ಆದೇಶಿಸುತ್ತದೆ. ಇದರ ಜೊತೆಗೆ ಭಾರೀ ಮಹತ್ವದ ಪ್ರಕರಣದಲ್ಲಿ ತನಿಖೆ ಸರಿಯಾಗಿ ನಡೆಯದೇ ಇದ್ದಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸುತ್ತದೆ. ಈಗ ಮಗು ನಾಪತ್ತೆ ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಸ್ವೀಕರಿಸಿದ ಪರಿಣಾಮ ತನಿಖೆ ಜವಾಬ್ದಾರಿ ಸಿಬಿಐ ಹೆಗಲಿಗೇರಿದೆ. ಈ ಹಿಂದೆ ಡಿಕೆ ರವಿ ಪ್ರಕರಣ ಸಿಐಡಿ ತನಿಖೆಯಲ್ಲಿ ಲೋಪದೋಷಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಿತ್ತು.

  • ಇದು ಜನರ ಜೀವನ್ಮರಣದ ಪ್ರಶ್ನೆ, ಮುಷ್ಕರವನ್ನು ಕೈಬಿಡಿ: ವೈದ್ಯರಲ್ಲಿ ಹೈಕೋರ್ಟ್ ಮನವಿ

    ಇದು ಜನರ ಜೀವನ್ಮರಣದ ಪ್ರಶ್ನೆ, ಮುಷ್ಕರವನ್ನು ಕೈಬಿಡಿ: ವೈದ್ಯರಲ್ಲಿ ಹೈಕೋರ್ಟ್ ಮನವಿ

    ಬೆಂಗಳೂರು: ರೋಗಿಗಳು ತೊಂದರೆ ಅನುಭವಿಸುತ್ತಿದ್ದು, ಮೊದಲು ಮಾತುಕತೆ ನಡೆಸಿ ತೀರ್ಮಾನಕ್ಕೆ ಬನ್ನಿ. ಈ ಕೂಡಲೇ ಮುಷ್ಕರವನ್ನು ಕೈಬಿಡಿ ಎಂದು ಹೈಕೋರ್ಟ್ ಖಾಸಗಿ ಆಸ್ಪತ್ರೆಗಳ ವೈದ್ಯರಲ್ಲಿ ಮನವಿ ಮಾಡಿದೆ.

    ವೈದ್ಯರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ವಕೀಲರಾದ ಎನ್.ಪಿ.ಅಮೃತೇಶ್, ಜಿ.ಆರ್.ಮೋಹನ್ ಹಾಗೂ ಆದಿನಾರಾಯಣ ಎಂಬುವರು ಸಲ್ಲಿಸಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಗುರುವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

    ಸರ್ಕಾರದ ಪರ ವಾದ ಮಂಡನೆ ಮಾಡಿದ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್, ನಾವು ಇನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು(ಕೆಪಿಎಂಇ) ಮಂಡನೆ ಮಾಡಿಲ್ಲ. ಅಷ್ಟೇ ಅಲ್ಲದೇ ವೈದ್ಯರ ಜೊತೆ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಮಾತುಕತೆ ನಡೆಸಲು ಸಿದ್ಧರಿದ್ದಾರೆ. ಆದರೂ ವೈದ್ಯರು ಮುಷ್ಕರ ಮಾಡುತ್ತಿದ್ದಾರೆ ಎಂದು ವಾದಿಸಿದರು.

    ಮಧ್ಯಪ್ರವೇಶ ಮಾಡಿದ ಖಾಸಗಿ ವೈದ್ಯರ ಪರ ವಕೀಲ ಬಸವರಾಜು, ಈ ಮಸೂದೆ ಮಂಡನೆಯಾದರೆ ವೈದ್ಯರು ತಮ್ಮ ವೃತ್ತಿಯನ್ನೇ ಬಿಡಬೇಕಾಗುತ್ತದೆ. ಅಷ್ಟೇ ಅಲ್ಲದೇ ವೈದ್ಯರು ಸ್ವಯಂ ಪ್ರೇರಿತರಾಗಿ ಮುಷ್ಕರ ಮಾಡುತ್ತಿದ್ದಾರೆ ಹೊರತು ಭಾರತೀಯ ವೈದ್ಯ ಸಂಘ(ಐಎಂಎ) ಮುಷ್ಕರಕ್ಕೆ ಕರೆ ನೀಡಿಲ್ಲ. ಆರೋಗ್ಯ ಸಚಿವರು ವೈದ್ಯರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ವಾದ ಮಂಡಿಸಿದರು.

    ಈ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್, ಈಗಾಗಲೇ ಮುಷ್ಕರದಿಂದ ಸಾಕಷ್ಟು ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ನಿಮ್ಮ ವೈದ್ಯರಿಗೆ ಮುಷ್ಕರ ವಾಪಸ್ ಪಡೆಯಲು ಹೇಳಿ ಎಂದು ವಕೀಲರಲ್ಲಿ ಮನವಿ ಮಾಡಿದರು.

    ಸರ್ಕಾರ ಮಾತುಕತೆಗೆ ಸಿದ್ಧವಿದೆ ಎಂದು ಈಗಾಗಲೇ ಹೇಳಿದೆ. ಅಷ್ಟೇ ಅಲ್ಲದೇ ಅಧಿವೇಶನದಲ್ಲಿ ಇನ್ನೂ ಮಸೂದೆ ಮಂಡನೆಯೇ ಆಗಿಲ್ಲ. ರೋಗಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಪರಿಸ್ಥಿತಿ ಅರ್ಥಮಾಡಿಕೊಳ್ಳಿ. ಇದು ಜನರ ಜೀವನ್ಮರಣದ ಪ್ರಶ್ನೆ. ಕೂಡಲೇ ಸೇವೆಗೆ ಮರಳಿ ಚಿಕಿತ್ಸೆ ನೀಡಿ ಎಂದು ನ್ಯಾಯಮೂರ್ತಿಗಳು ಪರಿಪರಿಯಾಗಿ ಮನವಿ ಮಾಡಿದರು.

    ಸರ್ಕಾರದ ಮುಖ್ಯ ಕಾರ್ಯದರ್ಶಿ ಗೆ ನೋಟಿಸ್ ಜಾರಿಗೆ ಆದೇಶಿಸಿರುವ ನ್ಯಾಯಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ. ಒಂದು ವೇಳೆ ಮುಷ್ಕರ ಕೈ ಬಿಡದೇ ಇದ್ದಲ್ಲಿ ಶುಕ್ರವಾರ ಹೈಕೋರ್ಟ್ ಖಡಕ್ ಆದೇಶ ಪ್ರಕಟಿಸುವ ಸಾಧ್ಯತೆಯಿದೆ.

    img class=”alignnone size-full wp-image-194314″ src=”https://publictv.in/wp-content/uploads/2017/11/doctors-protest-19.png” alt=”” width=”786″ height=”576″ />

  • ನಾನು ಯಾವ ಟೈಂನಲ್ಲಾದ್ರೂ ಕೊಲೆಯಾಗ್ಬಹುದು- ಸಹಾಯಕ್ಕೆ ಕೇರಳ ಲವ್ ಜಿಹಾದ್ ಸಂತ್ರಸ್ತೆಯಿಂದ ಮನವಿ

    ನಾನು ಯಾವ ಟೈಂನಲ್ಲಾದ್ರೂ ಕೊಲೆಯಾಗ್ಬಹುದು- ಸಹಾಯಕ್ಕೆ ಕೇರಳ ಲವ್ ಜಿಹಾದ್ ಸಂತ್ರಸ್ತೆಯಿಂದ ಮನವಿ

    ತಿರುವನಂತಪುರ: ಭಾರೀ ವಿವಾದಕ್ಕೀಡಾಗಿ ಕೋರ್ಟ್ ಮೆಟ್ಟಿಲೇರಿದ್ದ ಕೇರಳದ ಲವ್ ಜಿಹಾದ್ ಪ್ರಕರಣದ ಪ್ರಮುಖ ಕೇಂದ್ರ ಬಿಂದುವಾಗಿದ್ದ ಯುವತಿ ಇದೀಗ ಮತ್ತೊಂದು ಹೊಸ ವಿಡಿಯೋ ಮೂಲಕ ಮನವಿ ಮಾಡಿದ್ದಾಳೆ.

    ಯುವತಿ ಅಖಿಲಾ ಅಶೋಕನ್ ಅಥವಾ ಹಾದಿಯಾ ಆಗಸ್ಟ್ 17ರಂದು ಈ ರೀತಿ ಮನವಿ ಮಾಡಿಕೊಂಡಾಗ ಹೋರಾಟಗಾರ ರಾಹುಲ್ ಈಶ್ವರ್ ವಿಡಿಯೋ ಮಾಡಿದ್ದು, ಗುರುವಾರ ಬಹಿರಂಗವಾಗಿದೆ.

    ವಿಡಿಯೋದಲ್ಲೇನಿದೆ?: `ನಾನು ನಾಳೆ ಅಥವಾ ನಾಳಿದ್ದು ಹೀಗೆ ಯಾವುದೇ ಸಮಯದಲ್ಲಿ ಇಲ್ಲಿ ಕೊಲೆಯಾಗಬಹುದು ಅನ್ನೋ ನಂಬಿಕೆ ನನ್ನಲ್ಲಿದೆ. ನನಗೆ ಗೊತ್ತು ತಂದೆಗೆ ನನ್ನ ಮೇಲೆ ವಿಪರೀತ ಸಿಟ್ಟಿದೆ. ನಾನು ನಡೆದುಕೊಂಡು ಹೋಗುವಾಗ ಅವರು ಹೊಡೆಯುತ್ತಾರೆ. ಹಾಗೆಯೇ ಒದೆಯುತ್ತಾರೆ. ಇದರಿಂದ ತಲೆ ಅಥವಾ ನನ್ನ ದೇಹದ ಯಾವುದೇ ಭಾಗಕ್ಕಾಗಾದ್ರೂ ಗಂಭೀರ ಗಾಯಗಳಾಗಿ ಸಾಯುತ್ತೇನೆ. ಹೀಗಾಗಿ ನನ್ನನ್ನು ಇಲ್ಲಿಂದ ಹೊರಗಡೆ ಕರೆದುಕೊಂಡು ಹೋಗಿ ಅಂತ ವಿಡಿಯೋದಲ್ಲಿ ಆಕೆ ಮನವಿ ಮಾಡಿದ್ದಾಳೆ.

    24 ವರ್ಷದ ಹೋಮಿಯೋಪತಿ ವೈದ್ಯೆ ಅಖಿಲ ಇಸ್ಲಾಂಗೆ ಮತಾಂತರಗೊಂಡು ಹೆಸರನ್ನು ಹಾದಿಯಾ ಎಂದು ಬದಲಾಯಿಸಿಕೊಂಡು ಮುಸ್ಲಿಂ ಯುವಕ ಶಫಿನ್ ಜಹಾನ್ ಎಂಬಾತನ ಜತೆ 2016ರಲ್ಲಿ ವಿವಾಹವಾಗಿದ್ದಳು. ಕೇರಳದ ಮಲಪ್ಪುರಂ ಜಿಲ್ಲೆಯಿಂದ ಹಾದಿಯಾಳನ್ನು ಅಪಹರಿಸಿ, ಆಕೆಯ ಗೆಳೆಯರು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಅಂತ ಹಾದಿಯಾ ತಂದೆ ಆರೋಪಿಸಿದ್ದರು.

    ಈ ಕುರಿತು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಇದೊಂದು ಲವ್ ಜಿಹಾದ್ ಎಂದು ಬಣ್ಣಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕೇರಳ ಪೊಲೀಸರಿಗೆ ಆದೇಶ ನೀಡಿತ್ತು. ಅಲ್ಲದೇ ಯುವಕ ಶಫಿನ್ ಜಾಹನ್ ಗೆ ಉಗ್ರರೊಂದಿಗೆ ಸಂಪರ್ಕವಿರುವುದನ್ನು ಕೋರ್ಟ್ ಒಪ್ಪಿಕೊಂಡಿತ್ತು. ಕೇರಳದ ಹಿಂದೂ ಯುವತಿಯೊಬ್ಬಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮುಸ್ಲಿಂ ಯುವಕನ ಜತೆ ವಿವಾಹವಾದ ಪ್ರಕರಣದ ಬಗ್ಗೆ ಎನ್‍ಐಎ ತನಿಖೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಪ್ರಕರಣದ ವಿಚಾರವನ್ನು ಈ ವರ್ಷದ ಆರಂಭದಲ್ಲಿ ಕೈಗೆತ್ತಿಕೊಂಡ ಹೈ ಕೋರ್ಟ್ ವಯಸ್ಕರ ಒಪ್ಪಿಗೆ ಇಲ್ಲದೇ ಈ ಮದುವೆ ನಡೆಯಲು ಹೇಗೆ ಸಾಧ್ಯ ಅಂತ ಪ್ರಶ್ನಿಸಿತ್ತು.

    ಯುವತಿ ಹಾದಿಯಾ ಈ ಮೊದಲು ಒಂದು ವಿಡಿಯೋ ಬಿಡುಗಡೆ ಮಾಡಿದ್ದು ಅದರಲ್ಲಿ `ಮತಾಂತರಗೊಂಡ ಪ್ರಕರಣ ಬೆಳಕಿಗೆ ಬಳದ ಬಳಿಕ ನನ್ನ ಮನೆಯವರು ನನ್ನ ಕೂಡಿ ಹಾಕಿದ್ದು. ಎಲ್ಲೂ ಹೊರ ಹೊಗುವಂತಿಲ್ಲ. ಅಲ್ಲದೇ ನನ್ನ ಮನೆಯ ಹೊರಗಡೆ ಪೋಲೀಸ್ ಅಧಿಕಾರಿಗಳು ಕೂಡ ಕಾವಲು ಕಾಯುತ್ತಿದ್ದಾರೆ. ಇಲ್ಲಿ ಹೇಗೆ ಜೀವನ ಮಾಡಲು ಸಾಧ್ಯ? ಇದು ನನ್ನ ಜೀವನಾನಾ? ಅಂತ ತನ್ನ ಅಲವತ್ತುಕೊಂಡಿದ್ದಳು.

  • ನಟಿ ಕಿಡ್ನಾಪ್ ಕೇಸ್: 86 ದಿನಗಳ ನಂತ್ರ ದಿಲೀಪ್‍ಗೆ ಸಿಕ್ತು ಜಾಮೀನು

    ನಟಿ ಕಿಡ್ನಾಪ್ ಕೇಸ್: 86 ದಿನಗಳ ನಂತ್ರ ದಿಲೀಪ್‍ಗೆ ಸಿಕ್ತು ಜಾಮೀನು

    ಕೊಚ್ಚಿ: ಬಹುಭಾಷಾ ನಟಿ ಕಿಡ್ನಾಪ್ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಮಲೆಯಾಳಂ ನಟ ದಿಲೀಪ್ ಗೆ ಜಾಮೀನು ಮಂಜೂರು ಮಾಡಿದೆ.

    ಒಂದು ಲಕ್ಷ ರೂ. ಶ್ಯೂರಿಟಿ ಹಾಗೂ ಪಾಸ್ ಪೋರ್ಟ್ ಗಳನ್ನು ಕೋರ್ಟ್ ಗೆ ಸಲ್ಲಿಸಬೇಕೆಂದು ಸೂಚಿಸಿ ಜಾಮೀನು ನೀಡಿದೆ.

    ಕಳೆದ ಜುಲೈ10ರಂದು ನಟಿ ಕಿಡ್ನಾಪ್ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಪೊಲೀಸರು ಬಂಧಿಸಿದ್ದರು. ಎರಡು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು ಕೂಡಾ ಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ಈಗ 86 ದಿನಗಳ ಬಳಿಕ ಹೈಕೋರ್ಟ್ ದಿಲೀಪ್ ಗೆ ಜಾಮೀನು ನೀಡಿದೆ.

  • ಡಿನೋಟಿಫಿಕೇಷನ್ ಕೇಸ್: ಮಾಜಿ ಸಿಎಂ ಬಿಎಸ್‍ವೈಗೆ ಬಿಗ್ ರಿಲೀಫ್

    ಡಿನೋಟಿಫಿಕೇಷನ್ ಕೇಸ್: ಮಾಜಿ ಸಿಎಂ ಬಿಎಸ್‍ವೈಗೆ ಬಿಗ್ ರಿಲೀಫ್

    ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯರೂಪ್ಪ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಎಸಿಬಿ ದಾಖಲಿಸಿದ್ದ ಎಫ್‍ಐಆರ್‍ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

    ಎಫ್‍ಐಆರ್ ದಾಖಲಿಸಲು ವಿಳಂಬ ಮಾಡಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತು ಮಾಡುವ ದಾಖಲೆಗಳಿಲ್ಲ ಎಂದು ಹೇಳಿ ನ್ಯಾ. ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿದೆ.

    ಡಿನೋಟಿಫೈ ಮಾಡಿ ಲಾಭ ಮಾಡಿಕೊಂಡಿರುವ ಬಗ್ಗೆ ಸೂಕ್ತ ಸಾಕ್ಷ್ಯಗಳಿಲ್ಲ. ಅಷ್ಟೇ ಅಲ್ಲದೇ ಒಂದೇ ದೂರಿನಲ್ಲಿ ಎರಡು ಎಫ್‍ಐಆರ್ ದಾಖಲಿಸುವುದು ಕಾನೂನು ಬಾಹಿರ ಎಂದು ನ್ಯಾ. ಅರವಿಂದ್ ಕುಮಾರ್ ಅಭಿಪ್ರಾಯಪಟ್ಟು ತಡೆಯಾಜ್ಞೆ ನೀಡಿದ್ದಾರೆ.

    ಸಿಎಂ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಬಿಎಸ್‍ವೈ 257 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ ಮತ್ತು ಭೂ ಮಾಲೀಕರಿಂದ ಅಪಾರ ಹಣ ಪಡೆದಿದ್ದಾರೆ ಎಂದು ಎಸಿಬಿ ವಾದಿಸಿತ್ತು. ಅಲ್ಲದೇ ತನಿಖೆ ವೇಳೆ ಯಡಿಯೂರಪ್ಪ ವಿರುದ್ಧ ಮತ್ತಷ್ಟು ಸಾಕ್ಷ್ಯ ಲಭ್ಯವಾಗಿದೆ ಎಂದು ಹೇಳಿತ್ತು. ಒಂದು ವೇಳೆ ತನಿಖೆ ಮುಂದುವರಿಸಬಹುದು ಎಂದು ಆದೇಶ ಬಂದಿದ್ದರೆ ಬಿಎಸ್‍ವೈಗೆ ಬಂಧನದ ಭೀತಿ ಎದುರಾಗುವ ಸಾಧ್ಯತೆಯಿತ್ತು.