Tag: highcourt

  • 5 ವರ್ಷಗಳಲ್ಲಿ ಕಾನೂನು ಹೋರಾಟಕ್ಕೆ ಕೇಂದ್ರ ಖರ್ಚು ಮಾಡಿದ್ದೆಷ್ಟು?

    5 ವರ್ಷಗಳಲ್ಲಿ ಕಾನೂನು ಹೋರಾಟಕ್ಕೆ ಕೇಂದ್ರ ಖರ್ಚು ಮಾಡಿದ್ದೆಷ್ಟು?

    – ಹೈಕೋರ್ಟ್‍ನ 79% ನ್ಯಾಯಾಧೀಶರು ಮೇಲ್ಜಾತಿಯವರೇ?

    ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಕಾನೂನು ಹೋರಾಟಕ್ಕಾಗಿ 272 ಕೋಟಿ ಖರ್ಚು ವ್ಯಯ ಮಾಡಿದೆ ಎಂದು ಕೇಂದ್ರ ಸರ್ಕಾರ (Central Govt) ಹೇಳಿದೆ. ಜಲಾವರ್-ಬರನ್ ಲೋಕಸಭಾ ಸದಸ್ಯ ದುಶ್ಯಂತ್ ಸಿಂಗ್ (Dushyant Singh) ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರ 6.3 ಕೇಸ್‍ಗಳಲ್ಲಿ ಸರ್ಕಾರ ಭಾಗವಾಗಿದೆ ಎಂದು ಹೇಳಿದೆ.

    ಪ್ರಸ್ತುತ ವಿವಿಧ ನ್ಯಾಯಾಲಯಗಳಲ್ಲಿ ಸರ್ಕಾರವನ್ನು ಒಳಗೊಂಡ 6,36,605 ಕೇಸ್ ಬಾಕಿ ಇದೆ. ಈ ಪೈಕಿ ರೈಲ್ವೆ ಸಚಿವಾಲಯವು 1,10,245 ಪ್ರಕರಣಗಳಲ್ಲಿ ಪಕ್ಷವಾಗಿದ್ದರೆ, ಹಣಕಾಸು ಮತ್ತು ರಕ್ಷಣಾ ಸಚಿವಾಲಯಗಳು ಕ್ರಮವಾಗಿ 1,79,464 ಮತ್ತು 87,543 ಪ್ರಕರಣಗಳಲ್ಲಿ ಕಕ್ಷಿದಾರರಾಗಿದ್ದಾರೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಈ 80,117 ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂದು ಮಾಹಿತಿ ನೀಡಿದೆ.

    2018-19 ರಲ್ಲಿ 50,85 ಕೋಟಿ, 2019-20 ರಲ್ಲಿ 60,40 ಕೋಟಿ, 2020-21 ರಲ್ಲಿ 58,01 ಕೋಟಿ, 2021-22 ರಲ್ಲಿ 48,37 ಕೋಟಿ, 2022-2023 ರ ಪ್ರಸುತ್ತದವರೆಗೂ 54,35 ಕೋಟಿ. ಒಟ್ಟು ಕಳೆದ ಐದು ಹಣಕಾಸು ವರ್ಷಗಳಲ್ಲಿ 272,01,21,567 ಸರ್ಕಾರದ ವೆಚ್ಚ ಮಾಡಿದೆ ಎಂದು ಸರ್ಕಾರ ವರದಿ ನೀಡಿದೆ.

    ಇನ್ನು ದೇಶದ್ಯಾಂತ ಕೋರ್ಟ್‍ಗಳ ಕಾರ್ಯವೈಖರಿಗೆ ಬಗ್ಗೆ ಗಡ್ಚಿರೋಲಿ ಚಿಮೂರ್ ಲೋಕಸಭಾ ಸಂಸದ ಅಶೋಕ್ ನೇತೆ (Ashok Nete) ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರ, ಮೂರು ವರ್ಷಗಳಲ್ಲಿ ಸುಪ್ರೀಂಕೋರ್ಟ್ (SupremeCourt) 1,07,651 ಪ್ರಕರಣಗಳ ವಿಲೇವಾರಿ ಮಾಡಿದೆ. ಕಳೆದ ವರ್ಷ 36,436 ಪ್ರಕರಣಗಳ ವಿಲೇವಾರಿಯಾಗಿದ್ದು, ಈ ವರ್ಷ ಅವಧಿಯಲ್ಲಿ ಇದುವರೆಗೆ ಸುಮಾರು 26,000 ಪ್ರಕರಣಗಳು ಇತ್ಯರ್ಥವಾಗಿದೆ ಎಂದು ಹೇಳಿದೆ.

    ಇದೇ ಅವಧಿಯಲ್ಲಿ ದೇಶದ ಉಚ್ಛ ನ್ಯಾಯಾಲಯಗಳಿಂದ 42,76,978 ಪ್ರಕರಣಗಳನ್ನು ವಿಲೇವಾರಿಯಾಗಿದ್ದು, ಕರ್ನಾಟಕ ಹೈಕೋರ್ಟ್‍ನಿಂದ ಕಳೆದ ವರ್ಷ 39381 ಕೇಸ್ ಗಳ ವಿಲೇವಾರಿಯಾಗಿದ್ದು, ಈ ವರ್ಷ ಇದುವರೆಗೂ 11382 ಕೇಸ್ ಗಳು ಇತ್ಯರ್ಥ ಮಾಡಿದೆ ಎಂದು ಹೇಳಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಕದ್ರು, ಚೆನ್ನೈನಲ್ಲಿ ಮಾರಿದ್ರು- ಕೊನೆಗೂ ಸಿಕ್ಕಿಬಿದ್ದ ಟೊಮೆಟೋ ಕಳ್ಳರು

    ಕಳೆದ ಐದು ವರ್ಷಗಳಲ್ಲಿ ಎಲ್ಲಾ ಹೈಕೋರ್ಟ್‍ಗಳಲ್ಲಿ 79% ನ್ಯಾಯಾಧೀಶರು ಮೇಲ್ಜಾತಿಗಳಿಂದ ನೇಮಕಗೊಂಡಿದ್ದಾರೆ ಎಂಬುದು ನಿಜವೇ ಎಂದು ಹೈದರಾಬಾದ್ ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ಕೇಳಿದ ಪ್ರಶ್ನೆಗೆ ಕಾನೂನು ಸಚಿವಾಲಯದಿಂದ ಉತ್ತರಿಸಿದೆ. 2018 ರಿಂದ ನೇಮಕಗೊಂಡ 604 ನ್ಯಾಯಾಧೀಶರ ಪೈಕಿ 458 ನ್ಯಾಯಾಧೀಶರು ಸಾಮಾನ್ಯ ವರ್ಗದವರು, 76% ಸಾಮಾನ್ಯ ವರ್ಗದ ನ್ಯಾಯಾಧೀಶರಿದ್ದಾರೆ ಎಂದು ಹೇಳಿದೆ.

    \Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಜಿ ಶಾಸಕ ಜೆ.ಆರ್ ಲೋಬೊ ಚುನಾವಣಾ ತಕರಾರು ಅರ್ಜಿ ವಜಾ

    ಮಂಗಳೂರು: 2018ರ ಮೇ ತಿಂಗಳಲ್ಲಿ ನಡೆದ ಅಸೆಂಬ್ಲಿ ಚುನಾವಣೆ (Assembly Election) ಸಂದರ್ಭ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್ (Electronic Voting Mission) ದುರ್ಬಳಕೆ ಮಾಡಲಾಗಿದೆ ಹಾಗೂ ಬಿಜೆಪಿ ಅಭ್ಯರ್ಥಿಯ ಪತ್ನಿ ಧರ್ಮದ ಆಧಾರದಲ್ಲಿ ಹಿಂದುತ್ವ ಹೆಸರಿನಲ್ಲಿ ಮತಯಾಚಿಸಿದ್ದಾರೆ. ಆದ್ದರಿಂದ ವಿಜೇತ ಅಭ್ಯರ್ಥಿಯ ಆಯ್ಕೆಯನ್ನು ರದ್ದುಪಡಿಸಿ ಪರಾಜಿತ ಅಭ್ಯರ್ಥಿಯ ಆಯ್ಕೆ ಘೋಷಿಸುವಂತೆ ಕೋರಿದ ಚುನಾವಣಾ ತಕರಾರು ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ.

    ಅಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ (Congress Party) ಸ್ಪರ್ಧಿಸಿದ್ದ ಜೆ.ಆರ್. ಲೋಬೊ (J R Lobo) ಅವರು ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ (Vedavyas Kamath) ವಿರುದ್ಧ ಸೋಲನುಭವಿಸಿದ್ದರು. ಫಲಿತಾಂಶದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಅವರು ತಮ್ಮ ವಕೀಲರಾದ ರವೀಂದ್ರನಾಥ್ ಕಾಮತ್ (Ravindranath Kamath) ಅವರ ಮೂಲಕ ರಾಜ್ಯ ಹೈಕೋರ್ಟಿಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯಲ್ಲಿ ಮಂಗಳೂರು ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಇವಿಎಂ (EVM) ದುರ್ಬಳಕೆ ಮಾಡಲಾಗಿದೆ. ಅಲ್ಲದೆ ವೇದವ್ಯಾಸ್ ಕಾಮತ್ ಅವರ ಪತ್ನಿ ಹಿಂದುತ್ವ ಹೆಸರಿನಲ್ಲಿ ಮತ ಯಾಚನೆ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕರಿಸಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂಬ ಆರೋಪವನ್ನು ಅರ್ಜಿಯಲ್ಲಿ ಮಾಡಿದ್ದರು.

    ಈ ಪ್ರಕರಣದಲ್ಲಿ ವೇದವ್ಯಾಸ್ ಕಾಮತ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ಹಿಂದುತ್ವ ಎನ್ನುವುದು ಧರ್ಮ ಸೂಚಕವಲ್ಲ. ಅದು ಜೀವನಪದ್ಧತಿ ಎಂಬುದನ್ನು ಸುಪ್ರೀಂ ಕೋರ್ಟ್ (Supreme Court) ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಇವಿಎಂ ದುರ್ಬಳಕೆಯ ಪ್ರಶ್ನೆಯೇ ಇಲ್ಲ. ಇವಿಎಂ ದುರ್ಬಳಕೆ ಅಸಾಧ್ಯ ಎಂಬುದನ್ನು ಕೂಡ ಸುಪ್ರೀಂ ಕೋರ್ಟ್ ಹೇಳಿರುವ ಕುರಿತ ತೀರ್ಪನ್ನು ಉಲ್ಲೇಖಿಸಿ ಅವರು ವಾದ ಮಂಡಿಸಿದ್ದರು. ಇದನ್ನೂ ಓದಿ: ಶಕ್ತಿ ಯೋಜನೆಗೆ ಸಿಕ್ಕ ಜನಮನ್ನಣೆಗೆ ಮೆಚ್ಚುಗೆ ಸೂಚಿಸಿ ಸಿಎಂಗೆ ಧರ್ಮಾಧಿಕಾರಿ ಪತ್ರ

    ಸುಮಾರು ಐದು ವರ್ಷ ಕಾಲ ಈ ಕುರಿತು ವಾದ- ವಿವಾದ ನಡೆಸಲಾಗಿದೆ. ಈ ಬಗ್ಗೆ ಇತ್ತಂಡ ವಾದ ವಿವಾದ ಆಲಿಸಿದ ಹೈಕೋರ್ಟ್‍ನ ಏಕಸದಸ್ಯ ನ್ಯಾಯ ಪೀಠದ ನ್ಯಾಯಮೂರ್ತಿ ದೇವದಾಸ್ ಅವರು, ಅರ್ಜಿದಾರರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಮನಗಂಡು 2023ರಲ್ಲಿ ಹೊಸ ಚುನಾವಣೆ ನಡೆದು ಮತ್ತೆ ಆಯ್ಕೆ ಆಗಿರುವುದರಿಂದ ಲೋಬೊ ಸಲ್ಲಿಸಿದ್ದ ಅರ್ಜಿ ನಿರರ್ಥಕ ಎಂದು ಜು.6ರಂದು ಅರ್ಜಿಯನ್ನು ವಜಾಗೊಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೌರಿ ಶಂಕರ್ ಅನರ್ಹತೆ ಪ್ರಕರಣ – ಮೇಲ್ಮನವಿ ಸಲ್ಲಿಸುತ್ತೇವೆ ಎಂದ ಸಿಎಂ ಇಬ್ರಾಹಿಂ

    ಗೌರಿ ಶಂಕರ್ ಅನರ್ಹತೆ ಪ್ರಕರಣ – ಮೇಲ್ಮನವಿ ಸಲ್ಲಿಸುತ್ತೇವೆ ಎಂದ ಸಿಎಂ ಇಬ್ರಾಹಿಂ

    ಬೆಂಗಳೂರು: ತುಮಕೂರು ಗ್ರಾಮಾಂತರ (Tumkauru Rural) ಶಾಸಕ ಗೌರಿ ಶಂಕರ್ (Gourishankar) ಅನರ್ಹತೆ ವಿರುದ್ದ ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುತ್ತೇವೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ(CM Ibrahim) ತಿಳಿಸಿದ್ದಾರೆ.

    ಕಲಬುರಗಿ ಹೈಕೋರ್ಟ್‌ನ (Kalaburagi Highcourt) ಏಕ ಸದಸ್ಯ ಪೀಠದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಏಕ ಸದಸ್ಯ ಪೀಠದ ಆದೇಶ. ಈ ಆದೇಶವನ್ನು ಪ್ರಶ್ನೆ ಮಾಡಿ ಮೇಲ್ಮನವಿ ಸಲ್ಲಿಸುತ್ತೇವೆ. ಅಲ್ಲಿ ಈ ಕೇಸ್‌ ನಿಲ್ಲುವುದಿಲ್ಲ ಎಂದು ಆಶಾವಾದ ವ್ಯಕ್ತಪಡಿಸಿದರು ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಉಳಿಸಿಕೊಳ್ಳಲು ಜೆಡಿಎಸ್ ಸರ್ಕಸ್


    5 ವರ್ಷದ ಹಳೆ ಕೇಸ್ ಇದು.‌ ಈಗ ಬಹಿರಂಗವಾಗಿ ಹಣ ಹಂಚಿದರೂ ಏನು ಮಾಡುತ್ತಿಲ್ಲ. ನಮಗೆ ಈ ಬಗ್ಗೆ ಆತಂಕ ಇಲ್ಲ.ಗೌರಿ ಶಂಕರ್ ಗೆಲ್ಲುತ್ತಾರೆ. ಅದಕ್ಕೆ ಹೀಗೆಲ್ಲ ಮಾಡ್ತಿದ್ದಾರೆ. ರೋಡ್ ‌ನಲ್ಲಿ ಹೋಗೋವಾಗ ರಸ್ತೆ ಉಬ್ಬು ಇರುತ್ತದೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ಆ ಸೀಟು ಚೆನ್ನಿಗಪ್ಪನ ಮನೆ ಸೀಟು, ಅವರು ಗೆಲ್ಲುತ್ತಾರೆ. ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸುತ್ತೇವೆ ಎಂದರು.

    ಗೌರಿ ಶಂಕರ್ ಶಾಸಕರಾಗಿ ಒಳ್ಳೆ ಸೇವೆ ಮಾಡಿದ್ದಾರೆ. ಮೊನ್ನೆ 50 ಸಾವಿರ ಜನ ಸೇರಿ ಸಭೆ ಮಾಡಿದ್ದೇವೆ. ಅ ಸೀಟು ಜೆಡಿಎಸ್ ಸೀಟು ಅಲ್ಲಿ ಜೆಡಿಎಸ್ ಗೆಲುವು ಶತಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಗೌರಿ ಶಂಕರ್ ಅನರ್ಹವಾದರೆ ಅವರ ಪತ್ನಿಗೆ ಸೀಟು ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,‌ ಅದನ್ನ ಗೌರಿ ಶಂಕರ್ ತೀರ್ಮಾನ ಮಾಡ್ತಾರೆ. ಗೌರಿ ಶಂಕರ್ ಪತ್ನಿ ನಿಂತರೇ ಇನ್ನು ಹೆಚ್ಚು ಮತ ಬರುತ್ತೆ ಎಂದರು.

  • ರಾಹುಲ್ ಗಾಂಧಿ ಅನರ್ಹತೆ ವಿಚಾರ ತಿಳಿದು ಹೈಕೋರ್ಟ್‍ಗೆ ಓಲೆಕಾರ್ ಅರ್ಜಿ

    ರಾಹುಲ್ ಗಾಂಧಿ ಅನರ್ಹತೆ ವಿಚಾರ ತಿಳಿದು ಹೈಕೋರ್ಟ್‍ಗೆ ಓಲೆಕಾರ್ ಅರ್ಜಿ

    ಬೆಂಗಳೂರು: ಕೈ ನಾಯಕ ರಾಹುಲ್ ಗಾಂಧಿ (Rahul Gandhi) ಅನರ್ಹತೆ ವಿಚಾರ ತಿಳಿದು ಶಾಸಕ ನೆಹರೂ ಓಲೆಕಾರ್ ಇಂದು ಹೈಕೋರ್ಟ್ (HighCourt) ಗೆ ಅರ್ಜಿ ಸಲ್ಲಿಸಿದ್ದಾರೆ.

    ಹೌದು. ಫೆಬ್ರವರಿ ತಿಂಗಳ 13 ರಂದೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೆಹರೂ ಓಲೆಕಾರ್ (Neharu Olekar) ಗೆ ಎರಡು ವರ್ಷ ಶಿಕ್ಷೆ ವಿಧಿಸಿ ಆದೇಶ ನೀಡಿದರೂ ಸಹ, ಶಿಕ್ಷೆ ವಿಚಾರವನ್ನು ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿರಲಿಲ್ಲ. ಯಾವಾಗ ರಾಹುಲ್ ಗಾಂಧಿ ಅನರ್ಹ ವಿಚಾರ ತಿಳಿಯಿತೇ ಇಂದೇ ಹೈಕೋರ್ಟ್‍ಗೆ ಹಾಜರಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ನೆಹರೂ ಓಲೆಕಾರ್ ಅರ್ಜಿ ಸಲ್ಲಿಸಿದ್ರು.

    ನೆಹರೂ ಓಲೆಕಾರ್ ಅರ್ಜಿ ಸಲ್ಲಿಕೆ ವಿಚಾರ ತಿಳಿದ ಲೋಕಾಯುಕ್ತ ಸಹ ಆಕ್ಷೇಪಣೆ ಸಲ್ಲಿಸಿತು. ಫೆಬ್ರವರಿ 13 ರಂದು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದೆ. ಈಗಾಗಲೇ ನೆಹರೂ ಓಲೆಕಾರ್ ಅನರ್ಹಗೊಂಡಿದ್ದಾರೆ. ಶಿಕ್ಷೆಗೆ ತಡೆಕೋರಿ ಸಮರ್ಪಕ ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ಕೆಳ ನ್ಯಾಯಾಲಯದ ತೀರ್ಪಿಗೆ ತಡೆ ನೀಡದಂತೆ ಲೋಕಾಯುಕ್ತದಿಂದ ಮನವಿ ಮಾಡಲಾಯ್ತು. ಸೂಕ್ತ ಅರ್ಜಿ ಸಲ್ಲಿಸುವಂತೆ ನೆಹರೂ ಓಲೆಕಾರ್ ಪರ ವಕೀಲರಿಗೆ ಸೂಚಿಸಿ ಇವತ್ತಿನ ಅರ್ಜಿಯನ್ನ ಹೈಕೋರ್ಟ್ ಇತ್ಯರ್ಥಗೊಳಿಸಿದೆ. ಇದನ್ನೂ ಓದಿ: ಅಂದು ಸುಗ್ರೀವಾಜ್ಞೆ ಹರಿದು ಎಸೆಯದೇ ಇದ್ದಿದ್ದರೆ ರಾಹುಲ್‌ ಅನರ್ಹರಾಗುತ್ತಿರಲಿಲ್ಲ!

    ಪ್ರಕರಣದ ಹಿನ್ನೆಲೆ: ಬಿಜೆಪಿ ಶಾಸಕ ನೆಹರೂ ಓಲೆಕಾರ್ ಗೆ 2 ವರ್ಷ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಫೆಬ್ರವರಿ 13 ರಂದು ಆದೇಶ ಹೊರಡಿಸಿತ್ತು. ಹಾವೇರಿ ಶಾಸಕರ ವಿರುದ್ಧ ಸ್ವಜನ ಪಕ್ಷಪಾತ ಆರೋಪ ಕೇಳಿ ಬಂದಿದ್ದು, ಇಬ್ಬರು ಪುತ್ರರಿಗೂ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶೆ ಜೆ. ಪ್ರೀತ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಮಾಡಿದ್ದರು. 3 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾದ ಹಿನ್ನೆಲೆ, ಜನಪ್ರತಿನಿಧಿಗಳ ನ್ಯಾಯಾಲಯದಿಂದಲೇ ಜಾಮೀನು ಮಂಜೂರಾಗಿತ್ತು.

  • ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಭವಿಷ್ಯ- ಆದೇಶ ಕಾಯ್ದಿರಿಸಿದ ಹೈಕೋರ್ಟ್

    ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಭವಿಷ್ಯ- ಆದೇಶ ಕಾಯ್ದಿರಿಸಿದ ಹೈಕೋರ್ಟ್

    ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಗೆ ನೀಡಿರುವ ನಿರೀಕ್ಷಣಾ ಜಾಮೀನು ರದ್ದು ಮಾಡುವಂತೆ ಹೈಕೋರ್ಟ್ (HighCourt) ಗೆ ಲೋಕಾಯುಕ್ತ ಆಕ್ಷೇಪಣೆ ಸಲ್ಲಿಸಿ ವಾದ ಮಂಡನೆ ಮಾಡಿತು.

    ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ರೂ ಕೂಡ ತನಿಖೆಗೆ ಸಹಕಾರವನ್ನು ನೀಡುತ್ತಿಲ್ಲ. ದಿನಾ ವಿಚಾರಣೆಗೆ ಬರುತ್ತಾರೆ, ತನಿಖಾಧಿಕಾರಿಗೆ ಯಾವುದೇ ಹೇಳಿಕೆ ನೀಡುತ್ತಾ ಇಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ರದ್ದು ಮಾಡಿ ಎಂದು ವಾದ ಮಂಡಿಸಿದ್ರು. ಇದನ್ನೂ ಓದಿ: ಶಾಸಕ ಮಾಡಾಳ್‌ ಜಾಮೀನಿಗೆ ಆಕ್ಷೇಪ – ತುರ್ತು ವಿಚಾರಣೆಗೆ ಸುಪ್ರೀಂ ನಕಾರ

    ಇತ್ತ ವಿರೂಪಾಕ್ಷಪ್ಪ ತನಿಖೆಗೆ ಸಹಕಾರ ನೀಡುತ್ತಾ ಇದ್ದಾರೆ, ಪ್ರತಿದಿನ 6 ಗಂಟೆಗಳ ಕಾಲ ವಿಚಾರಣೆ ಎದುರಿಸ್ತಾ ಇದ್ದಾರೆ ಎಂದು ವಿರೂಪಾಕ್ಷಪ್ಪ ಪರ ವಾದ ಮಂಡನೆ ಮಾಡಿದ್ರು. ಎರಡೂ ಕಡೆ ವಾದ – ಪ್ರತಿವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಕಾಯ್ದಿರಿಸಿದೆ.

  • ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ಆರಂಭ

    ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ಆರಂಭ

    ಹುಬ್ಬಳ್ಳಿ: ಹೈಕೋರ್ಟ್ (High Court) ಆದೇಶದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ (Hubli) ಭೈರಿದೇವರಕೊಪ್ಪ ದರ್ಗಾದ (Bairidevarkoppa Dargah) ತೆರವು ಕಾರ್ಯಾಚರಣೆ ಆರಂಭವಾಗಿದೆ.

    ಭೈರಿದೇವರಕೊಪ್ಪದ ದರ್ಗಾವು ಹುಬ್ಬಳ್ಳಿ – ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಕ್ಕದಲ್ಲಿದೆ. ಆದರೆ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಭೈರಿದೇವರಕೊಪ್ಪದಲ್ಲಿರುವ ದರ್ಗಾವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಇದಕ್ಕನುಸಾರವಾಗಿ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರೇಟ್‍ನಿಂದ ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ತೆರವು ಕಾರ್ಯಾಚರಣೆ ಬೆಳ್ಳಂಬೆಳಗ್ಗೆ ಆರಂಭವಾಗಿದೆ.

    ತೆರವು ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದೇ ಇರಲಿ ಎಂದು ಹುಬ್ಬಳ್ಳಿಯಿಂದ ಧಾರವಾಡ ಸಂಪರ್ಕಿಸುವ 500 ಮೀಟರ್ ರಸ್ತೆಯನ್ನು ಬಂದ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮುಖ್ಯರಸ್ತೆಗೆ ಬ್ಯಾರಿಕೇಡ್ ಇಟ್ಟು ತೆರವು ಕಾರ್ಯ ಆರಂಭಿಸಿದ್ದು, ಭದ್ರತೆಗಾಗಿ 5 ಡಿವೈಎಸ್‍ಪಿ ಅಥವಾ ಎಸಿಪಿ, 13 ಪಿಐ, 15 ಪಿಎಸ್‍ಐ, 250 ಕಾನ್ಸ್‌ಟೇಬಲ್ ಹಾಗೂ ಆರ್‌ಎಎಫ್, ಕೆಎಸ್‍ಆರ್‌ಪಿ, ಸಿಎಆರ್ ತುಕಡಿ ನಿಯೋಜಿಸಲಾಗಿದೆ. ಇದನ್ನೂ ಓದಿ: ಸಮುದಾಯ, ಆರ್ಥಿಕ ಅಭಿವೃದ್ಧಿಗೆ ಸಾಕ್ಷರತೆಯ ಪಾತ್ರ ಪ್ರಮುಖ – ಗೆಹ್ಲೋಟ್‌

    ಪೊಲೀಸ್ ಸರ್ಪಗಾವಲಿನಲ್ಲಿ ದರ್ಗಾ ತೆರವು ಕಾರ್ಯಾಚರಣೆಯಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಜೊತೆಗೆ ದರ್ಗಾ ತೆರವಿನ ದೃಶ್ಯ ಸೆರೆ ಹಿಡಿಯದಂತೆ ಮಾಧ್ಯಮದಲ್ಲಿ ನಿರ್ಬಂಧಿಸಲಾಗಿದೆ. ದರ್ಗಾ ಸುತ್ತ ತಗಡು ಜೋಡಿಸಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಆಸ್ಪತ್ರೆಗಳು ಭರ್ತಿ, ಸ್ಮಶಾನದಲ್ಲಿ ಶವಗಳ ರಾಶಿ – ಚೀನಾದಲ್ಲಿ ಕೋವಿಡ್‌ ಸುನಾಮಿಗೆ ಕಾರಣ ಏನು?

    Live Tv
    [brid partner=56869869 player=32851 video=960834 autoplay=true]

  • ಹೈಕೋರ್ಟ್ ಚಾಟಿ ಬೆನ್ನಲ್ಲೇ ಸಭೆ- ನಾಳೆ ನಿಗದಿಯಾಗುತ್ತಾ ಓಲಾ, ಉಬರ್ ಆಟೋ ದರ?

    ಹೈಕೋರ್ಟ್ ಚಾಟಿ ಬೆನ್ನಲ್ಲೇ ಸಭೆ- ನಾಳೆ ನಿಗದಿಯಾಗುತ್ತಾ ಓಲಾ, ಉಬರ್ ಆಟೋ ದರ?

    ಬೆಂಗಳೂರು: ಸೋಮವಾರ ಒಲಾ ಉಬರ್ (Ola- Uber) ದರ ಸಮರ ಕ್ಲೈಮಾಕ್ಸ್ ಹಂತಕ್ಕೆ ಬರಲಿದೆ. ಹೈಕೋರ್ಟ್ (HighCourt) ಚಾಟಿಯೇಟಿನಿಂದ ಅಲರ್ಟ್ ಆದ ಸಾರಿಗೆ ಇಲಾಖೆ ದರ ಫಿಕ್ಸ್ ಮಾಡಲು ಆಟೋಚಾಲಕರಿಗೂ ಬಹಿರಂಗ ಆಹ್ವಾನ ನೀಡಿದೆ. ಇದೀಗ ಸೋಮವಾರ ನಡೆಯುವ ಒಲಾ ಉಬರ್ ಸಭೆ ತೀವ್ರ ಕುತೂಹಲ ಕೆರಳಿಸಿದೆ.

    ಒಲಾ ಉಬರ್ ಆಟೋ (uto) ದರದ ಹಗ್ಗಜಗ್ಗಾಟ ನಾಳೆ ಫೈನಲ್ ಆಗುವ ಸಾಧ್ಯತೆ ಇದೆ. ದರ ನಿಗದಿಯ ಬಗ್ಗೆ ಹೈಕೋರ್ಟ್ ಮತ್ತೆ ಚಾಟಿಬೀಸಿದ ಬಳಿಕ ಸಾರಿಗೆ ಇಲಾಖೆ ಈ ಬಾರಿ ಕೇವಲ ಆಪ್ ಕಂಪನಿಗಳ ಜೊತೆ ಮಾತ್ರ ಸಭೆ ಕರೆಯದೇ ಆಟೋ ಚಾಲಕರ ಸಂಘದ ಜೊತೆಗೆ ನಾಳೆ ಮಹತ್ತರ ಸಭೆ ನಡೆಸುತ್ತಿದೆ.

    ಬೆಂಗಳೂರಿನ ಎಲ್ಲಾ ಆಟೋ ಚಾಲಕರನ್ನು ದರ ನಿಗದಿಯ ಬಗ್ಗೆ ಚರ್ಚೆ ನಡೆಸಲು ನಾಳೆ ಆಹ್ವಾನ ನೀಡಿದೆ. ನಾಳೆಯ ಸಭೆಯಲ್ಲಿ ಆಟೋ ಡ್ರೈವರ್ಸ್ ಸರ್ಕಾರ ಈಗಾಗಲೇ ನಿಗದಿ ಪಡಿಸಿದ ದರದಷ್ಟೇ ಆಪ್ ಕಂಪನಿಗಳು ಸೇವೆ ನೀಡಲಿ ಅಂತಾ ಒತ್ತಾಯ ಮಾಡಲು ನಿರ್ಧಾರ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಜಾಮಿಯಾ ಮಸೀದಿ ವಿವಾದ ಹೈಕೋರ್ಟ್ ಅಂಗಳಕ್ಕೆ

    ಜಾಮಿಯಾ ಮಸೀದಿ ವಿವಾದ ಹೈಕೋರ್ಟ್ ಅಂಗಳಕ್ಕೆ

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ (Jamia Masjid) ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ವಿವಾದ ಹೈಕೋರ್ಟ್ (Highcourt) ಅಂಗಳದಲ್ಲಿ ಮಂದಿರವೋ ಅಥವಾ ಮಸೀದಿಯೋ ಇತ್ಯರ್ಥಕ್ಕೆ ಕೊನೆಯ ಸಿದ್ಧತೆಗಳು ನಡೆದಿದೆ. ಇನ್ನೆರಡು ದಿನಗಳಲ್ಲಿ ಹೈಕೊರ್ಟ್‍ನಲ್ಲಿ 108 ಹನುಮ ಭಕ್ತರು ದಾವೆ ಹೂಡಲಿದ್ದಾರೆ.

    karnataka highcourt

    5 ತಿಂಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಹಿಂದೂಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಜಾಮಿಯಾ ಮಸೀದಿಯಲ್ಲ ಹನುಮ ಮಂದಿರ ಎಂದು ಹೋರಾಟ ನಡೆಸಿತ್ತು. ಮಸೀದಿ ಜಾಗ ಹಿಂದೂಗಳಿಗೆ ಮರಳಿ ನೀಡುವಂತೆ ಸರ್ಕಾರಕ್ಕೆ ಗಡುವು ನೀಡಿದ್ದವು. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಇದೀಗ ಕೋರ್ಟ್ ಮೊರೆ ಹೋಗಲಾಗಿದೆ. ಅಯೋಧ್ಯೆ ಶ್ರೀರಾಮ ಮಂದಿರ ರೀತಿ ಹನುಮ ಮಂದಿರಕ್ಕಾಗಿ ನ್ಯಾಯಾಂಗ ಹೋರಾಟ ನಡೆಸಲು ಕೊನೆಯ ಹಂತದ ತಯಾರಿಗಳು ಸಹ ಇದೀಗ ಮುಕ್ತಾಯಗೊಂಡಿವೆ. 108 ಹನುಮ ಭಕ್ತರಿಂದ ಹೈಕೋರ್ಟ್‍ಗೆ ದಾವೆ ಹೂಡಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    ವಕೀಲ ರವಿಶಂಕರ್ ಮೂಲಕ ದಾವೆ ಹೂಡಲು ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ದಾಖಲಾತಿಗಳನ್ನು ಭಜರಂಗ ಸೇನೆ ಸಿದ್ಧಪಡಿಸಿಕೊಂಡಿದೆ. ದಾಖಲೆ ಸಮೇತ ಕೋರ್ಟ್ ಮೆಟ್ಟಿಲೇರಲು ಭಜರಂಗಸೇನೆ (Bhajarangdal) ರಾಜ್ಯಾಧ್ಯಕ್ಷ ಮಂಜುನಾಥ್ ಸಿದ್ಧತೆ ಮಾಡಿಕೊಂಡಿದ್ದಾರೆ. ಹಿಂದೂಗಳ ಮಂಗಳಕರ ಸಂಖ್ಯೆ ಎಂಬ ಕಾರಣಕ್ಕೆ 108 ಪಿಐಎಲ್ ಸಲ್ಲಿಕೆ ಮಾಡಲಾಗುತ್ತಿದೆ. ಇದರಲ್ಲಿ ಹನುಮಂತನನ್ನೇ ಪ್ರತಿವಾದಿ ಮಾಡಿ ಮಂದಿರಕ್ಕಾಗಿ ಹೋರಾಟ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ – 20ಕ್ಕೂ ಅಧಿಕ ಹೋರಾಟಗಾರರು ಪೊಲೀಸರ ವಶಕ್ಕೆ

    ಮೈಸೂರು ಗೆಜೆಟಿಯರ್, ಮಸೀದಿಯಲ್ಲಿನ ಹಿಂದೂ ವಾಸ್ತುಶಿಲ್ಪ, ಮೂರ್ತಿ ಕೆತ್ತನೆ, ಕಂಬಗಳ ಮೇಲಿನ ದೇವರ ಚಿತ್ರಕಲೆ, ಕಲ್ಯಾಣಿ ಸೇರಿದಂತೆ ಕೆಲ ಬ್ರಿಟಿಷ್ ಅಧಿಕಾರಿಗಳು ಉಲ್ಲೇಖಿಸಿರುವ ದಾಖಲೆಗಳ ಸಂಗ್ರಹ ಮಾಡಲಾಗಿದೆ. ಮೂರು ದಿನಗಳ ಒಳಗಡೆ ದಾಖಲೆ ಹಾಗೂ ಸಾಕ್ಷಿಗಳ ಸಮೇತ ಹೈಕೋರ್ಟ್ ದಾವೆ ಹೂಡಲು 108 ಹನುಮ ಭಕ್ತರು ಸಿದ್ಧರಾಗಿದ್ದು, ಹನುಮ ಮಂದಿರ ಕೆಡವಿ ಟಿಪ್ಪು ಮಸೀದಿ ಕಟ್ಟಿರುವುದಾಗಿ ಆರೋಪಿಸಿ ಈ ನ್ಯಾಯಾಂಗ ಹೋರಾಟ ನಡೆಯಲಿದೆ ಎಂದು ಭಜರಂಗ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.


    Live Tv

    [brid partner=56869869 player=32851 video=960834 autoplay=true]

  • ಮೊಟ್ಟ ಮೊದಲ ಬಾರಿಗೆ ಫೋನ್‌ಕಾಲ್ ಮೂಲಕ ವಿಚಾರಣೆ ನಡೆಸಿದ ಸುಪ್ರೀಂ

    ಮೊಟ್ಟ ಮೊದಲ ಬಾರಿಗೆ ಫೋನ್‌ಕಾಲ್ ಮೂಲಕ ವಿಚಾರಣೆ ನಡೆಸಿದ ಸುಪ್ರೀಂ

    ನವದೆಹಲಿ: ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ (Supreme Court) ದೂರವಾಣಿ ಕರೆಯ (Phone Call) ಮೂಲಕ ಮೊಕದ್ದಮೆಯೊಂದರ ವಿಚಾರಣೆ ನಡೆಸಿದೆ. ಆದರೆ ಪರಿಹಾರ ನೀಡಲು ನಿರಾಕರಿಸಿದೆ.

    ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ (DY Chandrachud) ಹಾಗೂ ಹಿಮಾ ಕೊಹ್ಲಿ (Hima Kohli) ಅವರ ವಿಭಾಗೀಯ ಪೀಠವು ಅರ್ಜಿಯನ್ನು ತಿರಸ್ಕರಿಸುವ ಮುನ್ನ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರರ ವಿಚಾರಣೆ ಆಲಿಸಿತು. ಇದನ್ನೂ ಓದಿ: CMಗೆ ಧಮ್ ಇದ್ರೆ ಸಿದ್ದರಾಮಯ್ಯನ ಮೇಲಿನ ಆರೋಪಗಳನ್ನು ತನಿಖೆ ಮಾಡಿಸಲಿ- HDK ಸವಾಲ್

    ಅರ್ಜಿದಾರರು ತಮ್ಮ ಮಗಳಿಗೆ ಈ ವರ್ಷ ಪದವಿಪೂರ್ವ ವೈದ್ಯಕೀಯ ಸೀಟುಗಳಲ್ಲಿ (Medical Seats) ವಸತಿ ಕಲ್ಪಿಸುವಂತೆ ಕೋರಿದ್ದರು. ಆದರೆ ಅರ್ಜಿದಾರರ ಪುತ್ರಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ-2022 (NEET 2022) ನಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರು ಉದ್ಯೋಗಿಗಳ ರಾಜ್ಯ ವಿಮಾ ನಿಗಮದ ಸಂಸ್ಥೆಯಲ್ಲಿ ವಿಮಾದಾರರ ಕೋಟಾದಡಿ ಪ್ರವೇಶ ಪಡೆಯಲು ಅವರು ಬಯಸಿದ್ದರು. ಇದನ್ನೂ ಓದಿ: ಐಸಿಸ್‌ಗೆ ಭಾರೀ ಆರ್ಥಿಕ ಸಹಾಯ – ಕೋರ್ಟ್‌ ಮುಂದೆ ಫ್ರಾನ್ಸ್‌ ಸಿಮೆಂಟ್‌ ಕಂಪನಿಯಿಂದ ತಪ್ಪೊಪ್ಪಿಗೆ

    ಈ ವೇಳೆ ದೂರವಾಣಿ ಮೂಲಕ ಆಕೆಯ ವಾದವನ್ನು ಆಲಿಸಿದ ಪೀಠವು ವಾರ್ಡ್‌ನಲ್ಲಿ ನೀಟ್‌ಗೆ ಹಾಜರಾಗದ ಕಾರಣ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿತು. ಈ ವರ್ಷ ಪರೀಕ್ಷೆಗೆ ಕುಳಿತುಕೊಳ್ಳದಿದ್ದರೇ ನಾವು ಸೀಟು ನೀಡಲು ಸಾಧ್ಯವಿಲ್ಲ, ಸೀಟು ಸಹ ಇಲ್ಲ ಎಂದು ಕೋರ್ಟ್ತಿ (Court) ಳಿಸಿತು.

    ಮೇಡಂ ನಾವು ಈ ರೀತಿಯ ಪ್ರವೇಶ ನೀಡಲು ಸಾಧ್ಯವಿಲ್ಲ, ಅವಳು ಪರೀಕ್ಷೆಗೆ ಕುಳಿತುಕೊಳ್ಳದ ಕಾರಣ ಇದು ಮತ್ತೊಂದು ದಾವೆ ಹೂಡಲು ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದೆ.

    ಅಲ್ಲದೇ ಯುವತಿ ನೀಟ್ ಪರೀಕ್ಷೆಯಲ್ಲಿ ಕಾಣಿಸಿಕೊಂಡ ನಂತರ ಸುಪ್ರೀಂ ಕೋರ್ಟ್ ಅಥವಾ ಸಂಬಂಧಪಟ್ಟ ಹೈಕೋರ್ಟ್‌ಗೆ (HighCourt) ತೆರಳಲು ಅರ್ಜಿದಾರರಿಗೆ ಸ್ವಾತಂತ್ರ‍್ಯ ನೀಡಿ ಅರ್ಜಿಯನ್ನು ವಿಲೇವಾರಿ ಮಾಡಿತು.

    Live Tv
    [brid partner=56869869 player=32851 video=960834 autoplay=true]

  • 6 ವಾರದೊಳಗೆ ಸರ್ಕಾರಿ ಬಂಗಲೆಯನ್ನು ತೊರೆಯಿರಿ – ಸುಬ್ರಮಣಿಯನ್ ಸ್ವಾಮಿಗೆ ಕೋರ್ಟ್ ಗಡುವು

    6 ವಾರದೊಳಗೆ ಸರ್ಕಾರಿ ಬಂಗಲೆಯನ್ನು ತೊರೆಯಿರಿ – ಸುಬ್ರಮಣಿಯನ್ ಸ್ವಾಮಿಗೆ ಕೋರ್ಟ್ ಗಡುವು

    ನವದೆಹಲಿ: ಬಿಜೆಪಿ(BJP) ನಾಯಕ ಸುಬ್ರಮಣಿಯಂ ಸ್ವಾಮಿ(Subramanian Swamy) ಅವರು ರಾಜ್ಯಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಸರ್ಕಾರದಿಂದ ನೀಡಲಾಗಿದ್ದ ಬಂಗಲೆಯನ್ನು 6 ವಾರದೊಳಗೆ ವಾಪಸ್ ನೀಡುವಂತೆ ದೆಹಲಿ ಹೈಕೋರ್ಟ್(Delhi High Court )ತಿಳಿಸಿದೆ.

    ಏಕಸದಸ್ಯ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ನನಗೆ ಜೀವ ಬೆದರಿಕೆಯಿದೆ. ಹೀಗಾಗಿ ಜನವರಿ 2016ರಿಂದ ವಾಸಿಸುತ್ತಿದ್ದ ಬಂಗಲೆಯನ್ನು ಮರುಹಂಚಿಕೆ ಮಾಡಿ ಎಂದು ಕೋರಿದ್ದ ಸುಬ್ರಮಣಿಯಂ ಸ್ವಾಮಿ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.

    ಈ ಬಂಗಲೆಯನ್ನು 5 ವರ್ಷಕ್ಕೆ ನೀಡಲಾಗಿದೆ. ಈಗಾಗಲೇ ಅವಧಿಯು ಮುಕ್ತಾಯಗೊಂಡಿದೆ. ಝಡ್ ವರ್ಗದ ಭದ್ರತೆ ಪಡೆದವರಿಗೆ ವಸತಿ ಸೌಕರ್ಯವನ್ನು ಕಡ್ಡಾಯಗೊಳಿಸುವ ಯಾವುದೇ ದಾಖಲೆಯನ್ನು ನ್ಯಾಯಾಲಯಕ್ಕೆ ತೋರಿಸಲಾಗಿಲ್ಲ ಎಂದು ತಿಳಿಸಿದೆ.

    2016ರ ಜನವರಿಯಲ್ಲಿ ರಾಜ್ಯಸಭಾ ಸದಸ್ಯರಾದಾಗ ಸುಬ್ರಮಣಿಯಂ ಸ್ವಾಮಿಗೆ ಸರ್ಕಾರ 5 ವರ್ಷಗಳ ಕಾಲ ದೆಹಲಿಯಲ್ಲಿ ಬಂಗಲೆ ಮಂಜೂರು ಮಾಡಿತ್ತು. ಆದರೆ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಅವರ ಅಧಿಕಾರವಧಿ ಅಂತ್ಯಗೊಂಡಿತ್ತು. ಇದರಿಂದಾಗಿ ಸರ್ಕಾರ ನೀಡಿದ್ದ ಬಂಗಲೆಯನ್ನು ಅವರು ಅಧಿಕಾರಿಗಳಿಗೆ ಹಸ್ತಾಂತರಿಸಬೇಕಿತ್ತು. ಆದರೆ ಸುಬ್ರಮಣಿಯಂ ಸ್ವಾಮಿ ಅವರು ನನಗೆ ಬೆದರಿಕೆ ಇದೆ. ಭದ್ರತೆ ದೃಷ್ಟಿಯಿಂದ ನಾನು ಇದೇ ಬಂಗಲೆಯಲ್ಲೇ ವಾಸಿಸುತ್ತೇನೆ ಎಂದು ತಿಳಿಸಿದ್ದರು.

    ಈ ಸಂಬಂಧ ಕೇಂದ್ರದ ಪರವಾಗಿ ಎಎಸ್‍ಜಿ ಸಂಜಯ್ ಜೈನ್ ಹಾಜರಾಗಿ, ಸುಬ್ರಮಣಿಯಂ ಸ್ವಾಮಿಗೆ ಭದ್ರತೆಯನ್ನು ಒದಗಿಸುವುದನ್ನು ಸರ್ಕಾರ ಮುಂದುವರಿಸುತ್ತದೆ. ಆದರೆ ಬಂಗಲೆಯನ್ನು ಮರುಹಂಚಿಕೆ ಮಾಡಲು ಸಾಧ್ಯವಿಲ್ಲ. ಅವರು ದೆಹಲಿಯಲ್ಲಿ ಮನೆಯನ್ನು ಹೊಂದಿದ್ದು, ಅಲ್ಲಿ ಅವರು ಸ್ಥಳಾಂತರಗೊಳ್ಳಬಹುದು. ಅಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಕ್ಷಣಾ ಸಂಸ್ಥೆಗಳು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನೂ ಓದಿ: Paytm, PayU ಕಚೇರಿ ಮೇಲೆ ಇಡಿ ದಾಳಿ

    ಕೇಂದ್ರ ನೀಡಿದ ಉತ್ತರದಿಂದ ದೆಹಲಿ ಹೈಕೋರ್ಟ್ ಬಂಗಲೆಯನ್ನು 6 ವಾರದೊಳಗೆ ಖಾಲಿ ಮಾಡಬೇಕು ಎಂದು ಗಡುವು ನೀಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಬೆಂಕಿ ಹಚ್ಚಿಸಲೆಂದೇ ಬಿಜೆಪಿ ಕೆಲವರನ್ನು ಇಟ್ಟುಕೊಂಡಿದೆ: ಲಕ್ಷ್ಮಣ್ ವಾಗ್ದಾಳಿ

    Live Tv
    [brid partner=56869869 player=32851 video=960834 autoplay=true]