Tag: highcourt

  • ಬಂಗ್ಲೆಗುಡ್ಡೆಯಲ್ಲಿ ಉತ್ಖನನ ಮಾಡುವಂತೆ ರಿಟ್ ಅರ್ಜಿ – ಅರಣ್ಯ ಇಲಾಖೆಯಿಂದಲೂ ಮಾಹಿತಿ ಪಡೆದ ಎಸ್‌ಐಟಿ

    ಬಂಗ್ಲೆಗುಡ್ಡೆಯಲ್ಲಿ ಉತ್ಖನನ ಮಾಡುವಂತೆ ರಿಟ್ ಅರ್ಜಿ – ಅರಣ್ಯ ಇಲಾಖೆಯಿಂದಲೂ ಮಾಹಿತಿ ಪಡೆದ ಎಸ್‌ಐಟಿ

    ಮಂಗಳೂರು: ಧರ್ಮಸ್ಥಳದ ಶವ ಹೂತಿಟ್ಟ (Dharmasthala Mass Burials) ಪ್ರಕರಣದ ತನಿಖೆ ಮುಂದುವರಿದಿದೆ. ಒಂದೆಡೆ ವಿಠಲ್ ಗೌಡ ಹತ್ತಾರು ಶವ ನೋಡಿದ್ದೇನೆ ಎಂದಿದ್ದು, ಇನ್ನೊಂದೆಡೆ ಇಬ್ಬರು ಹೈಕೋರ್ಟ್‌ಗೆ ರಿಟ್ ಅರ್ಜಿ (Writ Petition) ಹಾಕಿ ಬಂಗ್ಲೆಗುಡ್ಡೆಯಲ್ಲಿ (Banglegudde) ಉತ್ಖನನ ಮಾಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಬಂಗ್ಲೆಗುಡ್ಡೆಯ ವಿಚಾರದಲ್ಲಿ ಗೊಂದಲದಲ್ಲಿರುವ ಎಸ್‌ಐಟಿ (SIT) ರಹಸ್ಯ ಭೇದಿಸಲು ಮುಂದಾಗಿದೆ. ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ತನಿಖೆಗೆ ಪ್ಲಾನ್ ಮಾಡಿದೆ.

    ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ತನಿಖೆ ಮುಂದುವರಿದಿದೆ. ಸದ್ಯ ತನಿಖೆ ನಡೆಸುತ್ತಿರುವ ಎಸ್‌ಐಟಿ ಹಲವಾರು ಗೊಂದಲದಲ್ಲಿದೆ. ಒಂದೆಡೆ ತಲೆ ಬುರುಡೆಯ ಮಹಜರು ನಡೆಸಲು ಬಂಗ್ಲೆಗುಡ್ಡೆಗೆ ತೆರಳಿದ ವೇಳೆ ರಾಶಿ ರಾಶಿ ಅಸ್ಥಿಪಂಜರ ನೋಡಿದ್ದೇನೆ ಎಂದು ಸೌಜನ್ಯಳ ಓರ್ವ ಮಾವ ವಿಠಲಗೌಡ ಹೇಳಿದ್ದ. ಇನ್ನೊಂದೆಡೆ ಸೌಜನ್ಯಳ ಇನ್ನೋರ್ವ ಮಾವ ವಿಠಲ ಗೌಡರ ತಮ್ಮ ಪುರಂದರ ಗೌಡ ಹಾಗೂ ಸಂಬಂಧಿ ತುಕರಾಮ ಗೌಡ ಹೈಕೋರ್ಟ್‌ಗೆ ರಿಟ್ ಅರ್ಜಿ ಹಾಕಿ ಬಂಗ್ಲೆಗುಡ್ಡೆಯಲ್ಲಿ ಶವ ಹೂತಿಟ್ಟಿರೋದನ್ನ ನಾವು ತೋರಿಸುತ್ತೇವೆ, ಅದನ್ನ ಉತ್ಖನನ ಮಾಡಲು ಎಸ್‌ಐಟಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಕುರಿತು ಉತ್ತರಿಸಲು ಎಸ್‌ಐಟಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ಇದನ್ನೂ ಓದಿ: ಈ ಸರ್ಕಾರ 47 ಹೊಸ ಜಾತಿಗಳನ್ನು ಸೃಷ್ಟಿ ಮಾಡಿದೆ: ಸುನಿಲ್ ಕುಮಾರ್ ಕಿಡಿ

    ತಲೆ ಬುರುಡೆಯ ಮಹಜರು ನಡೆಸುತ್ತಿದ್ದ ಎಸ್‌ಐಟಿಗೆ ಇದೀಗ ಈ ವಿಚಾರ ಗೊಂದಲವನ್ನ ಸೃಷ್ಟಿಸಿದೆ. ಅರಣ್ಯ ಪ್ರದೇಶದೊಳಗೆ ಮತ್ತೆ ಉತ್ಖನನ ಮಾಡಬೇಕಾದರೆ ಸಾಕಷ್ಟು ಸವಾಲುಗಳು ಎದುರಾಗೋ ಹಿನ್ನಲೆಯಲ್ಲಿ ಸದ್ಯ ಅರಣ್ಯ ಇಲಾಖೆಯಿಂದ ಬಂಗ್ಲೆಗುಡ್ಡೆಯ ಸರ್ವೆ ದಾಖಲೆಗಳನ್ನ ಪಡೆದುಕೊಂಡಿದೆ. ಈ ಹಿಂದೆ ಅರಣ್ಯದ ಅಂಚಿನಲ್ಲಿ ಉತ್ಖನನ ನಡೆದಿರುವುದರಿಂದ ಯಾವುದೇ ಸವಾಲು ಇರಲಿಲ್ಲ. ಇದೀಗ ಅರಣ್ಯದೊಳಗಿನ ಉತ್ಖನನ ಆಗಬೇಕಾಗಿರುವುದರಿಂದ, ಕಾನೂನು ಅಡ್ಡಿಯಾಗುವುದರಿಂದ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಎಸ್‌ಐಟಿ ತೀರ್ಮಾನಿಸಿದೆ. ಅರಣ್ಯದ ಸಮಗ್ರ ವರದಿ ಪಡೆದು ಅನುಮತಿ ಪಡೆಯುವ ಸಾಧ್ಯತೆ ಇದೆ. ಇದನ್ನೂ ಓದಿ: ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ

    ಬಂಗ್ಲೆಗುಡ್ಡೆಯ ಮಹಜರು ಅಥವಾ ಉತ್ಖನನ ಮಾಡೋ ಬಗ್ಗೆ ಎಸ್‌ಐಟಿ ಇನ್ನೂ ಸರಿಯಾದ ನಿರ್ಧಾರ ಮಾಡಿಲ್ಲ. ಬಂಗ್ಲೆಗುಡ್ಡೆಯಲ್ಲಿ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡವರ ಅಸ್ಥಿಪಂಜರಗಳು ಇರುವ ಸಾಧ್ಯತೆ ಇದ್ದು, ಅದನ್ನ ಸ್ಥಳೀಯ ಪೊಲೀಸರು ಮಹಜರು ಮಾಡಬೇಕ, ಎಸ್‌ಐಟಿ ಮಾಡಬೇಕಾ ಅನ್ನೋ ಗೊಂದಲದಲ್ಲಿದ್ದಾರೆ. ಹೀಗಾಗಿ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಮಾಡಲು ಎಸ್‌ಐಟಿ ನಿರ್ಧರಿಸಿದೆ. ಇದನ್ನೂ ಓದಿ: ಸಚಿವ ಜಮೀರ್ ಅಕ್ರಮ ಆಸ್ತಿ ಗಳಿಕೆ ಕೇಸ್ – ದಿನೇಶ್ ಗುಂಡೂರಾವ್‌ಗೆ ಲೋಕಾಯುಕ್ತ ನೋಟಿಸ್

  • ಸೆ.22ಕ್ಕೆ ಹೈಕೋರ್ಟ್‌ನಲ್ಲಿ ಬೈಕ್ ಟ್ಯಾಕ್ಸಿ ಭವಿಷ್ಯ – ಚಾಲಕರಿಗೆ ಸಿಹಿ ಸುದ್ದಿ ಸಿಗುತ್ತಾ?

    ಸೆ.22ಕ್ಕೆ ಹೈಕೋರ್ಟ್‌ನಲ್ಲಿ ಬೈಕ್ ಟ್ಯಾಕ್ಸಿ ಭವಿಷ್ಯ – ಚಾಲಕರಿಗೆ ಸಿಹಿ ಸುದ್ದಿ ಸಿಗುತ್ತಾ?

    ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಇಲಾಖೆ ಹಾಗೂ ಬೈಕ್ ಟ್ಯಾಕ್ಸಿ (Bike Taxi) ಚಾಲಕರ ಜಟಾಪಟಿ ಮುಂದುವರೆದಿದ್ದು, ಇದೇ 22ಕ್ಕೆ ಬೈಕ್ ಟ್ಯಾಕ್ಸಿ ಭವಿಷ್ಯ ನಿರ್ಧಾರವಾಗಲಿದೆ.

    ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಕಾರ್ಯಾಚರಣೆ ಬಗ್ಗೆ ತನ್ನ ನಿಲುವು ತಿಳಿಸಲು ಹೈಕೋರ್ಟ್ ಸರ್ಕಾರಕ್ಕೆ (Karnataka government) ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಬೈಕ್ ಟ್ಯಾಕ್ಸಿ ಸಾಧಕ-ಭಾದಕಗಳ ಬಗ್ಗೆ ವರದಿ ಸಲ್ಲಿಸಲು ಸರ್ಕಾರ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದೆ. ಈ ಕಮಿಟಿಯನ್ನು ಸರ್ಕಾರದ ಸಾರಿಗೆ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಒಟ್ಟು 11 ಜನ ಈ ಕಮಿಟಿಯ ಸದಸ್ಯರಿದ್ದಾರೆ.

    ಉನ್ನತ ಮಟ್ಟದ ಕಮಿಟಿಯಲ್ಲಿ ಯಾರಿದ್ದಾರೆ?
    * ಬೆಂಗಳೂರು ನಗರ ಭೂ ಸಾರಿಗೆ ಅಭಿವೃದ್ಧಿ ಇಲಾಖೆ ಆಯುಕ್ತರು
    * ಕಾರ್ಮಿಕ ಇಲಾಖೆ ಆಯುಕ್ತರು
    * ಸಾರಿಗೆ ಹಾಗೂ ರಸ್ತೆ ಸುರಕ್ಷತೆ ಇಲಾಖೆಯ ಆಯುಕ್ತರು
    * ಬಿಎಂಟಿಸಿ ಎಂಡಿ
    * ಬೆಂಗಳೂರು ಜಂಟಿ ಸಂಚಾರ ಪೋಲಿಸ್ ಆಯುಕ್ತರು
    * ಬೆಂಗಳೂರು ನಗರ ಜಂಟಿ ಪೋಲಿಸ್ ಆಯುಕ್ತರು
    * ಬಿಎಂಆರ್‌ಸಿಎಲ್‌ನ ಹಿರಿಯ ಪ್ರತಿನಿಧಿ
    * ಬೃಹತ್ ಬೆಂಗಳೂರು ಪ್ರಾಧಿಕಾರದ ಹಿರಿಯ ಪ್ರತಿನಿಧಿ
    * ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿ
    * ಸಾರಿಗೆ ಇಲಾಖೆಯ ಆಯುಕ್ತರು ಹಾಗೂ ಕಾರ್ಯದರ್ಶಿಗಳು

    ಈ ಕಮಿಟಿಯಲ್ಲಿ ಬೆಂಗಳೂರು ನಗರ ಭೂಸಾರಿಗೆ ಅಭಿವೃದ್ಧಿ ಇಲಾಖೆ (ಡಲ್ಟ್)ನ ಆಯುಕ್ತರು, ಕಾರ್ಮಿಕ ಇಲಾಖೆ ಆಯುಕ್ತರು, ಸಾರಿಗೆ ಹಾಗೂ ರಸ್ತೆ ಸುರಕ್ಷತೆ ಇಲಾಖೆಯ ಆಯುಕ್ತರು, ಬಿಎಂಟಿಸಿ ಎಂಡಿ, ಬೆಂಗಳೂರು ಜಂಟಿ ಸಂಚಾರ ಪೋಲಿಸ್ ಆಯುಕ್ತರು, ಬೆಂಗಳೂರು ನಗರ ಜಂಟಿ ಪೋಲಿಸ್ ಆಯುಕ್ತರು, ಬಿಎಂಆರ್‌ಸಿಎಲ್‌ನ ಹಿರಿಯ ಪ್ರತಿನಿಧಿ, ಬೃಹತ್ ಬೆಂಗಳೂರು ಪ್ರಾಧಿಕಾರದ ಹಿರಿಯ ಪ್ರತಿನಿಧಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿ, ಸಾರಿಗೆ ಇಲಾಖೆಯ ಆಯುಕ್ತರು ಹಾಗೂ ಕಾರ್ಯದರ್ಶಿಗಳು ಸೇರಿದಂತೆ ಒಟ್ಟು 11 ಜನರ ಕಮಿಟಿ ರಚಿಸಲಾಗಿದೆ.

    ಈ ಕಮಿಟಿಯು ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯ ಸಾಧಕ-ಭಾದಕಗಳ ಕುರಿತು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಈ ವರದಿಯ ಆಧಾರದ ಮೇಲೆ ಸಾರಿಗೆ ಇಲಾಖೆ ಅಥವಾ ಸರ್ಕಾರ ಸೆಪ್ಟೆಂಬರ್ 22ರಂದು ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಬಗ್ಗೆ ನಿಯಮ ರೂಪಿಸಿ ತನ್ನ ನಿಲುವು ಪ್ರಕಟಿಸಲಿದೆ.

    ಒಂದು ಅಂದಾಜಿನಂತೆ ಬೆಂಗಳೂರಲ್ಲಿ ಸುಮಾರು 1.20 ಲಕ್ಷ ಖಾಸಗಿ ಬೈಕ್ ಸವಾರರು ಬೈಕ್ ಟ್ಯಾಕ್ಸಿ ಮಾಡುತ್ತಿದ್ದಾರೆ.

  • ಅಹಂಕಾರಿ ಕಮಲ್‌ಗೆ  ಬಿಗ್‌ ಶಾಕ್‌ –  ಕರ್ನಾಟಕದಲ್ಲಿ ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆ

    ಅಹಂಕಾರಿ ಕಮಲ್‌ಗೆ ಬಿಗ್‌ ಶಾಕ್‌ – ಕರ್ನಾಟಕದಲ್ಲಿ ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆ

    ಬೆಂಗಳೂರು: ಕರ್ನಾಟಕದಲ್ಲಿ ಕಮಲ್‌ ಹಾಸನ್‌ (Kamal Haasan) ಅಭಿನಯದ ಥಗ್‌ ಲೈಫ್‌ (Thug Life) ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆಯಾಗಿದೆ.

    ಕರ್ನಾಟಕದಲ್ಲಿ ‘ಥಗ್‌ಲೈಫ್’ ಚಿತ್ರ ರಿಲೀಸ್ ಮಾಡುವ ಕುರಿತು ನಟ ಕಮಲ್ ಹಾಸನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ (High Court) ಜೂನ್ 10ಕ್ಕೆ ಮುಂದೂಡಿದೆ.

    ನ್ಯಾ.ನಾಗಪ್ರಸನ್ನ ಅವರಿದ್ದ ಪೀಠ ಈ ಕುರಿತು ವಿಚಾರಣೆ ನಡೆಸಿ ಜೂನ್ 10ರ ಒಳಗೆ ಕಮಲ್ ಹಾಸನ್ ಫಿಲಂ ಚೇಂಬರ್ ಜೊತೆಯಲ್ಲಿ ಮಾತುಕತೆ ಮಾಡಿಕೊಂಡು ವಿವಾದ ಇತ್ಯರ್ಥ ಮಾಡಿಕೊಳ್ಳುವಂತೆ ಸೂಚಿಸಿದೆ. ಅಲ್ಲಿಯವರೆಗೂ ಕರ್ನಾಟಕದಲ್ಲಿ ಥಗ್‌ಲೈಫ್ ರಿಲೀಸ್ ಮಾಡದಂತೆ ಸೂಚಿಸಿದೆ.

    ವಿಚಾರಣೆ ವೇಳೆ ಹೈಕೋರ್ಟ್​ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಕ್ಷಮೆ ಕೇಳಿದ್ರೆ ಮಾತ್ರ ಅರ್ಜಿ ಪರಿಗಣಿಸುತ್ತೇವೆ. ಯಾವುದೋ ಭಾಷೆಯಿಂದ ಇನ್ನೊಂದು ಭಾಷೆ ಹುಟ್ಟಿದೆ ಅಂದ್ರೆ ಹೇಗೆ? ಕನ್ನಡ ಭಾಷೆ ತಮಿಳಿಂದ ಹುಟ್ಟಿದೆ ಅನ್ನೋಕೆ ಅವರೇನು ಇತಿಹಾಸಕಾರರಾ? ಈ ಹಿಂದೆ ಸಿ.ರಾಜಗೋಪಾಲಾಚಾರಿ ಕೂಡ ಕ್ಷಮೆಯನ್ನು ಕೇಳಿದ್ದರು. ಇವತ್ತಿನ ಪರಿಸ್ಥಿತಿ ನಿರ್ಮಾಣಕ್ಕೆ ನೀವೇ ಕಾರಣ, ಈ ರೀತಿ ಹೇಳಿಕೆ ನೀಡಬಾರದು. ಕಮಲ್ ಹಾಸನ್ ಸಾಮಾನ್ಯ ವ್ಯಕ್ತಿ ಅಲ್ಲ, ಪಬ್ಲಿಕ್ ಫಿಗರ್​. ಅವರು ಮೊದಲು ಕ್ಷಮೆ ಕೇಳಲಿ, ಆಮೇಲೆ ಅರ್ಜಿ ಪರಿಗಣಿಸ್ತೇವೆ ಎಂದು ಹೇಳಿದರು. ಇದಕ್ಕೆ ಕಮಲ್ ಹಾಸನ್ ಪರ ವಕೀಲರು ಪ್ರತಿಕ್ರಿಯೆ ನೀಡಲು ಮಧ್ಯಾಹ್ನ 2.30ರವರೆಗೆ ಸಮಯಾವಕಾಶ ಕೋರಿದ್ದರು.

  • ಪ್ರಚೋದನಕಾರಿ ಭಾಷಣ ಕೇಸ್‌ – ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಬಿಗ್ ರಿಲೀಫ್

    ಪ್ರಚೋದನಕಾರಿ ಭಾಷಣ ಕೇಸ್‌ – ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಬಿಗ್ ರಿಲೀಫ್

    ಬೆಂಗಳೂರು: ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ಗೆ (Kalladka Prabhakar Bhat) ಹೈಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ.

    ಬಜ್ಪೆಯಲ್ಲಿ ಹತ್ಯೆಯಾದ ಸುಹಾಸ್ ಶೆಟ್ಟಿ (Suhas Shetty) ಶೃದ್ದಾಂಜಲಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ 353(2) ಅಡಿಯಲ್ಲಿ ಕೇಸ್‌ ದಾಖಲು ಮಾಡಿ ವಿಚಾರಣೆಗೆ ಮುಂದಾಗಿದ್ರು. ಇದನ್ನೂ ಓದಿ: ಟೆಸ್ಲಾಗೆ 2 ಶೋ ರೂಂ ತೆರೆಯುವ ಆಸಕ್ತಿ ಇದೆ, ಆದ್ರೆ ಭಾರತದಲ್ಲೇ ಕಾರು ಉತ್ಪಾದಿಸುವ ಆಸಕ್ತಿ ಇಲ್ಲ: ಹೆಚ್‌ಡಿಕೆ

    ಹೈಕೋರ್ಟ್‌ನಲ್ಲಿ ತುರ್ತು ಅರ್ಜಿ ವಿಚಾರಣೆಗೆ ಮನವಿ ಮಾಡಿದ್ರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣಕುಮಾರ್ ಅವರಿದ್ದ ಪೀಠವು ಬಲವಂತದ ಕ್ರಮಕೈಗೊಳ್ಳದಂತೆ ಸೂಚನೆ ನೀಡಿದೆ. ಇದನ್ನೂ ಓದಿ: ʻಥಗ್‌ ಲೈಫ್‌ʼ ಸಿನಿಮಾಗೆ ಬ್ಯಾನ್‌ ಬಿಸಿ – ಹೈಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್

    ಮೇ 12 ರಂದು ಬಂಟ್ವಾಳದ ಕಾವಳಪಡೂರು ಮದ್ವ ಪ್ಯಾಲೇಸ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಸಮಾಜದ ಸ್ವಾಸ್ತ್ಯ ಕೆಡುವಂತೆ, ಮತೀಯ ಗುಂಪುಗಳ ನಡುವೆ ವೈಮನಸ್ಸುಂಟು ಮಾಡುವಂತೆ, ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದನ್ನೂ ಓದಿ: ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದರೆ ಸುಮ್ಮನಿರಲ್ಲ – ವಿಜಯೇಂದ್ರ ಸಿಡಿಮಿಡಿ

  • ರಾಜ್ಯ ಸರ್ಕಾರಕ್ಕೆ ಮುಖಭಂಗ, ಓಲೈಕೆ ರಾಜಕಾರಣ ಬಿಟ್ಟು ಜನರ ಹಿತ ಕಾಪಾಡಲಿ: ಅರವಿಂದ್ ಬೆಲ್ಲದ್

    ರಾಜ್ಯ ಸರ್ಕಾರಕ್ಕೆ ಮುಖಭಂಗ, ಓಲೈಕೆ ರಾಜಕಾರಣ ಬಿಟ್ಟು ಜನರ ಹಿತ ಕಾಪಾಡಲಿ: ಅರವಿಂದ್ ಬೆಲ್ಲದ್

    ಬೆಂಗಳೂರು: ಹುಬ್ಬಳ್ಳಿ ಗಲಭೆ (Hubballi Communal Riots) ಪ್ರಕರಣ ಸೇರಿ 43 ಪ್ರಕರಣಗಳನ್ನು ರದ್ದುಗೊಳಿಸಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ (Highcourt) ಛೀಮಾರಿ ಹಾಕಿದೆ. ಇದರಿಂದ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ (Arvind Bellad) ಟೀಕಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ನಡೆಸಿದ ದಾಳಿ ಸೇರಿ 43 ಪ್ರಕರಣಗಳನ್ನು ರದ್ದುಗೊಳಿಸುವ ಕುರಿತು ಕೆಲ ತಿಂಗಳ ಹಿಂದೆ ಸರ್ಕಾರ ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರದ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪ್ರಕರಣ ವಾಪಸ್ ಪಡೆದಿದ್ದನ್ನು ರದ್ದು ಮಾಡುವಂತೆ ಆದೇಶಿಸಿದೆ. ಇದನ್ನೂ ಓದಿ: ಡಿಕೆಶಿ ಹೇಳಿಕೆಗೆ ಭಾರೀ ವಿರೋಧ; ಗ್ಯಾರಂಟಿಯಿಂದ ಮಂಗಳೂರಿಗರು ಹೊಟ್ಟೆಬಟ್ಟೆ ಕಟ್ಟಿಕೊಳ್ತಿಲ್ಲ: ಸುನಿಲ್ ಕುಮಾರ್

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಬೆಲ್ಲದ್, ಅತ್ಯಂತ ಹೀನ ಕೃತ್ಯಗಳಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡುವ ಬದಲು ಅವರ ರಕ್ಷಣೆ ಸರ್ಕಾರ ನಿಂತಿರುವುದು ನಾಚಿಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಮಲ್‌ ಹಾಸನ್‌ ಪರ ಬ್ಯಾಟ್‌ ಬೀಸಿದ ರಮ್ಯಾ – ಸಿನಿಮಾ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅಲ್ಲವೇ? ಎಂದ ನಟಿ

    ಇಂತಹ ಪ್ರಕರಣ ವಾಪಸ್ ಪಡೆಯುವುದೇ ಸರಿಯಲ್ಲ. ಆದರೂ ರಾಜಕೀಯ ಒತ್ತಡ ಹಾಗೂ ಮುಸ್ಲಿಂ ಓಲೈಕೆ ರಾಜಕಾರಣಕ್ಕೆ ಕೇಸ್ ವಾಪಸ್ ಪಡೆದಿದೆ. ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಬೇಕೆ ಹೊರತು, ಮುಸ್ಲಿಂ ಓಲೈಕೆ ರಾಜಕಾರಣ ಮಾಡಬಾರದು. ಇನ್ನಾದರೂ ಸರ್ಕಾರ ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕ್ರಮಹಿಸಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಡಿಸಿ ಬಗ್ಗೆ ವಿವಾದಾತ್ಮಕ ಹೇಳಿಕೆ | ಕರ್ನಲ್ ಸೋಫಿಯಾ ವಿರುದ್ಧದ ಹೇಳಿಕೆಗೆ ಆದೇಶ ಗೊತ್ತಾ? – ರವಿಕುಮಾರ್‌ಗೆ ಹೈಕೋರ್ಟ್ ಚಾಟಿ

  • ಗೋಲ್ಡ್ ಸ್ಮಗ್ಲಿಂಗ್ ಕೇಸ್ – ರನ್ಯಾರಾವ್ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

    ಗೋಲ್ಡ್ ಸ್ಮಗ್ಲಿಂಗ್ ಕೇಸ್ – ರನ್ಯಾರಾವ್ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

    ಬೆಂಗಳೂರು: ನಟಿ ರನ್ಯಾರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗೆಯಾಗುತ್ತಿದ್ದು, ಇದೀಗ ಹೈಕೋರ್ಟ್ ಏಕಸದಸ್ಯ ಪೀಠ ಆರೋಪಿ ರನ್ಯಾರಾವ್ ಹಾಗೂ ಎ2 ಆರೋಪಿ ತರುಣ್ ರಾಜ್ ಜಾಮೀನು ಅರ್ಜಿ ವಜಾಗೊಳಿಸಿದೆ.

    ಇನ್ನು ಮುಂದಿನ ಒಂದು ವರ್ಷಗಳ ಕಾಲ ರನ್ಯಾರಾವ್ ಖಾಯಂ ವಿಳಾಸ ಪರಪ್ಪನ ಅಗ್ರಹಾರವಾಗಿಯೇ ಇರಲಿದೆ. ನ್ಯಾಯಮೂರ್ತಿ ವಿಶ್ವಜಿತ್ ಪೀಠ ಜಾಮೀನು ಅರ್ಜಿ ವಿಚಾರಣೆ ಮಾಡಿದ್ದರು. ಆರೋಪಿ ರನ್ಯಾರಾವ್ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಾಡಿದ್ದರು. ಇದನ್ನೂ ಓದಿ: ಕಲಬುರಗಿ| ಎಸ್‌ಬಿಐ ಎಟಿಎಂ ದರೋಡೆಕೋರರ ಕಾಲಿಗೆ ಪೊಲೀಸರ ಗುಂಡೇಟು

    ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ (Gold Smuggling Case) ರನ್ಯಾರಾವ್ ಪರಪ್ಪನ ಅಗ್ರಹಾರಕ್ಕೆ ಹೋಗಿ 50 ದಿನಗಳು ಆಗಿದೆ. ಮಾ. 3ರಂದು ಡಿಆರ್‌ಐ ಅಧಿಕಾರಿಗಳು ರನ್ಯಾರಾವ್‌ರನ್ನ ಬಂಧನ ಮಾಡಿ ಜೈಲಿಗೆ ಕಳಿಸಿದ್ದರು. ಇಲ್ಲಿಯವರೆಗೆ 2 ಬಾರಿ ರನ್ಯಾರಾವ್ ಜಾಮೀನು ಅರ್ಜಿ ವಜಾ ಆಗಿದೆ.

  • 10 ತಿಂಗಳ ಬಳಿಕ ಹಾಸನಕ್ಕೆ ಎಂಟ್ರಿ – ಭವಾನಿ ರೇವಣ್ಣಗೆ ಹೂಮಳೆ, ಆರತಿ ಬೆಳಗಿ ಸ್ವಾಗತ

    10 ತಿಂಗಳ ಬಳಿಕ ಹಾಸನಕ್ಕೆ ಎಂಟ್ರಿ – ಭವಾನಿ ರೇವಣ್ಣಗೆ ಹೂಮಳೆ, ಆರತಿ ಬೆಳಗಿ ಸ್ವಾಗತ

    ಹಾಸನ: ಕೆ.ಆರ್.ನಗರ (K R Nagar) ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ರಿಲೀಫ್‌ ಸಿಕ್ಕ ಬೆನ್ನಲ್ಲೇ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ (Bhavani Revanna) 10 ತಿಂಗಳ ಬಳಿಕ ಹಾಸನ ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದಾರೆ.

    ಹಾಸನಕ್ಕೆ (Hassan) ಬರುತ್ತಿದ್ದಂತೆ ಜಿಲ್ಲೆಯ ಗಡಿಭಾಗ ಹಿರಿಸಾವೆ, ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರದಲ್ಲಿ ಜೆಡಿಎಸ್‌ ಕಾರ್ಯಕರ್ತರು ಭವಾನಿ ರೇವಣ್ಣ ಅವರನ್ನು ಸ್ವಾಗತಿಸಿದ್ದಾರೆ. ಹೂಮಳೆ ಸುರಿಸಿ, ಆರತಿ ಬೆಳಗಿ ಬರಮಾಡಿಕೊಂಡಿದ್ದಾರೆ. ಪಟಾಕಿ ಸಿಡಿಸಿ, ಜೈಕಾರ ಕೂಗಿ ಸಂಭ್ರಮಿಸಿದ್ದಾರೆ.

    ಮೂರು ದಿನಗಳ ಹಿಂದೆಯಷ್ಟೇ ಮೈಸೂರು ಮತ್ತು ಹಾಸನ ಜಿಲ್ಲೆ ಪ್ರವೇಸಿಸಲು ಭವಾನಿ ರೇವಣ್ಣಗೆ ಹೈಕೋರ್ಟ್‌ ರಿಲೀಫ್ ನೀಡಿತ್ತು.  ಇದನ್ನೂ ಓದಿ: ಭವಾನಿ ರೇವಣ್ಣಗೆ ʻಹೈʼ ರಿಲೀಫ್ – ಮೈಸೂರು, ಹಾಸನ ಪ್ರವೇಶಿಸಲು ಕೋರ್ಟ್‌ ಅಸ್ತು

    ಈ ಹಿಂದೆ ಭವಾನಿ ರೇವಣ್ಣ ಅವರು ಮೈಸೂರು (Mysuru) ಮತ್ತು ಹಾಸನ (Hassan) ಜಿಲ್ಲೆ ಪ್ರವೇಶಿಸದಂತೆ ಷರತ್ತು ವಿಧಿಸಿ ಹೈಕೋರ್ಟ್(HighCourt) ನಿರೀಕ್ಷಣಾ ಜಾಮೀನು ನೀಡಿತ್ತು. ಇದೀಗ ಷರತ್ತನ್ನು ಸಡಿಲಿಸಿದ್ದು, ಹಾಸನ ಮತ್ತು ಮೈಸೂರು ಜಿಲ್ಲೆಗೆ ಪ್ರವೇಶಿಸಲು ಅನುಮತಿ ನೀಡಿದೆ. ಆದರೆ, ಸಂತ್ರಸ್ತೆ ಮತ್ತು ಪ್ರಕರಣದ ಸಾಕ್ಷಿಗಳ ಮನೆಯ 500 ಮೀ. ಸುತ್ತಳತೆಯಲ್ಲಿ ಪ್ರವೇಶಿಸುವಂತಿಲ್ಲ ಎಂದು ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ಪೀಠ ಹೊಸ ಷರತ್ತು ವಿಧಿಸಿದೆ. ಇದನ್ನೂ ಓದಿ: ಅತ್ಯಾಚಾರ ಆರೋಪಿಗೆ ಈಗ ಬೇಕಿದೆ ಹನುಮನ ಶ್ರೀರಕ್ಷೆ – ನಿತ್ಯ ಹನುಮಾನ್ ಚಾಲಿಸ ಪಠಿಸುತ್ತಿರೋ ಪ್ರಜ್ವಲ್ ರೇವಣ್ಣ

    ಏನು ಪ್ರಕರಣ?
    ತನ್ನ ತಾಯಿ ಕಣ್ಮರೆಯಾಗಿದ್ದಾರೆಂದು ಸಂತ್ರಸ್ತೆ ಪುತ್ರ ಕೆ.ಆರ್.ನಗರ ಠಾಣೆಯಲ್ಲಿ ದೂರು ನೀಡಿದ್ದರು. ಮಾಜಿ ಸಚಿವ ಹೆಚ್‌.ಡಿ.ರೇವಣ್ಣ, ಭವಾನಿ ರೇವಣ್ಣ ಮತ್ತು ಭವಾನಿ ರೇವಣ್ಣ ಸಂಬಂಧಿ ಬಾಬು ವಿರುದ್ಧ ದೂರು ದಾಖಲಾಗಿತ್ತು. ದೂರಿನನ್ವಯ ತನಿಖೆ ನಡೆಸಿದ್ದ ಪೊಲೀಸರು, ಹೆಚ್.ಡಿ.ರೇವಣ್ಣ (H D Revanna) ಅವರಿಗೆ ಸಂಬಂಧಿಸಿದ್ದೆಂದು ಹೇಳಲಾದ ತೋಟದ ಮನೆಯೊಂದರಿಂದ ಆಕೆಯನ್ನು ರಕ್ಷಿಸಿದ್ದರು. ಅಪಹರಣಕ್ಕೆ ಭವಾನಿ ರೇವಣ್ಣ ಅವರ ಕಾರು ಬಳಕೆಯಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದ್ದರಿಂದ ಭವಾನಿ ರೇವಣ್ಣ ಹಾಗೂ ಅವರ ಕಾರು ಚಾಲಕ ಅಜಿತ್ ವಿರುದ್ಧವೂ ದೂರು ದಾಖಲಾಗಿತ್ತು.

    ದೂರು ದಾಖಲಾಗುತ್ತಿದ್ದಂತೆ ನಿರೀಕ್ಷಣಾ ಜಾಮೀನಿಗಾಗಿ ಭವಾನಿ ರೇವಣ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿತ್ತು. ಆದ್ರೆ ಭವಾನಿ ರೇವಣ್ಣ ಅವರು ಮೈಸೂರು ಮತ್ತು ಹಾಸನ ಜಿಲ್ಲೆಗೆ ಪ್ರವೇಶಿಸದಂತೆ ಷರತ್ತು ವಿಧಿಸಿತ್ತು.  ಇದನ್ನೂ ಓದಿ: ಅತ್ಯಾಚಾರ ಪ್ರಕರಣದಿಂದ ಕೈಬಿಡುವಂತೆ ಸಲ್ಲಿಸಿದ್ದ ಅರ್ಜಿ ವಜಾ – ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ ಪ್ರಜ್ವಲ್ ರೇವಣ್ಣ

  • ಭವಾನಿ ರೇವಣ್ಣಗೆ ʻಹೈʼ ರಿಲೀಫ್ – ಮೈಸೂರು, ಹಾಸನ ಪ್ರವೇಶಿಸಲು ಕೋರ್ಟ್‌ ಅಸ್ತು

    ಭವಾನಿ ರೇವಣ್ಣಗೆ ʻಹೈʼ ರಿಲೀಫ್ – ಮೈಸೂರು, ಹಾಸನ ಪ್ರವೇಶಿಸಲು ಕೋರ್ಟ್‌ ಅಸ್ತು

    – ಸಂತ್ರಸ್ತೆ ಮತ್ತು ಪ್ರಕರಣದ ಸಾಕ್ಷಿಗಳ ಮನೆಯ 500 ಮೀ. ಜಾಗ ಪ್ರವೇಶಿಸದಂತೆ ಷರತ್ತು

    ಬೆಂಗಳೂರು: ಕೆ.ಆರ್.ನಗರ(K R Nagar) ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಪತ್ನಿ ಭವಾನಿ ರೇವಣ್ಣ(Bhavani Revanna) ಅವರಿಗೆ ಹೈಕೋರ್ಟ್‌ನಿಂದ ರಿಲೀಫ್ ಸಿಕ್ಕಿದ್ದು, ಮೈಸೂರು ಮತ್ತು ಹಾಸನ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡಿದೆ.

    ಭವಾನಿ ರೇವಣ್ಣ ಅವರು ಮೈಸೂರು(Mysuru) ಮತ್ತು ಹಾಸನ(Hassan) ಜಿಲ್ಲೆ ಪ್ರವೇಶಿಸದಂತೆ ಷರತ್ತು ವಿಧಿಸಿ ಹೈಕೋರ್ಟ್(HighCourt) ಈ ಹಿಂದೆ ನಿರೀಕ್ಷಣಾ ಜಾಮೀನು ನೀಡಿತ್ತು. ಇದೀಗ ಷರತ್ತನ್ನು ಸಡಿಲಿಸಿದ್ದು, ಹಾಸನ ಮತ್ತು ಮೈಸೂರು ಜಿಲ್ಲೆಗೆ ಪ್ರವೇಶಿಸಲು ಅನುಮತಿ ನೀಡಿದೆ. ಆದರೆ, ಸಂತ್ರಸ್ತೆ ಮತ್ತು ಪ್ರಕರಣದ ಸಾಕ್ಷಿಗಳ ಮನೆಯ 500 ಮೀ. ಸುತ್ತಳತೆಯಲ್ಲಿ ಪ್ರವೇಶಿಸುವಂತಿಲ್ಲ ಎಂದು ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ಪೀಠ ಹೊಸ ಷರತ್ತು ವಿಧಿಸಿದೆ. ಇದನ್ನೂ ಓದಿ: ಬೆಳಗಾವಿ, ಕಲಬುರಗಿಯಲ್ಲಿ ತಾಪಮಾನ ಹೆಚ್ಚಳ; ನರೇಗಾ ಕಾರ್ಮಿಕರಿಗೆ 30% ಕೆಲಸದ ಪ್ರಮಾಣ ಕಡಿತ: ಪ್ರಿಯಾಂಕ್ ಖರ್ಗೆ

    ಏನಿದು ಪ್ರಕರಣ?
    ತನ್ನ ತಾಯಿ ಕಣ್ಮರೆಯಾಗಿದ್ದಾರೆಂದು ಸಂತ್ರಸ್ತೆ ಪುತ್ರ ಕೆ.ಆರ್.ನಗರ ಠಾಣೆಯಲ್ಲಿ ದೂರು ನೀಡಿದ್ದರು. ಮಾಜಿ ಸಚಿವ ಹೆಚ್‌.ಡಿ.ರೇವಣ್ಣ, ಭವಾನಿ ರೇವಣ್ಣ ಮತ್ತು ಭವಾನಿ ರೇವಣ್ಣ ಸಂಬಂಧಿ ಬಾಬು ವಿರುದ್ಧ ದೂರು ದಾಖಲಾಗಿತ್ತು. ಇದನ್ನೂ ಓದಿ: ಹುಟ್ಟುಹಬ್ಬ ಆಚರಿಸಿಕೊಳ್ಳಲು ವಿದೇಶಕ್ಕೆ ಹಾರಿದ ನ್ಯಾಷನಲ್‌ ಕ್ರಶ್‌ – ಈ ನಟನೊಂದಿಗೆ ರಶ್ಮಿಕಾ ಸೆಲೆಬ್ರೇಷನ್‌!

    ದೂರಿನನ್ವಯ ತನಿಖೆ ನಡೆಸಿದ್ದ ಪೊಲೀಸರು, ಹೆಚ್.ಡಿ.ರೇವಣ್ಣ(H D Revanna) ಅವರಿಗೆ ಸಂಬಂಧಿಸಿದ್ದೆಂದು ಹೇಳಲಾದ ತೋಟದ ಮನೆಯೊಂದರಿಂದ ಆಕೆಯನ್ನು ರಕ್ಷಿಸಿದ್ದರು. ಅಪಹರಣಕ್ಕೆ ಭವಾನಿ ರೇವಣ್ಣ ಅವರ ಕಾರು ಬಳಕೆಯಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದ್ದರಿಂದ ಭವಾನಿ ರೇವಣ್ಣ ಹಾಗೂ ಅವರ ಕಾರು ಚಾಲಕ ಅಜಿತ್ ವಿರುದ್ಧವೂ ದೂರು ದಾಖಲಾಗಿತ್ತು. ಇದನ್ನೂ ಓದಿ: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ – ನ್ಯಾಯಾಂಗ ತನಿಖೆಗೆ ಹೈಕೋರ್ಟ್‌ ಆದೇಶ

    ದೂರು ದಾಖಲಾಗುತ್ತಿದ್ದಂತೆ ನಿರೀಕ್ಷಣಾ ಜಾಮೀನಿಗಾಗಿ ಭವಾನಿ ರೇವಣ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿತ್ತು. ಆದ್ರೆ ಭವಾನಿ ರೇವಣ್ಣ ಅವರು ಮೈಸೂರು ಮತ್ತು ಹಾಸನ ಜಿಲ್ಲೆಗೆ ಪ್ರವೇಶಿಸದಂತೆ ಷರತ್ತು ವಿಧಿಸಿತ್ತು.

  • ಸಿದ್ದಾಪರಾದ ಸಾಬೀತಿಗೆ ಇನ್ನೊಂದೇ ಹೆಜ್ಜೆ ಬಾಕಿ: ಹೆಚ್‌ಡಿಕೆ

    ಸಿದ್ದಾಪರಾದ ಸಾಬೀತಿಗೆ ಇನ್ನೊಂದೇ ಹೆಜ್ಜೆ ಬಾಕಿ: ಹೆಚ್‌ಡಿಕೆ

    – ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು: ಸಿದ್ದರಾಮಯ್ಯ ಕಾಲೆಳೆದ ಕೇಂದ್ರ ಸಚಿವ

    ಬೆಂಗಳೂರು: ಸಿಬಿಐ (CBI) ರಾಜ್ಯ ಪ್ರವೇಶಕ್ಕೆ ರಾಜ್ಯ ಸರ್ಕಾರದಿಂದ ನಿರ್ಬಂಧ ಮಾಡಿರೋ ವಿಚಾರಕ್ಕೆ ಸರ್ಕಾರದ ನಡೆಗೆ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?
    ಶ್ರೀಮಾನ್ ಸಿದ್ದರಾಮಯ್ಯನವರೇ ನಿಮ್ಮ ಸಿದ್ವಿಲಾಸಕ್ಕೆ ಉಘೇಉಘೇ ಎನ್ನಲೇಬೇಕು. ಅಂದು ಹಗರಣಗಳಿಂದ ಪಾರಾಗಲು ಲೋಕಾಯುಕ್ತಕ್ಕೇ ಸಮಾಧಿ ಕಟ್ಟಿ ಎಸಿಬಿ ರಚನೆ ಮಾಡಿಕೊಂಡಿರಿ. ಇಂದು ಮುಡಾ ಹಗರಣದಿಂದ (MUDA Scam) ಬಚಾವಾಗಲು ನಿಮಗೀಗ ಅದೇ ಲೋಕಾಯುಕ್ತವೇ ಗತಿ. Karma hit back ಎಂದರೇ ಇದೇ ಅಲ್ಲವೇ ಸಿದ್ದರಾಮಯ್ಯನವರೇ? ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಧಾರ್ಮಿಕ ಮತಾಂತರವು ರಾಷ್ಟ್ರೀಯ ಮೌಲ್ಯ, ಸಾಂವಿಧಾನಿಕ ತತ್ವಗಳಿಗೆ ವಿರುದ್ಧ: ಉಪರಾಷ್ಟ್ರಪತಿ

    ನಿಮ್ಮ ಗ್ರಹಚಾರಕ್ಕೆ ಎಸಿಬಿಯನ್ನೂ ಹೈಕೋರ್ಟ್ ಬರ್ಖಾಸ್ತು ಮಾಡಿಬಿಟ್ಟಿತು. ಈಗ ಲೋಕಾಯುಕ್ತವನ್ನೇ ಗುರಾಣಿ ಮಾಡಿಕೊಂಡು ಸಿಬಿಐ ರಾಜ್ಯ ಪ್ರವೇಶಕ್ಕೆ ಸಂಪುಟದಿಂದ ಬಾಗಿಲು ಬಂದ್ ಮಾಡಿಸಿದ್ದೀರಿ. ಅಲ್ಲಿಗೆ ಆರೋಪಿ ಅಪರಾಧಿಯಾದ ಎಂದೇ ಲೆಕ್ಕ. ಸಿದ್ದಾಪರಾದ ಸಾಬೀತಿಗೆ ಇನ್ನೊಂದೇ ಹೆಜ್ಜೆ ಬಾಕಿ. ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು. ನಿಮಗೂ ಭಯವಿದೆ. ಅದೇ ಈ ನೆಲದ ಕಾನೂನಿನ ಶಕ್ತಿ ಏನಂತೀರಿ? ಮುಡಾಸಿದ್ವಿಲಾಸ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ:  ಇಸ್ರೇಲ್ ವೈಮಾನಿಕ ದಾಳಿ – ಹಿಬ್ಜುಲ್ಲಾ ಡ್ರೋನ್ ಘಟಕದ ಮುಖ್ಯಸ್ಥನ ಹತ್ಯೆ

  • ಲೋಕಾಯುಕ್ತದಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ: ದೂರುದಾರ ಸ್ನೇಹಮಯಿ ಕೃಷ್ಣ

    ಲೋಕಾಯುಕ್ತದಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ: ದೂರುದಾರ ಸ್ನೇಹಮಯಿ ಕೃಷ್ಣ

    – ಮುಡಾ ಕೇಸ್ ಸಿಬಿಐ ತನಿಖೆ ಆದೇಶಿಸಿ ಎಂದು ಹೈಕೋರ್ಟ್‌ಗೆ ಅರ್ಜಿ ಹಾಕ್ತೇವೆ

    ಮೈಸೂರು: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಇಂದೇ ಎಫ್‌ಐಆರ್ ದಾಖಲಾಗಬೇಕು. ವೆಬ್‌ಸೈಟ್‌ನಲ್ಲಿನ ಆದೇಶ ಪ್ರತಿಯಿಂದಲೇ ಎಫ್‌ಐಆರ್ ಮಾಡಿಕೊಳ್ಳಬಹುದು. ಇವತ್ತೇ ಎಫ್‌ಐಆರ್ ದಾಖಲಾಗುತ್ತದೆ ಎಂದು ದೂರುದಾರ ಸ್ನೇಹಮಯಿ  ಕೃಷ್ಣ (Snehamayi Krishna) ಮೈಸೂರಿನಲ್ಲಿ (Mysuru) ಹೇಳಿದ್ದಾರೆ.

    ಈ ಬಗ್ಗೆ ‘ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ ಅವರು, ನಮಗೆ ಲೋಕಾಯುಕ್ತ ತನಿಖೆ ಮೇಲೆ ನಂಬಿಕೆ ಇಲ್ಲ. ಹೀಗಾಗಿ ತನಿಖೆ ಜವಾಬ್ದಾರಿಯನ್ನು ಸಿಬಿಐಗೆ (CBI) ಕೊಡಿ ಎಂದು ಹೈಕೋರ್ಟ್‌ಗೆ ಇವತ್ತು ಅಥವಾ ನಾಳೆ ಅರ್ಜಿ ಸಲ್ಲಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಭಾರೀ ಮಳೆಗೆ ನಾಲ್ವರು ಸಾವು; ಶಾಲಾ-ಕಾಲೇಜುಗಳಿಗೆ ರಜೆ

    ಸಿಎಂ ಮೇಲಿನ ಮುಡಾ ಕೇಸ್‌ನಲ್ಲಿ (MUDA Scam) ಲೋಕಾಯುಕ್ತದಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ. ಹೀಗಾಗಿ, ವಿಚಾರಣೆ ಸಿಬಿಐಗೆ ಕೊಡಿ ಎಂದು ಹೈಕೋರ್ಟ್‌ಗೆ ಅರ್ಜಿ ಹಾಕುವುದಾಗಿ ತಿಳಿಸಿದ್ದಾರೆ.

    ಮುಡಾ ನಿವೇಶನ ಹಂಚಿಕೆಯಲ್ಲಿ ಪ್ರಭಾವ ಬೀರಿದ್ದಾರೆಂಬ ಆರೋಪ ಹೊತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತಗೆ ಹೈಕೋರ್ಟ್ ಆದೇಶ ಹೊರಡಿಸಿದೆ. 3 ತಿಂಗಳ ಒಳಗೆ ತನಿಖಾ ವರದಿಯನ್ನು ಸಲ್ಲಿಸಬೇಕು ಎಂದು ಗಡುವು ವಿಧಿಸಿದೆ. ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಥೈಲ್ಯಾಂಡ್‌ ಗ್ರೀನ್‌ ಸಿಗ್ನಲ್‌ – ಸಲಿಂಗ ವಿವಾಹ ಮಸೂದೆಗೆ ಸಹಿ ಹಾಕಿದ ರಾಜ

    ಸಿಎಂ ಸಿದ್ದರಾಮಯ್ಯ ವಿರುದ್ಧ ತೀರ್ಪು ಹೊರಬೀಳುತ್ತಿದ್ದಂತೆ ಬಿಜೆಪಿ-ಜೆಡಿಎಸ್ ನಾಯಕರು, ಸಿಎಂ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮುಡಾ ಹಗರಣ ಸಂಕಷ್ಟ; ಹೈಕಮಾಂಡ್‌ಗೆ ವರದಿ ನೀಡಿದ ಸಿಎಂ ಸಿದ್ದರಾಮಯ್ಯ