Tag: highcommand

  • ಸಿಎಲ್‍ಪಿ ನಾಯಕ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ಸಿನಲ್ಲಿ ಫೈಟ್

    ಸಿಎಲ್‍ಪಿ ನಾಯಕ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ಸಿನಲ್ಲಿ ಫೈಟ್

    ಬೆಂಗಳೂರು: ರಾಜ್ಯ ಕಾಂಗ್ರೆಸ್ಸಿನಲ್ಲಿ ಅಂತರ್ಯುದ್ಧಗಳು ಮುಗಿಲು ಮುಟ್ಟಿವೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ನಿ ಟಬು ಕೂಡ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದರು. ಈ ಬೆನ್ನಲ್ಲೇ ಇದೀಗ ಮೂಲ ಮತ್ತು ವಲಸಿಗರ ನಡುವೆ ಸಿಎಲ್‍ಪಿ(ಕಾಂಗ್ರೆಸ್ ಶಾಸಕಾಂಗ ಸಭೆ) ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಫೈಟ್ ನಡೆಯುತ್ತಿದೆ.

    ದಿನೇಶ್ ಗುಂಡೂರಾವ್ ಪದೇ ಪದೇ ರಾಜೀನಾಮೆ ಕೊಡಲು ಸಿದ್ಧ ಎನ್ನುವ ಹಿಂದೆ ಸಿದ್ದರಾಮಯ್ಯರ ಇದ್ದಾರೆ ಎನ್ನಲಾಗುತ್ತಿದೆ. ದಿನೇಶ್ ಗುಂಡೂರಾವ್ ವಿರುದ್ಧ ಮೂಲ ಕಾಂಗ್ರೆಸ್ಸಿಗರು ಮುನಿಸಿಕೊಂಡಿರುವುದರಿಂದ ಅವರ ಬದಲಾವಣೆ ಕೂಗು ಜೋರಾಗುವ ಸಾಧ್ಯತೆ ಇದೆ. ಒಂದು ವೇಳೆ ಹಾಗೇನಾದರೂ ಬದಲಾವಣೆಯಾದರೆ ಆ ಸ್ಥಾನಕ್ಕೆ ಯಾರು ಬೇಕಾದರು ಬರಬಹುದು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಒಂದು ವೇಳೆ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಜೈಲಿನಿಂದ ಬಿಡುಗಡೆ ಆದರೆ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿಯನ್ನೇ ಹೈಕಮಾಂಡ್ ತಂದರೂ ಅಚ್ಚರಿ ಇಲ್ಲ. ಆದ್ದರಿಂದ ಸಿದ್ದರಾಮಯ್ಯರ ಬಣವೇ ದಿನೇಶ್ ಹತ್ತಿರ ರಾಜೀನಾಮೆಯ ಬಗ್ಗೆ ಮಾತನಾಡಿಸುತ್ತಿದೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಬದಲಾವಣೆ ಮಾಡುವುದಾದರೆ ಈಗಲೇ ಮಾಡಲಿ ಅನ್ನೋದು ಸಿದ್ದರಾಮಯ್ಯ  ಬಣದ ಪ್ಲಾನ್ ಆಗಿದೆ. ಇದನ್ನೂ ಓದಿ: ‘ಕೈ’ ಪಾಳಯದಲ್ಲಿ ಶುರುವಾಯ್ತು ‘ಟಬು’ ಸುನಾಮಿ – ಟಬು ರಾವ್‍ರಿಂದ ಸ್ಫೋಟಕ ಸತ್ಯ

    ಡಿಕೆಶಿ ಬರುವುದರೊಳಗೆ ತಮ್ಮವರೊಬ್ಬರನ್ನ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದರೆ ಸೇಫ್ ಆಗುತ್ತೇವೆ. ಇದರಿಂದ ಪಕ್ಷದ ಸಂಪೂರ್ಣ ಹಿಡಿತ ತಮ್ಮ ಕೈಯಲ್ಲೇ ಇರುತ್ತದೆ ಎಂಬುದು ಸಿದ್ದರಾಮಯ್ಯ ಬಣದ ಲೆಕ್ಕಾಚಾರವಾಗಿದೆ. ಆದ್ದರಿಂದ ಡಿಕೆ ಶಿವಕುಮಾರ್ ಬರುವುದರೊಳಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ಲಾಕ್ ಮಾಡುವ ಪ್ರಯತ್ನಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಿದ್ದರಾಮಯ್ಯರ ಈ ಪ್ರಯತ್ನ ಯಶಸ್ವಿಯಾಗಿ ಕೆಪಿಸಿಸಿ ಗಾದಿ ಲಾಕ್ ಆಗುತ್ತಾ ಅಥವಾ ಅಷ್ಟರಲ್ಲಿ ಡಿಕೆಗೆ ಬೇಲ್ ಆಗಿ ಐಡಿಯಾ ಫ್ಲಾಪ್ ಆಗುತ್ತಾ ಅನ್ನೋದೇ ಸದ್ಯದ ಕುತೂಹಲವಾಗಿದೆ.

  • ಆಡಿಯೋ ಟೇಪ್ ಕೇಸ್ – ರಾಷ್ಟ್ರಪತಿಗಳಿಗೆ ದೂರು ನೀಡಲು ಕಾಂಗ್ರೆಸ್ ತೀರ್ಮಾನ

    ಆಡಿಯೋ ಟೇಪ್ ಕೇಸ್ – ರಾಷ್ಟ್ರಪತಿಗಳಿಗೆ ದೂರು ನೀಡಲು ಕಾಂಗ್ರೆಸ್ ತೀರ್ಮಾನ

    ಬೆಂಗಳೂರು: ಬಿಜೆಪಿ ಆಪರೇಷನ್ ಕಮಲ ಮಾಡಿದೆ ಎನ್ನಲಾದ ಆಡಿಯೋವೊಂದನ್ನು ಎಚ್‍ಡಿ ಕುಮಾರಸ್ವಾಮಿ ಅವರು ರಾಜ್ಯ ಬಜೆಟ್ ದಿನದಂದು ಬಿಡುಗಡೆಗೊಳಿಸಿದ್ದು, ಇದೀಗ ಬಿಜೆಪಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ.

    ಹೌದು. ಆಡಿಯೋ ಪ್ರಕರಣ ಸಂಬಂಧ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮತ್ತಷ್ಟು ಡ್ಯಾಮೇಜ್ ಮಾಡಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಬಿಎಸ್‍ವೈ ಮತ್ತು ಬಿಜೆಪಿ ವಿರುದ್ಧ ರಾಷ್ಟ್ರಪತಿಗಳಿಗೆ ಸಾಕ್ಷ್ಯ ಸಮೇತ ದೂರು ನೀಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಶಾಸಕರ ಖರೀದಿ ಹಾಗೂ ಸಾಂವಿಧಾನಿಕ ಹುದ್ದೆಗಳಲ್ಲಿರುವವರ ಹೆಸರು ಬಳಕೆ ಮಾಡಿದ ಹಿನ್ನೆಲೆಯಲ್ಲಿ ಬಿಎಸ್‍ವೈ ಆಡಿಯೋ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಲು ತಯಾರಿ ನಡೆಸಲಾಗಿದೆ. ಅಲ್ಲದೇ ಪ್ರಕರಣ ಸಂಬಂಧ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಧ್ಯಪ್ರವೇಶ ಮಾಡುವಂತೆ ಕಾಂಗ್ರೆಸ್ ನಿಯೋಗ ಮನವಿ ಮಾಡಿಕೊಳ್ಳಲಿದೆ ಎನ್ನಲಾಗಿದೆ.

    ರಾಷ್ಟ್ರಪತಿಗಳಿಗೆ ಆಡಿಯೋ ಕಂಪ್ಲೆಂಟ್ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಗಂಭೀರ ಚರ್ಚೆಯಾಗುತ್ತಿದ್ದು, ನಾಳೆ ಸಂಸತ್ ಅಧಿವೇಶನ ಮುಗಿದ ಕೂಡಲೇ ರಾಷ್ಟ್ರಪತಿಗಳಿಗೆ ದೂರು ನೀಡುವ ಸಾಧ್ಯತೆಗಳಿವೆ. ಸೋಮವಾರ ಲೋಕಸಭೆಯಲ್ಲಿಯೂ ಕೂಡ ದೋಸ್ತಿಗಳು ಬಿಎಸ್‍ವೈ ಮತ್ತು ಬಿಜೆಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯದಲ್ಲಿ ಕಮಲ ಅರಳಿಸಲು ಸರ್ಕಸ್ – ರಾಜ್ಯ ಬಿಜೆಪಿಗರಿಗೆ ದಿಲ್ಲಿಯಲ್ಲೇ ಇರುವಂತೆ ಆರ್ಡರ್

    ರಾಜ್ಯದಲ್ಲಿ ಕಮಲ ಅರಳಿಸಲು ಸರ್ಕಸ್ – ರಾಜ್ಯ ಬಿಜೆಪಿಗರಿಗೆ ದಿಲ್ಲಿಯಲ್ಲೇ ಇರುವಂತೆ ಆರ್ಡರ್

    ನವದೆಹಲಿ: ಸಂಕ್ರಾಂತಿ ಬಳಿಕ ರಾಜ್ಯ ರಾಜಕೀಯದಲ್ಲಿ ಕ್ರಾಂತಿ ಆಗುತ್ತೆ ಅಂತ ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಇದರ ನಡುವೆಯೇ ದೆಹಲಿಯಲ್ಲಿ ಬೀಡು ಬಿಟ್ಟಿರುವ 104 ಬಿಜೆಪಿ ಶಾಸಕರಿಗೆ ಕರ್ನಾಟಕ ಭವನ ಖಾಲಿ ಮಾಡಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡುವಂತೆ ಹೈಕಮಾಂಡ್ ಕಟ್ಟಾಜ್ಞೆ ನೀಡಿದೆ.

    ಇಂದು, ನಾಳೆ ದೆಹಲಿಯಲ್ಲಿಯೇ ಇರುವಂತೆ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಹೈಕಮಾಂಡ್ ಸೂಚನೆ ನೀಡಿದೆ. ಇದು ಆಪರೇಷನ್ ಕಮಲದ ಚರ್ಚೆಗಾ ಅನ್ನೋ ಮಾತು ಜೋರಾಗಿದ್ದು, ಶಾಸಕರಲ್ಲಿ ಕುತೂಹಲ ಮೂಡಿಸಿದೆ. ಈ ನಡುವೆ ಇವತ್ತು ದೆಹಲಿಯ ವೆಸ್ಟರ್ನ್ ಕೋರ್ಟ್ ಗೆಸ್ಟ್ ಹೌಸ್‍ನಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಭೆ ಕರೆದಿದ್ದಾರೆ. ರಾಜ್ಯದ 104 ಶಾಸಕರ ಜತೆ, ಸಂಸದರು, ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.

    ಸಭೆಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್, ರಾಜ್ಯಾಧ್ಯಕ್ಷ ಯಡಿಯೂರಪ್ಪ, ಅಮಿತ್ ಶಾಗೆ ಸಾಥ್ ನೀಡಲಿದ್ದಾರೆ. ಬೆಳಗ್ಗೆ 11 ರಿಂದ ಸಂಜೆ 5ರ ತನಕ ಸಭೆ ನಡೆಯಲಿದೆ. ಲೋಕಸಭಾ ಸಿದ್ಧತೆಯ ಹೆಸರಿನಲ್ಲಿ ಸಭೆ ನಡೆಯುತ್ತಿದ್ದು, ಬಿಜೆಪಿ ಶಾಸಕರು ಕಾದು ಕುಳಿತಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜನಾರ್ದನ ರೆಡ್ಡಿಗೆ ಹೈಕಮಾಂಡ್ ರೆಡ್ ಸಿಗ್ನಲ್ – ಏಕಾಂಗಿಯಾದ್ರು ಶ್ರೀರಾಮುಲು

    ಜನಾರ್ದನ ರೆಡ್ಡಿಗೆ ಹೈಕಮಾಂಡ್ ರೆಡ್ ಸಿಗ್ನಲ್ – ಏಕಾಂಗಿಯಾದ್ರು ಶ್ರೀರಾಮುಲು

    ಬೆಂಗಳೂರು: ಗಾಲಿ ಜನಾರ್ದನ ರೆಡ್ಡಿಗೆ ಹೈಕಮಾಂಡ್ ರೆಡ್ ಸಿಗ್ನಲ್ ನೀಡಿದ್ದು, ಇದರಿಂದ ಮತ್ತೆ ಬಳ್ಳಾರಿ ಶಾಸಕ ರಾಮುಲು ಏಕಾಂಗಿಯಾಗಿದ್ದಾರೆ.

    ಬಳ್ಳಾರಿ ಲೋಕಸಭೆ ಚುನಾವಣೆಗೆ ರಾಮುಲು ಅವರಿಗೆ ಗೆಳೆಯ ಜನಾರ್ದನರೆಡ್ಡಿ ಸಹಾಯದ ಕೊರತೆ ಉಂಟಾಗಿದೆ. ಯಾಕೆಂದರೆ ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಹೋಗಲು ಕೋರ್ಟ್ ಅನುಮತಿ ನೀಡದಿದ್ದರೂ ಹೊರಗಿನ ಸಹಾಯಕ್ಕೆ ಹೈಕಮಾಂಡ್ ಆಕ್ಷೇಪ ವ್ಯಕ್ತಪಡಿಸಿದೆ.

    ಅಷ್ಟೇ ಅಲ್ಲದೇ ಯಾವುದೇ ಕಾರಣಕ್ಕೂ ಗಾಲಿ ಜನಾರ್ದನರೆಡ್ಡಿ ಬಳ್ಳಾರಿ ಉಪ ಚುನಾವಣೆಯ ಅಖಾಡಕ್ಕೆ ತಲೆಹಾಕಬಾರದು. ಉಪಚುನಾವಣೆಯ ವಿಚಾರದಲ್ಲಿ ಬೆಂಬಲಿಸುವ ಬಹಿರಂಗ ಹೇಳಿಕೆಯನ್ನು ಕೊಡದಂತೆ ನೋಡಿಕೊಳ್ಳಿ. ಕಳೆದ ಬಾರಿ ಬಹಿರಂಗ ಅಖಾಡಕ್ಕೆ ಇಳಿದು ಬಳಿಕ ನಾವು ಸ್ಪಷ್ಟನೆ ಕೊಡಬೇಕಾಗಿ ಬಂತು. ಹಾಗಾಗಿಯೇ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ನಿರೀಕ್ಷಿತ ಸ್ಥಾನ ಸಿಗಲಿಲ್ಲ ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಮತ್ತು ಶ್ರೀರಾಮುಲುಗೆ ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ ಎನ್ನಲಾಗುತ್ತಿದೆ.

    ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಕಡಿಮೆ ಸ್ಥಾನ ಬರಲು ರೆಡ್ಡಿ ವಿವಾದ ಕಾರಣವಾಗಿದೆ. ಜನಾರ್ದನರೆಡ್ಡಿ ಆಂತರಿಕವಾಗಿ ಕೆಲಸ ಮಾಡಿದರೆ ಯಾವ ಸಮಸ್ಯೆಯೂ ಆಗುತ್ತಿರಲಲ್ಲಿ. ಆದರೆ ಬಹಿರಂಗವಾಗಿ ಮಾತನಾಡಿ ಮಾಧ್ಯಮಗಳು ಬಿಜೆಪಿಯನ್ನ ಇಕ್ಕಟ್ಟಿಗೆ ಸಿಲುಕಿಸಿದ್ದವು. ಮಾಧ್ಯಮಗಳನ್ನ ಎದುರಿಸಲಾಗದೇ ರೆಡ್ಡಿಗೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಡಬೇಕಾಯಿತು ಎಂದು ಹೈಕಮಾಂಡ್ ರಾಜ್ಯ ನಾಯಕರಿಗೆ ಸಂದೇಶ ರವಾನಿಸಿದೆಯಂತೆ.

    ಹಾಗಾಗಿ ಈ ಬಾರಿಯೂ ಜನಾರ್ದನರೆಡ್ಡಿ ಚುನಾವಣೆ ಅಬ್ಬರದಿಂದ ದೂರವಿರಲಿ. ಹೊರಗಿನಿಂದಲೂ ಬಿಜೆಪಿಗೆ ಸಹಕಾರ ನೀಡುವ ಬಗ್ಗೆ ಎಲ್ಲೂ ಮಾತನಾಡಬಾರದು. ನೀವು ಕೂಡ ಜನಾರ್ದನ ರೆಡ್ಡಿಯಿಂದ ಅಂತರವನ್ನು ಕಾಯ್ದುಕೊಂಡು ಚುನಾವಣೆ ಮುಗಿಸಿ ಎಂದು ಬಿಜೆಪಿ ಹೈಕಮಾಂಡ್ ಖಡಕ್ ವಾರ್ನಿಂಗ್ ಕೊಟ್ಟಿದೆ. ಆದ್ದರಿಂದ ಈಗ ಬಳ್ಳಾರಿಯ ಉಪಚುನಾವಣೆಗೆ ಶ್ರೀರಾಮುಲು ಒಬ್ಬರೆ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸಬೇಕಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಚಿವ ಸ್ಥಾನಕ್ಕೆ ಎನ್.ಮಹೇಶ್ ರಾಜೀನಾಮೆಯಿಂದ ಬಿಜೆಪಿಗೇನು ಲಾಭ..?

    ಸಚಿವ ಸ್ಥಾನಕ್ಕೆ ಎನ್.ಮಹೇಶ್ ರಾಜೀನಾಮೆಯಿಂದ ಬಿಜೆಪಿಗೇನು ಲಾಭ..?

    ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸ್ಥಾನಕ್ಕೆ ಎನ್ ಮಹೇಶ್ ಅವರು ರಾಜೀನಾಮೆ ನೀಡಿದ್ದಾರೆ. ಇದು ಬಿಜೆಪಿಗೆ ಲಾಭವಾಗಲಿದೆ ಅಂತ ಹೆಳಲಾಗುತ್ತಿದೆ.

    ಮಹೇಶ್ ರಾಜೀನಾಮೆಗೂ ಮುನ್ನ ಬಿಜೆಪಿ ನಾಯಕರ ಸರ್ಕಾರ ಬೀಳಿಸುವ ಮಾತನಾಡಿದ್ದು, ಆಪರೇಷನ್ ಕಮಲಕ್ಕೆ ಬಿಜೆಪಿ ಹೈಕಮಾಂಡ್ ರೆಡ್‍ಸಿಗ್ನಲ್ ಕೊಟ್ಟಿದ್ಯಾ ಅಥವಾ ಗ್ರೀನ್ ಸಿಗ್ನಲ್ ಕೊಟ್ಟಿದ್ಯಾ ಎಂಬ ಪ್ರಶ್ನೆಯೊಂದು ಇದೀಗ ಮೂಡಿದೆ.


    ನವೆಂಬರ್‍ನಲ್ಲಿ ಮತ್ತೊಂದು ಆಪರೇಷನ್ ಆಪರೇಟಿಂಗ್ ಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಈ ಮೂಲಕ ಬಿಜೆಪಿ ಬೈ ಎಲೆಕ್ಷನ್ ಫಲಿತಾಂಶದ ಬಳಿಕ ಅಖಾಡಕ್ಕೆ ಇಳಿಯುತ್ತಂತೆ. ಈ ವಿಚಾರವನ್ನು ರಾಜ್ಯ ಬಿಜೆಪಿ ನಾಯಕರು ಈಗಾಗಲೇ ಹೈಕಮಾಂಡ್‍ಗೂ ಮಾಹಿತಿ ರವಾನಿಸಿದ್ದಾರೆ. ರಾಜ್ಯ ನಾಯಕರ ಪ್ಲ್ಯಾನ್‍ನಂತೆ ನಾವು ಅಂತಾ ಹೈಕಮಾಂಡ್ ಗ್ರೀನ್‍ಸಿಗ್ನಲ್ ಕೊಟ್ಟಿದ್ದು, ಆಪರೇಷನ್ ಟೀಂ ಮೆಂಬರ್ಸ್ ನವೆಂಬರ್‍ನಲ್ಲಿ ಮತ್ತೆ ಕಾರ್ಯಾಚರಣೆ ನಡೆಸಲು ಬಿಎಸ್‍ವೈ ಸೂಚಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಹಾಗಾದ್ರೆ ಬಿಎಸ್‍ಪಿ ಮಹೇಶ್ ರಾಜೀನಾಮೆ ನಂತ್ರ ಬಿಜೆಪಿ ಲೆಕ್ಕಚಾರ ಏನು ಅಂತ ನೋಡೋದಾದ್ರೆ:
    > ಬೈ ಎಲೆಕ್ಷನ್ ಫಲಿತಾಂಶವನ್ನು ಕಾದುನೋಡಿ, ಬಳಿಕ ಆಪರೇಷನ್ ಶುರು ಮಾಡೋದು
    > ಸಂಪುಟ ವಿಸ್ತರಣೆಯ ವಿಳಂಬವನ್ನೇ ಮತ್ತೊಮ್ಮೆ ಬಳಸಿಕೊಂಡು ಕೈ ಶಾಸಕರಿಗೆ ಗಾಳ
    > ಕೇಂದ್ರ ಮಟ್ಟದಲ್ಲಿ ಮಾಯಾಜಾಲದೊಂದಿಗೆ ಬಿಎಸ್‍ಪಿ ಬೆಂಬಲ ಪಡೆಯುವ ತಂತ್ರ..?
    > ಶಿವಮೊಗ್ಗ, ಬಳ್ಳಾರಿ ಲೋಕಸಭಾ ಉಪಚುನಾವಣೆ ಗೆಲ್ಲುವ ಮೂಲಕ ಕೈ ವೀಕ್ ಮಾಡೋದು


    > ನವೆಂಬರ್ ಅಂತ್ಯದಲ್ಲಿ ಶಾಸಕರು ರಾಜೀನಾಮೆ ಕೊಟ್ಟರೆ ಲೋಕಸಭೆ ಜತೆಗೆ ಚುನಾವಣೆ ಲೆಕ್ಕಚಾರ
    > ಹಾಗಾಗಿ ನವೆಂಬರ್ ಎರಡನೇಯ ವಾರದಿಂದ ಆಪರೇಷನ್ ಸೆಕೆಂಡ್ ಛಾನ್ಸ್ ಆರಂಭಿಸುವುದು
    > ಈ ಬಾರಿ ಗಾಳಕ್ಕೆ ಸಿಕ್ಕ ಮೀನುಗಳನ್ನ ಒಟ್ಟುಗೂಡಿಸಲು ಪ್ರತ್ಯೇಕ ಮೂರು ಟೀಂ ರಚಿಸುವುದಾಗಿದೆ.

    ಒಟ್ಟಿನಲ್ಲಿ ಮಹೇಶ್ ರಾಜೀನಾಮೆ ನಂತರ ಇದೀಗ ರಾಜ್ಯ ಬಿಜೆಪಿ ಚುನಾವಣೆ ಗೆಲ್ಲಲು ಮತ್ತಷ್ಟು ಕಸರತ್ತು ನಡೆಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಾರಕಿಹೊಳಿ ಬ್ರದರ್ಸ್ ಗೆ ಮಾಜಿ ಸಿಎಂ ಕಿವಿಮಾತು

    ಜಾರಕಿಹೊಳಿ ಬ್ರದರ್ಸ್ ಗೆ ಮಾಜಿ ಸಿಎಂ ಕಿವಿಮಾತು

    – ಬಂಡಾಯ ಬ್ರದರ್ಸ್ ಗೆ ಬೇಕಂತೆ ಸಿದ್ದರಾಮಯ್ಯ ಬೆಂಬಲ

    ಬೆಂಗಳೂರು: ನಮಗೆ ಹೈಕಮಾಂಡ್ ಮಟ್ಟದಲ್ಲಿ ನ್ಯಾಯ ಸಿಗಬೇಕು. ಇಲ್ಲದಿದ್ರೆ ಬೇರೆ ಯೋಚನೆ ಮಾಡ್ತೀವಿ ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಜಾರಕಿ ಹೊಳಿ ಬ್ರದರ್ಸ್ ದಾಳ ಉರುಳಿಸಿದ್ದಾರೆ.

    ಈ ವೇಳೆ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ದುಡುಕದಂತೆ ಎಚ್ಚರಿಕೆ ನೀಡಿದ್ದಾರೆ. ರಾಜಕಾರಣ ಮೊದಲಿನಂತಿಲ್ಲ. ದುಡುಕಿ ತೀರ್ಮಾನ ಮಾಡಿದರೆ ಸರ್ವೈವಲ್ ಆಗೋದು ಕಷ್ಟ. ಹೆಚ್ಚು ಕಡಿಮೆ ಆದರೆ ರಾಜಕೀಯ ಭವಿಷ್ಯವೇ ಅಂತ್ಯವಾಗುತ್ತೆ ಅಂತ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಎಚ್ಚರಿಕೆಗೆ ರಮೇಶ್ ಜಾರಕಿಹೊಳಿ ಮೌನವಾಗಿದ್ದಾರೆ ಅಂತ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ನಿಮ್ಮಿಂದ ಸಾಧ್ಯವಾಗದೇ ಇದ್ರೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ- ಸಿದ್ದು, ಜಾರಕಿಹೊಳಿ ಸಭೆಯ ಇನ್‍ಸೈಡ್ ಸ್ಟೋರಿ

    ಡಿಕೆಶಿ ಮೇಲಿನ ದೂರಿನ ಜೊತೆಗೆ ತಮ್ಮ ಬೇಡಿಕೆ ಈಡೇರಿಕೆಗೂ ನಿಮ್ಮ ಬೆಂಬಲ ಬೇಕು. ಹೈಕಮಾಂಡ್ ಬಳಿ ಮಾತನಾಡುವಾಗ ನೀವು ಜೊತೆಗಿರಿ ಅಂತ ಸಿದ್ದರಾಮಯ್ಯ ಅವರನ್ನು ಜಾರಕಿಹೊಳಿ ಬ್ರದರ್ಸ್ ಬೆಂಬಲಕ್ಕೆ ಆಹ್ವಾನಿಸಿದ್ದಾರೆ. ಈ ವೇಳೆ ಮಾಜಿ ಸಿಎಂ ಅವರು ಗೊಂದಲದಲ್ಲೇ ಓಕೆ ಅಂದಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಜಾರಕಿಹೊಳಿ ಬ್ರದರ್ಸ್ ಗೆ ಹೈಕಮಾಂಡ್ ಮಟ್ಟದಲ್ಲಾದ್ರೂ ಪರಿಹಾರ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಷಾಢ ಬಳಿಕ ಸಂಪುಟ ವಿಸ್ತರಣೆ ಹಿನ್ನೆಲೆ- ಕಾಂಗ್ರೆಸ್‍ನಲ್ಲಿ ತೀವ್ರಗೊಂಡ ಲಾಬಿ

    ಆಷಾಢ ಬಳಿಕ ಸಂಪುಟ ವಿಸ್ತರಣೆ ಹಿನ್ನೆಲೆ- ಕಾಂಗ್ರೆಸ್‍ನಲ್ಲಿ ತೀವ್ರಗೊಂಡ ಲಾಬಿ

    ಬೆಂಗಳೂರು: ಆಷಾಢ ಮುಗಿಯೋದು ಹತ್ತಿರವಾಗುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕರು ಫುಲ್ ಆಕ್ಟಿವ್ ಆಗಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿಗಳು ಹೈಕಮಾಂಡ್ ಭೇಟಿ ಮಾಡಲು ದೆಹಲಿ ಕಡೆ ಪ್ರಯಾಣ ಬೆಳೆಸಿದ್ದಾರೆ.

    ಸಚಿವ ರಮೇಶ್ ಜಾರಕಿಹೋಳಿ ನೇತೃತ್ವದಲ್ಲಿ ಎಂಟು ಜನ ಶಾಸಕರು ಹೈಕಮಾಂಡ್ ಭೇಟಿಗೆ ದೆಹಲಿ ತೆರಳಿದ್ದಾರೆ. ಆಷಾಢ ಬಳಿಕ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕ ಮಾಡಲಾಗುತ್ತೆ ಅಂಥ ಹೈಕಮಾಂಡ್ ಹೇಳಿತ್ತು. ಹೀಗಾಗಿ ಆಷಾಢ ಮುಗಿಯೊಕೆ ಇನ್ನು ಒಂದು ವಾರ ಬಾಕಿ ಇರುವಾಗಲೇ ಶಾಸಕರು ಕಸರತ್ತು ಆರಂಭಿಸಿದ್ದಾರೆ.

    ಸಚಿವ ರಮೇಶ್ ಜಾರಕೀಹೊಳಿ, ಎಂಬಿ ಪಾಟೀಲ್, ಪ್ರತಾಪ್ ಗೌಡ ಪಾಟೀಲ್, ಬಿ.ನಾಗೇಂದ್ರ, ನಾರಯಣ್ ರಾವ್ ರಹೀಂ ಖಾನ್ ಸೇರಿದಂತೆ ಒಟ್ಟು ಎಂಟು ಜನ ಶಾಸಕರು ಇಂದು ರಾಜ್ಯ ಚುನಾವಣಾ ಉಸ್ತುವಾರಿ ಕೆ.ವೇಣುಗೋಪಾಲ್ ಭೇಟಿಯಾಗಲಿದ್ದಾರೆ. ಜೊತೆಗೆ ಹೈಕಮಾಂಡ್ ಭೇಟಿಗೂ ಪ್ರಯತ್ನಿಸಲಿದ್ದು, ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಹಾಗೂ ಪ್ರಮುಖ ನಿಗಮ ಮಂಡಳಿ ನೀಡುವಂತೆ ಒತ್ತಾಯಿಸಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ನಿಗಮ ಮಂಡಳಿ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆ- ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚನೆ

    ನಿಗಮ ಮಂಡಳಿ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆ- ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚನೆ

    ಬೆಂಗಳೂರು: ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ಕುರ್ಚಿ ಮೇಲೆ ಆಸೆ ಇಟ್ಟುಕೊಂಡು ಕೂತವರಿಗೆ ಮತ್ತೆ ನಿರಾಸೆಯಾಗಿದೆ. ಆಷಾಢ ಬಳಿಕ ಕುರ್ಚಿ ಫಿಕ್ಸ್ ಆಗಬಹುದು ಅಂತಾ ಲೆಕ್ಕಾಚಾರ ಹಾಕಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ.

    ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ನಿಗಮ ಮಂಡಳಿ ಹಾಗೂ ಸಚಿವ ಸ್ಥಾನ ನೇಮಕ ಮತ್ತಷ್ಟು ವಿಳಂಬವಾಗಲಿದೆ. ಆಷಾಢದ ಬಳಿಕ ಕಾಂಗ್ರೆಸ್‍ನ ಐದು ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ಪೈಕಿ 20 ಕಾಂಗ್ರೆಸ್ ಹಾಗೂ 10 ಜೆಡಿಎಸ್ ಶಾಸಕರಿಗೆ ಹಂಚುವ ಪ್ಲಾನ್ ಇತ್ತು. ಸ್ಥಳೀಯ ಚುನಾವಣೆ ಘೋಷಣೆಯಿಂದಾಗಿ ನೀತಿಸಂಹಿತೆ ಜಾರಿಯಾಗಿದ್ದು ನೇಮಕಕ್ಕೆ ಅವಕಾಶ ಇದೆಯೇ ಎನ್ನುವ ಗೊಂದಲ ಕಾಂಗ್ರೆಸ್ ನಾಯಕರಿಗೆ ಮೂಡಿದೆ.

    ಹೀಗಾಗಿ ಈ ಬಗ್ಗೆ ಸ್ಪಷ್ಟನೆ ಕೋರಿ ಸದ್ಯದಲ್ಲಿ ಚುನಾವಣೆ ಆಯೋಗಕ್ಕೆ ಪತ್ರ ಬರೆಯಲಿದ್ದಾರೆ. ಒಂದು ವೇಳೆ ಚುನಾವಣೆ ಆಯೋಗ ನೇಮಕಕ್ಕೆ ಗ್ರೀನ್ ಸಿಗ್ನಲ್ ಕೊಡದಿದ್ರೆ, ಇನ್ನೂ ಒಂದು ತಿಂಗಳು ಸಚಿವ ಸ್ಥಾನ ಮತ್ತು ನಿಗಮ ಮಂಡಳಿ ಅಧ್ಯಕ್ಷಗಾದಿ ಆಕಾಂಕ್ಷಿಗಳು ಕಾಯಬೇಕಾಗುತ್ತೆ.

    ಮೈತ್ರಿಗೆ ಹೈಕಮಾಂಡ್ ಸಮ್ಮತಿ:
    ಇತ್ತ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಗೆ ಸ್ವಪಕ್ಷಿಯರಿಂದಲೇ ವಿರೋಧ ವ್ಯಕ್ತವಾಗಿರುವ ಬೆನ್ನಲೆ ಸ್ಥಳೀಯ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಸಮ್ಮತಿಸಿದೆ. ಸಾಕಷ್ಟು ವಿರೋಧ ನಡುವೆಯೂ ಅಗತ್ಯ ಬಿದ್ದರೆ ಮೈತ್ರಿಗೆ ಮುಂದಾಗುವಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚನೆ ಕೊಟ್ಟಿದೆ.

    ಮೈತ್ರಿ ಮಾಡಿಕೊಳ್ಳುವ ಬಗ್ಗೆ ಜಿಲ್ಲಾ ನಾಯಕರಿಗೆ ಜವಾಬ್ದಾರಿ ನೀಡಿ, ಅವರ ಅಭಿಪ್ರಾಯ ಪಡೆದು ಮೈತ್ರಿ ಬಗ್ಗೆ ನಿರ್ಧರಿಸಲು ಕಾಂಗ್ರೆಸ್ ಹೈಕಮಾಂಡ್ ತಿಳಿಸಿದೆ. ಬಹಳ ಪ್ರಮುಖವಾಗಿ ಬಿಜೆಪಿ ಬಲಿಷ್ಠವಾಗಿರುವ ಕಡೆ ಮೈತ್ರಿಗೆ ಹೈಕಮಾಂಡ್ ಸಮ್ಮಿತಿಸಿದೆ ಅಂತಾ ಮೂಲಗಳು ಸ್ವಷ್ಟಪಡಿಸಿವೆ. ಮೈಸೂರು ಭಾಗದಲ್ಲಿ ಜೆಡಿಎಸ್, ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದ್ದು, ಈ ಭಾಗದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ವರ್ಧಿಸಲು ಹೈಕಮಾಂಡ್ ಸೂತ್ರ ಹೆಣೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಭಿನ್ನಮತ ಶಮನಕ್ಕೆ ರಾಹುಲ್ ಗಾಂಧಿ ಬುಲಾವ್ – ಎಂ.ಬಿ ಪಾಟೀಲ್‍ಗೆ ಸಿಗುತ್ತಾ ಕೆಪಿಸಿಸಿ ಅಧ್ಯಕ್ಷಗಿರಿ?

    ಭಿನ್ನಮತ ಶಮನಕ್ಕೆ ರಾಹುಲ್ ಗಾಂಧಿ ಬುಲಾವ್ – ಎಂ.ಬಿ ಪಾಟೀಲ್‍ಗೆ ಸಿಗುತ್ತಾ ಕೆಪಿಸಿಸಿ ಅಧ್ಯಕ್ಷಗಿರಿ?

    ನವದೆಹಲಿ: ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ಬಂಡಾಯದ ಬಾವುಟ ಹಾರಿಸಿರುವ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಹೈಕಮಾಂಡ್ ಭೇಟಿಗೆ ದೆಹಲಿ ತಲುಪಿದ್ದಾರೆ.

    ಶುಕ್ರವಾರ ರಾತ್ರಿ ದೆಹಲಿಗೆ ತಲುಪಿರುವ ಎಂ.ಬಿ ಪಾಟೀಲ್ ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗಲಿದ್ದಾರೆ. ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ತಮ್ಮನ್ನು ಪರಿಗಣಿಸದ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಎಂಬಿ ಪಾಟೀಲ್ ಅಸಮಧಾನ ವ್ಯಕ್ತಪಡಿಸಿದ್ರು. ಇದ್ನನೂ ಓದಿ; ಜೆಡಿಎಸ್‍ನಲ್ಲೂ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಸ್ಫೋಟ

    ಅಲ್ಲದೇ ಇಪ್ಪತ್ತು ಮಂದಿ ಶಾಸಕರೊಂದಿಗೆ ಸೇರಿ ಮೈತ್ರಿ ಸರ್ಕಾರವನ್ನೇ ಬುಡಮೇಲು ಮಾಡಲು ಸಿದ್ಧತೆ ನಡೆಸಿದ್ರು. ಇದನ್ನ ಅರಿತ ರಾಹುಲ್ ಗಾಂಧಿ ದೆಹಲಿಗೆ ಬಂದು ಭೇಟಿಯಾಗುವಂತೆ ಎಂ.ಬಿ ಪಾಟೀಲ್‍ಗೆ ಬುಲಾವ್ ನೀಡಿದ್ರು. ಹೀಗಾಗಿ ಇಂದು ಎಂಬಿ ಪಾಟೀಲ್ ಸೇರಿದಂತೆ ಹಲವು ಬಂಡಾಯ ಶಾಸಕರು ರಾಹುಲ್ ಗಾಂಧಿ ಭೇಟಿಯಾಗಲಿದ್ದಾರೆ. ಇದನ್ನೂ ಓದಿ: ಎಂಬಿ ಪಾಟೀಲ್ ಬಣದಲ್ಲಿರೋ 19 ಶಾಸಕರು ಯಾರು? ಇಲ್ಲಿದೆ ಪಟ್ಟಿ

    ರಾಜ್ಯ ಚುನಾವಣಾ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಕೇರಳದಲ್ಲಿದ್ದು, ಮಧ್ಯಾಹ್ನದ ವೇಳೆಗೆ ದೆಹಲಿ ತಲುಪುವ ಸಾಧ್ಯತೆ ಇದೆ. ಜೊತೆಗೆ ಡಿಸಿಎಂ ಪರಮೇಶ್ವರ್ ಇಂದಿನ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಇನ್ನು, ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ ಗುಂಡೂರಾವ್‍ಗೂ ರಾಹುಲ್ ಬುಲಾವ್ ನೀಡಿದ್ದು, ಅವರು ಸಹ ನಿನ್ನೆಯೇ ದೆಹಲಿ ತಲುಪಿದ್ದಾರೆ. ಅಂದಹಾಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಹೆಸರು ಚಲಾವಣೆಯಲ್ಲಿತ್ತು. ಈ ಮಧ್ಯೆ ಇವತ್ತಿನ ಸಭೆಗೆ ದಿನೇಶ್ ಗುಂಡೂರಾವ್ ಅವರನ್ನ ಕರೆಸಿದ್ದು, ಕೆಪಿಸಿಸಿ ಪಟ್ಟವನ್ನು ಎಂ.ಬಿ ಪಾಟೀಲ್‍ಗೆ ವಹಿಸಲಿದ್ಯಾ ಅನ್ನೋ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಡಿಕೆಶಿಗೆ ಜಲಸಂಪನ್ಮೂಲ, ರೇವಣ್ಣಗೆ PWD: ಯಾರಿಗೆ ಯಾವ ಖಾತೆ? ಇಲ್ಲಿದೆ ಪಟ್ಟಿ

  • ಹೈಕಮಾಂಡ್ ದಲಿತರನ್ನ ಸಿಎಂ ಮಾಡಿದ್ರೆ ನನ್ನದೇನೂ ತಕರಾರು ಇಲ್ಲ, ಬಿಟ್ಟು ಕೊಡೋದಕ್ಕೆ ಸಿದ್ಧ: ಸಿಎಂ

    ಹೈಕಮಾಂಡ್ ದಲಿತರನ್ನ ಸಿಎಂ ಮಾಡಿದ್ರೆ ನನ್ನದೇನೂ ತಕರಾರು ಇಲ್ಲ, ಬಿಟ್ಟು ಕೊಡೋದಕ್ಕೆ ಸಿದ್ಧ: ಸಿಎಂ

    ಮೈಸೂರು: ಹೈಕಮಾಂಡ್ ದಲಿತರನ್ನು ಸಿಎಂ ಮಾಡುತ್ತೇವೆ ಎನ್ನುವ ನಿರ್ಧಾರ ತೆಗೆದುಕೊಂಡ್ರೇ ತಗೊಳ್ಳಿ. ಇದ್ರಲ್ಲಿ ನನ್ನದೇನೂ ತಕರಾರು ಇಲ್ಲ. ಎಲ್ಲಾ ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಕಾಂಗ್ರೆಸ್‍ಗೆ ದಲಿತ ಸಿಎಂ ಕೂಗು ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಏನಾದ್ರೂ ದಲಿತ ಸಿಎಂ ಅಂತಾ ಕೇಳಿದ್ರೆ, ನಾನು ಬಿಟ್ಟು ಕೊಡಲು ಸಿದ್ಧ ಎಂದು ಉತ್ತರಿಸಿದ್ದಾರೆ.

    ಕರ್ನಾಟಕದ ಈ ಚುನಾವಣೆ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಲೋಕಸಭೆಗೂ ಮುನ್ನ ಎರಡು ರಾಜ್ಯದ ಚುನಾವಣೆ ಬರುತ್ತೆ. ಅಲ್ಲಿಯೂ ನಾವೇ ಗೆಲ್ಲುತ್ತೇವೆ. ಅದರ ಜೊತೆ ಲೋಕಸಭೆಯಲ್ಲಿಯೂ ನಾವೇ ಗೆಲ್ಲುತ್ತೇವೆ ಅಂತ ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ರು.

    ನಾನೂ ಬದುಕಿರುವವರೆಗೆ ಜಾತಿವಾದಿಗಳು, ಮತೀಯವಾದಿಗಳ ವಿರುದ್ಧ ಹೋರಾಟ ಮಾಡುತ್ತೇನೆ. ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೇನೆ. ಚುನಾವಣಾ ರಾಜಕೀಯ ನನಗೆ ಸಾಕಾಗಿದೆ. ಆದ್ರೆ ಸಕ್ರೀಯ ರಾಜಕಾರಣದಲ್ಲಿ ಇರುತ್ತೇನೆ. ನನ್ನ ಜೊತೆಗಿರುವವರಿಗೆ ಬೆಂಬಲವಾಗಿ ಇರುತ್ತೇನೆ ಅಂದ್ರು.

    ಇದೇ ವೇಳೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವುದು ಸ್ವಲ್ಪ ಮಟ್ಟಿನ ಸತ್ಯ. ಅದು ಪೂರ್ಣ ಪ್ರಮಾಣದ ಸತ್ಯ ಅಲ್ಲ ಅಂತ ಮತದಾನೋತ್ತರ ಸಮೀಕ್ಷೆ ಕುರಿತು ಸಿಎಂ ಅಚ್ಚರಿ ಹೇಳಿಕೆ ನೀಡಿದ್ದಾರೆ.

    ಚಾಮುಂಡೇಶ್ವರಿ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ. ಆದ್ರೆ ಅಂತರ ಕಡಿಮೆಯಾಗಬಹುದು. ಜೆಡಿಎಸ್ ವಿಪರೀತ ಹಣ ಹಂಚಿದ್ರು. ಹಣದಿಂದಲೇ ಚುನಾವಣೆ ಗೆಲ್ಲುತ್ತೇವೆ ಎಂದು ಅವರು ಅಂದ್ಕೊಂಡಿದ್ದಾರೆ ಅದು ಸಾಧ್ಯವಿಲ್ಲ. ಅವರ ಹಣದಿಂದ ನನ್ನ ಗೆಲುವಿನ ಅಂತರ ಕಡಿಮೆಯಾಗಬಹುದು ಅಷ್ಟೇ ಅಂದ್ರು.

    ಒಟ್ಟಿನಲ್ಲಿ ಎಲೆಕ್ಷನ್ ಅಖಾಡದ ಕಾರ್ಯ ಮುಗಿಸಿ ಸಿಎಂ ಸಿದ್ದರಾಮಯ್ಯ ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಶನಿವಾರ ವೋಟ್ ಮಾಡಿದ ಬಳಿಕ ಮೈಸೂರಿನ ನಿವಾಸದಲ್ಲಿ ರಿಲ್ಯಾಕ್ಸ್ ಮೂಡ್‍ನಲ್ಲಿರುವ ಸಿಎಂ, ಟ್ವೀಟ್ ಮೇಲೆ ಟ್ವೀಟ್ ಮಾಡ್ತಿದ್ದಾರೆ. ಬೆಂಬಲಿಗರೇ, ಕಾರ್ಯಕರ್ತರೇ, ಹಿತೈಷಿಗಳೇ ನಿರಾಳರಾಗಿರಿ. ನಿಮಗೆ ಇನ್ನೆರಡು ದಿನಗಳ ಕಾಲ ಚುನಾವಣೋತ್ತರ ಸಮೀಕ್ಷೆ ಮನೋರಂಜನೆ ನೀಡಲಿದೆ. ಎಕ್ಸಿಟ್ ಪೋಲ್‍ಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.. ಗೆಲ್ಲೋದು ನಾವೇ. ವೀಕೆಂಡ್‍ನ್ನು ಎಂಜಾಯ್ ಮಾಡಿ ಎಂದು ಟ್ವಿಟ್ಟರ್‍ನಲ್ಲಿ ಸಿಎಂ ಸಿದ್ದರಾಮಯ್ಯ ಸಂದೇಶ ನೀಡಿದ್ದಾರೆ. ಇದರೊಂದಿಗೆ 6+4+2= 4 ಅಂತ ಮಾರ್ಮಿಕವಾಗಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಕಾಂಗ್ರೆಸ್ ದಲಿತರನ್ನು ಕಡೆಗಣಿಸುತ್ತಿದೆ. ಈ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿತ್ತು ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ಬೆಂಗಳೂರಿನ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಮೂವರು ಒಟ್ಟಿಗೆ ಪ್ರಚಾರ ನಡೆಸಲಿ ನೋಡೋಣ ಎಂದು ಸವಾಲು ಎಸೆದಿದ್ದರು. ಮತಗಟ್ಟೆ ಸಮೀಕ್ಷೆಯಲ್ಲಿ ಕೆಲವು ಈ ಬಾರಿ ರಾಜ್ಯದ ಅತಂತ್ರ ಪರಿಸ್ಥಿತಿ ನಿರ್ಮಾಣವವಾಗಲಿದೆ ಎಂದು ಭವಿಷ್ಯ ನುಡಿದ ಬೆನ್ನಲ್ಲೇ ಸಿಎಂ ದಲಿತ ಸಿಎಂ ವಿಚಾರದ ಬಗ್ಗೆ ತಮ್ಮ ನಿಲುವನ್ನು ತಿಳಿಸಿದ್ದು ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    https://www.youtube.com/watch?v=h_B_PDUG2Yk

    https://www.youtube.com/watch?v=pFR9WyP41KU