Tag: highcommand

  • ಸಿದ್ದರಾಮಯ್ಯಗೆ ಇಂದು ಹೈಕಮಾಂಡ್ ಶಾಕ್

    ಸಿದ್ದರಾಮಯ್ಯಗೆ ಇಂದು ಹೈಕಮಾಂಡ್ ಶಾಕ್

    ಬೆಂಗಳೂರು: ವಿಪಕ್ಷ ನಾಯಕ ಹಾಗೂ ಸಿಎಲ್‍ಪಿ ನಾಯಕನ ಸ್ಥಾನಕ್ಕೆ ಇಂದು ಅಧಿಕೃತವಾಗಿ ಹೆಸರು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಆದರೆ ರಾಜ್ಯ ಕಾಂಗ್ರೆಸ್ ಪಾಲಿಗೆ ನಾನೇ ಪ್ರಶ್ನಾತೀತ ನಾಯಕ ಅಂತ ಕಳೆದ 11 ವರ್ಷ ಅಧಿಕಾರ ಅನುಭವಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇಂದು ಶಾಕ್ ಟ್ರೀಟ್‍ಮೆಂಟ್ ಗ್ಯಾರಂಟಿ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.

    ವಿರೋಧ ಪಕ್ಷ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಎರಡೂ ಸ್ಥಾನ ಬೇರೆ ಮಾಡಬೇಡಿ ಎಂದಿದ್ದ ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ ಕೊಡೋದು ಗ್ಯಾರಂಟಿಯಾಗಿದೆ. ವಿರೋಧ ಪಕ್ಷದ ನಾಯಕನ ಸ್ಥಾನ ಸಿದ್ದರಾಮಯ್ಯಗೆ ನೀಡಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸ್ಥಾನ ಬೇರೆಯವರಿಗೆ ನೀಡುವುದು ಬಹುತೇಕ ಖಚಿತವಾಗಿದೆ.

    ವಿರೋಧ ಪಕ್ಷದ ನಾಯಕರೇ ಬೇರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೇ ಬೇರೆ ಎಂದು ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದರೆ ಯಾವುದೇ ಅನುಮಾನ ಬೇಡ. ಸಿದ್ದರಾಮಯ್ಯಜೀ ನಿಮಗೆ ಗೌರವದ ವಿದಾಯಕ್ಕೆ ಇದು ಸೂಕ್ತ ಸಮಯ ಅಂತ ಸ್ವತಃ ಹೈಕಮಾಂಡ್ ಸಿದ್ದರಾಮಯ್ಯಗೆ ಪರೋಕ್ಷ ಸಂದೇಶ ರವಾನಿಸಿದೆ. ಈ ಮೂಲಕ ಕಳೆದ 11 ವರ್ಷದ ಸಿದ್ದರಾಮಯ್ಯರ ಏಕಮೇವ ಚಕ್ರಾಧಿಪತ್ಯಕ್ಕೆ ಇದು ಕೈ ಹೈಕಮಾಂಡ್ ನೀಡುವ ರೆಡ್ ಸಿಗ್ನಲ್ ಅನ್ನೋದು ಸ್ಪಷ್ಟವಾಗಿದೆ.

  • ಡಿಕೆಶಿ ದೆಹಲಿ ಪ್ರವಾಸ ದಿಢೀರ್ ರದ್ದು

    ಡಿಕೆಶಿ ದೆಹಲಿ ಪ್ರವಾಸ ದಿಢೀರ್ ರದ್ದು

    ಬೆಂಗಳೂರು: ಹೈಕಮಾಂಡ್ ಭೇಟಿಗೆ ಇಂದು ದೆಹಲಿಗೆ ಹೋಗಬೇಕಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಮ್ಮ ದೆಹಲಿ ಪ್ರವಾಸವನ್ನು ದಿಢೀರ್ ರದ್ದು ಮಾಡಿದ್ದಾರೆ.

    ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಹುತೇಕ ಡಿ.ಕೆ ಶಿವಕುಮಾರ್ ಹೆಸರು ಅಂತಿಮವಾಗಿದೆ. ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಆ ವಿಷಯದಲ್ಲಿ ಹೈಕಮಾಂಡ್ ನಿರ್ಧಾರ ಸ್ಪಷ್ಟ. ಅದಕ್ಕಾಗಿ ದೆಹಲಿಗೆ ಬರುವುದು ಬೇಡ ಎಂದು ಎಐಸಿಸಿ ಹಿರಿಯ ನಾಯಕರೊಬ್ಬರು ಡಿಕೆಶಿಗೆ ಸ್ಪಷ್ಟ ಪಡಿಸಿದ್ದಾರೆ. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಡಿಕೆಶಿ ಹೈಕಮಾಂಡ್ ಭೇಟಿಗೆ ತೆರಳದಿರಲು ತೀರ್ಮಾನಿಸಿ ಪ್ರವಾಸ ರದ್ದು ಮಾಡಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಮಾಡಲಿದ್ದಾರೆ. ಆದರೆ ವಿಪಕ್ಷ ನಾಯಕನ ಸ್ಥಾನ ಹಾಗೂ ಸಿಎಲ್‍ಪಿ ನಾಯಕನ ಸ್ಥಾನದ ಬಗ್ಗೆಯಷ್ಟೇ ಸಿದ್ದರಾಮಯ್ಯ ಜೊತೆ ಹೈಕಮಾಂಡ್ ಚರ್ಚೆ ನಡೆಸಲಿದೆ.

    ನಾಳೆಯಿಂದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ 10 ದಿನಗಳ ಕಾಲ ಇಟಲಿ ಪ್ರವಾಸ ಹಿನ್ನೆಲೆಯಲ್ಲಿ ಎಲ್ಲಾ ಸ್ಥಾನಮಾನಗಳ ಘೋಷಣೆ ತಡವಾಗುವ ಸಾಧ್ಯತೆ ಇದೆ. ಸೋನಿಯಾ ಗಾಂಧಿ ಇಟಲಿ ಪ್ರವಾಸ ಮುಗಿದ ನಂತರವೇ ವಿಪಕ್ಷ ನಾಯಕನ ಆಯ್ಕೆ, ಸಿಎಲ್‍ಪಿ ನಾಯಕನ ಆಯ್ಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎಲ್ಲ ಒಟ್ಟಿಗೆ ಪ್ರಕಟವಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಡಿಕೆಶಿ ಕೂಡ ದೆಹಲಿ ಫ್ಲೈಟ್ ಹತ್ತದೆ ಸೈಲೆಂಟಾಗಿದ್ದಾರೆ.

  • ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ- ಸಿದ್ದುಗೆ ಹೈಕಮಾಂಡ್ ಬುಲಾವ್

    ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ- ಸಿದ್ದುಗೆ ಹೈಕಮಾಂಡ್ ಬುಲಾವ್

    ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರೋ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆಯನ್ನ ಕಾಂಗ್ರೆಸ್ ಹೈಕಮಾಂಡ್ ಚುರುಕುಗೊಳಿಸಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ಸಂಬಂಧ ಮಾತುಕತೆ ನಡೆಸಲು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೈ ಹೈಕಮಾಂಡ್ ಬುಲಾವ್ ನೀಡಿದೆ. ಹೈಕಮಾಂಡ್ ಬುಲಾವ್ ಮೇರೆಗೆ ಸೋಮವಾರ ಸಂಜೆ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ.

    ಈಗಾಗಲೇ ತಮ್ಮ ಆಪ್ತ ಪರಮೇಶ್ವರ್ ರಿಂದ ಗುಪ್ತ ರಿಪೋರ್ಟ್ ತೆಗೆದುಕೊಂಡಿರೋ ಹೈಕಮಾಂಡ್, ಸಿದ್ದರಾಮಯ್ಯ ಜೊತೆ ಮತ್ತೊಂದು ಸುತ್ತಿನ ಮಾತುಕತೆಗೆ ಮುಂದಾಗಿದೆ. ಬಹುತೇಕ ವಿಪಕ್ಷ ನಾಯಕನ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಯೋ ಸಾಧ್ಯತೆ ಇದ್ದು, ಕೆಪಿಸಿಸಿ, ಶಾಸಕಾಂಗ ನಾಯಕನ ಸ್ಥಾನಕ್ಕೆ ಆಯ್ಕೆ ನಡೆಯೋ ಸಾಧ್ಯತೆ ಇದೆ. 3 ಕಾರ್ಯಾಧ್ಯಕ್ಷ ಸ್ಥಾನದ ದಾಳ ಉದುರಿಸೋ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ನೀಡಿರೋದು ಕುತೂಹಲಕ್ಕೆ ಕಾರಣವಾಗಿದೆ.

    ಸಿದ್ದರಾಮಯ್ಯ ಬಣದಲ್ಲಿ ಎಂಬಿ ಪಾಟೀಲ್, ಕೃಷ್ಣಭೈರೇಗೌಡ ಹೆಸರು ಜೋರಾಗಿ ಕೇಳಿ ಬರುತ್ತಿದೆ. ಮೂಲ ಕಾಂಗ್ರೆಸ್ಸಿಗರಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಮಾಜಿ ಕೇಂದ್ರ ಸಚಿವ ಮುನಿಯಪ್ಪ, ಹರಿಪ್ರಸಾದ್, ರಾಮಲಿಂಗಾರೆಡ್ಡಿ ಹೆಸರುಗಳು ಕೇಳಿ ಬರ್ತಿವೆ. ಇದರ ಜೊತೆ ನಾನು ಆಕಾಂಕ್ಷಿ ಅನ್ನೋ ಮೂಲಕ ಸತೀಶ್ ಜಾರಕಿಹೋಳಿ ಹೊಸ ಗೇಮ್ ಸ್ಟಾರ್ಟ್ ಮಾಡಿದ್ದಾರೆ.

    ಒಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆಯಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿರೋ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎಂಬುದನ್ನು ಕಾದು ನೋಡಬೇಕು.

  • ಒಪ್ಪಂದದಂತೆ 12 ಸಚಿವ ಸ್ಥಾನ ಓಕೆ ಮಾಡ್ತೀವಿ ಅಷ್ಟೇ ಎಂದ ಬಿಜೆಪಿ ಹೈಕಮಾಂಡ್!

    ಒಪ್ಪಂದದಂತೆ 12 ಸಚಿವ ಸ್ಥಾನ ಓಕೆ ಮಾಡ್ತೀವಿ ಅಷ್ಟೇ ಎಂದ ಬಿಜೆಪಿ ಹೈಕಮಾಂಡ್!

    ಬೆಂಗಳೂರು: ಬಿಜೆಪಿ ಹೈಕಮಾಂಡ್, ಬಿಎಸ್‍ವೈ ನಡುವೆ ಒಪ್ಪಂದದ ಕಾದಾಟ ಜೋರಾಗಿದೆ. ಆಪರೇಷನ್ ಕಮಲದ ವೇಳೆ ನಡೆದ ಒಪ್ಪಂದಕ್ಕೆ ಬದ್ಧವಾಗಿರೋದಕ್ಕೆ ಹೈಕಮಾಂಡ್ ಹೇಳುತ್ತಿದೆ. ಹೈಕಮಾಂಡ್ ಒಪ್ಪಂದದ ಪಟ್ಟು ಯಡಿಯೂರಪ್ಪಗೆ ತಲೆನೋವು ತಂದಿರೋದು ಹೊಸ ವಿಚಾರವಾಗಿದೆ. ಗೆದ್ದ ಎಲ್ಲರನ್ನೂ ಸಚಿವರನ್ನಾಗಿ ಮಾಡಲು ಆಗಲ್ಲ. ಅವತ್ತಿನ ಒಪ್ಪಂದದಂತೆ ನಾವು, ನೀವು, ಅವರು ನಡೆದುಕೊಳ್ಳಬೇಕು ಅಂತ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪಗೆ ಸಂದೇಶ ರವಾನಿಸಿದೆ ಎನ್ನಲಾಗಿದೆ.

    ರೋಷನ್ ಬೇಗ್ ಹೊರತುಪಡಿಸಿ ಬಿಜೆಪಿ ಬೆಂಬಲಿಸಿದ 17 ಶಾಸಕರಲ್ಲಿ 12 ಶಾಸಕರಿಗೆ ಮಾತ್ರ ಸಚಿವ ಸ್ಥಾನ. ಇದು ಅವತ್ತಿನ ಆಪರೇಷನ್ ಕಮಲದ ವೇಳೆ ನಡೆದಿದ್ದ ಡೀಲ್ ಅನ್ನೋದು ಹೈಕಮಾಂಡ್ ವಾದವಂತೆ. ಈ ಡೀಲ್ ಪ್ರಕಾರ ಈಗಾಗಲೇ ಪಕ್ಷೇತರ ಶಾಸಕ ನಾಗೇಶ್ ಅವರನ್ನ ಮಂತ್ರಿ ಮಾಡಲಾಗಿದೆ. ಹಾಗಾಗಿ ಡೀಲ್ ಪ್ರಕಾರ ಬಾಕಿ ಉಳಿದಿರೋದು 11 ಸಚಿವ ಸ್ಥಾನ ಮಾತ್ರ. 11 ಸಚಿವ ಸ್ಥಾನಗಳಲ್ಲಿ ಮುನಿರತ್ನ, ಪ್ರತಾಪ್ ಗೌಡ ಪಾಟೀಲ್ ಅವರಿಗೆ 2 ಸಚಿವ ಸ್ಥಾನ ಮೀಸಲಿಡಬೇಕಾಗುತ್ತೆ. ಹಾಗಾಗಿ ಸದ್ಯ 9 ಸಚಿವ ಸ್ಥಾನ ಮಾತ್ರ ಗೆದ್ದು ಬಂದ ಶಾಸಕರಿಗ ಕೊಡುತ್ತೇವೆ ಅಂತ ಹೈಕಮಾಂಡ್ ದಾಳ ಉರುಳಿಸಿದೆ. ಇನ್ನು ಉಳಿಯುವ 5 ಸಚಿವ ಸ್ಥಾನವನ್ನು ಮೂಲ ಬಿಜೆಪಿ ಶಾಸಕರಿಗೆ ಕೊಡ್ತೀವಿ ಅನ್ನೋದು ಹೈಕಮಾಂಡ್ ಗೇಮ್ ಆಗಿದೆ.

    ಅಂದಹಾಗೆ ಅವತ್ತಿನ ಒಪ್ಪಂದ ಮುರಿಯಲು ಸಾಧ್ಯವಿಲ್ಲ ಎಂದಿರುವ ಹೈಕಮಾಂಡ್ ಬಿಜೆಪಿ ಹೈಕಮಾಂಡ್ ಡೀಲ್ ಪ್ರಸ್ತಾಪಕ್ಕೆ ಯಡಿಯೂರಪ್ಪ ಏನ್ ಹೇಳ್ತಾರೆ..? ಅನ್ನೋ ಕುತೂಹಲ ಹೆಚ್ಚಾಗಿದೆ. ದೆಹಲಿ ಭೇಟಿ ವೇಳೆ ಹೈಕಮಾಂಡ್ ಮುಂದೆ ಯಡಿಯೂರಪ್ಪ ಸೂತ್ರದ ರಹಸ್ಯ ಏನು ಅನ್ನೋದ್ರ ಮೇಲೆ ಬಿಜೆಪಿಗೆ ಬಂದ ಹಕ್ಕಿಗಳ ಭವಿಷ್ಯ ನಿಂತಿದೆ. ಮೂರ್ನಾಲ್ಕು ದಿನಗಳಲ್ಲಿ ಸಿಎಂ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಭೇಟಿ ಮಾಡುವ ಸಾಧ್ಯತೆ ಇದ್ದು, ಅಲ್ಲಿ ತನಕವೂ ಕಾಯಲು ಗೆದ್ದು ಬಂದ ಶಾಸಕರ ಟೀಂ ತೀರ್ಮಾನಿಸಿದೆ. ಗೆದ್ದ ಎಲ್ಲರಿಗೂ ಸಚಿವ ಸ್ಥಾನ ಕೊಡಬೇಕು, ಸೋತವರಿಗೂ ಸಚಿವ ಸ್ಥಾನ ಕೊಡಬೇಕು ಅನ್ನೋದು ವಲಸೆ ಟೀಂ ವಾದ. ಯಾರ ವಾದಕ್ಕೆ ಮನ್ನಣೆ ಸಿಗುತ್ತೆ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.

  • ನೀವುಗಳೇ ಕುಳಿತು ಮಾತನಾಡಿ ಆನಂತ್ರ ಇಲ್ಲಿಗೆ ಬನ್ನಿ ಎಂದ ಕೈ ಹೈಕಮಾಂಡ್!

    ನೀವುಗಳೇ ಕುಳಿತು ಮಾತನಾಡಿ ಆನಂತ್ರ ಇಲ್ಲಿಗೆ ಬನ್ನಿ ಎಂದ ಕೈ ಹೈಕಮಾಂಡ್!

    ಬೆಂಗಳೂರು: ಮೊದಲು ರಾಜ್ಯದಲ್ಲಿ ನೀವುಗಳು ಕುಳಿತು ಮಾತನಾಡಿ. ಆನಂತರ ದೆಹಲಿಗೆ ಬನ್ನಿ ಎಂದು ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಕೈ ನಾಯಕರಿಗೆ ಸೂಚಿಸಿದೆ.

    ಈ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ನಿವಾಸದಲ್ಲಿ ಇಂದು ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಯಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆ ಡಿ.ಕೆ ಶಿವಕುಮಾರ್ ಸೇರಿದಂತೆ ಒಟ್ಟು 21 ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

    ಸಂಜೆ 4 ಗಂಟೆಗೆ ಸದಾಶಿವ ನಗರದ ಪರಮೇಶ್ವರ್ ನಿವಾಸದಲ್ಲಿ ಹೈ ಕಮಾಂಡ್‍ನ ಸೂಚನೆ ಮೇರೆಗೆ ಸಭೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ, ಸಿಎಲ್‍ಪಿ ನಾಯಕ ಹಾಗೂ ವಿಪಕ್ಷ ನಾಯಕನ ಸ್ಥಾನಕ್ಕೆ ಇನ್ನೂ ಒಂದು ವಾರದಲ್ಲಿ ಆಯ್ಕೆ ನಡೆಯಲಿದೆ.

    ಅದಕ್ಕೆ ಪೂರ್ವ ಭಾವಿಯಾಗಿ ರಾಜ್ಯ ನಾಯಕರುಗಳು ಒಟ್ಟಾಗಿ ಕುಳಿತು ಒಮ್ಮತದ ತೀರ್ಮಾನದೊಂದಿಗೆ ದೆಹಲಿಗೆ ಬನ್ನಿ ಎಂದು ಹೈ ಕಮಾಂಡ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸಂಜೆ ಪರಮೇಶ್ವರ್ ನಿವಾಸದಲ್ಲಿ ಎಲ್ಲಾ ಹಿರಿಯ ನಾಯಕರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

  • ಮುಂದಿನ ವಾರ ಕಾಂಗ್ರೆಸ್ಸಿಗೆ ನಾಯಕತ್ವದ ನಿರ್ಧಾರ

    ಮುಂದಿನ ವಾರ ಕಾಂಗ್ರೆಸ್ಸಿಗೆ ನಾಯಕತ್ವದ ನಿರ್ಧಾರ

    ಬೆಂಗಳೂರು: ರಾಜ್ಯ ಕಾಂಗ್ರೆಸ್ಸಿಗೆ ಹೊಸ ನಾಯಕತ್ವದ ಪ್ರಕಟಣೆಗೆ ಮುಹೂರ್ತ ಫಿಕ್ಸ್ ಆಗಿದೆ. ರಾಜ್ಯ ಕೈ ಪಾಳಯಕ್ಕೆ ನೂತನ ನಾಯಕನ ಆಯ್ಕೆ ಪ್ರಕ್ರಿಯೆ ಬಹುತೇಕ ಮುಂದಿನ ವಾರದ ಆರಂಭದಲ್ಲಿಯೇ ಫಿಕ್ಸ್ ಆಗಲಿದೆ.

    ರಾಜ್ಯ ಕಾಂಗ್ರೆಸ್ ನಾಯಕರ ದಂಡು ಇನ್ನೆರಡು ದಿನದಲ್ಲಿ ದೆಹಲಿಗೆ ತಲುಪಲಿದೆ. ವಿಪಕ್ಷ ನಾಯಕನ ಸ್ಥಾನ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ (ಸಿಎಲ್ ಪಿ) ನಾಯಕನ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷನ ಆಯ್ಕೆ ಎಲ್ಲದಕ್ಕೂ ಒಟ್ಟಿಗೆ ಆಯ್ಕೆ ಪ್ರಕ್ರಿಯೆಯನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಲಿದೆ.

    ಬಹುತೇಕ ಮುಂದಿನ ಸೋಮವಾರ ಯಾವ ಯಾವ ಜವಾಬ್ದಾರಿ ಯಾರಿಗೆ ಎಂದು ಕಾಂಗ್ರೆಸ್ ಹೈಕಮಾಂಡ್ ನಿಂದ ಅಧಿಕೃತ ಘೋಷಣೆ ಸಾಧ್ಯತೆ. ಕೆಪಿಸಿಸಿಗೆ ಬಹುತೇಕ ಡಿ.ಕೆ ಶಿವಕುಮಾರ್ ಹೆಸರು ಅಂತಿಮವಾಗಿದೆ. ಆದರೂ ಸಿದ್ದರಾಮಯ್ಯ ಬಣ ಬೇರೆ ಬೇರೆ ಹೆಸರನ್ನ ಮುಂದಿಟ್ಟುಕೊಂಡು ಕೊನೆ ಗಳಿಗೆಯ ಲಾಬಿ ನಡೆಸುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಬೆಂಬಲಿಗರಿಂದ ಗೌರವ ವಿದಾಯದ ಅಸ್ತ್ರ

    ಇನ್ನೊಂದು ಕಡೆ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನ ಹಾಗೂ ಹಾಗೂ ಸಿಎಲ್ ಪಿ ನಾಯಕನ ಸ್ಥಾನ ಎರಡರಲ್ಲೂ ಮುಂದುವರಿಯುವ ಆಸಕ್ತಿ ತೋರಿದ್ದಾರೆ. ಆದರೆ ಹೈಕಮಾಂಡ್ ಎರಡರಲ್ಲಿ ಒಂದು ಸ್ಥಾನ ಮಾತ್ರ ನೀಡುವ ಸಾಧ್ಯತೆ ಹೆಚ್ಚಿದೆ. ಬಹುತೇಕ ಸಿಎಲ್ ಪಿ ಗೆ ಹೊಸ ನಾಯಕನ ನೇಮಕವಾಗುವ ಸಾಧ್ಯತೆಗಳಿವೆ.

    ಜನವರಿ 4 ರಿಂದ ರಾಜ್ಯದ ಬಹುತೇಕ ಕೈ ನಾಯಕರು ದೆಹಲಿ ಪ್ರವಾಸಕ್ಕೆ ತೀರ್ಮಾನಿಸಿದ್ದು, ಎಲ್ಲಾ ಬಣದವರು ಹೈ ಕಮಾಂಡ್ ಮುಂದೆ ಲಾಬಿ ಮಾಡಲು ಮುಂದಾಗಿದ್ದಾರೆ. ಆದರೆ ಗುಟ್ಟು ಬಿಟ್ಟು ಕೊಡದ ಹೈಕಮಾಂಡ್ ಜನವರಿ 6 ಅಥವಾ ಆನಂತರ ರಾಜ್ಯ ಕಾಂಗ್ರೆಸ್ಸಿನ ನೂತನ ಸಾರಥಿಗಳ ಹೆಸರು ಪ್ರಕಟಿಸುವ ಸಾಧ್ಯತೆ ಇದೆ.

  • ಸಿದ್ದರಾಮಯ್ಯ ಬೆಂಬಲಿಗರಿಂದ ಗೌರವ ವಿದಾಯದ ಅಸ್ತ್ರ

    ಸಿದ್ದರಾಮಯ್ಯ ಬೆಂಬಲಿಗರಿಂದ ಗೌರವ ವಿದಾಯದ ಅಸ್ತ್ರ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ(ಸಿಎಲ್‍ಪಿ) ಹಾಗೂ ವಿಪಕ್ಷ ನಾಯಕನ ಸ್ಥಾನದಲ್ಲಿ ಅವರನ್ನೇ ಮುಂದುವರಿಸುವಂತೆ ಹೈಕಮಾಂಡ್ ಮನವೊಲಿಕೆಗೆ ಸಿದ್ದರಾಮಯ್ಯ ಬೆಂಬಲಿಗರು ಜನವರಿ 4ರ ನಂತರ ದೆಹಲಿಗೆ ತೆರಳಲಿದ್ದಾರೆ. ಅಲ್ಲಿ ಹೈಕಮಾಂಡ್ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸುವ ಇಚ್ಚೆ ವ್ಯಕ್ತಪಡಿಸಿದರೆ ಗೌರವ ವಿದಾಯದ ಪ್ರಪೋಸಲ್ ಮುಂದಿಡಲು ಸಿದ್ದರಾಮಯ್ಯ ಬಣ ಮುಂದಾಗಿದೆ.

    ಕಳೆದ 11 ವರ್ಷದಿಂದ ರಾಜ್ಯದಲ್ಲಿ ಪಕ್ಷದ ಹಿತ ಕಾಯ್ದಿದ್ದಾರೆ. ಅವರಿಗೆ ಗೌರವದ ವಿದಾಯ ಬೇಕು ಅನ್ನೋದು ಈ ಹೊಸ ಅಸ್ತ್ರ. ಅಂದರೆ 73 ವರ್ಷದ ಸಿದ್ದರಾಮಯ್ಯಗೆ ಮುಂದಿನ ಮೂರೂವರೆ ವರ್ಷದ ನಂತರ 76 ವರ್ಷ ಕಳೆದಿರುತ್ತದೆ. ಆಗಿನ ರಾಜಕೀಯ ಪರಿಸ್ಥಿತಿ ಹೇಗಿರುತ್ತೆ ಅಂತ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಸಿಎಲ್ ಪಿ ಹಾಗೂ ವಿಪಕ್ಷ ನಾಯಕನ ಸ್ಥಾನ ಎರಡರಲ್ಲೂ ಮುಂದಿನ ಮೂರೂವರೆ ವರ್ಷಗಳ ಕಾಲ ಅವರನ್ನೇ ಮುಂದುವರಿಸಿ. ಆ ಮೂಲಕ ಸಿದ್ದರಾಮಯ್ಯರಂತ ವರ್ಚಸ್ವಿ ನಾಯಕನಿಗೆ ರಾಜಕಾರಣದಲ್ಲಿ ಗೌರವದ ವಿದಾಯವಾದರು ಸಿಗಲಿ ಅನ್ನೋದು ಸಿದ್ದರಾಮಯ್ಯ ಬೆಂಬಲಿಗರ ವಾದವಾಗಿದೆ.

    ಸಿದ್ದರಾಮಯ್ಯ ಬೆಂಬಲಿಗರ ಈ ಸೆಂಟಿಮೆಂಟ್ ಅಸ್ತ್ರಕ್ಕೆ ಕೈ ಹೈಕಮಾಂಡ್ ಮಣೆ ಹಾಕುತ್ತಾ?, ಅಥವಾ ಖಡಕ್ ನಿರ್ಧಾರ ಕೈಗೊಳ್ಳುತ್ತಾ ಅನ್ನೋದೇ ಸದ್ಯದ ಕುತೂಹಲವಾಗಿದೆ.

  • ಯಡಿಯೂರಪ್ಪಗೆ ನಾನು ಪೈಪೋಟಿ ಅಲ್ಲ: ಉಮೇಶ್ ಕತ್ತಿ

    ಯಡಿಯೂರಪ್ಪಗೆ ನಾನು ಪೈಪೋಟಿ ಅಲ್ಲ: ಉಮೇಶ್ ಕತ್ತಿ

    ನವದೆಹಲಿ: ಸಿಎಂ ಸ್ಥಾನಕ್ಕೆ ನಾನು ಅರ್ಹ ವ್ಯಕ್ತಿ, ಸಿಎಂ ಆಗಲು ಎಲ್ಲ ಕ್ವಾಲಿಫೈಗಳು ನನ್ನಲ್ಲಿದೆ. ಆದರೆ ನಾನು ಬಿ.ಎಸ್ ಯಡಿಯೂರಪ್ಪ ಅವರಿಗೆ ಪೈಪೋಟಿ ಅಲ್ಲ ಎಂದು ಶಾಸಕ ಉಮೇಶ್ ಕತ್ತಿ ಪ್ರತಿಕ್ರಿಯಿಸಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು, ಗ್ಯಾಸ್ ಕನೆಕ್ಷನ್ ಸಂಬಂಧ ದೆಹಲಿಗೆ ಬಂದಿದ್ದೇನೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭೇಟಿಯಾಗುತ್ತೇನೆ. ಕ್ಷೇತ್ರದ ಕೆಲವು ಕೆಲಸಗಳ ಬಗ್ಗೆ ಚರ್ಚೆ ಮಾಡಲಿದ್ದೇನೆ ಎಂದರು.

    ದೆಹಲಿಯಲ್ಲಿ ಪ್ರಹ್ಲಾದ್ ಜೋಶಿ ಬಿಟ್ಟು ಹೈಕಮಾಂಡ್ ಪೈಕಿ ಯಾರ ಜೊತೆಗೂ ಮಾತನಾಡಲ್ಲ. ನಾನು ಮಂತ್ರಿಗಿರಿ ಕೇಳ್ತಿಲ್ಲ, ಅದು ನನ್ನ ಹಕ್ಕು. ನನಗೆ ಸಚಿವ ಸ್ಥಾನ ನೀಡಿದರೆ ಒಳ್ಳೆಯ ಕೆಲಸ ಮಾಡುವೆ ಎಂದು ಸಿಎಂಗೆ ಗೊತ್ತಿದೆ. ಹೈಕಮಾಂಡ್‍ಗೂ ಮನವಿ ಮಾಡ್ತೇನೆ, ಸಚಿವ ಸ್ಥಾನ ಕೊಡದಿದ್ರೆ ಪಕ್ಷದ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡುತ್ತೇನೆ ಎಂದರು.

    ಸಿಎಂ ಸ್ಥಾನದ ಬಗ್ಗೆ ಮಾತನಾಡಿ, ನಾನು ಸಿಎಂ ಸ್ಥಾನಕ್ಕೆ ಅರ್ಹ ವ್ಯಕ್ತಿ, ಎಲ್ಲ ಕ್ವಾಲಿಫೈ ಇದೆ. 8 ಬಾರಿ ಶಾಸಕನಾಗಿದ್ದೇನೆ, ಮಂತ್ರಿಯಾಗಿ 13 ವರ್ಷ ಕೆಲಸ ಮಾಡಿದ ಅನುಭವ ಇದೆ. ಹಾಗಂತ ಮಾತ್ರಕ್ಕೆ ಯಡಿಯೂರಪ್ಪ ಅವರಿಗೆ ನಾನು ಪೈಪೋಟಿ ಅಲ್ಲ, ಮುಂದಿನ ದಿನಗಳಲ್ಲಿ ನಾನು ಸಿಎಂ ಆಗಬಹುದು ಎಂದರು.

    ಡಿಸಿಎಂ ಸಾಂವಿಧಾನಿಕ ಹುದ್ದೆ ಅಲ್ಲ ಅವರನ್ನು ಮುಂದುವರಿಸುವುದು ಬಿಡುವುದು ಹೈಕಮಾಂಡ್‍ಗೆ ಬಿಟ್ಟಿದ್ದು. ನಾನು ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿಲ್ಲ. ಅತಿ ಹೆಚ್ಚು ಶಾಸಕರು ಬೆಳಗಾವಿಯಲ್ಲಿದ್ದಾರೆ. ಹೆಚ್ಚು ಸಚಿವ ಸ್ಥಾನ ಕೊಟ್ಟರೇ ತಪ್ಪಿಲ್ಲ ಎಂದು ಬೆಳಗಾವಿಗೆ ಹೆಚ್ಚು ಸಚಿವ ಸ್ಥಾನ ನೀಡುವುದನ್ನು ಸಮರ್ಥಿಸಿಕೊಂಡರು.

  • ವಿಡಿಯೋ ಬಗ್ಗೆ ಸಂಪೂರ್ಣ ವರದಿ ಕೊಡಿ- ನಳಿನ್‌ಗೆ ಹೈಕಮಾಂಡ್ ಖಡಕ್ ಸೂಚನೆ

    ವಿಡಿಯೋ ಬಗ್ಗೆ ಸಂಪೂರ್ಣ ವರದಿ ಕೊಡಿ- ನಳಿನ್‌ಗೆ ಹೈಕಮಾಂಡ್ ಖಡಕ್ ಸೂಚನೆ

    ಬೆಂಗಳೂರು: ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಮುಗಿದಿದ್ದು, ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. ಈ ಹೊತ್ತಲ್ಲೇ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಯಡಿಯೂರಪ್ಪನವರು ಮಾತನಾಡಿರುವ ವಿಡಿಯೋ ಈಗ ಕಾಂಗ್ರೆಸ್‌ಗೆ ಬಹುದೊಡ್ಡ ಅಸ್ತ್ರ ಸಿಕ್ಕಂತಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

    ಪಕ್ಷದ ಸಭೆಯಲ್ಲಿ ಬಿಎಸ್‌ವೈ ಮಾತಾಡಿದ ವಿಡಿಯೋ ಮಾಡಿದವರು ಯಾರು? ವಿಡಿಯೋ ಮಾಡಿದ್ದಲ್ಲದೇ ಬಹಿರಂಗ ಮಾಡಲು ಅವರಿಗೆಷ್ಟು ಧೈರ್ಯ ಎಂದು ಹೈಕಮಾಂಡ್ ಪ್ರಶ್ನಿಸಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಅನರ್ಹರನ್ನ ಮುಂಬೈನಲ್ಲಿಟ್ಟಿದ್ದು ಶಾ – ಕಾಂಗ್ರೆಸ್‍ಗೆ ಸಿಕ್ತು ಯಡಿಯೂರಪ್ಪ ಆಡಿಯೋ ಅಸ್ತ್ರ

    ಪಕ್ಷದ ಶಿಸ್ತು ಅಂದ್ರೆ ಇದೇನಾ..? ವಿಡಿಯೋ ಬಹಿರಂಗ ಮಾಡಿದ್ಯಾರು, ಯಾಕೆ?, ವಿಡಿಯೋ ಮಾಡಿದವರ ಹಿಂದೆ ಯಾವ್ಯಾವ ಕಾಣದ ಕೈಗಳಿವೆ? ಯಡಿಯೂರಪ್ಪರನ್ನು ಗುರಿಯಾಗಿಸಿ ವಿಡಿಯೋ ಲೀಕ್ ಮಾಡಿದ್ದಾರಾ? ಇದರ ಹಿಂದೆ ಹೈಕಮಾಂಡ್‌ಗೆ ಕೆಟ್ಟ ಹೆಸರು ತರುವ ಉದ್ದೇಶ ಇದೆಯಾ? ಯೆ ಕ್ಯಾ ಹೋ ರಹಾ ಹೈ ಕರ್ನಾಟಕ್ ಕೆ ಬಿಜೆಪಿ ಮೆ, ಬತಾವೋ. ಹಂ ಯೆ ಕಾಂಗ್ರೆಸ್ ಲೋಗೋಂಕೋ ಕ್ಯಾ ಜವಾಬ್ ದೇನಾ ಹೈ ಬೋಲೋ ಎಂದು ಹೈಕಮಾಂಡ್ ನಳಿನ್ ಕುಮಾರ್ ಕಟೀಲ್‌ರನ್ನು ಹಿಂದಿಯಲ್ಲೇ ತರಾಟೆಗೆ ತೆಗೆದುಕೊಂಡಿದೆ.

    ಬಿಎಸ್‌ವೈ ವಿಡಿಯೋ ಬಗ್ಗೆ ಸಂಪೂರ್ಣ ವರದಿ ಕೊಡಿ. ಪಕ್ಷದ ವಲಯದಲ್ಲೂ ಆಂತರಿಕ ತನಿಖೆ ಆಗಬೇಕು ಎಂದು ನಳಿನ್ ಗೆ ಹೈಕಮಾಂಡ್ ತಾಕೀತು ಮಾಡಿದೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಬಿಎಸ್‍ವೈ ಆಡಿಯೋ ಅಸ್ತ್ರ – ಸುಪ್ರೀಂನಲ್ಲಿ ಏನಾಗಬಹುದು?

    ವಿಡಿಯೋದಲ್ಲಿ ಬಿಎಸ್‌ವೈ ಹೇಳಿದ್ದೇನು?
    ಯಾಕೋ ಇವತ್ತು ನೀವು ಮಾತಾಡಿದಂತ ಧಾಟಿ ಸರ್ಕಾರ ಉಳಿಸೋಕೆ ಇದೆ ಅಂತ ಅನ್ನಿಸುತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷರೇ ಮುಂದೆ ನಿಂತು 17 ಜನರು 2-3 ತಿಂಗಳು ಮುಂಬೈನಲ್ಲಿರಿಸಿದ್ದರು. ಅವರೆಲ್ಲರೂ ಕ್ಷೇತ್ರಕ್ಕೂ ಬರಲಿಲ್ಲ. ಹೆಂಡ್ತಿ ಮಕ್ಕಳ ಮುಖ ನೋಡಿರಲಿಲ್ಲ. 3-4 ವರ್ಷ ವಿಪಕ್ಷದಲ್ಲಿ ಇರಬೇಕಾದ ನಮ್ಮನ್ನ ಆಡಳಿತ ಪಕ್ಷಕ್ಕೆ ಬರುವಂತೆ ಮಾಡಿದರು. ನಿಮ್ಮ ಬಾಯಲ್ಲಿ ಅನರ್ಹ ಪರ ಗಟ್ಟಿಯಾಗಿ ನಿಂತುಕೊಳ್ಳುತ್ತೇವೆ ಅನ್ನೋ ಮಾತು ಬರಲಿಲ್ಲ. ಇದನ್ನ ನಾನು ಖಂಡಿತಾ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ಐ ಆಮ್ ಸಾರಿ. ನನಗೇನು ಸಿಎಂ ಗಿರಿ ಬೇಕಾಗಿರಲಿಲ್ಲ. ಈಗಾಗಲೇ 3-4 ಬಾರಿ ಸಿಎಂ ಆಗಿದ್ದೇನೆ. ದೊಡ್ಡತನ ಧಾರಾಳತನ, ವಾಸ್ತವ ಸ್ಥಿತಿಯನ್ನ ತಿಳಿಯದೇ ನೀವು ಮಾತಾಡಿದ್ದೀರಾ ಗೋಕಾಕ್ ಬಗ್ಗೆ ನೀವೇಕೆ ಮಾತಾಡಿಲ್ಲ? ಅದರಲ್ಲಿ ಅಂತಹ ವಿಶೇಷ ಏನಿದೆ..? ಅವರನ್ನೆಲ್ಲ ನಂಬಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತು ನಾನು ಅಪರಾಧ ಮಾಡಿದ್ದೇನೆ ಅಂತ ಈಗ ಅನ್ನಿಸುತ್ತಿದೆ ಎಂದು ಹುಬ್ಬಳ್ಳಿಯಲ್ಲಿ ನಡೆದ ಸಭೆಯ ವೇಳೆ ಬಿಎಸ್‌ವೈ ಹೇಳಿದ್ದರು. ಈ ವಿಡಿಯೋ ಇದೀಗ ಕಾಂಗ್ರೆಸ್ ಗೆ ಸಿಕ್ಕಿದ್ದು, ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕೈ ಸಿದ್ಧತೆ ನಡೆಸಿಕೊಂಡಿದೆ.

  • ಡಿಕೆಶಿ ಎಂಟ್ರಿಯಿಂದ ಎಲೆಕ್ಷನ್ ರಾಜಕೀಯದ ಸಮೀಕರಣಗಳೇ ಬದಲು!

    ಡಿಕೆಶಿ ಎಂಟ್ರಿಯಿಂದ ಎಲೆಕ್ಷನ್ ರಾಜಕೀಯದ ಸಮೀಕರಣಗಳೇ ಬದಲು!

    ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಅಕ್ರಮ ಹಣ ವರ್ಗಾವಣೆಯ ಆರೋಪದ ಮೇಲೆ ಜೈಲು ಸೇರಿ ನಂತರ ಜಾಮೀನಿನ ಮೇಲೆ ಹೊರಗಡೆ ಬಂದಿದ್ದು, ಇದೀಗ ಚುನಾವಣಾ ರಾಜಕೀಯದ ಸಮೀಕರಣಗಳೇ ಅದಲು-ಬದಲಾಗಿದೆ.

    ಉಪಸಮರದಲ್ಲಿ 15 ಕ್ಷೇತ್ರ ಗೆಲ್ಲಲು ಕಮಲ ಪಡೆ ರಣತಂತ್ರ ರೂಪಿಸಿತ್ತು. ಆದರೆ ಇದೀಗ ಡಿಕೆಶಿ ಕಂಬ್ಯಾಕ್ ಬಿಜೆಪಿ ನಾಯಕರ ನಿದ್ದೆ ಕೆಡಿಸಿದೆ. ಹೀಗಾಗಿ ಡಿಕೆಶಿ ಎಂಟ್ರಿ ಬೆನ್ನಲ್ಲೇ ಸ್ಟ್ರಾಟೆಜಿ ಚೇಂಜ್ ಮಾಡಲು ಬಿಜೆಪಿ ಮುಂದಾಗಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೊಸಕೋಟೆ, ಯಶವಂತಪುರ, ಕೆ.ಆರ್.ಪುರ, ಚಿಕ್ಕಬಳ್ಳಾಪುರ, ಗೋಕಾಕ್ ಈ ಪಂಚ ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಯನ್ನು ಕಾಂಗ್ರೆಸ್ ಹೈಕಮಾಂಡ್ ಡಿಕೆಶಿಗೆ ನೀಡಿದೆ. ಹೀಗಾಗಿ ಈ ಐದು ಕ್ಷೇತ್ರಗಳ ಮೇಲೆ ಕಮಲ ಪಡೆ ವಿಶೇಷ ಗಮನ ಕೊಟ್ಟಿದ್ದು, ಡಿಕೆಶಿ ಅಸ್ತ್ರಗಳಿಗೆ ಪ್ರತಿ ಅಸ್ತ್ರ ರೂಪಿಸಲು ಬಿಜೆಪಿ ಮುಂದಾಗಿದೆ.

    ಈ ಪಂಚ ಕ್ಷೇತ್ರಗಳಲ್ಲಿ ಮಾತ್ರ ಅನರ್ಹರು ಯಾವುದೇ ಕಾರಣಕ್ಕೂ ಸೋಲಬಾರದು. ಬಿಜೆಪಿ ಹೈಕಮಾಂಡ್ ಫಿಕ್ಸ್ ಆಗಿದ್ದು, ಇದಕ್ಕಾಗಿ ಪಂಚತಂತ್ರ ಹೆಣಿಯಲು ಕಂಪ್ಲೀಟ್ ಪಿಕ್ಚರ್ ಕೇಳಿದೆ. ಇದರ ಜೊತೆಗೆ ಉಳಿದ 10 ಕ್ಷೇತ್ರಗಳ ಬಗ್ಗೆಯೂ ಮತ್ತೊಂದು ರಿಪೋರ್ಟ್ ಕೇಳಿದೆ. 10 ಕ್ಷೇತ್ರಗಳಲ್ಲಿ ಹೇಗಿದೆ ಪರಿಸ್ಥಿತಿ? ಕ್ಷೇತ್ರಗಳ ಜನರ ಮನಸ್ಥಿತಿ ಏನು? ಪಕ್ಷದ ಮುಖಂಡರು ಎಷ್ಟರ ಮಟ್ಟಿಗೆ ಅನರ್ಹರನ್ನು ಬೆಂಬಲಿಸ್ತಾರೆ? ಹೀಗೆ ಹಲವು ವಿವರ ಕುರಿತಂತೆ 2ನೇ ರಿಪೋರ್ಟನ್ನು ಬಿಜೆಪಿ ಹೈಕಮಾಂಡ್ ಕೇಳಿದೆ ಎನ್ನಲಾಗಿದೆ.