Tag: highcommand

  • ಬಜೆಟ್ ಬಳಿಕ ಸಿಎಂ ಸಿದ್ದರಾಮಯ್ಯ ಸಂದೇಶ – ಮಹಾಸ್ಫೋಟಕ‌ ತಿರುವು

    ಬಜೆಟ್ ಬಳಿಕ ಸಿಎಂ ಸಿದ್ದರಾಮಯ್ಯ ಸಂದೇಶ – ಮಹಾಸ್ಫೋಟಕ‌ ತಿರುವು

    ಬೆಂಗಳೂರು: ರಾಜ್ಯ ಬಜೆಟ್ ಬಳಿಕ‌ ಸಿಎಂ ಸಿದ್ದರಾಮಯ್ಯ (CM Siddaramaiah) ರಾಜಕೀಯ ದಾಳ ಉರುಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. 16ನೇ ದಾಖಲೆ ಬಜೆಟ್ (Budget) ಮಂಡನೆ ಬಳಿಕ ಪೊಲಿಟಿಕಲ್ ಟ್ವಿಸ್ಟ್ ಸಿಗುವ ಲೆಕ್ಕಚಾರಗಳು ಗರಿಗೆದರಲಿವೆ.

    ಪವರ್ ಶೇರ್ ವಿಚಾರವಾಗಿ ಯಾವುದೇ ಸ್ಪಷ್ಟತೆ ಸಿಗದೇ ಕಾಂಗ್ರೆಸ್ (Congress) ಒಳಗಿನ ವಾರ್ ನಿಲ್ಲುತ್ತಿಲ್ಲ. ಯಾರಿಗೆ ಹೇಳಬೇಕು? ಯಾರನ್ನ ಸಮಾಧಾನಪಡಿಸಬೇಕು ಎಂಬ ಗೊಂದಲದಲ್ಲಿ ಕಾಂಗ್ರೆಸ್ ಹೈಕಮಾಂಡ್ (High Command) ಇದೆ. ಹಾಗಾಗಿ ಹೈಕಮಾಂಡ್ ಧರ್ಮಸಂಕಟಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಪರಿಹಾರ ಮಾರ್ಗ ತೋರಿಸುವ ಬಗ್ಗೆ ಕುತೂಹಲ ಇದೆ. ಇದನ್ನೂ ಓದಿ: ಅನ್ನಭಾಗ್ಯ ದುಡ್ಡು ಇಲ್ಲ, ಗೃಹಲಕ್ಷ್ಮಿಯೂ ಇಲ್ಲ – ಗ್ಯಾರಂಟಿಗೆ ʼಗ್ಯಾರಂಟಿʼ ಇಲ್ಲ!

     

    ಸದ್ಯ ಸಿಎಂ ಸಿದ್ದರಾಮಯ್ಯ ಬಜೆಟ್ ಸಿದ್ಧತಾ ಸಭೆಗಳಲ್ಲಿ ಬ್ಯುಸಿ ಇದ್ದಾರೆ. ದಾಖಲೆಯ 16ನೇ ಬಜೆಟ್ ಮಂಡನೆ ಬಳಿಕ ಪೊಲಿಟಿಕಲ್ ಗೇಮ್ ಚೇಂಜ್ ಗೆ ಮುಂದಾಗುವ ಸಾಧ್ಯತೆ ಇದೆ. ದೇವರಾಜ ಅರಸು ಅವರ ದಾಖಲೆ ಬ್ರೇಕ್ ಮಾಡಿ ಹೊಸ ದಾಖಲೆ ಬರೆಯವ ಉತ್ಸಾಹದಲ್ಲಿರುವ ಸಿಎಂ ಸಿದ್ದರಾಮಯ್ಯ, ದಾಖಲೆ ಬಳಿಕ‌ ಮುಂದೇನು ಎಂಬ ಬಗ್ಗೆ ಸೂಕ್ಷ್ಮವಾಗಿ ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡುವ ಸಾಧ್ಯತೆ ಬಗ್ಗೆ ಸಿದ್ದು ಆಪ್ತ ವಲಯದಲ್ಲಿ ಚರ್ಚೆ ನಡೆದಿದೆ. ಇದನ್ನೂ ಓದಿ:ಮೂವರನ್ನು ಕೊಲೆ ಮಾಡಿದ್ದೇನೆ, ನಾನು ಸಾಯ್ತಿನಿ – ಅಮೆರಿಕದಲ್ಲಿರುವ ಅಣ್ಣನಿಗೆ ಫೋನ್‌ ಮಾಡಿ ಹೇಳಿದ್ದ ಚೇತನ್‌

    ರೆಕಾರ್ಡ್ ಎಂಬ ಚೆಕ್ ಮೇಟ್ ಸುತ್ತ ಅನುಮಾನದ ಹುತ್ತ ಹೆಚ್ಚಾಗಿದ್ದು,ಹೈಕಮಾಂಡ್ ನಾಜೂಕಾಗಿ ಬಗೆಹರಿಸುತ್ತಾ ಎಂಬ ಪ್ರಶ್ನೆ ಎದ್ದಿದೆ. ಸಿದ್ದರಾಮಯ್ಯ ಆ ಸಂದೇಶದಿಂದ ರಾಜಕೀಯ ದಿಕ್ಕು ಬದಲಾಗುತ್ತಾ? ಯಾರಿಗೆ ಲಕ್? ಯಾರಿಗೆ ಶಾಕ್? ಹೈಕಮಾಂಡ್‌ಗೆ ಸ್ಪಷ್ಟನೆ ನೀಡುತ್ತಾರಾ ಸಿಎಂ ಸಿದ್ದರಾಮಯ್ಯ ಎಂಬ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಿದೆ.

     

  • ನನ್ನ ನೇತೃತ್ವದಲ್ಲಿ ಸಚಿವರ ನಿಯೋಗ ಹೈಕಮಾಂಡ್ ಭೇಟಿ ಸುದ್ದಿ ಸುಳ್ಳು: ಪರಮೇಶ್ವರ್

    ನನ್ನ ನೇತೃತ್ವದಲ್ಲಿ ಸಚಿವರ ನಿಯೋಗ ಹೈಕಮಾಂಡ್ ಭೇಟಿ ಸುದ್ದಿ ಸುಳ್ಳು: ಪರಮೇಶ್ವರ್

    ಬೆಂಗಳೂರು: ನನ್ನ ನೇತೃತ್ವದಲ್ಲಿ ಹೈಕಮಾಂಡ್ ನಾಯಕರನ್ನು (Highcommand Leaders) ಸಚಿವರ ನಿಯೋಗ ಭೇಟಿ ಮಾಡುತ್ತಾರೆ ಎಂಬ ಸುದ್ದಿ ಸುಳ್ಳು ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ನನಗೆ ಈ ಬಗ್ಗೆ ಗೊತ್ತಿಲ್ಲ. ಯಾರು ಇಂತಹ ಸುದ್ದಿ ಹುಟ್ಟುಹಾಕುತ್ತಾರೆ ಎಂದು ಗೊತ್ತಾಗುತ್ತಿಲ್ಲ. ನನ್ನ ನಾಯಕತ್ವದಲ್ಲಿ ಸಚಿವರುಗಳು ದೆಹಲಿಗೆ (New Delhi) ಹೋಗಿ ಹೈಕಮಾಂಡ್ ಭೇಟಿ ಆಗುತ್ತಾರೆ ಎಂದು ಸುದ್ದಿ ಬರುತ್ತಿದೆ. ನನಗೇ ಅದು ಗೊತ್ತಿಲ್ಲ. ಅದು ಯಾರು ಇದನ್ನು ಹೇಳಿದ್ರೋ ಗೊತ್ತಿಲ್ಲ. ಅಂತಹ ಯಾವುದೇ ಬೆಳವಣಿಗೆ ಇಲ್ಲ. ನಾನು ಯಾವುದೇ ನಿಯೋಗವನ್ನು ಹೈಕಮಾಂಡ್ ಬಳಿ ತೆಗೆದುಕೊಂಡು ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ವಿದೇಶಿಯರನ್ನು ಗಡಿಪಾರು ಮಾಡದ ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ತರಾಟೆ

    ನನ್ನ ನೇತ್ರತ್ವದಲ್ಲಿ ಹೈಕಮಾಂಡ್ ಭೇಟಿ ಮಾಡುವಂತಹ ಯಾವುದೇ ರಾಜಕೀಯ ಬೆಳವಣಿಗೆಯೂ ಇಲ್ಲ. ನಾನು ಮೊನ್ನೆಯೇ ಹೇಳಿದ್ದೇನೆ. ಇಲಾಖೆ ಕೆಲಸ ಇದ್ದಾಗ ಹೋಗುತ್ತೇನೆ ಬಿಟ್ಟರೇ ಬೇರೆಬೇರೆ ವಿಚಾರಕ್ಕೆ ನಾನು ದೆಹಲಿಗೆ ಹೋಗಲ್ಲ. ದೆಹಲಿಗೆ ಹೋಗಬಾರದು ಅಂತ ಏನಿಲ್ಲ. ಬ್ಯಾನ್ ಆರ್ಡರ್ ಕೂಡಾ ಇಲ್ಲ. ದೆಹಲಿಗೆ ಹೋಗೋ ಅಗತ್ಯ ಇಲ್ಲ. ಅಗತ್ಯ ಬಿದ್ದಾಗ ಹೋಗುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪಗೆ ಪಕ್ಷದ ಸಿದ್ದಾಂತ ಗೊತ್ತಿಲ್ಲ – ವೆಂಕಟೇಶ್ ಮೌರ್ಯ

  • ಕೈ ನಾಯಕರಿಗೆ ರಾಮನ ಮೇಲಿನ ಭಕ್ತಿಗಿಂತ, ಹೈಕಮಾಂಡ್ ಮೇಲಿನ ಭಯವೇ ಜಾಸ್ತಿ: ಅಶೋಕ್‌ ವ್ಯಂಗ್ಯ

    ಕೈ ನಾಯಕರಿಗೆ ರಾಮನ ಮೇಲಿನ ಭಕ್ತಿಗಿಂತ, ಹೈಕಮಾಂಡ್ ಮೇಲಿನ ಭಯವೇ ಜಾಸ್ತಿ: ಅಶೋಕ್‌ ವ್ಯಂಗ್ಯ

    ಬೆಂಗಳೂರು: ಕಾಂಗ್ರೆಸ್ (Congress) ಪಕ್ಷದ ನಾಯಕರಿಗೆ ರಾಮನ (Rama) ಮೇಲಿನ ಭಕ್ತಿಗಿಂತ ಹೈಕಮಾಂಡ್ (High Command) ಮೇಲಿನ ಭಯವೇ ಜಾಸ್ತಿ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ (R Ashok) ಹೇಳಿದ್ದಾರೆ.

    ಹೈಕಮಾಂಡ್ ಹೇಳಿದರೆ ಮಾತ್ರ ರಾಮ ಮಂದಿರಕ್ಕೆ ಹೋಗುತ್ತೇವೆ ಎಂಬ ಗೃಹ ಸಚಿವ ಪರಮೇಶ್ವರ್‌ (Paraneshwar) ಹೇಳಿಕೆಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅವರು ರಾಮಮಂದಿರದ ಬಗ್ಗೆ ಒಳ್ಳೆಯ ಮಾತನಾಡದಿದ್ದರೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗುವ ಭಯ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕಲ್ಲಿದ್ದಲು ಅನೀಲಿಕರಣ ಯೋಜನೆ ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಮಂಡನೆ – ಪ್ರಹ್ಲಾದ್‌ ಜೋಶಿ

    ರಾಮಮಂದಿರದ ಬಗ್ಗೆ ಒಳ್ಳೆಯ ಮಾತಾಡಿದರೆ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಕುರ್ಚಿಗೆ ಕುತ್ತು ಬರುವ ಭಯ. ಒಟ್ಟಿನಲ್ಲಿ ಎಡಬಿಡಂಗಿ ಕಾಂಗ್ರೆಸ್‌ ನಾಯಕರ ಪಾಡು ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ಅಪಹರಣಕಾರರೆಂದು ಸಾಧುಗಳಿಗೆ ಹಿಗ್ಗಾಮುಗ್ಗ ಥಳಿತ – ಪಶ್ಚಿಮ ಬಂಗಾಳದ 12 ಮಂದಿ ಅರೆಸ್ಟ್‌

     

    ಪರಮೇಶ್ವರ್‌ ಹೇಳಿದ್ದೇನು?
    ಹೈಕಮಾಂಡ್ ಈಗಾಗಲೇ ರಾಮಮಂದಿರ ಕಾರ್ಯಕ್ರಮಕ್ಕೆ ಹೋಗಬಾರದು ಎಂಬ ನಿಲುವು ತೆಗೆದುಕೊಂಡಿದೆ. ಒಂದು ವೇಳೆ ಜನವರಿ 22 ನಂತರ ಹೋಗುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಿದರೆ ನಾವು ಹೋಗುತ್ತೇವೆ.

    ಎಲ್ಲವನ್ನೂ ನಮ್ಮ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇವೆ. ನಮ್ಮದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತಾರೋ ಅದರಂತೆ ನಡೆಯಬೇಕು. ಅವರು ಹೋಗುವುದು ಬೇಡ ಎಂದು ಹೇಳಿದಾಗ ನಾವು ಅದರ ವಿರುದ್ದ ನಿಲುವು ‌ತೆಗೆದುಕೊಳ್ಳಲು ಆಗುವುದಿಲ್ಲ. ಹೈಕಮಾಂಡ್ ಹೇಳಿದರೆ ಮಾತ್ರ ಹೋಗುತ್ತೇವೆ ಎಂದು ಹೇಳಿದ್ದರು.

     

  • ಹೈಕಮಾಂಡ್ ಸಚಿವ ಸ್ಥಾನ ಬಿಟ್ಕೊಡಿ ಅಂದ್ರೆ ಬಿಟ್ಟು ಕೊಡ್ತೀನಿ: ಪರಮೇಶ್ವರ್

    ಹೈಕಮಾಂಡ್ ಸಚಿವ ಸ್ಥಾನ ಬಿಟ್ಕೊಡಿ ಅಂದ್ರೆ ಬಿಟ್ಟು ಕೊಡ್ತೀನಿ: ಪರಮೇಶ್ವರ್

    ಬೆಂಗಳೂರು: ಹೈಕಮಾಂಡ್ ಯಾರಿಗೆ ಸಚಿವ ಸ್ಥಾನ ಬಿಟ್ಟುಕೊಡಬೇಕು ಅನ್ನುತ್ತೋ ಅವರಿಗೆ ಬಿಟ್ಟು ಕೊಡುತ್ತೇನೆ. ಒಟ್ಟಿನಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ (G Parameshwar) ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ಬಿಜೆಪಿ (BJP) ನಾಯಕರೂ ನಮ್ಮ ಬಗ್ಗೆ ಮಾತ್ರ ಮಾತಾಡ್ತಾರೆ. ಅವರ ಪಕ್ಷದ ವಿಚಾರವಾಗಿ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಅವರಿಗೆ ನಮ್ಮ ಪಕ್ಷದ ಮೇಲೆ ಹೆಚ್ಚು ಆಸಕ್ತಿ ಇದ್ದಂತೆ ಇದೆ. ಅವರೆಲ್ಲ ನಮ್ಮ ಪಕ್ಷಕ್ಕೆ ಬರ್ತಾರೇನೋ?. ಅದಕ್ಕಾಗಿ ನಮ್ಮ ಪಕ್ಷದ ಬಗ್ಗೆ ಹೆಚ್ಚು ಚರ್ಚೆ ನಡೆಸ್ತಿದ್ದಾರೇನೋ ಎಂದು ಪ್ರಶ್ನಿಸಿದರು.

    ಕಾಂಗ್ರೆಸ್‍ನಲ್ಲಿ ಇನ್ನೆರಡು ಡಿಸಿಎಂ ಸ್ಥಾನಗಳ ಸೃಷ್ಟಿಗೆ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೂರು ಡಿಸಿಎಂ ಚರ್ಚೆ ಹಳೇದಾಯ್ತು ಅನ್ಕೊಂಡಿದ್ದೆ. ಯಾರಿಗೆ ಯಾವ ಹುದ್ದೆ ಕೊಡಬೇಕು ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಯಾವ ಸಂದರ್ಭಸಲ್ಲಿ ಹುದ್ದೆ ಕೊಡಬೇಕು ಅಂತ ಹೈಕಮಾಂಡ್ ತೀರ್ಮಾನ ತಗೊಳ್ಳುತ್ತೆ ಎಂದು ತಿಳಿಸಿದರು.

    ಇದೇ ವೇಳೆ ಮಂತ್ರಿ ಸ್ಥಾನಕ್ಕೆ ಹಲವು ಶಾಸಕರ ಆಗ್ರಹ ವಿಚಾರದ ಕುರಿತು ಮಾತನಾಡಿ, ಎಲ್ಲರೂ ಮಂತ್ರಿ ಆಗೋದು ಒಳ್ಳೆಯದೇ. ಹೈಕಮಾಂಡ್ ನವ್ರೇ ಇದರ ಬಗ್ಗೆ ನಿರ್ಧಾರ ಮಾಡುತ್ತೆ. ಹೈಕಮಾಂಡ್ ಯಾರಿಗೆ ಸಚಿವ ಸ್ಥಾನ ಬಿಟ್ಕೊಡಿ ಅಂದ್ರೂ ಬಿಟ್ಕೊಡ್ತೇನೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಅಂದ್ರು. ಇದನ್ನೂ ಓದಿ: ದೇಶದ ಬಡವರ ಆರಾಧ್ಯ ದೈವ ಆಗಿದ್ರು ಇಂದಿರಾಗಾಂಧಿ: ಸಿದ್ದರಾಮಯ್ಯ

    ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲು ಹೋರಾಟ, ಗಡಿಯಲ್ಲಿ ಆತಂಕ ವಿಚಾರದ ಸಂಬಂಧ, ಮಹಾರಾಷ್ಟ್ರ ಗಡಿಯಲ್ಲಿ ಭದ್ರತೆ ಹೆಚ್ಚಳ ಮಾಡಿದ್ದೇವೆ. ಎಲ್ಲೆಲ್ಲಿ ಸೂಕ್ಷ್ಮ ವಾತಾವರಣ ಇದೆಯೋ ಅಲ್ಲಿ ಕೆಎಸ್‍ಆರ್‍ಪಿ ತುಕಡಿ ನಿಯೋಜನೆ ಮಾಡಿದ್ದೇವೆ. ಭದ್ರತಾ ವ್ಯವಸ್ಥೆ ಹೆಚ್ಚಳ ಮಾಡಿದ್ದೇವೆ. ಬೆಳಗಾವಿಯಲ್ಲಿ ಎಂಇಎಸ್ ಕೂಡ ಕರಾಳ ದಿನ ಅಂತ ಮಾಡುತ್ತಿದೆ. ಹಾಗೇನಾದ್ರೂ ಮಾಡಿದ್ರೆ ಅದನ್ನು ತಡೆಯುವ ಕೆಲಸ ಮಾಡ್ತೇವೆ ಎಂದು ಹೇಳಿದರು.

    ಶಾಸಕರ ಹೇಳಿಕೆಗಳ ಬಗ್ಗೆ ಅಧ್ಯಕ್ಷರು ನೋಡಿಕೊಳ್ತಾರೆ. ಅಧ್ಯಕ್ಷರೇ ಅದನ್ನೆಲ್ಲ ನಿಯಂತ್ರಣ ಮಾಡ್ತಾರೆ. ಈಗಾಗಲೇ ಬಹಿರಂಗ ಹೇಳಿಕೆ ಕೊಡಬೇಡಿ ಅಂತ ಅಧ್ಯಕ್ಷರು ಸೂಚಿಸಿದ್ದಾರೆ. ರಮೇಶ್ ಜಾರಕಿಹೊಳಿ ಹೇಳಿಕೆಗಳಿಗೆ ಉತ್ತರ ಕೊಡಕ್ಕಾಗಲ್ಲ. ಪ್ರತಿಯೊಬ್ಬರಿಗೂ ಉತ್ತರ ಕೊಡ್ತಿದ್ರೆ ಕೊನೇ ಇರಲ್ಲ ಎಂದರು.

    ಯಾರೆಲ್ಲ ದುಬೈ ಹೋಗ್ತಾರೆ ಅಂತ ಗೊತ್ತಿಲ್ಲ, ನೋಡೋಣ. ಯಾಕೆ ಹೋಗ್ತಿದ್ದಾರೆ ಗೊತ್ತಿಲ್ಲ, ಸುತ್ತಾಡೋಕ್ಕೆ ಹೋಗ್ತಿದ್ದಾರೋ ಏನೋ. ಅಲ್ಲಿ ನಮ್ಮ ಕನ್ನಡ ಸಂಘಗಳಿವೆ, ಅವರೇನಾದರೂ ಕರೆದಿದ್ದಾರಾ ಇಲ್ವಾ ಅಂತ ನೋಡಬೇಕು ಎಂದು ಸತೀಶ್ ಜಾರಕಿಹೊಳಿ ಬಣದಿಂದ ದುಬೈ ಪ್ರವಾಸದ ಕುರಿತು ಪರಂ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮಾಡಿ- ಸಿದ್ದು ಆಪ್ತರಿಗೆ ಕಾಂಗ್ರೆಸ್ ಹೈಕಮಾಂಡ್ ವಾರ್ನಿಂಗ್

    ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮಾಡಿ- ಸಿದ್ದು ಆಪ್ತರಿಗೆ ಕಾಂಗ್ರೆಸ್ ಹೈಕಮಾಂಡ್ ವಾರ್ನಿಂಗ್

    ಬೆಂಗಳೂರು: ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಭರ್ಜರಿಯಾಗಿ ಸಿದ್ದರಾಮೋತ್ಸವ ನಡೆಸಲು ಮುಂದಾದ ಸಿದ್ದರಾಮಯ್ಯ ಬೆಂಬಲಿಗರಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ ನೀಡಿದೆ.

    ಕಾಂಗ್ರೆಸ್ ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇಲ್ಲಾ ಏನಿದ್ದರು ಪಕ್ಷದ ಪೂಜೆ ಆದ್ದರಿಂದ ಸಿದ್ದರಾಮೋತ್ಸವದಲ್ಲಿ ಪಕ್ಷದ ಸಹಭಾಗಿತ್ವ ಇರಬೇಕು ಎಂದು ಹೈಕಮಾಂಡ್ ಖಡಕ್ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ 75 ವರ್ಷಾಚರಣೆ ಮಾಡಲಾಗುತ್ತಿದೆ ಮಾಡಲಿ ಇದೇ ಮೊದಲು ಇದೇ ಕೊನೆ ಇನ್ನು ಮುಂದೆ ವ್ಯಕ್ತಿ ಆಧಾರಿತ ಕಾರ್ಯಕ್ರಮ ಇರಬಾರದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಇಂದಿನಿಂದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 198 ರೂ. ಇಳಿಕೆ

    ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಸಹಭಾಗಿತ್ವ ಇರಬೇಕು ಎಲ್ಲಕ್ಕಿಂತ ಪ್ರಮುಖವಾಗಿ ಈ ಸಮಾವೇಶದಿಂದ ಪಕ್ಷಕ್ಕೆ ಏನು ಲಾಭವಾಗಲಿದೆ ಎಂಬುದನ್ನ ಪಕ್ಷ ಗಮನಿಸಲಿದೆ ಎಂದು ವೇಣುಗೋಪಾಲ್ ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಹೈಕಮಾಂಡ್ ನಾಯಕರ ಈ ಮಾತು ಸಿದ್ದರಾಮಯ್ಯಗೆ ಇರುಸು ಮುರುಸು ಉಂಟು ಮಾಡಿದೆ ಎನ್ನಲಾಗುತ್ತಿದೆ. ಅಲ್ಲದೆ ಸಿದ್ದರಾಮೋತ್ಸವದ ಭರ್ಜರಿ ಸಿದ್ದತೆಯಲ್ಲಿದ್ದ ಸಿದ್ದರಾಮಯ್ಯ ಬೆಂಬಲಿಗರಿಗೂ ಹೈಕಮಾಂಡ್ ಈ ಸೂಚನೆ ನಿರಾಸೆ ಉಂಟು ಮಾಡಿದೆ ಎನ್ನಲಾಗುತ್ತಿದೆ.

    Live Tv

  • ‘ಪಂಚ’ ಫಲಿತಾಂಶದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಸಂಚಲನ- ಬಿಜೆಪಿಯಲ್ಲೂ ‘ಹೈ’ ಆಪರೇಷನ್..!

    ‘ಪಂಚ’ ಫಲಿತಾಂಶದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಸಂಚಲನ- ಬಿಜೆಪಿಯಲ್ಲೂ ‘ಹೈ’ ಆಪರೇಷನ್..!

    ಬೆಂಗಳೂರು: ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿದೆ. ರಾಜ್ಯ ಬಿಜೆಪಿಯಲ್ಲೂ ಹೈಕಮಾಂಡ್ ಆಪರೇಷನ್ ಮಾಡುವ ಸಾಧ್ಯಗಳಿವೆ.

    ಬಿಜೆಪಿಯ 2 ಮಹಾ ಟೀಂಗಳು ರಾಜ್ಯಕ್ಕೆ ಆಗಮಿಸಿವೆ. 18 ಸದಸ್ಯರನ್ನೊಳಗೊಂಡ ಮೋದಿ-ಶಾ ಜೋಡಿ ನಿಷ್ಠರ 2 ತಂಡ ಈಗಾಗಲೇ ರಾಜ್ಯಕ್ಕೆ ಬಂದಿದ್ದು, ಈ ತಂಡದ ಎಂಟ್ರಿಯಿಂದ ಬಿಜೆಪಿಯಲ್ಲಿ ಕುತೂಹಲ ಮೂಡಿದೆ. ಇದನ್ನೂ ಓದಿ: ರೇಣುಕಾಚಾರ್ಯ ಜೊತೆ ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿನಿಯರು..!

    18 ಜನರನ್ನೊಳಗೊಂಡ ಬಿಜೆಪಿಯ 2 ತಂಡಗಳು ರಾಜ್ಯಕ್ಕೆ ಆಗಮಿಸಿವೆ. ಈ ತಂಡ ಶಾಸಕರು, ಮುಖಂಡರು, ಸಂಘದ ಪ್ರಮುಖರನ್ನು ಭೇಟಿ ಆಗಲಿದೆ. ರಾಜ್ಯ ಸರ್ಕಾರದ ಕಾರ್ಯವೈಖರಿ ಏನು..? ಸರ್ಕಾರದಲ್ಲಿ ಯಾರು ಏನ್ ಮಾಡ್ತಿದ್ದಾರೆ..?, ಸಚಿವರ ಕಾರ್ಯ ನಿರ್ವಹಣೆ ಹೇಗಿದೆ..?, ಯಾವ ಇಲಾಖೆ ಮುಂದು..?, ಯಾವುದು ಹಿಂದೆ..?, ಸಚಿವರ ಸುತ್ತ ಇರುವ ಜನರ್ಯಾರು..? ಸಚಿವರ ಆಡಳಿತದ ಬಗ್ಗೆ ಜನರ ಅನಿಸಿಕೆ ಹೇಗಿದೆ..?, ಪಕ್ಷದ ಪದಾಧಿಕಾರಿಗಳು, ರಾಜ್ಯಾಧ್ಯಕ್ಷರ ಕಾರ್ಯವೈಖರಿ ಬಗ್ಗೆಯೂ ಮಾಹಿತಿ ಕಲೆ ಹಾಕಲಿದೆ.

    ಶೀಘ್ರದಲ್ಲೇ ತಂಡದಿಂದ ಹೈಕಮಾಂಡ್‍ಗೆ ಸಂಪೂರ್ಣ ವರದಿ ಸಲ್ಲಿಕೆಯಾಗಲಿದ್ದು, ಈ ತಂಡಗಳ ವರದಿ ಮೇಲೆ ರಾಜ್ಯದ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಇವನಿಂದ ನಾನೇನು ಕಲಿಯಬೇಕಾಗಿಲ್ಲ, ನನ್ನ ಸುದ್ದಿಗೆ ಇವನು ಬರಬೇಕಾಗಿಲ್ಲ – ಡಿ.ಕೆ.ಸುರೇಶ್‍ಗೆ ಏಕವಚನದಲ್ಲೇ ಹೆಚ್‍ಡಿಕೆ ವಾರ್ನಿಂಗ್

  • ರಾಜ್ಯದಲ್ಲಿ ಹೊಸ ಕ್ರಾಂತಿಗೆ ಬಿಜೆಪಿ ಹೈಕಮಾಂಡ್ ಸಿದ್ಧತೆ..?

    ರಾಜ್ಯದಲ್ಲಿ ಹೊಸ ಕ್ರಾಂತಿಗೆ ಬಿಜೆಪಿ ಹೈಕಮಾಂಡ್ ಸಿದ್ಧತೆ..?

    – ಬಿಎಸ್‍ವೈ ನಿರ್ಗಮನದ ಬಳಿಕ ಹೊಸ ಮುಖಗಳಿಗೆ ಮಣೆ..!

    ನವದೆಹಲಿ: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ತೆರೆಯ ಹಿಂದೆ ಸಿದ್ಧವಾಗುತ್ತಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ರಾಜ್ಯದಲ್ಲಿ ಹೊಸ ಕ್ರಾಂತಿಗೆ ಬಿಜೆಪಿ ಹೈಕಮಾಂಡ್ ಸಿದ್ಧತೆ ನಡೆಸುತ್ತಿದ್ದು, ಬಿಎಸ್‍ವೈ ರಾಜೀನಾಮೆಯ ಬೆನ್ನಲ್ಲೆ ಮಹತ್ವದ ಬೆಳವಣಿಗೆಗಳು ನಡೆಯಲಿವೆ. ಇದು ಕೆಲವರಿಗೆ ಖುಷಿ, ಹಲವರಿಗೆ ಹೈಕಮಾಂಡ್ ಶಾಕ್ ನೀಡುವ ಸಾಧ್ಯತೆ ಇದೆ.

    ಬಿಎಸ್‍ವೈಗೆ ಮಾತ್ರವಲ್ಲ ಸಚಿವರಿಗೂ ಶಾಕ್ ಕಾದಿದೆ ಎನ್ನಲಾಗಿದೆ. ಹಲವು ಸಚಿವರಿಗೆ ಕಾದಿದೆ ತಲೆತಂಡದ ಭೀತಿ ಎದುರಾಗಿದ್ದು, ‘ಮಿಷನ್ ಕ್ಲೀನ್’ ಲೆಕ್ಕಾಚಾರದಲ್ಲಿ ವರಿಷ್ಠರು ತಯಾರಿ ನಡೆಸಿದ್ದಾರೆ. ಬಿಎಸ್‍ವೈ ಜೊತೆ ಜೊತೆಗೆ ಕೆಲವು ಹಿರಿಯ ನಾಯಕರಿಗೆ ಕೊಕ್ ಸಾಧ್ಯತೆ ಇದ್ದು, ಸರ್ಕಾರದಿಂದ ಸಂಘಟನೆಗೆ ಶಿಫ್ಟ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಅದಕ್ಕಾಗಿ ಸೀಕ್ರೆಟ್ ಟೀಂ ಈಗಾಗಲೇ ಪಟ್ಟಿಯನ್ನೂ ಸಿದ್ಧ ಪಡಿಸಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ‘ನನ್ನವರೇ ನನಗೆ ಶತ್ರುವಾದ್ರು..’ – ಆಪ್ತರ ಬಳಿ ಬಿಎಸ್‍ವೈ ಭಾವುಕ..!

    ಬಿಜೆಪಿಯಿಂದ ಹೊಸ ಟೀಂ..?
    ವಿಧಾನಸಭೆ, ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ‘ಯಂಗ್ ಟೀಂ’ ಕಟ್ಟಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್ ಮಾಡಿಕೊಂಡಿದೆ. ಬಿಎಸ್‍ವೈ ನಿರ್ಗಮನದ ಬೆನ್ನಲ್ಲೇ ಹೊಸ ಮುಖಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಹಿರಿಯ ನಾಯಕರಿಗೆ ಸಂಘಟನೆ ಜವಾಬ್ದಾರಿ ನೀಡಿ 2ನೇ ಹಂತದ ನಾಯಕತ್ವಕ್ಕೆ ಸರ್ಕಾರದಲ್ಲಿ ಆದ್ಯತೆ ಸಿಗಲಿದೆ. ಇದನ್ನೂ ಓದಿ: ಹೈಕಮಾಂಡ್ ಕೈ ಸೇರಿದೆ ವರದಿ – ಜಾತಿ ಚೌಕಟ್ಟು ಮೀರುತ್ತಾ ಬಿಜೆಪಿ?

    ಈಗಾಗಲೇ ಹಲವು ಯುವ ಶಾಸಕರ ಮಾಹಿತಿ ಸಂಗ್ರಹ ಮಾಡಲಾಗಿದ್ದು, ಹೈಕಮಾಂಡ್ ತಂಡ ಜಾತಿ ಪ್ರಾದೇಶಿಕತೆವಾರು ಮಾಹಿತಿ ಸಂಗ್ರಹ ಮಾಡಿದೆ. ಯುವ ನಾಯಕರ ರಿಪೋರ್ಟ್ ಕಾರ್ಡ್ ಕುಡ ಈಗಾಗಲೇ ಹೈಕಮಾಂಡ್ ಅಂಗಳ ತಲುಪಿದೆ. ಹೊಸ ಟೀಂನಲ್ಲಿ ಡಜನ್‍ಗೂ ಹೆಚ್ಚು ಯುವ ನಾಯಕರಿಗೆ ಅವಕಾಶ ನೀಡುವ ಮೂಲಕ ಹೊಸ ಟೀಂನೊಂದಿಗೆ ಚುನಾವಣೆ ಎದುರಿಸಲು ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: ನನ್ನ ಪರವಾಗಿ ಯಾರೂ ಪ್ರತಿಭಟನೆಗೆ ಮುಂದಾಗಬಾರದು – ಬಿಎಸ್‍ವೈ ಮನವಿ

  • ಮಂತ್ರಿ ಸ್ಥಾನ ಹೋದರೆ ಗೂಟ ಹೋದ ಹಾಗೆ: ಕೆ.ಎಸ್ ಈಶ್ವರಪ್ಪ

    ಮಂತ್ರಿ ಸ್ಥಾನ ಹೋದರೆ ಗೂಟ ಹೋದ ಹಾಗೆ: ಕೆ.ಎಸ್ ಈಶ್ವರಪ್ಪ

    – ಕಟೀಲ್‍ರನ್ನು ಬಲಿಪಶು ಮಾಡಬೇಡಿ

    ಶಿವಮೊಗ್ಗ: ರಾಜಕಾರಣದಲ್ಲಿ ಯಾವುದೇ ಸ್ಥಾನದಲ್ಲಿ ಗೂಟ ಹೊಡೆದುಕೊಂಡು ಕೂರಬಾರದು. ನಾನು ಯಾವುದೇ ಸ್ಥಾನದಲ್ಲಿ ಗೂಟ ಹೊಡೆದುಕೊಂಡು ಕೂರುವವನಲ್ಲ. ನನ್ನ ಮಂತ್ರಿ ಸ್ಥಾನ ಹೋದರೆ, ಗೂಟ ಹೋಯಿತು ಎಂದುಕೊಳ್ಳುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

    ನಳಿನ್ ಕುಮಾರ್ ಕಟೀಲು ಆಡಿಯೋ ಬಹಿರಂಗ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾನು ಕಟ್ಟಾ ಬಿಜೆಪಿ ಕಾರ್ಯಕರ್ತ. ನಾನು ಆರ್.ಎಸ್.ಎಸ್ ನವನಾಗಿದ್ದು, ದೇಶ, ಸಮಾಜ ನನ್ನ ಮೊದಲ ಆದ್ಯತೆ ಎಂದು ಹೇಳಿದರು. ಇದನ್ನೂ ಓದಿ: Exclusive: ಜುಲೈ 26ಕ್ಕೆ ಸಿಎಂ ಯಡಿಯೂರಪ್ಪ ರಾಜೀನಾಮೆ ಸಾಧ್ಯತೆ – ರಾಜಾಹುಲಿಗೆ ಹೈಕಮಾಂಡ್ ಸೂಚನೆ!

    ಪಕ್ಷದ ಸಂಘಟನೆ, ಹಿರಿಯರು ಸರ್ಕಾರ ಏನು ಹೇಳಿದರೂ ಮಾಡುತ್ತೇನೆ. ನಾನು ಈ ಮಂತ್ರಿ ಸ್ಥಾನ ನಂಬಿಕೊಂಡು ಕೂತಿಲ್ಲ. ನಮ್ಮ ರಾಷ್ಟ್ರೀಯ ಮುಖಂಡರು, ಪಕ್ಷದ ಪದಾಧಿಕಾರಿಗಳು, ಯುವಕರಿಗೆ ಪ್ರಾಧಾನ್ಯತೆ ನೀಡಿದ್ದಾರೆ. ಆದರೆ ನಮ್ಮ ಅಧ್ಯಕ್ಷರ ಬಗ್ಗೆ ನಂಬಿಕೆ ಇದೆ. ಅವರು ಕೂಡ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಈಶ್ವರಪ್ಪ, ಜಗದೀಶ್ ಶೆಟ್ಟರ್ ಎರಡು ಕಣ್ಣುಗಳಿದ್ದಂತೆ: ನಳಿನ್ ಕುಮಾರ್ ಕಟೀಲ್

    ನಾನು ಅವರ ಮಾತನ್ನು ನಂಬುತ್ತೇನೆ. ಅವರು ತನಿಖೆಯಾಗಬೇಕೆಂದು ಸಿ.ಎಂಗೆ ಪತ್ರ ಬರೆದಿದ್ದಾರೆ. ಯಾರೋ ಹುಚ್ಚ ನಳಿನ್ ಕುಮಾರ್ ಕಟೀಲು ಅವರ ವಾಯ್ಸ್ ಅನ್ನು ಅನುಕರಣೆ ಮಾಡಿದ್ದಾನೆ. ಸ್ಪಷ್ಟನೆಗಾಗಿಯಷ್ಟೇ ಈ ವೈರಲ್ ಆಡಿಯೋ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

    ನನ್ನ ವಿರುದ್ಧ ಯಾವುದೇ ಷಡ್ಯಂತ್ರ ನಡೆದಿಲ್ಲ. ನಾನು ಪಕ್ಷದ ತೀರ್ಮಾನಕ್ಕೆ ಬದ್ಧ. ಈ ವಿಚಾರದಲ್ಲಿ ನಳಿನ್ ಕುಮಾರ್ ಅವರನ್ನು ಬಲಿಪಶು ಮಾಡುವುದು ಬೇಡ. ಯಾರೋ ಹುಚ್ಚ ಈ ರೀತಿ ಮಾತನಾಡಿದರೆ, ನಾನು ಅದಕ್ಕೆ ಉತ್ತರ ಕೊಡುತ್ತಾ ಕೂರಲ್ಲ ಎಂದರು. ಇದನ್ನೂ ಓದಿ: ಸಿಎಂ ರೇಸ್‍ನ ಅಂತಿಮ ಸ್ಪರ್ಧೆಯಲ್ಲಿ ಇಬ್ಬರು ನಾಯಕರು – ಯಾರಿಗೆ ಒಲಿಯುತ್ತೆ ಅದೃಷ್ಟ?

  • ಬಿಎಸ್‍ವೈಗೆ ಸಿಕ್ಕಿಲ್ಲ ಹೈಕಮಾಂಡ್ ಗ್ರೀನ್ ಸಿಗ್ನಲ್ – ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಡೌಟ್

    ಬಿಎಸ್‍ವೈಗೆ ಸಿಕ್ಕಿಲ್ಲ ಹೈಕಮಾಂಡ್ ಗ್ರೀನ್ ಸಿಗ್ನಲ್ – ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಡೌಟ್

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಸಿಎಂ ದೆಹಲಿ ಭೇಟಿ ಅಂತ್ಯವಾಗಿದೆ. ಆದರೆ ಸಂಪುಟ ಪುನಾರಚನೆಯೋ ಅಥವಾ ಸಂಪುಟ ವಿಸ್ತರಣೆಯೋ ಅನ್ನೋ ವಿಚಾರಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

    ಅಧಿವೇಶನಕ್ಕೆ ಮುನ್ನ ಸಂಪುಟ ವಿಸ್ತರಣೆಗೆ ಒಲವು ತೋರಿದ್ದ ಸಿಎಂಗೆ ಈ ಬೆಳವಣಿಗೆ ನಿರಾಸೆ ತಂದಿದೆ. ಭಾನುವಾರ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಶುಕ್ರವಾರ ರಾತ್ರಿಯಿಂದ ಸುದ್ದಿ ಹಬ್ಬಿತ್ತು. ಆದರೆ ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿಲ್ಲ. ಹೀಗಾಗಿ ಅಧಿವೇಶನ ಬಳಿಕ ಅಂದ್ರೆ ಅಕ್ಟೋಬರ್ 5ರ ಬಳಿಕ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆಯುವ ಸಂಭವ ಇದೆ.

    2+2 ಫಾರ್ಮುಲಾದಡಿ ಸಂಪುಟ ವಿಸ್ತರಣೆಗೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ರು. ಮೂಲಗಳ ಪ್ರಕಾರ ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್ ಸಂಪುಟ ಸೇರೋದು ಬಹುತೇಕ ಪಕ್ಕಾ ಆಗಿದೆ. ಈ ಇಬ್ಬರ ಸೇರ್ಪಡೆ ವಿಚಾರ ಬಿಟ್ಟರೆ ಸಂಪುಟ ಸೇರಲಿರುವ ಉಳಿದ ಇಬ್ಬರ ಪಟ್ಟಿಯನ್ನು ಹೈಕಮಾಂಡ್ ಫೈನಲ್ ಮಾಡಲಿದೆ. ಒಂದು ವೇಳೆ ಸಂಪುಟ ಪುನಾರಚನೆ ಮಾಡೋದಾದ್ರೆ 2+5 ಫಾರ್ಮುಲಾಗೆ ಹೈಕಮಾಂಡ್ ಒಲವು ತೋರಿಸಿದೆ. ಇಬ್ಬರು ವಲಸಿಗರು ಹಾಗೂ ಐವರು ಮೂಲ ಬಿಜೆಪಿಗರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಹೈಕಮಾಂಡ್ ಪ್ಲಾನ್ ಮಾಡ್ತಿದೆ.

    ದೆಹಲಿಯಲ್ಲಿ ಬೀಡುಬಿಟ್ಟು ಲಾಬಿ ಮಾಡ್ತಿರುವ ವಿಶ್ವನಾಥ್‍ಗೆ ಸಚಿವ ಸ್ಥಾನ ಬಹುತೇಕ ಅನುಮಾನ ಎನ್ನಲಾಗಿದೆ. ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಸಂಪುಟದ ಬಗ್ಗೆ ಜೆ.ಪಿ ನಡ್ಡಾ ಜೊತೆ ಚರ್ಚೆ ಮಾಡಿದ್ದೇನೆ. ಪ್ರಧಾನಿ ಜೊತೆ ಮಾತನಾಡಿ ತಿಳಿಸೋದಾಗಿ ಹೇಳಿದ್ದಾರೆ. ಹೈಕಮಾಂಡ್ ಸಂದೇಶಕ್ಕಾಗಿ ಕಾಯುತ್ತಿರೋದಾಗಿ ತಿಳಿಸಿದ್ರು.

    ಸಚಿವ ಸ್ಥಾನದ ಆಕಾಂಕ್ಷಿ ಸಿ.ಪಿ ಯೋಗೀಶ್ವರ್ ಮಾತನಾಡಿ, ಸಂಪುಟ ವಿಸ್ತರಣೆ ಕುರಿತು ನಿಖರ ಮಾಹಿತಿ ಇಲ್ಲ. ಯಾವಾಗ ಬೇಕಿದ್ರೂ ಸಂಪುಟ ವಿಸ್ತರಣೆ ಆಗಬಹುದು. ಪಕ್ಷ ಹಾಗೂ ಸಿಎಂ ತೀರ್ಮಾನಕ್ಕೆ ಬದ್ದ ಅಂದ್ರು. ರಾಜಕೀಯ ವಿರೋಧಿಗಳಾದ ಕುಮಾರಸ್ವಾಮಿ, ಡಿಕೆಶಿ, ನನಗೆ ಅವಕಾಶ ತಪ್ಪಿಸುವಷ್ಟು ಶಕ್ತರೇನಲ್ಲ ಅಂತ ಟಾಂಗ್ ನೀಡಿದರು.

  • ಕೈ ನಾಯಕರ ಕಚ್ಚಾಟಕ್ಕೆ ಬ್ರೇಕ್ ಹಾಕಲು ಸಮನ್ವಯ ಸಮಿತಿ ರಚನೆ?

    ಕೈ ನಾಯಕರ ಕಚ್ಚಾಟಕ್ಕೆ ಬ್ರೇಕ್ ಹಾಕಲು ಸಮನ್ವಯ ಸಮಿತಿ ರಚನೆ?

    ಬೆಂಗಳೂರು: ತಮ್ಮ ತಮ್ಮಲ್ಲಿಯೇ ಕಚ್ಚಾಟಕ್ಕೆ ಮುಂದಾದ ರಾಜ್ಯ ಕೈ ನಾಯಕರಿಗೆ ಬ್ರೇಕ್ ಹಾಕಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಆ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯಗೂ ಮೂಗುದಾರ ಹಾಕಲು ಹೈಕಮಾಂಡ್ ನಿರ್ಧಾರ ಮಾಡಿದೆ. ರಾಜ್ಯ ಕಾಂಗ್ರೆಸ್ಸಿನ ಸ್ಥಾನಮಾನಗಳ ಘೋಷಣೆ ಜೊತೆ ಜೊತೆಗೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಸಮನ್ವಯ ಸಮಿತಿ ರಚಿಸುವಂತಹ ಮಹತ್ವದ ನಿರ್ಧಾರವನ್ನು ಪ್ರಕಟಿಸಲು ಕಾಂಗ್ರೆಸ್ ಹೈ ಕಮಾಂಡ್ ಮುಂದಾಗಿದೆ. ಆ ಅಸ್ತ್ರದ ಮೂಲಕ ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರ ಮೇಲೆ ಹಿಡಿತ ಸಾಧಿಸಲು ಹೈಕಮಾಂಡ್ ಪ್ಲಾನ್ ಮಾಡಿದೆ.

    ಮಾಜಿ ಸಿಎಂ ಸಿದ್ದರಾಮಯ್ಯ ಇರಲಿ, ಟ್ರಬಲ್ ಶೂಟರ್ ಡಿಕೆಶಿ ಇರಲಿ ಇಲ್ಲವೇ ಮೂಲ ಕಾಂಗ್ರೆಸ್ಸಿಗರೇ ಆಗಿರಲಿ. ಎಲ್ಲರೂ ಒಂದೇ ಅನ್ನೋ ದಾಳ ಉರುಳಿಸಲು ಹೈಕಮಾಂಡ್ ತೀರ್ಮಾನಿಸಿದೆ. ರಾಜ್ಯ ಕಾಂಗ್ರೆಸ್ಸಿಗರ ಮೇಲೆ ಹಿಡಿತ ಸಾಧಿಸಲು ಆ ದಾಳ ಉರುಳಿಸಲು ಹೈಕಮಾಂಡ್ ನಿರ್ಧರಿಸಿದೆ. ಸ್ಥಾನಮಾನಗಳ ಜೊತೆ ಜೊತೆಗೆ ರಾಜ್ಯ ಕೈ ನಾಯಕರನ್ನ ಸೈಲೆಂಟ್ ಮಾಡಲು ಕಾಂಗ್ರೆಸ್ ಹೈಕಮಾಂಡ್ ಸಮನ್ವಯ ಸಮಿತಿ ರಚನೆಗೆ ನಿರ್ಧರಿಸಿದೆ. ರಾಜ್ಯದ ಹಿರಿಯ ನಾಯಕರ ಜೊತೆಗೆ ಎಐಸಿಸಿಯ ನಾಯಕರು ಸಹ ಸಮನ್ವಯ ಸಮಿತಿಯಲ್ಲಿ ಇರಲಿದ್ದಾರೆ.

    ರಾಜ್ಯ ಕಾಂಗ್ರೆಸ್ಸಿನಲ್ಲಿ ಏನೇ ತೀರ್ಮಾನ ಆಗಬೇಕಾದರೂ ಸಮನ್ವಯ ಸಮಿತಿಯ ಅಂತಿಮ ಮುದ್ರೆ ಬೇಕೇ ಬೇಕು. ಹೀಗೆ ರಾಜ್ಯ ಕಾಂಗ್ರೆಸ್ ನಾಯಕರ ಕಚ್ಚಾಟ ತಪ್ಪಿಸಲು ಸಮನ್ವಯ ಸಮಿತಿ ರಚನೆಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದು, ರಾಜ್ಯ ಕಾಂಗ್ರೆಸ್ಸಿನಲ್ಲಿ ನಾನೇ ಪವರ್ ಫುಲ್ ನನ್ನ ಮಾತೇ ನಡೆಯೋದು ಅಂದು ಕೊಂಡವರಿಗೆಲ್ಲ ಇನ್ನು ಬ್ರೇಕ್ ಬೀಳಲಿದೆ. ಮಾಜಿ ಸಿಎಂ ಸಿದ್ದರಾಮಯ್ಯರ 11 ವರ್ಷದ ಚಕ್ರಾಧಿಪತ್ಯಕ್ಕೂ ಲಗಾಮು ಬೀಳಲಿದೆ ಎಂಬುದಾಗಿ ತಿಳಿದುಬಂದಿದೆ.