Tag: High Temperature

  • ಸಾಮಾನ್ಯ ತಾಪಮಾನದ ನ್ಯೂಯಾರ್ಕ್‌, ಬೋಸ್ಟನ್‌ – ಇದೀಗ ದಾಖಲೆಯ ಮಟ್ಟ ಮೀರುತ್ತಿರುವುದ್ಯಾಕೆ?

    ಸಾಮಾನ್ಯ ತಾಪಮಾನದ ನ್ಯೂಯಾರ್ಕ್‌, ಬೋಸ್ಟನ್‌ – ಇದೀಗ ದಾಖಲೆಯ ಮಟ್ಟ ಮೀರುತ್ತಿರುವುದ್ಯಾಕೆ?

    -137 ವರ್ಷಗಳ ಹಳೆಯ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿ

    ಸಾಮಾನ್ಯವಾಗಿ ಯಾವುದೇ ಒಂದು ದೇಶದಲ್ಲಿ ಅದರ ವಾತಾವರಣ ಹಾಗೂ ಹವಾಮಾನಕ್ಕೆ ಅನುಗುಣವಾಗಿ ಒಂದು ನಿರ್ದಿಷ್ಟವಾದ ತಾಪಮಾನ ದಾಖಲಾಗಿರುತ್ತದೆ. ಉದಾಹರಣೆಗೆ ಹೇಳುವುದಾದರೆ ಯಾವುದೋ ಒಂದು ಪ್ರದೇಶದಲ್ಲಿ ತಾಪಮಾನ ಇಷ್ಟು ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಅಂದಾಜಿಸಲಾಗಿರುತ್ತದೆ. ಹಾಗೆಯೇ ಅಮೆರಿಕ, ನ್ಯೂಯಾರ್ಕ್ ಹಾಗೂ ಬೋಸ್ಟನ್ ನಂತಹ ನಗರಗಳು ಸಾಮಾನ್ಯ ತಾಪಮಾನ 27 ಅಥವಾ 28 ಡಿಗ್ರಿ ಸೆಲ್ಸಿಯಸ್ ನಿಂದ ಕೂಡಿರುತ್ತದೆ. ಆದರೆ ಇತ್ತೀಚಿನ ಕೆಲವು ದಿನಗಳಿಂದ ಇದು ದಾಖಲೆಯ ತಾಪಮಾನವನ್ನು ಮೀರಿ ಹೋಗುತ್ತಿದೆ. ಇದರಿಂದಾಗಿ ಅಲ್ಲಿನ ಜನ ಬಿಸಿ ಗಾಳಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕೆಲವು ಕಾರಣಗಳಿವೆ.

    ಹೌದು, ನ್ಯೂಯಾರ್ಕ್ ಹಾಗೂ ಬೋಸ್ಟನ್ ನಗರಗಳಲ್ಲಿ ವಾಸಿಸುವ ಜನರು ಸಾಮಾನ್ಯ ತಾಪಮಾನಕ್ಕೆ ಹೊಂದಿಕೊಂಡಿದ್ದಾರೆ. ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ದಿಡೀರನೆ ತಾಪಮಾನದಲ್ಲಿ ವಿಪರೀತ ಏರಿಕೆಯಾಗಿ ಬಿಸಿ ಗಾಳಿ ಬೀಸಲು ಪ್ರಾರಂಭವಾಗಿತ್ತು. ಈ ಮೂಲಕ ದಾಖಲೆಯನ್ನು ನಿರ್ಮಿಸಿತ್ತು. ಈ ಮೊದಲು ಜೂನ್ ತಿಂಗಳಲ್ಲಿ ಎಂದಿಗೂ ಇಷ್ಟು ಅಧಿಕ ತಾಪಮಾನ ದಾಖಲೆಯಾಗಿರಲೇ ಇಲ್ಲ ಎಂದು ಕೆಲವು ಹವಾಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಯಾವ ಪ್ರದೇಶಗಳಲ್ಲಿ ತಾಪಮಾನ ಏರಿಕೆ?
    ಪೂರ್ವ ಅಮೆರಿಕಾದ ಕೆಲವು ನಗರಗಳಾದ ಬೋಸ್ಟನ್, ನ್ಯೂಯಾರ್ಕ್, ಫಿಲೀಡೆಲ್ಫಿಯಾ, ಸೆಂಟ್ರಲ್ ಪಾರ್ಕ್, ಜಾನ್ ಎಫ್ ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹಾರ್ಟ್ ಫೋರ್ಡ್, ರೋಡ್ ಐಲ್ಯಾಂಡ್ ಪ್ರಾವಿಡೆನ್ಸ್, ಪೆನ್ಸಿಲ್ವೇನಿಯ ಸೇರಿದಂತೆ ಹಲವು ನಗರಗಳಲ್ಲಿ ದಾಖಲೆಯ ತಾಪಮಾನ ಕಂಡುಬಂದಿದೆ.

    ತಾಪಮಾನ ಏರಿಕೆಗೆ ಕಾರಣ:
    ನೈರುತ್ಯದಿಂದ ಬೀಸುವ ಗಾಳಿಯನ್ನು ಪೂರ್ವ ಅಮೆರಿಕ ದೇಶಗಳು ಹಿಡಿದಿಟ್ಟುಕೊಳ್ಳುತ್ತವೆ. ಇದರಿಂದಾಗಿ ಬಿಸಿ ಗಾಳಿ ಉಂಟಾಗುತ್ತದೆ. ಸಾಮಾನ್ಯವಾಗಿ ಜಾಗತಿಕ ತಾಪಮಾನದ ಏರಿಕೆಯಿಂದಲೂ ಕೂಡ ಬಿಸಿ ಗಾಳಿ ಉಂಟಾಗುವ ಸಾಧ್ಯತೆ ಇರುತ್ತದೆ. ಮಾನವನ ಚಟುವಟಿಕೆಗಳಿಂದ ಉಂಟಾಗುವ ಹಾನಿಕಾರಕ ಅನಿಲಗಳಿಂದ ತಾಪಮಾನದಲ್ಲಿ ಹೆಚ್ಚಳವಾಗಬಹುದು. ಇನ್ನು ನಗರೀಕರಣ ಹೆಚ್ಚಾದಂತೆ ಹಸಿರು ಪ್ರದೇಶಗಳ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ ಇದರಿಂದಾಗಿ ತಾಪಮಾನ ಹೆಚ್ಚಳವಾಗುತ್ತದೆ. ಇದೇ ಕಾರಣದಿಂದಾಗಿ ನ್ಯೂಯಾರ್ಕ್ ಸೇರಿದಂತೆ ಹಲವು ನಗರಗಳಲ್ಲಿ ತಾಪಮಾನದ ಮಟ್ಟ ಮೂರು ಅಂಕಿಗೂ ಹೆಚ್ಚಾಗಿತ್ತು ಎನ್ನಲಾಗುತ್ತದೆ. ಅಂದರೆ ಸಾಮಾನ್ಯವಾಗಿ ಫ್ಯಾರನ್ ಹೀಟ್ ಗಳಲ್ಲಿ ತಾಪಮಾನವನ್ನು ಅಳೆಯಲಾಗುತ್ತದೆ, ಹೀಗಾಗಿ 38 ಡಿಗ್ರಿ ಸೆಲ್ಸಿಯಸ್ ಅಂದಾಗ ಫ್ಯಾರನ್ ಹೀಟ್ ಗಳಲ್ಲಿ 100 ಡಿಗ್ರಿಗೂ ಹೆಚ್ಚು ಎಂದಾಗುತ್ತದೆ. ಆ ದೇಶಗಳಲ್ಲಿ ನೂರಕ್ಕೂ ಹೆಚ್ಚು ಡಿಗ್ರಿ ತಾಪಮಾನ ದಾಖಲಾಗಿದೆ.

    ತಾಪಮಾನದ ಹೆಚ್ಚಳದಿಂದಾಗಿ ನ್ಯೂಯಾರ್ಕ್ 32 ದೇಶಗಳಲ್ಲಿ ತಾಪಮಾನದ ಎಚ್ಚರಿಕೆಯನ್ನು ನೀಡಲಾಗಿತ್ತು. ತಾಪಮಾನ ಹೆಚ್ಚಳದಿಂದಾಗಿ ಸ್ಥಳೀಯರಿಗೆ ಅಪಾಯ ಉಂಟಾಗಬಹುದು ಎನ್ನುವ ಕಾರಣದಿಂದಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಕಳೆದ ವಾರದಲ್ಲಿ ತಾಪಮಾನ ಏರಿಕೆಯಿಂದಾಗಿ 137 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಸೃಷ್ಟಿಸಿದೆ. ಇದೇ ಕಾರಣದಿಂದಾಗಿ ಜನರು ಬಿಸಿ ಗಾಳಿಯಿಂದಾಗಿ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿಯು ಉಂಟಾಗಿತ್ತು.

    ನ್ಯೂಯಾರ್ಕ್ ನ ಮಹಿಳೆ ಒಬ್ಬಳು ಅಧಿಕ ತಾಪಮಾನದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಬಿಳಿ ಬಟ್ಟೆಯನ್ನು ಧರಿಸಿದ ಮಹಿಳೆ ಕಪ್ಪು ಬಣ್ಣದ ಬ್ಯಾಗ್ ಒಂದನ್ನು ತಮ್ಮ ಹೆಗಲಿಗೆ ಹಾಕಿಕೊಂಡು ಕುಳಿತಿರುತ್ತಾರೆ. ಸ್ವಲ್ಪ ಸಮಯದ ನಂತರ ಆ ಬ್ಯಾಗನ್ನು ತೆಗೆಯಲು ಯತ್ನಿಸಿದಾಗ ಬಿಸಿಲಿನಿಂದಾಗಿ ಆ ಬ್ಯಾಗ್ ಬಟ್ಟೆಗೆ ಅಂಟಿಕೊಂಡಿರುವುದು ಗೊತ್ತಾಗುತ್ತದೆ. ಬಳಿಕ ಬ್ಯಾಗನ್ನು ಎಳೆದು ತೆಗೆದ ಮಹಿಳೆ, ತನ್ನ ಬಟ್ಟೆಯ ಮೇಲೆ ಕಪ್ಪು ಬಣ್ಣದ ಕಲೆಗಳಾಗಿರುವುದನ್ನು ತೋರಿಸುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

    ನ್ಯೂಯಾರ್ಕ್ ಮತ್ತು ಬೋಸ್ಟನ್ ದೇಶಗಳು ಈ ರೀತಿಯ ಪರಿಸ್ಥಿತಿಯನ್ನು ಅನುಭವಿಸಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ 2013ರಲ್ಲಿ ಜುಲೈ ತಿಂಗಳಲ್ಲಿ ಮಳೆಗಾಲದ ಮಧ್ಯೆ ತಾಪಮಾನ 38 ಡಿಗ್ರಿಗೆ ಏರಿಕೆಯಾಗಿತ್ತು. ಇದರಿಂದಾಗಿ ಜನರು ಡಿಹೈಡ್ರೇಶನ್, ಹೀಟ್ ಸ್ಟ್ರೋಕ್ ನಂತಹ ಸಮಸ್ಯೆಗಳೊಂದಾಗಿ ಬಳಲಿದ್ದರು. 2006ರಲ್ಲಿ ಬೋಸ್ಟನ್ ನಗರದಲ್ಲಿ ತಾಪಮಾನ 36 ಡಿಗ್ರಿ ಗೆ ಏರಿಕೆಯಾಗಿತ್ತು. ಸತತ ಏಳು ದಿನಗಳ ಕಾಲ ಒಂದೇ ತಾಪಮಾನದಲ್ಲಿದ್ದ ನಗರದ ಜನರು ಬೇಸತ್ತು ಹೋಗಿದ್ದರು. 1999ರಲ್ಲಿ ನ್ಯೂಯಾರ್ಕ್ ಮತ್ತು ಬೋಸ್ಟನ್ ನಲ್ಲಿ ನಿರಂತರ ಮಳೆಯ ನಡುವೆಯೂ ವಿಪರೀತ ತಾಪಮಾನ ಏರಿಕೆ ಆಗಿತ್ತು. 1988 ರಲ್ಲಿ ಅಮೆರಿಕದ ಈಶಾನ್ಯ ಭಾಗಗಳಲ್ಲಿ ಕಳೆದ 100 ವರ್ಷಗಳಲ್ಲಿ ಅಧಿಕ ತಾಪಮಾನ ದಾಖಲೆಯಾಗಿತ್ತು. ಇದರಿಂದಾಗಿ ಕೆಲವು ನಗರಗಳಿಂದ ಜನರನ್ನ ತಾತ್ಕಾಲಿಕವಾಗಿ ಸ್ಥಳಾಂತರಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು.

  • ಗರಿಷ್ಠ ಉಷ್ಣಾಂಶದ ದಾಖಲೆ ಬರೆದ ಬೆಂಗಳೂರು

    ಗರಿಷ್ಠ ಉಷ್ಣಾಂಶದ ದಾಖಲೆ ಬರೆದ ಬೆಂಗಳೂರು

    ಬೆಂಗಳೂರು: ನಗರದಲ್ಲಿ ಇಂದು ಗರಿಷ್ಠ ತಾಪಮಾನ (High Temperature) ದಾಖಲಾಗಿದೆ. ಇದೇ ಮೊದಲ‌ ಬಾರಿಗೆ ಫೆಬ್ರವರಿ ತಿಂಗಳ ಮಧ್ಯದಲ್ಲಿ ಗರಿಷ್ಠ ಉಷ್ಣಾಂಶ 33.5 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ.ಇದನ್ನೂ ಓದಿ: ತುಂಬಿದ ಕೊಡ ತುಳಕಿತಲೇ ಪರಾಕ್ – ಮೈಲಾರಲಿಂಗೇಶ್ವರ ಸ್ವಾಮಿಯ ದೈವವಾಣಿ

    ಹೌದು, ಗುರುವಾರ ತಾಪಮಾನ 33.3 ಡಿಗ್ರಿ‌ ಸೆಲ್ಸಿಯಸ್ ದಾಖಲಾಗಿತ್ತು. ಇದು ಪೆಬ್ರವರಿ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪಮಾನ ಎಂದು ಹವಾಮಾನ ಇಲಾಖೆ ವರದಿ ಮಾಡಿತ್ತು. ಆದರೆ ಇವತ್ತು ಮತ್ತೆ ದಾಖಲೆ ಮುರಿದು, ಬೆಂಗಳೂರು ಉಷ್ಣಾಂಶ 33.5 ಡಿಗ್ರಿಗೆ ತಲುಪಿದೆ.

    ಸಾಮಾನ್ಯವಾಗಿ ಫೆಬ್ರವರಿ ಅಂತ್ಯದ ವೇಳೆಗೆ ಬೆಂಗಳೂರು ಗರಿಷ್ಠ ಉಷ್ಣಾಂಶ ವಾಡಿಕೆಯಂತೆ 29 ಡಿಗ್ರಿಗೆ ಬರುತ್ತಿತ್ತು. ಇದೀಗ ತಿಂಗಳ ಮಧ್ಯದಲ್ಲೇ ತಾಪಮಾನ 33ಕ್ಕೆ ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಇದನ್ನೂ ಓದಿ: Invest Karnataka 2025 | ರಾಜ್ಯಕ್ಕೆ ಹರಿದುಬಂತು 10.27 ಲಕ್ಷ ಕೋಟಿ ಬಂಡವಾಳ ಹೂಡಿಕೆ

     

     

  • ಒಡಿಶಾದಲ್ಲಿ ಹೆಚ್ಚಿದ ತಾಪಮಾನ – 3 ದಿನದಲ್ಲಿ ಹೀಟ್‌ಸ್ಟ್ರೋಕ್‌ಗೆ 20 ಮಂದಿ ಸಾವು

    ಒಡಿಶಾದಲ್ಲಿ ಹೆಚ್ಚಿದ ತಾಪಮಾನ – 3 ದಿನದಲ್ಲಿ ಹೀಟ್‌ಸ್ಟ್ರೋಕ್‌ಗೆ 20 ಮಂದಿ ಸಾವು

    ಭುವನೇಶ್ವರ: ಒಡಿಶಾದಲ್ಲಿ (Odisha) ಬಿಸಿಲಿನ ತಾಪ ಹೆಚ್ಚುತ್ತಿದ್ದು, ಕಳೆದ ಮೂರು ದಿನಗಳಿಂದ ಹೀಟ್‌ಸ್ಟ್ರೋಕ್‌ಗೆ (Heatstroke) 20 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಶುಕ್ರವಾರದಿಂದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 99 ಶಂಕಿತ ಸನ್‌ಸ್ಟ್ರೋಕ್‌ ಸಾವುಗಳು ವರದಿಯಾಗಿವೆ. ಮರಣೋತ್ತರ ಪರೀಕ್ಷೆ ಮತ್ತು ವಿಚಾರಣೆಯ ಬಳಿಕ 20 ಸನ್‌ಸ್ಟ್ರೋಕ್‌ ಸಾವುಗಳು ಎಂದು ದೃಢಪಡಿಸಲಾಗಿದೆ. ಉಳಿದವರು ಇತರ ಕಾರಣಗಳಿಂದ ಸಾವನ್ನಪ್ಪಿದ್ದು, ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದು ಅಧಿಕೃತ ವರದಿ ಹೇಳಿದೆ. ಇದನ್ನೂ ಓದಿ: ಸೆನ್ಸೆಕ್ಸ್, ನಿಫ್ಟಿ ಸಾರ್ವಕಾಲಿಕ ದಾಖಲೆ – Zerodha, CDSL ಸರ್ವರ್‌ ಡೌನ್‌, ಹೂಡಿಕೆದಾರರ ಆಕ್ರೋಶ

    ಇದಕ್ಕೂ ಮೊದಲು 42 ಶಂಕಿತ ಸನ್‌ಸ್ಟ್ರೋಕ್‌ ಸಾವುಗಳು ವರದಿಯಾಗಿದ್ದು, ಅವುಗಳಲ್ಲಿ ಆರು ಪ್ರಕರಣಗಳು ದೃಢಪಟ್ಟಿದೆ. ಇನ್ನೂ ಆರು ಸಾವುಗಳು ಇತರ ಕಾರಣಗಳಿಂದ ಸಂಭವಿಸಿವೆ ಎನ್ನಲಾಗಿದೆ. ಬೋಲಂಗಿರ್, ಸಂಬಲ್‌ಪುರ್, ಝಾರ್ಸುಗುಡಾ, ಕಿಯೋಂಜರ್, ಸೋನೆಪುರ್, ಸುಂದರ್‌ಗಢ್ ಮತ್ತು ಬಾಲಸೋರ್ ಜಿಲ್ಲೆಗಳಲ್ಲಿ ಸಾವುಗಳು ಹೆಚ್ಚಾಗಿ ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಸಿಕ್ಕಿಬಿದ್ದ ಲಷ್ಕರ್‌ ಟಾಪ್‌ ಕಮಾಂಡರ್ಸ್‌

    ಮುಖ್ಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಜೆನಾ ಮತ್ತು ವಿಶೇಷ ಪರಿಹಾರ ಆಯುಕ್ತ ಸತ್ಯಬ್ರತ ಸಾಹು ಅವರು ಭಾನುವಾರ ಜಿಲ್ಲಾಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿ ಬಿಸಿಗಾಳಿಯ ಕುರಿತು ಸೂಚನೆಗಳನ್ನು ಜಾರಿಗೊಳಿಸಲು ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಗಾಳಿ, ಮಳೆ ರಭಸಕ್ಕೆ ಭಾರೀ ಗಾತ್ರದ ಮರ ನೆಲಸಮ – ಸ್ಯಾಂಟ್ರೋ ಕಾರು ಜಖಂ

    ಮೃತ ಕುಟುಂಬಕ್ಕೆ ಪರಿಹಾರ ಮಂಜೂರಾತಿಗಾಗಿ ಪ್ರತಿ ಸಾವಿನ ಮರಣೋತ್ತರ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲೆಗಳಿಗೆ ತಿಳಿಸಲಾಗಿದೆ. ಅಲ್ಲದೆ ಪ್ರತಿ ಸಾವಿಗೆ ನಿಖರವಾದ ಕಾರಣವನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಕಂದಾಯ ಅಧಿಕಾರಿ ಮತ್ತು ಸ್ಥಳೀಯ ವೈದ್ಯಾಧಿಕಾರಿ ಜಂಟಿ ವಿಚಾರಣೆ ನಡೆಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅನ್ಯಕೋಮಿನ ಯುವತಿಯನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದಕ್ಕೆ ಯುವಕನಿಗೆ ಹಲ್ಲೆ

  • ಉತ್ತರ ಪ್ರದೇಶದಲ್ಲಿ ರಣ ಬಿಸಿಲಿಗೆ ನಲುಗಿದ ಸರ್ಕಾರ – ಇಂದು ಹೈವೋಲ್ಟೇಜ್‌ ಸಭೆ

    ಉತ್ತರ ಪ್ರದೇಶದಲ್ಲಿ ರಣ ಬಿಸಿಲಿಗೆ ನಲುಗಿದ ಸರ್ಕಾರ – ಇಂದು ಹೈವೋಲ್ಟೇಜ್‌ ಸಭೆ

    ಲಕ್ನೋ: ರಣ ಬಿಸಿಲಿನ ತಾಪದಿಂದ (High Temperature) ಬಳಲುತ್ತಿರುವ ಉತ್ತರ ಪ್ರದೇಶದಲ್ಲಿ (Uttar Pradesh) ಮಂಗಳವಾರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ (Mansukh Mandaviya) ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ರಾಜ್ಯವು ಶಾಖದ ಅಲೆಗೆ ನಲುಗುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.

    ಹೌದು. ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶ, ಬಿಹಾರ ಮತ್ತು ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಖದ ಅಲೆಗೆ ಸಾವು ನೋವುಗಳು ವರದಿಯಾಗಿವೆ.

    weather (1)

    UP ನಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ 54 ಮಂದಿ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ. ಹಠಾತ್ ಸಾವುಗಳು, ಜ್ವರ, ಉಸಿರಾಟದ ತೊಂದರೆ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳು ಭರ್ತಿಯಾಗುತ್ತಿವೆ. ಬಿಹಾರದಲ್ಲೂ 44 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಉರಿಯುವ ಬಿಸಿಲಿಗೆ 54 ಮಂದಿ ಬಲಿ, 400ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ಈಗಾಗಲೇ ಕೆಲವು ರಾಜ್ಯಗಳು ಬಿಸಿಲಿನ ತಾಪಮಾನದಿಂದ ಮಕ್ಕಳನ್ನು ರಕ್ಷಿಸಲು ಉದ್ದೇಶದಿಂದ ಬೇಸಿಗೆ ರಜೆ ವಿಸ್ತರಣೆ ಮಾಡಿವೆ.

    ಭಾರತೀಯ ಹವಾಮಾನ ಇಲಾಖೆ ಏಪ್ರಿಲ್‌ನಿಂದ ಜೂನ್‌ವರೆಗೆ ಭಾರತದಲ್ಲಿ ತಾಪಮಾನ ಹೆಚ್ಚಾಗಿರಲಿದೆ ಎಂದು ಹೇಳಿತ್ತು. ಅದಂತೆಯೇ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ರಣಬಿಸಿಲು ಜನರನ್ನ ಸುಡುತ್ತಿದೆ. ಈ ಪ್ರದೇಶಗಳಿಗೆ ಹಮಾವಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ. ಇದನ್ನೂ ಓದಿ: ಏರ್‌ಬಸ್‌ ಜೊತೆ ಬರೋಬ್ಬರಿ 500 ವಿಮಾನ ಖರೀದಿಗೆ ಡೀಲ್‌ – ವಿಶ್ವದಾಖಲೆ ಬರೆದ ಇಂಡಿಗೋ

    ಸದ್ಯ ಉತ್ತರ ಪ್ರದೇಶದಲ್ಲಿ ಅತಿಯಾದ ಬಿಸಿಲಿನ ತಾಪದಿಂದ ಬೇರೆ ಯಾವುದಾರೂ ರೋಗಗಳು ಕಾಣಿಸಿಕೊಂಡಿದೆಯೇ ಎನ್ನುವ ಬಗ್ಗೆ ತನಿಖೆ ನಡೆಸಲು ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳ ತಂಡ ನೇಮಿಸಿದೆ. ಏಕೆಂದರೆ ಅತಿಯಾದ ಬಿಸಿಲಿನ ತಾಪಮಾನ ಹಾಗೂ ಶೀತ ವಾತಾವರಣ ಮಧುಮೇಹ, ರಕ್ತದೊತ್ತಡ ಹಾಗೂ ಉಸಿರಾಟ ಸಮಸ್ಯೆ ಹೊಂದಿರುವವರಿಗೆ ಇನ್ನಷ್ಟು ಅಪಾಯ ಉಂಟು ಮಾಡುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.

  • ಉತ್ತರ ಪ್ರದೇಶದಲ್ಲಿ ಉರಿಯುವ ಬಿಸಿಲಿಗೆ 54 ಮಂದಿ ಬಲಿ, 400ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ಉತ್ತರ ಪ್ರದೇಶದಲ್ಲಿ ಉರಿಯುವ ಬಿಸಿಲಿಗೆ 54 ಮಂದಿ ಬಲಿ, 400ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ಲಕ್ನೋ: ಒಂದೆಡೆ ಚಂಡಮಾರುತಕ್ಕೆ ಸಿಕ್ಕಿ ಜನ ನಲುಗುತ್ತಿದ್ದರೆ, ಮತ್ತೊಂದೆಡೆ ಬಿಸಿಲಿನ ತಾಪಮಾನಕ್ಕೆ (High Temperature) ಬಲಿಯಾಗುತ್ತಿದ್ದಾರೆ. ಕಳೆದ ಮೂರು ದಿನಗಳಲ್ಲಿ ಬಿಸಿಲಿನ ತಾಪಕ್ಕೆ ಉತ್ತರ ಪ್ರದೇಶದಲ್ಲಿ (Uttar Pradesh) 54 ಮಂದಿ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಹಾರದಲ್ಲಿ 44 ಮಂದಿ ಬಲಿಯಾಗಿದ್ದಾರೆ.

    ಸಾವಿಗೆ ಬೇರೆ ಬೇರೆ ಕಾರಣವಿದ್ದರೂ ಬಿಸಿಲಿನ ತಾಪಮಾನ ಏರಿಕೆ ಪ್ರಮುಖ ಕಾರಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ತೀವ್ರ ಶಾಖದಿಂದಾಗಿ ಆಸ್ಪತ್ರೆಗೆ (Hospital) ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ. ಅನೇಕ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ತಾಪಮಾನ ದಾಖಲಾಗುತ್ತಿದೆ. ಇದನ್ನೂ ಓದಿ: ನಾಸಿಕ್‌ನ ಅಂಜನೇರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಪ್ರಕ್ರಿಯೆ ಆರಂಭ

    ಏಕಾ ಏಕಿ ಮರಣ ಪ್ರಮಾಣ ಹೆಚ್ಚಾಗಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ಸಾರ್ವಜನಿಕರಲ್ಲಿ ಜ್ವರ, ಉಸಿರಾಟ ಸಮಸ್ಯೆ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿದ್ದು, ‌ಆಸ್ಪತ್ರೆ‌ಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ.

    ಜೂನ್‌ 15 ರಂದು ಉತ್ತರ ಪ್ರದೇಶದಲ್ಲಿ 23 ಮಂದಿ ಮೃತಪಟ್ಟಿದ್ದರು. ಜೂನ್‌ 16 ರಂದು 20 ಮಂದಿ‌ ಹಾಗೂ ಜೂನ್‌ 17 ರಂದು 11 ಮಂದಿ ಮೃತಪಟ್ಟಿದ್ದಾರೆ ಎಂದು ಬಲ್ಲಿಯಾ ಆಸ್ಪತ್ರೆ ವೈದ್ಯ ಎಸ್‌.ಕೆ ಯಾದವ್‌ ತಿಳಿಸಿದ್ದಾರೆ. ಇದೇ ಸಮಯದಲ್ಲಿ ಬಿಹಾರದಲ್ಲೂ ಬಿಸಿಲಿನ ತಾಪಕ್ಕೆ 44 ಮಂದಿ ಬಲಿಯಾಗಿರುವುದು ಕಂಡುಬಂದಿದೆ.ಇದನ್ನೂ ಓದಿ: ಸಾವರ್ಕರ್, ಹೆಡ್ಗೆವಾರ್ ಅವರ ಅಧ್ಯಾಯಗಳನ್ನು ಪಠ್ಯದಿಂದ ತೆಗೆದು ಹಾಕಿರುವುದು ದುರದೃಷ್ಟಕರ: ನಿತಿನ್ ಗಡ್ಕರಿ

    ಸದ್ಯ ಉತ್ತರ ಪ್ರದೇಶದಲ್ಲಿ ಅತಿಯಾದ ಬಿಸಿಲಿನ ತಾಪದಿಂದ ಬೇರೆ ಯಾವುದಾರೂ ರೋಗಗಳು ಕಾಣಿಸಿಕೊಂಡಿದೆಯೇ ಎನ್ನುವ ಬಗ್ಗೆ ತನಿಖೆ ನಡೆಸಲು ಆರೋಗ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ.ಬಿ.ಪಿ ತಿವಾರಿ ನೇತೃತ್ವದ ತಂಡ ಸಿದ್ಧತೆ ಮಾಡಿಕೊಂಡಿದೆ. ಏಕೆಂದರೆ ಅತಿಯಾದ ಬಿಸಿಲಿನ ತಾಪಮಾನ ಹಾಗೂ ಶೀತ ವಾತಾವರಣ ಮಧುಮೇಹ, ರಕ್ತದೊತ್ತಡ ಹಾಗೂ ಉಸಿರಾಟ ಸಮಸ್ಯೆ ಹೊಂದಿರುವವರಿಗೆ ಇನ್ನಷ್ಟು ಅಪಾಯ ಉಂಟು ಮಾಡುವ ಸಾಧ್ಯತೆ ಇದೆ.

    ರೋಗಿಗಳನ್ನ ಹೆಗಲಮೇಲೆ ಹೊತ್ತು ಸಾಗಿಸ್ತಿದ್ದಾರೆ:
    ಸದ್ಯ ಉತ್ತರ ಪ್ರದೇಶದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿರುವುದರಿಂದ ರೋಗಿಗಳನ್ನು ಸಾಗಿಸಲು ಸ್ಟ್ರೆಚರ್‌ಗಳ ಕೊರತೆಯಾಗಿದೆ. ಕೆಲವು ಕಡೆ ಆಸ್ಪತ್ರೆ ಸಿಬ್ಬಂದಿಗಳೇ ರೋಗಿಗಳನ್ನ ತುರ್ತು ವಿಭಾಗಕ್ಕೆ ಹೆಗಲಮೇಲೆ ಹೊತ್ತುಕೊಂಡು ಬರುತ್ತಿದ್ದಾರೆ. ಏಕಕಾಲಕ್ಕೆ ರೋಗಿಗಳು ದಾಖಲಾಗುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕರು ಹೇಳಿದ್ದಾರೆ.