Tag: High Speed Bullet Train

  • ಜಪಾನ್‌ನ ಹೈ-ಸ್ಪೀಡ್ ಬುಲೆಟ್ ರೈಲಿನಲ್ಲಿ ಮೋದಿ ಸವಾರಿ

    ಜಪಾನ್‌ನ ಹೈ-ಸ್ಪೀಡ್ ಬುಲೆಟ್ ರೈಲಿನಲ್ಲಿ ಮೋದಿ ಸವಾರಿ

    ಟೋಕಿಯೊ: ಎರಡು ದಿನಗಳ ಜಪಾನ್‌ (Japan) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿನ ಹೈ-ಸ್ಪೀಡ್‌ ಬುಲೆಟ್‌ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಟೋಕಿಯೊದಿಂದ ಸೆಂಡೈಗೆ ಮೋದಿ (PM Modi) ಪ್ರಯಾಣಿಸಿದ್ದಾರೆ.

    ಸೆಂಡೈಗೆ ತೆರಳುವ ಮೊದಲು, ಪ್ರಧಾನಿ ನರೇಂದ್ರ ಮೋದಿ ಟೋಕಿಯೊದಲ್ಲಿ 16 ಜಪಾನಿನ ಪ್ರಾಂತ್ಯಗಳ ರಾಜ್ಯಪಾಲರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯ ಅಡಿಯಲ್ಲಿ ರಾಜ್ಯ-ಪ್ರಾಂತ್ಯ ಸಹಕಾರವನ್ನು ಬಲಪಡಿಸಲು ಅವರು ಕರೆ ನೀಡಿದರು. ಇದನ್ನೂ ಓದಿ: ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್‌ ಪ್ರಮುಖ ಪಾಲುದಾರ: ಮೋದಿ ಬಣ್ಣನೆ

    ಬುಲೆಟ್ ಟ್ರೈನ್ ಟ್ರೇನಿಂಗ್‌ನಲ್ಲಿರುವ ಭಾರತೀಯ ಮೂಲದ ಲೊಕೊ ಪೈಲಟ್‌ಗಳನ್ನು ಭೇಟಿಯಾಗಿ ಮೋದಿ ಮಾತುಕತೆ ನಡೆಸಿದರು. ಬುಲೆಟ್ ಟ್ರೈನ್ ಕೋಚ್‌ ತಯಾರಿಕಾ ಘಟಕ ಇರುವ ಟೋಕಿಯೊದ ಎಲೆಕ್ಟ್ರಾನ್ ಕಾರ್ಖಾನೆ ಮತ್ತು ಸೆಂಡೈನಲ್ಲಿರುವ ಟೊಹೊಕು ಶಿಂಕನ್ಸೆನ್ ಸ್ಥಾವರಕ್ಕೂ ಮೋದಿ ಭೇಟಿ ನೀಡಲಿದ್ದಾರೆ. ಬಳಿಕ ಚೀನಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

    ಇದಕ್ಕೂ ಮೊದಲು ಟೋಕಿಯೊದಲ್ಲಿ, ಪ್ರಧಾನಿ ಮೋದಿ 16 ಜಪಾನಿನ ಪ್ರಾಂತ್ಯಗಳ ಗವರ್ನರ್‌ಗಳೊಂದಿಗೆ ಚರ್ಚೆ ನಡೆಸಿದರು. 15 ನೇ ವಾರ್ಷಿಕ ಭಾರತ-ಜಪಾನ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ದೀರ್ಘಕಾಲೀನ ನಾಗರಿಕ ಬಾಂಧವ್ಯದ ಮೇಲೆ ನಿರ್ಮಿಸಲಾದ ಭಾರತ-ಜಪಾನ್ ಸಂಬಂಧಗಳು ಅಭಿವೃದ್ಧಿ ಹೊಂದುತ್ತಿವೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಜಪಾನ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

  • 508 ಕಿ.ಮೀ ಉದ್ದದ ಭಾರತದ ಮೊದಲ ಬುಲೆಟ್ ರೈಲು ಯೋಜನೆ ವಿಶೇಷತೆಗಳೇನು ?

    508 ಕಿ.ಮೀ ಉದ್ದದ ಭಾರತದ ಮೊದಲ ಬುಲೆಟ್ ರೈಲು ಯೋಜನೆ ವಿಶೇಷತೆಗಳೇನು ?

    ಭಾರತ ತಂತ್ರಜ್ಞಾನಗಳು ಬೆಳೆದಂತೆ ಒಂದಿಲ್ಲೊಂದು ರೀತಿಯಲ್ಲಿ ಹೊಸ ಮಹತ್ವದ ಹೆಜ್ಜೆಗಳನ್ನು ಇಡುತ್ತಲೇ ಹೊರಟಿದೆ. ಉಗಿ ಬಂಡೆಗಳ ರೈಲುಗಳನ್ನು ಬಳಸುತ್ತಿದ್ದ ನಾವುಗಳು ಇದೀಗ ಇಂಧನ, ವಿದ್ಯುತ್ ಬಳಸಿ ರೈಲುಗಳಲ್ಲಿ ಸಂಚರಿಸುತ್ತಿದ್ದೇವೆ. ಈಗ ಭಾರತ ಮತ್ತೆ ಮಹತ್ವದ ಹೆಜ್ಜೆ ಹಾಕಲು 508 ಕಿಮೀ ಉದ್ದದ ಹೈ ಸ್ಪೀಡ್ ಬುಲೆಟ್ ರೈಲು ಯೋಜನೆಯನ್ನು ನಿರ್ಮಿಸುತ್ತಿದೆ.

    2017ರ ಸೆಪ್ಟೆಂಬರ್ 14ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಭಾರತದ ಅತಿ ಉದ್ದದ ಹೈ ಸ್ಪೀಡ್ ಬುಲೆಟ್ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗಾಗಲೇ ಇದರ ನಿರ್ಮಾಣ ಆರಂಭವಾಗಿದ್ದು, ಪ್ರಗತಿಯ ಹಂತದಲ್ಲಿದೆ.

    ಮುಂಬೈ ಮತ್ತು ಅಹಮದಾಬಾದ್ ನಡುವೆ ಸಂಚರಿಸುವ ಈ ರೈಲು 508 ಕಿಮೀ ಉದ್ದದ ಯೋಜನೆಯಾಗಿದ್ದು, 300 ಕಿಮೀ ನಷ್ಟು ವಯಾಡಕ್ಟ್ ಮೂಲಕ ಸಂಚರಿಸಲಿದೆ. ಒಟ್ಟು 1.08 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಬುಲೆಟ್ ರೈಲು ನಿರ್ಮಾಣಗೊಳ್ಳಲಿದೆ. ಈ ಪೈಕಿ ತಲಾ 5000 ಕೋಟಿ ರೂಪಾಯಿಗಳನ್ನು ಗುಜರಾತ್ ಮತ್ತು ಮಹಾರಾಷ್ಟ್ರ ಸರ್ಕಾರಗಳು ಪಾವತಿಸುತ್ತೇವೆ ಹಾಗೂ NHSRCL ಗೆ ಕೇಂದ್ರವು 10,000 ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದೆ. ಈಗಾಗಲೇ ಈ ಬುಲೆಟ್ ರೈಲಿನ ಪ್ರಮುಖ ಘಟ್ಟವಾದ 300 ಕಿಮೀ ವಯಾಡಕ್ಟ್ ನಿರ್ಮಿಸುವ ಹಂತವನ್ನು ಪೂರ್ಣಗೊಳಿಸಿದೆ.

    ಒಟ್ಟು ರೈಲಿನ ಉದ್ದದ ಪೈಕಿ 300 ಕಿಮೀ ವಯಾಡಕ್ಟ್ ನಲ್ಲಿ ಎಂಟು ನದಿಗಳಿದ್ದು, ಆ ಪೈಕಿ 5 ನದಿಗಳಿಗೆ ಸೇತುವೆಗಳನ್ನು ನಿರ್ಮಿಸಲಾಗಿದೆ. ಇನ್ನುಳಿದಂತೆ 21 ಕಿಮೀ ಭೂಗತ, 7 ಕಿಮೀ ಸಮುದ್ರದ ಆಳ ಮತ್ತು 5 ಕಿ.ಮೀ ಪರ್ವತ ಸುರಂಗಗಳನ್ನ ಒಳಗೊಂಡಿದೆ. ಈ ರೈಲು ಮುಂಬೈನಿಂದ ಅಹಮದಾಬಾದ್ ಗೆ ಸಂಚರಿಸಲು 2.07 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. 12 ನಿಲ್ದಾಣಗಳ ಮೂಲಕ ಚಲಿಸುವುದರಿಂದ ಒಟ್ಟು 2.58 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

    ಬುಲೆಟ್ ರೈಲು ಯೋಜನೆಯ 12 ನಿಲ್ದಾಣಗಳು:
    ಈ ಬುಲೆಟ್ ರೈಲು ಯೋಜನೆ ಒಟ್ಟು 12 ನಿಲ್ದಾಣಗಳನ್ನು ಒಳಗೊಂಡಿದ್ದು, ಗುಜರಾತ್ ನಲ್ಲಿ 9 ಹಾಗೂ ಮಹಾರಾಷ್ಟ್ರದಲ್ಲಿ ಮೂರು ನಿಲ್ದಾಣಗಳನ್ನು ಒಳಗೊಂಡಿದೆ. ಸಬರಮತಿ, ಅಹಮದಾಬಾದ್, ಆನಂದ್, ವಡೋದರ, ಭರೂಚ್, ಸೂರತ್, ಬಿಲಿಮೋರಾ, ವಾಪಿ, ಬೋಯಿಸರ್, ವಿರಾರ್, ಥಾಣೆ ಹಾಗೂ ಮುಂಬೈ.

    ಇನ್ನು ಈ ಬುಲೆಟ್ ರೈಲು ಯೋಜನೆ ಒಂದು ವಿಶೇಷತೆ ಎಂದರೆ ಇದು ಯುರೋಪಿಯನ್ ಸಿಗ್ನಲಿಂಗ್ ತಂತ್ರಜ್ಞಾನವನ್ನು ಆಧರಿಸಿದೆ ಎನ್ನಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಜರ್ಮನ್ ಸಂಸ್ಥೆ ಸಿಮೇನ್ಸ್ ಹಾಗೂ ಅಹ್ಮದಾಬಾದ್ ಮೂಲದ ದಿನೇಶ್ ಚಂದ್ ಆರ್ ಅಗರ್ವಾಲ್ ಅವರು ಈ ಕುರಿತು ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ.

    ಆರಂಭದಲ್ಲಿ ಇರಲು ಯೋಜನೆ 2026 ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದಿದ್ದರು. ಆದರೆ ಸದ್ಯದ ಪ್ರಗತಿಯ ಪ್ರಕಾರ 2028ರಲ್ಲಿ ಬುಲೆಟ್ ರೈಲು ಯೋಜನೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ಇದೆ.