Tag: high court

  • ದರ್ಶನ್‌ಗೆ ಇಂದೂ ಸಿಗಲಿಲ್ಲ ಬೇಲ್‌ – ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ

    ದರ್ಶನ್‌ಗೆ ಇಂದೂ ಸಿಗಲಿಲ್ಲ ಬೇಲ್‌ – ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ

    – ನಾಳೆ ಲಕ್ವ ಹೊಡೀತು ಅಂತಾರೆ ಎಂದು ಎಸ್‌ಪಿಪಿ ಆಕ್ಷೇಪ

    ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ (Darshan) ರೆಗ್ಯುಲರ್‌ ಬೇಲ್‌ ಸಿಗುವ ವಿಚಾರದಲ್ಲಿ ಮತ್ತೆ ನಿರಾಸೆಯಾಗಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ (Karnataka Highcourt) ಡಿ.9ಕ್ಕೆ (ಸೋಮವಾರ) ಮುಂದೂಡಿದೆ.

    ಕೊಲೆ ಆರೋಪಿ ದರ್ಶನ್, ಪವಿತ್ರಾಗೌಡ (Pavitra Gowda), ಪ್ರದೋಷ್‌ ಸೇರಿದಂತೆ ಇತರ ಆರೋಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಲಾಯಿತು. ಎಸ್‌ಪಿಪಿ ವಾದ ಮಂಡನೆ ಮಾಡಿದ ಬಳಿಕ ನ್ಯಾಯಮೂರ್ತಿಗಳು ಸೋಮವಾರ ಮಧ್ಯಾಹ್ನ 2:30ಕ್ಕೆ ಮುಂದೂಡಿದರು. ಅಲ್ಲದೇ ಮಧ್ಯಂತರ ಜಾಮೀನು ಅರ್ಜಿ ವಜಾ ಕೋರಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಸೋಮವಾರಕ್ಕೆ ಕೋರ್ಟ್‌ ಮುಂದೂಡಿತು. ಇದನ್ನೂ ಓದಿ: ಕಾರ್ಕಳದ ಯುವತಿ ಅತ್ಯಾಚಾರ ಕೇಸ್‌ – ಪ್ರಮುಖ ಆರೋಪಿ ಅಲ್ತಾಫ್‌ಗೆ ಜಾಮೀನು ಮಂಜೂರು 

    ವಿಚಾರಣೆ ಆರಂಭವಾಗುತ್ತಿದ್ದಂತೆ ಮೊದಲು ಪ್ರದೋಷ್‌ ಪರ ವಕೀಲರು ವಾದ ಮಂಡಿಸಿದರು. ಈ ವೇಳೆ ದರ್ಶನ್‌ನಿಂದ 30 ಲಕ್ಷ ರೂ. ಪಡೆದ ಆರೋಪ ಇದೆ. ಸರೆಂಡರ್‌ ಆಗುವವರಿಗೆ ಹಾಗೂ ಪೊಲೀಸರಿಗೆ ಹಣ ನೀಡಲು ಪಡೆಯಲಾಗಿದೆ ಎಂಬ ಆರೋಪ ಇದೆ. ಕೊಲೆ ನಡೆದ ಸ್ಥಳದಲ್ಲಿ ಪ್ರದೂಷ್‌ ಇರಲಿಲ್ಲವೇ ಎಂದು ಜಡ್ಜ್‌ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ವಕೀಲರು, ಇಡೀ ಆರೋಪದಲ್ಲಿ ಪ್ರದೂಷ್ ಭಾಗಿಯಾಗಿಲ್ಲ. ದರ್ಶನ್, ಪವಿತ್ರಾಗೌಡ ಜೊತೆ ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಆದ್ರೆ ಪ್ರದೋಷ್‌ನದ್ದು ಏನೂ ಪಾತ್ರವಿಲ್ಲ. ಸಾಕ್ಷಿ ಪುನೀತ್‌ ಪ್ರಕಾರ ಪ್ರದೂಷ್ ಮೆಸೆಜ್‌ಗಳನ್ನ ಮಾತ್ರ ಓದಿದ್ದ ಎಂದರು. ಇದಕ್ಕೆ ಎಸ್‌ಪಿಪಿ ಪ್ರಸನ್ನಕುಮಾರ್ ಆಕ್ಷೇಪಣಾ ವಾದ ಮಂಡಿಸಿದರು.

    ಮಧ್ಯಂತರ ಜಾಮೀನಿಗೆ ಆಕ್ಷೇಪ ವ್ಯಕ್ತಪಡಿದರು. ದರ್ಶನ್‌ಗೆ ತಕ್ಷಣವೇ ಜಾಮೀನು ಬೇಕು ಅಂತ ಪಡೆದ್ರು. ಇಲ್ಲದೇ ಹೋದರೆ ಲಕ್ವ ಹೊಡೆಯುತ್ತೆ ಅಂದರು, ಈಗಾಗಲೇ 2 ರಿಪೋರ್ಟ್ ಕೊಟ್ಟಿದ್ದಾರೆ. ಆ ಎರಡು ರಿಪೋರ್ಟ್‌ಗಳನ್ನ ಕೋರ್ಟ್‌ ಗಮನಕ್ಕೆ 6-11ಕ್ಕೆ ಒಂದು ರಿಪೋರ್ಟ್ ನೀಡಿದ್ದಾರೆ. ಆ ವರದಿಯಲ್ಲಿ ವೈದ್ಯರು ಚಿಕಿತ್ಸೆ ನೀಡಲಾಗ್ತಿದೆ ಅಂತ ಹೇಳ್ತಿದ್ದಾರೆ. 20 ದಿನದ ಬಳಿಕ ರಿಪೋರ್ಟ್ ಅಲ್ಲಿ ಬಿಪಿ ಏರಿಳಿತಗಳು ಆಗ್ತಾ ಇದೆ ಅಂತ ವರದಿ ನೀಡಿದ್ದಾರೆ. ಮತ್ತೆ ಅವರಿಗೆ ಶಸ್ತ್ರಚಿಕಿತ್ಸೆಗೆ ತಯಾರಿ ಮಾಡಲಾಗ್ತಾ ಇದೆ ಅಂತಾರೆ, ಯಾವುದೇ ರೋಗಿ Amlong 50 ಎಂಜಿ ತಕ್ಕೊಂಡ್ರೆ, 24 ಗಂಟೆಯಲ್ಲಿ ಬಿಪಿ ನಾರ್ಮಲ್‌ಗೆ ಬರುತ್ತೆ. ಅನಸ್ತೇಶಿಯಾ ಕೊಡುವಾಗ ನಿಯಂತ್ರಣಕ್ಕೆ ತರ್ತಾರೆ. ಆದ್ರೆ ಇಲ್ಲಿ ಸಿನಿಮಾದಲ್ಲಿ ಮಾಡೋ ಹಾಗೇ ಮಾಡ್ತಿದ್ದಾರೆ. ತಲೆ ಬಾಚ್ಕೊಳಿ, ಪೌಡರ್ ಹಾಕೊಳಿ ಅನ್ನೋ ಹಾಗೇ ತಯಾರಿ ಮಾಡ್ತಾ ಇದ್ದಾರೆ. ಮಧ್ಯಂತರ ಜಾಮೀನು ದುರ್ಬಳಕೆ ಮಾಡ್ಕೊಂಡಿದ್ದಾರೆ. ನಾಳೆ ಬೆಳಗ್ಗೆ ಲಕ್ವ ಹೊಡೆಯುತ್ತೆ ಅಂತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ಈಗ ಇನ್ನೂ ಅಪರೇಷನ್ ಮಾಡಿಲ್ಲ, ಆದ್ದರಿಂದ ಜಾಮೀನು ರದ್ದು ಮಾಡಬೇಕು ಅಂತ ಮನವಿ ಮಾಡ್ತೀನಿ ಎಂದರು. ಆಗ ಜಡ್ಜ್‌ ಯಾವಾಗ ಮುಗಿಯುತ್ತೆ ಜಾಮೀನು ಅವಧಿ ಅಂತ ಪ್ರಶ್ನೆ ಮಾಡಿದ್ರು, ಅದಕ್ಕೆ ಮುಂದಿನವಾರ ಮುಕ್ತಾಯ ಆಗುತ್ತೆ ಅಂತ ಎಸ್‌ಪಿಪಿ ಹೇಳಿದ್ರು. ಈ ವೇಳೆ ಮಧ್ಯಪ್ರವೇಶಿಸಿದ ಸಿ.ವಿ ನಾಗೇಶ್‌ ಆಪರೇಷನ್‌ಗೆ ದಿನಾಂಕ ನಿಗದಿ ಆಗಿದೆ ಎಂದರು, ಈ ವೇಳೆ ಎಸ್‌ಪಿಪಿ ಯಾವಾಗ ಮಾಡಿಸ್ತೀನಿ ಅಂದರು? ಅಕ್ಕೆ ನಾಗೇಶ್‌ ಅದನ್ನ ಕೋರ್ಟ್‌ಗೆ ಹೇಳ್ತೀನಿ ಅಂದರು.

    ಬಳಿಕ ರೆಗ್ಯೂಲರ್ ಜಾಮೀನು ಅರ್ಜಿಗೆ ಆಕ್ಷೇಪಣೆ ವಾದ ಪ್ರಾರಂಭಿಸಿದ ಎಸ್ಪಿಪಿ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವನ್‌, ಪದ್ರೋಷ್‌ ಪಾತ್ರವನ್ನು ವಿವರಿಸಿದರು. ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ಕೋರ್ಟ್‌ ಸೋಮವಾರಕ್ಕೆ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿತು. ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರತಂಡಕ್ಕೆ ರಿಲೀಫ್ – ನಿರ್ಮಾಪಕರ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

  • ಮುಡಾ ಕೇಸ್ – ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

    ಮುಡಾ ಕೇಸ್ – ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

    – ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಅನುಮತಿಗೆ ಅಧಿಕಾರವಿಲ್ಲ: ಸಿಬಲ್ ವಾದ

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ (High Court) ಜ.25ಕ್ಕೆ ಮುಂದೂಡಿಕೆ ಮಾಡಿದೆ.

    ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌. ವಿ. ಅಂಜರಿಯಾ ನೇತೃತ್ವದ ವಿಭಾಗೀಯ ಪೀಠದಲ್ಲಿ ಸಿದ್ದರಾಮಯ್ಯ ಸಲ್ಲಿಕೆ ಮಾಡಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಯಿತು. ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದನ್ನು ಏಕಸದಸ್ಯ ಪೀಠದಲ್ಲಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು. ಏಕಸದಸ್ಯ ಪೀಠ ನೀಡಿರುವ ತೀರ್ಪನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಕೆ ಮಾಡಲಾಗಿದೆ.

    ಮತ್ತೊಂದು ಕಡೆ ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ದೇವರಾಜು ಎಂಬುವವರು ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅಲ್ಲದೇ ಲೋಕಾಯುಕ್ತ ತನಿಖೆಗೆ ಆದೇಶ ನೀಡಿದ ಆದೇಶವನ್ನು ವಿಭಾಗೀಯ ಪೀಠದಲ್ಲಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

    ಸರ್ಕಾರದ ಪರವಾಗಿ ಕಪಿಲ್ ಸಿಬಲ್ ಹಾಗೂ ದೂರುದಾರ ಸ್ನೇಹಮಯಿ ಕೃಷ್ಣ ಪರ ಮಣೀಂದರ್ ಸಿಂಗ್ ಹಾಜರಾಗಿದ್ದರು. ಸಿಎಂ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಹಾಗೂ ರಾಜ್ಯಪಾಲರ ಪರ ಸಾಲಿಸಿಟರಿ ಜನರಲ್ ತುಷಾರ್ ಮೆಹ್ತಾ ಹಾಜರಿದ್ದರು. ಇನ್ನೂ ದೇವರಾಜು ಪರ ಹಿರಿಯ ವಕೀಲ ದುಷ್ಯಂತ್ ದವೆ ವಾದ ಮಂಡಿಸಿದ್ದು, ದೇವರಾಜು ವಿರುದ್ಧ ಯಾವುದೇ ಆರೋಪ ಇಲ್ಲ. ಆದರೂ 4ನೇ ಆರೋಪಿಯನ್ನಾಗಿ ಮಾಡಲಾಗಿದೆ. ಅವರಿಗೆ ಕಾನೂನಿನ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

    ಅರ್ಜಿ ವಿಚಾರಣೆಯನ್ನು 10ನೇ ತಾರೀಖಿನ ಒಳಗೆ ಇತ್ಯರ್ಥ ಮಾಡಿ. ಏಕಸದಸ್ಯ ಪೀಠದಲ್ಲಿ ಪ್ರಕರಣ ಸಿಬಿಐಗೆ ವರ್ಗಾವಣೆ ಮಾಡುವ ಅರ್ಜಿ ವಿಚಾರಣೆ ನಡೆಯುತ್ತಾ ಇದೆ. 2004 ರಲ್ಲಿ ದೇವರಾಜು ಜಮೀನು ಮಾರಾಟ ಮಾಡಿದ್ದಾರೆ. ಆತನನ್ನೇ ಮೋಸ ಮಾಡಿದ್ದಾರೆ ಎಂದು ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. 80ನೇ ವಯಸ್ಸಿನಲ್ಲಿ ದೇವರಾಜು ಈ ರಾಜಕೀಯ ದಾಳಿಯಲ್ಲಿ ಸಿಲುಕಿದ್ದಾರೆ. ಏಕಸದಸ್ಯ ಪೀಠದಲ್ಲಿ ನನ್ನ ವಾದವನ್ನು ಆಲಿಸದೇ ಆದೇಶ ನೀಡಲಾಗಿದೆ ಎಂದು ಅವರು ನ್ಯಾಯ ಪೀಠದ ಗಮನಕ್ಕೆ ತಂದಿದ್ದಾರೆ.

    ಈ ವೇಳೆ ನ್ಯಾಯಾಲಯ, ನಾವು ಏಕಸದಸ್ಯ ಪೀಠ ಅಥವಾ ಬೇರೊಂದು ಪೀಠದಲ್ಲಿನ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು. ಅದಕ್ಕೆ ಪ್ರತಿಯಾಗಿ ನಮಗೆ ರಕ್ಷಣೆ ಒದಗಿಸಬೇಕು. ನಾವು ಮಧ್ಯಪ್ರವೇಶ ಮಾಡಬೇಕು ಎಂದು ಕೇಳುತ್ತಿಲ್ಲ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

    ಏಕಸದಸ್ಯ ಪೀಠದ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿಸಬೇಕೆ ಅಥವಾ ಬೇಡವೇ ಎಂಬ ವಿಚಾರ ಮಾತ್ರ ಇತ್ತು. ಆದರೆ, ನಮ್ಮ ಬಗ್ಗೆ ಏಕಸದಸ್ಯ ಪೀಠ ಅಭಿಪ್ರಾಯ ನೀಡಿ, ತನಿಖೆಗೆ ಆದೇಶಿಸಿದೆ. ನಮ್ಮ ವಾದವನ್ನು ಆಲಿಸಲಾಗಿಲ್ಲ. ಭೂಮಿಯನ್ನ ಮುಡಾ ವಶಕ್ಕೆ ಪಡೆಯುವಾಗ ದೇವರಾಜ್ ಹೆಸರಲ್ಲಿಯೇ ಇತ್ತು. ಹೀಗಾಗಿ ಡಿನೋಟಿಫೀಕೇಷನ್‍ಗೆ ಅರ್ಜಿ ಹಾಕಲಾಗಿತ್ತು. ಇನ್ನೂ ಡಿನೋಟಿಫಿಕೇಷನ್ ಅನ್ನೋದು ಅಪರಾಧ ಅಲ್ಲ ಎಂದು ಅವರು ವಾದಿಸಿದ್ದಾರೆ.

    ಇದಕ್ಕೆ ನ್ಯಾಯಪೀಠ ನಿಮ್ಮ ಅರ್ಜಿಯನ್ನ ಮೆರಿಟ್ ಮೇಲೆ ವಾದ ಆಲಿಸಿ ಆದೇಶ ಮಾಡಲಾಗುವುದು. ಯಾವುದೇ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಏಕಸದಸ್ಯ ಪೀಠ ಆದೇಶದ ಮಧ್ಯೆ ಬರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಇದಕ್ಕೆ ದುಷ್ಯಂತ್ ದವೆ ಅವರು, ಸಿಬಿಐ ತನಿಖೆಗೆ ಕೋರಿರುವ ಅರ್ಜಿಯಲ್ಲಿ ನಮಗೆ ರಕ್ಷಣೆ ಬೇಕಿದೆ. ನೀವು ನಮಗೆ ರಕ್ಷಣೆ ಕೊಡಲು ಬಯಸದಿದ್ದರೆ ಅದನ್ನು ಆದೇಶದಲ್ಲಿ ದಾಖಲಿಸಿ. ನಾವು ಸುಪ್ರೀಂ ಕೋರ್ಟ್‍ನಲ್ಲಿ ರಕ್ಷಣೆ ಕೋರುತ್ತೇವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

    ಮನುಸಿಂಘ್ವಿ ಸಿಎಂ ಪರ ವಾದ ಮಂಡನೆ ಮಾಡಿದ್ದು, ಏಕಸದಸ್ಯ ಪೀಠದ ಆದೇಶದ ತಪ್ಪುಗಳನ್ನು ವಾದಿಸಬೇಕಿದೆ. 17 ಎ ಅನುಮತಿಯನ್ನು ನೀಡಿರುವುದು ತಪ್ಪಾಗಿದೆ. 17ಎ ಉಲ್ಲಂಘನೆ ಆಗಿರೋದು ಸ್ಪಷ್ಟವಾಗಿ ಕಾಣುತ್ತಾ ಇದೆ. ಇದನ್ನು ಏಕಸದಸ್ಯ ಪೀಠ ಎತ್ತಿ ಹಿಡಿದಿದೆ. ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ರಾಜ್ಯಪಾಲರು ಸಂಪುಟ ಸಲಹೆಯ ಅನುಸಾರ ನಡೆಯಬೇಕು. ಸಂಪುಟ ಸಲಹೆಯನ್ನು ರಾಜ್ಯಪಾಲರು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ವಾದಿಸಿದರು. ಇದಕ್ಕೆ ನ್ಯಾಯಾಲಯ ತುಂಬಾ ದೊಡ್ಡದಾಗಿ ವಾದ ಮಾಡ್ತಾ ಇದ್ದೀರಿ ಈಗ ಅವಕಾಶ ಇಲ್ಲ ಎಂದು ತಿಳಿಸಿತು.

    ಬಳಿಕ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಸಾಮಾನ್ಯವಾಗಿ ಪ್ರಾಥಮಿಕ ತನಿಖೆ ಮುಗಿದ ಬಳಿಕ ಅನುಮತಿ ನೀಡಬೇಕಿತ್ತು. ಯಾವುದೇ ಪ್ರಾಥಮಿಕ ತನಿಖೆಯನ್ನು ಮಾಡದೇ ಅನುಮತಿ ನೀಡಲಾಗಿದೆ. ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಅಧಿಕಾರವೇ ಇಲ್ಲ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ರಾಜ್ಯಪಾಲರು ಅಧಿಕಾರ ವ್ಯಾಪ್ತಿ ಹೊಂದಿಲ್ಲ. ಸಾಂವಿಧಾನಿಕ ಪೀಠದ ತೀರ್ಪಿನ ಪ್ರಕಾರ ಮುಖ್ಯಮಂತ್ರಿಯನ್ನು ತೆಗೆಯುವ ಅಧಿಕಾರ ಇರುವುದು ಸ್ಪೀಕರ್‌ಗೆ. ರಾಜ್ಯಪಾಲರಿಗೆ ತನಿಖೆ ನಡೆಸಲು ಯಾವ ಅಧಿಕಾರವಿದೆ? ರಾಜ್ಯಪಾಲರು ರಾಷ್ಟ್ರಪತಿಗೆ ಪ್ರಕರಣ ವರ್ಗಾಯಿಸಬಹುದಿತ್ತು ಎಂದು ವಾದಿಸಿದರು.

    ವಾದವನ್ನು ಆಲಿಸಿದ ಹೈಕೋರ್ಟ್, ಪ್ರತಿವಾದಿಗಳಿಗೆ ನೋಟಿಸ್ ನೀಡಿ ಜ.25ಕ್ಕೆ ವಿಚಾರಣೆ ಮುಂದೂಡಿದೆ.

  • ಚುನಾವಣಾ ಬಾಂಡ್‌ ಬಳಸಿ ಸುಲಿಗೆ – ಸೀತಾರಾಮನ್‌, ಬಿಜೆಪಿ ನಾಯಕರ ಮೇಲಿದ್ದ ಕೇಸ್‌ ರದ್ದು

    ಚುನಾವಣಾ ಬಾಂಡ್‌ ಬಳಸಿ ಸುಲಿಗೆ – ಸೀತಾರಾಮನ್‌, ಬಿಜೆಪಿ ನಾಯಕರ ಮೇಲಿದ್ದ ಕೇಸ್‌ ರದ್ದು

    ಬೆಂಗಳೂರು: ಅಧಿಕಾರ ದುರುಪಯೋಗ ಪಡಿಸಿಕೊಂಡು ಚುನಾವಣಾ ಬಾಂಡ್‌ (Electoral Bonds) ಪಡೆದ ಆರೋಪದ ಮೇಲೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman), ಬಿಜೆಪಿ ನಾಯಕರ ಮೇಲೆ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಹೈಕೋರ್ಟ್‌ (High Court) ರದ್ದುಗೊಳಿಸಿದೆ.

    ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಆರೋಪಗಳಿಗೆ ಸಾಕಷ್ಟು ಆಧಾರಗಳಿಲ್ಲದ ಕಾರಣ ಎಫ್‌ಐಆರ್‌ ರದ್ದುಗೊಳಿಸಿ ಆದೇಶ ಪ್ರಕಟಿಸಿದೆ. ಈ ಮೊದಲು ಈ ಪ್ರಕರಣದ ವಿಚಾರಣೆಗೆ ಹೈಕೋರ್ಟ್‌ ತಡೆ ನೀಡಿತ್ತು.

    ನಿರ್ಮಲಾ ಸೀತಾರಾಮನ್‌ ಸೇರಿ ಹಲವರು ಚುನಾವಣಾ ಬಾಂಡ್‌ ಮೂಲಕ ಕೋಟ್ಯಂತರ ರೂ. ಹಣ ಸುಲಿಗೆ ಮಾಡಿದ್ದಾರೆಂದು ಆರೋಪಿಸಿ ಆದರ್ಶ್‌ ಐಯ್ಯರ್‌ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಫ್‌ಐಆರ್‌ ದಾಖಲಿಸಲು ಆದೇಶಿಸಿತ್ತು. ಆದೇಶದ ಬೆನ್ನಲ್ಲೇ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

    ದೂರುದಾರರ ಆದರ್ಶ್ ಐಯ್ಯರ್ ಪರವಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದಿಸಿದ್ದರು. ಎಸ್‌ಐಟಿ ರಚಿಸಿ ಈ ಪ್ರಕರಣದ ತನಿಖೆ ಮಾಡಬೇಕಿದೆ. ಜನರನ್ನು ಬೆದರಿಸಿ ಹಣ ಕಬಳಿಸಿದ್ದಾರೆ. ತನಿಖಾ ಸಂಸ್ಥೆಗಳನ್ನು ಸುಲಿಗೆ ಮಾಡಲು ಬಳಸಿಕೊಂಡಿದ್ದಾರೆ ಎಂದು ವಾದಿಸಿದ್ದರು.

    ಪ್ರಕರಣದಲ್ಲಿ ನಿರ್ಮಾಲಾ ಸೀತಾರಾಮನ್ ಅವರು ಎ1 ಆರೋಪಿಯಾಗಿದ್ದರೆ, ಇಡಿ ಅಧಿಕಾರಿಗಳು ಎ2, ಕೇಂದ್ರ ಬಿಜೆಪಿ ಪದಾಧಿಕಾರಿಗಳು ಎ3, ನಳಿನ್‌ ಕುಮಾರ್‌ ಕಟೀಲ್‌ ಎ4, ಬಿ.ವೈ.ವಿಜಯೇಂದ್ರ ಎ5, ರಾಜ್ಯ ಬಿಜೆಪಿ ಪದಾಧಿಕಾರಿಗಳು ಎ6 ಆರೋಪಿಗಳಾಗಿದ್ದರು.  ಇದನ್ನೂ ಓದಿ: ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲ ಪತ್ತೆಗೆ ಮಸ್ಕ್‌ನ ಸ್ಟಾರ್‌ಲಿಂಕ್ ಮೊರೆ ಹೋದ ಅಂಡಮಾನ್ ಪೊಲೀಸರು

    ದೂರು ಏನಿತ್ತು?
    ಒತ್ತಡದ ತಂತ್ರವಾಗಿ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಗಳನ್ನು ಉಲ್ಲೇಖಿಸಿ ಕಾರ್ಪೊರೇಟ್ ಸಂಸ್ಥೆಗಳು ಸಾವಿರಾರು ಕೋಟಿಗಳ ಚುನಾವಣಾ ಬಾಂಡ್‌ಗಳನ್ನು ಖರೀದಿಸಲು ಒತ್ತಾಯಿಸಲಾಗಿದೆ ಈ ಎಲೆಕ್ಟೋರಲ್ ಬಾಂಡ್‌ಗಳನ್ನು ಬಿಜೆಪಿ ನಾಯಕರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ನಗದೀಕರಿಸಿದ್ದಾರೆ. ಚುನಾವಣಾ ಬಾಂಡ್‌ಗಳ ಯೋಜನೆಯು ರಾಜಕೀಯ ಉದ್ದೇಶಗಳಿಗಾಗಿ ಅಕ್ರಮ ಹಣವನ್ನು ಸಂಗ್ರಹಿಸಲು ಅನುಕೂಲ ಮಾಡಿಕೊಟ್ಟಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

     

  • ಇಸ್ಕಾನ್ ಬ್ಯಾನ್‌ಗೆ ಒಪ್ಪದ ಬಾಂಗ್ಲಾ ಹೈಕೋರ್ಟ್

    ಇಸ್ಕಾನ್ ಬ್ಯಾನ್‌ಗೆ ಒಪ್ಪದ ಬಾಂಗ್ಲಾ ಹೈಕೋರ್ಟ್

    ಢಾಕಾ: ಇಸ್ಕಾನ್ (ISKCON) ಧಾರ್ಮಿಕ ಮೂಲಭೂತವಾದಿ ಸಂಘಟನೆಯಾಗಿದ್ದು, ಇದು ದೇಶಕ್ಕೆ ಅಪಾಯಕಾರಿಯಾಗಿದೆ ಎಂದು ಆರೋಪಿಸಿ ಇಸ್ಕಾನ್‌ ಸಂಸ್ಥೆಯನ್ನು ನಿಷೇಧಿಸಲು ಮುಂದಾಗಿದ್ದ ಬಾಂಗ್ಲಾದೇಶ (Bangladesh) ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ (High Court) ಮುಖಭಂಗವಾಗಿದೆ.

    ಬಾಂಗ್ಲಾದೇಶದಲ್ಲಿ ಇಸ್ಕಾನ್ ಚಟುವಟಿಕೆ ನಿಷೇಧಿಸಲು ಢಾಕಾ ಹೈಕೋರ್ಟ್ ನಿರಾಕರಿಸಿದೆ. ಅಲ್ಲದೇ ಹಿಂದೂಗಳ (Hindu) ಮೇಲೆ ದಾಳಿಯಾಗದಂತೆ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ.

    ಇಸ್ಕಾನ್‌ನ ಇತ್ತೀಚಿನ ಚಟುವಟಿಕೆಗಳ ಸಂಬಂಧ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ಅಟಾರ್ನಿ ಜನರಲ್‌ಗೆ ಸೂಚಿಸಿತು. ಇದನ್ನೂ ಓದಿ: ಸಂತ ಚಿನ್ಮಯ್‌ ಕೃಷ್ಣದಾಸ್‌ರಿಂದ ಅಂತರ ಕಾಯ್ದುಕೊಂಡ ಇಸ್ಕಾನ್‌

    ಈ ಪ್ರಶ್ನೆಗೆ ಉತ್ತರಿಸಿದ ಎಜಿ, ಚಿನ್ಮಯ್ ಕೃಷ್ಣದಾಸ್ (Chinmay Krishna Das) ಬಂಧನದ ಬಳಿಕ ತೀವ್ರ ಘರ್ಷಣೆಯಾಗಿದೆ. ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಸೈಫುಲ್ಲಾ ಇಸ್ಲಾಂ ಮೃತಪಟ್ಟಿದ್ದಾರೆ. ಇಸ್ಕಾನ್ ಮೇಲೆ 3 ಕೇಸ್‌ಗಳಿವೆ. 33 ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ತಿಳಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಬಾಂಗ್ಲಾದೇಶ ನೆಲದ ಕಾನೂನು ಸುವ್ಯವಸ್ಥೆ ಇಲ್ಲಿನ ನಾಗರಿಕರು, ಆಸ್ತಿಯ ರಕ್ಷಣೆಗೆ ಸರ್ಕಾರ ಎಲ್ಲಾ ರೀತಿಯ ಕ್ರಮಗೊಳ್ಳುವ ಭರವಸೆ ಕೊಟ್ಟಿದೆ. ಇಸ್ಕಾನ್ ನಿಷೇಧ ಮಾಡುವುದಿಲ್ಲ ಎಂದು ಹೇಳಿತು.

     

  • ಉದ್ಯಮಿ ಜೀವಾ ಆತ್ಮಹತ್ಯೆ ಕೇಸ್‌ – ಡೆತ್‌ನೋಟ್‌ FSLಗೆ ಕಳುಹಿಸಲು ಸಿಸಿಬಿ ತಯಾರಿ

    ಉದ್ಯಮಿ ಜೀವಾ ಆತ್ಮಹತ್ಯೆ ಕೇಸ್‌ – ಡೆತ್‌ನೋಟ್‌ FSLಗೆ ಕಳುಹಿಸಲು ಸಿಸಿಬಿ ತಯಾರಿ

    – ಕೋರ್ಟ್‌ ಚಾಟಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು

    ಬೆಂಗಳೂರು: ಭೋವಿ ನಿಗಮದಲ್ಲಿ ನಡೆದ ಅಕ್ರಮ (Bhovi Corporation Scam) ತನಿಖೆ ಎದುರಿಸಿದ್ದ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ (High Court) ಚಾಟಿ ಬೀಸಿದ ಬೆನ್ನಲ್ಲೇ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಘಟನೆ ಸಂಬಂಧ ಸಾಕ್ಷಿಗಳನ್ನು ಕಲೆಹಾಕಲು ಸಿಸಿಬಿ ವಿಶೇಷ ತನಿಖಾಧಿಕಾರಿಗಳ ತಂಡ ಮುಂದಾಗಿದೆ. ಜೀವಾ ತನಿಖೆ ಕರೆಯಲು ಕಾರಣ ಏನು? ಜೀವಾಗೆ ಸಂಬಂಧಿಸಿದ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಆಗಿದ್ಯಾ? ಎಷ್ಟು ಬಾರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ಎದುರಿಸಿದ್ದಾರೆ? ಎಂಬ ಆಯಾಮಗಳಲ್ಲಿ ತನಿಖೆ ನಡೆಸಲು, ಅಲ್ಲದೇ ಜೀವಾ ಅವರು ಬರೆದಿದ್ದ ಡೆತ್‌ನೋಟನ್ನ (Death Note) ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದರೊಂದಿಗೆ ಸಿಸಿಬಿ ಡಿವೈಎಸ್ಪಿ ಕನಕಲಕ್ಷ್ಮಿ ಅವರಿಗೆ ನೋಟಿಸ್‌ ನೀಡಿ ವಿಚಾರಣೆಗೆ ಕರೆಸಲು‌ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಸರ್ಕಾರಕ್ಕೆ ಕೋರ್ಟ್‌ ಚಾಟಿ:
    ಭೋವಿ ನಿಗಮದ ಅಕ್ರಮ ಪ್ರಕರಣದಲ್ಲಿ ಸಿಸಿಬಿ ಡಿವೈಎಸ್ಪಿ ಕನಕಲಕ್ಷ್ಮಿ (DySP Kanaka Lakshmi) ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್‌ನೋಟ್ (Death Note) ಬರೆದಿಟ್ಟು ವಕೀಲೆ, ಉದ್ಯಮಿ ಜೀವಾ ಆತ್ಮಹತ್ಯೆ (Jeeva Suicide Case) ಮಾಡಿಕೊಂಡಿರುವ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾಕೆ ಆರೋಪಿಯನ್ನು ಬಂಧಿಸಿಲ್ಲ ಎಂದು ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿತ್ತು. ಇದನ್ನೂ ಓದಿ: ಭೋವಿ ನಿಗಮದಿಂದ 34 ಕೋಟಿ ಹಣ ಅಕ್ರಮ ವರ್ಗಾವಣೆ – ಯಾರ‍್ಯಾರಿಗೆ ಎಷ್ಟು ಹಣ?

    ಪ್ರಕರಣದ ತನಿಖೆಯನ್ನು ಸಿಬಿಐಗೆ (CBI) ವಹಿಸುವಂತೆ ಕೋರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ, ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿತು. ಮೃತರು 13 ಪುಟಗಳ ಡೆತ್‌ನೋಟ್ ಬರೆದಿದ್ದಾರೆ. ಇಲ್ಲಿಯವರೆಗೆ ಆರೋಪಿಯನ್ನು ವಿಚಾರಣೆ ಮಾಡಿಲ್ಲ, ಅರೆಸ್ಟ್ ಮಾಡಿಲ್ಲ. ಡಿವೈಎಸ್‌ಪಿ ಎಂಬ ಕಾರಣಕ್ಕೆ ವಿಚಾರಣೆ ಮಾಡುತ್ತಿಲ್ಲವೇ ಎಂದು ಪ್ರಶ್ನಿಸಿ ಕ್ಲಾಸ್ ತೆಗೆದುಕೊಂಡಿತ್ತು. ಇದನ್ನೂ ಓದಿ: ಭೋವಿ ನಿಗಮ ಹಗರಣ: ಡಿವೈಎಸ್ಪಿ ಹೆಸರು ಬರೆದಿಟ್ಟರೂ ಬಂಧನ ಮಾಡಿಲ್ಲ ಯಾಕೆ – ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

    ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ ಇದ್ದರೆ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುತ್ತೇನೆ ಎಂದು ಹೇಳಿ ಗರಂ ಆಗಿದೆ. ಇದಕ್ಕೆ ಎಲ್ಲಾ ಪ್ರಕರಣದಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡುವುದಿಲ್ಲ. ಈ ಪ್ರಕರಣವನ್ನು ಸಿಸಿಬಿಗೆ ನೀಡಲಾಗಿದೆ ಎಂದು ಸರ್ಕಾರದ ಪರ ವಕೀಲ ಜಗದೀಶ್ ಉತ್ತರಿಸಿದರು. ಡಿವೈಎಸ್‌ಪಿ ಕನಕಲಕ್ಷ್ಮಿ ಪರ ವಾದ ಮಂಡಿಸಿದ ವಕೀಲರು, ನಮ್ಮ ಕಕ್ಷಿದಾರರು ಯಾವುದೇ ಕಿರುಕುಳ ನೀಡಿಲ್ಲ. ತನಿಖೆ ನಡೆದು ಸತ್ಯಾಸತ್ಯತೆ ಬರಲಿ. ಕನಕಲಕ್ಷ್ಮಿ ಲಾಟರಿ ಹಗರಣದಲ್ಲಿದ್ದರು ಎಂದು ಇವರು ಆರೋಪ ಮಾಡುವುದು ಸರಿಯಲ್ಲ ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಆದೇಶವನ್ನು ನವೆಂಬರ್ 29ಕ್ಕೆ ಕಾಯ್ದಿರಿಸಿದೆ.

    ಏನಿದು ಪ್ರಕರಣ?
    ಭೋವಿ ನಿಗಮ ಅಕ್ರಮ ಸಂಬಂಧ ಜೀವಾರನ್ನು ಸಿಐಡಿ ವಿಚಾರಣೆಗೆ ಒಳಪಡಿಸಿತ್ತು. ಆದರೆ ಕಿರುಕುಳದ ಆರೋಪ ಮಾಡಿ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಭೋವಿ ನಿಗಮದಲ್ಲಿ ಒಟ್ಟು 34 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ. ಇದರಲ್ಲಿ ಜೀವಾ ಮಾಲೀಕತ್ವದ ಸಂಸ್ಥೆ ಅನ್ನಿಕಾ ಎಂಟರ್‌ಪ್ರೆಸಸ್‌ಗೆ 7.16 ಕೋಟಿ ರೂ., ಅವರ ಸಹೋದರಿ ಹೆಸರಲ್ಲಿರುವ ಹರ್ನಿತಾ ಕ್ರಿಯೇಷನ್ಸ್‌ಗೆ 3.79 ಕೋಟಿ ರೂ. ವರ್ಗಾವಣೆ ಆಗಿತ್ತು. ಇನ್ನುಳಿದ ಹಣ ಮಾಜಿ ಎಂಡಿಗಳ ಆಪ್ತರ ಪಾಲುದಾರಿಕೆಯ ಸಂಸ್ಥೆಗಳಿಗೆ ವರ್ಗವಾಗಿತ್ತು. ಈ ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸಲು ಗೃಹ ಇಲಾಖೆ ಮುಂದಾಗಿದೆ. ಇದನ್ನೂ ಓದಿ: ಲಿವ್ ಇನ್ ಗೆಳತಿಯ ಮೇಲೆ ರೇಪ್; 40-50 ತುಂಡುಗಳಾಗಿ ಕತ್ತರಿಸಿ ಬಿಸಾಡಿದ ಕಿರಾತಕ

  • ಭೋವಿ ನಿಗಮ ಹಗರಣ: ಡಿವೈಎಸ್ಪಿ ಹೆಸರು ಬರೆದಿಟ್ಟರೂ ಬಂಧನ ಮಾಡಿಲ್ಲ ಯಾಕೆ – ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

    ಭೋವಿ ನಿಗಮ ಹಗರಣ: ಡಿವೈಎಸ್ಪಿ ಹೆಸರು ಬರೆದಿಟ್ಟರೂ ಬಂಧನ ಮಾಡಿಲ್ಲ ಯಾಕೆ – ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

    ಬೆಂಗಳೂರು: ಭೋವಿ ನಿಗಮದ ಅಕ್ರಮ ಪ್ರಕರಣದಲ್ಲಿ (Bhovi Nigama Scam) ಸಿಸಿಬಿ ಡಿವೈಎಸ್ಪಿ ಕನಕಲಕ್ಷ್ಮಿ (DySP Kanaka Lakshmi) ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್‌ನೋಟ್ (Death Note) ಬರೆದಿಟ್ಟು ವಕೀಲೆ, ಉದ್ಯಮಿ ಜೀವಾ ಆತ್ಮಹತ್ಯೆ (Jeeva Suicide Case) ಮಾಡಿಕೊಂಡಿರುವ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾಕೆ ಆರೋಪಿಯನ್ನು ಬಂಧಿಸಿಲ್ಲ ಎಂದು ಸರ್ಕಾರಕ್ಕೆ ಹೈಕೋರ್ಟ್ (High Court) ಚಾಟಿ ಬೀಸಿದೆ.

    ಪ್ರಕರಣದ ತನಿಖೆಯನ್ನು ಸಿಬಿಐಗೆ (CBI) ವಹಿಸುವಂತೆ ಕೋರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ, ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿತು.

    ಮೃತರು 13 ಪುಟಗಳ ಡೆತ್‌ನೋಟ್ ಬರೆದಿದ್ದಾರೆ. ಇಲ್ಲಿಯವರೆಗೆ ಆರೋಪಿಯನ್ನು ವಿಚಾರಣೆ ಮಾಡಿಲ್ಲ, ಅರೆಸ್ಟ್ ಮಾಡಿಲ್ಲ. ಡಿವೈಎಸ್‌ಪಿ ಎಂಬ ಕಾರಣಕ್ಕೆ ವಿಚಾರಣೆ ಮಾಡುತ್ತಿಲ್ಲವೇ ಎಂದು ಪ್ರಶ್ನಿಸಿ ಕ್ಲಾಸ್ ತೆಗೆದುಕೊಂಡಿದೆ. ಇದನ್ನೂ ಓದಿ: ದಿಢೀರ್‌ ದೆಹಲಿಗೆ ಸಿಎಂ – ಸಿದ್ದರಾಮಯ್ಯ ಸಂಪುಟಕ್ಕೆ ಶೀಘ್ರವೇ ಸರ್ಜರಿ?

    ರಾಜ್ಯಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ ಇದ್ದರೆ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುತ್ತೇನೆ ಎಂದು ಹೇಳಿ ಗರಂ ಆಗಿದೆ. ಇದಕ್ಕೆ ಎಲ್ಲಾ ಪ್ರಕರಣದಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡುವುದಿಲ್ಲ. ಈ ಪ್ರಕರಣವನ್ನು ಸಿಸಿಬಿಗೆ ನೀಡಲಾಗಿದೆ ಎಂದು ಸರ್ಕಾರದ ಪರ ವಕೀಲ ಜಗದೀಶ್ ಉತ್ತರಿಸಿದರು.

    ಡಿವೈಎಸ್‌ಪಿ ಕನಕಲಕ್ಷ್ಮಿ ಪರ ವಾದ ಮಂಡಿಸಿದ ವಕೀಲರು, ನಮ್ಮ ಕಕ್ಷಿದಾರರು ಯಾವುದೇ ಕಿರುಕುಳ ನೀಡಿಲ್ಲ. ತನಿಖೆ ನಡೆದು ಸತ್ಯಾಸತ್ಯತೆ ಬರಲಿ. ಕನಕಲಕ್ಷ್ಮಿ ಲಾಟರಿ ಹಗರಣದಲ್ಲಿದ್ದರು ಎಂದು ಇವರು ಆರೋಪ ಮಾಡುವುದು ಸರಿಯಲ್ಲ ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಆದೇಶವನ್ನು ನವೆಂಬರ್ 29ಕ್ಕೆ ಕಾಯ್ದಿರಿಸಿದೆ.

    ಏನಿದು ಪ್ರಕರಣ?
    ಭೋವಿ ನಿಗಮ ಅಕ್ರಮ ಸಂಬಂಧ ಜೀವಾರನ್ನು ಸಿಐಡಿ ವಿಚಾರಣೆಗೆ ಒಳಪಡಿಸಿತ್ತು. ಆದರೆ ಕಿರುಕುಳದ ಆರೋಪ ಮಾಡಿ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಭೋವಿ ನಿಗಮದಲ್ಲಿ ಒಟ್ಟು 34 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ. ಇದರಲ್ಲಿ ಜೀವಾ ಮಾಲೀಕತ್ವದ ಸಂಸ್ಥೆ ಅನ್ನಿಕಾ ಎಂಟರ್‌ಪ್ರೆಸಸ್‌ಗೆ 7.16 ಕೋಟಿ ರೂ., ಅವರ ಸಹೋದರಿ ಹೆಸರಲ್ಲಿರುವ ಹರ್ನಿತಾ ಕ್ರಿಯೇಷನ್ಸ್‌ಗೆ 3.79 ಕೋಟಿ ರೂ. ವರ್ಗಾವಣೆ ಆಗಿತ್ತು. ಇನ್ನುಳಿದ ಹಣ ಮಾಜಿ ಎಂಡಿಗಳ ಆಪ್ತರ ಪಾಲುದಾರಿಕೆಯ ಸಂಸ್ಥೆಗಳಿಗೆ ವರ್ಗವಾಗಿತ್ತು. ಈ ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸಲು ಗೃಹ ಇಲಾಖೆ ಮುಂದಾಗಿದೆ.

     

  • ಮುಡಾ ಹಗರಣ; ವಿಚಾರಣೆ ಡಿ.10 ಕ್ಕೆ ಮುಂದೂಡಿದ ಹೈಕೋರ್ಟ್‌

    ಮುಡಾ ಹಗರಣ; ವಿಚಾರಣೆ ಡಿ.10 ಕ್ಕೆ ಮುಂದೂಡಿದ ಹೈಕೋರ್ಟ್‌

    – ಕೋರ್ಟ್‌ಗೆ ತನಿಖಾ ವರದಿ ಸಲ್ಲಿಕೆ ಮಾಡದ ಲೋಕಾಯುಕ್ತ

    ಬೆಂಗಳೂರು: ಮುಡಾ ನಿವೇಶನಗಳನ್ನು ಅಕ್ರಮವಾಗಿ ಪಡೆದ ಪ್ರಕರಣದ ವಿಚಾರಣೆಯನ್ನು ಡಿ.10ಕ್ಕೆ ಮುಂದೂಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಡಿ.10 ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ಡೇ ಆಗಲಿದೆ.

    ಆರೋಪಿ ದೇವರಾಜು ಪರ ವಕೀಲರು ವಾದ ಮಂಡಿಸಿ, ವಿಭಾಗೀಯ ಪೀಠದಲ್ಲಿ ಡಿ.5 ಕ್ಕೆ ವಿಚಾರಣೆ ಬಾಕಿ ಇದೆ. ಹೀಗಾಗಿ ವಿಭಾಗೀಯ ಪೀಠದಲ್ಲಿ ವಿಚಾರಣೆ ಮುಕ್ತಾಯದ ಬಳಿಕ ಇಲ್ಲಿ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಸ್ನೇಹಮಯಿ ಕೃಷ್ಣ ಪರ ವಕೀಲ ಆಕ್ಷೇಪ ವ್ಯಕ್ತಪಡಿಸಿದರು.

    ಆ ಅರ್ಜಿ ಸಂದರ್ಭದಲ್ಲಿ ಇದನ್ನು ಮುಂದೂಡಬೇಕು ಅಂತ ಹೇಳಿಲ್ಲ ಎಂದು ಸ್ನೇಹಮಯಿ ಕೃಷ್ಣ ಪರ ವಕೀಲ ರಾಘವನ್ ತಿಳಿಸಿದರು. ಅಲ್ಲದೇ, ಇಂದು ಲೋಕಾಯುಕ್ತ ವರದಿ ಪಡೆಯಿರಿ ಎಂದು ರಾಘವನ್ ಮನವಿ ಮಾಡಿದರು. ಅದಕ್ಕೆ ನ್ಯಾಯಾಧೀಶರು, ಇವತ್ತು ಅರ್ಜಿ ವಿಚಾರಣೆ ನಡುತ್ತಿಲ್ಲ. ಹೀಗಾಗಿ ಡಿ.10 ಕ್ಕೆ ಮುಂದೂಡಲಾಗುವುದು ಎಂದು ಆದೇಶಿಸಿದರು.

    ಡಿಸೆಂಬರ್ 10ರ ಮಧ್ಯಾಹ್ನ 2:30 ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ. ಅವತ್ತೇ ವಾದ-ಪ್ರತಿವಾದ ಮುಕ್ತಾಯ ಮಾಡಬೇಕು ಎಂದು ಸೂಚಿಸಿದರು.

  • ದರ್ಶನ್‌ಗೆ ಇನ್ನೂ ಆಪರೇಷನ್‌ ಮಾಡಿಲ್ಲ ಯಾಕೆ? ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಏನಿದೆ?

    ದರ್ಶನ್‌ಗೆ ಇನ್ನೂ ಆಪರೇಷನ್‌ ಮಾಡಿಲ್ಲ ಯಾಕೆ? ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಏನಿದೆ?

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ಬಂಧನಕ್ಕೆ ಒಳಗಾದ ನಟ ದರ್ಶನ್‌ (Darshan) ಅವರು ಇನ್ನೂ ಮಾನಸಿಕವಾಗಿ ಸಿದ್ಧವಾಗದ ಕಾರಣ ಶಸ್ತ್ರಚಿಕಿತ್ಸೆ ನಡೆಸಿಲ್ಲ ಎಂದು ವಕೀಲರು ಹೈಕೋರ್ಟ್‌ಗೆ (High Court) ತಿಳಿಸಿದ್ದಾರೆ.

    ಅನಾರೋಗ್ಯದ ಕಾರಣ ನೀಡಿದ ದರ್ಶನ್‌ ಅವರಿಗೆ ಹೈಕೋರ್ಟ್‌ 6 ವಾರಗಳ ಜಾಮೀನು ನೀಡಿತ್ತು. ಜಾಮೀನು ನೀಡಿದರೂ ದರ್ಶನ್‌ ಅವರಿಗೆ ಇನ್ನೂ ಶಸ್ತ್ರಚಿಕಿತ್ಸೆ ನಡೆದಿಲ್ಲ. ಹೀಗಾಗಿ ಶಸ್ತ್ರ ಚಿಕಿತ್ಸೆ ಯಾಕೆ ನಡೆದಿಲ್ಲ ಎಂಬ ಪ್ರಶ್ನೆಗೆ ದರ್ಶನ್‌ ಪರ ವಕೀಲರು ಆರೋಗ್ಯಕ್ಕೆ ಸಂಬಂಧಿಸಿದ ವರದಿಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.

     

    ವರದಿಯಲ್ಲಿ ಏನಿದೆ?
    ದರ್ಶನ್‌ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡುವುದಕ್ಕೆ ತಯಾರಿ ಮಾಡಲಾಗುತ್ತಿದೆ. ದರ್ಶನ್ ಕೂಡ ಶಸ್ತ್ರಚಿಕಿತ್ಸೆಗೆ ತಯಾರಾಗುತ್ತಿದ್ದಾರೆ. ಆದರೆ ಅತಿಯಾದ ರಕ್ತದೊತ್ತಡ ಸಮಸ್ಯೆ ಎದುರಾಗಿದೆ. ಆಪರೇಷನ್‌ ಮಾಡಬೇಕಾದರೆ ರಕ್ತದೊತ್ತಡ ಸಮತೋಲನ ಆಗಿರಬೇಕು. ಇದನ್ನೂ ಓದಿ: ರಾಷ್ಟ್ರ ರಾಜಧಾನಿಗೂ ಲಗ್ಗೆಯಿಟ್ಟ ʻನಂದಿನಿʼ – ನಿತ್ಯ 5 ಲಕ್ಷ ಲೀಟರ್‌ ಹಾಲು ಪೂರೈಕೆ ಗುರಿ!

    ದರ್ಶನ್ ರಕ್ತದೊತ್ತಡದ ಸಮಸ್ಯೆ ಸಮತೋಲನಕ್ಕೆ ಬರುತ್ತಿಲ್ಲ. ಇನ್ನೂ ದರ್ಶನ್ ಕೂಡ ಶಸ್ತ್ರ ಚಿಕಿತ್ಸೆಗೆ ಮಾನಸಿಕವಾಗಿ ಸಿದ್ದರಾಗಬೇಕಿದೆ. ಸದ್ಯಕ್ಕೆ ಕನ್ಸರ್ವೇಟಿವ್ ಚಿಕಿತ್ಸೆ ಮುಂದುವರೆದಿದೆ. ಫಿಸಿಯೋಥೆರಪಿ ಮತ್ತು ಔಷಧಗಳಿಂದ ಸಮಸ್ಯೆ ನಿಯಂತ್ರಣದಲ್ಲಿಡುವ ಪ್ರಯತ್ನ ನಡೆಯುತ್ತಿದೆ.

     

    ಬೆನ್ನುಹುರಿ ನೋವಿಗೆ ಪರಿಹಾರ ಪಡೆಯಲು ಶಸ್ತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸಿಕೊಂಡಬೇಕೆಂದು ಕೋರಿ ದರ್ಶನ್‌ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಅಕ್ಟೋಬರ್‌ 30 ರಂದು ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

    ಪ್ರತಿ ವಾರ ವೈದ್ಯಕೀಯ ವರದಿಯನ್ನು ಸಲ್ಲಿಕೆ ಮಾಡಬೇಕು. ಪಾಸ್‌ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕೆಂದು ಕೋರ್ಟ್ ಷರತ್ತು ವಿಧಿಸಿತ್ತು. ದರ್ಶನ್ ಪರ ವಕೀಲರು ಮೂರು ತಿಂಗಳ ಜಾಮೀನು ಕೋರಿದ್ದರು. ಆದರೆ ಕೋರ್ಟ್ 6 ವಾರಗಳ ಜಾಮೀನು ಮಾತ್ರ ಮಂಜೂರು ಮಾಡಿ ದರ್ಶನ್‌ ಅವರಿಗೆ ತಾತ್ಕಾಲಿಕ ರಿಲೀಫ್‌ ನೀಡಿತ್ತು.

     

  • ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿಕೆ

    ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿಕೆ

    ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ (Darshan) ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನ.26 ಕ್ಕೆ ಮುಂದೂಡಿದೆ.

    ಕೊಲೆ ಕೇಸ್‌ನ ದರ್ಶನ್, ಪವಿತ್ರಾಗೌಡ ಸೇರಿ ಆರು ಆರೋಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಾಯಿತು. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ವಿಚಾರಣೆಯನ್ನು ಮುಂದೂಡಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌- ಹೀರೋ ಆಗಿ ಚಿತ್ರರಂಗಕ್ಕೆ ಡ್ರೋನ್‌ ಪ್ರತಾಪ್‌ ಎಂಟ್ರಿ

    ಈಗ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡ್ತಾ ಇದ್ದೀವಿ. ಇನ್ನೂ ನಮಗೆ ಆರೋಗ್ಯದ ಬಗ್ಗೆ ವರದಿ ಸಿಕ್ಕಿಲ್ಲ. ಒಂದು ವಾರದಲ್ಲಿ ಕೋರ್ಟ್‌ಗೆ ಹಾಕಿದ್ದಾರೆ. ಸೀಲ್ಡ್ ಕವರ್ ಅಲ್ಲಿ ನೀಡಿದ್ದಾರೆ. ನಮಗೆ ಗೊತ್ತಾಗ್ತಿಲ್ಲ ಎಷ್ಟು ದಿನ ಚಿಕಿತ್ಸೆ ಮುಂದುವರೆಯಬೇಕು ಅಂತ ನಮಗೂ ಒಂದು ಕಾಪಿ ನೀಡಬಹುದಲ್ವಾ ಎಂದ ಎಸ್‌ಪಿಪಿ ಪ್ರಸನ್ನಕುಮಾರ್ ವಾದಿಸಿದರು.

    ಈ ವೇಳೆ ದರ್ಶನ್ ಪರ ವಾದ ಮಂಡಿಸಿದ ಸಿ.ವಿ.ನಾಗೇಶ್, ಹೊಸದಾಗಿ ಮತ್ತೊಂದು ರಿಪೋರ್ಟ್ ನೀಡಿದರು. ಅಲ್ಲದೇ, ಶನಿವಾರಕ್ಕೆ ವಾದ ಮಂಡನೆಗೆ ಅವಕಾಶ ಕೋರಿದರು. ಇದನ್ನೂ ಓದಿ: ‘ರುದ್ರಾಭಿಷೇಕಂ’ ಚಿತ್ರಕ್ಕೆ ಚಾಲನೆ: ವೀರಗಾಸೆಯಲ್ಲಿ ವಿಜಯ ರಾಘವೇಂದ್ರ

    ನಾನು 15 ದಿನದಿಂದ ಕಾಯುತ್ತಾ ಇದ್ದೀನಿ. ವಾದ ಮಂಡನೆ ಆಗ್ತಾ ಇಲ್ಲ ಎಂದು ಪವಿತ್ರಗೌಡ ಪರ ವಕೀಲ ಟಾಮಿ ಸಬಾಷ್ಟಿಯನ್ ಮನವಿ ಮಾಡಿದರು. ಈ ವೇಳೆ ನ್ಯಾಯಾಧೀಶರು, ನ.26 ಕ್ಕೆ ವಾದ ಮಂಡನೆ ಮಾಡಬಹುದಾ ಎಂದು ಪ್ರಶ್ನಿಸಿದರು. ಅದರಂತೆ ವಿಚಾರಣೆಯನ್ನು ಮುಂದೂಡಿದರು.

  • ದರ್ಶನ್‌ ಮಧ್ಯಂತರ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ ಅರ್ಜಿ

    ದರ್ಶನ್‌ ಮಧ್ಯಂತರ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ ಅರ್ಜಿ

    ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ಗೆ (Darshan) ಹೈಕೋರ್ಟ್‌ ನೀಡಿದ ಜಾಮೀನು ಆದೇಶವನ್ನು ಸುಪ್ರೀಂನಲ್ಲಿ (Supreme Court) ಪ್ರಶ್ನಿಸಲು ಗೃಹ ಸಚಿವಾಲಯ ಗ್ರೀನ್‌ ಸಿಗ್ನಲ್‌ ನೀಡಿದೆ.

    ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಹೇಳಿದ್ದಾರೆ.

    ಗೃಹ ಸಚಿವಾಲಯ ಗ್ರೀನ್‌ ಸಿಗ್ನಲ್‌ ನೀಡಿದ ಬೆನ್ನಲ್ಲೇ ಸೋಮವಾರದ ಬಳಿಕ ಪೊಲೀಸರು ಮೇಲ್ಮನವಿ ಸಲ್ಲಿಕೆ ಮಾಡುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಪೊಲೀಸರ ಪರವಾಗಿ ವಾದ ಮಂಡಿಸಲು ಹಿರಿಯ ವಕೀಲ ವಿಎನ್‌ ರಘುಪತಿ ಅವರನ್ನು ಗೃಹ ಸಚಿವಾಲಯ ನೇಮಿಸಿದೆ.  ಇದನ್ನೂ ಓದಿ: BBK 11: ಹನುಮಂತನ ಪ್ರಪೋಸ್‌ಗೆ ನಾಚಿ ನೀರಾದ ಚಾರು

    ಅನಾರೋಗ್ಯದ ಕಾರಣಕ್ಕಾಗಿ ದರ್ಶನ್‌ ಅವರಿಗೆ ಹೈಕೋರ್ಟ್‌ (High Court) 6 ವಾರಗಳ ಮಧ್ಯಂತರ ಜಾಮೀನನ್ನು  ಮಂಜೂರು ಮಾಡಿತ್ತು. ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಯಲ್ಲಿ ದಾಖಲಾಗಿರುವ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇನ್ನೂ ಕೂಡ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ಈ ಎಲ್ಲಾ ಅಂಶಗಳನ್ನು ಪೊಲೀಸರು ಮೇಲ್ಮನವಿ ಅರ್ಜಿಯಲ್ಲಿ ಪ್ರಸ್ತಾಪಿಸಲಿದ್ದಾರೆ.