ರಾಮನಗರ: ಬಿಡದಿಯ ಕೇತಗಾನಹಳ್ಳಿ (Kethaganahalli) ಸರ್ವೇ ನಂ. 7, 8, 9, 10, 16, 17 ಮತ್ತು 79ರಲ್ಲಿ 14 ಎಕರೆ ಭೂ ಒತ್ತುವರಿ ಆರೋಪ ಹಿನ್ನೆಲೆ ಇಂದಿನಿಂದ ತೆರವು ಕಾರ್ಯಾಚರಣೆ ಆರಂಭವಾಗಿದೆ. ಇದರ ಬೆನ್ನಲ್ಲೇ ಭೂ ದಾಖಲೆಗಳ ಇಲಾಖೆಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಪತ್ರ ಬರೆದಿದ್ದಾರೆ.
ರಾಮನಗರದ (Ramanagara) ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿರುವ ಹೆಚ್‌ಡಿಕೆ, ಕಾನೂನು ಬಾಹಿರವಾಗಿ ಹೆಚ್ಚುವರಿ ಜಮೀನು ನನ್ನಲ್ಲಿದ್ದರೆ, ಅದನ್ನ ವಶಕ್ಕೆ ತೆಗೆದುಕೊಳ್ಳಬಹುದು. ಹಾಗೆಯೇ ಕೇತಗಾನಹಳ್ಳಿ ಗ್ರಾಮದ ಸರ್ವೇ ನಂ.7ರಲ್ಲಿ ತಪ್ಪಿ ಹೋಗಿರುವ ನನ್ನ ಜಮೀನುನನ್ನು (Land) ಹುಡುಕಿಕೊಡಿ ಎಂದು ಆಗ್ರಹಿಸಿದ್ದಾರೆ.
ಪತ್ರದಲ್ಲಿ ಏನಿದೆ?
ರಾಮನಗರ ತಾಲೂಕು ಬಿಡದಿ ಹೋಬಳಿಯ ಕೇತಗಾನಹಳ್ಳಿ ಸರ್ವೇ ನಂ. 7, 8, 9, 10, 16, 17 ಮತ್ತು 79ರಲ್ಲಿ ಭೂ ಒತ್ತುವರಿ ಆಗಿದ್ದರೆ, ಸರ್ವೇ ನಡೆಸಿ ವರದಿ ನೀಡುವಂತೆ ರಾಜ್ಯ ಗೌರವಾನ್ವಿತ ಹೈಕೋರ್ಟ್ ನಿರ್ದೇಶನ ನೀಡಿರುವುದು ಸರಿಯಷ್ಟೇ. ಕೋರ್ಟ್ ಆದೇಶದಂತೆಯೇ ಸಮೀಕ್ಷಾ ತಂಡ ಕಳೆದ ಫೆ.18ರಂದು ಮಂಗಳವಾರ ಎಲ್ಲಾ ಸರ್ವೇ ನಂಬರ್ ಜಾಗದಲ್ಲಿಯೂ ಸಮೀಕ್ಷೆ ನಡೆಸಿದೆ.
ಸರ್ವೇ ನಂ. 7 ರಲ್ಲಿ ನಾನು 5 ಎಕರೆ 20 ಗುಂಟೆ ಜಮೀನು ಖರೀದಿಸಿದ್ದೇನೆ. ಈ ಪೈಕಿ 1.25 ಎಕರೆ ಜಮೀನಿನಲ್ಲಿ ಮಾತ್ರ ನನ್ನ ಅನುಭವದಲ್ಲಿದೆ. ಈ ಜಮೀನನ್ನು ಕೇತಗಾನಹಳ್ಳಿ ಗ್ರಾಮದವರಿಂದಲೇ ಖರೀದಿ ಮಾಡಿದ್ದು. ಉಳಿದ ಜಮೀನನ್ನು ತಾವು ಹುಡುಕಿಕೊಡುವಂತೆ ಮನವಿ ಮಾಡುತ್ತೇನೆ ಎಂದು ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರಿಗೆ ಪತ್ರದಲ್ಲಿ ತಿಳಿಸಿದ್ದಾರೆ.
ರಾಮನಗರ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಕುಟುಂಬಕ್ಕೆ ಸೇರಿದ್ದ ಕೇತಗಾನಹಳ್ಳಿ (Kethaganahalli) ಜಮೀನಿನಲ್ಲಿ ಒತ್ತುವರಿ ಭೂಮಿಯನ್ನು ತೆರವು ಮಾಡುವಂತೆ ಹೈಕೋರ್ಟ್ (High Court) ಸೂಚನೆ ನೀಡಿದ್ದ ಬೆನ್ನಲ್ಲೇ ತೆರವು ಕಾರ್ಯಾಚರಣೆ ಆರಂಭವಾಗಿದೆ.
ಬಿಡದಿಯ ಕೇತಗಾನಹಳ್ಳಿಯ ಸರ್ವೇ ನಂಬರ್ 7, 8, 9, 10, 16, 17 ಮತ್ತು 79ರಲ್ಲಿ 14 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಸರ್ವೇ ಇಲಾಖೆಯಿಂದ ಜಂಟಿ ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಇಂದು (ಮಾ.18) ಒತ್ತುವರಿ ತೆರವು ಕಾರ್ಯಾಚರಣೆಗೆ ಕಂದಾಯ ಇಲಾಖೆ ಮುಂದಾಗಿದೆ. ಇದನ್ನೂ ಓದಿ: ನನ್ನನ್ನ ಟಾರ್ಗೆಟ್ ಮಾಡೋದಕ್ಕೆ ಕೇತಗಾನಹಳ್ಳಿ ಜಮೀನು ಸರ್ವೆ – ಕುಮಾರಸ್ವಾಮಿ ಕಿಡಿ
ಸ್ಥಳಕ್ಕೆ ಡಿಸಿ ಯಶವಂತ್ ವಿ ಗುರುಕರ್, ಎಎಸ್‍ಪಿ ಸುರೇಶ್, ಎಎಸ್‍ಪಿ ರಾಮಚಂದ್ರಯ್ಯ ಭೇಟಿ ನೀಡಿದ್ದಾರೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಈ ಹಿಂದೆ ನನ್ನನ್ನು ಟಾರ್ಗೆಟ್ ಮಾಡಲು ಸರ್ಕಾರ ಒತ್ತುವರಿ ಆರೋಪ ಮಾಡ್ತಿದೆ. ಯಾವುದೇ ತನಿಖೆಗೆ ನಾನು ಸಿದ್ಧ. ಎಲ್ಲಾ ದಾಖಲಾತಿಗಳು ನನ್ನ ಬಳಿ ಇವೆ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು.
ಈ ಆರೋಪದ ವಿಚಾರವಾಗಿ ಭೂ ದಾಖಲೆಗಳ ಇಲಾಖೆಗೆ ಕುಮಾರಸ್ವಾಮಿಯವರು ಬರೆದ ಪತ್ರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಕಾನೂನು ಬಾಹಿರವಾಗಿ ನನ್ನನ್ನಲ್ಲಿ ಹೆಚ್ಚುವರಿ ಜಮೀನು ಇದ್ದರೆ ವಶಪಡಿಸಿಕೊಳ್ಳಬಹುದು. ಅಲ್ಲದೇ ಇದರಲ್ಲಿ ಕಳೆದು ಹೋಗಿರುವ ಜಮೀನನ್ನೂ ಹುಡುಕಿಕೊಡಿ. ಸರ್ವೇ ನಂಬರ್ 7ರಲ್ಲಿ 5 ಎಕರೆ 20ಗುಂಟೆ ಜಮೀನು ಖರೀದಿಸಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಬೆಂಗಳೂರು: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S. Yediyurappa) ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ (POCSO Case) ಖುದ್ದು ಹಾಜರಾಗುವಂತೆ ನೀಡಿದ್ದ ವಿಶೇಷ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ (High Court) ತಡೆ ನೀಡಿದೆ.
ವಿಶೇಷ ನ್ಯಾಯಾಲಯದ ಸಮನ್ಸ್ ಹಾಗೂ ಕೋರ್ಟ್ ಕಾಗ್ನಿಜೆನ್ಸ್ ರದ್ದು ಮಾಡುವಂತೆ ಕೋರಿ ಬಿಎಸ್‍ವೈ ಮತ್ತು ಇತರ ಮೂವರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ಪೀಠ ಸಮನ್ಸ್ ಆದೇಶಕ್ಕೆ ತಡೆ ನೀಡಿದೆ.
ಮುಂದಿನ ವಿಚಾರಣೆಯವರೆಗೂ ಫಾಸ್ಟ್ ಟ್ರ್ಯಾಕ್ ಕೋರ್ಟ್‍ಗೆ ಹಾಜರಾತಿಗೆ ವಿನಾಯಿತಿ ನೀಡಲಾಗಿದೆ. ಈ ಮೂಲಕ ಮಾ.15ರಂದು ಅವರು ಫಾಸ್ಟ್ ಟ್ರ್ಯಾಕ್ ಕೋರ್ಟ್‍ಗೆ ಖುದ್ದು ಹಾಜರಾಗುವುದರಿಂದ ಬಚಾವ್ ಆಗಿದ್ದಾರೆ. ಶನಿವಾರ ಖುದ್ದು ವಿಚಾರಣೆ ಹಾಜರಾಗುವಂತೆ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು.
ಬಿಎಸ್‍ವೈ ಅರ್ಜಿಯ ವಿವರವಾದ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.
ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿದರು. ಈ ಹಿಂದೆ ಹೈಕೋರ್ಟ್ ಮೆರಿಟ್ಸ್ ಆಧಾರದಲ್ಲಿ ತೀರ್ಮಾನಿಸಿರಲಿಲ್ಲ. ವಿಚಾರಣೆ ವೇಳೆ ಹೈಕೋರ್ಟ್ ಮಧ್ಯಂತರ ರಿಲೀಫ್ ನೀಡಿತ್ತು. ಖುದ್ದು ಹಾಜರಾತಿಯಿಂದಲೂ ಹೈಕೋರ್ಟ್ ವಿನಾಯಿತಿ ನೀಡಿತ್ತು.
ಫೆ.2, 2024 ರಂದು ಬಾಲಕಿಯೊಬ್ಬಳನ್ನು ಅನುಚಿತವಾಗಿ ಸ್ಪರ್ಶಿಸಿದ ಆರೋಪ ಅವರ ಮೇಲಿದೆ. ಈ ಸಂಬಂಧ 1 ತಿಂಗಳ ಬಳಿಕ ಪೊಲೀಸ್ ಆಯುಕ್ತರಿಗೆ ಬಾಲಕಿಯ ತಾಯಿ ದೂರು ನೀಡಿದ್ದರು. ಆಕೆಯ ತಾಯಿಯ ಹೇಳಿಕೆ ಮೇಲೆ ಆರೋಪಪಟ್ಟಿ ದಾಖಲಿಸಲಾಗಿತ್ತು.
ಬೆಂಗಳೂರು: ಕೆ ಆರ್ ನಗರ ಅತ್ಯಾಚಾರ (KR Nagara Rape) ಸಂತ್ರಸ್ತೆ ಅಪಹರಣ (Kidnap) ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ (Bhavani Revanna) ಹೈಕೋರ್ಟ್ (High Court) ಮೊರೆ ಹೋಗಿದ್ದಾರೆ.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು (Bail) ನೀಡುವಾಗ ವಿಧಿಸಿದ್ದ ಷರತ್ತು ಸಡಿಲಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಓಲಾದ 1 ಸಾವಿರ ಉದ್ಯೋಗಿಗಳು ಮನೆಗೆ
ಜಾಮೀನು ಮಂಜೂರು ಮಾಡುವ ವೇಳೆ, ಬೆಂಗಳೂರು ಬಿಟ್ಟು ಹೊರಗೆ ಹೋಗುವಂತೆ ಇಲ್ಲ. ಹೊರಗೆ ಹೋಗಬೇಕಾದರೆ ನ್ಯಾಯಾಲಯದ ಅನುಮತಿ ಪಡೆಯಬೇಕು ಷರತ್ತು ವಿಧಿಸಲಾಗಿದೆ.
ಕೋರ್ಟ್ ವಿಧಿಸಿದ ಈ ಷರತ್ತನ್ನು ಸಡಿಲಿಕೆ ಮಾಡುವಂತೆ ಮನವಿ ಮಾಡಿದ್ದು, ಹೈಕೋರ್ಟ್ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದೆ.
– 3 ವರ್ಷ ಜೈಲು ಶಿಕ್ಷೆ ಅಮಾನತುಗೊಳಿಸಿದ ಹೈಕೋರ್ಟ್ – ದಂಡದ ಮೊತ್ತ ಠೇವಣಿ ಇಡಲು ಆದೇಶ
ಬೆಂಗಳೂರು: ಬ್ಯಾಂಕ್ ಹಗರಣ (Bank Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ (Krishnaiah Shetty) ಹೈಕೋರ್ಟ್ (High Court) ಬಿಗ್ ರಿಲೀಫ್ ನೀಡಿದೆ. ಕೃಷ್ಣಯ್ಯ ಶೆಟ್ಟಿಗೆ ವಿಧಿಸಿದ್ದ 3 ವರ್ಷ ಜೈಲು ಶಿಕ್ಷೆಯನ್ನು ಹೈಕೋರ್ಟ್ ಅಮಾನತುಗೊಳಿಸಿದೆ.
ಬ್ಯಾಂಕ್ ಹಗರಣದಲ್ಲಿ ಕೃಷ್ಣಯ್ಯ ಶೆಟ್ಟಿಗೆ ಕೆಳಹಂತದ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ನೀಡಿತ್ತು. ಕೆಳಹಂತದ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ ಹೈಕೋರ್ಟ್ ಪ್ರತಿವಾದಿಗಳಿಗೆ ನೋಟಿಸ್ ನೀಡಿದೆ. ಕೃಷ್ಣಯ್ಯ ಶೆಟ್ಟಿಗೆ ಶಿಕ್ಷೆ ಅಮಾನತುಗೊಳಿಸಿ ದಂಡದ ಮೊತ್ತ ಠೇವಣಿ ಇಡಲು ಹೈಕೋರ್ಟ್ ಆದೇಶ ಹೊರಡಿಸಿದೆ. ಇದನ್ನೂ ಓದಿ: ತುಂಬಾ ಅನ್ಯಾಯ: ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಟ್ರಂಪ್ ಅಪಸ್ವರ
2012ರಲ್ಲಿ ಬಾಲಾಜಿಕೃಪಾ ಎಂಟರ್‌ಪ್ರೈಸಸ್’ನ ಮಾಲೀಕ ಕೃಷ್ಣಯ್ಯ ಶೆಟ್ಟಿ 1993ರಲ್ಲಿ ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ಗೃಹ ನಿರ್ಮಾಣಕ್ಕೆ ಸಾಲ ಕೊಡಿಸುವುದಾಗಿ ಆಮಿಷವೊಡ್ಡಿ, ಹಲವು ನೌಕರರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ 7.17 ಕೋಟಿ ರೂ. ಬ್ಯಾಂಕ್ ಸಾಲ ಪಡೆದಿದ್ದರು. ಈವರೆಗೆ 3.53 ಕೋಟಿ ರೂ. ಸಾಲ ತೀರಿಸಿಲ್ಲ ಎಂದು ಆರೋಪಿಸಲಾಗಿತ್ತು. ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ, ಚಾರ್ಜ್‌ಶೀಟ್ ಸಲ್ಲಿಸಿತ್ತು. ಇದನ್ನೂ ಓದಿ: ಉದಯಗಿರಿ ದಾಂಧಲೆ ಕೇಸ್- ಪ್ರಚೋದನಕಾರಿ ಭಾಷಣ ಮಾಡಿದ್ದ ಮೌಲ್ವಿಗೆ ನ್ಯಾಯಾಂಗ ಬಂಧನ
ಬೆಂಗಳೂರು: ಮೂಡಾ (MUDA Case) ಎಂಬ ಸುಳ್ಳು ಪ್ರಕರಣವನ್ನು ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯನವರ (CM Siddaramaiah) ಹೆಸರಿಗೆ ಮಸಿ ಬಳಿಯುವ ಹಾಗೂ ಜನಪರ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ವಿರೋಧ ಪಕ್ಷಗಳ ರಾಜಕೀಯ ಷಡ್ಯಂತ್ರಕ್ಕೆ ಸೋಲಾಗಿದೆ. ಲೋಕಾಯುಕ್ತ ಸಂಸ್ಥೆ ಕಾನೂನು ಬದ್ದವಾಗಿ ತನಿಖೆ ನಡೆಸಲಿದ್ದು ಸದ್ಯದಲ್ಲೇ ಸತ್ಯ ಹೊರಬೀಳಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು (NS Boseraju) ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆಯನ್ನು ನೀಡಿರುವ ಅವರು ಇಂದು ಹೈಕೋರ್ಟ್ (High Court) ನೀಡಿರುವ ತೀರ್ಪು ಬಹಳ ಮಹತ್ವದ್ದಾಗಿದೆ.
ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದಾಗ ಅಸಾಧ್ಯವೆಂದು ಅಣಕವಾಡಿದ್ದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಈಗ ಸಿದ್ದರಾಮಯ್ಯನವರು ನುಡಿದಂತೆ ನಡೆಯುತ್ತಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಬಡವರು ಹಾಗೂ ಮಧ್ಯಮ ವರ್ಗದ ಪಾಲಿಗೆ ಉತ್ತಮ ಆಡಳಿತ ನೀಡುತ್ತಿರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಹೇಗಾದರೂ ಮಾಡಿ ಸಿದ್ದರಾಮಯ್ಯನವರ ಹೆಸರಿಗೆ ಮಸಿ ಬಳಿಯಬೇಕು, ಜನಪರ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಆ ಪ್ರಯತ್ನಗಳ ಪೈಕಿ ಮುಡಾ ಪ್ರಕರಣ ಕೂಡ ಒಂದಾಗಿದೆ. ಇದನ್ನೂ ಓದಿ: POCSO Case: ಬಂಧನ ಭೀತಿಯಿಂದ ಬಚಾವ್, ಬಿಎಸ್‌ವೈಗೆ ಜಾಮೀನು- ಕೋರ್ಟ್ ಹೇಳಿದ್ದೇನು?
2021ರಲ್ಲಿ ಸಿದ್ದರಾಮಯ್ಯನವರ ಕುಟುಂಬಕ್ಕೆ 14 ಸೈಟ್ ಕೊಟ್ಟ ಬಸವರಾಜ ಬೊಮ್ಮಾಯಿ ಅವರಿಗೆ ಇಡಿ ನೋಟಿಸ್ ನೀಡಬೇಕಿತ್ತು. ಮುಡಾಗೆ ಸಂಬಂಧಿಸಿ ಜಮೀನಿನ ನೋಂದಣಿ, 50:50 ನೀಡಿಕೆ ರೂಲ್ಸ್, ಸೈಟ್ ನೀಡಿದ್ದು ಎಲ್ಲವೂ ಬಿಜೆಪಿ ಸರ್ಕಾರದ ಅವಧಿಯಲ್ಲೇ ನಡೆದಿರುವಾಗ ಸಿದ್ದರಾಮಯ್ಯನವರನ್ನು ಗುರಿಯಾಗಿಸಿಕೊಂಡಿರುವುದು ರಾಜಕೀಯ ದುರುದ್ದೇಶವಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಬಿಜೆಪಿಯ ಸ್ಥಿತಿ ಮನೆಯೊಂದು ನೂರು ಬಾಗಿಲು ಎಂಬಂತಾಗಿದೆ. ಬಿಜೆಪಿ ಆಂತರಿಕ ಕಲಹವನ್ನು ಮುಚ್ಚಿಹಾಕಲು ಮುಡಾ ವಿಚಾರವನ್ನು ಮುಂದಿಟ್ಟು ಸುಖಾಸುಮ್ಮನೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿ ವಿರೋಧ ಪಕ್ಷಗಳು ಸಫಲರಾಗುವುದಿಲ್ಲ ಎಂದಿದ್ದಾರೆ.
ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ (POCSO Case) ಮುಖ್ಯಮಂತ್ರಿ ಯಡಿಯೂರಪ್ಪಗೆ (BS Yediyurappa) ಭಾಗಶಃ ರಿಲೀಫ್ ಸಿಕ್ಕಿದೆ.
ತಮ್ಮ ವಿರುದ್ಧದ ಪ್ರಕರಣವನ್ನು ರದ್ದು ಮಾಡುವಂತೆ ಹಾಗೂ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ 2 ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ (High Court) ಸಕ್ಷಮ ನ್ಯಾಯಾಲಯದ ಆದೇಶವನ್ನು ವಜಾ ಮಾಡಿ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
`ಹೈ’ ತೀರ್ಪಿನಲ್ಲಿ ಏನಿದೆ?
ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಲಾಗಿದೆ. ಬಿಎಸ್‌ವೈ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ಸಕ್ಷಮ ಕೋರ್ಟ್ ಸಂಜ್ಞೆ ಪರಿಗಣಿಸಿರುವ ಆದೇಶ ವಜಾಗೊಳಿಸಲಾಗಿದೆ. ಅಪರಾಧ, ತನಿಖೆ, ಅಂತಿಮ ವರದಿ ಹಾಗೆಯೇ ಉಳಿಯಲಿದೆ.
ಅಂತಿಮ ವರದಿಗೆ ಸಂಬಂಧಿಸಿ ಆದೇಶ ಮಾಡಲು ಮತ್ತೆ ಸಕ್ಷಮ ಕೋರ್ಟ್‌ಗೆ ಪ್ರಕರಣ ವರ್ಗ ಮಾಡಲಾಗಿದೆ. ಸಂಜ್ಞೆ ಆದೇಶ ಹೊರತುಪಡಿಸಿ ಉಳಿದ ಎಲ್ಲಾ ವಾದಗಳನ್ನು ಮುಕ್ತವಾಗಿ ಇರಿಸಲಾಗಿದೆ. ಅರ್ಜಿದಾರರು ಸೂಕ್ತ ವೇದಿಕೆಯಲ್ಲಿ ಪರಿಹಾರ ಪಡೆಯಬಹುದು.
ಬೆಂಗಳೂರು: ಮುಡಾ ಕೇಸ್ (MUDA Scam) ಸಿಬಿಐ(CBI) ತನಿಖೆಗೆ ಕೊಡಲು ಹೈಕೋರ್ಟ್ (High Court) ನಿರಾಕರಿಸಿದ ತೀರ್ಪನ್ನು ನಾವು ಸ್ವಾಗತ ಮಾಡುತ್ತೇವೆ. ಆದರೆ ಮುಡಾ ಅಕ್ರಮದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದ್ದಾರೆ.
ಹೈಕೋರ್ಟ್ ತೀರ್ಪಿನ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಅವರು ಮಾತನಾಡಿದರು. ಈ ವೇಳೆ, ಮುಡಾ ಕೇಸ್ ತನಿಖೆ ಸಿಬಿಐಗೆ ಕೊಡಬೇಕು ಎಂಬ ಅರ್ಜಿಯನ್ನು ಹೈಕೋರ್ಟ್ ತಿರಸ್ಕಾರ ಮಾಡಿದೆ. ಈಗಾಗಲೇ ಲೋಕಾಯುಕ್ತ, ಇಡಿ ತನಿಖೆ ನಡೆಸುತ್ತಿದೆ. ಸದ್ಯ ಹೈಕೋರ್ಟ್ ಕೊಟ್ಟಿರೋ ತೀರ್ಪು ಸಿದ್ದರಾಮಯ್ಯ ಅವರಿಗೆ ರಿಲೀಫ್ ಸಿಕ್ಕಿದೆ. ಮುಡಾ ಹೆಸರಿನಲ್ಲಿ ಲೂಟಿ ಆಗಿರೋದು ರಾಜ್ಯದ ಖಾಜಾನೆಗೆ ಬರುತ್ತೆ ಎಂಬ ನಂಬಿಕೆ ಇದೆ. ಕಾನೂನಿನ ಮೇಲೆ ನಮಗೆ ಗೌರವ ಇದೆ. ಮುಡಾ ಪ್ರಕರಣವನ್ನ ಸಿಬಿಐಗೆ ಕೊಡಬೇಕು ಎಂದು ನಾವು ಹೋರಾಟ ಮಾಡಿದ್ವಿ. ಮತ್ತೆ ಕಾನೂನು ಪ್ರಕಾರ ಏನು ಹೋರಾಟ ಮಾಡಬೇಕೋ ಅದನ್ನ ಮುಂದುವರೆಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ – CBI ತನಿಖೆಗೆ ವಹಿಸಲು ಹೈಕೋರ್ಟ್ ನಕಾರ
ನವದೆಹಲಿ: ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ಶವ ಸಂಭೋಗ ಎಂಬುದು ಅತ್ಯಾಚಾರ ಅಪರಾಧವಾಗದು ಎಂದು ಕರ್ನಾಟಕ ಹೈಕೋರ್ಟ್
(High Court) 2023ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ (Supreme Court) ತಿರಸ್ಕರಿಸಿದೆ.
ನ್ಯಾ.ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠವು, ಸಂಸತ್ತು ಈ ವಿಚಾರವಾಗಿ ಪರಿಶೀಲನೆ ನಡೆಸಬೇಕು. ಅಗತ್ಯವಿದ್ದರೆ ಕಾಯಿದೆಯಲ್ಲಿ ಬದಲಾವಣೆ ಮಾಡಬಹುದು. ಈ ಸಂಬಂಧ ಸರ್ಕಾರ ಸಂಸತ್ತಿಗೆ ಪತ್ರ ಬರೆಯಬಹುದು ಎಂದು ತಿಳಿಸಿದೆ.
ಪ್ರಕರಣದ ಆರೋಪಿ 21 ವರ್ಷದ ಮಹಿಳೆಯನ್ನು ಕೊಲೆ ಮಾಡಿ ನಂತರ ಮೃತದೇಹದೊಂದಿಗೆ ಸಂಭೋಗ ನಡೆಸಿದ್ದ. ವಿಚಾರಣಾ ನ್ಯಾಯಾಲಯ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಮತ್ತು ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ಅತ್ಯಾಚಾರ ಎರಡೂ ಕೃತ್ಯಗಳಿಗೆ ಶಿಕ್ಷೆ ವಿಧಿಸಿತ್ತು.ಇದನ್ನೂ ಓದಿ: ಶೀಲ ಶಂಕಿಸಿ ನಡುರಸ್ತೆಯಲ್ಲಿಯೇ 8 ಬಾರಿ ಚಾಕು – ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ
2023ರ ಮೇಯಲ್ಲಿ ತೀರ್ಪು ನೀಡಿದ ಹೈಕೋರ್ಟ್ ಶವ ಸಂಭೋಗ ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ. ಅಲ್ಲದೆ ಅದು ಐಪಿಸಿ ಸೆಕ್ಷನ್ 377ರ ಅಡಿಯಲ್ಲಿ ಅಸ್ವಾಭಾವಿಕ ಲೈಂಗಿಕ ಕೃತ್ಯದ ವ್ಯಾಪ್ತಿಗೂ ಬರುವುದಿಲ್ಲ ಎಂದಿತ್ತು. ಐಪಿಸಿ ಸೆಕ್ಷನ್ 375 ಮತ್ತು 377ನ್ನು ಎಚ್ಚರಿಕೆಯಿಂದ ಓದಿದಾಗ, ಮೃತ ದೇಹವನ್ನು ಮನುಷ್ಯ ಅಥವಾ ವ್ಯಕ್ತಿ ಎಂದು ಕರೆಯಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂz, 375 ಅಥವಾ 377ನೇ ಸೆಕ್ಷನ್‌ಗಳನ್ನು ಅನ್ವಯಿಸಲಾಗುವುದಿಲ್ಲ ಎಂದು ಹೈಕೋರ್ಟ್ ವಿವರಿಸಿತ್ತು.
ಆದರೆ ಶವ ಸಂಭೋಗವನ್ನು ಅಪರಾಧ ಎಂದು ಪರಿಗಣಿಸುವುದಕ್ಕಾಗಿ ಐಪಿಸಿಯಲ್ಲಿ ಬದಲಾವಣೆಗಳನ್ನು ಮಾಡಲು ಕೇಂದ್ರ ಸರ್ಕಾರಕ್ಕೆ ಇದು ಸಕಾಲ. ಇಂತಹ ಕೃತ್ಯವನ್ನು ಅಪರಾಧೀಕರಿಸಲು ಐಪಿಸಿಯ ಸೆಕ್ಷನ್ 377 ಅನ್ನು ತಿದ್ದುಪಡಿ ಮಾಡಬೇಕು ಅಥವಾ ಪ್ರತ್ಯೇಕ ಸೆಕ್ಷನ್ ಜಾರಿಗೆ ತರಬೇಕು ಎಂತಲೂ ನ್ಯಾಯಾಲಯ ಹೇಳಿತ್ತು.
ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗೆ ಶಿಕ್ಷೆ ವಿಧಿಸಿತ್ತಾದರೂ ಮಹಿಳೆಯ ಮೃತ ದೇಹದ ಮೇಲೆ ಅತ್ಯಾಚಾರ ನಡೆದಿದ್ದ ಕಾರಣಕ್ಕೆ ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ಆರೋಪಿಯನ್ನು ಖುಲಾಸೆಗೊಳಿಸಲಾಗಿತ್ತು. ತೀರ್ಪು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಸರ್ಕಾರದ ಪರವಾಗಿ ಹಾಜರಾದ ವಕೀಲ ಅಮನ್ ಪನ್ವರ್, ಮೃತ ವ್ಯಕ್ತಿ ಲೈಂಗಿಕ ಕ್ರಿಯೆಗಳಿಗೆ ಒಪ್ಪಿಗೆ ನೀಡುವುದು ಸಾಧ್ಯವಿಲ್ಲದ ಕಾರಣ, ಮೃತದೇಹದ ಮೇಲಿನ ಅತ್ಯಾಚಾರವನ್ನು ಸೆಕ್ಷನ್ ವ್ಯಾಪ್ತಿಗೆ ಒಳಪಡುವಂತೆ ಅದನ್ನು ವ್ಯಾಖ್ಯಾನಿಸಬೇಕು ಎಂದು ವಾದಿಸಿದರು.
ಸೆಕ್ಷನ್ 375(ಸಿ)ನಲ್ಲಿ ಬಳಸಲಾದ `ದೇಹ’ ಎಂಬ ಪದವನ್ನು `ಮೃತ ದೇಹ’ ಎಂತಲೂ ಪರಿಗಣಿಸಬೇಕು. ಸೆಕ್ಷನ್ 375 ರ ಏಳನೇ ವಿವರಣೆಯು ಮಹಿಳೆಯು ಒಪ್ಪಿಗೆಯನ್ನು ತಿಳಿಸಲು ಸಾಧ್ಯವಾಗದಿದ್ದಾಗಲೂ ಸಹ ಅದನ್ನು ಅತ್ಯಾಚಾರವೆಂದು ಪರಿಗಣಿಸಬೇಕು ಎನ್ನುತ್ತದೆ. ಈ ವಿವರಣೆಯನ್ನು ಆಧರಿಸಿಯಾದರೂ ಮೃತ ದೇಹದ ಮೇಲಿನ ಅತ್ಯಾಚಾರವನ್ನು ಅಪರಾಧದ ವ್ಯಾಪ್ತಿಗೆ ತರಬೇಕು. ನ್ಯಾಯಾಲಯ ಸೆಕ್ಷನ್ 375ನ್ನು ಹೆಚ್ಚು ಆಳವಾಗಿ ಪರಿಗಣಿಸದೆ ಮೃತ ದೇಹದ ಮೇಲಿನ ಅತ್ಯಾಚಾರವನ್ನೂ ಒಳಗೊಳ್ಳುವಂತೆ ಉದಾರವಾಗಿ ಅರ್ಥೈಸಬೇಕು ಎಂದು ಪನ್ವರ್ ಹೇಳಿದರು. ಮೃತ ದೇಹಗಳಿಗೂ ಘನತೆ ಮತ್ತು ನ್ಯಾಯಪರತೆ ಅನ್ವಯಿಸಬೇಕು ಎಂದು ಪಂಡಿತ್ ಪರಮಾನಂದ ಕಟಾರ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 1995ರಲ್ಲಿ ನೀಡಿದ್ದ ತೀರ್ಪನ್ನು ಅವಲಂಬಿಸಿ ಅವರು ವಾದ ಮಂಡಿಸಿದರು.
ಶವ ಸಂಭೋಗವನ್ನು ಅತ್ಯಾಚಾರದ ವ್ಯಾಪ್ತಿಗೆ ತರುವುದಕ್ಕಾಗಿ ಪ್ರಭುತ್ವ ಮತ್ತು ಬ್ರೋಬೆಕ್ ನಡುವಣ ಪ್ರಕರಣದಲ್ಲಿ ಅಮೆರಿಕದ ಟೆನ್ನೆಸ್ಸೀ ಪ್ರಾಂತದ ಸುಪ್ರೀಂ ಕೋರ್ಟ್ ಸೇರಿದಂತೆ ಅಂತರರಾಷ್ಟ್ರೀಯ ನ್ಯಾಯಾಲಯಗಳು ದಂಡ ಸಂಹಿತೆಯ ಸೆಕ್ಷನ್‌ಗಳನ್ನು ವಿಸ್ತರಿಸಿವೆ ಎಂದು ಅವರು ಪ್ರಸ್ತಾಪಿಸಿದರು. ಆದರೂ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನ್ಯಾಯಾಲಯ ನಿರಾಕರಿಸಿತು.ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ತಾಳ್ಮೆ ಕಳೆದುಕೊಂಡಿದ್ದೇಕೆ..? – ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರನಿಗೆ ಹೀಗೇಕೆ ಹೇಳಿದ್ರು?
ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಅಶ್ಲೀಲ ಪದ ಬಳಕೆ ಪ್ರಕರಣದಲ್ಲಿ ಬಿಜೆಪಿ ಪರಿಷತ್ ಸದಸ್ಯ ಸಿಟಿ ರವಿ (CT Ravi) ಅವರಿಗೆ ಹೈಕೋರ್ಟ್ (High Court) ತಾತ್ಕಾಲಿಕ ರಿಲೀಫ್ ನೀಡಿದೆ.
ಎಫ್‌ಐಆರ್ ರದ್ದು ಕೋರಿ ಸಿಟಿ ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆಯಿತು. ತನಿಖೆಯ ವ್ಯಾಪ್ತಿಯ ಪ್ರಶ್ನೆಯನ್ನು ತೀರ್ಮಾನಿಸಬೇಕಿದೆ ಎಂದು ಅಭಿಪ್ರಾಯಪಟ್ಟು ಫೆ.20 ರವರೆಗೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಮಧ್ಯಂತರ ತಡೆ ನೀಡಿ ನೀಡಿ ದೂರುದಾರೆ ಲಕ್ಷ್ಮಿ ಹೆಬ್ಬಾಳ್ಕರ್ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಬಿಗ್ ಬಾಸ್ ವಿನ್ನರ್ ಹನುಮಂತಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ
ಸಿಟಿ ರವಿ ಪರ ವಾದ ಮಂಡಿಸಿದ ಪ್ರಭುಲಿಂಗ ನಾವದಗಿ, ಸದನದೊಳಗೆ ಭೀತಿರಹಿತವಾಗಿ ಮಾತನಾಡಲು ಅವಕಾಶವಿದೆ. ಮಾನನಷ್ಟ ಪ್ರಕರಣದ ಭೀತಿಯಿಲ್ಲದೇ ಚರ್ಚೆ ನಡೆಸಬಹುದು. ಮಹಿಳೆ ಗೌರವಕ್ಕೆ ಧಕ್ಕೆಯಾಗುವ ಮಾತುಗಳಿದ್ದರೂ ಸಭಾಪತಿ ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು.
ಎಸ್‌ಪಿಪಿ ಬಿ.ಎ.ಬೆಳ್ಳಿಯಪ್ಪ ಅವರು,ರವಿ ಅವರ ಧ್ವನಿ ಮಾದರಿ ಪಡೆಯಲು ಅವಕಾಶ ನೀಡಬೇಕೆಂದು. ಸದನದ ವ್ಯಾಪ್ತಿಯ ಚರ್ಚೆಗೆ ಮಾತ್ರ ಕ್ರಮದಿಂದ ವಿನಾಯಿತಿ ಇದೆ. ಟೇಬಲ್ ಮುರಿದು ದಾಂಧಲೆ, ಅಶ್ಲೀಲ ಪದ ಬಳಕೆಗೆ ವಿನಾಯಿತಿ ಇಲ್ಲ ಎಂದು ವಾದಿಸಿದರು.