Tag: high court

  • ಚಾಮರಾಜನಗರ ಆಕ್ಸಿಜನ್ ದುರಂತ – ರೋಹಿಣಿ ಸಿಂಧೂರಿಗೆ ಕ್ಲೀನ್‍ಚಿಟ್

    ಚಾಮರಾಜನಗರ ಆಕ್ಸಿಜನ್ ದುರಂತ – ರೋಹಿಣಿ ಸಿಂಧೂರಿಗೆ ಕ್ಲೀನ್‍ಚಿಟ್

    – ಸಮಿತಿ ಹೈಕೋರ್ಟಿಗೆ ಸಲ್ಲಿಸಿರುವ ವರದಿಯಲ್ಲೇನಿದೆ..?

    ಚಾಮರಾಜನಗರ: ಜಿಲ್ಲೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್ ಸಿಕ್ಕಿದೆ.

    ಹೌದು. ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎ.ಎನ್ ವೇಣುಗೋಪಾಲ ಸಮಿತಿಯು ಹೈಕೋರ್ಟ್‍ಗೆ ವರಿ ನೀಡಿದೆ. ವರದಿಯಲ್ಲಿ ಮೈಸೂರು ಜಿಲ್ಲಾಧಿಕಾರಿಯವರದ್ದು ಈ ಪ್ರಕರಣದಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿದೆ.

    ವರದಿಯಲ್ಲಿ ಏನಿದೆ..?
    ದುರಂತದಲ್ಲಿ ಮೈಸೂರು ಜಿಲ್ಲಾಧಿಕಾರಿ ತಪ್ಪಿಲ್ಲ. ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಯಾವುದೇ ಸಾಕ್ಷ್ಯಗಳು ಇಲ್ಲ. ಆಕ್ಸಿಜನ್ ಪೂರೈಕೆಗೆ ತಡೆ ಒಡ್ಡಿದ್ದಾರೆ ಎಂಬ ಬಗ್ಗೆ ಸಾಕ್ಷ್ಯಗಳು ಇಲ್ಲ. ಪ್ರಕರಣಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಹೊಣೆಯಾಗಿದ್ದು, ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳುವಲ್ಲಿ ಜಿಲ್ಲಾಡಳಿತ, ಜಿಲ್ಲಾಸ್ಪತ್ರೆ ವಿಫಲವಾಗಿದೆ. ಜಿಲ್ಲಾಡಳಿತ, ಜಿಲ್ಲಾಸ್ಪತ್ರೆ ಎಚ್ಚರವಾಗಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ. ಆಕ್ಸಿಜನ್ ಪ್ಲ್ಯಾಂಟ್ ಚಾಮರಾಜನಗರದಿಂದ 70 ಕಿಲೋ ಮೀಟರ್ ದೂರದಲ್ಲಿದೆ. ಮೈಸೂರಿನಿಂದ ಆಕ್ಸಿಜನ್ ತುಂಬಿಸಿಕೊಂಡು ಜಿಲ್ಲಾಸ್ಪತ್ರೆಗೆ ಸಾಗಾಟ ಮಾಡಬೇಕಿತ್ತು. ಜಿಲ್ಲಾಸ್ಪತ್ರೆ, ಜಿಲ್ಲಾಡಳಿತ ಮೊದಲೇ ಎಚ್ಚೆತ್ತುಕೊಂಡಿದ್ದರೆ ಈ ದುರಂತ ಆಗ್ತಿರಲಿಲ್ಲ ಎಮದು ತಿಳಿಸಿದೆ.

    ಅಲ್ಲದೆ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಕ್ಕಿರಲಿಲ್ಲ. ಹೀಗಾಗಿ ಸೋಂಕಿತರ ಮೆದುಳು, ದೇಹದ ಇತರೆ ಭಾಗಗಳಿಗೆ ಹಾನಿಯಾಗಿದೆ. ಆಕ್ಸಿಜನ್ ಕೊರತೆಯಿಂದ ಮೆದುಳು, ದೇಹದ ಇತರೆ ಭಾಗಗಳಿಗೆ ಹಾನಿಯಾಗಿ ಸಾವನ್ನಪ್ಪಿದ್ದಾರೆ ಎಂದು ಹೈಕೊರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿಗೆ ಕ್ಲೀನ್‍ಚಿಟ್ ದೊರೆತಿದೆ.

    ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ದುರಂತಕ್ಕೆ ಆಕ್ಸಿಜನ್ ಕೊರತೆ ಕಾರಣವಾಗಿದೆ. ಮೇ 2ರ ರಾತ್ರಿ 11ರಿಂದ ಮೇ 3ರ ಬೆಳಗ್ಗಿನ ಜಾವದವರೆಗೆ ಆಕ್ಸಿಜನ್ ಇರಲಿಲ್ಲ. ಜಿಲ್ಲಾಸ್ಪತ್ರೆಯ ದಾಖಲೆಯ ಪ್ರಕಾರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಇರಲಿಲ್ಲ. ಇತ್ತ ಮೂವರರಷ್ಟೇ ಆಕ್ಸಿಜನ್ ಇಲ್ಲದೇ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದರು. ಆದರೆ 36 ಮಂದಿ ಸಾವಿಗೂ ಆಕ್ಸಿಜನ್ ಕೊರತೆ ಕಾರಣ ಎನ್ನಲಾಗಿದೆ.

    ಮೈಸೂರು ಡಿಸಿ ವಿರುದ್ಧ ಚಾಮರಾಜನಗರ ಡಿಸಿ ರವಿ ಆರೋಪ ಮಾಡಿದ್ದರು. ಆದರೆ ತನಿಖೆ ವೇಳೆ ಮೈಸೂರು ಡಿಸಿ ವಿರುದ್ಧದ ಆರೋಪಕ್ಕೆ ಸಾಕ್ಷ್ಯಗಳೇ ಇಲ್ಲ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಡಿಸಿ ರವಿ ವಿರುದ್ಧ ಏನ್ ಕ್ರಮಕೈಗೊಳ್ಳುತ್ತೆ ಸರ್ಕಾರ..?, ಚಾಮರಾಜನಗರ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಏನ್ ಉತ್ತರ ಕೊಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

  • ಆಕ್ಸಿಜನ್, ವ್ಯಾಕ್ಸಿನ್ ಆಯ್ತು ಬೆಡ್ ಸಮಸ್ಯೆ ವಿಚಾರದಲ್ಲೂ ಸರ್ಕಾರಕ್ಕೆ ಕ್ಲಾಸ್

    ಆಕ್ಸಿಜನ್, ವ್ಯಾಕ್ಸಿನ್ ಆಯ್ತು ಬೆಡ್ ಸಮಸ್ಯೆ ವಿಚಾರದಲ್ಲೂ ಸರ್ಕಾರಕ್ಕೆ ಕ್ಲಾಸ್

    ಬೆಂಗಳೂರು: ಆಕ್ಸಿಜನ್, ವ್ಯಾಕ್ಸಿನ್ ವಿಚಾರದಲ್ಲಿ ಚಾಟಿ ಬೀಸಿದ್ದ ಕರ್ನಾಟಕ ಹೈಕೋರ್ಟ್, ಈಗ ಬೆಡ್ ಸಮಸ್ಯೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಚುರುಕು ಮುಟ್ಟಿಸಿದೆ.

    ಬೆಂಗಳೂರಿನ ಸಮಸ್ಯೆ ಜಿಲ್ಲಾ ಆಸ್ಪತ್ರೆಯಲ್ಲೂ ಕೂಡ ಆಗುತ್ತಿದೆ. ಎಷ್ಟು ಬೆಡ್‍ಗಳಿವೆ? ಎಷ್ಟು ಜನರಿಗೆ ಹಂಚಿಕೆ ಮಾಡಲಾಗಿದೆ? ಜಿಲ್ಲಾ ಕೇಂದ್ರಗಳಲ್ಲಿ ಎಷ್ಟಿದೆ ಲೆಕ್ಕ ಕೊಡಿ ಎಂದು ಕೇಳಿತು.

    ಆಗ ರಾಜ್ಯದಲ್ಲಿರುವ ಕೊರೋನಾ ಪ್ರಕರಣಗಳ ಅನುಸಾರ 66 ಸಾವಿರ ಆಕ್ಸಿಜನ್ ಬೆಡ್ ಬೇಕು. ಆದ್ರೆ ರಾಜ್ಯದಲ್ಲಿ 45ಸಾವಿರ ಬೆಡ್ ಇವೆ. ಅಂದಾಜು 20 ಸಾವಿರ ಆಕ್ಸಿಜನ್ ಬೆಡ್‍ಗಳ ಕೊರತೆ ಇದೆ ಎಂದು ರಾಜ್ಯ ಸರ್ಕಾರ ಲೆಕ್ಕ ನೀಡಿತು.

    ಈ ಉತ್ತರಕ್ಕೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಮೊದಲನೇ ಅಲೆ ಬಂದಾಗಲೇ ತಯಾರಿ ಆಗಬೇಕಿತ್ತು. ಏಕೆ ಆಗಲಿಲ್ಲ ಎಂದು ಪ್ರಶ್ನಿಸಿ ಚಾಟಿ ಬೀಸಿತು. ಕೂಡಲೇ ಸಮಸ್ಯೆ ಬಗೆಹರಿಸಲು ಪ್ಲಾನ್ ಮಾಡಿಕೊಳ್ಳಿ ಎಂದು ಸೂಚಿಸಿತು.

    ಏರ್‍ಫೋರ್ಸ್‍ನಲ್ಲಿ 100 ಬೆಡ್ ರೆಡಿ ಇದೆ. ರೆಡಿ ಇರುವ ಬೆಡ್ ಪಡೆಯಲು ಸರ್ಕಾರಕ್ಕೆ ಕಷ್ಟನಾ ಅಂತ ಕ್ಲಾಸ್ ತೆಗೆದುಕೊಂಡಿತು. ಬೆಡ್ ಬ್ಲಾಕಿಂಗ್ ಅವ್ಯವಹಾರದ ನಡೆಸಿರುವ ತನಿಖಾ ತಂಡಕ್ಕೆ ಅನುಭವಿ ಐಪಿಎಸ್ ಅಧಿಕಾರಿ, ಸೈಬರ್ ತಜ್ಞರನ್ನು ಸೇರಿಸಿಕೊಳ್ಳಬೇಕು ಅಂತ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತು.

    ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿಯೇ ತನಿಖೆ ನಡೆಯುತ್ತಿದೆ ಎಂದು ಸರ್ಕಾರದ ಪರ ವಕೀಲರು ಕೋರ್ಟ್‍ಗೆ ಮಾಹಿತಿ ನೀಡಿದರು. ಮುಂದಿನ ವಾರ ತನಿಖಾ ಪ್ರಗತಿ ವರದಿ ಸಲ್ಲಿಸಲು ಸೂಚಿಸಿದ ಹೈಕೋರ್ಟ್, ನಾಳೆಗೆ ವಿಚಾರಣೆ ಮುಂದೂಡಿತು.

    ವರದಿ ಸಲ್ಲಿಕೆ: ಇದೇ ವೇಳೆ ಚಾಮರಾಜನಗರ ಆಕ್ಸಿಜನ್ ದುರಂತದ ತನಿಖೆ ನಡೆಸಲು ಹೈಕೋರ್ಟ್ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ವೇಣುಗೋಪಾಲಗೌಡ ನೇತೃತ್ವದ ಸಮಿತಿ ಹೈಕೋರ್ಟ್‍ಗೆ ವರದಿ ಸಲ್ಲಿಸಿದೆ. ಈ ವರದಿ ಪರಿಶೀಲಿಸಿದ ಹೈಕೋರ್ಟ್ ಮೃತರ ಕುಟುಂಬಗಳಿಗೆ ಪರಿಹಾರ ಸೇರಿ ಸಮಿತಿ ಮಾಡಿದ ಶಿಫಾರಸುಗಳನ್ನು ರಾಜ್ಯ ಸರ್ಕಾರ ಪರಿಗಣಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ. ಈ ಬಗ್ಗೆಯೂ ನಾಳೆ ವಿಚಾರಣೆ ಮುಂದುವರೆಯಲಿದೆ.

  • ಕರ್ನಾಟಕಕ್ಕೆ ಆಕ್ಸಿಜನ್ ಪೂರೈಸಿ – ಕೇಂದ್ರದ ವಾದ ಏನಿತ್ತು? ಸುಪ್ರೀಂ ಕೋರ್ಟ್ ಹೇಳಿದ್ದು ಏನು?

    ಕರ್ನಾಟಕಕ್ಕೆ ಆಕ್ಸಿಜನ್ ಪೂರೈಸಿ – ಕೇಂದ್ರದ ವಾದ ಏನಿತ್ತು? ಸುಪ್ರೀಂ ಕೋರ್ಟ್ ಹೇಳಿದ್ದು ಏನು?

    ನವದೆಹಲಿ: ಕರ್ನಾಟಕಕ್ಕೆ ನಿತ್ಯ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುವಂತೆ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಮೇಲ್ಮನವಿ ಅರ್ಜಿಯನ್ನು ಕೋರ್ಟ್ ವಜಾ ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.

    ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾ. ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಅತ್ಯುತ್ತಮ ಆದೇಶ ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

    ರಾಜ್ಯದಲ್ಲಿ ಜನರು ಆಕ್ಸಿಜನ್ ಕೊರತೆಯಿಂದ ಸಾಯುತ್ತಿರುವುದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಹೈಕೋರ್ಟ್ ನೀಡಿರುವ ಆದೇಶಕ್ಕೆ ನಾವು ತಡೆ ನೀಡುವುದಿಲ್ಲ. ಒಂದು ವೇಳೆ ತಡೆ ನೀಡಿದರೆ ಕರ್ನಾಟಕದ ಜನರು ಆಕ್ಸಿಜನ್ ಇಲ್ಲದೇ ತತ್ತರಿಸಿ ಹೋಗಲಿದ್ದಾರೆ. ಹೀಗಾಗಿ ಕರ್ನಾಟಕಕ್ಕೆ ಆಕ್ಸಿಜನ್ ಕೋಟಾವನ್ನು ನಾಲ್ಕು ದಿನಗಳಲ್ಲಿ ಹೆಚ್ಚಿಸಬೇಕು ಎಂದು ಸೂಚಿಸಿತು.

    ಕೇಂದ್ರದ ವಾದ ಏನಿತ್ತು?
    ನಾವು ಕರ್ನಾಟಕದೊಂದಿಗೆ ಯಾವುದೇ ವಿರೋಧ ಹೊಂದಿಲ್ಲ. ಕರ್ನಾಟಕ ಹೈಕೋರ್ಟ್ ಆದೇಶದ ಬಗ್ಗೆ ನಮಗೆ ಕಾಳಜಿ ಇದೆ. ಪ್ರತಿ ಹೈಕೋರ್ಟ್ ಆಕ್ಸಿಜನ್ ಪೂರೈಕೆ ಬಗ್ಗೆ ಸೂಚನೆಗಳನ್ನು ನೀಡಲು ಪ್ರಾರಂಭಿಸಿದರೆ ದೇಶಾದ್ಯಂತ ಅವ್ಯವಸ್ಥೆಗೆ ಕಾರಣವಾಗಬಹುದು. ಇದು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದಲ್ಲಿ ಬಾಹ್ಯ ಒತ್ತಡ ಸೃಷ್ಟಿಸುತ್ತದೆ. ಆಕ್ಸಿಜನ್ ಪೂರೈಕೆಯಲ್ಲಿ ಸಮಸ್ಯೆ ಉದ್ಭವಿಸುತ್ತಿದೆ. ನಮ್ಮಲ್ಲಿ ಸೀಮಿತ ಪ್ರಮಾಣದ ಆಮ್ಲಜನಕವಿದ್ದು, ಆಕ್ಸಿಜನ್ ಕೊರತೆ ರಾಷ್ಟ್ರೀಯ ಸಮಸ್ಯೆಯಾಗಿದೆ. ಏಕಾಏಕಿ ಆಕ್ಸಿಜನ್ ಪೂರೈಸಲು ಸಾಧ್ಯವಿಲ್ಲದ ಕಾರಣ ಹೈಕೋರ್ಟ್ ಆದೇಶಕ್ಕೆ ತಡೆ ನೀಡಬೇಕು. ನಾವು ರಾಜ್ಯ ಸರ್ಕಾರದೊಂದಿಗೆ ಚರ್ಚೆ ಮಾಡುತ್ತೇವೆ. ಈ ನಿಟ್ಟಿನಲ್ಲಿ ನಾವು ಎಲ್ಲ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತೇವೆ.

    ಸುಪ್ರೀಂಕೋರ್ಟ್ ಹೇಳಿದ್ದು ಏನು?
    ರಾಜ್ಯದಲ್ಲಿ 3.90 ಲಕ್ಷ ಸಕ್ರೀಯ ಪ್ರಕರಣಗಳಿದ್ದು, ಕನಿಷ್ಠ 1700 ಮೆಟ್ರಿಕ್ ಟನ್ ಆಮ್ಲಜನಕದ ಅವಶ್ಯಕತೆ ಇದೆ. ಜನರು ಆಮ್ಲಜನಕದ ಕೊರತೆಯಿಂದ ಸಾಯುತ್ತಿರುವಾಗ ಹೈಕೋರ್ಟ್ ಮೌನವಾಗಿರಲು ಸಾಧ್ಯವಿಲ್ಲ. ನಾವು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಹೈಕೋರ್ಟ್ ಆದೇಶಕ್ಕೆ ತಡೆ ನೀಡುವುದಿಲ್ಲ. ಆರ್ಟಿಕಲ್ 226 ರ ಅಡಿಯಲ್ಲಿ ಹೈಕೋರ್ಟ್ ತನ್ನ ಅಧಿಕಾರ ಬಳಕೆ ಮಾಡಿಕೊಂಡಿದೆ. ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶ ತಪ್ಪಲ್ಲ. ಕರ್ನಾಟಕದ ಜನರನ್ನು ಕಷ್ಟಕ್ಕೆ ದೂಡಲು ಸಾಧ್ಯವಿಲ್ಲ.

    ನಾವು ಆದೇಶಕ್ಕೆ ತಡೆ ನೀಡಿದರೆ ಕರ್ನಾಟಕದ ಜನರು ತತ್ತರಿಸಿ ಹೋಗಲಿದ್ದಾರೆ. ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶ ಸರಿ ಇದೆ. 4 ದಿನಗಳಲ್ಲಿ ರಾಜ್ಯದ ಮನವಿಯನ್ನು ಪರಿಗಣಿಸಿ, ಅಲ್ಲಿಯವರೆಗೂ ತಕ್ಷಣ ಜಾರಿ ಬರುವಂತೆ ದಿನಕ್ಕೆ 1200 ಮೆ.ಟನ್. ಹೆಚ್ಚಿಸಿ. ನಾವು ಆಕ್ಸಿಜನ್ ಕೊರತೆ ಸಂಬಂಧ ಸಮಿತಿ ರಚಿಸುವುದಾಗಿ ಹೇಳಿದ್ದೇವೆ. ಆದರೆ ಅಲ್ಲಿಯವರೆಗೂ ಹೈಕೋರ್ಟ್ ಗಳಿಗೆ ಕಣ್ಣು ಮುಚ್ಚಿಕೊಂಡು ಇರಿ ಎಂದು ಹೇಳಲು ಸಾಧ್ಯವಿಲ್ಲ. ದೆಹಲಿ ಹೈಕೋರ್ಟ್‍ನ ಆದೇಶದಲ್ಲಿ ನಾವು ಮಧ್ಯಪ್ರವೇಶಿಸಿದ್ದೇವೆ. ಆದರೆ ಇಲ್ಲಿ ಪ್ರವೇಶ ಮಾಡುವುದಿಲ್ಲ.

  • ಹೈಕೋರ್ಟ್ ಸೂಚನೆ ಮೇರೆಗೆ ರಾಜ್ಯದಲ್ಲಿ ಆಕ್ಸಿಜನ್ ಹಂಚಿಕೆಗೆ ಮಾರ್ಗಸೂಚಿ ಜಾರಿ

    ಹೈಕೋರ್ಟ್ ಸೂಚನೆ ಮೇರೆಗೆ ರಾಜ್ಯದಲ್ಲಿ ಆಕ್ಸಿಜನ್ ಹಂಚಿಕೆಗೆ ಮಾರ್ಗಸೂಚಿ ಜಾರಿ

    ಬೆಂಗಳೂರು: ರಾಜ್ಯದಲ್ಲಿ ಜಿಲ್ಲೆಗಳ ನಡುವೆ ಆಕ್ಸಿಜನ್ ಹಂಚಿಕೆ ವಿಚಾರವಾಗಿ ಮಾರ್ಗಸೂಚಿಗಳನ್ನು ಜಾರಿ ತರಲಾಗುವುದು. ಈ ಮೂಲಕ ಸೂಕ್ತ ರೀತಿಯಲ್ಲಿ ಕ್ರಮಗಳನ್ನು ಕೈಗೊಂಡು ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.

    ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ, ಎಲ್ಲಾ ಆಸ್ಪತ್ರೆಗಳಿಗೂ ಆಕ್ಸಿಜನ್ ಸಹಾಯವಾಣಿ ತಲುಪಿಸಿ. ಆಕ್ಸಿಜನ್ ಎಲ್ಲಿ ಸಿಗುತ್ತದೆ ಎಲ್ಲಿಗೆ ಬೇಡಿಕೆಯಿದೆ ಎಂದು ತಿಳಿದುಕೊಳ್ಳಿ. ಆಕ್ಸಿಜನ್ ಪೂರೈಕೆ, ಬೇಡಿಕೆಯ ಅಂಕಿ ಅಂಶ ಸಂಗ್ರಹಿಸಿ. ಕೇಂದ್ರೀಕೃತ ಮಾಹಿತಿ ವ್ಯವಸ್ಥೆ ರೂಪಿಸಿ ಮತ್ತು ನೈಜ ಕಾಲದ ಮಾಹಿತಿ ವ್ಯವಸ್ಥೆ ರೂಪಿಸಿ ಎಂದು ಸೂಚನೆ ನೀಡಿತ್ತು. ಈ ಸೂಚನೆಗಳಿಗೆ ಉತ್ತರಿಸಿದ ರಾಜ್ಯ ಸರ್ಕಾರ, ರಾಜ್ಯದಲ್ಲಿ ಆಕ್ಸಿಜನ್ ಸಹಾಯವಾಣಿ ಜಾರಿಗೊಳಿಸಲಾಗುವುದು ಎಂದು ಉತ್ತರಿಸಿದೆ.

    ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 100 ಮೆ.ಟನ್ ಆಕ್ಸಿಜನ್ ಹಂಚಿಕೆ ಮಾಡಲಾಗಿದೆ. ಬಳ್ಳಾರಿಯಿಂದ 60 ಮೆ.ಟನ್ ಹಂಚಿಕೆ ಮಾಡಲಾಗಿದೆ. ಉಳಿದ 40 ಮೆ.ಟನ್ ಒರಿಸ್ಸಾದ ಕಳಿಂಗದಿಂದ ಪೂರೈಕೆಯಾಗಿದೆ. ಐಒಸಿಯ 20 ಮೆ.ಟನ್, ಬಹ್ರೇನ್‍ನ 20 ಮೆ.ಟನ್ ಹಂಚಿಕೆಯಾಗಿದೆ. ಇದು ಮಾತ್ರವಲ್ಲದೇ ಕೇಂದ್ರದಿಂದ 28 ಪಿಎಸ್‍ಎ ಆಕ್ಸಿಜನ್ ಘಟಕ ಮಂಜೂರು ಮಾಡಲಾಗಿದ್ದು, ರಾಜ್ಯದಿಂದಲೂ 40 ಪಿಎಸ್‍ಎ ಆಕ್ಸಿಜನ್ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಹೈಕೋರ್ಟ್‍ಗೆ ಎಜಿ ಪ್ರಭುಲಿಂಗ್ ನಾವದಗಿ ಮಾಹಿತಿ ನೀಡಿದ್ದಾರೆ.

  • ಆಕ್ಸಿಜನ್ ಕೊರತೆಯಿಂದ ಸಾಯುವುದು ಯಾವ ನರಮೇಧಕ್ಕೂ ಕಮ್ಮಿಯಲ್ಲ: ಅಲಹಬಾದ್ ಹೈ ಕೋರ್ಟ್ ಚಾಟಿ

    ಆಕ್ಸಿಜನ್ ಕೊರತೆಯಿಂದ ಸಾಯುವುದು ಯಾವ ನರಮೇಧಕ್ಕೂ ಕಮ್ಮಿಯಲ್ಲ: ಅಲಹಬಾದ್ ಹೈ ಕೋರ್ಟ್ ಚಾಟಿ

    – ಆಕ್ಸಿಜನ್ ಕೊರತೆಯಿಂದ ಜನ ಸಾವನ್ನಪ್ಪಿದರೆ ಅಪರಾಧ ಕೃತ್ಯವೆಂದು ಪರಿಗಣಿಸಲಾಗುವುದು

    ಲಕ್ನೋ: ಕೊರೊನಾ ಎರಡನೇ ಅಲೆಗೆ ತತ್ತರಿಸಿ ಜನ ಆಕ್ಸಿಜನ್ ಕೊರತೆಯಿಂದ ನರಳಾಡಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಪ್ರದೇಶದ ಅಲಹಬಾದ್ ಹೈ ಕೋರ್ಟ್, ಆಕ್ಸಿಜನ್‍ನಿಂದ ವ್ಯಕ್ತಿ ಮರಣ ಹೊಂದುವುದನ್ನು ಅಪರಾಧ ಕೃತ್ಯವೆಂದು ಪರಿಗಣಿಸಲಾಗುವುದು. ಅಲ್ಲದೆ ಇದು ಯಾವ ನರಮೇಧಕ್ಕಿಂತ ಕಡಿಮೇ ಏನಲ್ಲ ಎಂದು ಎಚ್ಚರಿಸಿದೆ.

    ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರ ಮಧ್ಯೆ ದೇಶಾದ್ಯಂತ ಆಕ್ಸಿಜನ್ ಕೊರತೆ ಕಾಡುತ್ತಿರುವುದನ್ನು ಅರಿತ ಕೋರ್ಟ್, ಈ ಕುರಿತು ಬೇಸರ ವ್ಯಕ್ತಪಡಿಸಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ನರಳಾಡಿ ಜನ ಸಾಯುತ್ತಿರುವುದನ್ನು ಕಂಡು ತುಂಬಾ ನೋವಾಗಿದೆ. ಆಮ್ಲಜನಕವಿಲ್ಲದೆ ಸಾವನ್ನಪ್ಪುತ್ತಿರುವುದು ಅಪರಾಧ ಕೃತ್ಯವಾಗಿದೆ, ಇದು ನರಮೇಧಕ್ಕಿಂತಲೂ ಕಡಿಮೆ ಏನಲ್ಲ. ಆಕ್ಸಿಜನ್ ನಿರಂತರ ಸಂಗ್ರಹಣೆ ಹಾಗೂ ಪೂರೈಕೆ ಸರಪಳಿಯನ್ನು ಖಚಿತಪಡಿಸಿಕೊಳ್ಳುವ ಕೆಲಸ ವಹಿಸಿಕೊಂಡವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನ್ಯಾಯಮೂರ್ತಿ ಅಜಿತ್ ಕುಮಾರ್ ಹಾಗೂ ನ್ಯಾಯಮೂರ್ತಿ ಸಿದ್ಧಾರ್ಥ್ ವರ್ಮಾ ಅವರಿದ್ದ ಪೀಠ ಕಳವಳ ವ್ಯಕ್ತಪಡಿಸಿದೆ.

    ತಮ್ಮ ಪ್ರೀತಿ ಪಾತ್ರರ ಪ್ರಾಣ ಉಳಿಸಿಕೊಳ್ಳಲು ಆಮ್ಲಜನಕ ಸಿಲಿಂಡರ್ ಗಳ ಸಂಗ್ರಹಣೆಗಾಗಿ ಭಿಕ್ಷೆ ಬೇಡುತ್ತಿದ್ದಾರೆ. ಆಕ್ಸಿಜನ್ ಕೇಳಲು ಬಂದ ಬಡ ಜನರಿಗೆ ಜಿಲ್ಲಾಡಳಿತ ಹಾಗೂ ಪೊಲೀಸರು ಕಿರುಕುಳ ನೀಡಿದ್ದಾರೆ. ಈ ವೀಡಿಯೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ ಎಂದು ಕೋರ್ಟ್ ಕಿಡಿಕಾರಿದೆ.

    ಭಾರತದಲ್ಲಿ ನಿತ್ಯ ನಾಲ್ಕು ಲಕ್ಷದ ಆಸುಪಾಸಿನಲ್ಲಿ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದು, ಬೆಡ್ ಹಾಗೂ ಆಕ್ಸಿಜನ್ ಕೊರತೆಯಿಂದ ಜನ ನರಳಾಡಿ ಪ್ರಾಣ ಬಿಡುತ್ತಿದ್ದಾರೆ. ಇಷ್ಟಾದರೂ ಆಡಳಿತ ಸರ್ಕಾರಗಳು ಮಾತ್ರ ಬೇಕಾಬಿಟ್ಟಿಯಾಗಿ ವರ್ತಿಸುತ್ತಿವೆ. ಹೀಗಾಗಿ ಹೈ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

  • ಆಕ್ಸಿಜನ್ ಸಿಗದೆ ವೈದ್ಯ ಸೇರಿ ಎಂಟು ಜನರ ಸಾವು

    ಆಕ್ಸಿಜನ್ ಸಿಗದೆ ವೈದ್ಯ ಸೇರಿ ಎಂಟು ಜನರ ಸಾವು

    ನವದೆಹಲಿ: ಇಲ್ಲಿನ ಬಾತ್ರಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಓರ್ವ ವೈದ್ಯ ಸೇರಿ 8 ಜನ ಕೊರೊನಾ ರೋಗಿಗಳು ಮೃತಪಟ್ಟಿರುವ ಕುರಿತು ಡೆಲ್ಲಿ ಹೈಕೋರ್ಟ್ ಆಸ್ಪತ್ರೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದೆ.

    ಈ ಕುರಿತು ಹೈಕೋರ್ಟಿಗೆ ಸ್ಪಷ್ಟನೆ ನೀಡಿರುವ ಬಾತ್ರಾ ಆಸ್ಪತ್ರೆ, ನಮಗೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗಲಿಲ್ಲ. ನಮಗೆ ಮಧ್ಯಾಹ್ನ 12 ಗಂಟೆಗೆ ಆಕ್ಸಿಜನ್ ಬೇಕಾಗಿತ್ತು. ಆದರೆ ನಮಗೆ ಸಿಕ್ಕಿದ್ದು ಮಧ್ಯಾಹ್ನ 1.35 ಗಂಟೆಗೆ. ಹಾಗಾಗಿ ನಮ್ಮ ಆಸ್ಪತ್ರೆಯ ವೈದ್ಯರನ್ನು ಸೇರಿ 8 ಜನರನ್ನು ಕಳೆದುಕೊಳ್ಳಬೇಕಾಯಿತು ಎಂದು ತಿಳಿಸಿದೆ.

    ನಾವು ಹಲವು ಗಂಟೆಗಳ ಕಾಲ ಆಕ್ಸಿಜನ್ ಇಲ್ಲದೆ ಪರದಾಡುವಂತಾಯಿತು. ಹಾಗಾಗಿ ನಮ್ಮ ಆಸ್ಪತ್ರೆಯ ಒಬ್ಬ ವೈದ್ಯರು ಸೇರಿ 8 ಜನರನ್ನು ಕಳೆದುಕೊಂಡಿದ್ದೇವೆ ಎಂದು ಬಾತ್ರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಸ್.ಸಿ.ಎಲ್ ಗುಪ್ತಾ ತಿಳಿಸಿದ್ದಾರೆ.

    ಆಕ್ಸಿಜನ್ ಮುಗಿಯಲು ಕೇವಲ 10 ನಿಮಿಷಗಳು ಬಾಕಿ ಇರುವಂತೆ ಬಾತ್ರಾ ಆಸ್ಪತ್ರೆಯಲ್ಲಿ 326 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

    ಈ ಕುರಿತು ದೆಹಲಿ ಸರ್ಕಾರದ ಸಚಿವರಾದ ರಾಘವ್ ಚಡ್ಡಾ ಮಾತನಾಡಿ, ನಮ್ಮ ಆಕ್ಸಿಜನ ಪೂರೈಕೆಯ ಟ್ಯಾಂಕರ್ ಬಾತ್ರಾ ಆಸ್ಪತ್ರೆಗೆ 5 ನಿಮಿಷದಲ್ಲಿ ತಲುಪಿದೆ. ಅದರೆ ಅವರಿಗೆ ಪ್ರತಿದಿನ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದವರು ಮಾಡಿದ ತಪ್ಪಿನಿಂದಾಗಿ ಈ ರೀತಿಯಾಗಿದೆ. ನಾವು ಆಕ್ಸಿಜನ್ ತಲುಪಿಸುತ್ತಿದ್ದಂತೆ ಆಸ್ಪತ್ರೆಯಲ್ಲಿ 8 ಜನ ರೋಗಿಗಳು ಮರಣ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಎಲ್ಲಾ ಘಟನೆಗಳ ಬಳಿಕ ಏಪ್ರಿಲ್ 1ರ ಬಳಿಕ ದೆಹಲಿಯ ಆಸ್ಪತ್ರೆಗಳಲ್ಲಿ ಮತ್ತು ನರ್ಸಿಂಗ್ ಹೋಂಗಳಲ್ಲಿ ದಾಖಲಾಗಿರುವ ರೋಗಿಗಳ ವಿವರ ಕೊಡುವಂತೆ ವೈದ್ಯಕೀಯ ಅಧೀಕ್ಷಕರು, ಆಸ್ಪತ್ರೆ ಮಾಲಿಕರು ಮತ್ತು ನಿರ್ದೇಶಕರಿಗೆ ಹೈಕೋರ್ಟ್ ಸೂಚನೆ ನೀಡಿದೆ.

    ಈ ಪ್ರಕಾರ ಆಸ್ಪತ್ರೆಗಳು 4 ದಿನಗಳ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಪೂರ್ಣ ಮಾಹಿತಿಯನ್ನು ಕೋರ್ಟ್‍ಗೆ ಸಲ್ಲಿಸಬೇಕಾಗಿದೆ. ಈ ಕೊರೊನಾ ಎಂಬ ಕಷ್ಟಕಾಲದಲ್ಲಿ ಆಸ್ಪತ್ರೆಗಳು ಎದುರಿಸಿದ ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆಗಳು ಪಾಠ ಕಲಿತು ಮುಂದೆ ಆಕ್ಸಿಜನ್ ಪ್ಲಾಂಟ್ ನಿರ್ಮಾಣದ ಗುರಿ ಇಟ್ಟುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ನ್ಯಾಯಪೀಠ ಅಭಿಪ್ರಯಾಪಟ್ಟಿದೆ.

  • ಮುಷ್ಕರ ನಿಲ್ಲಿಸಿ, ಕೂಡಲೇ ಸೇವೆ ಆರಂಭಿಸಿ – ಸಾರಿಗೆ ನೌಕರರಿಗೆ ಹೈಕೋರ್ಟ್ ಸೂಚನೆ

    ಮುಷ್ಕರ ನಿಲ್ಲಿಸಿ, ಕೂಡಲೇ ಸೇವೆ ಆರಂಭಿಸಿ – ಸಾರಿಗೆ ನೌಕರರಿಗೆ ಹೈಕೋರ್ಟ್ ಸೂಚನೆ

    ಬೆಂಗಳೂರು: ಮುಷ್ಕರ ನಿಲ್ಲಿಸಿ, ಕೂಡಲೇ ಸೇವೆ ಆರಂಭಿಸಿ ಸಾರಿಗೆ ನೌಕರರಿಗೆ ಹೈಕೋರ್ಟ್ ಇಂದು ಸೂಚನೆ ನೀಡಿದೆ. ಈ ಮೂಲಕ 14 ದಿನಗಳ ಸಾರಿಗೆ ನೌಕರರ ಮುಷ್ಕರ ಇಂದಿಗೆ ಕೊನೆಯಾಗುವ ಸಾಧ್ಯತೆಯಿದೆ.

    ಕೋವಿಡ್ ಸಂಕಷ್ಟದ ಸಮಯದಲ್ಲಿ ಮುಷ್ಕರ ಹೂಡುವುದು ಸರಿಯಲ್ಲ. ನಿಮ್ಮ ಬೇಡಿಕೆ ಕಾಯ್ದಿರಿಸಿ ತಕ್ಷಣ ಸೇವೆ ಆರಂಭಿಸಿ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಸೂಚನೆ ನೀಡಿ ಮುಷ್ಕರ ನಿರತ ಸಾರಿಗೆ ನೌಕರರ ಸಂಘಕ್ಕೆ ನೋಟಿಸ್ ನೀಡಿದೆ.

    ಸರ್ಕಾರದ ಪರವಾಗಿ ಹಾಜರಾಗಿದ್ದ ಎಜಿ ಪ್ರಭುಲಿಂಗ ನಾವದಗಿ, ಮುಷ್ಕರ ನಿರತರ ವಿರುದ್ಧ ಎಸ್ಮಾ ಜಾರಿಗೊಳಿಸಲಾಗಿದೆ. ಸರ್ಕಾರ ಕಾರ್ಮಿಕರ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿದೆ. ಸಾರಿಗೆ ನೌಕರರ ಮುಷ್ಕರ ಕಾನೂನುಬಾಹಿರವೆಂದು ಘೋಷಿಸಲಾಗಿದೆ. ಕೆಲ ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದ್ದು, ಸರ್ಕಾರಿ ನೌಕರರಾಗಿಸುವ ಬೇಡಿಕೆ ಪರಿಗಣಿಸುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

    ನ್ಯಾಯಾಲಯದ ಆದೇಶದ ಬಗ್ಗೆ ಸಾರಿಗೆ ನೌಕರರ ಒಕ್ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ನಮಗೆ ನ್ಯಾಯಾಲಯದ ಪೂರ್ಣ ಪ್ರಮಾಣದ ಆದೇಶವನ್ನ ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

  • ಸಿಡಿ ಕೇಸ್ – ಸರ್ಕಾರ, ಎಸ್‍ಐಟಿಗೆ ಹೈಕೋರ್ಟ್ ನೋಟಿಸ್ ಜಾರಿ

    ಸಿಡಿ ಕೇಸ್ – ಸರ್ಕಾರ, ಎಸ್‍ಐಟಿಗೆ ಹೈಕೋರ್ಟ್ ನೋಟಿಸ್ ಜಾರಿ

    ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ(ಎಸ್‍ಐಟಿ) ಮತ್ತು ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

    ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಬೇಕೆಂದು ಕೋರಿ ವಕೀಲ ಉಮೇಶ್ ಅವರು ಸಲ್ಲಿಸಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು ವಿಭಾಗೀಯ ಪೀಠದಲ್ಲಿ ನಡೆಯಿತು.

    ವಿಚಾರಣೆ ನಡೆಸಿದ ಕೋರ್ಟ್, ಮುಚ್ಚಿದ ಲಕೋಟೆಯಲ್ಲಿ ತನಿಖಾ ಪ್ರಗತಿ ವರದಿ ಸಲ್ಲಿಸುವಂತೆ ಎಸ್‍ಐಟಿಗೆ  ಸೂಚನೆ ನೀಡಿದೆ. ಈ ಅರ್ಜಿಯ ವಿಚಾರಣೆಯನ್ನು ಏ.17ಕ್ಕೆ ಹೈಕೋರ್ಟ್ ಮುಂದೂಡಿದೆ.

     

     

  • ಇಂದು ವಿಚಾರಣೆಗೆ ಹಾಜರಾಗ್ತಾರಾ ರೇಪ್ ಆರೋಪಿ ರಮೇಶ್ ಜಾರಕಿಹೊಳಿ..?

    ಇಂದು ವಿಚಾರಣೆಗೆ ಹಾಜರಾಗ್ತಾರಾ ರೇಪ್ ಆರೋಪಿ ರಮೇಶ್ ಜಾರಕಿಹೊಳಿ..?

    ಬೆಂಗಳೂರು: ಅತ್ಯಾಚಾರ ಕೇಸ್ ಆರೋಪಿ ರಮೇಶ್ ಜಾರಕಿಹೊಳಿಗೆ ಇಂದು ನಿರ್ಣಾಯಕ ದಿನ. ಅತ್ಯಾಚಾರ ಕೇಸ್‍ನಲ್ಲಿ ಇಂದು ಬಂಧನವೋ ಅಥವಾ ವಿಚಾರಣೆ ನಡೆಸಿ ಪೊಲೀಸರು ಬಿಟ್ಟು ಕಳಿಸ್ತಾರಾ ಎಂಬ ಕುತೂಹಲ ಹಾಗೇ ಇದೆ.

    ಇಂದು ಬೆಳಗ್ಗೆ ಪೊಲೀಸರ ಎದುರು ಆರೋಪಿ ಜಾರಕಿಹೊಳಿ ವಿಚಾರಣೆಗೆ ಹಾಜರಾಗಬೇಕಿದೆ. ಯುವತಿಯೇ ಖುದ್ದು ಪ್ರತ್ಯಕ್ಷ ಆದ ದಿನದಿಂದ ರಮೇಶ್ ಜಾರಕಿಹೊಳಿ ಇದುವರೆಗೂ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಜಾರಕಿಹೊಳಿಯೇ ನೀಡಿದ್ದ ಬ್ಲ್ಯಾಕ್‍ಮೇಲ್ ಕೇಸ್‍ನಲ್ಲಿ ಏಪ್ರಿಲ್ 2ರಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಜ್ವರದ ಕಾರಣದಿಂದ ವಿಚಾರಣೆಗೆ ಬರಲು ಸಾಧ್ಯವಾಗಿಲ್ಲ ಎಂದು ಜಾರಕಿಹೊಳಿ ಪರ ವಕೀಲರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇವತ್ತು ಬರುವಂತೆ ಪೊಲೀಸರು ಹೇಳಿದ್ದರು.

    ಈಗಾಗಲೇ ಯುವತಿ ನ್ಯಾಯಾಧೀಶರ ಎದುರು, ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ. ಆಕೆಯ ವೈದ್ಯಕೀಯ ಪರೀಕ್ಷೆ, ಸ್ಥಳ ಮಹಜರು ಕೂಡಾ ಮುಗಿದಿದೆ. ಆದರೆ ಇದುವರೆಗೆ ಅತ್ಯಾಚಾರ ಕೇಸ್‍ನಲ್ಲಿ ಜಾರಕಿಹೊಳಿ ವಿಚಾರಣೆಯೇ ನಡೆದಿಲ್ಲ.

    ಇತ್ತ ಪೊಲೀಸರ ತನಿಖೆ ಬಗ್ಗೆ ಸಾರ್ವಜನಿಕ ವಲಯದಲ್ಲೂ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಹೀಗಾಗಿ ಬಂಧನ ಭೀತಿಯಲ್ಲಿರುವ ಜಾರಕಿಹೊಳಿ ವಿಚಾರಣೆಗೆ ಬರ್ತಾರಾ? ವಿಚಾರಣೆಗೆ ಬಂದ್ರೆ ಪೊಲೀಸರು ಅರೆಸ್ಟ್ ಮಾಡ್ತಾರಾ? ಅಥವಾ ಆರೋಪಿಯ ವೈದ್ಯಕೀಯ ಪರೀಕ್ಷೆ, ಸ್ಥಳ ಮಹಜರು ಕೂಡಾ ಅನಿವಾರ್ಯ ಆಗಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿ ಬಿಟ್ಟು ಕಳಿಸ್ತಾರಾ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

  • ಸಿಗಂಧೂರು ದೇವಾಲಯದ ಸುತ್ತಮುತ್ತಲಿನ ಅರಣ್ಯ ಒತ್ತುವರಿ ಭೂಮಿ ತೆರವು ಕಾರ್ಯ

    ಸಿಗಂಧೂರು ದೇವಾಲಯದ ಸುತ್ತಮುತ್ತಲಿನ ಅರಣ್ಯ ಒತ್ತುವರಿ ಭೂಮಿ ತೆರವು ಕಾರ್ಯ

    ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಸಿಗಂಧೂರು ದೇವಸ್ಥಾನದ ಸುತ್ತಮುತ್ತಲಿನ ಒತ್ತುವರಿ ಅರಣ್ಯ ಭೂಮಿಯ ತೆರವು ಕಾರ್ಯಾಚರಣೆ ತಹಶೀಲ್ದಾರ್ ಚಂದ್ರಶೇಖರ್ ನೇತೃತ್ವದಲ್ಲಿ ಇಂದು ನಡೆಯಿತು.

    ಸಿಗಂಧೂರು ದೇವಾಲಯದ ಟ್ರಸ್ಟ್ ದೇವಸ್ಥಾನದ ಸುತ್ತಮುತ್ತಲಿನ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಒತ್ತುವರಿ ಅರಣ್ಯ ಭೂಮಿಯನ್ನು ಸರ್ಕಾರ ತಕ್ಷಣ ವಶಪಡಿಸಿಕೊಳ್ಳಬೇಕು ಎಂದು ಸಾಗರ ಮೂಲದ ಲಕ್ಷ್ಮಿನಾರಾಯಣ ಎಂಬವರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು.

    ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ನಂತರ ಅಂತಿಮವಾಗಿ ತೀರ್ಪು ನೀಡಿದ ನ್ಯಾಯಾಲಯ ದೇವಸ್ಥಾನದ ಸುತ್ತಮುತ್ತ 6 ಎಕರೆ 16 ಗುಂಟೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಹೀಗಾಗಿ ಈ ಕೂಡಲೇ ತಹಶೀಲ್ದಾರ್ ಅವರು ತಮ್ಮ ವಶಕ್ಕೆ ಪಡೆದು ತಂತಿಬೇಲಿ ನಿರ್ಮಿಸಬೇಕು ಎಂದು ಹೈಕೋರ್ಟ್ ಸೂಚಿಸಿತ್ತು.

    ನ್ಯಾಯಾಲಯದ ಆದೇಶದಂತೆ ಇಂದು ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಚಂದ್ರಶೇಖರ್ ಹಾಗೂ ಡಿವೈಎಸ್ ಪಿ ವಿನಯ್ ಶೆಟಗೇರಿ ಒತ್ತುವರಿ ಅರಣ್ಯ ಭೂಮಿ ವಶಕ್ಕೆ ಪಡೆದು ತಂತಿಬೇಲಿ ನಿರ್ಮಿಸುವ ಕಾರ್ಯ ನಡೆಸಿದರು.