ಕೊಪ್ಪಳ: ಕರ್ನಾಟಕದಲ್ಲಿ ಹಿಜಬ್- ಕೇಸರಿ ಶಾಲು ಸಂಘರ್ಷದ ನಡುವೆ ಕೊಪ್ಪಳ ಜಿಲ್ಲೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು ಹಿಜಬ್ ಧರಿಸಿಯೇ ಶಾಲೆಗೆ ಹಾಜರಾಗಿದ್ದಾರೆ.
ನಗರದ ಮೌಲಾನಾ ಅಜಾದ್ ಮಾದರಿಯ ಶಾಲೆಯಲ್ಲಿ ನಿನ್ನೆ ಶಾಲೆಗೆ ಹಿಜಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಶಿಕ್ಷಕರು ಬಿಚ್ಚಿಸಿ ಶಾಲೆಗೆ ಪ್ರವೇಶ ನೀಡಿದ್ದರು. ಆದರೆ ಇಂದು ಸಹ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಶಾಲೆಗೆ ಆಗಮಿಸಿದ್ದಾರೆ. ಇದನ್ನೂ ಓದಿ: ಸಿಎಂ ಕೆಸಿಆರ್‌ಗೆ ಸರ್ಜಿಕಲ್ ಸ್ಟ್ರೈಕ್ ವೀಡಿಯೋ ಪುರಾವೆ ನೀಡಿದ ಅಸ್ಸಾಂ ಸಿಎಂ
ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ್ದರೂ ವಿದ್ಯಾರ್ಥಿನಿಯರು ಕ್ಯಾರೇ ಅನ್ನದೇ ಹಿಜಾಬ್ ಹಾಕಿಕೊಂಡೇ ಶಾಲೆಗೆ ಬಂದಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ನಾವು ಹಿಜಬ್ ತೆಗೆಯುವುದಿಲ್ಲ ಎಂದು ಕೈಯಲ್ಲಿ ಸನ್ನೆ ಮಾಡುತ್ತಾ ಪಟ್ಟು ಹಿಡಿದಿದ್ದಾರೆ. ಇನ್ನೂ ಇದೇ ಕಾರಣಕ್ಕೆ ಶಾಲೆಯ ಮುಂದೆ ಜಮಾಯಿಸಿರುವ ಪಾಲಕರು ಹಿಜಬ್ ವಿವಾದ ಮುಗಿಯುವವರೆಗೂ ಶಾಲೆಗೆ ರಜೆ ಘೊಷಣೆ ಮಾಡುವಂತೆ ಆಗ್ರಹಿಸಿದ್ದಾರೆ. ಇದೀಗ ಶಾಲೆಗೆ ಕೊಪ್ಪಳ ತಹಸೀಲ್ದಾರ್ ಅಮರೇಶ ಬಿರಾದಾರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ರಾಹುಲ್ ಗಾಂಧಿ ಟ್ವೀಟ್ ವಿರುದ್ಧ ಒಂದು ಸಾವಿರಕ್ಕೂ ಹೆಚ್ಚು ಕೇಸ್ ದಾಖಲು
ಮುಂಬೈ: ನಾನು ಯಾವತ್ತೂ ಹಿಜಬ್, ಬುರ್ಖಾ ಪರ ಇಲ್ಲ. ನಾನು ನನ್ನ ನಿಲುವಿಗೆ ಬದ್ಧ ಎಂದು ಬಾಲಿವುಡ್‍ನ ಹಿರಿಯ ಗೀತ ರಚನೆಕಾರ ಜಾವೇದ್ ಅಖ್ತರ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಹಿಜಬ್ ವಿವಾದ ಸಾಕಷ್ಟು ಸುದ್ದಿಯಾಗುತ್ತಿದೆ. ಹಿಂದೂ ಪರ ಪ್ರತಿಭಟನಾಕಾರರು ಹಿಜಬ್ ತೊಟ್ಟ ಹುಡುಗಿಯರನ್ನು ಸುತ್ತುಗಟ್ಟಿ ಘೋಷಣೆಗಳನ್ನು ಕೂಗಿದ್ದರ ಬೆನ್ನಲ್ಲೇ ಜಾವೇದ್ ಅಖ್ತರ್ ಹಿಜಬ್ ವಿವಾದದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?
ಟ್ವೀಟ್‍ನಲ್ಲಿ ಏನಿದೆ?: ನಾನು ಯಾವತ್ತೂ ಹಿಜಬ್ ಅಥವಾ ಬುರ್ಖಾ ಪರ ಇಲ್ಲ. ಆದರೆ ನಾನು ನನ್ನ ನಿಲುವಿಗೆ ಬದ್ಧನಾಗಿದ್ದೇನೆ. ಬುರ್ಖಾ ತೊಟ್ಟ ಹುಡುಗಿಯರನ್ನು ಗುಂಪೊಂದು ಸುತ್ತುವರಿದಿದ್ದನ್ನು ಖಂಡಿಸುತ್ತೇನೆ. ಇದು ಅವರ ಪುರುಷತ್ವದ ಪರಿಕಲ್ಪನೆಯೇ? ಕನಿಕರ ಪಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
I have never been in favour of Hijab or Burqa. I still stand by that but at the same time I have nothing but deep contempt for these mobs of hooligans who are trying to intimidate a small group of girls and that too unsuccessfully. Is this their idea of “MANLINESS” . What a pity
ಜಾವೇದ್ ಅವರು ಹಿಂದಿನಂದಲೂ ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದವನ್ನು ಖಂಡಿಸುತ್ತಾ ಬಂದವರು. ಹಿಂದೂಗಳನ್ನು ಟೀಕಿಸುವಂತೆಯೇ, ಮುಸಲ್ಮಾನರನ್ನೂ ಟೀಕಿಸಿದವರು. ಇದೀಗ ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಬ್ ವಿವಾದದ ಕುರಿತಾಗಿ ಟ್ವೀಟ್ ಮಾಡಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ಹೇಳಿದ್ದೇನು?: ನಮ್ಮದು ನಾಗರಿಕ ಸಮಾಜವಾಗಿ ಯಾವುದೇ ವ್ಯಕ್ತಿ ಧರ್ಮ, ಸಂಸ್ಕೃತಿ ಅಥವಾ ಇತರೆ ಹೆಸರಲ್ಲಿ ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಲು ಅನುಮತಿ ಇಲ್ಲ. ಮುಗಿಯದ ಪ್ರತಿಭಟನೆಗಳು ಮತ್ತು ಅನಿರ್ದಿಷ್ಟವಾಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿರುವುದು ಒಳ್ಳೆಯದಲ್ಲ. ತುರ್ತು ಆಧಾರದಲ್ಲಿ ಈ ವಿಷಯಗಳ ವಿಚಾರಣೆ ಮುಂದುವರಿಯಲಿದೆ. ಪ್ರತಿಭಟನೆಗಳ ಮುಂದುವರಿಕೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದರ ಬದಲು ತರಗತಿಗಳಿಗೆ ಮರುಳುವುದರಿಂದ ವಿದ್ಯಾರ್ಥಿಗಳ ಹಿತಾಸಕ್ತಿಗೆ ಒಳ್ಳೆಯದು. ಶೈಕ್ಷಣಿಕ ವರ್ಷ ಶೀಘ್ರವೇ ಅಂತ್ಯವಾಗಲಿದೆ. ಸಂಬಂಧಪಟ್ಟವರು ಮತ್ತು ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದತೆಯನ್ನು ಆಶಿಸುತ್ತೇವೆ ಮತ್ತು ನಂಬುತ್ತೇವೆ ಎಂದು ಹೈಕೋರ್ಟ್ ಹೇಳಿದೆ.
ಮೇಲ್ಕಾಣಿಸಿದ ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟವರಿಗೆ ಆದಷ್ಟು ಬೇಗ ಶಿಕ್ಷಣ ಸಂಸ್ಥೆಗಳನ್ನು ತೆರೆಯುವಂತೆಯೂ ಮತ್ತು ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಮರಳಲು ಅವಕಾಶ ಮಾಡಿಕೊಡುವಂತೆಯೂ ಕೋರುತ್ತೇವೆ. ಈ ಅರ್ಜಿಗಳ ವಿಚಾರಣೆ ಬಾಕಿ ಇರಿಸಿ, ಎಲ್ಲ ವಿದ್ಯಾರ್ಥಿಗಳು ಅವರವರ ಧರ್ಮ ಅಥವಾ ನಂಬಿಕೆ ಕೇಸರಿ ಶಾಲು, ಹಿಜಬ್, ಧರ್ಮ ಧ್ವಜಗಳು ಅಥವಾ ಇತರೆಗಳನ್ನು ತರಗತಿಯೊಳಗೆ ಮುಂದಿನ ಆದೇಶದವರೆಗೂ ಧರಿಸದಂತೆ ನಿಬರ್ಂಧಿಸುತ್ತಿದ್ದೇವೆ. ಈ ಆದೇಶ ಕಾಲೇಜು ಅಭಿವೃದ್ಧಿ ಸಮಿತಿ ವಿದ್ಯಾರ್ಥಿ ವಸ್ತ್ರ ಸಂಹಿತೆ, ಸಮವಸ್ತ್ರ ನಿಗದಿಪಡಿಸಿರುವ ಶಿಕ್ಷಣ ಸಂಸ್ಥೆಗಳಿಗೆ ಅನ್ವಯ ಆಗಲಿದೆ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ಹೈಕೋರ್ಟ್ ಆದೇಶದಲ್ಲಿ ಏನಿದೆ?: ಮೊದಲಿಗೆ, ವಿಶೇಷವಾಗಿ ಈ ಪ್ರಕರಣ ಈ ಕೋರ್ಟ್‍ನಲ್ಲಿ ವಿಚಾರಣೆಯಲ್ಲಿರುವಾಗ ಮತ್ತು ಸಂವಿಧಾನಿಕ ಪ್ರಾಮುಖ್ಯತೆಯ ವಿಷಯಗಳು ಮತ್ತು ವೈಯಕ್ತಿಕ ಕಾನೂನುಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುವಾಗ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಮತ್ತು ಶಿಕ್ಷಣ ಸಂಸ್ಥೆಗಳು ಮುಚ್ಚಿರುವುದು ನಮಗೆ ನೋವು ತಂದಿದೆ.
ನಮ್ಮದು ಬಹು ಸಂಸ್ಕೃತಿ, ಧರ್ಮ, ಭಾಷೆಗಳ ದೇಶ. ಯಾವುದೇ ಒಂದು ಧರ್ಮದೊಂದಿಗೆ ನಮ್ಮ ರಾಷ್ಟ್ರ ಗುರುತಿಸಿಕೊಂಡಿಲ್ಲ. ಜ್ಯಾತ್ಯಾತೀತ ರಾಷ್ಟ್ರವಾಗಿ, ಪ್ರತಿಯೊಬ್ಬರಿಗೂ ಆತನ ಆಯ್ಕೆಯ ನಂಬಿಕೆಯನ್ನು ಆಚರಿಸಲು ಹಕ್ಕಿದೆ ನಿಜ. ಇಂತಹ ಹಕ್ಕುಗಳ ಮೇಲೆ ಭಾರತದ ಸಂವಿಧಾನ ತಾರ್ಕಿಕ ನಿರ್ಬಂಧಗಳನ್ನು ಹೇರಿದೆ. ಸಂವಿಧಾನಿಕವಾಗಿ ತರಗತಿಯೊಳಗೆ ಹಿಜಬ್ ಧರಿಸುವುದು ಇಸ್ಲಾಂನ ಅವಿಭಾಜ್ಯ ಅಂಗವೇ ಎಂಬ ಬಗ್ಗೆ ಆಳವಾದ ಪರಿಶೀಲನೆ ಆಗಬೇಕಿದೆ. ಅದಕ್ಕಾಗಿ ಸುಪ್ರೀಂಕೋರ್ಟ್‍ನ ಮತ್ತು ಇತರೆ ಹೈಕೋರ್ಟ್‍ಗಳ ಆದೇಶವನ್ನು ಬಳಸಿಕೊಳ್ಳಲಾಗುತ್ತಿದೆ.
ನಮ್ಮದು ನಾಗರಿಕ ಸಮಾಜವಾಗಿ ಯಾವುದೇ ವ್ಯಕ್ತಿ ಧರ್ಮ, ಸಂಸ್ಕøತಿ ಅಥವಾ ಇತರೆ ಹೆಸರಲ್ಲಿ ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಲು ಅನುಮತಿ ಇಲ್ಲ. ಮುಗಿಯದ ಪ್ರತಿಭಟನೆಗಳು ಮತ್ತು ಅನಿರ್ದಿಷ್ಟವಾಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿರುವುದು ಒಳ್ಳೆಯದಲ್ಲ. ತುರ್ತು ಆಧಾರದಲ್ಲಿ ಈ ವಿಷಯಗಳ ವಿಚಾರಣೆ ಮುಂದುವರಿಯಲಿದೆ. ಪ್ರತಿಭಟನೆಗಳ ಮುಂದುವರಿಕೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದರ ಬದಲು ತರಗತಿಗಳಿಗೆ ಮರುಳುವುದರಿಂದ ವಿದ್ಯಾರ್ಥಿಗಳ ಹಿತಾಸಕ್ತಿಗೆ ಒಳ್ಳೆಯದು. ಶೈಕ್ಷಣಿಕ ವರ್ಷ ಶೀಘ್ರವೇ ಅಂತ್ಯವಾಗಲಿದೆ. ಸಂಬಂಧಪಟ್ಟವರು ಮತ್ತು ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದತೆಯನ್ನು ಆಶಿಸುತ್ತೇವೆ ಮತ್ತು ನಂಬುತ್ತೇವೆ. ಇದನ್ನೂ ಓದಿ:ಹಿಜಬ್ ನಿಷೇಧಕ್ಕೆ ತಡೆ ಕೋರಿ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂಕೋರ್ಟ್
ಮೇಲ್ಕಾಣಿಸಿದ ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟವರಿಗೆ ಆದಷ್ಟು ಬೇಗ ಶಿಕ್ಷಣ ಸಂಸ್ಥೆಗಳನ್ನು ತೆರೆಯುವಂತೆಯೂ ಮತ್ತು ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಮರಳಲು ಅವಕಾಶ ಮಾಡಿಕೊಡುವಂತೆಯೂ ಕೋರುತ್ತೇವೆ. ಈ ಅರ್ಜಿಗಳ ವಿಚಾರಣೆ ಬಾಕಿ ಇರಿಸಿ, ಎಲ್ಲ ವಿದ್ಯಾರ್ಥಿಗಳು ಅವರವರ ಧರ್ಮ ಅಥವಾ ನಂಬಿಕೆ ಕೇಸರಿ ಶಾಲು, ಹಿಜಬ್, ಧರ್ಮ ಧ್ವಜಗಳು ಅಥವಾ ಇತರೆಗಳನ್ನು ತರಗತಿಯೊಳಗೆ ಮುಂದಿನ ಆದೇಶದವರೆಗೂ ಧರಿಸದಂತೆ ನಿರ್ಬಂಧಿಸುತ್ತಿದ್ದೇವೆ. ಈ ಆದೇಶ ಕಾಲೇಜು ಅಭಿವೃದ್ಧಿ ಸಮಿತಿ ವಿದ್ಯಾರ್ಥಿ ವಸ್ತ್ರ ಸಂಹಿತೆ, ಸಮವಸ್ತ್ರ ನಿಗದಿಪಡಿಸಿರುವ ಶಿಕ್ಷಣ ಸಂಸ್ಥೆಗಳಿಗೆ ಅನ್ವಯ ಆಗಲಿದೆ.
ಉಡುಪಿ: ರಾಜ್ಯದ ಹಿಜಬ್- ಕೇಸರಿ ಶಾಲು ವಿವಾದ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಹೋರಾಟಕ್ಕಾಗಿಯೇ ವಿದ್ಯಾರ್ಥಿಗಳು ಟ್ವಿಟ್ಟರ್ ಖಾತೆ ಓಪನ್ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಹಿಜಬ್ ಹೋರಾಟದ ರೂಪುರೇಷೆ ಹಿಂದೆಯೇ ಮಾಡಲಾಗಿತ್ತು. ಅದಕ್ಕಾಗಿಯೇ ವಿದ್ಯಾರ್ಥಿಗಳ ಟ್ವಿಟ್ಟರ್ ಖಾತೆ ತೆರೆಯಲಾಯ್ತು. ಆ ನಂತರ ಉಡುಪಿ ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಹಿಜಬ್ ಗಾಗಿ ಮನವಿ ಕೊಟ್ಟರು. ಕಾಲೇಜು ಹಿಜಬ್ ಅವಕಾಶ ಕೊಡದಿದ್ದಾಗ ಅಂತಾರಾಷ್ಟ್ರೀಯ ಚರ್ಚೆಗೆ ವೇದಿಕೆ ಸಿದ್ಧ ಮಾಡಿದರು. ಕಾಲೇಜು, ಜಿಲ್ಲೆ ರಾಜ್ಯ ದೇಶಾದ್ಯಂತ, ಹೊರದೇಶಕ್ಕೆ ವ್ಯಾಪಿಸಲು ಕಾರಣವಾಯ್ತು. ಕೋರ್ಟ್ ಮೆಟ್ಟಿಲೇರುವ ಪ್ಲ್ಯಾನ್ ಮೊದಲೇ ಮಾಡಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಪವರ್ ಫುಲ್ ಜೇಮ್ಸ್ ಟೀಸರ್ ಔಟ್ – ಅಪ್ಪು ಎಂಟ್ರಿಗೆ ಅಭಿಮಾನಿಗಳು ಫಿದಾ
ಹಿಜಾಬ್ ವಿವಾದಕ್ಕೆ ನವೆಂಬರ್ ತಿಂಗಳಲ್ಲೇ ಮಾಸ್ಟರ್ ಪ್ಲಾನ್ ನಡೆದಿತ್ತು. ನಾಲ್ವರು ಹಿಜಾಬ್ ಸಂತ್ರಸ್ತೆಯರು ಏಕಕಾಲದಲ್ಲಿ ಟ್ವಿಟರ್ ಖಾತೆ ತೆರೆದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವನ್ನು ಪ್ರಮೋಟ್ ಮಾಡತೊಡಗಿದ್ದರು. ನವೆಂಬರ್ ತಿಂಗಳಲ್ಲಿ ಬಾಬ್ರಿ ಮಸೀದಿ ತೀರ್ಪಿನ ವಿರುದ್ಧ ಟ್ವೀಟ್ ಮಾಡಿದ್ದರು. ಯುವತಿಯರ ಪ್ರತಿ ಟ್ವೀಟ್ ಗೆ ಸಿಎಫ್‍ಐ ರಾಷ್ಟ್ರಾಧ್ಯಕ್ಷ ರಿಟ್ವೀಟ್ ಮಾಡುತ್ತಿದ್ದರು. ಇದೀಗ ವಿಜಯ್ ಪಟೇಲ್ ಎಂಬವರಿಂದ ಸಿಎಫ್‍ಐ ಸಂಘಟನೆಯ ಟ್ವಿಟ್ಟರ್ ಟ್ರೆಂಡ್ ರಹಸ್ಯ ಬಯಲಾಗಿದೆ.
ಹಿಜಾಬ್ ವಿವಾದ ಆರಂಭವಾಗುವ ಮೊದಲೇ ಸಿಎಎಫ್ ಐ ಸಕ್ರಿಯ ಕಾರ್ಯಕರ್ತರಾಗಿದ್ದ ಯುವತಿಯರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಟ್ವೀಟ್ ಮಾಡಿದ್ದರು. ಅಲ್ಮಾಸ್, ಮುಸ್ಕಾನ್, ಅಲಿಯಾ ಅಸಾದಿ, ಮೊದಲಾದವರ ಟ್ವಿಟ್ಟರ್ ಹಿಸ್ಟರಿಯಿಂದ ಸಾಕಷ್ಟು ಸಂಗತಿಗಳು ಬಹಿರಂಗವಾಗಿದೆ. ಮತೀಯವಾದಿ ವಿಚಾರಗಳನ್ನೇ ಟ್ವೀಟ್ ಮಾಡುತ್ತಾ ಬಂದಿರುವ ಮೂವರು ಯುವತಿಯರು ನವೆಂಬರ್ 21ರಂದು ಮಸೀದಿ ಮೈಕುಗಳನ್ನು ಸಮರ್ಥಿಸಿ ಟ್ವೀಟ್ ಮಾಡಿದ್ದರು. ಡಿಸೆಂಬರ್ 12ಕ್ಕೆ ದೆಹಲಿ ದಂಗೆಯ ಆರೋಪಿ ರೌಫ್ ಶರೀಫ್ ಬಿಡುಗಡೆಗೆ ಆಗ್ರಹಿಸಿ ಯುವತಿಯರು ಟ್ವೀಟ್ ಮಾಡಿದ್ದರು. ಡಿಸೆಂಬರ್ 24ರ ಬಳಿಕ ಯುವತಿಯರು ಉಡುಪಿಯಲ್ಲಿ ಹಿಜಾಬ್ ಹೋರಾಟ ಆರಂಭಿಸಿದರು. ಒಟ್ಟಿನಲ್ಲಿ ಇದೀಗ ಯುವತಿಯರ ಟ್ವಿಟರ್ ಟ್ರಾಕ್ ರೆಕಾರ್ಡಿನಲ್ಲಿ ಅನೇಕ ಕುತೂಹಲಕಾರಿ ಅಂಶಗಳು ಅಡಗಿವೆ.
ಬೆಂಗಳೂರು: ರಾಜ್ಯದಲ್ಲಿ ಹಿಜಬ್-ಕೇಸರಿ ಫೈಟ್‍ಗೆ ಹೈಕೋರ್ಟ್ ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ. ಇವತ್ತು ಎರಡೂವರೆ ಗಂಟೆ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ತ್ರಿಸದಸ್ಯ ಪೀಠ, ಮುಂದಿನ ಮುಂದಿನ ಆದೇಶ ನೀಡುವವರೆಗೆ ಕಾಲೇಜು ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ವಸ್ತ್ರ ಬಳಸಬಾರದೆಂದು ಸೂಚನೆ ನೀಡಿದೆ.
ಇಂದು ಹಿಜಬ್ ವಿವಾದಕ್ಕೆ ಸಂಬಂಧಿಸಿ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ.ಕೃಷ್ಣ ದೀಕ್ಷಿತ್ ಮತ್ತು ನ್ಯಾ. ಖಾಜಿ ಜೈಬುನ್ನಿಸಾ ಅವರ ತ್ರಿಸದಸ್ಯ ಪೀಠ ಐದು ಅರ್ಜಿಗಳ ವಿಚಾರಣೆ ನಡೆಸಿತು.
ಹೈಕೋರ್ಟ್ ಸೂಚನೆ ಅನ್ವಯ, ಹಿಜಬ್ ಅಥವಾ ಕೇಸರಿ ಶಾಲುಗಳನ್ನು ಧರಿಸಿ ತರಗತಿಗಳಿಗೆ ಹಾಜರಾಗುವಂತಿಲ್ಲ. ಸದ್ಯಕ್ಕೆ ಯಥಾಸ್ಥಿತಿ ಕಾಪಾಡಲು ಕೋರ್ಟ್ ಸೂಚಿಸಿದ್ದು, ಸಮವಸ್ತ್ರ ಧರಿಸಿಯೇ ಕಾಲೇಜಿಗೆ ಹಾಜರಾಗಬೇಕಿದೆ. ಮಕ್ಕಳ ಹಿತದೃಷ್ಟಿಯಿಂದ ಶಾಲೆ-ಕಾಲೇಜು ಪುನಾರಂಭ ಮಾಡುವಂತೆ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿದೆ. ಇದು ಅಂತಿಮ ಆದೇಶವಲ್ಲ ಅಂತ ಕೋರ್ಟ್ ಸ್ಪಷ್ಟಪಡಿಸಿದ್ದು, ಸೋಮವಾರದಿಂದ ಪ್ರತಿನಿತ್ಯ ವಿಚಾರಣೆ ನಡೆಸಿ ಆದೇಶ ನೀಡುವುದಾಗಿಯೂ ತಿಳಿಸಿದೆ. ಇದನ್ನೂ ಓದಿ: ರಾಷ್ಟ್ರವೋ ಅಥವಾ ಧರ್ಮ ಯಾವುದು ಮುಖ್ಯ: ಹಿಜಬ್ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ
ನ್ಯಾಯಪೀಠದ ಮೌಖಿಕ ಸೂಚನೆಗೆ ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಆಕ್ಷೇಪ ವ್ಯಕ್ತಪಡಿಸಿದರು. ಕೂಡಲೇ ನ್ಯಾಯಪೀಠ, ಈ ವಿವಾದ ಇತ್ಯರ್ಥ ಆಗಬೇಕು ಎಂದಿದ್ದರೆ ನಮಗೆ ಸಹಕರಿಸಿ. ಸೋಮವಾರದ ವಿಚಾರಣೆ ವೇಳೆ ನಿಮ್ಮ ಆಕ್ಷೇಪಗಳನ್ನು ದಾಖಲಿಸಿ ಎಂದು ಹೇಳಿತು.
ಬುಧವಾರ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಿತ್ತು. ಮುಖ್ಯ ನ್ಯಾಯಮೂರ್ತಿಗಳು ಪರಿಸ್ಥಿತಿ ಅರಿತು ಕೂಡಲೇ ತಮ್ಮನ್ನು ಒಳಗೊಂಡಂತೆ ಮೂವರು ನ್ಯಾಯಮೂರ್ತಿಗಳ ವಿಸ್ತೃತ ಪೀಠವನ್ನು ರಚಿಸಿದ್ದರು.
ಮೌಖಿಕ ಸೂಚನೆ ಏನು?
ಸದ್ಯಕ್ಕೆ ಶಾಲೆ ಕಾಲೇಜು ಆರಂಭವಾಗಲಿ. ಆದರೇ ತೀರ್ಪು ಬರುವವರೆಗೂ ವಿದ್ಯಾರ್ಥಿಗಳು ಧಾರ್ಮಿಕ ವಸ್ತ್ರ ಧರಿಸಿ ತರಗತಿಗೆ ಹಾಜರಾಗುಂತಿಲ್ಲ. ಕೇಸರಿ ಶಾಲು, ಹೆಡ್ ಸ್ಕಾರ್ಫ್, ಇನ್ನಿತರೇ ಧಾರ್ಮಿಕ ಅಸ್ತ್ರ ಧರಿಸಬಾರದು.
ಯಾರೂ ಕೂಡ ಧಾರ್ಮಿಕತೆ ಬಿಂಬಿಸುವ ವಸ್ತ್ರ ಧರಿಸುತ್ತೇವೆ ಎಂದು ಪಟ್ಟು ಹಿಡಿಯುವಂತಿಲ್ಲ. ನಾವು ಎರಡು ಕಡೆಯವರಿಗೂ ಈ ಸೂಚನೆ ನೀಡುತ್ತಿದ್ದೇವೆ. ನಮಗೆ ಶಾಂತಿ ಸೌಹಾರ್ದತೆ ಕಾಪಾಡುವುದು ಮುಖ್ಯ. ಆದಷ್ಟು ಬೇಗ ನಾವು ಈ ಪ್ರಕರಣವನ್ನು ಇತ್ಯರ್ಥ ಮಾಡುತ್ತೇವೆ. ವಿಚಾರಣೆ ನಡೆಯುವಾಗ ಶಿಕ್ಷಣ ಸಂಸ್ಥೆಗಳಿಗೆ ಧಾರ್ಮಿಕ ಉಡುಪು ಧರಿಸಲು ನಿರ್ಬಂಧ ವಿಧಿಸುತ್ತಿದ್ದೇವೆ. ಇದನ್ನೂ ಓದಿ: ಡಿಕೆಶಿ ಪಾಕಿಸ್ತಾನ ಪರ ಹೇಳಿಕೆ ಕೊಡುವವರ ಪರವೋ ಅಥವಾ ಭಾರತ ಮಾತೆಯ ಪರವೋ: ರೇಣುಕಾಚಾರ್ಯ
ವಕೀಲ ದೇವದತ್ ಕಾಮತ್, ಸಂಜಯ್ ಹೆಗ್ಡೆ ವಾದ ಏನಿತ್ತು?
ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಪ್ರಕಾರ ಸಮವಸ್ತ್ರ ಕಡ್ಡಾಯ ಅಲ್ಲ. ಪ್ರಾಥಮಿಕ ಶಾಲೆಗಳಲ್ಲಿ ಸಮವಸ್ತ್ರ ಇರಬೇಕು. ಕಾಲೇಜಿಗೆ ಅಗತ್ಯವಿಲ್ಲ. 2 ವರ್ಷದಿಂದ ನಮ್ಮ ವಿದ್ಯಾರ್ಥಿಗಳು ಹಿಜಬ್ ಧರಿಸಿ ಕಾಲೇಜಿಗೆ ಹೋಗುತ್ತಿದ್ದರು. ಕಾಲೇಜಿನಲ್ಲಿ ಸಮವಸ್ತ್ರ ಎನ್ನುವುದು ಇತ್ತೀಚಿನ ಬೆಳವಣಿಗೆ ಅಷ್ಟೇ.
ವಿವಾದ ಆದ ಮೇಲೆ ಸರ್ಕಾರ ಆದೇಶ ಹೊರಡಿಸಿದೆ.ಇದರ ಉದ್ದೇಶ ಏನು? ಆದೇಶದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲೇಖಿಸಿದ್ದಾರೆ. ಈ ವೇಳೆ ಮುಖ್ಯ ನ್ಯಾಯಮೂರ್ತಿಗಳು ಸರ್ಕಾರ ಕೋರ್ಟ್ ಆದೇಶ ಉಲ್ಲೇಖಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಕ್ಕೆ ನಮ್ಮ ಮನವಿ ಇಷ್ಟೇ. ಸರ್ಕಾರಕ್ಕೆ ಆದೇಶ ಮಾಡುವ ಅಧಿಕಾರ ಇಲ್ಲ. ತಮಿಳುನಾಡು ಶಿಕ್ಷಣ ಕಾಯ್ದೆಯನ್ನು ಇಲ್ಲಿಗೆ ತರುವ ಪ್ರಯತ್ನ ನಡೆದಿದೆ ಎಂದು ಉತ್ತರಿಸಿದರು.
ಈ ವಿವಾದ ಶುರುವಾದ ಮೇಲೆ ಶಾಲು ಹಾಕೋಕೆ ಶುರು ಮಾಡಿದ್ದಾರೆ. ಮಕ್ಕಳು ಸಮವಸ್ತ್ರ ಬಣ್ಣದ ಹಿಜಬ್ ಧರಿಸುತ್ತಿದ್ದಾರೆ. ಇದರಿಂದ ಯಾರಿಗೂ ತೊಂದರೆ ಇಲ್ಲ. ಆದರೂ, ಕಳೆದ ವಾರದಿಂದ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಬಿಟ್ಟುಕೊಳ್ಳುತ್ತಿಲ್ಲ. ನಮಗೆ ಆ ಮಕ್ಕಳ ಹೋರಾಟ ನೋಡಲು ಆಗುತ್ತಿಲ್ಲ. ಮಕ್ಕಳು ಶಾಲೆಯಿಂದ ಹೊರಗೆ ಇದ್ದಾರೆ. ಮಧ್ಯಂತರ ಆದೇಶ ನೀಡಿ ಎಂದು ಮನವಿ ಮಾಡಿದರು.
ಬೆಂಗಳೂರು: “ಅನುಚಿತ ಗುಂಪಷ್ಟೇ ವಿವಾದವನ್ನು ಜೀವಂತವಾಗಿಡಬಲ್ಲದು ಮತ್ತು ಸಂವಿಧಾನದ ಮೇಲೆ ಎಲ್ಲರೂ ನಂಬಿಕೆ ಇಡಬೇಕು ಹಾಗೂ ಶಾಂತಿ ಕಾಪಾಡುವಂತೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಮನವಿ” ಇದು ಜನತೆಯಲ್ಲಿ ಕರ್ನಾಟಕ ಹೈಕೋರ್ಟ್(Karnataka High Court) ನ್ಯಾಯಮೂರ್ತಿ ಎಎಸ್ ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠ ಮಾಡಿರುವ ಮನವಿ.
ಕಾಲೇಜಿಗೆ ಹಿಜಬ್(Hijab) ಧರಿಸಿ ಹೋಗಲು ಅವಕಾಶ ನೀಡುವಂತೆ ಕೋರಿ ಉಡುಪಿ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2:30ಕ್ಕೆ ಪೀಠ ಮುಂದೂಡಿದೆ. ಇವತ್ತು ವಿದ್ಯಾರ್ಥಿನಿಯರ ಪರ ವಕೀಲ ದೇವದತ್ ಕಾಮತ್ ಅವರಷ್ಟೇ ವಾದ ಮಂಡನೆ ಮಾಡಿದರು. ಮಧ್ಯಾ ಹ್ನ 1 ಗಂಟೆಗೆ ಶುರುವಾದ ವಿಚಾರಣೆ ಸಂಜೆ 4:30ರವರೆಗೂ ನಡೆಯಿತು.
ವಾದ-ಪ್ರತಿವಾದದ ಆಲಿಸಿದ ಬಳಿಕ ಇವತ್ತೇ ತೀರ್ಪು ಹೊರಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ನಾಳೆ ಮಧ್ಯಾಹ್ನ 2:30ಕ್ಕೆ ವಿಚಾರಣೆಯನ್ನು ನ್ಯಾಯಮೂರ್ತಿ ಜೆಎನ್ ದೀಕ್ಷಿತ್ ನೇತೃತ್ವದ ಪೀಠ ಮುಂದೂಡಿದೆ. ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಗಳ ಬಗ್ಗೆ ನ್ಯಾಯಮೂರ್ತಿಗಳು ತೀವ್ರ ಕಳವಳ ವ್ಯಕ್ತಪಡಿಸಿದರು. ಆದಷ್ಟು ಬೇಗ ತೀರ್ಪು ನೀಡುವುದಾಗಿ ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಒಂದು ಕಡೆ ಹಿಜಬ್ ಕಿಡಿ ಇನ್ನೊಂದೆಡೆ ಕೇಸರಿ, ನೀಲಿ ಶಾಲು ಸಂಘರ್ಷ!
ಅರ್ಜಿದಾರರ ಪರ ವಕೀಲರ ವಾದ:
ಕುರಾನ್ ಪ್ರಕಾರ ಹಿಜಬ್ ಧರಿಸುವುದು ಮೂಲಭೂತ ಆಚರಣೆ. ಶೈಕ್ಷಣಿಕ ವರ್ಷ ಮುಗಿಯಲು 2 ತಿಂಗಳಷ್ಟೇ ಇದೆ. ಹಿಜಬ್ ಧರಿಸಿ ಹೋಗಲು ಅವಕಾಶ ಕೊಡಿ. ಪರೀಕ್ಷೆ ಮುಗಿಯುವವರೆಗೂ ಯೂನಿಫಾರಂ ಬಣ್ಣದ ಹಿಜಬ್ ಧರಿಸಲು ಅವಕಾಶ ಕೊಡಿ. ಆ ಬಳಿಕ ಬೇಕಾದರೆ ಈ ವಿಷಯದ ಬಗ್ಗೆ ಕೋರ್ಟ್ ನಿರ್ಧರಿಸಬಹುದು.
ಹಿಜಬ್ ಧರಿಸುವುದು ಮೂಲಭೂತ ಹಕ್ಕಲ್ಲ ಎಂಬ ಅರ್ಥದಲ್ಲಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸರ್ಕಾರದ ಈ ಸುತ್ತೋಲೆ ಕೇರಳ, ಮದ್ರಾಸ್, ಬಾಂಬೆ ಹೈಕೋರ್ಟ್ ತೀರ್ಪನ್ನು ಪಾಲಿಸಿಲ್ಲ. ಉಡುಪು ಧರಿಸುವುದು ಸುಪ್ರೀಂಕೋರ್ಟ್ ನೀಡಿರುವ ಖಾಸಗಿತನವೂ ಮೂಲಭೂತ ಹಕ್ಕು ವ್ಯಾಪ್ತಿಯಲ್ಲಿ ಬರುತ್ತದೆ.
ಜ್ಯಾತ್ಯಾತೀತತೆ ಚಿಂತನೆಯಡಿ ಧಾರ್ಮಿಕ ಆಚರಣೆಗಳನ್ನು ಪರೀಕ್ಷೆಗೊಳಪಡಿಸಲು ಸಾಧ್ಯವಿಲ್ಲ. ಧರ್ಮದ ಮೂಲಭೂತ ಆಚರಣೆಯನ್ನು ಧಾರ್ಮಿಕತೆಯ ನಂಬಿಕೆ ಮೇಲಷ್ಟೇ ನಿರ್ಧರಿಸಬೇಕು, ಜ್ಯಾತ್ಯಾತೀತ ಭಾವನೆಗಳ ಆಧಾರದಲ್ಲಿ ಅಲ್ಲ. ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿನ ಮೂಲಭೂತ ಹಕ್ಕಿಗೂ ಸರ್ಕಾರಿ ಸಂಸ್ಥೆಯಲ್ಲಿ ಆಚರಿಸಲಾಗುವ ಮೂಲಭೂತ ಹಕ್ಕಿಗೂ ವ್ಯತ್ಯಾಸ ಇದೆ. ಇದನ್ನೂ ಓದಿ: ತಾರಕಕ್ಕೇರಿದ ಹಿಜಬ್ ವಿವಾದ – ಶಿಕ್ಷಕರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ
ಹಿಜಬ್ ಧರ್ಮದ ಅವಿಭಾಜ್ಯ ಭಾಗವೆಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಕಾಲೇಜು ಪ್ರವೇಶಾತಿಯ ಆರಂಭದಿಂದಲೂ ವಿದ್ಯಾರ್ಥಿನಿಯರು ಹಿಜಬ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದರು. ಹಿಜಬ್ ಧರಿಸುವುದು ಕೆಲವುಗಳ ಉಲ್ಲಂಘನೆ ಎಂದು ಕೆಲವರು ಭಾವಿಸುವವರೆಗೂ ಏನೂ ತೊಂದರೆ ಆಗಿರಲಿಲ್ಲ. ಪ್ರತಿಯೊಂದು ಧಾರ್ಮಿಕ ಆಚರಣೆಗೂ ಸರ್ಕಾರ ಸಾರ್ವಜನಿಕ ಸುವ್ಯವಸ್ಥೆಯ ಬಣ್ಣ ನೀಡಲು ಹೊರಟರೆ ಏನಾಗಬಹುದು? ಬ್ರಾಹ್ಮಣರು ನಾಮ ಧರಿಸಿ ಅಥವಾ ಸಿಖ್ಖರು ಟರ್ಬನ್ ಧರಿಸಿ ಶಾಲೆಗೆ ಹೋದರೆ ಅದು ಸಾರ್ವಜನಿಕ ಸುವ್ಯವಸ್ಥೆಗೆ ಪರಿಣಾಮ ಬೀಳುತ್ತದೆ ಎಂದು ಸರ್ಕಾರ ಹೇಳಲಾದಿತೇ?
ಹಿಜಬ್ ಧರಿಸಿ ಹೊರಗಡೆ ಓಡಾಡಿದ್ರೆ ಸಾರ್ವಜನಿಕ ಸುವ್ಯವಸ್ಥೆ ವಿಷಯವಲ್ಲ, ಮಾರ್ಕೆಟ್‍ಗೆ ಹೋದರೆ ಸಾರ್ವಜನಿಕ ಸುವ್ಯವಸ್ಥೆಯ ವಿಷಯವಲ್ಲ. ಆದರೆ ಹಿಜಬ್ ಧರಿಸಿ ಕಾಲೇಜಿಗೆ ಹೋದರೆ ಸಾರ್ವಜನಿಕ ಸುವ್ಯವಸ್ಥೆ ಹೇಗಾತ್ತದೆ? ಜನರು ತಮ್ಮ ಮೂಲಭೂತ ಹಕ್ಕು ಚಲಾಯಿಸಲು ಸರ್ಕಾರ ವ್ಯವಸ್ಥೆ ಮಾಡಬೇಕು. ಶಾಲೆಗೆ ಹೋಗುವ ವಿದ್ಯಾರ್ಥಿಗಳ ಹಕ್ಕನ್ನು ಸರ್ಕಾರ ರಕ್ಷಣೆ ಮಾಡಬೇಕು.
ಶಾಲೆಗಳಲ್ಲಿ ಯಾರೋ ನಾಮ ಧರಿಸಿ ಬಂದರೆ, ಹಿಜಬ್ ಧರಿಸಿ ಬಂದರೆ, ಕ್ರಾಸ್ ಧರಿಸಿ ಬಂದರೆ ಅದು ಸಕಾರಾತ್ಮಕ ಜ್ಯಾತ್ಯಾತೀತತೆ. ನಾಲ್ಕೈದು ದಿನಗಳಿಂದ ಹಿಜಬ್ ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಕಾಲೇಜುಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನು ಮಾಡಲಾಗಿದೆ. ಹಿಜಬ್ ಧರಿಸಿದ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕೂರಿಸಿದ್ದು `ಧಾರ್ಮಿಕ ಅಸ್ಪ್ರಶ್ಯತೆ’. ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಕಾನೂನು ಮಾಡಬಹುದು, ಬಾರ್ ಕೌನ್ಸಿಲ್ ರೀತಿಯಲ್ಲೇ. ಆದರೆ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹೇರಬಹುದೇ ಎಂಬುದೇ ಪ್ರಶ್ನೆ.
ಜಡ್ಜ್ ಹೇಳಿದ್ದೇನು?
ಸಂವಿಧಾನ ಏನು ಹೇಳಿದೆಯೋ ಅದರಂತೆಯೇ ತೀರ್ಮಾನ. ಸಂವಿಧಾನವೇ ನನಗೆ ಭಗವದ್ಗೀತೆ. ಭಾವನೆಗಳ ಆಧಾರದಲ್ಲಿ ಆದೇಶ ಕೊಡಲು ಆಗಲ್ಲ, ಭಾವನೆಗಳನ್ನು ಪಕ್ಕಕ್ಕಿಡಿ. ಎರಡು ತಿಂಗಳ ಬಳಿಕ ನಿಯಮ (ಯೂನಿಫಾರಂ ನಿಯಮ) ಮಾಡಿದರೆ ಪಾಲಿಸುತ್ತೀರಾ?
ಪ್ರತಿ ದಿನ ವಿದ್ಯಾರ್ಥಿಗಳು ಬೀದಿಯಲ್ಲಿ ಹೋರಾಟ ಮಾಡುವುದನ್ನು ನೋಡಲಾಗದು. ಇದು ಒಳ್ಳೆಯ ದೃಶ್ಯ ಅಲ್ಲ. ನಮ್ಮನ್ನು ಅಂತಾರಾಷ್ಟ್ರೀಯ ಸಮುದಾಯ ಗಮನಿಸುತ್ತಿದೆ. ವಾಟ್ಸಾಪ್ ಓಪನ್ ಮಾಡಿದಾಗಲೆಲ್ಲ ಹಲವು ಮೆಸೇಜ್‍ಗಳು ಬರುತ್ತಿವೆ. ಕೋರ್ಟ್ ಆ ಆದೇಶ ಹೊರಡಿಸಿದೆ ಈ ಆದೇಶ ಹೊರಡಿಸಿದೆ ಎಂದು ಅಸಂಖ್ಯಾತ ಸಂಖ್ಯೆಗಳಿಂದ ಮೆಸೇಜ್ ಬರುತ್ತಿದೆ.
`ಹಿಜಬ್’ ಇಸ್ಲಾಂ ಅವಿಭಾಜ್ಯ ಅಂಗವೇ ಎಂಬ ಬಗ್ಗೆಯಷ್ಟೇ ವಿಚಾರಣೆ ಮಾಡುತ್ತೇವೆ. ಉಡುಪು ಧರಿಸುವುದು ಖಾಸಗಿತನ ಹಕ್ಕಿನ ವ್ಯಾಪ್ತಿಗೆ ಬರುತ್ತದೆ. ನಾನು ವಿದ್ಯಾರ್ಥಿಯಾದ ದಿನದಿಂದ ಇಂಥಾ ಸಂಘರ್ಷವನ್ನು ನೋಡಿರಲಿಲ್ಲ. ಪ್ರತಿಭಟನೆ ಮಾಡುವುದು, ಬೀದಿಗಿಳಿಯುವುದು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುವುದು. ವಿದ್ಯಾರ್ಥಿಗಳು ಇತರರ ಮೇಲೆ ಹಲ್ಲೆ ನಡೆಸುವುದು ಒಳ್ಳೆಯದಲ್ಲ. ವಿದ್ಯಾರ್ಥಿಗಳು ಶಾಂತಿ ಕಾಪಾಡಬೇಕು.. ಜನರು ಸುವ್ಯವಸ್ಥೆ ಪಾಲಿಸಬೇಕು. ಕೋರ್ಟ್‍ಗೆ ನಂಬಿಕೆ ಇದೆ.
ನವದೆಹಲಿ: ಅಧಿಕೃತ ಕಾರ್ಯಕ್ರಮಗಳಲ್ಲಿ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡಲು, ಹೈಕೋರ್ಟ್ ಮುಖ್ಯ ನಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದಲ್ಲಿ ಆಡಳಿತಾತ್ಮಕ ಪೂರ್ಣ ನ್ಯಾಯಾಲಯ ಸಭೆ ನಿರ್ಣಯ ಕೈಗೊಂಡಿದೆ.
ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ನ್ಯಾಯಾಲಯದ ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ ಇರಿಸಲು ಕರ್ನಾಟಕ ಹೈಕೋರ್ಟ್‍ನ ರಿಜಿಸ್ಟ್ರಾರ್ ಜನರಲ್ ಸುತ್ತೋಲೆ ಹೊರಡಿಸಿದ್ದಾರೆ. ಗಣರಾಜ್ಯೋತ್ಸವದ ಅಂಗವಾಗಿ ರಾಯಚೂರಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇರಿಸುವುದರ ಸುತ್ತ ಉಂಟಾದ ಗೊಂದಲಗಳ ಕುರಿತು ವಕೀಲರು ಹಾಗೂ ಕೆಲ ಸಂಘಟನೆಗಳು ರಾಜ್ಯ ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವರದಿ ಕೇಳಿತ್ತು. ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದಲ್ಲಿ ಶುಕ್ರವಾರ ನಡೆದ ಆಡಳಿತಾತ್ಮಕ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದ್ದು, ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಆಯೋಜಿಸಲಾಗುವ ಅಧಿಕೃತ ಕಾರ್ಯಕ್ರಮಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರವಿಡಲು ಕ್ರಮ ಕೈಗೊಳ್ಳುವಂತೆ ಆಯಾ ನ್ಯಾಯಾಲಯಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಇದನ್ನೂ ಓದಿ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನ
ಸುತ್ತೋಲೆಯಲ್ಲಿ ಏನಿದೆ?: ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಹಾಗೂ ಸಂವಿಧಾನ ದಿನ ಸೇರಿದಂತೆ ಎಲ್ಲ ಅಧಿಕೃತ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹೈಕೋರ್ಟ್‍ನ ಬೆಂಗಳೂರಿನಲ್ಲಿರುವ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿ ಪೀಠಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಇರಿಸಲು ನಿರ್ಧರಿಸಲಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈ ಕುರಿತಾಗಿ ಮಾತನಾಡಿದ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡಾ ಅವರು, ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ನ್ಯಾಯಾಂಗ ಇಲಾಖೆಯ ಕಾರ್ಯಕ್ರಮಗಳಲ್ಲಿ ಇಡುವುದಕ್ಕೆ ಸಂಬಂಧಿಸಿದ ಪ್ರಕರಣವು ಪೂರ್ಣ ನ್ಯಾಯಾಲಯದ ಮುಂದೆ ಪರಿಗಣನೆಗೆ ಬಾಕಿ ಇದೆ. ಅನುಮೋದನೆ ದೊರೆತ ಬಳಿಕ ಅಧಿಕೃತವಾಗಿ ಗಾಂಧೀಜಿ ಅವರ ಭಾವಚಿತ್ರದ ಜೊತೆಗೆ ಅಂಬೇಡ್ಕರ್ ಅವರ ಭಾವಚಿತ್ರ ಇಡುವುದು ಕಡ್ಡಾಯವಾಗಲಿದೆ ಎಂದು ಹೇಳಿದ್ದಾರೆ.
ಸರ್ಕಾರದ ಸುತ್ತೋಲೆಗಳನ್ನು ನ್ಯಾಯಾಂಗ ಅಳವಡಿಸಿಕೊಂಡ ಮೇಲೆ ಅದು ಇಲ್ಲಿಗೆ ಅನ್ವಯಿಸುತ್ತದೆ. ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಹೈಕೋರ್ಟ್ ಪೂರ್ಣಪೀಠವು ಈ ಪ್ರಕ್ರಿಯೆ ಕೈಗೊಳ್ಳುತ್ತದೆ. ಆನಂತರ ಸಂಬಂಧಪಟ್ಟ ಎಲ್ಲರಿಗೂ ಸುತ್ತೋಲೆಯನ್ನು ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಲಬುರಗಿ: ನಾಳೆ ನಡೆಯಬೇಕಿದ್ದ ಕಲಬುರಗಿ ಪಾಲಿಕೆ ಮೇಯರ್ ಚುನಾವಣೆಯನ್ನು ಹೈಕೋರ್ಟ್ ಪೀಠ ಮುಂದೂಡಿದೆ.
ಮೇಯರ್ ಚುನಾವಣೆ ಮೀಸಲಾತಿ ಮತ್ತು ಐವರು ಎಂಎಲ್‍ಸಿಗಳ ಹೆಸರು ಸೇರ್ಪಡೆ ವಿರೋಧಿಸಿದ್ದ ಕಾಂಗ್ರೆಸ್, ಮೇಯರ್ ಚುನಾವಣೆಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಮೆಟ್ಟಿಲೇರಿತ್ತು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್‍ನ ಕಲಬುರಗಿ ಪೀಠ, ಈ ಹಿಂದಿನ ಮತ ಪಟ್ಟಿ ಅನುಸಾರವೇ ಮೇಯರ್ ಚುನಾವಣೆ ನಡೆಸಲು ಆದೇಶ ನೀಡಿದೆ. ಇದನ್ನೂ ಓದಿ: ಥಿಯೇಟರ್ ಹೌಸ್‍ಫುಲ್‍ಗೆ ಅನುಮತಿ – N95 ಮಾಸ್ಕ್ ಕಡ್ಡಾಯ, ಇಲ್ಲದಿದ್ದರೆ ನೋ ಎಂಟ್ರಿ
ಒಮ್ಮೆ ಮತದಾರರ ಪಟ್ಟಿಯನ್ನ ಸಿದ್ಧಪಡಿಸಿದ ಮೇಲೆ ಬದಲಾವಣೆ ಮಾಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹಳೆಯ ಮತಪಟ್ಟಿ ಅನುಸಾರ ಮುಂದಿನ ಒಂದು ತಿಂಗಳ ಒಳಗೆ ಚುನಾವಣೆ ನಡೆಸುವಂತೆ ಆದೇಶ ನೀಡಿದೆ. ಈ ಬೆಳವಣಿಗೆ ಬಿಜೆಪಿಗೆ ಹಿನ್ನಡೆ ಆದಂತಾಗಿದೆ. ಹೈಕೋರ್ಟ್ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸಿದೆ. ಸಂಭ್ರಮಾಚರಣೆ ಮಾಡಿದೆ.
ಉಡುಪಿ: ಹಿಜಬ್ ಧರಿಸುವ ವಿಚಾರವಾಗಿ ಉಡುಪಿ ಮೂಲದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿ ಹೈಕೋರ್ಟ್ ಮೆಟ್ಟಿಲೇರಿ ಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದಾಳೆ.
ರಿಟ್ ಅರ್ಜಿಯಲ್ಲಿ ಏನಿದೆ?: ಹಿಜಬ್ ಧರಿಸುವುದು ಮೂಲಭೂತ ಹಕ್ಕಾಗಿದೆ. ಸಂವಿಧಾನದಡಿ ಧಾರ್ಮಿಕ ಹಕ್ಕುಗಳನ್ನು ನಮಗೆ ನೀಡಲಾಗಿದೆ. ಆದರೆ ಹಿಜಬ್ ಧರಿಸಲು ಕಾಲೇಜು ಅನುಮತಿ ನೀಡುತ್ತಿಲ್ಲ. ಹೀಗಾಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರ್ಟ್ ಬಳಿ ಮನವಿ ಮಾಡಿ ವಿದ್ಯಾರ್ಥಿನಿ ರಿಟ್ ಅರ್ಜಿ ಸಲ್ಲಿಸಿದ್ದಾಳೆ. ಇದನ್ನೂ ಓದಿ: ಸಮವಸ್ತ್ರದಲ್ಲಿ ಕಾಲೇಜಿಗೆ ಬರಲು ನಾಳೆ ಒಂದು ದಿನ ಅವಕಾಶ: ರಘುಪತಿ ಭಟ್ ಎಚ್ಚರಿಕೆ
ನಡೆದಿದ್ದೇನು?: ಉಡುಪಿಯ ಮಹಿಳಾ ಸರ್ಕಾರಿ ಪಿಯು ಕಾಲೇಜಿನ ಐವರು ವಿದ್ಯಾರ್ಥಿನಿಯರು ಹಿಜಬ್‍ಗಾಗಿ ಹೋರಾಟ ನಡೆಸುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಲೇಜಿನಲ್ಲಿ ಸಭೆ ನಡೆಸಲಾಯಿತು. ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಕಾಲೇಜಿನಲ್ಲಿ ಮೀಟಿಂಗ್ ನಡೆದಿದ್ದು, ಈ ವೇಳೆ ವಿದ್ಯಾರ್ಥಿನಿಯರು ಅವರ ಪೋಷಕರು ಕಾಲೇಜಿನ ಆಡಳಿತ ಮಂಡಳಿ ಡಿಡಿಪಿಯು ಭಾಗಿಯಾಗಿದ್ದರು. ಇದನ್ನೂ ಓದಿ: ಆರ್ಥಿಕ ಲಾಭಕ್ಕಾಗಿ ಮದ್ಯ ಮಾರಾಟಕ್ಕೆ ಆದ್ಯತೆ ನೀಡುತ್ತಿರುವುದು ದುರದೃಷ್ಟಕರ: ಅಣ್ಣಾ ಹಜಾರೆ
ಐವರು ಹಿಜಬ್ ಹೋರಾಟಗಾರ್ತಿಯರ ಪೈಕಿ ನಾಲ್ವರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಹಂತದಲ್ಲಿ ಹಿಜಬ್‍ಗೆ ಅನುಮತಿ ಕೊಡಲು ಸಾಧ್ಯವಿಲ್ಲ. ಸರ್ಕಾರ, ಸಮಿತಿ ತೀರ್ಮಾನ ಮಾಡಿದಂತೆ ಸಮವಸ್ತ್ರದಲ್ಲಿ ಕಾಲೇಜಿಗೆ ಬರಬೇಕು ಎಂದು ಎಲ್ಲ ವಿಚಾರಗಳನ್ನು ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗಿದೆ. ತರಗತಿಯಲ್ಲಿ ಹಿಜಬ್ ಧರಿಸಿ ಪಾಠ ಕೇಳುವ ಅವಕಾಶವಿಲ್ಲ. ಮನೆಯ ಪುರುಷರ ಜೊತೆ ಮಾತನಾಡಿ, ಇಂದು ತೀರ್ಮಾನ ತೆಗೆದುಕೊಳ್ಳುವುದಾಗಿ ಪೋಷಕರು ಹೇಳಿದ್ದಾರೆ.
ಹಿಜಬ್ ತೆಗೆದು ಕ್ಲಾಸಿಗೆ ಬರುವುದಾದರೆ ನಾಳೆಯಿಂದ ಬನ್ನಿ. ನಾಳೆಯಿಂದ ಯಾವುದೇ ಕಾಲೇಜು ಆವರಣದಲ್ಲಿ ಗೊಂದಲ ನಿರ್ಮಾಣಕ್ಕೆ ಅವಕಾಶವಿಲ್ಲ. ಮಾಧ್ಯಮ, ಸಂಘಸಂಸ್ಥೆ, ಸಂಘಟನೆಗೆ ಪ್ರವೇಶ ಇಲ್ಲ. ಎರಡು ತಿಂಗಳಲ್ಲಿ ಪರೀಕ್ಷೆಗಳು ಆರಂಭವಾಗಲಿದೆ. ಕಾಲೇಜಿನ ಬೇರೆ ಮಕ್ಕಳು ಮತ್ತು ಪೋಷಕರಿಂದ ದೂರುಗಳು ಬಂದಿವೆ. ಮನವಿ ಕೊಡುವುದಿದ್ದರೆ ಕಾಲೇಜಿಗೆ, ಡಿಸಿಗೆ ಕೊಡಿ. ಹೊರಗಿನಿಂದ ಯಾರೂ ಕಾಲೇಜ್ ಕ್ಯಾಂಪಸ್‍ಗೆ ಬರುವಂತಿಲ್ಲ. ಶಿಸ್ತು ಪಾಲಿಸುವವರು ಕಾಲೇಜಿಗೆ ಬರಬಹುದು. ಇನ್ನು ಮುಂದೆ ಗೊಂದಲಕ್ಕೆ ಅವಕಾಶವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಆದರೆ ಹಿಜಬ್ ವಿಚಾರವಾಗಿ ವಿದ್ಯಾರ್ಥಿನಿಯೊಬ್ಬಳು ಕೋರ್ಟ್ ಮೆಟ್ಟಿಲೆರಿದ್ದಾಳೆ.
ಮುಂಬೈ: ಗದರಿಸಿದ ಮಾತ್ರಕ್ಕೆ ತಂದೆಯನ್ನು ಮಗ ಕೊಲೆ ಮಾಡುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ವಿಚಾರಣೆ ವೇಳೆ ತಿಳಿಸಿದೆ.
ಇತ್ತೀಚೆಗೆ ಔರಂಗಾಬಾದ್‍ನ ಬಾಂಬೆ ಹೈಕೋರ್ಟ್ ಪೀಠವು ಕೊಲ್ಲಾಪುರ ಮತ್ತು ಶಿರಡಿ ದೇವಾಲಯದ ಪೂಜೆ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಶಿಕ್ಷೆ ಬಗ್ಗೆ ವಿಚಾರಣೆ ಮಾಡಿದೆ. ಈ ವೇಳೆ ಅಪ್ಪ ಕೇವಲ ಗದರಿ, ಕೆಟ್ಟ ಮಾತುಗಳನ್ನು ಆಡಿದರೆ, ಮಗ ಅಪ್ಪನನ್ನೇ ಕೊಲ್ಲಲು ಪ್ರಚೋದನೆ ತೆಗೆದುಕೊಳ್ಳುವಂತಿಲ್ಲ ಎಂದು ತಿಳಿಸಿದೆ ಇದನ್ನೂ ಓದಿ: ಯಾರನ್ನೂ ನಂಬಲ್ಲ, ಭದ್ರತಾ ಅಧಿಕಾರಿಯೇ ನನ್ನನ್ನು ಶೂಟ್ ಮಾಡ್ಬೋದು: ಅಬ್ದುಲ್ಲಾ ಆಝಂ ಖಾನ್
ಕ್ಷುಲ್ಲಕ ಕಾರಣಕ್ಕೆ ಅಪ್ಪನನ್ನು ಮಗ ಕೊಂದ ಎಂಬ ಕಾರಣಕ್ಕೆ ಕೆಳ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಕೊಲೆ ಮಾಡಿದ ವ್ಯಕ್ತಿಯ ವಾದವನ್ನು ಆಲಿಸಿದ ಹೈಕೋರ್ಟ್ ಈ ಕುರಿತು ವಿಚಾರಣೆ ನಡೆಸಿದೆ. ನ್ಯಾಯಮೂರ್ತಿಗಳಾದ ವಿಶ್ವಾಸ್ ಜಾಧವ್ ಮತ್ತು ಸಂದೀಪ್ ಕುಮಾರ್ ಮೋರೆ ಅವರ ಪೀಠವು 2014 ರ ಡಿಸೆಂಬರ್‍ನಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟ ಉಸ್ಮಾನಾಬಾದ್‍ನ ನಿವಾಸಿ ನೇತಾಜಿ ಟೆಲಿ(29) ಅವರು ಸಲ್ಲಿಸಿದ ಮನವಿಯನ್ನು ಆಲಿಸಿದ್ದು, ನಂತರ ಹೈಕೋರ್ಟ್ ಈ ರೀತಿಯ ಹೇಳಿಕೆ ನೀಡಿದೆ.
ಏನಿದು ಪ್ರಕರಣ?
ನೇತಾಜಿ ಟೆಲಿ ಕೊಲ್ಲಾಪುರ ಮತ್ತು ಶಿರಡಿ ದೇವಾಲಯಗಳಲ್ಲಿ ಅರ್ಚಕನಾಗಿದ್ದ. ಆದರೆ ಆತನ ತಂದೆಗೆ ಮಗ ಬೇರೆ ಕೆಲಸ ಮಾಡಬೇಕು ಎಂದು ಬಯಸಿದ್ದನು. ಡಿಸೆಂಬರ್ 2013 ರಲ್ಲಿ, ಈ ವಿಚಾರವಾಗಿಯೇ ನೇತಾಜಿ ತಂದೆ ಆತನನ್ನು ಗದರಿಸಿದ್ದು, ಬೇರೆ ಕೆಲಸವನ್ನು ಮಾಡದಿದ್ದರೆ ಮನೆಗೆ ಬರಬೇಡ ಎಂದು ಕೇಳಿದ್ದನು. ಇದರಿಂದ ಕೋಪಗೊಂಡ ನೇತಾಜಿ ತಂದೆಗೆ ಕಪಾಳಮೋಕ್ಷ ಮಾಡಿದ್ದಾನೆ. ಅದನ್ನು ಪ್ರಶ್ನಿಸಿದಾಗ ತಂದೆಯನ್ನು ನೇತಾಜಿ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಆ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆ ನೇತಾಜಿಯನ್ನು ಪೊಲೀಸರು ಅರೆಸ್ಟ್ ಮಾಡಿ ನ್ಯಾಯಾಲಯದ ಮುಂದೆ ನಿಲ್ಲಿಸಿದ್ದರು. ಇದನ್ನೂ ಓದಿ: ಕೈ ನಾಯಕರಿಗೊಂದು ಉದ್ಯೋಗ ಬೇಕಿದೆ, ಅದಕ್ಕೆ ಇಲ್ಲಸಲ್ಲದ ಮಾತುಗಳನ್ನಾಡ್ತಿದ್ದಾರೆ: ಮುನಿರತ್ನ
ನೇತಾಜಿ ವಿಚಾರಣೆಯು ನ್ಯಾಯಮೂರ್ತಿ ಜಾಧವ್ ನೇತೃತ್ವದಲ್ಲಿ ನಡೆದಿದ್ದು, ಈ ವೇಳೆ ನನ್ನ ತಂದೆ ನನ್ನ ಮೇಲೆ ಗದರಿದ್ದರಿಂದ ಇದ್ದಕ್ಕಿದ್ದಂತೆ ಕೋಪ ಬಂದು ಈ ಕೃತ್ಯ ಮಾಡಿದ್ದೇನೆ ಎಂದು ವಿವರಿಸಿದ್ದಾನೆ. ಬೇಕೆಂದು ಕೊಲೆ ಮಾಡಿಲ್ಲ ಎಂದು ತಿಳಿಸಿದ್ದನು.