Tag: high court

  • ಇನ್ನಾದರೂ ಕಾಂಗ್ರೆಸ್‍ಗೆ ಬುದ್ದಿ ಬರಲಿ ಅಂತಾ ದೇವರಲ್ಲಿ ಬೇಡಿಕೊಳ್ಳುತ್ತೇನೆ: ಅಭಯ ಪಾಟೀಲ್

    ಇನ್ನಾದರೂ ಕಾಂಗ್ರೆಸ್‍ಗೆ ಬುದ್ದಿ ಬರಲಿ ಅಂತಾ ದೇವರಲ್ಲಿ ಬೇಡಿಕೊಳ್ಳುತ್ತೇನೆ: ಅಭಯ ಪಾಟೀಲ್

    ಬೆಳಗಾವಿ: ಹಿಜಬ್ ಕುರಿತು ಹೈಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟವಾಗಿದ್ದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ಸ್ವಾಗತಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಗೊತ್ತಿದ್ದರೂ ಹಿಜಬ್ ಪರ ನಿಂತು ಕರ್ನಾಟಕದಲ್ಲಿ ಕಾಂಗ್ರೆಸ್ ಅಶಾಂತಿ ನಿರ್ಮಾಣ ಮಾಡುವ ಪಯತ್ನ ಮಾಡುತ್ತಿದ್ದಾರೆ. ಅಶಾಂತಿ ನಿರ್ಮಾಣ ಮಾಡುವ ಪ್ರಯತ್ನ ಮಾಡಿದ ಸಿಎಫ್‍ಐ ಕೆಲ ವಿದ್ಯಾರ್ಥಿ ಸಂಘಟನೆಗಳ ಜೊತೆ ಕಾಂಗ್ರೆಸ್ ಸಹ ಒಂದು. ಹೀಗಾಗಿ ಇನ್ನಾದರೂ ಕಾಂಗ್ರೆಸ್‍ಗೆ ಬುದ್ದಿ ಬರಲಿ ಅಂತ ದೇವರಲ್ಲಿ ಬೇಡಿಕೊಳ್ಳತ್ತೇನೆ ಎಂದರು. ಇದನ್ನೂ ಓದಿ: ಮಹಿಳೆಯರು ಎಲ್ಲಿ, ಏನು ಬೇಕಾದರೂ ಧರಿಸಬಹುದು, ಆದರೆ…: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ

    ಇವತ್ತು ಹೈಕೋರ್ಟ್ ತನ್ನ ನಿರ್ಣಯ ಹೇಳಿದೆ. ಹಿಜಬ್ ಪ್ರಕರಣ ಮಾಡೋರಿಗೆ ನೇರ ಸಂದೇಶ ಹೋಗಿದೆ. ಅದಕ್ಕಿಂತ ಹೆಚ್ಚು ಕಾಂಗ್ರೆಸ್ ನವರಿಗೆ ಸಂದೇಶ ಹೋಗಿದೆ. ಒಂದು ಸಮಾಜವನ್ನು ಎತ್ತಿ ಕಾನೂನು ವಿರುದ್ಧವಾಗಿ ತಲೆಯಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದರು. ಇದ್ದಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ ಎಂದು ಹೇಳಿದರು. ಇದನ್ನೂ ಓದಿ: ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ಹಿಜಬ್ ಪ್ರಕರಣ ಪ್ರಾರಂಭವಾದಾಗಿನಿಂದ ಹಿಂದೂತ್ವ ಸಂಘಟನೆ, ಹಿಂದೂಗಳ ಬಗ್ಗೆ ಅನಾಚಾರ ಮಾಡುವ ಕೆಲಸ ಕಾಂಗ್ರೆಸ್ ಪ್ರಾರಂಭ ಮಾಡಿತ್ತು. ಅದಕ್ಕೆ ಇವತ್ತು ಹೈಕೋರ್ಟ್ ಉತ್ತರ ಕೊಟ್ಟಿದೆ. ಇನ್ನಾದರೂ ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು. ಹಿಜಾಬ್ ಅಂತ ಘೋಷನೆ ಕೂಗುವವರ ಜೊತೆ ಕಾಂಗ್ರೆಸ್ ಸಹ ಆದೇಶ ಪಾಲನೆ ಮಾಡಬೇಕು ಎಂದರು.

  • ಮಕ್ಕಳು ಓದಿನ ಬಗ್ಗೆ ಗಮನ ನೀಡಿ, ಭವಿಷ್ಯ ರೂಪಿಸಿಕೊಳ್ಳಿ: ಆರ್. ಅಶೋಕ್

    ಮಕ್ಕಳು ಓದಿನ ಬಗ್ಗೆ ಗಮನ ನೀಡಿ, ಭವಿಷ್ಯ ರೂಪಿಸಿಕೊಳ್ಳಿ: ಆರ್. ಅಶೋಕ್

    ಬೆಂಗಳೂರು: ಕರ್ನಾಟಕದ ಉಚ್ಛ ನ್ಯಾಯಾಲಯವು ವಸ್ತ್ರಸಂಹಿತೆಯ ಕುರಿತ ಪ್ರಕರಣದಲ್ಲಿ ತನ್ನ ತೀರ್ಪು ನೀಡಿದೆ. ಸಮವಸ್ತ್ರದ ಮಹತ್ವವನ್ನು ಎತ್ತಿ ಹಿಡಿದಿದೆ. ಹಿಜಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎನ್ನುವುದನ್ನು ಹೇಳಿದೆ. ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ನ್ಯಾಯಾಲಯದ ಆದೇಶ ಪಾಲಿಸಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

    ನಮ್ಮ ಮಕ್ಕಳ ಭವಿಷ್ಯ ಮುಖ್ಯ. ವಿದ್ಯೆಗಿಂತ ಮುಖ್ಯವಾದದ್ದು ಯಾವುದೂ ಇಲ್ಲ. ಹೀಗಾಗಿ ಉಚ್ಚ ನ್ಯಾಯಾಲಯದ ಮೂವರು ನ್ಯಾಯಮೂರ್ತಿಗಳ ಪೀಠ ನೀಡಿರುವ ತೀರ್ಪನ್ನು ನಾವೆಲ್ಲರೂ ಪಾಲಿಸಬೇಕು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಬಹಳ ಮುಖ್ಯ. ಜೊತೆಗೆ ಎಲ್ಲ ಸಮುದಾಯದ ನಾಯಕರು ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೀರ್ಪನ್ನು ಒಪ್ಪಿಕೊಂಡು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದರು. ಇದನ್ನೂ ಓದಿ: ವಿಧಾನಸಭೆಯಿಂದ ಟಿಡಿಪಿ ಪಕ್ಷದ 11 ಶಾಸಕರು ಅಮಾನತು

    ಪರೀಕ್ಷೆಗಳಿಂದ ಹೊರಗುಳಿಯದೆ, ಎಲ್ಲರೂ ತರಗತಿಗಳಿಗೆ ಹಾಜರಾಗಬೇಕು, ನಿಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ತಿಳಿದರು. ಇದನ್ನೂ ಓದಿ: ರಾಜ್ಯ ಸರ್ಕಾರದ ಒತ್ತಡದಿಂದ ಬಂದಿರುವ ತೀರ್ಪು: ಉಡುಪಿ ವಿದ್ಯಾರ್ಥಿನಿಯರು

     

  • ಹೈಕೋರ್ಟ್ ತೀರ್ಪನ್ನು ಪ್ರಶ್ನಿಸದಿದ್ದರೆ ಎಲ್ಲಾ ಧರ್ಮಗಳ ಆಚರಣೆಗೂ ಕುತ್ತು: ಅಮಿನ್ ಮೊಹಿನ್ಸಿನ್

    ಹೈಕೋರ್ಟ್ ತೀರ್ಪನ್ನು ಪ್ರಶ್ನಿಸದಿದ್ದರೆ ಎಲ್ಲಾ ಧರ್ಮಗಳ ಆಚರಣೆಗೂ ಕುತ್ತು: ಅಮಿನ್ ಮೊಹಿನ್ಸಿನ್

    ಮಡಿಕೇರಿ: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಬೇಕು, ಇಲ್ಲದಿದ್ದರೆ ಮುಂದೆ ಎಲ್ಲಾ ಧರ್ಮಗಳ ಆಚರಣೆಗಳಿಗೆ ಕುತ್ತು ಬರಲಿದೆ ಎಂದು ಬದ್ರಿಯಾ ಜಮಾಅತ್‍ನ ಅಧ್ಯಕ್ಷರಾದ ಮಡಿಕೇರಿ ನಗರಸಭೆಯ ಎಸ್‍ಡಿಪಿಐ ಸದಸ್ಯರು ಅಮಿನ್ ಮೊಹಿನ್ಸಿನ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಇದರಿಂದಾಗಿ ಜನರ ಜನರ ನಂಬಿಕೆಯನ್ನು ಹುಸಿಗೊಳಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಇದು ಮುಸ್ಲಿಂ ಧರ್ಮದ ಆಚರಣೆಯ ವಿರುದ್ಧದ ತೀಪೆರ್ಂದು ಜನರು ಭಾವಿಸಬಾರದು ಬದಲಾಗಿ ಇದು ಎಲ್ಲಾ ಧರ್ಮಗಳ ಆಚರಣೆ ವಿರುದ್ಧ ತೀಪೆರ್ಂದು ಭಾವಿಸಬೇಕು. ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಬೇಕು ಇಲ್ಲದಿದ್ದರೆ ಮುಂದೆ ಎಲ್ಲಾ ಧರ್ಮಗಳ ಆಚರಣೆಗಳಿಗೆ ಕುತ್ತು ಬರಲಿದೆ. ಹೀಗಾಗಿ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿ ನ್ಯಾಯ ಪಡಿಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಹೈಕೋರ್ಟ್ ತೀರ್ಪಿನಿಂದ ನಿರಾಸೆ: ಒಮರ್ ಅಬ್ದುಲ್ಲಾ

    ಕೋರ್ಟಿನಲ್ಲಿ ವಿಚಾರಣೆ ವೇಳೆ ಹಿಜಬ್ ಮುಖ್ಯವಾ ಅಥವಾ ಶಿಕ್ಷಣ ಮುಖ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ರೀತಿ ಪ್ರಶ್ನೆ ಮಾಡುವುದು ಸರಿಯಲ್ಲ. ಇದು ತಂದೆ, ತಾಯಿಯರನ್ನು ಮುಂದೆ ಇಟ್ಟು ಯಾರು ಬೇಕು, ಎರಡು ಕಣ್ಣುಗಳಲ್ಲಿ ಯಾವುದು ಮುಖ್ಯ ಎಂದು ಪ್ರಶ್ನಿಸಿದರೇ ಆಯ್ಕೆ ಮಾಡಲು ಹೇಗೆ ಅಸಾಧ್ಯವಾಗುತ್ತದೆಯೋ ಅದೇ ರೀತಿಯಾಗಿದೆ. ಆದರೆ ಮಕ್ಕಳಿಗೆ ಶಿಕ್ಷಣ ಮತ್ತು ಧರ್ಮ ಎರಡು ಮುಖ್ಯವಾಗಿರುತ್ತದೆ. ಹೀಗಾಗಿ ಮತ್ತೆ ಈ ಪ್ರಕರಣ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವ ಚಿಂತನೆ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಉರ್ದು ಶಾಲೆಗಳು ಕಾನೂನು ಪಾಲನೆ ಮಾಡಬೇಕು: ಬಿ.ಸಿ. ನಾಗೇಶ್

  • ಹೈಕೋರ್ಟ್ ತೀರ್ಪಿನಿಂದ ನಿರಾಸೆ: ಒಮರ್ ಅಬ್ದುಲ್ಲಾ

    ಹೈಕೋರ್ಟ್ ತೀರ್ಪಿನಿಂದ ನಿರಾಸೆ: ಒಮರ್ ಅಬ್ದುಲ್ಲಾ

    ಶ್ರೀನಗರ: ಹಿಜಬ್ ಇಸ್ಲಾಂನ ಅಗತ್ಯವಾದ ಆಚರಣೆ ಅಲ್ಲ ಎಂಬ ಹೈಕೋರ್ಟ್ ತೀರ್ಪಿನಿಂದಾಗಿ ತೀವ್ರ ನಿರಾಸೆಯಾಗಿದೆ ಎಂದು ಜಮ್ಮು ಮತ್ತು ಕಾಶ್ಮಿರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ.

    ಇಂದು ಹೈಕೋರ್ಟ್‍ನ ತ್ರಿಸದಸ್ಯ ಪೀಠವು ಹಿಜಬ್ ಕುರಿತಾಗಿ ತೀರ್ಪು ಪ್ರಕಟಿಸಿದ್ದು, ಹಿಜಬ್ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆಯ ಭಾಗವಾಗಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?:
    ಕರ್ನಾಟಕದ ಉಚ್ಚ ನ್ಯಾಯಾಲಯದ ತೀರ್ಪಿನಿಂದ ಬಹಳ ನಿರಾಸೆಯಾಗಿದೆ. ಹಿಜಬ್ ಬಟ್ಟೆಯು ವಸ್ತುವಾಗಿಲ್ಲ, ಇದು ಮಹಿಳೆಯ ಆಯ್ಕೆಯಾಗಿದೆ. ಇದನ್ನು ಧರಿಸಲು ಮಹಿಳೆ ಇಷ್ಟಪಡುತ್ತಾಳೆ. ಇದರಿಂದಾಗಿ ಮಹಿಳೆಯ ಹಕ್ಕಿನ ಬಗ್ಗೆ ನೀಡಿದ ತೀರ್ಪು ಇದಾಗಿದೆ. ನ್ಯಾಯಾಲಯವು ಈ ಮೂಲಭೂತ ಹಕ್ಕನ್ನು ಎತ್ತಿಹಿಡಿಯದಿರುವುದು ಬೇಸರ ತಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉರ್ದು ಶಾಲೆಗಳು ಕಾನೂನು ಪಾಲನೆ ಮಾಡಬೇಕು: ಬಿ.ಸಿ. ನಾಗೇಶ್

    ಐತಿಹಾಸಿಕ ತೀರ್ಪು?: ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಎಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತರಗತಿಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಪೀಠ ವಜಾ ಮಾಡಿದೆ. ಇದನ್ನೂ ಓದಿ: ಹಿಜಬ್ ವಿಚಾರವನ್ನ ಅನಗತ್ಯವಾಗಿ ವಿವಾದ ಮಾಡದೆ ಸ್ವಾಗತಿಸಬೇಕು: ಬಿಎಸ್‍ವೈ

  • ಉರ್ದು ಶಾಲೆಗಳು ಕಾನೂನು ಪಾಲನೆ ಮಾಡಬೇಕು: ಬಿ.ಸಿ. ನಾಗೇಶ್

    ಉರ್ದು ಶಾಲೆಗಳು ಕಾನೂನು ಪಾಲನೆ ಮಾಡಬೇಕು: ಬಿ.ಸಿ. ನಾಗೇಶ್

    ನವದೆಹಲಿ: ಉರ್ದು ಶಾಲೆಗಳು ಕಾನೂನು ಪಾಲನೆ ಮಾಡಬೇಕು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಹೇಳಿದ್ದಾರೆ.

    ದೆಹಲಿಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಾಳೆಯಿಂದ ಶಾಲೆಗಳಿಗೆ ಸಮವಸ್ತ್ರ ಧರಿಸಿ ಬನ್ನಿ, ಅವರಿವರ ಮಾತನ್ನು ಕೇಳಿ ಒತ್ತಡಕ್ಕೊಳಗಾಗಬೇಡಿ, ನಿಮ್ಮ ಶಿಕ್ಷಣವನ್ನು ಕಳೆದುಕೊಳ್ಳಬೇಡಿ. ಇಂದು ಹೈಕೋರ್ಟ್ ನೀಡಿದ ತೀರ್ಪನ್ನು ಈ ದೇಶದ ಪ್ರಜೆಯಾಗಿರುವ ನಾವು ಪಾಲಿಸಬೇಕು. ಒಂದೆರಡು ದಿನ ನಿಮಗೆ ಮುಜುರ ಆಗಬಹುದು ಆದರೆ ನಂತರ ನಿಮ್ಮ ಸ್ನೇಹಿತರೊಂದಿಗೆ ನೀವು ಬೆರೆಯಲು ಆರಂಭಿಸುತ್ತೀರಾ. ನಮ್ಮಲ್ಲಿ ಯಾವುದೇ ಭೇದ-ಭಾವವಿಲ್ಲ. ಹಿಂದಿನಂತೆಯೇ ನಿಮ್ಮನ್ನು ಶಾಲೆಗೆ ಆಹ್ವಾನಿಸುತ್ತೇವೆ. ನಾಳೆಯಿಂದ ಶಾಲೆಗಳಿಗೆ ಬನ್ನಿ ಎಂದಿದ್ದಾರೆ.

    ಸುಪ್ರೀಂ ಕೋರ್ಟ್‍ಗೆ ಹೋಗುವಂತಹ ಹಕ್ಕನ್ನು ಈ ದೇಶ ಎಲ್ಲರಿಗೂ ಕೊಟ್ಟಿದೆ. ಅದನ್ನು ನಾನು ತಪ್ಪು ಎಂದು ಹೇಳಲ್ಲ. ಆದರೆ ಸುಪ್ರೀಂ ಕೋರ್ಟ್‍ಗೆ ಹೋಗಿ ಮಕ್ಕಳು ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಸದ್ಯಕ್ಕೆ ಹೈಕೋರ್ಟ್ ನೀಡಿರುವ ಆದೇಶವನ್ನು ಪಾಲನೆ ಮಾಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಳೆದು ಹೋಗಿದ್ದ ಬೆಕ್ಕು 17 ವರ್ಷಗಳ ಬಳಿಕ ಪತ್ತೆ- ಈ ರೋಚಕ ಕಥೆ ಸಖತ್ ಥ್ರಿಲ್ಲಿಂಗ್

    ಶಿಕ್ಷಣ ಎಂಬುವುದು ವೈಯಕ್ತಿಕ ವಿಚಾರವಲ್ಲ. ಒಂದೇ ದೇಶ, ಒಂದೇ ರಾಷ್ಟ್ರ ಎಂಬ ಮಾನಸಿಕತೆಯನ್ನು ಕೊಡುವುದು ಸಮವಸ್ತ್ರವಾಗಿದೆ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಹಾಗೆಯೇ ಉರ್ದು ಶಾಲೆಗಳು ಕಾನೂನು ಪಾಲನೆ ಮಾಡಬೇಕು. ಅಲ್ಲೂ ತರಗತಿಗಳಲ್ಲಿ ಹಿಜಬ್‍ಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.

    ಹೈಕೋರ್ಟ್ ತೀರ್ಪುನ ಪ್ರಕಾರ ಶಿಕ್ಷಕರು ಹಿಜಬ್ ಧರಿಸಬೇಕಾ ಬೇಡವೋ ಎನ್ನುವುದನ್ನು ಮುಂದೆ ನಿರ್ಧರಿಸಲಿದ್ದೇವೆ. ಶಿಕ್ಷಕರಿಗೆ ಅಥವಾ ಸರ್ಕಾರಿ ನೌಕರರಿಗೆ ಸಮವಸ್ತ್ರ ಇಲ್ಲ. ಮಕ್ಕಳಿಗೆ ಹಿಜಬ್ ಬೇಡ ಎನ್ನುವಾಗ ಶಿಕ್ಷಕರು ಅದನ್ನು ತರಗತಿಯಲ್ಲಿ ಧರಿಸಿದರೇ ಅದು ಸೂಕ್ತವಾಗಿರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಿಕ್ಷಣದಲ್ಲಿ ಮತ ರಾಜಕಾರಣ ಬೆರೆಸುವ ಹತಾಶಾ ಪ್ರಯತ್ನ ಇದಾಗಿತ್ತು: ಕೈ ವಿರುದ್ಧ ಬಿಜೆಪಿ ವಾಗ್ದಾಳಿ

  • ಕೆಲವರು ಉದ್ದೇಶಪೂರ್ವಕವಾಗಿ ಮಕ್ಕಳೊಂದಿಗೆ ಪೋಷಕರನ್ನು ಹಾದಿ ತಪ್ಪಿಸಿದ್ದರು: ಸುಧಾಕರ್

    ಕೆಲವರು ಉದ್ದೇಶಪೂರ್ವಕವಾಗಿ ಮಕ್ಕಳೊಂದಿಗೆ ಪೋಷಕರನ್ನು ಹಾದಿ ತಪ್ಪಿಸಿದ್ದರು: ಸುಧಾಕರ್

    -ಮಕ್ಕಳು ಶಿಕ್ಷಣದ ಕಡೆ ಹೆಚ್ಚು ಗಮನ ನೀಡಲಿ

    ಬೆಂಗಳೂರು: ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯದ ಬಗ್ಗೆ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ತೀರ್ಪು ಸ್ವಾಗತಾರ್ಹವಾಗಿದೆ. ಕೆಲವರು ಮಕ್ಕಳೊಂದಿಗೆ ಪೋಷಕರನ್ನು ಉದ್ದೇಶಪೂರ್ವಕವಾಗಿ ಹಾದಿ ತಪ್ಪಿಸಿದ್ದರು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

    ಹಿಜಬ್‌ ಕುರಿತಾಗಿ ಹೈಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮಕ್ಕಳು ಶಾಲೆಗಳಲ್ಲಿ ಶಿಕ್ಷಣದ ಕಡೆ ಗಮನ ನೀಡಬೇಕು. ಶಿಕ್ಷಣದಿಂದ ಆರೋಗ್ಯಯುತ ಸಮಾಜದ ನಿರ್ಮಾಣ ಸಾಧ್ಯ. ದೇಶದ ಅಭಿವೃದ್ಧಿಯಲ್ಲೂ ಶಿಕ್ಷಣದ ಪಾತ್ರ ಬಹಳ ದೊಡ್ಡದಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಹಿಜಬ್‌ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್‌ ಐತಿಹಾಸಿಕ ತೀರ್ಪು

    ಶಾಲೆಗಳು ದೇಗುಲಗಳಿಗೆ ಸಮಾನ. ಇಲ್ಲಿ ಜಾತಿ, ಮತ ಮತ್ತು ಧರ್ಮದ ಭೇದವಿಲ್ಲ. ಸಮವಸ್ತ್ರ ಅನ್ನುವುದು ಏಕತೆ ಮತ್ತು ಸಮಾನತೆಯನ್ನು ಬಿಂಬಿಸಲು ಇರುವ ಸಣ್ಣ ಮಾರ್ಗ. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ ಧರಿಸುವುದರ ಜೊತೆಗೆ ಕಲಿಕೆ ಬಗ್ಗೆ ಗಮನಕೊಡಬೇಕು. ವೈಜ್ಞಾನಿಕ ದೃಷ್ಟಿಕೋನ ಇಟ್ಟುಕೊಂಡು ಮಕ್ಕಳು ಶಾಲೆಯಲ್ಲಿ ಅನ್ಯೋನ್ಯ ಭಾವನೆಯಿಂದ ಶಿಕ್ಷಣ ಪಡೆಯಬೇಕು ಎಂದು ಹೇಳಿದರು. ಇದನ್ನೂ ಓದಿ: ಹಿಜಬ್‌ ಬಗ್ಗೆ ಎದ್ದಿದ್ದ 3 ಪ್ರಶ್ನೆಗಳಿಗೆ ಸಿಕ್ತು ಉತ್ತರ: ಅರ್ಜಿದಾರರು, ಸರ್ಕಾರ, ಹೈಕೋರ್ಟ್‌ ಹೇಳಿದ್ದೇನು?

    ಶಾಲೆಗಳಲ್ಲಿ ಶಿಕ್ಷಣ ಹೊರತುಪಡಿಸಿ ಬೇರೆ ವಿಷಯಗಳಿಗೆ ಆದ್ಯತೆ ನೀಡಬಾರದು. ಧಾರ್ಮಿಕ ವಿಚಾರದಲ್ಲಿ ಯಾರೋ ಕೆಲವರು ಉದ್ದೇಶಪೂರ್ವಕವಾಗಿ ಮಕ್ಕಳು ಹಾಗೂ ಪೋಷಕರ ಹಾದಿ ತಪ್ಪಿಸಿದ್ದರು. ಸಮಾಜದ ಶಾಂತಿ ಕದಡಲು ಇಂತಹ ಕೃತ್ಯಗಳಿಗೆ ಇಳಿಯುವುದು ಸರಿಯಲ್ಲ ಎಂದರು.

    ಉಡುಪಿಯಲ್ಲಿ ಆರಂಭವಾದ ಹಿಜಬ್ ವಿವಾದ ಬೇರೆ ಬೇರೆ ಕಾರಣಗಳಿಂದ ಅಂತರಾಷ್ಟ್ರೀಯ ಸುದ್ದಿಯಾಯಿತು. ಕೆಲ ರಾಜಕೀಯ ಪಕ್ಷಗಳು ಹಿಜಬ್ ಗಲಾಟೆಗೆ ಕುಮ್ಮಕ್ಕು ನೀಡಿದವು. ರಾಜಕೀಯ ಪಕ್ಷಗಳ ಆಟಕ್ಕೆ ವಿದ್ಯಾರ್ಥಿಗಳು ಬಲಿಯಾಗಬಾರದು. ಸಮಾನ ಶಿಕ್ಷಣ ಮತ್ತು ಸಮಾಜದ ಅಭಿವೃದ್ಧಿ ಕಡೆ ಎಲ್ಲರೂ ಗಮನ ಕೊಡಬೇಕು. ಹೈಕೋರ್ಟ್ ತೀರ್ಪನ್ನು ಎಲ್ಲರೂ ಗೌರವಿಸಿ ಅದನ್ನು ಪಾಲಿಸಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಬೇಕು. ಪೋಷಕರು ಕೂಡ ಮಕ್ಕಳ ವಿಚಾರ ಬಂದಾಗ ಯಾವುದೇ ವಿವಾದಕ್ಕೆ ಬೆಲೆ ಕೊಡದೆ ಮಕ್ಕಳ ಭವಿಷ್ಯವನ್ನು ಕಾಪಾಡಲು ಒತ್ತು ನೀಡಬೇಕು ಎಂದು ಸಚಿವರು ಮನವಿ ಮಾಡಿದರು.

  • ಕಾಂಗ್ರೆಸ್‍ನವರ ಪ್ರಚೋದನೆ ಮಾತುಗಳನ್ನು ಕೇಳ್ಬೇಡಿ, ನಿಮಗೆ ನಿಮ್ಮ ಭವಿಷ್ಯ ಮುಖ್ಯ: ರೇಣುಕಾಚಾರ್ಯ

    ಕಾಂಗ್ರೆಸ್‍ನವರ ಪ್ರಚೋದನೆ ಮಾತುಗಳನ್ನು ಕೇಳ್ಬೇಡಿ, ನಿಮಗೆ ನಿಮ್ಮ ಭವಿಷ್ಯ ಮುಖ್ಯ: ರೇಣುಕಾಚಾರ್ಯ

    ಬೆಂಗಳೂರು: ವಿದ್ಯಾರ್ಥಿಗಳು ಕಾಂಗ್ರೆಸ್ ಮುಖಂಡರ ಪ್ರಚೋದನೆ ಮಾತುಗಳನ್ನು ಕೇಳಬೇಡಿ. ನಿಮಗೆ ನಿಮ್ಮ ಭವಿಷ್ಯ ಮುಖ್ಯ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದರು.

    ಹಿಜಬ್ ವಿಚಾರವಾಗಿ ಹೈಕೋರ್ಟ್ ತೀರ್ಪು ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ಒಂದು ಕುಂಟುಂಬ ಸದಸ್ಯರಂತೆ ಈ ದೇಶದಲ್ಲಿ ವಾಸ ಮಾಡಬೇಕಾಗುತ್ತದೆ. ಕೆಲವೊಂದು ಕಡೆಗೆ ವಿದ್ಯಾರ್ಥಿಗಳು ನಮಗೆ ಹಿಜಬ್ ಮುಖ್ಯ ಶಿಕ್ಷಣ ಬೇಡ ಅಂತ ಪಟ್ಟು ಹಿಡಿದು ಕುಳಿತಿರುವ ವಿಚಾರವಾಗಿ ಅವರು ಮಾತನಾಡಿ, ಅವರಿಗೆ ನಾನು ವಿನಂತಿ ಮಾಡುತ್ತೇನೆ. ಅವರು ಕೂಡಾ ನಮ್ಮ ಮಕ್ಕಳು ಇದ್ದಹಾಗೆ. ಆ ಮುಗ್ಧ ಮನಸ್ಸಿನ ವಿದ್ಯಾರ್ಥಿನಿಯರ ಮೇಲೆ ಈ ಕೆಲ ಸಂಘಟನೆಗಳು ಕಾಂಗ್ರೆಸಿನ ಮುಖಂಡರು ಪ್ರಚೋದನೆ ಮಾಡುತ್ತಿದ್ದಾರೆ. ಅವರು ಎಲ್ಲಿ ಓದಿ ವಿದ್ಯಾವಂತರಾದರೆ ಅವರು ಎಲ್ಲಿ ಶಿಕ್ಷಣ ಪಡೆದು ಈ ದೇಶದ ಸತ್ತಪ್ರಜೆಗಳಾಗುತ್ತಾರೆ. ಶಿಕ್ಷಣದಿಂದ ವಂಚಿತರಾದರೆ ಅವರ ಮನಸ್ಸು ವಿಕೃತವಾಗುತ್ತೆ. ಎಲ್ಲಿಯೋ ಒಂದು ಕಡೆ ಇದು ಭಯೋತ್ಪಾದನೆಗೆ ಕುಮ್ಮಕ್ಕು ಆಗುತ್ತೆ ಎಂದರು. ಇದನ್ನೂ ಓದಿ: ಮಂಗಳವಾರ ಬೆಳಗ್ಗೆ 10:30ಕ್ಕೆ ಹಿಜಬ್‌ ಹೈಕೋರ್ಟ್‌ ತೀರ್ಪು

    ನಾನು ಒಂದು ವಿನಂತಿ ಮಾಡುತ್ತೇನೆ ಯಾವುದೇ ಸಂಘಟನೆ ಅಥವಾ ಕಾಂಗ್ರೆಸ್ ಮುಖಂಡರ ಪ್ರಚೋದನೆಯ ಮಾತುಗಳನ್ನು ಕೇಳಬೇಡಿರಿ. ನಿಮಗೆ ನಿಮ್ಮ ಭವಿಷ್ಯ ಮುಖ್ಯ. ಈ ದೇಶದ ಕಾನೂನನ್ನು ನಾವು ಗೌರವಿಸಬೇಕು. ಈ ನೆಲದ ಕಾನೂನ ಅನ್ನು ಗೌರವಿಸಬೇಕು. ತಾವು ಕೂಡಾ ಗೌರವಿಸುವಂತೆ ಶಾಸಕರು ವಿನಂತಿಸಿಕೊಂಡರು. ಇದನ್ನೂ ಓದಿ: ಹೈಕೋರ್ಟ್ ತೀರ್ಪು ಸ್ವಾಗತಾರ್ಹ: ಅಶ್ವತ್ಥನಾರಾಯಣ

  • ಹಿಜಬ್‌ ಬಗ್ಗೆ ಎದ್ದಿದ್ದ 3 ಪ್ರಶ್ನೆಗಳಿಗೆ ಸಿಕ್ತು ಉತ್ತರ: ಅರ್ಜಿದಾರರು, ಸರ್ಕಾರ, ಹೈಕೋರ್ಟ್‌ ಹೇಳಿದ್ದೇನು?

    ಹಿಜಬ್‌ ಬಗ್ಗೆ ಎದ್ದಿದ್ದ 3 ಪ್ರಶ್ನೆಗಳಿಗೆ ಸಿಕ್ತು ಉತ್ತರ: ಅರ್ಜಿದಾರರು, ಸರ್ಕಾರ, ಹೈಕೋರ್ಟ್‌ ಹೇಳಿದ್ದೇನು?

    ಬೆಂಗಳೂರು: ಹಿಜಬ್‌ ಮುಸ್ಲಿಂ ಧರ್ಮದ ಅಗತ್ಯ ಆಚರಣೆ ಅಲ್ಲ ಎಂದು ಐತಿಹಾಸಿಕ ತೀರ್ಪು ಪ್ರಕಟಿಸುವ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಎದ್ದಿದ್ದ ಧರ್ಮ ಸಂಘರ್ಷಕ್ಕೆ ಹೈಕೋರ್ಟ್‌ ಪೂರ್ಣ ವಿರಾಮ ಹಾಕಿದೆ.

    ವಿಶ್ವ ಮಟ್ಟದಲ್ಲಿ ಸುದ್ದಿಯಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದ ಹಿಜಬ್‌ ವಿವಾದ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮಂಗಳವಾರ ಬೆಳಗ್ಗೆ 10:35ಕ್ಕೆ ಮಹತ್ವದ ತೀರ್ಪು ಪ್ರಕಟಿಸಿತು.

    ತರಗತಿಗಳಲ್ಲಿ ಹಿಜಬ್‌ ನಿಷೇಧಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಕೋರ್ಟ್‌ ವಜಾ ಮಾಡಿದೆ.

    ಹಿಜಬ್‌ ನಿಷೇಧಕ್ಕೆ ಸಂಬಂಧಿಸಿದಂತೆ 11 ದಿನಗಳ ಕಾಲ ಎರಡು ಕಡೆಯ ವಾದ ಪ್ರತಿವಾದ ಆಲಿಸಿದ್ದ ಹೈಕೋರ್ಟ್ ಫೆ.25 ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಮೂರು ಮಹತ್ವದ ಪ್ರಶ್ನೆಗಳಿಗೆ ಉತ್ತರ ನೀಡಿದೆ. ಈ ಪ್ರಶ್ನೆಗಳಿಗೆ ಅರ್ಜಿದಾರರ ಪರ ವಾದ ಏನಿತ್ತು? ಸರ್ಕಾರದ ಪರ ವಾದ ಏನಿತ್ತು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಹಿಜಬ್‌ ನಿಷೇಧದ ಹೈಕೋರ್ಟ್‌ ತೀರ್ಪು ತೀವ್ರ ನಿರಾಶಾದಾಯಕ: ಕಾಶ್ಮೀರ ಮಾಜಿ ಸಿಎಂ

    ಪ್ರಶ್ನೆ 1. ಇಸ್ಲಾಂ ಧರ್ಮದ ಅಡಿಯಲ್ಲಿ ಹಿಜಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯೇ?
    ಅರ್ಜಿದಾರರ ವಾದ: ಇಸ್ಲಾಂ ಧರ್ಮಕ್ಕೂ ಮುನ್ನವೇ ಹಿಜಬ್‌ ಧರಿಸುವ ಪದ್ಧತಿ ಚಾಲ್ತಿಯಲ್ಲಿತ್ತು ಮತ್ತು ಕುರಾನ್‌ ಪ್ರಕಾರ ಮುಸ್ಲಿಂ ಮಹಿಳೆಯರು ತಲೆ, ಮುಖ, ಎದೆ ಭಾಗವನ್ನು ಮುಚ್ಚಲು ಹಿಜಬ್‌ ಧರಿಸುವುದು ಕಡ್ಡಾಯ. ಅದು ಅಲ್ಲಾನ ಕೊನೆಯ ಆಜ್ಞೆ. ಕೇಂದ್ರಿಯ ವಿದ್ಯಾಲಯಗಳಲ್ಲಿ ಈಗಲೂ ಹಿಜಬ್‌ ಧರಿಸಲು ಅವಕಾಶವಿದೆ.

    ಸರ್ಕಾರದ ವಾದ: ಹಿಜಬ್‌ ಕಡ್ಡಾಯ ಆಚರಣೆ ಎಂದು ಅರ್ಜಿದಾರರು ಸಾಬೀತು ಪಡಿಸಬೇಕು. ಆದರೆ ಅರ್ಜಿದಾರರು ಕಡ್ಡಾಯ ಎಂಬುದಕ್ಕೆ ಯಾವುದೇ ದಾಖಲೆ ಸಲ್ಲಿಸಿಲ್ಲ. ಹಿಜಬ್‌ ಹಾಕದೇ ಇರುವುದು ಕೂಡ ಮುಸ್ಲಿಂ ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯ. ಈ ವಾದದ ಪ್ರಕಾರ ಹಿಜಬ್‌ ಕಡ್ಡಾಯವಲ್ಲ ಎನ್ನುವುದು ಸಾಬೀತಾಗುತ್ತದೆ.

    ಹೈಕೋರ್ಟ್‌: ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಇಸ್ಲಾಂ ಅಡಿಯಲ್ಲಿ ಅಗತ್ಯವಾದ ಧಾರ್ಮಿಕ ಆಚರಣೆಯ ಭಾಗವಲ್ಲ. ಹಿಜಬ್‌ ಅವಶ್ಯಕ ಆಚರಣೆ ಎಂಬ ಉಲ್ಲೇಖಕ್ಕೆ ಕುರಾನ್‌ನಲ್ಲಿ ಯಾವುದೇ ಆಧಾರವಿಲ್ಲ.


    ಪ್ರಶ್ನೆ 2: ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಖಾಸಗಿತನದ ಹಕ್ಕಿನ ಅಡಿ ಹಿಜಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯೇ?
    ಅರ್ಜಿದಾರರ ವಾದ: ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಇತ್ಯಾದಿ ವಿಚಾರ ಬಂದಾಗ ಸರ್ಕಾರ ಸಂವಿಧಾನ ನೀಡಿದ ಸ್ವಾತಂತ್ರ್ಯದ ಹಕ್ಕನ್ನು ನಿರ್ಬಂಧಿಸಬಹುದು. ಸರ್ಕಾರ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕು. ಆದರೆ ಸಾರ್ವಜನಿಕ ಸುವ್ಯವಸ್ಥೆ ನೆಪದಲ್ಲಿ ಹಕ್ಕುಗಳನ್ನು ಧಮನಿಸಬಾರದು. ಸತಿ ಪದ್ದತಿ, ದೇವದಾಸಿ ಪದ್ದತಿ, ನರಬಲಿಯನ್ನು ನಿರ್ಬಂಧಿಸಬಹುದು. ಆದರೆ ಕಡ್ಡಾಯ ಆಚರಣೆಯನ್ನು ಶಾಲಾ ಸಮವಸ್ತ್ರದ ಹೆಸರಿನಲ್ಲಿ ನಿರ್ಬಂಧಿಸುವುದು ಸರಿಯಲ್ಲ. ದಕ್ಷಿಣ ಆಫ್ರಿಕಾ ಕೋರ್ಟ್‌ ಮೂಗುತಿ ಹಿಂದೂ ಸಂಪ್ರದಾಯದ ಭಾಗ ಎಂದು ಹೇಳಿ ಭಾರತ ಮೂಲದ ವಿದ್ಯಾರ್ಥಿನಿ ವಾದವನ್ನು ಎತ್ತಿ ಹಿಡಿದು ಶಾಲಾ ಆಡಳಿತ ಮಂಡಳಿಯ ವಾದವನ್ನು ತಿರಸ್ಕರಿಸಿತ್ತು. ಈ ಮೂಲಕ ಆಕೆಯ ಹಕ್ಕನ್ನು ರಕ್ಷಿಸಿತ್ತು. ಸಂವಿಧಾನದ 25(1)ನೇ ವಿಧಿಯ ಅಡಿ ನೀಡಲಾಗಿರುವಾಗ ಧಾರ್ಮಿಕ ಸ್ವಾತಂತ್ರ್ಯರಕ್ಷಣೆಯ ಹೊಣೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಗೆ(ಸಿಡಿಸಿ) ನೀಡಿರುವುದು ಸಂವಿಧಾನ ವಿರೋಧಿ. ದನ್ನೂ ಓದಿ: ಹಿಜಬ್‌ ಕುರಿತ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ವಕ್ಫ್‌ ಬೋರ್ಡ್‌ ಅಧ್ಯಕ್ಷ

    ಸರ್ಕಾರದ ವಾದ: ಹಿಜಬ್‌ ಇಸ್ಲಾಂ ಧರ್ಮದ ಆಚರಣೆಯ ಭಾಗವಲ್ಲ. ಶಬರಿಮಲೆ ಮತ್ತು ತ್ರಿವಳಿ ತಲಾಖ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸಂವಿಧಾನದ ನೈತಿಕತೆ ಹಾಗೂ ವೈಯಕ್ತಿಕ ಘನತೆ ಪರೀಕ್ಷೆಯಲ್ಲಿ ಪಾಸಾಗಬೇಕು ಎಂದು ಹೇಳಿದೆ. ಹಿಜಬ್‌ ಮೇಲೆ ನಿರ್ಬಂಧ ಹೇರಿದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. ಹಿಜಬ್‌ ಇಸ್ಲಾಂನ ಭಾಗವಾಗಿರದ ಕಾರಣ ಸರ್ಕಾರ ಅದನ್ನು ಕಾನೂನಿನ ಮೂಲಕ ನಿರ್ಬಂಧಿಸಬಹುದು. ಶಾಲೆಯಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳು ಸಮಾನರಾಗಿರಬೇಕು ಎಂಬ ಕಾರಣಕ್ಕೆ ಸಮವಸ್ತ್ರವನ್ನು ತರಲಾಗಿದೆ. ಇದರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಖಾಸಗಿತನದ ಹಕ್ಕುಗಳ ನಿರ್ಬಂಧ ಬರುವುದಿಲ್ಲ.

    ಹೈಕೋರ್ಟ್‌: ಶಾಲಾ ಸಮವಸ್ತ್ರದ ನಿಯಮ ಸರಿಯಾಗಿದ್ದು ವಿದ್ಯಾರ್ಥಿಗಳು ಇದನ್ನು ಆಕ್ಷೇಪಿಸುವಂತಿಲ್ಲ.

    ಪ್ರಶ್ನೆ 3: ಫೆಬ್ರವರಿ 5ರ ಸರ್ಕಾರಿ ಆದೇಶ ಸರಿಯಿದೆಯೇ?
    ಅರ್ಜಿದಾರರ ವಾದ: ಶಾಲೆ, ಕಾಲೇಜುಗಳಲ್ಲಿ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ಇಲ್ಲಿಯವರೆಗೆ ಯಾವುದೇ ರೀತಿಯ ಸೂಚನೆಯೇ ನೀಡಿಲ್ಲ. ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ಸಿಡಿಸಿಗೆ ಯಾವುದೇ ಅಧಿಕಾರ ನೀಡಿಲ್ಲ. ಹೀಗಾಗಿ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಪ್ರಕಾರ ಸಿಡಿಸಿಯೇ ಕಾನೂನು ಬಾಹಿರ. ಶಿಕ್ಷಣ ಕಾಯ್ದೆಯ ಅಡಿ ಪೋಷಕರು, ಶಿಕ್ಷಕರ ಸಮಿತಿ ರಚಿಸಲು ಅವಕಾಶವಿದೆ. ಆದರೆ ಕಾಲೇಜು ಅಭಿವೃದ್ಧಿ ಸಮಿತಿಗಲ್ಲ. ಶಾಸಕರ ನೇತೃತ್ವದಲ್ಲಿ ಸಿಡಿಸಿ ಕೆಲಸ ಮಾಡುತ್ತಿದೆ. ಈ ಸಮಿತಿ ಯಾರಿಗೂ ಉತ್ತರದಾಯಿಯಲ್ಲ. ಒಮ್ಮೆ ನಿಗದಿ ಪಡಿಸಿದ ಸಮವಸ್ತ್ರವನ್ನು 5 ವರ್ಷ ಬದಲಿಸಬಾರದು. ಬದಲಿಸುವ 1 ವರ್ಷಕ್ಕೆ ಮುನ್ನ ಪೋಷಕರಿಗೆ ನೋಟಿಸ್‌ ನೀಡಬೇಕೆಂಬ ನಿಯಮವಿದೆ. ಹಿಜಬ್‌ ವಿಚಾರದಲ್ಲಿ ನೋಟಿಸ್‌ ನೀಡಬೇಕಿತ್ತು. ಹಿಜಬ್‌ ಧಾರ್ಮಿಕ ಸಂಕೇತವಾದರೆ ಬಿಂದಿ, ಬಳೆ, ನಾಮ ಧಾರ್ಮಿಕ ಚಿಹ್ನಗಳೇ. ಸರ್ಕಾರ ಇವುಗಳಿಗೆ ನಿರ್ಬಂಧ ಹೇರದೇ ಮುಸ್ಲಿಂ ಹೆಣ್ಣು ಮಕ್ಕಳ ಹಿಜಬ್‌ ಅನ್ನೇ ಆಯ್ಕೆ ಮಾಡಿದ್ದು ಯಾಕೆ? ಸರ್ಕಾರ ಪೂರ್ವಗ್ರಹ ಪೀಡಿತವಾಗಿ ಈ ಆದೇಶ ಪ್ರಕಟಿಸಿದೆ.

    ಸರ್ಕಾರದ ವಾದ: ಶಿಕ್ಷಣ ಕಾಯ್ದೆಯ ಸೆಕ್ಷನ್‌ 133ರ ಅಡಿ ಲಭ್ಯ ಇರುವ ಅಧಿಕಾರವನ್ನು ಬಳಸಿ ಫೆ.5 ರಂದು ಆದೇಶ ಹೊರಡಿಸಿದೆ. ಸಮವಸ್ತ್ರ ನಿಗದಿಪಡಿಸುವಂತೆ ಸಿಡಿಸಿಗಳಿಗೆ ನಿರ್ದೇಶಿಸಿದೆ. ಅದರಂತೆ ಸಿಡಿಸಿ ಸಮವಸ್ತ್ರವನ್ನು ನಿಗದಿ ಮಾಡಿದೆ. ವಿದ್ಯಾರ್ಥಿಗಳಲ್ಲಿ ಏಕತೆ, ಸಮಾನತೆ, ಶಿಸ್ತು ಮೂಡಿಸಲು ಸಮವಸ್ತ್ರವನ್ನು ನಿಗದಿ ಮಾಡಲಾಗಿದೆಯೇ ಹೊರತು ಬೇರೆ ಉದ್ದೇಶಕ್ಕಲ್ಲ. ಅರ್ಜಿದಾರರು ಈ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. 2013ರಲ್ಲೇ ಸಮವಸ್ತ್ರ ಕುರಿತು ನಿರ್ಣಯ ಅಂಗೀಕರಿಸಲಾಗಿದ್ದು 2014ರಿಂದಲೂ ಸಿಡಿಸಿ ರಚನೆಯಾಗಿದೆ. ಇಲ್ಲಿಯವರೆಗೆ ಈ ಸಮಿತಿಗಳನ್ನು ಪ್ರಶ್ನೆ ಮಾಡಿಲ್ಲ. ಸಿಡಿಸಿಗಳಿಗೆ ಕಾನೂನಿನ ಮಾನ್ಯತೆ ಇದ್ದು ಇದು ಶಾಸಕರ ಇಚ್ಛೆಯಂತೆ ಕಾರ್ಯ ನಿರ್ವಹಿಸುವುದಿಲ್ಲ.

    ಕೋವಿಡ್‌ 19 ಸಂದರ್ಭದಲ್ಲಿ ದೇವಾಲಯ, ಮಸೀದಿ, ಚರ್ಚ್‌ಗಳನ್ನು ಮುಚ್ಚಲಾಗಿತ್ತು. ಅಲ್ಲಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವುದನ್ನು ನಿರ್ಬಂಧಿಸಲಾಗಿತ್ತು. ಆರೋಗ್ಯದ ಕಾರಣಕ್ಕೆ ಸರ್ಕಾರ ಈ ಆದೇಶವನ್ನು ಹೊರಡಿಸಲಾಗಿತ್ತು. ಇದರರ್ಥ ಅಗತ್ಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಚಲಾವಣೆಯನ್ನು ಸರ್ಕಾರ ನಿರ್ಬಂಧಿಸಬಹುದು. ಹೀಗಾಗಿ ಶಾಲಾ, ಕಾಲೇಜುಗಳಲ್ಲಿ ಯಾವುದೇ ಸಂಘರ್ಷ ನಡೆಯದೇ ಇರಲು ಸರ್ಕಾರ ಹಿಜಬ್‌ ನಿಷೇಧಿಸಿ ಸಮವಸ್ತ್ರವನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಅರ್ಜಿದಾರರು ಆರೋಪಿಸಿರುವಂತೆ ಸಂವಿಧನಾದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಎಲ್ಲೂ ಉಲ್ಲಂಘನೆಯಾಗಿಲ್ಲ.

    ಹೈಕೋರ್ಟ್‌: ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ. ಶಾಲಾ, ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಆದೇಶ ಪ್ರಕಟಿಸಲು ಸರ್ಕಾರಕ್ಕೆ ಅಧಿಕಾರವಿದೆ. ಧರ್ಮವಸ್ತ್ರಗಳಿಗೆ ಶಾಲೆಗಳಿಗೆ ಅವಕಾಶವಿಲ್ಲ.

  • ಶಾಲೆಲಿ ಎಲ್ರೂ ಪ್ರೀತಿ ವಿಶ್ವಾಸದಿಂದ ಇರಿ, ಬೇರೆಯದಕ್ಕೆ ಅವಕಾಶ ನೀಡ್ಬೇಡಿ: ಸಿದ್ದಗಂಗಾ ಶ್ರೀ

    ಶಾಲೆಲಿ ಎಲ್ರೂ ಪ್ರೀತಿ ವಿಶ್ವಾಸದಿಂದ ಇರಿ, ಬೇರೆಯದಕ್ಕೆ ಅವಕಾಶ ನೀಡ್ಬೇಡಿ: ಸಿದ್ದಗಂಗಾ ಶ್ರೀ

    ತುಮಕೂರು: ಶಾಲೆ ಎಂದ ಮೇಲೆ ಎಲ್ಲರೂ ಪ್ರೀತಿ ವಿಶ್ವಾಸದಿಂದ ಇರಬೇಕು. ಯಾವುದೇ ಕಾರಣಕ್ಕೂ ಬೇರೆಯದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸಿದ್ದಗಂಗಾ ಶ್ರೀ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯೆ ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂರ್ಣಪೀಠದ ಆದೇಶ ಬಂದಿದೆ. ಯಾವುದಕ್ಕೂ ಅವಕಾಶ ಮಾಡಿಕೊಡದೇ ಶಾಂತಿಯುತ ವಾತಾವರಣಕ್ಕೆ ಎಲ್ಲರೂ ಸಹಕರಿಸಬೇಕು. ಶಿಸ್ತು ನಿಯಮ ಪಾಲನೆ ಮಾಡಿ ಕರ್ನಾಟಕದ ಸಂಸ್ಕೃತಿ ಪರಂಪರೆ ಎತ್ತಿ ಹಿಡಿದು ಶಾಂತಿಯುತವಾಗಿರಬೇಕು ಎಂದು ಮನವಿ ಮಾಡಿದರು.

    ಸುದೀರ್ಘ ಚರ್ಚೆ, ವಾದ, ಪ್ರತಿವಾದ ಆಲಿಸಿ ಕೋರ್ಟ್ ತೀರ್ಪು ಕೊಟ್ಟಿದೆ. 15 ದಿನಗಳ ಕಾಲ ಸಮಯಾವಕಾಶದ ನಂತರ ಇವತ್ತು ತೀರ್ಪು ಪ್ರಕಟವಾಗಿದೆ. ಸರ್ಕಾರ ಹೊರಡಿಸಿದ ವಸ್ತ್ರ ಸಂಹಿತೆ ಕಾನೂನು ಪಾಲನೆ ಮಾಡಬೇಕು ಎಂದು ತೀರ್ಪು ಕೊಟ್ಟಿದೆ. ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಹೈಕೋರ್ಟ್ ತೀರ್ಪು ಸ್ವಾಗತಾರ್ಹ: ಅಶ್ವತ್ಥನಾರಾಯಣ

    ಐತಿಹಾಸಿಕ ತೀರ್ಪು..?: ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಎಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತರಗತಿಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಪೀಠ ವಜಾ ಮಾಡಿದೆ. ಇದನ್ನೂ ಓದಿ: ಹಿಜಬ್‌ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್‌ ಐತಿಹಾಸಿಕ ತೀರ್ಪು

  • ಹಿಜಬ್ ಇಸ್ಲಾಂ ಆಚರಣೆಯಲ್ಲ ಅನ್ನೋ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಲ್ಲ: ಯು.ಟಿ.ಖಾದರ್

    ಹಿಜಬ್ ಇಸ್ಲಾಂ ಆಚರಣೆಯಲ್ಲ ಅನ್ನೋ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಲ್ಲ: ಯು.ಟಿ.ಖಾದರ್

    ಬೆಂಗಳೂರು: ಹಿಜಬ್ ಇಸ್ಲಾಂ ಆಚರಣೆ ಅಲ್ಲ, ಎನ್ನುವ ಕೋರ್ಟ್ ತೀರ್ಪಿಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ, ಸಂಬಂಧಪಟ್ಟವರು ಸಲ್ಲಿಸಬಹುದು. ಸಿಡಿಸಿ ತೀರ್ಮಾನದಂತೆ ಸಮವಸ್ತ್ರ ನಿರ್ಧಾರ ಆಗುತ್ತೆ, ಸಿಡಿಸಿ ತೀರ್ಮಾನ ಇಲ್ಲದ ಕಡೆ ಸಮವಸ್ತ್ರ ಇಲ್ಲದಿರಬಹುದು. ಹಿಜಬ್, ಇಸ್ಲಾಂ ಆಚರಣೆ ಅಲ್ಲ, ಎನ್ನುವ ಕೋರ್ಟ್ ತೀರ್ಪಿಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಖೇಲ್ ಖತಂ, ನಾಟಕ್ ಬಂದ್, ಶಾಲೆಗೆ ಹಿಂತಿರುಗಿ: ಮಾಳವಿಕಾ ಅವಿನಾಶ್

    ಐತಿಹಾಸಿಕ ತೀರ್ಪು..?: ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಎಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತರಗತಿಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಪೀಠ ವಜಾ ಮಾಡಿದೆ.

    ರಾಜ್ಯದಲ್ಲಿ ಹಿಜಬ್ ವಿವಾದದ ಕಿಡಿ ಹೊತ್ತಿದ್ದೇ ಉಡುಪಿಯ ಸರ್ಕಾರಿ ಪಿಯು ಕಾಲೇಜಿನಿಂದ. 2021 ಡಿಸೆಂಬರ್ ತಿಂಗಳಿನಲ್ಲಿ ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಹಿಜಬ್ ಬೇಡಿಕೆ ಶುರುವಾಗಿತ್ತು. ಮನವಿ ಪತ್ರಗಳಿಗೆ ಪುರಸ್ಕಾರ ನೀಡದ ಪ್ರಾಂಶುಪಾಲರು, ಹಿಜಬ್ ಧರಿಸಿದ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರಗೆ ಹಾಕಿದ್ದರು. ಡಿಸೆಂಬರ್ 31ಕ್ಕೆ ವಿದ್ಯಾರ್ಥಿನಿಯರು ಕಾಲೇಜಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಾಗಿ ಒಂದು ತಿಂಗಳ ನಂತರ ಅಂದರೆ ಜನವರಿ 31ರಂದು ವಿದ್ಯಾರ್ಥಿನಿ ಅಲ್ಮಾಸ್ ಹೈಕೋರ್ಟ್‌ ಮೊರೆ ಹೋಗಿದ್ದರು. ಇದಾದ ಬಳಿಕ ರಾಜ್ಯದಲ್ಲಿ ಧರ್ಮ ಸಂಘರ್ಷವೇ ಶುರುವಾಗಿತ್ತು.