Tag: high court

  • ಎಸಿಬಿ ಕಾರ್ಯವೈಖರಿಗೆ ಹೈಕೋರ್ಟ್ ಜಡ್ಜ್ ಕ್ಲಾಸ್- ಬಿ ರಿಪೋರ್ಟ್ ಅಪೂರ್ಣ ಮಾಹಿತಿಗೆ ತರಾಟೆ

    ಎಸಿಬಿ ಕಾರ್ಯವೈಖರಿಗೆ ಹೈಕೋರ್ಟ್ ಜಡ್ಜ್ ಕ್ಲಾಸ್- ಬಿ ರಿಪೋರ್ಟ್ ಅಪೂರ್ಣ ಮಾಹಿತಿಗೆ ತರಾಟೆ

    ಬೆಂಗಳೂರು: ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯವೈಖರಿ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿ ಹೆಚ್‍ಪಿ ಸಂದೇಶ್ ಇವತ್ತು ಕೂಡ ಚಾಟಿ ಬೀಸಿದ್ದಾರೆ. ಇದುವರೆಗೂ ಎಸಿಬಿ ಹಾಕಿರುವ ಬಿ ರಿಪೋರ್ಟ್‍ಗಳ ಬಗ್ಗೆ ಸಹಿಯಿಲ್ಲದ ಅಪೂರ್ಣ ಮಾಹಿತಿ ನೀಡಿದ ಎಸಿಬಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಮೊದಲು 99 ಬಿ-ರಿಪೋರ್ಟ್‍ಗಳ ಮಾಹಿತಿ ನೀಡಿದ್ದ ಎಸಿಬಿ ಪರ ವಕೀಲರು ನಂತ್ರ ಅದನ್ನು 105ಕ್ಕೆ ಏರಿಸಿದ್ರು. ಆಗ ಸರಿಯಾಗಿ ಮಾಹಿತಿಯನ್ನು ಕೊಡ್ತಾ ಇಲ್ಲ. ನಾನು ಪದೇ ಪದೇ ಎಸಿಬಿಗೆ ಹೇಳ್ಬೇಕಾ…? ನನಗೆ ಎಲ್ಲಾ ಗೊತ್ತಿದೆ. ನೀವು ಇದರಲ್ಲಿ ಆಟ ಆಡ್ತಾ ಇದ್ದೀರಾ..? 2022ರ ಬಿ ರಿಪೋರ್ಟ್ ಎಲ್ಲಿ..? ನಾನು ಗರಂ ಆದ್ಮೇಲೆ ಮಂಜುನಾಥ್ ಮನೆ ಮೇಲೆ ರೇಡ್ ಮಾಡಿದ್ದೀರಿ..? ಮನೆಯಲ್ಲಿ ಏನು ಸಿಕ್ಕಿಲ್ಲವಂತಲ್ವಾ? ಅಷ್ಟಕ್ಕೂ ಡಿಸಿ ಮಂಜುನಾಥ್ ತಮ್ಮ ಚೇಂಬರ್‍ಗೆ ಹೇಗೆ ಖಾಸಗಿ ವ್ಯಕ್ತಿ ಬಿಟ್ಟುಕೊಂಡ್ರು.

    ಪರ್ಸನಲ್ ಅಸಿಸ್ಟೆಂಟ್ ಮಹೇಶ್ ಮೂಲಕ ಡೀಲ್ ಮಾಡಿದ್ದಾರೆ. ಮಹೇಶ್ ನೇಮಕಾತಿ ಆದೇಶ ಎಲ್ಲಿದೆ ತೋರಿಸಿ. ಹಣ ಮಾಡುವ ಸಲುವಾಗಿಯೇ ಅವರನ್ನು ಸೇರಿಸಿಕೊಂಡಿದ್ದಾರೆ. ಸಾಕ್ಷ್ಯ ಸಿಕ್ಕಿದ ಬಳಿಕ ಅರೆಸ್ಟ್ ಮಾಡ್ಬೇಕು ಅಲ್ವಾ? ನಾವು ಹೇಳುವ ತನಕ ಏನ್ ಮಾಡ್ತಾ ಇದ್ರಿ..? ನೀವು ಅರೆಸ್ಟ್ ಮಾಡದೇ ಇದ್ದದ್ದಕ್ಕೆ ನಮಗೆ ಕೋಪ ಬಂತು ಎಂದಿದ್ದಾರೆ. ಇದನ್ನೂ ಓದಿ: ಭ್ರಷ್ಟಾಚಾರ ಸಾಬೀತು – ಸರ್ಕಾರಿ ಸೇವೆಯಿಂದ PDO ವಜಾ

    ನನಗೆ ನಿಮ್ಮ ಎಡಿಜಿಪಿ ಬಗ್ಗೆ ವೈಯಕ್ತಿಕ ದ್ವೇಷ ಏನು ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಎಫ್‍ಐಆರ್ ರದ್ದು ಕೋರಿ ಐಎಎಸ್ ಮಂಜುನಾಥ್ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ್ದಾರೆ. ಜುಲೈ 11ಕ್ಕೆ ವಿಚಾರಣೆ ಮುಂದೂಡಿದ್ದಾರೆ. ಇದೇ ವೇಳೆ ಪಿಎಸ್‍ಐ ಹಗರಣದ ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಿದ್ದಾರೆ. ಇನ್ನು ತಮ್ಮನ್ನು ಟೀಕೆ ಮಾಡದಂತೆ ನಿರ್ಭಂದ ಕೋರಿ ಎಸಿಬಿ ಎಡಿಜಿಪಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸರ್ವಿಸ್ ರೆಕಾರ್ಡ್ ಕೇಳಿರುವ ಹೈಕೋರ್ಟ್ ಆದೇಶ ರದ್ದುಪಡಿಸಬೇಕು ಎಂದು ರಿಟ್ ಅರ್ಜಿ ಸಲ್ಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ತಾಯಿ-ಇಬ್ಬರು ಮಕ್ಕಳ ಕೊಲೆ; ಸಾಕ್ಷಿಗಳ ಕೊರತೆ ಆರೋಪಿ ನಿರ್ದೋಷಿ

    ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ತಾಯಿ-ಇಬ್ಬರು ಮಕ್ಕಳ ಕೊಲೆ; ಸಾಕ್ಷಿಗಳ ಕೊರತೆ ಆರೋಪಿ ನಿರ್ದೋಷಿ

    ಬೆಳಗಾವಿ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ತಾಯಿ-ಇಬ್ಬರು ಮಕ್ಕಳ ತ್ರಿವಳಿ ಕಗ್ಗೊಲೆ ಪ್ರಕರಣದಲ್ಲಿ ಸ್ಯಾಕ್ಷಾಧಾರಗಳ ಕೊರತೆಯಿಂದ ಧಾರವಾಡ ಹೈಕೋರ್ಟ್ ಪೀಠ  ಆರೋಪಿಯನ್ನು ಖಲಾಸೆ ಮಾಡಿದೆ.

    ಬೆಳಗಾವಿಯ ಕುವೆಂಪು ನಗರದಲ್ಲಿ 2015ರ ಆಗಸ್ಟ್ 16ರಂದು ನಸುಕಿನ ಜಾವ ತಾಯಿ, ಇಬ್ಬರು ಮಕ್ಕಳು ಸೇರಿ ಮೂವರ ಬರ್ಬರ ಹತ್ಯೆಯಾಗಿತ್ತು. ಘಟನೆಯಲ್ಲಿ ರೀನಾ ಮಾಲಗತ್ತಿ, ಆದಿತ್ಯ ಮಾಲಗತ್ತಿ, ಸಾಹಿತ್ಯ ಮಾಲಗತ್ತಿ ಕೊಲೆಯಾಗಿತ್ತು. ಕೊಲೆಯಾದ 24 ಗಂಟೆಯಲ್ಲೇ ಆರೋಪಿಯನ್ನು ಬಂಧಿಸಿದ್ದ ಬೆಳಗಾವಿ ಎಪಿಎಂಸಿ ಪೊಲೀಸರು ತನಿಖೆ ನಡೆಸಿ ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

    ವಾದ ಆಲಿಸಿದ ಬೆಳಗಾವಿ ಕೋರ್ಟ್ 2018ರ ಏಪ್ರಿಲ್ 16ರಂದು ಪ್ರವೀಣ್ ಭಟ್‍ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಆ ಬಳಿಕ ತೀರ್ಪು ಪ್ರಶ್ನಿಸಿ ಆರೋಪಿ ಪರ ವಕೀಲರು ಹೈಕೊರ್ಟ್ ಮೆಟ್ಟಿಲೇರಿದ್ದರು. ಇದೀಗ ಧಾರವಾಡ ಹೈಕೋರ್ಟ್ ಪೀಠ  ಸಾಕ್ಷಿಗಳ ಕೊರತೆ ಹಿನ್ನೆಲೆ ಆರೋಪಿ ಪ್ರವೀಣ್ ಭಟ್ ನಿರ್ದೋಷಿ ಎಂದು ತೀರ್ಪು ನೀಡಿದೆ. ಇದನ್ನೂ ಓದಿ: ಮರಾಠಿ ಬೋರ್ಡ್ ಹಾಕಿ ಇಲ್ಲದಿದ್ದರೆ ಕನ್ನಡ ನಾಮಫಲಕ ಇರಲ್ಲ ಎಂದು MES ಪುಂಡಾಟ – ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು

    ಘಟನೆ ಹಿನ್ನೆಲೆ: ಬೆಳಗಾವಿಯ ಕುವೆಂಪು ನಗರದಲ್ಲಿ 2015ರ ಆಗಸ್ಟ್ 16 ರಂದು ನಸುಕಿನ ಜಾವ ತ್ರಿವಳಿ ಕೊಲೆ ನಡೆದಿತ್ತು. ಘಟನೆಯಲ್ಲಿ ರೀನಾ ಮಾಲಗತ್ತಿ, ಆದಿತ್ಯ ಮಾಲಗತ್ತಿ, ಸಾಹಿತ್ಯ ಮಾಲಗತ್ತಿಯನ್ನು ಕೊಲೆಗೈಯ್ಯಲಾಗಿತ್ತು. 24 ಗಂಟೆಯಲ್ಲೇ ಎಪಿಎಂಸಿ ಪೊಲೀಸರು ಪ್ರವೀಣ್ ಭಟ್‍ನನ್ನು ಬಂಧಿಸಿದ್ದರು. ತ್ರಿವಳಿ ಕೊಲೆಗೆ ರೀನಾ ಹಾಗೂ ಪ್ರವೀಣ್ ಭಟ್ ನಡುವಿನ ಅನೈತಿಕ ಸಂಬಂಧವೇ ಕಾರಣ ಎನ್ನಲಾಗಿತ್ತು. ಆರೋಪಿ ಪರವಾಗಿ ನ್ಯಾಯವಾದಿ ಪ್ರವೀಣ್ ಕರೋಶಿ ವಾದ ಮಂಡಿಸಿದ್ದಾರೆ. ಇದನ್ನೂ ಓದಿ: ಸತೀಶ್ ಪಾಟೀಲ್ ಹತ್ಯೆಗೆ ಪೊಲೀಸರ ವೈಫಲ್ಯವೇ ಕಾರಣ: ಸತೀಶ್ ಜಾರಕಿಹೊಳಿ

    Live Tv

  • ಮುಸ್ಲಿಂ ಹುಡುಗಿಯರು 16ನೇ ವಯಸ್ಸಿನಲ್ಲಿ ಮದುವೆಯಾಗಬಹುದು: ಹೈಕೋರ್ಟ್

    ಮುಸ್ಲಿಂ ಹುಡುಗಿಯರು 16ನೇ ವಯಸ್ಸಿನಲ್ಲಿ ಮದುವೆಯಾಗಬಹುದು: ಹೈಕೋರ್ಟ್

    ಚಂಡೀಗಢ: 16 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಂ ಹುಡುಗಿಯರು ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಳ್ಳಬಹುದು ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ತೀರ್ಪು ನೀಡಿದೆ.

    ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಪಠಾಣ್‍ಕೋಟ್ ಮೂಲದ ಮುಸ್ಲಿಂ ದಂಪತಿಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರ ಏಕಸದಸ್ಯ ಪೀಠ ಈ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಅರೆಸ್ಟ್

    ಅರ್ಜಿದಾರರು ತಮ್ಮ ಕುಟುಂಬ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು ಎಂಬ ಕಾರಣಕ್ಕಾಗಿ, ಅವರು ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳಿಂದ ವಂಚಿತರಾಗಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

    ಇಸ್ಲಾಮಿಕ್ ಶರಿಯಾ ನಿಯಮವನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಬೇಡಿ, ಮುಸ್ಲಿಂ ವೈಯಕ್ತಿಕ ಕಾನೂನು ಅಡಿ ಮುಸ್ಲಿಂ ಮದುವೆಯನ್ನು ಮಾನ್ಯ ಮಾಡಲಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.

    No Means No, Even After an Initial Yes': Punjab and Haryana High Court

    ಸರ್ ದಿನ್ಶಾ ಫರ್ದುಂಜಿ ಮುಲ್ಲಾ ಅವರ ‘ಪ್ರಿನ್ಸಿಪಲ್ಸ್ ಆಫ್ ಮೊಹಮ್ಮದನ್ ಲಾ’ ಪುಸ್ತಕದ ಆರ್ಟಿಕಲ್ 195 ರ ಪ್ರಕಾರ, ಹುಡುಗಿ 16 ವರ್ಷಕ್ಕಿಂತ ಮೇಲ್ಪಟ್ಟವಳಾಗಿದ್ದು, ಹುಡುಗ 21 ವರ್ಷ ಮೀರಿದರೆ ಮದುವೆಯಾಗಬಹುದು. ಈ ಪ್ರಕರಣದಲ್ಲಿ ಇಬ್ಬರು ಮುಸ್ಲಿಂ ಕಾನೂನುಗಳ ಪ್ರಕಾರ ಪ್ರಾಪ್ತರಾದ ಕಾರಣ ಮದುವೆ ಕಾನೂನುಬದ್ಧವಾಗಿದೆ ಎಂದು ಉಲ್ಲೇಖಿಸಿದ್ದಾರೆ.

    ದಂಪತಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಮತ್ತು ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಎಸ್‍ಎಸ್‍ಪಿ ಪಠಾಣ್‍ಕೋಟ್‍ಗೆ ಕೋರ್ಟ್ ನಿರ್ದೇಶನ ನೀಡಿದೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಬಂದ್ ಕರೆ – ರ‍್ಯಾಪಿಡ್ ಆಕ್ಷನ್ ಫೋರ್ಸ್‌ನಿಂದ ಪಂಥ ಸಂಚಲನ 

    ಅರ್ಜಿದಾರರ ಪ್ರಕಾರ, ದಂಪತಿಯ ವಿವಾಹ 2022 ಜೂನ್ 8 ರಂದು ಮುಸ್ಲಿಂ ವಿಧಿಗಳು ಮತ್ತು ಸಮಾರಂಭಗಳ ಪ್ರಕಾರ ನೆರವೇರಿಸಲಾಯಿತು. ಆದರೆ, ಅವರ ಕುಟುಂಬಗಳು ಈ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ಅನುಮತಿಯಿಲ್ಲದೆ ಮದುವೆಯಾಗಿದ್ದಕ್ಕಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು.

    Live Tv

  • ಮಳಲಿ ಮಸೀದಿ ಬಗ್ಗೆ ಯಾವುದೇ ಆದೇಶ ಹೊರಡಿಸುವಂತಿಲ್ಲ- ಹೈಕೋರ್ಟ್ ಮಹತ್ವದ ಆದೇಶ

    ಮಳಲಿ ಮಸೀದಿ ಬಗ್ಗೆ ಯಾವುದೇ ಆದೇಶ ಹೊರಡಿಸುವಂತಿಲ್ಲ- ಹೈಕೋರ್ಟ್ ಮಹತ್ವದ ಆದೇಶ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಳಲಿಯಲ್ಲಿರುವ ಮಸೀದಿ ಬಗೆಗಿನ ವಿವಾದಕ್ಕೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

    ಹೈಕೋರ್ಟ್‌ನಲ್ಲಿ ವಿಹೆಚ್‌ಪಿ ಪರವಾಗಿ ಹಿರಿಯ ವಕೀಲ ವಿವೇಕ್ ರೆಡ್ಡಿ ವಾದ ಮಂಡಿಸಿದ್ದಾರೆ. ಮಳಲಿ ಮಸೀದಿ ಬಗ್ಗೆ ಮಂಗಳೂರಿನ ಸಿವಿಲ್ ಕೋರ್ಟ್ ವಿಚಾರಣೆ ಮಾತ್ರವೇ ಮಾಡಬೇಕು. ಈ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸುವಂತಿಲ್ಲ ಎಂದು ಮಂಗಳೂರು ಜಿಲ್ಲಾ ಮೂರನೇ ಸಿವಿಲ್ ಕೋರ್ಟ್‌ಗೆ ಹೈಕೋರ್ಟ್ ಸೂಚನೆ ನೀಡಿದೆ.

    ಮಳಲಿ ಮಸೀದಿ ಪುನರ್ ನಿರ್ಮಾಣಕ್ಕೆ ಮಸೀದಿ ಆಡಳಿತ ಮಂಡಳಿ ಮುಂದಾಗಿತ್ತು. ಆದರೆ ಇದಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಮಸೀದಿಯ ನಡೆಯನ್ನು ಪ್ರಶ್ನಿಸಿ ಮಂಗಳೂರು ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಅರ್ಜಿ ವಿಚಾರಣೆ ಸಂದರ್ಭ ಮಸೀದಿ 700 ವರ್ಷಗಳ ಹಿಂದಿನಿಂದ ಇದೆ ಎಂದು ಮಸೀದಿ ಪರ ವಕೀಲರು ವಾದಿಸಿದ್ದರು. ಇದನ್ನೂ ಓದಿ: ಶಿಕ್ಷಕರು, ಪದವೀಧರ ಕ್ಷೇತ್ರಕ್ಕೆ ಯಶಸ್ವಿ ಮತದಾನ – ಜೂನ್ 15ಕ್ಕೆ ಫಲಿತಾಂಶ

    ಮಸೀದಿಯೇ 700 ವರ್ಷಗಳಷ್ಟು ಹಳೆಯದಾಗಿದ್ದರೆ, ಅದರಲ್ಲೇ ಇದ್ದ ದೇವಾಯ ಅದಕ್ಕಿಂತಲೂ ಹಳೆಯದು ಎಂದು ಹಿಂದೂ ಪರ ವಕೀಲರು ವಾದಿಸಿದ್ದಾರೆ. ದೇವಸ್ಥಾನ ಎಷ್ಟು ವರ್ಷಗಳ ಹಿಂದೆ ಇತ್ತು? ದೇವಸ್ಥಾನ ಒಡೆದು ಮಸೀದಿ ಕಟ್ಟಲಾಗಿದೆಯಾ? ಎಂಬೆಲ್ಲಾ ಪ್ರಶ್ನೆಗೆ ಉತ್ತರ ತಿಳಿಯಲು ಹಿಂದೂ ಸಂಘಟನೆ ಪರ ವಕೀಲರು ಕಮಿಷನ್ ಒಂದನ್ನು ನೇಮಕ ಮಾಡಲು ಮನವಿ ಮಾಡಿದ್ದರು.

    ಕೆಳಹಂತದ ನ್ಯಾಯಾಲಯ ಮಳಲಿ ಮಸೀದಿಯ ವಾಸ್ತವ ಸ್ಥಿತಿಯನ್ನು ಮುಂದುವರೆಸಬಹುದು ಎಂದು ಸೂಚನೆ ನೀಡಿತ್ತು. ಆದರೆ ಕೆಳ ಹಂತದ ಸೂಚನೆಯನ್ನು ಒಪ್ಪದ ವಕೀಲರು ಹೈಕೋರ್ಟ್ ಮೆಟ್ಟಿಲು ಏರಿದ್ದರು ಹಾಗೂ ಸಾರ್ವಜನಿಕ ಪೂಜಾಸ್ಥಳ ಅಧಿನಿಯಮ 1991ರ ಪ್ರಕಾರ ಅರ್ಜಿ ಸಲ್ಲಿಸಿದ್ದರು. 100 ವರ್ಷ ಮೇಲ್ಪಟ್ಟ ದೇವಾಲಯಗಳಿಗೆ ಅಧಿನಿಯಮ ಅನ್ವಯವಾಗುತ್ತದೆ. ಹೀಗಾಗಿ 700 ವರ್ಷಗಳ ಹಿಂದೆ ಇದ್ದ ದೇವಾಲಯಕ್ಕೆ ಕಮಿಷನ್ ನೇಮಕ ಮಾಡಲು ವಿವೇಕ್ ರೆಡ್ಡಿ ಹೈಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಇದನ್ನೂ ಓದಿ: ಜೋಗ ಜಲಪಾತ ಮುಂಗಾರಿನ ವಿಸ್ಮಯ – ಬೀಸುವ ಗಾಳಿಗೆ ಮೇಲಕ್ಕೆ ಹಾರುತ್ತಿದೆ ಶರಾವತಿ!

    ಇದೀಗ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮಂಗಳೂರು ಕೋರ್ಟ್ಗೆ ಯಾವುದೇ ಆದೇಶವನ್ನು ನೀಡುವಂತಿಲ್ಲ ಎಂದು ಸೂಚನೆ ನೀಡಿದೆ. ಮಸೀದಿಯ ಯಥಾಸ್ಥಿತಿಯನ್ನು ಮುಂದುವರಿಸುವಂತೆ ಸೂಚನೆ ನೀಡಿದ್ದು, ವಿವರವಾದ ವಿಚಾರಣೆ ನಡೆಯುವವರೆಗೆ ಕೆಳಹಂತದ ನ್ಯಾಯಾಲಯ ಯಾವುದೇ ಆದೇಶ ನೀಡುವಂತಿಲ್ಲ ಎಂದಿದೆ.

    ಮಳಲಿ ಮಸೀದಿ ವಿಚಾರಣೆ ಜ್ಞಾನವಾಪಿ ರೀತಿಯಲ್ಲಿ ನಡೆಯುತ್ತಿದ್ದು, ದೇವಾಲಯದ ಇತಿಹಾಸ ಮೊದಲು ತಿಳಿಯಬೇಕು, ಕಮಿಷನ್ ನೇಮಕವಾಗಿ ವರದಿ ಕೊಡುವ ತನಕ ಯಾವುದೇ ಕಾರ್ಯಚಟುವಟಿಕೆಗಳನ್ನು ನಡೆಸಬಾರದು ಎಂದು ಆದೇಶಿಸಿದೆ.

  • ವಾರಣಾಸಿ ಸರಣಿ ಬಾಂಬ್ ಸ್ಫೋಟ – 16 ವರ್ಷಗಳ ನಂತರ ಆರೋಪಿಯನ್ನು ಗುರುತಿಸಿದ ಹೈಕೋರ್ಟ್

    ವಾರಣಾಸಿ ಸರಣಿ ಬಾಂಬ್ ಸ್ಫೋಟ – 16 ವರ್ಷಗಳ ನಂತರ ಆರೋಪಿಯನ್ನು ಗುರುತಿಸಿದ ಹೈಕೋರ್ಟ್

    ಲಕ್ನೋ: ವಾರಣಾಸಿಯಲ್ಲಿ 2006ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ವಲಿಯುಲ್ಲಾನನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಜಿಲ್ಲಾ ಸೆಷನ್ಸ್ ನ್ಯಾಯಾಲಯವು 16 ವರ್ಷಗಳ ನಂತರ ದೋಷಿ ಎಂದು ಘೋಷಿಸಿದೆ.

    ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಯಾಗರಾಜ್ ಜಿಲ್ಲೆಯ ಫುಲ್ಪುರ್ ಗ್ರಾಮದ ನಿವಾಸಿ ವಲಿಯುಲ್ಲಾನನ್ನು ದೋಷಿ ಎಂದು ಗುರುತಿಸಿದ್ದು ಜೂನ್ 6ರಂದು ಪ್ರಕಟಿಸಲಿದೆ. ಇದನ್ನೂ ಓದಿ: ಗೋ ಶಾಲೆಯಲ್ಲಿ ಒಂದು ತಿಂಗಳ ಕಾಲ ಸೇವೆ – ಷರತ್ತು ವಿಧಿಸಿ ಆರೋಪಿಗೆ ಜಾಮೀನು

    CRIME

    ಸ್ಫೋಟ ಪ್ರಕರಣಗಳು: 2006ರ ಮಾರ್ಚ್ 7ರಂದು ಉತ್ತರ ಪ್ರದೇಶದ ವಾರಣಾಸಿಯ ಸಂಕತ್ಮೋಚ್‌ನ ದೇವಸ್ಥಾನ ಮತ್ತು ಕ್ಯಾಂಟ್ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಇದರಲ್ಲಿ 30 ಮಂದಿ ಮೃತಪಟ್ಟು, ನೂರಾರು ಜನರು ಗಾಯಗೊಂಡಿದ್ದರು. 2006 ರ ಏಪ್ರಿಲ್ 5 ರಂದು ಉತ್ತರ ಪ್ರದೇಶ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಗರಾಜ್ ಜಿಲ್ಲೆಯ ಫುಲ್ಪುರ್ ಗ್ರಾಮದ ನಿವಾಸಿ ವಲಿಯುಲ್ಲಾನನ್ನು ಬಂಧಿಸಿದ್ದರು. ಹೈಕೋರ್ಟ್ನ ಆದೇಶದ ಮೇರೆಗೆ ಪ್ರಕರಣವನ್ನು ವಿಚಾರಣೆಗಾಗಿ ಗಾಜಿಯಾಬಾದ್‌ಗೆ ವರ್ಗಾಯಿಸಲಾಗಿತ್ತು.

  • ಮಾಸ್ಕ್ ಧರಿಸದವರಿಗೆ ದೊಡ್ಡ ಪ್ರಮಾಣದ ದಂಡ ವಿಧಿಸಿ, ನೋ ಫ್ಲೈ ಲಿಸ್ಟ್‌ಗೆ ಸೇರಿಸಿ – ಹೈಕೋರ್ಟ್ ಚಾಟಿ

    ಮಾಸ್ಕ್ ಧರಿಸದವರಿಗೆ ದೊಡ್ಡ ಪ್ರಮಾಣದ ದಂಡ ವಿಧಿಸಿ, ನೋ ಫ್ಲೈ ಲಿಸ್ಟ್‌ಗೆ ಸೇರಿಸಿ – ಹೈಕೋರ್ಟ್ ಚಾಟಿ

    ನವದೆಹಲಿ: ವಿಮಾನ ನಿಲ್ದಾಣ ಮತ್ತು ವಿಮಾನಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಮಾಸ್ಕ್ ಧರಿಸದ ಪ್ರಯಾಣಿಕರಿಗೆ ವಿಮಾನ ಏರಲು ಅವಕಾಶ ಕೊಡಬೇಡಿ. ಒಂದು ವೇಳೆ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದರೆ ದೊಡ್ಡ ಪ್ರಮಾಣದ ದಂಡ ವಿಧಿಸಿ, ನೋ ಫ್ಲೈ ಲಿಸ್ಟ್‌ಗೆ ಸೇರಿಸಿ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

    ದೇಶದಲ್ಲಿ ಕೊರೊನಾ ಸೋಂಕು ಮಂದಗತಿಯಲ್ಲಿ ಏರುತ್ತಿದ್ದು, ಇಂತಹ ಸಂದರ್ಭದಲ್ಲಿ ವಿಮಾನಗಳ ಮತ್ತು ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸುವ ನಿಯಮ ಕಡ್ಡಾಯವಾಗಿ ಪಾಲನೆಯಾಗುತ್ತಿಲ್ಲ ಎಂದು ಸಲ್ಲಿಸಲಾಗಿದ್ದು, ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ.

    ವಿಚಾರಣೆ ವೇಳೆ ವಾದ ಮಂಡಿಸಿದ ಡಿಜಿಸಿಎ ಪರ ವಕೀಲರು, ಉಪಹಾರ ಸೇವನೆ ವೇಳೆ ಮಾತ್ರ ವಿಮಾನಗಳಲ್ಲಿ ಮಾಸ್ಕ್‌ನಿಂದ ವಿನಾಯಿತಿ ನೀಡಲಾಗುತ್ತಿದೆ ಎಂದು ಹೇಳಿದರು. ಇದಕ್ಕೆ ತೃಪ್ತಿಯಾಗದ ಪೀಠ ನಿಯಮ ಪಾಲಿಸದ ಪ್ರಯಾಣಿಕರನ್ನು ಅಗತ್ಯ ಬಿದ್ದರೇ ವಿಮಾನದಿಂದ ಆಚೆ ಹಾಕಿ ಎಂದು ಹೇಳಿತು.

    corona

    ಕೊರೊನಾ ನಿಯಮ ಉಲ್ಲಂಘಿಸುವ ಪ್ರಯಾಣಿಕರನ್ನು ನಿಯಂತ್ರಿಸಲು ಪ್ರತ್ಯೇಕ ನಿಯಮಗಳನ್ನು ರೂಪಿಸಬೇಕು. ಫ್ಲೈಟ್‍ನ ಕ್ಯಾಪ್ಟನ್ ಮತ್ತು ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ನಿಯಮ ಉಲ್ಲಂಘಿಸುವ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾ. ವಿಪಿನ್ ಸಂಘಿ ಹೇಳಿದರು. ಇದನ್ನೂ ಓದಿ: ರಾಜ್ಯಸಭೆ ಚುನಾವಣೆ ಫೈಟ್: ಗುರು, ಶಿಷ್ಯರ ಕಾಳಗದಲ್ಲಿ ಗೆದ್ದು ಬೀಗಿದ ಸಿದ್ದರಾಮಯ್ಯ – ಹೆಚ್‍ಡಿಡಿಗೆ ಹಿನ್ನಡೆ

    ಕೊರೊನಾ ನಿಯಂತ್ರಿಸಲು ಮಾಸ್ಕ್ ನಿಯಮ ಜಾರಿ ಮಾಡಿದೆ. ಇದರ ಉಲ್ಲಂಘನೆಯಿಂದ ಇತರರಿಗೆ ತೊಂದರೆಯಾಗಲಿದೆ. ಉಪಹಾರದ ಸಮಯ ಹೊರತುಪಡಿಸಿ ಕಡ್ಡಾಯವಾಗಿ ನಿಯಮಗಳ ಪಾಲನೆ ಮಾಡಬೇಕು ಎಂದು ಪೀಠ ಅಭಿಪ್ರಾಯಪಟ್ಟಿತು. ಇದನ್ನೂ ಓದಿ: ಜೂನ್ 13ಕ್ಕೆ ಹಾಜರಾಗಿ – ರಾಹುಲ್‌ಗೆ ಇಡಿ ಸಮನ್ಸ್

  • ಕೇರಳದಲ್ಲಿ ವ್ಯಾಪಕವಾಗಿ ಹರಡುತ್ತಿದೆ ದೇಶ ವಿರೋಧಿ ಚಿಂತನೆ – ಬಿಜೆಪಿ ಸಂಸದ ಅಲ್ಫೋನ್ಸ್ ಹೇಳಿಕೆ

    ಕೇರಳದಲ್ಲಿ ವ್ಯಾಪಕವಾಗಿ ಹರಡುತ್ತಿದೆ ದೇಶ ವಿರೋಧಿ ಚಿಂತನೆ – ಬಿಜೆಪಿ ಸಂಸದ ಅಲ್ಫೋನ್ಸ್ ಹೇಳಿಕೆ

    ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಇಸ್ಲಾಂ ಧರ್ಮದ ಕಡೆಗೆ ಜನರ ಒಲವು ಹೆಚ್ಚಾಗುತ್ತಿದೆ. ಇಲ್ಲಿನ ಕೆಲ ಜಿಲ್ಲೆಗಳು ಸೌದಿ ಅರೇಬಿಯಾದಂತೆ ಭಾಸವಾಗುತ್ತಿದ್ದು, ದೇಶ ವಿರೋಧಿ ಚಿಂತನೆಗಳು ವ್ಯಾಪಕವಾಗಿ ಹರಡುತ್ತಿವೆ ಎಂದು ಬಿಜೆಪಿ ರಾಜ್ಯ ಸಭಾ ಸಂಸದ ಬಿಜೆಪಿ ರಾಜ್ಯಸಭಾ ಸಂಸದ ಕೆ.ಜೆ. ಅಲ್ಫೋನ್ಸ್ ಕಣ್ಣಂತಾನಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕೇರಳದಲ್ಲಿ ಇಸ್ಲಾಂ ಧರ್ಮದ ಕಡೆಗೆ ಜನರ ಒಲವು ಹೆಚ್ಚುತ್ತಿದೆ. ಇದು ಅತ್ಯಂತ ದುಃಖಕರ ಸಂಗತಿ. ನೀವು ಕೇರಳದ ಕೆಲವು ಜಿಲ್ಲೆಗಳಿಗೆ ಹೋಗಿ ನೋಡಿದರೆ, ಸೌದಿ ಅರೇಬಿಯಾದಲ್ಲಿದ್ದಂತೆ ಭಾಸವಾಗುತ್ತದೆ. ಜನರ ವರ್ತನೆಗಳಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದಾಗಿದೆ. ವಿಶೇಷವಾಗಿ ಅವರು ಧರಿಸುವ ಉಡುಪು ದೇಶ ವಿರೋಧಿ ಚಿಂತನೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಸಾರಥಿ ಭಾ.ಮಾ. ಹರೀಶ್

    ಇದೇ ವೇಳೆ ಪ್ರಚೋದನಕಾರಿ ಘೋಷಣೆಗಳಿಗೆ ಸಂಬಂಧಿಸಿದಂತೆ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸರಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿರುವುದು ಉತ್ತಮ ಬೆಳವಣಿಗೆ ಎಂದು ಅಲ್ಫೋನ್ಸ್ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಎರಡು ವರ್ಷಗಳ ನಂತರ ಭಾರತ- ಬಾಂಗ್ಲಾ ರೈಲು ಸಂಚಾರ ಪುನಾರಂಭ

    ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಸರ್ಕಾರಗಳು ಮುಸ್ಲಿಮರ ಮತಗಳ ಮೇಲೆ ಅವಲಂಬಿತವಾಗಿವೆ. ಈ ನಡುವೆ ಕೇರಳದಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳು ಅಲ್ಪಸಂಖ್ಯಾತರನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.

  • ಠಾಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಆಡಿಯೋ ಹೊಂದಿರಬೇಕು: ದೆಹಲಿ ಹೈಕೋರ್ಟ್

    ಠಾಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಆಡಿಯೋ ಹೊಂದಿರಬೇಕು: ದೆಹಲಿ ಹೈಕೋರ್ಟ್

    ನವದೆಹಲಿ: ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿಗಳಲ್ಲಿ ವೀಡಿಯೋ ಫೂಟೇಜ್ ಜೊತೆ ಆಡಿಯೋ ಇರಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ.

    ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆಡಿಯೋ ಸಿಸ್ಟಮ್ ಏಕೆ ಅಳವಡಿಸಿಲ್ಲ ಎಂಬುದನ್ನು ವಿವರಿಸುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ಸೂಚಿಸಿದೆ.

    ನ್ಯಾಯಮೂರ್ತಿ ಅನು ಮಲ್ಹೋತ್ರಾ ಪೀಠದಲ್ಲಿ ಮಸೀದಿಯ ಇಮಾಮ್ ಆಗಿ ತಮ್ಮ ಅಧಿಕೃತ ಮತ್ತು ಧಾರ್ಮಿಕ ಕರ್ತವ್ಯಗಳನ್ನು ನಿರ್ವಹಿಸಲು ಅಡ್ಡಿಯಾಗುತ್ತಿರುವ ಕುರಿತು ವಿಚಾರಣೆ ನಡೆಯುತ್ತಿತ್ತು. ಈ ವೇಳೆ, ನಬಿ ಕರೀಮ್ ಪೊಲೀಸ್ ಠಾಣೆಯ ವೀಡಿಯೋ ತುಣುಕನ್ನು ಸಂರಕ್ಷಿಸಲಾಗಿದ್ದರೂ, ಆಡಿಯೋ ದೃಶ್ಯಾವಳಿಗಳು ಲಭ್ಯವಿಲ್ಲದ ವಿಚಾರ ಪ್ರಸ್ತಾಪವಾಗಿದೆ. ಈ ವಿಚಾರ ತಿಳಿದ ಕೋರ್ಟ್, ಪೊಲೀಸ್ ಠಾಣೆಗಳ ಸಿಸಿಟಿವಿಯಲ್ಲಿ ಆಡಿಯೋ ಹಾಗೂ ವೀಡಿಯೋ ಫೂಟೇಜ್ ಕಡ್ಡಾಯವಾಗಿ ಅಳವಡಿಸಬೇಕು ಎಂದು ಆದೇಶ ಹೊರಡಿಸಿದೆ. ಇದನ್ನೂ ಓದಿ:  ದೇಶಕ್ಕೆ ಕನ್ನಡಿಗರ ಕೊಡುಗೆ ಅಪಾರ: ಬೊಮ್ಮಾಯಿ 

    court order law

    ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸುವ ಜೊತೆಗೆ ಸರಿಯಾಗಿ ಆಡಿಯೋ ಮತ್ತು ವೀಡಿಯೋ ಅಳವಡಿಸಬೇಕು ಎಂದು ನ್ಯಾಯಾಲಯವು ಮೇ 27 ರಂದು ಆದೇಶ ಹೊರಡಿಸಿದೆ. ಪೊಲೀಸ್ ಠಾಣೆಯ ಲಾಕ್-ಅಪ್‍ಗಳು, ಕಾರಿಡಾರ್‌ಗಳು, ಎಂಟ್ರಿ ಜಾಗಗಳು, ಇನ್‍ಸ್ಪೆಕ್ಟರ್‌ಗಳ ಕೊಠಡಿಗಳು, ಸ್ಟೇಷನ್ ಹಾಲ್, ಇತ್ಯಾದಿಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

    ಠಾಣೆಯಲ್ಲಿ ನಡೆದಿದ್ದೇನು?
    ಅರ್ಜಿದಾರರು, ಪೊಲೀಸ್ ಠಾಣೆಯಲ್ಲಿ ಎಸ್‍ಎಚ್‍ಒ ಸಮ್ಮುಖದಲ್ಲಿ ನನ್ನ ಮೇಲೆ ಅಮಾನವೀಯ ಮತ್ತು ಅವಮಾನಕರ ಪದಗಳನ್ನು ಒಳಸಲಾಗಿದೆ ಎಂದು ಆರೋಪಿಸಿದ್ದಾರೆ. ಇಡೀ ಘಟನೆಯನ್ನು ಎಸ್‍ಎಚ್‍ಒ ಕೊಠಡಿಯೊಳಗೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾ ಸೆರೆಹಿಡಿದಿದೆ. ಈ ವೇಳೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ವೀಡಿಯೋ ಇದ್ದರೂ, ಆಡಿಯೋ ಸರಿಯಾಗಿ ಕೇಳಿಸುತ್ತಿಲ್ಲ ಎಂಬುದು ದೊಡ್ಡ ಸಮಸ್ಯೆಯಾಗಿದೆ ಎಂದು ದೂರಿದ್ದರು. ಇದನ್ನೂ ಓದಿ: ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮಕ್ಕೆ ಪೊನ್ನಂಪೇಟೆಯಲ್ಲಿ ವಿದ್ಯುಕ್ತ ಚಾಲನೆ 

  • ವಂದೇ ಮಾತರಂಗೆ ರಾಷ್ಟ್ರಗೀತೆಯಷ್ಟೇ ಸ್ಥಾನ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದ ಅಶ್ವಿನಿ ಉಪಾಧ್ಯಾಯ ವಿರುದ್ಧ ‘ಹೈ’ ಗರಂ

    ವಂದೇ ಮಾತರಂಗೆ ರಾಷ್ಟ್ರಗೀತೆಯಷ್ಟೇ ಸ್ಥಾನ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದ ಅಶ್ವಿನಿ ಉಪಾಧ್ಯಾಯ ವಿರುದ್ಧ ‘ಹೈ’ ಗರಂ

    ನವದೆಹಲಿ: ವಂದೇ ಮಾತರಂ ಗೀತೆಗೆ ಜನ ಗಣ ಮನ ರಾಷ್ಟ್ರಗೀತೆಯಷ್ಟೇ ಸ್ಥಾನ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ವಕೀಲ, ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ವಿರುದ್ಧ ದೆಹಲಿ ಹೈಕೋರ್ಟ್ ಗರಂ ಆಗಿದೆ. ಅರ್ಜಿ ಸಲ್ಲಿಕೆ ಬೆನ್ನಲ್ಲೇ ಮಾಧ್ಯಮಗಳಿಗೆ ದಾಖಲೆ ಬಿಡುಗಡೆ ಹಿನ್ನೆಲೆ ಕೋರ್ಟ್ ನಿಮ್ಮದು ಪ್ರಚಾರದ ತಂತ್ರವಲ್ಲದೇ ಇನ್ನೇನು ಎಂದು ಕೋರ್ಟ್‍ನಲ್ಲಿ ಛೀಮಾರಿ ಹಾಕಿತು.

    ಅಶ್ವಿನಿ ಉಪಾಧ್ಯಾಯ ನಿನ್ನೆ ದೆಹಲಿ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಇಂದು ಹಂಗಾಮಿ ಮುಖ್ಯ ನ್ಯಾ. ವಿಪಿನ್ ಸಂಘಿ ನೇತೃತ್ವದ ತ್ರಿ ಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿ ಸಲ್ಲಿಕೆ ಬೆನ್ನಲ್ಲೇ ಮಾಧ್ಯಮಗಳಿಗೆ ದಾಖಲೆ ಮಾಡಿದಕ್ಕೆ ಆಕ್ರೋಶ ವ್ಯಕ್ತಪಡಿಸಿತು. ಪ್ರಚಾರದ ಕಾರಣಕ್ಕೆ ಇಂತಹ ಪಿಐಎಲ್‍ಗಳನ್ನು ಮಾಡುತ್ತೀರಾ ಎಂದು ಪ್ರಶ್ನೆ ಮಾಡಿತು. ಇದನ್ನೂ ಓದಿ: ಕುತುಬ್ ಮಿನಾರ್ ಬಳಿ ಪೂಜೆ ಮಾಡುವ ಹಕ್ಕು ಯಾರಿಗೂ ಇಲ್ಲ – ASI ಖಡಕ್ ಉತ್ತರ

    court order law

    ಅಶ್ವಿನಿ ಉಪಾಧ್ಯಾಯ ಮನವಿ ಬಳಿಕ ಕೋರ್ಟ್ ವಿಚಾರಣೆ ಆರಂಭಿಸಿತು. ಈ ವೇಳೆ ವಾದ ಮಂಡಿಸಿದ ಅವರು, ವಂದೇ ಮಾತರಂ ಗೀತೆಯನ್ನು ನಿಯಂತ್ರಿಸುವ ಯಾವುದೇ ಕಾನೂನುಗಳಿಲ್ಲ, ರಾಷ್ಟ್ರೀಯ ಗೌರವ ಕಾಯಿದೆಯಲ್ಲಿ ಉಲ್ಲೇಖಿಸಲ್ಪಟ್ಟಿಲ್ಲ. ಇದರಿಂದಾಗಿ ಸಿನಿಮಾ, ಧಾರವಾಹಿ ಹಾಗೂ ರಾಕ್ ಬ್ಯಾಂಡ್‍ಗಳಲ್ಲೂ ಈ ಗೀತೆಯನ್ನು ಮನಸ್ಸಿಗೆ ತೋಚಿದಂತೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.

    ಶ್ಯಾಮ್ ನಾರಾಯಣ್ ಚೌಕ್ಸೆ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ರಚನೆ ಮಾಡಿ ವರದಿ ಸಲ್ಲಿಕೆಗೆ ಸೂಚಸಿದೆ. ಆದರೆ ಅದು ಯಾವುದೇ ಪ್ರಗತಿಯನ್ನು ಕಂಡಿಲ್ಲ. 2017 ರಲ್ಲಿ ವಂದೇ ಮಾತರಂ ಗೀತೆಯನ್ನು ರಾಷ್ಟ್ರಗೀತೆ ಎಂದು ಗುರುತಿಸಿ ವಾರಕ್ಕೊಮ್ಮೆ ಶಾಲೆ ಕಾಲೇಜುಗಳಲ್ಲಿ ಹಾಡಲು ಸೂಚಿಸಿದೆ. ಆ ಆದೇಶ ಪಾಲನೆಯಾಗಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು. ಇದನ್ನೂ ಓದಿ: ಮೇ 26 ರಿಂದ ಮಸೀದಿ ಪರ ಅರ್ಜಿ ವಿಚಾರಣೆ, ಯಥಾಸ್ಥಿತಿ ಕಾಯ್ದುಕೊಳ್ಳಿ: ಕೋರ್ಟ್ ಆದೇಶ

    ಹೀಗಾಗಿ ವಂದೇ ಮಾತರಂ ಗೀತೆಯನ್ನು ನಾಟಕೀಯವಾಗಿ ಬಳಕೆ ಮಾಡಬಾರದು. ಅದಕ್ಕೆ ರಾಷ್ಟ್ರಗೀತೆಯಷ್ಟೇ ಗೌರವ ನೀಡಬೇಕು ಮತ್ತು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಬಾರದು ಅಲ್ಲದೇ ಶಾಲೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಹಾಡಲು ಸೂಚಿಸಬೇಕು ಎಂದು ಮನವಿ ಮಾಡಿದರು.

    ವಾದ ಆಲಿಸಿದ ಪೀಠ, ಅರ್ಜಿ ವಿಚಾರಣೆ ನಡೆಸಲು ಅನುಮತಿ ನೀಡಿತು. ಅಲ್ಲದೇ ಎಲ್ಲ ಪ್ರತಿವಾದಿಗಳಿಗೆ ಪ್ರಕರಣ ಸಂಬಂಧ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿ ಆರು ವಾರಗಳಲ್ಲಿ ಸಮಯವನ್ನು ನೀಡಿದೆ. ನವೆಂಬರ್ 9 ರಂದು ಮತ್ತೆ ಈ ಬಗ್ಗೆ ವಿಚಾರಣೆ ನಡೆಯಲಿದ್ದು ಪ್ರಕರಣದ ವಿಸ್ತೃತ ವಿಚಾರಣೆ ನಡೆಯಲಿದೆ.

  • ಕೆಜಿಎಫ್ 2 ಪ್ರದರ್ಶನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಕೆಜಿಎಫ್ 2 ಪ್ರದರ್ಶನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಕೆಜಿಎಫ್ 2 ಸಿನಿಮಾ ಐವತ್ತನೇ ದಿನದ ಪ್ರದರ್ಶನಕ್ಕೆ ಹತ್ತಿರವಾಗುತ್ತಿದೆ. ವಿಶ್ವದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ, ಭರ್ಜರಿ ಪ್ರದರ್ಶನ ಕೂಡ ಕಂಡಿದೆ. 1,200 ಕೋಟಿ ರೂಪಾಯಿಯನ್ನು ಬಾಕ್ಸ್ ಆಫೀಸಿನಲ್ಲಿ ದೋಚಿದೆ. ಇಂತಹ ಸಿನಿಮಾದಲ್ಲಿ ಧೂಮ್ರಪಾನಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದ್ದು, ಅದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹಾಗಾಗಿ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಇದನ್ನೂ ಓದಿ : ತೆರೆಯ ಮೇಲೂ ಒಂದಾದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ

    ಬೆಂಗಳೂರಿನ ಕ್ಯಾನ್ಸರ್ ರೋಗಿಗಳ ನೆರವು ಸಂಘವು ಹೈಕೋರ್ಟ್‌ಗೆ ‘ಕೆಜಿಎಫ್ 2’ ಸಿನಿಮಾವನ್ನು ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಇದೊಂದು ಸಮಾಜಿಕ ಕಳಕಳಿ ಇಲ್ಲದ ಸಿನಿಮಾ. ಧೂಮಪಾನವನ್ನು ವಿಜೃಂಭಿಸಲಾಗಿದೆ. ಇದರಿಂದಾಗಿ ಮಕ್ಕಳು ಮತ್ತು ಯುವಕರ ಮೇಲೆ ದುಷ್ಟಪರಿಣಾಮ ಬೀರಲಿದೆ ಎಂದು ಅರ್ಜಿಲಯಲ್ಲಿ ಉಲ್ಲೇಖಿಸಲಾಗಿತ್ತು. ಸಿನಿಮಾ ತಡೆ ಹಿಡಿದು, ಸೆನ್ಸಾರ್ ಮಂಡಳಿಯು ಕೊಟ್ಟಿರುವ ಯು/ಎ ಪ್ರಮಾಣ ಪತ್ರವನ್ನು ಹಿಂಪಡೆಯಬೇಕೆಂದು ಕೇಳಿತ್ತು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೆರಡು ಪ್ಯಾನ್ ಇಂಡಿಯಾ ಸಿನಿಮಾ

    ನ್ಯಾಯಮೂರ್ತಿಗಳಾದ ರಿತುರಾಜ್ ಅವಸ್ತಿ ನೇತೃತ್ವದ ವಿಭಾಗೀಯ ಪೀಠವು ಈ ಅರ್ಜಿ ವಿಚಾರಣೆಯನ್ನು ನಡೆಸಿತು. ಈ ಸಂದರ್ಭದಲ್ಲಿ ಸರ್ಕಾರದ ಪರ ವಿಜಯಕುಮಾರ್ ಅವರು ವಾದ ಮಂಡಿಸಿ, ‘ಈಗಾಗಲೇ ಸಿನಿಮಾ ರಿಲೀಸ್ ಆಗಿದೆ. ಪ್ರದರ್ಶನವನ್ನೂ ಕಾಣುತ್ತಿದೆ. ಹಾಗಾಗಿ ಅರ್ಜಿ ವಿಚಾರಣೆಯ ಮಾನ್ಯತೆ ಕಳೆದುಕೊಂಡಿದೆ’ ಎಂದು ವಾದ ಮಂಡಿಸಿದರು. ಈ ವಾದವನ್ನು ಆಲಿಸಿದ ಪೀಠ ಅರ್ಜಿಯನ್ನು ವಜಾ ಮಾಡಿದೆ.