Tag: high court

  • ಎಸಿಬಿ ರದ್ದು – ಹೈ ಆದೇಶಕ್ಕೆ ತಡೆ ಕೋರಿ ಸುಪ್ರೀಂನಲ್ಲಿ ಅರ್ಜಿ

    ಎಸಿಬಿ ರದ್ದು – ಹೈ ಆದೇಶಕ್ಕೆ ತಡೆ ಕೋರಿ ಸುಪ್ರೀಂನಲ್ಲಿ ಅರ್ಜಿ

    ನವದೆಹಲಿ: ಭ್ರಷ್ಟಾಚಾರ ನಿಗ್ರಹ ದಳವನ್ನು(ಎಸಿಬಿ) ರದ್ದುಗೊಳಿಸಿದ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಖಾಸಗಿ ಅರ್ಜಿ ಸಲ್ಲಿಸಲಾಗಿದೆ.

    ಕನಕರಾಜು ಎಂಬವರು ಖಾಸಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ವಿಚಾರಣೆಗೆ ಲಿಸ್ಟ್‌ ಮಾಡಲು ಮುಖ್ಯ ನ್ಯಾಯಧೀಶ ರಮಣ ಸೂಚಿಸಿದ್ದಾರೆ.

    ಇಬ್ಬರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಲಂಚ ಕೇಳಿದ್ದ ಆರೋಪ ಮಾಡಿ ಕನಕರಾಜು ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಯುತ್ತಿದ್ದಾಗ ಎಸಿಬಿಯನ್ನು ರದ್ದುಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಎಸಿಬಿ ರದ್ದು ಮಾಡಿರುವುದು ತಪ್ಪು. ಕೇಸುಗಳ ತನಿಖೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಹೈಕೋರ್ಟ್ ತೀರ್ಪಿಗೆ ತಡೆ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.  ಇದನ್ನೂ ಓದಿ: ಮನೆ ಮನೆಗೆ ಸಾವರ್ಕರ್ ಅಭಿಯಾನ ಆರಂಭ – 6 ರೂ.ಗೆ ಪುಸ್ತಕ ಬಿಡುಗಡೆ 

    ಮೇಲ್ಮನವಿ ಅರ್ಜಿಯನ್ನು ಕರ್ನಾಟಕ ಸರ್ಕಾರ ಸಲ್ಲಿಸಿಲ್ಲ. ಈ ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಎಸಿಬಿಯನ್ನು ರದ್ದುಗೊಳಿಸುವುದಾಗಿ ಕರ್ನಾಟಕ ಬಿಜೆಪಿ ಹೇಳಿತ್ತು. ಹೀಗಾಗಿ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುತ್ತಾ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಈಗ ಖಾಸಗಿ ವ್ಯಕ್ತಿ ಸಲ್ಲಿಸಿದ ಕಾರಣ ಎಸಿಬಿಯಲ್ಲಿ ನಡೆಯುತ್ತಿರುವ ಪ್ರಕರಣಗಳ ಭವಿಷ್ಯ ಮುಂದಿನ ಸುಪ್ರೀಂ ಆದೇಶದ ಮೇಲೆ ನಿಂತಿದೆ.

    Live Tv
    [brid partner=56869869 player=32851 video=960834 autoplay=true]

  • ಹೋಟೆಲ್, ರೆಸ್ಟೋರೆಂಟ್‍ಗಳು ಸೇವಾ ಶುಲ್ಕ ವಿಧಿಸಬಹುದು: ದೆಹಲಿ ಹೈಕೋರ್ಟ್

    ಹೋಟೆಲ್, ರೆಸ್ಟೋರೆಂಟ್‍ಗಳು ಸೇವಾ ಶುಲ್ಕ ವಿಧಿಸಬಹುದು: ದೆಹಲಿ ಹೈಕೋರ್ಟ್

    ನವದೆಹಲಿ: ಮುಂದಿನ ವಿಚಾರಣೆವರೆಗೂ ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳು ಸೇವಾ ಶುಲ್ಕ ವಿಧಿಸುವುದನ್ನು ಮುಂದುವರಿಸಬಹುದು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರೆಸ್ಟೋರೆಂಟ್ ಸಂಸ್ಥೆಗಳಿಗೆ ನೋಟಿಸ್ ನೀಡಿ ಈ ಮಹತ್ವದ ಸೂಚನೆ ನೀಡಿದೆ.

    ಕಳೆದ ಜೂನ್‍ನಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯವು, ಬಿಲ್‍ಗಳಲ್ಲಿ ಸೇವಾ ಶುಲ್ಕವನ್ನು ಕಡ್ಡಾಯವಾಗಿ ವಿಧಿಸುವುದನ್ನು ನಿಲ್ಲಿಸುವಂತೆ ಹೋಟೆಲ್, ರೆಸ್ಟೋರೆಂಟ್ ಸಂಘಗಳಿಗೆ ಸೂಚಿಸಿತ್ತು. ಇದು ಕಾನೂನುಬಾಹಿರ ಚಟುವಟಿಕೆ ಎಂದಿದ್ದ ಇಲಾಖೆ ಈ ಪದ್ಧತಿಯನ್ನು ಕೊನೆಗೊಳಿಸಲು ಕಾನೂನು ಚೌಕಟ್ಟನ್ನು ಹೊರತರುವುದಾಗಿಯೂ ಹೇಳಿತ್ತು. ಇದನ್ನೂ ಓದಿ: ಸುಳ್ಳು ಮತ್ತು ದೇಶದ್ರೋಹ ಸುದ್ದಿಗಳ ಪ್ರಕಟ – 8 ಯೂಟ್ಯೂಬ್ ಚಾನಲ್‍ಗಳು ನಿಷೇಧ

    ಈ ಆದೇಶವನ್ನು ಪ್ರಶ್ನೆ ಮಾಡಿ, ರೆಸ್ಟೋರೆಂಟ್ ಮತ್ತು ಹೋಟೆಲ್ ಮಾಲೀಕರು ದೆಹಲಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಸರ್ಕಾರ ನಿರ್ಧಾರವನ್ನು ತಡೆ ಹಿಡಿದಿತ್ತು. ಸದ್ಯ ಈ ಆದೇಶವನ್ನು ಪ್ರಶ್ನೆ ಮಾಡಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು (CCPA) ಮೇಲ್ಮನವಿ ಅರ್ಜಿ ಸಲ್ಲಿಸಿದೆ.

    ನ್ಯಾಯಾಲಯವು ಮುಂದಿನ 10 ದಿನಗಳಲ್ಲಿ ಪ್ರಕರಣದ ವಿಚಾರಣೆ ನಡೆಸಲಿದ್ದು, ಈ ಸಂಬಂಧ ಹೋಟೆಲ್ ರೆಸ್ಟೋರೆಂಟ್ ಸಂಘಗಳಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲಿವರೆಗೂ ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಸೇವಾ ಶುಲ್ಕ ವಿಧಿಸಬಹುದು ಎಂದು ಕೋರ್ಟ್ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಸುಪ್ರೀಂ ಕೋರ್ಟ್ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯು.ಯು.ಲಲಿತ್ ನೇಮಕ

    ಸುಪ್ರೀಂ ಕೋರ್ಟ್ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯು.ಯು.ಲಲಿತ್ ನೇಮಕ

    ನವದೆಹಲಿ: ನ್ಯಾಯಮೂರ್ತಿ ಯು.ಯು.ಲಲಿತ್ (ಉದಯ್ ಉಮೇಶ್ ಲಲಿತ್) ಅವರನ್ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

    ಪ್ರಸ್ತುತ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿರುವ ಎನ್.ವಿ.ರಮಣ ಇದೇ ತಿಂಗಳ ಆಗಸ್ಟ್ 26ರಂದು ನಿವೃತ್ತಿ ಹೊಂದಲಿದ್ದು, ನಂತರ ಆಗಸ್ಟ್ 27ರಿಂದ ಲಲಿತ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಅಲ್ಲದೇ ಲಲಿತ್ ಈ ವರ್ಷದ ನವಂಬರ್ 8 ವರೆಗೆ ಮಾತ್ರವೇ ಮುಖ್ಯನ್ಯಾಯಮೂರ್ತಿಯಾಗಿ ಇರಲಿದ್ದಾರೆ.

    ಪ್ರಸ್ತುತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿರುವ ಲಲಿತ್ 1957 ನವಂಬರ್ 9 ರಲ್ಲಿ ಜನಿಸಿದರು. 1983ರಲ್ಲಿ ವಕೀಲರಾಗಿ ನೇಮಕವಾದರು. ನಂತರ 1985ರ ವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡಿದರು. 1986ರ ಜನವರಿ ವರೆಗೆ ದೆಹಲಿ ಹೈಕೋರ್ಟ್ನಲ್ಲಿ ಕರ್ತವ್ಯ ನಿರ್ವಹಿಸಿದರು. ಆ ನಂತರ 2004ರಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾಗಿ ನೇಮಕಗೊಂಡರು. 10 ವರ್ಷಗಳ ಬಳಿಕ ಅಂದರೆ 2014 ಆಗಸ್ಟ್ 13ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದರು.

    Live Tv
    [brid partner=56869869 player=32851 video=960834 autoplay=true]

  • ಕರೀನಾ ಬರೆದ ಪ್ರೆಗ್ನೆನ್ಸಿ ಬೈಬಲ್ ಪುಸ್ತಕ ಕೇಸು: ಸರ್ಕಾರದ ಮೂಲಕ ದೂರು ದಾಖಲಿಸಿ ಎಂದ ಹೈಕೋರ್ಟ್

    ಕರೀನಾ ಬರೆದ ಪ್ರೆಗ್ನೆನ್ಸಿ ಬೈಬಲ್ ಪುಸ್ತಕ ಕೇಸು: ಸರ್ಕಾರದ ಮೂಲಕ ದೂರು ದಾಖಲಿಸಿ ಎಂದ ಹೈಕೋರ್ಟ್

    ಬಾಲಿವುಡ್ ನಟಿ ಕರೀನಾ ಕಪೂರ್, ಅದಿತಿ ಶಾ ಭೀಮ್ ಜ್ಞಾನಿ ಜೊತೆಯಾಗಿ ಬರೆದಿರುವ ‘ಕರೀನಾ ಕಪೂರ್ ಪೆಗ್ನೆನ್ಸಿ ಬೈಬಲ್’ ಪುಸ್ತಕ ವಿರೋಧಿಸಿ 2021ರಲ್ಲಿ ವಕೀಲ ಕ್ರಿಸ್ಟೋಫರ್ ಆಂಥೋನಿ ಮಧ್ಯಪ್ರದೇಶದ ಓಮತಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಈ ದೂರನ್ನು ಪೊಲೀಸರು ಸ್ವೀಕರಿಸದೇ ಇರುವ ಕಾರಣಕ್ಕಾಗಿ ಅವರು ಜಬಲ್ ಪುರದ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ದೂರು ನೀಡಿದ್ದರು. ಬೈಬಲ್ ಎನ್ನುವ ಪದವನ್ನು ಪ್ರೆಗ್ರೆನ್ಸಿಗೆ ಹೋಲಿಸಿರುವುದಕ್ಕೆ ಕ್ರಿಶ್ಚಿಯನ್ ಸಮುದಾಯದ ಭಾವನೆಗಳಿಗೆ ನೋವನ್ನುಂಟು ಮಾಡಿದೆ ಎಂದು ದೂರಿನಲ್ಲಿ ಬರೆದಿದ್ದರು.

    ಜಬಲ್ ಪುರದ ಮ್ಯಾಜಿಸ್ಟ್ರೇಟ್ ದೂರನ್ನು ಪರಿಗಣಿಸಿ, ಮೇಲ್ನೋಟಕ್ಕೆ ಆಕ್ಷೇಪಾರ್ಹ ಸಂಗತಿಗಳು ಪುಸ್ತಕದಲ್ಲಿ ಕಂಡು ಬರುತ್ತಿಲ್ಲ ಎಂದು, ಯಾವ ರೀತಿಯಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ನೋವನ್ನುಂಟು ಮಾಡುತ್ತದೆ ಎಂದು ದೂರಿನಲ್ಲಿ ನಮೂದಿಸಿಲ್ಲ ಎಂದು ಅರ್ಜಿ ತಿರಸ್ಕರಿಸಿತ್ತು. ಆದರೂ, ಸುಮ್ಮನಿರದ ಆಂಥೋನಿ ಅವರು ಸೆಷನ್ಸ್ ಕೋರ್ಟ್ ಮೆಟ್ಟಿಲು ಏರಿದ್ದರೂ, ಅಲ್ಲಿಯೂ ಕೂಡ ಅರ್ಜಿ ವಜಾಗೊಂಡಿತ್ತು. ಹಾಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ಇದನ್ನೂ ಓದಿ:ಮತ್ತೆ ಟಾಪ್‌ಲೆಸ್ ಅವತಾರದಲ್ಲಿ ಬಂದ ಉರ್ಫಿ ಜಾವೇದ್: ನೆಟ್ಟಿಗರಿಂದ ನಟಿಗೆ ಕ್ಲಾಸ್

    ಆಂಥೋನಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ , ದೂರುದಾರ ರಾಜ್ಯ ಸರ್ಕಾರವನ್ನು ಕಕ್ಷಿದಾರನನ್ನಾಗಿ ಸೇರಿಸದೇ ಇರುವ ಕಾರಣಕ್ಕಾಗಿ, ರಾಜ್ಯ ಸರ್ಕಾರದ ಮೂಲಕ ಈ ಪ್ರಕರಣವನ್ನು ದಾಖಲಿಸಿ ಎಂದು ಆಂಥೋಣಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ನ್ಯಾ.ಡಿ.ಕೆ. ಪಲಿವಾಲ್ ಅವರಿದ್ದ ಏಕಸದಸ್ಯ ಪೀಠವು ಇಂಥದ್ದೊಂದು ಆದೇಶ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಡಿಸಿ ನೀಡಿದ್ದ ತೀರ್ಪು ಎತ್ತಿಹಿಡಿದ ಹೈಕೋರ್ಟ್ – ನಗರಸಭೆಯ ಏಳು ಸದಸ್ಯರು ಅನರ್ಹ

    ಡಿಸಿ ನೀಡಿದ್ದ ತೀರ್ಪು ಎತ್ತಿಹಿಡಿದ ಹೈಕೋರ್ಟ್ – ನಗರಸಭೆಯ ಏಳು ಸದಸ್ಯರು ಅನರ್ಹ

    ಹಾಸನ: ಅರಸೀಕೆರೆ ನಗರಸಭೆಯ ಏಳು ಸದಸ್ಯರನ್ನು ಜಿಲ್ಲಾಧಿಕಾರಿ ಆರ್.ಗಿರೀಶ್ ಅನರ್ಹಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಎಲ್ಲರೂ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು, ಸುದೀರ್ಘ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿ ಜಿಲ್ಲಾಧಿಕಾರಿ ತೀರ್ಪುನ್ನು ಎತ್ತಿ ಹಿಡಿದಿದೆ.

    ಅರಸೀಕೆರೆ ನಗರಸಭೆ ಒಂದನೇ ವಾರ್ಡ್ ಸದಸ್ಯ ಹರ್ಷವರ್ಧನ್ ರಾಜ್, 25ನೇ ವಾರ್ಡ್‍ನ ಸದಸ್ಯ ಬಿ.ಎನ್.ವಿದ್ಯಾಧರ್, 19ನೇ ವಾರ್ಡ್‍ನ ಸದಸ್ಯ ದರ್ಶನ್, 18ನೇ ವಾರ್ಡ್‍ನ ಸದಸ್ಯೆ ಕವಿತಾದೇವಿ, 28ನೇ ವಾರ್ಡ್‍ನ ಸದಸ್ಯೆ ಆಯೇಶಾ ಸಿಕಂದರ್, 9ನೇ ವಾರ್ಡ್‍ನ ಸದಸ್ಯ ಚಂದ್ರಶೇಖರ್ ಜೆಡಿಎಸ್‍ನಿಂದ ಗೆದ್ದಿದ್ದರು. ಆನಂತರದ ಬೆಳವಣಿಗೆಯಲ್ಲಿ ಜೆಡಿಎಸ್‍ನಿಂದ ಬಂಡಾಯವೆದ್ದಿದ್ದರು. ಇದನ್ನೂ ಓದಿ:  ಚೆನ್ನೈನಿಂದ ಚಿಂಗವನಂಗೆ ರೈಲು ಸೇವೆ – ಶಬರಿಮಲೆ ಯಾತ್ರಾರ್ಥಿಗಳಿಗೆ ಬಂಪರ್ ಆಫರ್ 

    ಬಹುಮತವಿಲ್ಲದಿದ್ದರೂ ಮೀಸಲಾತಿ ಆಧಾರದ ಮೇಲೆ ಅಧಿಕಾರ ಹಿಡಿದಿದ್ದ ಬಿಜೆಪಿಗೆ ಆರು ನಗರಸಭೆ ಸದಸ್ಯರು ಬೆಂಬಲ ನೀಡಿದ್ದರು. ಇವರ ಜೊತೆಗೆ 15ನೇ ವಾರ್ಡ್‍ನಿಂದ ಪಕ್ಷೇತರ ಸದಸ್ಯನಾಗಿ ಆಯ್ಕೆಯಾಗಿದ್ದ ಪುಟ್ಟಸ್ವಾಮಿ ಮೊದಲು ಜೆಡಿಎಸ್‍ಗೆ ಬೆಂಬಲ ಘೋಷಿಸಿದ್ದರು. ನಂತರ ಜೆಡಿಎಸ್‍ಗೆ ನೀಡಿದ್ದ ಬೆಂಬಲ ವಾಪಸ್ ಪಡೆದು ಆರು ಮಂದಿ ಸದಸ್ಯರ ಜೊತೆ ಪುಟ್ಟಸ್ವಾಮಿ ಕೂಡ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದರು.

    ಏಳು ಮಂದಿ ಸದಸ್ಯರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು, ಇವರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಅರಸೀಕೆರೆ ಜೆಡಿಎಸ್ ತಾಲೂಕು ಅಧ್ಯಕ್ಷ ಬಿಳಿಚೌಡಯ್ಯ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಡಿಸಿ ಆರ್.ಗಿರೀಶ್ ಏಳು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ತೀರ್ಪು ನೀಡಿದ್ದರು. ಇದನ್ನೂ ಓದಿ:  ಸಿಬ್ಬಂದಿಗೆ ಮೆಣಸಿನ ಪುಡಿ ಎರಚಿ ಬೆಲೆ ಬಾಳುವ ನೆಕ್ಲೇಸ್ ಕದ್ದ ಖತರ್ನಾಕ್ ಅಪ್ಪ-ಮಗಳು 

    ಜಿಲ್ಲಾಧಿಕಾರಿ ತೀರ್ಪನ್ನು ಪ್ರಶ್ನಿಸಿ ಏಳು ಮಂದಿ ನಗರಸಭೆ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಇಂದು ಅರ್ಜಿ ವಜಾ ಮಾಡಿ ನಗರಸಭೆ ಸದಸ್ಯರ ಅನರ್ಹಗೊಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮಲಯಾಳಂ ಖ್ಯಾತನಟ ಶ್ರೀಜಿತ್ ಮಾನಸಿಕ ಅಸ್ವಸ್ಥ: ಷರತ್ತುಬದ್ಧ ಜಾಮೀನು ಮಂಜೂರು

    ಮಲಯಾಳಂ ಖ್ಯಾತನಟ ಶ್ರೀಜಿತ್ ಮಾನಸಿಕ ಅಸ್ವಸ್ಥ: ಷರತ್ತುಬದ್ಧ ಜಾಮೀನು ಮಂಜೂರು

    ಜುಲೈ 4ರಂದು ಕೇರಳದ ಅಯ್ಯಂತೊಳೆ ಎಸ್.ಎನ್. ಪಾರ್ಕ್ ನಲ್ಲಿ ಆಡುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಗುಪ್ತಾಂಗ ತೋರಿಸಿದ್ದ ಎನ್ನುವ ಕಾರಣಕ್ಕಾಗಿ ಬಂಧಿತನಾಗಿದ್ದ ಮಲಯಾಳಂ ಖ್ಯಾತನಟ ಶ್ರೀಜಿತ್ ರವಿಗೆ ಕೇರಳ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಕುಟುಂಬಕ್ಕೆ ತಾಕೀತು ಮಾಡಿದೆ.

    ಅಂದು ಎಸ್.ಎನ್ ಪಾರ್ಕನಲ್ಲಿಅಪ್ರಾಪ್ತ ಬಾಲಕಿಯರು ಆಟವಾಡುತ್ತಿದ್ದರು. ಸಮೀಪದಲ್ಲೇ ಕಾರಿನಲ್ಲಿ ಕೂತಿದ್ದ ಶ್ರೀಜಿತ್ ರವಿ, ಬಾಲಕಿಯರನ್ನು ಕಂಡು ಕಾರಿಳಿದು ಬಂದಿದ್ದಾರಂತೆ. ನಂತರ ಪ್ಯಾಂಟ್ ಬಿಚ್ಚಿ ಗುಪ್ತಾಂಗ ತೋರಿಸಿದ್ದಾರೆ ಎಂದು ಬಾಲಕಿಯರ ಪಾಲಕರು ತ್ರಿಶೋರ್ ಪಶ್ಚಿಮ ವಿಭಾಗದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರನ್ನು ಆಧರಿಸಿ, ಶ್ರೀಜಿತ್ ಅವರನ್ನು ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿತ್ತು. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಜಿತ್ ಪರ ವಕೀಲರು ನ್ಯಾಯಾಲಯದ ಮುಂದೆ ತಮ್ಮ ಕಕ್ಷಿದಾರ ಆರು ವರ್ಷಗಳಿಂದ ವರ್ತನೆಯ ಅಸ್ವಸ್ಥತೆಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಪ್ರಜ್ಞಾಪೂರ್ವಕವಾಗಿ ಆದದ್ದು ಅಲ್ಲ ಎಂದು ಮನವಿ ಮಾಡಿಕೊಂಡರು. ವಕೀಲರ ವಾದವನ್ನು ಪರಿಗಣಿಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಭರವಸೆಯನ್ನು ಅಫಿಡವಿಟ್ ಮೂಲಕ ಪತ್ನಿ ಮತ್ತು ತಂದೆ ಸಲ್ಲಿಸಬೇಕೆಂದು ಹೇಳಿದೆ. ಮತ್ತೆ ಇಂತಹ ಪ್ರಕರಣ ಅವರಿಂದ ಮರುಕಳಿಸಿದರೆ, ಜಾಮೀನು ರದ್ದು ಮಾಡುವುದಾಗಿಯೂ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಗರ್ಭಪಾತ ಬೇಡ, ಮಗುವಿಗೆ ಜನ್ಮ ನೀಡಿ ದತ್ತು ಕೊಡಿ – ಅವಿವಾಹಿತ ಯುವತಿಗೆ ದೆಹಲಿ ಹೈಕೋರ್ಟ್ ಸಲಹೆ

    ಗರ್ಭಪಾತ ಬೇಡ, ಮಗುವಿಗೆ ಜನ್ಮ ನೀಡಿ ದತ್ತು ಕೊಡಿ – ಅವಿವಾಹಿತ ಯುವತಿಗೆ ದೆಹಲಿ ಹೈಕೋರ್ಟ್ ಸಲಹೆ

    ನವದೆಹಲಿ: 23 ವಾರಗಳ ಭ್ರೂಣದ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ 25 ವರ್ಷದ ಅವಿವಾಹಿತ ಯುವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಗರ್ಭಪಾತ ಮಾಡಿಸದಂತೆ ಸೂಚಿಸಿದ್ದು, ಮಗುವಿಗೆ ಜನ್ಮ ನೀಡಿ, ದತ್ತು ನೀಡುವಂತೆ ಸಲಹೆ ನೀಡಿದೆ.

    ಅರ್ಜಿ ವಿಚಾರಣೆ ನಡೆದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ಗರ್ಭಪಾತಕ್ಕೆ ನಿರಾಕರಿಸಿದರು. ಈ ಹಂತದಲ್ಲಿ ಗರ್ಭಪಾತ ಮಾಡುವುದು ಮಗುವನ್ನು ಹತ್ಯೆ ಮಾಡಿದಂತೆ. ಮಕ್ಕಳನ್ನು ದತ್ತು ಪಡೆಯಲು ದೊಡ್ಡ ಸರದಿಯೇ ಇದ್ದು, ಮಗುವಿಗೆ ಜನ್ಮ ನೀಡಿ ದತ್ತು ನೀಡಬಹುದಲ್ಲವೇ ಎಂದು ಕೋರ್ಟ್ ಅರ್ಜಿದಾರರಿಗೆ ಕೇಳಿದರು‌. ಇದನ್ನೂ ಓದಿ: ಅಂದು ಕಣ್ಸನ್ನೆ, ಇಂದು ಮಾದಕ ಫೋಟೋ ಹರಿಬಿಟ್ಟು ವೈರಲ್ ಆದ ಪ್ರಿಯಾ ವಾರಿಯರ್

    court order law

    ಇದಕ್ಕೆ ಪ್ರತಿಕ್ರಿಯಿಸಿದ ಯುವತಿಯ ಪರ ವಕೀಲರು, ವೈದ್ಯಕೀಯ ನಿಯಮಗಳ ಪ್ರಕಾರ 24 ವಾರಗಳು ಮೀರದ ಭ್ರೂಣದ ಗರ್ಭಪಾತ ಮಾಡಬಹುದು. ಯುವತಿಗೆ 23 ವಾರ 4 ದಿನಗಳು ತುಂಬಿದೆ. ಹೀಗಾಗಿ ಗರ್ಭಪಾತಕ್ಕೆ ಅವಕಾಶಗಳಿದೆ. ಯುವತಿ ಗರ್ಭಿಣಿಯಾಗಿ ಮುಂದುವರಿಯುವುದು ಅವಳ ಜೀವಕ್ಕೆ ಅಪಾಯ ತಂದೊಡ್ಡಬಹುದು ಅಥಾವ ದೈಹಿಕವಾಗಿ, ಮಾನಸಿಕವಾಗಿ ಗಾಯಗೊಳಿಸಬಹುದು ಎಂದರು.

    ಇದೇ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಮುಖ್ಯ ನ್ಯಾಯಮೂರ್ತಿ ತಮ್ಮ ಅಭಿಪ್ರಾಯ ತಿಳಿಸುವಂತೆ ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಬಲ್, ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಈ ಹಂತದಲ್ಲಿ ಮಗುವಿಗೆ ಗರ್ಭಪಾತ ಮಾಡಬಾರದು ಹೇಳಿದರು.

    ಬಳಿಕ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ನಾವು ಮಗುವನ್ನು ಬೆಳೆಸುವಂತೆ ಒತ್ತಾಯಿಸುತ್ತಿಲ್ಲ. ಎಲ್ಲವನ್ನೂ ಸರ್ಕಾರ ಅಥವಾ ಆಸ್ಪತ್ರೆ ನೋಡಿಕೊಳ್ಳುತ್ತದೆ. ಮಹಿಳೆಯ ಗುರುತನ್ನು ಬಹಿರಂಗಪಡಿಸಲಾಗುವುದಿಲ್ಲ ಹೀಗಾಗಿ ಯೋಚಿಸಿ ಪ್ರತಿಕ್ರಿಯಿಸುವಂತೆ ಯುವತಿ ಪರ ವಕೀಲರಗೆ ಕೋರ್ಟ್ ಸೂಚನೆ ನೀಡಿದ್ದು ಭೋಜನ ವಿರಾಮದ ಬಳಿಕ ವಿಚಾರಣೆ ಪುನಾರಂಭಗೊಳ್ಳಲಿದೆ.

    Live Tv
    [brid partner=56869869 player=32851 video=960834 autoplay=true]

  • ತಾಯಿಯಾದವಳು ಮಗು ಮತ್ತು ತನ್ನ ವೃತ್ತಿಜೀವನದ ಮಧ್ಯೆ ಆಯ್ಕೆಯನ್ನು ಕೇಳಬಾರದು: ಹೈಕೋರ್ಟ್‌

    ತಾಯಿಯಾದವಳು ಮಗು ಮತ್ತು ತನ್ನ ವೃತ್ತಿಜೀವನದ ಮಧ್ಯೆ ಆಯ್ಕೆಯನ್ನು ಕೇಳಬಾರದು: ಹೈಕೋರ್ಟ್‌

    ಮುಂಬೈ: ತಾಯಿಯಾದವಳು ಮಗು ಮತ್ತು ತನ್ನ ವೃತ್ತಿಜೀವನದ ಮಧ್ಯೆ ಆಯ್ಕೆಯನ್ನು ಕೇಳಬಾರದು ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

    ಮಗಳೊಂದಿಗೆ ಪೋಲೆಂಡ್‌ಗೆ ಸ್ಥಳಾಂತರಗೊಳ್ಳಲು ಅನುಮತಿ ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವೇಳೆ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರ ಏಕಸದಸ್ಯ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

    ಪುಣೆಯ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆಗೆ ಕಂಪನಿಯು ಪೋಲೆಂಡ್‌ನಲ್ಲಿ ಪ್ರಾಜೆಕ್ಟ್ ಆಫರ್ ಮಾಡಿತ್ತು. ಈ ಕಾರಣಕ್ಕೆ 2015ರಿಂದ ಪತಿಯಿಂದ ದೂರವಿರುವ ಮಹಿಳೆ ತನ್ನ 9 ವರ್ಷದ ಪುತ್ರಿ ಜೊತೆ ಪೋಲೆಂಡ್‌ಗೆ ಹೋಗಲು ಅನುಮತಿ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

    ಈ ಅರ್ಜಿಗೆ ಪತಿ, ತಂದೆ-ಮಗಳ ಬಾಂಧವ್ಯವನ್ನು ಮುರಿಯುವ ಏಕೈಕ ಉದ್ದೇಶದಿಂದ ಪ್ರೊಜೆಕ್ಟ್‌ ಹೆಸರನ್ನು ಹೇಳಿಕೊಂಡು ಪೋಲೆಂಡ್‌ಗೆ ಹೋಗುತ್ತಿದ್ದಾಳೆ. ಮಗಳು ತನ್ನಿಂದ ದೂರವಾದರೆ ಮತ್ತೆ ಆಕೆಯನ್ನು ನೋಡಲು ಸಾಧ್ಯವಿಲ್ಲ. ವೃತ್ತಿ ಜೀವನದ ಕಾರಣ ನೀಡಿ ಮಗಳನ್ನು ತಂದೆಯಿಂದ ಬೇರೆ ಮಾಡುವುದು ಸರಿಯಲ್ಲ. ಅಷ್ಟೇ ಅಲ್ಲದೇ ನೆರೆಯ ದೇಶಗಳಾದ ಉಕ್ರೇನ್ ಮತ್ತು ರಷ್ಯಾದಿಂದಾಗಿ ಪೋಲೆಂಡ್‌ನಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ಉಲ್ಲೇಖಿಸಿ ಅನುಮತಿ ನೀಡಬಾರದು ಎಂದು ವಾದಿಸಿದ್ದರು. ಇದನ್ನೂ ಓದಿ: ಸರ್ಕಾರಿ ನೌಕರರು ಕಚೇರಿಗಳಲ್ಲಿ ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ- ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

    ಕೋರ್ಟ್‌ ಹೇಳಿದ್ದೇನು?
    ಇಲ್ಲಿಯವರೆಗೆ ಮಗಳನ್ನು ತಾಯಿ ಏಕಾಂಗಿಯಾಗಿ ಬೆಳೆಸಿದ್ದಾರೆ. ಬಾಲಕಿಯ ವಯಸ್ಸನ್ನು ಪರಿಗಣಿಸಿ ಆಕೆ ತನ್ನ ತಾಯಿಯೊಂದಿಗೆ ಹೋಗುವುದು ಮುಖ್ಯ ಎಂದು ಹೇಳಿತು. ಅಷ್ಟೇ ಅಲ್ಲದೇ ಮಗಳ ಜೊತೆ ವರ್ಚುಯಲ್‌ ಆಗಿ ಮಾತನಾಡಲು ತಂದೆಗೆ ಅನುಮತಿ ನೀಡಬೇಕು. ತಂದೆ ಮಗಳ ಭೇಟಿಗಾಗಿ ಪ್ರತಿ ರಜಾ ಸಮಯದಲ್ಲಿ ತಾಯಿ ಭಾರತಕ್ಕೆ ಮರಳಬೇಕು ಎಂದು ಸೂಚಿಸಿತು. ಈ ಸಂದರ್ಭದಲ್ಲಿ ತಾಯಿಯಾದವಳು ಮಗು ಮತ್ತು ತನ್ನ ವೃತ್ತಿಜೀವನದ ನಡುವೆ ಮಧ್ಯೆ ಆಯ್ಕೆಯನ್ನು ಕೇಳಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

     

     

    ಮಗಳು ಹೊರ ದೇಶಕ್ಕೆ ಹೋದರೆ ಆತಂಕಕ್ಕೆ ಒಳಗಾಗುತ್ತಾಳೆ ಎಂಬ ತಂದೆ ವಾದವನ್ನು ಒಪ್ಪಿಕೊಳ್ಳಲು ನ್ಯಾಯಾಲಯ ನಿರಾಕರಿಸಿತು. ಮಕ್ಕಳು ತಮ್ಮ ಹೆತ್ತವರೊಂದಿಗೆ ಸ್ಥಳಾಂತರಗೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಕೆಲಸ ಮಾಡುವ ಮಹಿಳೆ ತನ್ನ ಜವಾಬ್ದಾರಿಯ ಕಾರಣದಿಂದ ತನ್ನ ಮಗುವನ್ನು ಡೇ-ಕೇರ್ ಸೌಲಭ್ಯದಲ್ಲಿ ಬಿಡುವುದು ಇಂದು ಸಾಮಾನ್ಯವಾಗಿದೆ ಎಂದು ಹೇಳಿತು.

    ಈ ಕಾರಣಕ್ಕಾಗಿ ಮಹಿಳೆಯ ಉದ್ಯೋಗ ಅವಕಾಶವನ್ನು ವಂಚಿತಗೊಳಿಸಲು ಕೋರ್ಟ್‌ ಬಯಸುವುದಿಲ್ಲ. ಆದರೆ ಮಗುವಿನ ಯೋಗಕ್ಷೇಮ ಸಂಬಂಧ ತಾಯಿ ಮತ್ತು ತಂದೆ ಇಬ್ಬರು ಹಿತಾಸಕ್ತಿಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿತು.

    ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಂದೆಯ ಪರ ವಕೀಲರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುಂದಿನ ವಾರ ಸೂಕ್ತ ಪೀಠದಲ್ಲಿ ಹಿಜಬ್ ಅರ್ಜಿ ವಿಚಾರಣೆ – ಸುಪ್ರೀಂಕೋರ್ಟ್

    ಮುಂದಿನ ವಾರ ಸೂಕ್ತ ಪೀಠದಲ್ಲಿ ಹಿಜಬ್ ಅರ್ಜಿ ವಿಚಾರಣೆ – ಸುಪ್ರೀಂಕೋರ್ಟ್

    ನವದೆಹಲಿ: ಶಾಲೆ, ಕಾಲೇಜುಗಳ ತರಗತಿಯಲ್ಲಿ ಹಿಜಬ್ ನಿಷೇಧಿಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಮುಂದಿನ ವಾರ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹೇಳಿದ್ದಾರೆ.

    ಇಂದು ಕಲಾಪ ಆರಂಭದಲ್ಲಿ ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್, ವಿಚಾರಣೆ ವಿಳಂಬವಾಗುತ್ತಿರುವುದನ್ನು ಪ್ರಸ್ತಾಪಿಸಿದರು. ಹೆಣ್ಣು ಮಕ್ಕಳು ಶಿಕ್ಷಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮುಂದಿನ ವಾರ ಸೂಕ್ತ ಪೀಠದಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸಲ್ಮಾನ್ ಖಾನ್ ಕೊಲ್ಲದೇ ಬಿಡುವುದಿಲ್ಲ: ಮತ್ತೆ ಲಾರೆನ್ಸ್ ಟೀಮ್ ನಿಂದ ಬೆದರಿಕೆ

    HIJAB 2

    ಮಾರ್ಚ್‍ನಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿತ್ತು. ಮೂರ್ನಾಲ್ಕು ಬಾರಿ ತುರ್ತು ವಿಚಾರಣೆಗೆ ಮನವಿ ಮಾಡಿದರು. ಕೋರ್ಟ್ ವಿಚಾರಣೆಗೆ ನಿರಾಕರಿಸಿತ್ತು. ಸುಪ್ರೀಂಕೋರ್ಟ್ ಬೇಸಿಗೆ ರಜೆ ಹಿನ್ನೆಲೆ ಅರ್ಜಿ ವಿಚಾರಣೆ ಮತ್ತಷ್ಟು ವಿಳಂಬವಾಗಿತ್ತು. ಇದನ್ನೂ ಓದಿ: ಜ್ಯೋತಿಷಿ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿದ ಪ್ರಕರಣ- ಪ್ರಮೋದ್ ಪಿಎ ಸೇರಿದಂತೆ ನಾಲ್ವರ ಬಂಧನ

    ಶಾಲೆ ಕಾಲೇಜುಗಳಲ್ಲಿ ಹಿಜಬ್ ಧರಿಸುವಂತಿಲ್ಲ ಎಂದು ಈ ಹಿಂದೆ ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ಹಿಜಬ್ ಇಸ್ಲಾಂ ಧರ್ಮದ ಅಗತ್ಯ ಆಚರಣೆಗಳ ಭಾಗವಲ್ಲ ಎಂದು ಹೇಳಿತ್ತು. ಈ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸೇರಿದಂತೆ ಹಲವು ಮಂದಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಳಿ ವಿವಾದ: ಆ.6ರಂದು ಹಾಜರಾಗುವಂತೆ ಲೀನಾಗೆ ದೆಹಲಿ ಹೈಕೋರ್ಟ್ ಸಮನ್ಸ್

    ಕಾಳಿ ವಿವಾದ: ಆ.6ರಂದು ಹಾಜರಾಗುವಂತೆ ಲೀನಾಗೆ ದೆಹಲಿ ಹೈಕೋರ್ಟ್ ಸಮನ್ಸ್

    ಮಿಳು ಸಿನಿಮಾ ನಿರ್ದೇಶಕಿ ಲೀಲಾ ಮಣಿಮೇಕಲೈ ಅವರ ಕಾಳಿ ಚಿತ್ರವನ್ನು ತಡೆಕೋರಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಲೀನಾ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಅಲ್ಲದೇ, ಆ.6 ರಂದು ಕೋರ್ಟ್ ಮುಂದೆ ಹಾಜರಾಗುವಂತೆ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಮೂರ್ತಿ ಅಭಿಷೇಕ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಕಾಳಿ ಚಿತ್ರಕ್ಕೆ ತಡೆಯಾಜ್ಞೆ ನೀಡಲು ಸದ್ಯ ಆಗದು, ಮೊದಲು ಪ್ರತಿವಾದಿ ಹೇಳಿಕೆ ನೀಡಬೇಕು. ಪ್ರತಿವಾದಿಯ ಹೇಳಿಗೆ ಅಗತ್ಯವಿರುವ ಕಾರಣಕ್ಕಾಗಿ ಸಮನ್ಸ್ ನೀಡಿದೆ.

    ಕಾಳಿ ಕೈಲಿ ಸಿಗರೇಟು ಮತ್ತು ಎಲ್ಜಿಬಿಟಿಕ್ಯೂ ಧ್ವಜ ನೀಡಿ ಅವಮಾನಿಸಿದ್ದಾರೆ ಎಂದು ಲೀನಾ ಮೇಲೆ ಹಲವು ದೂರುಗಳು ದಾಖಲಾಗಿದ್ದವು. ಕೆಲ ಕಡೆ ಪ್ರತಿಭಟನೆಯನ್ನು ಕೂಡ ಮಾಡಲಾಯಿತು. ಆದರೂ, ಲೀನಾ ಸುಮ್ಮನಾಗಲಿಲ್ಲ. ಶಿವ ಪಾರ್ವತಿ ಕೈಲಿ ಸಿಗರೇಟು ನೀಡಿ ಮತ್ತೆ ಅವಮಾನಿಸಿದರು. ಹಾಗಾಗಿ ಲೀನಾ ವಿರುದ್ಧ ಪ್ರತಿಭಟನೆ ಜೋರಾಗಿದೆ. ಈ ಚಿತ್ರವು ಪ್ರದರ್ಶನ ಆಗದಂತೆ ತಡೆಯಬೇಕೆಂದು ಹಲವು ಕಡೆ ದೂರು ಕೂಡ ದಾಖಲಾಗಿವೆ. ಇದನ್ನೂ ಓದಿ:ಯಂಗ್ ಅಂಡ್ ಎನರ್ಜಿಟಿಕ್ ಸ್ಟಾರ್ ಶಿವಣ್ಣನ ಹುಟ್ಟುಹಬ್ಬಕ್ಕೆ ಶುಭಕೋರಿದ ರಾಜಕೀಯ ಗಣ್ಯರು

    ಭಾರತದಾದ್ಯಂತ ಅನೇಕ ಕಡೆ ಲೀನಾ ಮೇಲೆ ದೂರುಗಳು ದಾಖಲಾದರು, ಲೀನಾ ಮಾತ್ರ ಸುಮ್ಮನೆ ಕುಳಿತಿಲ್ಲ. ಮತ್ತೆ ಮತ್ತೆ ಕಾಳಿ ಮತ್ತು ಹಿಂದೂ ದೇವರಗಳನ್ನು ಇಟ್ಟುಕೊಂಡು ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಕೆಲಸವನ್ನು ಮಾಡುತ್ತಲೇ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]