Tag: high court

  • ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಸನ್ನ ಬಾಲಚಂದ್ರ ವರಾಳೆ ಪ್ರಮಾಣ ವಚನ ಸ್ವೀಕಾರ

    ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಸನ್ನ ಬಾಲಚಂದ್ರ ವರಾಳೆ ಪ್ರಮಾಣ ವಚನ ಸ್ವೀಕಾರ

    ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯದ (High Court) ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಸ‌ನ್ನ ಬಾಲಚಂದ್ರ ವರಳೆ (Prasanna balachandra Varale) ಅವರು ಪ್ರಮಾಣ ವಚನವನ್ನು ಸ್ವೀಕರಿಸಿದರು.

    ರಾಜಭವನದ ಗಾಜಿನ‌ಮನೆಯಲ್ಲಿ ಶನಿವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಸರಳ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪದವಿಯ ಅಧಿಕಾರ ಪ್ರಮಾಣವಚನವನ್ನು ಬೋಧಿಸಿದರು. ಇದನ್ನೂ ಓದಿ: ಮುರುಘಾ ಮಠದಲ್ಲಿ ಮಗು ಪತ್ತೆ – ಮಗುವಿನ ಹಿನ್ನೆಲೆ ಬಗ್ಗೆ ರೋಚಕ ಟ್ವಿಸ್ಟ್

    ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಸಚಿವ ಗೋವಿಂದ್ ಕಾರಜೋಳ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು, ಕುಟುಂಬ ವರ್ಗದವರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಮಾರಂಭದ ಸ್ವಾಗತವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾ ಅವರು ನೆರವೇರಿಸಿದರು. ಇದನ್ನೂ ಓದಿ: ಬೆಂಗಳೂರು ಹೋಟೆಲ್‌ ಮಾಲೀಕರಿಗೆ ಗುಡ್‌ನ್ಯೂಸ್‌ – ಮಧ್ಯರಾತ್ರಿ 1 ಗಂಟೆವರೆಗೂ ಹೋಟೆಲ್‌ ತೆರೆಯಲು ಅನುಮತಿ

    Live Tv
    [brid partner=56869869 player=32851 video=960834 autoplay=true]

  • ಓಲಾ, ಊಬರ್‌ಗೆ ಬಿಗ್‌ ರಿಲೀಫ್‌ – ಸಾರಿಗೆ ಇಲಾಖೆ ಆದೇಶಕ್ಕೆ ಕೋರ್ಟ್‌ ಮಧ್ಯಂತರ ತಡೆ

    ಓಲಾ, ಊಬರ್‌ಗೆ ಬಿಗ್‌ ರಿಲೀಫ್‌ – ಸಾರಿಗೆ ಇಲಾಖೆ ಆದೇಶಕ್ಕೆ ಕೋರ್ಟ್‌ ಮಧ್ಯಂತರ ತಡೆ

    ಬೆಂಗಳೂರು: ಓಲಾ (Ola), ಊಬರ್‌ (Uber) ಓಡಿಸಬಾರದು ಎಂದು ಸರ್ಕಾರ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್‌ (Karnataka High Court) ಮಧ್ಯಂತರ ಆದೇಶ ಮಾಡಿದೆ.

    ಓಲಾ, ಊಬರ್‌ ಸೇವೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿತು. ನಿನ್ನೆ ನಡೆದ ಸಭೆ ಕುರಿತು ಮಾಹಿತಿ ಪಡೆದ ನ್ಯಾಯಮೂರ್ತಿಗಳು, ಓಲಾ ಹಾಗೂ ಊಬರ್‌ ಓಡಿಸದಂತೆ ಸಾರಿಗೆ ಇಲಾಖೆ ಕೈಗೊಂಡಿದ್ದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಐಷಾರಾಮಿ ವಾಹನದಲ್ಲಿ ಸರ್ವೀಸ್ ಚಾರ್ಜ್ ತೆಗದುಕೊಳ್ತಾ ಇದ್ದೇವೆ – ಆಟೋ ರಿಕ್ಷಾ ಐಷಾರಾಮಿನಾ? ಓಲಾ, ಉಬರ್‌ಗೆ ಹೈಕೋರ್ಟ್ ಪ್ರಶ್ನೆ

    karnataka highcourt

    ಆಟೋಗೆ ಮಾತ್ರ ಅನುಮತಿ ಕೇಳುತ್ತಿದ್ದೀರಿ ಅಲ್ವಾ? ಕೇಂದ್ರ ಸರ್ಕಾರದ ನಿಯಮಾವಳಿ ಇದೆ. ಈ ನಿಯಮಾವಳಿ ಬಗ್ಗೆ ನಿನ್ನೆ ಯಾಕೆ ಹೇಳಿಲ್ಲ? ಸಭೆಯ ತೀರ್ಮಾನ ಏನು ಎಂದು ಪೀಠ ಪ್ರಶ್ನಿಸಿತು. ಕೆಲವೊಂದು ವಿಚಾರ ಪ್ರಸ್ತಾಪಕ್ಕೆ ಕಾಲಾವಕಾಶ ನೀಡುವಂತೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಮನವಿ ಮಾಡಿದರು. 12 ದಿನ ಕಾಲಾವಕಾಶ ಕಲ್ಪಿಸುವಂತೆ ಕೋರಿದರು. ಇದಕ್ಕೆ ಸಮ್ಮತಿಸಿದ ಪೀಠ, ಅಲ್ಲಿಯವರೆಗೂ ಯಾವುದೇ ಕ್ರಮಕೈಗೊಳ್ಳುವ ಹಾಗೇ ಇಲ್ಲ ಎಂದು ತಿಳಿಸಿತು.

    ಸಾರಿಗೆ ಇಲಾಖೆ ಕ್ರಮವನ್ನು ಪ್ರಶ್ನಿಸಿದ ಪೀಠ, ಸರ್ಕಾರ ಯಾವುದೇ ಬಲವಂತದ ಕ್ರಮಕೈಗೊಳ್ಳುವಂತೆ ಇಲ್ಲ. ಓಲಾ, ಊಬರ್ ಕಂಪನಿ ಅನುಕೂಲಕರ ದರವನ್ನು ವಿಧಿಸಬೇಕು. ಪರವಾನಗಿ ಕಾಲಾವಕಾಶ ವಿಸ್ತರಿಸಬೇಕು ಎಂದು ಆದೇಶ ಹೊರಡಿಸಿತು. ಇದನ್ನೂ ಓದಿ: ಸರ್ಕಾರದಿಂದಲೇ ಆ್ಯಪ್ ಮಾಡಿ ಆಟೋ ಸೇವೆಗೆ ಅವಕಾಶ: ಶ್ರೀರಾಮುಲು

    2021ರಲ್ಲಿ ಸಾರಿಗೆ ಇಲಾಖೆ ನಿಗದಿಪಡಿಸಿದ ದರವನ್ನು ಪಾಲಿಸಬೇಕು. ಹೆಚ್ಚುವರಿ ಸೇವೆಯ ಚಾರ್ಜ್ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು. 10 ರಿಂದ 15 ದಿನದ ಒಳಗೆ ಸರ್ಕಾರ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದ ನ್ಯಾಯಾಲಯ, ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ.

    Live Tv
    [brid partner=56869869 player=32851 video=960834 autoplay=true]

  • ಐಷಾರಾಮಿ ವಾಹನದಲ್ಲಿ ಸರ್ವೀಸ್ ಚಾರ್ಜ್ ತೆಗದುಕೊಳ್ತಾ ಇದ್ದೇವೆ – ಆಟೋ ರಿಕ್ಷಾ ಐಷಾರಾಮಿನಾ? ಓಲಾ, ಉಬರ್‌ಗೆ ಹೈಕೋರ್ಟ್ ಪ್ರಶ್ನೆ

    ಐಷಾರಾಮಿ ವಾಹನದಲ್ಲಿ ಸರ್ವೀಸ್ ಚಾರ್ಜ್ ತೆಗದುಕೊಳ್ತಾ ಇದ್ದೇವೆ – ಆಟೋ ರಿಕ್ಷಾ ಐಷಾರಾಮಿನಾ? ಓಲಾ, ಉಬರ್‌ಗೆ ಹೈಕೋರ್ಟ್ ಪ್ರಶ್ನೆ

    ಬೆಂಗಳೂರು: ಆ್ಯಪ್ (App) ಆಧಾರಿತ ಆಟೋ (Auto) ಸೇವೆ ರದ್ದು ಮಾಡಿದ ಸರ್ಕಾರದ ಆದೇಶ ಪ್ರಶ್ನಿಸಿ ಓಲಾ (Ola), ಉಬರ್ (Uber) ಕಂಪನಿಗಳು ಹೈಕೋರ್ಟ್ (High Court) ಮೊರೆ ಹೋಗಿವೆ.

    karnataka highcourt

    ಸಾರಿಗೆ ಇಲಾಖೆ ಕ್ರಮ ಸರಿ ಇಲ್ಲ, ನಾವು ಯಾವುದೇ ರೀತಿಯಲ್ಲಿ ಹಣವನ್ನು ಹೆಚ್ಚಿಗೆ ಪಡೆಯುತ್ತಿಲ್ಲ. ನಮ್ಮ ಕಂಪನಿಯಿಂದ ಐಷಾರಾಮಿ ಕ್ಯಾಬ್ ಓಡಿಸಲಾಗುತ್ತಿದೆ. ಇದಕ್ಕೆ ನಾವು ಸರ್ವೀಸ್ ಚಾರ್ಜ್ ತೆಗದುಕೊಳ್ತಾ ಇದ್ದೇವೆ ಅಷ್ಟೇ. ಆದ್ರೇ ಅದನ್ನು ತಪ್ಪು ಅಂತ ಸಾರಿಗೆ ಇಲಾಖೆ ವಾದಿಸ್ತಾ ಇದೆ. ನಾವು ಕೂಡ ಫುಡ್ ಡೆಲಿವರಿ ಆ್ಯಪ್‍ಗಳಂತೆ ಸಂದರ್ಭಕ್ಕೆ ಅನುಸಾರವಾಗಿ, ಒತ್ತಡ, ಬೇಡಿಕೆ ಹೆಚ್ಚಿದ್ದಾಗ ಕೆಲವು ಬದಲಾವಣೆ ಮಾಡ್ತೀವಿ ಎಂದು ಕೋರ್ಟ್‍ನಲ್ಲಿ ವಾದ ಮಂಡಿಸಿವೆ. ಸಾರಿಗೆ ಇಲಾಖೆ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ನ್ಯಾಯಾಲಯವನ್ನು ಕೋರಿವೆ. ಇದನ್ನೂ ಓದಿ: ಶಾಸಕ ಉದಯ್ ಗರುಡಾಚಾರ್‌ಗೆ ಜೈಲು ಶಿಕ್ಷೆ- ಅದೇ ಕೋರ್ಟ್‍ನಿಂದ ಜಾಮೀನು

    ಆಟೋ ರಿಕ್ಷಾಗಳು ಐಷಾರಾಮಿ ಪಟ್ಟಿಯಲ್ಲಿ ಬರುತ್ತಾ ಅಂತ ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಪ್ರಶ್ನಿಸಿದ್ದಾರೆ. ಅಲ್ಲದೇ, ನಿಮಗೆ ಸರ್ಕಾರದ ಪರವಾನಗಿ ಇಲ್ಲದೇ ಹೋದರೆ ನೀವು ಆಟೋ ಸೇವೆ ನೀಡವಂತಿಲ್ಲ. ಸಾರ್ವಜನಿಕರು ಇದರಿಂದ ಸಮಸ್ಯೆಗಳನ್ನು ಎದುರಿಸಬಾರದು. ಸರ್ಕಾರ ಮತ್ತು ಕಂಪನಿ ಕುಳಿತು ಕೆಲವೊಂದು ತೀರ್ಮಾನ ಮಾಡೋದು ಉತ್ತಮ. ಅಲ್ಲಿಯವರೆಗೂ ಕಂಪನಿಗಳು ಸಬ್ ಚಾರ್ಜ್ ವಿಧಿಸಬಾರದು. ಸರ್ಕಾರ ಕೂಡ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಮೌಖಿಕ ಆದೇಶ ನೀಡಿ ನಾಳೆಗೆ ವಿಚಾರಣೆ ಮುಂದೂಡಿದ್ರು. ಇನ್ನೊಂದೆಡೆ, ಇವತ್ತು ಸಭೆ ನಡೆಸಿದ ಸಾರಿಗೆ ಇಲಾಖೆಯ ಅಧಿಕಾರಿಗಳು, ಆಟೋ, ಕ್ಯಾಬ್‍ಗಳ ಓಡಾಟ, ಕಿ.ಮೀಗೆ ವಿಧಿಸುತ್ತಿರುವ ದರದ ಬಗ್ಗೆ ಲಿಖಿತ ಮಾಹಿತಿ ನೀಡುವಂತೆ ಕಂಪನಿಗಳಿಗೆ ಸೂಚಿಸಿದೆ. ಇದನ್ನೂ ಓದಿ: ಕೇರಳ ನರಬಲಿ ಪ್ರಕರಣ – ನರಭಕ್ಷಕರ ಜಾಡು ಹಿಡಿದಿದ್ದು ಹೀಗೆ

    Live Tv
    [brid partner=56869869 player=32851 video=960834 autoplay=true]

  • ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ – ಪೊಲೀಸ್ ಮಹಾಸಂಘ ಸೇರಿ ಎಲ್ಲ ಅರ್ಜಿಗಳು ವಜಾ

    ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ – ಪೊಲೀಸ್ ಮಹಾಸಂಘ ಸೇರಿ ಎಲ್ಲ ಅರ್ಜಿಗಳು ವಜಾ

    ನವದೆಹಲಿ: ಎಸಿಬಿಯನ್ನು (ACB) ರದ್ದು ಮಾಡಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಎಲ್ಲ ಖಾಸಗಿ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್ (Supreme Court) ವಜಾ ಮಾಡಿದೆ. ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಡಿ.ವೈ. ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠ ಮಧ್ಯಪ್ರದೇಶ ಮಾಡಲು ಸಾಧ್ಯವಿಲ್ಲ ಎಂದು ಹೇಳಿತು.

    ಹೈಕೋರ್ಟ್ (High Court) ಆದೇಶ ಪ್ರಶ್ನಿಸಿ ಕನಕರಾಜು ಮತ್ತು ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ. ಶಶಿಧರ್ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದರು. ವಿಚಾರಣೆ ವೇಳೆ ಎಸಿಬಿಯಲ್ಲಿರುವ ಅರ್ಜಿಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವುದಾಗಿ ಹೈಕೋರ್ಟ್ ಹೇಳಿದೆ. ಇದರಿಂದ ದೂರುದಾರರಿಗೆ ಏನು ಅನ್ಯಾಯ ಆಗಿದೆ ಎಂದು ಪೀಠ ಪ್ರಶ್ನಿಸಿತು.

    ಅರ್ಜಿ ಸಲ್ಲಿಸಿದ ನಿಮ್ಮಗೆ ಏನು ಸಮಸ್ಯೆಯಾಗಿದೆ. ಲೋಕಾಯುಕ್ತಕ್ಕೆ ಅಧಿಕಾರ ವರ್ಗಾವಣೆಯಾಗುತ್ತಿರುವ ಹಿನ್ನಲೆಯಲ್ಲಿ ನಾವು ಮಧ್ಯಪ್ರವೇಶ ಮಾಡಲು ಬಯಸುವುದಿಲ್ಲ ಎಂದು ಹೇಳಿತು. ಇದಕ್ಕೆ ಅರ್ಜಿದಾರ ಪರ ವಕೀಲರೊಬ್ಬರು ಉತ್ತರಿಸಿ, ಎಸಿಬಿಗೆ ಸಾಧ್ಯವಿರುವ ಎಲ್ಲ ಪ್ರಕರಣಗಳ ತನಿಖೆ ನಡೆಸುವ ಅಧಿಕಾರ ಲೋಕಾಯುಕ್ತಕ್ಕೆ ಇಲ್ಲ. ಉದಾಹರಣೆಗೆ, ಆರೋಪಿ ಸಾರ್ವಜನಿಕ ನೌಕರನ ತಿಂಗಳಿಗೆ 20,000 ರೂ.ಗಿಂತ ಕಡಿಮೆ ಆದಾಯವನ್ನು ಹೊಂದಿರುವ ಪ್ರಕರಣಗಳನ್ನು ಲೋಕಾಯುಕ್ತ ತನಿಖೆ ಮಾಡುವಂತಿಲ್ಲ ಎಂಬ ಅಧಿಸೂಚನೆ ಇದೆ ಎಂದು ಉಲ್ಲೇಖಿಸಿದರು. ಇದನ್ನೂ ಓದಿ: ಕಾರು ಮಾಲೀಕರೇ ಹುಷಾರ್ – ಮೈಸೂರಿನಲ್ಲಿ ಶುರುವಾಗಿದೆ ಕಳ್ಳರ ಹಾವಳಿ

    ಇದಕ್ಕೆ ಉತ್ತರಿಸಿದ ಪೀಠ, ಅಂತಹ ಅರ್ಜಿಗಳು ಪ್ರಾಕ್ಸಿ ವ್ಯಾಜ್ಯಕ್ಕೆ ಸಮನಾಗಿವೆ. ಕರ್ನಾಟಕ ಪೊಲೀಸ್ ಮಹಾಸಂಘದ ಮೂಲಕ ರಾಜ್ಯದ ಅಧಿಕಾರಿಗಳು ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ. ಇದು ನಿಮ್ಮ ಕೆಲಸ ಅಲ್ಲ, ಹೈಕೋರ್ಟ್ ಆದೇಶದಿಂದ ಅನ್ಯಾಯವಾಗಿರುವ ವ್ಯಕ್ತಿಯೊಬ್ಬರು ನೇರ ಅರ್ಜಿ ಸಲ್ಲಿಸಿದ್ದರೇ ಮಾತ್ರ ವಿಚಾರಣೆ ನಡೆಸಲಾಗುವುದು ಎಂದು ಹೇಳಿ ಎಲ್ಲ ಅರ್ಜಿಗಳನ್ನು ವಜಾ ಮಾಡಿತು. ಇದನ್ನೂ ಓದಿ: ಮಹಾರಾಷ್ಟ್ರದ ಕನ್ನೇರಿಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ 3 ಕೋಟಿ ಅನುದಾನ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

  • ಹೈಕೋರ್ಟ್ ವಕೀಲ ಆತ್ಮಹತ್ಯೆ- ಕೋರ್ಟ್ ಕೊಠಡಿ ಧ್ವಂಸ

    ಹೈಕೋರ್ಟ್ ವಕೀಲ ಆತ್ಮಹತ್ಯೆ- ಕೋರ್ಟ್ ಕೊಠಡಿ ಧ್ವಂಸ

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಜಬಲ್‍ಪುರದ ಹೈಕೋರ್ಟ್‍ನಲ್ಲಿ (High Court) ನ್ಯಾಯಾಧೀಶರೊಂದಿಗೆ ನಡೆದ ವಾಗ್ವಾದದ ನಂತರ ವಕೀಲರೊಬ್ಬರು (Lawyer) ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತ ವಕೀಲರು ಆಕ್ರೋಶ ವ್ಯಕ್ತಪಡಿಸಿದರು.

    ವಕೀಲ ಅನುರಾಗ್ ಸಾಹು ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶರೊಂದಿಗೆ ವಾಗ್ವಾದ ನಡೆಸಿದ್ದರು. ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವಕೀಲರು ಆತನ ಶವವನ್ನು ನ್ಯಾಯಾಲಯದ ಆವರಣಕ್ಕೆ ಕೊಂಡೊಯ್ದು ಪ್ರತಿಭಟಿಸಿದ್ದಾರೆ. ಅಷ್ಟೇ ಅಲ್ಲದೇ ಪ್ರತಿಭಟನಾ ನಿರತ ವಕೀಲರು ನ್ಯಾಯಾಲಯದ ಕೊಠಡಿಗಳನ್ನು ಧ್ವಂಸಗೊಳಿಸಿ, ಹಿರಿಯ ವಕೀಲರ ಕಚೇರಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರಹಾಕಿದ್ದಾರೆ.

    crime

    ಘಟನೆಗೆ ಸಂಬಂಧಿಸಿ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನ್ಯಾಯಾಲಯದ ಎದುರೇ ಕುಳಿತು ಧರಣಿ ಮಾಡಿದರು. ಆದರೆ ಪ್ರತಿಭಟನೆಯೂ ಅತಿರೇಕಕ್ಕೆ ಹೋದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಅಷ್ಟೇ ಅಲ್ಲದೇ ನ್ಯಾಯಾಲಯದ ರಕ್ಷಣೆಗೆ ವಿಶೇಷ ಕಾರ್ಯಪಡೆ ಪೊಲೀಸರನ್ನು ನಿಯೋಜಿಸಲಾಗಿತ್ತು.

    ಘಟನೆಗೆ ಸಂಬಂಧಿಸಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಬಹುಗುಣ ಮಾತನಾಡಿ, ಅನುರಾಗ್ ಸಾಹು ಯಾವ ಹೇಳಿಕೆಯ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರತಿಭಟನೆ ವೇಳೆ ಕೆಲವು ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರನಿಂದ ಬ್ಲಾಕ್ ಮೇಲ್- ಜನರಿಂದ ಬಿತ್ತು ಗೂಸಾ

    ಕೌನ್ಸಿಲ್ ಉಪಾಧ್ಯಕ್ಷ ಆರ್‍ಕೆ ಸಿಂಗ್ ಸೈನಿ ಮಾತನಾಡಿ, ಅನುರಾಗ್ ಸಾಹು ಅವರು ಕೆಲವು ಅಧಿಕಾರಿಗಳು ಮತ್ತು ವಕೀಲರಿಂದ ಕಿರುಕುಳವನ್ನು ಎದುರಿಸುತ್ತಿದ್ದರು. ಅದನ್ನು ವಿರೋಧಿಸಿ ಪ್ರತಿಭಟಿಸಿದ್ದ ವಕೀಲರ ಮೇಲೆ ನಿರ್ದಾಕ್ಷಿಣ್ಯವಾಗಿ ಲಾಠಿ ಚಾರ್ಜ್ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ದಸರಾ, ದೀಪಾವಳಿಗೆ ಬೆಂಗಳೂರಿನಿಂದ ವಿಶೇಷ ರೈಲು – ಎಲ್ಲೆಲ್ಲಿಗೆ ಒಮ್ಮೆ ನೋಡಿ

    Live Tv
    [brid partner=56869869 player=32851 video=960834 autoplay=true]

  • ಪಿಎಸ್‍ಐ ಮರು ಪರೀಕ್ಷೆಗೆ ಹೈಕೋರ್ಟ್ ತಡೆ

    ಪಿಎಸ್‍ಐ ಮರು ಪರೀಕ್ಷೆಗೆ ಹೈಕೋರ್ಟ್ ತಡೆ

    ಬೆಂಗಳೂರು: ಪೊಲೀಸ್ ಸಬ್ ಇನ್ಸ್ ಪೆಕ್ಟರ್ (PSI) ನೇಮಕಾತಿಯಲ್ಲಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮಹತ್ವದ ಆದೇಶ ಪ್ರಕಟಿಸಿದೆ.

    ಪಿಎಸ್‍ಐ ಮರುಪರೀಕ್ಷೆಗೆ ಹೈಕೋರ್ಟ್ (HighCourt) ತಡೆ ನೀಡಿದ್ದು, ಮುಂದಿನ ವಿಚಾರಣೆಯ ತನಕ ಮರುಪರೀಕ್ಷೆ ದಿನಾಂಕ ಪ್ರಕಟಿಸದಿರಲು ಸೂಚನೆ ಕೊಟ್ಟಿದೆ. ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

    ಪಿಎಸ್‍ಐ ಕೇಸ್‍ನಲ್ಲಿ ಆರೋಪಿತ ಎಡಿಜಿಪಿ (ADGP) ಅಮೃತ್ ಪೌಲ್ ವಿರುದ್ಧ ಹೆಚ್ಚುವರಿ ಚಾರ್ಜ್‍ಶೀಟ್ ಸಲ್ಲಿಕೆ ಆಗಿದೆ. 1,406 ಪುಟಗಳ ಹೆಚ್ಚುವರಿ ಚಾರ್ಟ್‍ಶೀಟ್ ಅನ್ನು ಸಿಬಿಐ ಸಲ್ಲಿಸಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ತುಮಕೂರಿನಲ್ಲಿ ಕೊನೆಗೂ ರಸ್ತೆಗಿಳಿದ ಕಸ ಸಾಗಿಸುವ ಆಟೋಗಳು!

    ಅಮೃತ್ ಪೌಲ್ ವಿರುದ್ಧದ ಆರೋಪವೇನು..?: 545 ಪಿಎಸ್‍ಐ ಹುದ್ದೆಗಳ ಡೀಲ್ ನಡೆದಾಗ ಅಮೃತ್ ಪೌಲ್ (Amruth paul) ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದರು. ಡಿವೈಎಸ್‍ಪಿ ಹಾಗೂ ಎಫ್‍ಡಿಎಯೊಂದಿಗೆ ಸೇರಿ ಅಮೃತ್ ಪೌಲ್ ಡೀಲ್ ಮಾಡಿಸಿದ್ದಾರೆ ಎಂಬ ಆರೋಪವಿದೆ.

    ಬಂಧನಕ್ಕೆ ಒಳಗಾದ ಆರೋಪಿಗಳ ವಿಚಾರಣೆ ವೇಳೆ ಕೆಲವರು ಅಮೃತ್ ಪೌಲ್ ಹೆಸರನ್ನು ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಈ ಹಿಂದೆ ನಾಲ್ಕು ಬಾರಿ ವಿಚಾರಣೆ ನಡೆಸಿದ್ದ ಸಿಐಡಿ ಇಂದು ಮತ್ತೆ ವಿಚಾರಣೆಗೆ ಕರೆದಿತ್ತು. ಇಂದು ವಿಚಾರಣೆ ನಡೆಸಿದ ಬಳಿಕ ಮತ್ತಷ್ಟು ಮಾಹಿತಿ ಕಲೆ ಹಾಕಲು ಅಮೃತ್ ಪೌಲ್ ಅವರನ್ನು ಬಂಧಿಸಿದೆ.

    Live Tv
    [brid partner=56869869 player=32851 video=960834 autoplay=true]

  • UG-CET ಪರಿಷ್ಕೃತ ಫಲಿತಾಂಶ ಅಕ್ಟೋಬರ್ 1ಕ್ಕೆ ಪ್ರಕಟ

    UG-CET ಪರಿಷ್ಕೃತ ಫಲಿತಾಂಶ ಅಕ್ಟೋಬರ್ 1ಕ್ಕೆ ಪ್ರಕಟ

    ಬೆಂಗಳೂರು: UG-CET ಪರಿಷ್ಕೃತ ಫಲಿತಾಂಶ ಅಕ್ಟೋಬರ್ 1ಕ್ಕೆ ಪ್ರಕಟವಾಗಲಿದೆ ಎಂದು ಕೆಇಎ (KEA) ತಿಳಿಸಿದೆ.

    ಹೈಕೋರ್ಟ್ (High Court) ಆದೇಶದ ಮೇರೆಗೆ ಅಕ್ಟೋಬರ್ 1ಕ್ಕೆ ಕೆಇಎ ಪರಿಷ್ಕೃತ ಫಲಿತಾಂಶ ಪ್ರಕಟ ಮಾಡಲಿದೆ. ಈ ಹಿಂದೆ ಅಕ್ಟೋಬರ್ 3ರಂದು ಪರಿಷ್ಕೃತ ಫಲಿತಾಂಶ ಪ್ರಕಟಕ್ಕೆ ದಿನಾಂಕ ನಿಗದಿಯಾಗಿತ್ತು.

    ಈ ಮೊದಲು ಯುಜಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಶ್ರೇಯಾಂಕಗಳನ್ನು ನಿರ್ಧರಿಸಲು ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠಕ್ಕೆ ಸರ್ಕಾರದ ಸಮಿತಿಯು ಎರಡು ಪ್ರಸ್ತಾವನೆಗಳನ್ನು ಒಳಗೊಂಡ ತನ್ನ ವರದಿಯನ್ನು ಸಲ್ಲಿಸಿತ್ತು. ಇದನ್ನೂ ಓದಿ: ಡಾಲರ್ ಎದುರು ರೂಪಾಯಿ ಮೌಲ್ಯ 81.90ಕ್ಕೆ ಕುಸಿತ

    EXAM

    ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಕಳೆದ ಸಾಲಿನಲ್ಲಿ ಪಡೆದ ಪಿಯು ಅಂಕಗಳನ್ನು ಪ್ರಸಕ್ತ ಈ ವರ್ಷದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಿ ಹೊಸದಾಗಿ ಜೇಷ್ಠತಾ ಪಟ್ಟಿ ಪ್ರಕಟಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಹೈಕೋರ್ಟ್ ಏಕಸದಸ್ಯ ಪೀಠವು ನಿರ್ದೇಶನ ನೀಡಿತ್ತು. ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸಲ್ಲಿಸಿರುವ ಮೇಲ್ಮನವಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಇದೀಗ ಹೈಕೋರ್ಟ್ ಆದೇಶದ ಮೇರೆಗೆ ಅಕ್ಟೋಬರ್ 1ಕ್ಕೆ ಕೆಇಎ ಪರಿಷ್ಕೃತ ಫಲಿತಾಂಶ ಪ್ರಕಟ ಮಾಡಲಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಹೊತ್ತಲ್ಲೇ ಡಿಕೆಶಿಗೆ CBI ಶಾಕ್ – ಆಸ್ತಿ ಮೌಲ್ಯಮಾಪನ

    Live Tv
    [brid partner=56869869 player=32851 video=960834 autoplay=true]

  • ನೆಹರು ಸ್ಕೂಲ್ ಓಪನ್‍ಗೆ ಮಧ್ಯಂತರ ಆದೇಶ- ಪೋಷಕರಿಗೆ ಹೈಕೋರ್ಟ್ ರಿಲೀಫ್

    ನೆಹರು ಸ್ಕೂಲ್ ಓಪನ್‍ಗೆ ಮಧ್ಯಂತರ ಆದೇಶ- ಪೋಷಕರಿಗೆ ಹೈಕೋರ್ಟ್ ರಿಲೀಫ್

    ಬೆಂಗಳೂರು: ಐಎಂಎ (IMA) ನಡೆಸುತ್ತಿದ್ದ ಸ್ಕೂಲ್‍ಗೆ ಇಂದು ಅಧಿಕೃತವಾಗಿ ಬೀಗ ಬಿದ್ದಿದೆ. ಸ್ಕೂಲ್ ಆಸ್ತಿ ಮುಟ್ಟುಗೋಲು ಪ್ರಶ್ನಿಸಿ ಪೋಷಕರು ಹೈಕೋರ್ಟ್ (HighCourt) ಮೊರೆ ಹೋಗಿದ್ದಾರೆ. ಶಾಲೆ ಸೀಝ್ ಮಾಡುವಾಗ ಆವರಣದಲ್ಲಿ ಪೋಷಕರ ಕಣ್ಣೀರ ಕೋಡಿಯೇ ಹರಿದಿದ್ದು, ಸ್ಕೂಲ್ ಕ್ಲೋಸ್ ಮಾಡದಂತೆ ಗಲಾಟೆ ಮಾಡಿದ್ದಾರೆ.

    ಬೆಂಗಳೂರಿನ ಶಿವಾಜಿನಗರದ ನೆಹರು ಸ್ಕೂಲ್‍ (Nehru School) ನಲ್ಲಿ, ದಯವಿಟ್ಟು ನಿಮಗೆ ಕೈಮುಗಿಯುತ್ತೇವೆ ಶಾಲೆಗೆ ಬೀಗ ಹಾಕಬೇಡಿ. ನಮ್ಮ ಮಕ್ಕಳನ್ನು ಬೀದಿಗೆ ತರಬೇಡಿ.. ಆರು ತಿಂಗಳು ಕಾಲಾವಕಾಶ ಕೊಡಿ. ಹೀಗೆ ಕಣ್ಣೀರು ಹಾಕಿಕೊಂಡು ಶಾಲಾ ಆವರಣದಲ್ಲಿ ಪೋಷಕರು (Parents) ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ಇನ್ನೊಂದಡೆ ಇದ್ಯಾವುದನ್ನು ಕೇಳದೇ ಕಂದಾಯ ಅಧಿಕಾರಿಗಳು ಶಾಲೆ ಸೀಝ್ ಮಾಡಿ ಬೀಗ ಜಡಿದರು.

    ಐಎಂಎ ನಡೆಸುತ್ತಿದ್ದ ಸ್ಕೂಲ್ ಅನ್ನು ಇಂದು ಅಧಿಕೃತವಾಗಿ ಮುಟ್ಟುಗೋಲು ಹಾಕಿಕೊಂಡು ಬೀಗ ಹಾಕಲಾಯ್ತು. ಆದ್ರೆ ಪೋಷಕರು ಇದರ ವಿರುದ್ಧ ನಮ್ಗೆ ಮಾಹಿತಿ ನೀಡದೇ ಬೀಗ ಹಾಕೋದು ಸರಿಯಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು. ಶಾಲೆಯ ಮುಂಭಾಗ ಬ್ಯಾರಿಕೇಡ್ ಅಳವಡಿಕೆ ಬಿಗಿಭದ್ರತೆ ನೀಡಲಾಯ್ತು. ಇದನ್ನೂ ಓದಿ: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಸರ್ವವ್ಯಾಪಿ, ಸರ್ವ ಸ್ಪರ್ಶಿಯಾಗಿದೆ: ಪ್ರಿಯಾಂಕ್ ಖರ್ಗೆ

    ಈ ಬೆಳವಣಿಗೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ಪೋಷಕರಿಗೆ ಹೈಕೋರ್ಟ್‌ (HighCourt) ತೀರ್ಪು ಕೊಂಚ ರಿಲೀಫ್ ಕೊಟ್ಟದೆ. ನೆಹರೂ ಸ್ಕೂಲ್‍ನ್ನು ಮುಂದಿನ ವಿಚಾರಣೆಯವರೆಗೆ ತೆರೆಯುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಕೊಟ್ಟಿದ್ದು ಆಕ್ಟೋಬರ್ 12 ಕ್ಕೆ ಸದ್ಯ ವಿಚಾರಣೆ ಮುಂದೂಡಿದೆ.

    ಅಕ್ಟೋಬರ್ 12ವರೆಗೆ ಸದ್ಯ ಸ್ಕೂಲ್‍ನಲ್ಲಿ ಎಂದಿನಂತೆ ತರಗತಿ ನಡೆಯುವಂತೆ ಹೈಕೋರ್ಟ್ ಆದೇಶ ಪೋಷಕರಲ್ಲಿ ಸಂಭ್ರಮ ತಂದಿದೆ. ಆದರೆ ಮುಂದಿನ ದಿನದಲ್ಲಿ ಏನಾಗಲಿದೆ ಎನ್ನುವ ಆತಂಕವೂ ಇದೆ.

    Live Tv
    [brid partner=56869869 player=32851 video=960834 autoplay=true]

  • ಕೇರಳದಲ್ಲಿ ಭಾರೀ ಹಿಂಸಾಚಾರ – PFI ವಿರುದ್ಧ ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ಕೇಸ್‌

    ಕೇರಳದಲ್ಲಿ ಭಾರೀ ಹಿಂಸಾಚಾರ – PFI ವಿರುದ್ಧ ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ಕೇಸ್‌

    ತಿರುವನಂತಪುರ: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ಇಂದು ಕೇರಳ ಬಂದ್‌ಗೆ(Kerala Bandh) ಕರೆ ನೀಡಿದ್ದು ಹಿಂಸಾಚಾರ ಆರಂಭವಾಗಿದೆ. ಹಲವು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆದಿದ್ದು ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

    ಯಾವುದೇ ಅನುಮತಿ ಪಡೆಯದೇ ಬಂದ್‌ ಕರೆ ಕೊಟ್ಟ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಕೇರಳ ಹೈಕೋರ್ಟ್‌(Kerala High Court) ಪಿಎಫ್‌ಐ ನಾಯಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ. ಮುಷ್ಕರ ಬೆಂಬಲಿಸದ ನಾಗರಿಕರು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ದಕ್ಕೆಯಾಗದಂತೆ ಎಚ್ಚರಿಕೆ ವಹಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ.

    ಗುರುವಾರ ರಾಷ್ಟ್ರೀಯ ತನಿಖಾ ದಳ(NIA) ದೇಶಾದ್ಯಂತ ಪಿಎಫ್‌ಐ ಮೇಲೆ ದಾಳಿ ನಡೆಸಿ ನಾಯಕರನ್ನು ಬಂಧಿಸಿತ್ತು. ಈ ಬಂಧನವನ್ನು ಖಂಡಿಸಿ ಇಂದು ಬಂದ್‌ಗೆ ಪಿಎಫ್‌ಐ ಕರೆ ನೀಡಿದೆ. ಇದನ್ನೂ ಓದಿ: NIA ಮಿಡ್‌ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್

    ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್‌ಗಳು, ಟ್ರಕ್‌ಗಳು ಮತ್ತು ಖಾಸಗಿ ವಾಹನಗಳ ಮೇಲೆ ಮುಂಜಾನೆ ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಟದಿಂದ ಹಲವು ಬಸ್ ಚಾಲಕರು ಗಾಯಗೊಂಡಿದ್ದಾರೆ.

    ಕಣ್ಣೂರಿನಲ್ಲಿ ದ್ವಿಚಕ್ರ ವಾಹನದ ಮೇಲೆ ಕಚ್ಚಾ ಬಾಂಬ್ ಎಸೆಯಲಾಗಿದೆ. ಕೊಲ್ಲಂನಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸುವ ಸಮಯದಲ್ಲಿ ಇಬ್ಬರು ಪೊಲೀಸರಿಗೆ ಬೈಕ್ ಡಿಕ್ಕಿ ಹೊಡೆದಿದೆ.

    ಕೊಟ್ಟಾಯಂ ಜಿಲ್ಲೆಯ ಎರಟ್ಟುಪೆಟ್ಟಾದಲ್ಲಿ, ಪ್ರತಿಭಟನಾಕಾರರನ್ನು ಚದುರಿಸುವ ಸಮಯದಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಹಲವೆಡೆ ಪಿಎಫ್‌ಐ ಕಾರ್ಯಕರ್ತರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ.

    ಖಾಸಗಿ ಬಸ್ಸುಗಳು ರಸ್ತೆಗೆ ಇಳಿಯದ ಪರಿಣಾಮ ಜನ ಸಾಮಾನ್ಯರಿಗೆ ಸಮಸ್ಯೆಯಾಗಿದೆ. ದೂರದ ಸ್ಥಳಗಳಿಂದ ರೈಲು ನಿಲ್ದಾಣಗಳಿಗೆ ಬಂದ ನೂರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ಹಲವು ಶಾಲೆಗಳಿಗೆ ರಜೆ ಘೋಷಣೆಯಾಗಿವೆ. ಮುಸ್ಲಿಂ ಭದ್ರಕೋಟೆಯಾಗಿರುವ ಪ್ರದೇಶಗಳಲ್ಲಿ ಅಂಗಡಿಗಳನ್ನು ಬಲವಂತವಾಗಿ ಬಂದ್‌ ಮಾಡಲಾಗಿದೆ.

    ಪಿಎಫ್‌ಐ ಅಧ್ಯಕ್ಷ ಒಎಂಎ ಸಲಾಂ, ರಾಷ್ಟ್ರೀಯ ಕಾರ್ಯದರ್ಶಿ ನಾಸರುದ್ದೀನ್ ಎಲಮರಮ್, ರಾಜ್ಯಾಧ್ಯಕ್ಷ ಸಿಪಿ ಮೊಹಮ್ಮದ್ ಬಶೀರ್, ಹಿರಿಯ ನಾಯಕ ಪಿ ಕೋಯಾ ಮತ್ತು ಮಾಜಿ ಅಧ್ಯಕ್ಷ ಇ ಅಬೂಬಕರ್ ಸೇರಿದಂತೆ ಕೇರಳದ 19 ಮುಖಂಡರನ್ನು ಎನ್‌ಐಎ ಬಂಧಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಜಬ್ ಅರ್ಜಿ ವಿಚಾರಣೆ ಅಂತ್ಯ – ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

    ಹಿಜಬ್ ಅರ್ಜಿ ವಿಚಾರಣೆ ಅಂತ್ಯ – ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

    ನವದೆಹಲಿ: ಶಾಲಾ ಕಾಲೇಜುಗಳ ತರಗತಿಗಳಲ್ಲಿ ಹಿಜಬ್ (Hijab)  ನಿಷೇಧಿಸಿದ ಹೈಕೋರ್ಟ್ (High Court)  ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ (Supreme Court) ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಕಡೆಗೂ ಅಂತ್ಯವಾಗಿದೆ. ಕಳೆದ ಹತ್ತು ದಿನಗಳಿಂದ ವಿಚಾರಣೆ ನಡೆಸಿದ ನ್ಯಾ.ಹೇಮಂತ್ ಗುಪ್ತಾ ನೇತೃತ್ವದ ದ್ವಿ ಸದಸ್ಯ ಪೀಠ ತೀರ್ಪು ಕಾಯ್ದಿರಿಸಿದೆ.

    ಇಂದು ಬೆಳಗ್ಗೆ ವಿಚಾರಣೆ ಆರಂಭವಾಗುತ್ತಲೇ ಅರ್ಜಿದಾರರ ವಕೀಲ ಹುಜೇಫ್ ಅಹ್ಮದ್ ಮತ್ತೆ ವಾದ ಮಂಡಿಸಲು ನಿಂತರು. ಇದಕ್ಕೆ ಅಸಹನೆ ವ್ಯಕ್ತಪಡಿಸಿದ ನ್ಯಾಯಪೀಠ, ಬೇಗ ವಾದ ಮುಗಿಸಿ. ನಾವು ತಾಳ್ಮೆ ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. 9 ದಿನಗಳಿಂದ ಕೇಳ್ತಾನೆ ಇದೀವಿ. ಇವತ್ತು ಒಂದು ಗಂಟೆಯಷ್ಟೇ ಟೈಂ ಕೊಡ್ತೀವಿ. ಅಷ್ಟರಲ್ಲಿ ಅರ್ಜಿದಾರರ ಪರ ವಕೀಲರು ವಾದ ಮುಗಿಸಬೇಕು. ವಾದಗಳು ಮಿತಿಮೀರುತ್ತಿವೆ ಎಂದು ಕ್ಲಾಸ್ ತೆಗೆದುಕೊಂಡ ಘಟನೆಯೂ ನಡೀತು. ಇದನ್ನೂ ಓದಿ: ಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್‍ನ ಲೈಸನ್ಸ್ ರದ್ದುಪಡಿಸಿದ RBI

    ಅರ್ಜಿದಾರರ ಪರ ವಕೀಲ ದುಷ್ಯಂತ್ ದವೆ, ಸಾಲಿಸಿಟರ್ ಜನರಲ್  ಪಿಎಫ್‍ಐ ಹೆಸರು ಪ್ರಸ್ತಾಪಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ರು. ಕೊನೆಗೆ ನಾವು ನಿಮ್ಮೆಲ್ಲರ ವಾದ ಆಲಿಸಿದ್ದೇವೆ. ಈಗ ನಮ್ಮ ಹೋಂವರ್ಕ್ ಶುರುವಾಗುತ್ತದೆ. ಧನ್ಯವಾದ ಎಂದು ನ್ಯಾಯಮೂರ್ತಿಗಳು ಪೀಠದಿಂದ ಎದ್ದರು. ಈ ಹತ್ತು ದಿನದಲ್ಲಿ ಅರ್ಜಿದಾರರ ಪರ 21 ವಕೀಲರು, ಸರ್ಕಾರದ ಪರ ಐವರು ವಕೀಲರು ಸುದೀರ್ಘ ವಾದ ಮಂಡಿಸಿದರು. ಇದನ್ನೂ ಓದಿ: ಎಎಪಿ ಶಾಸಕ ಲಾಭ್ ಸಿಂಗ್ ಉಗೋಕೆ ತಂದೆ ಆತ್ಮಹತ್ಯೆಗೆ ಯತ್ನ!

    Live Tv
    [brid partner=56869869 player=32851 video=960834 autoplay=true]