Tag: high court

  • ಒಂದು ದಿನದ ಸಂಕ್ರಾಂತಿ ಕಾರ್ಯಕ್ರಮಕ್ಕೆ ಮಾತ್ರ ಅನುಮತಿ: ಇಶಾ ಫೌಂಡೇಷನ್‌ಗೆ ಬಿಗ್‌ ರಿಲೀಫ್‌

    ಒಂದು ದಿನದ ಸಂಕ್ರಾಂತಿ ಕಾರ್ಯಕ್ರಮಕ್ಕೆ ಮಾತ್ರ ಅನುಮತಿ: ಇಶಾ ಫೌಂಡೇಷನ್‌ಗೆ ಬಿಗ್‌ ರಿಲೀಫ್‌

    ಬೆಂಗಳೂರು: ನಂದಿ ಬೆಟ್ಟದ ಬಳಿ ಇಶಾ ಫೌಂಡೇಷನ್‌ (Isha Foundation) ಸ್ಥಾಪಿಸಿರುವ ಆದಿಯೋಗಿ ಪ್ರತಿಮೆ (Adiyogi Statue) ಅನಾವರಣ ಕಾರ್ಯಕ್ರಮಕ್ಕೆ ಹೈಕೋರ್ಟ್‌ (High Court) ಅನುಮತಿ ನೀಡಿದೆ.

    ಜ.15 ಸಂಕ್ರಾಂತಿಯಂದು ನಿಗದಿಯಾದ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ, ಸಿಎಂ ಆಗಮಿಸುತ್ತಿದ್ದಾರೆ. ಪಿಐಎಲ್ ದಾಖಲಿಸುವ ಮುನ್ನವೇ ಈ ಕಾರ್ಯಕ್ರಮ ನಿಗದಿಯಾಗಿದೆ. ಹೀಗಾಗಿ ಕಾರ್ಯಕ್ರಮ ಆಯೋಜನೆಗೆ ಅನುಮತಿ ನೀಡಬೇಕು ಎಂದು ಇಶಾ ಫೌಂಡೇಶನ್‌ ಮನವಿ ಮಾಡಿತ್ತು.

    ಈ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್‌ ಮರಗಳನ್ನು ಕಡಿಯಬಾರದು, ತೀರಾ ಅಗತ್ಯವಾಗಿರುವ ವ್ಯವಸ್ಥೆ ಮಾತ್ರ ಮಾಡಬೇಕು. ಉಳಿದಂತೆ ಯಥಾಸ್ಥಿತಿ ಮುಂದುವರಿಯಬೇಕು ಎಂದು ಷರತ್ತು ವಿಧಿಸಿ ಒಂದು ದಿನ ಮಟ್ಟಿಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದೆ. ಇದನ್ನೂ ಓದಿ: ವಿಶ್ವದ ಅತೀ ಉದ್ದದ ನದಿ ವಿಹಾರ ನೌಕೆ `ಎಂವಿ ಗಂಗಾ ವಿಲಾಸ್’ ಕ್ರೂಸ್‌ಗೆ ಮೋದಿ ಅದ್ಧೂರಿ ಚಾಲನೆ

    ಏನಿದು ಪ್ರಕರಣ?
    ಚಿಕ್ಕಬಳಾಪುರ ಕಸಬಾ ಹೋಬಳಿಯ ಚಂಬಳ್ಳಿಯ ಎಸ್‌. ಕ್ಯಾತಪ್ಪ ಮತ್ತಿತರರು ಕಾನೂನು ಉಲ್ಲಂಘಿಸಿ ಇಶಾ ಫೌಂಡೇಷನ್‌ ಆದಿಯೋಗಿ ಪ್ರತಿಮೆ ಸ್ಥಾಪನೆಯ ಅನುಮತಿ ನೀಡಲಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

    ಅರ್ಜಿದಾರರ ಪರ ಎಂ.ಶಿವಪ್ರಕಾಶ್‌, ನಂದಿ ಗಿರಿಧಾಮದ ಬೆಟ್ಟ (Nandi Hills) ಸೇರಿದಂತೆ ನರಸಿಂಗ ದೇವರ ಬೆಟ್ಟಗಳ ಸಾಲುಗಳು ಈ ಭಾಗದ ಜಲ ಮೂಲಗಳಾಗಿದೆ. ನರಸಿಂಹ ದೇವರ ವಲಯಕ್ಕೆ ಸೇರಿವೆ. ಈ ಬೆಟ್ಟಗಳ ಸಾಲಿನಲ್ಲಿ ಔಷಧ ಸಸ್ಯಗಳು ದಟ್ಟವಾಗಿವೆ. ಸಾಲು ಬೆಟ್ಟಗಳ ಮಧ್ಯಭಾಗದಲ್ಲಿ ಇಶಾ ಪ್ರತಿಷ್ಠಾನಕ್ಕೆ ಅರಣ್ಯ ಸೇರಿ ನಾನಾ ಕಾಯ್ದೆಗಳನ್ನು ಉಲ್ಲಂಘಿಸಿ ವಾಣಿಜ್ಯ ಉದೇಶಕ್ಕಾಗಿ ಸರಕಾರಿ ಭೂಮಿ ಮಂಜೂರು ಮಾಡಲಾಗಿದೆ ಎಂದು ವಾದಿಸಿದ್ದರು.

    ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರ್ಲೆ ಮತ್ತು ನ್ಯಾಯಮೂರ್ತಿ ಆಶೋಕ್‌ ಎಸ್‌.ಕಿಣಗಿ ಅವರಿದ್ದ ವಿಭಾಗೀಯ ಪೀಠ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿ ಮಧ್ಯಂತರ ಆದೇಶ ಪ್ರಕಟಿಸಿತ್ತು.

    ಪ್ರತಿವಾದಿಗಳಾದ ಕೇಂದ್ರ ಪರಿಸರ ಇಲಾಖೆ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂಗರ್ಭ ಇಲಾಖೆಯ ನಿರ್ದೇಶಕರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ನೋಟಿಸ್‌ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜ್ಯ ಸರ್ಕಾರದ ಹೊಸ ಮೀಸಲಾತಿ ಸೂತ್ರಕ್ಕೆ ಬ್ರೇಕ್

    ರಾಜ್ಯ ಸರ್ಕಾರದ ಹೊಸ ಮೀಸಲಾತಿ ಸೂತ್ರಕ್ಕೆ ಬ್ರೇಕ್

    ಬೆಂಗಳೂರು: ಪಂಚಮಸಾಲಿ ಲಿಂಗಾಯತರು ಮತ್ತು ಒಕ್ಕಲಿಗರಿಗಾಗಿ (Panchamasali Lingayats and Vokkaligas) ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಪ್ರತ್ಯೇಕ ಮೀಸಲಾತಿಗೆ (Reservation) ಹೈಕೋರ್ಟ್ ಬ್ರೇಕ್ ಹಾಕಿದೆ. ರಾಜ್ಯ ಸರ್ಕಾರ ಹೊಸದಾಗಿ ಸೃಷ್ಟಿಸಿದ್ದ ಪ್ರವರ್ಗ 2ಸಿ, 2ಡಿ ಮೀಸಲಾತಿಗೆ ಹೈಕೋರ್ಟ್ (High Court) ತಡೆ ನೀಡಿ ಯಥಾ ಸ್ಥಿತಿ ಕಾಪಾಡಿಕೊಳ್ಳಲು ಸೂಚಿಸಿದೆ.

    ಡಿಸೆಂಬರ್ 29ರ ಸಂಪುಟ ಸಭೆಯಲ್ಲಿ ಕೈಗೊಂಡ ಮೀಸಲಾತಿ ನಿರ್ಧಾರ ಪ್ರಶ್ನಿಸಿ ರಾಘವೇಂದ್ರ ಎನ್ನುವವರು ಹೈಕೋರ್ಟ್ ಮೆಟ್ಟಿಲೇರಿ ಪಿಐಎಲ್ ದಾಖಲಿಸಿದ್ದರು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ. ಮುಂದಿನ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿದೆ.

    court order law

    ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹಿಂದುಳಿದ ವರ್ಗಗಳ ಆಯೋಗ ಮಧ್ಯಂತರ ವರದಿ ಸಲ್ಲಿಸಿದೆ. ಇದನ್ನು ಆಯೋಗ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದು, ಸರ್ಕಾರ ಈ ವರದಿ ಪರಿಶೀಲಿಸಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ವಿಚಾರವನ್ನು ಹೈಕೋರ್ಟ್ ಗಮನಕ್ಕೆ ತಂದರು.

    ಹೈಕೋರ್ಟ್ ನೀಡಿದ ತಡೆಯಾಜ್ಞೆ ಆದೇಶ ಸರ್ಕಾರವನ್ನು ಬೀಸೋ ದೊಣ್ಣೆಯಿಂದ ಪಾರು ಮಾಡಿದೆ ಎಂದೇ ಹೇಳಬಹುದು. ಯಾಕಂದ್ರೆ ಸರ್ಕಾರ ಇನ್ನೂ ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲ. ಹೀಗಾಗಿ ಮೀಸಲಾತಿ ಯಾವ ರೀತಿ ಹಂಚಿಕೆ ಆಗುತ್ತೆ ಎಂಬುದರ ಕಲ್ಪನೆ ಯಾರಲ್ಲೂ ಇಲ್ಲ. ಒಂದೊಮ್ಮೆ ಅಧಿಸೂಚನೆ ಪ್ರಕಟವಾಗಿದ್ದರೆ ಭಾರೀ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆ ಇತ್ತು. ಇದನ್ನೂ ಓದಿ: ಸುಮಲತಾ ಅಂಬರೀಶ್‌ಗೆ ಬಿಜೆಪಿ ಪಕ್ಷ ಸೇರ್ಪಡೆ ಆಹ್ವಾನ ನೀಡಿದ್ದೇವೆ: ಅಶ್ವಥ್ ನಾರಾಯಣ

    ಈಗಾಗಲೇ ಪಂಚಮಸಾಲಿ ಸಮುದಾಯ ತಗಾದೆ ತೆಗೆದಿತ್ತು. ನಮ್ಮನ್ನು 2ಎಗೆ ಸೇರಿಸಬೇಕೆಂದು ಬೇಡಿಕೆ ಇಟ್ಟು, ಇವತ್ತಿಗೆ ಗಡುವು ಕೂಡ ನೀಡಿತ್ತು. 2ಎ ಮೀಸಲಾತಿ ಕೊಡದಿದ್ದರೆ ಜನವರಿ 13ರಿಂದ ಶಿಗ್ಗಾಂವಿಯ ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಪಂಚಮಸಾಲಿ ಸಮುದಾಯದ ಜಯಮೃತ್ಯುಂಜಯಸ್ವಾಮೀಜಿ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಶೃತಿ ಹರಿಹರನ್ ದಾಖಲಿಸಿದ್ದ ಕೇಸ್ ಗೆ ತಡೆಯಾಜ್ಞೆ

    ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಶೃತಿ ಹರಿಹರನ್ ದಾಖಲಿಸಿದ್ದ ಕೇಸ್ ಗೆ ತಡೆಯಾಜ್ಞೆ

    ವಿಸ್ಮಯ ಸಿನಿಮಾ ಶೂಟಿಂಗ್ ವೇಳೆ ತಮ್ಮ ಮೇಲೆ ಲೈಂಗಿಕ ಕಿರುಕುಳ ಮಾಡಲಾಗಿದೆ ಎಂದು ಹೆಸರಾಂತ ನಟರೊಬ್ಬರ ಮೇಲೆ ನಟಿ ಶ್ರುತಿ ಹರಿಹರನ್ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ನಟನ ಪರವಾಗಿ ಪ್ರಶಾಂತ್ ಸಂಬರ್ಗಿ ನಾನಾ ಹೇಳಿಕೆಗಳನ್ನು ನೀಡಿದ್ದರು. ಮಾಧ್ಯಮಗಳ ಜೊತೆ ಈ ಪ್ರಕರಣದ ಬಗ್ಗೆ ಮಾತನಾಡುವಾಗ ಪ್ರಶಾಂತ್ ಸಂಬರ್ಗಿ ತಮ್ಮ ಚಾರಿತ್ರ್ಯ ಹರಣ ಮಾಡುತ್ತಿದ್ದಾರೆ ಎಂದು ನಟಿ ಶ್ರುತಿ ಹರಿಹರನ್ ಆರೋಪಿಸಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ ನಲ್ಲಿ ನಡೆಯುತ್ತಿರುವ ಈ ಪ್ರಕರಣವನ್ನು ರದ್ದು ಕೋರಿ ಪ್ರಶಾಂತ್ ಸಂಬರಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ, ಸಂಬರಗಿ ವಿರುದ್ಧ ಪ್ರಕರಣಕ್ಕೆ ಮುಂದಿನ ವಿಚಾರಣೆವರೆಗೂ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಈ  ವಿಚಾರಣೆಯನ್ನು 2023ರ ಫೆಬ್ರುವರಿ 1ಕ್ಕೆ ಮುಂದೂಡಿದೆ. ಇದನ್ನೂ ಓದಿ: IMDB 2022ರ ಜನಪ್ರಿಯ ಭಾರತೀಯ ಸಿನಿಮಾ ಪಟ್ಟಿಯಲ್ಲಿ ಕನ್ನಡದ ಟಾಪ್‌ 3 ಚಿತ್ರಗಳು

    ಶ್ರುತಿ ಹರಿಹರನ್ ಮಾಡಿದ್ದ ಆರೋಪದ ಕುರಿತಂತೆ  2018ರ ಅಕ್ಟೋಬರ್ 25ರಂದು ವಾಣಿಜ್ಯ ಮಂಡಳಿಯಲ್ಲಿ ಸಂಧಾನ ಸಭೆ ನಡೆದಿತ್ತು. ಹಿರಿಯ ನಟ ಅಂಬರೀಶ್ ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಶ್ರುತಿ ಹರಿಹರನ್ ಮತ್ತು ನಟನಿಗೆ ಆಪ್ತರಾಗಿದ್ದ ಸಂಬರಗಿ ಹಾಜರಿದ್ದರು. ನಂತರ ತನ್ನ ವಿರುದ್ಧ ಮಾಧ್ಯಮಗಳಲ್ಲಿ ಸಂಬರಗಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದು, ಚಾರಿತ್ರ್ಯಕ್ಕೆ ಧಕ್ಕೆ ತರುತ್ತಿದ್ದಾರೆಂದು ಆರೋಪಿಸಿದ್ದರು. ಸಂಬರಗಿ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪಾನಿಪುರಿ ಕಿಟ್ಟಿ ಪ್ರಕರಣ: ನಟ ದುನಿಯಾ ವಿಜಿಗೆ ನೋಟಿಸ್

    ಪಾನಿಪುರಿ ಕಿಟ್ಟಿ ಪ್ರಕರಣ: ನಟ ದುನಿಯಾ ವಿಜಿಗೆ ನೋಟಿಸ್

    ಪಾನಿಪುರಿ ಕಿಟ್ಟಿ ಜೊತೆಗಿನ ಗಲಾಟೆಗೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಾಗಿತ್ತು. ಎಫ್.ಐ.ಆರ್ ದಾಖಲಾಗುತ್ತಿದ್ದಂತೆಯೇ ಕಿಟ್ಟಿ ಪೊಲೀಸ್ ಅಧಿಕಾರಿಯ ಮುಂದೆ ಹಾಜರು ಕೂಡ ಆಗಿದ್ದರು. ಇದೀಗ ಅದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುನಿಯಾ ವಿಜಯ್ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಹೈಗ್ರೌಂಡ್ ಪೊಲೀಸರಿಂದ ನೋಟಿಸ್ ನಲ್ಲಿ ತಿಳಿಸಲಾಗಿದೆ.

    ಪಾನಿಪುರಿ ಕಿಟ್ಟಿ ವಿರುದ್ಧ ದುನಿಯಾ ವಿಜಯ್ ದೂರು ನೀಡಿದ್ದರು. ದೂರುದಾರ ಆಗಿರುವ ಹಿನ್ನೆಲೆಯಲ್ಲಿ ಈ  ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಸೂಚಿಸಲಾಗಿದೆ. ಕಿಟ್ಟಿ ಮತ್ತು ದುನಿಯಾ ವಿಜಯ್ ಆಪ್ತ ಸ್ನೇಹಿತರು ಪ್ರಕರಣವೊಂದರಲ್ಲಿ ಇಬ್ಬರೂ ಬಡಿದಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸ್ಪರ ಇಬ್ಬರೂ ದೂರು ದಾಖಲಿಸಿದ್ದರು.

    ಏನಿದು ಪ್ರಕರಣ? : 2018ರಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆದಿತ್ತು. ಈ ಸಂದರ್ಭದಲ್ಲಿ  ಪಾನಿಪುರಿ ಕಿಟ್ಟಿ ಟೀಂಗೂ ಹಾಗೂ ದುನಿಯಾ ವಿಜಯ್ ಟೀಂ ಗೂ ಗಲಾಟೆ ನಡೆದಿತ್ತು. ಅಂದು ಸ್ಪರ್ಧೆ ಮಾಡಿದ್ದ ಪಾನಿಪುರಿ ಕಿಟ್ಟಿಯ ಸಹೋದರ ಮಾರುತಿ‌ ಗೌಡನನ್ನು ಗಲಾಟೆ ನಂತರ ದುನಿಯಾ ವಿಜಯ್ ಕಾರಿನಲ್ಲಿ ಕರೆದುಕೊಂಡು ಹೋಗಿ, ಹಿಗ್ಗಾ ಮುಗ್ಗ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು. ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ವಾಪಸ್ ಕರೆತಂದಿದ್ದೂ ಬಿಟ್ಟಿದ್ದರು ಎಂದು ಹೇಳಲಾಗಿತ್ತು. ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ಇದನ್ನೂ ಓದಿ: ಪುತ್ರಿ ಐಶ್ವರ್ಯ ಜೊತೆ ತಿರುಪತಿ ದೇವಸ್ಥಾನಕ್ಕೆ ರಜನಿಕಾಂತ್ ಭೇಟಿ

    ಈ ಗಲಾಟೆ ನಂತರ ಎರಡೂ ಕಡೆ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು. ನನ್ನ ಮಗ ಸಾಮ್ರಾಟ್ ನಿಗೆ ಬೈದು ಬೆದರಿಕೆ ಹಾಕಿದ್ರು ಎಂದು‌ ವಿಜಯ್ ದೂರು ನೀಡಿದ್ರು. ವಿಜಯ್ ಮೇಲೆ ಪಾನಿಪುರಿ ಕಿಟ್ಟಿ ಕೂಡ ದೂರು ದಾಖಲಿಸಿದ್ದರು. ಸದ್ಯ ವಿಜಯ್ ಮೇಲಿರುವ ಕೇಸ್ ನಡೀತಾ ಇದೆ. ಪಾನಿಪುರಿ ಕಿಟ್ಟಿಮೇಲೆ ನೀಡಿದ್ದ ದೂರು ಸಾಕ್ಷ್ಯಗಳ ಕೊರೆಯಿಂದಾಗಿ ಕ್ಲೋಸ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಿಜಯ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಸದರಿ ಕೇಸ್ ಅನ್ನು ಗಮನಿಸಿದ ನ್ಯಾಯಾಲಯವು ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಎಫ್.ಐ.ಆರ್ ಮಾಡುವಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸೂಚನೆ ನೀಡಿತ್ತು. ಇದೀಗ ಕೇಸ್ ದಾಖಲಾಗಿದೆ. ಮತ್ತು ಕಿಟ್ಟಿ ಹಾಜರ್ ಕೂಡ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದುನಿಯಾ ವಿಜಯ್ ಪುತ್ರನ ಹಲ್ಲೆ ಪ್ರಕರಣ : ಎಸಿಪಿ ಮುಂದೆ ವಿಚಾರಣೆಗೆ ಹಾಜರಾದ ಪಾನಿಪುರಿ ಕಿಟ್ಟಿ

    ದುನಿಯಾ ವಿಜಯ್ ಪುತ್ರನ ಹಲ್ಲೆ ಪ್ರಕರಣ : ಎಸಿಪಿ ಮುಂದೆ ವಿಚಾರಣೆಗೆ ಹಾಜರಾದ ಪಾನಿಪುರಿ ಕಿಟ್ಟಿ

    ದುನಿಯಾ ವಿಜಯ್ ಪುತ್ರನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ತರಬೇತುದಾರ ಪಾನಿಪುರಿ ಕಿಟ್ಟಿ ಮೇಲೆ ಎಫ್‍.ಐ.ಆರ್ ದಾಖಲಿಸುವಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಹೈಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪಾನಿಪುರಿ ಕಿಟ್ಟಿ ಮೇಲೆ ಎಫ್‍.ಐ.ಆರ್ ದಾಖಲಿಸಿದ್ದಾರೆ. ಹಾಗಾಗಿ ಸ್ವತಃ ಕಿಟ್ಟಿಯವರೇ ಸದಾಶಿವನಗರದ ಎಸಿಪಿ ಕಚೇರಿಗೆ ಬಂದು ಎಸಿಪಿ ಚಂದನ್ ಕುಮಾರ್ ಮುಂದೆ ಹಾಜರಾಗಿದ್ದಾರೆ. ಸದಾಶಿವನಗರದ ಎಸಿಪಿ ಕಚೇರಿಯಲ್ಲಿ ಕಿಟ್ಟಿ ವಿಚಾರಣೆ ನಡೆಸಲಾಗಿದೆ.

    ನಟ ದುನಿಯಾ ವಿಜಯ್ ಮತ್ತು ಜಿಮ್ ತರಬೇತಿದಾರು ಪಾನಿಪುರಿ ಕಿಟ್ಟಿ ನಡುವೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಇದೀಗ ಮತ್ತೆ ಮರುಜೀವ ಪಡೆದಿದೆ. ಹೈಕೋರ್ಟ್ ಸೂಚನೆಯ ಮೇರೆಗೆ ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ ಮಾಡಿದ್ದ ಪಾನಿಪುರಿ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಈ ಮೂಲಕ 2018 ರಲ್ಲಿ ನಡೆದ ಪ್ರಕರಣವನ್ನು ಮತ್ತೆ ರೀ ಓಪನ್ ಮಾಡಲಾಗಿದೆ. ಹೈಕೋರ್ಟ್ ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ.

    2018ರಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆದಿತ್ತು. ಈ ಸಂದರ್ಭದಲ್ಲಿ  ಪಾನಿಪುರಿ ಕಿಟ್ಟಿ ಟೀಂಗೂ ಹಾಗೂ ದುನಿಯಾ ವಿಜಯ್ ಟೀಂ ಗೂ ಗಲಾಟೆ ನಡೆದಿತ್ತು. ಅಂದು ಸ್ಪರ್ಧೆ ಮಾಡಿದ್ದ ಪಾನಿಪುರಿ ಕಿಟ್ಟಿಯ ಸಹೋದರ ಮಾರುತಿ‌ ಗೌಡನನ್ನು ಗಲಾಟೆ ನಂತರ ದುನಿಯಾ ವಿಜಯ್ ಕಾರಿನಲ್ಲಿ ಕರೆದುಕೊಂಡು ಹೋಗಿ, ಹಿಗ್ಗಾ ಮುಗ್ಗ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು. ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ವಾಪಸ್ ಕರೆತಂದಿದ್ದೂ ಬಿಟ್ಟಿದ್ದರು ಎಂದು ಹೇಳಲಾಗಿತ್ತು. ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ಇದನ್ನೂ ಓದಿ: `ಕಾಂತಾರ’ ನೋಡಿ ತುಂಬಾ ಕಲಿತೆ: ರಿಷಬ್ ಚಿತ್ರಕ್ಕೆ ಹೃತಿಕ್ ರೋಷನ್ ಮೆಚ್ಚುಗೆ

    ಈ ಗಲಾಟೆ ನಂತರ ಎರಡೂ ಕಡೆ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು. ನನ್ನ ಮಗ ಸಾಮ್ರಾಟ್ ನಿಗೆ ಬೈದು ಬೆದರಿಕೆ ಹಾಕಿದ್ರು ಎಂದು‌ ವಿಜಯ್ ದೂರು ನೀಡಿದ್ರು. ವಿಜಯ್ ಮೇಲೆ ಪಾನಿಪುರಿ ಕಿಟ್ಟಿ ಕೂಡ ದೂರು ದಾಖಲಿಸಿದ್ದರು. ಸದ್ಯ ವಿಜಯ್ ಮೇಲಿರುವ ಕೇಸ್ ನಡೀತಾ ಇದೆ. ಪಾನಿಪುರಿ ಕಿಟ್ಟಿಮೇಲೆ ನೀಡಿದ್ದ ದೂರು ಸಾಕ್ಷ್ಯಗಳ ಕೊರೆಯಿಂದಾಗಿ ಕ್ಲೋಸ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಿಜಯ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಸದರಿ ಕೇಸ್ ಅನ್ನು ಗಮನಿಸಿದ ನ್ಯಾಯಾಲಯವು ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಎಫ್.ಐ.ಆರ್ ಮಾಡುವಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸೂಚನೆ ನೀಡಿತ್ತು. ಇದೀಗ ಕೇಸ್ ದಾಖಲಾಗಿದೆ. ಮತ್ತು ಕಿಟ್ಟಿ ಹಾಜರ್ ಕೂಡ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟ ದುನಿಯಾ ವಿಜಯ್  ಹಲ್ಲೆ ಪ್ರಕರಣ: ಹಳೆ ಪ್ರಕರಣಕ್ಕೀಗ ಮರುಜೀವ

    ನಟ ದುನಿಯಾ ವಿಜಯ್ ಹಲ್ಲೆ ಪ್ರಕರಣ: ಹಳೆ ಪ್ರಕರಣಕ್ಕೀಗ ಮರುಜೀವ

    ಟ ದುನಿಯಾ ವಿಜಯ್ ಮತ್ತು ಜಿಮ್ ತರಬೇತಿದಾರು ಪಾನಿಪುರಿ ಕಿಟ್ಟಿ ನಡುವೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಇದೀಗ ಮತ್ತೆ ಮರುಜೀವ ಬಂದಿದೆ. ಹೈಕೋರ್ಟ್ ಸೂಚನೆಯ ಮೇರೆಗೆ ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ ಮಾಡಿದ್ದ ಪಾನಿಪುರಿ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಈ ಮೂಲಕ 2018 ರಲ್ಲಿ ನಡೆದ ಪ್ರಕರಣವನ್ನು ಮತ್ತೆ ರೀ ಓಪನ್ ಮಾಡಲಾಗಿದೆ. ಹೈಕೋರ್ಟ್ ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ.

    2018ರಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆದಿತ್ತು. ಈ ಸಂದರ್ಭದಲ್ಲಿ  ಪಾನಿಪುರಿ ಕಿಟ್ಟಿ ಟೀಂಗೂ ಹಾಗೂ ದುನಿಯಾ ವಿಜಯ್ ಟೀಂ ಗೂ ಗಲಾಟೆ ನಡೆದಿತ್ತು. ಅಂದು ಸ್ಪರ್ಧೆ ಮಾಡಿದ್ದ ಪಾನಿಪುರಿ ಕಿಟ್ಟಿಯ ಸಹೋದರ ಮಾರುತಿ‌ ಗೌಡನನ್ನು ಗಲಾಟೆ ನಂತರ ದುನಿಯಾ ವಿಜಯ್ ಕಾರಿನಲ್ಲಿ ಕರೆದುಕೊಂಡು ಹೋಗಿ, ಹಿಗ್ಗಮುಗ್ಗ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು. ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ವಾಪಸ್ ಕರೆತಂದಿದ್ದೂ ಬಿಟ್ಟಿದ್ದರು ಎಂದು ಹೇಳಲಾಗಿತ್ತು. ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ಇದನ್ನೂ ಓದಿ: ಮೊದಲ ಬಾರಿಗೆ ಮಗಳ ಮುಖ ಪರಿಚಯಿಸಿದ `ಯುವರತ್ನ’ ನಟಿ

    ಈ ಗಲಾಟೆ ನಂತರ ಎರಡೂ ಕಡೆ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು. ನನ್ನ ಮಗ ಸಾಮ್ರಾಟ್ ನಿಗೆ ಬೈದು ಬೆದರಿಕೆ ಹಾಕಿದ್ರು ಎಂದು‌ ವಿಜಯ್ ದೂರು ನೀಡಿದ್ರು. ವಿಜಯ್ ಮೇಲೆ ಪಾನಿಪುರಿ ಕಿಟ್ಟಿ ಕೂಡ ದೂರು ದಾಖಲಿಸಿದ್ದರು. ಸದ್ಯ ವಿಜಯ್ ಮೇಲಿರುವ ಕೇಸ್ ನಡೀತಾ ಇದೆ. ಪಾನಿಪುರಿ ಕಿಟ್ಟಿಮೇಲೆ ನೀಡಿದ್ದ ದೂರು ಸಾಕ್ಷ್ಯಗಳ ಕೊರೆತೆಯಿಂದಾಗಿ ಕ್ಲೋಸ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಿಜಯ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಸದರಿ ಕೇಸ್ ಅನ್ನು ಗಮನಿಸಿದ ನ್ಯಾಯಾಲಯವು ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಎಫ್.ಐ.ಆರ್ ಮಾಡುವಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸೂಚನೆ ನೀಡಿತ್ತು. ಇದೀಗ ಕೇಸ್ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸುನಂದಾ ಕೇಸ್‌ನಲ್ಲಿ ತರೂರ್‌ಗೆ ಕ್ಲೀನ್‌ ಚಿಟ್‌ – ಹೈಕೋರ್ಟ್‌ ಮೊರೆ ಹೋದ ದೆಹಲಿ ಪೊಲೀಸ್

    ಸುನಂದಾ ಕೇಸ್‌ನಲ್ಲಿ ತರೂರ್‌ಗೆ ಕ್ಲೀನ್‌ ಚಿಟ್‌ – ಹೈಕೋರ್ಟ್‌ ಮೊರೆ ಹೋದ ದೆಹಲಿ ಪೊಲೀಸ್

    ನವದೆಹಲಿ: ಸುನಂದಾ ಪುಷ್ಕರ್ ಸಾವಿನ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್‌ ಅವರಿಗೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಹೈಕೋರ್ಟ್ ಮೊರೆ ಹೋಗಿದ್ದಾರೆ.

    ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಶಶಿ ತರೂರ್‌ಗೆ ನೋಟಿಸ್‌ ಜಾರಿ ಮಾಡಿದ್ದು ಮುಂದಿನ ವಿಚಾರಣೆಯನ್ನು ಫೆಬ್ರವರಿ 7ಕ್ಕೆ ನಿಗದಿ ಮಾಡಿದೆ.

    ತರೂರ್‌ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿದ 90 ದಿನದ ಒಳಗಡೆ ಪೊಲೀಸರು ಪ್ರಶ್ನೆ ಮಾಡಬೇಕಿತ್ತು. ಆದರೆ 15 ತಿಂಗಳ ಬಳಿಕ ತೀರ್ಪನ್ನು ಪ್ರಶ್ನೆ ಮಾಡಲಾಗಿದೆ. ಹೀಗಾಗಿ ಅರ್ಜಿಯನ್ನು ವಿಚಾರಣೆಗೆ ಪುರಸ್ಕರಿಸಬಾರದು ಎಂದು ವಾದಿಸಿದರು.

    ಏನಿದು ಪ್ರಕರಣ?
    8 ವರ್ಷಗಳ ಹಿಂದೆ 2014ರ ಜನವರಿ 17ರಂದು ದೆಹಲಿಯ ಐಶಾರಾಮಿ ಹೋಟೆಲ್‍ನಲ್ಲಿ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಮೊದಲಿಗೆ ಇದು ಹತ್ಯೆ ಎಂದು ಭಾವಿಸಿ ಪೊಲೀಸರು ತನಿಖೆ ನಡೆಸಿದ್ದರು. ಆದರೆ ಪೊಲೀಸರು ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಆತ್ಮಹತ್ಯೆ ಎಂದು ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: ನವೆಂಬರ್‌ನಲ್ಲಿ 1.45 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಕರ್ನಾಟಕದ ಪಾಲು ಎಷ್ಟು?

    ಪುಷ್ಕರ್ ಆತ್ಮಹತ್ಯೆ ಮಾಡಿಕೊಳ್ಳಲು ತರೂರ್ ಪ್ರಚೋದನೆ ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. 2021ರ ಆಗಸ್ಟ್‌ 18 ರಂದು ಈ ಪ್ರಕರಣದಲ್ಲಿ ತರೂರ್‌ಗೆ ಪಟಿಯಾಲ ಕೋರ್ಟ್ ಕ್ಲೀನ್ ಚಿಟ್ ನೀಡಿತ್ತು.

    ಒಂದು ಜೀವವನ್ನು ಕಳೆದುಕೊಂಡಿದ್ದೇವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ತರೂರ್‌ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪವನ್ನು ಸಾಬೀತುಪಡಿವ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಕೋರ್ಟ್‌ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • 15 ಸಾವಿರ ಪ್ರಾಥಮಿಕ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

    15 ಸಾವಿರ ಪ್ರಾಥಮಿಕ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

    ಬೆಂಗಳೂರು: 15ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ(Karnataka Graduate Primary Teacher Selection List) ಪಟ್ಟಿ ಪ್ರಕ್ರಿಯೆಗೆ ಹೈಕೋರ್ಟ್‌(High Court) ತಡೆ ನೀಡಿದೆ.

    ಮೀಸಲಾತಿ(Reservation) ಸಂಬಂಧ ಹಲವು ಅಭ್ಯರ್ಥಿಗಳ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್‌ ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮುಂದಿನ ಕ್ರಮ ಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಅಂತಿಮ ಆಯ್ಕೆ ಪಟ್ಟಿಗೆ ಮುಂದಿನ ವಿಚಾರಣೆವರೆಗೂ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು ವಿಚಾರಣೆಯನ್ನು ಮುಂದೂಡಿದೆ. ಇದನ್ನೂ ಓದಿ: iPhone ತಯಾರಿಸುವ ಕೋಲಾರದ ವಿಸ್ಟ್ರಾನ್‌ ಖರೀದಿಗೆ ಮುಂದಾದ ಟಾಟಾ

    court order law

    15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ನ.19 ರಂದು ಪ್ರಕಟಿಸಲಾಗಿದ್ದು, ಆ ಪೈಕಿ 13,363 ಅಭ್ಯರ್ಥಿಗಳಷ್ಟೇ ಆಯ್ಕೆ ಆಗಿದ್ದರು. ಉಳಿದ 1,637 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಲ್ಲದ ಕಾರಣ ಅವು ಖಾಲಿ ಉಳಿದಿದ್ದವು.

    ಅಕ್ಷತಾ ಚೌಗುಲೆ ಸೇರಿದಂತೆ ಇತರೆ 20 ಮಂದಿ ಅಭ್ಯರ್ಥಿಗಳು ಮೀಸಲಾತಿ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪಿಎಫ್ಐ ಬ್ಯಾನ್‌ – ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

    ಪಿಎಫ್ಐ ಬ್ಯಾನ್‌ – ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

    ಬೆಂಗಳೂರು: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(UAPA) ಅಡಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ಸಂಘಟನೆಯ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು ಹೈಕೋರ್ಟ್‌(High Court) ತೀರ್ಪು ಕಾಯ್ದಿರಿಸಿದೆ.

    ಕರ್ನಾಟಕದ ಪಿಎಫ್ಐ ಅಧ್ಯಕ್ಷ ನಾಸಿರ್ ಅಲಿ ನಿಷೇಧವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸರ್ಕಾರ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿದೆ. ಕಾನೂನುಬಾಹಿರ ಸಂಘಟನೆ ಎನ್ನಲು ಕಾರಣ ನೀಡಿಲ್ಲ. ತಕ್ಷಣ ನಿಷೇಧಕ್ಕೆ ಕಾರಣ ನೀಡಬೇಕಿತ್ತು. ವಾದಮಂಡನೆಗೆ ಕಾಲಾವಕಾಶ ನೀಡದೇ ಬ್ಯಾನ್ ಮಾಡಲಾಗಿದೆ. ಯುಎಪಿಎ ಕಾಯ್ದೆಗೆ ವಿರುದ್ಧವಾಗಿ ಆದೇಶ ಹೊರಡಿಸಲಾಗಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್ ಪಾಟೀಲ್ ವಾದ ಮಂಡಿಸಿದ್ದರು. ಇದನ್ನೂ ಓದಿ: ದೆಹಲಿಯಲ್ಲಿ ಮತ್ತೊಂದು ಪೀಸ್ ಪೀಸ್ ಕ್ರೈಂ ಸ್ಟೋರಿ- ಪತಿಯನ್ನು ತುಂಡರಿಸಿ ಫ್ರಿಜ್‌ನಲ್ಲಿಟ್ಟ ಪತ್ನಿ!

    ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ. ಪಿಎಫ್ಐ ಸಂಘಟನೆಯಿಂದ ದೇಶವಿರೋಧಿ ಚಟುವಟಿಕೆ ನಡೆಯುತ್ತಿದ್ದು, ದೇಶದಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ಸಂಘಟನೆಯ ಕಾರ್ಯಕರ್ತರು ಎಸಗುತ್ತಿದ್ದಾರೆ. ಸಂಘಟನೆಯ ಸದಸ್ಯರಿಂದ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಸಕಾರಣವಾಗಿಯೇ ಪಿಎಫ್ಐ ನಿರ್ಬಂಧಿಸಲಾಗಿದೆ ಎಂದು ಕೇಂದ್ರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಜಾಮಿಯ ವಿವಾದ- ನಾಳೆ ಹೈಕೋರ್ಟ್‍ನಲ್ಲಿ PIL  ಸಲ್ಲಿಕೆ

    ಜಾಮಿಯ ವಿವಾದ- ನಾಳೆ ಹೈಕೋರ್ಟ್‍ನಲ್ಲಿ PIL ಸಲ್ಲಿಕೆ

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯ ಮಸೀದಿ (Jamia Masjid Srirangapatna) ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಜಾಮಿಯ ಮಸೀದಿಯೋ ಅಥವಾ ಮಂದಿರವೋ ಎಂಬ ವಿಚಾರ ಇದೀಗ ತಾರ್ಕಿಕ ಅಂತ್ಯ ಕಾಣಲು ನ್ಯಾಯಾಲಯದ ಮೆಟ್ಟಿಲು ಏರಿದೆ.

    ಜಾಮಿಯ ಮಸೀದಿಯ ವಿವಾದ ನಾಳೆ ಬೆಂಗಳೂರಿನ ಹೈಕೋರ್ಟ್ (HighCourt) ನಲ್ಲಿ ಭಜರಂಗ ಸೇನೆ ಪಿಐಎಲ್ (PIL) ಸಲ್ಲಿಕೆ ಮಾಡಲಿದೆ. ಭಜರಂಗ (Bhajrangdal) ಸೇನೆಯಿಂದ ದಾವೆ ಹೂಡಿದ್ದು, ನಾಳೆ ಹೈಕೋರ್ಟ್‍ನಲ್ಲಿ ಜಾಮಿಯ ವಿವಾದ ಅಡ್ಮಿಶನ್ ಆಗಲಿರುವ ಆಗಲಿದೆ. ಐದು ಮಂದಿ ವಕೀಲರ ತಂಡದಿಂದ ಕಾನೂನು ಹೋರಾಟ ನಡೆಯಲಿದ್ದು, ವಕೀಲ ರವಿಶಂಕರ್ ಹೆಚ್.ಎಸ್ ನೇತೃತ್ವದ ಐದು ಮಂದಿಯ ತಂಡ ಹೋರಾಟ ನಡೆಸಲಿದೆ. ಇದನ್ನೂ ಓದಿ: ಮದುವೆಯಾಗಲು ಹುಡುಗಿಗಾಗಿ ಕ್ಯೂ ನಿಂತ ಮಂಡ್ಯ ಯುವ ರೈತರು

    ಒಂದು ಕಡೆ ನಾಳೆ ಕೋರ್ಟ್‍ಲ್ಲಿ ಪಿಐಎಲ್ ಸಲ್ಲಿಕೆಯಾಗಲಿದ್ದು, ಶನಿವಾರ ಭಜರಂಗ ಸೇನೆಯ ಕಾರ್ಯಕರ್ತರು ಹಾಗೂ ಹನುಮ ಭಕ್ತರಿಂದ ಹರಕೆಯ ಪಾದಯಾತ್ರೆ ನಡೆಸಲಿದ್ದಾರೆ. ನ್ಯಾಯಾಲಯದ ಪಿಟಿಶನ್ ಹಿಡಿದುಕೊಂಡು ಮಂಡ್ಯದಿಂದ ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ (Aanjaneyaswamy Temple) ದ ವರೆಗೆ ಪಾದಯಾತ್ರೆ ನಡೆಯಲಿದೆ.

    ಪಿಟಿಶನ್‍ನನ್ನು ಆಂಜನೇಯಸ್ವಾಮಿ ಪಾದದಲ್ಲಿ ಇಟ್ಟು ವಿಶೇಷ ಪೂಜೆ ಸಲ್ಲಿಸಿ, ವಾಪಸ್ ನೀನು ಮೂಲ ಸ್ಥಳಕ್ಕೆ ಹೋಗಬೇಕು. ಈ ಕಾನೂನು ಹೋರಾಟದಲ್ಲಿ ಗೆಲುವು ಆಗಬೇಕೆಂದು ಆಂಜನೇಯಸ್ವಾಮಿಯ ಬಳಿ ಹರಕೆ ಕಟ್ಟಿಕೊಳ್ಳಲಿರುವ ಹನುಮ ಭಕ್ತರು ಪ್ರಾರ್ಥನೆ ಸಲ್ಲಿಸಲಿದ್ದಾರೆಂದು ಭಜರಂಗ ಸೇನೆಯ ರಾಜ್ಯಾಧ್ಯಕ್ಷ ಮಂಜುನಾಥ್ ಮಂಡ್ಯರವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]