Tag: high court

  • ಎರಡೂವರೆ ವರ್ಷದ ಬಳಿಕ ನಡೆಯಿತು ಗ್ರಾ.ಪಂ. ಮರು ಮತ ಎಣಿಕೆ

    ಎರಡೂವರೆ ವರ್ಷದ ಬಳಿಕ ನಡೆಯಿತು ಗ್ರಾ.ಪಂ. ಮರು ಮತ ಎಣಿಕೆ

    ತುಮಕೂರು: ಹೈಕೋರ್ಟ್‌ (High Court) ಆದೇಶದಂತೆ ಹೊಸಕೆರೆ ಗ್ರಾಮ ಪಂಚಾಯತ್‌ (Village Panchayat) ಶಿವನೇಹಳ್ಳಿ ವಾರ್ಡ್‌ ಮತಗಳ ಮರುಎಣಿಕೆ (Recounting) ಗುರುವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.

    ಎರಡೂವರೆ ವರ್ಷದ ಹಿಂದೆ ನಡೆದ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಶಿವೇನಹಳ್ಳಿ ವಾರ್ಡ್‌ನ  ಅಜಯ್ 296 ಮತ ಪಡೆದು, ಕೇವಲ 1 ಮತದ ಅಂತರದಲ್ಲಿ ಗೆಲುವು ಸಾಧಿಸಿದ್ದರು. 295 ಮತ ಪಡೆದಿದ್ದ ಅರೇಹಳ್ಳಿ ನಟರಾಜು ಮತ ಎಣಿಕೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

    high court (1)

    ಗುಬ್ಬಿ ಹಾಗೂ ತುಮಕೂರು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಎರಡು ವರ್ಷದ ನಂತರ ಚುನಾಯಿತ ಸದಸ್ಯ ಅರೇಹಳ್ಳಿ ನಟರಾಜು ಎಂದು ಘೋಷಿಸಿ ಪ್ರಮಾಣ ಪತ್ರ ಸಹ ನೀಡಲಾಗಿತ್ತು. ಇದನ್ನೂ ಓದಿ: ಟ್ವಿಟ್ಟರ್‌ಗಿಂತ ಥ್ರೆಡ್ಸ್‌ ಭಿನ್ನ ಹೇಗೆ? ವಿಶೇಷತೆ ಏನು

    ಈ ಆದೇಶವನ್ನು ಪ್ರಶ್ನಿಸಿ ಸದಸ್ಯ ಅಜಯ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದಂತೆ ಗುರುವಾರ ಮರು ಎಣಿಕೆ ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸದೇ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಕಳುಹಿಸಲಾಗಿದೆ.

    ಅರ್ಜಿದಾರ ಅಜಯ್ ಪ್ರತಿಕ್ರಿಯಿಸಿ, ಕೆಳ ನ್ಯಾಯಾಲಯಗಳ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಮರುಎಣಿಕೆ ಆದೇಶ ಪಡೆಯಲಾಗಿತ್ತು. ಅದರಂತೆ  ಈಗಎಣಿಕೆ ನಡೆದಿದ್ದು, ಗೆಲುವು ಸಾಧಿಸುತ್ತೇನೆ ಎಂಬ ನಿರೀಕ್ಷೆ ಇದೆ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುರುಘಾ ಮಠಕ್ಕೆ ಜಿಲ್ಲಾ ನ್ಯಾಯಾಧೀಶರನ್ನು ಆಡಳಿತಾಧಿಕಾರಿಯಾಗಿ ನೇಮಿಸಿದ ಹೈಕೋರ್ಟ್

    ಬೆಂಗಳೂರು: ಮುರುಘಾಮಠಕ್ಕೆ (Murugha Mutt) ತಾತ್ಕಾಲಿಕ ಆಡಳಿತಾಧಿಕಾರಿಯಾಗಿ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ನೇಮಕ ಮಾಡಿ ಹೈಕೋರ್ಟ್ (High Court) ಮುಖ್ಯಪೀಠ ಆದೇಶ ಮಾಡಿದೆ.

    ಮಂಗಳವಾರ ಬೆಳಗ್ಗೆ 11 ಗಂಟೆಗೆ ಅಧಿಕಾರ ವಹಿಸಿಕೊಳ್ಳಲು ಸಿಜೆ ಪ್ರಸನ್ನ ಬಿ ವರಾಳೆ, ನ್ಯಾ. ಎಂ.ಜಿ.ಎಸ್ ಕಮಲ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ. ಈ ಹಿಂದೆ ಏಕಸದಸ್ಯ ಪೀಠ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ರದ್ದುಪಡಿಸಿತ್ತು. ಇದಾದ ಬಳಿಕ ಹಿಂದಿನ ಸರ್ಕಾರ ವಸ್ತ್ರದ್ ಅವರ ನೇಮಕ ರದ್ದು ಮಾಡಿ ಆದೇಶ ಮಾಡಿತ್ತು. ಏಕ ಸದಸ್ಯ ಪೀಠದ ಆದೇಶಕ್ಕೆ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಮಂಗಳವಾರ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯಪೀಠ ಈ ಆದೇಶ ನೀಡಿದೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಮರುತನಿಖೆಗೆ ಎಸ್‍ಐಟಿ ರಚನೆ – ನಾಳೆಯಿಂದಲೇ ತನಿಖೆಗೆ ಮರುಜೀವ

    ಜುಲೈ 18 ರಂದು ಮೇಲ್ಮನವಿ ವಿಚಾರಣೆ ನಡೆಯಲಿದ್ದು, ಮುಂದಿನ ಆದೇಶದವರೆಗೆ ಚಿತ್ರದುರ್ಗ (Chitradurga) ಪ್ರಧಾನ ಜಿಲ್ಲಾ ನ್ಯಾಯಾಧೀಶರು ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.

    ಮಠ, ವಿದ್ಯಾಪೀಠದ ದಿನನಿತ್ಯದ ವ್ಯವಹಾರ ನೋಡಿಕೊಳ್ಳಬೇಕು. ಯಾವುದೇ ನೀತಿ ನಿರ್ಧಾರದ ಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಚಿತ್ರದುರ್ಗ ಜಿಲ್ಲಾಧಿಕಾರಿ ಜಿಲ್ಲಾ ನ್ಯಾಯಾಧೀಶರಿಗೆ ಸಹಕಾರ ನೀಡಬೇಕು. ಅಲ್ಲದೇ ಜಿಲ್ಲಾ ನ್ಯಾಯಾಧೀಶರು ಕೋರಿದ ಸಹಕಾರ ನೀಡಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ನಿಗದಿಗಿಂತ ಚುನಾವಣೆಯಲ್ಲಿ ಅಧಿಕ ವೆಚ್ಚ – ಇಬ್ಬರೂ ಬಿಜೆಪಿ ನಾಯಕರಿಗೆ ನೋಟಿಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಚಾರಣೆಗೆ ಬರುವಂತೆ ‘ಆದಿ ಪುರುಷ’ ತಂಡಕ್ಕೆ ಹೈಕೋರ್ಟ್ ಸೂಚನೆ

    ವಿಚಾರಣೆಗೆ ಬರುವಂತೆ ‘ಆದಿ ಪುರುಷ’ ತಂಡಕ್ಕೆ ಹೈಕೋರ್ಟ್ ಸೂಚನೆ

    ದಿ ಪುರುಷ ಸಿನಿಮಾವನ್ನು ನಿಷೇಧಿಸುವಂತೆ ಕೋರಿ ಕುಲದೀಪ್ ತಿವಾರಿ ಹಾಗೂ ನವೀನ್ ಧವನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ನಡೆಸಿದ ಅಲಹಾಬಾದ್ ಹೈಕೋರ್ಟಿನ ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾನ್ ಮತ್ತು ಪ್ರಕಾಶ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠ  ಜುಲೈ 27ಕ್ಕೆ ಸಿನಿಮಾದ ನಿರ್ದೇಶಕ ಓಂ ರಾವುತ್, ನಿರ್ಮಾಪಕ ಭೂಷಣ್ ಕುಮಾರ್ ಹಾಗೂ ಬರಹಗಾರ ಮನೋಜ್ ಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

    ಅಲ್ಲದೇ, ಈ ಸಿನಿಮಾವು ಸಾರ್ವಜನಿಕರ ಭಾವನೆಗೆ ಧಕ್ಕೆ ತರುವಂತಿದೆಯೇ ಎಂದು ಪರಿಶೀಲಿಸಿದ ಐವರು ಸದಸ್ಯರಿರುವ ಸಮಿತಿಯನ್ನು ನೇಮಿಸಬೇಕು ಎಂದು ಸರಕಾರಕ್ಕೂ ಹೈಕೋರ್ಟ್ ಸೂಚನೆ ನೀಡಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ನೀಡಿರುವ ಪ್ರಮಾಣಪತ್ರವನ್ನು ಮರುಪರಿಶೀಲಿಸಲು ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

    ಆದಿಪುರುಷ ಸಿನಿಮಾ ರಿಲೀಸ್ ಆಗಿ ವಾರದ ನಂತರ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದ್ದರೂ, ಅದರ ಕುರಿತಾಗಿ ನಡೆಯುತ್ತಿರುವ ಚರ್ಚೆ ಮಾತ್ರ ನಿಂತಿಲ್ಲ. ಹಲವು ಕಡೆ ಸಿನಿಮಾದ ಬಗ್ಗೆ ದೂರು ನೀಡಲಾಗಿದೆ. ದೇಶದ ಹೈಕೋರ್ಟ್ ಗಳು ಚಿತ್ರದ ಚಿಂತನೆಯನ್ನು ಗಂಭೀರವಾಗಿ ತಗೆದುಕೊಂಡಿವೆ. ಹೀಗಾಗಿ ಚಿತ್ರ ತಂಡಕ್ಕೆ ಸಂಕಷ್ಟ ಎದುರಾಗುತ್ತಲೇ ಇದೆ.

    ಆದಿಪುರುಷ (Adipurush) ಸಿನಿಮಾವನ್ನು ನೇಪಾಳ ಸರಕಾರ ಬ್ಯಾನ್ ಮಾಡಿತ್ತು. ಚಿತ್ರದಲ್ಲಿ ಸೀತೆ ಬಗ್ಗೆ ಹೇಳಲಾದ ಡೈಲಾಗ್ ಸರಿಯಾಗಿಲ್ಲ ಎಂದು ಕಠ್ಮಂಡು ಮೇಯರ್ ಕೋರ್ಟ್ ಮೆಟ್ಟಿಲು ಏರಿದ್ದರು. ಸಿನಿಮಾವನ್ನು ಬ್ಯಾನ್ ಮಾಡುವುದು ಸರಿಯಲ್ಲ ಎಂದು ಅಲ್ಲಿನ ಹೈಕೋರ್ಟ್ ಹೇಳಿದ್ದರೂ, ಇತಿಹಾಸಕ್ಕೆ ಅಪಚಾರ ಮಾಡಬಾರದು ಎನ್ನುವುದನ್ನು ಎತ್ತಿ ಹಿಡಿದಿತ್ತು. ಇದೀಗ ಅಲಹಾಬಾದ್ (Allahabad) ಹೈಕೋರ್ಟ್ ಕೂಡ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದನ್ನೂ ಓದಿ:ಗೋಲ್ಡನ್ ಟೆಂಪಲ್‌ನಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ ರಾಘವ್- ಪರಿಣಿತಿ ಜೋಡಿ

    ಆದಿಪುರುಷ ಸಿನಿಮಾದ ಚಿತ್ರಕಥೆ ಮತ್ತು ಸಂಭಾಷಣೆ ಕುರಿತಂತೆ  ಸಲ್ಲಿಸಲಾದ ಅರ್ಜಿಯನ್ನು ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟಿನ (High Court) ಲಕ್ನೋ ಪೀಠವು ಚಿತ್ರತಂಡದ ಜೊತೆ ಸೆನ್ಸಾರ್ ಮಂಡಳಿಯನ್ನು ತೀವ್ರವಾಗಿ ಟೀಕಿಸಿದೆ. ‘ಭಾರತೀಯರು ಸಂಹಿಷ್ಟುಗಳು ಎನ್ನುವ ಕಾರಣಕ್ಕೆ ಸಹನೆ ಪರೀಕ್ಷೆ ಮಾಡಲಾಗುತ್ತಿದೆಯೇ?’ ಎಂದು ಪ್ರಶ್ನೆ ಮಾಡಿದೆ.

    ರಾಮಾಯಣವನ್ನು ಜನರು ಪವಿತ್ರ ಎಂದು ದಿನವೂ ಪಠಿಸುತ್ತಾರೆ. ರಾಮಚರಿತಮಾನಸವನ್ನು ಓದುತ್ತಾರೆ. ಇಂತಹ ರಾಮಾಯಣವನ್ನೇ ಸಿನಿಮಾ ಮಾಡಿ, ಆ ನಂತರ ಸಿನಿಮಾಗೂ ರಾಮಾಯಣಕ್ಕೂ ಸಂಬಂಧವಿಲ್ಲ ಎಂದರೆ ಮಾಡಿದ ತಪ್ಪು ಮುಚ್ಚಿದಂತೆ ಆಗುತ್ತದೆ? ಚಿತ್ರದಲ್ಲಿನ ಸಂಭಾಷಣೆಗಳು ಕೂಡ ಅಪಮಾನ ಮಾಡುವಂತಿವೆ. ಈ ಸಿನಿಮಾ ನೋಡಿದ ಮೇಲೂ ಜನರು ತಾಳ್ಮೆ ಕಳೆದುಕೊಂಡಿಲ್ಲ ಎನ್ನುವುದು ಅವರ ಸಹಿಷ್ಣುತೆಯನ್ನು ತೋರಿಸುತ್ತದೆ’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದೆ.

     

    ದೇವರು ಎಂದು ಪೂಜಿಸುವ ಭಗವಾನ್ ಹನುಮಾನ್ ಮತ್ತು ಸೀತೆಯನ್ನು ಸಿನಿಮಾದಲ್ಲಿ ಏನೂ ಅಲ್ಲ ಎನ್ನುವಂತೆ ತೋರಿಸಿದ್ದೀರಿ. ಕೆಲವು ದೃಶ್ಯಗಳು ವಯಸ್ಕ ವರ್ಗಕ್ಕೆ ಸೇರುವಂತಹವು ಆಗಿವೆ. ನೀವು ಏನನ್ನು ತೋರಿಸಲು ಹೊರಟಿದ್ದೀರಿ ಎಂದು ಪ್ರಶ್ನೆ ಮಾಡಿದ್ದಲ್ಲದೇ, ಸಂಭಾಷಣೆ ಬರೆದಿರುವ ಮನೋಜ್ (Manoj) ಅವರಿಗೂ ನೋಟಿಸ್ ನೀಡಿ, ಕಕ್ಷಿದಾರನನ್ನಾಗಿ ಮಾಡಿ ಎಂದು ನಿರ್ದೇಶನ ನೀಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿನಿಮಾ ಮಾಡುವವರು ಧಾರ್ಮಿಕ ವಿಚಾರಗಳಿಂದ ದೂರವಿರಿ : ಅಲಹಾಬಾದ್ ಹೈಕೋರ್ಟ್

    ಸಿನಿಮಾ ಮಾಡುವವರು ಧಾರ್ಮಿಕ ವಿಚಾರಗಳಿಂದ ದೂರವಿರಿ : ಅಲಹಾಬಾದ್ ಹೈಕೋರ್ಟ್

    ದಿಪುರುಷ (Adipurush) ಸಿನಿಮಾ ವಿಚಾರವಾಗಿ ಅಲಹಾಬಾದ್ (Allahabad) ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ. ಕೇವಲ ಆದಿಪುರುಷ ಸಿನಿಮಾ ಟೀಮ್ ಗೆ ಮಾತ್ರವಲ್ಲ, ಇತರ ಸಿನಿಮಾ ಮಾಡುವ ನಿರ್ದೇಶಕರಿಗೆ ಅದು ಕಿವಿಮಾತು ಹೇಳಿದೆ. ಸಿನಿಮಾ ಮಾಡುವವರು ಧಾರ್ಮಿಕ ವಿಚಾರಗಳಿಂದ ದೂರವಿರಿ ಎಂದು ಹೇಳಿದೆ.

    ಆದಿಪುರುಷ ಸಿನಿಮಾದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟ್ (High Court) ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಶ್ರೀ ಪ್ರಕಾಶ್ ಸಿಂಗ್ ಆದಿಪುರುಷ ಚಿತ್ರತಂಡವನ್ನು ತರಾಟೆಗೆ ತಗೆದುಕೊಂಡಿದ್ದಷ್ಟೇ ಅಲ್ಲ, ‘ನೀವು ಇದೇ ರೀತಿ ತಪ್ಪಾಗಿ ಕುರಾನ್ (Quran) ಬಗ್ಗೆ ಸಣ್ಣದೊಂದು ಡಾಕ್ಯೂಮೆಂಟರಿ ಮಾಡಿ ಮುಂದೇನಾಗತ್ತೆ ಅಂತ ನೋಡಿ’ ಎಂದು ಮೌಖಿಕವಾಗಿ ಕುಟುಕಿದರು. ಇದನ್ನೂ ಓದಿ:ಹಾಲಿವುಡ್ ಸಂದರ್ಶನದಲ್ಲಿ ಆಲಿಯಾ ಭಟ್ ಹೀಗಾ ಮಾಡೋದು- ರಣ್‌ಬೀರ್ ಪತ್ನಿ ಟ್ರೋಲ್

    ಮುಂದುವರೆದು ಮಾತನಾಡಿದ ನ್ಯಾಯಾಧೀಶರು, ‘ಯಾವುದೇ ಧರ್ಮದ (Religious) ವಿಷಯಗಳನ್ನು ತಪ್ಪಾಗಿ ತೋರಿಸಬೇಡಿ. ಕೋರ್ಟಿಗೆ ಯಾವುದೇ ಧರ್ಮವಿಲ್ಲ. ಬೈಬಲ್ (Bible), ಕುರಾನ್ ಅಂತ ವಿಚಾರಗಳನ್ನೂ ತೆಗೆದುಕೊಳ್ಳಬೇಡಿ’ ಎಂದು ತಾಕೀತು ಮಾಡಿದರು. ಧಾರ್ಮಿಕ ವಿಷಯಗಳನ್ನು ಎತ್ತಿಕೊಂಡು ಸಿನಿಮಾ ಮಾಡುವುದು ತಮಾಷೆ ವಿಷಯವಲ್ಲ. ಆದಿಪುರುಷ ಸಿನಿಮಾದ ನಿರ್ಮಾಪಕರು ನ್ಯಾಯಾಲಯಕ್ಕೆ ಹಾಜರಾಗಬೇಕು’ ಎಂದು ತಿಳಿಸಿದರು.

    ಆದಿಪುರುಷ ಸಿನಿಮಾದ ವಿಚಾರವಾಗಿ ಈ ಚಿತ್ರವನ್ನು ನಿಷೇಧಿಸಬೇಕು ಎಂದು ಅಲಹಾಬಾದ್ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಧೀಶರು, ಸಿನಿಮಾ ಮತ್ತು ಧರ್ಮದ ಬಗ್ಗೆ ಸಾಕಷ್ಟು ಪಾಠಗಳನ್ನು ಮಾಡಿದರು. ಸೂಕ್ಷ್ಮ ವಿಷಯಗಳನ್ನು ಸಿನಿಮಾದಲ್ಲಿ ತರದಂತೆ ಮೌಖಿಕ ಆದೇಶ ಮಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಆದಿಪುರುಷ’ ಸಿನಿಮಾ ತಂಡಕ್ಕೆ ಬಿಸಿ ಮುಟ್ಟಿಸಿದ ಅಲಹಾಬಾದ್ ಹೈಕೋರ್ಟ್

    ‘ಆದಿಪುರುಷ’ ಸಿನಿಮಾ ತಂಡಕ್ಕೆ ಬಿಸಿ ಮುಟ್ಟಿಸಿದ ಅಲಹಾಬಾದ್ ಹೈಕೋರ್ಟ್

    ಪ್ರಭಾಸ್ (Prabhas) ನಟನೆಯ ಆದಿಪುರುಷ ಸಿನಿಮಾ ರಿಲೀಸ್ ಆಗಿ ವಾರದ ನಂತರ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದ್ದರೂ, ಅದರ ಕುರಿತಾಗಿ ನಡೆಯುತ್ತಿರುವ ಚರ್ಚೆ ಮಾತ್ರ ನಿಂತಿಲ್ಲ. ಹಲವು ಕಡೆ ಸಿನಿಮಾದ ಬಗ್ಗೆ ದೂರು ನೀಡಲಾಗಿದೆ. ದೇಶದ ಹೈಕೋರ್ಟ್ ಗಳು ಚಿತ್ರದ ಚಿಂತನೆಯನ್ನು ಗಂಭೀರವಾಗಿ ತಗೆದುಕೊಂಡಿವೆ. ಹೀಗಾಗಿ ಚಿತ್ರ ತಂಡಕ್ಕೆ ಸಂಕಷ್ಟ ಎದುರಾಗುತ್ತಲೇ ಇದೆ.

    ಆದಿಪುರುಷ (Adipurush) ಸಿನಿಮಾವನ್ನು ನೇಪಾಳ ಸರಕಾರ ಬ್ಯಾನ್ ಮಾಡಿತ್ತು. ಚಿತ್ರದಲ್ಲಿ ಸೀತೆ ಬಗ್ಗೆ ಹೇಳಲಾದ ಡೈಲಾಗ್ ಸರಿಯಾಗಿಲ್ಲ ಎಂದು ಕಠ್ಮಂಡು ಮೇಯರ್ ಕೋರ್ಟ್ ಮೆಟ್ಟಿಲು ಏರಿದ್ದರು. ಸಿನಿಮಾವನ್ನು ಬ್ಯಾನ್ ಮಾಡುವುದು ಸರಿಯಲ್ಲ ಎಂದು ಅಲ್ಲಿನ ಹೈಕೋರ್ಟ್ ಹೇಳಿದ್ದರೂ, ಇತಿಹಾಸಕ್ಕೆ ಅಪಚಾರ ಮಾಡಬಾರದು ಎನ್ನುವುದನ್ನು ಎತ್ತಿ ಹಿಡಿದಿತ್ತು. ಇದೀಗ ಅಲಹಾಬಾದ್ (Allahabad) ಹೈಕೋರ್ಟ್ ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿದೆ.

    ಆದಿಪುರುಷ ಸಿನಿಮಾದ ಚಿತ್ರಕಥೆ ಮತ್ತು ಸಂಭಾಷಣೆ ಕುರಿತಂತೆ  ಸಲ್ಲಿಸಲಾದ ಅರ್ಜಿಯನ್ನು ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟಿನ (High Court) ಲಕ್ನೋ ಪೀಠವು ಚಿತ್ರತಂಡದ ಜೊತೆ ಸೆನ್ಸಾರ್ ಮಂಡಳಿಯನ್ನು ತೀವ್ರವಾಗಿ ಟೀಕಿಸಿದೆ. ‘ಭಾರತೀಯರು ಸಹಿಷ್ಟುಗಳು ಎನ್ನುವ ಕಾರಣಕ್ಕೆ ಸಹನೆ ಪರೀಕ್ಷೆ ಮಾಡಲಾಗುತ್ತಿದೆಯೇ?’ ಎಂದು ಪ್ರಶ್ನೆ ಮಾಡಿದೆ. ಇದನ್ನೂ ಓದಿ: ಪಡ್ಡೆಹುಡುಗರ ಕಣ್ಣು ಕುಕ್ಕುವಂತೆ ಹಾಟ್‌ ಆಗಿ ಕಾಣಿಸಿಕೊಂಡ ‘ಕೆಜಿಎಫ್‌’ ನಟಿ

    ರಾಮಾಯಣವನ್ನು ಜನರು ಪವಿತ್ರ ಎಂದು ದಿನವೂ ಪಠಿಸುತ್ತಾರೆ. ರಾಮಚರಿತಮಾನಸವನ್ನು ಓದುತ್ತಾರೆ. ಇಂತಹ ರಾಮಾಯಣವನ್ನೇ ಸಿನಿಮಾ ಮಾಡಿ, ಆ ನಂತರ ಸಿನಿಮಾಗೂ ರಾಮಾಯಣಕ್ಕೂ ಸಂಬಂಧವಿಲ್ಲ ಎಂದರೆ ಮಾಡಿದ ತಪ್ಪು ಮುಚ್ಚಿದಂತೆ ಆಗುತ್ತದೆ? ಚಿತ್ರದಲ್ಲಿನ ಸಂಭಾಷಣೆಗಳು ಕೂಡ ಅಪಮಾನ ಮಾಡುವಂತಿವೆ. ಈ ಸಿನಿಮಾ ನೋಡಿದ ಮೇಲೂ ಜನರು ತಾಳ್ಮೆ ಕಳೆದುಕೊಂಡಿಲ್ಲ ಎನ್ನುವುದು ಅವರ ಸಹಿಷ್ಣುತೆಯನ್ನು ತೋರಿಸುತ್ತದೆ’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದೆ.

     

    ದೇವರು ಎಂದು ಪೂಜಿಸುವ ಭಗವಾನ್ ಹನುಮಾನ್ ಮತ್ತು ಸೀತೆಯನ್ನು ಸಿನಿಮಾದಲ್ಲಿ ಏನೂ ಅಲ್ಲ ಎನ್ನುವಂತೆ ತೋರಿಸಿದ್ದೀರಿ. ಕೆಲವು ದೃಶ್ಯಗಳು ವಯಸ್ಕ ವರ್ಗಕ್ಕೆ ಸೇರುವಂತಹವು ಆಗಿವೆ. ನೀವು ಏನನ್ನು ತೋರಿಸಲು ಹೊರಟಿದ್ದೀರಿ ಎಂದು ಪ್ರಶ್ನೆ ಮಾಡಿದ್ದಲ್ಲದೇ, ಸಂಭಾಷಣೆ ಬರೆದಿರುವ ಮನೋಜ್ (Manoj) ಅವರಿಗೂ ನೋಟಿಸ್ ನೀಡಿ, ಕಕ್ಷಿದಾರನನ್ನಾಗಿ ಮಾಡಿ ಎಂದು ನಿರ್ದೇಶನ ನೀಡಿದೆ. ಈ ಎಲ್ಲ ಪ್ರಶ್ನೆಗಳಿಗೆ ಒಂದು ವಾರದಲ್ಲಿ ಉತ್ತರಿಸುವಂತೆ ಕೋಟ್‍ ನಿರ್ದೇಶಿಸಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • PSI scam – ಇಂದು ಹೈಕೋರ್ಟ್‍ನಲ್ಲಿ ಮರುಪರೀಕ್ಷೆ ಅರ್ಜಿ ವಿಚಾರಣೆ

    ಬೆಂಗಳೂರು: ಪಿಎಸ್‍ಐ ನೇಮಕಾತಿ ಹಗರಣ (PSI scam) ಪ್ರಕರಣದಿಂದ ರದ್ದಾಗಿರುವ ಅಭ್ಯರ್ಥಿಗಳಿಗೆ ಮರುಪರೀಕ್ಷೆ ವಿಚಾರದ ಬಗ್ಗೆ ಕರ್ನಾಟಕ ಹೈಕೋರ್ಟ್ (High Cou) ಮಂಗಳವಾರ ವಿಚಾರಣೆ ನಡೆಸಲಿದೆ.

    ಮಧ್ಯಾಹ್ನ 2:30ಕ್ಕೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಈ ವೇಳೆ ಮರುಪರೀಕ್ಷೆಯ ಬಗ್ಗೆ ಸರ್ಕಾರ (Government of Karnataka) ತನ್ನ ನಿರ್ಧಾರ ತಿಳಿಸಲಿದೆ. ಈ ಹಿಂದೆ 510 ಅಭ್ಯರ್ಥಿಗಳಿಗೆ ಕಿರುಪರೀಕ್ಷೆಯ ಬಗ್ಗೆ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು. ಅಲ್ಲದೇ ಈ ಬಗ್ಗೆ ಸರ್ಕಾರ ತನ್ನ ನಿರ್ಧಾರವನ್ನು ತಿಳಿಸುವಂತೆ ಕೋರ್ಟ್ ನಿರ್ದೇಶನ ನೀಡಿತ್ತು. ಇದನ್ನೂ ಓದಿ:  ಪಿಎಸ್‍ಐ ಹಗರಣ ಕೇಸ್‌- ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ

    50 ಸಾವಿರ ಅಭ್ಯರ್ಥಿಗಳಿಗೂ ಮರು ಪರೀಕ್ಷೆ ನಡೆಯಲಿದೆಯೇ ಅಥವಾ 510 ಅಭ್ಯರ್ಥಿಗಳಿಗೆ ಮಾತ್ರ ಕಿರುಪರೀಕ್ಷೆ ನಡೆಯಲಿದೆಯೇ? ಇಲ್ಲವೇ ಸರ್ಕಾರದ ನಿರ್ಧಾರ ಏನಿದೆ? ನ್ಯಾಯಾಲಯ ಏನು ಆದೇಶ ನೀಡಲಿದೆ ಎಂಬುದು ಮಧ್ಯಾಹ್ನ ತಿಳಿಯಲಿದೆ.

    ಕಳೆದ ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ನಡೆದ ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿತ್ತು. ಬಳಿಕ ತನಿಖೆಯ ವೇಳೆ ಪರೀಕ್ಷಾ ಕೇಂದ್ರಗಳನ್ನು ಬುಕ್ ಮಾಡಿಕೊಂಡು ಅಕ್ರಮ ಎಸಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಆಡಿಯೋ ಸಹ ವೈರಲ್ ಆಗಿತ್ತು. ಇದಾದ ಬಳಿಕ ಈ ನೇಮಕಾತಿಯನ್ನು ರದ್ದು ಮಾಡಲಾಗಿತ್ತು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈಗಲೂ ಪ್ರಕರಣ ವಿಚಾರಣೆ ಹಂತದಲ್ಲಿದೆ. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಸಚಿವರು ಹಾಗೂ ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಅಲ್ಲದೇ ಪಿಎಸ್‍ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಎಸಗಿರುವ 52 ಅಭ್ಯರ್ಥಿಗಳನ್ನು ಪೊಲೀಸ್ ಇಲಾಖೆ ನಡೆಸುವ ಯಾವುದೇ ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ಡಿಬಾರ್ ಮಾಡಿ ಇತ್ತೀಚೆಗೆ ಆದೇಶಿಸಲಾಗಿದೆ. ಇದನ್ನೂ ಓದಿ: ಪಿಎಸ್‍ಐ ಹಗರಣ ನೀವೇ ಸರಿಯಾಗಿ ಕೆಲಸ ಮಾಡ್ತಿರೋ? ಅಥ್ವಾ ಬೇರೆ ತನಿಖಾ ಸಂಸ್ಥೆಗೆ ವಹಿಸಬೇಕಾ: CID ವಿರುದ್ಧ ಹೈಕೋರ್ಟ್ ಗರಂ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ವ್ಹೀಲಿಂಗ್ ಮಾಡಿ ಶಾಲಾ – ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಮೂವರ ಬಂಧನ

    ವ್ಹೀಲಿಂಗ್ ಮಾಡಿ ಶಾಲಾ – ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಮೂವರ ಬಂಧನ

    ಹಾಸನ: ವ್ಹೀಲಿಂಗ್ ಮಾಡಿಕೊಂಡು ಶಾಲಾ ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಮೂವರು ಕಿಡಿಗೇಡಿಗಳನ್ನು ಹಾಸನ (Hassan) ಪೊಲೀಸರು ಬಂಧಿಸಿದ್ದಾರೆ.

    ಕಿಡಿಗೇಡಿಗಳಿಂದ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಮಹಿಳಾ ಠಾಣೆ ಪಿಎಸ್‍ಐ ಕುಸುಮಾ ಸಿಬ್ಬಂದಿಗಳೊಂದಿಗೆ ಬಸಟ್ಟಿಕೊಪ್ಪಲು ರಸ್ತೆಯಲ್ಲಿ ಗಸ್ತಿನಲ್ಲಿದ್ದರು. ಈ ವೇಳೆ ಮೂವರು ಬೈಕ್‍ನಲ್ಲಿ ವ್ಹೀಲಿಂಗ್ ಮಾಡಿಕೊಂಡು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದರು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ರಾಷ್ಟ್ರಗೀತೆ ಹಾಡಿ ಮೋದಿ ಆಶೀರ್ವಾದ ಪಡೆದ ಅಮೆರಿಕ ಗಾಯಕಿ

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನ ನಿತ್ಯ ಈ ರೀತಿಯ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಇಂತಹ ಘಟನೆಗಳನ್ನು ತಡೆಯಲು ಗಸ್ತು ಹೆಚ್ಚಿಸಿ ಕಿಡಿಗೇಡಿಗಳನ್ನು ನಿಯಂತ್ರಿಸುವಂತೆ ಸೂಚನೆ ನೀಡಲಾಗಿದೆ. ಇದೇ ರೀತಿ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 11 ಜನರನ್ನು ವಶಕ್ಕೆ ಪಡೆದು 26 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

    ಮುಂದುವರೆದು ಮಾತನಾಡಿದ ಅವರು, ಜಿಲ್ಲೆ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಐದು ವರ್ಷಕ್ಕಿಂತ ಹೆಚ್ಚು ಅವಧಿ ಒಂದೇ ಕಡೆ ಇದ್ದ ಸುಮಾರು 160 ಕ್ಕೂ ಹೆಚ್ಚು ಪೇದೆಗಳನ್ನು ಕಳೆದ ವರ್ಷ ವರ್ಗಾವಣೆ ಮಾಡಲಾಗಿತ್ತು. ಈ ಬಾರಿ ಸಹ ಹತ್ತು ವರ್ಷದಿಂದ ಒಂದೇ ವಿಭಾಗದಲ್ಲಿದ್ದ ಎಎಸ್‍ಐ, ಮುಖ್ಯಪೇದೆ ಹಾಗೂ ಪೇದೆಗಳು ಸೇರಿದಂತೆ 160 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಇದೇ ವೇಳೆ ಸಿಇಐಆರ್ ಪೋರ್ಟಲ್ ಸಹಾಯದಿಂದ ಕಳೆದು ಹೋಗಿದ್ದ 90 ಮೊಬೈಲ್‍ಗಳನ್ನು ಈ ಬಾರಿ ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು ಎಂದಿದ್ದಾರೆ.

    ಜಿಲ್ಲೆಯಲ್ಲಿ ಪೋರ್ಟಲ್ ಆರಂಭಿಸಿದ ದಿನದಿಂದ ಈವರೆಗೆ ಸಾರ್ವಜನಿಕರು 1925 ಮೊಬೈಲ್‍ಗಳು ಕಳ್ಳತನ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಲ್ಲಿ ಇಲ್ಲಿವರೆಗೆ 238 ಮೊಬೈಲ್ ಪತ್ತೆ ಮಾಡಿ, 148 ಮುಬೈಲ್‍ನ್ನು ಈಗಾಗಲೇ ಹಸ್ತಾಂತರಿಸಲಾಗಿದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳಿಂದ ವಂಚನೆಗೆ ಒಳಗಾದರೆ ಕೂಡಲೇ 1930 ಸಹಾಯವಾಣಿಗೆ ಕರೆ ಮಾಡುವಂತೆ ಕೋರಿದರು.

    ಚನ್ನರಾಯಪಟ್ಟಣ (Channarayapatna) ಠಾಣಾ ವ್ಯಾಪ್ತಿಯ ರೌಡಿಶೀಟರ್ ಯಾಚೇನಹಳ್ಳಿ ಚೇತುಗೆ ಮತ್ತೊಂದು ವರ್ಷ ಸೆರೆವಾಸಕ್ಕೆ ಕೋರ್ಟ್ ಆದೇಶಿಸಿದೆ. 2007 ರಿಂದಲೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಈತನ ವಿರುದ್ಧ 3 ಕೊಲೆ, 7 ಕೊಲೆಯತ್ನ, 4 ಸುಲಿಗೆ ಹಾಗೂ 10 ಹಲ್ಲೆ ಪ್ರಕರಣಗಳಿವೆ. 2010 ರಲ್ಲೇ ರೌಡಿ ರಿಜಿಸ್ಟರ್ ತೆರೆದು ಆರೋಪಿ ಮೇಲೆ ನಿಗಾ ಇಡಲಾಗಿತ್ತು. ನಂತರ ಗಡಿಪಾರು ಆದೇಶ ಮಾಡಲಾಗಿತ್ತು. ನಂತರವೂ ಈತ ಅಪರಾಧ ಕೃತ್ಯ ಮುಂದುವರಿಸಿದ ಹಿನ್ನೆಲೆ ಗುಂಡಾ ಕಾಯ್ದೆ ಶಿಫಾರಸ್ಸು ಮಾಡಲಾಗಿತ್ತು. ಅದರಂತೆ ಜಿಲ್ಲಾಧಿಕಾರಿಗಳು ಮೇ.5 ರಂದು ಬಂಧನದ ಆದೇಶ ಹೊರಡಿಸಿದ್ದರು. ಬಳಿಕ ಚೇತುನನ್ನು ಕಲಬುರಗಿ (Kalaburagi) ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ನಂತರ ಜೂ.1 ರಂದು ಹೈಕೋರ್ಟ್ (High Court) ಸಲಹಾಮಂಡಳಿ ಎದುರು ವಿವರಣೆ ಮಂಡಿಸಲಾಗಿತ್ತು. ಸಲಹಾ ಮಂಡಳಿ ಗೂಂಡಾಕಾಯ್ದೆಯನ್ನು ಅನುಮೋದಿಸಿ 1 ವರ್ಷ ಶಿಕ್ಷೆ ವಿಧಿಸಿ ಜೂ.7 ರಂದು ಸರ್ಕಾರದ ಪರ ಆದೇಶ ಮಾಡಿದೆ ಎಂದಿದ್ದಾರೆ. ಇದನ್ನೂ ಓದಿ: ಪಾವಗಡ ಪೊಲೀಸ್ ಠಾಣೆಗೆ ಗೃಹ ಸಚಿವ ದಿಢೀರ್ ಭೇಟಿ

  • ಆದಿಪುರುಷನಿಗೆ ಬಿಗ್ ರಿಲೀಫ್ : ಬ್ಯಾನ್ ತೆರವುಗೊಳಿಸಿದ ನೇಪಾಳ ಹೈಕೋರ್ಟ್

    ಆದಿಪುರುಷನಿಗೆ ಬಿಗ್ ರಿಲೀಫ್ : ಬ್ಯಾನ್ ತೆರವುಗೊಳಿಸಿದ ನೇಪಾಳ ಹೈಕೋರ್ಟ್

    ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾಗೆ ನೇಪಾಳ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಸೀತೆಯ ಕುರಿತಾದ ಡೈಲಾಗ್ ಅನ್ನು ಪ್ರಶ್ನಿಸಿ ಕಠ್ಮಂಡು ಮೇಯರ್ ಬಲೇನ್ ಶಾ ಕೋರ್ಟ್ ಮೊರೆ ಹೋಗಿದ್ದರು. ಜೊತೆಗೆ ನೇಪಾಳದಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿತ್ತು. ಈ ಬ್ಯಾನ್ ಪ್ರಶ್ನಿಸಿ ಚಿತ್ರತಂಡ ಕೂಡ ಕೋರ್ಟ್ ಮೆಟ್ಟಿಲು ಏರಿತು.

    ಆದಿಪುರುಷ ಸಿನಿಮಾ ಕುರಿತಾದ ಅರ್ಜಿಯನ್ನು ಕೈಗೆತ್ತಿಕೊಂಡ ನೇಪಾಳ ಹೈಕೋರ್ಟ್, ‘ಸಿನಿಮಾ ಸೆನ್ಸಾರ್ ಆಗಿದೆ. ಸೆನ್ಸಾರ್ ಮಂಡಳಿಯು ಚಿತ್ರವನ್ನು ಒಪ್ಪಿಕೊಂಡ ಮೇಲೆ ಬ್ಯಾನ್ ಗೆ ಅರ್ಥವಿಲ್ಲ. ಹಾಗಾಗಿ ಬ್ಯಾನ್ ತೆರೆವುಗೊಳಿಸಿ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಇದರಿಂದಾಗಿ ನೇಪಾಳದಲ್ಲಿ ಆದಿಪುರುಷ ಚಿತ್ರಕ್ಕೆ ದೊಡ್ಡ ಗೆಲುವು ಸಿಕ್ಕಿದೆ. ಆದರೆ, ಕೋರ್ಟ್ ತೀರ್ಪು ಏನೇ ಬಂದರೂ, ಸಿನಿಮಾ ಪ್ರದರ್ಶನಕ್ಕೆ ಬಿಡುವುದಿಲ್ಲ ಎಂದಿದ್ದಾರೆ ಬಲೇನ್ ಶಾ.

    ಆದಿಪುರುಷ (Adi Purush) ಸಿನಿಮಾದಲ್ಲಿ ಸೀತೆಯನ್ನು ಭಾರತದ ಮಗಳು ಎಂದು ಕರೆದ ಡೈಲಾಗ್ ಕುರಿತಂತೆ ಕಠ್ಮಂಡು ಮೇಯರ್ ಈ ಹಿಂದೆ ಆಕ್ಷೇಪ ವ್ಯಕ್ತ ಪಡಿಸಿದ್ದರು. ಸಿನಿಮಾದಲ್ಲಿ ಸುಳ್ಳು ಇತಿಹಾಸವನ್ನು ಹೇಳಿದ್ದಕ್ಕೆ ಚಿತ್ರವನ್ನು ಕಠ್ಮಂಡುವಿನಲ್ಲಿ ಬ್ಯಾನ್ ಮಾಡಿದ್ದರು. ಡೈಲಾಗ್ ತಗೆಯುವಂತೆ ಚಿತ್ರತಂಡಕ್ಕೆ ಹೇಳಿದ್ದರೂ ಡೈಲಾಗ್ ಅನ್ನು ತಗೆಯದೇ ಇರುವ ಕಾರಣಕ್ಕಾಗಿ ಕಠ್ಮಂಡು ಮೇಯರ್ ಸುತ್ತೋಲೆ ಹೊರಡಿಸಿದ್ದಾರೆ. ಇದನ್ನೂ ಓದಿ:ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

    ಬರೀ ಆದಿಪುರುಷ ಸಿನಿಮಾ ಮಾತ್ರವಲ್ಲ, ಕಠ್ಮಂಡುನಲ್ಲಿ (Kathmandu) ಒಟ್ಟು 17 ಚಿತ್ರಮಂದಿರಗಳಿದ್ದು ಈ ಅಷ್ಟೂ ಚಿತ್ರಮಂದಿರಗಳಲ್ಲೂ ಭಾರತೀಯ ಸಿನಿಮಾಗಳನ್ನು ಪ್ರದರ್ಶನ ಮಾಡಬಾರದು ಎಂದು ಆದೇಶ ಹೊರಡಿಸಿರುವುದಾಗಿ ಮೇಯರ್ ಬಲೇನ್ ಶಾ (Balen Shah) ಟ್ವೀಟ್ ಮಾಡಿದ್ದರು. ಆದಿಪುರುಷ ಸಿನಿಮಾ ಸೇರಿದಂತೆ ಭಾರತದ ಅಷ್ಟೂ ಸಿನಿಮಾಗಳನ್ನೂ ಬ್ಯಾನ್ (Ban) ಮಾಡಿರುವುದಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

    ಓಂ ರಾವತ್ (Om Raut) ನಿರ್ದೇಶನದ ‘ಆದಿಪುರುಷ್’ ಸಿನಿಮಾಗೆ ಕೆಟ್ಟ ವಿಮರ್ಶೆ ವ್ಯಕ್ತವಾಗಿದೆ. ಈ ಸಿನಿಮಾದ ಹಲವು ಅಂಶಗಳನ್ನು ಟೀಕಿಸಲಾಗುತ್ತಿದೆ. ರಾಮಾಯಣವನ್ನು ಆಧರಿಸಿದ ಈ ಚಿತ್ರದಲ್ಲಿ ಪ್ರಭಾಸ್ ಅವರು ರಾಮನ ಪಾತ್ರ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಆಂಜನೇಯನಾಗಿ ದೇವದತ್ತ ನಾಗೆ ಅವರು ಅಭಿನಯಿಸಿದ್ದಾರೆ. ಲಕ್ಷ್ಮಣನ ಪಾತ್ರಕ್ಕೆ ಸನ್ನಿ ಸಿಂಗ್ ಅವರು ಬಣ್ಣ ಹಚ್ಚಿದ್ದಾರೆ. ಸೈಫ್ ಅಲಿ ಖಾನ್ ಅವರು ರಾವಣನಾಗಿ ಅಬ್ಬರಿಸಿದ್ದಾರೆ. ಆದರೆ ರಾಮಾಯಣವನ್ನು ತೋರಿಸಿದ ರೀತಿ ಸರಿಯಾಗಿಲ್ಲ ಎಂದು ಪ್ರೇಕ್ಷಕರು ತಕರಾರು ತೆಗೆದಿದ್ದಾರೆ. ಸೈಫ್‌ರನ್ನ ಮಾಡ್ರನ್ ರಾವಣನಂತೆ ತೋರಿಸಿರೋದು ಟ್ರೋಲ್ ಆಗುತ್ತಿದೆ. ಸಿನಿಮಾ ನೈಜವಾಗಿ ತೋರಿಸಿಲ್ಲ ಎಂದು ಟೀಕೆ ಮಾಡಿದ್ದಾರೆ.

    ಚಿತ್ರಕಥೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಸಿನಿಮಾದ ಸಂಭಾಷಣೆಕಾರ ಮನೋಜ್ ಮುಂತಶೀರ್ ಅವರು ಮಾತು ಬದಲಾಯಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ‘ಆದಿಪುರುಷ್’ ಸಿನಿಮಾವನ್ನು ಟ್ರೋಲ್ ಮಾಡಲಾಗುತ್ತಿದೆ. ಪಾತ್ರಗಳನ್ನು ತೋರಿಸಿದ ರೀತಿ, ಗ್ರಾಫಿಕ್ಸ್ ಗುಣಮಟ್ಟ ಸೇರಿದಂತೆ ಅನೇಕ ವಿಚಾರಗಳನ್ನು ಜನರು ಟೀಕಿಸುತ್ತಿದ್ದಾರೆ. ಈ ನಡುವೆ ಸಂಭಾಷಣಕಾರ ಮನೋಜ್ ಮುಂತಶೀರ್ ಅವರು ನೀಡಿದ ಕೇಳಿಕೆ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. ಇದನ್ನು ನಾನು ಮೊದಲೇ ಹೇಳಿದ್ದೇ ಮತ್ತು ಈಗಲೂ ಹೇಳುತ್ತೇನೆ. ಈ ಸಿನಿಮಾದ ಹೆಸರು ಆದಿಪುರುಷ್. ನಾವು ರಾಮಾಯಣವನ್ನು ಸಿನಿಮಾ ಮಾಡಿಲ್ಲ. ರಾಮಾಯಾಣಕ್ಕೂ ಆದಿಪುರುಷ್‌ ಸಿನಿಮಾಗೂ ಸಂಬಂಧವಿಲ್ಲ. ಅದರಿಂದ ತುಂಬ ಸ್ಫೂರ್ತಿ ಪಡೆದಿದ್ದೇವೆ. ಡಿಸ್‌ಕ್ಲೈಮರ್‌ನಲ್ಲೂ ನಾವು ಅದನ್ನೇ ಹೇಳಿದ್ದೇವೆ ಎಂದು ಮನೋಜ್ ಮುಂತಶೀರ್ ಹೇಳಿದ್ದಾರೆ.

  • ಆದಿಪುರುಷ ಸಿನಿಮಾ ಬ್ಯಾನ್ ಮಾಡಿ : ಜೂ 30ಕ್ಕೆ ಬನ್ನಿ ಎಂದ ಹೈಕೋರ್ಟ್

    ಆದಿಪುರುಷ ಸಿನಿಮಾ ಬ್ಯಾನ್ ಮಾಡಿ : ಜೂ 30ಕ್ಕೆ ಬನ್ನಿ ಎಂದ ಹೈಕೋರ್ಟ್

    ಪ್ರಭಾಸ್ (Prabhas) ಅಭಿನಯದ ಆದಿ ಪುರುಷ  (Adi Purush)ಸಿನಿಮಾ ಬ್ಯಾನ್ ಮಾಡುವಂತೆ ಹಿಂದೂ ಪರ ಸಂಘಟನೆಗಳು ದೆಹಲಿ ಹೈಕೋರ್ಟ್ (Delhi High Court) ಮೆಟ್ಟಿಲು ಏರಿದ್ದವು. ಬ್ಯಾನ್ ಕುರಿತಾಗಿ ತುರ್ತು ಕ್ರಮ ತಗೆದುಕೊಳ್ಳುವಂತೆ ನ್ಯಾಯಾಲಯಕ್ಕೆ ಅವು ಮನವಿ ಮಾಡಿದ್ದವು. ನಿನ್ನೆ ವಿಚಾರಣೆ ನಡೆಸಿದ ನ್ಯಾಯಾಲಯವು ಜೂ 30ಕ್ಕೆ ಬರುವಂತೆ ಹೇಳಿ ವಿಚಾರಣೆಯನ್ನು ಮುಂದೂಡಿತು.

    ಆದಿ ಪುರುಷ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಆಗುವಂತಹ ಸಾಕಷ್ಟು ಅಂಶಗಳು ಇವೆ. ಈಗಾಗಲೇ ನೇಪಾಳ ಸರಕಾರ ಸಿನಿಮಾವನ್ನು ಬ್ಯಾನ್ (Ban) ಮಾಡಿದೆ. ಭಾರತದಲ್ಲೂ ಈ ಚಿತ್ರ ಬ್ಯಾನ್ ಆಗಲಿ ಎಂದು ಹಿಂದೂ ಪರ ಸಂಘಟನೆಯ ಅಧ್ಯಕ್ಷ ವಿಷ್ಣು ಗುಪ್ತಾ (Vishnu Gupta) ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಕೂಡಲೇ ಅರ್ಜಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಅವರು ಮನವಿ ಕೂಡ ಮಾಡಿದ್ದರು.

    ನಿನ್ನೆ ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು, ‘ಈಗಾಗಲೇ ಸಿನಿಮಾ ರಿಲೀಸ್ ಆಗಿದೆ. ಆತುರದಲ್ಲಿ ವಿಚಾರಣೆಯನ್ನು ಮಾಡಲು ಸಾಧ್ಯವಿಲ್ಲ. ಜೂ.30ರಂದು ವಿಚಾರಣೆ ನಡೆಸಲಾಗುವುದು ಎಂದು ವಿಷ್ಣು ಗುಪ್ತಾ ಪರ ವಕೀಲರಿಗೆ ನ್ಯಾಯಾಲಯ ತಿಳಿಸಿತು. ಅಲ್ಲಿಗೆ ಚಿತ್ರತಂಡಕ್ಕೆ ಎಂಟು ದಿನಗಳ ಕಾಲ ಬಿಗ್ ರಿಲೀಫ್ ಸಿಕ್ಕಂತಾಯಿತು.

    ಒಂದು ಕಡೆ ಕಾನೂನು ಸಮರ ನಡೆದಿದ್ದರೆ ಮತ್ತೊಂದು ಕಡೆ ದಿ ಪುರುಷ ಸಿನಿಮಾದ ಡೈಲಾಗ್ ರೈಟರ್ ಮನೋಜ್ ಮುಂತಶೀರ್  (Manoj Mantashir) ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ‘ಹನುಮಾನ್ (Hanuman) ದೇವರೇ ಅಲ್ಲ’ ಎಂದು ಹೇಳುವ ಮೂಲಕ ಉರಿವ ಬೆಂಕಿಗೆ ತುಪ್ಪ ಸುರಿದ್ದಾರೆ. ಆದಿಪುರುಷ ಸಿನಿಮಾದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಈಗಾಗಲೇ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತ ಪಡಿಸುತ್ತಿವೆ. ಈ ನಡುವೆ ಹನುಮಾನ್ ದೇವರೇ ಅಲ್ಲ ಅನ್ನುವ ಮಾತು ಮತ್ತೆ ವಿವಾದಕ್ಕೆ (Controversy) ಕಾರಣವಾಗಿದೆ. ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ: ಧಾರಾವಾಹಿ ನಿರ್ಮಾಪಕನ ಮೇಲೆ ಎಫ್.ಐ.ಆರ್ ದಾಖಲು

    ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ‘ಹನುಮಾನ್ ದೇವರಲ್ಲ. ಭಜರಂಗಿಯನ್ನು ನಾವು ದೇವರು ಮಾಡಿದ್ದೇವೆಯಷ್ಟೆ. ಹನುಮ ರಾಮನ ಭಕ್ತ. ರಾಮನ ಭಕ್ತ ದೇವರು ಹೇಗೆ ಆಗುತ್ತಾನೆ. ರಾಮನನ್ನು ಪೂಜಿಸುತ್ತೇವೆ ಎನ್ನುವ ಕಾರಣಕ್ಕಾಗಿ ಹನುಮನನ್ನೂ ಪೂಜಿಸುತ್ತೇವೆ ಎಂದು ಹೇಳಿದ್ದಾರೆ. ಈ ಮಾತೇ ಅವರಿಗೆ ಮುಳುವಾಗಿದೆ.

    ಆದಿಪುರುಷ (Adipurush) ಸಿನಿಮಾದ ಬಗ್ಗೆ ದಿನಕ್ಕೊಂದು ಹೇಳಿಕೆ ಕೊಡುತ್ತಿರುವ ಮನೋಜ್ ಅವರಿಗೆ ಜೀವ ಬೆದರಿಕೆ ಇದೆ ಎನ್ನುವ ಕಾರಣಕ್ಕಾಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಈ ಭದ್ರತೆಯ ನಡುವೆಯೂ ಅವರು ಮತ್ತೆ ಮತ್ತೆ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದು ಚಿತ್ರತಂಡಕ್ಕೆ ನುಂಗಲಾರದ ತುತ್ತಾಗಿದೆ.

  • ‘ಆದಿಪುರುಷ’ನಿಗೆ ಸಂಕಷ್ಟ: ಚಿತ್ರ ನಿಲ್ಲಿಸುವಂತೆ ದೆಹಲಿ ಹೈಕೋರ್ಟಿಗೆ ಅರ್ಜಿ

    ‘ಆದಿಪುರುಷ’ನಿಗೆ ಸಂಕಷ್ಟ: ಚಿತ್ರ ನಿಲ್ಲಿಸುವಂತೆ ದೆಹಲಿ ಹೈಕೋರ್ಟಿಗೆ ಅರ್ಜಿ

    ನಿನ್ನೆಯಷ್ಟೇ ಜಗತ್ತಿನಾದ್ಯಂತ ಬಿಡುಗಡೆಯಾಗಿರುವ ಆದಿಪುರುಷ ಸಿನಿಮಾ ಪ್ರದರ್ಶನವನ್ನು ನಿಲ್ಲಿಸುವಂತೆ ದೆಹಲಿ (Delhi) ಹೈಕೋರ್ಟಿಗೆ (High Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿವೆ ಹಿಂದೂಪರ ಸಂಘಟನೆಗಳು. ಈ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆಯಾಗುವಂತಹ ಸಾಕಷ್ಟು ಅಂಶಗಳು ಇವೆ. ಹಾಗಾಗಿ ಸಿನಿಮಾ ಪ್ರದರ್ಶನವನ್ನು ನಿಲ್ಲಿಸುವಂತೆ ಸಂಘಟನೆಗಳು ಮನವಿ ಮಾಡಿಕೊಂಡಿವೆ.

    ರಾಮಾಯಣವನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡಿದ್ದಾರೆ. ಅದು ಹಿಂದೂಗಳಿಗೆ ಮತ್ತು ಹಿಂದೂ (Hindu) ದೇವರುಗಳಿಗೆ ಮಾಡಿರುವ ಅಪಮಾನ. ಈ ಹಿಂದೆಯೇ ಅನೇಕ ಅಂಶಗಳನ್ನು ಚಿತ್ರತಂಡದ ಗಮನಕ್ಕೆ ತರಲಾಗಿತ್ತು. ಎಲ್ಲವನ್ನೂ ಬದಲಾವಣೆ ಮಾಡುವುದಾಗಿ ಚಿತ್ರತಂಡ ತಿಳಿಸಿತ್ತು. ಆದರೆ, ಯಾವುದೇ ಬದಲಾವಣೆಯನ್ನು ಮಾಡದೇ ಹಳೆ ಸಿನಿಮಾವನ್ನೇ ಬಿಡುಗಡೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

    ನೇಪಾಳದಲ್ಲಿ ಸಿನಿಮಾ ಬ್ಯಾನ್ ?

    ಪ್ರಭಾಸ್ (Prabhas) ನಟನೆಯ ಆದಿಪುರುಷ (Adipurusha) ಸಿನಿಮಾ ಎಲ್ಲ ಕಡೆ ತುಂಬಿದ ಪ್ರದರ್ಶನ ಕಾಣುತ್ತಿದ್ದರೆ ನೇಪಾಳದಲ್ಲಿ ಅದು ಬಿಡುಗಡೆಯಾಗಿಲ್ಲ. ಚಿತ್ರದ ಒಂದು ಡೈಲಾಗ್ ಬಗ್ಗೆ ಕಠ್ಮಂಡು (Kathmandu)  ಮೇಯರ್ ಗರಂ ಆಗಿದ್ದು, ವಿವಾದಿತ  ಆ ಡೈಲಾಗ್ ತಗೆಯದಿದ್ದರೆ ಸಿನಿಮಾವನ್ನು ಬ್ಯಾನ್ ಮಾಡುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ, ಮೂರು ದಿನ ಗಡುವು ಕೂಡ ನೀಡಿದ್ದಾರೆ.

    ಆದಿಪುರುಷ ಸಿನಿಮಾ ಮೊದಲಿನಿಂದಲೂ ವಿವಾದಕ್ಕೀಡು ಆಗುತ್ತಲೇ ಇದೆ. ಸಿನಿಮಾದ ಗ್ರಾಫಿಕ್ಸ್, ರಾವಣನ ಪಾತ್ರ, ತಿರುಪತಿಯಲ್ಲಿ ನಟಿಗೆ ಮುತ್ತಿಟ್ಟ ನಿರ್ದೇಶಕ ಹೀಗೆ ನಾನಾ ಕಾರಣಗಳಿಂದ ಸಿನಿಮಾ ಸುದ್ದಿಯಾಗುತ್ತಿದೆ. ಈ ಬಾರಿ ಡೈಲಾಗ್ ವೊಂದು ಹಲವು ಜನರ ಭಾವನೆಗೆ ಸಂಚಕಾರ ತಂದಿದೆಯಂತೆ. ಇದನ್ನೂ ಓದಿ:ಯಶ್ ಸಿನಿಮಾಗಾಗಿ ಬೆಂಗಳೂರಿನಲ್ಲಿ ಬೀಡು ಬಿಟ್ಟ ಡೈರೆಕ್ಟರ್- ಇಲ್ಲಿದೆ ಗುಡ್ ನ್ಯೂಸ್

    ಈ ಸಿನಿಮಾದಲ್ಲಿ ‘ಸೀತಾ ಭಾರತದ ಮಗಳು..’ ಎಂದು ಡೈಲಾಗ್ ಹೇಳಿಸಲಾಗಿದೆ. ಈ ಮಾತಿಗೆ ಕಠ್ಮುಂಡು ಮೇಯರ್ (Mayor) ಆಕ್ಷೇಪನೆಯನ್ನು ಎತ್ತಿದ್ದಾರೆ. ರಾಮಾಯಣದ ಪ್ರಕಾರ ಸೀತೆಯು ನೇಪಾಳದ ಜಾನಕ್ ಪುರದಲ್ಲಿ ಜನಿಸಿದ್ದಾರೆ. ಇಲ್ಲಿಗೆ ಶ್ರೀರಾಮ ಬಂದು ಸೀತೆಯನ್ನು ಮದುವೆ ಆಗಿರುವ ಉಲ್ಲೇಖ ಕೂಡ ಇದೆ. ಆದರೆ, ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಮತ್ತು ಸುಳ್ಳು ಹೇಳಲಾಗಿದೆ ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

     

    ಈಗಾಗಲೇ ನೇಪಾಳದಲ್ಲಿ ಈ ಸಿನಿಮಾದ ಸೆನ್ಸಾರ್ ಅನ್ನು ತಡೆಹಿಡಿಯಲಾಗಿದೆ. ಆದರೆ, ಉಳಿದ ಕಡೆ ಸಿನಿಮಾ ಪ್ರದರ್ಶನವಾಗುತ್ತಿದೆ. ಎಲ್ಲೆಲ್ಲಿ ಈ ಸಿನಿಮಾ ಪ್ರದರ್ಶನವಾಗುತ್ತಿದೆಯೋ ಅಲ್ಲಲ್ಲಿ, ಈ ಡೈಲಾಗ್ ತಗೆಯಲೇಬೇಕು ಎಂದು ಮೇಯರ್ ಒತ್ತಾಯಿಸಿದ್ದಾರೆ. ಸಿನಿಮಾವನ್ನು ನೇಪಾಳದಲ್ಲಿ ಬ್ಯಾನ್ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.