Tag: high court

  • ಜೈಲರ್ ಸಿನಿಮಾ ವಿರುದ್ಧ ಕೋರ್ಟಿಗೆ ಹೋದ ಎನ್.ಪಿ.ಪಿ ಮುಖಂಡ ರವಿ

    ಜೈಲರ್ ಸಿನಿಮಾ ವಿರುದ್ಧ ಕೋರ್ಟಿಗೆ ಹೋದ ಎನ್.ಪಿ.ಪಿ ಮುಖಂಡ ರವಿ

    ಜನಿಕಾಂತ್ ನಟನೆಯ ಜೈಲರ್ (Jailer) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡುತ್ತಿದೆ. ಸಿನಿಮಾ ರಿಲೀಸ್ ದಿನದಿಂದಲೂ ಈವರೆಗೂ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಒಂದು ಕಡೆ ಚಿತ್ರತಂಡ ಗೆಲುವನ್ನು ಸಂಭ‍್ರಮಿಸುತ್ತಿದ್ದರೆ ಮತ್ತೊಂದು ಕಡೆ ಕೋರ್ಟ್ ಕಾರಣದಿಂದಾಗಿ ಆತಂಕವನ್ನೂ ಪಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ಹಿಂಸಾತ್ಮಕ ದೃಶ್ಯಗಳು ಇವೆ ಎಂದು ಎನ್.ಪಿ.ಪಿ ಮುಖಂಡ ರವಿ (Ravi) ಮದ್ರಾಸ್ (Madras) ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.

    ಜೈಲರ್ ಸಿನಿಮಾದಲ್ಲಿ ಸಾಕಷ್ಟು ಹಿಂಸಾತ್ಮಕ ದೃಶ್ಯಗಳಿವೆ. ಅವುಗಳು ಸಮಾಜದ ಮೇಲೆ ಭಾರೀ ಪರಿಣಾಮ ಬೀರುವಂತವುಗಳು. ಆದರೂ, ಚಿತ್ರಕ್ಕೆ ಯು/ಎ ಪ್ರಮಾಣ ಪತ್ರವನ್ನು ಸೆನ್ಸಾರ್ ಮಂಡಳಿ ನೀಡಿದೆ. ಅದು ಹೇಗೆ ಯು/ಎ ಪ್ರಮಾಣ ಪತ್ರ ನೀಡಿತು ಎಂದು ಅರ್ಥವಾಗುತ್ತಿಲ್ಲ. ಈ ಸಿನಿಮಾದ ಪ್ರದರ್ಶನವನ್ನು ಕೂಡಲೇ ನಿಲ್ಲಿಸಿ, ಸೆನ್ಸಾರ್ ಮಂಡಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ರವಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:‘ಟೈಗರ್ ನಾಗೇಶ್ವರ್ ರಾವ್’ ಟೀಸರ್ ಔಟ್- ಮಾಸ್ ಆಗಿ ಎಂಟ್ರಿ ಕೊಟ್ಟ ರವಿತೇಜ

    ಜೈಲರ್ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಸಿನಿಮಾ ರಿಲೀಸ್ ವೇಳೆ ಅವರು ಹಿಮಾಲಯಕ್ಕೆ ಹಾರಿದ್ದರು. ಅಲ್ಲಿ ಧ್ಯಾನಕ್ಕೆ ಶರಣಾಗಿದ್ದರು. ಅಲ್ಲಿಂದ ಹೊರಟು ಇದೀಗ ಉತ್ತರ ಪ್ರದೇಶದ ಹಲವು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಅಯೋಧ್ಯಗೆ ತೆರಳಿ ಶ್ರೀ ರಾಮನ ದರ್ಶನ ಪಡೆದಿದ್ದಾರೆ. ನಿರ್ಮಾಣ ಹಂತದಲ್ಲಿರುವ ದೇವಸ್ಥಾನವನ್ನೂ ಅವರು ವೀಕ್ಷಣೆ ಮಾಡಿದರು. ಡಲಿದ್ದಾರೆ.

    ಮೊನ್ನೆಯಷ್ಟೇ ರಜನಿಕಾಂತ್ (Rajanikanth) ಅವರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಭೇಟಿಯಾಗಿದ್ದರು. ನಿನ್ನೆ  (ಆಗಸ್ಟ್ 19) ಜೈಲರ್ (Jailer) ಚಿತ್ರವನ್ನ ಅವರೊಂದಿಗೆ ವೀಕ್ಷಿಸಿದ್ದರು. ಲಕ್ನೋದಲ್ಲಿ ಸಿಎಂ ಮತ್ತು ಅಭಿಮಾನಿಗಳ ಜೊತೆಗೆ ‘ಜೈಲರ್’ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

    ತಲೈವಾ-ಶಿವಣ್ಣ ಕಾಂಬೋ ‘ಜೈಲರ್’ (Jailer) ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ತಲೈವಾ ಸಿನಿಮಾವನ್ನ ಒಪ್ಪಿ ಜನ ಮೆಚ್ಚಿಕೊಂಡಿದ್ದಾರೆ. ಸದ್ಯ ಸಿನಿಮಾ ಪ್ರಚಾರಕ್ಕಾಗಿ ಲಕ್ನೋದಲ್ಲಿ ತಲೈವಾ ಬೀಡು ಬಿಟ್ಟಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಜೊತೆ ನಿನ್ನೆ ಸಂಜೆ 7ಕ್ಕೆ ‘ಜೈಲರ್’ ಸಿನಿಮಾ ನೋಡೋದು ಫಿಕ್ಸ್ ಆಗಿತ್ತು. ಅಷ್ಟೇ ಅಲ್ಲದೇ, ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಅವರನ್ನು ಕೂಡ ತಲೈವಾ ಭೇಟಿಯಾಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ಉಪೇಂದ್ರಗೆ ಬಿಗ್ ರಿಲೀಫ್: ಮಧ್ಯಂತರ ತಡೆ ನೀಡಿದ ಹೈಕೋರ್ಟ್

    ಮತ್ತೆ ಉಪೇಂದ್ರಗೆ ಬಿಗ್ ರಿಲೀಫ್: ಮಧ್ಯಂತರ ತಡೆ ನೀಡಿದ ಹೈಕೋರ್ಟ್

    ಮ್ಮ ಮೇಲೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ (Halasur Gate Police Station) ದಾಖಲಾಗಿರುವ ಎಫ್.ಐ.ಆರ್ ರದ್ದುಗೊಳಿಸುವಂತೆ ನಟ ಉಪೇಂದ್ರ (Upendra) ಹೈಕೋರ್ಟ್ ಮೆಟ್ಟಿಲು ಏರಿದ್ದರು. ಮೊನ್ನೆಯಷ್ಟೇ  ಹೈಕೋರ್ಟ್ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇದೀಗ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಎಫ್‍.ಐ.ಆರ್ ಗೂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

    ಉಪೇಂದ್ರ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಾಡಿ, ಒಂದೇ ಹೇಳಿಕೆ‌ ಮೇಲೆ ಎರಡು ಎಫ್ಐಆರ್ ದಾಖಲಿಸಿದ್ದಾರೆ. ಈ ಘಟನೆಗೆ ಸಂಬಂಧ ಎಲ್ಲಾ ದೂರುಗಳಿಗೂ ತಡೆ ನೀಡುವಂತೆ ಮನವಿ ಮಾಡಿದರು. ಉಪೇಂದ್ರ ವಕೀಲರ ಮನವಿ ಪುರಸ್ಕರಿಸಿದ ನ್ಯಾ.ಹೇಮಂತ್ ಚಂದನ್ ಗೌಡರ್ ಅವರು ಮಧ್ಯಂತರ ತಡೆಯಾಜ್ಞೆ ಆದೇಶ ನೀಡಿದರು.

    ಈಗಾಗಲೇ ತಾವು ಆಡಿದ ಮಾತಿನ ಬಗ್ಗೆ ಕ್ಷಮೆ ಕೇಳಿದ್ದೇನೆ. ಜೊತೆಗೆ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಿಂದಲೇ ಡಿಲಿಟ್ ಮಾಡಿದ್ದೇನೆ. ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶದಿಂದ ಆಡಿದ ಮಾತು ಅದಾಗಿರಲಿಲ್ಲವೆಂದು ಎಂದು ಮನವಿ ಮಾಡಿಕೊಂಡಿದ್ದರು. ಈ ಅರ್ಜಿಗೆ ಸಂಬಂಧಿಸಿದ್ದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

    ಒಂದು ಕಡೆ ಹೈಕೋರ್ಟ್ (High Court) ಮಧ್ಯಂತರ ಆದೇಶ ನೀಡಿದ್ದರೆ ಮತ್ತೊಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ನಟ ಉಪೇಂದ್ರ ಜಾತಿನಿಂದನೆಯ (Caste abuse) ಅವಹೇಳನಕಾರಿ ಪದವನ್ನು ಬಳಸಿದ್ದಾರೆ ಎಂಬ ವಿಚಾರ ವಿಪರೀತ ಚರ್ಚೆಗೆ ಕಾರಣವಾಗಿದೆ. ಅವರು ಆಡಿದ ಮಾತುಗಳ ವಿಚಾರವಾಗಿ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ನಟ ಉಪೇಂದ್ರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿ ಅವರನ್ನು ಗಡಿಪಾರು ಮಾಡುವಂತೆ ಕೋಲಾರದಲ್ಲಿ ಆಗ್ರಹಿಸಲಾಗಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಉಪೇಂದ್ರ ವಿರುದ್ಧ ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯ ಎಸ್.ಎಂ.ವೆಂಕಟೇಶ್ ಹಾಗೂ ವಿಜಿ ನೇತೃತ್ವದಲ್ಲಿ ದೂರು ಸಲ್ಲಿಸಿದ್ದಾರೆ.

    ಬೆಂಗಳೂರಿನಲ್ಲಿ ಮೂರು ದೂರು ಹಾಗೂ ಕೋಲಾರದಲ್ಲಿ ಒಂದು ದೂರ ದಾಖಲಾದ ಬೆನ್ನಲ್ಲೇ ಮಂಡ್ಯದಲ್ಲೂ ಉಪೇಂದ್ರ ವಿರುದ್ದ ದೂರು ಸಲ್ಲಿಕೆಯಾಗಿದೆ. ಪರಿಶಿಷ್ಟ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಮದ್ದೂರು ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಈ ದೂರು ಸಲ್ಲಿಕೆಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ಉಪೇಂದ್ರಗೆ ಬಿಗ್ ರಿಲೀಫ್: ಮಧ್ಯಂತರ ತಡೆ ನೀಡಿದ ಹೈಕೋರ್ಟ್

    ನಟ ಉಪೇಂದ್ರಗೆ ಬಿಗ್ ರಿಲೀಫ್: ಮಧ್ಯಂತರ ತಡೆ ನೀಡಿದ ಹೈಕೋರ್ಟ್

    ಮ್ಮ ಮೇಲೆ ದಾಖಲಾಗಿರುವ ಎಫ್.ಐ.ಆರ್ ರದ್ದುಗೊಳಿಸುವಂತೆ ನಟ ಉಪೇಂದ್ರ (Upendra) ಹೈಕೋರ್ಟ್ ಮೆಟ್ಟಿಲು ಏರಿದ್ದರು. ಈಗಾಗಲೇ ತಾವು ಆಡಿದ ಮಾತಿನ ಬಗ್ಗೆ ಕ್ಷಮೆ ಕೇಳಿದ್ದೇನೆ. ಜೊತೆಗೆ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಿಂದಲೇ ಡಿಲಿಟ್ ಮಾಡಿದ್ದೇನೆ. ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶದಿಂದ ಆಡಿದ ಮಾತು ಅದಾಗಿರಲಿಲ್ಲವೆಂದು ಎಂದು ಮನವಿ ಮಾಡಿಕೊಂಡಿದ್ದರು. ಈ ಅರ್ಜಿಗೆ ಸಂಬಂಧಿಸಿದ್ದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

    ಉಪೇಂದ್ರ ಸಲ್ಲಿಸಿದ್ದ ಮನವಿಯನ್ನು ಏಕಸದಸ್ಯ ಪೀಠವು ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಉಪೇಂದ್ರ ಪರ ವಕೀಲ ಉದಯ್ ಹೊಳ್ಳ ವಾದ ಮಂಡಿಸಿ, ‘ಆ ಪದವನ್ನು ದುರುದ್ದೇಶದಿಂದ ಬಳಸಿದ್ದಲ್ಲ, ಉಪೇಂದ್ರ ಅವರು ಜನಪ್ರಿಯ ವ್ಯಕ್ತಿಯ ಜೊತೆ ಜವಾಬ್ದಾರಿಯುತ ವ್ಯಕ್ತಿಯು ಆಗಿದ್ದಾರೆ. ಅವರಿಗೆ ಎಲ್ಲರ ಬಗ್ಗೆಯೂ ಗೌರವವಿದೆ ಎಂದು ಮನವರಿಕೆ ಮಾಡಿಕೊಟ್ಟರು. ಉಪೇಂದ್ರ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಗೆ ಸಂಬಂಧಿಸಿದಂತೆ ಮಾತ್ರ ಮಧ್ಯಂತರ ತಡೆಯಾಜ್ಞೆ (Interim stay) ನೀಡಿದೆ.  ಇದನ್ನೂ ಓದಿ:Kiccha 46: ಸುದೀಪ್‌ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡ್

    ಒಂದು ಕಡೆ ಹೈಕೋರ್ಟ್ (High Court) ಮಧ್ಯಂತರ ಆದೇಶ ನೀಡಿದ್ದರೆ ಮತ್ತೊಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ನಟ ಉಪೇಂದ್ರ ಜಾತಿನಿಂದನೆಯ (Caste abuse) ಅವಹೇಳನಕಾರಿ ಪದವನ್ನು ಬಳಸಿದ್ದಾರೆ ಎಂಬ ವಿಚಾರ ವಿಪರೀತ ಚರ್ಚೆಗೆ ಕಾರಣವಾಗಿದೆ. ಅವರು ಆಡಿದ ಮಾತುಗಳ ವಿಚಾರವಾಗಿ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ನಟ ಉಪೇಂದ್ರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿ ಅವರನ್ನು ಗಡಿಪಾರು ಮಾಡುವಂತೆ ಕೋಲಾರದಲ್ಲಿ ಆಗ್ರಹಿಸಲಾಗಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಉಪೇಂದ್ರ ವಿರುದ್ಧ ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯ ಎಸ್.ಎಂ.ವೆಂಕಟೇಶ್ ಹಾಗೂ ವಿಜಿ ನೇತೃತ್ವದಲ್ಲಿ ದೂರು ಸಲ್ಲಿಸಿದ್ದಾರೆ.

    ಬೆಂಗಳೂರಿನಲ್ಲಿ ಮೂರು ದೂರು ಹಾಗೂ ಕೋಲಾರದಲ್ಲಿ ಒಂದು ದೂರ ದಾಖಲಾದ ಬೆನ್ನಲ್ಲೇ ಮಂಡ್ಯದಲ್ಲೂ ಉಪೇಂದ್ರ ವಿರುದ್ದ ದೂರು ಸಲ್ಲಿಕೆಯಾಗಿದೆ. ಪರಿಶಿಷ್ಟ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಮದ್ದೂರು ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಈ ದೂರು ಸಲ್ಲಿಕೆಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂಡ್ಯ, ಕೋಲಾರದಲ್ಲೂ ನಟ ಉಪೇಂದ್ರ ವಿರುದ್ಧ ದೂರು

    ಮಂಡ್ಯ, ಕೋಲಾರದಲ್ಲೂ ನಟ ಉಪೇಂದ್ರ ವಿರುದ್ಧ ದೂರು

    ಸಾಮಾಜಿಕ ಜಾಲತಾಣದಲ್ಲಿ ನಟ ಉಪೇಂದ್ರ (Upendra) ಜಾತಿನಿಂದನೆಯ (Caste Abuse) ಅವಹೇಳನಕಾರಿ ಪದವನ್ನು ಬಳಸಿದ್ದಾರೆ ಎಂಬ ವಿಚಾರ ವಿಪರೀತ ಚರ್ಚೆಗೆ ಕಾರಣವಾಗಿದೆ. ಅವರು ಆಡಿದ ಮಾತುಗಳ ವಿಚಾರವಾಗಿ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ನಟ ಉಪೇಂದ್ರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿ ಅವರನ್ನು ಗಡಿಪಾರು ಮಾಡುವಂತೆ ಕೋಲಾರದಲ್ಲಿ (Kolar) ಆಗ್ರಹಿಸಲಾಗಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಉಪೇಂದ್ರ ವಿರುದ್ಧ ಮಾಲೂರು ಪೊಲೀಸ್ ಠಾಣೆಗೆ ದೂರು (Complaint) ನೀಡಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯ ಎಸ್.ಎಂ.ವೆಂಕಟೇಶ್ ಹಾಗೂ ವಿಜಿ ನೇತೃತ್ವದಲ್ಲಿ ದೂರು ಸಲ್ಲಿಸಿದ್ದಾರೆ.

    ಬೆಂಗಳೂರಿನಲ್ಲಿ ಮೂರು ದೂರು ಹಾಗೂ ಕೋಲಾರದಲ್ಲಿ ಒಂದು ದೂರ ದಾಖಲಾದ ಬೆನ್ನಲ್ಲೇ ಮಂಡ್ಯದಲ್ಲೂ (Mandya) ಉಪೇಂದ್ರ ವಿರುದ್ದ ದೂರು ಸಲ್ಲಿಕೆಯಾಗಿದೆ. ಪರಿಶಿಷ್ಟ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಮದ್ದೂರು ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಈ ದೂರು ಸಲ್ಲಿಕೆಯಾಗಿದೆ.

    ಒಂದು ಕಡೆ ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದರೆ ಮತ್ತೊಂದು ಕಡೆ  ತಮ್ಮ ಮೇಲೆ ದಾಖಲಾಗಿರುವ ಎಫ್.ಐ.ಆರ್ ಅನ್ನು ರದ್ದುಗೊಳಿಸುವಂತೆ ನಟ ಉಪೇಂದ್ರ ಹೈಕೋರ್ಟ್ (High Court) ಮೆಟ್ಟಿಲು ಏರಿದ್ದಾರೆ. ಈಗಾಗಲೇ ತಾವು ಆಡಿದ ಮಾತಿನ ಬಗ್ಗೆ ಕ್ಷಮೆ ಕೇಳಿದ್ದೇನೆ. ಜೊತೆಗೆ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಿಂದಲೇ ಡಿಲಿಟ್ ಮಾಡಿದ್ದೇನೆ. ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶದಿಂದ ಆಡಿದ ಮಾತು ಅದಾಗಿರಲಿಲ್ಲವೆಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

    ಒಂದು ಕಡೆ ಎಫ್.ಐ.ಆರ್ ರದ್ದು ಕೋರಿ ಉಪೇಂದ್ರ ಅರ್ಜಿ ಸಲ್ಲಿಸಿದ್ದರೆ, ಮತ್ತೊಂದು ಕಡೆ ರಾಜ್ಯ ನಾನಾ ಕಡೆಗಳಲ್ಲೂ ಇವರ ವಿರುದ್ಧ ದೂರು ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಎರಡು ಕಡೆ ಎಫ್.ಐ.ಆರ್ ದಾಖಲಾಗಿದ್ದರೆ ಮಂಡ್ಯ ಮತ್ತು ಕೋಲಾರದಲ್ಲೂ ಪೊಲೀಸ್ ಠಾಣೆಗೆ ಉಪೇಂದ್ರ ವಿರುದ್ಧ ದೂರು ದಾಖಲಾಗಿದೆ. ಅಲ್ಲಲ್ಲಿ ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಇದನ್ನೂ ಓದಿ:Kiccha 46: ಸುದೀಪ್‌ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡ್

    ಬೆಂಗಳೂರಿನ ಚೆನ್ನಮ್ಮನ ಅಚ್ಚುಕಟ್ಟು ಪ್ರದೇಶ ಪೊಲೀಸರು ನಟ ಉಪೇಂದ್ರ ಅವರಿಗೆ ನೋಟಿಸ್ ಕೊಡುತ್ತಿದ್ದಂತೆ ಫೋನ್ ಸ್ವಿಚ್ ಆಪ್ ಮಾಡಿಕೊಂಡು ಉಪೇಂದ್ರ ಎಸ್ಕೇಪ್  ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬೇರೆಯವರ ಕಡೆಯಿಂದ ಉಪೇಂದ್ರ ಅವರನ್ನು ಪೊಲೀಸರು ಸಂಪರ್ಕ ಮಾಡುತ್ತಿದ್ದಾರಂತೆ.

    ಉಪೇಂದ್ರ ಅವರಿಗೆ ಸೇರಿದ ಎರಡು ಮನೆ ಹಾಗೂ ಅವರ ವಾಟ್ಸಪ್ ಗೆ ನೋಟಿಸ್ ಕಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾಗಿರೋ ಎಫ್ ಐ ಆರ್ ಅನ್ನು ಕೂಡ ಎಸಿಪಿ ವಿವಿಪುರಂಗೆ ವರ್ಗಾವಣೆ ಮಾಡಲಿದ್ದಾರೆ ಅಂತ ಹಲಸೂರುಗೇಟ್ ಪೊಲೀಸರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಫ್.ಐ.ಆರ್ ರದ್ದು ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ ಉಪೇಂದ್ರ

    ಎಫ್.ಐ.ಆರ್ ರದ್ದು ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ ಉಪೇಂದ್ರ

    ಮ್ಮ ಮೇಲೆ ಎರಡು ಕಡೆ ದಾಖಲಾಗಿರುವ ಎಫ್.ಐ.ಆರ್ ಅನ್ನು ರದ್ದುಗೊಳಿಸುವಂತೆ ನಟ ಉಪೇಂದ್ರ (Upendra) ಹೈಕೋರ್ಟ್ (High Court) ಮೆಟ್ಟಿಲು ಏರಿದ್ದಾರೆ. ಈಗಾಗಲೇ ತಾವು ಆಡಿದ ಮಾತಿನ ಬಗ್ಗೆ ಕ್ಷಮೆ ಕೇಳಿದ್ದೇನೆ. ಜೊತೆಗೆ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಿಂದಲೇ ಡಿಲಿಟ್ ಮಾಡಿದ್ದೇನೆ. ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶದಿಂದ ಆಡಿದ ಮಾತು ಅದಾಗಿರಲಿಲ್ಲವೆಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

    ಒಂದು ಕಡೆ ಎಫ್.ಐ.ಆರ್ (FIR) ರದ್ದು ಕೋರಿ (Quashed) ಉಪೇಂದ್ರ ಅರ್ಜಿ ಸಲ್ಲಿಸಿದ್ದರೆ, ಮತ್ತೊಂದು ಕಡೆ ರಾಜ್ಯ ನಾನಾ ಕಡೆಗಳಲ್ಲೂ ಇವರ ವಿರುದ್ಧ ದೂರು ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಎರಡು ಕಡೆ ಎಫ್.ಐ.ಆರ್ ದಾಖಲಾಗಿದ್ದರೆ ಮಂಡ್ಯ ಮತ್ತು ಕೋಲಾರದಲ್ಲೂ ಪೊಲೀಸ್ ಠಾಣೆಗೆ ಉಪೇಂದ್ರ ವಿರುದ್ಧ ದೂರು ದಾಖಲಾಗಿದೆ. ಅಲ್ಲಲ್ಲಿ ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಇದನ್ನೂ ಓದಿ:D51: ಧನುಷ್ ಹೊಸ ಸಿನಿಮಾಗೆ ರಶ್ಮಿಕಾ ಮಂದಣ್ಣ ಹೀರೋಯಿನ್

    ಬೆಂಗಳೂರಿನ ಚೆನ್ನಮ್ಮನ ಅಚ್ಚುಕಟ್ಟು ಪ್ರದೇಶ ಪೊಲೀಸರು (Police) ನಟ ಉಪೇಂದ್ರ ಅವರಿಗೆ ನೋಟಿಸ್ ಕೊಡುತ್ತಿದ್ದಂತೆ ಫೋನ್ ಸ್ವಿಚ್ ಆಪ್ ಮಾಡಿಕೊಂಡು ಉಪೇಂದ್ರ ಎಸ್ಕೇಪ್  ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬೇರೆಯವರ ಕಡೆಯಿಂದ ಉಪೇಂದ್ರ ಅವರನ್ನು ಪೊಲೀಸರು ಸಂಪರ್ಕ ಮಾಡುತ್ತಿದ್ದಾರಂತೆ.

    ಉಪೇಂದ್ರ ಅವರಿಗೆ ಸೇರಿದ ಎರಡು ಮನೆ ಹಾಗೂ ಅವರ ವಾಟ್ಸಪ್ ಗೆ ನೋಟಿಸ್ ಕಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾಗಿರೋ ಎಫ್ ಐ ಆರ್ ಅನ್ನು ಕೂಡ ಎಸಿಪಿ ವಿವಿಪುರಂಗೆ ವರ್ಗಾವಣೆ ಮಾಡಲಿದ್ದಾರೆ ಅಂತ ಹಲಸೂರುಗೇಟ್ ಪೊಲೀಸರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾಷಣದಲ್ಲಿ ಮತದಾರರಿಗೆ ಆಮಿಷ – ಜೆಪಿ ನಡ್ಡಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದು

    ಭಾಷಣದಲ್ಲಿ ಮತದಾರರಿಗೆ ಆಮಿಷ – ಜೆಪಿ ನಡ್ಡಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದು

    ಬೆಂಗಳೂರು/ಧಾರವಾಡ: ಚುನಾವಣೆ ಸಮಯದಲ್ಲಿ (Karnataka Election) ಮತದಾರರಿಗೆ ಆಮಿಷವೊಡ್ಡಿದ ಆರೋಪದಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ವಿರುದ್ಧ ದಾಖಲಿಸಲಾಗಿದ್ದ ಎಫ್ಐಆರ್ (FIR) ಅನ್ನು ಕರ್ನಾಟಕ ಹೈಕೋರ್ಟ್‌ನ (Karnataka High Court) ಧಾರವಾಡ ಪೀಠ ರದ್ದುಗೊಳಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

    ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಮೇ 7 ರಂದು ನಡೆದ ರೋಡ್‌ ಶೋ ವೇಳೆ ಜೆಪಿ ನಡ್ಡಾ ಮತದಾರರಿಗೆ ಆಮಿಷ ನೀಡಿದ್ದಾರೆಂದು ದೂರು ದಾಖಲಾಗಿತ್ತು. ಚುನಾವಣಾ ಜಾಗೃತ ವಿಭಾಗದ ಅಧಿಕಾರಿ ವೀರಣ್ಣ ಲಕ್ಕಣ್ಣವರ್‌ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ನೀಡಿದ ದೂರಿನ ಆಧಾರದಲ್ಲಿ ಹರಪನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

    ತಮ್ಮ ವಿರುದ್ಧ ಆಧಾರ ರಹಿತವಾಗಿ ದಾಖಲಾದ ಎಫ್‌ಐಆರ್ ಅನ್ನು ರದ್ದುಪಡಿಸುವಂತೆ ಹೈಕೋರ್ಟಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜೆ.ಪಿ. ನಡ್ಡಾ ಅರ್ಜಿ ಸಲ್ಲಿಸಿದ್ದರು.

    ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರು ರಾಜ್ಯಸಭಾ ಸದಸ್ಯರಾಗಿರುವ ಕಾರಣ ದೂರು ದಾಖಲಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಅನುಮತಿ ಪಡೆಯಬೇಕಿತ್ತು. ಈ ಅನುಮತಿ ಪಡೆಯುವಲ್ಲಿ ನಿಯಮಗಳನ್ನು ಪಾಲಿಸಿಲ್ಲ. ದಾಖಲಾದ ದೂರಿನಲ್ಲಿಯೂ ಮತದಾರರಿಗೆ ಆಮಿಷ ಹಾಗೂ ಬೆದರಿಕೆ ಒಡ್ಡುವಂತಹ ಹೇಳಿಕೆ ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟು ಎಫ್‌ಐಆರ್ ಅನ್ನು ರದ್ದುಪಡಿಸಿದೆ.

    ಈ ಪ್ರಕರಣದ ವಾದ, ಪ್ರತಿವಾದ ಬೆಂಗಳೂರು ಜನಪ್ರತಿನಿಧಿಗಳ‌ ನ್ಯಾಯಾಲಯದಲ್ಲಿ ನಡೆದಿತ್ತು. ಸೋಮವಾರ ಧಾರವಾಡ ಹೈಕೋರ್ಟ್ ಪೀಠದಿಂದ ತೀರ್ಪು ಪ್ರಕಟವಾಗಿದೆ. ಇದನ್ನೂ ಓದಿ: ಮಣಿಪುರ ಜನಾಂಗೀಯ ಸಂಘರ್ಷ – ತನಿಖೆಯ ಮೇಲ್ವಿಚಾರಣೆಗೆ ನ್ಯಾಯಾಂಗ ಸಮಿತಿ ರಚನೆ

    ನಡ್ಡಾ ಹೇಳಿದ್ದೇನು?
    ವಿಧಾನಸಭಾ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಸೋತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಿಂದ ಮತದಾರರು ವಂಚಿತರಾಗಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ಕೇಂದ್ರದ ಹಲವು ಯೋಜನೆಗಳನ್ನು ಸ್ಥಗಿತ ಮಾಡಲಾಗುತ್ತದೆ ಎಂದು ಭಾಷಣ ಮಾಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಮೇ 11ರಂದು ಸ್ವಯಂ ಪ್ರೇರಿತ ಎಫ್ಐಆರ್ ದಾಖಲಿಸಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾಸಕತ್ವ ಅಸಿಂಧು ಕೋರಿ ಅರ್ಜಿ – ಸಿದ್ದರಾಮಯ್ಯಗೆ ಹೈಕೋರ್ಟ್‌ನಿಂದ ನೋಟಿಸ್‌ ಜಾರಿ

    ಶಾಸಕತ್ವ ಅಸಿಂಧು ಕೋರಿ ಅರ್ಜಿ – ಸಿದ್ದರಾಮಯ್ಯಗೆ ಹೈಕೋರ್ಟ್‌ನಿಂದ ನೋಟಿಸ್‌ ಜಾರಿ

    ಬೆಂಗಳೂರು: ಸಿದ್ದರಾಮಯ್ಯನವರ (Siddaramaiah) ಶಾಸಕ ಸ್ಥಾನವನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ (Disqualification Petition) ಸಂಬಂಧಿಸಿದಂತೆ ಹೈಕೋರ್ಟ್‌ (High Court) ಸಿಎಂಗೆ ನೋಟಿಸ್‌ ಜಾರಿ ಮಾಡಿದೆ.

    ಮೈಸೂರಿನ ವರುಣಾ (Varuna) ಹೋಬಳಿಯ ಕೂಡನಹಳ್ಳಿ ಗ್ರಾಮದ ಕೆಎಂ ಶಂಕರ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಸಿದ್ದರಾಮಯ್ಯನವರಿಗೆ ವಿವರಣೆ ನೀಡುವಂತೆ ಕೋರಿ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಸೆಪ್ಟೆಂಬರ್‌ 1ಕ್ಕೆ ಮುಂದೂಡಿದೆ. ಇದನ್ನೂ ಓದಿ: Udupi College Video Row – ಮೂವರು ವಿದ್ಯಾರ್ಥಿನಿಯರಿಗೆ ಜಾಮೀನು ಮಂಜೂರು

    ಅರ್ಜಿಯಲ್ಲಿ ಏನಿದೆ?
    ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ (Congress) ಗ್ಯಾರಂಟಿ ಯೋಜನೆಗಳ (Guarantee Scheme) ಮೂಲಕ ಮತದಾರರಿಗೆ ಆಮಿಷ ಒಡ್ಡಿತ್ತು. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 123 (1) ಮತ್ತು ಸೆಕ್ಷನ್‌ 123 (2) ಪ್ರಕಾರ ಮತದಾರರ ಮೇಲೆ ಇದು ಪ್ರಭಾವ ಬೀರಿದ್ದು, ಇದು ಲಂಚಕ್ಕೆ ಸಮವಾಗಿದೆ. ಸೆಕ್ಷನ್‌ 123 (4)ರ ಪ್ರಕಾರ ಆಮಿಷವೊಡ್ಡಿ ಪ್ರಚಾರ ನಡೆಸುವುದು ಅಪರಾಧ. ಈ ಕಾರಣಕ್ಕೆ ಅಕ್ರಮ ಎಸಗಿದ್ದರಿಂದ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಶಾಸಕರಾಗಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಬೇಕು.

    ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ಅವರ ಅನುಮತಿಯನ್ನು ಪಡೆಯಲಾಗಿದ್ದು ಕಾರ್ಡ್‌ಗಳಿಗೆ ಅವರ ಸಹಿಯನ್ನು ಹಾಕಲಾಗಿದೆ. ಈ ಗ್ಯಾರಂಟಿ ಯೋಜನೆಗಳು ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಲು ಮತದಾರರನ್ನು ಪ್ರೇರೇಪಿಸಿದೆ ಎಂದು ಅರ್ಜಿಯಲ್ಲಿ ಕೋರಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಬಿಗ್ ಬಾಸ್ ಶೋ’ ಸೆನ್ಸಾರ್ ಕುರಿತು ಹೈಕೋರ್ಟ್ ಕಳವಳ

    ‘ಬಿಗ್ ಬಾಸ್ ಶೋ’ ಸೆನ್ಸಾರ್ ಕುರಿತು ಹೈಕೋರ್ಟ್ ಕಳವಳ

    ತೆಲುಗಿನ ಬಿಗ್ ಬಾಸ್ (Bigg Boss) ಆವೃತ್ತಿ 7 ಇನ್ನಷ್ಟೇ ಆರಂಭವಾಗಬೇಕಿದೆ. ಅದಕ್ಕೂ ಮುನ್ನ ಆಂಧ್ರದ ಹೈಕೋರ್ಟ್ (High Court) ಬಿಗ್ ಬಾಸ್ ಕಾರ್ಯಕ್ರಮಕ್ಕೆ ಶಾಕ್ ನೀಡಿದೆ. ಹಿಂದಿ, ಕನ್ನಡ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಈ ಶೋ ಪ್ರಸಾರವಾಗುತ್ತಿದ್ದು, ಇದೇ ಮೊದಲ ಬಾರಿಗೆ ಈ ಶೋನಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆ ಮತ್ತು ಅದರಲ್ಲಿ ಅಶ್ಲೀಲ ಕಂಟೆಂಟ್ ಇರುತ್ತದೆ ಎನ್ನುವ ಕಾರಣಕ್ಕಾಗಿ ಆಂಧ್ರಪ್ರದೇಶದ ಹೈಕೋರ್ಟ್ ಮೆಟ್ಟಿಲು ಏರಲಾಗಿತ್ತು.

    ತೆಲುಗು ಯುವಶಕ್ತಿ ಅಧ್ಯಕ್ಷ ಮತ್ತು ನಿರ್ಮಾಪಕ ಕೇತಿರೆಡ್ಡಿ ಜಗದೀಶ್ವರ ರೆಡ್ಡಿ ಎನ್ನುವವರು ಬಿಗ್ ಬಾಸ್ ಶೋ ವಿರುದ್ಧ ಹೈಕೋರ್ಟಿಗೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಮಾನ್ಯ ನ್ಯಾಯಾಲಯ ‘ಕಿರುತೆರೆಯ ಕಾರ್ಯಕ್ರಮಗಳಲ್ಲಿ ಅಶ್ಲೀಲತೆ ಇದ್ದರೆ ಅದರ ಮೇಲೆ ಯಾಕೆ ನಿಗಾ ಇಡಬಾರದು?’ ಎಂದು ಅಭಿಪ್ರಾಯ ಪಟ್ಟಿತು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯ ಎರಡೂ ಇದರಲ್ಲಿ ಅಡಗಿರುವುದರಿಂದ ಆಳವಾಗಿ ವಿಚಾರಣೆ ನಡೆಸುವುದು ಸೂಕ್ತವೆಂದು ಪೀಠ ಅಭಿಪ್ರಾಯಪಟ್ಟಿದೆ.

    ಬಿಗ್ ಬಾಸ್ ಶೋ ಪರ ವಕೀಲರು ‘ಕಿರುತೆರೆಗೆ ಸೆನ್ಸಾರ್ (Censor) ವ್ಯವಸ್ಥೆಯಿಲ್ಲ. ಅಲ್ಲದೇ, ಸೆನ್ಸಾರ್ ಮಾಡುವುದೇ ಆದರೆ ಕೇಂದ್ರ ಸರಕಾರ ಕಾನೂನು ರೂಪಿಸಬೇಕು. ಇಂತಹ ಶೋಗಳು ಇಷ್ಟವಾಗದೇ ಇದ್ದರೆ ಚಾನೆಲ್ ಬದಲಾಯಿಸುವ ಎಲ್ಲ ಹಕ್ಕುಗಳು ನೋಡುಗನಿಗೆ ಇದೆ ಎಂದು ವಾದಿಸಿದರು. ವಾದವನ್ನು ಆಲಿಸಿದ ಪೀಠ ‘ಆಕ್ಷೇಪಾರ್ಹ ಕಂಟೆಂಟ್ ಗಳ ಪ್ರಸಾರಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಪ್ರಶ್ನೆ ಮಾಡಿತು. ಜೊತೆಗೆ ಶೋ ಪ್ರಸಾರಕ್ಕೂ ಮುನ್ನ ಸೆನ್ಸಾರ್ ಮಾಡುವ ವಿಚಾರದಲ್ಲಿ ಕೇಂದ್ರಕ್ಕೆ ಸೂಚನೆ ನೀಡುವ ಬಗ್ಗೆ ಯೋಚಿಸುವುದಾಗಿಯೂ ಕೋರ್ಟ್ ಹೇಳಿತು.

    ನಾಲ್ಕು ವಾರಗಳ ಕಾಲ ವಿಚಾರಣೆ ಮುಂದೂಡಿದ ಘನ ನ್ಯಾಯಾಲಯವು, ಸೆನ್ಸಾರ್ ಮಂಡಳಿಗೆ, ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಚಾನೆಲ್ ಮತ್ತು ಶೋ ಆಯೋಜಕರಿಗೆ ಹಾಗೂ ಬಿಗ್ ಬಾಸ್ ಶೋ ನಡೆಸಿಕೊಡುವ ನಟ ನಾಗಾರ್ಜುನ್ (Nagarjuna) ಅವರಿಗೆ ‘ಆಕ್ಷೇಪಾರ್ಹ ಕಂಟೆಂಟ್ ಮತ್ತು ಸೆನ್ಸಾರ್ ಕುರಿತಂತೆ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ಆದೇಶ ನೀಡಿದೆ.

    ಈಗಾಗಲೇ ತೆಲುಗಿನ ಬಿಗ್ ಬಾಸ್ ಸೀಸನ್ 7 ಪ್ರೋಮೋ ರಿಲೀಸ್ ಆಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಸರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸ್ಪರ್ಧಿಗಳ ಆಯ್ಕೆಯನ್ನೂ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಹೈಕೋರ್ಟ್ ಆದೇಶ ಮತ್ತು ಅಭಿಪ್ರಾಯ ಆಯೋಜಕರನ್ನು ಚಿಂತೆಗೆ ದೂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣ – ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

    ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣ – ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

    ಭೋಪಾಲ್: ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾದ ಪ್ರವೇಶ್ ಶುಕ್ಲಾ (Pravesh Shukla) ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರವಾಗಿ ಮಧ್ಯಪ್ರದೇಶ (Madhya Pradesh) ಹೈಕೋರ್ಟ್ (High Court) ಸೋಮವಾರ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

    ರಾಷ್ಟ್ರೀಯ ಭದ್ರತಾ ಕಾಯಿದೆಯಡಿ (NSA) ಆರೋಪಿಯ ಬಂಧನ ಪ್ರಶ್ನಿಸಿ ಪ್ರವೇಶ್ ಶುಕ್ಲಾ ಪತ್ನಿ ಕಂಚನ್ ಶುಕ್ಲಾ ಮನವಿ ಸಲ್ಲಿಸಿದ್ದಳು. ಅಲ್ಲದೇ ರಾಜಕೀಯ ಕಾರಣಕ್ಕೆ ಪತಿಯನ್ನು ಬಂಧಿಸಲಾಗಿದೆ ಎಂದು ಆಕೆ ಆರೋಪಿಸಿದ್ದಾಳೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲೂ ಬುಲ್ಡೋಜರ್‌ ಸದ್ದು; ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರವಿಸರ್ಜನೆ ಮಾಡಿದ್ದ ಆರೋಪಿ ಮನೆ ಧ್ವಂಸ

    ಬಂಧನದ ವಿರುದ್ಧ ಅಧಿಕಾರಿಗಳಿಗೆ ಪ್ರತಿಕ್ರಿಯೆ ನೀಡಲು ಅವಕಾಶ ಕೊಡದೆ ಪ್ರವೇಶ್ ಶುಕ್ಲಾ ವಿರುದ್ಧ ಎನ್‍ಎಸ್‍ಎ ಕಾಯಿದೆ ಅನ್ವಯಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಅನಿರುದ್ಧ ಕುಮಾರ್ ಮಿಶ್ರಾ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.

    ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರವಿ ಮಳಿಮಠ ಮತ್ತು ವಿಶಾಲ್ ಮಿಶ್ರಾ ಅವರನ್ನೊಳಗೊಂಡ ಪೀಠ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು. ವಿಚಾರಣೆಯ ವಿವರಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸದಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು. ಇದನ್ನೂ ಓದಿ: ಆದಿವಾಸಿ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಪ್ರಕರಣ – ಸಂತ್ರಸ್ತನ ಕಾಲು ತೊಳೆದು ಗೌರವಿಸಿದ ಮಧ್ಯಪ್ರದೇಶ ಸಿಎಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಆದಿಪುರುಷ’ ಚಿತ್ರದಲ್ಲಿ ತಪ್ಪಾಗಿದೆ ಕ್ಷಮಿಸಿ: ಕೈ ಮುಗಿದು ಕ್ಷಮೆ ಕೇಳಿದ ರೈಟರ್

    ‘ಆದಿಪುರುಷ’ ಚಿತ್ರದಲ್ಲಿ ತಪ್ಪಾಗಿದೆ ಕ್ಷಮಿಸಿ: ಕೈ ಮುಗಿದು ಕ್ಷಮೆ ಕೇಳಿದ ರೈಟರ್

    ದಿಪುರುಷ ಸಿನಿಮಾದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹೋರಾಟ ಮಾಡಿದರೂ ಚಿತ್ರತಂಡವಾಗಲಿ ಅಥವಾ ಸಿನಿಮಾದ ಸಂಭಾಷಣೆಯನ್ನು ಬರೆದ ಮನೋಜ್ ಮುಂತಾಶಿರ್ (Manoj Muntashir) ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿರಲ್ಲ. ಸಿನಿಮಾ ಬ್ಯಾನ್ ಮಾಡುವ ಮಟ್ಟಕ್ಕೆ ಬಂದರೂ ಮತ್ತೆ ತಮ್ಮ ಮೊಂಡುತನವನ್ನೇ ಮುಂದುವರೆಸಿಕೊಂಡು ಹೋಗಿತ್ತು ಚಿತ್ರತಂಡ. ಕೋರ್ಟ್ ಕಟಕಟೆ ಏರಿದ ನಂತರ ಇದೀಗ ತಣ್ಣಗಾಗಿದೆ.

    ಈ ಹಿಂದೆ ಅಲಹಾಬಾದ್ (Allahabad) ಹೈಕೋರ್ಟ್ ಚಿತ್ರತಂಡಕ್ಕೆ ಛೀಮಾರಿ ಹಾಕಿತ್ತು. ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸಿದ್ದರ ಬಗ್ಗೆ ತೀವ್ರ ರೀತಿಯಲ್ಲೇ ಅಸಮಾಧಾನ ಹೊರಹಾಕಿತ್ತು. ಕೋರ್ಟಿಗೆ ಖುದ್ದಾಗಿ ಹಾಜರಾಗಬೇಕು ಎಂದು ಮನೋಜ್ ಮುಂತಾಶಿರ್ ಸೇರಿದಂತೆ ನಿರ್ಮಾಪಕರಿಗೆ ಮತ್ತು ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿತ್ತು. ಕೋರ್ಟ್ ಬಿಸಿ ತಾಗುತ್ತಿದ್ದಂತೆಯೇ ಬರಹಗಾರ ಮನೋಜ್ ಟ್ವೀಟ್ ಮಾಡಿದ್ದಾರೆ.

    ತಮ್ಮಿಂದ ಚಿತ್ರದಲ್ಲಿ ತಪ್ಪಾಗಿದೆ ಎಂದು ಒಪ್ಪಿಕೊಂಡಿರುವ ಮನೋಜ್, ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕೆ ಜನರಲ್ಲಿ ಕ್ಷಮೆ ಕೇಳಿದ್ದಾರೆ. ಜನರಿಗೆ ನೋವು ಆಗಿದ್ದನ್ನು ಒಪ್ಪಿಕೊಳ್ಳುತ್ತೇನೆ. ನಾನು ಎರಡೂ ಕೈಗಳನ್ನು ಮುಗಿದು ಕ್ಷಮೆ ಕೇಳುತ್ತೇನೆ. ಪ್ರಭು ಬಜರಂಗ ಬಲಿ ನಮಗೆ ಮತ್ತಷ್ಟು ಶಕ್ತಿ ನೀಡಲಿ. ಪವಿತ್ರ ಸನಾತನ ಹಾಗೂ ನಮ್ಮ ರಾಷ್ಟ್ರ ಸೇವೆ ಮಾಡಲು ಮತ್ತಷ್ಟು ಶಕ್ತಿ ತುಂಬಲಿ ಎಂದು ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಪ್ಯಾರಿಸ್‌ನ ರೊಮ್ಯಾಂಟಿಕ್‌ ಫೋಟೋ ಹಂಚಿಕೊಂಡ ಅದಿತಿ ಪ್ರಭುದೇವ

    ಈ ಹಿಂದೆ ಆದಿಪುರುಷ (Adipurush) ಸಿನಿಮಾವನ್ನು ನೇಪಾಳ ಸರಕಾರ ಬ್ಯಾನ್ ಮಾಡಿತ್ತು. ಚಿತ್ರದಲ್ಲಿ ಸೀತೆ ಬಗ್ಗೆ ಹೇಳಲಾದ ಡೈಲಾಗ್ ಸರಿಯಾಗಿಲ್ಲ ಎಂದು ಕಠ್ಮಂಡು ಮೇಯರ್ ಕೋರ್ಟ್ ಮೆಟ್ಟಿಲು ಏರಿದ್ದರು. ಸಿನಿಮಾವನ್ನು ಬ್ಯಾನ್ ಮಾಡುವುದು ಸರಿಯಲ್ಲ ಎಂದು ಅಲ್ಲಿನ ಹೈಕೋರ್ಟ್ ಹೇಳಿದ್ದರೂ, ಇತಿಹಾಸಕ್ಕೆ ಅಪಚಾರ ಮಾಡಬಾರದು ಎನ್ನುವುದನ್ನು ಎತ್ತಿ ಹಿಡಿದಿತ್ತು. ನಂತರ ಅಲಹಾಬಾದ್ (Allahabad) ಹೈಕೋರ್ಟ್ ಮೊನ್ನೆಯಷ್ಟೇ ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿದೆ.

    ಆದಿಪುರುಷ ಸಿನಿಮಾದ ಚಿತ್ರಕಥೆ ಮತ್ತು ಸಂಭಾಷಣೆ ಕುರಿತಂತೆ  ಸಲ್ಲಿಸಲಾದ ಅರ್ಜಿಯನ್ನು ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟಿನ (High Court) ಲಕ್ನೋ ಪೀಠವು ಚಿತ್ರತಂಡದ ಜೊತೆ ಸೆನ್ಸಾರ್ ಮಂಡಳಿಯನ್ನು ತೀವ್ರವಾಗಿ ಟೀಕಿಸಿತ್ತು. ‘ಭಾರತೀಯರು ಸಹಿಷ್ಟುಗಳು ಎನ್ನುವ ಕಾರಣಕ್ಕೆ ಸಹನೆ ಪರೀಕ್ಷೆ ಮಾಡಲಾಗುತ್ತಿದೆಯೇ?’ ಎಂದು ಪ್ರಶ್ನೆ ಮಾಡಿತ್ತು.

    ರಾಮಾಯಣವನ್ನು ಜನರು ಪವಿತ್ರ ಎಂದು ದಿನವೂ ಪಠಿಸುತ್ತಾರೆ. ರಾಮಚರಿತಮಾನಸವನ್ನು ಓದುತ್ತಾರೆ. ಇಂತಹ ರಾಮಾಯಣವನ್ನೇ ಸಿನಿಮಾ ಮಾಡಿ, ಆ ನಂತರ ಸಿನಿಮಾಗೂ ರಾಮಾಯಣಕ್ಕೂ ಸಂಬಂಧವಿಲ್ಲ ಎಂದರೆ ಮಾಡಿದ ತಪ್ಪು ಮುಚ್ಚಿದಂತೆ ಆಗುತ್ತದೆ? ಚಿತ್ರದಲ್ಲಿನ ಸಂಭಾಷಣೆಗಳು ಕೂಡ ಅಪಮಾನ ಮಾಡುವಂತಿವೆ. ಈ ಸಿನಿಮಾ ನೋಡಿದ ಮೇಲೂ ಜನರು ತಾಳ್ಮೆ ಕಳೆದುಕೊಂಡಿಲ್ಲ ಎನ್ನುವುದು ಅವರ ಸಹಿಷ್ಣುತೆಯನ್ನು ತೋರಿಸುತ್ತದೆ’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿತ್ತು.

    ದೇವರು ಎಂದು ಪೂಜಿಸುವ ಭಗವಾನ್ ಹನುಮಾನ್ ಮತ್ತು ಸೀತೆಯನ್ನು ಸಿನಿಮಾದಲ್ಲಿ ಏನೂ ಅಲ್ಲ ಎನ್ನುವಂತೆ ತೋರಿಸಿದ್ದೀರಿ. ಕೆಲವು ದೃಶ್ಯಗಳು ವಯಸ್ಕ ವರ್ಗಕ್ಕೆ ಸೇರುವಂತಹವು ಆಗಿವೆ. ನೀವು ಏನನ್ನು ತೋರಿಸಲು ಹೊರಟಿದ್ದೀರಿ ಎಂದು ಪ್ರಶ್ನೆ ಮಾಡಿದ್ದಲ್ಲದೇ, ಸಂಭಾಷಣೆ ಬರೆದಿರುವ ಮನೋಜ್ (Manoj) ಅವರಿಗೂ ನೋಟಿಸ್ ನೀಡಿ, ಕಕ್ಷಿದಾರನನ್ನಾಗಿ ಮಾಡಿ ಎಂದು ನಿರ್ದೇಶನ ನೀಡಿತ್ತು. ಈ ನಿರ್ದೇಶನದ ಹಿನ್ನೆಲೆಯಲ್ಲಿ ಬರಹಗಾರ ಮನೋಜ್ ಕ್ಷಮೆ ಕೇಳಿದ್ದಾರೆ.