Tag: high court

  • ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ – ಸಿಬಿಐ ವಿಚಾರಣೆ ಆದೇಶ ಕಾಯ್ದಿರಿಸಿದ ಹೈಕೋರ್ಟ್

    ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ – ಸಿಬಿಐ ವಿಚಾರಣೆ ಆದೇಶ ಕಾಯ್ದಿರಿಸಿದ ಹೈಕೋರ್ಟ್

    ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ (Disproportionate Assets Case) ಸಿಬಿಐಗೆ (CBI) ಅನುಮತಿಸಿದ್ದ ಆದೇಶವನ್ನು ಸರ್ಕಾರವು ಹಿಂಪಡೆದಿರುವುದರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ (High Court) ಆದೇಶವನ್ನು ಕಾಯ್ದಿರಿಸಿದೆ.

    ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಡಿ.ಕೆ ಶಿವಕುಮಾರ್ ಎಫ್‍ಐಆರ್ ರದ್ದಿಗೆ ಕೋರಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ ಎಂದು ಸಿಬಿಐ ಪರ ವಕೀಲ ಪ್ರಸನ್ನಕುಮಾರ್ ವಾದ ಮಂಡಿಸಿದರು.

    ಯತ್ನಾಳ್ ಪರ ವಕೀಲ ವೆಂಕಟೇಶ್ ದಳವಾಯಿ, ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಸಿಬಿಐ ಎಫ್‍ಐಆರ್ ದಾಖಲಿಸಿದೆ. ಈಗ ರಾಜ್ಯ ಸರ್ಕಾರ ಒಪ್ಪಿಗೆ ಹಿಂಪಡೆದಿದೆ. ಅನುಮತಿ ಹಿಂಪಡೆದ ನಂತರ ಎಫ್‍ಐಆರ್ ಏನಾಗಲಿದೆ? ಸಿಬಿಐ ತನಿಖೆಯ ಕುರಿತ ಪ್ರಶ್ನೆ ಹೈಕೋರ್ಟ್ ಮುಂದಿದೆ ಎಂದು ವಾದ ಮಂಡಿಸಿದರು. ವಾದವನ್ನು ಆಲಿಸಿದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದೆ.

    ಸಿಬಿಐಗೆ ಅನುಮತಿಸಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿರುವುದನ್ನು ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

    ಡಿಕೆ ಶಿವಕುಮಾರ್ ವಿರುದ್ಧ 2020 ರ ಅಕ್ಟೋಬರ್ 3 ರಂದು ಎಫ್‍ಐಆರ್ ದಾಖಲಾಗಿತ್ತು. ಡಿಕೆಶಿ ಆಸ್ತಿ 2013 ರಿಂದ 2018 ರವರೆಗೆ ತೀವ್ರ ಹೆಚ್ಚಾಗಿದೆ ಎಂದು ಸಿಬಿಐ ಆರೋಪಿಸಿದೆ. ಏಪ್ರಿಲ್ 2013 ರಲ್ಲಿ 33.92 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಹೊಂದಿದ್ದ ಡಿ.ಕೆ ಶಿವಕುಮಾರ್ 2018 ರ ವೇಳೆಗೆ 128.6 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಂಪಾದಿಸಿದ್ದಾರೆ. ಏಪ್ರಿಲ್ 30, 2018ರ ವೇಳೆಗೆ ಅವರ ಒಟ್ಟು ಆಸ್ತಿ ಮೌಲ್ಯ 162.53 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಸಿಬಿಐ ಎಫ್‍ಐಆರ್‍ನಲ್ಲಿ ಉಲ್ಲೇಖಿಸಿದೆ.

    2017ರಲ್ಲಿ ಆದಾಯ ತೆರಿಗೆ ಇಲಾಖೆ ಡಿಕೆ ಶಿವಕುಮಾರ್ ಮೇಲೆ ದಾಳಿ ನಡೆಸಿತ್ತು. ಐಟಿ ಇಲಾಖೆ ನೀಡಿದ ಮಾಹಿತಿ ಆಧರಿಸಿ ಜಾರಿ ನಿರ್ದೇಶನಾಲಯ ಡಿಕೆಶಿ ವಿರುದ್ಧ ತನಿಖೆ ಆರಂಭಿಸಿತ್ತು. ಇಡಿ ತನಿಖೆಯನ್ನು ಆಧರಿಸಿ ಡಿಕೆಶಿ ವಿರುದ್ಧ ಎಫ್‍ಐಆರ್ ದಾಖಲಿಸಲು ಸಿಬಿಐ ರಾಜ್ಯ ಸರ್ಕಾರದಿಂದ ಅನುಮತಿ ಕೋರಿತ್ತು. ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ 2019ರ ಸೆ.25ರಂದು ಅನುಮತಿ ನೀಡಿದ ಬೆನ್ನಲ್ಲೇ 2020ರ ಅಕ್ಟೋಬರ್ 3 ರಂದು ಡಿಕೆ ಶಿವಕುಮಾರ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.

    ಅಕ್ಟೋಬರ್ 2023 ರಲ್ಲಿ ಸಿಬಿಐ ತನಿಖೆಯನ್ನು ರದ್ದುಗೊಳಿಸುವಂತೆ ಶಿವಕುಮಾರ್ ಅವರ ಮನವಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಇದೇ ವೇಳೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರ ಡಿ.ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹಿಂದಿನ ಸರ್ಕಾರ ನೀಡಿದ್ದ ಅನುಮತಿಯನ್ನು ಹಿಂಪಡೆದಿತ್ತು.

    ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಶ್ನಿಸಿದ್ದಾರೆ. ಸಿಬಿಐ ಕೂಡಾ ಒಂದು ಅರ್ಜಿ ಸಲ್ಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದ ಅಂತ್ಯವಾಗಿದ್ದು ಆದೇಶ ಕಾಯ್ದಿರಿಸಲಾಗಿದೆ. ಒಂದು ವೇಳೆ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದರೆ ಡಿ.ಕೆ ಶಿವಕುಮಾರ್ ಅವರಿಗೆ ಸಿಬಿಐ ಸಂಕಷ್ಟ ಹೆಚ್ಚಾಗಲಿದೆ. ಸದ್ಯ ಹೈಕೋರ್ಟ್ ಆದೇಶದ ಮೇಲೆ ಡಿಕೆ ಶಿವಕುಮಾರ್ ಭವಿಷ್ಯ ನಿಂತಿದೆ.

  • ಬಿಎಸ್‌ವೈ ಬಂಧನಕ್ಕೆ ತಡೆ – ಹೈಕೋರ್ಟ್‌ ಆದೇಶ ತೆರವಿಗೆ ಸರ್ಕಾರ ಪ್ಲ್ಯಾನ್‌

    ಬಿಎಸ್‌ವೈ ಬಂಧನಕ್ಕೆ ತಡೆ – ಹೈಕೋರ್ಟ್‌ ಆದೇಶ ತೆರವಿಗೆ ಸರ್ಕಾರ ಪ್ಲ್ಯಾನ್‌

    ಬೆಂಗಳೂರು: ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಆಗ್ರಹಿಸುತ್ತಿರುವ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ (Yediyurappa) ವಿರುದ್ಧದ ಪೋಕ್ಸೋ ಪ್ರಕರಣಕ್ಕೆ (Pocso Case) ಈಗ ಮತ್ತೆ ಜೀವ ಬಂದಿದೆ.

    ಸಿಎಂ ವಿರುದ್ಧ ಬಿಜೆಪಿಯಿಂದ (BJP) ರಾಜೀನಾಮೆ ಒತ್ತಾಯ, ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ನಿರೀಕ್ಷೆಯ ಬೆನ್ನಲ್ಲೇ ಬಿಎಸ್‌ವೈ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಸರ್ಕಾರ ತೀವ್ರಗೊಳಿಸಿದೆ. ಇದನ್ನೂ ಓದಿ: ತುಂಗಭದ್ರಾ ಡ್ಯಾಂನ ಸರ್ಕಾರ ಕಂಟ್ರೋಲ್‌ ಮಾಡಲ್ಲ – ಡಿಕೆಶಿ ಸ್ಪಷ್ಟನೆ

     

    ಬಿಎಸ್‌ವೈ ಬಂಧನಕ್ಕೆ ಇರುವ ಹೈಕೋರ್ಟ್ (High Court) ತಡೆಯಾಜ್ಞೆ ತೆರವಿಗೆ ಕಸರತ್ತು ನಡೆಸುತ್ತಿದೆ. ತಡೆಯಾಜ್ಞೆ ತೆರವುಗೊಳಿಸಿ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ಲ್ಯಾನ್‌ ಮಾಡಿದೆ.

    ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ ಬಿಎಸ್‌ವೈ ಬಂಧನಕ್ಕೆ ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕಾನೂನು ಹೋರಾಟ ನಡೆಸುವ ಸಾಧ್ಯತೆಯಿದೆ.

     

  • ಮಾತೃತ್ವದ ರಜೆ ವೇಳೆ ಬೇರೆಯವರ ನೇಮಕ – ಹುದ್ದೆಯಲ್ಲಿ ಮುಂದುವರೆಯುವಂತೆ ಹೈಕೋರ್ಟ್ ತೀರ್ಪು

    ಮಾತೃತ್ವದ ರಜೆ ವೇಳೆ ಬೇರೆಯವರ ನೇಮಕ – ಹುದ್ದೆಯಲ್ಲಿ ಮುಂದುವರೆಯುವಂತೆ ಹೈಕೋರ್ಟ್ ತೀರ್ಪು

    ಧಾರವಾಡ: ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಮಾತೃತ್ವ ರಜೆ ಬಳಿಕವೂ ಉದ್ಯೋಗದಲ್ಲಿ ಮುಂದುವರೆಸುವಂತೆ ಧಾರವಾಡ ಹೈಕೋರ್ಟ್ (High Court) ಪೀಠ ಮಹತ್ವದ ತೀರ್ಪು ನೀಡಿದೆ.

    ವಿಜಯನಗರ (Vijayanagar) ಜಿಲ್ಲೆಯ ಹೂವಿನಹಡಗಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಚಾಂದ್ಬಿ ಬಳಿಗಾರ ಎಂಬುವವರು 2014ರಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿಂದ 2023ರ ವರೆಗೂ ಚಾಂದ್ಬಿ ಅವರು ಕೆಲಸ ಮಾಡಿದ್ದರು. ನಂತರ ಮಾತೃತ್ವ ರಜೆಗಾಗಿ ಅರ್ಜಿ ಕೊಟ್ಟು ತೆರಳಿದ್ದರು. ಇದಾದ ಬಳಿಕ ಅವರು ಮಾತೃತ್ವ ರಜೆ ಮುಗಿಸಿ ಮರಳಿ ಬಂದ ನಂತರ ಅವರ ಸ್ಥಾನಕ್ಕೆ ಬೇರೆಯವರನ್ನು ಇಲಾಖೆ ನೇಮಕ ಮಾಡಿಕೊಂಡಿತ್ತು.

    ಈ ವಿಷಯವನ್ನು ವಿಜಯನಗರ ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಇಲಾಖೆಯ ನಿರ್ಧಾರವನ್ನು ಪ್ರಶ್ನಿಸಿ ಚಾಂದ್ಬಿ ಅವರು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರೂ ಮಹಿಳಿಗೆ ಮಾತೃತ್ವ ರಜೆ ನೀಡಬೇಕು. ಅವರನ್ನು ಮರಳಿ ಉದ್ಯೋಗದಲ್ಲಿ ಮುಂದುವರಿಸಬೇಕು ಎಂದು ಮಹತ್ವದ ಆದೇಶ ನೀಡಿದೆ. ಅಲ್ಲದೇ ಚಾಂದ್ಬಿಗೆ ಆಗಿರುವ ನಷ್ಟವನ್ನೂ ಭರಿಸುವಂತೆ ಸೂಚನೆ ನೀಡಿದೆ.

  • ಮೂಳೆ ಶಸ್ತ್ರಚಿಕಿತ್ಸೆಯಾಗಿದೆ ಮನೆ ಊಟ ಕೊಡಿ – ಮ್ಯಾಜಿಸ್ಟ್ರೇಟ್‌ಗೆ ಮೂರು ಪತ್ರ ಬರೆದ ದರ್ಶನ್‌!

    ಮೂಳೆ ಶಸ್ತ್ರಚಿಕಿತ್ಸೆಯಾಗಿದೆ ಮನೆ ಊಟ ಕೊಡಿ – ಮ್ಯಾಜಿಸ್ಟ್ರೇಟ್‌ಗೆ ಮೂರು ಪತ್ರ ಬರೆದ ದರ್ಶನ್‌!

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೈಲೂಟ ಸೇವಿಸುತ್ತಿರುವ ನಟ ದರ್ಶನ್‌ (Darshan) ಮತ್ತೆ ಮೆನಯೂಟ ಕೋರಿ ಜೈಲಾಧಿಕಾರಿಗಳು ಹಾಗೂ ಮ್ಯಾಜಿಸ್ಟ್ರೇಟ್‌ಗೆ ಮೂರು ಪತ್ರಗಳನ್ನ ಬರೆದಿದ್ದಾರೆ. ಸ್ವತಃ ಕೈ ಬರಹದ ಮೂಲಕ ಜೈಲಾಧಿಕಾರಿಗೆ, ಜೈಲಿನ‌ ಮಹಾನಿರ್ದೇಶಕರಿಗೆ, ವೈದ್ಯಾಧಿಕಾರಿಗೆ, ಮ್ಯಾಜಿಸ್ಟ್ರೇಟ್‌ಗೆ ಬರೆದ ಪತ್ರ ʻಪಬ್ಲಿಕ ಟಿವಿʼಗೆ ಲಭ್ಯವಾಗಿದೆ.

    ನನಗೆ ಮೂಳೆ ಶಸ್ತ್ರಚಿಕಿತ್ಸೆಯಾಗಿದೆ, ಪ್ರೋಟಿನ್‌ ಅವಶ್ಯಕತೆ ಇದೆ. ಕಾರಾಗೃಹಕ್ಕೆ ದಾಖಲಾದ ದಿನದಿಂದ ಜೈಲೂಟ ಸೇವೆನೆ ಮಾಡುತ್ತಿದ್ದೇನೆ. ನನ್ನ ಆರೋಗ್ಯ, ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಮನೆ ಊಟ ನೀಡುವಂತೆ ಪತ್ರದ ಮೂಲಕ ದರ್ಶನ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಮೀಸಲಾತಿ ಹೆಚ್ಚಿಸಿದ್ದ ನಿತೀಶ್‌ಗೆ ಹಿನ್ನಡೆ – ಹೈಕೋರ್ಟ್‌ ಆದೇಶಕ್ಕೆ ತಡೆ ನೀಡದ ಸುಪ್ರೀಂ

    ಇತ್ತೀಚೆಗಷ್ಟೇ ಮನೆಯೂಟ ಕೋರಿ ಹೈಕೋರ್ಟ್‌ನಲ್ಲಿ (High Court) ಸಲ್ಲಿಸಿದ್ದ ಸಲ್ಲಿಸಿದ್ದ ಮೆಮೋ ಅರ್ಜಿಯನ್ನು ವಿಚಾರಣೆಗೆ ಬರುತ್ತಿದ್ದಂತೆ ದರ್ಶನ್‌ ಪರ ವಕೀಲರು ಹಿಂದಕ್ಕೆ ಪಡೆದಿದ್ದರು. ತಾಂತ್ರಿಕ ಕಾರಣ ನೀಡಿ ದರ್ಶನ್‌ ಪರ ವಕೀಲರು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದರು. ಅರ್ಜಿ ವಾಪಸ್‌ ಪಡೆದ ಕಾರಣ ದರ್ಶನ್‌ ಜೈಲೂಟವನ್ನೇ ಸೇವಿಸಬೇಕಿದೆ.

    ಇದಕ್ಕೂ ಮುನ್ನ ಮನೆಯೂಟ (Home Food), ಹಾಸಿಗೆ, ಪುಸ್ತಕಗಳಿಗೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್ (Maagsitrate Court) ಜುಲೈ 25 ರಂದು ವಜಾಗೊಳಿಸಿತ್ತು. ಅರ್ಜಿ ವಜಾಗೊಂಡ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದರ್ಶನ್ ಪರ ವಕೀಲರು ಮೇಲ್ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: Wayanad Landslides: 93 ಮೃತದೇಹ ಸಿಕ್ಕಿವೆ, ಸಾವಿನ ಸಂಖ್ಯೆ ಹೆಚ್ಚಾಗಬಹುದು – ಸಿಎಂ ಪಿಣರಾಯಿ ಆತಂಕ

    ಕಾನೂನಿಗೆ ಎಲ್ಲರೂ ಒಂದೇ, ಕೈದಿಗಳಲ್ಲಿ ಯಾವುದೇ ಭೇದವಿಲ್ಲ. ಆಸ್ತಿ ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ. ಅಗತ್ಯವಿದ್ದಾಗ ಮಾತ್ರ ವಿಚಾರಣಾಧೀನ ಕೈದಿಗಳಿಗೆ ಮನೆಯೂಟ ನೀಡಬಹುದು. ಆದರೆ ಕೊಲೆ ಪ್ರಕರಣದ ಆರೋಪಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಿ ಕೋರ್ಟ್‌ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನೂ ಓದಿ: Wayanad Landslides: ತಮಿಳುನಾಡಿನಿಂದ 5 ಕೋಟಿ ನೆರವು – ಅಗತ್ಯ ಸಹಕಾರ ನೀಡೋದಾಗಿ ಕರ್ನಾಟಕ ಸಿಎಂ ಭರವಸೆ 

  • ದರ್ಶನ್‌ಗೆ ಜೈಲೂಟ – ಮನೆಯೂಟ ಕೋರಿ ಸಲ್ಲಿಸಿದ್ದ ಅರ್ಜಿ ವಾಪಸ್‌

    ದರ್ಶನ್‌ಗೆ ಜೈಲೂಟ – ಮನೆಯೂಟ ಕೋರಿ ಸಲ್ಲಿಸಿದ್ದ ಅರ್ಜಿ ವಾಪಸ್‌

    ಬೆಂಗಳೂರು: ಮನೆಯೂಟ ಕೋರಿ ಹೈಕೋರ್ಟ್‌ನಲ್ಲಿ (High Court) ಸಲ್ಲಿಸಿದ್ದ ಅರ್ಜಿಯನ್ನು ದರ್ಶನ್‌ (Darshan) ಪರ ವಕೀಲರು ಹಿಂದಕ್ಕೆ ಪಡೆದಿದ್ದಾರೆ. ಅರ್ಜಿ ವಾಪಸ್‌ ಪಡೆದ ಕಾರಣ ದರ್ಶನ್‌ ಜೈಲೂಟವನ್ನೇ ಸೇವಿಸಬೇಕಿದೆ.

    ಇಂದು ವಿಚಾರಣೆಗೆ ಬರುತ್ತಿದ್ದಂತೆ ಮೆಮೋ‌ ಸಲ್ಲಿಸಿ ಅರ್ಜಿಯನ್ನು ಹಿಂದಕ್ಕೆ ಪಡೆಯಲಾಗಿದೆ. ತಾಂತ್ರಿಕ ಕಾರಣ ನೀಡಿ ದರ್ಶನ್‌ ಪರ ವಕೀಲರು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದು ಮತ್ತೆ ಹೊಸ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

    ಮನೆಯೂಟ (Home Food), ಹಾಸಿಗೆ, ಪುಸ್ತಕಗಳಿಗೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್ (Maagsitrate Court) ಜುಲೈ 25 ರಂದು ವಜಾಗೊಳಿಸಿತ್ತು. ಅರ್ಜಿ ವಜಾಗೊಂಡ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದರ್ಶನ್ ಪರ ವಕೀಲರು ಮೇಲ್ಮನವಿ ಸಲ್ಲಿಸಿದ್ದರು.

    ಕಾನೂನಿಗೆ ಎಲ್ಲರೂ ಒಂದೇ, ಕೈದಿಗಳಲ್ಲಿ ಯಾವುದೇ ಭೇದವಿಲ್ಲ. ಆಸ್ತಿ ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ. ಅಗತ್ಯವಿದ್ದಾಗ ಮಾತ್ರ ವಿಚಾರಣಾಧೀನ ಕೈದಿಗಳಿಗೆ ಮನೆಯೂಟ ನೀಡಬಹುದು. ಆದರೆ ಕೊಲೆ ಪ್ರಕರಣದ ಆರೋಪಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಿ ಕೋರ್ಟ್‌ ಅರ್ಜಿಯನ್ನು ವಜಾಗೊಳಿಸಿತ್ತು.

  • Valmiki Scam | ಇಡಿ ಅಧಿಕಾರಿಗಳ ಮೇಲಿನ ಎಫ್‌ಐಆರ್‌ಗೆ ತಡೆ

    ಬೆಂಗಳೂರು: ವಾಲ್ಮೀಕಿ ನಿಗಮ ಹಗರಣ (Valmiki Scam) ಸಂಬಂಧ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ (FIR) ಹೈಕೋರ್ಟ್ (High Court) ತಡೆ ನೀಡಿದೆ.

    ನಾಗೇಂದ್ರ ಹೆಸರು ಹೇಳುವಂತೆ ನನಗೆ ಹಿಂಸೆ ಕೊಡುತಿದ್ದರು ಅಂತ ಇಡಿಯ ಇಬ್ಬರು ಅಧಿಕಾರಿಗಳ ವಿರುದ್ಧ ನಿಗಮದ ಮಾಜಿ ಎಂಡಿ ಕಲ್ಲೇಶ್ ದೂರು ದಾಖಲಿಸಿದ್ದರು. ಎಫ್‌ಐಆರ್ ರದ್ದು ಕೋರಿ ಇಡಿ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಎಫ್‌ಐಆರ್‌ಗೆ ತಡೆ ನೀಡಿ ಆಗಸ್ಟ್ 21ಕ್ಕೆ ವಿಚಾರಣೆ ಮುಂದೂಡಿದೆ.

     

    ಸರ್ಕಾರದ ಪರ ವಾದ ಮಂಡಿಸಿದ ಎಜಿ ಶಶಿಕಿರಣ್ ಶೆಟ್ಟಿ, ಸಿಎಂ, ಡಿಸಿಎಂ ಹೆಸರೇಳಲು ಇಡಿ ಅಧಿಕಾರಿಗಳು ಸಾಕಷ್ಟು ಒತ್ತಡ ಹೇರಿದ್ದಾರೆ. ಇಡಿ ಕಚೇರಿಯ ಸಿಸಿಟಿವಿಯನ್ನು ವಶಕ್ಕೆ ಪಡೆಯಬೇಕು. ಆಗ ಎಲ್ಲವೂ ತಿಳಿಯಲಿದೆ ಎಂದು ವಾದಿಸಿದರು.

    ಇದಕ್ಕೆ ಜಡ್ಜ್ ನಾಗಪ್ರಸನ್ನ ಅವರು, ಸಿಸಿಟಿವಿ ಯಾಕೆ ಬೇಕು? ಅಲ್ಲಿ ಕಾಫಿ ಕುಡಿಯಲು ಕರೆದಿದ್ದರಾ? ನೀವು ಹೀಗೆ ಆರೋಪ ಮಾಡಿದ್ರೆ ಯಾವೊಬ್ಬ ಅಧಿಕಾರಿಯೂ ಕೆಲಸ ಮಾಡಲ್ಲ. ರಾಜ್ಯ ಸರ್ಕಾರ ಯಾಕೆ ಎಫ್‌ಐಆರ್ ದಾಖಲು ಮಾಡಿದೆ ಎಂದು ಪ್ರಶ್ನಿಸಿದ್ರು. ಇದನ್ನೂ ಓದಿ: ಬೆಂಗಳೂರು 5 ಭಾಗಗಳಾಗಿ ವಿಭಜನೆ – ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮಸೂದೆಯಲ್ಲಿ ಏನಿದೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

    ಪ್ರತಿವಾದ ಮಾಡಿದ ಇ.ಡಿ ಪರ ವಕೀಲ ಎಎಸ್‌ಜಿ ಅರವಿಂದ್, ತನಿಖೆಯನ್ನು ಬೇಕಾದರೆ ಪ್ರಶ್ನಿಸಲಿ. ಅದು ಬಿಟ್ಟು ಅಧಿಕಾರಿಗಳನ್ನು ಯಾಕೆ ಟಾರ್ಗೆಟ್ ಮಾಡುತ್ತಾರೆ. ಇಡಿ ತನಿಖೆಯ ಮೇಲೆ ತೊಂದರೆ ಇದ್ದರೆ ಅವರು ಇಸಿಐಆರ್ ದಾಖಲು ಮಾಡಬಹುದಿತ್ತು ಎಂದರು. ವಾಲ್ಮೀಕಿ ಹಗರಣ| ಇಬ್ಬರು ಇಡಿ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್‌ ದಾಖಲು- ದೂರಿನಲ್ಲಿ ಏನಿದೆ?

    ಈ ಮಧ್ಯೆ ಎಸ್‌ಐಟಿ ತನಿಖೆಗೆ ತಡೆ ನೀಡುವಂತೆ ಸಲ್ಲಿಸಿದ್ದ ಯೂನಿಯನ್ ಬ್ಯಾಂಕ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಸಿಬಿಐಗೆ ನೋಟಿಸ್ ನೀಡಿ ಆಗಸ್ಟ್ 7ಕ್ಕೆ ಮುಂದೂಡಿದೆ.

     

  • ಗೌರಿ ಲಂಕೇಶ್‌ ಹತ್ಯೆ ಕೇಸ್‌- ಮೂವರಿಗೆ 6 ವರ್ಷದ ಬಳಿಕ ಜಾಮೀನು

    ಗೌರಿ ಲಂಕೇಶ್‌ ಹತ್ಯೆ ಕೇಸ್‌- ಮೂವರಿಗೆ 6 ವರ್ಷದ ಬಳಿಕ ಜಾಮೀನು

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ (Gauri Lankesh Murder Case) ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಹೈಕೋರ್ಟ್‌ (High Court) ಜಾಮೀನು (Bail) ಮಂಜೂರು ಮಾಡಿದೆ.

    ನ್ಯಾ.ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ 6 ವರ್ಷದ ಬಳಿಕ ನವೀನ್ ಕುಮಾರ್, ಅಮಿತ್, ಎಚ್‌ಎಲ್ ಸುರೇಶ್ ಅವರಿಗೆ ಜಾಮೀನು ನೀಡಿದೆ. ಇದನ್ನೂ ಓದಿ: Trump Assassination Attempt | 48 ಗಂಟೆಯ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಟ್ರಂಪ್‌

    ಆರೋಪಿಗಳ ಪರ ಹಿರಿಯ ವಕೀಲ ಅರುಣ್ ಶ್ಯಾಂ ವಾದ ಮಂಡಿಸಿದ್ದರು. ಕೋರ್ಟ್‌ ಹಲವು ಷರತ್ತು ವಿಧಿಸಿದ್ದು ಈ ಷರತ್ತು ಪೂರ್ಣಗೊಂಡ ಬಳಿಕ ಇಂದು ಸಂಜೆ ಅಥವಾ ನಾಳೆ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.

  • ಡೆಂಗ್ಯೂ ಹೆಚ್ಚಳಕ್ಕೆ ಹೈಕೋರ್ಟ್ ಕಳವಳ – ಸುಮೋಟೋ ಕೇಸ್ ದಾಖಲು

    ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ (Dengue fever) ಪ್ರಕರಣ ಹೆಚ್ಚಳಕ್ಕೆ ಹೈಕೋರ್ಟ್ (High Court) ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಸಂಬಂಧ ನ್ಯಾಯಾಲಯ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ ತುರ್ತು ನೋಟಿಸ್ ಜಾರಿಗೊಳಿಸಿದೆ.

    ಬೆಂಗಳೂರು (Bengaluru )ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಜು.23ರ ಒಳಗೆ ಉತ್ತರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಕಾರ್ಯದರ್ಶಿ ಹಾಗೂ ಬಿಬಿಎಂಪಿಗೆ (BBMP) ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

    ಮುಖ್ಯ ನ್ಯಾ.ಎನ್.ವಿ ಅಂಜಾರಿಯಾ ನೇತೃತ್ವದ ಪೀಠ ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದು, ಅಧಿಕಾರಿಗಳಿಗೆ ಪೀಠ ಕೆಲವು ಪ್ರಮುಖ ಪ್ರಶ್ನೆಗಳನ್ನು ಇಟ್ಟಿದೆ. ಈ ಪ್ರಶ್ನೆಗಳಿಗೆ ನಿಗದಿತ ಸಮಯದಲ್ಲಿ ಉತ್ತರಿಸುವಂತೆ ಕೋರ್ಟ್ ಸೂಚಿಸಿದೆ.

    ಹೈಕೋರ್ಟ್ ನೋಟಿಸ್‍ನಲ್ಲೇನಿದೆ?
    1.ಬೆಂಗಳೂರು ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳೇನು?
    2.ಬೆಂಗಳೂರು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆಯೇ?
    3.ಒದಗಿಸಿರುವ ಮೂಲಸೌಕರ್ಯಗಳ ಮಾಹಿತಿ
    4.ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕೈಗೊಂಡ ಕ್ರಮಗಳೇನು?
    5.ಸೊಳ್ಳೆಗಳ ಉತ್ಪತ್ತಿ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.
    ಈ ಸಂಬಂಧ ಸಂಪೂರ್ಣ ಮಾಹಿತಿ ಒದಗಿಸುವುದಾಗಿ ಎಜಿ ಶಶಿಕಿರಣ್ ಶೆಟ್ಟಿ ಹೈಕೋರ್ಟ್‍ಗೆ ಉತ್ತರಿಸಿದ್ದಾರೆ.

  • ಜೈಲಿನ ಊಟದಿಂದ ಫುಡ್ ಪಾಯಿಸನ್ ಆಗ್ತಿದೆ – ಮನೆ ಊಟ ಬೇಕೆಂದು ಹೈಕೋರ್ಟ್‌ಗೆ ದರ್ಶನ್ ಅರ್ಜಿ

    ಜೈಲಿನ ಊಟದಿಂದ ಫುಡ್ ಪಾಯಿಸನ್ ಆಗ್ತಿದೆ – ಮನೆ ಊಟ ಬೇಕೆಂದು ಹೈಕೋರ್ಟ್‌ಗೆ ದರ್ಶನ್ ಅರ್ಜಿ

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Murder Case) ಸಂಬಂಧ ಜೈಲು ಸೇರಿರುವ ನಟ ದರ್ಶನ್ (Darshan) ಮನೆಯ ಊಟ ಬೇಕೆಂದು ಹೈಕೋರ್ಟ್‌ಗೆ (High Court) ರಿಟ್ ಅರ್ಜಿ ಸಲ್ಲಿಸಿದ್ದಾರೆ.

    ವಕೀಲ ಪ್ರವೀಣ್ ತಮ್ಮಯ್ಯ ಮೂಲಕ ದರ್ಶನ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೇ ಹಾಸಿಗೆ, ಪುಸ್ತಕ ಪಡೆಯಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳುವಂತೆ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ಮೇಲೆ ಎಫ್‌ಐಆರ್

    ಜೈಲಿನಲ್ಲಿ ನೀಡುತ್ತಿರುವ ಊಟ ಜೀರ್ಣವಾಗುತ್ತಿಲ್ಲ. ಜೈಲಿನ ಊಟ ತಿಂದಾಗ ಅತಿಸಾರ, ಭೇದಿ ಆಗುತ್ತಿದೆ. ಜೈಲಿನ ಆಹಾರ ಒಗ್ಗದೇ ಫುಡ್ ಪಾಯಿಸನಿಂಗ್ ಆಗುತ್ತಿದೆ. ಹೀಗೆಂದು ಜೈಲಿನ ವೈದ್ಯರೇ ಮಾಹಿತಿ ನೀಡಿದ್ದಾರೆ ಎಂದು ದರ್ಶನ್ ಹೈಕೋರ್ಟ್‌ಗೆ ಕಾರಣಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಸವಾಲಿಗೆ ಸವಾಲು ಹಾಕುವುದು ನನ್ನ ಡಿಎನ್‌ಎಯಲ್ಲಿದೆ: ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮೋದಿ ಮಾತು

    ಗುರುವಾರ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಲಿದ್ದಾರೆ. ಇದನ್ನೂ ಓದಿ: ಮುಡಾ ಭ್ರಷ್ಟಾಚಾರ ಪ್ರಕರಣ – ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

  • ಕಾನೂನು ತಂಡದೊಂದಿಗೆ ಚರ್ಚಿಸಲು ಸಮಯ ನೀಡುವಂತೆ ಕೇಜ್ರಿವಾಲ್‌ ಮನವಿ – ಇಡಿ, ತಿಹಾರ್ ಜೈಲು ಅಧಿಕಾರಿಗಳಿಗೆ ನೋಟಿಸ್

    ಕಾನೂನು ತಂಡದೊಂದಿಗೆ ಚರ್ಚಿಸಲು ಸಮಯ ನೀಡುವಂತೆ ಕೇಜ್ರಿವಾಲ್‌ ಮನವಿ – ಇಡಿ, ತಿಹಾರ್ ಜೈಲು ಅಧಿಕಾರಿಗಳಿಗೆ ನೋಟಿಸ್

    ನವದೆಹಲಿ: ತಮ್ಮ ಕಾನೂನು ತಂಡದೊಂದಿಗೆ ಹೆಚ್ಚುವರಿ ಸಭೆಗಳನ್ನು ನಡೆಸಲು ಅನುಮತಿ ನೀಡುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ (Delhi High Court) ಸೋಮವಾರ ತಿಹಾರ್ ಜೈಲು (Tihar Jail) ಅಧಿಕಾರಿಗಳು ಮತ್ತು ಜಾರಿ ನಿರ್ದೇಶನಾಲಯಕ್ಕೆ (ED) ನೋಟಿಸ್ ಜಾರಿ ಮಾಡಿದೆ.

    ಕೇಜ್ರಿವಾಲ್ ಅವರು ದೇಶಾದ್ಯಂತ 35 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಮತ್ತು ಕಾನೂನು ಕಾರ್ಯತಂತ್ರವನ್ನು ಸಿದ್ಧಪಡಿಸಲು ತಮ್ಮ ತಂಡದೊಂದಿಗೆ ಸಭೆಗಳ ಅಗತ್ಯವಿದೆ ಎಂದು ಕೇಜ್ರಿವಾಲ್ ಪರ ವಕೀಲರು ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ  ನ್ಯಾ. ನೀನಾ ಬನ್ಸಾಲ್ ಕೃಷ್ಣ ಅವರು ತಿಹಾರ್ ಜೈಲು ಮತ್ತು ಇಡಿಯಿಂದ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಜುಲೈ 15 ಕ್ಕೆ ವಿಚಾರಣೆಯನ್ನು ಮುಂದೂಡಿದರು.ಇದನ್ನೂ ಓದಿ: ಋತುಚಕ್ರದ ವೇಳೆ ಮಹಿಳೆಯರಿಗೆ ರಜೆ ನೀಡೋದು ಸರ್ಕಾರದ ನೀತಿಯ ವಿಷಯ- ವಿಚಾರಣೆ ನಡೆಸಲು ಸುಪ್ರೀಂ ನಕಾರ

    ಕೇಜ್ರಿವಾಲ್ ಅವರ ಕಾನೂನು ತಂಡದೊಂದಿಗೆ ಒಂದು ವಾರದಲ್ಲಿ ಎರಡು ಸಭೆಗಳನ್ನು ಅನುಮತಿಸಲಾಗಿದೆ. ಕೇಜ್ರಿವಾಲ್ ಅವರು ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿರುವುದರಿಂದ ತಮ್ಮ ಕಾನೂನು ತಂಡದೊಂದಿಗೆ ಇನ್ನೆರಡು ಸಭೆಗಳನ್ನು ನಡೆಸಲು ಅವಕಾಶ ನೀಡುವಂತೆ ಕೋರಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ವಿಶೇಷ ನ್ಯಾಯಾಧೀಶೆ (ಪಿಸಿ ಕಾಯ್ದೆ) ಕಾವೇರಿ ಬವೇಜಾ ಅವರು ಮನವಿಯನ್ನು ತಿರಸ್ಕರಿಸಿದ್ದರು.