Tag: high court judge

  • ಕೇಂದ್ರ ಕಾರಾಗೃಹದಲ್ಲಿ ವೀರ ಸಾವರ್ಕರ್ ಪುಸ್ತಕ ಇಡಲು ಹೈಕೋರ್ಟ್ ನ್ಯಾಯಮೂರ್ತಿ ಸೂಚನೆ

    ಕೇಂದ್ರ ಕಾರಾಗೃಹದಲ್ಲಿ ವೀರ ಸಾವರ್ಕರ್ ಪುಸ್ತಕ ಇಡಲು ಹೈಕೋರ್ಟ್ ನ್ಯಾಯಮೂರ್ತಿ ಸೂಚನೆ

    ಧಾರವಾಡ: ಧಾರವಾಡ ಕೇಂದ್ರ ಕಾರಾಗೃಹಕ್ಕೆ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಧ್ಯಕ್ಷರಾದ ನ್ಯಾಯಮೂರ್ತಿ ಬಿ.ವೀರಪ್ಪ ಭೇಟಿ ನೀಡಿದರು.

    ಈ ವೇಳೆ ಜೈಲಿನ ಗ್ರಂಥಾಲಯಕ್ಕೆ ಭೇಟಿ ನೀಡಿದ ಅವರು, ವೀರ ಸಾವರ್ಕರ್ ಪುಸ್ತಕ ಇಟ್ಟಿದ್ದಿರಾ ಎಂದು ಕೇಳಿದರು. ಈ ಬಗ್ಗೆ ಜೈಲು ಸಿಬ್ಬಂದಿಯೂ ಇಲ್ಲ ಎಂದಿದ್ದಕ್ಕೆ, ನ್ಯಾಯಮೂರ್ತಿ ಅವರು ವೀರ  ಸಾವರ್ಕರ್ ಅವರ ಕುರಿತಾದ ಪುಸ್ತಕ ಇಡಲು ಸೂಚನೆ ನೀಡಿದರು.

    ಅವರೊಬ್ಬ ಸ್ವಾತಂತ್ರ್ಯ ಹೋರಾಟಗಾರ, ಅವರ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಇದರ ಜೊತೆಗೆ ರಾಮಾಯಣ, ಮಹಾಭಾರತ, ಬೈಬಲ್ ಹಾಗೂ ಕುರಾನ್‍ಗಳನ್ನು ಇಡಲು ಸೂಚಿಸಿದರು. ಇದನ್ನೂ ಓದಿ: ಕಾರಿನೊಂದಿಗೆ ಕೊಚ್ಚಿ ಹೋಗುತ್ತಿದ್ದ ನಾಲ್ವರು ಅದೃಷ್ಟವಶಾತ್ ಬಚಾವ್

    ಇನ್ನು ಮಹಿಳಾ ಕಾರಾಗೃಹಕ್ಕೂ ಭೇಟಿ ನೀಡಿದ ನ್ಯಾಯಮೂರ್ತಿ, ಅಲ್ಲಿರುವ ಮಹಿಳಾ ಕೈದಿ ಜೊತೆ ಇರುವ ಮಗು ಬಗ್ಗೆ ವಿಚಾರಣೆ ಮಾಡಿದರು. ಮಗು ಯಾಕೆ ಇಲ್ಲಿ ಇರಬೇಕು ಎಂದು ಪ್ರಶ್ನೆ ಮಾಡಿದ ಅವರು, ಮಗುವಿಗೆ ಶಾಲೆಗೆ ಕಳಿಸುವಂತೆ ಜೈಲು ಅಧೀಕ್ಷಕರಿಗೆ ಹೇಳಿದರು. ನಂತರ ಮಗುವನ್ನು ಮಾತನಾಡಿಸಿದ ನ್ಯಾಯಮೂರ್ತಿ, ಮುಂದೆ ಏನು ಆಗ್ತಿಯಾ, ಅಮ್ಮಾ ಇಲ್ಲೆ ಇರ್ತಾರೆ, ನೀನು ಚೆನ್ನಾಗಿ ಓದು ಎಂದರು. ಇದನ್ನೂ ಓದಿ: ಜ್ಞಾನವಾಪಿ ಕೇಸ್ ವಾರಣಾಸಿ ಕೋರ್ಟ್‍ಗೆ ವರ್ಗಾವಣೆ – ವಾದ, ಪ್ರತಿವಾದ ಹೇಗಿತ್ತು?

  • ಹೈಕೋರ್ಟ್ ಜಡ್ಜ್‌ಗೆ ಬೆದರಿಕೆ – ತನಿಖೆ ಚುರುಕುಗೊಳಿಸಿದ ಪೊಲೀಸರು

    ಹೈಕೋರ್ಟ್ ಜಡ್ಜ್‌ಗೆ ಬೆದರಿಕೆ – ತನಿಖೆ ಚುರುಕುಗೊಳಿಸಿದ ಪೊಲೀಸರು

    ಬೆಂಗಳೂರು: ಹೈಕೋರ್ಟ್ ಜಡ್ಜ್‌ಗೆ ಬೆದರಿಕೆ ಹಾಕಿರುವ ಪ್ರಕರಣದ ವಿಚಾರವಾಗಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

    ಕಬ್ಬನ್ ಪಾರ್ಕ್ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಘಟನೆ ಸಂಬಂಧ ಬಂಧಿತನಾಗಿರುವ ರಹಮತ್ ಉಲ್ಲಾಗೆ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯು ಅನಾಮಧೇಯ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಕದ್ದುಮುಚ್ಚಿ ಮದುವೆ ಆಗಿಲ್ಲ, ಬಾಡಿಗೆ ತಾಯಿ ಸುಳ್ಳು : ನಯನತಾರಾ 

    ಆರೋಪಿಯು ವಾಟ್ಸಪ್ ಕಾಲ್ ಮಾಡಿ ಯಾರ ಜೊತೆ ಮಾತನಾಡಿದ್ದಾನೆ. ಮಾತನಾಡಿದ್ದರೆ ಯಾರ ಜೊತೆ ಏನು ಮಾತನಾಡಿದ್ದಾನೆ ಎಂಬ ವಿಚಾರದ ಬಗ್ಗೆ ಪೊಲೀಸರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಪೊಲೀಸರಿಂದ ಸಿಡಿಆರ್ ದಾಖಲೆಗಳನ್ನು ಪಡೆದುಕೊಳ್ಳಲಾಗುತ್ತಿದ್ದು, ಪ್ರಕರಣದ ಆರೋಪಿ ವಿಚಾರಣೆಯನ್ನು ಇಂಟಲಿಜೆನ್ಸ್ ತಂಡ ಕೂಡ ತನಿಖೆ ಮಾಡುತ್ತಿದೆ. ಇದನ್ನೂ ಓದಿ: ಮಲ್ಲೇಶ್ವರಂ 18ನೇ ಅಡ್ಡರಸ್ತೆ ಮೈದಾನದಲ್ಲಿ ವಾಕಿಂಗ್ ಪಥ ನಿರ್ಮಾಣ ಇಲ್ಲ: ಅಶ್ವತ್ಥನಾರಾಯಣ

    ಆರೋಪಿಯ ಎಲ್ಲಾ ಪೂರ್ವಪರವನ್ನು ತಿಳಿದುಕೊಳ್ಳುವ ಕೆಲಸವನ್ನು ಪ್ರಾಥಮಿಕವಾಗಿ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  • ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಐಷರಾಮಿ ಬದುಕು – ಜೈಲಿಗೆ ಹೈಕೋರ್ಟ್‌ ಜಡ್ಜ್‌ ಭೇಟಿ

    ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಐಷರಾಮಿ ಬದುಕು – ಜೈಲಿಗೆ ಹೈಕೋರ್ಟ್‌ ಜಡ್ಜ್‌ ಭೇಟಿ

    ಆನೇಕಲ್: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಿನ್ನೆಲೆ ಇಂದು ಹೈಕೋರ್ಟ್ ನ್ಯಾಯಾಧೀಶರ ತಂಡ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ರಾಜ್ಯ ಸರ್ಕಾರ ಪರಪ್ಪನ ಅಗ್ರಹಾರದಲ್ಲಿನ ಅಕ್ರಮದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು, ಗೃಹ ಇಲಾಖೆ ADGP ಎಸ್.ಮುರುಗನ್ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.

    ಕಳೆದ ಕೆಲ ದಿನಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳಿಗೆ ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ರಾಜಾತಿಥ್ಯ ನೀಡಿ ಹಣ ಪಡೆಯುತ್ತಿರುವ ವೀಡಿಯೋ ʼಪಬ್ಲಿಕ್ ಟಿವಿʼಯಲ್ಲಿ ನಿರಂತರವಾಗಿ ವರದಿಯಾಗಿತ್ತು. ಈ ವಿಚಾರ ರಾಜ್ಯದಾದ್ಯಂತ ಜೈಲಿನ ಅಕ್ರಮದ ಬಗ್ಗೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಸಂಪೂರ್ಣ ಮಾಹಿತಿ ಕಲೆಹಾಕಲು ಹೈಕೋರ್ಟ್‌ನ ನ್ಯಾಯಾಧೀಶರ ತಂಡ ಪರಪ್ಪನ ಅಗ್ರಹಾರ ಜೈಲಿಗೆ ಧಿಡೀರ್ ಭೇಟಿ ನೀಡಿದೆ. ಇದನ್ನೂ ಓದಿ: ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಶುಭಕೋರಿದ ಮಹೀಂದ್ರಾ

    ನ್ಯಾಯಮೂರ್ತಿಗಳಾದ ವೀರಪ್ಪ ಮತ್ತು ದಿನೇಶ್ ಕುಮಾರ್ ನೇತೃತ್ವದ ತಂಡ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ, 3 ಗಂಟೆಗೂ ಹೆಚ್ಚು ಕಾಲ ಜೈಲಿನ ಪುರುಷ ಹಾಗೂ ಮಹಿಳಾ ಕೈದಿಗಳ ಬ್ಯಾರಕ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದಿಕೊಂಡಿದೆ. ಜೈಲು ಭೇಟಿ ಮುಗಿಸಿ ಹೊರಡುವಾಗ ʻಪಬ್ಲಿಕ್ ಟಿವಿʼಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶ ವೀರಪ್ಪ, ಪರಪ್ಪನ ಅಗ್ರಹಾರ ಜೈಲಿಗೆ ದಿಢೀರ್ ಭೇಟಿ ನೀಡಿದ್ದು, ಯಾವುದೇ ಅಕ್ರಮಗಳು ಕಂಡು ಬಂದಿಲ್ಲ. ಜೈಲಿಗೆ ಭೇಟಿ ನೀಡುತ್ತಿರುವ ವಿಷಯ ಮೊದಲೇ ತಿಳಿದಿರುವ ಸಾಧ್ಯತೆ ಇದ್ದು, ಜೈಲಿನಲ್ಲಿ ವ್ಯವಸ್ಥೆಯಲ್ಲಿ ಲೋಪಗಳು ಕಾಣಲಿಲ್ಲ. ಪುರುಷ ಮತ್ತು ಮಹಿಳಾ ಕೈದಿಗಳ ಬ್ಯಾರಕ್ ಹಾಗೂ ಅಡುಗೆ ಮನೆಗೆ ಸಹ ಭೇಟಿ ನೀಡಿ ಆಹಾರ ರುಚಿ-ಶುಚಿ, ಆಹಾರದ ಗುಣಮಟ್ಟವನ್ನೂ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

    ಸದ್ಯ ಜೈಲಿನ ಅಕ್ರಮದ ಬಗ್ಗೆ ಈಗಲೇ ಕ್ಲೀನ್ ಚಿಟ್ ನೀಡಲು ಸಾಧ್ಯವಿಲ್ಲ. ಮತ್ತೆ ಹಲವು ಬಾರಿ ಇದೇ ರೀತಿ ಜೈಲಿಗೆ ಅನಿರೀಕ್ಷಿತ ಭೇಟಿ ನೀಡಿ ಜೈಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿ ಅಕ್ರಮದ ಬಗ್ಗೆ ಮಾಹಿತಿ ಸಿಕ್ಕರೆ ಕಾನೂನು ಪ್ರಾಧಿಕಾರದಿಂದ ಕ್ರಮ ಕೈಗೊಳ್ಳಲಾಗುವುದು. 9 ರಿಂದ 10 ವರ್ಷ ಜೈಲು ವಾಸ ಅನುಭವಿಸಿದರ ಪಟ್ಟಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಚಟುವಟಿಕೆ ಹಿನ್ನೆಲೆ ರೇಡ್ ಆಗಿದೆ: ಆರಗ ಜ್ಞಾನೇಂದ್ರ

    jail

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಹಣ ಕೊಟ್ಟರೆ ಏನು ಬೇಕಾದರೂ ಸಿಗುತ್ತದೆ ಎನ್ನುವುದಕ್ಕೆ ಸಂಬಂಧಿಸಿದ ಜೆಸಿಪಿ ನಾರಾಯಣ ಸೆರೆಯಾಗಿದ್ದ ಕೆಲ ವೀಡಿಯೋ ದೃಶ್ಯಗಳು ʻಪಬ್ಲಿಕ್ ಟಿವಿʼಯಲ್ಲಿ ನಿರಂತರ ವರದಿಯಾಗಿತ್ತು. ಹೊರ ಜಗತ್ತಿನಲ್ಲಿ ಅಪರಾಧ ಕೃತ್ಯಗಳನ್ನು ಮಾಡುವವರು ಬುದ್ದಿ ಕಲಿತು ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕಲಿ ಎನ್ನುವ ನಿಟ್ಟಿನಲ್ಲಿ, ಮಾಡಿದ ತಪ್ಪಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಇಲ್ಲಿಗೆ ಬರುವ ಕೈದಿಗಳು ತಮ್ಮ ಹಣ ಪ್ರಭಾವ ಬಳಸಿ ಅಧಿಕಾರಿಗಳ ನೆರವಿನಿಂದ ಐಷಾರಾಮಿ ವ್ಯವಸ್ಥೆ ಮಾಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ವರದಿಯಿಂದ ಎಚ್ಚೆತ್ತ ರಾಜ್ಯ ಸರ್ಕಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗೆ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತಂಡವನ್ನು ರಚಿಸಿದೆ.