Tag: high court

  • ಬೆಂಗಳೂರು ಟನಲ್ ವಿರುದ್ಧ ಹೈಕೋರ್ಟ್ ಮೊರೆ – ತೇಜಸ್ವಿ ಸೂರ್ಯ, ಪ್ರಕಾಶ್ ಬೆಳವಾಡಿ ಅರ್ಜಿ

    ಬೆಂಗಳೂರು ಟನಲ್ ವಿರುದ್ಧ ಹೈಕೋರ್ಟ್ ಮೊರೆ – ತೇಜಸ್ವಿ ಸೂರ್ಯ, ಪ್ರಕಾಶ್ ಬೆಳವಾಡಿ ಅರ್ಜಿ

    – ಹೈಕೋರ್ಟ್‌ನಲ್ಲಿ ತೇಜಸ್ವಿ ಸೂರ್ಯ ವಾದ ಮಂಡನೆ

    ಬೆಂಗಳೂರು: ಸುರಂಗ ಮಾರ್ಗ (Bengaluru Tunnel Road) ವಿವಾದ ಈಗ ಹೈಕೋರ್ಟ್ ಅಂಗಳ ತಲುಪಿದೆ. ಟನಲ್ ರಸ್ತೆ ಯೋಜನೆ ವಿರೋಧಿಸಿ ಸಂಸದ ತೇಜಸ್ವಿ ಸೂರ್ಯ (Tejasvi Surya), ನಟ ಪ್ರಕಾಶ್ ಬೆಳವಾಡಿ ಅರ್ಜಿ ಸಲ್ಲಿಸಿದ್ದಾರೆ.

    ಯೋಜನೆಗೆ ಪರಿಸರ ಪರಿಣಾಮ ಮೌಲ್ಯಮಾಪನವನ್ನು ನಡೆಸದಿರುವುದು, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದೊಂದಿಗೆ ಸಮಾಲೋಚಿಸದಿರುವುದು ಮತ್ತು ವಿವರವಾದ ಯೋಜನಾ ವರದಿ, ವಿಶೇಷವಾಗಿ ಐತಿಹಾಸಿಕ ಲಾಲ್‌ಬಾಗ್ ಬಂಡೆಯ ಕೆಳಗೆ ಹಾದುಹೋಗುವ ಸುರಂಗದ ಜೋಡಣೆಯ ಬಗ್ಗೆ ಇರುವ ಕಳವಳಗಳನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಇದನ್ನೂ ಓದಿ: ಕನ್ನೇರಿ ಶ್ರೀಗಳು ಆಡಿರುವ ಶಬ್ದಗಳು ಖಂಡನೀಯ, ಕ್ಷಮೆ ಕೇಳಬೇಕು – ಎಂ.ಬಿ ಪಾಟೀಲ್ ಆಗ್ರಹ

    ಹೈಕೋರ್ಟ್‌ನಲ್ಲಿ ಖುದ್ದು ವಾದ ಮಂಡನೆ ಮಾಡಿದ ವಕೀಲರೂ ಆಗಿರುವ ತೇಜಸ್ವಿ ಸೂರ್ಯ, ಯೋಜನೆಯಿಂದ ಸುಮಾರು 6.5 ಎಕರೆ ಲಾಲ್‌ಬಾಗ್ ಭೂಮಿಗೆ ಪರಿಣಾಮ ಬೀರಬಹುದು. ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕ ಎಂದು ಗುರುತಿಸಲ್ಪಟ್ಟಿರುವ 3,000 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಲಾಲ್‌ಬಾಗ್ ಬಂಡೆಗೆ ಈ ಯೋಜನೆಯಿಂದ ಮಾರಕ ಆಗುತ್ತೆ. ತೋಡುವ ಸುರಂಗದಿಂದಾಗಿ ಈ ಬಂಡೆಯು ಗಂಭೀರ ಅಪಾಯವನ್ನು ಎದುರಿಸುತ್ತದೆ. ಹಲವು ಮರಗಳಿಗೂ ಕೊಡಲಿ ಬೀಳಲಿದೆ ಎಂದು ತಿಳಿಸಿದರು.

    ಯೋಜನೆಯೊಂದಿಗೆ ಸಂಬಂಧಿಸಿದ ಮರಗಳನ್ನು ಕಡಿಯುವ ಪ್ರಸ್ತಾವನೆಯ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸರ್ಕಾರಿ ವಕೀಲರಿಗೆ ಕೋರ್ಟ್ ಸೂಚನೆ ನೀಡಿದೆ. ಪರಿಸರ ಪರಿಣಾಮ ಮೌಲ್ಯಮಾಪನದ ಕುರಿತು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯಿಂದಲೂ ಅಭಿಪ್ರಾಯ ಕೇಳಿದ ಕೋರ್ಟ್, ನಂತರ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 28ರಂದು ಮುಂದೂಡಿದೆ. ಇದನ್ನೂ ಓದಿ: ಚಾಮುಂಡಿ ತಾಯಿಯ ಕ್ಷಮೆ ಕೇಳು: ಪ್ರತಾಪ್‌ ಸಿಂಹಗೆ ಪ್ರದೀಪ್‌ ಈಶ್ವರ್‌ ಆಗ್ರಹ

  • ಚಿತ್ತಾಪುರ ಆರ್‌ಎಸ್‌ಎಸ್ ಫೈಟ್‌ – ಕ್ರೈಸ್ತ ಸಂಘಟನೆ ಸೇರಿ ಐವರಿಂದ ಅರ್ಜಿ

    ಚಿತ್ತಾಪುರ ಆರ್‌ಎಸ್‌ಎಸ್ ಫೈಟ್‌ – ಕ್ರೈಸ್ತ ಸಂಘಟನೆ ಸೇರಿ ಐವರಿಂದ ಅರ್ಜಿ

    – ಇಂದಿನ ಹೈಕೋರ್ಟ್ ಆದೇಶದತ್ತ ಚಿತ್ತ

    ಕಲಬುರಗಿ: ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನ (Chittapur RSS Route March) ವಿಚಾರ ಹೈಕೋರ್ಟ್ (High Court) ಮೆಟ್ಟಿಲೇರಿದ್ದು ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಆರ್‌ಎಸ್‌ಎಸ್ ನ.2ರಂದು ಪಥಸಂಚಲನ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ ಇತ್ತ 5 ಸಂಘಟನೆಗಳೂ ಅಂದೇ ನಮಗೂ ಅವಕಾಶ ಕೊಡಿ ಎಂದು ಅರ್ಜಿ ಹಾಕಿದೆ. ಈ ಮಧ್ಯೆ ಎಲ್ಲಾ ಅರ್ಜಿಗಳ ವಿಚಾರಣೆ ಇಂದು ಮಧ್ಯಾಹ್ನ ಹೈಕೋರ್ಟ್‌ನಲ್ಲಿ (Kalaburagi High Court) ನಡೆಯಲಿದೆ.

    ಆರ್‌ಎಸ್‌ಎಸ್‌ ಅಕ್ಟೋಬರ್ 19 ರಂದು ಪಥಸಂಚಲನ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಆದರೆ ಅರ್ಜಿಯಲ್ಲಿ ಸರಿಯಾದ ಮಾಹಿತಿ ನೀಡಿಲ್ಲ ಮತ್ತು ಹಲವು ಸಂಘಟನೆಗಳು ಪಥಸಂಚಲನಕ್ಕೆ ಅನುಮತಿ ಕೋರಿದ್ದರಿಂದ ಚಿತ್ತಾಪುರ ತಹಶೀಲ್ದಾರ್‌ ನಾಗಯ್ಯ ಹಿರೇಮಠ ಕಾನೂನು ಸುವ್ಯವಸ್ಥೆ ಕಾರಣ ನೀಡಿ ತಡೆ ನೀಡಿದ್ದರು.

    ಅನುಮತಿ ನೀಡದ ಬೆನ್ನಲ್ಲೇ ಆರ್‌ಎಸ್‌ಎಸ್‌ ಕಲಬುರಗಿ ಹೈಕೋರ್ಟ್‌ ಪೀಠದಲ್ಲಿ ತುರ್ತು ಅರ್ಜಿ ಸಲ್ಲಿಸಿತ್ತು. ಅರ್ಜಿ ಮಾನ್ಯ ಮಾಡಿದ ಹೈಕೋರ್ಟ್‌ ಇಂದಿಗೆ ವಿಚಾರಣೆ ಮುಂದೂಡಿ ಅನುಮತಿ ನೀಡುವ ಬಗ್ಗೆ ಸರ್ಕಾರದ ಅಭಿಪ್ರಾಯವನ್ನು ಕೇಳಿತ್ತು. ವಿಚಾರಣೆಯ ಸಂದರ್ಭದಲ್ಲಿ ನ.2 ರಂದು ಪಥಸಂಚಲನಕ್ಕೆ ಅನುಮತಿ ನೀಡುವಂತೆ ಆರ್‌ಎಸ್‌ಎಸ್‌ ಮನವಿ ಮಾಡಿಕೊಂಡಿತ್ತು.

    ಆರ್‌ಎಸ್‌ಎಸ್‌ ಅರ್ಜಿ ಸಲ್ಲಿಸುತ್ತಿದ್ದಂತೆ ಮತ್ತೊಂಡು ಕಡೆ ಭೀಮ್ ಆರ್ಮಿ, ದಲಿತ್ ಪ್ಯಾಂಥರ್ ಹಾಗೂ ಕುರುಬ ಸಮುದಾಯ ಅದೇ ದಿನ ಪ್ರತಿಭಟನೆಗೆ ಅರ್ಜಿ ಸಲ್ಲಿಸಿದೆ.

    ಇನ್ನೊಂದು ಕಡೆ ನವೆಂಬರ್ 2 ರಂದೇ ಕೇಂದ್ರ ಸರ್ಕಾರದ ವಿರುದ್ದ ಅತೀವೃಷ್ಟಿ ಪರಿಹಾರಕ್ಕಾಗಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಪಥಸಂಚಲನ ಮಾಡುತ್ತೇವೆ ಎಂದು ರಾಜ್ಯ ರೈತ ಸಂಘಟನೆ ಹಸಿರು ಸೇನೆ ಬಣ ಅರ್ಜಿ ಹಾಕಿದೆ.

    ಸಂಘಟನೆಗಳ ಮಾತ್ರವಲ್ಲದೇ ರಾಜ್ಯ ಕ್ರಿಶ್ಚಿಯನ್ ವೆಲ್ಫೇರ್‌ ಸೊಸೈಟಿ ಸಹ ನಾವು ಪ್ರಾರ್ಥನಾ ನಡಿಗೆ ಮಾಡುತ್ತೇವೆ ಎಂದು ಅರ್ಜಿ ಸಲ್ಲಿಸಿದೆ. ಭಾನುವಾರ ನಾವು ಸಹಜವಾಗಿಯೇ ಪ್ರಾರ್ಥನೆ ಮಾಡುತ್ತೇವೆ. ನಾವು ಆರ್‌ಎಸ್‌ಎಸ್‌ ವಿರುದ್ಧವಾಗಿ ಈ ನಡಿಗೆ ಮಾಡುತ್ತಿಲ್ಲ.ಬದಲಾಗಿ ಶಾಂತಿ ಸುವ್ಯಸಸ್ಥೆಯ ಬಗ್ಗೆ ಅರಿವು ಮೂಡಿಸುತ್ತೇವೆ ಎಂದು ಹೇಳಿದೆ.

    ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಆರ್ಜಿ ಸಲ್ಲಿಸುತ್ತಿದ್ದಂತೆ ಉಳಿದವರು ಜಿದ್ದಿಗೆ ಬಿದ್ದವರಂತೆ ಅರ್ಜಿ ಸಲ್ಲಿಸಿದ್ದಾರೆ. ಆ ಎಲ್ಲಾ ಅರ್ಜಿಗಳ ವಿಚಾರಣೆ ಇಂದು ನ್ಯಾಯಾಲಯದ ಮುಂದೆ ಬರುತ್ತಿವೆ. ಹೀಗಾಗಿ ಎಲ್ಲರ ಚಿತ್ತ ಇಂದು ಮಧ್ಯಾಹ್ನ 3:30ರ ಕೋರ್ಟ್ ಕಲಾಪದತ್ತ ನೆಟ್ಟಿದೆ.

  • ಒಬಿಸಿ ಮೀಸಲಾತಿ ಏರಿಸಿದ್ದ ತೆಲಂಗಾಣಕ್ಕೆ ಭಾರೀ ಹಿನ್ನಡೆ – ಸುಪ್ರೀಂನಲ್ಲಿ ಅರ್ಜಿ ವಜಾ

    ಒಬಿಸಿ ಮೀಸಲಾತಿ ಏರಿಸಿದ್ದ ತೆಲಂಗಾಣಕ್ಕೆ ಭಾರೀ ಹಿನ್ನಡೆ – ಸುಪ್ರೀಂನಲ್ಲಿ ಅರ್ಜಿ ವಜಾ

    ನವದೆಹಲಿ: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳು ಅಥವಾ ಒಬಿಸಿ ಸಮುದಾಯಗಳಿಗೆ (OBC Community) ಮೀಸಲಾತಿ ಹೆಚ್ಚಿಸಿದ್ದ ತೆಲಂಗಾಣ ಸರ್ಕಾರಕ್ಕೆ (Telangana Government) ಭಾರೀ ಹಿನ್ನಡೆಯಾಗಿದೆ.

    ಒಬಿಸಿ ಮೀಸಲಾತಿ (Resevartion) ವಿಸ್ತರಿಸಿ ತಾನು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಪ್ರಶ್ನಿಸಿ ತೆಲಂಗಾಣ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.

    ನ್ಯಾ. ವಿಕ್ರಮ್ ನಾಥ್ ಮತ್ತು ನ್ಯಾ.ಸಂದೀಪ್ ಮೆಹ್ತಾ ಅವರಿದ್ದ ಪೀಠವು ಇಂದು ಅರ್ಜಿ ವಿಚಾರಣೆ ನಡೆಸಿ, ಹೈಕೋರ್ಟ್‌ ಆದೇಶದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಒಬಿಸಿ ಮೀಸಲಾತಿಯಲ್ಲಿ ಯಾವುದೇ ಪ್ರಸ್ತಾವಿಸಿದಂತೆ ಹೆಚ್ಚಳ ಮಾಡದೇ ಸ್ಥಳೀಯ ಚುನಾವಣೆಗಳನ್ನು ನಡೆಸಬಹುದು ಸೂಚಿಸಿದೆ. ಇದನ್ನೂ ಓದಿ:  ರಸ್ತೆ ಗುಂಡಿ, ತೆರೆದ ಮ್ಯಾನ್‌ಹೋಲ್‌ಗಳಿಗೆ ಬಿದ್ದು ಮೃತಪಡುವವರ ಕುಟುಂಬಕ್ಕೆ 6 ಲಕ್ಷ ಪರಿಹಾರ ನೀಡಿ: ಬಾಂಬೆ ಹೈಕೋರ್ಟ್‌ ಆದೇಶ

     

    ತೆಲಂಗಾಣ ಸರ್ಕಾರ ಇತರೇ ಹಿಂದುಳಿದ ವರ್ಗಕ್ಕೆ ಶೇ.42ರಷ್ಟು ಮೀಸಲಾತಿ ನೀಡಿದ್ದರಿಂದ ಒಟ್ಟು ಮೀಸಲಾತಿ ಪ್ರಮಾಣ ಶೇ.67ಕ್ಕೆ ಏರಿಕೆಯಾಗಿತ್ತು. 1992 ರ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಪ್ರಮಾಣ ಶೇ.50 ಮಿತಿಯನ್ನು ಏರುವಂತಿಲ್ಲ ತೀರ್ಪು ನೀಡಿತ್ತು. ಸುಪ್ರೀಂ ತೀರ್ಪು ಉಲ್ಲಂಘನೆಯಾಗಿದ್ದರಿಂದ ಅ.10 ರಂದು ತೆಲಂಗಾಣ ಹೈಕೋರ್ಟ್‌ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು.

    ತನ್ನ ಆದೇಶದಲ್ಲಿ ಒಬಿಸಿ ಕೋಟಾದಲ್ಲಿ ಹೆಚ್ಚು ಮಾಡಲಾದ ಶೇ.17ರಷ್ಟು ಸೀಟುಗಳನ್ನು ಸಾಮಾನ್ಯ ಎಂದು ಪರಿಗಣಿಸಿ ಚುನಾವಣೆ ನಡೆಸಲು ಹೈಕೋರ್ಟ್‌ ಸೂಚಿಸಿತ್ತು. ಜತೆಗೆ ವಿವರವಾದ ಅಫಿಡವಿಟ್‌ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ 4 ವಾರ, ಅರ್ಜಿದಾರರಿಗೆ 2 ವಾರಗಳ ಗಡುವು ವಿಧಿಸಿತ್ತು.

  • ಅನುದಾನದಲ್ಲಿ ತಾರತಮ್ಯ – ಹೈಕೋರ್ಟ್ ಮೊರೆ ಹೋದ ಜೆಡಿಎಸ್ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

    ಅನುದಾನದಲ್ಲಿ ತಾರತಮ್ಯ – ಹೈಕೋರ್ಟ್ ಮೊರೆ ಹೋದ ಜೆಡಿಎಸ್ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

    – ಬಿಜೆಪಿ, ಜೆಡಿಎಸ್ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿಲ್ಲ

    ಕೋಲಾರ: ಕೋಲಾರದ (Kolar) ಶ್ರೀನಿವಾಸಪುರ ಜೆಡಿಎಸ್ ಶಾಸಕ ತನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ (Grant) ನೀಡದ ಸರ್ಕಾರದ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

    ಸರ್ಕಾರದ ತಾರತಮ್ಯ ನೀತಿ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಜೆಡಿಎಸ್ ಶಾಸಕ ರಿಟ್ ಅರ್ಜಿ ಸಲ್ಲಿಸಿದ್ದು, ಇದು ಅನುದಾನ ಗೊಂದಲ ಹಾಗೂ ಗಲಾಟೆಗೆ ಕಾರಣವಾಗಿದೆ. ಶ್ರೀನಿವಾಸಪುರ ಜೆಡಿಎಸ್ ಶಾಸಕ ವೆಂಕಟಶಿವಾರೆಡ್ಡಿ (Venkatashiva Reddy) ಹೈಕೋರ್ಟ್‌ನಲ್ಲಿ (High Court) ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ನಮಗೂ ಸರ್ಕಾರ ಅನುದಾನ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಜಾತಿಗಣತಿಗೆ ನಡೆಸದ ಶಿಕ್ಷಕರ ವೇತನಕ್ಕೆ ಕತ್ತರಿ – ಬಗ್ಗದೇ ಇದ್ರೆ ಅಮಾನತು ಶಿಕ್ಷೆ

    ಕಾಂಗ್ರೆಸ್ ಶಾಸಕರಿಗೆ ಮಾತ್ರ ತಲಾ 50 ಕೋಟಿ ಅನುದಾನ ಬಿಡುಗಡೆ ಮಾಡಿರುವ ಸರ್ಕಾರ, ಜೆಡಿಎಸ್ ಹಾಗೂ ಬಿಜೆಪಿ ಶಾಸಕರಿರುವ ಕಡೆಗಳಲ್ಲಿ ಅನುದಾನ ನೀಡುತ್ತಿಲ್ಲ ಎಂದು ಈ ಮೊದಲೇ ಕಿಡಿಕಾರಿದ್ದರು. ಅದರಂತೆ ಕ್ಷೇತ್ರದ ಅಭಿವೃದ್ಧಿಗಾಗಿ ಪದೇ ಪದೇ ಮನವಿ ಮಾಡಿದರೂ ಸಹ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸರ್ಕಾರ ಸಂವಿಧಾನದ ಆರ್ಟಿಕಲ್ 14ರ ಸಮಾನತೆಯ ನೀತಿ ಉಲ್ಲಂಘಿಸಿದೆ ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಅನುದಾನ ಬಿಡುಗಡೆ ಮಾಡದಿದ್ರೆ ರಾಜಕೀಯ ನಿವೃತ್ತಿ, ಯಾವ ಪಕ್ಷಕ್ಕೂ ಹೋಗಲ್ಲ: ಶಾಸಕ ಸತೀಶ್ ಸೈಲ್

    ಜೆಡಿಎಸ್, ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಈ ಮೊದಲು ವಿಧಾನಸಭೆ ಅಧಿವೇಶನದಲ್ಲೂ ಪ್ರಸ್ತಾಪ ಮಾಡಿದರೂ ಹಣ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಈ ಹಿಂದೆಯೂ ಹಲವು ಬಾರಿ ಅನುದಾನ ನೀಡದೆ ತಾರತಮ್ಯ ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಪದೆಪದೇ ಕೆಂಡ ಕಾರಿದ್ದರು. ಇದನ್ನೂ ಓದಿ: ಫೋನ್‌ ಟ್ಯಾಪಿಂಗ್‌ ಕೇಸ್;‌ ಅಲೋಕ್‌ ಕುಮಾರ್‌ ವಿರುದ್ಧದ ತನಿಖಾ ಆದೇಶ ರದ್ದು – ಸರ್ಕಾರಕ್ಕೆ ಭಾರೀ ಹಿನ್ನಡೆ

  • GBA ರಚನೆ ಕುರಿತು ನೀವು ಎತ್ತಿರುವ ಪ್ರಶ್ನೆ ಸೂಕ್ತವಾಗಿದೆ, ಹೈಕೋರ್ಟ್‌ನಲ್ಲಿ ಪ್ರಶ್ನಿಸಿ: ಅರ್ಜಿದಾರರಿಗೆ ಸುಪ್ರೀಂ ನಿರ್ದೇಶನ

    GBA ರಚನೆ ಕುರಿತು ನೀವು ಎತ್ತಿರುವ ಪ್ರಶ್ನೆ ಸೂಕ್ತವಾಗಿದೆ, ಹೈಕೋರ್ಟ್‌ನಲ್ಲಿ ಪ್ರಶ್ನಿಸಿ: ಅರ್ಜಿದಾರರಿಗೆ ಸುಪ್ರೀಂ ನಿರ್ದೇಶನ

    ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆ ಕುರಿತು ಪ್ರಶ್ನಿಸಿರುವ ಅರ್ಜಿಯನ್ನು ಹೈಕೋರ್ಟ್‌ನಲ್ಲಿ (High Court) ಸಲ್ಲಿಸುವಂತೆ ಸುಪ್ರೀಂ ಕೋರ್ಟ್ (Supreme Court) ಅರ್ಜಿದಾರರಿಗೆ ನಿರ್ದೇಶನ ನೀಡಿದೆ.

    ಜಿಬಿಎ ರಚನೆ ಕಾನೂನುಬಾಹಿರ ಎಂದು ಆರೋಪಿಸಿ ಹಿರಿಯ ರಂಗಕರ್ಮಿ ಪ್ರಕಾಶ ಬೆಳವಾಡಿ ಹಾಗೂ ಇತರರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜಾಯ್‌ಮಲ್ಯ ಬಾಗ್ಚಿ ಪೀಠವು, ಜಿಬಿಎ ರಚನೆ ಕುರಿತು ನೀವು ಎತ್ತಿರುವ ಪ್ರಶ್ನೆ ಸೂಕ್ತವಾಗಿದೆ. ಆದರೆ, ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸದೆ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಬಂದಿದ್ದು ಏಕೆ ಎಂದು ಪ್ರಶ್ನಿಸಿತು.  ಇದನ್ನೂ ಓದಿ: ಸಿಎಂ, ಡಿಸಿಎಂ ಮನೆಗೆ ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಲರ್ಟ್‌ – ಪ್ರಕರಣ ಭೇದಿಸಲು SIT ರಚಿಸಿದ ಸರ್ಕಾರ

    ಆಗ ಅರ್ಜಿದಾರರ ಪರ ವಕೀಲರು, ಜಿಬಿಎ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಹೀಗಾಗಿ, ಸುಪ್ರೀಂ ಕೋರ್ಟ್‌ಗೆ ಬಂದಿದ್ದೇವೆ ಎಂದರು. ಜಿಬಿಎ ರಚನೆ ಸಂವಿಧಾನ ವಿರೋಧಿ. ಜಿಬಿಎ ರಚನೆಯಿಂದ ಅಧಿಕಾರ ವಿಕೇಂದ್ರೀಕರಣ ಆಗುವುದಿಲ್ಲ. ಅಧಿಕಾರದ ಮರು ಕೇಂದ್ರೀಕರಣ ಆಗುತ್ತದೆ ಎಂದು ದೂರಿದ್ದಾರೆ. ಇದನ್ನೂ ಓದಿ: ವಿಜಯಪುರ | ಹಳೆ ವೈಷಮ್ಯಕ್ಕೆ ಡಬಲ್ ಮರ್ಡರ್ – ಪರಾರಿಯಾಗ್ತಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿ ಅರೆಸ್ಟ್

    ವಿಚಾರಣೆ ಬಳಿಕ ಅರ್ಜಿಯನ್ನು ಹಿಂಪಡೆಯಲು ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಸ್ವಾತಂತ್ರ‍್ಯ ನೀಡಿದ ಹಿನ್ನೆಲೆ ಅರ್ಜಿದಾರರು ತನ್ನ ಅರ್ಜಿಯನ್ನು ವಾಪಸ್ ಪಡೆದುಕೊಂಡರು. ಇದನ್ನೂ ಓದಿ: ಹಮಾಸ್‌ ಸೆರೆಯಲ್ಲಿದ್ದ ನೇಪಾಳ ವಿದ್ಯಾರ್ಥಿ ಸಾವು ದೃಢ – ಇಸ್ರೇಲ್‌ಗೆ ಮೃತದೇಹ ಹಸ್ತಾಂತರ

  • ಬಿಗ್‌ಬಾಸ್‌ಗೆ ಬಿಗ್‌ ರಿಲೀಫ್‌ – ಸಮಸ್ಯೆ ಇತ್ಯರ್ಥಕ್ಕೆ 10 ದಿನ ಕಾಲಾವಕಾಶ

    ಬಿಗ್‌ಬಾಸ್‌ಗೆ ಬಿಗ್‌ ರಿಲೀಫ್‌ – ಸಮಸ್ಯೆ ಇತ್ಯರ್ಥಕ್ಕೆ 10 ದಿನ ಕಾಲಾವಕಾಶ

    – ಹೈಕೋರ್ಟ್‌ನಲ್ಲಿ ಅರ್ಜಿ ಹಿಂದಕ್ಕೆ ಪಡೆಯಲಿರುವ ಜಾಲಿವುಡ್‌

    ಬೆಂಗಳೂರು: ಬಿಗ್‌ಬಾಸ್‌ಗೆ (Bigg Boss) ಬೆಂಗಳೂರು ದಕ್ಷಿಣ ಜಿಲ್ಲಾಡಳಿತದಿಂದ ಬಿಗ್‌ ರಿಲೀಫ್‌ ಸಿಕ್ಕಿದೆ. ಬಿಗ್‌ ಬಾಸ್‌ ನಡೆಯುತ್ತಿರುವ ಜಾಲಿವುಡ್‌ ಸ್ಟುಡಿಯೋಗೆ (Jollywood Studios and Adventures) ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಯವರು ಸಮಸ್ಯೆ ಇತ್ಯರ್ಥ್ಯಕ್ಕೆ 10 ದಿನಗಳ ತಾತ್ಕಾಲಿಕ ಕಾಲಾವಕಾಶ ನೀಡಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಜಾಲಿವುಡ್‌ ಸ್ಟುಡಿಯೋ ಪರ ವಕೀಲ ವಿಶ್ವಾಸ್‌ ಗೌಡ ಮಾತನಾಡಿ, ಇಂದು ನಮ್ಮ ಕಕ್ಷಿದಾರರು ಜಿಲ್ಲಾಧಿಕಾರಿಗಳು ಭೇಟಿ ಮಾಡಿ ಮಾತನಾಡಿದ್ದಾರೆ. ಈಗ ಡಿಸಿಯವರು 10 ದಿನ‌ ಕಾಲಾವಕಾಶ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ:  Bigg Boss | ಉಲ್ಲಂಘನೆಯಾಗಿದ್ರೆ ಸರಿ ಮಾಡಲು ಅವಕಾಶ ಕೊಡಿ: ಡಿಕೆಶಿ ಸಾಫ್ಟ್‌ ಕಾರ್ನರ್‌

    ಅ.6 ರಂದು ನೋಟಿಸ್‌ ನೀಡಿ ಅ.7 ರಂದು ಬೀಗ ಹಾಕಿದ್ದನ್ನು ಪ್ರಶ್ನಿಸಿ ನಾವು ಹೈಕೋರ್ಟ್‌ಗೆ ರಿಟ್‌ ಅರ್ಜಿ ಹಾಕಿದ್ದೆವು. ಈಗ ಜಿಲ್ಲಾಡಳಿತ 10 ದಿನಗಳ ಕಾಲಾವಕಾಶ ನೀಡಿದ್ದರಿಂದ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಬಿಗ್‌ಬಾಸ್ ಮನೆಗೆ ಬೀಗ; ಸುದೀಪ್‌ಗೂ ಡಿಕೆಶಿಗೂ ತಂದಿಡೋದು ಬೇಡ: ಶಾಸಕ ಬಾಲಕೃಷ್ಣ

    ಇನ್ನು ಬೆಂಗಳೂರು ದಕ್ಷಿಣ ಜಿಲ್ಲಾಡಳಿತದಿಂದ ಯಾವುದೇ ಆದೇಶ ಪ್ರಕಟವಾಗಿಲ್ಲ.  ಅಧಿಕೃತ ಆದೇಶ ಪ್ರಕಟಗೊಂಡ ಬಳಿಕ  ಎಷ್ಟು ದಿನಗಳವರೆಗೆ  ತಾತ್ಕಾಲಿಕ ಕಾಲಾವಕಾಶ ನೀಡಿದ್ದಾರೆ ಎನ್ನುವುದು  ತಿಳಿಯಲಿದೆ.

    ಬಿಗ್‌ ಬಾಸ್‌ (Bigg Boss) ಮನೆಗೆ ಬೀಗ ಜಡಿದ ಬೆನ್ನಲ್ಲೇ ಜಾಲಿವುಡ್‌ ಸ್ಟುಡಿಯೋ(ವೇಲ್ಸ್‌ ಸ್ಟುಡಿಯೋ ಆಂಡ್‌ ಎಂಟರ್‌ಟೈನ್ಮೆಂಟ್‌ ಪ್ರೈ. ಲಿ.) ಇಂದು ಹೈಕೋರ್ಟ್‌ಗೆ (High Court) ತುರ್ತು ಅರ್ಜಿ ಸಲ್ಲಿಸಿತ್ತು. ಕೋರ್ಟ್‌ ಈ ಅರ್ಜಿಯನ್ನು ಪುರಸ್ಕರಿಸಿದ್ದು ನ್ಯಾ.ಸೂರಜ್ ಗೋವಿಂದರಾಜ್ ಅವರ ಪೀಠದಲ್ಲಿ ಮಧ್ಯಾಹ್ನ 2:30ಕ್ಕೆ ವಿಚಾರಣೆ ನಿಗದಿಯಾಗಿದೆ.

    ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಸಮಯದಲ್ಲೇ ನಮ್ಮ ಅಹವಾಲು ಆಲಿಸದೇ ತರಾತುರಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರ ಮಂದಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿಸಿಕೊಂಡಿದ್ದಾರೆ. ವ್ಯವಹಾರಕ್ಕೆ ಹಾನಿ ಮಾಡುವ ಉದ್ದೇಶದಿಂದಲೇ ಈ ಆದೇಶ ಹೊರಡಿಸಲಾಗಿದೆ. ಹೀಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶಕ್ಕೆ ತಡೆ ನೀಡಬೇಕು. ಅಷ್ಟೇ ಅಲ್ಲದೇ ಬೇರೆ ಯಾವುದೇ ಸಂಸ್ಥೆ ಹೊರಡಿಸುವ ಆದೇಶಕ್ಕೂ ತಡೆ ನೀಡಬೇಕೆಂದು ಕೋರಿ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

  • ರೇಪಿಸ್ಟ್ ಉಮೇಶ್ ರೆಡ್ಡಿಗೆ VIP ಸೌಲಭ್ಯ ಕೊಡ್ತಿದ್ದಾರೆ, ಆದ್ರೆ ದರ್ಶನ್‌ಗೆ ಏನೂ ಇಲ್ಲ: ವಕೀಲರ ವಾದ ಏನು?

    ರೇಪಿಸ್ಟ್ ಉಮೇಶ್ ರೆಡ್ಡಿಗೆ VIP ಸೌಲಭ್ಯ ಕೊಡ್ತಿದ್ದಾರೆ, ಆದ್ರೆ ದರ್ಶನ್‌ಗೆ ಏನೂ ಇಲ್ಲ: ವಕೀಲರ ವಾದ ಏನು?

    – ಪಲ್ಲಂಗ ಕೊಡಿ ಮಲಗಿಸಬೇಕು ಅಂದ್ರೆ ಆಗೋದಿಲ್ಲ: ಎಸ್‌ಪಿಪಿ ವಾದವೇನು?

    ಬೆಂಗಳೂರು: ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್‌ಗೆ (Darshan) ಹೆಚ್ಚುವರಿ ಹಾಸಿಗೆ, ದಿಂಬು, ಬೆಡ್‌ಶೀಟ್ ಹಾಗೂ ಕನಿಷ್ಟ ಸವಲತ್ತು ಕೊಡಬೇಕೆಂದು ಮನವಿ ಮಾಡಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಇಂದು ವಿಚಾರಣೆ ನಡೆಸಿತು. ದರ್ಶನ್ ಪರ ವಕೀಲ ಸುನಿಲ್ ಕುಮಾರ್ ವಾದಿಸಿದರು. ಸರ್ಕಾರದ ಪರ ಎಸ್‌ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿದರು.

    ವಾದ ಮಂಡಿಸಿದ ಸುನಿಲ್ ಕುಮಾರ್, ಕೋರ್ಟ್ ಆದೇಶವನ್ನು ಯಾಕೆ ಪಾಲನೆ ಮಾಡ್ತಾ ಇಲ್ಲ? ಇಡೀ ದೇಶದಲ್ಲಿ ಫಾಲೋಅಪ್ ಮಾಡದೇ ಇರೋದು ದರ್ಶನ್ ಕೇಸ್ ಅಲ್ಲಿ ಏಕೆ? 45 ದಿನದಿಂದ ಕ್ವಾರಂಟೈನ್ ಅಲ್ಲಿ ಇದ್ದಾರೆ. ರೇಪಿಸ್ಟ್ ಉಮೇಶ್ ರೆಡ್ಡಿಗೆ ವಿಐಪಿ ಟ್ರಿಟ್ಮೆಂಟ್ ಕೊಡ್ತಾ ಇದ್ದಾರೆ. ಕಲರ್ ಟಿವಿ ನೀಡಿದ್ದಾರೆ. ಆದರೆ, ದರ್ಶನ್‌ಗೆ ಏನನ್ನೂ ಕೊಡ್ತಾ ಇಲ್ಲ, ಯಾವ ಸೌಲಭ್ಯವೂ ಇಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಕೊಲೆ ಆರೋಪಿ ದರ್ಶನ್‌ಗೆ ಹಾಸಿಗೆ, ದಿಂಬು ಅರ್ಜಿ – ಅ.9ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

    ರೇಪಿಸ್ಟ್ಗೆ ನೀಡುತ್ತಾ ಇರೋ ಸೌಲಭ್ಯವನ್ನೂ ದರ್ಶನ್‌ಗೆ ನೀಡ್ತಿಲ್ಲ. ಇದಕ್ಕೆ ಬೇಕಾದ ದಾಖಲೆ ಕೊಡಬಹುದು. ಉಮೇಶ್ ರೆಡ್ಡಿಗೆ ಎಲ್ಲಾ ಸೌಲಭ್ಯವೂ ಇದೆ. ವಿಐಪಿ ಟ್ರೀಟ್ಮೆಂಟ್ ಅಲ್ಲಿ ಇದ್ದಾನೆ. ಕ್ವಾರಂಟೈನ್ ಅನ್ನೋ ಪದ ಜೈಲ್ ಮ್ಯಾನ್ಯುಯಲ್ ಅಲ್ಲಿ ಇದ್ದರೆ ಅರ್ಜಿ ಹಿಂಪಡೆಯುತ್ತೇನೆ. ಜೈಲ್ ಮ್ಯಾನ್ಯುಯಲ್ ಅಲ್ಲಿ ಒಮ್ಮೆ ಅಲ್ಲ 11 ಕಡೆ ಪದ ಇದೆ. ಕ್ವಾರಂಟೈನ್ ಅಲ್ಲಿ ಇಡೋದು ಜೈಲಾಧಿಕಾರಿಗಳಿಗೆ ಬಿಟ್ಟಿದ್ದು, ಅವರ ಒತ್ತಾಯ ಏನು ಎಂದು ಪ್ರಶ್ನಿಸಿದರು.

    ಎಸ್‌ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿ, ಜೈಲ್ ಮ್ಯಾನ್ಯುಯಲ್ ಪ್ರಕಾರವೇ ಎಲ್ಲವನ್ನೂ ಕೊಡಲಾಗ್ತಿದೆ. ಕಂಬಳಿ, ಬೆಡ್ ಶೀಟ್, ಚೊಂಬು ತಟ್ಟೆ ಎಲ್ಲವನ್ನೂ ಕೊಡಲಾಗಿದೆ. ಹಾಸಿಗೆಯನ್ನು ಕೊಡಲು ಅವಕಾಶ ಇಲ್ಲ. ಪಲ್ಲಂಗ ಕೊಡಿ ಮಲಗಿಸಬೇಕು ಅಂದ್ರೆ ಆಗೋದಿಲ್ಲ. ವಾಕಿಂಗ್ ಮಾಡೋದಕ್ಕೆ ಅವಕಾಶ ಕೊಡಲಾಗಿದೆ. ಇದೇ ಸೆಲ್‌ನಲ್ಲಿ ಇರಬೇಕು ಅಂತ ಕೇಳೋ ಅಧಿಕಾರ ಆರೋಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ವೀಕೆಂಡ್‌ನಲ್ಲಿ ಫ್ಯಾನ್ಸ್‌ಗೆ ದರ್ಶನ್ ದರ್ಶನ ಮಾಡಿಸಿದ ವಿಜಯಲಕ್ಷ್ಮಿ

    ಜೈಲಾಧಿಕಾರಿಗಳ ವಿರುದ್ಧ ದರ್ಶನ್ ಆರೋಪಕ್ಕೆ ಸಂಬಂಧಿಸಿದಂತೆ ಜೈಲಿನ ಸೂಪರಿಂಟೆಂಡೆಂಟ್ ಅವರು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ಗೆ ವರದಿ ಸಲ್ಲಿಸಿದರು. ಆರೋಪಗಳ ಸಂಬಂಧ ಕೋರ್ಟ್‌ಗೆ ಸ್ಪಷ್ಟನೆ ನೀಡಿ ರಿಪೋರ್ಟ್ ಸಲ್ಲಿಸಲಾಯಿತು.

  • ಮಹೇಶ್‌ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ

    ಮಹೇಶ್‌ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ

    – ಅ.8 ಕ್ಕೆ ವಿಚಾರಣೆ ಮುಂದೂಡಿಕೆ

    ಮಂಗಳೂರು: ಮಹೇಶ್‌ ಶೆಟ್ಟಿ ತಿಮರೋಡಿ (Mahesh Shetty Thimarody) ಗಡಿಪಾರು ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ವಿಚಾರಣೆಯನ್ನು ಅ.8ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.

    ಗಡಿಪಾರು ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಹೈಕೋರ್ಟ್‌ ಪ್ರತಿವಾದಿಗಳಿಗೆ ನೋಟೀಸ್ ನೀಡಿದೆ. ನೋಟಿಸ್ ಜಾರಿ ಮಾಡಿ ಅ.8‌ ಕ್ಕೆ ವಿಚಾರಣೆ ಮುಂದೂಡಿದೆ. ಇದನ್ನೂ ಓದಿ: ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕೇಸ್ – ಮಹೇಶ್ ಶೆಟ್ಟಿ ತಿಮರೋಡಿಗೆ ಅಂತಿಮ ನೋಟಿಸ್ ಜಾರಿ

    ಗಡಿಪಾರು ಆದೇಶ ರದ್ದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ತಿಮರೋಡಿ ಅರ್ಜಿ ಸಲ್ಲಿಸಿದ್ದರು. ನ್ಯಾ. ಸಿ.ಎಂ.ಪೂನಚ್ಚ ಅವರ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿ ಆದೇಶ ಹೊರಡಿಸಿದೆ.

    ತಿಮರೋಡಿ ರಾಜ್ಯ ಸರ್ಕಾರ, ಪುತ್ತೂರು ಎಸಿ, ಡಿವೈಎಸ್ಪಿ ಬಂಟ್ವಾಳ, ಬೆಳ್ತಂಗಡಿ ಇನ್ಸ್ಪೆಕ್ಟರ್ ಪ್ರತಿವಾದಿಯಾಗಿಸಿದ್ದರು. ತಕ್ಷಣ ಗಡಿಪಾರು ಆದೇಶಕ್ಕೆ ಮಧ್ಯಂತರ ತಡೆ ನೀಡಿ ರದ್ದು ಪಡಿಸಲು ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಮಹೇಶ್‌ ಶೆಟ್ಟಿ ತಿಮರೋಡಿ ದಕ್ಷಿಣ ಕನ್ನಡದಿಂದ 1 ವರ್ಷ ಗಡಿಪಾರು

    ಸೆ.18 ರಂದು ತಿಮರೋಡಿಯನ್ನು ರಾಯಚೂರಿಗೆ ಗಡಿಪಾರು ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಆದೇಶಿಸಿದ್ದರು. 2025 ರ ಸೆ.18 ರಿಂದ 2026ರ ಸೆ.17 ರ ವರೆಗೆ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಆದೇಶಿಸಿದ್ದರು.

    ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ಸರಹದ್ದಿಗೆ ಗಡಿಪಾರು ಮಾಡಲು ಆದೇಶ ಹೊರಡಿಸಲಾಗಿತ್ತು. ಆದೇಶ ಪಾಲನೆ ಮಾಡದೇ ಇದ್ದಲ್ಲಿ ಬಂಧಿಸಿ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲು ಸೂಚನೆ ನೀಡಲಾಗಿತ್ತು.

  • ದತ್ತಾಂಶವನ್ನು ಸಂಪೂರ್ಣವಾಗಿ ರಕ್ಷಿಸಿ – ಜಾತಿ ಸಮೀಕ್ಷೆಗೆ ಷರತ್ತು, ಸರ್ಕಾರಕ್ಕೆ ಬಿಗ್‌ ರಿಲೀಫ್‌

    ದತ್ತಾಂಶವನ್ನು ಸಂಪೂರ್ಣವಾಗಿ ರಕ್ಷಿಸಿ – ಜಾತಿ ಸಮೀಕ್ಷೆಗೆ ಷರತ್ತು, ಸರ್ಕಾರಕ್ಕೆ ಬಿಗ್‌ ರಿಲೀಫ್‌

    – ಸಮೀಕ್ಷೆಗೆ ಮಧ್ಯಂತರ ತಡೆ ನೀಡದ ಕೋರ್ಟ್‌
    – ಸ್ವಯಂಪ್ರೇರಣೆಯಿಂದ ನೀಡಿದರಷ್ಟೇ ಮಾಹಿತಿ ಪಡೆಯಬೇಕು

    ಬೆಂಗಳೂರು: ಜಾತಿಗಳ ಸಾಮಾಜಿಕ ಆರ್ಥಿಕ ಸಮೀಕ್ಷೆಗೆ (Caste Survey) ಮಧ್ಯಂತರ ತಡೆ ನೀಡಲು ಹೈಕೋರ್ಟ್ (Karnataka)  ನಿರಾಕರಿಸಿದ್ದು ರಾಜ್ಯ ಸರ್ಕಾರಕ್ಕೆ ಬಿಗ್‌ ರಿಲೀಫ್‌ ಸಿಕ್ಕಿದೆ.

    ಮುಖ್ಯ ನ್ಯಾ.ವಿಭು ಬಖ್ರು ಮತ್ತು ನ್ಯಾ.ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠದಲ್ಲಿ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ರಾಜ್ಯ ಒಕ್ಕಲಿಗರ ಸಂಘ ಮತ್ತು ಇತರರು  ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ಕೇಂದ್ರ ಸರ್ಕಾರ ಈ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿದರೆ ರಾಜ್ಯ ಸರ್ಕಾರ ಬಲವಾಗಿ ಸಮರ್ಥಿಸಿಕೊಂಡಿತ್ತು.

    ದೀರ್ಘಕಾಲ ವಾದ, ಪ್ರತಿವಾದ ಆಲಿಸಿದ ಕೋರ್ಟ್‌, ಪೀಠ – ಮೇಲಿನದನ್ನು ಗಮನದಲ್ಲಿಟ್ಟುಕೊಂಡು ನಡೆಯುತ್ತಿರುವ ಸಮೀಕ್ಷೆಯನ್ನು ನಾವು ನಿಷೇಧಿಸಲು ಸಾಧ್ಯವಿಲ್ಲ. ಆದಾಗ್ಯೂ ಸಂಗ್ರಹಿಸಿದ ದತ್ತಾಂಶವನ್ನು ಯಾವುದೇ ವ್ಯಕ್ತಿ ಬಹಿರಂಗಪಡಿಸಬಾರದು ಎಂದು ಸೂಚಿಸಿದೆ.

    ದತ್ತಾಂಶವನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಮತ್ತು ಗೌಪ್ಯವಾಗಿಡಲಾಗಿದೆ ಎಂದು ಆಯೋಗವು ಖಚಿತಪಡಿಸಿಕೊಳ್ಳಬೇಕು. ಈ ಪ್ರಕರಣ ಇತ್ಯರ್ಥವಾಗುವರೆಗೆ ಯಾವುದೇ ಕಾರಣಕ್ಕೂ ಸಂಗ್ರಹಿಸಿದ ಮಾಹಿತಿ ಸೋರಿಕೆ ಆಗುವುದಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗ ಅಫಿಡವಿಟ್‌  ಸಲ್ಲಿಸಬೇಕು.  ಜನರು ಸ್ವಯಂಪ್ರೇರಣೆಯಿಂದ ನೀಡಿದರಷ್ಟೇ ಮಾಹಿತಿ ಪಡೆಯಬೇಕು. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಮಾಹಿತಿ ನೀಡುವಂತೆ ಯಾವುದೇ ಒತ್ತಡ ಹಾಕಬಾರದು ಎಂದು ಷರತ್ತು ವಿಧಿಸಿ ಡಿಸೆಂಬರ್ ಎರಡನೇ ವಾರಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

  • ಗಣತಿಗೆ ಆಧಾರ್ ಕಾರ್ಡ್ ಬಳಕೆಗೆ ಆಕ್ಷೇಪ- ತಡೆ ನೀಡಿದ್ರೆ 350 ಕೋಟಿ ಬರುತ್ತಾ: ಹೈಕೋರ್ಟ್ ಪ್ರಶ್ನೆ

    ಗಣತಿಗೆ ಆಧಾರ್ ಕಾರ್ಡ್ ಬಳಕೆಗೆ ಆಕ್ಷೇಪ- ತಡೆ ನೀಡಿದ್ರೆ 350 ಕೋಟಿ ಬರುತ್ತಾ: ಹೈಕೋರ್ಟ್ ಪ್ರಶ್ನೆ

    – ಗುರುವಾರಕ್ಕೆ ವಿಚಾರಣೆ ಮುಂದೂಡಿಕೆ

    ಬೆಂಗಳೂರು: ರಾಜ್ಯದಲ್ಲಿ ಜಾತಿ ಸಮೀಕ್ಷೆ (Caste Survey) ವಿಚಾರವಾಗಿ 2ನೇ ದಿನವೂ ಹೈಕೋರ್ಟ್ (High Court) ವಿಚಾರಣೆ ನಡೆಸಿದ್ದು ಗುರುವಾರಕ್ಕೆ ವಿಚಾರಣೆ ಮುಂದೂಡಿದೆ.

    ಇಂದಿನ ವಿಚಾರಣೆ ವೇಳೆ ಕೋರ್ಟ್ ಕೆಲವೊಂದು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಆಧಾರ್ ನಂಬರ್‌ (Aadahar No) ಪಡೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಸಾಕಷ್ಟು ಸೈಬರ್ ಅಪರಾಧಗಳು (Cyber Crime) ನಡೆಯುತ್ತಿವೆ. ಇಲ್ಲಿ ಖಾಸಗಿತನದ ವಿಚಾರವಿದೆ. ಗಣತಿಗೆ ತಡೆ ನೀಡಿದರೆ 350 ಕೋಟಿ ರೂ. ಹಣ ಸರ್ಕಾರಕ್ಕೆ ಉಳಿಯುತ್ತಾ ಎಂದು ಪ್ರಶ್ನಿಸಿದೆ.

    ಸರ್ಕಾರದ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದಿಸಿ, ಸಂವಿಧಾನದ ಪ್ರಕಾರ ರಾಜ್ಯ ಸರ್ಕಾರಗಳಿಗೆ ಸರ್ವೆಗೆ ಅವಕಾಶ ಇದೆ. ಇದು ಗಣತಿಯಲ್ಲ, ಹಿಂದುಳಿದವರ ಪತ್ತೆಗೆ ಮಾಡುತ್ತಿರುವ ಕ್ರಮ. ಮಧ್ಯಂತರ ತಡೆಯಾಜ್ಞೆ ನೀಡಲು ಅವಕಾಶ ಇರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ:  ಯೂಟ್ಯೂಬರ್‌ ಮುಕಳೆಪ್ಪ ಮದುವೆ ಪ್ರಕರಣ – ವಿವಾಹ ನೋಂದಣಾಧಿಕಾರಿ ಕಚೇರಿ ಬಂದ್‌

    ಇದಕ್ಕೆ ಕೇಂದ್ರ ಸರ್ಕಾರದ ಪರ ಎಎಸ್‌ಜಿ ಅರವಿಂದ್ ಕಾಮತ್ ಆಕ್ಷೇಪಿಸಿ, ಗಣತಿ ಕಾಯ್ದೆಯಲ್ಲಿ ಕೇಂದ್ರ ಸರ್ಕಾರಕ್ಕೆ ಗಣತಿ ಮಾಡಲು ಅಧಿಕಾರವಿದೆ. ಅದನ್ನು ಹೊರತುಪಡಿಸಿ ರಾಜ್ಯಕ್ಕೆ ಅಧಿಕಾರ ಇಲ್ಲ. ರಾಜ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ವಾದ ಮುಂದಿಟ್ಟರು. ಇದನ್ನೂ ಓದಿ:  ಭೈರಪ್ಪ 3 ತಿಂಗಳಿನ ಹಿಂದೆ ಡಿಸ್ಟಾರ್ಜ್‌ ಆಗಿ 3 ದಿನದ ಹಿಂದೆ ಅಡ್ಮಿಟ್ ಆಗಿದ್ರು: ಡಾ. ಶೈಲಾ

    ಹಿಂದುಳಿದ ವರ್ಗಗಳ ಆಯೋಗದ ಪರ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿ, ನಾವು ಯಾವುದೇ ಜಾತಿಯನ್ನು ಸೃಷ್ಟಿಸಿಲ್ಲ. ಈ ಹಿಂದಿನ ಸರ್ವೆಗಳ ಮಾಹಿತಿ ಆಧರಿಸಿ 1,561 ಜಾತಿಯನ್ನು ಗುರುತಿಸಿದೆ. ನಮ್ಮ ಜಾತಿ ಸೇರಿಸಿಲ್ಲ ಅಂತ ಕೆಲವರ ಮನವಿ ಮೇರೆಗೆ ಸೇರಿಸಲಾಗಿದೆ. ಈಗ 2 ಕೋಟಿ ಮನೆಗಳಿಗೆ ಜಿಯೋ ಟ್ಯಾಗ್ ಮಾಡಲಾಗಿದೆ. ಉತ್ತರ ಕೊಡಲೇಬೇಕು ಎಂದು ಕಡ್ಡಾಯ ಇಲ್ಲ. ಕೇವಲ ಗುರುತಿಗಾಗಿ ಹಾಗೂ ಬೇರೆ ರಾಜ್ಯದವರನ್ನು ಪರಿಗಣಿಸದಿರಲು ಮಾತ್ರವೇ ಆಧಾರ್ ನಂಬರ್ ಪಡೆಯಲಾಗುತ್ತಿದೆ. ಸ್ಟಿಕ್ಕರ್ ತೆಗೆಯದಂತೆ ಬಲವಂತವಿಲ್ಲ, ಮನವಿಯಷ್ಟೇ ಎಂದು ಕೋರ್ಟ್‌ ಗಮನಕ್ಕೆ ತಂದರು. ವಾದ-ಪ್ರತಿವಾದ ಅಲಿಸಿದ ಕೋರ್ಟ್ ನಾಳೆಗೆ ವಿಚಾರಣೆ ಮುಂದೂಡಿದೆ.