Tag: hidden camera

  • ತಮಿಳು ಚಿತ್ರರಂಗದಲ್ಲಿ ಮಿಂಚಿದ ಕನ್ನಡತಿ ಸಂಹಿತಾ ವಿನ್ಯಾ

    ತಮಿಳು ಚಿತ್ರರಂಗದಲ್ಲಿ ಮಿಂಚಿದ ಕನ್ನಡತಿ ಸಂಹಿತಾ ವಿನ್ಯಾ

    ನ್ನಡ ಅಲ್ಲದೇ ಪಕ್ಕದ ತಮಿಳು, ತೆಲುಗು ಚಿತ್ರರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ನಟಿ ಎಂದರೆ ಸಂಹಿತಾ ವಿನ್ಯಾ. 75ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಫ್ಯಾಷನ್ ಷೋಗಳಲ್ಲಿ ಭಾಗವಹಿಸಿ, ಸೂಪರ್ ಮಾಡೆಲ್ ಎನಿಸಿಕೊಂಡಿರುವ ಸಂಹಿತಾ ವಿನ್ಯಾ ಇದೀಗ ತಮಿಳಲ್ಲಿ ಜೀವಾ ಸಹೋದರ ಜತಿನ್ ರಮೇಶ್ ಜತೆಗೂ ನಟಿಸುತ್ತಿದ್ದಾರೆ.

    ಇದಲ್ಲದೇ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ತಮಿಳಿನ ಹಿಡನ್ ಕ್ಯಾಮೆರಾ ಚಿತ್ರದಲ್ಲಿ ಸಂಹಿತಾ ನಾಯಕಿಯಾಗಿ ನಟಿಸುತ್ತಿದ್ದು, ಆ ಚಿತ್ರದ ಕೆಲಸ ಕೇರಳದಲ್ಲಿ ನಡೆಯುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತ ಬಂದಿರುವ ಸಂಹಿತಾ ಅಭಿನಯದ ‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’ ಚಿತ್ರ ಬಿಡುಗಡೆಯಾದಾಗ ಅಭಿಮಾನಿಗಳು ಕಟೌಟ್ ನಿಲ್ಲಿಸುವ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿದ್ದರು.

    ಸಂಹಿತಾ ವಿನ್ಯಾ ಅಭಿನಯದ ಅಭಿನಯದ ಮಿಕ್ಸಿಂಗ್ ಪ್ರೀತಿ,’ಮೆಜೆಸ್ಟಿಕ್ -2′, ಆಯುಧ, ಜಿಎಸ್‌ಟಿ. ಸ್ವಾಭಿಮಾನಿ, ಯಾಕೋ ಬೇಜಾರು, ವಿದೂಷಕ ಮುಂತಾದ ಚಿತ್ರಗಳು ರಿಲೀಸ್‌ಗೆ ರೆಡಿ ಇವೆ. ಮತ್ತೊಂದು ತಮಿಳು ಚಿತ್ರ ಮಿಕ್ಸಿಂಗ್ ಕಾದಲ್ ಬಿಡುಗಡೆಗೆ ರೆಡಿಯಿದೆ.

    ಅಮೃತಘಳಿಗೆ, ಲಂಗೋಟಿ ಮ್ಯಾನ್ ಅಲ್ಲದೇ ತೆಲುಗಿನ ಯು ಆರ್ ಮೈ ಹೀರೋ ಚಿತ್ರದಲ್ಲೂ ಸಂಹಿತಾ ವಿನ್ಯಾ ನಾಯಕಿಯಾಗಿ ನಟಿಸಿದ್ದಾರೆ. ಹಾಲು ತುಪ್ಪ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂಹಿತಾ ವಿನ್ಯಾ, ಅಮೃತ ಘಳಿಗೆ, ವಿಷ್ಣು ಸರ್ಕಲ್, ನಸಾಬ್, ಮಿಕ್ಸಿಂಗ್ ಪ್ರೀತಿ, ಸ್ವಾಭಿಮಾನಿ ಅಲ್ಲದೇ ತೆಲುಗು, ತಮಿಳು ಸೇರಿದಂತೆ 18ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದೀಗ ಪಕ್ಕದ ತಮಿಳು, ತೆಲುಗು ಚಿತ್ರರಂಗದಲ್ಲೂ ಸಹ ಸಖತ್ ಮಿಂಚುತ್ತಿದ್ದಾರೆ. ಅಚ್ಚಕನ್ನಡದ ಪ್ರತಿಭೆಯಾದ ಸಂಹಿತಾ ವಿನ್ಯಾ, ಇದೀಗ ಸೌತ್ ಫಿಲಂ ಇಂಡಸ್ಟ್ರಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.

  • ಕೊಯಮತ್ತೂರು | ಕಾಲೇಜಿನ ವಾಶ್‌ರೂಮ್‌ನಲ್ಲಿ ಪೆನ್ ಕ್ಯಾಮೆರಾ ಇಟ್ಟಿದ್ದ ವೈದ್ಯ‌ ಅರೆಸ್ಟ್‌

    ಕೊಯಮತ್ತೂರು | ಕಾಲೇಜಿನ ವಾಶ್‌ರೂಮ್‌ನಲ್ಲಿ ಪೆನ್ ಕ್ಯಾಮೆರಾ ಇಟ್ಟಿದ್ದ ವೈದ್ಯ‌ ಅರೆಸ್ಟ್‌

    ಚೆನ್ನೈ: ತಮಿಳುನಾಡಿನ (Tamil Nadu) ಕೊಯಮತ್ತೂರಿನ (Coimbatore) ಮೆಡಿಕಲ್‌ ಕಾಲೇಜಿನ ವಾಶ್ ರೂಮ್‌ನಲ್ಲಿ ಪೆನ್ ಕ್ಯಾಮೆರಾ ಇಟ್ಟ ಆರೋಪದ ಮೇಲೆ ಓರ್ವ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಡಾ. ವೆಂಕಟೇಶ್ (33) ಎಂದು ತಿಳಿದು ಬಂದಿದೆ. ಬಂಧಿತ ಆರೋಪಿ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

    ಮಹಿಳಾ ವೈದ್ಯರೊಬ್ಬರಿಗೆ ವಾಶ್‌ರೂಮ್‌ನಲ್ಲಿ ಕ್ಯಾಮೆರಾ ಇರುವುದು ಕಂಡು ಬಂದಿದೆ. ಅವರು ಈ ವಿಚಾರವನ್ನು ಕಾಲೇಜಿನ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಹಿಡನ್ ಕ್ಯಾಮೆರಾ (Hidden Camera) ಮತ್ತು ಅದರ ಮೆಮೊರಿ ಕಾರ್ಡ್‌ನ್ನು ವಶಪಡಿಸಿಕೊಂಡಿದ್ದಾರೆ.

    ಆರೋಪಿ ವಿರುದ್ಧ ಐಟಿ ಕಾಯ್ದೆ ಮತ್ತು ಭಾರತ ನ್ಯಾಯ ಸಂಹಿತಾ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  • ಆಂಧ್ರ ಕಾಲೇಜಿನ ವಿದ್ಯಾರ್ಥಿನಿಯರ ವಾಶ್ ರೂಮ್‍ನಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಮಾರಾಟ – ಆರೋಪಿ ಅರೆಸ್ಟ್

    ಆಂಧ್ರ ಕಾಲೇಜಿನ ವಿದ್ಯಾರ್ಥಿನಿಯರ ವಾಶ್ ರೂಮ್‍ನಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಮಾರಾಟ – ಆರೋಪಿ ಅರೆಸ್ಟ್

    – ಹಣಕ್ಕಾಗಿ 300 ಫೋಟೋ, ವಿಡಿಯೋ ಮಾರಾಟ

    ಅಮರಾವತಿ: ಆಂಧ್ರಪ್ರದೇಶದ (Andhra Pradesh) ಇಂಜಿನಿಯರಿಂಗ್ ಕಾಲೇಜೊಂದರ (College) ವಿದ್ಯಾರ್ಥಿನಿಯರ ಹಾಸ್ಟೆಲ್‍ನ ವಾಶ್ ರೂಂನಲ್ಲಿ ಹಿಡನ್ ಕ್ಯಾಮೆರಾ (Hidden Camera) ಪತ್ತೆಯಾಗಿದ್ದು, ವಿಡಿಯೋ ಸೆರೆ ಹಿಡಿದು ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೃಷ್ಣನ್ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಈ ಪ್ರಕರಣ ನಡೆದಿದ್ದು, ವಿದ್ಯಾರ್ಥಿಗಳು ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಗುರುವಾರ ಸಂಜೆ ವಾಶ್‍ರೂಮ್‍ನಲ್ಲಿ ಮುಚ್ಚಿಟ್ಟಿದ್ದ ವಸ್ತುವನ್ನು ವಿದ್ಯಾರ್ಥಿನಿ ಗಮನಿಸಿದ್ದಾಳೆ. ಆ ವಸ್ತುವನ್ನು ನೋಡಿದಾಗ ಕ್ಯಾಮೆರಾ ಇರುವುದು ಪತ್ತೆಯಾಗಿದೆ. ಕ್ಯಾಮೆರಾ ಪರಿಶೀಲಿಸಿದಾಗ ವಿಡಿಯೋಗಳನ್ನು ನೋಡಿ ಪ್ರತಿಭಟನೆ ನಡೆಸಿದ್ದಾರೆ.

    ಪ್ರಕರಣಕ್ಕೆ ಸಂಬಂಧ ವಿದ್ಯಾರ್ಥಿಗಳ ಹಾಸ್ಟೆಲ್‍ನ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿ ವಿಜಯ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಲ್ಯಾಪ್‍ಟಾಪ್ ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಾಶ್‍ರೂಮ್‍ನಲ್ಲಿರುವ ವಿದ್ಯಾರ್ಥಿನಿಯರ 300ಕ್ಕೂ ಹೆಚ್ಚು ಫೋಟೋಗಳು ಮತ್ತು ವೀಡಿಯೊಗಳು ಸೋರಿಕೆಯಾಗಿದ್ದು, ಹಣ ಕೊಟ್ಟು ಕೆಲವು ವಿದ್ಯಾರ್ಥಿಗಳು ಆರೋಪಿ ವಿಜಯ್‍ನಿಂದ ವೀಡಿಯೊಗಳನ್ನು ಖರೀದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಬೆಂಗ್ಳೂರಿನಲ್ಲಿ ಹಾಡಹಗಲೇ ಎಟಿಎಂನಲ್ಲಿ ಹಣ ದೋಚಿದ ಖದೀಮರು

    ಬೆಂಗ್ಳೂರಿನಲ್ಲಿ ಹಾಡಹಗಲೇ ಎಟಿಎಂನಲ್ಲಿ ಹಣ ದೋಚಿದ ಖದೀಮರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಕಳ್ಳರಿಬ್ಬರು ಎಂಟಿಎಂನಲ್ಲಿ ಹಣ ದೋಚಿರುವ ಘಟನೆ ನಗರದ ಯಶವಂತಪುರದ ತ್ರೀವೆಣಿ ರಸ್ತೆಯಲ್ಲಿ ನಡೆದಿದೆ.

    ಯಶವಂತಪುರದ ತ್ರೀವೆಣಿ ರಸ್ತೆಯಲ್ಲಿರುವ ಎಟಿಎಂ ಮೆಷಿನ್‍ನಲ್ಲಿ ಕಳ್ಳರು ಹಿಡನ್ ಕ್ಯಾಮೆರಾ ಹಾಗೂ ಸ್ಕಿಮ್ಮಿಂಗ್ ಡಿವೈಸ್ ಅಳವಡಿಸಿ, ಡಾಟಾ ಕದ್ದು ನಕಲಿ ಎಟಿಎಂ ತಯಾರಿಸಲು ಯತ್ನಿಸಿದ್ದರು. ಮಹಿಳೆಯೊಬ್ಬರು ಹಣ ಡ್ರಾ ಮಾಡಲು ಎಟಿಎಂಗೆ ಬಂದಿದ್ದನ್ನು ನೋಡಿದ ಕಳ್ಳರು, ಬೋನ್ಸ್ ಬೈಕ್‍ನಲ್ಲಿ ಬಂದು ಎಟಿಎಂ ಸೆಂಟರ್ ಮುಂದೆ ನಿಂತಿದ್ದರು. ಇದನ್ನೂ ಓದಿ: ಎಟಿಎಂ ದೋಚಿ ಐಶಾರಾಮಿ ಜೀವನ ನಡೆಸುತ್ತಿದ್ದ 3 ವಿದೇಶಿಯರು ಸೇರಿ ಐವರು ಅರೆಸ್ಟ್

    ಎಷ್ಟೇ ಪ್ರಯತ್ನಿಸಿದರೂ ಮಹಿಳೆಗೆ ಹಣ ಡ್ರಾ ಸಾಧ್ಯವಾಗಲಿಲ್ಲ. ಹೀಗಾಗಿ ಅಲ್ಲಿಂದ ಹೊರನಡೆದರು. ಆಗ ಅವರು ಕಳ್ಳರು ಸ್ಕಿಮ್ಮಿಂಗ್ ಡಿವೈಸ್ ಹಾಗೂ ಹಿಡನ್ ಕ್ಯಾಮೆರಾದ ಮೂಲಕ ಡೆಟಾ ಪಡೆದು ಹಣ ಡ್ರಾ ಮಾಡಿಕೊಂಡಿದ್ದಾರೆ. ಖದೀಮರ ಚಲನವಲನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬರು, ಏನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರಿಗೆ ಹೇಳುವುದಾಗಿ ಬೆದರಿಸುತ್ತಿದ್ದಂತೆ ಕಳ್ಳರಿಬ್ಬರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ತಕ್ಷಣವೇ ಸ್ಥಳೀಯರು ಬೋನ್ಸ್ ಬೈಕ್ ಸಮೇತ ಕಳ್ಳರನ್ನು ಹಿಡಿದು ಯಶವಂತಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಮಹಿಳೆಯರಿಗೆ ಮನೆ ಬಾಡಿಗೆ ನೀಡಿ ರೂಮಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದ ಮಾಲೀಕ ಅರೆಸ್ಟ್

    ಮಹಿಳೆಯರಿಗೆ ಮನೆ ಬಾಡಿಗೆ ನೀಡಿ ರೂಮಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದ ಮಾಲೀಕ ಅರೆಸ್ಟ್

    ಚೆನ್ನೈ: ಮಹಿಳೆಯರಿಗೆ ಬಾಡಿಗೆ ನೀಡಿದ್ದ ಮನೆಯ ಕೋಣೆಗಳಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿದ್ದ ಮಾಲೀಕನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

    ಕೇರಳ ಮೂಲದ ಸಂಪತ್ ಕುಮಾರ್ ಅಲಿಯಾಸ್ ಸಂಜಯ್ ಬಂಧಿತ ಮಾಲೀಕ. ಸಂಜಯ್ ಚೆನ್ನೈನ ಆಡಂಬಾಕಂನಲ್ಲಿ ಅಪಾರ್ಟ್ ಮೆಂಟ್‍ ಒಂದನ್ನು ಹೊಂದಿದ್ದು, ಮಹಿಳೆಯರಿಗೆ ಬಾಡಿಗೆ ನೀಡಿದ್ದ ಮನೆಯಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿ ಸಿಕ್ಕಿಬಿದ್ದಿದ್ದಾನೆ.

    ಆಗಿದ್ದೇನು?:
    ಏಳು ಜನ ಉದ್ಯೋಗಸ್ಥ ಮಹಿಳೆಯರು ಸಂಜಯ್ ಅಪಾರ್ಟ್ ಮೆಂಟ್‍ನಲ್ಲಿ ಮನೆಯೊಂದನ್ನು ಸೆಪ್ಟೆಂಬರ್ ನಲ್ಲಿ ಬಾಡಿಗೆ ಪಡೆದಿದ್ದರು. ಮನೆಯಲ್ಲಿ ವಾಸವಿದ್ದವರಲ್ಲಿ ಓರ್ವ ಮಹಿಳೆ ತನ್ನ ಹೇರ್ ಡ್ರೈಯರ್ ದುರಸ್ತಿಯಾಗಿದ್ದರಿಂದ ಪವರ್ ಪ್ಲಗ್‍ನ ಸಾಕೇಟ್ ತೆರೆದಿದ್ದಾಳೆ. ಈ ವೇಳೆ ಅದರಲ್ಲಿ ಸಣ್ಣ ಕ್ಯಾಮೆರಾ ಇರುವುದು ತಿಳಿದುಬಂದಿದೆ. ಮಾಲೀಕನ ಮೇಲೆ ಅನುಮಾನ ವ್ಯಕ್ತಪಡಿಸಿದ ಮಹಿಳೆಯರು ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಪ್ರಕರಣ ದಾಖಲಿಸಿಕೊಂಡು, ಮಹಿಳೆಯರು ವಾಸವಿದ್ದ ಮನೆಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬೆಡ್ ರೂಮ್, ಬೆಡ್ ಲ್ಯಾಂಪ್ಸ್ ಹಾಗೂ ಸ್ನಾನದ ಕೊಣೆಯಲ್ಲಿ ಬಟ್ಟೆ ಹಾಕುವ ರಾಡ್ ಸೇರಿದಂತೆ ಹಲವು ಕಡೆಗಳಲ್ಲಿ ಹಿಡನ್ ಕ್ಯಾಮೆರಾಗಳು ಪತ್ತೆಯಾಗಿವೆ. ತಕ್ಷಣವೇ ಅಪಾರ್ಟ್ ಮೆಂಟ್ ಮಾಲೀಕ ಸಂಜಯ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

    ಮಹಿಳೆಯರು ಕೆಲಸಕ್ಕೆ ಹೋದಾಗ ದುರಸ್ತಿ ಕೆಲಸ ನೆಪ ಹೇಳಿ ಸಂಜಯ್ ಮನೆಯೊಳಗೆ ಹೋಗುತ್ತಿದ್ದ ಎಂದು ಮಹಿಳೆಯರು ದೂರಿನಲ್ಲಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv