Tag: Hicommand

  • ಮಂಗಳಮುಖಿಯರು ಹೊಡೆದಾಡಿದ್ರೆ ಯಾರನ್ನ ಕಳುಹಿಸಲಿ: ಸಿಎಂ ಇಬ್ರಾಹಿಂ

    ಮಂಗಳಮುಖಿಯರು ಹೊಡೆದಾಡಿದ್ರೆ ಯಾರನ್ನ ಕಳುಹಿಸಲಿ: ಸಿಎಂ ಇಬ್ರಾಹಿಂ

    ರಾಯಚೂರು: ಗಂಡಸರು ಹೊಡೆದಾಡಿದ್ರೆ ಗಂಡಸರನ್ನ ಕಳಿಸಬಹುದು, ಹೆಂಗಸರು ಹೊಡೆದಾಡಿದ್ರೆ ಹೆಂಗಸರನ್ನ ಕಳಿಸಬಹುದು. ಈ ಮಂಗಳಮುಖಿಯರು ಹೊಡೆದಾಡಿದ್ರೆ ನಾನು ಯಾರನ್ನ ಕಳುಹಿಸಲಿ? ಬಿಜೆಪಿಯವರೇ ಮಂಗಳಮುಖಿಯರು, ಏನೋ ಬಸ್ಯಾ ಅಂತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.

    CM IBRAHIM

    ಅವರಿಂದು ರಾಯಚೂರಿನಲ್ಲಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರು ಮೇಕಪ್ ಮಾಡಿ ಸರ್ಕಾರ ತಂದ್ರು, ಪಾಪ ಬೊಮ್ಮಾಯಿಗೆ ಸಿಎಂ ಸ್ಥಾನ ಕೊಟ್ರು. ಸಚಿವ ಸಂಪುಟ ವಿಸ್ತರಣೆ ಮಾಡಲು, ಬಿಡ್ತಿಲ್ಲ. ಈ ಗುಲಾಮಗಿರಿಯಿಂದ ಹೊರಬರಲು ಜನ ಪ್ರಾದೇಶಿಕ ಪಕ್ಷಕ್ಕೆ ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಾರಕಕ್ಕೇರಿದ ಆಡಳಿತಮಂಡಳಿ, ಕಾರ್ಯನಿರ್ವಹಣಾಧಿಕಾರಿ ಜಟಾಪಟಿ

    ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲದಕ್ಕೂ ಹೈಕಮಾಂಡ್ ಮುಂದೆ ಕೈ ಕಟ್ಟಿ ನಿಲ್ಲಬೇಕು. ನಮ್ಮ ಪಕ್ಷದಲ್ಲಿ ದೇವೇಗೌಡರೇ ಹೈಕಮಾಂಡ್ ಇಲ್ಲಿಯೇ ಸಿಗುತ್ತಾರೆ. ದೇವೇಗೌಡರ ನೀರಾವರಿ ಕೊಡುಗೆ ಜನತೆ ಮರೆತಿಲ್ಲ ಎಂದು ಹೇಳಿದ್ದಾರೆ.

  • ಅನಾಮಧೇಯ ಪತ್ರಕ್ಕೆ ಯಡಿಯೂರಪ್ಪ ಆಪ್ತರಿಂದ ಮೆಗಾ ಟಾಂಗ್

    ಅನಾಮಧೇಯ ಪತ್ರಕ್ಕೆ ಯಡಿಯೂರಪ್ಪ ಆಪ್ತರಿಂದ ಮೆಗಾ ಟಾಂಗ್

    ಬೆಂಗಳೂರು: ಅನಾಮಧೇಯ ಪತ್ರಕ್ಕೆ ಯಡಿಯೂರಪ್ಪ ಆಪ್ತರು ಮೆಗಾ ಟಾಂಗ್ ನೀಡಿದ್ದಾರೆ. ಬಿಎಸ್ ಯಡಿಯೂರಪ್ಪ ಅವರ ಆಪ್ತ ತಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾಗೆ ರಹಸ್ಯವಾಗಿ ಪತ್ರ ರವಾನಿಸಿದೆ ಎಂದು ತಿಳಿದು ಬಂದಿದೆ.

    ರಾಜ್ಯ ಬಿಜೆಪಿಯಲ್ಲಿ ಮಂಗಳವಾರ ಮಹತ್ವದ ಬೆಳವಣಿಗೆ ನಡೆದಿದೆ. ಯಡಿಯೂರಪ್ಪ ನಂತರದ ನಾಯಕ ಯಾರು ಹೇಳಿ ಎಂದು ಅನಾಮಧೇಯ ಪತ್ರ ಬಂದಿತ್ತು. ಯಡಿಯೂರಪ್ಪ ವಿರುದ್ಧದ ಅನಾಮಧೇಯ ಪತ್ರಕ್ಕೆ ಬಿಎಸ್‍ವೈ ಟೀಂ ಎರಡು ಪುಟಗಳ ರಹಸ್ಯ ಪತ್ರ ಬರೆದು ಹೈಕಮಾಂಡ್‍ಗೆ ರವಾನಿಸುವ ಮೂಲಕ ಕೌಂಟರ್ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ರಹಸ್ಯ ಪತ್ರದ ಸಾರಾಂಶ ಏನು?
    ಯಡಿಯೂರಪ್ಪಗೆ ವಯಸ್ಸಾಗಿದೆ, ಆಡಳಿತ ನಡೆಸಲು ಆಗುತ್ತಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಪಕ್ಷದ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಇದನ್ನು ಸೃಷ್ಟಿಸಿರಬಹುದು. ಅನಾಮಧೇಯ ಪತ್ರದ ಮೂಲಕ ಅಪಪ್ರಚಾರ ಮಾಡಿದವರ ಬಗ್ಗೆ ಪಕ್ಷ ಎಚ್ಚರಿಕೆ ಕೊಡಬೇಕು. ಮುಖ್ಯಮಂತ್ರಿ ಆಗುವ ಮೊದಲು ಇಲ್ಲದಿದ್ದ ವಯಸ್ಸು ಈಗ ಎಲ್ಲಿಂದ ಬರುತ್ತೆ? ವಿಶೇಷ ಪ್ರಕರಣ ಎಂದೇ ಯಡಿಯೂರಪ್ಪ ಸಿಎಂ ಆಗಿದ್ದು ಎನ್ನುವ ಅರಿವು ಎಲ್ಲರಿಗೂ ಇದೆ. ಹೀಗಿರುವಾಗ ಪದೇ ಪದೇ ಗೊಂದಲ ಸೃಷ್ಟಿಸುವ ಕೆಲಸ ಆಗುತ್ತಿದೆ. ಲಿಂಗಾಯತ ಸಮುದಾಯದ ಮತ್ತೊಬ್ಬ ನಾಯಕನನ್ನು ಹೆಸರಿಸಲಿ. ಯಡಿಯೂರಪ್ಪ ನಂತರದ ನಾಯಕತ್ವ ಯಾರದ್ದು ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇಲ್ಲ. ಯಡಿಯೂರಪ್ಪ ಕೆಳಗಿಳಿದರೆ ಈ ನಾಯಕ ಮುಂದುವರಿಸುತ್ತಾನೆ ಎನ್ನುವ ವಿಶ್ವಾಸವೇ ಪಕ್ಷದಲ್ಲಿ ಇಲ್ಲ. ಇನ್ನು ಯಡಿಯೂರಪ್ಪಗೆ ವಯಸ್ಸಾಗಿರಬಹುದು, ಆದ್ರೆ ಅನಾರೋಗ್ಯ ಇಲ್ಲ. ಪಕ್ಷಕ್ಕೆ ನೀಡಿದ ಕೊಡುಗೆಯನ್ನೇ ಪರಿಗಣಿಸಿ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅವರನ್ನು ಕೇಂದ್ರ ಸರ್ಕಾರದ ಸಂಪುಟದಲ್ಲಿ ಉಳಿಸಿಕೊಂಡಿದ್ದನ್ನು ಗಮನಕ್ಕೆ ತರುತ್ತೇವೆ. ಯಡಿಯೂರಪ್ಪ ಮತ್ತೊಂದು ಅವಧಿಗೆ ಆಸೆಯನ್ನು ಪಟ್ಟಿಲ್ಲ. ಹೀಗಿರುವಾಗ ಪೂರ್ಣಾವಧಿ ತನಕ ಸಿಎಂ ಆಗಿ ಕೆಲಸ ಮಾಡಲು ಹೈಕಮಾಂಡ್ ಬೆಂಬಲ ಕೊಡಬೇಕು. ಅನಾಮಧೇಯ ಪತ್ರ ಸೃಷ್ಟಿಸುವ ವಿರೋಧಿಗಳಿಗೆ ಸಂದೇಶ ರವಾನಿಸಿ. ಇಲ್ಲದಿದ್ದರೆ ಪಕ್ಷ, ಸರ್ಕಾರ ಎರಡಕ್ಕೂ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

  • ಡಿಸೆಂಬರ್ ನಂತ್ರ ಬಿಎಸ್‌ವೈ ಕೇರಳ ರಾಜ್ಯಪಾಲ: ಶಾಸಕ ನಾಗನಗೌಡ ಕಂದಕೂರ

    ಡಿಸೆಂಬರ್ ನಂತ್ರ ಬಿಎಸ್‌ವೈ ಕೇರಳ ರಾಜ್ಯಪಾಲ: ಶಾಸಕ ನಾಗನಗೌಡ ಕಂದಕೂರ

    ಯಾದಗಿರಿ: ಬಿಜೆಪಿ ಹೈಕಮಾಂಡ್ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಸೂಚನೆ ನೀಡಿದೆ ಎಂದು ಯಾದಗಿರಿಯಲ್ಲಿ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಕ್ಷೇಮ ಇಲ್ಲ. ಅನಿವಾರ್ಯ ಕಾರಣಗಳಿಂದ ಹೈಕಮಾಂಡ್ ಯಡಿಯೂರಪ್ಪನವರಿಗೆ ಎರಡು ತಿಂಗಳು ಗ್ರೇಸ್ ಪಿರೇಡ್ ಕೊಟ್ಟಿದ್ದಾರೆ. ಅದು ಡಿಸೆಂಬರ್‌ವರೆಗೂ ಮುಂದುವರಿಯುತ್ತದೆ ಎಂದರು.

    ಬಿಜೆಪಿ ಹೈ ಕಮಾಂಡ್ ಯಡಿಯೂರಪ್ಪನವರನ್ನು ಕೆಳಗಿಳಿಯುವಂತೆ ಸೂಚಿಸಿದೆ. ಹೈಕಮಾಂಡ್ ಯಡಿಯೂರಪ್ಪ ಅವರ ಬಳಿ “ಡಿಸೆಂಬರ್‌ವರೆಗೂ ಜಾಗ ಖಾಲಿ ಮಾಡಿ. ಗೌರವಯುತವಾಗಿ ನಿಮ್ಮನ್ನು ಕೇರಳದ ರಾಜ್ಯಪಾಲರನ್ನಾಗಿ ಮಾಡುತ್ತೇವೆ. ನಿಮ್ಮ ಪುತ್ರ ವಿಜಯೇಂದ್ರ ಅವರನ್ನು ಎಮ್‌ಎಲ್‌ಸಿ ಮಾಡಿ ಮಂತ್ರಿಸ್ಥಾನ ನೀಡುತ್ತೇನೆ” ಎಂದು ಹೇಳಿದ್ದಾರೆ ಎಂದು ನಾಗನಗೌಡ ಕಂದಕೂರ ಹೇಳಿದ್ದಾರೆ.

    ನಾಗನಗೌಡ ಅವರ ಈ ಹೇಳಿಗೆ ನಿಜಾನಾ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈ ಬಗ್ಗೆ ಯಡಿಯೂರಪ್ಪ ಆಗಲಿ, ಬಿಜೆಪಿ ಪಕ್ಷದವರಾಗಲಿ ಯಾವುದೇ ಹೇಳಿಕೆ ಸಹ ನೀಡಲಿಲ್ಲ. ಹಾಗಾಗಿ ಈ ಸುದ್ದಿ ಸತ್ಯನಾ ಅಥವಾ ಸುಳ್ಳೋ ಎಂಬುದು ಗೊತ್ತಿಲ್ಲ.

  • ಬಿಎಸ್‍ವೈ ಇರೋವಾಗ್ಲೇ ಉತ್ತರಾಧಿಕಾರಿಗೆ ತಲಾಶ್- ಡಿಸಿಎಂ ಸೃಷ್ಟಿಯಿಂದ ನಾಯಕತ್ವ ಟೆಸ್ಟ್

    ಬಿಎಸ್‍ವೈ ಇರೋವಾಗ್ಲೇ ಉತ್ತರಾಧಿಕಾರಿಗೆ ತಲಾಶ್- ಡಿಸಿಎಂ ಸೃಷ್ಟಿಯಿಂದ ನಾಯಕತ್ವ ಟೆಸ್ಟ್

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇರುವಾಗಲೇ ಉತ್ತರಾಧಿಕಾರಿ ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.

    ನಮಗೆ ಬಿ.ಎಸ್.ಯಡಿಯೂರಪ್ಪ ಸರ್ಕಾರಕ್ಕಿಂತ ನಾಯಕತ್ವವೇ ಮುಖ್ಯ. ಯಡಿಯೂರಪ್ಪನವರ ನಂತರ ಬಿಜೆಪಿ ನಡೆಸುವ ಜನ ಗಟ್ಟಿ ಇರಬೇಕು ಅಂತ ಹೈಕಮಾಂಡ್ ಹೊಸ ವರಸೆ ಆರಂಭಿಸಿದೆ. ಹೀಗಾಗಿ ಮೂವರು ನಾಯಕರಿಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಬಿ.ಎಸ್.ಯಡಿಯೂರಪ್ಪ ಅವರು ಹೆಚ್ಚು ಅಂದರೆ ಈ ಅವಧಿಯ ಸರ್ಕಾರಕ್ಕೆ ಮಾತ್ರ ಸೀಮಿತ ಎನ್ನುವ ಲೆಕ್ಕಚಾರಕ್ಕೆ ಬಿಜೆಪಿ ಹೈಕಮಾಂಡ್ ಬಂದಂಗಿದೆ. ಬಿಎಸ್‍ವೈ ಸದ್ಯ ಬಿಜೆಪಿಯ ಮಾಸ್ ಲೀಡರ್. ಅವರ ನಂತರ ಬಿಜೆಪಿಗೆ ಮಾಸ್ ಲೀಡರ್ ಕೊರತೆ ಎದುರಾಗುವ ಸಾಧ್ಯತೆ ಇದೆ. ಈ ಕೊರತೆ ನಿವಾರಿಸಲು ಗಟ್ಟಿ ನಾಯಕತ್ವ ಅನಿವಾರ್ಯ ಎಂಬುದನ್ನು ಮನಗಂಡಿರುವ ಹೈಕಮಾಂಡ್, ಬಿಎಸ್‍ವೈ ನಂತರದ ನಾಯಕತ್ವ ಸೃಷ್ಟಿಗೆ ಕೈ ಹಾಕಿದೆ.

    ವಿಶೇಷವೆಂದರೆ ಬಿಎಸ್‍ವೈ ಅವರ ಆಪ್ತರೇ ಉತ್ತರಾಧಿಕಾರಿ ಪ್ರಯೋಗ ಶಾಲೆಯಲ್ಲಿ ಪ್ರಯೋಗಕ್ಕೆ ಒಳಗಾಗುತ್ತಿದ್ದಾರೆ. ಸಿಎಂ ಬಿಎಸ್‍ವೈ ಜೊತೆ ಚರ್ಚಿಸಿಯೇ ಹೈಕಮಾಂಡ್ ಈ ಪ್ರಯೋಗಕ್ಕೆ ಮುಂದಾಗಿದೆ. ಹೀಗಾಗಿ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ್ ಹಾಗೂ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಲು ನಿರ್ಧರಿಸಲಾಗಿದೆ. ಈ ವಿನೂತನ ತಂತ್ರಗಾರಿಕೆಯ ಪ್ರಯೋಗ ಶಾಲೆಯಲ್ಲಿ ಯಾರು ಪಾಸ್ ಆಗುತ್ತಾರೋ ಅವರೇ ರಾಜ್ಯ ಬಿಜೆಪಿಯ ಮುಂದಿನ ಲೀಡರ್ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಈ ನಡುವೆ ಹೈಕಮಾಂಡ್ ಪ್ರಯೋಗದಿಂದ ಇಬ್ಬರು ನಾಯಕರಿಗೆ ಖುಷಿಯಾಗಿದೆ. ಬಿಎಸ್‍ವೈ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಅವರಿಗೆ ನಾಯಕತ್ವ ತಪ್ಪುತ್ತೆ ಎನ್ನುವುದು ಕೆಲವರಿಗೆ ಖುಷಿಗೆ ಕಾರಣವಾಗಿದೆಯಂತೆ. ಆರ್.ಅಶೋಕ್ ಅವರಿಗೆ ನಾಯಕತ್ವ ತಪ್ಪುತ್ತೆ ಎನ್ನುವ ಸಂತಸದಲ್ಲಿ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಇದ್ದಾರೆ ಎನ್ನಲಾಗಿದೆ.