Tag: Herat

  • ಅಫ್ಘಾನಿಸ್ತಾನದಲ್ಲಿ ಸರಣಿ ಭೂಕಂಪ – 4,000 ಗಡಿ ದಾಟಿದ ಸಾವಿನ ಸಂಖ್ಯೆ

    ಅಫ್ಘಾನಿಸ್ತಾನದಲ್ಲಿ ಸರಣಿ ಭೂಕಂಪ – 4,000 ಗಡಿ ದಾಟಿದ ಸಾವಿನ ಸಂಖ್ಯೆ

    ಕಾಬೂಲ್: ಪಶ್ಚಿಮ ಅಫ್ಘಾನಿಸ್ತಾನದಲ್ಲಿ (Afghanistan) ಶನಿವಾರ ಸಂಭವಿಸಿದ ಸರಣಿ ಭೂಕಂಪದಲ್ಲಿ (Earthquake) 4,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

    6.2 ತೀವ್ರತೆಯ 2 ಭೂಕಂಪಗಳಲ್ಲಿ ಸುಮಾರು 2,000 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಅಫ್ಘಾನಿಸ್ತಾನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

    ಇದುವರೆಗಿನ ಸಾವುನೋವುಗಳಿಗೆ ಸಂಬಂಧಿಸಿದಂತೆ ನಾವು ಪಡೆದ ಅಂಕಿಅಂಶಗಳು ದುರದೃಷ್ಟವಶಾತ್ 4,000 ಅಧಿಕ ಜನರನ್ನು ಮೀರಿದೆ. ನಮ್ಮ ಅಂಕಿಅಂಶಗಳ ಪ್ರಕಾರ ಸುಮಾರು 20 ಹಳ್ಳಿಗಳಲ್ಲಿ, ಸರಿಸುಮಾರು 1,980 ರಿಂದ 2,000 ಮನೆಗಳು ಸಂಪೂರ್ಣವಾಗಿ ಕುಸಿದಿವೆ ಎಂದು ವಕ್ತಾರ ಮುಲ್ಲಾ ಸಾಯಿಕ್ ಕಾಬೂಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದನ್ನೂ ಓದಿ: ಯುದ್ಧ ನಾವು ಆರಂಭಿಸಿಲ್ಲ ಆದ್ರೆ ಮುಗಿಸುತ್ತೇವೆ – ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುಡುಗು

    ವಿವಿಧ ಸಂಸ್ಥೆಗಳ 35 ರಕ್ಷಣಾ ತಂಡಗಳಲ್ಲಿ ಒಟ್ಟು 1,000 ಕ್ಕೂ ಹೆಚ್ಚು ರಕ್ಷಕರು ಪೀಡಿತ ಪ್ರದೇಶಗಳಲ್ಲಿ ಪರಿಹಾರ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಹಂಗಾಮಿ ಪ್ರಧಾನಿ ಮೊಹಮ್ಮದ್ ಹಸನ್ ಅಖುಂಡ್ ಅವರು ಹೆರಾತ್ ಪ್ರಾಂತ್ಯದ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದರು.

    ಚೀನಾ ಅಫ್ಘಾನ್ ರೆಡ್ ಕ್ರೆಸೆಂಟ್‌ಗೆ 200,000 ಅಮೆರಿಕನ್ ಡಾಲರ್‌ಗಳನ್ನು ತುರ್ತು ಮಾನವೀಯ ನೆರವಾಗಿ ಅದರ ರಕ್ಷಣೆ ಮತ್ತು ವಿಪತ್ತು ಪರಿಹಾರ ಪ್ರಯತ್ನಗಳಿಗೆ ಸಹಾಯ ಮಾಡಲು ಒದಗಿಸಿದೆ. ಇದನ್ನೂ ಓದಿ: ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ; 60 ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಸಾವು – ಯಾವ ದೇಶದ ಎಷ್ಟು ಮಂದಿ?

    ಶನಿವಾರ ಮಧ್ಯಾಹ್ನ ಹೆರಾತ್ ಪ್ರಾಂತ್ಯ ಮತ್ತು ನೆರೆಯ ಪ್ರದೇಶಗಳಲ್ಲಿ ಭೂಕಂಪಗಳು ಸಂಭವಿಸಿದವು. ಮೊದಲ ಕಂಪನವು ಸ್ಥಳೀಯ ಸಮಯ 11.10 ರ ಸುಮಾರಿಗೆ ಸಂಭವಿಸಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಫ್ಘಾನಿಸ್ತಾನದಲ್ಲಿ ಉದ್ಯಾನವನ, ರೆಸ್ಟೊರೆಂಟ್‌ಗಳಿಗೆ ಕುಟುಂಬ, ಮಹಿಳೆಯರೊಂದಿಗೆ ಹೋಗೋದು ಬ್ಯಾನ್

    ಅಫ್ಘಾನಿಸ್ತಾನದಲ್ಲಿ ಉದ್ಯಾನವನ, ರೆಸ್ಟೊರೆಂಟ್‌ಗಳಿಗೆ ಕುಟುಂಬ, ಮಹಿಳೆಯರೊಂದಿಗೆ ಹೋಗೋದು ಬ್ಯಾನ್

    ಕಾಬೂಲ್: ಅಫ್ಘಾನಿಸ್ತಾನದ (Afghanistan) ಹೆರಾತ್ (Herat) ಪ್ರಾಂತ್ಯದಲ್ಲಿ ಉದ್ಯಾನವನಗಳು (Gardens) ಹಾಗೂ ರೆಸ್ಟೊರೆಂಟ್‌ಗಳಿಗೆ (Restaurant) ಕುಟುಂಬ (Family) ಹಾಗೂ ಮಹಿಳೆಯರು (Women) ಹೋಗುವುದನ್ನು ತಾಲಿಬಾನ್ (Taliban) ನಿಷೇಧಿಸಿದೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ತಾಲಿಬಾನ್ ಮುಖ್ಯವಾಗಿ ಮಹಿಳೆಯರ ಮೇಲೆ ಹಿಡಿತ ಸಾಧಿಸುವುದನ್ನು ಮುಂದುವರಿಸುತ್ತಲೇ ಇದೆ. ಈ ಹಿಂದೆ ಪಾರ್ಕ್, ಜಿಮ್, ವಿಶ್ವವಿದ್ಯಾಲಯಗಳಿಗೆ ಮಹಿಳೆಯರು ಹೋಗುವುದನ್ನು ನಿಷೇಧಿಸಿದ ತಾಲಿಬಾನ್ ಇದೀಗ ಕುಟುಂಬದೊಂದಿಗೂ ಉದ್ಯಾನವನ ಹಾಗೂ ರೆಸ್ಟೊರೆಂಟ್‌ಗಳಿಗೆ ಹೋಗುವುದನ್ನು ನಿಷೇಧಿಸಿದೆ.

    ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರದೇಶದಲ್ಲಿ ತಾಲಿಬಾನ್ ಲಿಂಗ ಪ್ರತ್ಯೇಕತೆಯ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಈಗ ಪುರುಷರು ಫ್ಯಾಮಿಲಿ ರೆಸ್ಟೊರೆಂಟ್‌ಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಊಟ ಮಾಡುವಂತಿಲ್ಲ. ಮಾತ್ರವಲ್ಲದೇ ಪುರುಷರು ಹಾಗೂ ಮಹಿಳೆಯರು ಒಟ್ಟಿಗೆ ಉದ್ಯಾನವನಕ್ಕೂ ಹೋಗುವಂತಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಮುಸ್ಲಿಮರು ಭಾರತದಲ್ಲಿ ಚೆನ್ನಾಗೇ ಇದ್ದಾರೆ: ಪಾಶ್ಚಿಮಾತ್ಯ ದೇಶಗಳ ವಿರುದ್ಧ ಸೀತಾರಾಮನ್ ಕಿಡಿ

    ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರು ಹಿಜಬ್ ಅನ್ನು ಸರಿಯಾಗಿ ಧರಿಸದ ಕಾರಣ ಹಾಗೂ ಇಂತಹ ಪ್ರದೇಶಗಳಲ್ಲಿ ಲಿಂಗ ಮಿಶ್ರಣದ ಕಾರಣದಿಂದಾಗಿ ಈ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೆಸ್ಟೊರೆಂಟ್‌ಗಳಲ್ಲಿ ಊಟಕ್ಕೆ ನಿಷೇಧ ಹೆರಾತ್ ಪ್ರದೇಶದಲ್ಲಿ ಮಾತ್ರವೇ ಅನ್ವಯಿಸುತ್ತದೆ. ಇಂತಹ ಆವರಣಗಳು ಪರುಷರಿಗೆ ತೆರೆದಿರುತ್ತದೆ ಎಂದು ವರದಿಗಳು ತಿಳಿಸಿವೆ.

    ಈ ಹಿಂದೆ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಪುರುಷರು ಹಾಗೂ ಮಹಿಳೆಯರು ವಿವಿಧ ದಿನಗಳಲ್ಲಿ ಉದ್ಯಾನವನಕ್ಕೆ ಭೇಟಿ ನೀಡಬಹುದು ಎಂದು ತಿಳಿಸಿತ್ತು. ಇದರ ಪ್ರಕಾರ ಗುರುವಾರ, ಶುಕ್ರವಾರ ಮತ್ತು ಶನಿವಾರ ಉದ್ಯಾನವನಗಳಲ್ಲಿ ಮಹಿಳೆಯರಿಗೆ ಹೋಗಲು ಅವಕಾಶವಿದ್ದು, ಭಾನುವಾರ, ಸೋಮವಾರ, ಮಂಗಳವಾರ ಹಾಗೂ ಬುಧವಾರ ಪುರುಷರಿಗೆ ಮಾತ್ರವೇ ತೆರೆಯಲಾಗುತ್ತದೆ ಎಂದು ತಿಳಿಸಲಾಗಿತ್ತು. ಇದನ್ನೂ ಓದಿ: ಉದ್ಯೋಗಿಯಿಂದಲೇ ಬ್ಯಾಂಕ್‌ನಲ್ಲಿ ಗುಂಡಿನ ದಾಳಿ – 5 ಮಂದಿ ಸಾವು, 9 ಮಂದಿಗೆ ಗಾಯ

  • ಅಫ್ಘಾನಿಸ್ತಾನದ ಮಸೀದಿಯಲ್ಲಿ ಸ್ಫೋಟ – ಧರ್ಮಗುರು ಸೇರಿ ಹಲವು ನಾಗರಿಕರ ಸಾವು

    ಅಫ್ಘಾನಿಸ್ತಾನದ ಮಸೀದಿಯಲ್ಲಿ ಸ್ಫೋಟ – ಧರ್ಮಗುರು ಸೇರಿ ಹಲವು ನಾಗರಿಕರ ಸಾವು

    ಕಾಬೂಲ್: ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದ ಮಸೀದಿಯಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ತಾಲಿಬಾನ್ ಪರ ಉನ್ನತ ಮಟ್ಟದ ಧರ್ಮಗುರು ಸೇರಿದಂತೆ ಹಲವು ನಾಗರಿಕರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

    ವರದಿಗಳ ಪ್ರಕಾರ ಹೆರಾತ್ ಪ್ರಾಂತ್ಯದ ಗುಜರ್ಗಾ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ. ಶುಕ್ರವಾರದ ಪ್ರಾರ್ಥನೆಯ ಬಳಿಕ ಆತ್ಮಹತ್ಯಾ ಬಾಂಬರ್‌ನಿಂದ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದ್ದು, ಸ್ಫೋಟದಲ್ಲಿ ಮಸೀದಿಯ ಇಮಾಮ್ ಮೌಲಾವಿ ಮುಜೀಬ್ ರೆಹಮಾನ್ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ನಲ್ಲಿ ಮೋದಿ ವಿರುದ್ಧ ಆಕ್ರೋಶ – ಮೋದಿ ಮೋಸ, ಗೋ ಬ್ಯಾಕ್ ಮೋದಿ ಅಭಿಯಾನ

    ಸ್ಫೋಟದಲ್ಲಿ ಹಲವು ನಾಗರಿಕರೂ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಆದರೆ ಮೃತಪಟ್ಟವರ ಸಂಖ್ಯೆಯ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇದುವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ಗೆ ಮಧ್ಯಂತರ ಜಾಮೀನು ಮಂಜೂರು

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ರಾಯಭಾರ ಕಚೇರಿ ಮೇಲೆ ತಾಲಿಬಾನ್ ದಾಳಿ

    ಭಾರತೀಯ ರಾಯಭಾರ ಕಚೇರಿ ಮೇಲೆ ತಾಲಿಬಾನ್ ದಾಳಿ

    ಕಾಬೂಲ್: ಅಫ್ಘಾನಿಸ್ತಾನವನ್ನು ಹಿಡಿತಕ್ಕೆ ಪಡೆದಿರುವ ತಾಲಿಬಾನ್ ಭಯೋತ್ಪಾದಕರ ಅಟ್ಟಹಾಸ ನಿಂತಿಲ್ಲ. ಈಗ ಭಾರತೀಯ ರಾಯಭಾರ ಕಚೇರಿಗೆ ದಾಳಿ ಮಾಡಿ ದಾಖಲೆಗಳನ್ನು ಹುಡುಕಾಡಿದ್ದಾರೆ ಎಂದು ವರದಿಯಾಗಿದೆ.

    ಹೇರತ್ ಮತ್ತು ಕಂದಹಾರ್ ನಲ್ಲಿರುವ  ಭಾರತದ ರಾಯಭಾರ ಕಚೇರಿಗೆ ದಾಳಿ ಮಾಡಿರುವ ತಾಲಿಬಾನ್ ಉಗ್ರರು ದಾಖಲೆಗಳಿಗಾಗಿ ಹುಡುಕಾಡಿದ್ದಾರೆ ಮತ್ತು ರಾಯಭಾರ ಕಚೇರಿಯಲ್ಲಿದ್ದ ವಾಹನಗಳನ್ನು ಕೊಂಡೊಯ್ದಿದ್ದಾರೆ. ಕಾಬೂಲ್ ಮತ್ತು ಜಲಾಲಬಾದ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿ ನಡೆದಿದ್ಯಾ ಇಲ್ಲವೋ ಎನ್ನುವುದು ತಿಳಿದು ಬಂದಿಲ್ಲ.

    ಭಯೋತ್ಪಾದಕ ಗುಂಪಿನ ಮುಖ್ಯಸ್ಥ ಮತ್ತು ತಾಲಿಬಾನ್‍ನ ಉಪನಾಯಕ ಸಿರಾಜುದ್ದೀನ್ ಹಕ್ಕಾನಿಯ ಸಹೋದರ ಅನಸ್ ಹಕ್ಕಾನಿ ನೇತೃತ್ವದ ಹಕ್ಕಾನಿ ನೆಟ್‍ವರ್ಕ್‍ನ ಸುಮಾರು 6 ಸಾವಿರ ಕಾರ್ಯಕರ್ತರು ರಾಜಧಾನಿಯಾದ ಕಾಬೂಲ್ ಮೇಲೆ ಹಿಡಿತ ಸಾಧಿಸಿದ್ದಾರೆ ಎಂದು ವರದಿಯಾಗಿದೆ.

    ಅಫ್ಘಾನಿಸ್ತಾನದ ಗುಪ್ತಚರ ಸಂಸ್ಥೆ ಎನ್‍ಡಿಎಸ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದವರಿಗೆ ಮನೆ ಮನೆಯಲ್ಲೂ ತಾಲಿಬಾನ್ ಬಂದೂಕುಧಾರಿಗಳು ಹುಡುಕಾಡುತ್ತಿದ್ದಾರೆ.

    ಅಫ್ಘಾನಿಸ್ತಾನದಲ್ಲಿ ಇನ್ನೂ 450 ಭಾರತೀಯರು ಸಿಲುಕಿಕೊಂಡಿದ್ದು ಅವರನ್ನು ಭಾರತಕ್ಕೆ ವಾಪಸ್ ಕರೆತರುವುದೇ ಈಗ ಸರ್ಕಾರಕ್ಕೆ ಸವಾಲಾಗಿದೆ. ಅಮೆರಿಕ ಮತ್ತು ಇತರೆ ರಾಯಭಾರ ಕಚೇರಿಗಳ ಮೂಲಕ ಭಾರತೀಯರನ್ನು ಕರೆತರುವ ಪ್ರಯತ್ನವನ್ನು ವಿದೇಶಾಂಗ ಸಚಿವಾಲಯ ಮಾಡುತ್ತಿದೆ. ಇದನ್ನೂ ಓದಿ: ವಿಮಾನದಿಂದ ಬಿದ್ದವರ ಗುರುತು ಪತ್ತೆ- ಮೂವರಲ್ಲಿ ಒಬ್ಬ ಯುವ ಫುಟ್‍ಬಾಲ್ ಆಟಗಾರ 

    ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡು ನಾಲ್ಕು ದಿನವಾದ್ರೂ ಇನ್ನೂ ಅಲ್ಲಿ ಸರ್ಕಾರ ರಚನೆ ಆಗಿಲ್ಲ. ಅಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಿಮಾನ ನಿಲ್ದಾಣಕ್ಕೆ ಕರೆತರುವುದೇ ಹರಸಾಹಸವಾಗಿದೆ. ಪ್ರತಿ ಚೆಕ್‍ಪೋಸ್ಟ್‍ಗಳಲ್ಲೂ ಬಂದೂಕುಧಾರಿ ತಾಲಿಬಾನಿಗಳು ತಪಾಸಣೆ ಮಾಡ್ತಿರುವ ಕಾರಣ ತಾಲಿಬಾನಿಗಳ ಅಧಿಕೃತ ಒಪ್ಪಿಗೆ ಸಿಗದ ಹೊರತು ಜೀವಭಯದಿಂದಾಗಿ ಕಾಬೂಲ್‍ನಲ್ಲಿ ಸಿಲುಕೊಂಡಿರುವ ಕೆಲವು ಭಾರತೀಯರು ಮನೆಬಿಟ್ಟು ಹೊರಬರಲು ಸಿದ್ಧರಿಲ್ಲ.

    ಕಾಬೂಲ್ ವಿಮಾನ ನಿಲ್ದಾಣದಿಂದ ಭಾರತದ ರಾಯಭಾರ ಕಚೇರಿಗೆ 10 ಕಿಲೋ ಮೀಟರ್ ದೂರವಿದೆ. ವಿಮಾನ ನಿಲ್ದಾಣಕ್ಕೆ ಅಮೆರಿಕ ಸೈನಿಕರ ಪಹರೆ ಇದ್ದರೂ ಹೊರಗಿನ ಭದ್ರತೆ ಅಮೆರಿಕ ಸೈನಿಕರ ಕೈಯಲ್ಲಿ ಇಲ್ಲ. ಹೀಗಾಗಿ ತಾಲಿಬಾನಿಗಳ ಸ್ಥಳೀಯ ನಾಯಕರೊಂದಿಗೆ ಸಂಪರ್ಕ ಸಾಧಿಸುವುದು ಕೂಡಾ ಸವಾಲಾಗಿದೆ ಎಂದು ವರದಿ ಆಗಿದೆ. ಇದನ್ನೂ ಓದಿ: ಪ್ರಜಾಪ್ರಭುತ್ವ ಸರ್ಕಾರ ಇಲ್ಲ, ಷರಿಯಾ ಕಾನೂನುಗಳೇ ಜಾರಿ – ತಾಲಿಬಾನ್

    ನಾಲ್ಕು ದಿನಗಳ ಹಿಂದೆ ಭಾರತದ ರಾಜತಾಂತ್ರಿಕ ಸಿಬ್ಬಂದಿ, ಸೈನಿಕರನ್ನು ಕರೆತರುವ ವೇಳೆ ಚೆಕ್‍ಪೋಸ್ಟ್ ನಲ್ಲಿ ತಾಲಿಬಾನಿಗಳು ತಡೆಹಾಕಿದ್ದರು. ಆ ಬಳಿಕ ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಕರೆತರಲು ಭಾರತಕ್ಕೆ 1 ದಿನ ಹಿಡಿದಿತ್ತು.