Tag: hennuru police station

  • ಸಾಯಿ ಗೋಲ್ಡ್ ಪ್ಯಾಲೇಸ್‌ನಿಂದ ಚಿನ್ನ ದೋಚಿದ್ದ ಕಳ್ಳರು ಅರೆಸ್ಟ್ – 63 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

    ಸಾಯಿ ಗೋಲ್ಡ್ ಪ್ಯಾಲೇಸ್‌ನಿಂದ ಚಿನ್ನ ದೋಚಿದ್ದ ಕಳ್ಳರು ಅರೆಸ್ಟ್ – 63 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

    ಬೆಂಗಳೂರು: ಜೆಡಿಎಸ್ ಪರಿಷತ್ ಸದಸ್ಯ ಶರವಣ (Sharavana) ಮಾಲೀಕತ್ವದ ಸಾಯಿ ಗೋಲ್ಡ್ ಪ್ಯಾಲೇಸ್‌ನಿಂದ (Sai Gold Palace) ಚಿನ್ನ ಕದ್ದಿದ್ದ ಆರೋಪಿಗಳನ್ನು ಹಲಸೂರು ಗೇಟ್ (Halasuru Gate) ಪೊಲೀಸರು ಬಂಧಿಸಿ 63 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

    ಮೌನೇಶ್, ಮಹಾವೀರ್ ಬಂಧಿತ ಆರೋಪಿಗಳು. ಮೌನೇಶ್ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಕಳೆದ 15 ದಿನಗಳ ಹಿಂದೆ ಒಂದೂವರೆ ಕೆ.ಜಿ. ಚಿನ್ನ ಕೊಟ್ಟು ಹಾಲ್‌ಮಾರ್ಕ್ ಹಾಕಿಸಿಕೊಂಡು ಬರಲು ಕಳಿಸಿದ್ದಾರೆ. ಮೌನೇಶ್ ಚಿನ್ನ ತೆಗೆದುಕೊಂಡು ರಾಜಸ್ಥಾನಕ್ಕೆ ಪರಾರಿಯಾಗಿದ್ದ. ಈ ಘಟನೆ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುಮತಿ, ಅನುದಾನ ನೀಡಿ: ಕೇಂದ್ರಕ್ಕೆ ಡಿಕೆಶಿ ಮನವಿ

    ಕದ್ದ ಚಿನ್ನ ಮಾರಾಟ ಮಾಡಲು ಬಾರದೇ ಇದ್ದ ಕಾರಣ ಮೌನೇಶ್, ಮಹಾವೀರ್ ಎಂಬುವನ ಮನೆಯಲ್ಲಿ ಇಟ್ಟಿದ್ದ. ಎರಡು ದಿನ ಬಿಟ್ಟು ಸ್ನೇಹಿತ ಮಹಾವೀರ್ ಮನೆ ಮೇಲೆ ಪೊಲೀಸರು ರೇಡ್ ಮಾಡಿ ಚಿನ್ನ ತಗೆದುಕೊಂಡು ಹೋಗಿದ್ದಾರೆ ಎಂದು ಮೌನೇಶ್ ಬಳಿ ಕಥೆ ಕಟ್ಟಿದ್ದಾನೆ.

    ಹಲಸೂರು ಗೇಟ್ ಪೊಲೀಸರು ರಾಜಸ್ಥಾನದಲ್ಲಿ ಆರೋಪಿ ಮೌನೇಶ್‌ನನ್ನ ಬಂಧಿಸಿ ತನಿಖೆಗೆ ಒಳಪಡಿಸಿದಾಗ ಕದ್ದ ಚಿನ್ನ ಮಹಾವೀರ್‌ಗೆ ಕೊಟ್ಟಿರೋದಾಗಿ ಹೇಳಿದ್ದ. ಮಹಾವೀರ್‌ನನ್ನ ಬಂಧನ ಮಾಡಿ ವಿಚಾರಣೆ ಮಾಡಿದಾಗ ಮೌನೇಶ್‌ಗೆ ಗೊತ್ತಾಗದೆ ಬೇರೆ ಕಡೆ ಚಿನ್ನ ಮಾರಾಟ ಮಾಡಿ ಜಮೀನಿನ ಮೇಲೆ ಹಣ ಹಾಕಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ 63 ಲಕ್ಷ ರೂ. ಮೌಲ್ಯದ 750 ಗ್ರಾಂ ಚಿನ್ನಾಭರಣವನ್ನ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಕೋರ್ಟ್ ಹಾಲ್‌ನಲ್ಲಿ ಪವಿತ್ರಾ, ದರ್ಶನ್ ದೂರ ದೂರಾ – ಕಣ್ಣೀರಿಡುತ್ತ ತೆರಳಿದ ಗೆಳತಿ!

    ಮನೆಗಳ್ಳತನ ಮಾಡುತ್ತಿದ್ದ ಕಳ್ಳರು ಅಂದರ್

    ಕದ್ದ ಬೈಕ್‌ನಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

    ಅಂಧ್ರಹಳ್ಳಿ ನಿವಾಸಿಗಳಾಗಿರುವ ಗೋಲ್ಡ್ ವೆಂಕಿ ಅಲಿಯಾಸ್ ವೆಂಕಟೇಶ್, ಶ್ರೀನಿವಾಸ ಅಲಿಯಾಸ್ ಕರಾಟೆ ಸೀನ, ಸಾಗರ್ ಬಂಧಿತ ಆರೋಪಿಗಳು. ಕರಾಟೆ ಸೀನನ ಮೇಲೆ 44 ಕೇಸ್, ವೆಂಕಟೇಶ್ ಮೇಲೆ 8 ಕೇಸ್‌ಗಳು ದಾಖಲಾಗಿವೆ. ಇದನ್ನೂ ಓದಿ: ಪಂಜಾಬ್‌ನ ಆಪ್‌ ಸರ್ಕಾರದಿಂದ ಬುಲ್ಡೋಜರ್ ಅಸ್ತ್ರ – ಡ್ರಗ್ ಮಾಫಿಯಾ ಕಿಂಗ್‌ಗಳ ಮನೆ ನೆಲಸಮ

    ಸಾಗರ್, ವೆಂಕಟೇಶ್‌ನ ಸ್ನೇಹಿತನಾಗಿದ್ದ. ಜೈಲಿಗೆ ಹೋದಾಗ ವೆಂಕಟೇಶ್ ಮತ್ತು ಕರಾಟೆ ಸೀನ ಪರಿಚಯ ಆಗಿತ್ತು. ಬಳಿಕ ಸಾಗರ್ ಮಾತು ಕೇಳಿ ಮೂವರು ಬೈಕ್ ಕಳ್ಳತನ ಮಾಡುತ್ತಿದ್ದರು. ಕದ್ದ ಬೈಕ್‌ಗಳಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳಿಂದ 76 ಗ್ರಾಂ. ಚಿನ್ನಾಭರಣ, 16 ಬೈಕ್‌ಗಳು ವಶಕ್ಕೆ ಪಡೆಯಲಾಗಿದೆ.

    ಮೊಬೈಲ್ ಕಳ್ಳನ ಬಂಧನ
    ಖತರ್ನಾಕ್ ಮೊಬೈಲ್ ಕಳ್ಳ ಪೂಜಾರಿ ವನ್ನೂರುಸ್ವಾಮಿಯನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಗಾರೆ ಕೆಲಸ ಮಾಡುತ್ತಿದ್ದ ಆರೋಪಿ ಶೋರೂಂಗಳಿಗೆ ನುಗ್ಗಿ 14 ಮೊಬೈಲ್ ಕಳ್ಳತನ ಮಾಡಿದ್ದಾನೆ. ವನ್ನೂರುಸ್ವಾಮಿ ಗಾರೆ ಕೆಲಸಕ್ಕೆ ಹೋಗುವಾಗ ಶೋರೂಂಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದನು. ಇದನ್ನೂ ಓದಿ: ಹಣ್ಣು ಹಂಚಿಕೆ ನೆಪದಲ್ಲಿ ಬಾಗಿಲು ಬಡಿದ ಕಳ್ಳರು – ವೃದ್ಧ ದಂಪತಿ ಕೈಕಾಲು ಕಟ್ಟಿ ದರೋಡೆ

  • ನನಗೆ ನೀನು ಬೇಕು ಬಾ ಎಂದ ಇನ್ಸ್‌ಪೆಕ್ಟರ್ ವಿರುದ್ಧವೇ ದೂರು

    ನನಗೆ ನೀನು ಬೇಕು ಬಾ ಎಂದ ಇನ್ಸ್‌ಪೆಕ್ಟರ್ ವಿರುದ್ಧವೇ ದೂರು

    ಬೆಂಗಳೂರು: ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಲು ಹೋದವರಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಕಿರುಕುಳ ನೀಡಿದ ಘಟನೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಹೆಣ್ಣೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಸಂತಕುಮಾರ್ ಆರೋಪಿ. ಹೆಣ್ಣೂರಿನ ಶಕ್ತಿ ನಗರ ನಿವಾಸಿಯೊಬ್ಬರು ತಮ್ಮ ಮನೆಯನ್ನು ಕೆಲ ವರ್ಷಗಳ ಹಿಂದೆ ವರಲಕ್ಷ್ಮಿಗೆ ಲೀಸ್ ನೀಡಿದ್ದರು. ಲೀಸ್ ಹಣವಾಗಿ 7 ಲಕ್ಷ ರೂ. ಹಣವನ್ನು ಪಡೆದಿದ್ದರು. ಆದರೆ ನೀರಿನ ಬಿಲ್ ಮಾತ್ರ 1 ವರ್ಷದಿಂದ ಕಟ್ಟಿರಲಿಲ್ಲ. ವಾಟರ್ ಬಿಲ್ ಕೇಳಲು ಮನೆ ಮಾಲೀಕರಾದ ಸಂತ್ರಸ್ತೆ ಹೋಗಿದ್ದರು.

    ಈ ವೇಳೆ ಗಲಾಟೆ ತೆಗೆದು ವರಲಕ್ಷ್ಮೀ ಹಾಗೂ ಅವರ ಗುಂಪು ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಕು ಹಾಕಿ, ಕೈ ಮುರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಆರೋಪಿಗಳಿಂದ ಸಂತ್ರಸ್ತೆ ತಪ್ಪಿಸಿಕೊಂಡು ಬಂದಿದ್ದಾರೆ.

    ನೊಂದ ಸಂತ್ರಸ್ತೆ ಕೆ.ಸಿ. ಜನರಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಪಡೆದು ದೂರು ನೀಡಲು ಹೆಣ್ಣೂರು ಪೊಲೀಸ್ ಠಾಣೆಗೆ ಹೋದರೆ, ದೂರನ್ನು ಪೊಲೀಸರು ಸ್ವೀಕರಿಸಿರಲಿಲ್ಲ. ಬದಲಿಗೆ ಇನ್ಸ್‌ಪೆಕ್ಟರ್ ವಸಂತ ಕುಮಾರ್ ದುರ್ವತನೆ ತೋರಿದ್ದಾರೆ. ಇದನ್ನೂ ಓದಿ: ಮಸೀದಿಯನ್ನು ಒಡೆದು ಹಾಕಿ ಎಂದ ಕಾಳಿ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು

    POLICE JEEP

    ಮಹಿಳೆ ಅನ್ನೋದು ನೋಡದೇ ಅಸಭ್ಯವಾಗಿ ವರ್ತಿಸಿದ್ದಾರೆ. ಜೊತೆಗೆ ನನಗೆ ನೀನು ಬೇಕು ಬಾ ಎಂದು ಅಸಭ್ಯ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನೊಂದ ಮಹಿಳೆ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ. ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ, ಅತ್ಯಾಚಾರ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಘಟನೆ ಕುರಿತು ನ್ಯಾಯಕ್ಕಾಗಿ ನೊಂದ ಮಹಿಳೆ ಅಲೆಯುತ್ತಿದ್ದಾಳೆ. ಇದನ್ನೂ ಓದಿ:  ಗಾಂಜಾ ಮಾರುತ್ತಿದ್ದ ಪೊಲೀಸರನ್ನು ಅರೆಸ್ಟ್ ಮಾಡಿದ್ದ ಇನ್‌ಸ್ಪೆಕ್ಟರ್ ಸಸ್ಪೆಂಡ್