Tag: Hennuru

  • ಅಡಿಟರ್ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಅಂದೇ ಕೆಲ್ಸ ಮುಗಿಸಲು ಒತ್ತಡ ಹಾಕಿದ್ದಕ್ಕೆ ಸಹೋದ್ಯೋಗಿಗಳಿಂದಲೇ ಸುಪಾರಿ

    ಅಡಿಟರ್ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಅಂದೇ ಕೆಲ್ಸ ಮುಗಿಸಲು ಒತ್ತಡ ಹಾಕಿದ್ದಕ್ಕೆ ಸಹೋದ್ಯೋಗಿಗಳಿಂದಲೇ ಸುಪಾರಿ

    ಬೆಂಗಳೂರು: ನಗರದ ಹೆರಿಟೇಜ್ ಹಾಲು ಉತ್ಪನ್ನಗಳ ಕಂಪನಿಯ ಆಡಿಟರ್ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆ ದಿನದ ಕೆಲಸಗಳನ್ನು ಅಂದೇ ಮುಗಿಸಿ, ಬಾಕಿ ಇಡಬೇಡಿ ಎಂದು ಸದಾ ಒತ್ತಡ ಹಾಕುತ್ತಿದ್ದ ಆಡಿಟರ್ ಮೇಲೆ ಹಲ್ಲೆ ನಡೆಸಲು ಸಹೋದ್ಯೋಗಿಗಳೇ ಸುಪಾರಿ ಕೊಟ್ಟಿರುವುದು ಬೆಳಕಿಗೆ ಬಂದಿದೆ.

    ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮಾಶಂಕರ್ ಹಾಗೂ ವಿನೀಶ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಕಂಪನಿಯ ಕೆಲಸಗಾರ ಉಮಾಶಂಕರ್ ಸುಪಾರಿ ಕೊಟ್ಟು ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ. ಕಂಪನಿಯ ಅಡಿಟರ್ ಸುರೇಶ್ ಎಂಬವರು ಹೆಚ್ಚು ಒತ್ತಡ ಹಾಕುತ್ತಿದ್ದರು. ಇದೇ ಕಾರಣಕ್ಕೆ ಕೃತ್ಯ ಎಸಗಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ಸೋನುಗೆ ಜಾಮೀನು: ಇಂದು ಜೈಲಿನಿಂದ ಬಿಡುಗಡೆ

    ಕಳೆದ ಒಂದು ವರ್ಷದ ಹಿಂದೆ ಕಂಪನಿಗೆ ಆಡಿಟಿಂಗ್‍ಗಾಗಿ ಸುರೇಶ್ ಸೇರಿದ್ದರು. ಕೆಲಸಕ್ಕೆ ಸೇರಿದ್ದ ಸುರೇಶ್ ಆರೋಪಿಗಳಿಗೆ ಆ ದಿನದ ಕೆಲಸ ಅಂದೇ ಮುಗಿಸುವಂತೆ ಒತ್ತಡ ಹೇರುತ್ತಿದ್ದರು. ಈ ಹಿಂದೆ ಹಲವು ದಿನ ಸಮಯ ಪಡೆದು ಕೆಲಸ ಮಾಡುತಿದ್ದ ಆರೋಪಿಗಳ ವಿರುದ್ಧ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅವರ ಸೂಚನೆ ಮುಖಾಂತರ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಿದ್ದರು. ಇದೇ ಕಾರಣಕ್ಕೆ ಸುಪಾರಿ ಕೊಟ್ಟು ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

    ಬಂಧಿತ ಆರೋಪಿಗಳು ಮಾಜಿ ಉದ್ಯೋಗಿ ಮುಖಾಂತರ ಕೆಆರ್ ಪುರಂನ ಸಂದೀಪ್ ಎಂಬಾತನನ್ನು ಸಂಪರ್ಕಿಸಿ, ಆತನ ಗೆಳೆಯರಿಗೆ ಸುಪಾರಿ ಕೊಡಲಾಗಿತ್ತು. ಅದರಂತೆ ರಸ್ತೆಯಲ್ಲಿ ಹೊಗುತ್ತಿದ್ದ ಸುರೇಶ್ ಮೇಲೆ ಹಣ ಪಡೆದಿದ್ದ ಆರೋಪಿಗಳು ರಾಡ್‍ನಿಂದ ಹಲ್ಲೆ ನಡೆಸಿದ್ದರು. ವಿಡಿಯೋ ವೈರಲ್ ಆದ ಬಳಿಕ ಆರೋಪಿಗಳನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: RCB ಸೋಲಿಗೆ ದೊಡ್ಮನೆ ಸೊಸೆ ಟಾರ್ಗೆಟ್: ಪೊಲೀಸ್ ಆಯುಕ್ತರಿಗೆ ದೂರು

  • ನಡು ರಸ್ತೆಯಲ್ಲೇ ಮಹಿಳೆಯ ಬಟ್ಟೆ ಬಿಚ್ಚಲು ಯತ್ನಿಸಿದ ಕಾಮುಕ

    ನಡು ರಸ್ತೆಯಲ್ಲೇ ಮಹಿಳೆಯ ಬಟ್ಟೆ ಬಿಚ್ಚಲು ಯತ್ನಿಸಿದ ಕಾಮುಕ

    ಬೆಂಗಳೂರು: ಗಾಂಜಾ ಗುಂಗಿನಲ್ಲಿದ್ದ ಕಾಮುಕನೊಬ್ಬ ಹಾಡಹಗಲೇ ನಡು ರಸ್ತೆಯಲ್ಲಿ ಮಹಿಳೆಯ ಬಟ್ಟೆ ಬಿಚ್ಚಲು ಯತ್ನಿಸಿದ ಘಟನೆ ಬೆಂಗಳೂರಿನ ಕಲ್ಯಾಣನಗರ ಸಮೀಪ ಚಲ್ಲಕೆರೆ ಬಳಿ ನಡೆದಿದೆ.

    ಇದೇ ತಿಂಗಳ 8 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮನೆಯಿಂದ ಅಂಗಡಿಗೆ ತೆರಳುತ್ತಿದ್ದ ಮಹಿಳೆಯನ್ನು ಹಿಂಬದಿಯಿಂದ ಬಂದು ಕೈ ಹಿಡಿದ ಕಾಮುಕ ಆಕೆಯ ಬಟ್ಟೆ ಬಿಚ್ಚಲು ಯತ್ನಿಸಿದ್ದಾನೆ. ಈ ವೇಳೆ ಬೀದಿ ಕಾಮುಕನಿಂದ ಬಿಡಿಸಿಕೊಳ್ಳಲು ರಸ್ತೆಯಲ್ಲಿ ಮಹಿಳೆ ಕಿರುಚಾಡಿದ್ದಾಳೆ. ಆಗ ಮಹಿಳೆಯ ಕಿರುಚಾಟ ಕೇಳಿ ಸ್ಥಳಕ್ಕೆ ಆಗಮಿಸಿದ ಸುತ್ತಮುತ್ತಲ ನಿವಾಸಿಗಳು ಕಾಮುಕನನ್ನು ಹಿಡಿದು ಸರಿಯಾಗಿ ಥಳಿಸಿದ್ದಾರೆ.

    ಡ್ರಗ್ಸ್ ಹಾಗೂ ಗಾಂಜಾ ಸೇವಿಸಿ ಬೀದಿಯಲ್ಲಿ ಓಡಾಡ್ತಿದ್ದ ಅಸಾಮಿ ಅಮಲಿನಲ್ಲಿ ಮಹಿಳೆಯನ್ನು ಎಳೆದಾಡಿದ್ದಾನೆ. ಘಟನೆ ಬಳಿಕ ಕಾಮುಕನನ್ನು ಹೆಣ್ಣೂರು ಪೊಲೀಸರಿಗೆ ಸಾರ್ವಜನಿಕರು ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ಮಾಡುವ ವೇಳೆ ಆರೋಪಿಯು ಯಲಹಂಕ ಮೂಲದ ಅಲುಮೀನ್ ಎಂಬುದು ಪತ್ತೆಯಾಗಿದೆ. ಗಾಂಜಾ ಸೇವನೆಗಾಗಿ ಹೆಣ್ಣೂರು ಕಡೆ ಬಂದಿದ್ದ ಆರೋಪಿ ಹೆಣ್ಣೂರು ಬಳಿಯ ವಿದೇಶಿ ಪ್ರಜೆಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

    ಘಟನೆ ಕುರಿತು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv