Tag: Hennur

  • ಹಣ ಕೇಳಿದ್ರೆ ರೇಪ್ ಮಾಡೋದಾಗಿ ಬೆದರಿಕೆ – ನೆರೆಯವನೆಂದು ನಂಬಿ 3.71 ಲಕ್ಷ ಸಾಲ ಕೊಡಿಸಿದ್ದವಳಿಗೆ ವಂಚನೆ

    ಹಣ ಕೇಳಿದ್ರೆ ರೇಪ್ ಮಾಡೋದಾಗಿ ಬೆದರಿಕೆ – ನೆರೆಯವನೆಂದು ನಂಬಿ 3.71 ಲಕ್ಷ ಸಾಲ ಕೊಡಿಸಿದ್ದವಳಿಗೆ ವಂಚನೆ

    – ನನ್ನ ಜೊತೆ ಮಲಗು ಇಲ್ಲದಿದ್ದರೆ ಗೂಂಡಾಗಳಿಂದ ರೇಪ್ ಮಾಡಿಸುವುದಾಗಿ ಬೆದರಿಸಿದ್ದ ಕಿಡಿಗೇಡಿ

    ಬೆಂಗಳೂರು: ಕಷ್ಟದಲ್ಲಿದ್ದ ನೆರೆಯವನನ್ನು ನಂಬಿ 3.71 ಸಾಲ ಕೊಡಿಸಿದ್ದವಳಿಗೆ ವಂಚಿಸಿ, ಹಣ ವಾಪಸ್ ಕೇಳಿದರೆ ರೇಪ್ ಮಾಡ್ತೀನಿ ಎಂದು ವ್ಯಕ್ತಿಯೋರ್ವ ಬೆದರಿಕೆ ಹಾಕಿರುವ ಘಟನೆ ಹೆಣ್ಣೂರು (Hennuru) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಆರೋಪಿಯನ್ನು ಚಾರ್ಲ್ಸ್ ರಿಚರ್ಡ್ಸ್ ಎಂದು ಗುರುತಿಸಲಾಗಿದೆ. ನೆರೆಯವನೆಂದು ನಂಬಿ ಓರ್ವ ಯುವತಿ 3.71 ಲಕ್ಷ ಸಾಲ ಮಾಡಿಸಿಕೊಟ್ಟಿದ್ದು, ಬಳಿಕ ಹಣ ವಾಪಸ್ ಕೇಳಿದಾಗ ವಂಚಿಸಿದ್ದಲ್ಲದೇ ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿದುಬಂದಿದೆ.ಇದನ್ನೂ ಓದಿ: ಕಾರವಾರ| ಬೆಣ್ಣೆಹೊಳೆಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

    ಹೌದು, ಓರ್ವ ಯುವತಿಗೆ ಪಕ್ಕದ ಮನೆಯವನೊಬ್ಬ ಕಷ್ಟದಲ್ಲಿದ್ದೇನೆ ಎಂದು ಹೇಳಿಕೊಂಡು ಆಕೆಯ ಹೆಸರಿನಲ್ಲಿ 3.71 ಲಕ್ಷ ರೂ. ಸಾಲ ಮಾಡಿಸಿದ್ದಾನೆ. ಅದರಲ್ಲಿ 2.71 ಲಕ್ಷ ರೂ.ಯನ್ನು ಪಡೆದು, ಇಎಂಐ ಮೂಲಕ ಹಣ ಮರುಪಾವತಿ ಮಾಡುವುದಾಗಿ ತಿಳಿಸಿದ್ದಾನೆ. ಮೊದಲೆರಡು ತಿಂಗಳು ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡಿ, ಬಳಿಕ ಅಸಲಿ ಆಟ ಶುರು ಮಾಡಿಕೊಂಡಿದ್ದಾನೆ.

    ಮರುಪಾವತಿ ಮಾಡದೇ ಇದ್ದಾಗ ಯುವತಿ ಆತನ ಬಳಿ ಹಣ ಕೇಳಿದಾಗ ಬೆದರಿಕೆ ಹಾಕಿದ್ದಾನೆ. ಹಣ ಕೇಳಿದ್ರೆ ರೇಪ್ ಮಾಡ್ತೀನಿ. ನನ್ನ ಜೊತೆ ದೈಹಿಕ ಸಂಬಂಧ ಬೆಳೆಸುವವರೆಗೂ ಇಎಂಐ ಕಟ್ಟಲ್ಲ ಎಂದಿದ್ದಾನೆ. ಜೊತೆಗೆ ಇನ್‌ಸ್ಟಾದಲ್ಲಿ ಯುವತಿಯ ಫೋಟೋ ತೆಗೆದು ಮಾರ್ಫ್ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೇ ನೀನು ನನ್ನ ಜೊತೆ ಮಲಗಬೇಕು. ಇಲ್ಲಂದ್ರೆ ಹಣ ವಾಪಸ್ ಕೊಡಲ್ಲ. ಗೂಂಡಾಗಳಿಂದ ರೇಪ್ ಮಾಡಿಸುತ್ತೇನೆ ಅಂತ ನಿರಂತರವಾಗಿ ಹೆದರಿಸಿದ್ದಾನೆ.

    ಕಿರುಕುಳ ತಾಳಲಾರದೇ ಯುವತಿ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಚಾರ್ಲ್ಸ್ ರಿಚರ್ಡ್ ಹಾಗೂ ಆ್ಯಂಡ್ರೂ ಅಗಾಸಿ ಎಂಬುವವರ ವಿರುದ್ಧ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: 3ನೇ ಪತ್ನಿಯಿಂದ ಬರ್ಬರ ಹತ್ಯೆಗೀಡಾದ ಪತಿ – ಮೃತದೇಹನ ಕಂಬಳಿಯಲ್ಲಿ ಸುತ್ತಿ ಬಾವಿಗೆ ಎಸೆದ್ರು

  • ಬಾಬುಸಾಬ್ ಪಾಳ್ಯ ಕಟ್ಟಡ ದುರಂತಕ್ಕೆ ಟ್ವಿಸ್ಟ್ – ಹಳೇ ಕಟ್ಟಡದಲ್ಲಿ ಹೊಸ ಬಿಲ್ಡಿಂಗ್ ನಿರ್ಮಾಣ

    ಬಾಬುಸಾಬ್ ಪಾಳ್ಯ ಕಟ್ಟಡ ದುರಂತಕ್ಕೆ ಟ್ವಿಸ್ಟ್ – ಹಳೇ ಕಟ್ಟಡದಲ್ಲಿ ಹೊಸ ಬಿಲ್ಡಿಂಗ್ ನಿರ್ಮಾಣ

    – 2 ತಿಂಗಳ ಹಿಂದೆಯೇ ನಿಯಮ ಉಲ್ಲಂಘನೆ ಬಗ್ಗೆ ಎಚ್ಚರಿಕೆ ನೀಡಿದ್ದ ಸ್ಥಳೀಯರು

    ಬೆಂಗಳೂರು: ಹೆಣ್ಣೂರು ಬಳಿಯ ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ (Babusapalya Building Collapse) ಪ್ರಕರಣದಲ್ಲಿ ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದ್ದು, ಇನ್ನೂ ಇಬ್ಬರಿಗಾಗಿ ಹುಡುಕಾಟ ನಡೆದಿದೆ. ಈ ಮಧ್ಯೆ ಬಿಬಿಎಂಪಿ (BBMP) ಅಧಿಕಾರಿಗಳು, ಕಟ್ಟಡದ ಮಾಲೀಕನ ನಿರ್ಲಕ್ಷ್ಯದ ವಿಚಾರಗಳು ಒಂದೊಂದೇ ಹೊರಗೆ ಬರುತ್ತಿದೆ.

    ಬಾಬುಸಾಬ್ ಪಾಳ್ಯ ಕಟ್ಟಡ ದುರಂತದಲ್ಲಿ ಈಗಾಗಲೇ ಎಂಟು ಜನ ದಾರುಣಾವಾಗಿ ಸಾವನ್ನಪ್ಪಿದ್ದಾರೆ. ಇನ್ನೂ ಇಬ್ಬರು ಅವಶೇಷಗಳ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಡಿಸಿಎಂ, ಸಚಿವರು, ಶಾಸಕರು, ಲೋಕಾಯುಕ್ತ ನ್ಯಾಯಾಧೀಶರು ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಟ್ಟಡದ ಮಾಲೀಕನ ಕಳಪೆ ಕಾಮಗಾರಿ, ನಿಯಮ ಉಲ್ಲಂಘನೆ ಬಗ್ಗೆ ಕ್ರಮ ಕೈಗೊಳ್ಳುವ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಕಳೆದ ಎರಡು ತಿಂಗಳ ಹಿಂದೆಯೇ ಬಿಬಿಎಂಪಿ ಆಯುಕ್ತರು, ಸೇರಿದಂತೆ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳಿಗೆ ಇಲ್ಲಿನ ಸ್ಥಳೀಯರು ಪತ್ರ ಬರೆದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಬಿ ಖಾತಾ ಇರುವ ಜಾಗದಲ್ಲಿ ಆರು ಅಂತಸ್ತಿನ ಕಟ್ಟಡ ಕಟ್ಟುತ್ತಿರೋದು, ಕಳಪೆ ಕಾಮಗಾರಿ ಕಟ್ಟಡ ಕಟ್ಟುತ್ತಿರುವ ಬಗ್ಗೆ ಸ್ಥಳೀಯರು ಪತ್ರ ಬರೆದು ಎಚ್ಚರಿಸಿದ್ದಾರೆ. ಆದರೆ ಅಧಿಕಾರಿಗಳು ಇದನ್ನು ನಿರ್ಲಕ್ಷಿಸಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ – ಇಂದು ಮಧ್ಯಾಹ್ನ ತೆರೆಯಲಿದೆ ಗರ್ಭಗುಡಿ ಬಾಗಿಲು

    ಕಟ್ಟಡದ ಮಾಲೀಕ ಮುನಿರಾಜು ರೆಡ್ಡಿ, ಕಳೆದ ಎರಡು ವರ್ಷಗಳ ಹಿಂದೆ ಬಿ ಖಾತಾ ಜಾಗದಲ್ಲಿ 40-60 ಅಡಿಯ ಒಂದು ಅಂತಸ್ತಿನ ಬಿಲ್ಡಿಂಗ್ ಖರೀದಿ ಮಾಡಿದ್ದಾರೆ. ಇದೇ ವೇಳೆ ಕಂಟ್ರಾಕ್ಟರ್ ಈ ಕಟ್ಟಡವನ್ನು ನಾನೇ ಕಟ್ಟಿರೋದು, ಕಟ್ಟಡ ತುಂಬಾ ಗಟ್ಟಿಯಾಗಿದೆ ಎಂದು ಮಾಲೀಕನಿಗೆ ಪರಿಚಯ ಮಾಡಿಕೊಟ್ಟಿದ್ದಾನೆ. ಹಳೇ ಕಟ್ಟಡದ ಮೇಲೆಯೇ, ನಾಲ್ಕು ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟುವ ಪ್ಲಾನ್ ಮಾಡಿದ್ದಾರೆ. ಕಟ್ಟಡ ಕಟ್ಟೋಕೆ ಶುರು ಮಾಡಿದ ಬಳಿಕ ನಾಲ್ಕು ಅಂತಸ್ತು ಹೋಗಿ ಆರು ಅಂತಸ್ತು ಕಟ್ಟಿದ್ದಾರೆ. ಅಪಾರ್ಟ್‌ಮೆಂಟ್ ಅಂತಾ ಶುರುವಾಗಿ ಪಿಜಿ ಮಾಡುವ ಪ್ಲಾನ್ ಇತ್ತು ಎಂದು ತಿಳಿದುಬಂದಿದೆ. ಮಾಲೀಕ ಮುನಿರಾಜು ರೆಡ್ಡಿ, ಕಂಟ್ರಾಕ್ಟರ್ ಮುನಿರಾಜುಗೆ ಸಂಪೂರ್ಣ ಜವಾಬ್ದಾರಿ ನೀಡಿ ಬೇಕಾಬಿಟ್ಟಿ ಕಟ್ಟಡ ನಿರ್ಮಿಸಿರೋದು ಅವಘಡಕ್ಕೆ ಕಾರಣ ಎಂಬ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಕಟ್ಟಡ ದುರಂತ – ಮೂವರು ಅರೆಸ್ಟ್‌

    ಸದ್ಯ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಾಲೀಕ ಮುನಿರಾಜು ರೆಡ್ಡಿ, ಮಗ ಭುವನ್ ರೆಡ್ಡಿ, ಕಂಟ್ರಾಕ್ಟರ್ ಮುನಿರಾಜುವನ್ನು ಬಂಧಿಸಲಾಗಿದೆ. ಮತ್ತೊಂದು ಕಡೆ ಸ್ಥಳೀಯ ಎಇಇಯನ್ನು ಅಮಾನತು ಮಾಡಲಾಗಿದೆ. ಆದರೆ ಅಧಿಕಾರಿಗಳು, ಮಾಲೀಕರ ಹಣದಾಸೆ, ನಿರ್ಲಕ್ಷ್ಯಕ್ಕೆ ಜೀವನ ಅರಸಿ ದೂರದ ಊರುಗಳಿಂದ ಬಂದಿದ್ದ ಅಮಾಯಕ ಜೀವಗಳು ಬಲಿಯಾಗಿರೋದು ಮಾತ್ರ ದುರಂತವೇ ಸರಿ.‌ ಇದನ್ನೂ ಓದಿ: ಹಬ್ಬಕ್ಕೆ ಬಂದಿದ್ದ ಯುವಕ ಕೆರೆಯಲ್ಲಿ ಮುಳುಗಿ ಸಾವು?