Tag: Hemavathi Water

  • ತುಮಕೂರಿಗೆ ತೊಂದ್ರೆ ಆಗಲ್ಲ ಅಂದ್ಮೇಲೆನೇ ಹೇಮಾವತಿ ಕೆನಾಲ್ ಕೆಲಸ ಶುರು ಮಾಡಿದ್ದು – ಪರಂ

    ತುಮಕೂರಿಗೆ ತೊಂದ್ರೆ ಆಗಲ್ಲ ಅಂದ್ಮೇಲೆನೇ ಹೇಮಾವತಿ ಕೆನಾಲ್ ಕೆಲಸ ಶುರು ಮಾಡಿದ್ದು – ಪರಂ

    – ಬಿಜೆಪಿಯವರು ಅಂದು ಒಪ್ಪಿಗೆ ಕೊಟ್ಟು, ಇಂದು ವರದಿ ಸರಿಯಿಲ್ಲ ಅಂತಿದ್ದಾರೆ

    ಬೆಂಗಳೂರು: ತುಮಕೂರಿಗೆ (Tumkuru) ತೊಂದರೆ ಆಗಲ್ಲ ಅಂತಾ ತಾಂತ್ರಿಕ ವರದಿ ಕೊಟ್ಟಿದ್ದರು. ಈ ತಾಂತ್ರಿಕ ವರದಿ ಬಂದ ಬಳಿಕವೇ ಕೆಲಸ ಶುರು ಮಾಡಿಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ (G Parameshwar) ಹೇಳಿದರು.

    ತುಮಕೂರು ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ (Hemavathi Express Canal) ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಸಚಿವರು, ತುಮಕೂರು ಎಸ್‌ಪಿಯಿಂದ ದೂರವಾಣಿ ಮೂಲಕ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು, ತುಮಕೂರಿಗೆ ತೊಂದರೆ ಆಗಲ್ಲ ಅಂತಾ ಅಧಿಕಾರಿಗಳು ತಾಂತ್ರಿಕ ವರದಿ ಕೊಟ್ಟಿದ್ದರು. ತಾಂತ್ರಿಕ ವರದಿ ಬಂದ ಬಳಿಕವೇ ಕೆಲಸ ಶುರು ಮಾಡಿದ್ದೇವೆ. ಇದನ್ನ ಬಿಜೆಪಿ ಶಾಸಕರು ಸಹ ಒಪ್ಪಿಕೊಂಡಿದ್ದರು. ಆದರೆ ಈಗ ತಾಂತ್ರಿಕ ವರದಿ ಸರಿ ಇಲ್ಲ ಅಂತಿದ್ದಾರೆ ಎಂದರು. ಇದನ್ನೂ ಓದಿ: ಕುಣಿಗಲ್, ಮಾಗಡಿಗೆ ನೀರು ತರಬೇಕು ಅಂತ ಡಿಸಿಎಂಗೆ ಕಮಿಟ್ಮೆಂಟ್‌ ಇದೆ: ಹೆಚ್.ಸಿ.ಬಾಲಕೃಷ್ಣ

    1,000 ಕೋಟಿ ಕೊಟ್ಟಿದ್ದೇವೆ
    ತಾಂತ್ರಿಕ ಸಮಿತಿ ವರದಿ ಬಳಿಕವೇ ಕಾಮಗಾರಿ ಆರಂಭಿಸಲಾಗಿದೆ. ತಾಂತ್ರಿಕವಾಗಿ ಸಮಸ್ಯೆ ಆಗಲ್ಲ ಎಂದು ವರದಿ ಬಂದಿದೆ. ಉಪ ಮುಖ್ಯಮಂತ್ರಿಯವರು ಸಭೆ ನಡೆಸಿದ್ದರು. ಈ ಸಭೆಯಲ್ಲಿ ತುಮಕೂರು ಬಿಜೆಪಿ ಶಾಸಕರು ಇದ್ದರು. ತುಮಕೂರಿನಿಂದ ರಾಮನಗರಕ್ಕೆ ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ 1000 ಕೋಟಿ ರೂ. ಹಣವನ್ನು ಯೋಜನೆಗೆ ಕೊಟ್ಟಿದ್ದೇವೆ, ಹಣ ಕೂಡ ಬಿಡುಗಡೆ ಆಗಿತ್ತು ಎಂದು ಹೇಳಿದರು. ಇದನ್ನೂ ಓದಿ: ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಕಿಚ್ಚು – ಗುಬ್ಬಿಯಲ್ಲಿ ಪೊಲೀಸ್‌ ಸರ್ಪಗಾವಲು, ರಾಮನಗರಕ್ಕೆ ನೀರು ಹರಿಸಲು ರೈತರ ವಿರೋಧ

    ಆಗ ತೊಂದರೆ ಆಗುತ್ತೆ ಅಂತಾ ಬಿಜೆಪಿ ಶಾಸಕರು, ಎಲ್ಲರೂ ಹೇಳಿದ್ದರು. ಆದಾದ ಬಳಿಕ ಸರ್ಕಾರ ತಾಂತ್ರಿಕ ಸಮಿತಿ ರಚನೆ ಮಾಡಿತ್ತು. ತಾಂತ್ರಿಕ ಸಮಿತಿಯು ತುಮಕೂರಿಗೆ ತೊಂದರೆಯಾಗಲ್ಲ ಎಂದು ವರದಿ ನೀಡಿದ ಬಳಿಕವೇ ಸರ್ಕಾರ ಕೆಲಸ ಶುರು ಮಾಡಿದೆ ಎಂದರು. ಇದನ್ನೂ ಓದಿ: ಅಪ್ಪನಂತೆ ಕುದುರೆ ಸವಾರಿ ಮಾಡಿದ ವಿನೀಶ್ ದರ್ಶನ್- ಫೋಟೋ ವೈರಲ್

    ತುಮಕೂರಿಗೆ ತೊಂದರೆ ಇಲ್ಲ ಅಂತಾ ವರದಿ ಹೇಳಿತ್ತು. ವರದಿಯಲ್ಲಿ ಲಿಂಕ್‌ ಕೆನಾಲ್‌‌ನಿಂದ ತೊಂದರೆ ಆಗುತ್ತದೆ ಎಂದು ಬಂದಿದ್ದರೆ ಮಾಡುತ್ತಿರಲಿಲ್ಲ. ಈಗ ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ವಿರೋಧ ಮಾಡುತ್ತಿದ್ದಾರೆ. ಇವತ್ತಿನ ಪ್ರತಿಭಟನೆ ಬಗ್ಗೆ ವರದಿ ಪಡೆಯುತ್ತೇನೆ. ಮಾಹಿತಿ ಪಡೆದು ಮಾತಾಡುತ್ತೇನೆ ಎಂದರು.

  • ಕುಣಿಗಲ್, ಮಾಗಡಿಗೆ ನೀರು ತರಬೇಕು ಅಂತ ಡಿಸಿಎಂಗೆ ಕಮಿಟ್ಮೆಂಟ್‌ ಇದೆ: ಹೆಚ್.ಸಿ.ಬಾಲಕೃಷ್ಣ

    ಕುಣಿಗಲ್, ಮಾಗಡಿಗೆ ನೀರು ತರಬೇಕು ಅಂತ ಡಿಸಿಎಂಗೆ ಕಮಿಟ್ಮೆಂಟ್‌ ಇದೆ: ಹೆಚ್.ಸಿ.ಬಾಲಕೃಷ್ಣ

    – ನಾವೇನು ಅವರ ಹಕ್ಕನ್ನ ಕಿತ್ತುಕೊಳ್ತಿಲ್ಲ, ನಮ್ಮ ನೀರಿನ ಹಕ್ಕನ್ನು ಕೇಳ್ತಿದ್ದೇವೆ ಎಂದ ಶಾಸಕ
    – ಹೇಮಾವತಿ ಕೆನಾಲ್‌ ಯೋಜನೆ ರೈತರಿಗೆ ಮರಣ ಶಾಸನ; ಸುರೇಶ್‌ ಗೌಡ ಕೆಂಡ

    ರಾಮನಗರ: ಕುಣಿಗಲ್ ಮತ್ತು ಮಾಗಡಿಗೆ ನೀರು ತರಬೇಕು ಅಂತ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರಿಗೆ ಕಮಿಟ್‌ಮೆಂಟ್‌ ಇದೆ. ಆದರೆ ನೀರನ್ನ ರಾಮನಗರ, ಕನಕಪುರಕ್ಕೆ ತೆಗೆದುಕೊಂಡು ಹೋಗ್ತಾರೆ ಅಂತ ಅಪಪ್ರಚಾರ ಆಗ್ತಿದೆ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ (HC Balakrishna) ಅಸಮಾಧಾನ ಹೊರಹಾಕಿದ್ದಾರೆ.

    ರಾಮನಗರದಲ್ಲಿ (Ramanagara) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಲಿಂಕ್‌ (Hemavathi Express Canal Link) ಯೋಜನೆಗೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದರು. ನಮಗೆ ಅಲೋಕೇಷನ್ ಆಗಿರೋ 0.6 ಟಿಎಂಸಿ ನೀರನ್ನ ಮಾತ್ರ ನಾವು ಕೇಳ್ತಿದ್ದೇವೆ. ಅದನ್ನ ತರಲು ಲಿಂಕ್ ಕೆನಾಲ್ ಯೋಜನೆ ಮಾಡಲಾಗ್ತಿದೆ. ಇದರ ಬಗ್ಗೆ ವಿರೋಧಿಗಳು ಅಪಪ್ರಚಾರ ಮಾಡ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಡಿಕೆಶಿ ಇದನ್ನ ಮಂಜೂರು ಮಾಡಿಸಿದ್ರು. ಬಳಿಕ ಸಮ್ಮಿಶ್ರ ಸರ್ಕಾರ ಬಂದಾಗ ಬಿಜೆಪಿಯವ್ರು ವಜಾ ಮಾಡಿದ್ರು. ಈಗ ನಮ್ಮ ಸರ್ಕಾರ ಬಂದ ಮೇಲೆ ಮತ್ತೆ ಮಂಜೂರಾತಿ ಪಡೆದು ಕೆಲಸ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: 

    ಹೋರಾಟ ಮಾಡೋದ್ರಿಂದ ಪ್ರಯೋಜನ ಇಲ್ಲ
    ರಾಜಕೀಯವಾಗಿ ಮಾತ್ರ ಇದನ್ನ ವಿರೋಧ ಮಾಡ್ತಿದ್ದಾರೆ. ಪರಮೇಶ್ವರ್, ಡಿಕೆಶಿ ನೇತೃತ್ವದಲ್ಲಿ ಯೋಜನೆ ಮಾಡ್ತಿದ್ದಾರೆ. ಪ್ರತಿಭಟನೆ ಮಾಡೋದು ಅವರ ಹಕ್ಕು ಆದರೆ ನಾವೆಲ್ಲ ಅಣ್ಣತಮ್ಮಂದಿರು. ತುಮಕೂರಿನ ಹಾಲು ಬೆಂಗಳೂರು, ಕುದೂರು ಭಾಗದಲ್ಲಿ ಮಾರಾಟ ಆಗುತ್ತೆ. ಅದನ್ನ ಮಾರಾಟ ಮಾಡಬೇಡಿ ಅಂತ ನಾವು ನಿಲ್ಲಿಸಲು ಆಗುತ್ತಾ? ಅದನ್ನ ನಿಲ್ಲಿಸಿದ್ರೆ ಆ ಭಾಗದ ರೈತರಿಗೆ ತೊಂದರೆ ಆಗಲ್ವಾ.? ನಾವೇನು ಅವರ ಹಕ್ಕನ್ನ ಕಿತ್ತುಕೊಳ್ತಿಲ್ಲ, ನಮ್ಮ ನೀರಿನ ಹಕ್ಕು ಕೇಳ್ತಿದ್ದೇವೆ. ಹೋರಾಟ ಮಾಡೋದ್ರಿಂದ ಏನು ಪ್ರಯೋಜನ ಇಲ್ಲ ಎಂದರು. ಇದನ್ನೂ ಓದಿ: ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಕಿಚ್ಚು – ಗುಬ್ಬಿಯಲ್ಲಿ ಪೊಲೀಸ್‌ ಸರ್ಪಗಾವಲು, ರಾಮನಗರಕ್ಕೆ ನೀರು ಹರಿಸಲು ರೈತರ ವಿರೋಧ

    ಮುಂದುವರಿದು ನಿಮ್ಮೂರಿನ ಹೆಣ್ಣುಮಕ್ಕಳನ್ನ ನಮ್ಮ ತಾಲೂಕಿಗೆ ಮದುವೆ ಮಾಡಿಕೊಟ್ಟಿದ್ದೀರಿ. ನಿಮ್ಮ ಹೆಣ್ಣುಮಕ್ಕಳ ಬದುಕು ಹಸನಾಗಬೇಕು. ಹಾಗಾಗಿ ಹೋರಾಟಗಾರರು ಯೋಜನೆಗೆ ಸಹಕಾರ ಕೊಡಿ ಅಂತ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ಬಿಎಂಟಿಸಿಯ `ದಿವ್ಯ ದರ್ಶನ’ ವಿಶೇಷ ಟೂರ್ ಪ್ಯಾಕೇಜ್ ಆರಂಭ

    ಕೂಡಲೇ ಯೋಜನೆ ರದ್ದು ಮಾಡಬೇಕು: ಸುರೇಶ್‌ಗೌಡ
    ಇನ್ನೂ ತುಮಕೂರು ಗ್ರಾಮಾಂತರದ ಬಿಜೆಪಿ ಶಾಸಕ ಸುರೇಶ್‌ಗೌಡ ಮಾತನಾಡಿ, ಸರ್ಕಾರ ನಿಷೇದಾಜ್ಞೆ ಜಾರಿ ಮಾಡಿದೆ. ಯಾವಾಗ ಸರ್ಕಾರ ರೈತ ವಿರೋಧಿ ನೀತಿ ಮಾಡುತ್ತೋ ಆಗ ರೈತರು ಹೋರಾಟ ಮಾಡ್ತಾರೆ. ಸರ್ಕಾರ ರೈತರ ನಿರ್ಣಯ ಕೇಳಿ ನಿರ್ಧಾರ ಮಾಡಬೇಕು. ಈಗ ಏಕಾಏಕಿ 10 ತಾಲೂಕುಗಳಿಗೆ ನೀರನ್ನ ಕಡಿತ ಮಾಡಿ ಒಂದೇ ಒಂದು ರಾಮನಗರ ಜಿಲ್ಲೆಗೆ ತೆಗೆದುಕೊಂದು ಹೋಗುತ್ತಿರುವುದಕ್ಕೆ ನಮ್ಮ ವಿರೋಧ ಇದೆ. 2 ವರ್ಷದಿಂದ ಡಿಸಿ ಕಚೇರಿ ಎದುರು ಧರಣಿ ಮಾಡ್ತಿದ್ದೀವಿ. ಪಾದಯಾತ್ರೆ ಮಾಡಿದ್ವಿ, ಪರಮೇಶ್ವರ್ ಮನೆ ಎದುರು ಹೋರಾಟ ಮಾಡಿ ಆಯ್ತು. ಅಧಿವೇಶನದಲ್ಲಿ ಗಲಾಟೆ ಮಾಡಿದೆವು. ಆದ್ರೆ ಸರ್ಕಾರ ಸವಾಲಾಗಿ ತೆಗೆದುಕೊಂಡು ಹೋಗುತ್ತಿದ್ದ, ರೈತರ ಬೀದಿಗೆ ಬಂದಿದ್ದೀವಿ. ಇದು ರೈತರಿಗೆ ಮರಣ ಶಾಸನ, ಕೂಡಲೇ ಈ ಯೋಜನೆ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು – ವಿಜಯಪುರ ರೈಲು ಪ್ರಯಾಣ; ಸೋಮಣ್ಣ ಜೊತೆ ಎಂಬಿಪಿ ಮಾತುಕತೆ

  • ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಕಿಚ್ಚು – ಗುಬ್ಬಿಯಲ್ಲಿ ಪೊಲೀಸ್‌ ಸರ್ಪಗಾವಲು, ರಾಮನಗರಕ್ಕೆ ನೀರು ಹರಿಸಲು ರೈತರ ವಿರೋಧ

    ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಕಿಚ್ಚು – ಗುಬ್ಬಿಯಲ್ಲಿ ಪೊಲೀಸ್‌ ಸರ್ಪಗಾವಲು, ರಾಮನಗರಕ್ಕೆ ನೀರು ಹರಿಸಲು ರೈತರ ವಿರೋಧ

    – ರಸ್ತೆ ತಡೆದು ಪ್ರತಿಭಟನೆ, ಆಕ್ರೋಶ

    ತುಮಕೂರು: ನಗರದಲ್ಲಿ ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ (Hemavathi Express Canal Link) ವಿವಾದ ಭುಗಿಲೆದ್ದಿದೆ. ಕುಣಿಗಲ್ ಹೊರತುಪಡಿಸಿ ಜಿಲ್ಲೆಯ ಉಳಿದ ಭಾಗಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಸರ್ಕಾರವು ವಿವಾದ ಬಗೆಹರಿಸದೇ ಕಾಮಗಾರಿ ಮುಂದುವರೆಸಲು ಮುಂದಾಗಿದ್ದು, ಪ್ರತಿಭಟನೆಗೆ (Protest) ಅವಕಾಶವಿಲ್ಲದಂತೆ ನಿಷೇಧಾಜ್ಞೆ ಹೇರಲಾಗಿದೆ.

    ಇಂದು ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಾವಿರಾರು ರೈತರೂ (Farmers) ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. 144 ಸೆಕ್ಷನ್‌ ನಿಷೇಧಾಜ್ಞೆ ಹೊರತಾಗಿಯೂ ರೈತರ ಆಕ್ರೋಶ ಮುಂದುವರಿದಿದೆ. ಹೀಗಾಗಿ ಗುಬ್ಬಿ, ನಿಟ್ಟೂರು ಸೇರಿದಂತೆ ಹಲವೆಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿದೆ. 10 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, 4 ಡಿವೈಎಸ್‌ಪಿ, 23 ಇನ್ಸ್‌ಪೆಕ್ಟರ್‌ ಸಹಿತ 900 ಪೊಲೀಸರ ನಿಯೋಜನೆ ಮಾಡಲಾಗಿದೆ.

    10ಕ್ಕೂ ಹೆಚ್ಚು ಪ್ರತಿಭಟನಾಕಾರರು ವಶಕ್ಕೆ:
    ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ವಿರೋಧಿಸಿ ಪ್ರತಿಭಟನೆಗೂ ಮುನ್ನವೇ ಪ್ರತಿಭಟನಾಕಾರರನ್ನ ವಶಕ್ಕೆ ಪಡೆಯುವ ಕೆಲಸ ಪೊಲೀಸರು ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ ಸುರೇಶ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ 10ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನ ಗುಬ್ಬಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ರಾಮನಗರಕ್ಕೆ ನೀರು ಹರಿಸಲು ವಿರೋಧ:
    ಇನ್ನೂ ಕೆನಾಲ್‌ ಯೋಜನೆ ಮೂಲಕ ರಾಮನಗರಕ್ಕೆ ನೀರು ಹರಿಸಲು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಗುಬ್ಬಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನ ಹೊತ್ತೊಯ್ಯಲು ತಂದಿದ್ದ ಸಾರಿಗೆ ಬಸ್‌ ಚಕ್ರಗಳ ಗಾಳಿ ತೆಗೆದು ಆಕ್ರೋಶ ಹೊರಹಾಕಿದ್ದಾರೆ. ಬಸ್ಸನ್ನ ಮಗುಚಿಹಾಕಲೂ ಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಶಿವಮೊಗ್ಗೆ-ಬೆಂಗಳೂರು ಹೆದ್ದಾರಿಯಲ್ಲಿ ನಡೆದುಕೊಂಡೇ ನಾಲೆಯತ್ತ ಹೊರಟಿದ್ದಾರೆ. ಪ್ರತಿಭಟನಾಕಾರರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

  • ಕೆಎನ್ ರಾಜಣ್ಣ ಬಾಯಿ ಚಪಲಕ್ಕೆ ಮಾತನಾಡಬಾರದು: ಹೆಚ್.ಸಿ ಬಾಲಕೃಷ್ಣ

    ಕೆಎನ್ ರಾಜಣ್ಣ ಬಾಯಿ ಚಪಲಕ್ಕೆ ಮಾತನಾಡಬಾರದು: ಹೆಚ್.ಸಿ ಬಾಲಕೃಷ್ಣ

    ರಾಮನಗರ: ರಾಜಣ್ಣ (KN Rajanna) ಬಾಯಿ ಚಪಲಕ್ಕೆ, ತಮ್ಮ ತೆವಲು ತೀರಿಸಿಕೊಳ್ಳಲು ಈ ರೀತಿ ಹೇಳಿಕೆ ಕೊಡಬಾರದು ಎಂದು ಮಾಗಡಿ ಶಾಸಕ ಬಾಲಕೃಷ್ಣ (Magadi Balakrishna) ಎಚ್ಚರಿಕೆ ನೀಡಿದ್ದಾರೆ.

    ಮಾಗಡಿಗೆ ಹೇಮಾವತಿ (Hemavathi) ನೀರು ಕೊಡಲ್ಲ ಎಂಬ ಸಚಿವ ರಾಜಣ್ಣ ಹೇಳಿಕೆಗೆ ಬಾಲಕೃಷ್ಣ ಕೆಂಡಾಮಂಡಲವಾಗಿದ್ದಾರೆ. ತುಮಕೂರಿನಲ್ಲಿ (Tumakuru) ಹೈನುಗಾರಿಕೆ ಮಾಡುವ ಜನ ನಮ್ಮ ಕುದೂರಿನಲ್ಲಿ ಹಾಲು ಮಾರಾಟ ಮಾಡುತ್ತಿದ್ದಾರೆ. ತುಮಕೂರು ಹಾಲು ಉತ್ಪನ್ನ ಬೆಂಗಳೂರಿನಲ್ಲಿ ಅರ್ಧ ಭಾಗ, ನಮ್ಮ ಕುದೂರಿನಲ್ಲಿ ಅರ್ಧ ಭಾಗ ಮಾರಾಟ ಆಗುತ್ತಿದೆ. ನಾವು ಅದನ್ನು ಏನಾದರೂ ತಡೆದು ನಿಲ್ಲಿಸಿದ್ರೆ ಹೇಗೆ? ನಿಮ್ಮ ಹಾಲು ಬೇಡ, ನಿಮ್ಮ ನೀರು ಬೇಡ ಅಂತಾ ತಡೆದು ನಿಲ್ಲಿಸಿದ್ರೆ ಅದರಿಂದ ಹಾನಿ ಆಗೋದು ತುಮಕೂರಿನ ರೈತರಿಗೆ. ಅದನ್ನು ನಾವು ಮಾಡಬೇಕಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಯುವಕ, ಯುವತಿ ಸಾವು ಕೇಸ್‌ಗೆ ಟ್ವಿಸ್ಟ್ – ಹುಡ್ಗಿ ಕೊಲೆ ಮಾಡಿ ಹುಡ್ಗ ಸೂಸೈಡ್!

    ರಾಜಣ್ಣ ಅವರು ವಿವೇಚನೆಯಿಂದ ಮಾತನಾಡಬೇಕು. ಅವರು ಹಿರಿಯ ಮಂತ್ರಿಗಳು, ಈ ರೀತಿ ಬಾಲಿಷ ಹೇಳಿಕೆಯನ್ನ ನೀಡಬಾರದು. ಅದೇನೇ ಹೇಳೊದು ಇದ್ದರೂ ಸರ್ಕಾರದ ಹಂತದಲ್ಲಿ ಹೇಳಬೇಕು. ಕೊಡೋದೆ ಇಲ್ಲ, ಬಿಡೋದೆ ಇಲ್ಲ ಅಂದರೆ ಹೇಗೆ? ತುಮಕೂರಿನಿಂದ ಬರುವ ಹಾಲು ನಾವು ನಿಲ್ಲಿಸಿದ್ರೆ ಹೇಗೆ? ಇದು ಒಕ್ಕೂಟದ ವ್ಯವಸ್ಥೆ, ಒಂದೇ ದೇಶ, ಒಂದೇ ರಾಜ್ಯದಲ್ಲಿ ಬದುಕುತ್ತಿದ್ದೇವೆ. ಒಬ್ಬ ಹಿರಿಯ ಸಚಿವರಾಗಿ ಈ ರೀತಿ ಚಿಲ್ಲರೆ ಹೇಳಿಕೆ ಕೊಡಬಾರದು. ತೆವಲು ತೀರಿಸಿಕೊಳ್ಳಲು ಈ ರೀತಿ ಮಾತನಾಡಬಾರದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜಮೀನಿಗೆ ಬಂದ ಜೀವಂತ ಮೊಸಳೆ ಸೆರೆ – ಜೆಸ್ಕಾಂ ಕಚೇರಿ ಬಳಿ ತಂದು ರೈತರ ಪ್ರತಿಭಟನೆ

  • ‘ಹೇಮಾವತಿ’ ನೀರಿಗಾಗಿ ಹೋರಾಟ – ಇಂದು ತುಮಕೂರು ಬಂದ್‌!

    ‘ಹೇಮಾವತಿ’ ನೀರಿಗಾಗಿ ಹೋರಾಟ – ಇಂದು ತುಮಕೂರು ಬಂದ್‌!

    ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್‌ ಕೆನಲ್‌ (Hemavathi Express canal )ಮೂಲಕ ರಾಮನಗರ ಜಿಲ್ಲೆಯ ಮಾಗಡಿ ಶ್ರೀರಂಗ ಏತನೀರಾವರಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗಲು ತುಮಕೂರಲ್ಲಿ (Tumakuru) ವ್ಯಕ್ತವಾಗಿರುವ ವಿರೋಧ ತೀವ್ರಗೊಂಡಿದೆ. ಹೀಗಾಗಿ ನೀರಾವರಿ ಹೋರಾಟ ಸಮಿತಿ ಇಂದು (ಜೂನ್‌ 25ರಂದು) ಜಿಲ್ಲಾ ಬಂದ್‌ ಕರೆ ನೀಡಿದ್ದು, ಹತ್ತಾರು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

    ಮಠಾಧೀಶರು, ವರ್ತಕರು, ವಕೀಲರ ಸಂಘ, ಹೋಟೆಲ್ ಅಸೋಸಿಯೇಷನ್, ವಿವಿಧ ರೈತ, ಕನ್ನಡಪರ ಸಂಘಟನೆಗಳು ಸೇರಿ ಅನೇಕ ಸಂಘಟನೆಗಳು ತುಮಕೂರು ಬಂದ್‌ಗೆ (Tumakuru Bandh) ಬೆಂಬಲ ಸೂಚಿಸಿವೆ. ಬೆಳಗ್ಗೆ 10 ಗಂಟೆಗೆ ನಗರದ ಟೌನ್‌ಹಾಲ್‌ನಿಂದ ಪ್ರತಿಭಟನಾ ಮೆರವಣಿಗೆ ಶುರುವಾಗಲಿದ್ದು, ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಲಾಗುತ್ತದೆ. ಬಳಿಕ ಡಿಸಿಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ. ಇದನ್ನೂ ಓದಿ: ಜೈಲಿನಲ್ಲಿರುವ ನಟ ದರ್ಶನ್ ಭೇಟಿಗೆ ಯಾರಿಗೂ ಅವಕಾಶವಿಲ್ಲ!

    ಇನ್ನೂ ಸರ್ಕಾರಿ ಸಾರಿಗೆ, ಶಾಲಾ-ಕಾಲೇಜು ಸೇರಿದಂತೆ ಇತರೇ ಸರ್ಕಾರಿ ಸೇವೆಗಳು ಎಂದಿನಂತೆ ಇರಲಿವೆ ಎಂದು ಆಡಳಿತ ಸ್ಪಷ್ಟಪಡಿಸಿದೆ. ಸಂಘಟನೆಗಳ ಬಲದಿಂದಾಗಿ ಸ್ವಯಂ ಪ್ರೇರಿತ ಬಂದ್‌ ಇರಲಿದೆ. ಆಟೋಗಳು ರಸ್ತೆಗಿಳಿಯುವುದು ಅನುಮಾನವಾಗಿದ್ದು, ಬಹುತೇಕ ಅಂಗಡಿ-ಮುಂಗಟ್ಟುಗಳು, ಹೋಟೆಲ್‌ಗಳು ಬಾಗಿಲು ತೆರೆಯುವುದಿಲ್ಲ.

    ತುಮಕೂರು ನಗರ ಸೇರಿದಂತೆ 10 ತಾಲ್ಲೂಕುಗಳಲ್ಲೂ ಬಂದ್‌ಗೆ ಸಿದ್ಧತೆ ನಡೆದಿದೆ. ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಹೋರಾಟಗಾರರು ಪ್ರತಿಭಟನೆ ಮಾಡಲಿದ್ದಾರೆ. ಜಿಲ್ಲಾದ್ಯಂತ ಬಂದ್ ಹಿನ್ನೆಲೆ, ಪೊಲೀಸ್ ಇಲಾಖೆಯಿಂದಲೂ ಬಿಗಿಭದ್ರತೆ ನಿಯೋಜಿಸಲಾಗಿದೆ. ಹೇಮಾವತಿ ನಾಲಾ ವಲಯದ ಗುಬ್ಬಿ, ತುರುವೇಕೆರೆ, ತುಮಕೂರಿನಲ್ಲಿ ಬಂದ್ ತೀವ್ರ ಸ್ವರೂಪ ಪಡೆಯೋ ಸಾಧ್ಯತೆಯಿದೆ. ಮೂರು ತಾಲ್ಲೂಕುಗಳಲ್ಲಿ ಯಾವುದೇ ಅಹಿತರಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇದನ್ನೂ ಓದಿ: ಬಹುಕೋಟಿ ಹಗರಣ ಕೇಸ್; ಇಡಿ ತನಿಖೆ ಬೆನ್ನಲ್ಲೇ ಎಸ್‌ಐಟಿಯಿಂದ ಮತ್ತೊಬ್ಬ ಆರೋಪಿ ಬಂಧನ!

    ಮಿಶ್ರ ಪ್ರತಿಕ್ರಿಯೆ:
    ಅಲ್ಲದೇ ಪ್ರತಿಭಟನಾ ನಿರತರು ಬಲವಂತವಾಗಿ ಯಾವುದೇ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಹೀಗಿದ್ದೂ ಕೆಲವರು, ಬೈಕ್‌ ರ‍್ಯಾಲಿ ಮೂಲಕ ಅಂಗಡಿ-ಮುಂಗಟ್ಟುಗಳನ್ನು ಬಂದ್‌ ಮಾಡಿಸುವ ಪ್ರಯತ್ನ ನಡೆದಿದೆ. ಇನ್ನೂ ತುಮಕೂರು ನಗರದ ಸೇರಿದಂತೆ ಜಿಲ್ಲೆಯಾದ್ಯಂತ ವಾಹನ ಸಂಚಾರ ಎಂದಿನಂತೆ ಸಾಗಿದೆ, ಪ್ರತಿಭಟನೆ ಶುರುವಾದ ಬಳಿಕ ಬೆಂಬಲ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಜಪಾನ್‌ ಅನ್ನು ಕಾಡುತ್ತಿದೆ ಮನುಷ್ಯನ ಮಾಂಸ ತಿನ್ನುವ ವೈರಸ್‌ – ಭಾರತಕ್ಕೂ ಇದೆಯಾ ಆತಂಕ?

    ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ:

    • ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ
    • ಸದ್ಯ ಜಲಾಶಯದಲ್ಲಿರುವ ನೀರು – 11.087 ಟಿಎಂಸಿ
    • ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ – 2922.00 ಅಡಿ
    • ಇಂದಿನ ನೀರಿನ ಮಟ್ಟ – 2883.49 ಅಡಿ
    • ಒಳಹರಿವು – 1516 ಕ್ಯೂಸೆಕ್
    • ಹೊರಹರಿವು – 250 ಕ್ಯೂಸೆಕ್

  • ಹೇಮಾವತಿ ನೀರಿಗಾಗಿ ಹಾಸನದಲ್ಲಿ ಬೀದಿಗಿಳಿದ ರೈತರು, ಜೆಡಿಎಸ್ ಮುಖಂಡರು

    ಹೇಮಾವತಿ ನೀರಿಗಾಗಿ ಹಾಸನದಲ್ಲಿ ಬೀದಿಗಿಳಿದ ರೈತರು, ಜೆಡಿಎಸ್ ಮುಖಂಡರು

    ಹಾಸನ: ಇಡೀ ದೇಶವೇ ಕೊರೊನಾದಿಂದ ತತ್ತರಿಸುತ್ತಿದ್ದರೆ ಇತ್ತ ಹಾಸನ ಜಿಲ್ಲೆಯ ರೈತರು ನಮಗೇ ಕುಡಿಯಲು ನೀರಿಲ್ಲದ ಸಮಯದಲ್ಲಿ ಹೇಮಾವತಿ ಅಣೆಕಟ್ಟೆಯಿಂದ ತುಮಕೂರಿಗೆ ನೀರು ಬಿಡಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾಗಿ ನಮಗೂ ನೀರು ಕೊಡಿ ಎಂದು ಜೆಡಿಎಸ್ ಮುಖಂಡರ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಿದ್ದಾರೆ.

    ಸರ್ಕಾರ ಕುಡಿಯುವ ನೀರಿನ ನೆಪದಲ್ಲಿ ಹೇಮಾವತಿ ಅಣೆಕಟ್ಟೆಯಿಂದ ತುಮಕೂರಿಗೆ ನೀರು ಬಿಡಲು ಹೊರಟಿದೆ. ಆದರೆ ಹಾಸನ ಜಿಲ್ಲೆಯಲ್ಲೂ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದ್ದು, ಈ ಬಗ್ಗೆ ಮಾತ್ರ ಯೋಚನೆ ಮಾಡುತ್ತಿಲ್ಲ. ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಮಾಧುಸ್ವಾಮಿ ತುಮಕೂರಿಗೆ ನೀರು ಬಿಡಲು ಹೊರಟಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ.

    ತುಮಕೂರಿಗೆ ನೀರು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ಈ ವೇಳೆ ಹಾಸನ ಜಿಲ್ಲೆಯ ಜನರಿಗೂ ನೀರು ಕೊಡಬೇಕು ಎಂದು ಹಾಸನದ ಕಾರ್ಲೆ ಗ್ರಾಮದಲ್ಲಿ ಹೇಮಾವತಿ ಎಡದಂಡೆ ನಾಲೆ ಪಕ್ಕ ನಿಂತು ಆಕ್ರೋಶ ಹೊರಹಾಕಿದ್ದಾರೆ. ಈಗ ಕೊರೊನಾ ಸಮಯ ಮನೆಯಿಂದ ಅನಾವಶ್ಯಕವಾಗಿ ಹೊರ ಬರಬಾರದು. ಆದರೆ ನಮಗೆ ಕೊರೊನಾಗಿಂತ ನೀರೇ ಮುಖ್ಯವಾಗಿದ್ದು, ಹೀಗಾಗಿ ಅನಿವಾರ್ಯವಾಗಿ ಬೀದಿಗಿಳಿಯಬೇಕಾಗಿದೆ ಎಂದು ರೈತರು ಮತ್ತು ಜೆಡಿಎಸ್ ಮುಖಂಡರು ಕಿಡಿಕಾರಿದರು.

  • ನಿಯಮ ಉಲ್ಲಂಘಿಸಿ ಹೇಮಾವತಿ ನೀರು ಹರಿಸಿದ ಕೃಷ್ಣಪ್ಪ ವಿರುದ್ಧ ಎಫ್‍ಐಆರ್

    ನಿಯಮ ಉಲ್ಲಂಘಿಸಿ ಹೇಮಾವತಿ ನೀರು ಹರಿಸಿದ ಕೃಷ್ಣಪ್ಪ ವಿರುದ್ಧ ಎಫ್‍ಐಆರ್

    ತುಮಕೂರು: ಹೇಮಾವತಿ ನೀರು ನಿರ್ವಹಣಾ ಸಭೆಯ ನಿರ್ಧಾರ ಧಿಕ್ಕರಿಸಿ ನಾಲೆಯ ಗೇಟನ್ನು ದರ್ಪದಿಂದ ತೆಗೆದು, ನೀರು ಹರಿಸಿಕೊಂಡಿದ್ದ ಜೆಡಿಎಸ್‍ನ ಮಾಜಿ ಶಾಸಕ ಎಂಟಿ ಕೃಷ್ಣಪ್ಪ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಕುಣಿಗಲ್‍ಗೆ ನೀರು ಹೋಗುತಿದ್ದ ಮಾರ್ಗ ಮಧ್ಯೆ ಡಿ.ಎಸ್.ಪಾಳ್ಯ ಬಳಿ ಎಸ್ಕೇಪ್ ಗೇಟಿಗೆ ಹಾನಿ ಮಾಡಿ, ಕೃಷ್ಣಪ್ಪ ಅವರು ಬೆಂಬಲಿಗರ ಜೊತೆಗೆ ದಾಂಧಲೆ ನಡೆಸಿ ನೀರು ಹರಿಸಿಕೊಂಡಿದ್ದರು. ಈ ವೇಳೆ ತಡೆಯಲು ಹೋದ ಹೇಮಾವತಿ ಅಧಿಕಾರಿ ಹಾಗೂ ಪೊಲೀಸರಿಗೆ ನಿಂದಿಸಿ ಗೂಂಡಾವರ್ತನೆ ತೋರಿದ್ದರು. ಅಲ್ಲದೆ ಎಸ್ಕೇಪ್ ಗೇಟ್ ತೆಗೆಯುವಾಗ ಅದಕ್ಕೆ ಹಾನಿ ಉಂಟುಮಾಡಿದ್ದರು. ಹೇಮಾವತಿ ನೀರು ನಿರ್ವಹಣಾ ಸಭೆಯ ನಿರ್ಧಾರ ಧಿಕ್ಕರಿಸಿ ನಿಯಮ ಉಲ್ಲಂಘಿಸಿ ದರ್ಪ ಮೆರೆದಿದ್ದರು.

    ಈ ಘಟನೆಗೆ ಸಂಬಂಧಿಸಿದಂತೆ ಹೇಮಾವತಿ ನಾಲಾ ಮುಖ್ಯ ಅಭಿಯಂತರ ಬಾಲಕೃಷ್ಣ ಹೆಬ್ಬೂರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ, ಸಾರ್ವಜನಿಕ ಆಸ್ತಿಗೆ ಹಾನಿ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಶಾಂತಿ ಭಂಗ ಮಾಡಿದ್ದಾರೆ ಎಂದು ಕೃಷ್ಣಪ್ಪ ಅವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಶುಕ್ರವಾರ ನಡೆದ ಹೇಮಾವತಿ ನೀರು ನಿರ್ವಹಣಾ ಸಭೆಯಲ್ಲಿ ವೇಳಾಪಟ್ಟಿ ಪ್ರಕಾರ ತಾಲೂಕುಗಳಿಗೆ ನೀರು ಬಿಡಲು ನಿರ್ಧಾರ ಮಾಡಲಾಗಿತ್ತು. ಈ ಸಭೆಯ ನಿರ್ಧಾರಕ್ಕೆ ಕ್ಯಾರೇ ಎನ್ನದ ಕೃಷ್ಣಪ್ಪ ಡಿ.ಎಸ್.ಪಾಳ್ಯ ಬಳಿ ಎಸ್ಕೇಪ್ ಗೇಟಿನಿಂದ ನೀರು ಹರಿಸಿ ಗುಂಡಾವರ್ತನೆ ಮೆರೆದಿದ್ದರು. ಹೇಮಾವತಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಪಡೆಯದೇ ನೀರನ್ನು ಹರಿಸುವಂತಿಲ್ಲ. ಆದರೆ ಈ ನಿಯಮವನ್ನು ಉಲ್ಲಂಘಿಸಿ ಕೃಷ್ಣಪ್ಪ ಅವರು ನೀರು ಹರಿಸಿದ್ದರು.

    ತುರುವೇಕೆರೆಯಲ್ಲಿ ಸದ್ಯ ಬಿಜೆಪಿಯ ಮಸಾಲ ಜಯರಾಮ್ ಶಾಸಕರಾಗಿದ್ದಾರೆ. ಆದರೆ ಜೆಡಿಎಸ್‍ನ ಮಾಜಿ ಶಾಸಕ ಈ ರೀತಿ ದರ್ಪ ಮೆರೆದಿರುವುದು ಬಿಜೆಪಿಯವರ ಕೆಂಗಣ್ಣಿಗೆ ಕಾರಣವಾಗಿತ್ತು.

  • ಹೇಮಾವತಿ ಎಸ್ಕೇಪ್ ಗೇಟಿಗೆ ಹಾನಿಗೈದು ನೀರು ಹರಿಸಿದ ಜೆಡಿಎಸ್ ಮಾಜಿ ಶಾಸಕ

    ಹೇಮಾವತಿ ಎಸ್ಕೇಪ್ ಗೇಟಿಗೆ ಹಾನಿಗೈದು ನೀರು ಹರಿಸಿದ ಜೆಡಿಎಸ್ ಮಾಜಿ ಶಾಸಕ

    -ಪ್ರಶ್ನಿಸಿದ ಪೊಲೀಸ್, ಎಇಇಗೆ ನಿಂದನೆ

    ತುಮಕೂರು: ಹೇಮಾವತಿಯ ಎಸ್ಕೇಪ್ ಗೇಟನ್ನು ತೆಗೆಸಿ ಅದಕ್ಕೆ ಹಾನಿಯುಂಟು ಮಾಡಿ, ನೀರನ್ನ ಹರಿಸಿಕೊಳ್ಳುವುದರ ಮೂಲಕ ತುರುವೇಕೆರೆ ಜೆಡಿಎಸ್‍ನ ಮಾಜಿ ಶಾಸಕ ಎಮ್.ಟಿ ಕೃಷ್ಣಪ್ಪ ಗೂಂಡಾವರ್ತನೆ ತೋರಿದ್ದಾರೆ.

    ಶುಕ್ರವಾರ ನಡೆದ ಹೇಮಾವತಿ ನೀರು ನಿರ್ವಹಣಾ ಸಭೆಯಲ್ಲಿ ವೇಳಾಪಟ್ಟಿ ಪ್ರಕಾರ ತಾಲೂಕುಗಳಿಗೆ ನೀರು ಬಿಡಲು ನಿರ್ಧಾರ ಮಾಡಲಾಗಿತ್ತು. ಈ ಸಭೆಯ ನಿರ್ಧಾರಕ್ಕೆ ಕ್ಯಾರೇ ಎನ್ನದ ಕೃಷ್ಣಪ್ಪ ಅವರು ಕುಣಿಗಲ್‍ಗೆ ನೀರು ಹರಿಯುವ ಮಾರ್ಗ ಮಧ್ಯದ ಡಿ.ಎಸ್.ಪಾಳ್ಯದಲ್ಲಿ ಗೇಟ್ ತೆರೆದು ನೀರು ಹರಿಸಿ ಗೂಂಡಾವರ್ತನೆ ಮೆರೆದಿದ್ದಾರೆ. ಈ ವೇಳೆ ಎಸ್ಕೇಪ್ ಗೇಟಿಗೆ ಹಾನಿ ಉಂಟಾಗಿದೆ.

    ತಮ್ಮ ಬೆಂಬಲಿಗರ ಸಹಾಯದಿಂದ ಒಂದು ಅಡಿ ಮೇಲಕ್ಕೆ ಎಸ್ಕೇಪ್ ಗೇಟ್ ಎತ್ತಿಸಿ, ನೀರು ಹರಿಸಿದ್ದಾರೆ. ಆಗ ಸ್ಥಳಕ್ಕೆ ಆಗಮಿಸಿದ ಜಲಾಶಯದ ಎಇಇ ವಿಜಯಲಕ್ಷ್ಮೀ ಅವರು ನಿಯಮ ಉಲ್ಲಂಘನೆ ಮಾಡಬೇಡಿ ಎಂದು ಮನವಿ ಮಾಡಿದರೂ ಲೆಕ್ಕಿಸದೆ, ಅಧಿಕಾರಿಯನ್ನು ನಿಂದಿಸಿ ಹೇಮಾವತಿ ನೀರು ಹರಿಸಿಕೊಂಡು ದರ್ಪ ತೋರಿದ್ದಾರೆ.

    ಅಲ್ಲದೆ ಇದನ್ನು ಪ್ರಶ್ನಿಸಿದ ಪೊಲೀಸರ ಜೊತೆಯೂ ವಾಗ್ದಾಳಿ ನಡೆಸಿ, ಯಾರ ಮಾತನ್ನು ಕೇಳದೆ ನೀರು ಹರಿಸಿಕೊಂಡಿದ್ದಾರೆ. ಹೇಮಾವತಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಪಡೆಯದೇ ನೀರನ್ನು ಹರಿಸುವಂತಿಲ್ಲ. ಆದರೆ ಈ ನಿಯಮವನ್ನು ಉಲ್ಲಂಘಿಸಿ ಕೃಷ್ಣಪ್ಪ ಅವರು ನೀರು ಹರಿಸಿದ್ದಾರೆ.

    ತುರುವೇಕೆರೆಯಲ್ಲಿ ಸದ್ಯ ಬಿಜೆಪಿಯ ಮಸಾಲ ಜಯರಾಮ್ ಶಾಸಕರಾಗಿದ್ದಾರೆ. ಆದರೆ ಜೆಡಿಎಸ್‍ನ ಮಾಜಿ ಶಾಸಕ ಈ ರೀತಿ ದರ್ಪ ಮೆರೆದಿರುವುದು ಬಿಜೆಪಿಯವರ ಕೆಂಗಣ್ಣಿಗೆ ಕಾರಣವಾಗಿದೆ.