Tag: Hemavathi Express Canal Link

  • ತುಮಕೂರಿಗೆ ತೊಂದ್ರೆ ಆಗಲ್ಲ ಅಂದ್ಮೇಲೆನೇ ಹೇಮಾವತಿ ಕೆನಾಲ್ ಕೆಲಸ ಶುರು ಮಾಡಿದ್ದು – ಪರಂ

    ತುಮಕೂರಿಗೆ ತೊಂದ್ರೆ ಆಗಲ್ಲ ಅಂದ್ಮೇಲೆನೇ ಹೇಮಾವತಿ ಕೆನಾಲ್ ಕೆಲಸ ಶುರು ಮಾಡಿದ್ದು – ಪರಂ

    – ಬಿಜೆಪಿಯವರು ಅಂದು ಒಪ್ಪಿಗೆ ಕೊಟ್ಟು, ಇಂದು ವರದಿ ಸರಿಯಿಲ್ಲ ಅಂತಿದ್ದಾರೆ

    ಬೆಂಗಳೂರು: ತುಮಕೂರಿಗೆ (Tumkuru) ತೊಂದರೆ ಆಗಲ್ಲ ಅಂತಾ ತಾಂತ್ರಿಕ ವರದಿ ಕೊಟ್ಟಿದ್ದರು. ಈ ತಾಂತ್ರಿಕ ವರದಿ ಬಂದ ಬಳಿಕವೇ ಕೆಲಸ ಶುರು ಮಾಡಿಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ (G Parameshwar) ಹೇಳಿದರು.

    ತುಮಕೂರು ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ (Hemavathi Express Canal) ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಸಚಿವರು, ತುಮಕೂರು ಎಸ್‌ಪಿಯಿಂದ ದೂರವಾಣಿ ಮೂಲಕ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು, ತುಮಕೂರಿಗೆ ತೊಂದರೆ ಆಗಲ್ಲ ಅಂತಾ ಅಧಿಕಾರಿಗಳು ತಾಂತ್ರಿಕ ವರದಿ ಕೊಟ್ಟಿದ್ದರು. ತಾಂತ್ರಿಕ ವರದಿ ಬಂದ ಬಳಿಕವೇ ಕೆಲಸ ಶುರು ಮಾಡಿದ್ದೇವೆ. ಇದನ್ನ ಬಿಜೆಪಿ ಶಾಸಕರು ಸಹ ಒಪ್ಪಿಕೊಂಡಿದ್ದರು. ಆದರೆ ಈಗ ತಾಂತ್ರಿಕ ವರದಿ ಸರಿ ಇಲ್ಲ ಅಂತಿದ್ದಾರೆ ಎಂದರು. ಇದನ್ನೂ ಓದಿ: ಕುಣಿಗಲ್, ಮಾಗಡಿಗೆ ನೀರು ತರಬೇಕು ಅಂತ ಡಿಸಿಎಂಗೆ ಕಮಿಟ್ಮೆಂಟ್‌ ಇದೆ: ಹೆಚ್.ಸಿ.ಬಾಲಕೃಷ್ಣ

    1,000 ಕೋಟಿ ಕೊಟ್ಟಿದ್ದೇವೆ
    ತಾಂತ್ರಿಕ ಸಮಿತಿ ವರದಿ ಬಳಿಕವೇ ಕಾಮಗಾರಿ ಆರಂಭಿಸಲಾಗಿದೆ. ತಾಂತ್ರಿಕವಾಗಿ ಸಮಸ್ಯೆ ಆಗಲ್ಲ ಎಂದು ವರದಿ ಬಂದಿದೆ. ಉಪ ಮುಖ್ಯಮಂತ್ರಿಯವರು ಸಭೆ ನಡೆಸಿದ್ದರು. ಈ ಸಭೆಯಲ್ಲಿ ತುಮಕೂರು ಬಿಜೆಪಿ ಶಾಸಕರು ಇದ್ದರು. ತುಮಕೂರಿನಿಂದ ರಾಮನಗರಕ್ಕೆ ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ 1000 ಕೋಟಿ ರೂ. ಹಣವನ್ನು ಯೋಜನೆಗೆ ಕೊಟ್ಟಿದ್ದೇವೆ, ಹಣ ಕೂಡ ಬಿಡುಗಡೆ ಆಗಿತ್ತು ಎಂದು ಹೇಳಿದರು. ಇದನ್ನೂ ಓದಿ: ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಕಿಚ್ಚು – ಗುಬ್ಬಿಯಲ್ಲಿ ಪೊಲೀಸ್‌ ಸರ್ಪಗಾವಲು, ರಾಮನಗರಕ್ಕೆ ನೀರು ಹರಿಸಲು ರೈತರ ವಿರೋಧ

    ಆಗ ತೊಂದರೆ ಆಗುತ್ತೆ ಅಂತಾ ಬಿಜೆಪಿ ಶಾಸಕರು, ಎಲ್ಲರೂ ಹೇಳಿದ್ದರು. ಆದಾದ ಬಳಿಕ ಸರ್ಕಾರ ತಾಂತ್ರಿಕ ಸಮಿತಿ ರಚನೆ ಮಾಡಿತ್ತು. ತಾಂತ್ರಿಕ ಸಮಿತಿಯು ತುಮಕೂರಿಗೆ ತೊಂದರೆಯಾಗಲ್ಲ ಎಂದು ವರದಿ ನೀಡಿದ ಬಳಿಕವೇ ಸರ್ಕಾರ ಕೆಲಸ ಶುರು ಮಾಡಿದೆ ಎಂದರು. ಇದನ್ನೂ ಓದಿ: ಅಪ್ಪನಂತೆ ಕುದುರೆ ಸವಾರಿ ಮಾಡಿದ ವಿನೀಶ್ ದರ್ಶನ್- ಫೋಟೋ ವೈರಲ್

    ತುಮಕೂರಿಗೆ ತೊಂದರೆ ಇಲ್ಲ ಅಂತಾ ವರದಿ ಹೇಳಿತ್ತು. ವರದಿಯಲ್ಲಿ ಲಿಂಕ್‌ ಕೆನಾಲ್‌‌ನಿಂದ ತೊಂದರೆ ಆಗುತ್ತದೆ ಎಂದು ಬಂದಿದ್ದರೆ ಮಾಡುತ್ತಿರಲಿಲ್ಲ. ಈಗ ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ವಿರೋಧ ಮಾಡುತ್ತಿದ್ದಾರೆ. ಇವತ್ತಿನ ಪ್ರತಿಭಟನೆ ಬಗ್ಗೆ ವರದಿ ಪಡೆಯುತ್ತೇನೆ. ಮಾಹಿತಿ ಪಡೆದು ಮಾತಾಡುತ್ತೇನೆ ಎಂದರು.

  • ಕುಣಿಗಲ್, ಮಾಗಡಿಗೆ ನೀರು ತರಬೇಕು ಅಂತ ಡಿಸಿಎಂಗೆ ಕಮಿಟ್ಮೆಂಟ್‌ ಇದೆ: ಹೆಚ್.ಸಿ.ಬಾಲಕೃಷ್ಣ

    ಕುಣಿಗಲ್, ಮಾಗಡಿಗೆ ನೀರು ತರಬೇಕು ಅಂತ ಡಿಸಿಎಂಗೆ ಕಮಿಟ್ಮೆಂಟ್‌ ಇದೆ: ಹೆಚ್.ಸಿ.ಬಾಲಕೃಷ್ಣ

    – ನಾವೇನು ಅವರ ಹಕ್ಕನ್ನ ಕಿತ್ತುಕೊಳ್ತಿಲ್ಲ, ನಮ್ಮ ನೀರಿನ ಹಕ್ಕನ್ನು ಕೇಳ್ತಿದ್ದೇವೆ ಎಂದ ಶಾಸಕ
    – ಹೇಮಾವತಿ ಕೆನಾಲ್‌ ಯೋಜನೆ ರೈತರಿಗೆ ಮರಣ ಶಾಸನ; ಸುರೇಶ್‌ ಗೌಡ ಕೆಂಡ

    ರಾಮನಗರ: ಕುಣಿಗಲ್ ಮತ್ತು ಮಾಗಡಿಗೆ ನೀರು ತರಬೇಕು ಅಂತ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರಿಗೆ ಕಮಿಟ್‌ಮೆಂಟ್‌ ಇದೆ. ಆದರೆ ನೀರನ್ನ ರಾಮನಗರ, ಕನಕಪುರಕ್ಕೆ ತೆಗೆದುಕೊಂಡು ಹೋಗ್ತಾರೆ ಅಂತ ಅಪಪ್ರಚಾರ ಆಗ್ತಿದೆ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ (HC Balakrishna) ಅಸಮಾಧಾನ ಹೊರಹಾಕಿದ್ದಾರೆ.

    ರಾಮನಗರದಲ್ಲಿ (Ramanagara) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಲಿಂಕ್‌ (Hemavathi Express Canal Link) ಯೋಜನೆಗೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದರು. ನಮಗೆ ಅಲೋಕೇಷನ್ ಆಗಿರೋ 0.6 ಟಿಎಂಸಿ ನೀರನ್ನ ಮಾತ್ರ ನಾವು ಕೇಳ್ತಿದ್ದೇವೆ. ಅದನ್ನ ತರಲು ಲಿಂಕ್ ಕೆನಾಲ್ ಯೋಜನೆ ಮಾಡಲಾಗ್ತಿದೆ. ಇದರ ಬಗ್ಗೆ ವಿರೋಧಿಗಳು ಅಪಪ್ರಚಾರ ಮಾಡ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಡಿಕೆಶಿ ಇದನ್ನ ಮಂಜೂರು ಮಾಡಿಸಿದ್ರು. ಬಳಿಕ ಸಮ್ಮಿಶ್ರ ಸರ್ಕಾರ ಬಂದಾಗ ಬಿಜೆಪಿಯವ್ರು ವಜಾ ಮಾಡಿದ್ರು. ಈಗ ನಮ್ಮ ಸರ್ಕಾರ ಬಂದ ಮೇಲೆ ಮತ್ತೆ ಮಂಜೂರಾತಿ ಪಡೆದು ಕೆಲಸ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: 

    ಹೋರಾಟ ಮಾಡೋದ್ರಿಂದ ಪ್ರಯೋಜನ ಇಲ್ಲ
    ರಾಜಕೀಯವಾಗಿ ಮಾತ್ರ ಇದನ್ನ ವಿರೋಧ ಮಾಡ್ತಿದ್ದಾರೆ. ಪರಮೇಶ್ವರ್, ಡಿಕೆಶಿ ನೇತೃತ್ವದಲ್ಲಿ ಯೋಜನೆ ಮಾಡ್ತಿದ್ದಾರೆ. ಪ್ರತಿಭಟನೆ ಮಾಡೋದು ಅವರ ಹಕ್ಕು ಆದರೆ ನಾವೆಲ್ಲ ಅಣ್ಣತಮ್ಮಂದಿರು. ತುಮಕೂರಿನ ಹಾಲು ಬೆಂಗಳೂರು, ಕುದೂರು ಭಾಗದಲ್ಲಿ ಮಾರಾಟ ಆಗುತ್ತೆ. ಅದನ್ನ ಮಾರಾಟ ಮಾಡಬೇಡಿ ಅಂತ ನಾವು ನಿಲ್ಲಿಸಲು ಆಗುತ್ತಾ? ಅದನ್ನ ನಿಲ್ಲಿಸಿದ್ರೆ ಆ ಭಾಗದ ರೈತರಿಗೆ ತೊಂದರೆ ಆಗಲ್ವಾ.? ನಾವೇನು ಅವರ ಹಕ್ಕನ್ನ ಕಿತ್ತುಕೊಳ್ತಿಲ್ಲ, ನಮ್ಮ ನೀರಿನ ಹಕ್ಕು ಕೇಳ್ತಿದ್ದೇವೆ. ಹೋರಾಟ ಮಾಡೋದ್ರಿಂದ ಏನು ಪ್ರಯೋಜನ ಇಲ್ಲ ಎಂದರು. ಇದನ್ನೂ ಓದಿ: ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಕಿಚ್ಚು – ಗುಬ್ಬಿಯಲ್ಲಿ ಪೊಲೀಸ್‌ ಸರ್ಪಗಾವಲು, ರಾಮನಗರಕ್ಕೆ ನೀರು ಹರಿಸಲು ರೈತರ ವಿರೋಧ

    ಮುಂದುವರಿದು ನಿಮ್ಮೂರಿನ ಹೆಣ್ಣುಮಕ್ಕಳನ್ನ ನಮ್ಮ ತಾಲೂಕಿಗೆ ಮದುವೆ ಮಾಡಿಕೊಟ್ಟಿದ್ದೀರಿ. ನಿಮ್ಮ ಹೆಣ್ಣುಮಕ್ಕಳ ಬದುಕು ಹಸನಾಗಬೇಕು. ಹಾಗಾಗಿ ಹೋರಾಟಗಾರರು ಯೋಜನೆಗೆ ಸಹಕಾರ ಕೊಡಿ ಅಂತ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ಬಿಎಂಟಿಸಿಯ `ದಿವ್ಯ ದರ್ಶನ’ ವಿಶೇಷ ಟೂರ್ ಪ್ಯಾಕೇಜ್ ಆರಂಭ

    ಕೂಡಲೇ ಯೋಜನೆ ರದ್ದು ಮಾಡಬೇಕು: ಸುರೇಶ್‌ಗೌಡ
    ಇನ್ನೂ ತುಮಕೂರು ಗ್ರಾಮಾಂತರದ ಬಿಜೆಪಿ ಶಾಸಕ ಸುರೇಶ್‌ಗೌಡ ಮಾತನಾಡಿ, ಸರ್ಕಾರ ನಿಷೇದಾಜ್ಞೆ ಜಾರಿ ಮಾಡಿದೆ. ಯಾವಾಗ ಸರ್ಕಾರ ರೈತ ವಿರೋಧಿ ನೀತಿ ಮಾಡುತ್ತೋ ಆಗ ರೈತರು ಹೋರಾಟ ಮಾಡ್ತಾರೆ. ಸರ್ಕಾರ ರೈತರ ನಿರ್ಣಯ ಕೇಳಿ ನಿರ್ಧಾರ ಮಾಡಬೇಕು. ಈಗ ಏಕಾಏಕಿ 10 ತಾಲೂಕುಗಳಿಗೆ ನೀರನ್ನ ಕಡಿತ ಮಾಡಿ ಒಂದೇ ಒಂದು ರಾಮನಗರ ಜಿಲ್ಲೆಗೆ ತೆಗೆದುಕೊಂದು ಹೋಗುತ್ತಿರುವುದಕ್ಕೆ ನಮ್ಮ ವಿರೋಧ ಇದೆ. 2 ವರ್ಷದಿಂದ ಡಿಸಿ ಕಚೇರಿ ಎದುರು ಧರಣಿ ಮಾಡ್ತಿದ್ದೀವಿ. ಪಾದಯಾತ್ರೆ ಮಾಡಿದ್ವಿ, ಪರಮೇಶ್ವರ್ ಮನೆ ಎದುರು ಹೋರಾಟ ಮಾಡಿ ಆಯ್ತು. ಅಧಿವೇಶನದಲ್ಲಿ ಗಲಾಟೆ ಮಾಡಿದೆವು. ಆದ್ರೆ ಸರ್ಕಾರ ಸವಾಲಾಗಿ ತೆಗೆದುಕೊಂಡು ಹೋಗುತ್ತಿದ್ದ, ರೈತರ ಬೀದಿಗೆ ಬಂದಿದ್ದೀವಿ. ಇದು ರೈತರಿಗೆ ಮರಣ ಶಾಸನ, ಕೂಡಲೇ ಈ ಯೋಜನೆ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು – ವಿಜಯಪುರ ರೈಲು ಪ್ರಯಾಣ; ಸೋಮಣ್ಣ ಜೊತೆ ಎಂಬಿಪಿ ಮಾತುಕತೆ

  • ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಕಿಚ್ಚು – ಗುಬ್ಬಿಯಲ್ಲಿ ಪೊಲೀಸ್‌ ಸರ್ಪಗಾವಲು, ರಾಮನಗರಕ್ಕೆ ನೀರು ಹರಿಸಲು ರೈತರ ವಿರೋಧ

    ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಕಿಚ್ಚು – ಗುಬ್ಬಿಯಲ್ಲಿ ಪೊಲೀಸ್‌ ಸರ್ಪಗಾವಲು, ರಾಮನಗರಕ್ಕೆ ನೀರು ಹರಿಸಲು ರೈತರ ವಿರೋಧ

    – ರಸ್ತೆ ತಡೆದು ಪ್ರತಿಭಟನೆ, ಆಕ್ರೋಶ

    ತುಮಕೂರು: ನಗರದಲ್ಲಿ ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ (Hemavathi Express Canal Link) ವಿವಾದ ಭುಗಿಲೆದ್ದಿದೆ. ಕುಣಿಗಲ್ ಹೊರತುಪಡಿಸಿ ಜಿಲ್ಲೆಯ ಉಳಿದ ಭಾಗಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಸರ್ಕಾರವು ವಿವಾದ ಬಗೆಹರಿಸದೇ ಕಾಮಗಾರಿ ಮುಂದುವರೆಸಲು ಮುಂದಾಗಿದ್ದು, ಪ್ರತಿಭಟನೆಗೆ (Protest) ಅವಕಾಶವಿಲ್ಲದಂತೆ ನಿಷೇಧಾಜ್ಞೆ ಹೇರಲಾಗಿದೆ.

    ಇಂದು ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಾವಿರಾರು ರೈತರೂ (Farmers) ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. 144 ಸೆಕ್ಷನ್‌ ನಿಷೇಧಾಜ್ಞೆ ಹೊರತಾಗಿಯೂ ರೈತರ ಆಕ್ರೋಶ ಮುಂದುವರಿದಿದೆ. ಹೀಗಾಗಿ ಗುಬ್ಬಿ, ನಿಟ್ಟೂರು ಸೇರಿದಂತೆ ಹಲವೆಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿದೆ. 10 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, 4 ಡಿವೈಎಸ್‌ಪಿ, 23 ಇನ್ಸ್‌ಪೆಕ್ಟರ್‌ ಸಹಿತ 900 ಪೊಲೀಸರ ನಿಯೋಜನೆ ಮಾಡಲಾಗಿದೆ.

    10ಕ್ಕೂ ಹೆಚ್ಚು ಪ್ರತಿಭಟನಾಕಾರರು ವಶಕ್ಕೆ:
    ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ವಿರೋಧಿಸಿ ಪ್ರತಿಭಟನೆಗೂ ಮುನ್ನವೇ ಪ್ರತಿಭಟನಾಕಾರರನ್ನ ವಶಕ್ಕೆ ಪಡೆಯುವ ಕೆಲಸ ಪೊಲೀಸರು ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ ಸುರೇಶ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ 10ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನ ಗುಬ್ಬಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ರಾಮನಗರಕ್ಕೆ ನೀರು ಹರಿಸಲು ವಿರೋಧ:
    ಇನ್ನೂ ಕೆನಾಲ್‌ ಯೋಜನೆ ಮೂಲಕ ರಾಮನಗರಕ್ಕೆ ನೀರು ಹರಿಸಲು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಗುಬ್ಬಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನ ಹೊತ್ತೊಯ್ಯಲು ತಂದಿದ್ದ ಸಾರಿಗೆ ಬಸ್‌ ಚಕ್ರಗಳ ಗಾಳಿ ತೆಗೆದು ಆಕ್ರೋಶ ಹೊರಹಾಕಿದ್ದಾರೆ. ಬಸ್ಸನ್ನ ಮಗುಚಿಹಾಕಲೂ ಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಶಿವಮೊಗ್ಗೆ-ಬೆಂಗಳೂರು ಹೆದ್ದಾರಿಯಲ್ಲಿ ನಡೆದುಕೊಂಡೇ ನಾಲೆಯತ್ತ ಹೊರಟಿದ್ದಾರೆ. ಪ್ರತಿಭಟನಾಕಾರರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.