Tag: hemavathi dam

  • ಯಾವುದೇ ಕ್ಷಣದಲ್ಲಿ ಹೇಮಾವತಿ ಡ್ಯಾಂನಿಂದ ನೀರು ಹೊರಕ್ಕೆ – ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ

    ಯಾವುದೇ ಕ್ಷಣದಲ್ಲಿ ಹೇಮಾವತಿ ಡ್ಯಾಂನಿಂದ ನೀರು ಹೊರಕ್ಕೆ – ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ

    ಹಾಸನ : ಹೇಮಾವತಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು (Heavy Rain) ಯಾವುದೇ ಸಮಯದಲ್ಲಿ ಡ್ಯಾಂನಿಂದ (Hemavati Dam) ನದಿಗೆ ನೀರು ಹೊರಬಿಡುವ ಸಾಧ್ಯತೆಯಿದೆ.

    ಇಂದು ಬೆಳಿಗ್ಗೆ 6 ಗಂಟೆಗೆ ಹೇಮಾವತಿ ಜಲಾಶಯಕ್ಕೆ 16,394 ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯದಿಂದ 4,600 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

    ಸದ್ಯ ಈಗ 2,921.50 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 2922.00 ಅಡಿಗಳಾಗಿದ್ದು, ಇನ್ನೂ ಅರ್ಧ ಅಡಿಗಳಷ್ಟು ನೀರನ್ನು ಮಾತ್ರ ಜಲಾಶಯದಲ್ಲಿ ಸಂಗ್ರಹಿಸಬಹುದಾಗಿದೆ.  ಇದನ್ನೂ ಓದಿ:  ಇಂದು ಹಾಸನಾಂಬೆ ಗರ್ಭಗುಡಿ ಬಾಗಿಲು ಬಂದ್ – ಕಡೆಗಳಿಗೆಯಲ್ಲೂ ದೇವಿ ಕಣ್ತುಂಬಿಕೊಂಡ ಭಕ್ತಗಣ

     

    ಈಗಾಗಲೇ ಹವಾಮಾನ ಇಲಾಖೆ (IMD) ಅ.29 ರವರೆಗೆ ಮಳೆಯ ಮುನ್ಸೂಚನೆ ನೀಡಿರುವ ಕಾರಣ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರಲಿದೆ. ಹೀಗಾಗಿ ಹೇಮಾವತಿ ನದಿ ಪಾತ್ರ, ನದಿ ದಂಡೆ, ನದಿಯ ಅಸುಪಾಲಿನಲ್ಲಿರುವ ಎಲ್ಲಾ ಗ್ರಾಮಸ್ಥರು, ಸ್ಥಳೀಯರು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಲ್ಲಿ ತಕ್ಷಣವೇ ತೆರಳುವಂತೆ ಸೂಚನೆ ನೀಡಲಾಗಿದೆ.

    ಕಂದಾಯ ಇಲಾಖೆ, ತಹಸೀಲ್ದಾರ್‌ ಸೇರಿದಂತೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು. ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಹೇಮಾವತಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಜ್ಯೋತಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

    ಹೇಮಾವತಿ ಜಲಾಶಯ 37.103 ಟಿಎಂಸಿ ನೀರಿನ ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು ಸದ್ಯ 36.620 ಟಿಎಂಸಿ ನೀರು ಸಂಗ್ರಹವಾಗಿದೆ.

  • KRS ಭರ್ತಿಗೆ 7 ಅಡಿಗಳಷ್ಟೇ ಬಾಕಿ

    KRS ಭರ್ತಿಗೆ 7 ಅಡಿಗಳಷ್ಟೇ ಬಾಕಿ

    ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆ ಹಳೇ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್‌ಎಸ್ ಡ್ಯಾಂ (KRS Dam) ಭರ್ತಿಗೆ ಕೇವಲ 7 ಅಡಿಗಳಷ್ಟೇ ಬಾಕಿಯಿದೆ.

    ಜಲಾಶಯಕ್ಕೆ 23,473 ಕ್ಯೂಸೆಕ್ ಒಳಹರಿವು ಇದ್ದು, ನಿನ್ನೆಗಿಂತ ಇಂದು ಒಳಹರಿವಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ಸದ್ಯ ಡ್ಯಾಂನಲ್ಲಿ 39.847 ಟಿಎಂಸಿ ನೀರು ಸಂಗ್ರಹವಾಗಿದ್ದು, 1,252 ಕ್ಯೂಸೆಕ್ ಒಳಹರಿವು ಇದೆ.ಇದನ್ನೂ ಓದಿ: Air India Crash | 215 ಡಿಎನ್‌ಎ ಮ್ಯಾಚ್‌ – 198 ಮೃತದೇಹ ಹಸ್ತಾಂತರ

    124.80 ಅಡಿಗಳ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ 117.80 ಅಡಿ ನೀರಿದ್ದು, ಸಂಪೂರ್ಣ ಭರ್ತಿಗೆ 7 ಅಡಿಗಳಷ್ಟೇ ಬಾಕಿಯಿದೆ. ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

    ಹಾರಂಗಿ ಜಲಾಶಯ 2849.77 ಅಡಿ ಭರ್ತಿ
    2,859 ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಹಾರಂಗಿ ಜಲಾಶಯದಲ್ಲಿ 2849.77 ಅಡಿ ನೀರಿದೆ. ಜಲಾಶಯಕ್ಕೆ ಸದ್ಯ 3,070 ಕ್ಯೂಸೆಕ್ ನೀರಿನ ಒಳಹರಿವಿದ್ದು, 3,070 ಕ್ಯುಸೆಕ್ ಹೊರಹರಿವಿದೆ.

    ಹೇಮಾವತಿಗೆ 13,273 ಕ್ಯೂಸೆಕ್ ಒಳಹರಿವು
    ಇನ್ನೂ 37.103 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಹೇಮಾವತಿ ಜಲಾಶಯದಲ್ಲಿ 29.350 ಟಿಎಂಸಿ ನೀರಿದೆ. 2,922 ಅಡಿ ಗರಿಷ್ಠ ಮಟ್ಟದ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಇಂದು 2,913.40 ಅಡಿ ನೀರಿದೆ. ಇಂದು 13,273 ಕ್ಯುಸೆಕ್ ಒಳಹರಿವಿದ್ದು, 4,750 ಕ್ಯೂಸೆಕ್ ಹೊರಹರಿವಿದೆ.ಇದನ್ನೂ ಓದಿ: ದೊಡ್ಡಣ್ಣನ ಎಂಟ್ರಿಯಿಂದ 3ನೇ ಮಹಾಯುದ್ಧದ ಆತಂಕ – ಇರಾನ್ ಬೆಂಬಲಕ್ಕೆ ನಿಂತ ರಷ್ಯಾ

  • ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಯುವತಿ ಸಾವು- ಮೃತದೇಹಕ್ಕಾಗಿ ಶೋಧ

    ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಯುವತಿ ಸಾವು- ಮೃತದೇಹಕ್ಕಾಗಿ ಶೋಧ

    ಹಾಸನ: ಹೇಮಾವತಿ ನದಿ ಹಿನ್ನೀರಿನಲ್ಲಿ (Hemavati River) ಮುಳುಗಿ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಇಲ್ಲಿನ (Hassan) ಗೊರೂರಿನಲ್ಲಿ (Gorur) ನಡೆದಿದೆ.

    ಮೃತ ಯುವತಿಯನ್ನು ಗೊರೂರು ಅರಳಿಕಟ್ಟೆ ಗ್ರಾಮದ ಗಿರೀಶ್ ಎಂಬವರ ಪುತ್ರಿ ನಿತ್ಯ (19) ಎಂದು ಗುರುತಿಸಲಾಗಿದೆ. ಹನುಮ ಜಯಂತಿ ಪೂಜೆಗಾಗಿ ಸಂಬಂಧಿಕರೊಂದಿಗೆ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಯುವತಿ ತೆರಳಿದ್ದಳು. ಈ ವೇಳೆ ಪೂಜೆ ಸಲ್ಲಿಸಿ ಹೇಮಾವತಿ ಹಿನ್ನೀರಿನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಚಾರಣಕ್ಕೆ ತೆರಳಿದ್ದ ಯುವಕ ಬೆಟ್ಟದಲ್ಲೇ ಕುಸಿದು ಬಿದ್ದು ದುರ್ಮರಣ

    ಯುವತಿಯ ಮೃತದೇಹಕ್ಕಾಗಿ ಅಗ್ನಿಶಾಮಕದಳದಿಂದ ಶೋಧಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೊರೂರು ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಸೇನೆ, ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ – ಮೂವರು ನಕ್ಸಲರ ಹತ್ಯೆ

  • ಸೇಫ್ಟಿ ಬೆಲ್ಟ್ ಇಲ್ಲದೆ ಕೆಲಸ ಮಾಡ್ತಿದ್ದ ಕಾರ್ಮಿಕ 50 ಅಡಿ ಎತ್ತರದಿಂದ ಬಿದ್ದು ಸಾವು

    ಸೇಫ್ಟಿ ಬೆಲ್ಟ್ ಇಲ್ಲದೆ ಕೆಲಸ ಮಾಡ್ತಿದ್ದ ಕಾರ್ಮಿಕ 50 ಅಡಿ ಎತ್ತರದಿಂದ ಬಿದ್ದು ಸಾವು

    ಹಾಸನ: ಗೊರೂರಿನಲ್ಲಿರುವ ಹೇಮಾವತಿ ಡ್ಯಾಮ್‍ನ ಪಂಪ್ ಹೌಸ್‍ನಲ್ಲಿ ದುರಂತವೊಂದು ನಡೆದಿದೆ. ಸೇಫ್ಟಿ ಬೆಲ್ಟ್ ಇಲ್ಲದೆ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ.

    ಮೃತ ದುರ್ದೈವಿಯನ್ನು ಸುರೇಶ್ ಎಂದು ಗುರುತಿಸಲಾಗಿದೆ. ಇವರು ಪಂಪ್ ಹೌಸ್‍ನಲ್ಲಿ ಸೇಫ್ಟಿ ಬೆಲ್ಟ್ ಇಲ್ಲದೆ ಛಾವಣಿಯ ಶೀಟ್ ಸರಿ ಮಾಡುತ್ತಿದ್ದರು. ಪರಿಣಾಮ ಆಯತಪ್ಪಿ 50 ಅಡಿ ಎತ್ತರದಿಂದ ಕೆಳಗೆ ಬಿದ್ದು ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ.

    ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಗೊರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಅಧಿಕಾರಿ ಕೊರಳಪಟ್ಟಿ ಹಿಡಿದು ಎಳೆದಾಡಿದ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ವಿರುದ್ಧ FIR

    Live Tv

  • ಹೇಮಾವತಿ ಜಲಾಶಯಕ್ಕೆ ಗಣಿಗಾರಿಕೆ ಆತಂಕ – ಎಗ್ಗಿಲ್ಲದೆ ನಡೀತಿದೆ ಕಲ್ಲು ಗಣಿಗಾರಿಕೆ

    ಹೇಮಾವತಿ ಜಲಾಶಯಕ್ಕೆ ಗಣಿಗಾರಿಕೆ ಆತಂಕ – ಎಗ್ಗಿಲ್ಲದೆ ನಡೀತಿದೆ ಕಲ್ಲು ಗಣಿಗಾರಿಕೆ

    ಹಾಸನ: ಸುಮಾರು 50 ವರ್ಷ ಪೂರೈಸಿರೋ ಹಾಸನ ಜಿಲ್ಲೆಯ ಜೀವನಾಡಿ ಹೇಮಾವತಿ ಅಣೆಕಟ್ಟಿಗೆ ಈಗ ಆತಂಕ ಎದುರಾಗಿದೆ. ಜಿಲ್ಲೆಯ ಗೊರೂನಲ್ಲಿರೋ ಹೇಮಾವತಿ ಜಲಾಶಯದ 15 ರಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಕ್ರಮ ಹಾಗೂ ಸಕ್ರಮ ಗಣಿಗಾರಿಕೆಗಳು ನಡೆಯುತ್ತಿದ್ದು ಡ್ಯಾಂಗೆ ಅಸುರಕ್ಷತೆ ಭೀತಿ ತಂದೊಡ್ಡಿದೆ. ಹಾಸನ ತಾಲೂಕಿನ ಕಟ್ಟಾಯ, ಹನುಮನಹಳ್ಳಿ, ನ್ಯಾಮನಹಳ್ಳಿ, ಹಂಗರಹಳ್ಳಿ ಸೇರಿದಂತೆ ಡ್ಯಾಂನ ಸುತ್ತಮುತ್ತಲೂ ಗಣಿಗಾರಿಕೆ ಮಾಡುತ್ತಿದ್ದು, ಸ್ಫೋಟಕಗಳನ್ನು ಸಿಡಿಸುತ್ತಿದ್ದಾರೆ.

    ಇತ್ತೀಚೆಗೆ ಡ್ಯಾಂನ ಕೂಗಳತೆ ದೂರದ ಅರಣ್ಯದಲ್ಲಿ ಪೊಲೀಸರು ಹಾಗೂ ಐಎಸ್‍ಡಿ ನೇತೃತ್ವದಲ್ಲಿ ದಾಳಿ ನಡೆಸಿದ್ರು. ಅಕ್ರಮವಾಗಿ ದಾಸ್ತಾನು ಮಾಡಿದ್ದ 1,200 ಜಿಲೆಟಿನ್ ಟ್ಯೂಬ್, 2 ಡೀಟೇನೇಟರ್, 10 ಕೆ.ಜಿ ಅಮೋನಿಯಂ ನೈಟ್ರೈಟ್ ವಶಪಡಿಸಿಕೊಂಡಿದ್ರು. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದು, ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಗಣಿ ಹಾಗೂ ಭೂ ವಿಜ್ಞಾನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮುಂದೊಂದು ದಿನ ಡ್ಯಾಂಗೆ ಕಂಟಕ ಕಾದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೂ ದೂರ ನೀಡಲಾಗಿದೆ. ಶೀಘ್ರ ಕ್ರಮವಾಗದಿದ್ದರೆ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸೊದಾಗಿ ಕಾಂಗ್ರೆಸ್ ಮುಖಂಡ ಎಚ್ಚರಿಕೆ ನೀಡಿದ್ದಾರೆ.

    ಈ ಬಗ್ಗೆ ಎಸ್‍ಪಿ ಶ್ರೀನಿವಾಸಗೌಡ ಅವರನ್ನು ಕೇಳಿದ್ರೆ, ಡ್ಯಾಂ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಗಳಿಗೆ ಲೈಸೆನ್ಸ್ ಪಡೆದಿದ್ದಾರೆ. ಈ ಬಗ್ಗೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಕೇಳಿದ್ದೇವೆ. ಜಿಲ್ಲಾಡಳಿತದ ಅನುಮತಿ ಪಡೆದೇ ಲೈಸೆನ್ಸ್ ನೀಡಿರಲಾಗುತ್ತೆ. ಅದು ಅವರ ಇಲಾಖೆಗೆ ಬಿಟ್ಟಿದ್ದು, ಅಕ್ರಮವಾಗಿ ನಡೆಸುತ್ತಿದ್ದುವುಗಳ ಮೇಲೆ ನಾವು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ ಅಂತ ಹೇಳಿದ್ದಾರೆ.

    ಒಟ್ಟಿನಲ್ಲಿ ಗಣಿಗಾರಿಕೆ ನಡೆಸೋದಕ್ಕೆ ಲೈಸೆನ್ಸ್ ಪಡೆದರೂ, ಸ್ಫೋಟಿಸೋದಕ್ಕೆ ಅನುಮತಿ ಇರೋದೇ ಇಲ್ಲ. ಅಂತಹ ಕಡೆಗಳಲ್ಲಿಯೂ ಸ್ಫೋಟಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರ್ತಿವೆ. ಹೇಮಾವತಿ ಡ್ಯಾಂಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಹಾಗೂ ಸರ್ಕಾರ ಕ್ರಮವಹಿಸಬೇಕಿದೆ.

  • ತುಮಕೂರಿಗೆ ಹೇಮಾವತಿ ನೀರು ಹರಿಸಲು ಹಸ್ತಕ್ಷೇಪ – ದೇವೇಗೌಡ್ರ ಕುಟುಂಬದ ವಿರುದ್ಧ ಜನ ಆರೋಪ

    ತುಮಕೂರಿಗೆ ಹೇಮಾವತಿ ನೀರು ಹರಿಸಲು ಹಸ್ತಕ್ಷೇಪ – ದೇವೇಗೌಡ್ರ ಕುಟುಂಬದ ವಿರುದ್ಧ ಜನ ಆರೋಪ

    – ನೀರು ಬಿಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

    ತುಮಕೂರು: ಜಿಲ್ಲೆಗೆ ಹೇಮಾವತಿಯಿಂದ ಬರಬೇಕಾಗಿದ್ದ ನೀರು ಸಂಪೂರ್ಣವಾಗಿ ಬರುತ್ತಿಲ್ಲ. ಹಾಗಾಗಿ ಜಿಲ್ಲೆಯ ಕೆರೆ ಕಟ್ಟೆಗಳು ಖಾಲಿ ಖಾಲಿಯಾಗಿ ಕಾಣ್ತಿದೆ. ಅದರಲ್ಲೂ ತಿಪಟೂರು ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರ ನೀರಿನ ಬವಣೆಗೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವೇ ಕಾರಣ ಎಂದು ಜನ ದೂರುತ್ತಿದ್ದಾರೆ.

    ಹೌದು. ತುಮಕೂರು ಜಿಲ್ಲೆಯಲ್ಲಿ ಮತ್ತೆ ನೀರಿನ ಬವಣೆ ಎದುರಾಗಿದೆ. ತಿಪಟೂರು, ಗುಬ್ಬಿ, ಶಿರಾ ಸೇರಿದಂತೆ ಬಹುತೇಕ ತಾಲೂಕಿನ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಅನ್ನದಾತರು ಕಂಗಾಲಾಗಿದ್ದಾರೆ. ಪ್ರತಿವರ್ಷ ಹೇಮಾವತಿಯಿಂದ ತುಮಕೂರು ಜಿಲ್ಲೆಗೆ 24.5 ಟಿ.ಎಂ.ಸಿ.ನೀರು ಬಿಡಬೇಕು. ಆದ್ರೆ 4 ರಿಂದ 5 ಟಿ.ಎಂ.ಸಿ. ನೀರು ಮಾತ್ರ ಹರಿಸಿ ಸುಮ್ಮನಾಗುತ್ತಿದ್ದಾರೆ.

    ಅಲ್ಪ ಪ್ರಮಾಣದ ನೀರಿನಿಂದ ಜಿಲ್ಲೆಯ ಯಾವ ಕೆರೆಯೂ ತುಂಬುತ್ತಿಲ್ಲ. ಕುಡಿಯೋದಕ್ಕೆ ಹಾಗೂ ಕೃಷಿಗೆ ನೀರಿಲ್ಲದೆ ರೈತರು ಸಂಕಷ್ಟಪಡುವಂತಾಗಿದೆ. ಇದಕ್ಕೆಲ್ಲ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವೇ ಕಾರಣವೆಂದು ಜನರು ದೂರುತ್ತಿದ್ದಾರೆ. ಸಚಿವ ರೇವಣ್ಣ ನೀರು ಬಿಡದಂತೆ ಹಸ್ತಕ್ಷೇಪ ಮಾಡುತ್ತಿದ್ದು, ನೆಪಮಾತ್ರಕ್ಕೆ ನೀರು ಬಿಟ್ಟು ಕೈತೊಳೆದುಕೊಳ್ಳುತ್ತಿದ್ದಾರೆಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಹೇಮಾವತಿ ನೀರು ಬಾರದೇ ತಿಪಟೂರಿನ ಹಲವು ಏತನೀರಾವರಿ ಘಟಕಗಳು ಸದ್ಯ ಪಾಳು ಬಿದ್ದಿವೆ. ತಿಪಟೂರು ತಾಲೂಕಿನ ಗೌಡನಕಟ್ಟೆ, ಗುರುಗದಹಳ್ಳಿಗಳಲ್ಲಿನ ಕೆರೆಗಳಲ್ಲಿ ನೀರಿಲ್ಲದ ಪರಿಣಾಮ ಸುಮಾರು 13 ಕೋಟಿ ರೂ ನಿರ್ಮಾಣವಾದ ನೀರು ಸರಬರಾಜು ಘಟಕಗಳು ಪಾಳು ಬಿದ್ದಿವೆ. ಪರಿಣಾಮವಾಗಿ ಈ ಭಾಗದ ಜನರು ಕುಡಿಯಲು, ಕೃಷಿ ಚಟುವಟಿಕೆಗೆ ನೀರಿಲ್ಲದೆ ಪರಿತಪಿಸುತ್ತಿದ್ದಾರೆ ಅಂತ ಗೌಡನಕಟ್ಟೆ ನಿವಾಸಿ ರಾಜಶೇಖರಯ್ಯ ತಿಪಟೂರು ಹೇಳಿದ್ದಾರೆ.

    ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ತುಮಕೂರು ಜಿಲ್ಲೆಗೆ ಹರಿಸುತ್ತಿಲ್ಲ. ಈ ಬಾರಿಯೂ ನೀರು ಬಿಡದಿದ್ದರೆ ದೇವೇಗೌಡರ ಕುಟುಂಬದ ವಿರುದ್ಧ ಉಗ್ರ ಹೋರಾಟ ಮಾಡೋ ಎಚ್ಚರಿಕೆಯನ್ನು ಜಿಲ್ಲೆಯ ಜನತೆ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv