Tag: Hemavathi

  • ಹಾಸನದಲ್ಲಿ ಮಳೆ ಆರ್ಭಟ – ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳ

    ಹಾಸನದಲ್ಲಿ ಮಳೆ ಆರ್ಭಟ – ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳ

    ಹಾಸನ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹೇಮಾವತಿ ಜಲಾಶಯಕ್ಕೆ (Hemavathi Reservoir) ಒಳಹರಿವು ಹೆಚ್ಚಾಗಿದೆ.ಇದನ್ನೂ ಓದಿ: ಏರ್ ಇಂಡಿಯಾದ ಮತ್ತೊಂದು ವಿಮಾನದಲ್ಲಿ ತಾಂತ್ರಿಕ ದೋಷ – ಕೋಲ್ಕತ್ತಾದಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಿದ ಸಿಬ್ಬಂದಿ

    ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಸಕಲೇಶಪುರ, ಆಲೂರು, ಹಾಸನ, ಬೇಲೂರು ಭಾಗದಲ್ಲಿ ಬಿರುಗಾಳಿ ಸಹಿತ ವರುಣ ಅಬ್ಬರಿಸುತ್ತಿದ್ದಾನೆ.

    ಮಳೆಯ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜಿಲ್ಲೆಯ ಬಹುತೇಕ ಕಡೆ ಮೋಡ ಕವಿದ ವಾತಾವರಣವಿದೆ. ಸಕಲೇಶಪುರ, ಚಿಕ್ಕಮಗಳೂರು ಭಾಗದಲ್ಲಿ ಭಾರೀ ಮಳೆ ಹಿನ್ನೆಲೆ ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಹೇಮಾವತಿ ಜಲಾಶಯಕ್ಕೆ ಒಟ್ಟು 8,276 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿ, ನಾಲೆಗಳು ಸೇರಿ ಒಟ್ಟು 350 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.ಇದನ್ನೂ ಓದಿ: Iran-Israel Conflict | ಕರ್ನಾಟಕಕ್ಕೆ ಬರುತ್ತಿದ್ದ ಮಸಾಲೆ, ಡ್ರೈಫ್ರೂಟ್ಸ್‌ ಸಪ್ಲೈ ಬಂದ್

  • ಹೇಮಾವತಿ ಹಿನ್ನೀರಿನಲ್ಲಿ ತೇಲುವ ಹಡಗು- ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಶೆಟ್ಟಿಹಳ್ಳಿ ಚರ್ಚ್

    ಹೇಮಾವತಿ ಹಿನ್ನೀರಿನಲ್ಲಿ ತೇಲುವ ಹಡಗು- ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಶೆಟ್ಟಿಹಳ್ಳಿ ಚರ್ಚ್

    ಹಾಸನ: ಜಿಲ್ಲೆ ಹಲವು ವೈಶಿಷ್ಟ್ಯಗಳಿಗೆ ಹೆಸರು ವಾಸಿಯಾಗಿದೆ. ಬೇಲೂರು, ಹಳೇಬೀಡು, ಶ್ರವಣಬೆಳಗೊಳದಲ್ಲಿ ಇತಿಹಾಸ ಪ್ರಸಿದ್ಧ ದೇವಾಲಯಗಳಿವೆ. ಇದರ ಜೊತೆಗೆ ಹಾಸನ ತಾಲೂಕಿನ ಗೊರೂರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್ ಕೂಡ ಒಂದು. ಹೇಮಾವತಿ (Hemavathi0 ಹಿನ್ನೀರಿನಲ್ಲಿರುವ ಈ ಐತಿಹಾಸಿಕ ಚರ್ಚ್ ನೀರಿನಲ್ಲಿ ಮುಳುಗಿ ತೇಲುವಂತೆ ಭಾಸವಾಗುತ್ತಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ 9Tourist) ದಂಡೆ ಹರಿದುಬರುತ್ತಿದೆ.

    ನೀವು ನೋಡ್ತಿರೋದು ನೀರಿನಲ್ಲಿ ತೇಲುವ ಹಡಗಿನಂತೆ ಭಾಸವಾಗ್ತಿದೆ ಅಲ್ವಾ. ಆದರೆ ಇದು ಹಾಸನ ಜಿಲ್ಲೆಯಲ್ಲಿರುವ ಐತಿಹಾಸಿಕ ಶೆಟ್ಟಿಹಳ್ಳಿ ಚರ್ಚ್. ಮಳೆಗಾಲ ಬಂತೆಂದರೆ ಸಾಕು ಪ್ರಕೃತಿಯ ಚೆಲುವನ್ನು ದಿನದಿಂದ ದಿನಕ್ಕೆ ಬದಲು ಮಾಡಿ ಬಿಡುತ್ತದೆ. ಹೊಸತನದಿಂದ ಕಂಗೊಳಿಸುವಂತೆ ಮಾಡುತ್ತದೆ. ಇಂಥ ನಿಸರ್ಗ ಸಿರಿಯನ್ನು ಕಣ್ತುಂಬಿಕೊಳ್ಳುವುದೇ ರಮಣೀಯ. ಬೇಸಿಗೆಯಲ್ಲಿ ಬರಡಾಗಿ ಭಣಗುಡುವ ಹಳ್ಳಕೊಳ್ಳ, ಜಲಾಶಯಗಳ ಹಿನ್ನೀರು, ಮಳೆಗಾಲದಲ್ಲಿ ಒಡಲು ತುಂಬಿಕೊಂಡು ಸಂಭ್ರಮಿಸುವ ರೀತಿಯೇ ಬೇರೆ.

    ಹಾಸನ (Hassan) ಜಿಲ್ಲೆಯ ಜೀವನದಿ ಹೇಮಾವತಿ ಅಣೆಕಟ್ಟೆ ಕಳೆದ ಮೂರು ವರ್ಷಗಳಿಂದಲೂ ಭರ್ತಿಯಾಗಿದೆ. ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿರುವ ಹಳೆಯ ಕಾಲದ ಚರ್ಚ್ ಮುಳುಗಿದ್ದು, ಮಿನಿ ಹಡಗು ನೀರಿನಲ್ಲಿ ತೆಲುವಂತೆ ಕಾಣುತ್ತಿದೆ. ಐತಿಹಾಸಿಕ ಚರ್ಚ್ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಈ ತಾಣದಲ್ಲಿ ಕನ್ನಡ, ತಮಿಳು ಸೇರಿದಂತೆ ಬೇರೆ ಭಾಷೆಯ ಹತ್ತಾರು ಸಿನಿಮಾಗಳ ಶೂಟಿಂಗ್ ನಡೆದಿದೆ. ಹಾಡುಗಳ ಚಿತ್ರೀಕರಣವಾಗಿದೆ. ದೂರದಿಂದ ನೋಡಿದ್ರೆ ತೇಲುತ್ತಿರುವಂತೆ ಭಾಸವಾಗುವ ನಯನ ಮನೋಹರವಾದ ಪ್ರಾರ್ಥನಾಲಯಕ್ಕೆ ಪ್ರವಾಸಿಗರು ದಂಡೇ ಹರಿದು ಬರ್ತಿದೆ. ವೀಕೆಂಡ್ ದಿನಗಳಲ್ಲಿ ಇಲ್ಲಿಗೆ ಹೆಚ್ಚಾಗಿ ಪ್ರವಾಸಿಗರು ಬರುತ್ತಿದ್ದು, ಚರ್ಚ್ ಬ್ಯಾಗ್ರೌಂಡ್‍ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ತಿದ್ದಾರೆ. ಇದನ್ನೂ ಓದಿ: ಕರಾವಳಿ ಸಮುದ್ರದಲ್ಲಿ ಅಪರೂಪದ ಬಾಲವಿಲ್ಲದ ಸನ್ ಫಿಶ್‌ ಪತ್ತೆ

    ಸುತ್ತಲೂ ಹರಡಿಕೊಂಡಿರುವ ತಿಳಿನೀರಿನ ರಾಶಿ, ಹಸಿರು ಹೊದ್ದು ಮಲಗಿರುವ ಬೆಟ್ಟಗುಡ್ಡಗಳ ಸಾಲಿನ ನಡುವೆ ಆಕರ್ಷಣೀಯ ದೃಶ್ಯ ಮತ್ತಷ್ಟು ಮುದಗೊಳಿಸುತ್ತಿದೆ. ಇಟ್ ಈಸ್ ಸೋ ಬ್ಯೂಟಿ ಅಂತ ಪ್ರವಾಸಿಗರು ಸಂತಸ ಪಡುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವ ಅಂದ್ರೆ 1860 ರಲ್ಲಿ ಬ್ರಿಟಿಷ್ ಪಾದ್ರಿಗಳು ನಿರ್ಮಿಸಿದ್ದಾರೆಂದು ಹೇಳಲಾಗುವ ಗೋಥಿಕ್ ವಾಸ್ತು ಶಿಲ್ಪ ಶೈಲಿಯ ಈ ಸುಂದರ ವಿನ್ಯಾಸದ ಚರ್ಚ್ ಹೇಮಾವತಿ ಜಲಾಶಯ ತುಂಬಿದಾಗ ನೀರಿನಲ್ಲಿ ಮುಳುಗಿದರೆ, ಬೇಸಿಗೆಯಲ್ಲಿ ಏಕಾಂಗಿಯಾಗಿರುತ್ತದೆ. ಆದ್ರೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಹಾಗೂ ಪ್ರವಾಸಿ ತಾಣವನ್ನು ಅಭಿವೃದ್ಧಿ ಮಾಡದಿರುವುದಕ್ಕೆ ಬೇಸರದ ಸಂಗತಿ.

    ಆಕರ್ಷಣೀಯ ತಾಣಗಳಲ್ಲಿ ಒಂದಾಗಿರುವ ಶೆಟ್ಟಿಹಳ್ಳಿ ಚರ್ಚ್ ಪ್ರದೇಶವನ್ನ ಅಭಿವೃದ್ಧಿ ಪಡಿಸುವ ಕೆಲಸವಾಗಬೇಕಿದೆ. ಶ್ರವಣಬೆಳಗೊಳ, ಬೇಲೂರು, ಹಳೇಬೀಡಿಗೆ ಬರುವ ಪ್ರವಾಸಿಗರನ್ನು, ಮುಂಗಾರಿನಲ್ಲಿ ಕಂಗೊಳಿಸುವ ಚರ್ಚ್ ಸೂಜಿಗಲ್ಲಿನಂತೆ ಸೆಳೆಯುತ್ತಿರುವುದು ಸುಳ್ಳಲ್ಲ.

    Live Tv
    [brid partner=56869869 player=32851 video=960834 autoplay=true]

  • ಕೊಟ್ಟ ಮಾತು ಉಳಿಸಿಕೊಂಡ ಸಿಎಂ – ಮದಲೂರು ಕೆರೆಗೆ ತಲುಪಿದ ಹೇಮಾವತಿ ನೀರು

    ಕೊಟ್ಟ ಮಾತು ಉಳಿಸಿಕೊಂಡ ಸಿಎಂ – ಮದಲೂರು ಕೆರೆಗೆ ತಲುಪಿದ ಹೇಮಾವತಿ ನೀರು

    ತುಮಕೂರು: ಇಂದು ಹೇಮಾವತಿ ನಾಲೆಯಿಂದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿದು ಬಂದಿದ್ದು, ಸಿಎಂ ಯಡಿಯೂರಪ್ಪ ಉಪಚುನಾವಣೆ ವೇಳೆ ಶಿರಾ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

    ಕಳೆದ ತಿಂಗಳು ನಡೆದ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಮದಲೂರು ಕೆರೆಗೆ ನೀರನ್ನು ಹರಿಸುತ್ತೇವೆ ಎಂಬ ಪ್ರಮುಖ ಅಜೆಂಡಾವನ್ನು ಇಟ್ಟುಕೊಂಡಿತ್ತು. ಅದರಂತೆ ಇಂದು ಮದಲೂರು ಕೆರೆಗೆ ನೀರು ಬಂದು ತಲುಪಿದೆ. ನವೆಂಬರ್ 30ರಂದು ಕಳ್ಳಂಬೆಳ್ಳ ಕೆರೆಯಿಂದ ನೀರು ಬಿಡಲಾಗಿತ್ತು. ಸತತ 6 ದಿನಗಳ ಬಳಿಕ ಇಂದು ಸಂಜೆ 6 ಗಂಟೆ ಸುಮಾರಿಗೆ ಮದಲೂರು ಕೆರೆಗೆ ನೀರು ಹರಿದು ಬಂದಿದೆ.

    250 ಕ್ಯುಸೆಕ್ ನೀರು ಹರಿಯುತಿದ್ದು ಒಂದು ತಿಂಗಳ ಬಳಿಕ ಮದಲೂರು ಕೆರೆ ಭರ್ತಿಯಾಗಲಿದೆ. ಶಿರಾ ತಾಲೂಕಿನ 40 ಹಳ್ಳಿಗಳಿಗೆ ಕುಡಿಯುವ ನೀರು ಈ ಕೆರೆಯಿಂದ ಒದಗಿಸಲಾಗುತ್ತದೆ. ಉಪಚುನಾವಣೆಯ ಪ್ರಚಾರದ ವೇಳೆ ಸಿಎಂ ಯಡಿಯೂರಪ್ಪ ಕೆರೆಗೆ ನೀರು ಹರಿಸುವ ವಾಗ್ದಾನ ಮಾಡಿದ್ದರು. ಅದರಂತೆ ನೀರು ಹರಿಸಿದ್ದಾರೆ.

  • ಲಾಸ್ ಮಾಡಿದವನಲ್ಲಿ ಹಣವಿಲ್ಲದಿದ್ರೆ, ಬೆಂಕಿ ಇಡು ಎಂದವನ ಬಳಿ ವಸೂಲಿ ಮಾಡ್ತೀವಿ: ಮಾಧುಸ್ವಾಮಿ

    ಲಾಸ್ ಮಾಡಿದವನಲ್ಲಿ ಹಣವಿಲ್ಲದಿದ್ರೆ, ಬೆಂಕಿ ಇಡು ಎಂದವನ ಬಳಿ ವಸೂಲಿ ಮಾಡ್ತೀವಿ: ಮಾಧುಸ್ವಾಮಿ

    ಹಾಸನ: ನಷ್ಟ ಮಾಡಿದವನ ಬಳಿ ಹಣವಿಲ್ಲದಿದ್ದರೆ ಬೆಂಕಿ ಇಡು ಎಂದು ಹೇಳಿದವನ ಬಳಿ ವಸೂಲಿ ಮಾಡುತ್ತೇವೆ ಎಂದು ಬೆಂಗಳೂರಿನ ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯ ಗೊರೂರಿನಲ್ಲಿ ಹೇಮಾವತಿ ನದಿಗೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಲಾಸ್ ಮಾಡಿದವರು, ಪ್ರಚೋದನೆ ಮಾಡಿದವರು, ಪಿತೂರಿ ಮಾಡಿದವರಿಂದ ಆಗಿರುವ ನಷ್ಟದ ವಸೂಲಿ ಮಾಡುತ್ತೇವೆ ಎಂದರು.

    ಡಿಜೆ ಹಳ್ಳಿಯಂಥ ಪ್ರಕರಣದಲ್ಲಿ ಭಾಗಿಯಾಗಿರುವ ಸಂಘಟನೆಗಳನ್ನು ಬ್ಯಾನ್ ಮಾಡಲು ಕರ್ನಾಟಕದಲ್ಲಿ 1981 ರಲ್ಲಿ ಕಾಯ್ದೆ ಮಾಡಿದ್ದೆವು. ಅದರ ಪ್ರಕಾರ ಕಮಿಷನ್ ನೇಮಕ ಮಾಡಬೇಕಾಗಿದೆ. ಯಾರು ಪ್ರಚೋದನೆ ಮಾಡಿದ್ದಾರೆ. ಯಾರು ಸಂಘಟನೆ ಮಾಡಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ರಾಜ್ಯ ಸರ್ಕಾರ ನಡೆಸುವಾಗ ಎಮೋಷನಲ್ ಆಗಿ ಮಾತನಾಡಲು ಆಗಲ್ಲ. ಪೊಲೀಸರು ಸಾಕ್ಷ್ಯಾಧಾರ ಕಲೆ ಹಾಕುತ್ತಿದ್ದು, ಅವರು ನ್ಯಾಯಾಲಯಕ್ಕೆ ದಾಖಲೆ ಒದಗಿಸಲಿದ್ದಾರೆ ಎಂದು ತಿಳಿಸಿದರು.

    ಸಿದ್ದರಾಮಯ್ಯ ಅವರು ಈ ಗಲಭೆಗೆ ಸಂಬಂಧಿಸಿದಂತೆ ಇನ್ನೂ ಎರಡು ಮೂರು ವಿಷಯ ಸೇರಿಸಿಕೊಳ್ಳಲು ಹೇಳಿದ್ದಾರೆ. ಸದ್ಯಕ್ಕೆ ಆ ವಿಷಯ ನಮ್ಮ ಮುಂದೆ ಇಲ್ಲ. ತಪ್ಪು ಮಾಡಿದವರನ್ನು ರಕ್ಷಣೆ ಮಾಡುವ ಮಾತೇ ಇಲ್ಲ. ನಾವು ಪಬ್ಲಿಕ್ ಪ್ರಾಪರ್ಟಿಗೆ ಸಂಬಂಧಿಸಿದ ಕಾಯ್ದೆ ಅನ್ವಯ ಹಾನಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಆ ಕಾಯಿದೆಯಲ್ಲಿ ಸಾಕಷ್ಟು ಶಕ್ತಿ ಇಲ್ಲ ಎಂದರೇ ಈ ವಿಚಾರದಲ್ಲಿ ಉತ್ತರ ಪ್ರದೇಶದ ಕಾನೂನು ಏನಿದೆ ಅದನ್ನೂ ಪರಿಶೀಲಿಸಿ, ಇನ್ನೇನಾದರೂ ಕಾಯ್ದೆಯಲ್ಲಿ ತಿದ್ದುಪಡಿ ಮಾಡಬಹುದಾ ಎಂಬುದನ್ನು ನೋಡಿ ನಷ್ಟ ವಸೂಲಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

  • ಹೇಮಾವತಿ, ಕಾವೇರಿ ನದಿಗೆ ತಡೆಗೊಡೆ- ಸಚಿವ ಗೋಪಾಲಯ್ಯ ಭರವಸೆ

    ಹೇಮಾವತಿ, ಕಾವೇರಿ ನದಿಗೆ ತಡೆಗೊಡೆ- ಸಚಿವ ಗೋಪಾಲಯ್ಯ ಭರವಸೆ

    ಹಾಸನ: ರಾಮನಾಥಪುರ ಪಟ್ಟಣದಿಂದ ಹಾದು ಹೋಗಿರುವ ಹೇಮಾವತಿ, ಕಾವೇರಿ ನದಿಯಿಂದ ಹಾನಿಯಾಗದಂತೆ ತಡೆಗೋಡೆ ನಿರ್ಮಿಸಲಾಗುವುದು ಎಂದು ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಭರವಸೆ ನೀಡಿದರು.

    ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸೂಚನೆಯಂತೆ ರಾಮನಾಥಪುರ ನೆರೆ ಹಾವಳಿ ಪ್ರದೇಶದ ಪರಿಶೀಲನೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹೇಮಾವತಿ, ಕಾವೇರಿ ನದಿಯಿಂದ ಆಗಿರುವಂತಹ ಹಾನಿಯನ್ನು ಕಂಡಿದ್ದು ಮುಂದಿನ ಕೆಲ ದಿನಗಳಲ್ಲಿ ತಡೆಗೋಡೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

    ಪ್ರತಿವರ್ಷ ಮಳೆಯ ಅವಾಂತರ ಹೆಚ್ಚುತ್ತಿದ್ದು ಸಕಲೇಶಪುರ ಮಡಿಕೇರಿ ಹಾಗೂ ಇತರ ಜಿಲ್ಲೆಗಳಲ್ಲಿ ಹೆಚ್ಚು ಹಾನಿ ಸಂಭವಿಸುತ್ತಿದೆ. ಇದಕ್ಕೆ ಅರಣ್ಯನಾಶವು ಒಂದು ಕಾರಣವಾಗಿದೆ. ಮೂರ್ನಾಲ್ಕು ತಿಂಗಳು ಬರಬೇಕಾದ ಮಳೆ 8-10 ದಿನದಲ್ಲಿ ಸುರಿಯುತ್ತಿರುವುದರಿಂದ ಇಂತಹ ಅನಾಹುತಗಳು ಸಂಭವಿಸುತ್ತಿವೆ ಎಂದು ಹೇಳಿದರು.

    ಜಿಲ್ಲೆಯ ಜಲಾಶಯಗಳ ಹಿನ್ನೀರಿನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನೀರಿನ ಹರಿವು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ಹಾಗೂ ಇತರ ಜಿಲ್ಲೆಗಳಿಗೆ ನಾಲೆಗಳ ಮೂಲಕ ಕೆರೆಕಟ್ಟೆ ತುಂಬಿಸಲು ನೀರನ್ನು ಹರಿ ಬಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

    ರಾಮನಾಥಪುರ ಪಟ್ಟಣಕ್ಕೆ ಹೇಮಾವತಿ, ಕಾವೇರಿ ನೀರು ಉಕ್ಕಿ ಹರಿಯದಂತೆ ತಡೆಗೋಡೆ ನಿರ್ಮಾಣ ನಮ್ಮ ಸರ್ಕಾರದ ಅವಧಿಯಲ್ಲಿ ಪೂರ್ಣಗೊಳಿಸುವುದು ನಿಶ್ಚಿತ. ಸರ್ಕಾರ ಜನರ ಸಂಕಷ್ಟಗಳಿಗೆ ಸೂಕ್ತವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅರಕಲಗೂಡು ಕ್ಷೇತ್ರದ ಶಾಸಕ ಎ ಟಿ ರಾಮಸ್ವಾಮಿ ಮಾಜಿ ಸಚಿವ ಮಂಜು ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

  • ಹೇಮಾವತಿ ಅಣೆಕಟ್ಟೆಯಿಂದ ನಾಲೆಗೆ ನೀರು ಹರಿಸಿ: ಸಚಿವ ಗೋಪಾಲಯ್ಯ ಸೂಚನೆ

    ಹೇಮಾವತಿ ಅಣೆಕಟ್ಟೆಯಿಂದ ನಾಲೆಗೆ ನೀರು ಹರಿಸಿ: ಸಚಿವ ಗೋಪಾಲಯ್ಯ ಸೂಚನೆ

    ಹಾಸನ: ಈ ಕೂಡಲೇ ಹೇಮಾವತಿ ಅಣೆಕಟ್ಟೆಯಿಂದ ನಾಲೆಗೆ ನೀರು ಹರಿಸುವಂತೆ ಹಾಸನದಲ್ಲಿ ಉಸ್ತುವಾರಿ ಸಚಿವ ಗೋಪಾಲಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ನದಿಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಲವಾರು ಜಿಲ್ಲೆಯ ರೈತರು ನೀರು ಬಿಡಿ ಎನ್ನುತ್ತಿದ್ದಾರೆ. ಹೀಗಾಗಿ ನೀರು ಬಿಡಲು ಆದೇಶ ನೀಡುತ್ತಿರುವುದಾಗಿ ಸಚಿವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಗುಡ್ಡಕುಸಿಯುವುದು, ನೀರು ಹೆಚ್ಚು ಬರುವ ಸ್ಥಳಗಳಿದ್ದರೆ ಕೂಡಲೇ ಜನರನ್ನು ಸ್ಥಳಾಂತರಿಸಲು ಸೂಚಿಸಿದ್ದೇನೆ. ಬೆಳೆ ನಷ್ಟ, ಜೀವಹಾನಿ, ಮನೆ ಬಿದ್ದು ಹೋಗಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಮನೆ ಕಳೆದುಕೊಂಡವರಿಗೆ ತಕ್ಷಣ ಹತ್ತು ಸಾವಿರ ಹಣ ನೀಡಿ, ವರದಿ ಬಂದ ನಂತರ ಮತ್ತಷ್ಟು ಪರಿಹಾರ ನೀಡಲಾಗುವುದು. ಇಂದು ನಾಳೆ ಹಾಸನದಲ್ಲೇ ಇದ್ದು ಕೆಲವು ಸ್ಥಳಗಳಿಗೆ ನಾನೇ ಖುದ್ದು ಭೇಟಿ ನೀಡುತ್ತೇನೆ. ಜಿಲ್ಲೆಯಲ್ಲಿ ಇದುವರೆಗೂ 190ಕ್ಕೂ ಹೆಚ್ಚು ಮನೆ ಬಿದ್ದಿದೆ. ಓರ್ವ ಮಳೆಯಿಂದ ಸಾವನ್ನಪ್ಪಿದ್ದಾರೆ. 2,100 ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಜೋಳದ ಬೆಳೆ ನಷ್ಟವಾಗಿದೆ. 779 ಹೆಕ್ಟೇರ್ ಭತ್ತ ನಾಶವಾಗಿದೆ. ಈ ಎಲ್ಲದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ. ಸರ್ಕಾರ ಜಿಲ್ಲೆಯ ಜನರ ಕಷ್ಟಕ್ಕೆ ಸ್ಪಂದಿಸಲಿದೆ ಎಂದು ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.

  • ವಾರದ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯೋಧ ನೀರಿನಲ್ಲಿ ಮುಳುಗಿ ಸಾವು

    ವಾರದ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯೋಧ ನೀರಿನಲ್ಲಿ ಮುಳುಗಿ ಸಾವು

    ಮಡಿಕೇರಿ: ಈಜಲು ತೆರಳಿದ್ದ ವೇಳೆ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಟ್ಟೆಪುರ ಸಮೀಪದ ಹೇಮಾವತಿ ಹಿನ್ನೀರಿನ ಬಳಿ ನಡೆದಿದೆ.

    ಸೋಮವಾರಪೇಟೆ ತಾಲೂಕಿನ ಬೆಸ್ಸೂರಿನ ನಿವಾಸಿಗಳಾದ ಸೈನಿಕ ಲೋಕೇಶ್ (30) ಹಾಗೂ ಲತೇಶ್ (27) ನೀರಿನಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿಗಳು. ಇಬ್ಬರೂ ಮಧ್ಯಾಹ್ನ ಹೇಮಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದರು.

    ಉತ್ತರಾಖಂಡ್‍ನಲ್ಲಿ ಸೈನಿಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಲೋಕೇಶ್‍ಗೆ ವಾರದ ಹಿಂದೆಯಷ್ಟೇ ಹಾಸನ ಮೂಲದ ಯುವತಿ ಜೊತೆಗೆ ನಿಶ್ಚಿತಾರ್ಥವಾಗಿತ್ತು. 2009ರಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ನೀರಿನಲ್ಲಿ ಮುಳುಗಿರುವ ಲತೇಶ್ ಮೃತ ದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ತೀವ್ರ ಶೋಧ ಮುಂದುವರೆಸಿದ್ದಾರೆ. ಸ್ಥಳಕ್ಕೆ ಶನಿವಾರಸಂತೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಹೇಮಾವತಿ ನೀರಿಗಾಗಿ ಹೋರಾಟಕ್ಕಿಳಿದ ಸಿದ್ದರಬೆಟ್ಟ ಶ್ರೀಗಳು

    ಹೇಮಾವತಿ ನೀರಿಗಾಗಿ ಹೋರಾಟಕ್ಕಿಳಿದ ಸಿದ್ದರಬೆಟ್ಟ ಶ್ರೀಗಳು

    ತುಮಕೂರು: ಹೇಮಾವತಿ ನೀರಿಗಾಗಿ ಸಿದ್ದರಬೆಟ್ಟ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಬೈಕ್ ರ‍್ಯಾಲಿ ನಡೆಸುವ ಮೂಲಕ ಹೋರಾಟಕ್ಕೆ ಇಳಿದಿದ್ದಾರೆ. ಮಾಜಿ ಡಿಸಿಎಂ ಜಿ. ಪರಮೇಶ್ವರ ಅವರ ಸ್ವಕ್ಷೇತ್ರ ಕೊರಟಗೆರೆ ತಾಲೂಕಿನ ತೋವಿನಕೆರೆಯ ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಬೃಹತ್ ಬೈಕ್  ರ‍್ಯಾಲಿ ನಡೆಸಿದರು.

    ಸ್ವಾಮೀಜಿ ನೇತೃತ್ವದಲ್ಲಿ ತೋವಿನಕೆರೆಯಿಂದ ರ‍್ಯಾಲಿ ಹೊರಟ ನೂರಾರು ಪ್ರತಿಭಟನಾಕಾರರು ತುಮಕೂರಿನ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಬೈಕ್ ರ‍್ಯಾಲಿ ಅಂತ್ಯಗೊಳಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಕಳೆದ ಹತ್ತು- ಹದಿನೈದು ವರ್ಷದಿಂದಲೂ ಈ ಭಾಗದಲ್ಲಿ ಸರಿಯಾಗಿ ಮಳೆಯಾಗಿಲ್ಲ. ಹಾಗಾಗಿ ಕುಡಿಯುವ ನೀರಿಗೂ ತೀವ್ರ ಸಮಸ್ಯೆ ಉಂಟಾಗಿದೆ. ಜಾನುವಾರುಗಳಿಗೂ ಮೇವಿನ ತೊಂದರೆ ಆಗಿದೆ. ಹೀಗಾಗಿ ಸಮಸ್ಯೆಯನ್ನು ಪರಿಹಾರ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಜಿಲ್ಲೆಯ ತಿಪಟೂರು, ತುರುವೇಕೆರೆ, ಗುಬ್ಬಿ, ಕುಣಿಗಲ್ ಸೇರಿದಂತೆ ಇತರೆ ತಾಲೂಕಿನ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸಲಾಗುತ್ತಿದೆ. ತೋವಿನಕೆರೆ ಸುತ್ತಮುತ್ತಲಿನ ಭಾಗಕ್ಕೆ ನೀರು ಬಿಟ್ಟಿಲ್ಲ. ಮಳೆಯೂ ಬಂದಿಲ್ಲ. ಕೂಡಲೇ ಹೇಮಾವತಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಇಂದು ಮಾಡಿದ ಹೋರಾಟ ಸಾಂಕೇತಿಕವಾಗಿದ್ದು ನೀರು ಹರಿಸದೇ ಇದ್ದರೆ ಮುಂದಿನ ದಿನದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ಕೊಟ್ಟಿದ್ದಾರೆ.

  • ಕೆಆರ್‌ಎಸ್‌ ಒಳಹರಿವು ಹೆಚ್ಚಳ, ಕಬಿನಿ ಭರ್ತಿಗೆ 4 ಅಡಿ ಬಾಕಿ

    ಕೆಆರ್‌ಎಸ್‌ ಒಳಹರಿವು ಹೆಚ್ಚಳ, ಕಬಿನಿ ಭರ್ತಿಗೆ 4 ಅಡಿ ಬಾಕಿ

    ಬೆಂಗಳೂರು: ಪ್ರಾರಂಭದಲ್ಲಿ ಅಷ್ಟೇನು ಮಳೆಯಾಗಿಲ್ಲದ ಕಾರಣ ಈ ಬಾರಿ ಜಲಾಶಯಗಳು ಭರ್ತಿಯಾಗುವುದಿಲ್ಲ ಎಂಬ ಆತಂಕ ರೈತರಲ್ಲಿ ಮನೆ ಮಾಡಿತ್ತು. ಆದರೆ, ಇತ್ತೀಚೆಗೆ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಕೆಆರ್‌ಎಸ್‌ ಸೇರಿದಂತೆ ಎಲ್ಲ ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ.

    ಕೊಡಗು, ಹಾಸನ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬಿರುಸುಗೊಂಡ ಹಿನ್ನೆಲೆ ಕೆಆರ್‌ಎಸ್‌ ಡ್ಯಾಂನ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಡ್ಯಾಂನ ಒಳ ಹರಿವು 26,522 ಕ್ಯೂಸೆಕ್ ಏರಿಕೆಯಾಗಿದೆ. ಬೆಳಗ್ಗೆ 22,719 ಕ್ಯೂಸೆಕ್ ಇದ್ದ ಒಳ ಹರಿವು ಸಂಜೆ ಹೊತ್ತಿಗೆ 26,522 ಕ್ಯೂಸೆಕ್‍ಗೆ ತಲುಪಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಇದ್ದು, ಇಂದು 88.60 ಅಡಿ ನೀರು ಸಂಗ್ರವಾಗಿದೆ. ಒಳ ಹರಿವು 26,522 ಕ್ಯೂಸೆಕ್ ಇದ್ದು, ಪ್ರಸ್ತುತ 15.121 ಟಿಎಂಸಿ ನೀರು ಸಂಗ್ರಹವಾಗಿದೆ.

    ಕೇರಳದ ವಯನಾಡಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಒಳಹರಿವಿನಲ್ಲಿಯೂ ಹೆಚ್ಚಳವಾಗಿದ್ದು, ಭರ್ತಿಯಾಗಲು ಕೆಲವೇ ಅಡಿಗಳಷ್ಟು ಬಾಕಿ ಇದೆ. ಹೀಗಾಗಿ ಹೊರಹರಿವು ಕೂಡ ಹೆಚ್ಚಳವಾಗಿದೆ.

    ಕಬಿನಿ ಜಲಾಶಯದ ನೀರಿನ ಮಟ್ಟ 80 ಅಡಿ ತಲುಪಿದ್ದು, ಗರಿಷ್ಠ ಮಟ್ಟ 84 ಅಡಿ ಆಗಿದೆ. ಜಲಾಶಯದ ಸದ್ಯದ ಒಳಹರಿವು 23,000 ಕ್ಯೂಸೆಕ್ ಆಗಿದ್ದು, ಹೊರಹರಿವು 10,000 ಕ್ಯೂಸೆಕ್ ಇದೆ. ಜಲಾಶಯದ ಸಂಪೂರ್ಣ ಭರ್ತಿಗೆ 4 ಅಡಿಗಳು ಮಾತ್ರ ಬಾಕಿ ಇದ್ದು, ಒಳಹರಿವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಜಲಾಶಯದಿಂದ ಹೊರಹರಿವು ಹೆಚ್ಚಳ ಮಾಡಲಾಗಿದೆ.

    ಕಪಿಲಾ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕಪಿಲಾ ನದಿಯ ಇಕ್ಕೆಲಗಳ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

    ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯ ಸಹ ಭರ್ತಿಯಾಗುತ್ತಿದ್ದು, ನೀರಿನ ಮಟ್ಟದಲ್ಲಿಯೂ ಸಹ ಹೆಚ್ಚಳವಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2,922 ಅಡಿ ಆಗಿದ್ದು, 2,899.77 ಅಡಿಯಷ್ಟು ಭರ್ತಿಯಾಗಿದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 37.103 ಟಿಎಂಸಿಯಾಗಿದ್ದು, ಒಳಹರಿವು 28,317 ಕ್ಯೂಸೆಕ್ ಆಗಿದೆ.

  • ಸಭೆಯಲ್ಲಿ ಪರಮೇಶ್ವರ್‌ಗೆ ಫೋನ್ ಮಾಡಿದಂತೆ ನಾಟಕವಾಡಿದ್ರಾ ರೇವಣ್ಣ?- ವಿಡಿಯೋ ನೋಡಿ

    ಸಭೆಯಲ್ಲಿ ಪರಮೇಶ್ವರ್‌ಗೆ ಫೋನ್ ಮಾಡಿದಂತೆ ನಾಟಕವಾಡಿದ್ರಾ ರೇವಣ್ಣ?- ವಿಡಿಯೋ ನೋಡಿ

    ಬೆಂಗಳೂರು: ರೇವಣ್ಣರಿಂದ ನನಗೆ ಯಾವುದೇ ಕರೆ ಬಂದಿಲ್ಲ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳುವ ಮೂಲಕ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಗಳ ನಡುವೆ ಸಂವಹನ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಬಹಿರಂಗವಾಗಿದೆ.

    ಜಿಲ್ಲೆಗೆ ಹೇಮಾವತಿ ಜಲಾಶಯದಿಂದ ಬರಬೇಕಾಗಿದ್ದ ನೀರನ್ನು ಪೂರ್ಣ ಪ್ರಮಾಣದಲ್ಲಿ ಹರಿಸುತ್ತಿಲ್ಲ. ನೀರು ಸರಿಯಾಗಿ ಬರದೇ ಇರಲು ದೇವೇಗೌಡರ ಕುಟುಂಬವೇ ಕಾರಣ ಎಂದು ಸಾರ್ವಜನಿಕರ ಆರೋಪವನ್ನು ಆಧಾರಿಸಿ ಪಬ್ಲಿಕ್ ಟಿವಿ ಗುರುವಾರ ಸುದ್ದಿ ಪ್ರಸಾರ ಮಾಡಿತ್ತು. ಈ ಸುದ್ದಿ ಪ್ರಕಟವಾದ ಬೆನ್ನಲ್ಲೇ ಇಂದು ತರಾತುರಿಯಲ್ಲಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆಯನ್ನು ಕರೆಯಲಾಗಿತ್ತು. ಈ ಸಭೆಗೆ ಹಾಜರಾಗುವಂತೆ ತಿಳಿಸಲು ಲೋಕೋಪಯೋಗಿ ಸಚಿವ ರೇವಣ್ಣ ಅವರು ಹಲವು ಬಾರಿ ಪರಮೇಶ್ವರ್ ಅವರಿಗೆ ಕರೆ ಮಾಡಿದ್ದು, ಈ ಕರೆಗಳಿಗೆ ಡಿಸಿಎಂ ಉತ್ತರಿಸದೇ ಮುನಿಸಿಕೊಂಡಿದ್ದರು ಎನ್ನಲಾಗಿದೆ.  ಇದನ್ನು ಓದಿ:  ಹೇಮಾವತಿ ನಾಲೆಗೆ ಡೈನಾಮೈಟ್ ಇಡ್ತೀನಿ, ತಾಕತ್ತಿದ್ರೆ ತಡೆಯಿರಿ: ಶಿವಲಿಂಗೇಗೌಡ

    ಕರೆ ಸ್ವೀಕರಿಸದ್ದಕ್ಕೆ ಅಸಮಾಧಾನಗೊಂಡ ರೇವಣ್ಣ ಅವರು ಇಂದು ಸಭೆಯ ನಡುವೆಯೇ ಪರಮೇಶ್ವರ್ ಅವರಿಗೆ ಕರೆ ಮಾಡಿ, “ಅಣ್ಣಾ ನಾನು ನಿಮಗೆ ನಿನ್ನೆ ಮೂರ್ನಾಲ್ಕು ಬಾರಿ ಫೋನ್ ಮಾಡಿದ್ದೆ, ನೀವು ರಿಸೀವ್ ಮಾಡಲೇ ಇಲ್ಲ. ಬೇಕಾದರೆ ನಿಮ್ಮವರನ್ನು ಕೇಳಿ ನೋಡಿ” ಎಂದು ನಯವಾಗಿಯೇ ಅಸಮಾಧಾನವನ್ನು ಹೊರಹಾಕಿದ್ದರು. ಇದನ್ನು ಓದಿ: ತುಮಕೂರಿಗೆ ಹೇಮಾವತಿ ನೀರು ಹರಿಸಲು ಹಸ್ತಕ್ಷೇಪ – ದೇವೇಗೌಡ್ರ ಕುಟುಂಬದ ವಿರುದ್ಧ ಜನ ಆರೋಪ

    ರೇವಣ್ಣ ಫೋನ್ ಮಾಡಿದ ಹಿನ್ನೆಲೆಯಲ್ಲಿ ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ ಪರಮೇಶ್ವರ್, ನನಗೆ ರೇವಣ್ಣನವರಿಂದ ಯಾವುದೇ ಫೋನ್ ಬಂದಿಲ್ಲ. ಇಂದು ಸಭೆ ಇದೆ ಎನ್ನುವುದೇ ನನಗೆ ತಿಳಿದಿಲ್ಲ ಎಂದು ಉತ್ತರಿಸಿದರು.

    ಪರಮೇಶ್ವರ್ ಅವರೇ ನನಗೆ ಫೋನ್ ಕರೆ ಬಂದಿಲ್ಲ ಎಂದು ಹೇಳಿದ ಮೇಲೆ ರೇವಣ್ಣ ಸಭೆ ಮಧ್ಯದಲ್ಲೇ ಕರೆ ಮಾಡಿದ್ದು ಯಾರಿಗೆ ಎನ್ನುವ ಪ್ರಶ್ನೆ ಎದ್ದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv