Tag: hemanth nimbalkar

  • ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ನಿಂಬಾಳ್ಕರ್‌ಗೆ ಮುಖ್ಯಮಂತ್ರಿಗಳ ಸ್ವರ್ಣಪದಕ ಪ್ರದಾನ

    ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ನಿಂಬಾಳ್ಕರ್‌ಗೆ ಮುಖ್ಯಮಂತ್ರಿಗಳ ಸ್ವರ್ಣಪದಕ ಪ್ರದಾನ

    ಬೆಂಗಳೂರು: ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು (Naxal Activities) ಶೂನ್ಯಗೊಳಿಸಲು ವಿಶೇಷ ಮುತುವರ್ಜಿಯಿಂದ ಪೊಲೀಸ್ ಕಾರ್ಯಾಚರಣೆಗೆ ಮುಂದಾಳತ್ವ ವಹಿಸಿ, ಮಾರ್ಗದರ್ಶನ ನೀಡುವ ಮೂಲಕ ಎಲ್ಲಾ ನಕ್ಸಲರನ್ನು ಶರಣಾಗುವಂತೆ ಮಾಡಿದ ರಾಜ್ಯ ಗುಪ್ತವಾರ್ತೆ (State Intelligence) ನಿರ್ದೇಶಕ ಹೇಮಂತ್.ಎಂ.ನಿಂಬಾಳ್ಕರ್ (Hemanth Nimbalkar) ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸ್ವರ್ಣಪದಕ ಪ್ರದಾನ ಮಾಡಿದರು.

    ಬೆಂಗಳೂರು ಕೋರಮಂಗಲದ (Koramangala) ಕೆಎಸ್‌ಆರ್‌ಪಿ ಮೈದಾನದಲ್ಲಿ ಇಂದು ಬೆಳಗ್ಗೆ ಪೊಲೀಸ್ ಧ್ವಜ ದಿನಾಚರಣೆ ಸಮಾರಂಭದಲ್ಲಿ ಪದಕ ಪ್ರದಾನ ಮಾಡಲಾಯಿತು. ಇದನ್ನೂ ಓದಿ: Waqf Debate |ವರ್ಷಕ್ಕೆ 12 ಸಾವಿರ ಕೋಟಿ ಆದಾಯ ಸಿಗ್ಬೇಕು, ಆದ್ರೆ ಸಿಕ್ಕಿದ್ದು 166 ಕೋಟಿ: ಕಾಂಗ್ರೆಸ್‌ ವಿರುದ್ಧ ರಿಜಿಜು ಕಿಡಿ

    1998ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಹೇಮಂತ್.ಎಂ.ನಿಂಬಾಳ್ಕರ್ ಅವರು ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಬ್ಲಡ್ ಶುಗರ್ ಲೆವೆಲ್ ಏರಿಕೆ – ಲಾಲೂ ಪ್ರಸಾದ್ ಯಾದವ್ ಆಸ್ಪತ್ರೆಗೆ ದಾಖಲು

  • ರಾಜಕೀಯ ಪಕ್ಷದ ಪ್ರಕಟಣೆಯಿಂದ ಈ ಸ್ಥಿತಿ – ಪಬ್ಲಿಕ್ ಟಿವಿಗೆ ಐಜಿಪಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟನೆ

    ರಾಜಕೀಯ ಪಕ್ಷದ ಪ್ರಕಟಣೆಯಿಂದ ಈ ಸ್ಥಿತಿ – ಪಬ್ಲಿಕ್ ಟಿವಿಗೆ ಐಜಿಪಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟನೆ

    ಕಾರವಾರ: ಹೊನ್ನಾವರದ ಯುವಕ ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ರಾಜಕೀಯ ಪಕ್ಷವೊಂದು ಡಿಸೆಂಬರ್ 9ರಂದು ನೀಡಿದ್ದ ಪತ್ರಿಕಾ ಪ್ರಕಟಣೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಅಪ್ಪಟ ಸುಳ್ಳು ಎಂದು ಪಶ್ಚಿಮ ವಲಯದ ಐಜಿಪಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ವೈಯಕ್ತಿಕ ಹಿತಾಸಕ್ತಿಗಾಗಿ ಧರ್ಮದ ಆಧಾರದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಹಾಗೂ ಕೋಮು ಭಾವನೆಗಳನ್ನು ಕೆರಳಿಸುವ ಷಡ್ಯಂತ್ರವನ್ನು ಮಾಡಲಾಗುತ್ತಿದೆ. ರಾಜಕೀಯ ಪಕ್ಷದ ಪತ್ರಿಕಾ ಪ್ರಕಟಣೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳಿಂದ ಈ ಸ್ಥಿತಿ ನಿರ್ಮಾಣವಾಗಿದ್ದು, ಸಮಾಜವನ್ನು ಒಡೆಯುವ ಕೆಲಸ ನಡೆಸುತ್ತಿದ್ದು, ಇದರ ದುರುದ್ದೇಶವಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಸಿಎಂ ಹೋದ ಜಿಲ್ಲೆಯಲ್ಲೊಂದು ಹಿಂದೂ ಕಾರ್ಯಕರ್ತನ ಹೆಣ ಬೀಳತ್ತೆ- ಶೋಭಾ ಕಿಡಿ

    ಸಭೆ, ಸಮಾರಂಭ ಅಥವಾ ರಾಜಕೀಯ ರ್ಯಾಲಿಯೇ ಆಗಲಿ ಯಾವುದೂ ನಡೆಯದಂತೆ ಬಂದ್ ಮಾಡಲಾಗಿತ್ತು. ಸೆಕ್ಷನ್ 35 ಆ್ಯಕ್ಟ್ ಪ್ರಕಾರ ಕಾರವಾರ ಜಿಲ್ಲಾಧಿಕಾರಗಳು ಆದೇಶ ಹೊರಡಿಸಿದ್ದರು. ಆದ್ರೂ ಅಲ್ಲಿ ಜನ ಸೇರಿ ನಮಗೆ ಮೆರವಣಿಗೆ ಬೇಕು ಅಂತ ಹೇಳುವುದು ಇದೊಂದು ಪ್ಲಾನ್ ಮಾಡಿಕೊಂಡಿರೋ ಆಕ್ರೋಶ ಅಂತ ಸ್ಪಷ್ಟವಾಗಿ ತಿಳಿದುಬರುತ್ತದೆ ಅಂತ ಅವರು ಹೇಳಿದ್ರು. ಇದನ್ನೂ ಓದಿ: ಕುಮಟಾದಲ್ಲಿ ಭುಗಿಲೆದ್ದ ಹಿಂಸಾಚಾರ – ಐಜಿ ನಿಂಬಾಳ್ಕರ್ ಕಾರ್ ಗೆ ಬೆಂಕಿ, ಲಾಠಿಚಾರ್ಜ್

    ಇನ್ನು ಪತ್ರಿಕಾ ಪ್ರಕಟಣೆಯಲ್ಲಿದ್ದಂತಹ ಹೇಳಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತಹ ವಿಷಯಗಳನ್ನೆಲ್ಲಾ ಒಳಪಡಿಸಿ ನಾವು ಒಂದು ಪ್ರಶ್ನೆಯನ್ನು ರೆಡಿ ಮಾಡಿ, ವೈದ್ಯರಿಗೆ ಆ ಪ್ರಶ್ನೆಗಳನ್ನು ಕೊಟ್ಟಿದ್ದೇವೆ. ಅವರು ಕೊಟ್ಟ ಉತ್ತರವನ್ನು ಈಗಾಗಲೇ ನಾವು ತಂದಿದ್ದೇವೆ ಅಂದ್ರು.

    ಈ ರೀತಿ ಸುಳ್ಳು ಪ್ರಚಾರ ಮಾಡಿ ಎರಡು ಸಮುದಾಯಗಳ ಮಧ್ಯೆ ಬಿರುಕು ಮೂಡಿಸುವಂತಹ ಸಂಚು ಕಾಣ್ತಾ ಇದೆ. ಈ ಸುಳ್ಳು ಮಾಹಿತಿಗಳಿಗೆ ಉತ್ತರ ಅಂತ ನಿನ್ನೆ ನಾವು ಪ್ರಕಟಣೆ ಕೊಟ್ಟಿದ್ದೇವೆ. ಅಲ್ಲದೇ ಸುಳ್ಳು ಮಾಹಿತಿ ಹರಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಓರ್ವ ಪ್ರಾಥಮಿಕ ಶಿಕ್ಷಕನನ್ನು ಬಂಧಿಸಿದ್ದೇವೆ ಅಂದ್ರು.

    ಇನ್ನು ಸಾಮಾಜಿ ಜಾಲತಾಣದಲ್ಲಿ ಸುಳ್ಳು ಮೆಸೇಜ್ ಗಳು ಹರಡುತ್ತಿರುವುದರ ಕುರಿತು ಕೂಡ ನಿಗಾ ಇರಿಸಿದ್ದು, ಈ ಮೆಸೇಜ್ ಗಳು ಎಲ್ಲಿಂದ ಉದ್ಭವವಾಗುತ್ತಿವೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಾ ಇದ್ದೇವೆ ಅಂತ ಅವರು ವಿವರಿಸಿದ್ರು. ಸ್ವಂತ ಲಾಭಕ್ಕಾಗಿ ಗಲಭೆ ನಡೆಸಿ ಸಮಾಜದ ಸ್ವಾಸ್ಥ್ಯವನ್ನು ಕಿಡಿಗೇಡಿಗಳು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಅಂತ ಅವರು ಎಚ್ಚರಿಸಿದ್ರು.

    https://www.youtube.com/watch?v=6gDTIt2kztg

    https://www.youtube.com/watch?v=FusuDEDmVe0

    https://www.youtube.com/watch?v=9GHFyRsVyyQ

    https://www.youtube.com/watch?v=mLbtbTysyQg