Tag: hemanth kumar

  • ನಟಿಗೆ ಕಿರುಕುಳ – ನಿರ್ಮಾಪಕ ಹೇಮಂತ್‌ ಕುಮಾರ್‌ ಅರೆಸ್ಟ್‌

    ನಟಿಗೆ ಕಿರುಕುಳ – ನಿರ್ಮಾಪಕ ಹೇಮಂತ್‌ ಕುಮಾರ್‌ ಅರೆಸ್ಟ್‌

    ಬೆಂಗಳೂರು: ನಟಿಗೆ ಲೈಂಗಿಕ ಕಿರುಕುಳ (Sexual Harassment) ನೀಡಿದ ಆರೋಪದಡಿ ರಾಜಾಜಿನಗರ ಪೊಲೀಸರು ನಿರ್ಮಾಪಕ ಹೇಮಂತ್‌ ಕುಮಾರ್‌ (Hemanth Kumar) ಅವರನ್ನು ಬಂಧಿಸಿದ್ದಾರೆ.

    ರಿಚ್ಚಿ (Richie)ಸಿನಿಮಾದ ಶೂಟಿಂಗ್‌ ವೇಳೆ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಟಿಯೊಬ್ಬರು  ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೇಮಂತ್‌ ಕುಮಾರ್‌ ಅವರನ್ನು ಬಂಧಿಸಿದ್ದಾರೆ.  ಇದನ್ನೂ ಓದಿ:  700 ವರ್ಷಗಳ ಹಿಂದಿನ ಕಥೆಗೆ ಶ್ರೀಮುರಳಿ ನಾಯಕ: ಹೊಸ ಚಿತ್ರಕ್ಕೆ ಮುಹೂರ್ತ

    ನಟಿಯ ಆರೋಪ ಏನು?
    2022 ರಲ್ಲಿ ರಿಚ್ಚಿ ಹೆಸರಿನಲ್ಲಿ ಸಿನಿಮಾ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದರು. ನಂತರ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿ ಎರಡು ಲಕ್ಷ ರೂ. ಹಣಕ್ಕೆ ಒಪ್ಪಂದವಾಗಿತ್ತು. ಮುಂಗಡ ಹಣವಾಗಿ ಹೇಮಂತ್‌ ಕುಮಾರ್‌ 60 ಸಾವಿರ ರೂ. ನೀಡಿದ್ದರು.  ಇದನ್ನೂ ಓದಿ:  ಕಾಂತಾರದ ಸಕ್ಸಸ್ ಜರ್ನಿ.. ದುನಿಯಾ ವಿಜಯ್ ವಿಭಿನ್ನವಾಗಿ ಅಭಿನಂದನೆ

    ಸಿನಿಮಾ ಶೂಟಿಂಗ್ ವೇಳೆ ಅರೆಬರೆ ಬಟ್ಟೆ ಧರಿಸುವಂತೆ ಒತ್ತಾಯ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಚಿತ್ರ ಶೂಟಿಂಗ್ ಮುಗಿದ ಮೇಲೆ ಪ್ರಚಾರದ ನೆಪದಲ್ಲಿ ಖಾಸಗಿ ಹೋಟೆಲಿಗೆ ಒಬ್ಬಳೇ ಬರುವಂತೆ ಕಿರುಕುಳ ನೀಡಿದ್ದರು.

    ಈ ಬೇಡಿಕೆಗೆ ಒಪ್ಪದೇ ಇದ್ದಾಗ ಚಿತ್ರದಲ್ಲಿ ಸೆನ್ಸಾರ್ ಆಗದ ಪೋಟೋಗಳನ್ನು ಸೋಷಿಯಲ್ ಮೀಡಿಯದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲದೇ ನನ್ನ ತಾಯಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಟಿ ದೂರು ನೀಡಿದ್ದರು.

  • ವಿಜಯ್ ನಿರ್ದೇಶನದ ಚಿತ್ರದ ಮೂಲಕ ಹೊಸ ಹೀರೋ ಎಂಟ್ರಿ

    ವಿಜಯ್ ನಿರ್ದೇಶನದ ಚಿತ್ರದ ಮೂಲಕ ಹೊಸ ಹೀರೋ ಎಂಟ್ರಿ

    ಲ್ಫಾ ಮೆನ್ ಲವ್ ವೈಲೆನ್ಸ್’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಹೊಸ ಹೀರೋ ಹೇಮಂತ್ ಕಮಾರ್  (Hemanth Kumar)ಎಂಟ್ರಿಕೊಟ್ಟಿದ್ದಾರೆ. ಪಕ್ಕಾ ಮಾಸ್ ಸನಿಮಾ ಮೂಲಕ ಹೇಮಂತ್ ಕನ್ನಡ ಚಿತ್ರಾಭಿಮಾನಿಗಳ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಇಂದು ಶಿವರಾತ್ರಿ ಪ್ರಯುಕ್ತ ಆಲ್ಫಾ ಮೆನ್ ಲವ್ ವೈಲೆನ್ಸ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದೆ ಸಿನಿಮಾತಂಡ. ‘ಆಲ್ಫಾ ಮೆನ್ ಲವ್ ವೈಲೆನ್ಸ್’ ಆಕ್ಷನ್ ಸಿನಿಮಾ ಜೊತೆಗೆ ಅಪ್ಪ ಮತ್ತು ಮಗನ ಸ್ಟ್ರಾಂಗ್ ಎಮೋಷನ್ ಕೂಡ ಹೈಲೆಟ್.

    ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಹೊಸ ಹೀರೋನಾ ಪರಿಚಯ ಮಾಡುತ್ತಿದ್ದಾರೆ ನಿರ್ದೇಶಕ ವಿಜಯ್. ಈ ಮೊದಲು  ಗೀತ ಮತ್ತು ಹೊಯ್ಸಳ ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡಿರುವ ನಿರ್ದೇಶಕ ವಿಜಯ್  (Vijay) ನಿರ್ದೇಶನದ 3ನೇ ಸಿನಿಮಾವಿದು.

    ಸದ್ಯ ಸಿನಿಮಾದ ಮೊದಲ ಲುಕ್ ರಿಲೀಸ್ ಆಗಿದ್ದು ನಾಯಕ ಹೇಮಂತ್ ರಗಡ್ ಗೆಟಪ್ ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ಸಿನಿಮಾದಲ್ಲಿ ಆಕ್ಷನ್ ಮತ್ತು ಕ್ರೈಮ್ ನ ನಭಯಾನಕಥೆ ಎಷ್ಟಿರುತ್ತೆ ಎನ್ನುವುದು ಪೋಸ್ಟರ್ ನೋಡಿದ್ರೆ ಗೊತ್ತಾಗುತ್ತಿದೆ.  ಇನ್ನು ಈ ಸಿನಿಮಾದಲ್ಲಿ ಮೂರು ಪಾತ್ರಗಳು ಡೋಮಿನೇಟ್ ಮಾಡುವುದರಿಂದ ಸಿನಿಮಾಗೆ ಆಲ್ಫಾ ಎಂದು ಟೈಟಲ್ ಇಡಲಾಗಿದೆ ಎನ್ನುತ್ತಾರೆ ನಿರ್ದೇಶಕ ವಿಜಯ್. ಆಲ್ಫಾ ಟೈಟಲ್ ಜೊತೆಗೆ ಮೆನ್ ಲವ್ ವೈಲನ್ಸ್ ಸಬ್ ಟೈಟಲ್ ಕೂಡ ಗಮನ ಸೆಳೆಯುತ್ತಿದೆ..

    ಈ ಸಿನಿಮಾ ಮೂಲಕ ಆನಂದ್ ಕುಮಾರ್ (Anand Kumar) ನಿರ್ಮಾಪಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ‘ಎಲ್ ಎ’ ಬ್ಯಾನರ್ ನಲ್ಲಿ ಆಲ್ಫಾ ಸಿನಿಮಾ ಮೂಡಿಬರುತ್ತಿದೆ. ಇನ್ನು ಹೀರೋ ಆಗಿ ಎಂಟ್ರಿ ಕೊಡುತ್ತಿರುವ ನಾಯಕ ಹೇಮಂತ್ ಕುಮಾರ್ ಈ ಸಿನಿಮಾಗಾಗಿ ಭರ್ಜರಿ ತಯಾರಿಮಾಡಿಕೊಂಡು ಬಂದಿದ್ದಾರೆ. ನಿರ್ದೇಶಕ ಮತ್ತು ನಟ ರಾಘು ಶಿವಮೊಗ್ಗ ಅವರ ಬಳಿ ಆಕ್ಟಿಂಗ್ ತಯಾರಿ ನಡೆಸಿದ್ದಾರೆ. ಅರ್ಜುನ್ ಅವರ ಜೊತೆ ಫೈಟ್ ಅಭ್ಯಾಸ ಮಾಡಿದ್ರೆ, ಭೂಷಣ್ ಅವರ ಪತ್ನಿ ಬಳಿ ಡಾನ್ಸ್ ಕಲಿತಿದ್ದಾರೆ. ನಟನೆ, ಫೈಟ್, ಡಾನ್ಸ್ ಜೊತೆಗೆ ಮಾರ್ಶಲ್ ಆರ್ಟ್ ಕಲಿತಿದ್ದಾರೆ ನಾಯಕ ಹೇಮಂತ್.

    ಈ ಸಿನಿಮಾದಲ್ಲಿ ಕಾರ್ತಿಕ್ ಅವರ ಡಿಒಪಿ, ಅನೂಪ್ ಸೀಳಿನ್ ಅವರ ಸಂಗೀತ ಮತ್ತು ಮಾಸ್ತಿ ಅವರ ಡೈಲಾಗ್ ಇರಲಿದೆ. ಹೇಮಂತ್ ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ, ಉಳಿದಂತೆ ಪಾತ್ರವರ್ಗ ಏನೆಲ್ಲ ಇರಲಿದೆ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.

  • ರಂಗಭೂಮಿ ಕಲಾವಿದರ ‘ಸಾಮ್ರಾಟ್  ಮಾಂಧಾತ’ಕ್ಕೆ 25 ದಿನ

    ರಂಗಭೂಮಿ ಕಲಾವಿದರ ‘ಸಾಮ್ರಾಟ್ ಮಾಂಧಾತ’ಕ್ಕೆ 25 ದಿನ

    ಹೇಮಂತ್ ಪ್ರೊಡಕ್ಷನ್ಸ್ ಅಡಿ ಹೇಮಂತ್ ಕುಮಾರ್ (Hemanth Kumar) ನಿರ್ದೇಶನ ಮಾಡಿರುವ, ಪೌರಾಣಿಕ ಕಥಾಹಂದರ ಹೊಂದಿರುವ  “ಸಾಮ್ರಾಟ್ ಮಂಧಾತ” (Samrat Mandhata) ಚಿತ್ರ ದಿನದಿಂದ ದಿನಕ್ಕೆ  ಜನಮನ್ನಣೆ ಗಳಿಸುತ್ತ ಸಾಗಿ, ಇದೀಗ  ಬೆಂಗಳೂರಿನ ಉಲ್ಲಾಸ್ ಥೇಟರಿನಲ್ಲಿ ಯಶಸ್ವಿಯಾಗಿ 25 ದಿನಗಳನ್ನು  ಪೂರೈಸಿದೆ. ಈಗ ಚಿತ್ರವನ್ನು ರಾಜ್ಯಾದ್ಯಂತ ರಿಲೀಸ್ ಮಾಡುವ ಉದ್ದೇಶ ಹೊಂದಿರುವ ಚಿತ್ರತಂಡ ಮಾಧ್ಯಮಗಳ ಮುಂದೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿತು.‌

    ನಿರ್ದೇಶಕ ಹೇಮಂತ್ ಮಾತನಾಡುತ್ತ ಆರಂಭದಲ್ಲಿ ನಮ್ಮ ಚಿತ್ರವನ್ನು 20 ಥೇಟರುಗಳಲ್ಲಾದರೂ ರಿಲೀಸ್ ಮಾಡಬೇಕೆಂಬ ಆಸೆಯಿತ್ತು. ಆದರೆ ಬಾಡಿಗೆ ಕಟ್ಟುವ ಶಕ್ತಿ ನಮ್ಮಲ್ಲಿರಲಿಲ್ಲ. ಆಗ ವಿತರಕ ರಾಧಾಕೃಷ್ಣ ಅವರು ಮಾತಾಡಿ ನಮಗೆ ಉಲ್ಲಾಸ್ ಥೇಟರ್ ಕೊಡಿಸಿದರು. ಇಲ್ಲೀವರೆಗೆ ಒಂದು ಷೋ‌ ಕೂಡ ಬ್ರೇಕಪ್ ಆಗದೆ ಚಿತ್ರ  ಪ್ರದರ್ಶನವಾಗಿದೆ. ಇನ್ನೂ ಹೆಚ್ಚು ಜನರಿಗೆ ಸಿನಿಮಾನ ತಲುಪಿಸಬೇಕೆಂಬ ಉದ್ದೇಶದಿಂದ ಈಗ ರಾಜ್ಯದ ಇತರೆ ಕೇಂದ್ರಗಳಲ್ಲಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಈಚೆಗೆ ಕೊಪ್ಪಳದಲ್ಲಿ ಚಿತ್ರವನ್ನು ರಿಲೀಸ್ ಮಾಡಿದ್ದೆವು. ಅಲ್ಲೂ ಉತ್ತಮ‌ ಕಲೆಕ್ಷನ್ ಬರುತ್ತಿದೆ. ಇದಲ್ಲದೆ ಯು.ಎಸ್.ನ ನ್ಯೂ ಜರ್ಸಿಯಲ್ಲಿ ಮುಂದಿನ ತಿಂಗಳು ರಿಲೀಸ್ ಮಾಡೋ ಪ್ಲಾನ್ ಇದೆ. ವಿಶೇಷವಾಗಿ 50 ವರ್ಷ ದಾಟಿದ ಹಿರಿಯರಿಗೆ  60  ರೂ. ಟಿಕೆಟ್ ದರ ನಿಗದಿಪಡಿಸಿದ್ದೇವೆ ಎಂದು ವಿವರಿಸಿದರು.

    ನಂತರ ವಿತರಕ ರಾಧಾಕೃಷ್ಣ ಮಾತನಾಡಿ ಒಂದೊಳ್ಳೇ ಸಿನಿಮಾನ ಇನ್ನೂ ಹೆಚ್ಚು ಜನರಿಗೆ ತಲುಪಿಸಲು ಮಾಧ್ಯಮದವರ ಸಹಕಾರವೂ ಬೇಕು ಎಂದು ಹೇಳಿದರು. ನಿರ್ಮಾಪಕರಲ್ಲೊಬ್ಬರಾದ ನಂಜುಂಡಪ್ಪ ಮಾತನಾಡಿ ಸಿನಿಮಾ ತುಂಬಾ ಚೆನ್ನಾಗಿದೆ. ಜನ ಫ್ಯಾಮಿಲಿ ಜೊತೆಗೆ ಬಂದು ಸಿನಿಮಾ ನೋಡ್ತಿದಾರೆ ಎಂದು ಹೇಳಿದರು. ಶನೀಶ್ವರ ಸ್ವಾಮಿ ಪಾತ್ರ ಮಾಡಿರುವ ಸುಂದರಬಾಬು ಮಾತನಾಡಿ ಕಲಿಯ ಶಾಪವಿಮೋಚನೆ ಹೇಗಾಗುತ್ತದೆ ಎಂಬ ವಿಷಯ ಇಟ್ಟುಕೊಂಡು ಮಾಡಿದ ಚಿತ್ರವಿದು. ಪೌರಾಣಿಕ ಚಿತ್ರಗಳನ್ನು ಜನ ಯಾವತ್ತೂ ಇಷ್ಟಪಡುತ್ತಾರೆ ಅಂತ ನಮ್ಮ ಚಿತ್ರ ತೋರಿಸಿಕೊಟ್ಟಿದೆ.  ಖಂಡಿತ 50 ದಾಟಿ 100 ದಿನ ಪೂರೈಸುತ್ತದೆ ಎಂದರು.

     

    ಚಿತ್ರದಲ್ಲಿ ಮಾಂಧಾತನಾಗಿ ರಂಗಭೂಮಿ ಕಲಾವಿದ  ಬಸವರಾಜು,  ಬಿಂದುಮತಿಯಾಗಿ  ಭಾರತಿ, ನಾರದನಾಗಿರುವ ನಂಜುಂಡಪ್ಪ, ಶೌಭರಿ ಮಹರ್ಷಿಯಾಗಿ ನರಸಿಂಹಮೂರ್ತಿ, ಯವನಾಶ್ವನಾಗಿರುವ  ಮಂಜುನಾಥ ಕಾಣಿಸಿಕೊಂಡಿದ್ದಾರೆ. ಸಾಮ್ರಾಟ ಮಾಂಧಾತ ಚಿತ್ರಕ್ಕೆ ಆರ್.ವೀರೇಂದ್ರಕುಮಾರ್ ಸಂಭಾಷಣೆ ಸಾಹಿತ್ಯ ರಚಿಸಿದ್ದಾರೆ. ಶಿವರಾಮ್ ಅವರ ಸಂಕಲನವಿದೆ.

  • ಹಾಲಿವುಡ್ ನ ಪೀಟರ್ ಜಾಕ್ಸನ್ ಮಾದರಿ ಅನುಸರಿಸಿದ ರಕ್ಷಿತ್ ಶೆಟ್ಟಿ ಅಂಡ್ ಟೀಮ್

    ಹಾಲಿವುಡ್ ನ ಪೀಟರ್ ಜಾಕ್ಸನ್ ಮಾದರಿ ಅನುಸರಿಸಿದ ರಕ್ಷಿತ್ ಶೆಟ್ಟಿ ಅಂಡ್ ಟೀಮ್

    ಕ್ಷಿತ್ ಶೆಟ್ಟಿ  (Rakshit Shetty) ಮುಖ್ಯ ಭೂಮಿಕೆಯ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಚಿತ್ರವು ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಮೊದಲ ಭಾಗವಾದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ A’ ಸೆಪ್ಟೆಂಬರ್ 01 ಮತ್ತು ಎರಡನೆಯ ಭಾಗವಾದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ B’  ಅಕ್ಟೋಬರ್ 20ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಣ ಮತ್ತು ವಿತರಣೆ ಸಂಸ್ಥೆಯಾದ ಕೆ.ವಿ.ಎನ್. ಪ್ರೊಡಕ್ಷನ್ಸ್ ಈ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದೆ.

    ಈ ರೀತಿಯಲ್ಲಿ ಒಂದೇ ಸಲ ಸಿನಿಮಾ ರೆಡಿ ಮಾಡಿ, ಎರಡು ಭಾಗವಾಗಿ ಬಿಡುಗಡೆ ಮಾಡುವುದು ತೀರಾ ಅಪರೂಪ. ಹಾಲಿವುಡ್‌ನ ಪೀಟರ್ ಜಾಕ್ಸನ್ ‘ಲಾರ್ಡ್ ಆಫ್ ದ ರಿಂಗ್ಸ್’ ಮತ್ತು ‘ಹಾಬಿಟ್’ ಸಿನಿಮಾಗಳನ್ನು ಸಂಪೂರ್ಣ ಶೂಟ್ ಮುಗಿಸಿ ಪ್ರತಿ ವರ್ಷದ ಡಿಸೆಂಬರ್‌ಗೆ ಒಂದೊಂದು ಸಿನಿಮಾ ರಿಲೀಸ್ ಮಾಡಿದ್ದರು. ಭಾರತೀಯ ಹೆಮ್ಮೆಯ ನಿರ್ದೇಶಕ ಮಣಿರತ್ನಂ ಕೂಡ ಪೊನ್ನಿಯನ್ ಸೆಲ್ವನ್ ಸಿನಿಮಾನ ಸಂಪೂರ್ಣ ಮುಗಿಸಿ ರೆಡಿ ಇಟ್ಕೊಂಡು ಒಂದು ವರ್ಷದ ಗ್ಯಾಪಲ್ಲಿ ಎರಡು ಪಾರ್ಟುಗಳನ್ನು ರಿಲೀಸ್ ಮಾಡಿದರು. ಇದೇ ಮಾದರಿಯನ್ನೇ ಸಪ್ತ ಸಾಗರದಾಚೆ ಎಲ್ಲೋ ಟೀಮ್ ಅನುಸರಿಸುತ್ತಿದೆ.

    ಸಿಂಪಲ್ ಸ್ಟಾರ್ ರಕ್ಷಿತ್ ಇದೀಗ `ಸಪ್ತಸಾಗರದಾಚೆ ಎಲ್ಲೋ’ (Saptasagaradache Yello) ಚಿತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ರಕ್ಷಿತ್‌ಗೆ ನಾಯಕಿಯರಾಗಿ ರುಕ್ಮಿಣಿ ವಸಂತ್ (Rukmini Vasanth) ಮತ್ತು ಚೈತ್ರಾ ಆಚಾರ್ (Chaitra Achar) ನಟಿಸಿದ್ದಾರೆ. ಇನ್ನೂ ಬರೋಬ್ಬರಿ 137 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ.  ಇದನ್ನೂ ಓದಿ:ಡಿವೋರ್ಸ್ ಆಗಿ ಒಂದು ವಾರ ಕಳೆದಿಲ್ಲ ಹೆಂಡ್ತಿ ಬೇಕು ಎಂದ ಸುಶ್ಮಿತಾ ಸೇನ್ ಅಣ್ಣ

    `ಕವಲು ದಾರಿ’ (Kavaludari) ಚಿತ್ರದ ನಂತರ ನಿರ್ದೇಶಕ ಹೇಮಂತ್ `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್‌ಗೆ ಒಂದಷ್ಟು ದಿನ ವರ್ಕ್ಶಾಪ್ ನಡೆಸಿ ನಂತರ ಚಿತ್ರೀಕರಣ ಆರಂಭಿಸಿದ್ದರು. ಚಿತ್ರದಲ್ಲಿ 2 ಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ರಕ್ಷಿತ್ ನಟಿಸಿದ್ದಾರೆ.

    ತನ್ನ ಪಾತ್ರಕ್ಕಾಗಿ ರಕ್ಷಿತ್ 15 ರಿಂದ 20 ಕೆಜಿ ತೂಕ ಹೆಚ್ಚಿಸಿಕೊಂಡು ಮತ್ತೆ ತೂಕ ಇಳಿಸಿಕೊಂಡು ಕಸರತ್ತು ಕೂಡ ಮಾಡಿದ್ದಾರೆ. ಚಿತ್ರದಲ್ಲಿ ನಾಯಕನ 25 ಹಾಗೂ 45ರ ವಯೋಮಾನದ ಕುರಿತ ಕಥೆ ಇದೆ. ಅದಕ್ಕೆ ತಕ್ಕಂತೆ ಅರ್ಧ ಸಿನಿಮಾ ಸ್ಲಿಮ್ ಅಂಡ್ ಸ್ಮಾರ್ಟ್ ಕಾಲೇಜು ಹುಡುಗನಾಗಿ ರಕ್ಷಿತ್ ಮಿಂಚಿದ್ದಾರೆ. ಹಾಗೆಯೇ ಗಡ್ಡ ಬಿಟ್ಟು ರಗಡ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ. `777 ಚಾರ್ಲಿ’ ಸಿನಿಮಾದ ಸೂಪರ್ ಸಕ್ಸಸ್ ನಂತರ ರಕ್ಷಿತ್ ಶೆಟ್ಟಿ ಅವರನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ.

     

    ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರ ಪಾತ್ರ ಎರಡು ಶೇಡ್ ಗಳಲ್ಲಿರುತ್ತದೆ. ಎರಡು ಕಾಲಘಟ್ಟಗಳಲ್ಲಿ ಕಥೆ ನಡೆಯಲಿದೆ. ರಕ್ಷಿತ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಚೈತ್ರಾ ಆಚಾರ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ಗೋಪಾಲಕೃಷ್ಣ ದೇಶಪಾಂಡೆ, ರಮೇಶ್ ಇಂದಿರಾ ಮುಂತಾದವರು ನಟಿಸಿದ್ದಾರೆ.

  • ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್‌ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ

    ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್‌ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ

    ಸಿಂಪಲ್‌ ಸ್ಟಾರ್‌ ರಕ್ಷಿತ್ ಶೆಟ್ಟಿ (Rakshit Shetty) ಅವರು ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ʻಸಪ್ತಸಾಗರದಾಚೆ ಎಲ್ಲೋʼ ಚಿತ್ರದ ಶೂಟಿಂಗ್‌ ಮುಗಿಸಿ, ತೆರೆಗ ಮೇಲೆ ಅಬ್ಬರಿಸಲು ಸಿನಿಮಾ ರೆಡಿಯಾಗಿದೆ.

    ಸಿಂಪಲ್ ಸ್ಟಾರ್ ರಕ್ಷಿತ್ ಇದೀಗ `ಸಪ್ತಸಾಗರದಾಚೆ ಎಲ್ಲೋ’ (Saptasagaradache Yello) ಚಿತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ರಕ್ಷಿತ್‌ಗೆ ನಾಯಕಿಯರಾಗಿ ರುಕ್ಮಿಣಿ ವಸಂತ್ (Rukmini Vasanth) ಮತ್ತು ಚೈತ್ರಾ ಆಚಾರ್ (Chaitra Achar) ನಟಿಸಿದ್ದಾರೆ. ಇನ್ನೂ ಬರೋಬ್ಬರಿ 137 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಕಡಲ ತಡಿಯಲ್ಲಿ ಪೂಜೆ ಸಲ್ಲಿಸಿ ಚಿತ್ರತಂಡ ಕುಂಬಳ ಕಾಯಿ ಒಡೆದಿದೆ. ಈ ವಿಚಾರವನ್ನು ನಟ ರಕ್ಷಿತ್ ಶೆಟ್ಟಿ ವಿಡಿಯೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಪ್ರೊಡಕ್ಷನ್ ವರ್ಕ್ ಶುರು ಮಾಡಿದೆ. ಇದನ್ನೂ ಓದಿ: ತೆಲುಗು ನಟ ನಾಗಬಾಬು ಪುತ್ರಿ ನಿಹಾರಿಕಾ ದಾಂಪತ್ಯದಲ್ಲಿ ಬಿರುಕು

    `ಕವಲು ದಾರಿ’ (Kavaludari) ಚಿತ್ರದ ನಂತರ ನಿರ್ದೇಶಕ ಹೇಮಂತ್ `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಕೈಗೆತ್ತಿಕೊಂಡಿದ್ದರು. ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್‌ಗೆ ಒಂದಷ್ಟು ದಿನ ವರ್ಕ್ಶಾಪ್ ನಡೆಸಿ ನಂತರ ಚಿತ್ರೀಕರಣ ಆರಂಭಿಸಿದ್ದರು. ಚಿತ್ರದಲ್ಲಿ 2 ಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ರಕ್ಷಿತ್ ನಟಿಸಿದ್ದಾರೆ.

     

    View this post on Instagram

     

    A post shared by Rakshit Shetty (@rakshitshetty)

    ತನ್ನ ಪಾತ್ರಕ್ಕಾಗಿ ರಕ್ಷಿತ್, 15 ರಿಂದ 20 ಕೆಜಿ ತೂಕ ಹೆಚ್ಚಿಸಿಕೊಂಡು ಮತ್ತೆ ತೂಕ ಇಳಿಸಿಕೊಂಡು ಕಸರತ್ತು ಮಾಡಿದ್ದಾರೆ. ಚಿತ್ರದಲ್ಲಿ ನಾಯಕನ 25 ಹಾಗೂ 45ರ ವಯೋಮಾನದ ಕುರಿತ ಕಥೆ ಇದೆ. ಅದಕ್ಕೆ ತಕ್ಕಂತೆ ಅರ್ಧ ಸಿನಿಮಾ ಸ್ಲಿಮ್ ಅಂಡ್ ಸ್ಮಾರ್ಟ್ ಕಾಲೇಜು ಹುಡುಗನಾಗಿ ರಕ್ಷಿತ್ ಮಿಂಚಿದ್ದಾರೆ. ಹಾಗೆಯೇ ಗಡ್ಡ ಬಿಟ್ಟು ರಗಡ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ.

    `777 ಚಾರ್ಲಿ’ ಸಿನಿಮಾದ ಸೂಪರ್ ಸಕ್ಸಸ್ ನಂತರ ರಕ್ಷಿತ್ ಶೆಟ್ಟಿ ಅವರನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ. `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ರಿಲೀಸ್‌ಗೆ ಎದುರು ನೋಡ್ತಿದ್ದಾರೆ.