Tag: hemanth

  • ಹಣಕ್ಕಾಗಿ ಬೇಡಿಕೆ – ಖಾಸಗಿ ವಾಹಿನಿ ಎಂಡಿಗೆ ಸಿಸಿಬಿ ಫುಲ್ ಡ್ರಿಲ್

    ಹಣಕ್ಕಾಗಿ ಬೇಡಿಕೆ – ಖಾಸಗಿ ವಾಹಿನಿ ಎಂಡಿಗೆ ಸಿಸಿಬಿ ಫುಲ್ ಡ್ರಿಲ್

    ಬೆಂಗಳೂರು: ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣ ಸಂಬಂಧ ಖಾಸಗಿ ಸುದ್ದಿವಾಹಿನಿ ಎಂಡಿ ಕಂ ಪತ್ರಕರ್ತ ಹೇಮಂತ್‍ರನ್ನು ಕೇಂದ್ರ ಅಪರಾಧ ದಳ(ಸಿಸಿಬಿ) ಪೊಲೀಸರು ಬಂಧಿಸಿದ್ದು, ಇದೀಗ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

    ಮಾಜಿ ಸಚಿವ, ಬಿಜೆಪಿ ಹಾಲಿ ಶಾಸಕ ಅರವಿಂದ ಲಿಂಬಾವಳಿ ಕೇಸ್ ಜೊತೆಗೆ ಹಳೇ ಕೇಸ್‍ಗಳನ್ನು ಓಪನ್ ಮಾಡಿರೋ ಸಿಸಿಬಿ(ಪೊಲೀಸರು ಹೇಮಂತ್‍ಗೆ ಫುಲ್ ಡ್ರಿಲ್ ಮಾಡಿಸುತ್ತಿದ್ದಾರೆ.

    ಹೇಮಂತ್, ಈ ಹಿಂದೆಯೂ ಹಲವು ರಾಜಕಾರಣಿ ಹಾಗೂ ಉದ್ಯಮಿಗಳಿಗೆ ಬ್ಲಾಕ್ ಮೇಲ್ ಮಾಡಿರುವುದು ವಿಚಾರಣೆ ವೇಳೆ ಬಯಲಾಗುತ್ತಿದೆ. ಹೇಮಂತ್ ಜೊತೆಗೆ ಬ್ಲಾಕ್‍ಮೇಲ್‍ಗೆ ಒಳಗಾದವರು ದೂರು ನೀಡಬಹುದು ಎಂದು ಸಿಸಿಬಿ ಮನವಿ ಮಾಡಿಕೊಂಡಿದೆ.

    ಬ್ಲ್ಯಾಕ್ ಮೇಲ್ ಏನು:
    ನಿಮ್ಮ ಖಾಸಗಿ ಬದುಕಿನ ವಿಡಿಯೋ ನನ್ನ ಬಳಿ ಇದೆ. ಎಂದು ಬೇರೆ ಪಕ್ಷದವರು ಕೇಳಿದ್ದರು. ಆದರೆ ನಾವು ಕೊಟ್ಟಿಲ್ಲ. ಕೇವಲ 50 ಲಕ್ಷ ರೂ. ಕೊಟ್ಟರೆ ಆ ಸಿಡಿಯನ್ನು ನಿಮಗೆ ಒಪ್ಪಿಸಿಬಿಡುತ್ತೇನೆ ಎಂದು ಲಿಂಬಾವಳಿ ಅವರಿಗೆ ಕರೆ ಮಾಡಿ ಫೋಕಸ್ ಟಿವಿಯ ಹೇಮಂತ್ ಬ್ಲ್ಯಾಕ್ ಮೇಲ್ ಮಾಡಿದ್ದಾರೆ.

    ಈ ಬಗ್ಗೆ ವೈಟ್ ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ತಂಡ ಕಳೆದ ರಾತ್ರಿ ಹೇಮಂತ್ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆಸಿ ಲ್ಯಾಪ್‍ಟಾಪ್, ಡೆಸ್ಕ್ ಟಾಪ್, ಹಾರ್ಡ್ ಡಿಸ್ಕ್, ಮೊಬೈಲ್‍ಗಳನ್ನು ವಶಪಡಿಸಿಕೊಂಡಿದೆ.