Tag: hemamalini

  • ಹೇಮ ಮಾಲಿನಿಯೇ ನೃತ್ಯ ಮಾಡುವಂತೆ ಮಾಡಿದೆ- ವಿವಾದಕ್ಕೀಡಾದ ನರೋತ್ತಮ್ ಮಿಶ್ರಾ ಹೇಳಿಕೆ

    ಹೇಮ ಮಾಲಿನಿಯೇ ನೃತ್ಯ ಮಾಡುವಂತೆ ಮಾಡಿದೆ- ವಿವಾದಕ್ಕೀಡಾದ ನರೋತ್ತಮ್ ಮಿಶ್ರಾ ಹೇಳಿಕೆ

    ಭೋಪಾಲ್: ಬಿಜೆಪಿ ಶಾಸಕ (BJP MLA) ಹಾಗೂ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಇದೀಗ ಫಜೀತಿಗೆ ಸಿಲುಕಿದ್ದಾರೆ.

    ದಾಟಿಯಾದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹೇಳಿಕೆಯೊಂದನ್ನು ನೀಡುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದಾಗ ಹೇಮಮಾಲಿನಿ ಹೆಸರನ್ನು ಪ್ರಸ್ತಾಪಿಸಿದ್ದಾರೆ. ದಾಟಿಯಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಿದ್ದಲ್ಲದೇ ಹೇಮಮಾಲಿನಿಯೂ ಡ್ಯಾನ್ಸ್ ಮಾಡುವಷ್ಟು ಅಭಿವೃದ್ಧಿಯನ್ನು ಇಲ್ಲಿ ನಾನು ಮಾಡಿದ್ದೇನೆ ಎಂದು ಹೇಳಿದ್ದಾರೆ.

    ಸದ್ಯ ಮಿಶ್ರಾ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಮೂಲಕ ಅವರ ಹೇಳಿಕೆ ಭಾರೀ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ರಾಮಮಂದಿರ ಲೋಕಾರ್ಪಣೆಗೆ ಮೋದಿಗೆ ಮಾತ್ರ ಯಾಕೆ ಆಹ್ವಾನ – ಸಲ್ಮಾನ್ ಖುರ್ಷಿದ್ ಪ್ರಶ್ನೆ

    ಈ ಸಂಬಂಧ ಜನತಾ ದಳದ ಎಕ್ಸ್ ಖಾತೆಯಲ್ಲಿ, ವ್ಯಕ್ತಿತ್ವ ಮತ್ತು ನೋಟವನ್ನು ಟೀಕಿಸುವ ನಾಚಿಕೆಯಿಲ್ಲದ ಬಿಜೆಪಿ ಸದಸ್ಯರ ನೈಜತೆಯನ್ನು ನೋಡಿ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ತಮ್ಮದೇ ಪಕ್ಷದ ಸಂಸದೆ ಹೇಮಾ ಮಾಲಿನಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದೆ.

    ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದಿಂದ (Datia Vidhanasabha Constituency) ನರೋತ್ತಮ್ ಮಿಶ್ರಾ 4 ನೇ ಬಾರಿ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ 2008, 2023 ಹಾಗೂ 2018ರಲ್ಲಿ ಸ್ಪರ್ಧೆ ಮಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಯೋಧ್ಯೆ, ಕಾಶಿ ನಂತ್ರ ಮಥುರಾದಲ್ಲೂ ಭವ್ಯ ಮಂದಿರ ನಿರ್ಮಾಣ: ಹೇಮಾ ಮಾಲಿನಿ

    ಅಯೋಧ್ಯೆ, ಕಾಶಿ ನಂತ್ರ ಮಥುರಾದಲ್ಲೂ ಭವ್ಯ ಮಂದಿರ ನಿರ್ಮಾಣ: ಹೇಮಾ ಮಾಲಿನಿ

    ಭೋಪಾಲ್: ಅಯೋಧ್ಯೆ ಹಾಗೂ ಕಾಶಿ ನಂತರ ಮಥುರಾದಲ್ಲೂ ಕೃಷ್ಣನ ಭವ್ಯ ಮಂದಿರ ನಿರ್ಮಾಣವಾಗಲಿದೆ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಜನ್ಮ ಭೂಮಿ ಹಾಗೂ ಕಾಶಿಯಷ್ಟೇ ಮಥುರವೂ ತನ್ನದೇ ಆದ ಮಹತ್ವವನ್ನು ಪಡೆದಿದೆ. ಅವುಗಳ ಮರುಸ್ಥಾಪನೆಯ ನಂತರ ಮಥುರಾದಲ್ಲೂ ಭವ್ಯ ಮಂದಿರ ನಿರ್ಮಿಸಲಾಗುತ್ತದೆ ಎಂದರು.

    ಪ್ರೀತಿ, ವಾತ್ಸಲ್ಯದ ಪ್ರತೀಕ ಶ್ರೀಕೃಷ್ಣ. ಮಥುರಾ ಶ್ರೀಕೃಷ್ಣನ ಜನ್ಮಸ್ಥಳವಾಗಿದೆ. ಅಲ್ಲಿ ಕೃಷ್ಣನ ಭವ್ಯವಾದ ಮಂದಿರವಿರಬೇಕು. ಈಗ ಅಲ್ಲಿ ದೇವಸ್ಥಾನವಿದ್ದು, ಪ್ರಧಾನಿ ಮೋದಿ ಅವರು ಕಾಶಿಯಲ್ಲಿ ಅಭಿವೃದ್ಧಿ ಪಡಿಸಿದ ಕಾರಿಡಾರ್‌ನಂತೆ ಸುಂದರಗೊಳಿಸಬಹುದು. ಜೊತೆಗೆ ದೇವಸ್ಥಾನದಿಂದ ಗಂಗಾ ನದಿಯನ್ನು ನೇರವಾಗಿ ನೋಡಬಹುದು ಎಂದು ಹೇಳಿದರು. ಇದನ್ನೂ ಓದಿ: ಉಪಯೋಗಿ ಅಲ್ಲ, ನಿರುಪಯೋಗಿ: ಮೋದಿ ಬಣ್ಣನೆಗೆ ಅಖಿಲೇಶ್‌ ಯಾದವ್‌ ಲೇವಡಿ

    ಕಾಶಿ ವಿಶ್ವನಾಥನ ಪುನಾರಾಭಿವೃದ್ಧಿ ಬಹಳ ಕಷ್ಟಕರವಾಗಿತ್ತು. ಆದರೂ ಇಂದು ಕಾಶಿಯಲ್ಲಿ ದೇವಸ್ಥಾನದ ಅಭಿವೃದ್ಧಿಯಾಗುತ್ತಿದೆ. ಇದರಿಂದ ಪ್ರಧಾನಿ ಮೋದಿ ಅವರ ದೂರದೃಷ್ಟಿಯನ್ನು ನಾವು ನೋಡಬಹುದಾಗಿದೆ. ಈ ರೀತಿಯೇ ಮಥುರಾದಲ್ಲಿ ಆಗುತ್ತದೆ ಎಂದು ಭರವಸೆ ನೀಡಿದರು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಬಿಜೆಪಿ ಸಂಸದೆ, ಕಾಶಿಗೆ ತೆರಳುತ್ತಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಜನ ಸೇವೆಯೇ ನಿಜವಾದ ರಾಮ ರಾಜ್ಯ: ಯೋಗಿ ಆದಿತ್ಯನಾಥ್

  • ಹೇಮಾ ಮಾಲಿನಿ ದಿನಾ ಕುಡೀತಾರೆ, ಅವ್ರೇನು ಆತ್ಮಹತ್ಯೆ ಮಾಡಿಕೊಂಡಿದ್ದಾರಾ?: ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

    ಹೇಮಾ ಮಾಲಿನಿ ದಿನಾ ಕುಡೀತಾರೆ, ಅವ್ರೇನು ಆತ್ಮಹತ್ಯೆ ಮಾಡಿಕೊಂಡಿದ್ದಾರಾ?: ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

    ನವದೆಹಲಿ: ಹೇಮಾ ಮಾಲಿನಿ ಪ್ರತಿದಿನ ಕುಡೀತಾರೆ. ಅವ್ರೇನು ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಎಂದು ಬಿಜೆಪಿ ಸಂಸದೆ ಹೇಮಮಾಲಿನಿ ವಿರುದ್ಧ ಮಹಾರಾಷ್ಟ್ರದ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮಹಾರಾಷ್ಟ್ರದ ಶಾಸಕ ಬಚ್ಚು ಕಡು(ಓಂಪ್ರಕಾಶ್ ಬಾಬಾರಾವ್) ಈ ಹೇಳಿಕೆ ನೀಡಿದ್ದಾರೆ. ಗುರುವಾರ ನಂದೆಡ್ ನಲ್ಲಿ ನಡೆದ ಜಾಥಾದ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರೈತರ ಆತ್ಮಹತ್ಯೆಗೆ ಮದ್ಯಪಾನ ಕಾರಣ ಅಂತಾ ಜನ ಹೇಳ್ತಾರೆ. ಇದು ನಿಜ ಅಲ್ಲ. ಮದ್ಯಪಾನ ಮಾಡದವರು ಯಾರಿದ್ದಾರೆ?. ಶೇ.70ರಷ್ಟು ಶಾಸಕರು, ಸಂಸದರು ಹಾಗೂ ಪತ್ರಕರ್ತರು ಮದ್ಯಪಾನ ಮಾಡುತ್ತಾರೆ. ಹೇಮಾ ಮಾಲಿನಿ ಕೂಡ ದಿನಾ ಕುಡಿಯುತ್ತಾರೆ. ಹಾಗಾಂತ ಅವರೇನು ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಹಣದ ಸಮಸ್ಯೆಯಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ. ಅವರ ಉತ್ಪಾದನೆ ಹೆಚ್ಚಾಗುತ್ತಿದೆ. ಆದ್ರೆ ಆದಾಯ ಹೆಚ್ಚುತ್ತಿಲ್ಲ. ಆದ್ದರಿಂದ ಮದ್ಯಪಾನವೇ ಆತ್ಮಹತ್ಯೆಗೆ ಕಾರಣ ಎಂದು ಹೇಳುವುದು ತಪ್ಪು ಅಂತಾ ಹೇಳಿದ್ದಾರೆ.

    ಪ್ರಖ್ಯಾತ ನಟಿ ಹಾಗೂ ಉತ್ತರಪ್ರದೇಶದ ಮಥುರಾದ ಬಿಜೆಪಿ ಸಂಸದೆ ಹೇಮಮಾಲಿನಿ ವಿರುದ್ಧ ನೀಡಿರುವ ಹೇಳಿಕೆಗೆ ಇದೀಗ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. 46 ವರ್ಷದ ಬಚ್ಚು ಕಡು ಈ ಹಿಂದೆ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಮಾಡಿ ಬಂಧನವಾಗಿದ್ದರು.

    ಅಧಿಕೃತ ಅಂಕಿಅಂಶಗಳ ಪ್ರಕಾರ 2014ರಲ್ಲಿ ಮಹಾರಾಷ್ಟ್ರದಲ್ಲಿ 5,650 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತಾ ವರದಿಯಾಗಿದೆ. ಅದರಲ್ಲೂ ಈ ವರ್ಷ ಮರಾಠವಾಡಾ ಪ್ರದೇಶದಲ್ಲಿಯೇ 200 ರೈತರು ತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.