Tag: Hema Committee

  • ಕೇರಳದ ಹೇಮಾ ಕಮಿಟಿ ಮೂಲಕ ದಾಖಲಾಗಿದ್ದ ಕೇಸ್ ಬೆಂಗಳೂರಿಗೆ ವರ್ಗಾವಣೆ

    ಕೇರಳದ ಹೇಮಾ ಕಮಿಟಿ ಮೂಲಕ ದಾಖಲಾಗಿದ್ದ ಕೇಸ್ ಬೆಂಗಳೂರಿಗೆ ವರ್ಗಾವಣೆ

    ಬೆಂಗಳೂರು: ಕೇರಳದ ಹೇಮಾ ಕಮಿಟಿ (Hema Committee) ಮೂಲಕ ದಾಖಲಾಗಿದ್ದ ಕೇಸ್ ಬೆಂಗಳೂರಿಗೆ (Bengaluru) ವರ್ಗಾವಣೆಯಾಗಿದೆ.

    2012ರಲ್ಲಿ ಆರೋಪಿ ರಂಜಿತ್‌ನಿಂದ ಯುವಕನ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಕೇಸ್ ಇದೀಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ (Kempegowda International Airport) ವರ್ಗಾವಣೆಯಾಗಿದೆ.ಇದನ್ನೂ ಓದಿ: ಮೋದಿ ಪ್ರಭಾವ ಬಳಸಿ ರಷ್ಯಾ-ಉಕ್ರೇನ್‌ ಯುದ್ಧವನ್ನು ನಿಲ್ಲಿಸಬಹುದು: ಝೆಲೆನ್ಸ್ಕಿ

    2012ರಲ್ಲಿ ಬೆಂಗಳೂರಿನಲ್ಲಿ ಬಾವುತ್ತಿಯುದೆ ನಮತ್ತಿಲ್ ಎಂಬ ಮಮ್ಮುಟಿ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಸಿನಿಮಾದಲ್ಲಿ ರಂಜಿತ್ ಎಂಬುವವರು ಕೆಲಸ ಮಾಡುತ್ತಿದ್ದರು. ರಂಜಿತ್‌ಗೆ ಯುವಕನೊಬ್ಬ ಪರಿಚಯವಾಗಿದ್ದ. ಸಿನಿಮಾದಲ್ಲಿ ಅವಕಾಶಕೊಡಿಸುವುದಾಗಿ ಕೇಳಿ ನಂಬರ್ ಕೂಡ ಪಡೆದುಕೊಂಡಿದ್ದ.

    ಬಳಿಕ ಒಂದು ದಿನ ಕರೆ ಮಾಡಿ, ಬೆಂಗಳೂರು ಏರ್‌ಪೋರ್ಟ್ ಬಳಿಯ ತಾಜ್ ಹೋಟೆಲ್‌ಗೆ ಬರಲು ತಿಳಿಸಿದ್ದ. ಹೋಟೆಲ್‌ಗೆ ಕರೆಸಿ ಯುವಕನ ಮೇಲೆ ಆರೋಪಿ ರಂಜಿತ್ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಬಗ್ಗೆ ದೂರುದಾರ ಹೇಮಾ ಕಮಿಟಿ ಮುಂದೆ ಹೇಳಿದ್ದ. ಇದಕ್ಕೆ ಸಂಬಂಧಿಸಿದಂತೆ ಕೇರಳದ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಸದ್ಯ ಈ ಪ್ರಕರಣ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು, ಐಪಿಸಿ ಸೆಕ್ಷನ್ 377 ಮತ್ತು ಐಟಿ ಕಾಯ್ದೆ 66 ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಭಾರತ- ಪಾಕಿಸ್ತಾನ ನಡುವಿನ ಕರ್ತಾರ್‌ಪುರ ಕಾರಿಡಾರ್ ಒಪ್ಪಂದ 5 ವರ್ಷ ವಿಸ್ತರಣೆ; ಒಪ್ಪಂದ ಯಾಕೆ?

  • ಸೆ.16ರಂದು ಫಿಲ್ಮ್ ಚೇಂಬರ್‌ನಲ್ಲಿ ಸಭೆ- ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲಿಯೂ ರಚಿಸಲು ಒತ್ತಾಯ

    ಸೆ.16ರಂದು ಫಿಲ್ಮ್ ಚೇಂಬರ್‌ನಲ್ಲಿ ಸಭೆ- ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲಿಯೂ ರಚಿಸಲು ಒತ್ತಾಯ

    ಮಾಲಿವುಡ್‌ನಲ್ಲಿ (Mollywood) ಹೇಮಾ ಸಮಿತಿ (Hema Committee) ವರದಿ ಹೊರಬಿದ್ದ ಬಳಿಕ ಚಿತ್ರರಂಗ ಅಲ್ಲೋಲ ಕಲ್ಲೋಲ ಆಗಿದೆ. ಹೇಮಾ ಕಮಿಟಿಯಂತೆ ಮಹಿಳೆಯರ ಸುರಕ್ಷತೆಗಾಗಿ ಸ್ಯಾಂಡಲ್‌ವುಡ್‌ನಲ್ಲಿಯೂ (Sandalwood) ರಚಿಸಲು ಸೆ.16ರಂದು ಫಿಲ್ಮ್ ಚೇಂಬರ್ ಸಭೆ ಆಯೋಜಿಸಿದೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಪೆಟ್ಟಾ’ ಚಿತ್ರದ ನಟಿ ಮೇಘಾ

    ನಾಳೆ ಫಿಲ್ಮ್ ಚೇಂಬರ್‌ನಲ್ಲಿ ಹೈ-ವೋಲ್ಟೇಜ್ ಸಭೆ ನಡೆಯಲಿದೆ. ಕೇರಳದಲ್ಲಿ ಹೇಮಾ ಕಮಿಟಿ ರಚಿಸಿರುವಂತೆ ಇಲ್ಲೂ ರಚಿಸುವಂತೆ ನಟಿಯರು ಸೆ.6ರಂದು ಫಿಲ್ಮ್  ಚೇಂಬರ್ ಪತ್ರ ಬರೆದ್ದರು. ಅದರಂತೆ ನಾಳೆ ಬೆಳಗ್ಗೆ 11:30ಕ್ಕೆ ಈ ಕುರಿತು ಸಭೆ ಮಾಡಲು ನಿರ್ಧರಿಸಿದ್ದಾರೆ.

    ಈ ಸಭೆಯಲ್ಲಿ 100ಕ್ಕೂ ಹೆಚ್ಚು ಮಹಿಳಾ ಕಲಾವಿದೆಯರು ಭಾಗಿಯಾಗಲಿದ್ದಾರೆ. ನಟಿಯರ ಭದ್ರತೆ ಹಾಗೂ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಕಮಿಟಿಗೆ ಮನವಿ ಮಾಡಲಿದ್ದಾರೆ. ಕಮಿಟಿ ವರದಿ ಅನುಸರಿಸಿ ಹಲವು ಕಾರ್ಯಕ್ರಮ ಕಾರ್ಯರೂಪಕ್ಕೆ ತರಲು ಚಿಂತನೆ ನಡೆಸಲಿದ್ದಾರೆ.

  • ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲೂ ಸಮಿತಿ ಮಾಡಿ- ಸಿಎಂಗೆ ಮನವಿ ಸಲ್ಲಿಸಿದ ‘ಫೈರ್’ ಸಂಸ್ಥೆ

    ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲೂ ಸಮಿತಿ ಮಾಡಿ- ಸಿಎಂಗೆ ಮನವಿ ಸಲ್ಲಿಸಿದ ‘ಫೈರ್’ ಸಂಸ್ಥೆ

    ಮಾಲಿವುಡ್‌ನ ಹೇಮಾ ಕಮಿಟಿಯಂತೆ ಕನ್ನಡ ಚಿತ್ರರಂಗದಲ್ಲೂ (Sandalwood) ಲೈಂಗಿಕ ಕಿರುಕುಳ ತಡೆಗೆ ಸಮಿತಿ ರಚಿಸಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಇಂದು (ಸೆ.5) ನಟ ಚೇತನ್ ನೇತೃತ್ವದ ‘ಫೈರ್’ ಸಂಸ್ಥೆ ಮೂಲಕ ಮನವಿ ಪತ್ರ ಸಲ್ಲಿಸಿದ್ದಾರೆ. ಇದನ್ನೂ ಓದಿ:ನನ್ನ ಲೈಫ್‌ನಲ್ಲಿ ಆಗಿದ್ದು ಬೇರೆಯವರಿಗೆ ಆಗಬಾರದು: ಕಾಸ್ಟಿಂಗ್ ಕೌಚ್ ಬಗ್ಗೆ ಸಂಜನಾ ಗಲ್ರಾನಿ ಪ್ರತಿಕ್ರಿಯೆ

    ಸ್ಯಾಂಡಲ್‌ವುಡ್ ನಟರಾದ ಸುದೀಪ್, ರಮ್ಯಾ, ಶ್ರದ್ಧಾ ಶ್ರೀನಾಥ್, ನೀತು, ಚೇತನ್ ಅಂಹಿಸಾ ಸೇರಿದಂತೆ 140ಕ್ಕೂ ಹೆಚ್ಚು ಕಲಾವಿದರು, ತಂತ್ರಜ್ಞರು ಮತ್ತು ಸಾಹಿತಿಗಳು ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಸದ್ಯದಲ್ಲೇ ಸಮಿತಿ ರಚನೆಯ ಕುರಿತು ಚರ್ಚಿಸಿ ನಿರ್ಧಾರಕ್ಕೆ ಬರೋಣ ಎಂದು ಸಿಎಂ ‘ಫೈರ್’ ತಂಡಕ್ಕೆ ಭರವಸೆ ನೀಡಿದ್ದಾರೆ. ಸೆ.10ರ ಬಳಿಕ ಮತ್ತೊಮ್ಮೆ ಸಭೆ ಮಾಡೋಣ ಎಂದು `ಫೈರ್’ ತಂಡಕ್ಕೆ ತಿಳಿಸಿದ್ದಾರೆ. ಇನ್ನೂ ಸಿಎಂ ಜೊತೆಗಿನ ಸಭೆಯಲ್ಲಿ ನಟ ಚೇತನ್ ಜೊತೆ ನೀತು ಶೆಟ್ಟಿ, ಶೃತಿ ಹರಿಹರನ್, ಹಿರಿಯ ಪತ್ರಕರ್ತೆ ವಿಜಯಮ್ಮ ಭಾಗಿಯಾಗಿದ್ದರು.

    ಮಲಯಾಳಂ ಸಿನಿಮಾ ರಂಗದಲ್ಲಿ ಜಸ್ಟಿಸ್ ಹೇಮಾ ವರದಿ ಬಿರುಗಾಳಿಯನ್ನೇ ಎಬ್ಬಿಸಿದೆ. ಒಂದು ವಾರದಿಂದ ಮಲಯಾಳಂ ಸಿನಿಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ಕಿರುಕುಳಕ್ಕೆ ಸಂಬಂಧಿಸಿದಂತೆ ದೂರುಗಳು ದಾಖಲಾಗುತ್ತಿವೆ. ಹಲವರು ತಲೆದಂಡ ಕೂಡ ಆಗಿದೆ. ಕಲಾವಿದರ ಸಂಘದ ಅಧ್ಯಕ್ಷರಿಂದ ಹಿಡಿದು, ಪದಾಧಿಕಾರಿಗಳು ಕೂಡ ರಾಜಿನಾಮೆ ಸಲ್ಲಿಸಿದ್ದಾರೆ. ಈಗ ಅಂಥದ್ದೊಂದು ಕಮಿಟಿಯನ್ನು ನಿವೃತ್ತಿ ನ್ಯಾಯಾಧೀಶರ ನೇತೃತ್ವದಲ್ಲಿ ರಚಿಸಬೇಕು ಅಂತ ಸ್ಯಾಂಡಲ್‌ವುಡ್‌ನಲ್ಲೂ ಒತ್ತಾಯಿಸಿದ್ದಾರೆ.

  • ಲೈಂಗಿಕ ದೌರ್ಜನ್ಯ ಹೇಮಾ ವರದಿ: 17 ದೂರುಗಳು ದಾಖಲು

    ಲೈಂಗಿಕ ದೌರ್ಜನ್ಯ ಹೇಮಾ ವರದಿ: 17 ದೂರುಗಳು ದಾಖಲು

    ಲಯಾಳಂ ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿ ಮಾಡಿರೋ ಹೇಮಾ ವರದಿ (Hema Committee), ಇದೀಗ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯ (Sexual Assault) ಕುರಿತಂತೆ ಬಹಿರಂಗವಾಗಿ ನಟಿಯರು ಮಾತಾಡುತ್ತಿದ್ದಾರೆ. ಜೊತೆಗೆ ದೂರುಗಳು ದಾಖಲಾಗುತ್ತಿವೆ. ಈವರೆಗೂ ಪೊಲೀಸರು 17 ದೂರುಗಳನ್ನು ದಾಖಲಿಸಿಕೊಂಡಿದ್ದಾರಂತೆ.

    ವರದಿಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರದ ನಡೆಯನ್ನು ಅಲ್ಲಿನ ರಾಜಕೀಯ ಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಈವರೆಗೂ ಬಹಿರಂಗವಾಗದ ವರದಿಯನ್ನು ಈಗ ಆರ್.ಟಿ.ಐ ಅಡಿಯಲ್ಲಿ ಕೊಟ್ಟಿದ್ದು ಯಾಕೆ ಎಂದು ಪ್ರಶ್ನೆ ಮಾಡಲಾಗುತ್ತಿದೆ. ಪ್ರತಿಭಟನೆಗಳು ಕೂಡ ನಡೆದಿವೆ. ಈ ನಡುವೆ ನಟಿಯರು ದೂರುಗಳನ್ನು ದಾಖಲಿಸುತ್ತಿದ್ದಾರೆ.

    ಮಲಯಾಳಂ ಸಿನಿಮಾ ರಂಗದಲ್ಲಿ ಸಹ ಕಲಾವಿದೆಯಾಗಿ ಗುರುತಿಸಿಕೊಂಡಿರೋ ನಟಿ ಸೋನಿಯಾ ಮಲಹಾರ್ ಸೇರಿದಂತೆ ಅನೇಕ ನಟಿಯರು ಮುಂದೆ ಬಂದು, ದೂರುಗಳನ್ನು ದಾಖಲಿಸುತ್ತಿದ್ದಾರೆ. ಇನ್ನೂ ಹಲವರು ದೂರು ನೀಡಲು ಚಿಂತನೆ ಕೂಡ ನಡೆಸಿದ್ದಾರಂತೆ. ಹಾಗಾಗಿ ನಟಿಯರು ಒತ್ತಡದಲ್ಲಿದ್ದಾರೆ ಅನ್ನುವ ಮಾಹಿತಿಯೂ ಇದೆ.

    ಧ್ವನಿ ಎತ್ತಿದ ಹೆಸರಾಂತ ನಟ ಪೃಥ್ವಿರಾಜ್ ಸುಕುಮಾರನ್

    ಜಸ್ಟಿಸ್‍ ಹೇಮಾ ಸಲ್ಲಿಸಿದ ವರದಿಯಲ್ಲಿನ ಕೆಲವು ಅಂಶಗಳು ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿವೆ. ಈಗಾಗಲೇ ಕೆಲವರ ತಲೆದಂಡ ಕೂಡ ಆಗಿದೆ. ಅನೇಕ ನಟಿಯರು ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಆದರೆ, ಈ ವರದಿ ಕುರಿತಂತೆ ಪ್ರಮುಖ ನಟರಾರೂ ಬಹಿರಂಗವಾಗಿ ಮಾತಾಡಿರಲಿಲ್ಲ. ಮೊದಲ ಬಾರಿಗೆ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್‍ ಮಾತಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಪೃಥ್ವಿರಾಜ್‍ (Prithviraj Sukumaran) , ಹೇಮಾ ವರದಿಯಲ್ಲಿನ ಹೆಸರುಗಳನ್ನು ಸರ್ಕಾರವೇ ಬಹಿರಂಗ ಪಡಿಸಬೇಕು. ಚಿತ್ರೀಕರಣದ ಸ್ಥಳದಲ್ಲಿನ ಸುರಕ್ಷತೆಯ ಬಗ್ಗೆ ಗಮನ ಹೆರಿಸಬೇಕು. ಏಕರೂಪದ ಮಾರ್ಗಸೂಚಿಯನ್ನು ತಯಾರಿಸಬೇಕು. ತಪ್ಪು ಯಾರೇ ಮಾಡಿದ್ದರೂ ಅವರ ಮೇಲೆ ತನಿಖೆ ಆಗಿ ಶಿಕ್ಷೆಯಾಗಬೇಕು. ಮಹಿಳೆಯರು ಈ ವಿಷ್ಯದಲ್ಲಿ ಸುಳ್ಳು ಹೇಳಿದ್ದರೂ ಅವರಿಗೆ ಶಿಕ್ಷೆ ಆಗಲಿ ಎಂದಿದ್ದಾರೆ.

    ಆರಂಭಿಕ ಹಂತಗಳಲ್ಲಿ ಕೆಲವು ತಪ್ಪುಗಳು ಆಗಿರಬಹುದು. ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದ ಘಟನೆಗಳ ಬಗ್ಗೆ ಸಂಪೂರ್ಣ ಮತ್ತು ವಿವರವಾದ ತನಿಖೆಯ ಅಗತ್ಯವಿದೆ. ಆರೋಪಿಗಳು ತನಿಖೆಯನ್ನು ಎದುರಿಸಲೇಬೇಕು. ಮತ್ತು ತನಿಖೆ ಎದುರಿಸುವಾಗ ತಮ್ಮ ಸ್ಥಾನದಿಂದ ಕೆಳಗೆ ಇಳಿದಿರಬೇಕು ಎಂದು ಪೃಥ್ವಿರಾಜ್ ಮಾತನಾಡಿದ್ದಾರೆ.

     

    ಮಲಯಾಳಂ ಸಿನಿಮಾ ರಂಗದ ಗುಂಪುಗಾರಿಕೆಯ ಕುರಿತಂತೆಯೂ ಪೃಥ್ವಿರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಗುಂಪುಗಾರಿಕೆಯನ್ನು ನಾನು ವಿರೋಧಿಸುತ್ತೇನೆ. ಇಂತಹ ಗುಂಪುಗಳು ಯಾವುದೇ ಸಿನಿಮಾ ರಂಗದಲ್ಲಿ ಇರಬಾರದು ಎಂದಿದ್ದಾರೆ. ಹೇಮಾ ಸಮಿತಿ ವರದಿ ಬಿಡುಗಡೆ ಆದ ನಂತರ ಯಾರೂ ಈ ಕುರಿತಂತೆ ಬಹಿರಂಗವಾಗಿ ಮಾತನಾಡಿರಲಿಲ್ಲ. ಪೃಥ್ವಿರಾಜ್ ಆಡಿದ ಮಾತೂ ಕೂಡ ವೈರಲ್ ಆಗ್ತಿವೆ.